“2020 – ಸಸ್ಯಾಹಾರ ಜಗತ್”
ಭಾರತ ದೇಶ ಅಹಿಂಸಾ ದೇಶ!
ಭಾರತದೇಶ ಪ್ರಪಂಚದಲ್ಲಿ ಮೊದಲನೆಯ ಸಸ್ಯಾಹಾರ ದೇಶ ಆಗಲೇಬೇಕು!!
ಪ್ರಾಣಿ ಸಾಮ್ರಾಜ್ಯಕ್ಕೆ ಇನ್ನು ಪೂರ್ಣ ಸ್ವಾತಂತ್ರ ನೀಡೋಣ…
ಪ್ರಾಣಿ ಸಾಮ್ರಾಜ್ಯವನ್ನು ಸ್ವತಂತ್ರವಾಗಿ ಬದುಕಲು ಬಿಡುವುದೇ ನಿಜವಾದ ಮಾನವತಾ ಧರ್ಮ!
ಅನ್ಯ ಪ್ರಾಣಿಗಳ ಬಗ್ಗೆ ಉಪಕಾರವೇ ‘ಸ್ವ’ ಉಪಕಾರ
ಅನ್ಯ ಪ್ರಾಣಿಗಳ ಬಗ್ಗೆ ಅಪಕಾರವೇ ‘ಸ್ವ’ ಅಪಕಾರ
ಪ್ರಾಣಿವಧೆ ಎಂಬುವುದೇ ಮಾನವಕುಲದ ಮಹಾಪಾಪಕರ್ಮ
ಪ್ರಾಣಿ ಮಾಂಸಭಕ್ಷಣೆ ಎಂಬುವುದೇ ಸಕಲ ರೋಗಗಳಿಗೆ ಮೂಲಕಾರಣ
ಒಂದು ಹುಲಿ ಒಂದು ಕುರಿಯನ್ನು ತಿನ್ನುತ್ತದೆ. ಆದ್ದರಿಂದ, ಅದನ್ನು “ಕ್ರೂರ ಮೃಗ” ಎನ್ನುತ್ತೇವೆ.
ಆನೆ ಸಸ್ಯಾಹಾರಿ. ಆದ್ದರಿಂದ, ಅದನ್ನು “ಸಾಧು ಪ್ರಾಣಿ” ಎನ್ನುತ್ತೇವೆ.
ಆನೆ ಕ್ರೂರ ಮೃಗವಲ್ಲ… ಹುಲಿ ಸಾಧು ಪ್ರಾಣಿಯಲ್ಲ.
“ಕ್ರೂರ” ಎಂಬುವ ಪದ ಪ್ರಯೋಗದಲ್ಲೇ ಕಠೋರತ್ವ ಮತ್ತು ಕಾಠಿಣ್ಯ ಇದೆ.
“ಸಾಧು” ಎಂಬುವ ಪದ ಪ್ರಯೋಗದಲ್ಲೇ ಮೃದುತ್ವ ಮತ್ತು ಶಾಂತ ಸ್ವಭಾವ ಅಡಗಿದೆ.
ಮನುಷ್ಯ ಸಹ ಕೋಳಿಗಳನ್ನು , ಕುರಿಗಳನ್ನು ತಿಂದರೆ, ಅವನೂ ಸಹ ಕ್ರೂರಮೃಗವೇ!
ಮನುಷ್ಯ ಸಸ್ಯಾಹಾರಿಯಾದರೆ ಸಾಧು ಪ್ರಾಣಿಯೇ!
ಮಾಂಸವನ್ನು ತಿನ್ನುವ ಮಾನವಜಾತಿ ಎಲ್ಲಾ ಸಹ,
ಮಾಂಸಾಹಾರಿ ಮಾನವಕುಲವೆಲ್ಲ ಸಹ, “ಕಾಡು-ಮನುಷ್ಯರ ಜಾತಿ”
“ದ್ವಿಪಾದ ಕ್ರೂರಮೃಗ ಮನುಷ್ಯ ಜಾತಿ”
ಸಸ್ಯಾಹಾರಿ ಮಾನವರೆಲ್ಲರೂ ಸಹ,
“ಸಂಸ್ಕಾರಯುತ ಮಾನವಜಾತಿ” ಮತ್ತು “ಸಾಧು ಮಾನವಜಾತಿ”
ಸಸ್ಯಾಹಾರಿ ಮಾನವರೆಲ್ಲರೂ “ಮಾನವತ್ವದ ಬೆಳಕಿನಿಂದ ಕೂಡಿರುವ ಮಾನವಜಾತಿ”.
