“ಬುದ್ಧಿ + ಜ್ಞಾನ = ಪುಷ್ಪ + ಪರಿಮಳ”
ಧನ ಇದ್ದರೆ .. “ಶ್ರೀಮಂತೆ/ಶ್ರೀಮಂತ” ಎನ್ನುತ್ತಾರೆ
ಬಲ ಇದ್ದರೆ .. “ಬಲಶಾಲಿ” ಎನ್ನುತ್ತಾರೆ
ಅಂದ ಇದ್ದರೆ .. “ಸುಂದರಿ/ಸುಂದರ” ಎನ್ನುತ್ತಾರೆ
“ಬುದ್ಧಿ” ಇದರೆ .. “ಬುದ್ಧಿವಂತೆ/ಬುದ್ಧಿವಂತ” ಎನ್ನುತ್ತಾರೆ
ಹಣಕ್ಕಿಂತ .. ಬಲಕ್ಕಿಂತ .. ಅಂದಕ್ಕಿಂತ ಮಹತ್ತರವಾದದ್ದು “ಬುದ್ಧಿ”
ಉನ್ನತ ಮಟ್ಟದವರನ್ನು, ಸಾಮಾನ್ಯರನ್ನು, ಸಮವಾಗಿ ನೋಡುವುದೇ ಬುದ್ಧಿಯ ಒಂದು ನೈಜಸ್ಥಿತಿ
ಬುದ್ಧಿಗೆ ಮತ್ತೊಂದು ಹೆಸರು .. “ವಿವೇಕ”
ವಿವೇಕಕ್ಕೆ ಮತ್ತೊಂದು ಅರ್ಥ .. “ಸಮಯ ಸ್ಫೂರ್ತಿ”
ವಿವೇಕಕ್ಕೆ ಮತ್ತೊಂದು ಅರ್ಥ .. “ಸಂದರ್ಭ ಸ್ಫೂರ್ತಿ”
ವಿವೇಕಕ್ಕೆ ಮತ್ತೊಂದು ಅರ್ಥ .. “ಮೂಲಭೂತ ಜ್ಞಾನ”
ಸಮಯಕ್ಕೆ, ಸಂದರ್ಭಕ್ಕೆ ಅನುಗುಣವಾಗಿ, ಸೌಮ್ಯವಾಗಿ ಉಭಯಕುಶಲೋಪರಿಯಿಂದ
ವ್ಯವಹರಿಸುವುದೇ .. “ಮೂಲಭೂತ ಜ್ಞಾನ – ಹೊಂದಿರುವುದು” ಎಂದರ್ಥ
ಬುದ್ಧಿಗೆ ಮತ್ತೊಂದು ಹೆಸರು “ಸಮತ್ವ”
ಎಲ್ಲಾ ಇರುವವರನ್ನು, ಏನೂ ಇಲ್ಲದವರನ್ನು
ಯಾವಾಗಲೂ, ಸಮವಾಗಿ ನೋಡುವುದೇ “ಸಮತ್ವ ಹೊಂದಿರುವಿಕೆ” ಎಂದರ್ಥ
ಬುದ್ಧಿಗೆ ಮತ್ತೊಂದು ಹೆಸರು .. “ಮೃದುಮಧುರ ಹಾಸ್ಯ”
ಅಹಂಕರಿಸುವುದು, ಪರಿಹಾಸ್ಯ ಎನ್ನುವುದು ಬುದ್ಧಿ ಇಲ್ಲದಿರುವಿಕೆಗೆ ಸೂಚನೆ
ವ್ಯಂಗ್ಯ ಭಾಷಣ .. ವ್ಯಂಗ್ಯ ವ್ಯವಹಾರ .. ಎನ್ನುವುದು ಬುದ್ಧಿಯಿಲ್ಲದಿರುವಿಕೆಗೆ ನಿದರ್ಶನ
***
ಒಂದು ವೃಕ್ಷವನ್ನು ನೋಡಿದಾಗ ನಮ್ಮ ದೃಷ್ಟಿ ಪುಷ್ಪದ ಕಡೆ ಹೋಗುತ್ತದೆ ..
ಒಂದು ವೃಕ್ಷಕ್ಕೆ ಶೋಭೆ ನೀಡುವುದು ಪುಷ್ಪ ಸಂಪತ್ತೇ
ಒಬ್ಬ ಮನುಷ್ಯನಿಗೆ ಶೋಭೆಯನ್ನು ಕೊಡುವುದು ಬುದ್ಧಿ ಸಂಪತ್ತೇ
***
“ಬುದ್ಧಿ” ಎನ್ನುವುದು ಒಂದು .. “ಪುಷ್ಪ”
ಆದರೆ, ಆ ಪುಷ್ಪಕ್ಕೆ ’ಪರಿಮಳ’ ಇಲ್ಲದಿದ್ದರೆ ಅದು ’ಪುಷ್ಪ’ವಲ್ಲ
ಅದೇ ರೀತಿ, ಬುದ್ಧಿಗೆ “ಜ್ಞಾನ” ಎನ್ನುವುದು ಇಲ್ಲದಿದ್ದರೆ ಅದು ’ಬುದ್ಧಿ’ಯೇ ಅಲ್ಲ
ಏನೋ! ನಿನಗೆ ಬುದ್ಧಿ, “ಜ್ಞಾನ” ಇಲ್ಲವೆ? ಎನ್ನುತ್ತಾರಲ್ಲ ..
