“ಶ್ರೀ ಲಂಕ ಧ್ಯಾನಯಾತ್ರೆಯಲ್ಲಿ ಕಾನ್ಸೆಪ್ಟ್‌ಗಳು“
೧. ದ್ವಿಪಾದ ಕ್ರೂರಮೃಗಗಳು : ಅಂದರೆ, ಮಾಂಸಭಕ್ಷಕರು, ಕ್ರೂರ ಕರ್ಮ ಮಾಡುವವರು.
೨. ದ್ವಿಪಾದ ಪಶುಗಳು : ಸಸ್ಯಾಹಾರಿಗಳು. ಆದರೆ, ಮೂರ್ತಿ ಪೂಜೆಗಳು ಮಾಡುವವರು. ಸ್ವಾರ್ಥಪರರು.
೩. ದ್ವಿಪಾದ ಮಾನವರು : ಸಸ್ಯಾಹಾರಿಗಳು. ಕಲ್ಲುಗಳಲ್ಲಿ ಅಲ್ಲದೇ ಮಾನವರಲ್ಲಿ ದೈವತ್ವವನ್ನು ದರ್ಶಿಸುತ್ತಾ ನಿಸ್ವಾರ್ಥ ಸಮಾಜ ಸೇವಾತತ್ಪರರು.
೪. ದ್ವಿಪಾದ ದೇವತೆಯರು : ಧ್ಯಾನಿಗಳು. ’ನಾನು ಯಾರು’ ಎಂಬುವ ಜಿಜ್ಞಾಸೆವುಳ್ಳವರು. ತಾತ್ವಿಕ ಪ್ರಜ್ಞೆಯಲ್ಲಿದ್ದು ಪರಲೋಕ ಚಿಂತನೆ ಮಾಡುವವರು.
೫. ದ್ವಿಪಾದ ದೇವರುಗಳು : ಜ್ಞಾನಿಗಳು. ಆತ್ಮಾನುಭವಜ್ಞರು. ಆತ್ಮ-ಪರಮಾತ್ಮರ ಏಕತ್ವವನ್ನು ಗುರ್ತಿಸಿಲಾಗುವವರು. ಸಮದರ್ಶಕರು.
* * *
“ನೀವು ಯಾವ ವರ್ಗಕ್ಕೆ ಬರುತ್ತೀರೊ ನೀವೇ ಗುರುತು ಹಾಕಿಕೊಳ್ಳಿ. ಕ್ರೂರ ಮೃಗಗಳಾ, ಪಶುಗಳಾ, ಮಾನವರಾ, ದೇವತೆಗಳಾ, ದೇವರುಗಳಾ ?
ಧ್ಯಾನ ಸಾಧಕರು ಮಾಂಸಾಹಾರವನ್ನು ವಿಸರ್ಜಿಸಲೇಬೇಕು. ನಿಮ್ಮ ಹೊಟ್ಟೆಯನ್ನು ಸ್ಮಶಾನಗಳಾಗಿ ಬದಲಾಯಿಸಿಕೊಳ್ಳುವಿರಾ ?