ಈ ಭೂಮಿಯ ಮೇಲೆ ಮಾಂಸಾಹಾರಿಗಳೆಲ್ಲರೂ ಇನ್ನು ಮುಂದೆ ಸಸ್ಯಾಹಾರಿಗಳಾಗಲಿ!
ಈ ಭೂಮಿಯ ಮೇಲೆ ಕಾಡು ಮನುಷ್ಯರೆಲ್ಲರೂ ಇನ್ನು ಮುಂದೆ ಮಾನವತ್ವದ ದಿವ್ಯತೆಯಿಂದ ಬೆಳಗಲಿ!
ಈ ಭೂಮಿಯ ಮೇಲೆ ೨೦೨೦ಕ್ಕೆಲ್ಲಾ “ಸಸ್ಯಾಹಾರ ಜಗತ್” ಅನ್ನು ಸ್ಥಾಪಿಸಿಯೇ ತೀರುತ್ತೇವೆ!
ಜೈ ಸಸ್ಯಾಹಾರ ಜಗತ್! ಜೈ ಜೈ ಸಸ್ಯಾಹಾರ ಜಗತ್!!
ಆಧ್ಯಾತ್ಮಿಕ ಜೀವನಕ್ಕೆ ಪರಿಪೂರ್ಣ ಸಸ್ಯಾಹಾರವು ಕಡ್ಡಾಯವಾಗಿರಬೇಕು. ಆಧ್ಯಾತ್ಮ ಮತ್ತು ಸಸ್ಯಾಹಾರ ಎರಡೂ ಸಹ ಒಂದೇ ಆಗಿವೆ!. ಪ್ರತಿಯೊಬ್ಬರೂ ಸಹ ಸಸ್ಯಾಹಾರಿಯಾಗಲೇಬೇಕು.
ಮಾನವರಿಗೆ ಮಾಂಸಾಹಾರದ ಪಥ್ಯವನ್ನು ಶಿಫಾರಸ್ಸು ಮಾಡುತ್ತಿರುವ ಆಧುನಿಕ ವೈದ್ಯಶಾಸ್ತ್ರವು ತನ್ನ ತಪ್ಪನ್ನು ಅರಿತುಕೊಳ್ಳುತ್ತದೆ. ಮಾನವ ಶರೀರಕ್ಕೆ ಮಾಂಸಾಹಾರದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಇದೀಗ ಆಧುನಿಕ ವೈದ್ಯಶಾಸ್ತ್ರವು ನಿಧಾನವಾಗಿ ಗುರುತಿಸುತ್ತಿದೆ.
ಪ್ರೀತಿ ಒಂದೇ ಎಲ್ಲಾ ಧಾರ್ಮಿಕ ಆಂದೋಲನಗಳ ಸೌಹಾರ್ದಯುತವಾದ ತತ್ವ.
ಪ್ರೀತಿಯೇ ಧರ್ಮ. ಪ್ರೀತಿ ಎಂದರೆ ಭೂಮಿಯ ಮೇಲಿರುವ ಸಹ-ಜೀವಿಗಳೆಡೆಗೆ ಇರುವ ದಯೆ. ಪ್ರಾಣಿಗಳು ಇರುವುದು ಮಾನವ
ನಿಗೆ ಆಹಾರವಾಗಲು ಎಂಬುದು ತಪ್ಪು. ಮನುಷ್ಯನೂ ಸಹ ಪ್ರಾಣಿಪ್ರಪಂಚದ ಒಂದು ಭಾಗವಷ್ಟೇ ಮತ್ತು ಪ್ರಾಣಿಪ್ರಪಂಚವೆಲ್ಲ ಸಸ್ಯಗಳನ್ನು ಅವಲಂಬಿಸಿ ಬದುಕಬೇಕು ಎಂಬುದು ಮೂಲ ವಿನ್ಯಾಸವಾಗಿದೆ.
