“ಸಾಹಸ”

 

ಸ್ನೇಹಿತರೇ, ಈ ದಿನ ಮತ್ತೊಂದು ಒಳ್ಳೆಯ ವಿಷಯವನ್ನು ಕುರಿತು ತಿಳಿದುಕೊಳ್ಳೋಣ . ಜೀವನವನ್ನು ಎಷ್ಟು ದಕ್ಷತೆಯಿಂದ ಜೀವಿಸಲಾಗುತ್ತದೆಯೋ ಅಷ್ಟು ದಕ್ಷತೆಯಿಂದ ಜೀವಿಸಬೇಕು . ಜೀವನವನ್ನು ಎಷ್ಟು ಅದ್ಭುತವಾಗಿ ಜೀವಿಸಬೇಕೊ ಅಷ್ಟು ಅದ್ಭುತವಾಗಿ ನಾವು ಜೀವಿಸಬೇಕು. ಜೀವನಕ್ಕೆ ಬೇಕಾಗಿರುವುದು ಕೇವಲ ತಿಂಡಿ, ಬಟ್ಟೆ, ನಿದ್ದೆ …ಇವು ಅಲ್ಲವೇ ಅಲ್ಲ. ಅದೆಲ್ಲಾ ಸಾಮಾನ್ಯ ಜೀವನ. ಕೇವಲ ರೊಟ್ಟಿಯಿಂದ ಮಾತ್ರವೇ ಮಾನವನು ಜೀವಿಸುವುದಿಲ್ಲ ಎಂದು ಬೈಬಲ್‌ನಲ್ಲಿ ಹೇಳಲಾಗಿದೆ ಅಲ್ಲವೇ.

 

ಸಾಹಸಮಾಡೋ”

ಸ್ನೇಹಿತರೇ, ಈ ದಿನ ’ ಸಾಹಸ ’ ಎನ್ನುವುದನ್ನು ಕುರಿತು ತಿಳಿದುಕೊಳ್ಳೋಣ. ತೆಲುಗುನಲ್ಲಿ ’ ಪಾತಾಳಭೈರವಿ ’ ಸಿನಿಮಾ ನಾವು ನೋಡಿದ್ದೇವೆ. ಅದರಲ್ಲಿ ಒಂದು ಅದ್ಭುತವಾದ ಹೇಳಿಕೆ .. ಮಾಯಾವಿಯಿಂದ ಕೊಡಲಾಗಿದೆ .. ಸಾಹಸ ಮಾಡೋ ಮಾನವಾ, ಬಯಸಿದ್ದು ಸಿಗುತ್ತದೆ.

* * *

ಯಾವ ಸಿನಿಮಾದಲ್ಲಿ ನೋಡಿದರೂ ನಮಗೆ ’ ಸಾಹಸ ’ ಎನ್ನುವುದು ಕಾಣುತ್ತದೆ .. ಅಂತಹ ಸಾಹಸ ಇಲ್ಲದಿದ್ದರೆ ಆ ಸಿನಿಮಾ ನಾವು ನೋಡುವುದಿಲ್ಲ. ನಿಜಕ್ಕೂ ಅವರು ಆ ಸಿನಿಮಾ ಸಹ ತೆಗೆಯುವುದಿಲ್ಲ. ಯಾವುದೋ ಒಂದು ಸಾಹಸ ಕಥಾವಸ್ತುವನ್ನು ಒಳ್ಳೆಯ ಸಿನಿಮಾ ಆಗಿ ರೂಪಿಸಿದಾಗ ಆ ಸಾಹಸವನ್ನು ನೋಡಿ ನಾವು ಆ ಸಿನಿಮಾವನ್ನು ಆನಂದಿಸುತ್ತೇವೆ, ಆಸ್ವಾದಿಸುತ್ತೇವೆ. ಆನಂದವಾಗಿ ಮರಳಿ ಬರುತ್ತೇವೆ.

* * *

ಒಂದು ಸಿನಿಮಾದಲ್ಲಿ ಒಬ್ಬ ಕಥಾನಾಯಕನು – ಒಬ್ಬ ಕಥಾನಾಯಕಿ .. ಎಷ್ಟೋ ಸಾಹಸವನ್ನು ಪ್ರದರ್ಶಿಸುವುದನ್ನು ನಾವು ನೋಡುತ್ತೇವೆ .. ಅದು ನೋಡಲೆಂದೇ ನಾವು ಅಲ್ಲಿಗೆ ಹೋಗುತ್ತೇವೆ. ಆದರೆ, ಅಂತಹದ್ದೆ ನಮ್ಮ ಜೀವನದಲ್ಲಿ ಸಹ ಇರಬೇಕು. ನಮ್ಮ ಸ್ವಂತ ಜೀವನದಲ್ಲಿ ನಾವು ಕೂಡಾ ಒಬ್ಬ ನಾಯಕ – ಒಬ್ಬ ನಾಯಕಿ .. ಒಬ್ಬ ಹೀರೋ – ಒಬ್ಬ ಹೀರೋಯಿನ್ .. ಆ ಒಂದು ರೂಪದಲ್ಲಿರಬೇಕು. ಆಗ ನಮ್ಮ ಜೀವನ ಸಹ ಆನಂದದಾಯಕವಾಗಿ ಇದ್ದು, ಜೀವನ ನಿಜವಾದ ಜೀವನವಾಗಿ ವಿಕಾಸ ಹೊಂದುತ್ತದೆ.

ಎರಡು ರೂಪಾಯಿಗಳು ಸಂಪಾದಿಸಿಕೊಳ್ಳುವುದು, ರೊಟ್ಟಿಗಳು ತಿನ್ನುವುದು, ಮದುವೆ ಮಾಡಿಕೊಳ್ಳುವುದು, ಮಕ್ಕಳಿಗೆ ಜನ್ಮ ನೀಡುವುದು, ಅವರನ್ನು ಸಾಕುವುದು, ಅವರು ಸಹ ಮಕ್ಕಳಿಗೆ ಜನ್ಮ ನೀಡುವುದನ್ನು ನೋಡಿ ಸಂತೋಷಿಸುವುದು, ’ ನಾನು ತಾತನಾಗಿದ್ದೇನೆ ’ ಎಂದು, ’ ನಾನು ಅಜ್ಜಿ ಆಗಿದ್ದೇನೆ ’ ಎಂದು .. ಪುನಃ ಶರೀರ ಸುಕ್ಕು ಬಿದ್ದಾಗ ಸಾವಿಗಾಗಿ ಎದುರು ನೋಡುತ್ತಾ ’ರಾಮಾ – ಕೃಷ್ಣಾ’ ಎಂದು ನೆನೆಯುತ್ತಾ ಉಳಿದ ಜೀವನವನ್ನು ಕಳೆಯುವುದು .. ಇದೆಲ್ಲಾ ಸಹ .. ಇದರಲ್ಲೂ ಸಾಹಸವಿದೆ. ಆದರೆ, ಶೇಕಡಾವಾರು ತುಂಬಾ ಕಡಿಮೆ ಪ್ರಮಾಣದಲ್ಲಿದೆ ಎಂದು ಅರ್ಥ.

 

ಸಾಹಸಕರವಾದಜೀವನ”

ಈ ದಿನ ಈ ’ ಸಾಹಸ ’ ಎನ್ನುವ ವಿಷಯವನ್ನು ಕುರಿತು, ಈ ವಸ್ತುವನ್ನು ಕುರಿತು ನಾವು ತಿಳಿದುಕೊಳ್ಳುತ್ತಿದ್ದೇವೆ.

ಮಹಾತ್ಮಾ ಗಾಂಧೀಜಿ ಅವರನ್ನು ನೋಡಿದಾಗಿ, ಮದರ್ ಥೆರಿಸಾ ಅವರನ್ನು ನೋಡಿದಾಗಿ ಅವರ ಚರಿತ್ರೆಗಳನ್ನು ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ. ಅವರು ಎಷ್ಟು ದೊಡ್ಡ ಮನುಷ್ಯರಪ್ಪಾ ಎಂದು ನಾವು ಅಂದುಕೊಳ್ಳುತ್ತಿರುತ್ತೇವೆ. ಮತ್ತೆ ಅವರೂ ಸಹ ಸಾಧಾರಣ ಮನುಷ್ಯರೇ. ಆದರೆ, ಎರಡು ರೂಪಾಯಿಗಳು ಸಂಪಾದಿಸಿಕೊಂಡು ಮದುವೆ ಮಾಡಿಕೊಂಡು ಅಷ್ಟಕ್ಕೆ ಅವರು ನಿಲ್ಲಲಿಲ್ಲ.