* * *
ಕೋಳಿಮೊಟ್ಟೆ ? … ಮೊಟ್ಟೆ ಬೇರೆ, ಕೋಳಿ ಬೇರೇನಾ? ನಿಮ್ಮ ಶರೀರ ಬೇರೆ, ಬಾಯಿಲ್ಲದ ಮೂಕಜೀವಿಗಳ ಶರೀರ ಬೇರೇನಾ? ಎಲೆಯನ್ನು ಕತ್ತರಿಸಿದರೆ ಎಲೆ ಪುನಃ ಚಿಗುರುತ್ತದೆ. ಕತ್ತು ಕುಯ್ದರೇ ಕತ್ತು ಪುನಃ ಬೆಳೆಯುತ್ತದೆಯೇ ? ನಿಸ್ಸಾರ ಸಂದೇಹಗಳನ್ನು ಬಿಡಿ. ಮನುಷ್ಯ ಎಂಬುವವನು ಸಸ್ಯಾಹಾರಕ್ಕೇ ಉದ್ದೇಶಿಸಲ್ಪಟ್ಟಿರುವವನು. ಮನೋವಾಕ್ಕಾಯಕರ್ಮಣಾ ಯಾವರೀತಿಯಾದ ಹಿಂಸೆಯನ್ನೂ ಮಾಡಬಾರದು. ಬುದ್ಧಿಯಿರುವವನು ತಾಳ್ಮೆಯನ್ನು ಕಳೆದುಕೊಳ್ಳಬಾರದು. ಯಾವ ರೀತಿಯಾದ ಹಿಂಸೆಯೂ ತಕ್ಕದ್ದಲ್ಲ. ”
” ಹಿಂಸಿಸಿದರೆ ದಾನವನು
ಹಿಂಸೆ ಬಿಟ್ಟರೆ ಮಾನವನು
ಹಂಸವನ್ನು ಹಿಡಿದರೆ ದೇವನು”
“ಪ್ರಾಣಿಹಿಂಸೆ ಮಹಾಪಾಪ. ರೇಷ್ಮೆ ಸೀರೆಗಳನ್ನು ಉಟ್ಟರೂ ಪಾಪವೇ … ಹೌದು, ರೇಷ್ಮೆ ಹುಳಗಳನ್ನು ಕೊಂದರೇನೆ ರೇಷ್ಮೆ ದಾರ ಬರುವುದು. ಹಿಂಸೆಯಿಂದಲೇ ಅಶಾಂತಿ. ಅಹಿಂಸೆ ಆತ್ಮ ಶಾಂತಿಗೆ ಆಧಾರ. ಹೊಟ್ಟೆ ತುಂಬಿಸಿಕೊಳ್ಳಲು ಒಂದು ಹಿಡಿ ಅನ್ನ ಸಾಕು. ಅದಕ್ಕಾಗಿ ಪ್ರಾಣಿಗಳನ್ನು ಕೊಂದು ತಿನ್ನಬೇಕೆ ?
ಇನ್ನು “ಎಷ್ಟು ತಿನ್ನಬೇಕು ?” ಎಂದರೆ ಹಿತವಾದದ್ದು, ಪೋಷಣೆ ನೀಡುವಂತದ್ದು, ನಮ್ಮ ಶರೀರಕ್ಕೆ ಅನುಕೂಲವಾಗಿರುವುದು ಮಿತವಾಗಿ, ಹಸಿವೆ ಇರುವಷ್ಟು, ನಿಯಮಿತ ಸಮಯದಲ್ಲಿ ತಿನ್ನಬೇಕು!
“ಮೂರು ಹೊತ್ತು ತಿಂದರೆ ರೋಗಿ
ಎರಡು ಹೊತ್ತು ತಿಂದರೆ ಭೋಗಿ
ಒಂದು ಹೊತ್ತು ತಿಂದರೆ ಯೋಗಿ”
* * *
“ಸ್ಪಿರಿಚ್ಯುವಾಲಿಟಿ ಅಂದರೆ ಏನು?”
“ಆಧ್ಯಾತ್ಮಿಕತೆ … ಅಥವಾ ಸ್ಪಿರಿಚ್ಯುವಾಲಿಟಿ … ಅಂದರೆ ನಮ್ಮಲ್ಲಿರುವ ಆತ್ಮದ ಜೊತೆ ಅನುಸಂಧಾನಿಸಿಕೊಳ್ಳುವ ಅನುಭವವೇ (Experiencing the Soul)”.
