“ಯುವಜನ ರಚನಾತ್ಮಕ ಕಾರ್ಯಕಲಾಪಗಳನ್ನೇ ಕೈಗೊಳ್ಳಬೇಕು”

ನಾನು ಕೂಡಾ ಈ ಉಸ್ಮಾನಿಯಾ ಯೂನಿವರ್ಸಿಟಿಯಲ್ಲೇ ಗ್ರಾಜ್ಯುಯೇಷನ್ ಪೂರ್ತಿ ಮಾಡಿರುವ ವಿದ್ಯಾರ್ಥಿ. ಆರ್ಟ್ಸ್ ಕಲಾಶಾಲೆಯಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಈ ಠಾಗೂರ್ ಆಡಿಟೋರಿಯಮ್‌ನಲ್ಲಿ ಪ್ರಸಿದ್ಧಿ ಹೊಂದಿರುವ ಅನೇಕಾನೇಕ ವ್ಯಕ್ತಿಗಳಿಂದ ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿತ್ತು. ಆಗ ನಾನು ಸಹ ನಿಮ್ಮ ಹಾಗೇ ಪ್ರೇಕ್ಷಕರ ಸ್ಥಾನದಲ್ಲಿ ಕುಳಿತುಕೊಂಡು ಯಾವುದೊ ಒಂದು ದಿನ ನಾನು ಸಹ ಈ ಸ್ಟೇಜ್ ಮೇಲೆ ಅಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂದು ಕನಸುಕಾಣುತ್ತಿದ್ದೆ. ಆ ದಿನದ ನನ್ನ ಕನಸು ಈ ದಿನ ನನಸಾಗಿದೆ. ಅದು ನನ್ನ ಸಂಕಲ್ಪಕ್ಕೆ ಇರುವ ಅನಂತವಾದ ಶಕ್ತಿ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ತಮ್ಮಲ್ಲಿರುವ ಶಕ್ತಿಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಅದಕ್ಕೆ ಅನುಗುಣವಾಗಿ ಶ್ರಮಿಸುತ್ತಾ ತಮಗೆ ಇರುವ ಸಮಯವನ್ನು ಗುಣವಾಗಿ ಪರಿವರ್ತಿಸಿಕೊಳ್ಳಬೇಕು. ಯುವಜನ ಮಜಾ ಮಾಡಬೇಕು. ಆದರೆ, ಜೀವನವೆಲ್ಲಾ ಮಜಾ ಮಾಡುತ್ತಾ ಕಳೆಯಬಾರದು. ಧ್ಯಾನ ಸಾಧನೆಯಿಂದ ವಿಶೇಷವಾಗಿ ಶಕ್ತಿಯನ್ನು ಪಡೆಯುತ್ತಾ… ನಿಮ್ಮಲ್ಲಿರುವ ನಿಪುಣ್ಯತೆಯನ್ನು ಸುಧಾರಣೆ ಮಾಡಿಕೊಳ್ಳಬೇಕು. ತಕ್ಕಮಟ್ಟಿಗೆ ಶ್ರದ್ಧೆಯನ್ನು, ಸಾಮರ್ಥ್ಯವನ್ನು ಚೆನ್ನಾಗಿ ಬೆಳೆಸಿಕೊಂಡು ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸಗಳನ್ನು ಮಾಡಬಲ್ಲವರಾಗಬೇಕು. ಧ್ಯಾನ ಸಾಧನೆ ಇಲ್ಲದ ಜೀವನದಲ್ಲಿ ಹೆಚ್ಚು ಸಮಯದಲ್ಲಿ ಕಡಿಮೆ ಕೆಲಸವನ್ನು ಅತಿ ಕಷ್ಟಪಟ್ಟು ಮಾಡಬೇಕಾಗಿ ಬರುತ್ತದೆ. ಅದರಿಂದ, ನಮ್ಮ ಶಕ್ತಿಸಾಮರ್ಥ್ಯಗಳೆಲ್ಲಾ ಬೂದಿಯಲ್ಲಿ ಹಾಕಿದ ಪನ್ನೀರಿನ ಹಾಗೇ ಆಗುತ್ತವೆ. ಆದ್ದರಿಂದ, ನಮ್ಮ ಜೀವನಗಳು ಅಸ್ತವ್ಯಸ್ತ ಆಗುವುದಕ್ಕಿಂತಾ ಮುಂಚೆಯೆ ನಾವು ಧ್ಯಾನ ಸಾಧನೆ ಪ್ರಾರಂಭಿಸಬೇಕು. ಆಕ್ಸಿಡೆಂಟ್ ಆದಮೇಲೆ ಟ್ರಾಫಿಕ್ ರೂಲ್ಸ್ ಫಾಲೋ ಮಾಡಿದ ಹಾಗೆ, ಜೀವನದಲ್ಲಿ ಕಷ್ಟಗಳೆಲ್ಲಾ ಅನುಭವಿಸಿ ನೊಂದು, ಬೆಂದ ಮೇಲೆ ಮುದಿವಯಸ್ಸಿನಲ್ಲಿ ಧ್ಯಾನ ಪ್ರಾರಂಭಿಸುವುದರಿಂದ ಲಾಭವೇನೂ ಇರುವುದಿಲ್ಲ. ಬಾಲ್ಯದಿಂದಲೇ ಮಕ್ಕಳು ಧ್ಯಾನ ಮಾಡುತ್ತಿದ್ದರೆ, ತಮ್ಮ ಮುಂಬರುವ ಜೀವನವೆಲ್ಲಾ ಆತ್ಮಶಕ್ತಿಯಿಂದ, ಅರಿವಿನಿಂದ, ಶ್ರದ್ಧೆಯಿಂದ ಕಳೆಯುತ್ತಾ… ಆತ್ಮಜ್ಞಾನಿಗಳಾಗಿ ಪ್ರತಿಕ್ಷಣವೂ ಸಹ ಆನಂದವಾಗಿ ಹಾಯಾಗಿ ಜೀವಿಸಬಲ್ಲರು. ಅದಕ್ಕೆ ಶುಭಸ್ಯ ಶೀಘ್ರಂ ಎಂದರು ಹಿರಿಯರು.