* * *

ಕೃಷ್ಣನಿಗೆ ಸಹ ಹೆಂಡತಿಯರಿದ್ದಾರೆ, ಮಕ್ಕಳಿದ್ದಾರೆ. ಮತ್ತೆ ಆತ ಯೋಗೀಶ್ವರನು ಸಹ ಆದ. ಬುದ್ಧನಿಗೆ ಹೆಂಡತಿ, ಮಗ ಇದ್ದಾರೆ. ಮತ್ತೆ ಆತ ಸಹ ಯೋಗೀಶ್ವರನಾದ. ಶಿವನಿಗೆ ಹೆಂಡತಿ, ಮಕ್ಕಳಿದ್ದಾರೆ. ಅವರೆಲ್ಲರೂ ಯೋಗೀಶ್ವರರಾದರು. ಅಂದರೆ, ಜೀವನದಲ್ಲಿ ’ಸಾಹಸ ಕಾರ್ಯಕ್ರಮಗಳು’ ಅಂದರೆ … ಕೇವಲ ತಿಂಡಿ, ನಿದ್ದೆ, ಮೈಥುನ, ಸಂಸಾರ, ಮನೆ, ಬಾಗಿಲು .. ಇವೇ ಅಲ್ಲದೆ ಕೆಲವು ಮಹತ್ತರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಜೀವನವನ್ನು ಅರ್ಪಿಸಬೇಕು. ಅದರ ಹೆಸರು ಸಾಹಸಭರಿತವಾದ ಜೀವನ.

* * *

ಬಿಸ್ಮಿಲ್ಲಾಖಾನ್ ಇದ್ದಾರೆ. ಅವರ ಜೀವನವನ್ನು ಸಂಗೀತಕ್ಕೆ ಅರ್ಪಿಸಿದರು. ಬ್ರಾಡ್‌ಮನ್ ಇದ್ದಾರೆ. ಕ್ರಿಕೆಟ್‌ಗೆ ಜೀವನವನ್ನು ಸಮರ್ಪಿಸಿದನು. ಎಷ್ಟು ರೆಕಾರ್ಡ್‌ಗಳನ್ನು ಸೃಷ್ಟಿಸಿದನೋ. ಎಡ್ಮಂಡ್ ಹಿಲ್ಲರೀ ಎವರೆಸ್ಟ್ ಪರ್ವತವನ್ನು ಏರಿದನು. ಇವೆಲ್ಲಾ ಸಾಮಾನ್ಯದ ವಿಷಯವಲ್ಲ ?

 

ಯಧಾರಾಜಾತಥಾಪ್ರಜಾ”

ದೊಡ್ಡ ದೊಡ್ಡ ಕೆಲಸಗಳು ಮಾಡಲು ನಾವಿಲ್ಲ … ಚಿಕ್ಕ ಚಿಕ್ಕ ಕೆಲಸಗಳು ಮಾಡಲು ಮಾತ್ರವೇ ನಾವಿದ್ದೇವೆ … ನಾವು ಸಾಧಾರಣ ಮನುಷ್ಯರು .. ಮನುಷ್ಯ ಅಷ್ಟೆ .. ಇವೆಲ್ಲಾ ನಮ್ಮಿಂದ ಆಗಲ್ಲ ಎಂದುಕೊಳ್ಳುವುದು .. ಅಂತಹ ಭಾವನೆಗಳನ್ನೇ ತಂದೇ ತಾಯಂದಿರು ಮಕ್ಕಳ ಮನಸ್ಸಿನಲ್ಲಿ ಮೊದಲಿನಿಂದಲೇ ಹಾಕುವುದು ನೀನು ಓದಿಕೊಂಡು ಡಾಕ್ಟರ್ ಆಗು, ಇಂಜನೀರ್ ಆಗು, ಹೆಂಡತಿ ಮಕ್ಕಳ ಜೊತೆ ಸುಖವಾಗಿ ಜೀವಿಸು ಎಂದು ಮಕ್ಕಳ ಭಾವನಾಪರಧಿಯನ್ನು ಅಷ್ಟರವರೆಗೇ ನೀಮಿತಗೊಳಿಸಿದರು. ಯಥಾ ರಾಜಾ ತಥಾ ಪ್ರಜಾ . ತಂದೆ ತಾಯಂದಿರು ಹೇಗೆ ಇರುತ್ತಾರೊ ಮಕ್ಕಳು ಅವರಿಗೆ ’ ನಕಲು ’ ಆಗಿ ತಯಾರಾಗುತ್ತಾರೆ.

* * *

ಅಂತರಾಂತರಗಳಲ್ಲಿ ಎಲ್ಲರಿಗೂ ಶ್ರೇಷ್ಠ ಮನುಷ್ಯರಾಗಬೇಕೆಂದೇ ಇರುತ್ತದೆ. ಸಾಹಸಕರವಾದ ಕಾರ್ಯಕ್ರಮಗಳು ಮಾಡಬೇಕೆಂದೇ ಇರುತ್ತದೆ. ಆದರೆ, ತಂದೆ ತಾಯಂದಿರು, ಬಂಧುವರ್ಗದವರು, ಮಿತ್ರರು ಎಲ್ಲರೂ ಕೂಡಾ ಎಂತಹವರೆಂದರೆ ಸಮಯವನ್ನು ವ್ಯರ್ಥ ಮಾಡುವವರು. ಭಯದಿಂದ ಜೀವಿಸುವವರು. ಭಯವನ್ನು ಪೋಷಿಸುವವರು. ಭಯವನ್ನು ಬೋಧಿಸುವವರು.

* * *

ಅವೆಲ್ಲಾ ದೊಡ್ಡ ದೊಡ್ಡ ವಿಷಯಗಳು .. ನಿನ್ನಿಂದ ಆಗುವುದಿಲ್ಲ .. ಹುಲಿಯನ್ನು ನೋಡಿ ನೀನು ನರಿಬರೆ ಹಾಕಿಕೊಂಡ ಹಾಗೆ, ನಿನ್ನ ಪರಿಸ್ಥಿತಿ ಹಾಗೆ ಇದೆ. ಹೀಗಾದರೆ ನಿನ್ನ ಹೆಂಡತಿ ಮಕ್ಕಳು ಬದುಕುವುದಿಲ್ಲ. ಬಯಸಿ ಕಷ್ಟಗಳನ್ನು ತಂದುಕೊಳ್ಳುತ್ತಿರುವೆ. ನೀನೇನಾದರೂ ದೊಡ್ಡ ಮನುಷ್ಯ ಎಂದು ತಿಳಿದುಕೊಂಡಿರುವೆ ಏನು ? ಹೀಗೆ ಬಗೆಬಗೆಯಾಗಿ ಆ ’ ಸಾಹಸ ’ವನ್ನು ಬಯಸುವ ವ್ಯಕ್ತಿ ಮೇಲೆ .. ಆ ಒಂದು ವ್ಯಕ್ತಿತ್ವದ ಮೇಲೆ .. ತಣ್ಣೀರು ಎರಚಿ .. ಮಕ್ಕಳಿಗೆ ಸರಿಯಾದ ಜೀವನವನ್ನು ಬೋಧಿಸುತ್ತಿದ್ದಾರೆ ಎಂದುಕೊಳ್ಳುತ್ತಿದ್ದಾರೆ.

