ವಾಕ್‌ಕ್ಷೇತ್ರ

ಶ್ರೀಕೃಷ್ಣನ ಅದ್ಭುತವಾದ ಸತ್ಯವಾಕ್ಕು ಪಿರಮಿಡ್ ಮಾಸ್ಟರ‍್ಸ್‌ಗಳೆಲ್ಲರಿಗೂ ಆದರ್ಶ ಆದ್ದರಿಂದ, ಪಿರಮಿಡ್ ಮಾಸ್ಟರ‍್ಸ್‌ಗಳ ಬಾಯಿಯಿಂದ ಮಾತುಗಳು ಬಂದಾಗ: ಅಶುಭ ವಾಕ್ಕುಗಳು ಬರುತ್ತಿವೆಯಾ? ಎಂದು ಆಲೋಚಿಸಿ, ಬೇಡ ಬೇಡ ಎಂದು ಅವುಗಳನ್ನು ತ್ಯಜಿಸುತ್ತಿರುತ್ತಾರೆ. ಶುಭ ವಾಕ್ಕುಗಳು ಬರುತ್ತಿವೆಯಾ? ಅವು ಸಹ ಬೇಡ. ಬೇಡ.. ಎಂದು ತ್ಯಜಿಸುತ್ತಿರುತ್ತಾರೆ. ಕೇವಲ ಸತ್ಯವಾಕ್ಕುಗಳನ್ನು ಮಾತ್ರವೇ ಮಾತನಾಡುತ್ತಾರೆ. “ನಾನು ನಿನಗೆ ಗುರು, ನಿನಗೆ ಒಳ್ಳೆಯದನ್ನು ಮಾಡುತ್ತೇನೆ. ನಾನು ನಿನ್ನನ್ನು ಆಶೀರ್ವದಿಸುತ್ತೇನೆ” ಎನ್ನುವ ಮಾತು ಅವರಿಂದ ಬರುವುದಿಲ್ಲ. ಯಾರಾದರೂ ಆಶೀರ್ವಾದವನ್ನು ಕೋರುತ್ತಿದ್ದರೆ. “ಆಪ್ ಕಾ ಆಶೀರ್ವಾದ್ ಚಾಹಿಯೆ” ಎನ್ನುತ್ತಿರುತ್ತಾರೆ. ಆದರೆ, ಯಾರೂ ಸಹ ಆಶೀರ್ವಾದ ಕೊಡುವವರು ಇಲ್ಲಿಲ್ಲಾ, ಏಕೆಂದರೆ, ಇವರು ಸತ್ಯವಾಕ್ಯ ಪರಿಸಾಧಕರು. ನಾನು ನಿಮಗೆ ಆಶೀರ್ವಾದ ಹೇಗೆ ಕೊಡಲಿ? ನಿಮ್ಮ ಕರ್ಮಗಳೇ ನಿಮಗೆ ಆಶೀರ್ವಾದ. ನಿಮ್ಮ ಒಳ್ಳೆಯ, ಸು-ಆಲೋಚನೆಗಳೇ ನಿಮ್ಮ ಆಶೀರ್ವಾದ. ನಿಮ್ಮ ಒಂದು ಪರಿಶೋಧನೆ, ಪರಿಸಾಧನೆಯೇ ನಿಮಗೆ ಆಶೀರ್ವಾದ. ಇದೇ ಸತ್ಯ ವಾಕ್ಕುಪರಿಸಾಧನೆ. ಆದ್ದರಿಂದ, ಪ್ರಹ್ಲಾದ ಎಂಥ ಹಿಂಸೆ ಅನುಭವಿಸಿದರೂ, ಅವರು ತಂದೆ ಎಂದು ಅಥವಾ ನಾನು ಸಾಯಿಸಲ್ಪಡುವೆನೇನೊ ಎಂದು ಎಂದಿಗೂ ಭಯ ಪಡದೆ ಕಿರುನಗು ಬೀರುತ್ತಾ, ಆ ಸಾವನ್ನು ಸ್ವೀಕರಿಸುತ್ತಾ, ಅವರು ಎಂದಿಗೂ ಸತ್ಯವಾಕ್ ಪರಿಸಾಧನೆಯಲ್ಲೇ ಜೀವಿಸಿದರು. ಅಂತಹ ಚಿಕ್ಕ ಬಾಲಕನೇ ಸತ್ಯವಾಕ್‌ನಲ್ಲಿ ಜೀವಿಸಿದಾಗ ನಾವು ಇನ್ನೆಷ್ಟು, ಮತ್ತೆಷ್ಟು ಜೀವಿಸಬೇಕು? ಹಾಗೆ, ಪಿರಮಿಡ್ ಮಾಸ್ಟರ‍್ಸ್‌ಗಳೆಲ್ಲರೂ ಕೂಡ ಸತ್ಯವಾಕ್ ಪರಿಸಾಧಕರು. ಸತ್ಯವಾಕ್ಕುಗಳೇ ಕೃಷ್ಣ, ಜೀಸಸ್, ಶಿವ, ರಮಣಮಹರ್ಷಿ ಮೊದಲಾದ ಎಲ್ಲ ಮಹಾತ್ಮರಿಂದಲೂ ಪ್ರವಹಿಸುವುದು.

