“ಯಾವುದೇಕೆಲಸಮಾಡಲುಶಕ್ತಿಅವಶ್ಯಕ”
ಏಪ್ರಿಲ್ 2 ರಂದು ಪಿರಮಿಡ್ ವ್ಯಾಲಿಯಲ್ಲಿ ನಡೆದ ಕರ್ನಾಟಕ ಮಾಸ್ಟರ್ಗಳ ಸಮಾವೇಶದಲ್ಲಿ ಪತ್ರೀಜಿಯವರು ಧ್ಯಾನಿಗಳಿಗೆ ನೀಡಿದ ಸಂದೇಶ.
ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ, ಅದನ್ನು ಧ್ಯಾನ ಮಾಡುವ ಮೂಲಕ ಪ್ರಾರಂಭಿಸಬೇಕು. ಕೆಲಸವಾದ ನಂತರವೂ ಸಹ ಆಸ್ಟ್ರಲ್ ಮಾಸ್ಟರ್ಗಳಿಗೆ ಕೃತಜ್ಞತೆಗಳನ್ನು ಹೇಳುತ್ತಾ ಧ್ಯಾನ ಮಾಡಬೇಕು. ಯಾವುದೇ ಕೆಲಸ ಮಾಡಲು ಶಕ್ತಿ ಅವಶ್ಯಕ. ಧ್ಯಾನದಿಂದಲೇ ಆ ಶಕ್ತಿಯನ್ನು ನಾವು ಪಡೆಯುತ್ತೇವೆ.
ನೀವು ಧ್ಯಾನ ಮಾಡಿದಾಗಲೆಲ್ಲಾ ಆಸ್ಟ್ರಲ್ ಮಾಸ್ಟರುಗಳು ಬಂದು ತಮ್ಮ ಶಕ್ತಿಯನ್ನು ಧಾರೆ ಎರೆಯುತ್ತಾರೆ. ಇದನ್ನೇ ಶಕ್ತಿ ದಾನ ಎನ್ನುತ್ತಾರೆ. ನೀವು ಕಣ್ಣು ಮುಚ್ಚದಿದ್ದರೆ ’ಶಕ್ತಿ ದಾನ’ ನಡೆಯುವುದಿಲ್ಲ.
ಆಸ್ಟ್ರಲ್ ಮಾಸ್ಟರುಗಳು ತಮ್ಮ ಜ್ಞಾನವನ್ನು, ಶಕ್ತಿಯನ್ನು ನಮ್ಮ ಮೇಲೆ ಸುರಿಯುತ್ತಾರೆ. ಅವರು ಶಕ್ತಿಯನ್ನು ನೀಡಲು ಸಿದ್ಧರಾಗಿದ್ದಾರೆ. ಆದರೆ, ಅವರು ಅರ್ಹತೆಯಿಲ್ಲದವರಿಗೆ ಶಕ್ತಿಯನ್ನು ನೀಡುವುದಿಲ್ಲ. ಅಪಾತ್ರ ದಾನ ಅಧರ್ಮ. ಅವರು ನಿಮಗೆ ಶಕ್ತಿಯನ್ನು ಕೊಡಬೇಕೆಂದರೆ ನೀವು ಸರಿಯಾದ ಪಾತ್ರೆಯಾಗಿ ಬದಲಾಗಬೇಕು. ನೀವು ಕಣ್ಣುಗಳನ್ನು ಮುಚ್ಚಿದಾಗ ಅವರ ಜ್ಞಾನವನ್ನು, ಶಕ್ತಿಯನ್ನು ಹೊಂದುವ ವಾಹನವಾಗಿ ತಯಾರಾಗುವಿರಿ.