 

ಸಮಾಜಕ್ಕೆಸ್ವಲ್ಪಹೆಚ್ಚುಒಳಿತು”

ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯವೇನೆಂದರೆ, ಸಾಹಸಕ್ಕಾಗಿಯೇ ನಾವು ಜನ್ಮಿಸಿದ್ದೇವೆ. ಭಯಪಡುತ್ತಾ ಜೀವಿಸಲಿಕ್ಕಾಗಿ ಯಾವ ಮಾನವನೂ ಹುಟ್ಟುವುದಿಲ್ಲ. ಯಾವುದೊ ಒಂದು ಉನ್ನತವಾದ ಕಾರ್ಯಕ್ರಮವನ್ನು ಕೈಹಿಡಿದು ಅದನ್ನು ಸಾಧಿಸಲಿಕ್ಕಾಗಿಯೇ ಪ್ರತಿ ಮಾನವನೂ ಹುಟ್ಟುತ್ತಾನೆ. ಯಾವ ಮಾನವನೂ ಸಹ ತಿಂದು ಮಲಗಲು ಹುಟ್ಟುವುದಿಲ್ಲ. ಸಮಾಜದಿಂದ ತಾನು ಪಡೆದಿದ್ದನ್ನಲ್ಲದೇ ಸಮಾಜಕ್ಕೆ ಸ್ವಲ್ಪ ಹೆಚ್ಚು ಒಳಿತನ್ನು ಮಾಡಲ್ಲಿಕ್ಕಾಗಿಯೇ ಪ್ರತಿ ಮಾನವನೂ ಹುಟ್ಟುತ್ತಾನೆ. ತಾನು ತೆಗೆದುಕೊಂಡಿದ್ದಕ್ಕಿಂತಾ ಸ್ವಲ್ಪ ಹೆಚ್ಚು ಕೊಡಲಾಗಬೇಕು. ಅದರ ಹೆಸರೇ ಸಾಹಸ.

* * *

‘ಹೆಚ್ಚು ಕೊಡಲಾಗುವುದು’ .. ಅದರ ಹೆಸರೇ ಸಾಹಸ. ನಿನ್ನ ತಂದೆ ತಾಯಂದಿರು ನಿನ್ನಂತವರನ್ನು ಹುಟ್ಟಿಸಿ ನೀನು ಇನ್ನೊಬ್ಬರನ್ನು ಹುಟ್ಟಿಸಿದರೆ ನೀನು ಸಮಾಜಕ್ಕೆ ಹೆಚ್ಚು ಏನೂ ಮಾಡಲಿಲ್ಲ.

ಒಬ್ಬ ಏಸುಪ್ರಭುವು ಸಮಾಜದಿಂದ ಪಡೆದಿದ್ದು ಎಷ್ಟು ? ಸಮಾಜಕ್ಕೆ ನೀಡಿದ್ದು ಎಷ್ಟು ? ಒಬ್ಬ ಗಾಂಧೀಜಿ ಸಮಾಜದಿಂದ ಪಡೆದಿದ್ದು ಎಷ್ಟು ? ಸಮಾಜಕ್ಕೆ ನೀಡಿದ್ದು ಎಷ್ಟು ? ಒಬ್ಬ ಬಿಸ್ಮಿಲ್ಲಾಖಾನ್ ಸಮಾಜದಿಂದ ತೆಗೆದುಕೊಂಡಿದ್ದು ಎಷ್ಟು ? ಸಮಾಜಕ್ಕೆ ನೀಡಿದ್ದು ಎಷ್ಟು ? ಇವೆಲ್ಲಾ ಸಾಹಸಮಯವಾದ ಜೀವನಗಳು.

 

ಆತ್ಮದಬಯಕೆಸದಾಸಾಹಸವೇ”

ಸುತ್ತಾಮುತ್ತಾ ಇರುವ ಸಾಮಾನ್ಯರು, ಸಾಮಾನ್ಯ ಮನುಷ್ಯರು ಏನು ಮಾಡುತ್ತಿದ್ದಾರೋ ನೋಡಿ ನಾವು ಕೂಡಾ ಅದೇ ಮಾಡಿದರೆ ಸಾಹಸ ಹೇಗಾಗುತ್ತದೆ ? ಯಾರೂ ಮಾಡದೇ ಇರುವುದು ನಾವು ಮಾಡಿದರೆ ಅದೇ ಸಾಹಸ. ಸಾಹಸದಲ್ಲಿ ಜೀವಿಸುವುದೆಂಬುವುದೇ ನಿಜವಾದ ಜೀವನ. ಸಾಹಸವಿಲ್ಲದೆ ಜೀವಿಸುವುದೆಂಬುವುದು ಬದುಕನ್ನು ಎಳೆಯುವುದೇ ವಿನಹ … ಬದುಕನ್ನು ಜೀವಿಸುವುದಲ್ಲ.

* * *

ಆತ್ಮದ ಬಯಕೆ ಸದಾ ಸಾಹಸವೇ. ಶರೀರದ ಬಯಕೆ ಹಸಿವನ್ನು ತೀರಿಸಿಕೊಳ್ಳುವುದು. ನಾನು ಶರೀರವೇ ಎಂದುಕೊಂಡರೇ ಹಸಿವೆಯನ್ನು ತೀರಿಸಿಕೊಳ್ಳಲಿಕ್ಕಾಗಿಯೇ ಜೀವಿಸುತ್ತಿರುತ್ತೇವೆ. ಆದರೆ, ನಾನು ಆತ್ಮ ಎಂದು ತಿಳಿದುಕೊಂಡಾಗ ಸಾಹಸ ಮಾಡಲಿಕ್ಕಾಗಿ ನಾವು ಪ್ರಯತ್ನಗಳನ್ನು ಮಾಡುತ್ತೇವೆ. ಸಾಹಸವಂತರಾಗುತ್ತೇವೆ.

* * *

ದೇಹವತ್ ಜೀವನದಲ್ಲಿ ಸಾಹಸ ಎನ್ನುವುದು ಇರಬೇಕಾದರೇ ಅದು ತುಂಬಾ ದೊಡ್ಡ ವಿಷಯ. ನಾನು ದೇಹ ಎಂದುಕೊಂಡರೂ ಸಹ, ಆ ಭಾವನೆಯಲ್ಲಿ ಇದ್ದರೂ ಸಹ .. ಸಾಹಸ ಮಾಡುವವರು, ಪ್ರಾಣಕ್ಕೂ ಲೆಕ್ಕಿಸದೇ ಇರುವವರು ನಿಜವಾಗಲೂ ತುಂಬಾ ತುಂಬಾ ಶ್ರೇಷ್ಠರು.

ಆದರೆ, ಆತ್ಮವತ್ ಜೀವನಕ್ಕೆ ಸಾಹಸ ಸಾಧಾರಣವಾದ ವಿಷಯ. ನಾನು ಶರೀರವಲ್ಲ, ಆತ್ಮ ಎಂದು ಅರಿತುಕೊಂಡು ಸಾಹಸ ಮಾಡುವುದು ಅಷ್ಟು ದೊಡ್ಡ ವಿಷಯವಲ್ಲ. ಆತ್ಮವತ್ ಜೀವನ ಸಾಹಸವನ್ನು ನಮಗೆ ಸಹಜಸಿದ್ಧವಾಗಿಯೇ ನೀಡುತ್ತದೆ. ನಮ್ಮನ್ನು ಸಹಜಸಿದ್ಧವಾಗಿಯೇ ಸಾಹಸವಂತರನ್ನಾಗಿ ಮಾಡುತ್ತದೆ. ಯಾರು ಆತ್ಮಜ್ಞಾನದಲ್ಲಿ ಪ್ರವೇಶಿಸುತ್ತಾರೊ ಅವರಿಗೆ ಸಾಹಸ ಎನ್ನುವುದು ದಿನಚರ್ಯೆ … ದಿನನಿತ್ಯ ಜೀವನ. ಆತ್ಮಜ್ಞಾನದಲ್ಲಿ ಸಾಹಸ ಎನ್ನುವುದು ಸಹಜವಾಗುತ್ತದೆ.

* * *

ಮಿತ್ರರೇ, ಆತ್ಮಜ್ಞಾನ ಇಲ್ಲದಿರುವಾಗ ಮಾಡುವ ಸಾಹಸ ವಿಶೇಷವಾದ ಸಾಹಸ. ಆತ್ಮಜ್ಞಾನ ಅರಿತ ನಂತರ ಮಾಡುವ ಸಾಹಸ ಅದು ಆತ್ಮಜ್ಞಾನಿಗಳೆಲ್ಲರಿಗೂ ಅನ್ವಯಿಸುವ ಸಾಧಾರಣ ಕಾರ್ಯಕ್ರಮ.

