“ಪಿರಮಿಡ್ ಧ್ಯಾನದಿಂದ .. ಉನ್ನತ ಲೋಕಗಳ ಮಾಸ್ಟರ್ಸ್ ರೊಂದಿಗೆ ಅನುಸಂಧಾನ”
ಧ್ಯಾನಶಕ್ತಿಯನ್ನು, ಪಿರಮಿಡ್ ಶಕ್ತಿಯನ್ನು ಪ್ರಪಂಚಕ್ಕೆ ಹಂಚುತ್ತಿರುವ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್ಮೆಂಟ್ ಪ್ರಸ್ತುತ ಪ್ರಧಾನ ಕರ್ತವ್ಯ ಭೂಗ್ರಹವನ್ನೆಲ್ಲಾ ಪಿರಮಿಡ್ ಶಕ್ತಿಯೊಂದಿಗೆ ತುಂಬಿಸುವುದೇ ಆಗಿದೆ! ಅನೇಕ ವಿಧ ಕಟ್ಟಡಗಳೂ, ಸುಂದರ ಭವನಗಳೂ, ಅದ್ಭುತ ನಿರ್ಮಾಣಗಳೂ ಪ್ರಪಂಚದಾದ್ಯಂತ ಬಹಳಷ್ಟು ಇದೆಯೇ ಹೊರತು .. ಅದೆಲ್ಲಕ್ಕಿಂತ ಸಹ ಪಿರಮಿಡ್ ನಿರ್ಮಾಣಕ್ಕೆ ಅತ್ಯಂತ ಶಾಸ್ತ್ರೀಯವಾದ ವಿಶಿಷ್ಟತೆಯಿದೆ.
ತುಂಬಾ ಜನ “ಪಿರಮಿಡ್ ನಿರ್ಮಾಣಗಳು ಕೇವಲ ಪ್ರಾಚೀನ ಈಜಿಪ್ಟ್ ನಾಗರಿಕತೆಗೆ ಸಂಬಂಧಿಸಿದ ಕುರುಹುಗಳು ಮಾತ್ರವೇ” ಎಂದುಕೊಳ್ಳುತ್ತಾರೆ; ಆದರೆ “ಅವು ಭೂಗ್ರಹಕ್ಕೇ ಅಲ್ಲದೇ ಸಮಸ್ತ ನಕ್ಷತ್ರ ಮಂಡಲಕ್ಕೂ ಸೇರಿದ ಅತ್ಯದ್ಭುತವಾದ ಶಕ್ತಿಕ್ಷೇತ್ರಗಳು” ಎಂದು ಅವರಿಗೆ ತಿಳಿದಿಲ್ಲ.
ಕೆಲವರು ಅಲ್ಪಜ್ಞಾನಿಗಳು “ಅವು ಕೇವಲ ಶವಗಳನ್ನು ಸುರಕ್ಷಿತವಾಗಿಡುವ ಪ್ರದೇಶಗಳು” ಎಂದು ತಪ್ಪುಕಲ್ಪನೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲಿ ಎಲ್ಲರು ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ .. “ಪಿರಮಿಡ್” ಎನ್ನುವುದು ಸಾವಿರ ಸಂವತ್ಸರಗಳ ಹಿಂದೆ ಮಾನವಾತೀತ ಶಕ್ತಿಗಳೊಂದಿಗೆ ಕೂಡಿದ “ಸಿರಿಯನ್ ನಕ್ಷತ್ರಲೋಕವಾಸಿ”ಗಳಿಂದ ಕಟ್ಟಲ್ಪಟ್ಟಿರುವ ಶಾಸ್ತ್ರೀಯವಾದ ಕಟ್ಟಡ. ಆ ಕಾಲದ ಅಗತ್ಯಕ್ಕೆ ಅನುಗುಣವಾಗಿ ಭೂಮಿಯನ್ನು ಶಕ್ತಿಕ್ಷೇತ್ರವಾಗಿ ಮಾಡಲು ಈ ಪಿರಮಿಡ್ಗಳು ನಿರ್ಮಿಸಲ್ಪಟ್ಟಿವೆ.
ಸಿರಿಯನ್ ನಕ್ಷತ್ರಲೋಕವಾಸಿಗಳು ಆ ಕಾಲದ ಈಜಿಪ್ಟ್ ನಾಗರಿಕತೆಗೆ ಸೇರಿದ ಅಟ್ಲಾಂಟಿಯನ್ನರಿಗೆ ತಮ್ಮ ಬುದ್ಧಿ ಪರವಾದ ಸಹಕಾರವನ್ನು ಕೊಟ್ಟು ಈಜಿಪ್ಟ್ ದೇಶದಲ್ಲಿನ ಕೈರೋ ನಗರದಲ್ಲಿ 450’ x 450’ ಅಡಿಗಳ ನಿರ್ಮಾಣದ ಅಳತೆಯೊಂದಿಗೆ ಪ್ರಪಂಚಕ್ಕೆಲ್ಲಾ ಎತ್ತರವಾದ ಗ್ರೇಟ್ ಗೀಜಾ ಪಿರಮಿಡ್ನ್ನು ನಿರ್ಮಿಸಿದರು.
