“ಸಮಸ್ಯೆ- ಪರಿಹಾರ”
ಜೀವನದಲ್ಲಿ ನಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಖಂಡಿತಾ ಇರುತ್ತದೆ. ಮತ್ತೆ ಆ ಪರಿಹಾರ ಕೂಡಾ… ನಿಧಾನವಾಗಿ ಹುಡುಕಿದರೆ ನಮ್ಮ ಅಂತರಂಗದಲ್ಲೇ ಅದು ಅಡಗಿರುತ್ತದೆ. ಹೊರಗೆ ಎಲ್ಲೂ ಇರುವುದೇ ಇಲ್ಲ… ಇಲ್ಲ… ಇಲ್ಲ…. ಮತ್ತು ಹೊರಗಿನವರು ಯಾರೂ ನಿಜಕ್ಕೂ ನಮ್ಮ ಸಮಸ್ಯೆಯನ್ನು ಪರಿಹರಿಸಲಾರರು.
ನಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆ ಕೂಡಾ… ನಮ್ಮ ಒಳಗಿಂದ ಒಂದು ಪ್ರಶ್ನೆಯು ಮೂಡುವ ಹಾಗೆ ಮಾಡುತ್ತದೆ ಮತ್ತು ಆ ಪ್ರಶ್ನೆಯೆ… ನಮ್ಮ ಸಮಸ್ಯೆಗೆ ಬೇಕಾದ ಉತ್ತರವನ್ನು ಸಹ ಹುಡುಕಿಕೊಡುತ್ತದೆ. ಅದಕ್ಕೆ……ಸಮಸ್ಯೆಗಳು ಬಂದಾಗಲೆಲ್ಲಾ ನಮ್ಮ ಮನಸ್ಸಿನೊಳಗಿಂದ ಅನೇಕ ಪ್ರಶ್ನೆಗಳು ಮೂಡುತ್ತಿರುತ್ತವೆ. ಯಾವಾಗ ಆ ಎಲ್ಲಾ ಪ್ರಶ್ನೆಗಳಿಗೂ ನಮ್ಮ ಅಂತರಂಗದಿಂದಲೇ ಸರಿಯಾದ ಉತ್ತರಗಳು ಲಭಿಸುತ್ತದೆಯೊ ಆಗ ನಮ್ಮ ಚಿತ್ತ(ಮನಸ್ಸು) ಶಾಂತಗೊಂಡು, ನಾವು ಮಾನಸಿಕ ಕ್ಷೋಭೆಯಿಂದ ಹೊರಬಂದು… ಆ ಸಮಸ್ಯೆಯ ಪರಿಹಾರದ ಕಡೆ ನಮ್ಮ ಭೌತಿಕಪರವಾದ ಕ್ರಿಯೆಗಳನ್ನು ಆರಂಭಿಸುತ್ತೇವೆ. ಯಾವಾಗ ನಾವು ಈ ಸಮಾಧಾನ ಹೊಂದಿರುವ ಮನಸ್ಸಿನಿಂದ ಸಮರ್ಥವಾಗಿ ಕೈಗೊಳ್ಳುತ್ತೇವೆಯೇ, ಆಗ ಆ ಸಮಸ್ಯೆಗೆ ಸಂಪೂರ್ಣವಾದ ಮತ್ತು ಅದ್ಭುತವಾದ ಪರಿಹಾರ ಖಂಡಿತಾ ಸಿಗುತ್ತದೆ.
ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಚಿಕ್ಕ ಚಿಕ್ಕ ಪರಿಹಾರಗಳು, ಮತ್ತು ದೊಡ್ಡ ದೊಡ್ಡ ಸಮಸ್ಯೆಗಳಿಗೆ ದೊಡ್ಡ ದೊಡ್ಡ ಪರಿಹಾರಗಳ ಅವಶ್ಯಕತೆ ಇದೆ. ಚಿಕ್ಕ ಸಮಸ್ಯೆಗಳ ಪರಿಹಾರಕ್ಕೆ ನಮಗೆ ಅಂತಹ ದೊಡ್ಡದಾದ ಧೈರ್ಯದ ಅವಶ್ಯಕತೆ ಇಲ್ಲದಿದ್ದರೂ ದೊಡ್ಡ ದೊಡ್ಡ ಸಮಸ್ಯೆಗಳನ್ನು ಮಾತ್ರ ತಕ್ಕ ಧೈರ್ಯಸ್ಥೈರ್ಯಗಳಿಂದ ಎದುರಿಸಬೇಕು. ಚಿಕ್ಕ ಸಮಸ್ಯೆಗಳ ಪರಿಹಾರಕ್ಕೆ ನಮಗೆ ಸಾಧಾರಣ ಪದ್ಧತಿಯಲ್ಲಿ ಭೌತಿಕ ಪರವಾದ ಕ್ರಿಯೆಗಳು ಸಾಕು. ಆದರೆ… ದೊಡ್ಡ ದೊಡ್ಡ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ “ಆತ್ಮಶಕ್ತಿ”ಯ ಅವಶ್ಯಕತೆ ಅತ್ಯಧಿಕವಾಗಿದೆ. ಇಂತಹ ಸಮಯದಲ್ಲಿ …. ಒಂದು ವೇಳೆ ನಮ್ಮಗಿಂತಾ ಹೆಚ್ಚು ಆತ್ಮಶಕ್ತಿಯನ್ನು ಹೊಂದಿರುವ ಸರಿಯಾದ ಗುರುಗಳು ಏನಾದರೂ ನಮಗೆ ಸಿಕ್ಕಿದರೆ ಮಾತ್ರ……ದೊಡ್ಡ ದೊಡ್ಡ ಸಮಸ್ಯೆಗಳಿಗೆ ಅಲ್ಲದೆ ಅತಿಚಿಕ್ಕ ಸಮಸ್ಯೆಗಳ ಪರಿಹಾರಕ್ಕೆ ಕೂಡಾ ಅವರಿಂದ ನಾವು ಸಹಕಾರವನ್ನು ಕೇಳಬಹುದು.
ಆದರೆ …ಇಲ್ಲಿ ನಿಜವಾದ “ಸಮಸ್ಯೆ” ಏನೆಂದರೆ… ಯಾರಿಗೂ ಸರಿಯಾದ ಗುರುಗಳು ಸಿಗದೇ ಇರುವುದು.
ಇಂತಹ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ನಾವು ಹೊರಗೆ ಯಾರು ಕಾಣಿಸಿದರೆ ಅವರನ್ನೇ “ಗುರುಗಳು” ಎಂದು ನಂಬದೆ… ಧ್ಯಾನದಿಂದ ಶಾಸ್ತ್ರೀಯ ಪದ್ಧತಿಯಲ್ಲಿ ನಮ್ಮ ಅಂತರಂಗದೊಳಗೆ ಪ್ರಯಾಣ ಮಾಡುತ್ತಾ ನಮ್ಮ “ಅಂತರಾತ್ಮ”ನನ್ನೇ ನಮಗೆ ಗುರುವನ್ನಾಗಿ ಆರಿಸಿಕೊಳ್ಳಬೇಕು. ನಿರಂತರ ಧ್ಯಾನ ಸಾಧನೆಯಿಂದ ಆ “ಅಂತರಾತ್ಮ”ದ ಜೊತೆಯಲ್ಲೇ ಅನುಸಂಧಾನವನ್ನು ಹೊಂದುತ್ತಾ.. ಆ “ಅಂತರಾತ್ಮ”ದಿಂದಲೇ ಸಂದೇಶಗಳನ್ನು ಪಡೆಯಬೇಕು. ಒಂದು ವೇಳೆ ಅದೃಷ್ಟ ಚೆನ್ನಾಗಿದ್ದು ನಮ್ಮ ಅಂತರಾತ್ಮಕ್ಕೆ ಪ್ರತಿರೂಪವಾದ ಗುರುಗಳೇನಾದರೂ ಬಾಹ್ಯ ಜಗತ್ತಿನಲ್ಲಿ ಸಿಕ್ಕಿದರೆ …ಇನ್ನು ನಮಗೆ ನಮ್ಮ ಅಂತರಾತ್ಮದಿಂದ ಹೆಚ್ಚು ಕೆಲಸವಿಲ್ಲ.