 

ಬಾಲ್ಯದಿಂದಲೇಹೇಳಿಕೊಡಬೇಕು

ಸಾಹಸ ಎನ್ನುವುದು ಚಿಕ್ಕ ಮಕ್ಕಳಿಗೆ ಬಾಲ್ಯದಿಂದಲೇ ಹೇಳಿಕೊಡಬೇಕು. ಉದಾಹರಣೆಗೆ ಕತ್ತಲೆ ಇದ್ದರೂ ಹೋಗಿ ಬಾ ಎಂದು ಹೇಳಬೇಕು. ಕತ್ತಲೆಯಲ್ಲಿ ಹೊರಗೆ ಹೋಗಬೇಡ ’ದೆವ್ವಗಳು’ ಇರುತ್ತವೆ, ’ ಭೂತಗಳು ’ ಇರುತ್ತವೆ ಎಂದು ಹೇಳದೆ … ಹಾಗೆ ಕತ್ತಲೆಯಲ್ಲಿ ಸ್ವಲ್ಪ ತಿರುಗಿ ಬಾ ಎಂದು ಮಕ್ಕಳನ್ನು ಒಂಟಿಯಾಗಿಯೇ ಕತ್ತಲೆಯಲ್ಲಿ ಬಿಡಬೇಕು.

ಸ್ಮಶಾನದ ಕಡೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಸ್ಮಶಾನ ಅಂದರೇನೆ ನಾಲಕ್ಕು ಮಾರು ದೂರದಲ್ಲಿ ಇರುತ್ತಾರೆ ಮಕ್ಕಳು. ಸ್ಮಶಾನದಲ್ಲಿ ಸ್ವೇಚ್ಛೆಯಿಂದ ತಿರುಗಾಡಬೇಕು. ಇಲ್ಲಿ ನಿಮ್ಮ ತಾತ ಶರೀರ ತ್ಯಾಗಮಾಡಿದ್ದಾರೆ ಎಂದು ಅವರಿಗೆ ಹೇಳಿಕೊಡಬೇಕು. ಹೀಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಸ್ಮಶಾನ ಎಂದರೆ ಭಯವನ್ನು ಹೋಗಲಾಡಿಸಬೇಕು.

ಹಾಗೆಯೇ, ನೀರಿನಲ್ಲಿ ಈಜು , ನದಿಯಲ್ಲಿ ಈಜು ಎಂದು ಪ್ರೋತ್ಸಾಹ ನೀಡಬೇಕು … ನಮ್ಮ ಜಾಗ್ರತೆಯಲ್ಲಿ ನಾವು ಇರುತ್ತಲೇ ಅವರಿಗೆ ಸಾಹಸವನ್ನು ಹೇಳಿಕೊಡಬೇಕು.

 

ಸಾಹಸಬಗೆಬಗೆಯಾಗಿಇರುತ್ತದೆ”

ಸಾಹಸ ಎನ್ನುವುದು ಅನೇಕ ವಿಧವಾಗಿರುತ್ತದೆ. ವಿದ್ಯಾಭ್ಯಾಸದಲ್ಲಿ ಸಾಹಸ, ಆಟಗಳಲ್ಲಿ ಸಾಹಸ, ಪಾಠಗಳಲ್ಲಿ ಸಾಹಸ, ಸಂಗೀತದಲ್ಲಿ ಸಾಹಸ, ಒಂದು ಹೊಸ ರಾಗವನ್ನು ಕಂಡುಹಿಡಿಯೊ .. ಎರಡು ರಾಗಗಳನ್ನು ಸೇರಿಸಿದರೇ ಒಂದು ಹೊಸರಾಗ ಬರುತ್ತದೆ, ಒಂದು ಹೊಸರಾಗವನ್ನು ಕಂಡುಹಿಡಿದು ಒಂದು ನೂತನ ಪ್ರಯೋಗ ಮಾಡು. ಒಂದು ಹೊಸ ಸ್ಟೈಲ್‌ನಲ್ಲಿ ಒಂದು ರಾಗವನ್ನು ಹಾಡು, ಒಂದು ಕೀರ್ತನೆಯನ್ನು ಬರೆಯಲು ಪ್ರಯತ್ನಿಸು, ಒಂದು ವ್ಯಾಸಂಗವನ್ನು ಬರಿ, ಒಂದು ಆರ್ಟಿಕಲ್ ಬರಿ, ನ್ಯೂಸ್‌ಪೇಪರ್‌ಗೆ ಕಳಿಸು ಎಂದು ಬೋಧಿಸಬೇಕು.

* * *

ಫ್ರೆಂಡ್ಸ್, ಇತರರು ಮಾಡದೇ ಇರುವುದನ್ನು ನಾವು ಮಾಡಿ ತೋರಿಸಿದರೇ ಅದು ಸಾಹಸ. ನಾವು ಇದುವರೆಗೂ ಮಾಡದೇ ಹೊಸದಾಗಿ ಮಾಡುವುದೆಂಬುವುದೇ ಸಾಹಸ. ಪ್ರಾಣಕ್ಕೂ ಲೆಕ್ಕಿಸದೇ ಇರುವುದೇ ಸಾಹಸ. ಇತರರು ಹೊರಿಸುವ ಅಪನಿಂದನೆಗಳ ಕಡೆ ಗಮನಕೊಡದೇ, ನಮ್ಮ ಪ್ರಯತ್ನಗಳನ್ನು ನಾವು ಮುಂದುವರೆಸುತ್ತಾ ಇರುವುದೇ ಸಾಹಸ.

* * *

ಶರೀರ ಶಿಥಿಲವಾಗಿಬಿಡುತ್ತದೆಯೇನೊ, ಕೈ ಕಾಲುಗಳು ಮುರಿದುಹೋಗುತ್ತದೇನೊ ಎಂದು ಭಯಪಡದೇ ಮುಂದಕ್ಕೆ ಸಾಗುವುದೇ ಸಾಹಸ. ಎಲ್ಲರೂ ಛೀಮಾರಿ ಹಾಕುತ್ತಿದ್ದರೂ ನಮ್ಮ ಆತ್ಮಕ್ಕೆ ತೋಚಿದ್ದು, ನಮ್ಮ ಹೃದಯ ಹೇಳಿದ್ದು ನಿರ್ಭಯವಾಗಿ ಮಾಡಿಕೊಳ್ಳುತ್ತಾ ಹೋಗುವುದೇ ಸಾಹಸ.

* * *

ಎಂದಿಗೂ ಅಡುಗೆ ಮಾಡದೇ ಇರುವವನು ಅಡುಗೆ ಕಲಿತುಕೊಳ್ಳುವುದು ಸಾಹಸ. ತನಗೆ ಇಲ್ಲದಿದ್ದರೂ ಇತರರಿಗೆ ಸಹಾಯ ಮಾಡುವುದು ಸಾಹಸ. ಮುದಿವಯಸ್ಸಿನಲ್ಲಿ ಸಹ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವುದು ಸಾಹಸ. ಚಿಕ್ಕ ಮಕ್ಕಳಾಗಿ ಇದ್ದರೂ ತಮ್ಮ ಕೆಲಸಗಳು ತಾವು ಮಾಡಿಕೊಳ್ಳುವುದು ಸಾಹಸ.

 

ಸಾಹಸ.. ಸೋಂಕುವ್ಯಾಧಿ’ “

ಒಬ್ಬನ ಸಾಹಸವನ್ನು ನೋಡಿ ಮತ್ತೊಬ್ಬನು ಸಾಹಸ ಮಾಡುತ್ತಾನೆ. ಒಬ್ಬರ ಸಾಹಸ ಇನ್ನೊಬ್ಬರಲ್ಲಿ ಸಾಹಸಮಾಡುವ ಧೈರ್ಯವನ್ನು ತುಂಬುತ್ತದೆ. ಗಾಂಧೀಜಿಯವರ ಸಾಹಸದಿಂದ ದೇಶದಲ್ಲೆಲ್ಲಾರೂ ಸಾಹಸವಂತರಾದರು. ಪ್ರತಿಯೊಬ್ಬರೂ ಸಹ ದೇಶದಲ್ಲಿ ಅವರನ್ನು ನೋಡಿ ಸಾಹಸ ಪ್ರದರ್ಶಿಸಿ ಐಕ್ಯತೆಯಿಂದ ಭಾರತದೇಶಕ್ಕೆ ಸ್ವಾತಂತ್ರ್ಯ ಕೊಟ್ಟರಲ್ಲವೇ.

