” ಶಕ್ತಿ ವಿನಿಮಯ ವಿಧಿವಿಧಾನ .. ‘ E – ಕಾನ್ಸೆಪ್ಟ್ ’ “
ಶಕ್ತಿ .. ಅಂದರೆ Energy ಎನ್ನುವುದು .. Existence .. Evolution .. Experiment .. Experience .. Expression .. Enlightenment .. Enjoyment .. ಎನ್ನುವ ಏಳು ರೂಪಗಳಲ್ಲಿ ನಮ್ಮ ಜೀವನವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾ ಇರುತ್ತದೆ.
1. Existence ಅಸ್ತಿತ್ವ .. ಇರುವಿಕೆ :
“ಈ ಸುವಿಶಾಲ ವಿಶ್ವದಲ್ಲಿರುವ ಅನೇಕಾನೇಕ ಲೋಕಗಳಿಗೆ ಸೇರಿದ ನಾವೆಲ್ಲಾ ಸಹ ಪ್ರಸ್ತುತ ಈ ಭೂಗ್ರಹದ ಮೇಲೆ ಜನ್ಮಗಳನ್ನು ಪಡೆದ ಸರ್ವಶಕ್ತರಾದ ಶುದ್ಧ ಚೈತನ್ಯಸ್ವರೂಪರು” ಎನ್ನುವ ನಮ್ಮ ಅಸ್ತಿತ್ವವನ್ನು .. ನಾವು ಸದಾ ಅರಿವಿನಲ್ಲಿ ಇಟ್ಟುಕೊಳ್ಳಬೇಕು.
2. Evolution .. ವಿಕಾಸದ ಹಾದಿ :
“ಅನೇಕಾನೇಕ ನಕ್ಷತ್ರಲೋಕಗಳು, ಗ್ರಹ, ಉಪಗ್ರಹ ಕಕ್ಷೆಗಳೊಂದಿಗೆ, ಸೌರಮಂಡಲಗಳು, ಅನೇಕಾನೇಕ ಕ್ರಿಯೆಗಳು, ಸೋಜಿಗಳಿಂದ ತುಂಬಿರುವ ನಮ್ಮ ಸುವಿಶಾಲ ವಿಶ್ವ .. ವಿಕಾಸದ ಹಾದಿಯಲ್ಲಿ ಸಾಗುವ ಕಾರಣ ನಿರಂತರ ಬದಲಾವಣೆಗಳನ್ನು ಆಹ್ವಾನಿಸುತ್ತಾ .. ಪ್ರಗತಿಯ ದಿಕ್ಕಿನಲ್ಲಿ ಮುಂದಕ್ಕೆ ಸಾಗುತ್ತಾ ಇರುತ್ತದೆ.”
ಹಾಗೆ ವಿಶ್ವಜೀವಿಗಳಾದ ನಾವು ಸಹ .. ಪ್ರತಿಕ್ಷಣ ನಮ್ಮ ಜೀವನದಲ್ಲಿ ನಡೆಯುವ ಬದಲಾವಣೆಗಳನ್ನು ಆತ್ಮಪೂರ್ವಕವಾಗಿ ಆಹ್ವಾನಿಸುತ್ತಾ ಇರಬೇಕು.
ಒಂದು ಪಿಂಡ .. ಬಾಲಕನಾಗಿ, ಯುವಕನಾಗಿ, ಮಧ್ಯವಯಸ್ಕನಾಗಿ ಮತ್ತೆ ವೃದ್ಧನಾಗಿ .. ಹೀಗೆ ಅನೇಕ ರೀತಿಯಲ್ಲಿ ಅಭಿವೃದ್ಧಿ ಹೊಂದಿದ ಹಾಗೆ .. ಒಂದು ಆತ್ಮವು ಕೂಡಾ ಅನೇಕಾನೇಕ ಅನುಭವಗಳ ಜ್ಞಾನದಿಂದ .. ಶೈಶಾತ್ಮವಾಗಿ .. ಬಾಲಾತ್ಮವಾಗಿ .. ಯೌವ್ವನಾತ್ಮವಾಗಿ .. ವೃದ್ಧಾತ್ಮವಾಗಿ .. ಮಹಾತ್ಮವಾಗಿ ಮತ್ತು ಪೂರ್ಣಾತ್ಮವಾಗಿ ಆಧ್ಯಾತ್ಮಿಕ ವಿಕಾಸದ ಹಾದಿಯಲ್ಲಿ ಅಭಿವೃದ್ಧಿ ಹೊಂದುತ್ತಲೇ ಇರುತ್ತದೆ. ಹೀಗಾದಾಗಲೇ ನಮ್ಮ ಆತ್ಮಕ್ಕೆ ಪ್ರಗತಿಯು ಉಂಟಾಗುತ್ತಾ ಇರುತ್ತದೆ.