ಪ್ರಹ್ಲಾದನು ಸತ್ಯವಾಕ್ಕು ಪರಿಸಾಧಕ. ಎಷ್ಟು ಹಿಂಸೆಗಳನ್ನು ಅನುಭವಿಸಿದರೂ ಆತನ ಬಾಯಿಂದ ಒಂದೇ ಮಾತು ಬರುತ್ತಿತ್ತು. ಒಂದೇ ಹಾಡು ಬರುತ್ತಿತ್ತು, ಏನದು?

“ನಾರಾಯಣ, ಹರಿ ನಾರಾಯಣ

ಶ್ರೀಮನ್ ನಾರಾಯಣ, ಲಕ್ಷ್ಮೀನಾರಾಯಣ

ನಾರಾಯಣ, ಹರಿ ನಾರಾಯಣ…….”

ಎಂದಿಗೂ ಇದು ಒಂದೇ ಹಾಡು. “ನಾರಾಯಣ” ಎಂದರೆ “ಆತ್ಮ! “ನರ” ಅಂದರೆ “ಮಾನವ ಶರೀರ”! ಮಾನವ ಶರೀರದಲ್ಲಿ ಯಾನ ಮಾಡುವುದು ಆತ್ಮ, ಆದ್ದರಿಂದ, ಯಾವಾಗಲೂ ಆತ್ಮತತ್ವವನ್ನು ಕುರಿತು ಹೇಳಿದ್ದಾನೆ ಪ್ರಹ್ಲಾದನು. ಹಾಗೆಯೇ ಪಿರಮಿಡ್ ಮಾಸ್ಟರ‍್ಸ್‌ರೆಲ್ಲರೂ ಕೂಡ.

“ನನಗೆ ತಲೆನೋವು ಬಂದಿದೆ” ಅಂದರೆ “ಆನಾಪಾನಸತಿ” ಮಾಡಿ ಎನ್ನುತ್ತೇವೆ.

“ಬಿ.ಪಿ ಇದೆ” ಎಂದರೆ “ಆನಾಪಾನಸತಿ” ಮಾಡಿ

“ಮನೆಯಲ್ಲಿ ಸಮಸ್ಯೆಗಳು ಬಂದಿವೆ” ಎಂದರೆ “ಆನಾಪಾನಸತಿ” ಮಾಡಿ.

“ಆರ್ಥಿಕವಾಗಿ ತೊಂದರೆಪಡುತ್ತಿದ್ದೇವೆಂದರೆ “ಆನಾಪಾನಸತಿ” ಮಾಡಿ.

ಹಾಗೆಯೇ, ಯಾವುದೇ ರೀತಿಯ ತೊಂದರೆಗಳು ಬಂದರೂ “ಆನಾಪಾನಸತಿ” ಮಾಡುತ್ತೇವೆ. ಆದ್ದರಿಂದ, ನಾವು “ಆನಾಪಾನಸತಿ, ಆನಾಪಾನಸತಿ”… ಹಾಡನ್ನು ಹಾಡುತ್ತೇವೆ. ಹಾಗೆಯೇ, ಅವರ ವಾಸ್ತವವನ್ನು ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. “ಉದ್ಧರೇದಾತ್ಮನಾತ್ಮಾನಂ” ಎಂದು ಆದ್ದರಿಂದ, ನಾನು ನಿನಗೆ ಏನೂ ಮಾಡಲಾಗುವುದಿಲ್ಲ. ನಾನು ನಿನ್ನನ್ನು ಆಶೀರ್ವದಿಸಲಾರೆ! ಅಸಂಭವ! ನಿನ್ನನ್ನು ನೀನೆ ಆಶೀರ್ವದಿಸಿಕೊ, ಅಪ್ಪೋದೀಪೋಭವ! ಅನುದಿನ ನಾವು ಅದನ್ನೇ ಮಾತನಾಡುತ್ತಿರುತ್ತೇವೆ. ಆದ್ದರಿಂದ, ನಮ್ಮ ಹಾಡು ಏನೆಂದರೆ..