* * *
ಧ್ಯಾನವೆಂದರೆ ಶ್ವಾಸದ ಮೇಲೆ ಗಮನ ನಿಲ್ಲಿಸುವುದು. ಮನಸ್ಸನ್ನು ಶೂನ್ಯ ಮಾಡುವುದು ಅಂದರೆ ಆಲೋಚನಾರಹಿತ ಸ್ಥಿತಿಯಲ್ಲಿ ಇಡುವುದೇ ಧ್ಯಾನ … ಧ್ಯಾನದಿಂದಲೇ ಆಧ್ಯಾತ್ಮಿಕತೆ ಲಭಿಸುತ್ತದೆ. ಆತ್ಮಜ್ಞಾನ, ಆತ್ಮಾನುಸಂಧಾನ ಸಾಧ್ಯವಾಗುತ್ತದೆ. ಬೀಜದಲ್ಲಿ ಮರ ಅಡಗಿದೆ. ಆ ಬೀಜಕ್ಕೆ ನೀರು ಹಾಕಿದರೇನೆ ಅದು ಮೊಳಕೆ ಒಡೆಯುತ್ತದೆ. ಹಾಗೆಯೇ, ಜೀವಿಯಾಗಿ ಶರೀರಧಾರಿಣಿಯಾದ ಈ ಆತ್ಮ ಪರಮಾತ್ಮವಾಗಿ ಪರಿಣಿತಿ ಹೊಂದಬೇಕಾದರೆ ಧ್ಯಾನ ಜಲದಿಂದ ಅದು ನೆನೆಯಬೇಕು. ಬಿದಿರಿನಬೊಂಬು ತನ್ನಲ್ಲಿರುವ ವ್ಯರ್ಥ ಪದಾರ್ಥವನ್ನು ತೊಲಗಿಸಿ ನವರಂಧ್ರಗಳನ್ನು ತೆಗೆದಿಟ್ಟಾಗಲೇ ಬಿದುರು ಕೊಳಲಾಗಿ ಮತ್ತು ಮಾಧವನ ತುಟಿಗಳ ಹತ್ತಿರ ಸೇರಿ ಮುಗ್ಧ ಗೀತೆಗಳನ್ನು ಪಡೆಯಬಲ್ಲದು. ಹಾಗೆಯೇ, ನಿನ್ನನ್ನು ನೀನು ಶೂನ್ಯ ಮಾಡಿಕೊಂಡರೆ ಆತ್ಮನಾದ ಕೇಳಿಸುತ್ತದೆ. ನಿನ್ನಲ್ಲಿರುವ ಅಹಂನು (ದೇಹವೇ ನಾನೆಂಬುವ ಸೀಮಿತ ಸ್ಥೂಲ ಭಾವನೆ) ಶೂನ್ಯ ಮಾಡಿಕೊಂಡರೇ ಉಳಿದಿದ್ದೆಲ್ಲಾ ಆತ್ಮ ಚೈತನ್ಯವೆ. ಸರ್ವಂ ಶಕ್ತಿಮಯ, ಸರ್ವಂ ಏಕತ್ವ. ಸತ್ಯ, ನಿತ್ಯ, ಶಕ್ತಿಮಯ.
ಶೂನ್ಯದಲ್ಲೇ ಶಕ್ತಿಪ್ರಸಾರ ನಡೆಯುತ್ತದೆ. ಶ್ವಾಸದ ಮೇಲೆ ಗಮನ ನಿಲ್ಲಿಸಿ ಮಿದುಳು ಯೋಚನಾರಹಿತ ಮಾಡಿದ ತಕ್ಷಣ ವಿಶ್ವಶಕ್ತಿ ಬ್ರಹ್ಮ ರಂಧ್ರದಿಂದ ಅಖಂಡವಾಗಿ ಪ್ರವೇಶಿಸಿ ನಿನ್ನೊಳಗೆಲ್ಲಾ ತುಂಬುತ್ತದೆ. ಎಲ್ಲಾ ಒಂದೇ ಪೂರ್ಣತ್ವ. ನೀನು ಅದೇ. ನಾನು ಅದೇ. ಅದು ಅದೇ. ಎಲ್ಲಾ ಅದೇ ಎಂಬುವ ವಿಶ್ವ ಸ್ವರೂಪ ದೃಷ್ಟಿ ಅವತರಿಸುತ್ತದೆ. ಅಖಂಡವಾದ ಸರ್ವವ್ಯಾಪಕವಾಗಿ ಪ್ರಕಾಶಿಸುವ ಆ ಅನಂತಶಕ್ತಿ ವೈವಿಧ್ಯೆ ಸೃಜನಾತ್ಮಕ ಪ್ರದರ್ಶನವೇ ಈ ಸೃಷ್ಟಿ ಸಮಸ್ತ. ಈ ವ್ಯಕ್ತಪ್ರಪಂಚ ಸ್ವರೂಪ. ಸಚೇತನವಾಗಿರುವ ಪುಷ್ಪಗಳೆಲ್ಲವನ್ನೂ ಒಂದು ದಿವ್ಯ ಹಾರವಾಗಿ ಕೂಡಿಸುವ ದಾರ. ಎಲ್ಲಾ ಶೂನ್ಯವೇ.