3. Experiments.. ಪ್ರಯೋಗಗಳು :
“ಪ್ರಯೋಗಗಳನ್ನು ಮಾಡುತ್ತಿದ್ದರೆ ಮಾತ್ರವೇ ನಮಗೆ ಹೊಸ ಹೊಸ ವಿಷಯಗಳು ತಿಳಿಯುತ್ತಿರುತ್ತದೆ! ಈಗ ನಾವು ಉಪಯೋಗಿಸುತ್ತಿರುವ ವಸ್ತುಗಳು, ಸೌಕರ್ಯಗಳು ಮತ್ತು ಒಂದು ಟೆಕ್ನಾಲಜಿ ಎಲ್ಲಾ ಕೂಡಾ ಹಾಗೇ ನಮ್ಮ ಪ್ರಯೋಗಳ ಮೂಲಕ ಪಡೆದವುಗಳೇ. ಇದೆಲ್ಲಾ ಭೌತಿಕ ಜಗತ್ತಿಗೆ ಸಂಬಂಧಿಸಿದ್ದು !
“ಆದರೆ .. ವಿಶ್ವಲೋಕ ಜೀವಿಗಳಾದ ನಾವು ನಮ್ಮ ಭೌತಿಕವಾದ ಪ್ರಯೋಗಗಳ ಜೊತೆ ಆಧ್ಯಾತ್ಮಿಕ ಪ್ರಯೋಗಗಳನ್ನು ಕೂಡಾ ಮಾಡುತ್ತಲೇ ಇರಬೇಕು. ದಿವ್ಯಚಕ್ಷು, ಸೂಕ್ಷ್ಮಶರೀರಗಳನ್ನು ಬಳಸಿ ಶಾಸ್ತ್ರೀಯವಾದ ಧ್ಯಾನ ಪ್ರಯೋಗಗಳನ್ನು ಮಾಡಿ ಉನ್ನತಲೋಕಗಳ ಜ್ಞಾನವನ್ನು ಹೊಂದಬೇಕು !”
4. Experiences.. ಅನುಭವಗಳು
“ಬಗೆಬಗೆಯ ಭೌತಿಕ ಮತ್ತು ಆಧ್ಯಾತ್ಮಿಕ ವಿಜ್ಞಾನಶಾಸ್ತ್ರದ ಪ್ರಯೋಗಗಳ ಮೂಲಕ ನಾವು ಅನೇಕಾನೇಕ ಅನುಭವಗಳನ್ನು ಪಡೆಯುತ್ತೇವೆ! ಆ ಅನುಭವಗಳ ಸಾರಾಂಶದ ಆಧಾರದಿಂದ .. ’ಒಳ್ಳೆಯದು – ಕೆಟ್ಟದ್ದು’ .. ’ಮಾಡಬೇಕಾದ್ದು – ಮಾಡಬಾರದ್ದು’ .. ’ಸರಿಯಾದದ್ದು – ಸರಿಯಲ್ಲದ್ದು’ ಎನ್ನುವ ವಿಷಯಗಳಿಗೆ ಸಂಬಂಧಿಸಿದ ’ಜ್ಞಾನವನ್ನು’ ಹೊಂದುತ್ತೇವೆ !
