” ಪಿರಮಿಡ್ ಸ್ಪಿರಿಚ್ಯುವಲ್ ಸೈನ್ಸ್ ಅಕಾಡೆಮಿ “
ನಮ್ಮ “ಇರುವು-ಅಸ್ತಿತ್ವ” ದಲ್ಲಿ
“ಸರಿಯಾದ ತತ್ವ” ಇರುತ್ತದೆ ..” ಸರಿಯಲ್ಲದ ತತ್ವ” ಕೂಡ ಇರುತ್ತದೆ
ನಮ್ಮಿಂದ ಮಾಡಲಾಗುವ “ಕೆಲಸಗಳು” ಅಂದರೆ
ಕೆಲವು ಸರಿಯಾದ ಪದ್ಧತಿಯಲ್ಲಿ ಇರುತ್ತದೆ .. ಇನ್ನೂ ಕೆಲವು ಸರಿಯಲ್ಲದ ಪದ್ಧತಿಯಲ್ಲಿ ಇರುತ್ತದೆ
ಸರಿಯಲ್ಲದ ಅಸ್ತಿತ್ವವನ್ನು, ಸರಿಯಲ್ಲದ ಪದ್ಧತಿಗಳನ್ನು ತ್ಯಜಿಸಬೇಕು ..
ಸರಿಯಾದ ಅಸ್ತಿತ್ವವನ್ನು, ಸರಿಯಾದ ಪದ್ಧತಿಗಳನ್ನು ಅನುಸರಿಸಬೇಕು
ಅದೇ “ದಿವ್ಯಜ್ಞಾನ ಪ್ರಕಾಶ” ಅಂದರೆ
“ಏನು?”’ .. “ಏಕೆ?” .. “ಹೇಗೆ?” .. “ಯಾವಾಗ?” .. “ಎಲ್ಲಿ?” ಎನ್ನುವ ತರ್ಕದಿಂದ
ಜೀವನದಲ್ಲಿನ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು
“ಯಾವುದು ತಪ್ಪು?” .. “ಯಾವುದು ಸರಿ?”
“ಹೇಗೆ ಮಾಡಬೇಕು?” .. “ಹೇಗೆ ಮಾಡಬಾರದು?”
“ಏನು ಮಾಡಬೇಕು?” .. “ಏನು ಮಾಡಬಾರದು?”
“ಏಕೆ ಮಾಡಬೇಕು?” .. “ಏಕೆ ಮಾಡಬಾರದು?”
“ಯಾವಾಗ ಮಾಡಬೇಕು?” .. “ಯಾವಾಗ ಮಾಡಬಾರದು?”
“ಎಲ್ಲಿ ಮಾಡಬೇಕು?” .. “ಎಲ್ಲಿ ಮಾಡಬಾರದು?”
ಇವೆಲ್ಲದರ ಮೇಲೆ ಆಧ್ಯಾತ್ಮಿಕ ಪರವಾದ ಸತ್ಯದ ಅರಿವನ್ನು ಹೊಂದಬೇಕು
ಈ ಸಕಲ ಅರಿವುಗಳು .. “ಆಧ್ಯಾತ್ಮಿಕ ವಿಜ್ಞಾನ ಶಾಸ್ತ್ರ ಅಧ್ಯಯನ ” ಮೂಲಕವೇ
ಉದ್ಭವಿಸುತ್ತದೆ
ಶಾಲೆಯ ಮಕ್ಕಳು ತಮ್ಮ ವಿದ್ಯಾರ್ಥಿ ದಸೆಯಿಂದಲೇ ಸರಿಯಾದ ಜೀವನ ವಿಧಾನವನ್ನು ಅಭ್ಯಸಿಸಿ
ಸರಿಯಾದ ಅಸ್ತಿತ್ವದಲ್ಲಿ ಇರುತ್ತಾ, ಸರಿಯಾದ ಕೆಲಸಗಳನ್ನೇ ಮಾಡುವ ಹಾಗೆ ನೋಡಿಕೊಳ್ಳಬೇಕಾದರೆ
ಆಧ್ಯಾತ್ಮಿಕ ವಿಜ್ಞಾನ ಶಾಸ್ತ್ರವನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಬೋಧನಾಂಶವಾಗಿ ಸೇರಿಸಬೇಕು
ಆಧ್ಯಾತ್ಮಿಕ ವಿಜ್ಞಾನ ಶಾಸ್ತ್ರಮೂಲ ಸಿದ್ಧಾಂತಗಳಿಂದ ಕೂಡಿರುವ ಬೋಧನಾಂಶಗಳನ್ನು ಎಲ್ಲರಿಗೂ ತಲುಪಿಸಬೇಕು
ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್, ಬೆಂಗಳೂರು, ಮೂಲಕ
“ಪಿರಮಿಡ್ ಸ್ಪಿರಿಚ್ಯುವಲ್ ಸೈನ್ಸ್ ಅಕಾಡೆಮಿ” ಆವಿರ್ಭವಿಸಿದೆ.