ಅತಿಯಾಗಿ ತಿಂದು ನಾವು ಅರಗಿಸಿಕೊಳ್ಳಲಾರೆವು! ನಮ್ಮ ಅಗತ್ಯಕ್ಕೆ ತಕ್ಕಂತೆ ನಾವು ತಿನ್ನಬೇಕೇ ಹೊರತು ನಮ್ಮ ಆಸೆಗೆ ತಕ್ಕಂತೆ ಅಲ್ಲ. ಹಸಿವನ್ನು ತಣಿಸಿಕೊಳ್ಳುವುದೇನೋ ಸರಿಯೇ, ಆದರೆ, ಹೊಟ್ಟೆಬಿರಿಯುವಂತೆ ತಿನ್ನುವುದು ಖಂಡಿತವಾಗಿಯೂ ತಪ್ಪು!.
ನಿಮಗೆ ಹಸಿವಾಗಿದ್ದರೆ ಮಾತ್ರ ನೀವು ತಿನ್ನಬಹುದು. ನಿಮಗೆ ಹಸಿವಾಗಿಲ್ಲದಿದ್ದರೆ, ನೀವು ತಿನ್ನಲೇಬಾರದು. ನಿಮಗೆ ಮರಳಿ ಹಸಿವಾಗುವವರೆಗೂ ತಾಳ್ಮೆಯಿಂದ ಕಾಯಿರಿ, ನಂತರ, ನಿಮ್ಮ ಹಸಿವಿಗೆ ತಕ್ಕಂತೆ ತಿನ್ನಿ.. ಹೆಚ್ಚಾಗಿ ತಿನ್ನಬೇಡಿ. ಹೆಚ್ಚಾಗಿ ತಿನ್ನುವುದರಿಂದಲೇ ಭೌತಿಕ ದೇಹಕ್ಕೆ ಹಲವು ರೀತಿಯ ತೊಂದರೆಗಳು, ಸಮಸ್ಯೆಗಳು ಉಂಟಾಗುತ್ತವೆ.
ಮಾಂಸಾಹಾರ ತಿನ್ನಬಾರದು
ಮಾಂಸಾಹಾರ ಎನ್ನುವುದು ನಿಜಕ್ಕೂ ಆಹಾರವೇ ಅಲ್ಲ. ಅದು ವಿಷ ಪದಾರ್ಥ. ಶರೀರವನ್ನು ಬಡವಾಗಿಸುತ್ತದೆ. ನಾಶ ಮಾಡುತ್ತದೆ. ರೋಗಮಯ ಮಾಡುತ್ತದೆ.
ಆದ್ದರಿಂದ, ಮಾನವನಿಗೆ ಸರಿಯಾದ ಆಹಾರ ಸಸ್ಯಾಹಾರವೆ. ಪ್ರಾಣಿಗಳನ್ನು ಕೊಂದು ತಿನ್ನಲು ಮಾನವನೇನು ಕ್ರೂರ ಮೃಗವಲ್ಲ. ಮಾನವನು ಸಸ್ಯಾಹಾರಿ; ಆದ್ದರಿಂದ, ಒಳ್ಳೆಯ ಸ್ವಾದಿಷ್ಠವಾದ ಸಸ್ಯಾಹಾರವನ್ನೇ, ರುಚಿಕರವಾದ ಸಸ್ಯಾಹಾರವನ್ನೇ ಭುಜಿಸಬೇಕು.
ನಿಜಕ್ಕೂ ಪಿರಮಿಡ್ ಮಾಸ್ಟರ್‌ಗಳಿಗೇ ಅಲ್ಲ, ಪಿರಮಿಡ್ ಮಾಸ್ಟರ್‌ಗಳಲ್ಲದವರೂ ಸಹ, ಸಮಸ್ತ ಮಾನವ ಜಾತಿಗೆ ಮೌಲಿಕವಾದ ಅಂಶ -ಸಸ್ಯಾಹಾರ.
