ಸರಿಯಾದ ಕೆಲಸಗಳು ಮಾಡಿದರೆ ಮಾತ್ರವೇ ’ಪ್ರಗತಿ’
‘ಪ್ರಗತಿ’ ಎಂದರೆ ಸರಿಯಾದ ದಿಕ್ಕಿನಲ್ಲಿ ಪ್ರಯಾಣ, ಸರಿಯಾದ ಕೆಲಸಗಳು ಮಾಡಿದರೆ ಮಾತ್ರವೇ ಪ್ರಗತಿ.
ಸರಿಯಾದ ಕೆಲಸಗಳು ಮೂರು:
ಒಂದು … ಸರಿಯಾದ ತಿಂಡಿ ತಿನ್ನುವುದು
ಎರಡು … ಸರಿಯಾದ ಮಾತುಗಳನ್ನು ಮಾತನಾಡುವುದು
ಮೂರು … ಸರಿಯಾದ ಆಲೋಚನೆಗಳನ್ನು ಮಾಡುವುದು
ಸರಿಯಾಗಿಲ್ಲದ ಕೆಲಸಗಳು ಮಾಡಿದರೇ ದುರ್ಗತಿ, ಅಧೋಗತಿ. ಮಾಂಸಾಹಾರ ಪಾಪಾಹಾರ. ಮನುಷ್ಯನಿಗೆ ತನ್ನ ಶಕ್ತಿಯನ್ನು ತಿಳಿಯದೇ ಇರುವಹಾಗೆ ಮಾಡುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಗೆ ದಾರಿ ತೋರಿಸಿದ ಹಾಗಾಗುತ್ತದೆ. ಸರಿಯಾದ ತಿಂಡಿ ಎಂದರೇ ಸಸ್ಯಾಹಾರ. ನಿಮ್ಮಲ್ಲಿರುವ ಶಕ್ತಿ ಗಮನಿಸಿ. ಡಿಯರ್ ಫ್ರೆಂಡ್ಸ್, ಮಾಂಸಾಹಾರವನ್ನು ತಕ್ಷಣ ತ್ಯಜಿಸಿ.
ಅವರವರ ಜೀವನ ಅವರಿಷ್ಟ. ಇತರರ ಇಷ್ಟ ನಿನ್ನ ಇಷ್ಟ ಆಗುವುದಿಲ್ಲವಲ್ಲ. ನಮ್ಮ ಆಲೋಚನೆಗಳನ್ನು ಸುಗಂಧ ಪರಿಮಳವಾಗಿಸಿಕೊಳ್ಳಬೇಕಾದರೆ ಧ್ಯಾನ ಮಾಡಬೇಕು. ಧ್ಯಾನ ಮಾಡಿದರೆ ಸರಿಯಾದ ವಾಕ್ಕು ಬರುತ್ತದೆ. ಸತ್ಯ ತಿಳಿಯುತ್ತದೆ. ರಮಣ ಮಹರ್ಷಿ ಧ್ಯಾನ ಮಾಡುವುದರಿಂದಲೇ ಸತ್ಯವನ್ನು ತಿಳಿದುಕೊಳ್ಳಲಾಯಿತು.
ಆದ್ದರಿಂದ, ‘ಪ್ರಗತಿ’ ಮಿತ್ರರೇ. ‘ಪ್ರಗತಿ’ ಪಥದಲ್ಲಿ ಮುಂದಕ್ಕೆ ಸಾಗೋಣ, ಶ್ವಾಸವನ್ನು ಗುರುವಾಗಿ ಮಾಡಿಕೊಳ್ಳೋಣ, ಶ್ವಾಸದಮೇಲೆ ಗಮನದಿಂದ ನಾವು ಹೊಂದುವುದೇ ಪ್ರಾಣ ಆಹಾರ … ಅದೇ ಅಮೃತ ಆಹಾರ…
ನಮ್ಮ ವಾಣಿಯಲ್ಲಿ ಒಳ್ಳೆಯ ಮಾತುಗಳು ಹೇಗೆ ಬರುತ್ತವೆ? ಕೇವಲ ಧ್ಯಾನದಿಂದಲೇ ಬರುತ್ತವೆ. ಯಾರು ಧ್ಯಾನ ಮಾಡುವುದಿಲ್ಲವೋ ಅವರ ಬಾಯಿಂದ ಒಳ್ಳೆಯ ಮಾತುಗಳು ಬರುವುದಿಲ್ಲ.
ಯಾರು ಊಟ ಮಾಡುತ್ತಾರೋ ಅವರ ಹೊಟ್ಟೆ ತುಂಬುತ್ತದೆ. ಹಾಗೆಯೇ, ಅವರನ್ನವರೇ ಉದ್ಧರಿಸಿಕೊಳ್ಳಬೇಕು. ಅವರ ವಿದ್ಯಾಭ್ಯಾಸ ಅವರೇ ಮಾಡಬೇಕು. ಯಾರು ಧ್ಯಾನ ಮಾಡುತ್ತಾರೊ ಅವರೇ ಉದ್ಧರಿಸಲ್ಪಡುತ್ತಾರೆ. ಅವರೇ ಸತ್ಯವನ್ನು ತಿಳಿದುಕೊಳ್ಳುತ್ತಾರೆ. ಅವರು ಎಂದಿಗೂ ರೋಗಪೀಡಿತರಾಗುವುದಿಲ್ಲ. ಅವರ ಬುದ್ಧಿ ವಿಕಾಸವಾಗುತ್ತದೆ. ಅವರು ಸನ್ಮಾರ್ಗದಲ್ಲಿ ಪ್ರಯಾಣ ಮಾಡುತ್ತಾರೆ.
Recent Comments