ವಿಜ್ಞತೆ (ಜ್ಞಾನ)+ಸಮರ್ಥತೆ (ದಕ್ಷತೆ)+ಅಪ್ರಮತ್ತತೆ (ಜಾಗರೂಕತೆ)=ಬುದ್ಧತ್ವ
” ಧ್ಯಾನದಿಂದ ವಿಜ್ಞತೆ ಲಭಿಸುತ್ತದೆ.
ಸಮರ್ಥತೆಯಿಂದ ಜೀವನ ಧರ್ಮವನ್ನು ಆಚರಿಸಬೇಕು.
ಜಾಗರೂಕತೆಯಿಂದ ಸರ್ವತ್ರಾ ವ್ಯವಹರಿಸಬೇಕು.”
ಅದರಲ್ಲೇ ಇದೆ ಜೀವನದ ವಿಜಯ ರಹಸ್ಯ. ಆ ರೀತಿಯಾಗಿ ಧ್ಯಾನ ಸಾಧನೆಯಿಂದ ಸತ್ಯ ಜ್ಞಾನವನ್ನು ಹೊಂದಿ ಸನ್ಮಾರ್ಗದಲ್ಲಿ ವರ್ತಿಸುವವರಾಗಿ ಜಾಗರೂಕತೆಯಿಂದ ವ್ಯವಹರಿಸುವವರನ್ನು ವಿಜಯ ಅವರನ್ನು ಬಯಸಿ ವರಿಸುತ್ತಾಳೆ. ಅವರಿಗೆ ದೀನಂ, ಭಯ, ನಿತ್ರಾಣ, ನಿಸ್ಪೃಹೆ, ರೋಗ, ತೊಂದರೆ, ಅಶಾಂತಿ, ಅಪಜಯ ಏಕಿರುತ್ತವೆ? ಶಾಂತಿ, ವಿಶ್ರಾಂತಿ ಅವರಿಗೆ ಅತಿಸುಲಭವಾಗಿ ಸಿಗುವಂತದ್ದು. ಅವರ ವ್ಯವಹಾರದಲ್ಲಿ ’ ವ್ಯರ್ಥ ’ ಎಂಬುವುದು ಇರುವುದಿಲ್ಲ. ಪ್ರತಿಕ್ಷಣ ಹಬ್ಬವೇ. ಅತ್ಯಂತ ಜಾಗರೂಕತೆಯಿಂದ ಇದ್ದು ತಾನು ಮಾಡಬೇಕಾದ ವಿಧಿ ಯೋಗಗಳನ್ನು ಕುರಿತು ಪೂರ್ಣ ವಿಜ್ಞಾನವನ್ನು ಸಂಪಾದಿಸಿ ಜೀವನದ ಅವಕಾಶಗಳನ್ನು, ಸಂಪನ್ಮೂಲಗಳನ್ನು ವಿವೇಕದಿಂದ ಸಮರ್ಥವಂತವಾಗಿ ವಿನಿಯೋಗಿಸಿ ತ್ರಿಕರಣ ಶುದ್ಧಿಯಿಂದ ವ್ಯವಹರಿಸುವವರಿಗೆ ಯಾವ ಕೆಲಸವಾದರು ’ ಕಷ್ಟ ’ವಲ್ಲ. ಯಾವುದೂ ’ಭಾರ’ವಲ್ಲ. ಯಾವ ರೀತಿಯಾದ ’ ಬಾಧೆ ’ ಅನುಭವಿಸುವುದಿಲ್ಲ. ವಿಜಯದ ಬಗ್ಗೆ ವಿಶ್ವಾಸದಿಂದ ವಿಶ್ರಾಂತಿಯಾಗಿ, ನಿಶ್ಚಿಂತೆಯಿಂದ, ನಿಸ್ಸಂದೇಹವಾಗಿ, ನಿಶ್ಚಲದಿಂದ ಇರಬಲ್ಲರು.