ಸಸ್ಯಾಹಾರ ಸೇವಿಸುವವರಿಗೆ ಧ್ಯಾನ ತುಂಬಾ ಬೇಗ ಕುದುರುತ್ತದೆ. ಧ್ಯಾನಮಾಡಲು ಪ್ರಾರಂಭಿಸಿದವರಿಗೆ ತಕ್ಷಣ ಸಸ್ಯಾಹಾರ ಅಭ್ಯಾಸವಾಗುತ್ತದೆ; ಮಾಂಸಾಹಾರ ತ್ಯಜಿಸಲ್ಪಡುತ್ತದೆ. ಸಾಧಾರಣ ಸೈನ್ಸ್-ಮೆಡಿಕಲ್ ಸೈನ್ಸ್ ಹೇಳಿದಹಾಗೆ ಪ್ರೊಟೀನ್ಸ್ ಮಾಂಸಾಹಾರದಲ್ಲೇ ಇರುತ್ತದೆ ಎಂದರೆ ಅದು ತುಂಬಾ ತಪ್ಪು ಕಲ್ಪನೆ. ಪ್ರೊಟೀನ್ಸ್ ಸಸ್ಯಾಹಾರದಲ್ಲೇ ಹೆಚ್ಚಾಗಿರುತ್ತವೆ. ಆದ್ದರಿಂದ, ಯಾರೂ ಸಹ ಮಾಂಸಾಹಾರವನ್ನು ತಿನ್ನಬಾರದು. ಎಲ್ಲರೂ ಸಹ ಸಸ್ಯಾಹಾರವನ್ನೇ ತಿನ್ನಬೇಕು. ಸಸ್ಯಾಹಾರದಲ್ಲೂ ಕೂಡಾ ಫ್ರಿಜ್‌ನಲ್ಲಿಟ್ಟ ಎರಡು ದಿನಗಳ ಸಾಂಬಾರು, ಮೂರು ದಿನಗಳ ಪಲ್ಯ ತಿನ್ನಬಾರದು. ಫ್ರೆಷ್ ಆಗಿ ಮಾಡಿಕೊಂಡು ತಿನ್ನಬೇಕು; ಬಿಸಿ ಬಿಸಿಯಾಗಿ ತಿನ್ನಬೇಕು. ಹಣ್ಣುಗಳು ಹೆಚ್ಚು ತಿನ್ನಬೇಕು. ನೀರು ತುಂಬಾ ಕುಡಿಯಬೇಕು. ನೀರು ಎಷ್ಟು ಹೆಚ್ಚು ಕುಡಿಯುತ್ತೇವೆಯೋ ಶರೀರಕ್ಕೆ ಅಷ್ಟು ಒಳ್ಳೆಯದು.
-ಬ್ರಹ್ಮರ್ಷಿ ಪತ್ರೀಜಿ
ಸಂಸ್ಥಾಪಕರು, ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್
ಕೊಲ್ಲೆನಯ್ಯ ಪ್ರಾಣಿಗಳ, ಮೆಲ್ಲೆನಯ್ಯ ಬಾಯಿಚ್ಛೆಗೆ
ಒಲ್ಲೆನಯ್ಯ ಪರಸತಿಯ ಸಂಗವ.
ಬಲ್ಲೆನಯ್ಯ ಮುಂದೆ ತೊಡಕುಂಟೆಂಬುದ
ಬಳ್ಳದ ಬಾಯಂತೆ ಒಂದೇ ಮನ ಮಾಡಿ
ನಿಲ್ಲೆಂದುನಿಲಿಸಯ್ಯ ಕೂಡಲಸಂಗಮದೇವ.