***

ತುಂಬಾ ಅದ್ಭುತವಾದ ಮಾನವ ಜನ್ಮ ಪಡೆದು ವಿನಾಶಕಾರೀ ಧೋರಣೆಗಳಿಂದ ಆತ್ಮಶಕ್ತಿಯನ್ನು ವ್ಯರ್ಥಮಾಡಿಕೊಳ್ಳುತ್ತಾ ಇರುವುದರಿಂದ… ಮೇಲಿನ ಲೋಕಗಳಲ್ಲಿ ಇರುವವರೆಲ್ಲಾ ನಮ್ಮನ್ನು ನೋಡಿ ನಗುತ್ತಿದ್ದಾರೆ. ಬರಲಿರುವ ಹೊಸ ಯುಗದ ನಿರ್ಮಾಣದ ಹೊಣೆಗಾರಿಕೆ ನಿಮ್ಮ ಮೇಲೆ ಇದೆ. ಯುವಕರೆಲ್ಲಾ ತಮ್ಮ ತಮ್ಮ ಅದ್ಭುತಶಕ್ತಿ ಸಾಮರ್ಥ್ಯಗಳನ್ನು ಕುರಿತು… ಜೀವನದ ಮೌಲ್ಯಗಳ ಬಗ್ಗೆ ವಿಶ್ವಾಸವನ್ನು ಹೊಂದಿದ್ದು… ಕಲ್ಲುಗಳನ್ನು ಎಸೆಯಲಿಕ್ಕೆ ಅಲ್ಲದೇ… ಕಲ್ಲುಗಳನ್ನು ಎತ್ತಲು ಸಹ ಮುಂದೆ ಬರಬೇಕು. ಮತ್ತು ರಚನಾತ್ಮಕ ಧೋರಣೆಯಲ್ಲೇ ತಮ್ಮ ತಮ್ಮ ಕಾರ್ಯಕಲಾಪಗಳನ್ನು ಕೈಗೊಳ್ಳಬೇಕು.

