” ಪಿರಮಿಡ್ ಅಷ್ಟಾಂಗ ಯೋಗಕ್ರಮ “

 

1. ಆಸನ, 2. ಪ್ರಾಣಾಯಾಮ, 3. ಪ್ರತ್ಯಾಹಾರ, 4. ಧಾರಣ, 5 ಧ್ಯಾನ, 6 ಸಮಾಧಿ, 7. ಯಮ, 8. ನಿಯಮ

ಆಸನ

“ಸ್ಥಿರ ಸುಖ ಆಸನ”

ಸ್ಥಿರವಾದ, ಸುಖದಾಯಕವಾದ ಆಸನವನ್ನು ಗ್ರಹಿಸುವುದು

ಕಣ್ಣುಗಳನ್ನು ಮುಚ್ಚಿಕೊಳ್ಳುವುದು; ಕೈ ಬೆರಳುಗಳನ್ನು ಸೇರಿಸಿ ಇಟ್ಟುಕೊಳ್ಳುವುದು

 

ಪ್ರಾಣಾಯಾಮ

ಸಹಜ ಉಚ್ಛ್ವಾಸ, ನಿಶ್ವಾಸಗಳನ್ನು ಪ್ರಶಾಂತವಾಗಿ ಗಮನಿಸುತ್ತಾ ಇರುವುದು; ಕುಂಭಕ ಮಾಡಕೂಡದು

ಚಿತ್ತವೃತ್ತಿಗಳು ಶೂನ್ಯವಾಗುತ್ತಿರುವುದನ್ನು ಗಮನಿಸುವುದು

 

ಪ್ರತ್ಯಾಹಾರ

ಮನಸ್ಸು ಶೂನ್ಯವಾದಾಗ, ಪ್ರಾಣಮಯ ಕೋಶದೊಳಗೆ ವಿಶ್ವಮಯ ಪ್ರಾಣಶಕ್ತಿ ಪ್ರವಹಿಸುತ್ತಾ ಇರುತ್ತದೆ

ಅದರ ಮೂಲಕ ನಡೆಯುವ ನಾಡೀಮಂಡಲ ಶುದ್ಧಿಯನ್ನು ಗಮನಿಸುತ್ತಿರುವುದು

 

ಧಾರಣ

ವಿಶ್ವಮಯಪ್ರಾಣಶಕ್ತಿ ಪ್ರವಾಹದ ಜೊತೆ ಅಂತರ್ಮುಖವಾಗಿ ದಿವ್ಯಚಕ್ಷುವಿನಿಂದ ದೊರೆಯುತ್ತಿರುವ

ಅನುಭವಗಳನ್ನು ಶ್ರದ್ಧೆಯಿಂದ ಗಮನಿಸುವುದು, ಆಸ್ವಾದಿಸುವುದು

 

ಧ್ಯಾನ

ಕ್ರಮೇಣ ಸೂಕ್ಷ್ಮಶರೀರ ಬೇರ್ಪಡುವುದನ್ನು ಗಮನಿಸುತ್ತೇವೆ

ಗಾಢ ಧ್ಯಾನ ಅವಸ್ಥೆಗಳಲ್ಲಿ ಕಾರಣಶರೀರ ಕೂಡಾ ಬೇರ್ಪಡುತ್ತದೆ .. ಆಯಾ ಲೋಕಗಳು ಅನುಭವಕ್ಕೆ ಬರುತ್ತಿರುತ್ತದೆ

 

ಸಮಾಧಿ

ದೀರ್ಘಕಾಲ ಸೂಕ್ಷ್ಮಶರೀರ, ಕಾರಣಶರೀರ ಯಾನಗಳ ಮೂಲಕ ಆತ್ಮಪರವಾದ ಉತ್ತರಗಳೆಲ್ಲವನ್ನೂ ಹೊಂದಲಾಗುವುದು ಸವಿಕಲ್ಪ, ನಿರ್ವಿಕಲ್ಪ ಸಮಾಧಿ ಸ್ಥಿತಿಗಳನ್ನು ಹೊಂದುವುದು

 

“ಸವಿಕಲ್ಪ ಸಮಾಧಿ”

ಆಧ್ಯಾತ್ಮಿಕವಾದ ಎಲ್ಲಾ ಪ್ರಶ್ನೆಗಳಿಗೂ ಅಂತರಾತ್ಮದಿಂದ

ಉತ್ತರಗಳು ಸ್ವಲ್ಪಸ್ವಲ್ಪವಾಗಿ ಪಡೆಯುವ ಸ್ಥಿತಿ

“ನಿರ್ವಿಕಲ್ಪ ಸಮಾಧಿ”

ಆಧ್ಯಾತ್ಮಿಕವಾದ ಎಲ್ಲಾ ಪ್ರಶ್ನೆಗಳಿಗೂ ಅಂತರಾತ್ಮದಿಂದ

ಉತ್ತರಗಳು ಸಂಪೂರ್ಣವಾಗಿ ಲಭ್ಯವಾದ ಸ್ಥಿತಿ