ಮಹೇಶ್ವರ ಮಹಾಪಿರಮಿಡ್– ಕಡ್ತಾಲ್
“ ಮಹಾಶಿವರಾತ್ರಿ ಅಖಂಡಧ್ಯಾನ ”
ಶಿವತತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು
ಇಹಲೋಕದಲ್ಲಿ ಶಿವಪುತ್ರತತ್ವ ಮತ್ತು ಪರಲೋಕದಲ್ಲಿ ಶಿವತತ್ವ ಇರುತ್ತದೆ. ಆದ್ದರಿಂದ, ಶಿವಪುತ್ರರಾದ ನಾವು ಇಹಲೋಕದಲ್ಲಿರುತ್ತಲೇ ಪರಲೋಕದಲ್ಲಿನ ಶಿವತತ್ವದಲ್ಲಿನ ಪರವಶತತ್ವವನ್ನು (ಆನಂದವನ್ನು) ಹೊಂದಲೇಬೇಕು. ಇದು ಸಾಧ್ಯವಾಗಬೇಕಾದರೆ ನಮಗೆ ನಿರಂತರ ಧ್ಯಾನಜ್ಞಾನ ಸಾಧನೆ ಒಂದೇ ಮಾರ್ಗ.
ಸಂಗೀತ, ನೃತ್ಯ, ಧ್ಯಾನ .. ಈ ಮೂರು ಸೇರಿದರೇನೆ ಆತ್ಮವಿಕಾಸ ಆಕಾಶವನ್ನು ತಾಕುತ್ತದೆ. ಕೇವಲ ಹಣ ಸಂಪಾದನೆಯೇ ಧ್ಯೇಯವಾಗಿ ಜೀವಿಸುತ್ತಾ .. ಅನಾಗರಿಕರ ಹಾಗೆ ಮಾಂಸಾಹಾರವನ್ನು ತಿನ್ನುವವರೆಲ್ಲಾ ಕೂಡ .. ಶಿವರಾತ್ರಿ ಪೂಜೆಗಳು, ಜಾಗರಣೆಗಳು ಮಾಡುವುದರಿಂದ ಲಾಭವೇನು ಇರುವುದಿಲ್ಲ ಎನ್ನುವ ಸಂಗತಿಯನ್ನು ಗ್ರಹಿಸಬೇಕು.
ಒಬ್ಬ ಮುಕ್ಕಣ್ಣ ಮಾತ್ರವೇ ಇನ್ನೊಬ್ಬ ಮುಕ್ಕಣ್ಣನನ್ನು ಗುರುತಿಸಲಾಗುವುದರಿಂದ ಶ್ವಾಸದ ಮೇಲೆ ವಿಶ್ವಾಸದಿಂದ ಶಿವತತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ’ಶಿವನು ಎಂತಹವನೊ ನಾವು ಕೂಡ ಅವರಂತೆ ಆಗಬೇಕು. ಅಷ್ಟೇ ಅಲ್ಲ ನಾವು ಶಿವೋಹಂ, ಸತ್ಯೋಹಂ, ನಿತ್ಯೋಹಂ, ಆತ್ಮೋಹಂ, ಅನಂತೋಹಂ ಮತ್ತು ಶಾಶ್ವತೋಹಂ ಎಂದು ಸಹ ತಿಳಿದುಕೊಳ್ಳಬೇಕು. ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಅವರ ಏಕೈಕ ಲಕ್ಷ್ಯ ಮತ್ತು ಅವರ ಜನ್ಮಕಾರಣ .. ’ನಮಗೂ ಶಿವನಿಗೂ ಯಾವುದೇ ವ್ಯತ್ಯಾಸವಿಲ್ಲ’ ಎನ್ನುತ್ತಾ ಪ್ರತಿಯೊಬ್ಬರಿಗೂ ಹೇಳುವುದು ಮತ್ತು ಅದು ಅವರಿಗೆ ಸ್ವಾನುಭವ ಆಗುವವರೆಗೂ ಅವರನ್ನು ಧ್ಯಾನ ಮಾಡುವ ಹಾಗೆ ಪ್ರೋತ್ಸಾಹಿಸಬೇಕು.”
ಆ ಪರಮ ಶಿವನು ಹೇಳಿದ್ದು ಧ್ಯಾನ, ಮಾಡಿದ್ದು ಧ್ಯಾನ. ಆತನು ಧ್ಯಾನದಲ್ಲಿ ನಿಪುಣನಾಗಿ ತನ್ನ ಮೂರನೇ ಕಣ್ಣನ್ನು ತೆರೆಸಿಕೊಂಡು ದಿವ್ಯದರ್ಶನಗಳೆಲ್ಲವನ್ನು ಮಾಡಿದನು. ಪ್ರಸ್ತುತ ಪರಿಸ್ಥಿತಿಗಳಲ್ಲಿ ಪ್ರಜೆಗಳಿಗೆ ಬೇಕಾಗಿರುವುದು ’ಪಾಹಿಮಾಂ, ಪಾಹಿಮಾಂ’ ಎಂದು ಅರ್ಥಿಸಲಾಗುವ ದೇವಾಲಯಗಳಲ್ಲ. ಧ್ಯಾನ ಮಾಡಿ ತಮ್ಮಲ್ಲಿರುವ ಆತ್ಮಶಕ್ತಿಯನ್ನು ಹೊರಗೆ ತೆಗೆದುಕೊಂಡು ತಮ್ಮನ್ನು ತಾವೇ ಉದ್ಧರಿಸಿಕೊಳ್ಳಲಾಗುವ ಧ್ಯಾನ ಪಿರಮಿಡ್‌ಗಳು ಬೇಕು. ಇದು ಯಾವುದೇ ಮತಕ್ಕಾಗಲಿ, ಯಾವುದೇ ಸಂಸ್ಕೃತಿಗಾಗಲಿ ಸಂಬಂಧಿಸಿದ್ದಲ್ಲ. ಇವು ಕೇವಲ ಶಕ್ತಿಕ್ಷೇತ್ರಗಳಷ್ಟೆ! ನಾವು ಇನ್ನೂ ಹೆಚ್ಚು ಪಿರಮಿಡ್‌ಗಳನ್ನು ನಿರ್ಮಿಸುತ್ತಾ ಈ ಭೂಮಿಯನ್ನು ಶಕ್ತಿಮಯ ಮಾಡಬೇಕು ಮತ್ತು ಬರಲಿರುವ ಸತ್ಯಯುಗದಲ್ಲಿ ಶಕ್ತಿವಂತರಾಗಿ ಪ್ರವೇಶಿಸಬೇಕು ಎಂದು ಹೇಳಿದರು.
Recent Comments