ಮಾಸ್ಟರ್ಗಳಿಂದ ಶಕ್ತಿಯನ್ನು ಸಂಗ್ರಹಿಸಿಕೊಳ್ಳಲು ನೀವು ಧ್ಯಾನದಲ್ಲಿ ನಿಮ್ಮನ್ನು ನೀವು ತಯಾರು ಮಾಡಿಕೊಳ್ಳುವಿರಿ. ತಾಯಿ ಮಗುವಿಗೆ ಹಾಲು ಕೊಡುವ ಹಾಗೆ ಆಸ್ಟ್ರಲ್ ಮಾಸ್ಟರುಗಳು ತಮ್ಮ ಶಕ್ತಿಯನ್ನು ನಮಗೆ ಕೊಡುತ್ತಾರೆ. ತಾಯಿಯ ಹತ್ತಿರ ಹಾಲಿದೆ, ಆ ತಾಯಿಗೆ ಆ ಹಾಲಿನ ಅವಶ್ಯಕತೆಯಿಲ್ಲ, ಅವರು ಆ ಹಾಲನ್ನು ಮಗುವಿಗೆ ಕೊಡಬೇಕೆಂದುಕೊಳ್ಳುತ್ತಾಳೆ. ಹಾಗೆಯೇ, ಆಸ್ಟ್ರಲ್ ಮಾಸ್ಟರ್ಸ್ ಹತ್ತಿರ ಅಪಾರವಾದ ಶಕ್ತಿಯಿದೆ, ಅವರು ಶಕ್ತಿಯನ್ನು ಕೊಡಬೇಕೆಂದಿದ್ದಾರೆ, ನೀವು ಕೂಸಾಗಿ ಬದಲಾಗಿ ಸಾಕು, ಶಕ್ತಿಯನ್ನು ಕೊಡಲಾಗುತ್ತದೆ. ನಿಮ್ಮ ಮನಸ್ಸು ಮೌನವಾದಾಗ ಸಮಸ್ತ ವಿಶ್ವವೂ ನಿಮ್ಮ ಕಡೆಗೆ ಪ್ರವಹಿಸುತ್ತದೆ. ಆಸ್ಟ್ರಲ್ ಮಾಸ್ಟರುಗಳು ಪ್ರತ್ಯಕ್ಷವಾಗಬೇಕೆಂದೂ ಸಹ ಕೋರುವ ಅವಶ್ಯಕತೆಯಿಲ್ಲ. ಅವರನ್ನು ಮರೆತು ಶ್ವಾಸದೊಂದಿಗೆ ಕೂಡಿರಿ. ಆಗ ಅವರು ಪ್ರತ್ಯಕ್ಷವಾಗಿ ಶಕ್ತಿಯನ್ನು ಧಾರೆಯೆರೆಯುತ್ತಾರೆ. ನೀವು ಅವರನ್ನು ನೆನೆಸಿಕೊಳ್ಳಬೇಕೆಂದಾಗಲಿ, ಪೂಜಿಸಬೇಕೆಂದಾಗಲಿ ಆಸ್ಟ್ರಲ್ ಮಾಸ್ಟರ್ಸ್ ಕೋರುವುದಿಲ್ಲ. ನಿಮ್ಮ ಪೂಜೆಯಿಂದ ಅವರು ಬರುವುದಿಲ್ಲ. ಮಾಸ್ಟರುಗಳು ಆಗಿ ಬದಲಾಗಬೇಕೆಂದು ಬಯಸುವವರೊಂದಿಗೆ, ಆಸ್ಟ್ರಲ್ ಮಾಸ್ಟರ್ಗಳನ್ನು ಅವಲಂಬಿಸದೆ ಇರುವವರೊಂದಿಗೆ ಸಹ ಅವರು ಆನಂದದಿಂದ ಇರುತ್ತಾರೆ. ನೀವು ಮಾಸ್ಟರುಗಳು ಆಗಿ ಬದಲಾಗಬೇಕೆಂದು ಬಯಸಿ ನಿರ್ಧರಿಸಿದರೆ ಆಸ್ಟ್ರಲ್ ಮಾಸ್ಟರ್ಗಳು ಸಂತೋಷಿಸುತ್ತಾರೆ.
’ಆಧ್ಯಾತ್ಮಿಕತೆ’ ಅಂದರೆ
ನಾವು ದೇವರುಗಳಿಗೇ ದೇವರು
ನಾವು ದೇವರಿಂದ ಬಂದಂತಹ ದೇವರು
ನಾವು ದೇವರಿಂದ ತಯಾರಾಗಿ ಬಂದಂತಹ ದೇವರು ಎಂದು ಅರ್ಥಮಾಡಿಕೊಳ್ಳುವುದು.