ಹೀಗೆ ಸಿಕ್ಕಿರುವ ಅಂತರಾತ್ಮಕ್ಕೆ ಪ್ರತಿರೂಪವಾದ ನಿಜವಾದ ಗುರುಗಳು ನಮ್ಮ ಅಂತರಾತ್ಮದ ಬಾಹ್ಯರೂಪವೇ. ಆದ್ದರಿಂದ, ಅಂತಹ ಗುರುಗಳ ಬೋಧನೆಗಳನ್ನು, ನಮಗೆ ಅರ್ಥವಾದರೂ, ಆಗದೆ ಇದ್ದರೂ ಸರಿಯೇ, ಮರುಮಾತನಾಡದೇ ಅನುಸರಿಸಬೇಕಾದ್ದೇ. ಏಕೆಂದರೆ, ಗುರುಗಳ ಮೂಲಕ ಬರುವುದೆಲ್ಲಾ ನಮ್ಮ ಅಂತರಾತ್ಮದ ಪ್ರಬೋಧಗಳೇ ಆದ್ದರಿಂದ, ಇಂತಹ ಗುರುಬೋಧನೆಗಳು ನಮಗೆ…. ನಮ್ಮ ತ್ವರಿತ ಪರಿಹಾರಗಳಿಗೆ ಒಂದು ಹತ್ತಿರದ ಮಾರ್ಗವೇ ಸರಿ.
“ಧ್ಯಾನ” ನಮ್ಮಲ್ಲಿರುವ ಆತ್ಮಶಕ್ತಿಯನ್ನು ಹೆಚ್ಚಿಸಿ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು, ಮತ್ತು ಬುದ್ಧಿಕುಶಲತೆಯಿಂದ ನಮ್ಮ ಸಮಸ್ಯೆಗಳನ್ನು ಸಾವಧಾನವಾಗಿ ಎದುರಿಸುವ ಸ್ಥಿರಚಿತ್ತವನ್ನು ನೀಡುತ್ತದೆ. ಅದರಿಂದ, ನಾವು ನಮಗೆ ಸಮೀಪದಲ್ಲಿರುವ ಭೌತಿಕಪರವಾದ ಸಂಪನ್ಮೂಲಗಳ ಜೊತೆ ನಮ್ಮ ಆತ್ಮಕ್ಕೆ ಇರುವಂತಹ ಅನಂತ ಶಕ್ತಿಗಳನ್ನು ಕೂಡಾ ಸೇರಿಸಿಕೊಂಡು ಸಮಸ್ಯೆಯನ್ನು ಇನ್ನೂ ಹೆಚ್ಚು ಸಮರ್ಥವಾಗಿ ಎದುರಿಸಬಲ್ಲೆವು. ಆಗ ಸೋಲು, ಗೆಲುವುಗಳನ್ನು ಪಕ್ಕಕ್ಕೆ ಇಟ್ಟರೆ. “ನಿಜವಾಗಲೂ ಸಮಸ್ಯೆಯ ಬಗ್ಗೆ ನಾವು ಯಾವ ರೀತಿಯಲ್ಲಿ ಅರಿವು ಸಾಧಿಸಿದ್ದೇವೆ” ಎಂಬುವುದರ ಮೇಲೆ “ಫಲಿತ” ಎಂಬುವುದು ಆಧಾರಪಟ್ಟಿರುತ್ತದೆ.