ನಾಲಿಗೆಯ ರುಚಿಗೆ ಮನಸೋತ ನಾನು ಮಾಂಸವನ್ನು ಇತರ ವಸ್ತುಗಳನ್ನು ತಿನ್ನುವುದಿಲ್ಲ. ಯಾವ ಪ್ರಾಣಿಯನ್ನೂ ಕೊಲ್ಲುವುದಿಲ್ಲ. ಮುಂದೆ ಸಂಕಟ ಉಂಟಾಗುವುದೆಂದು ತಿಳಿದಿರುವುದರಿಂದಾಗಿ ಪರಸತಿಯ ಸಂಗವನ್ನು ಒಲ್ಲೆ, ಈ ಪಾಪವು ಮೋಕ್ಷಕ್ಕೆ ಅಡ್ಡಿಯಾಗುವುದು. ಹಿಂಸೆ, ನಾಲಿಗೆ ದಾಸತ್ವ, ವ್ಯಭಿಚಾರಗಳಿಂದ, ದೂರಮಾಡಿ ಧ್ಯಾನವನ್ನು ಅಳೆಯುವ ಬಳ್ಳದಂತೆ ಒಂದೇ ಮುಖ ಮಾಡು ಹೇ ಕೂಡಲ ಸಂಗಮದೇವ ಈ ದೋಷಗಳನ್ನು ನಿಲ್ಲಿಸು ಎಂದು ಬೇಡಿಕೊಂಡಿದ್ದಾರೆ ಬಸವಣ್ಣನವರು.
-ಬಸವಣ್ಣ
ಆ ದೇವ ಈ ದೇವ ಣ ಮಹಾದೇವನೆನಬೇಡ |
ಆ ದೇವರ ದೇವ ಭುವನದಾ ಪ್ರಾಣಿಗಳಿ |
ಗಾದವನೇ ದೇವ ಸರ್ವಜ್ಞ ||
ಆ ದೇವರು ಹೆಚ್ಚಿನವನು, ಈ ದೇವರು ಹೆಚ್ಚಿನವನು, ಮಹಾದೇವನು ಹೆಚ್ಚಿನವನು ಎಂದು ಅನ್ನಬೇಡ. ಜಗತ್ತಿನ ಪ್ರಾಣಿಗಳ ಹಿತವನ್ನು ಕೋರುವವನು ಎಲ್ಲರಿಗಿಂತಲೂ ಹೆಚ್ಚಿನವನೆಂದು ತಿಳಿದುಕೊ.
-ಸರ್ವಜ್ಞ
“ಕುರಿಯ ಪ್ರಾಣದ ಬೆಲೆ…ಮಾನವನ ಪ್ರಾಣಕ್ಕಿಂತ ಕಡಿಮೆಯೇನಲ್ಲಾ. ಮನುಷ್ಯನ ಶರೀರವನ್ನು ಪೋಷಿಸಿಕೊಳ್ಳಲು ಕುರಿಯನ್ನು ಸಾಯಿಸುವುದು ಯಾವತ್ತಿಗೂ ಅಂಗೀಕರಿಸಲಾರೆ, ಪ್ರಾಣಿಗಳು ತುಂಬಾ ನಿಸ್ಸಾಹಾಯಕವಾದವುಗಳು, ಮಾನವನ ಸಹಾಯ ಪಡೆಯಲು ಅವುಗಳಿಗೆ ಅಧಿಕಾರವಿದೆ. ಆದರೆ, ಆದಕ್ಕೆ ಸಹಾಯ ಮಾಡಬೇಕಾದರೆ ಮನುಷ್ಯನಿಗೆ ಬಹಳ ಯೋಗ್ಯತೆ, ಅಧಿಕಾರ ವಿಚಕ್ಷಣೆ ಇರುವುದು ಆವಶ್ಯಕ!”
“ಹಿಂಸೆಯಿಂದ ಹಿಂಸೆಯೇ ಜನಿಸುತ್ತದೆ; ಅಹಿಂಸೆಯನ್ನು ಬಳಸಿ ಪ್ರಪಂಚದಲ್ಲಿ ಯಾವ ಕ್ರೂರಶಕ್ತಿಯನ್ನಾದರೂ ಜಯಿಸಬಹುದು.”
-ಮಹಾತ್ಮಾ ಗಾಂಧೀ
Recent Comments