ಅಪ್ಪೋ ದೀಪೋ ಭವ! ಅಪ್ಪೋ ದೀಪೋ ಭವ!

ಅಪ್ಪೋ ದೀಪೋ ಭವ! ಅಪ್ಪೋ ದೀಪೋ ಭವ..!

ಯಾವಾಗಲು ಈ ಮಾತುಗಳನ್ನು ಹಾಡುವರು. ಅಂದರೆ, ಅವರ ವಾಸ್ತವವನ್ನು ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಯಾರ ಮೇಲೂ ಪಿತೂರಿಗಳನ್ನು ಮಾಡೆವು, ಆ ವಿಧವಾದ ಮಾತುಗಳನ್ನೆ ಮಾತಾಡುವುದು. ಎಲ್ಲರೊಡನೆ ಸವಿನಯನಾಗಿ ಸತ್ಯವನ್ನೆ ಮಾತನಾಡುವುದು; ಇದೇ ಸತ್ಯವಾಕ್ಕು ಪರಿಸಾಧನೆ. ಸ-ವಿನಯವಾಗಿ ಸತ್ಯವನ್ನು ಮಾತಾಡುವುದು; ಯಾವಾಗಲೋ ಅಗತ್ಯಬಿದ್ದರೆ ಅವಿನಯವಾಗಿಯೂ ಸತ್ಯವನ್ನು ಮಾತನಾಡುವುದು.

ರಮಣ ಮಹರ್ಷಿಯ ಬಳಿಗೆ ಯಾರು ಹೋದರೂ ನೀನು ಯಾರೆಂದು ಮೊದಲು ತಿಳಿದುಕೋ ಆಗಲೇ, ನಿನ್ನ ಸಮಸ್ಯೆಗಳು ಹೋಗುತ್ತವೆ. “ನೀನ್ಯಾರೋ ನಿನಗೇ ತಿಳಿಯದಿದ್ದಾಗ ನಿನ್ನ ಸಮಸ್ಯೆಗಳು ಹೇಗೆ ಹೋಗುತ್ತವೆ?” ಎನ್ನುತ್ತಿದ್ದರು. ಅವರ ಜೀವನಪರ್ಯಂತ ಈ ಮಾತುಗಳೇ ಬಾಯಿಯಿಂದ ಬರುತ್ತಿದ್ದವು. ಅದು ಸತ್ಯವಾಕ್ಕು ಪರಿಸಾಧನೆ. ಒಂದು ಜೀವನ ಕಾಲ ಅವರು ಮೌನವಾಗಿದ್ದರು. ಬಾಯಿಬಿಟ್ಟರೆ ಮಾತ್ರ “ನಿನ್ನನ್ನು ನೀ ತಿಳಿದುಕೋ” ಎನ್ನುತ್ತಿದ್ದರು, ಅಷ್ಟೆ ಅವರು ಮಾಡಿದ್ದು. ಅದೇ ಒಬ್ಬ ಮಹರ್ಷಿಯ ಲಕ್ಷಣ. ಅದೇ ಒಬ್ಬ ಬ್ರಹ್ಮರ್ಷಿಯ ಲಕ್ಷಣ. ರಮಣಮಹರ್ಷಿ ಆಜ್ಞಾಚಕ್ರಕ್ಕೆ ಪ್ರತೀಕ. ಶ್ರೀಕೃಷ್ಣ ಸಹಸ್ರಾರಕ್ಕೆ ಪ್ರತೀಕ. ಆದ್ದರಿಂದ, ಕೆಳಗಿನ ಮೂರು ಚಕ್ರಗಳಲ್ಲಿರುವವರು ಅಶುಭ ವಾಕ್ಕುಗಳಿಗೆ ಪ್ರತೀಕ. ಅನಾಹತ, ವಿಶುದ್ಧ ಚಕ್ರದಲ್ಲಿರುವವರು ಶುಭ ವಾಕ್ಕುಗಳಿಗೆ ಪ್ರತೀಕ. ಆಜ್ಞಾ ಸಹಸ್ರಾರದಲ್ಲಿರುವವರು ಯಾವಾಗಲು ಸತ್ಯವಾಕ್ಕುಗಳಿಗೆ ಪ್ರತೀಕ. ಪಿರಮಿಡ್ ಮಾಸ್ಟರ‍್ಸ್ ಸತ್ಯವಾಕ್ಕುಗಳಿಗೆ ಪ್ರತೀಕ.