ಒಬ್ಬ ನೆಲ್ಸನ್ ಮಂಡೇಲಾ ಅವರ ಸಾಹಸವನ್ನು ನೋಡಿ .. ಎರಡು ದಶಕಗಳು ಜೈಲಿನಲ್ಲಿದ್ದರೂ ತನ್ನ ಸಾಹಸವನ್ನು ಕಳೆದುಕೊಂಡನಾ ಏನು? ಒಬ್ಬ ವೀರಸಾವರ್ಕರ್ ಎಂತಹ ಸಾಹಸವಂತನೋ ನಮ್ಮೆಲ್ಲರಿಗೂ ತಿಳಿದಿದೆ. ಅಂಡಮಾನ್‌ನಲ್ಲಿ ಒಂದು ಚಿಕ್ಕ ಕೊಠಡಿಯಲ್ಲಿ ೨೫ ವರ್ಷ ಕಳೆದನು … ಅನೇಕ ಬಾಧೆಗಳನ್ನು ಅನುಭವಿಸಿದನು. ನೆನಪಿನಲ್ಲಿಟ್ಟುಕೊಳ್ಳಬೇಕಾದ ಮುಖ್ಯವಾದ ವಿಷಯವೇನೆಂದರೆ ನಮ್ಮ ಸಾಹಸವನ್ನು ನೋಡಲು ಯಾರೂ ಇರುವುದಿಲ್ಲ, ಎಲ್ಲಾ ಸಾಹಸಗಳು ನಡೆದನಂತರ ಜೀವನ ಅಂತ್ಯದಲ್ಲಿ ಹೊಗಳುತ್ತಾರೆ ವಿನಹ ಮೊದಲಿಲ್ಲ.

ಸಾಹಸವ್ಯಕ್ತಿಗತವಾದದ್ದು”

ಯಾರೋ ನೋಡುತ್ತಾರೆಂದು ನಾವು ಸಾಹಸ ಮಾಡುವುದಲ್ಲ. ಎಲ್ಲರೂ ನೋಡಲೆಂದು ಸಾಹಸ ಎನ್ನುವುದು ಎಂದಿಗೂ ಇರುವುದಿಲ್ಲ. ಸಾಹಸ ಎನ್ನುವುದು ವ್ಯಕ್ತಿಗತವಾದದ್ದು. ಅದು ಎಂದಿಗೂ ಪ್ರದರ್ಶಿಸಲಿಕ್ಕಾಗಿ ಇರುವುದಿಲ್ಲ. ಸಾಹಸ ಎನ್ನುವುದು ಒಬ್ಬ ಉನ್ನತ ವ್ಯಕ್ತಿಯ ಉನ್ನತ ಆಕಾಂಕ್ಷೆ.

* * *

ಜೀವನ ಸಾಹಸದಿಂದ ತುಂಬಿರಬೇಕು ಎನ್ನುವದನ್ನೇ ಸದಾ ಬೋಧಿಸಬೇಕು. ಪ್ರತಿಯೊಬ್ಬ ತಂದೆ ತಾಯಿ, ಅವರು ಸಾಹಸವಂತರಾದರೇನೇ ಹಾಗೆ ಹೇಳಿಕೊಡುತ್ತಾರೆ. ಅವರಿಗೆ ಸಾಹಸವಿಲ್ಲದಿದ್ದರೆ ಮಕ್ಕಳಿಗೆ ಏನು ಸಾಹಸ ಹೇಳಿಕೊಡುತ್ತಾರೆ.

* * *

ಹೇಗೆ ಒಳ್ಳೆಯದೆನ್ನುವುದು ಕೆಡಕುಮಾಡದೇ ಇರುವುದರಿಂದ ಬರುತ್ತದೆಯೋ .. ಹೇಗೆ ಜ್ಞಾನ ಎನ್ನುವುದು ಅಜ್ಞಾನವನ್ನು ತೆಗೆಯುವುದರಿಂದ ಬರುತ್ತದೆಯೊ .. ಸಾಹಸ ಎನ್ನುವುದು ಭಯ ಎನ್ನುವುದನ್ನು ತೆಗೆದರೇನೇ ಬರುತ್ತದೆ. ಜ್ಞಾನದಿಂದ ಕೂಡಿಕೊಂಡಿರುವುದು, ಸಾಹಸದಿಂದ ವಿಜೃಂಭಿಸುವುದು .. ಅಂತಹದು ’ ಪರಿಪೂರ್ಣ ಜೀವನ ’. ಒಳ್ಳೆಯದನ್ನು ಮಾಡುವುದು, ಸಾಹಸದಿಂದ ಜೀವಿಸುವುದು, ಜ್ಞಾನವನ್ನು ಸಂಪಾದಿಸುವುದು .. ಇವು ಪರಿಪೂರ್ಣ ಜೀವನದ ಖಚಿತವಾದ ರೂಪುರೇಖೆಗಳು.

 

ಸಾಹಸಕರವಾದಪ್ರಬೋಧೆ”

ಕೆಡಕು ಮಾಡಬೇಡಿ, ಒಳ್ಳೆಯದನ್ನೇ ಮಾಡಿ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಅಜ್ಞಾನವನ್ನು ತ್ಯಜಿಸಿ ಜ್ಞಾನ ಪಡೆಯಿರಿ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದರೆ, ಸಾಹಸ ಮಾಡು ಎಂದು ತುಂಬಾ ಕಡಿಮೆಜನ ಬೋಧಿಸುತ್ತಾರೆ.

ಜೀವ ಹೋದರೇ ಹೋಗಲಿ, ಈ ಕೆಲಸ ಮಾಡು ಎಂದು ಯಾರಾದರೂ ಹೇಳುತ್ತಾರೆಯೇ ? ಆ ರೀತಿಯಲ್ಲಿ ಇನ್ನೊಬ್ಬರಿಗೆ ಹೇಳಿದರೆ ಅದು ಸಾಹಸಕರವಾದ ಕಾರ್ಯಕ್ರಮ, ಸಾಹಸವಾದ ಪ್ರಬೋಧೆ. ಸಾಹಸವನ್ನು ಬೋಧಿಸುವುದು ಸಾಹಸವಾದ ಪ್ರಬೋಧೆ.

 

ಯುದ್ಧಾಯಕೃತನಿಶ್ಚಯಃ”

ಯುದ್ಧಾಯ ಕೃತನಿಶ್ಚಯಃ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ. ಅದು ಸಾಹಸವನ್ನು ಪ್ರಬೋಧಿಸುವ ಪ್ರಬೋಧ. ನಾನು ಯುದ್ಧ ಮಾಡುವುದಿಲ್ಲ ಎಂದ ಅರ್ಜುನನು. ಅನೇಕ ಕಾರಣಗಳು .. ಆ ಎಲ್ಲಾ ಕಾರಣಗಳನ್ನೂ ತಳ್ಳಿಹಾಕಿದನು ಶ್ರೀಕೃಷ್ಣನು .. ಯುದ್ಧ ಮಾಡಯ್ಯಾ ಎಂದನು.