ಇಲ್ಲಿ ತಿಳಿದುಕೊಳ್ಳಬೇಕಾದ ಪರಮಸತ್ಯ ಏನೆಂದರೆ…. ಯಾವಗುರುವಾದರೂ ಕೂಡಾ ಬೇರೆ (ಇತರರ) ಯಾರ ಸಮಸ್ಯೆಯನ್ನೂ ತನ್ನ ಭುಜದ ಮೇಲೆ ಹಾಕಿಕೊಳ್ಳುವುದಿಲ್ಲ. ಆದರೆ… ಆ ಸಮಸ್ಯೆಗಳ ಕುರಿತು ನಮಗೆ ಶಾಸ್ತ್ರೀಯವಾದ ದಿಕ್ಕನ್ನು, ಮಾರ್ಗವನ್ನು ತೋರಿಸಿಕೊಡುತ್ತಾನೆ ಬೇಕಾದ ಧೈರ್ಯವನ್ನು ನೀಡುತ್ತಾನೆ. ಅಷ್ಟೇ ವಿನಹ ಸಮಸ್ಯೆಗಳು ಮಾತ್ರ ಅವರವರೇ ಪರಿಹರಿಸಿಕೊಳ್ಳಬೇಕು. ಏಕೆಂದರೆ, ನಮ್ಮ ಸಮಸ್ಯೆಗಳ ಯುದ್ಧಗಳು, ನಮಗೆ ಇದ್ದಹಾಗೆ.. ಗುರುಗಳಿಗೂ ಸಹ ಅವರ ಸಮಸ್ಯೆಗಳ ಯುದ್ಧಗಳು ಸಹ ಅವರ ಮಟ್ಟದಲ್ಲಿ ಅವರಿಗೆ ಇರುತ್ತವೆ. “ಜೀವನ ವೆಂದರೇನೆ… “ಒಂದು ಕ್ರೀಡಾರಂಗ, ಅಥವಾ ರಣರಂಗ” ಅದಕ್ಕೆ ಆದಿ, ಅಂತ್ಯವಿಲ್ಲ. ಅಲ್ಲಿ ಅವರವರೇ ಒಬ್ಬಂಟಿಯಾಗಿ ಹೊರಾಡಬೇಕಾದ್ದೆ.
ಆತ್ಮಜ್ಞಾನ ಇಲ್ಲದೇ ಇರುವವರಿಗೆ ಜೀವನವೆಂದರೆ “ಒಂದು ದುರ್ಭರವಾದ ಭೀಭತ್ಸಕರವಾದ ಯುದ್ಧ”ದ ಹಾಗೆ ಕಾಣುತ್ತದೆ. ಮತ್ತು ಅದೇ ಜೀವನ ಒಬ್ಬ ಆತ್ಮಜ್ಞಾನಿಗೆ “ತನ್ನ ಆತ್ಮೋನ್ನತಿಗಾಗಿ ಆಡುವ ಒಂದು ಮಹಾಕ್ರೀಡೆ, ಆಟ”ದ ಹಾಗೆ ಅನಿಸುತ್ತದೆ. ಯಾವಾಗ ನಾವು ಪೂರ್ತಿಯಾಗಿ ಪ್ರಾಪಂಚಿಕದಲ್ಲಿ ಮುಳುಗಿ ಆತ್ಮಜ್ಞಾನದ ಲೋಪದಿಂದ ಕೂಡಿ “ಜೀವನ ಎಂಬುವುದು ಒಂದು ಆಟ ಮಾತ್ರವೇ” ಎಂಬುವ ವಿಷಯ ಮರೆತು ಹೋಗುತ್ತೇವೋ… ಇನ್ನೂ ಆಗ ನಮಗೆ ಎದುರಾಗುವ ಸಮಸ್ಯೆಗಳು, ಸವಾಲುಗಳು ನಮಗಿಂತಾ ದೊಡ್ಡದಾಗಿ ಭೂತಗಳ ಹಾಗೆ ನಮ್ಮನ್ನು ಹೆದರಿಸುತ್ತವೆ. ಅದೇ ನಾವು ಸರಿಯಾದ ಆಧ್ಯಾತ್ಮಿಕ ದಾರಿಯಲ್ಲಿ ಪಯಣಿಸುತ್ತಾ ಆತ್ಮಜ್ಞಾನ ಪ್ರಕಾಶಕರ ಹಾಗೆ ಸಮಸ್ಯೆಗಳ ಬಗ್ಗೆ ಒಳ್ಳೆಯ ಅರಿವಿನಿಂದ ನಡೆದುಕೊಂಡರೆ… ಸಮಸ್ಯೆಗಳೆಲ್ಲಾ ನಮಗಿಂತಾ ಚಿಕ್ಕ ಚಿಕ್ಕದಾಗಿ ಬದಲಾಗಿ, ಅವುಗಳು ಪರಿಹಾರಗೊಂಡು ನಮಗೆ ತುಂಬಾ ಆನಂದವನ್ನು ಆತ್ಮ ವಿಶ್ವಾಸವನ್ನು ನೀಡುತ್ತವೆ.