ಹನ್ನೊಂದು ವರ್ಷದವನಾಗಿದ್ದಾಗಲೇ ಜೀಸಸ್‌ಕ್ರೈಸ್ಟ್ ಒಂದು ಸಾರಿ ಎಲ್ಲರಿಗೆ ಸತ್ಯವಾಕ್ಕುಗಳನ್ನು ಬೋಧನೆ ಮಾಡುತ್ತಿದ್ದ. ಮುದುಕರೆಲ್ಲರೂ ಅವರ ಸುತ್ತ ಕುಳಿತಿದ್ದಾರೆ. ಸತ್ಯವಾಕ್ಕುಗೋಷ್ಠಿ ನಡೆಯುತ್ತಿದೆ. ಇಷ್ಟರಲ್ಲಿ ಹಿಂದಿನಿಂದ ಒಬ್ಬಾತ “ಓ, ಜೀಸಸ್ ನಿನ್ನ ತಾಯಿ ಕರೆಯುತ್ತಿದ್ದಾರೆ; ನೀನು ತಕ್ಷಣವೇ ಹೋಗಬೇಕಂತೆ” ಎಂದಾಗ, ಜೀಸಸ್ ಹಿಂತಿರುಗಿ “ಯಾರು ನನ್ನ ತಾಯಿ? ಆ ದೇವರ ರಾಜ್ಯದಲ್ಲಿರುವ ನನ್ನ ತಂದೆಯ ವಾಕ್ಯವನ್ನು ಯಾರು ಪರಿಪಾಲಿಸುತ್ತಾರೋ ಅವರೇ ನನ್ನ ತಂದೆತಾಯಿಯರು! ಇನ್ಯಾರೂ ನನ್ನ ತಾಯಿ, ತಂದೆ ಆಗಲಾರರು” ಎಂದು ನುಡಿದರು! ನೋಡಿ ಎಷ್ಟು ಸರಿಯಾಗಿ ಅವರ ಬಾಯಿಂದ ಸತ್ಯವಾಕ್ಕುಗಳು ಹೊರಗೆ ಬಂದಿವೆ. ಭೌತಿಕವಾದ ‘ತಾಯಿ’ ತಾಯಿಯಲ್ಲ, ಭೌತಿಕವಾದ ‘ತಂದೆ’ ತಂದೆಯಲ್ಲ. ಆದ್ದರಿಂದಲೇ ಶಂಕರಾಚಾರ್ಯರು “ಕಸ್ತ್ವಂ ಕೋಹಂ ಕುತ ಆಯಾತಃ, ಕಾಮೇ ಜನನಿ ಕೋಮೇತಾತಃ ಇತಿಪರಿ ಭಾವಯಃ ಸರ್ವಂ ಅಸಾರಂ ವಿಶ್ವಂಕ್ತ್ಯತ್ವ ಸ್ವಪ್ನ ವಿಚಾರಂ” ಎನ್ನುವ ಶ್ಲೋಕವನ್ನು ಹೇಳಿದ್ದಾರೆ”.