ದುರ್ಯೋಧನನು ಕೂಡಾ ಜಾನಾಮಿ ಧರ್ಮಃ ನ ಚ ಮೇ ಪ್ರವೃತ್ತಿಃ, ಜಾನಾಮಿ ಅಧರ್ಮಃ ನ ಚ ಮೇ ನಿವೃತ್ತಿಃ ಎಂದರು. ನನಗೆ ಧರ್ಮ ಅಂದರೆ ಏನು ಎಂದು ತಿಳಿದಿದೆ. ಆದರೆ, ಅದು ಅನುಸರಿಸಬೇಕೆಂದು ಇಲ್ಲ. ಅಧರ್ಮ ಅಂದರೆ ಏನು ತಿಳಿದಿದೆ. ಅದೇ ಮಾಡಬೇಕೆಂದಿದೆ. ಅದು ಸಾಹಸ ಎಂದರೆ ದುರ್ಯೋಧನನು ಪ್ರಾಣಗಳನ್ನು ಸಹಿತಾ ಲೆಕ್ಕಿಸಲಿಲ್ಲ ಸಾಯುತ್ತೇನೆ, ಸೋ ವಾಟ್ ? ನಿನ್ನ ಕೊಲ್ಲಬೇಕು, ಅದೇ ನನ್ನ ಬಯಕೆ ಅಂದರೆ .. ಅದು ತಪ್ಪು. ಆದರೆ, ಸಾಹಸಕರವಾದ ಕಾರ್ಯಕ್ರಮ.

* * *

ಸಾಹಸಕ್ಕೆ ಮೇಲೆ ಲೋಕಗಳಲ್ಲಿ ಅನೇಕ ಅಂಕಿಗಳು ಸಿಗುತ್ತವೆ. ನಾಳೇನೊ ನಾಳಿದ್ದೊ ನಾವು ಮೇಲೆ ಲೋಕಗಳಿಗೆ ಹೋಗುತ್ತೇವೆ. ಹೋದಾಗ ಅವರು ಕೇಳುತ್ತಾರೆ .. ಏನಯ್ಯಾ, ಭೂಮಿಯ ಮೇಲೆ ಇರುವಾಗ ಸಾಹಸ ಮಾಡಲಾಗಲಿಲ್ಲವೇ? ಏತಕ್ಕಾಗಿ ಅಷ್ಟು ಭಯಕ್ಕೆ ಒಳಗಾದೆ ? ಆಗ ನಾವು ಯಾವ ಮುಖ ಇಟ್ಟುಕೊಳ್ಳುತ್ತೇವೆ? ಇಲ್ಲರೀ … ಹೆಂಡತಿ ಇದ್ದಳು, ಮಕ್ಕಳಿದ್ದಾರೆ, ಉದ್ಯೋಗ, ಬಾಧ್ಯತೆಗಳು ಎಂದು ವಿಧವಿಧವಾದ ಕಥೆಗಳು ಹೇಳಲು ನಮಗೆ ಮನಸ್ಸು ಒಪ್ಪುವುದಿಲ್ಲ … ಏಕೆಂದರೆ, ಅಂತಹ ಸ್ಥಿತಿಗಳಲ್ಲೇ ಇದ್ದು ಅನೇಕ ಜನ ಅನೇಕ ಸಾಹಸ ಕಾರ್ಯಕ್ರಮಗಳನ್ನು ಸಹ ಮಾಡುವುದು ನಮಗೆ ಭೂಲೋಕದಲ್ಲೇ ಅನುಭವ.

 

ಧುಮುಕಿಮುಂದಕ್ಕೆಧುಮುಕಿ”

 

ಮೇಲೆ ಲೋಕಗಳಲ್ಲಿ ವಾಸಿಸುವವರು .. ಅಂದರೇ .. ಆಸ್ಟ್ರಲ್ ಮಾಸ್ಟರ‍್ಸ್ .. ಅವರ ಏಕೈಕ ಸಂದೇಶ ಸಾಹಸ ಮಾಡಿರೊ. ಧುಮುಕಿ, ಮುಂದಕ್ಕೆ ಧುಮುಕಿ.

ಶ್ರೀರಾಮನು ಅಗ್ನಿಪ್ರವೇಶ ಮಾಡು ಎಂದಾಗ ಆ ಸೀತೆ ಅಗ್ನಿಪ್ರವೇಶ ಮಾಡಿದಳು. ಅದು ಸಾಹಸ. ಮನೆ ಬಿಟ್ಟು ಹೋಗು ಎಂದಾಗ ತುಂಬು ಗರ್ಭಿಣಿ ಸೀತೆ ಅಲ್ಲಿಂದ ಹೊರಟು, ಆಶ್ರಮದಲ್ಲಿ ಇರುತ್ತಾ, ತನ್ನ ಮಕ್ಕಳನ್ನು ಬೆಳೆಸುವುದು ಎನ್ನುವುದು ಸಾಹಸಕರವಾದ ಕಾರ್ಯಕ್ರಮ. ನೀನು ಕಾಡಿಗೆ ಹೋಗಬೇಕು ಎಂದು ದಶರಥನು ಎಂದಾಗ ೧೪ ವರ್ಷಗಳು ಶ್ರೀರಾಮನು ಸಂತೋಷವಾಗಿ ಹೋದನು, ಅದು ಸಾಹಸಕರವಾದ ಕಾರ್ಯಕ್ರಮ. ರಾವಣನು ಸೀತೆಯನ್ನು ಎತ್ತಿಕೊಂಡು ಬಂದಾಗ ಅದು ಸಾಹಸಪೂರಿತವಾದ ಕಾರ್ಯಕ್ರಮ. ರಾವಣನಿಗೆ ತಿಳಿದಿತ್ತು ರಾಮನು ತನ್ನನ್ನು ಕೊಲ್ಲುತ್ತಾನೆಂದು ಆದರೂ, ಸಹ ಸೀತೆಯನ್ನು ಎತ್ತಿಕೊಂಡು ಬಂದನು. ಮನುಷ್ಯನಿಗೆ ಬೇಕಾಗಿರುವುದು ಸಾಹಸ.

ಧ್ಯಾನಎಲ್ಲದಕ್ಕಿಂತಾದೊಡ್ಡಸಾಹಸ”

ಭೂಲೋಕದಲ್ಲಿ ಧ್ಯಾನ ಮಾಡುವುದೇ ಎಲ್ಲದಕ್ಕಿಂತಾ ದೊಡ್ಡ ಸಾಹಾಸ. ಮನಸ್ಸನ್ನು ನಿರ್ಮೂಲನ ಮಾಡಿಕೊಳ್ಳುವುದು ಅತ್ಯಂತ ದೊಡ್ಡ ಸಾಹಸ. ಮೂರನೆಯ ಕಣ್ಣು ಸಂಪಾದಿಸಿಕೊಳ್ಳುವುದು, ಗತಜನ್ಮಗಳನ್ನು ನೋಡಿಕೊಳ್ಳುವುದು .. ಎಲ್ಲದಕ್ಕಿಂತಾ ದೊಡ್ಡ ಸಾಹಸ. ಈ ಸಾಹಸಕ್ಕೆ ನಾವು ಪ್ರಯತ್ನಿಸೋಣ. ಧ್ಯಾನ ಎನ್ನುವ ಮಹತ್ತರವಾದ ಸಾಹಸ ಕಾರ್ಯಕ್ರಮಕ್ಕೆ ಶ್ರೀಕಾರ ಹಾಕೋಣ.

ಪ್ರಪಂಚ ಅನ್ನುತ್ತದೆ .. ಈ ಚಿಕ್ಕ ವಯಸ್ಸಿನಲ್ಲಿ ಧ್ಯಾನ ಏಕೆ ? ಧ್ಯಾನ ಮುದಿ ವಯಸ್ಸಿನಲ್ಲಿ ಮಾಡಬೇಕು ಎಂದು. ಆದ್ದರಿಂದ, ಮುಮ್ಮಿಡಿವರಂ ಬಾಲಯೋಗಿ ಚಿಕ್ಕ ವಯಸ್ಸಿನಲ್ಲೇ ಎಷ್ಟು ಧ್ಯಾನ ಮಾಡಿದನೋ .. ಎಂತಹ ಸಾಹಸ ಮಾಡಿದನೋ..

ನಮ್ಮ ಜೀವನ ನಮಗೇ ರಸಭರಿತವಾಗಿರಬೇಕಾದರೆ .. ನಾಳೆ ಸತ್ತನಂತರ ಮೇಲೆ ಲೋಕಗಳಿಗೆ ಹೋದಾಗ ನಾವು ಹಿಂದೆತಿರುಗಿ ನೋಡಿಕೊಂಡಾಗ ನಮ್ಮ ಜೀವನ ನಮಗೇ ಆದರ್ಶಯುತವಾಗಿ ಇರಬೇಕಾದರೆ .. ಸಾಹಸ ಎನ್ನುವುದು ಅತ್ಯಂತ ಮುಖ್ಯವಾದ ವಿಷಯ.