ಅತೀಂದ್ರಿಯ ಶಕ್ತಿಗಳಾದ ಲೇವಿಟೇಷನ್, ಟೆಲಿಪತಿ, ಟೆಲಿಕಿನೇಸಿಸ್ನಂತಹ ಎಷ್ಟೋ ವಿದ್ಯೆಗಳ ಸಂಯುಕ್ತ ವಿನಿಯೋಗದೊಂದಿಗೆ ಅವರು ಆ ಬೃಹತ್ ನಿರ್ಮಾಣಗಳನ್ನು ಪೂರೈಸಿದರು. ಮುಖ್ಯವಾಗಿ ಪಿರಮಿಡ್ ಕೋನವು .. ನಿರ್ದಿಷ್ಟವಾದ ಜಾಮಿಟ್ರಿಕಲ್ ಅಳತೆಯೊಂದಿಗೆ ಕೂಡಿ .. ಪಿರಮಿಡ್ ಮಧ್ಯೆ ಭಾಗದಲ್ಲಿರುವ “ಅಗ್ನಿ”ಯೊಂದಿಗೆ ಅನುಸಂಧಾನವಾಗಿರುತ್ತದೆ.
ಪಿರಮಿಡ್ ಶಕ್ತಿಗೆ ಸಂಬಂಧಿಸಿದ ಪ್ರಯೋಗಪೂರ್ವಕ ಪ್ರಾಮಾಣಿಕವಾದ ಎಷ್ಟೋ ಗ್ರಂಥಗಳನ್ನು ಪರಿಶೀಲಿಸಿ .. “ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್ಮೆಂಟ್” ಅನೇಕಾನೇಕ ಪ್ರಯೋಗಗಳನ್ನು ಅನುಭವಪೂರ್ವಕವಾಗಿ ನಿರ್ವಹಿಸಿ .. ಧ್ಯಾನದೊಂದಿಗೆ, ಪಿರಮಿಡ್ ನಿರ್ಮಾಣಗಳನ್ನು ಕೂಡಾ ಅಧಿಕವಾಗಿ ಪ್ರೋತ್ಸಾಹಿಸುತ್ತಿದೆ.
ಆ ಕೃಷಿಯ ಫಲಿತವಾಗಿಯೇ ಕಳೆದ ಮುವ್ವತ್ತು ವರ್ಷಗಳಲ್ಲಿ ಕೇವಲ ತೆಲಂಗಾಣ, ಆಂಧ್ರಪ್ರದೇಶ್ ರಾಜ್ಯಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಚಿಕ್ಕ-ದೊಡ್ಡ ಪಿರಮಿಡ್ಗಳನ್ನು ದೇಶದಾದ್ಯಂತ ನೂರಾರು ಪಿರಮಿಡ್ಗಳನ್ನು ನಿರ್ಮಿಸಲಾಗಿದೆ!
ಸಾವಿರಾರು ವರ್ಷಗಳ ಹಿಂದೆ ಗ್ರೇಟ್ ಗೀಜಾ ಪಿರಮಿಡ್ ನಿರ್ಮಾಣದಲ್ಲಿ ಪಾಲ್ಗೊಂಡ ಅಟ್ಲಾಂಟಿಕ್ ನಾಗರಿಕತೆಗೆ ಸೇರಿದವರೇ ಇಂದಿನ “ಪಿರಮಿಡ್ ಮಾಸ್ಟರ್ಸ್”ಗಳು ಆದ್ದರಿಂದ ಈ ಚಳವಳಿಗೆ “ಪಿರಮಿಡ್” ಎನ್ನುವುದು ಸಂಕೇತವಾಗಿ ಕೊಡಲ್ಪಟ್ಟಿದೆ.
ಅದಕ್ಕಾಗಿಯೇ ಈ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್ ಇವತ್ತಿನವರೆಗೂ ಅನೇಕಸಾರಿ ಈಜಿಪ್ಟ್ ದೇಶಕ್ಕೆ ನೂರಾರು ಮಂದಿ ಪಿರಮಿಡ್ ಮಾಸ್ಟರ್ಸ್ರೊಂದಿಗೆ ಧ್ಯಾನಯಾತ್ರೆಗಳನ್ನು ನಡೆಸಿದೆ. ಈಜಿಪ್ಟ್ ಪ್ರಭುತ್ವದ ಅನುಮತಿಯೊಂದಿಗೆ ಗ್ರೇಟ್ ಗೀಜಾ ಪಿರಮಿಡ್ನಲ್ಲಿನ ಕಿಂಗ್ಸ್ ಛೆಂಬರ್ ಮತ್ತು ಕ್ವೀನ್ ಚೇಂಬರ್ನಲ್ಲಿ ಹುಣ್ಣಿಮೆಯ ಸಾಮೂಹಿಕ ಧ್ಯಾನ ನಡೆದಿದೆ.