“ಯಾರು ನಾನು? ಯಾರು ನೀನು? ಯಾರು ನನ್ನ ತಾಯಿ? ಯಾರು ನನ್ನ ತಂದೆ?” ಈ ವಿಧವಾಗಿ ಪ್ರಶ್ನಿಸಿದ್ದಾರೆ. ಯಾರು ಇವೆಲ್ಲಾ ಸ್ವಪ್ನವೆಂದು ತಿಳಿದುಕೊಳ್ಳುತ್ತಾರೋ ಅವರೇ ನನ್ನ ಸೋದರರು “ತದಿಃ ಪ್ರಾತಃ” ಈ ರೀತಿ ಯಾವಾಗಲೂ ಸತ್ಯವಾಕ್ಕು ಪರಿಸಾಧಕರಾಗಿದ್ದರು ಜೀಸಸ್‌ಕ್ರೈಸ್ಟ್. ಹಾಗೆಯೇ ಅವರು ಒಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದಾಗ, ಎಷ್ಟೋ ಜನ ರೋಗಿಗಳು, ಆತನ ವಸ್ತ್ರವನ್ನು ಮುಟ್ಟಿಕೊಂಡರೆ ಸಾಕು. ನಮ್ಮ ರೋಗಗಳೆಲ್ಲಾ ಮಟಾಮಾಯ ಆಗುತ್ತವೆ ಎಂದು ಆತುರದಿಂದ ಬಟ್ಟೆಯನ್ನು ಮಟ್ಟಿದರೆ ತಕ್ಷಣ ಅವರುಗಳ ರೋಗಗಳು ಹೋಗುತ್ತಿದ್ದವು. ಆಗ ಅವರು ಹಿಂದೆ ತಿರುಗಿ “who touched my robes” “ಯಾರು ನನ್ನ ವಸ್ತ್ರಗಳನ್ನು ಮುಟ್ಟಿದ್ದು” ಎಂದು ಪ್ರಶ್ನಿಸಿದಾಗ “ಸ್ವಾಮಿ! ನಾವು ನಿಮ್ಮ ಬಟ್ಟೆಯನ್ನು ಮುಟ್ಟಿದೆವು, ನಮ್ಮ ರೋಗವೆಲ್ಲ ಹೊರಟು ಹೋಯ್ತು” ಎಂದು ಹೇಳಿದಾಗ ಜೀಸಸ್ ಹೇಳುತ್ತಾರೆ, ” your faith has healed you ” ನಿಮ್ಮಲ್ಲಿನ ವಿಶ್ವಾಸವೇ ನಿಮಗೆ ಸ್ವಾಸ್ಥತೆಯನ್ನು ತಂದುಕೊಟ್ಟಿದೆ” ಎನ್ನುತ್ತಾರೆ. ಅವರೆಂದೂ “ನಾನು ನಿನಗೆ ವಾಸಿಮಾಡಿದ್ದೇನೆ?” ಎಂದು ಹೇಳಲಿಲ್ಲ. ಏಕೆಂದರೆ, ಆತನಿಗೆ ಗೊತ್ತಿದೆ ಯಾರಿಗಾದರೂ ಏನಾದರೂ ಮಾಡುವುದು ಅಸಂಭವವೆಂದು ತಿಳಿದುಕೊಂಡಿದ್ದಾರೆ.

ಆದ್ದರಿಂದ, “ಸಾಸಿವೆ ಕಾಳಿನಷ್ಟು ವಿಶ್ವಾಸವಿದ್ದರೂ ನಾವು ಪರ್ವತಗಳನ್ನು ಕದಲಿಸಬಲ್ಲೆವು” ಎಂದು ಎಷ್ಟು ಚೆನ್ನಾಗಿ ಜೀಸಸ್ ಸತ್ಯವಾಕ್ಕವನ್ನು ಹೇಳಿದ್ದಾರೆ. ಜ್ಞಾನ ಇಲ್ಲದಿದ್ದಾಗ ವಿಶ್ವಾಸ ಪ್ರಧಾನ. ಜ್ಞಾನವಿದ್ದಾಗ ವಿಶ್ವಾಸವಿರದು, ಜ್ಞಾನವಿರುತ್ತದೆ. ಕೇವಲ ವಿಶ್ವಾಸದಿಂದಲೇ ಹೋಗುವವರು ಆಜ್ಞಾಚಕ್ರದಲ್ಲಿರುವವರು, ಮತ್ತು ಜ್ಞಾನದೊಡನೆ ಹೋಗುವವರು ಸಹಸ್ರಾರ ಸ್ಥಿತಿಯಲ್ಲಿರುವವರು. ಆದ್ದರಿಂದ ವಿಶ್ವಾಸವಿದ್ದರೂ ಸಾಕು ಆ ಮಾತಿನ ಮೇಲೆ ನಿಲ್ಲು. ಏಕಾಗ್ರತೆಯಿಂದ, ವಿಶ್ವಾಸದಿಂದ ಏನು ಮಾತು ಮಾತನಾಡಿದರೂ ಅದು ಫಲಿಸುತ್ತದೆ! ಆದರೆ, “ಆಗುತ್ತದೋ, ಇಲ್ಲವೋ…” ಈ ವಿಧವಾದ ದ್ವಂದ್ವ ಭಾವನೆಯಲ್ಲಿ ಇದ್ದಾಗ ಏನೂ ಆಗುವುದಿಲ್ಲ. ಅಂದರೆ, ಅಲ್ಲಿ ವಿಶ್ವಾಸ ಇಲ್ಲದಂತೆ. ಸಾಸಿವೆ ಕಾಳಿನಷ್ಟು ವಿಶ್ವಾಸ ಇದ್ದರೂ ಪ್ರಪಂಚವನ್ನು ಕದಲಿಸಬಲ್ಲೆವು. ಇವರು ಎಂತಹ ಅದ್ಭುತವಾದ ಸತ್ಯವಾಕ್ಕನ್ನು ನಮಗೆ ಪ್ರಸಾದಿಸಿದರೊ.

