“ನಾಳಿನ ಕಥೆ ನಾಳಿನದು… ಈವತ್ತಿನ ಕಥೆ ಈವತ್ತಿನದು”

ನಾವು ಯಾವ ದಿನದಲ್ಲಿದ್ದರೆ.. ಆ ದಿನದಲ್ಲೇ ಜೀವಿಸಬೇಕು
ಈ ದಿನದ ಕಾರ್ಯಕ್ರಮಗಳನ್ನು ನಾಳೆಗೆ ಮುಂದೂಡಬಾರದು
ಕಾಲವ್ಯಯ ಮಾಡುವ ತತ್ವವೇ.. ‘ತಮೋಗುಣ’
***
ಅದೇ ತರಹ ನಾಳಿನ ಕೆಲಸ ಇಂದೇ ಮಾಡಬಾರದು
ಯಾವುದಕ್ಕೂ ಅವಸರಪಡಬಾರದು
ನಿಧಾನವೇ ಪ್ರಧಾನ
ನಾಳೆ ಮಾಡಬೇಕಾದ್ದು ನಾಳೆ ಮಾಡಬೇಕು, ಈ ದಿನ ಮಾಡಬೇಕಾದ್ದು ಈ ದಿನವೇ ಮಾಡಬೇಕು.
***
‘ಅವಸರಪಡುವುದು’ ಎನ್ನುವುದೇ ‘ಅತಿ ಆಸೆ ಗುಣ’
‘ಅವಸರ’ ಪಡುವುದರಿಂದ ಅನೇಕಾನೇಕ ತಪ್ಪುಗಳು ನಡೆಯುತ್ತವೆ
ಅವನ್ನು ಸರಿಪಡಿಸಿಕೊಳ್ಳಲು ಮತ್ತಷ್ಟು ಶ್ರಮ ವ್ಯರ್ಥವಾಗುತ್ತದೆ
***
ದಿನಕ್ಕೆ ಇಪತ್ತನಾಲ್ಕು ಗಂಟೆಗಳಿವೆ.
ಇಪತ್ತನಾಲ್ಕು ಗಂಟೆಗಳನ್ನೂ ಅತಿ ಹೆಚ್ಚಾಗಿ, ಪ್ರಯೋಜನ ಪೂರ್ವಕವಾಗಿ ಉಪಯೋಗಿಸಿಕೊಳ್ಳಬೇಕು
ನಾಳೆ ಕುರಿತು ಈ ದಿನವೇ ಯೋಚಿಸಿದರೆ
ಈ ದಿನದ ಕುರಿತು ಈ ದಿನ ಸರಿಯಾಗಿ ಯೋಚಿಸಲಾಗುವುದಿಲ್ಲ
ಈ ದಿನ ಸರಿಯಾಗಿದ್ದರೆ… ನಾಳೆ ಇನ್ನೂ ಚೆನ್ನಾಗಿ ಇರುತ್ತದೆ
***
ಸೋಮಾರಿತನ ಎನ್ನುವುದು ‘ನಾಳೆ ಮಾಡೋಣ’ ಎನ್ನುತ್ತದೆ
ಬುದ್ಧಿ ಎನ್ನುವುದು ‘ಈ ದಿನವೇ ಮಾಡು’ ಎಂದು ಹೇಳುತ್ತದೆ
ಅತಿ ಆಸೆ ಎನ್ನುವುದು ‘ನಾಳಿನ ಕೆಲಸ ಈ ದಿನವೇ ಮಾಡೋಣ’ ಎನ್ನುತ್ತದೆ
ನಿರ್ದಿಷ್ಟವಾದ ‘ಇಪ್ಪತ್ತನಾಲ್ಕು ಗಂಟೆಗಳ’ ಪರಿಧಿಯಲ್ಲಿ ಪರಿಪೂರ್ಣವಾಗಿ, ಪರಿಪಕ್ವವಾಗಿ ಜೀವಿಸುವವನೇ
ಜೀವನಕಾಲದಲ್ಲಿ.. ‘ಮೇಧಾವಿ’.. ಆಗುತ್ತಾನೆ.
ನಾಳಿನ ವಿಷಯ ನಾಳೆಗೆ ಬಿಟ್ಟುಬಿಡೋಣ… ಈ ದಿನವನ್ನು ಈ ದಿನವೇ ಪೂರ್ಣವಾಗಿ ಉಪಯೋಗಿಸಿಕೊಳ್ಳೋಣ
‘ನಾಳಿನದು ನಾಳೆಯೇ.. ಈವತ್ತಿನದು ಈವತ್ತೇ’