“ಸಹನೆಯೇ .. ಪ್ರಗತಿ”
“ಸಹನೆ” ಎನ್ನುವುದು ಮಹಾನ್ ಪ್ರಗತಿಯ ಸೂತ್ರ
“ಸಹನೆ” ಎಂದರೆ ಎಷ್ಟೇ ಕಷ್ಟ ಬಂದರೂ ಶಾಂತವಾಗಿ ಸಹಿಸಿಕೊಳ್ಳುವಿಕೆ
“ಸಹನೆ” ಎಂದರೆ ಇಷ್ಟವಿಲ್ಲದಿದ್ದರೂ ಶಾಂತವಾಗಿ ಸಹಿಸಿಕೊಳ್ಳುವಿಕೆ
ಕರ್ಮ ಸಿದ್ಧಾಂತವನ್ನು ತಿಳಿದುಕೊಂಡವರಿಗೆ ಸಹನೆಯು ಸಹಜವಾಗಿಯೇ ಬರುತ್ತದೆ
“ನಮ್ಮಿಂದಲೇ ನಮಗೆ ಕಷ್ಟಗಳು .. ನಮ್ಮಿಂದಲೇ ನಮಗೆ ಸಮಸ್ಯೆಗಳು” ಎಂದು ತಿಳಿದುಕೊಂಡಾಗ ಸಹಜವಾಗಿಯೇ ನಮ್ಮಲ್ಲಿ ಸಹನೆ ಉದ್ಭವಿಸುತ್ತದೆ
ಪ್ರಾಪಂಚಿಕ ವಿದ್ಯೆಗಳನ್ನು ಕಲಿಯುತ್ತಿದ್ದಾಗ ..
ಪ್ರಾಪಂಚಿಕ ಕಲೆಗಳಲ್ಲಿ ಮತ್ತು ಕ್ರೀಡೆಗಳಲ್ಲಿ ವಿಜೃಂಭಿಸಬೇಕು ಎಂದಾಗ ..
ಸಹನೆಯಿಂದ ಕೂಡಿದ ಸಾಧನೆಯ ಅವಶ್ಯಕತೆ ಬಹಳಷ್ಟು ಇದೆ
ಧೀರರು ಕೊನೆಯವರೆಗೂ ಸಹನೆಯನ್ನು ಬಿಡದೇ, ವಿಜಯಿಯಾಗುತ್ತಾರೆ
ಆಧ್ಯಾತ್ಮಿಕವಾಗಿ ಕೂಡಾ ಧ್ಯಾನಸಾಧನೆ ಮಾಡಬೇಕೆಂದರೂ ಸಹ ಬಹಳ “ಸಹನೆ” ಬೇಕು
ಧ್ಯಾನಸಾಧನೆ ಶುರುಮಾಡಿದಾಗ
ಸುತ್ತಮುತ್ತಲು ಇರುವ ಜನರಿಂದ ತುಂಬಾ ವಿರೋಧಗಳನ್ನು ಎದುರಿಸಬೇಕಾಗಿ ಬರುತ್ತದೆ
ಲಿಂಗ – ಶರೀರದಲ್ಲಿ ಅಡಗಿರುವ ಹಾಲಾಹಲವು ಹೊರಗೆ ಬರುತ್ತದೆ
ಎಲ್ಲವನ್ನೂ ಸಹನೆಯಿಂದಲೇ ಸಹಿಸಬೇಕು
ಮನೆಯನ್ನು ಶುಭ್ರಗೊಳಿಸಿದಾಕ್ಷಣವೇ ಹಬ್ಬವಾಗುವುದಿಲ್ಲ!
ಹೇಡಿಗಳು ಅಸಹನೆಯ ಕಾರಣದಿಂದ ಸಾಧನೆಯನ್ನು ಬಿಟ್ಟು ಯೋಗಭ್ರಷ್ಟರಾಗುತ್ತಾ ಇರುತ್ತಾರೆ
ಹಾಗಾಗಿ ಅವರು ಪರಾಜಯದ ಪಾಲಾಗುತ್ತಿದ್ದಾರೆ
ಸಾಕಷ್ಟು ಸಹನೆಯಿದ್ದರೆ ಮಾತ್ರವೇ ಯೋಗಭ್ರಷ್ಟತನದಿಂದ ತಪ್ಪಿಸಿಕೊಳ್ಳಬಲ್ಲೆವು
“ಸಂಸಾರದಲ್ಲಿ ಇದ್ದುಕೊಂಡೇ ನಿರ್ವಾಣ ಹೊಂದಬೇಕು” ಅಂದರೆ
ಹಿಮಾಲಯದಷ್ಟು “ಸಹನೆ” ಇರಬೇಕು!