ಹಾಗೆಯೇ, ಇನ್ನು ಸ್ವಲ್ಪ ಜನ ರೋಗಿಗಳು “ಆತನ ಬಟ್ಟೆಯನ್ನು ಮುಟ್ಟಿಕೊಂಡರೆ ರೋಗಗಳೆಲ್ಲ ಹೋಗುತ್ತಾ? ಹಾಗಾದರೆ ಇಷ್ಟುಮಂದಿ ಡಾಕ್ಟರ್‌ಗಳೇಕೆ? ಎಂ.ಡಿ. ಗಳೇಕೆ?” ಎಂದು ಹೇಳಿ ಅವರೂ ಕೂಡ ಹೋಗಿ ಮುಟ್ಟುತ್ತಾರೆ. ಆದರೆ, ಅವರಿಗೆ ಏನೂ ಆಗಲಿಲ್ಲ. ಆಗ ಜೀಸಸ್ ಏನು ಹೇಳಿದ್ದಾರೆಂದರೆ, “ನಿಮಗೆ ವಿಶ್ವಾಸ ಇಲ”, ನಿಮಗೆ ವಿಶ್ವಾಸ ಒಂದಿದ್ದರೆ ತಕ್ಷಣವೇ ಸ್ವಾಸ್ಥರಾಗುತ್ತಿದ್ದೀರಿ; ಅನುಮಾನ ಇಲ್ಲ. “ಖುದಾಕಿ ಧುನಿಯಾ ಮೇ ನ ದೇರ್ ಹೈ, ನ ಅಂಧೇರ್ ಹೈ”! ನಮ್ಮ ಆಲೋಚನೆಗಳಲ್ಲಿ ಆಲಸ್ಯವಿದೆಯೇ ಹೊರತು ಭಗವಂತನ ಸೃಷ್ಟಿಯಲ್ಲಿ ಎಲ್ಲಿಯೂ ಒಂದು ಕ್ಷಣವು ಸಹ ಆಲಸ್ಯವಿರದು. ನಮ್ಮ ವಿಶ್ವಾಸ ಅಚಲವಾಗಿ ಇದ್ದಾಗ ತಕ್ಷಣವೇ, ಬೇಡಿದ್ದು ದೊರಕುತ್ತದೆ. “ಖುದಾಕಿ ಧುನಿಯಾ ಮೇ ನ ದೇರ್ ಹೈ, ನ ಅಂಧೇರ್ ಹೈ”! ಆದ್ದರಿಂದ, ದೇವರ ಪ್ರಪಂಚದಲ್ಲಿ ಇರುವವರೇ ಸಹಸ್ರಾರದಲ್ಲಿ ಇರುವವರು. ಆರು ಚಕ್ರಗಳನ್ನು ದಾಟಿ ಏಳನೇ ಸ್ಥಿತಿ, ಚಕ್ರಾತೀತ ಸ್ಥಿತಿಯಲ್ಲಿರುವವರು. ಸಹಸ್ರದಳ ಕಮಲದಲ್ಲಿ ಸ್ಥಿತವಾಗಿರುವವರು. ಸಾವಿರ ಹೆಡೆಗಳ ಹಾವಾಗಿ ವಿಜೃಂಭಿಸುತ್ತಿರುವವರು.