“ನಾನು ಸ್ವರ್ಗಾಧಿಪತಿಯಾದ ದೇವನ ಪುತ್ರನು”ಎನ್ನುತ್ತಾರೆ ಜೀಸಸ್. ಅಂದರೆ, “ನಾನು ಸ್ವರ್ಗನಿಯಮಗಳಿಂದ ಕೂಡಿಕೊಂಡಿರುವ ಒಬ್ಬ ಗುರುಗಳ ಒಬ್ಬ ಶಿಷ್ಯ” ಎಂದು ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾರೆ.
ಇಲ್ಲಿ “ಸ್ವರ್ಗ” ಎಂದರೆ ಒಂದು ಪ್ರದೇಶ, ಅಥವಾ ಸ್ಥಳವಲ್ಲ. “ಸ್ವರ್ಗ” ಎಂದರೆ ಆತ್ಮದ ಸ್ಥಿತಿ. ಮತ್ತೆ “ಗುರುವು” ಎಂದರೆ ಅಂತಹ ಸ್ವರ್ಗಸ್ಥಿತಿಯಲ್ಲಿರುವ ಒಬ್ಬ ಪುರುಷೋತ್ತಮನು! “ಸ್ವರ್ಗ” ಎಂದರೆ ಎಲ್ಲಾ ಆನಂದವೇ. ಯಾರು ತಮ್ಮ ಅಂತರಾತ್ಮಕ್ಕೆ ಪ್ರತಿರೂಪವಾದ ಗುರುಗಳ ಜೊತೆ ಸೇರಿ ಸದಾ ಇರುತ್ತಾರೋ ಅವರು ಸ್ವರ್ಗದಲ್ಲಿ ಇದ್ದಹಾಗೆ!
ನಮ್ಮ ಅಂತರಾತ್ಮಕ್ಕೆ ಪ್ರತಿರೂಪವಾದ ಸರಿಯಾದ ಗುರುವು ಎಂದರೆ ಸ್ವರ್ಗ ಕಲೆಯನ್ನು ಚೆನ್ನಾಗಿ ಪೂರ್ಣವಾಗಿ ಹಿಡಿದುಕೊಂಡ ಸ್ವರ್ಗಾಧಿಪತಿ. ಆದ್ದರಿಂದ, ನಾವೆಲ್ಲರೂ ಕೂಡಾ ಸ್ವರ್ಗಾಧಿಪತಿ ರಾಜಕುಮಾರರ ಹಾಗೆ ಇರೋಣ… ಮತ್ತೂ ನಮ್ಮ ಶ್ವಾಸರೂಪದಲ್ಲಿರುವ ನಮ್ಮ ಗುರುಗಳ ಜೊತೆ ಇದ್ದು ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳೋಣ.
Recent Comments