ಸತ್ಯದ ಪರೋಕ್ಷ ಪರಿಚಯ, ಪ್ರತ್ಯಕ್ಷ ಅನುಭವವೇ ’ಜ್ಞಾನ’. ಧ್ಯಾನದ ಮೂಲಕ 30% ಪ್ರತ್ಯಕ್ಷ ಜ್ಞಾನವನ್ನು ಹೊಂದುತ್ತೇವೆ. ಸ್ವಾಧ್ಯಾಯದಿಂದ 35% ಪರೋಕ್ಷ ಜ್ಞಾನವನ್ನು ಹೊಂದುತ್ತೇವೆ. ಸಜ್ಜನಸಾಂಗತ್ಯದ ಮೂಲಕ 35% ಪರೋಕ್ಷ ಜ್ಞಾನವನ್ನು ಹೊಂದುತ್ತೇವೆ. ಒಟ್ಟು 100%. ಈ ಜ್ಞಾನವೆಲ್ಲಾ ಕೂಡಿದರೆ ಮುಕ್ತಿ ಬರುತ್ತದೆ. ಎಲ್ಲರೂ ಸ್ವಾಧ್ಯಾಯ, ಸಜ್ಜನಸಾಂಗತ್ಯದಲ್ಲಿ ಮತ್ತಷ್ಟು ಹೆಚ್ಚಾಗಿ ಕಳೆಯಬೇಕು.
ನಾನು ಈಗಲೂ ಎಲ್ಲರ ಅನುಭವಗಳನ್ನು ಕೇಳುತ್ತಾ ಇರುತ್ತೇನೆ. ನಾನು ಇನ್ನಷ್ಟು ಸಜ್ಜನಸಾಂಗತ್ಯವನ್ನು, ಇನ್ನಷ್ಟು ಜ್ಞಾನವನ್ನು ಕೋರುತ್ತಿದ್ದೇನೆ. ಇದು ನನ್ನ ಜೀವನವೆಲ್ಲಾ ಮಾಡುತ್ತಿರುವ ಸಾಧನೆ. ನಮ್ಮ ಕೊನೆಯ ಶ್ವಾಸದವರೆಗೆ ಮತ್ತು ಅನಂತರವೂ ಸಹ ಪುಸ್ತಕಪಠನ ಮಾಡುತ್ತಲೇ ಇರಬೇಕು. ಪ್ರತಿಯೊಬ್ಬರೂ ಉಳಿದ ಪ್ರತಿಯೊಬ್ಬರಿಂದ ತಿಳಿದುಕೊಳ್ಳುವುದೇ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್ಮೆಂಟ್ರವರ ಗುರಿ.
ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾಗೆ ಹೋಗುತ್ತಾರೆ, ಹಿಂದುಗಳೆಲ್ಲರೂ ಮಾನಸ ಸರೋವರಕ್ಕೆ ಹೋಗುತ್ತಾರೆ. ಪಿರಮಿಡ್ ಮಾಸ್ಟರ್ಸ್ಗಳೆಲ್ಲರೂ ಈಜಿಪ್ಟ್ ಗೀಜಾ ಪಿರಮಿಡ್ಗೆ ಹೋಗುತ್ತಾರೆ.
ಬುದ್ಧನಿಗೆ ಮೂರನೆಯ ಕಣ್ಣು ಬಂದಿದೆ ಎಂದರೆ, ನನಗೂ ಸಹ ಬರುತ್ತದೆ. ನನಗೆ ಬಂದರೆ, ನಿಮಗೂ ಬರುತ್ತದೆ. ನಿಮಗೆ ಬಂದರೆ ಪ್ರತಿಯೊಬ್ಬರಿಗೂ ಬರುತ್ತದೆ. ಪ್ರತಿಯೊಬ್ಬರಿಗೂ ಮೂರನೆಯ ಕಣ್ಣು ಲಭಿಸುತ್ತದೆ.