ವಿಶ್ವಪ್ರಾಣಶಕ್ತಿಯ ಧಾರೆಗೆ “ಅಕ್ಷಯಪಾತ್ರೆ”ಯಂತಹ ಗೀಜಾ ಪಿರಮಿಡ್ .. ನಾವು ಕಟ್ಟಿದ ಪ್ರತಿಯೊಂದು ಪಿರಮಿಡ್ಗೂ ತನ್ನ ಅನಂತ ಶಕ್ತಿಯನ್ನು ನೀಡುತ್ತಲೇ ಇದೆ. ಶಾಸ್ತ್ರೀಯವಾದ ಪಿರಮಿಡ್ ಕಟ್ಟಡಗಳೆಲ್ಲವೂ ಸಹ ಆ ಶಕ್ತಿಯನ್ನು ಗ್ರಹಿಸಿ ಭೂಮಿಯನ್ನು ಮತ್ತಷ್ಟು ಶಕ್ತಿಯುತವಾಗಿಸುತ್ತಿ.ಪಿರಮಿಡ್ನಲ್ಲಿ ಧ್ಯಾನ ಬಹಳಷ್ಟುವೆ ಶಕ್ತಿಯುತವಾಗಿರುತ್ತದೆ. ಆದ್ದರಿಂದಲೇ, ಬಹಳಷ್ಟು ಜನ ಪಿರಮಿಡ್ನಲ್ಲಿ ಧ್ಯಾನ ಮಾಡಿಕೊಂಡು ಶಾರೀರಿಕ ಸ್ವಸ್ಥತೆಯನ್ನು, ಮಾನಸಿಕ ಪ್ರಶಾಂತತೆಯನ್ನು ಮತ್ತು ಆತ್ಮಪರವಾದ ಉನ್ನತಿಯನ್ನು ಹೊಂದುತ್ತಿದ್ದಾರೆ. ಹಿಂದೆ ಮುನಿಗಳು, ಋಷಿಗಳು ಧ್ಯಾನಶಕ್ತಿಗೋಸ್ಕರ ಅರಣ್ಯಕ್ಕೋ, ಬೆಟ್ಟ-ಗುಡ್ಡಗಳಿಗೋ ಹೋಗಿ ಧ್ಯಾನ ಮಾಡಿಕೊಳ್ಳುತ್ತಿದ್ದರು. ನಕಾರಾತ್ಮಕ ಮಾಲಿನ್ಯದಿಂದ ತುಂಬಿದ್ದ ಈ ಜನಾರಣ್ಯದಲ್ಲಿ ಅವರಿಗೆ ಧ್ಯಾನಶಕ್ತಿ ಲಭಿಸುತ್ತಿರಲಿಲ್ಲ.
ಆದರೆ, ಪ್ರಸ್ತುತ ನಮಗೆ ಈ ಶಕ್ತಿಕಟ್ಟಡಗಳು ಲಭ್ಯವಿರುವುದರಿಂದ ಯಾರೂ ತಮ್ಮ ತಮ್ಮ ಮನೆಗಳನ್ನು ಬಿಟ್ಟು ಕಾಡಿಗೆ ಹೋಗಬೇಕಾದ ಅಗತ್ಯವಿಲ್ಲದೇ ಸುಖವಾಗಿ ಸಂಸಾರಗಳು ಮಾಡಿಕೊಳ್ಳುತ್ತಾ, ಕೆಲಸಗಳು ಮಾಡಿಕೊಳ್ಳುತ್ತಲೇ ಭೌತಿಕ ಜೀವನವನ್ನು ಸಂತೋಷವಾಗಿ ಅನುಭವಿಸುತ್ತಾ .. ದಿನದಲ್ಲಿ ಸ್ವಲ್ಪಕಾಲ ಪಿರಮಿಡ್ನಲ್ಲಿ ಧ್ಯಾನ ಮಾಡಿಕೊಂಡು ಶಕ್ತಿಯುತರಾಗುತ್ತಿದ್ದಾರೆ.
ಪಿರಮಿಡ್ನಲ್ಲಿ ಧ್ಯಾನದಿಂದ ಉನ್ನತ ಲೋಕಗಳ ಮಾಸ್ಟರ್ಸ್ರೊಂದಿಗೆ ತುಂಬಾ ಕಡಿಮೆ ಸಮಯದಲ್ಲೇ ನಾವು ಅನುಸಂಧಾನವಾಗುತ್ತಿದ್ದೇವೆ.
Recent Comments