ಆದ್ದರಿಂದ, ಜೀವನದಲ್ಲಿ ನಿಜವಾದ ಶಾಂತಿಯನ್ನು ವಿಶ್ರಾಂತಿಯನ್ನು ಬಯಸುವವರು … ವಿಜ್ಞತೆ, ಸಮರ್ಥತೆ, ಅಪ್ರಮತ್ತತೆ ಎಂಬುವ ತ್ರಿಸಾಧನೆಗಳನ್ನು ಅಭ್ಯಸಿಸಬೇಕು. ಸೋಂಭೇರಿಗಳಿಗೆ, ಮೂರ್ಖರಿಗೆ, ಅವಿಶ್ವಾಸಿಗಳಿಗೆ ಪ್ರಕೃತಿ ಕೆಟ್ಟ ಫಲಗಳನ್ನೇ ನೀಡುತ್ತದೆ.
ವಿಷಯವನ್ನು ತೀವ್ರವಾಗಿ ವಿಚಾರಣೆ ಮಾಡಿ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ಹಾಗೆ ಸಂಪಾದಿಸಿದ ವಿಷಯ ಪರಿಜ್ಞಾನವನ್ನು ನಿಜ ಜೀವನದಲ್ಲಿ ಆಚರಣೆ ಮಾಡಬೇಕು. ಪ್ರಯೋಗ ಮಾಡಿಕೊಂಡು ಅದರಿಂದ ನಿಶ್ಚಿತವಾದ ಅನುಭವಜ್ಞಾನವಾಗಿ ಅದನ್ನು ದೃಢೀಕರಿಸಿಕೊಳ್ಳಬೇಕು. ಆಗಲೇ ಅದನ್ನು ಕುರಿತು ಮಾತನಾಡುವ ಹಕ್ಕು, ಪ್ರಚಾರ ಮಾಡುವ ಯೋಗ್ಯತೆ ದೊರೆಯುತ್ತದೆ. ಪರಿಪೂರ್ಣ ಅವಗಾಹನೆ, ಆಚರಣೆಯಿಲ್ಲದ ವಾಕ್‌ಪ್ರಚಾರ ಸಾರಹೀನ. ಸತ್ಯದೂರ. ವ್ಯರ್ಥ ಪ್ರಸಂಗ ವ್ಯಾಸಂಗವಾಗಿ ಉಳಿಯುತ್ತದೆ. ಅದರ ಪ್ರಭಾವ ಶೂನ್ಯ. ಅದಕ್ಕೆ ವಿಜ್ಞತೆ ಬೇಕಾಗಿದೆ. ಆಚರಣೆಯಲ್ಲಿ ಸಮರ್ಥತೆ, ಜಾಗರೂಕತೆ … ’ ಸಿಂಹಾವಲೋಕನ ’ ಎನ್ನುತ್ತಾರೆ. ಮುನ್ನೋಟ, ಹಿಂಜರಿಕೆ ಎಂದರೆ ಪ್ರಮಾದಗಳು ಬರದೇ ಲಭಿಸಿದ ಪ್ರಂiಜನಗಳು ಕೈಜಾರಿಹೋಗದೆ ಇರುವುದೇ ಜಾಗರೂಕತೆ. ಆಗಲೇ ಕಾರ್ಯಾನುಕೂಲತೆ ಸಾಧ್ಯವಾಗುತ್ತದೆ. ಕಾರ್ಯ ವಿಜಯ. ರಕ್ಷಣೆ, ಸಂಕ್ಷೇಮ ಎಂಬುವುದು ಮಾನವ ಸಮಾಜದ ಎರಡು, ಮುಖ್ಯ ಗುರಿಗಳಲ್ಲವೆ. ಅದಕ್ಕೆ ಎಲ್ಲರೂ ವಿಜ್ಞಾನ, ಆಚರಣೆ, ಜಾಗರೂಕತೆಯ ಸಾಧನೆಯನ್ನು ಸಾಧಿಸಬೇಕು.
