” ಮೌನದ ಮೌಲ್ಯ “
ದಿನಾಂಕ : 11-11-13 .. ಸ್ಥಳ : ಬೋಧನ್ನ ಸಾವಿತ್ರೀದೇವಿ ಪಿರಮಿಡ್ ಧ್ಯಾನಮಂದಿರ.
ಅಲ್ಲಿ ಪಿರಮಿಡ್ ಮಾಸ್ಟರ್ಗಳ ಸಮಾವೇಶ ನಡೆಯಿತು.
ಪತ್ರೀಜಿಯವರ 66ನೆಯ ಜನ್ಮದಿನದ ಸಂಭ್ರಮಗಳು ನಡೆದವು : ಆಗ,
ಕರೀಂನಗರದ ಸೀನಿಯರ್ ಪಿರಮಿಡ್ ಮಾಸ್ಟರ್ K.ವಾಣಿ :
“ಪತ್ರೀಜಿ! ನಾವು ಇನ್ನೂ ಮುಂದೆ ಸಾಗಬೇಕೆಂದರೆ ಇನ್ನೂ ಏನು ಮಾಡಬೇಕು?”
ಎಂದು ಕೇಳಿದರು.
ಮೌನ ದೀಕ್ಷೆಯಲ್ಲಿದ್ದ ಪತ್ರೀಜಿ ಹೀಗೆ ಬರೆದು ತೋರಿಸಿದರು:
“ದಿನಕ್ಕೆ ಕನಿಷ್ಠ ಒಂದು ಗಂಟೆ ಧ್ಯಾನವನ್ನು ಕಡ್ಡಾಯವಾಗಿ ಮಾಡಬೇಕು ..
ಪ್ರತಿದಿನವೂ ಒಂದು ಹೊಸ ಪುಸ್ತಕ ಓದಬೇಕು ..
ಪ್ರತಿದಿನವೂ ನಮಗೆ ತಿಳಿದುದ್ದನ್ನು ಒಬ್ಬರಿಗಾದರೂ ಹೇಳಬೇಕು ..
ಪ್ರತಿದಿನವೂ ಒಂದು ಗಂಟೆ ಮೌನವನ್ನು ಆಚರಿಸಬೇಕು ..
ಪ್ರತಿದಿನವೂ ಒಂದು ಗಂಟೆ ಗಿಡಗಳ, ಸಸಿಗಳ ಆರೈಕೆ ಮಾಡಬೇಕು ..
ಪ್ರತಿದಿನವೂ ಒಂದು ಹೊಸ ಅಡುಗೆ ಕಲಿತುಕೊಳ್ಳಬೇಕು ..
ಪ್ರತಿದಿನವೂ ಇಂಟರ್ನೆಟ್ನಿಂದ
PSSM ನಲ್ಲಿ
ನಡೆಯುತ್ತಿರುವ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಾ ಇರಬೇಕು ..
ದಿನಕ್ಕೆ ಒಂದು ಆಧ್ಯಾತ್ಮಿಕ ಸಿನಿಮಾ ನೋಡಬೇಕು ..
ಪ್ರತಿದಿನವೂ ಒಂದು ಗಂಟೆ ಮನೆಯ ಕೆಲಸಗಳನ್ನು ನಿರ್ವಹಿಸಬೇಕು ..
ಪ್ರತಿದಿನವೂ ಪರಿಚಯವಿಲ್ಲದ ಹತ್ತುಮಂದಿ ವ್ಯಕ್ತಿಗಳನ್ನು ಗಮನಿಸುತ್ತಾ ಇರಬೇಕು ..
ದಿನಕ್ಕೆ ಒಂದು ಭಗವದ್ಗೀತೆ ಶ್ಲೋಕವನ್ನು ಅರ್ಥದೊಂದಿಗೆ ಬಾಯಿಪಾಠ ಮಾಡಿಕೊಳ್ಳಬೇಕು ..”
ಗೋದಾವರಿ ಸೀನಿಯರ್ ಪಿರಮಿಡ್ ಮಾಸ್ಟರ್ ಕೆ.ಅನುರಾಧರವರು :
“ಮೌನವನ್ನು ಏಕೆ ಆಚರಿಸಬೇಕು? ಅದರಿಂದ ಲಾಭವೇನು?” ಎಂದು ಕೇಳಿದರು ..
ಅದಕ್ಕೆ ಪತ್ರೀಜಿ ಹೀಗೆ ಬರೆದು ತೋರಿಸಿದರು:
“ಮೌನವನ್ನು ಆಚರಿಸಿದಾಗ, ಮೌನವೆಂದರೆ ಏನೆಂದು ಮತ್ತು ಅದರ ಮೌಲ್ಯ ಏನು ಎಂಬುದು
ನಿಮಗೂ ಮತ್ತು ನಿಮ್ಮ ಸಂಗಡಿಗರಿಗೆ ಕೂಡಾ ತಿಳಿಯುತ್ತದೆ..
ಎಷ್ಟು ಜಾಗ್ರತೆಯಿಂದ ಮಾತನಾಡಬೇಕು ಎಂಬುದು ತಿಳಿಯುತ್ತದೆ ..
ದಿನವೂ ಎಷ್ಟೊಂದು ವ್ಯರ್ಥವಾಗಿ ಮಾತನಾಡುತ್ತಿದ್ದೇವೆ ಎಂಬುದೂ ಸಹ ತಿಳಿಯುತ್ತದೆ ..
ಟೆಲಿಪತಿಯ ಶಕ್ತಿ ದ್ವಿಗುಣಗೊಳ್ಳುತ್ತದೆ ..
ದೇಹದ ಪ್ರಾಣಶಕ್ತಿ ವಿಶೇಷವಾಗಿ ಉಳಿತಾಯವಾಗುತ್ತದೆ ..
ವಿವೇಕವನ್ನು ಪ್ರಸಾದಿಸುವ ಬುದ್ಧಿ ಮತ್ತಷ್ಟು ವಿಕಸಿಸುತ್ತದೆ ..
ಧ್ಯಾನವು ಮತ್ತಷ್ಟು ಪ್ರಬಲವಾಗುತ್ತದೆ ..
ನಮ್ಮ ಮೇಲೆ ನಮಗೆ ಗೌರವ ಹೆಚ್ಚುತ್ತದೆ ..
ಮತ್ತಷ್ಟು ಹೆಚ್ಚಾಗಿ ಪುಸ್ತಕಗಳನ್ನು ಓದಬಲ್ಲೆವು ..
ಪ್ರಕೃತಿಯ ಅಂದವನ್ನು ಮತ್ತಷ್ಟು ಹೆಚ್ಚಾಗಿ ನೋಡಬಲ್ಲೆವು!”
Recent Comments