5. Expressions .. ಅಭಿವ್ಯಕ್ತಿಗಳು :
“ಬಗೆ ಬಗೆಯ ಪ್ರಯೋಗಗಳನ್ನು ಮಾಡಿ ಅನುಭವಕ್ಕೆ ತಂದುಕೊಂಡ ಜ್ಞಾನವನ್ನು ನಾವು ಸರಿಯಾದ ರೀತಿಯಲ್ಲಿ ಅಭಿವ್ಯಕ್ತಿಸಬಲ್ಲವರಾಗಬೇಕು! ಆಗಲೇ ಅದು ಹತ್ತಾರು ಜನಕ್ಕೆ ಉಪಯೋಗವಾಗುವ ಸಿದ್ಧಾಂತವಾಗಿ ರೂಪುಗೊಳ್ಳುತ್ತದೆ. ಶಾಸ್ತ್ರೀಯವಾದ ಮತ್ತು ಸಂದರ್ಭೋಚಿತವಾದ ಆಲೋಚನೆಗಳು, ಮಾತುಗಳು, ಕರ್ಮಗಳು ಮತ್ತು ಪುಸ್ತಕ ಪ್ರಕಟಣೆಗಳು ಇವುಗಳೇ ಅಂತಹ ಅಭಿವ್ಯಕ್ತಿಗಳಿಗೆ ಉದಾಹರಣೆಗಳು.”
6. Enlightenment .. ದಿವ್ಯಜ್ಞಾನಪ್ರಕಾಶ :
“ಅನೇಕಾನೇಕ ಬಗೆಯ ಪ್ರಯೋಗಗಳನ್ನು ಮಾಡಿ ಹೊಂದಿದ ಅನುಭವಜ್ಞಾನದಿಂದ ನಮ್ಮಲ್ಲಿರುವ ಚೈತನ್ಯ ಅನಂತವಾಗಿ ವಿಸ್ತಾರವಾಗಿ ಹರಡಿ .. ಈ ಸಕಲ ಚರಾಚರ ಸೃಷ್ಟಿಯಲ್ಲಿರುವ ’ಏಕತ್ವ’ ಎಲ್ಲಾ ನಮಗೆ ಅನುಭೂತಿಯಾಗುತ್ತದೆ. ಅನಂತ ಕಾಲದಿಂದ ಪ್ರಯಾಣ ಮಾಡುತ್ತಿರುವ ಆತ್ಮಸ್ವರೂಪರಾದ ನಮಗೆ ’ಸಾವು’ ಎನ್ನುವುದು ಇಲ್ಲವೇ ಇಲ್ಲ ಎನ್ನುವ ಸತ್ಯವು ಅನುಭವದ ಮೂಲಕ ಅರಿವಿಗೆ ಬರುತ್ತದೆ.”
7. Enjoyment .. ಆನಂದ :
“’ಸತ್ಯ’ ಎನ್ನುವುದು ಅನುಭವಕ್ಕೆ ಬಂದ ನಂತರ ಇನ್ನು ಅರ್ಥವೇ ಇಲ್ಲದ ಭಯಗಳು, ಆತಂಕಗಳು, ಅಜ್ಞಾನಗಳು ಮತ್ತು ಮೂರ್ಖತನಗಳು ಎನ್ನಲಾಗುವ ಸಕಲ ದುಃಖಗಳಿಂದ ನಾವು ವಿಮುಕ್ತಿ ಹೊಂದುತ್ತೇವೆ! ಪ್ರತಿಕ್ಷಣ ಅತ್ಯಂತ ಅರಿವಿನಿಂದ ಜೀವಿಸುವುದರಲ್ಲಿ ಇರುವ ಆನಂದವನ್ನು ಆಸ್ವಾದಿಸುತ್ತಾ .. ಶಕ್ತಿಯುತವಾಗಿ, ರಸವತ್ತಾಗಿ ಮತ್ತು ಜ್ಞಾನವನ್ನು ಹೊಂದಿದವರಾಗಿ ನಮ್ಮ ಜೀವನವನ್ನು ಹಬ್ಬದಂತೆ ಆಚರಿಸುತ್ತೇವೆ.
Recent Comments