“ಶಾಸ್ತ್ರ” ಎನ್ನುವುದು ತರ್ಕದಿಂದ ಕೂಡಿದ “ಕಾರ್ಯ-ಕಾರಣ ಸಿದ್ಧಾಂತದ” ಮೇಲೆ ಆಧಾರಪಟ್ಟಿರುತ್ತದೆ
“A+B”=”C+D” ಎನ್ನುವ ಸಿದ್ಧಾಂತ ಪ್ರಕಾರವೇ ಎಲ್ಲಾ ನಡೆಯುತ್ತಿರುತ್ತದೆ
ನಿರ್ದಿಷ್ಟವಾದ ‘ಉಷ್ಣೋಗ್ರತೆ’ ಮತ್ತು ‘ಪೀಡನೆ’ ಕಾರಕಗಳ ಪ್ರಮಾಣದಿಂದ
ಒಂದು ರೀತಿಯ ಫಲಿತ ಬಂದರೆ ..
‘ಉಷ್ಣೋಗ್ರತೆ’ ಮತ್ತು ‘ಪೀಡನೆ’ ಕಾರಕಗಳ ಪ್ರಮಾಣ ಬದಲಾದರೇ
ಮತ್ತೊಂದು ವಿಧವಾದ ಫಲ ಸಿದ್ಧಿಸುತ್ತದೆ
ಈ ವಿಶ್ವಕಾರಣ-ಕಾರ್ಯ ಸಿದ್ಧಾಂತ ಶಕ್ತಿ ವಿನಿಮಯ ಮೂಲಸೂತ್ರಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿರುತ್ತದೆ
‘ಪದಾರ್ಥ’ ಎನ್ನುವುದು ಶಕ್ತಿಯ ‘ರೂಪ’ ಆದರೆ,
‘ಶಕ್ತಿ’ ಎನ್ನುವುದು ಸಂಕಲ್ಪದ ‘ಪ್ರತಿರೂಪ’ ಆಗುತ್ತದೆ ..
‘ಸಂಕಲ್ಪ’ ಎನ್ನುವುದು ಚೈತನ್ಯದ ‘ನಿರಂತರ ಕಾರ್ಯಕ್ಷೇತ್ರ’
‘ಚೈತನ್ಯ’ ಎನ್ನುವುದು ಸದಾ ‘ಸ್ವಾತಂತ್ರ್ಯ’ ಮತ್ತು ‘ಆಯ್ಕೆ’ ಎನ್ನುವ
ಶಾಶ್ವತ ಸೂತ್ರಗಳ ಮೇಲೆ ಆಧಾರಪಟ್ಟು ಕೆಲಸಮಾಡುತ್ತಿರುತ್ತದೆ
‘ಚೈತನ್ಯ’ ಎನ್ನುವುದು ಸದಾ ಸಂಕಲ್ಪಗಳಿಂದ ಕೂಡಿದ ಮನಸ್ಸಿನ ಮೂಲಕ ಪದಾರ್ಥವನ್ನು ಸೃಷ್ಟಿಸುತ್ತಿರುತ್ತದೆ
ಈ “ಆತ್ಮವಿಜ್ಞಾನಶಾಸ್ತ್ರ” ಎನ್ನುವ ಪ್ರಾಥಮಿಕ ಶಾಸ್ತ್ರ
ಸಕಲ ಪಾಠಶಾಲೆಗಳ ಮೂಲಕ, ಕಲಾಶಾಲೆಗಳ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೂ
ಸಿಗಬೇಕೆನ್ನುವುದೇ “ಪಿರಮಿಡ್ ಸ್ಪಿರಿಚ್ಯುವಲ್ ಸೈನ್ಸ್ ಅಕಾಡೆಮಿ”ಯ ಆಕಾಂಕ್ಷೆ
ಆಗಲೇ .. ನವಸಮಾಜ ನಿರ್ಮಾಣಕ್ಕೆ ಕಾರಣಕರ್ತರಾದ ವಿದ್ಯಾರ್ಥಿಗಳು, ಉಪಾಧ್ಯಾಯರು ಮತ್ತು ಮೇಧಾವಿ ವರ್ಗ ..
ಎಲ್ಲರಲ್ಲೂ ಸಮತೋಲನ, ಸಂತೋಷ, ಆರೋಗ್ಯ ಎನ್ನುವುದು ಪರಿಪೂರ್ಣವಾಗಿ ನೆಲೆಗೊಳ್ಳುತ್ತದೆ.
Recent Comments