ಮೊದಲು ಅಹಿಂಸಾತ್ಮಕರಾಗಬೇಕು ನಂತರ ಹಂಸಾತ್ಮಕರಾಗಬೇಕು. ಒಬ್ಬ ಮನುಷ್ಯ ಭೀಮ್ಸೇನ್ ಜೋಷಿ ಆಗಲಾದರೆ, ಯಾರಾದರೂ ಸಹ ಆಗಬಹುದು.
ನಿದ್ದೆ ಕಡಿಮೆ ಮಾಡಿ, ಹೆಚ್ಚುಹೆಚ್ಚಾಗಿ ಧ್ಯಾನ ಮಾಡಿ.
ತಿನ್ನುವುದನ್ನು ಕಡಿಮೆ ಮಾಡಿ, ಹೆಚ್ಚುಹೆಚ್ಚಾಗಿ ಧ್ಯಾನ ಮಾಡಿ.
ಮಾತನಾಡುವುದನ್ನು ಕಡಿಮೆ ಮಾಡಿ, ಹೆಚ್ಚುಹೆಚ್ಚಾಗಿ ಧ್ಯಾನ ಮಾಡಿ.
ಆಲೋಚನೆಗಳನ್ನು ಕಡಿಮೆ ಮಾಡಿ, ಹೆಚ್ಚುಹೆಚ್ಚಾಗಿ ಧ್ಯಾನ ಮಾಡಿ.
ವೈದ್ಯರ ಹತ್ತಿರ ಹೋಗಬೇಡಿ.
“ನಾವೆಲ್ಲರೂ ಸಹ ದೇವರುಗಳೇ, ನಾವೆಲ್ಲರೂ ಸಹ ಸೃಷ್ಟಿಕರ್ತರೇ (ಹೊಸದಾಗಿ ರಚಿಸುವುದು), ನಾವೆಲ್ಲರೂ ಸಹ ಸ್ಥಿತಿಕರ್ತರೇ (ರಚನೆಯು ಅದು ಇರುವಂತೆ, ಹಾಗೆಯೇ ಅದನ್ನು ಕಾಪಾಡಿಕೊಳ್ಳುವುದು), ನಾವೆಲ್ಲರೂ ಸಹ ನಮ್ಮ ವಾಸ್ತವಗಳನ್ನು ನಾವೇ ಲಯಗೊಳಿಸುತ್ತೇವೆ (ಸೃಷ್ಟಿಸಿರುವುದನ್ನು ನಾಶಪಡಿಸುವುದು)”.
“ನಮ್ಮದೇ ಆದ ಉಪಯುಕ್ತ ಪ್ರತಿಭೆಗಳನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ, ನಮ್ಮದೇ ಆದ ಉಪಯುಕ್ತ ಪ್ರತಿಭೆಗಳನ್ನು ಉಳಿಸಿಕೊಂಡು ಹೋಗುತ್ತೇವೆ, ನಮ್ಮದೇ ಆದ ಉಪಯುಕ್ತ ವಸ್ತುಗಳನ್ನು ನಾವೇ ನಾಶಪಡಿಸುತ್ತೇವೆ..”
“ನಾವೆಲ್ಲರೂ ಸಹ ನಮಗೆ ನಾವೇ ಬ್ರಹ್ಮರು, ನಾವೆಲ್ಲರೂ ಸಹ ನಮಗೆ ನಾವೇ ವಿಷ್ಣುಗಳು, ನಾವೆಲ್ಲರೂ ಸಹ ನಮಗೆ ನಾವೇ ಮಹೇಶ್ವರು”.
ಧ್ಯಾನದಲ್ಲೇ ಸಂತೋಷ, ಧ್ಯಾನದಲ್ಲೇ ಹೆಚ್ಚು ಆತ್ಮಶಕ್ತಿ, ಧ್ಯಾನದಲ್ಲೇ ಹೆಚ್ಚು ದಿವ್ಯದೃಷ್ಟಿ, ಧ್ಯಾನವೇ ಸರ್ವವು, ಧ್ಯಾನವೇ ಸತ್ಯವು ಎಂದು ಹೇಳಿದರು.
Recent Comments