“ಈ ಭೂಮಿಯ” ಮೇಲೆ ಜನ್ಮ ಪಡೆದಿರುವ ಪ್ರತಿಯೊಬ್ಬರಿಗೂ ಯಾವುದಾದರೊಂದು ಜೀವನದ ಗುರಿಯು ತಪ್ಪದೇ ಇದ್ದೇ ಇರುತ್ತದೆ. ನಿಮ್ಮ ಹಾಗೇ ಒಂದು ದಿನ ಈ ಯೂನಿವರ್ಸಿಟಿಯಲ್ಲಿ ಸಾಧಾರಣ ವಿದ್ಯಾರ್ಥಿಯಾಗಿ ಇದ್ದ ನಾನು … ನನ್ನ ಜೀವನದ ಗುರಿ ಏನೋ ತಿಳಿದುಕೊಂಡು… ಈ ದಿನ ಪ್ರಪಂಚವ್ಯಾಪ್ತಿಯಾಗಿ … ಕನಿಷ್ಠಪಕ್ಷ ಒಂದು ಕೋಟಿ ಜನಕ್ಕೆ ಧ್ಯಾನವನ್ನು ಹೇಳಿಕೊಟ್ಟು ನವ ಸಮಾಜ ನಿರ್ಮಾಣಕ್ಕೆ ಕಂಕಣತೊಟ್ಟು, ಅಸಾಧಾರಣ ವ್ಯಕ್ತಿಯಾಗಿ ನಿರೂಪಿಸಿಕೊಂಡಿದ್ದೇನೆ. ನನ್ನ ಹಾಗೆ ಶಕ್ತಿ ಹೊಂದಿರುವ ನೀವೆಲ್ಲರೂ ಸಹ ಒಬ್ಬೊಬ್ಬರೂ ಕೋಟಿ ಜನಕ್ಕೆ ಧ್ಯಾನವನ್ನು ಹಂಚಬಲ್ಲಿರಿ. ಮತ್ತು 2012 ಕ್ಕೆಲ್ಲಾ ಧ್ಯಾನ ಜಗತ್ ಪೂರ್ತಿಮಾಡಬೇಕು ಎನ್ನುವ ನಮ್ಮೆಲ್ಲರ ಮಹಾಸಂಕಲ್ಪ ಸಾಧನೆಗೆ ರಚನಾತ್ಮಕ ಸೈನ್ಯದ ಹಾಗೆ ಸಹಾಯ ಮಾಡಬಲ್ಲಿರಿ.

“ಮಾಂಸಾಹಾರ ತಿನ್ನುವುದರಿಂದ ಶರೀರಕ್ಕೆ ಶಕ್ತಿ ಬರುತ್ತದೆ ಎನ್ನುವ ಹೀನಕರವಾದ ಆಲೋಚನೆಯಿಂದ ಹೊರಬನ್ನಿ. ಮತ್ತು ಮಾಂಸಾಹಾರ ಪಾಪಾಹಾರ. ಆದ್ದರಿಂದ, ತಕ್ಷಣ ಸಸ್ಯಾಹಾರಿಗಳಾಗಿರಿ. ಮೂಢಾಚಾರಗಳು, ಮೂಢನಂಬಿಕೆಗಳು ಬಿಟ್ಟುಬಿಡಿ. ಎಲ್ಲೋ ಉತ್ತರ ಭಾರತದೇಶದಲ್ಲಿರುವ ಗಂಗೆಯಲ್ಲಿ ಮುಳುಗಿದರೆ, ಗುಡಿಗಳ ಸುತ್ತೂ ತಿರುಗಿ ಉರುಳು ಸೇವೆ ಮಾಡಿದರೆ ಪಾಪ ಕಳೆದುಹೋಗುವುದಿಲ್ಲ. ಧ್ಯಾನದಿಂದ ದಿನದಲ್ಲಿ ಸ್ವಲ್ಪ ಹೊತ್ತು… ನಮ್ಮ ಒಳಗೆ ಇರುವ ಧ್ಯಾನ ಗಂಗೆಯಲ್ಲಿ ಮುಳುಗಿದರೆ ಪಾಪ ನಿವಾರಣೆಯು ಅದ್ಭುತವಾಗಿ ಆಗುತ್ತದೆ. ಆದ್ದರಿಂದ, ಡಿಯರ್ ಫ್ರೆಂಡ್ಸ್. ಈ ಕ್ಷಣದಿಂದಲೇ ಪ್ರತಿಯೊಬ್ಬರೂ ಧ್ಯಾನ ಮಾಡಿ, ನಿಮ್ಮನ್ನು ನೀವು ತಿಳಿದುಕೊಳ್ಳಿ ಮತ್ತು ಧನ್ಯ ಜೀವಿಗಳಾಗಿ ನಿಮ್ಮ ಜೀವನಗಳನ್ನು ಫಲಪ್ರದವಾಗಿ ಮಾಡಿಕೊಳ್ಳಿ.”