ಎಲ್ಲಾ ಕಷ್ಟಗಳನ್ನೂ ಸಹಿಸಿಕೊಳ್ಳುತ್ತಾ
ಜೀವನದ ಗಮ್ಯಕ್ಕೆ, ಜೀವನ ಪರ್ಯಂತ, ಸಂಪೂರ್ಣವಾಗಿ ಅಂಕಿತವಾಗುವುದೇ “ಸಹನೆ”
ಶಿರಡಿ ಸಾಯಿನಾಥರು ಸಹನೆಯನ್ನು “ಸಬೂರಿ” ಎಂದಿದ್ದಾರೆ
ಶಿರಡಿ ಸಾಯಿ ಯಾವಾಗಲೂ “ಶ್ರದ್ಧ”, “ಸಬೂರಿ” ಎನ್ನುತ್ತಿದ್ದರು
ಪ್ರತಿ ಅವಮಾನದಲ್ಲೂ, ಪ್ರತಿ ಅಪಹಾಸ್ಯದಲ್ಲೂ, ಪ್ರತಿ ಸೋಲಿನಲ್ಲೂ
ಪ್ರತಿ ಅಡೆತಡೆಯಲ್ಲೂ ಮತ್ತು ಪ್ರತಿ ಸಂಘರ್ಷಣೆಯಲ್ಲೂ ಸಹನೆಯನ್ನು ಅನುಸರಿಸಬೇಕು
ಶ್ರೀಕೃಷ್ಣನು ಶಿಶುಪಾಲನ ಮೇಲೆ 100ರಲ್ಲಿ 99ನೆಯ ಬಾರಿಯೂ ಸಹನೆಯನ್ನು ಅನುಸರಿಸಿದನು
ರಾಮಾಯಣದಲ್ಲಿ ಸೀತಾರಾಮರ ಸಹನೆ, ಸುಗ್ರೀವನ ಸಹನೆ
ಮಹಾಭಾರತದಲ್ಲಿ “ಪಾಂಡವರ ಸಹನೆ” ಮಾನವಕುಲಕ್ಕೆ ವಿಶಿಷ್ಟವಾದ ಉದಾಹರಣೆಗಳು
ಅರಣ್ಯವಾಸ ಮಾಡಲು, ಅಜ್ಞಾತವಾಸ ಮಾಡಲು
ತುಂಬಾ ಸಹನೆ ಇರಬೇಕು!
ಸಂಪೂರ್ಣ ಸಹನೆಯಲ್ಲಿ ಜೀವಿಸುವವನೇ ಒಬ್ಬ “ಮಾಸ್ಟರ್” ಆಗುತ್ತಾನೆ
“ಧ್ಯಾನ” ಎನ್ನುವುದು ನಮಗೆ ಎಷ್ಟೋ ಸಹನೆಯನ್ನು ಕಲಿಸುತ್ತದೆ
“ಧ್ಯಾನ ಪ್ರಚಾರ” ಎನ್ನುವುದು ಇನ್ನೂ ಎಷ್ಟೋ ಸಹನೆಯನ್ನು ಕೊಡುತ್ತದೆ
“ಧ್ಯಾನಪ್ರಚಾರ” ದೀಕ್ಷಾಬದ್ಧರಾದ ಪಿರಮಿಡ್ ಮಾಸ್ಟರ್ಸ್ ಗಳೆಲ್ಲರೂ ಎರಕಹೊಯ್ದ ಸಹನಾ ಮೂರ್ತಿಗಳು!
ಪಿರಮಿಡ್ ಮಾಸ್ಟರ್ಸ್ ಗಳೆಲ್ಲರೂ “ಸಹನೆ”ಯಲ್ಲಿ ಚಕ್ರವರ್ತಿಗಳು
ಕಳೆದ ಇಪ್ಪತ್ತೈದು ವರ್ಷಗಳಿಂದ
ಎಷ್ಟೋ ಸಹನೆಯಿಂದ, ಹಗಲು ರಾತ್ರಿಗಳನ್ನು ಲೆಕ್ಕಿಸದೇ ದೇಶವೆಲ್ಲಾ ತಿರುಗಿ
ಅವಿಶ್ರಾಂತವಾಗಿ ಧ್ಯಾನಪ್ರಚಾರ ಮಾಡುತ್ತಿರುವ ಪಿರಮಿಡ್ ಮಾಸ್ಟರ್ಸ್ ಗಳೆಲ್ಲರಿಗೂ
ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್ ರಜತೋತ್ಸವದ ಸಂದರ್ಭವಾಗಿ
ವಿಶೇಷ ಅಭಿನಂದನೆಗಳು!
ನನ್ನ ಪ್ರಿಯ ಮಾಸ್ಟರ್ಗಳೇ, ನಿಮ್ಮ ಜೀವನಾವಧಿಯ ಉಳಿದ ಅವಧಿಗೆ
ಸಹ ಹೀಗೆಯೇ ಮುಂದುವರೆಯುತ್ತಿರಿ!!
Recent Comments