“ಜ್ಞಾನ” ಎನ್ನುವುದು ಶಾಶ್ವತ, ಆತ್ಮಕ್ಕೆ ಸಂಬಂಧಿಸಿದ್ದು
“ಜ್ಞಾನ” ಎನ್ನುವುದು ಪರಲೋಕ ಚಿಂತನೆಗೆ ಸಂಬಂಧಿಸಿದ್ದು
“ಜ್ಞಾನ”ವೆಂದರೆ “ಮರಣಾ ನಂತರ ಏನಿದೆ?” ಎನ್ನುವುದನ್ನು ಕಂಡುಕೊಳ್ಳುವುದು
“ಜ್ಞಾನ”ವೆಂದರೆ “ಹುಟ್ಟಿಗೆ ಮೊದಲು ಏನಿದೆ?” ಎನ್ನುವುದನ್ನು ತಿಳಿದುಕೊಳ್ಳುವುದು
“ಬುದ್ಧಿ” ಎನ್ನುವುದು ಇಹಲೋಕದ ಒಳಿತು-ಕೆಡಕಿಗೆ ಸಂಬಂಧಿಸಿದ್ದು
“ಬುದ್ಧಿ” ಎನ್ನುವುದು ಇಹಲೋಕದ ನಡವಳಿಕೆಗೆ ಸಂಬಂಧಿಸಿದ್ದು
ಹೂವು ಹುಟ್ಟಿದಾಗಲೆ ಪರಿಮಳ ಸೂಸದಿರಬಹುದು .. ಆದರೆ ನಂತರ ಪರಿಮಳ ಸೂಸಲೇಬೇಕು
ಬಹೂನಾಂ ಜನ್ಮನಾಮಂತೇ .. ಜ್ಞಾನವಾನ್ ’ಮಾಂ’ ಪ್ರಪದ್ಯತೇ |
ವಾಸುದೇವ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ||
ಎಷ್ಟೋ “ಬುದ್ಧಿಪೂರ್ವಕ ಜನ್ಮಗಳ” ನಂತರವೇ, ಪರಂಪರಾನುಗತವಾಗಿ, ನಮ್ಮಲ್ಲಿ “ಜ್ಞಾನ”
ಎನ್ನುವುದು ಅಂಕುರವಾಗುತ್ತದೆ
ಪುಷ್ಪವಾಗಿ ತಯಾರಾದ ನಂತರವೂ ಮಾನವ ಜನ್ಮ ಪರಿಮಳ ಸೂಸಬೇಕೆಂದರೆ
ಪ್ರಾಪಂಚಿಕ “ಬುದ್ಧಿಯುತ ಜೀವನ”ದೊಂದಿಗೆ
“ಆತ್ಮಜ್ಞಾನ + ಅಹಿಂಸಾಯುತ ಜೀವನ ವಿಧಾನ” ಎನ್ನುವುದು ಕ್ರಮವಾಗಿ ಇರಬೇಕು
“ಅಹಿಂಸಾಯುತ ಜೀವನ ವಿಧಾನ” ಎಂದರೆ .. “ಸಸ್ಯಾಹಾರಿಗಳಾಗುವುದೇ” ಅಲ್ಲವೇ!
ಸಹವರ್ತಿಗಳಾದ ಪ್ರಾಣಿ, ಪಕ್ಷಿ, ಮತ್ಸ್ಯ, ಪ್ರಾಣಿಕೋಟಿಯೊಂದಿಗೆ ಕರುಣೆ, ದಯ
ಎನ್ನುವುದು ಹೊಂದಿರಬೇಕು.
ಪ್ರಾಪಂಚಿಕವಾಗಿ
ಎಷ್ಟು ದೊಡ್ಡ ಮೇಧಾವಿಗಳಾದರೂ, ದೊಡ್ಡ ಶಾಸ್ತ್ರಜ್ಞರಾದರೂ, ಪ್ರಜಾನಾಯಕರಾದರೂ
“ಆತ್ಮಜ್ಞಾನ” ಮತ್ತು “ಅಹಿಂಸಾಯುತ ಜೀವನ ವಿಧಾನ” ಎನ್ನುವುದು ಮೂಲಭೂತವಾಗಿ ಇಲ್ಲದಿದ್ದರೆ
ಅವರ ಜೀವನವು .. “ಪರಿಮಳವಿಲ್ಲದ ಹೂವುಗಳು” ಆಗಿಯೇ ಉಳಿದು ಹೋಗುತ್ತದೆ
ಇನ್ನುಮುಂದೆ
ಪ್ರಾಪಂಚಿಕತೆಯಿಂದ ತುಂಬಿದ “ಪರಿಮಳ”ವಿಲ್ಲದ ಪುಷ್ಪಗಳೆಲ್ಲಾ
ಆತ್ಮಜ್ಞಾನದಿಂದ ಕೂಡಿ .. ಅಹಿಂಸಾ ಜೀವನ ವಿಧಾನದೊಂದಿಗೆ ಕೂಡಿ .. ’ಪರಿಮಳ’ ಇರುವ ಪುಷ್ಪಗಳಾಗಲಿ
ಬುದ್ಧಿ + ಜ್ಞಾನ = ಪುಷ್ಪ + ಪರಿಮಳ
Recent Comments