* * *

ಎಲ್ಲಾ ಸಾಹಸಕಾರ್ಯಕ್ರಮಗಳಲ್ಲೂ ಅತ್ಯಂತ ಸಾಹಸ ಕಾರ್ಯಕ್ರಮ ಧ್ಯಾನ. ಪ್ರತಿದಿನ ನಾವು ಈ ಸಾಹಸ ಕಾರ್ಯಕ್ರಮ ಮಾಡೋಣ. ಧ್ಯಾನದಲ್ಲಿ ನಾವು ಮಗ್ನರಾಗೋಣ. ಧ್ಯಾನ ಎನ್ನುವುದು ಒಂದು ಮಹಾಸಾಹಸ ಕಾರ್ಯಕ್ರಮ ಎಂದು ತಿಳಿದುಕೊಂಡರೇನೆ ಅದರಲ್ಲಿ ನಾವು ಚೆನ್ನಾಗಿ ಇಳಿಯಬಲ್ಲೆವು. ಮೊಸಳೆಗಳಿಂದ ಕೂಡಿರುವ ಒಂದು ಕೊಳ ಇದೆ .. ಅದರಲ್ಲಿ ಇಳಿಯುವುದಂತಹದ್ದು ಧ್ಯಾನ ಮಾಡುವುದೆಂದರೆ.

 

ಆಶಿಸಿದಷ್ಟುಸುಲಭವ್ಯವಹಾರವಲ್ಲ”

ಧ್ಯಾನ ಎನ್ನುವುದು ಆಶಿಸಿದಷ್ಟು ಸುಲಭ ವ್ಯವಹಾರವಲ್ಲ. ಒಂದು ಮಹಾಸಾಹಸ ಕಾರ್ಯಕ್ರಮದಲ್ಲಿ ನಾನು ಸೇರುತ್ತಿದ್ದೇನೆ .. ಯೋಚನೆಗಳನ್ನು ಇಲ್ಲವಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ .. ಅದನ್ನು ನಿಶ್ಚಯಿಸಿಕೊಂಡಿದ್ದೇನೆ ಎಂದು ತಿಳಿದುಕೊಂಡು ನಾವು ಎರಡು ಕಣ್ಣುಗಳನ್ನೂ ಮುಚ್ಚಿಕೊಳ್ಳಬೇಕು. ಏನೋ ಹೀಗೆ ಕುಳಿತುಕೊಂಡು ಹಾಗೆ ಎದ್ದು ಹೋಗುವ ಘಟನೆ, ಕಾರ್ಯಕ್ರಮ ಇದಲ್ಲ. ಧ್ಯಾನ ಎನ್ನುವುದು ನಮ್ಮ ಬಗ್ಗೆ ನಾವು ತಿಳಿದುಕೊಳ್ಳುವ ಪೂರ್ಣ ಕಾರ್ಯಕ್ರಮ. ಸಕಲ ಸಾಹಸ ಕಾರ್ಯಕ್ರಮಗಳಲ್ಲೂ ಅತ್ಯಂತ ಸಾಹಸಪೂರಿತವಾದ ಕಾರ್ಯಕ್ರಮ ಧ್ಯಾನ. ದಿವ್ಯಚಕ್ಷುವನ್ನು ಉತ್ತೇಜನಗೊಳಿಸಿಕೊಳ್ಳಬೇಕು.

 

ಕಟ್ಟಿಹಾಕಿದೆಹೊಡೆದೆತಂದೆ”

ನಾವು ಎಂದರೆ ಏನು ಎಂದು ತಿಳಿದುಕೊಳ್ಳುವುದು ಮಹಾಸಾಹಸ. ಒಬ್ಬ ಬುದ್ಧನು ಮಾತ್ರವೇ ಮಾಡಲಾಗುವ ಕಾರ್ಯಕ್ರಮ. ’ಶ್ವಾಸದ ಮೇಲೆ ಗಮನ’.. ಅದರಿಂದಲೇ ಈ ಸಾಹಸ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ವ್ಯರ್ಧ ಆಲೋಚನೆಗಳನ್ನು ಸದೆ ಬಡಿಯಬೇಕು. ಶರೀರವನ್ನು ಕಟ್ಟಿಹಾಕಿ, ಮನಸ್ಸನ್ನು ಹೊಡೆದಾಕಿ, ’ದಿವ್ಯಚಕ್ಷುವು’ ಎನ್ನುವ ಸಾಹಸ ಫಲವನ್ನು ತಂದುಕೊಳ್ಳಬೇಕು. ಶರೀರವನ್ನು ಕಟ್ಟಿ ಹಾಕುವುದು, ಮನಸ್ಸನ್ನು ಹೊಡೆಯುವುದು ಮಹಾಸಾಹಸ ಕಾರ್ಯಕ್ರಮ .. ಆಗಲೇ ಸಾಹಸದ ಫಲವನ್ನು ತಂದುಕೊಳ್ಳುತ್ತೇವೆ. ಇದೇ ಕಟ್ಟಿ ಹಾಕಿದೆ-ಹೊಡೆದೆ-ತಂದೆ ಎಂದು ವಾಲ್ಮಿಕಿ ಮಹರ್ಷಿ ನಮಗೆ ನೀಡಿರುವಂತಹ ಸಾಹಸಮಯವಾದ ಕಾರ್ಯಕ್ರಮ. ಇದರ ಹೆಸರೇ ಆತ್ಮಾಯಣ .. ಆತ್ಮವನ್ನು ಹೊಂದುವ ಕಾರ್ಯಕ್ರಮ. ಶರೀರವನ್ನು ಕಟ್ಟಿಹಾಕಿ, ಮನಸ್ಸನ್ನು ಹೊಡೆದುಹಾಕಿ, ಆತ್ಮವನ್ನು ತಂದುಕೊಳ್ಳುವ ಕಾರ್ಯಕ್ರಮ .. ಅತ್ಯಂತ ಸಾಹಸಕರವಾದ ಕಾರ್ಯಕ್ರಮ ಧ್ಯಾನ .

 

ಬಾಂಬುಗಳನ್ನುಎಸೆಯುವುದುಸುಲಭ”

ಇನ್ನೊಬ್ಬರನ್ನು ಕೊಲ್ಲುವುದು ಸಾಹಸವಲ್ಲ. ಕೊಲ್ಲುವುದು ತುಂಬಾ ಸುಲಭ, ಬಾಂಬುಗಳನ್ನು ಎಸೆಯುವುದು ತುಂಬಾ ಸುಲಭ, ನಮ್ಮ ಮನಸ್ಸನ್ನು ಸಾಯಿಸುವುದು ಸಾಹಸ .. ಅದು ತುಂಬಾ ಕಷ್ಟ. ಅನೇಕ ಗಂಟೆಗಳ ಕಾಲ ತುಂಬಾ ಸಾಹಸದಿಂದ ಕುಳಿತುಕೊಳ್ಳುವ ಸಾಹಸ ಇದು.

ಒಬ್ಬ ಮನುಷ್ಯನನ್ನು ಒಂದು ಕತ್ತಿಯಿಂದ ಕತ್ತರಿಸುವುದು .. ಅದು ಸಾಹಸವಲ್ಲವೇ ಅಲ್ಲ. ಒಂದು ತುಪಾಕಿಯಿಂದ ಒಂದು ಮನುಷ್ಯನನ್ನು ಕೊಲ್ಲುವುದು.. ದೂರದಿಂದ .. ಅದು ನಿಜಕ್ಕೂ ಸಾಹಸವಲ್ಲವೇ ಅಲ್ಲ. ಎರಡು ಕಣ್ಣುಗಳನ್ನು ಮುಚ್ಚಿಕೊಂಡು, ಶರೀರವನ್ನು ಸ್ಥಿರವಾಗಿರಿಸಿ, ಮನಸ್ಸನ್ನು ಶೂನ್ಯ ಮಾಡುವ ಕಾರ್ಯಕ್ರಮ.. ಮುಕ್ಕಣ್ಣನಾಗುವ ಕಾರ್ಯಕ್ರಮ .. ಆತ್ಮನನ್ನು ತಂದುಕೊಳ್ಳುವ ಕಾರ್ಯಕ್ರಮ .. ಇದೇ ಮಹಾಸಾಹಸ ಕಾರ್ಯಕ್ರಮ.