ಧ್ಯಾನಸ್ಥಿತಿಯಲ್ಲಿ ಕುಳಿತುಕೊಂಡಿರುವ ಬುದ್ಧಮೂರ್ತಿ ಶಿವಪಾರ್ವತಿ ತತ್ವ. ಅಂದರೆ, ಧ್ಯಾನದಿಂದ ಜ್ಞಾನ ಸಿದ್ಧಿ … ನಿಶ್ಚಲವಾಗಿ ನಿಂತಿರುವ ಬುದ್ಧಮೂರ್ತಿ ಕಾರ್ಯೋನ್ಮುಖತೆಗೆ, ಸೃಜನಾತ್ಮಕತೆಗೆ ಪ್ರತೀಕವಾಗಿ ಬ್ರಹ್ಮ ವಾಗೇಶ್ವರೀ ಸ್ವರೂಪ. ಅಂದರೆ, ಸಮರ್ಥತೆಗೆ, ಕಾರ್ಯಾಚರಣೆಗೆ ಚಿಹ್ನೆ. ಆ ರೀತಿಯಾಗಿ ಹಾಲಿನ ಸಮುದ್ರದ ಹಾಗೆ ಸ್ವಚ್ಛತೆಯಿಂದ, ಜಾಗರೂಕತೆಯಿಂದ, ಪ್ರಣಾಳಿಕ ಪ್ರಕಾರವಾಗಿ, ಕಾಲಕ್ಕೆ ತಕ್ಕಹಾಗೆ ಕಾರ್ಯಸಾಧನೆ ಮಾಡಿದರೇ ಆಮೇಲೆ ಪಡೆಯುವುದು ನಿಶ್ಚಯವಾಗಿ ವಿಶ್ರಾಂತಿ, ವಿರಾಮಗಳೆ. ಅದೇ ಹಾಲಿನ ಸಮುದ್ರದಲ್ಲಿ ಶೇಷತಲ್ಪದ ಮೇಲೆ ನಿಶ್ಚಿಂತೆಯಿಂದ ಮುಕ್ತ ಮನಸ್ಸುಳ್ಳವನಾಗಿ ಯೋಗನಿದ್ರಾವಶನಾಗಿ ಮಲಗಿರುವ ವಿಷ್ಣುತತ್ವ. ಅಂತವನಿಗೆ ಸಿರಿ ದಾಸಿಯಾಗುತ್ತದೆ. ವಿಜಯ ಬಯಸಿ ಬಾಗಿಲು ತಟ್ಟುತ್ತದೆ. ಅದೇ ಮಲಗಿರುವ ಬುದ್ಧ ಶಿಲ್ಪದಲ್ಲಿರುವ ತತ್ವ ರಹಸ್ಯ. ಅದೇ ಮುಕ್ತ ಸ್ಥಿತಿ. ಸಮಾಧಿ ಸ್ಥಿತಿ. ಎಲ್ಲಾ ಇರುವ ಪೂರ್ಣತ್ವ … ಯಾವುದಕ್ಕೂ ತಾಪತ್ರಯಪಾಲಾಗದ ಪ್ರಶಾಂತ ತತ್ವ … ಎಲ್ಲಾ ಇದ್ದರೂ ಯಾವುದನ್ನೂ ಬಯಸದ ನಿಷ್ಕಾಮ ತತ್ವ, ನಿರ್ಮಲ ತತ್ವ, ನಿಶ್ಚಲ ತತ್ವ, ಜೀವನ್ಮುಕ್ತಿ. ಜೀವಂತವಾಗಿರುವಾಗಲೇ ಅಂತಹ ಮಾನಸಿಕ, ಬುದ್ಧಿ ಪರಿಣಿತಿಯನ್ನೂ, ಪರಿಪಕ್ವತೆಯನ್ನೂ ಹೊಂದಬೇಕು. ಕೋರಿಕೆಯಿಂದಲ್ಲದೆ ಕರ್ತವ್ಯತಾ ದೃಷ್ಟಿಯಿಂದ ಕಾರ್ಯ ನಿರ್ವಹಣೆ ಮಾಡುವವರಿಗೆ ಯಾವ ತಾಪತ್ರಯವೂ ಇರುವುದಿಲ್ಲ. ಯಾವ ನಿರಾಸೆ ನಿಸ್ರ್ಪಹೆಗಳಿರುವುದಿಲ್ಲ. ಎಲ್ಲಾ ವಿಷಯಗಳಲ್ಲೂ ತೃಪ್ತರಾಗಿರುತ್ತಾರೆ. ಅಂತಹವರ ಯೋಚನೆಗಳು, ವಾಕ್ಕುಗಳು, ಕರ್ಮಗಳು ಎಲ್ಲಾ ಹಿತಕರವಾಗಿಯೇ ಇರುತ್ತವೆ. ಆತ್ಮಹಿತವು, ಲೋಕಹಿತವು ಸಹ ಆಗಿರುತ್ತವೆ.
Recent Comments