ಇದೇ ವಿಧವಾಗಿ ಪಿರಮಿಡ್ ಮಾಸ್ಟರ‍್ಸ್‌ರೆಲ್ಲರೂ ಸತ್ಯವಾಕ್ಕು ಪರಿಸಾಧಕರು, ಒಮ್ಮೆ ಏನಾಗಿದೆಯೆಂದರೆ ನನ್ನ ಎರಡನೇ ಮಗಳು ಹುಟ್ಟುವ ಸಮಯ. ನಮ್ಮಣ್ಣ ಆಗತಾನೇ ಹಾಂಕಾಂಗ್‌ನಿಂದ ಬಂದಿದ್ದಾರೆ. ನನಗೆ ಅಭಿನಂದನೆ ಹೇಳುತ್ತಿದ್ದಾರೆ “ನಿನಗೆ ಮಗಳು ಹುಟ್ಟಿದ್ದಾಳೆ” ಎಂದು. ನಾನು ಆಗತಾನೇ ಆಸ್ಪತ್ರೆಯಲ್ಲಿ ಲೋಬ್‌ಸಾಂಗ್ ರಾಂಪಾರವರ ” YOU FOREVER ” ಪುಸ್ತಕ ಓದುತ್ತಿದ್ದೆ. ಬೆಂಚಿನ ಮೇಲೆ ಕುಳಿತಿದ್ದೆ, ಆಗ ನನ್ನ ಅಣ್ಣನೊಂದಿಗೆ ನಾನಂದೆ: “ನಾನು ಯಾವ ವಿಧವಾದ ದೊಡ್ಡ ಕಾರ್ಯ ಮಾಡಿದ್ದೇನೆ. ಮಕ್ಕಳು ಹುಟ್ಟುವುದರಲ್ಲಿ ನನ್ನ ದೊಡ್ಡತನ ಏನಿದೆ? ಅದು ಪ್ರಕೃತಿ ಸಹಜ ಧರ್ಮ. ಪ್ರತಿ ಪ್ರಾಣಿ, ಪ್ರತಿ ಇರುವೆ, ಪ್ರತಿ ನೊಣ ಮಕ್ಕಳನ್ನು ಹುಟ್ಟಿಸುತ್ತವೆ. ಪಕ್ಷಿಗಳು ಹುಟ್ಟಿಸುತ್ತವೆ. ನಾನೇನಾದರೂ ಸ್ವಂತವಾಗಿ ಒಳ್ಳೆಯ ಕೆಲಸ ಮಾಡಿದ್ದರೆ, ಅಂದರೆ, ಒಂದು ಸಂಗೀತ ಕಛೇರಿ ನಡೆಸಿದರೆ, ಒಂದು ಒಳ್ಳೆಯ ಪುಸ್ತಕ ಬರೆದಿದ್ದರೆ ಆಗ ನನಗೆ ಅಭಿನಂದನೆ ಹೇಳಬೇಕೆ ಹೊರತು ಮಕ್ಕಳು ಹುಟ್ಟಿಸುವುದಕ್ಕೆ ಅಭಿನಂದನೆಗಳಾ?!” ಎಂದು ನನ್ನ ಬಾಯಿಯಿಂದ ಮಾತುಗಳು ಬಂತು. ಅವರಿಗೆ ಮುಖ ಕೆಂಪಾಗಿ, ತೀವ್ರ ಕೋಪ ಬಂದು, ನನ್ನ ಕೈಯಲ್ಲಿರುವ ಪುಸ್ತಕವನ್ನು ಎಳೆದುಕೊಂಡು ಹರಿದು ಆಸ್ಪತ್ರೆಯಲ್ಲೆಲ್ಲಾ ಬಿಸಾಡಿದರು. ನಾನು ಮತ್ತೆ ಆ ಕಾಗದಗಳನ್ನು ಜೋಡಿಸಿಕೊಂಡು ನನ್ನ ಕೆಲಸದಲ್ಲಿ, ನನ್ನ ಓದಿನಲ್ಲಿ ನಿಮಗ್ನನಾದೆ. ಅಂದರೆ, ಇದು ಸತ್ಯವಾಕ್ಕಿಗೆ ಪ್ರತೀಕ.