 

ಜಯಾಪಜಯಗಳಿಂದಸಂಬಂಧವಿಲ್ಲ”

ಇತರರನ್ನು ಲೆಕ್ಕಿಸದೇ ಆರಿಸಿಕೊಂಡ ಕೆಲಸದಲ್ಲಿ ಮಗ್ನವಾಗುವುದೇ ಒಬ್ಬ ಸಾಹಸಿ, ಒಬ್ಬ ಮಾಸ್ಟರ್ ಲಕ್ಷಣ. ಸಾಹಸಕ್ಕೆ ಜಯಾಪಜಯಗಳಿಂದ ಸಂಬಂಧವಿಲ್ಲ. ಎಲ್ಲಾ ಮಾಸ್ಟರ್ಸ್ ಸಾಹಸವನ್ನು ಅಭ್ಯಸಿಸುತ್ತಾ ಇರುತ್ತಾರೆ. ಇತರರಿಗಾಗಿ ಮಾಸ್ಟರ್ಸ್ ಜೀವಿಸುತ್ತಿಲ್ಲ. ತಮಗಾಗಿಯೇ ಮಾಸ್ಟರ್ಸ್ ಜೀವಿಸುತ್ತಿದ್ದಾರೆ.

ಸಾಹಸವನ್ನು ಬಯಸುವವರು ಸಾಹಸದಲ್ಲಿ ಜೀವಿಸುತ್ತಾರೆ. ವಿಜಯವಾ? ಅಪಜಯವಾ? ಅದು ಅವರಿಗೆ ಸಂಬಂಧವಿಲ್ಲ. ಅವರ ಸಂಬಂಧ ಏನಿದ್ದರೂ ಸಾಹಸದಿಂದ ಫಲವಿದೆಯಾ? ಇಲ್ಲವಾ? ಎನ್ನುವುದಷ್ಟೇ. ಸಾಹಸದಿಂದಲೇ ಸಂಬಂಧ.

* * *

ಫ್ರೆಂಡ್ಸ್, ಸಾಹಸಗಳಲ್ಲಿ ಸಾಹಸ ಧ್ಯಾನ. ಸಾಹಸದ ಹೆಸರೇ ಧ್ಯಾನ. ಧ್ಯಾನವೇ ಸಾಹಸ. ಸಾಹಸ ಪಶುಪತಿ ಜೀವನ. ಸಾಹಸ ಇಲ್ಲದಿರುವುದು ಪಶು ಜೀವನ. ಪಶುವಿಗೆ ಪಶುಪತಿಗೆ ವ್ಯತ್ಯಾಸವೇ ಸಾಹಸ.

 

ಧ್ಯಾನದಲ್ಲಿಕೂಡಾಭಯವೇನಾ?”

ಶ್ವಾಸಾನುಸಂಧಾನ ಮಾಡಿದರೆ ಮನಸ್ಸು ಶೂನ್ಯವಾಗುತ್ತದೆ. ಭಯಪಟ್ಟರೇ ಸಾಹಸವಿರುವುದಿಲ್ಲ. ಎಲ್ಲೋ ಕಣಿವೆಯಲ್ಲಿ ಬೀಳುತ್ತಿರುವ ಹಾಗೇ ಇರುತ್ತದೆ. ಎಲ್ಲೋ ಮೇಲಕ್ಕೆ ಹಾರಿ ಹೋಗುತ್ತಿರುವ ಹಾಗೆ ಇರುತ್ತದೆ. ಭಯಪಟ್ಟರೆ ಸಾಹಸವಿಲ್ಲವಲ್ಲ. ಧ್ಯಾನದಲ್ಲಿ ಕೂಡಾ ಭಯವೇನಾ ? ಭಯ ಏಕೆ ? ಮುಂದಕ್ಕೆ ಸಾಗುತ್ತಾ ಭಯವನ್ನು ನಿರ್ಭಯ ಮಾಡಿಕೊಂಡರೇ, ಕ್ರಮೇಣ ಅಸಾಹಸ ಎನ್ನುವುದು ಸಾಹಸವಾಗಿ ಬದಲಾಗುತ್ತದೆ. ಫ್ರೆಂಡ್ಸ್, ಧ್ಯಾನದಿಂದ ನಾವು ಸಾಹಸವಂತರಾಗುತ್ತೇವೆ. ಧ್ಯಾನದಿಂದ ಹೊರಬಂದ ಮೇಲೆ ನಾವು ಸಾಹಸಗಳಿಂದ ಜೀವಿಸುತ್ತೇವೆ.

* * *

ಧ್ಯಾನ ಎನ್ನುವ ಅತ್ಯಂತ ಸಾಹಸಕರವಾದ ಕಾರ್ಯಕ್ರಮದಲ್ಲಿ ನಾವಿದ್ದೇವೆ. ಸಾಹಸದಿಂದಲೇ ಆತ್ಮ ಮುನ್ನಡೆಯುತ್ತದೆ. ಅಸಾಹಸದಿಂದ, ಭಯದಿಂದ ಆತ್ಮ ಕುಸಿದು ಬೀಳುತ್ತದೆ. ನಾವು ಶರೀರವಲ್ಲ ಆತ್ಮ. ಆತ್ಮ ಎನ್ನುವುದು ಸಾಹಸದಿಂದಲೇ ಪ್ರಗತಿಪಧದಲ್ಲಿ ಪಯನಿಸುತ್ತದೆ.

 

ಸಾಹಸಕ್ಕೆಸಲಾಮ್”

ಈ ಸಾಹಸ ಕಾರ್ಯಕ್ರಮ ದಿನನಿತ್ಯದ ಕಾರ್ಯಕ್ರಮವಾಗಬೇಕು. ಮಾಡಿಕೊಳ್ಳಬೇಕು. ಪ್ರತಿ ತಂದೆ, ತಾಯಿ ತಮ್ಮ ಮಕ್ಕಳಿಗೆ ಈ ಸಾಹಸ ಕಾರ್ಯಕ್ರಮವನ್ನು … ಈ ಧ್ಯಾನ ಕಾರ್ಯಕ್ರಮವನ್ನು ಬೋಧಿಸಬೇಕು. ತಂದೆ ತಾಯಂದಿರು ಮಕ್ಕಳಿಗೆ ಸಾಹಸವನ್ನು ಬೋಧಿಸಬೇಕು. ಅದು ತಂದೆ ತಾಯಂದಿರ ಹೊಣೆಗಾರಿಕೆ. ಯಾವಾಗ ನಾವು ಶರೀರವಲ್ಲ ಆತ್ಮ ಎಂದು ತಿಳಿದುಕೊಳ್ಳುತ್ತೇವೊ, ಸಾಹಸ ಸಹಜವಾಗುತ್ತದೆ. ಸಾವು ಇಲ್ಲ ಎಂದು ತಿಳಿದುಕೊಂಡಾಗ ಸಾಹಸ ಒಂದು ಸಾಮಾನ್ಯ ಪ್ರಯೋಗವಾಗುತ್ತದೆ. ಶರೀರ ತಾತ್ಕಾಲಿಕ, ಆತ್ಮ ಶಾಶ್ವತ ಎಂದು ತಿಳಿದುಕೊಂಡಾಗ ಸಾಹಸ ಒಂದು ಉತ್ಸಾಹಕರವಾದ ಕಾರ್ಯಕ್ರಮವಾಗುತ್ತದೆ.

ಸಾಹಸಕ್ಕೆ ನಮ್ಮ ಸಲಾಮ್. ಸಾಹಸಕ್ಕೆ ನಮ್ಮ ಅಭಿನಂದನೆ. ಸಾಹಸ ಮಾಡುವವರೆಲ್ಲರಿಗೂ, ಆ ಸಾಹಸಪರರೆಲ್ಲರಿಗೂ, ಪರಾಕ್ರಮಿಗಳೆಲ್ಲರಿಗೂ ನಮಸ್ಸುಮಾಂಜಲಿಗಳು …