“ಮೋಕ್ಷ”

ಓಂ ಶಾಂತಿ ! ಓಂ ಶಾಂತಿ ! ಓಂ ಶಾಂತಿ !

ಮೂಲಾಧಾರ ಲೋಕ, ಸ್ವಾಧಿಷ್ಠಾನ ಲೋಕ, ಮಣಿಪುರ ಲೋಕ … ಈ ಮೂರು ಲೋಕಗಳಿಗೂ ಶಾಂತಿಃ, ಶಾಂತಿಃ, ಶಾಂತಿಃ ಬೇಕಾಗಿದೆ. ಅದೇ ಓಂ ಶಾಂತಿಃ ಶಾಂತಿಃ ಶಾಂತಿಃ ಮಂತ್ರದ ಅರ್ಥ. ಅದಕ್ಕೆ ಮೂರು ಬಾರಿ ಹೇಳುತ್ತೇವೆ. ಏಕೆಂದರೆ, ಮೂರು ಲೋಕಗಳಿಗೂ ಶಾಂತಿಯ ಅವಶ್ಯಕತೆಯಿದೆ. ಈ ಕೆಳಗಿರುವ ಮೂರು ಲೋಕಗಳನ್ನು ’ ಅಧೋಲೋಕಗಳು ’ ಎನ್ನುತ್ತಾರೆ.

ಮೇಲಿರುವ ಲೋಕಗಳು ಅನಾಹತ ಲೋಕ, ವಿಶುದ್ಧ ಲೋಕ, ಆಜ್ಞಾ ಲೋಕ, ಸಹಸ್ರಾರ ಲೋಕ. ಈ ಲೋಕಗಳಲ್ಲೆಲ್ಲಾ ಶಾಂತಿ ಇದೆ. ಅನಾಹತ ಲೋಕಕ್ಕೆ ಶಾಂತಿ ಇದೆ, ಆದರೆ, ಮೋಕ್ಷ ಇಲ್ಲ. ವಿಶುದ್ಧ ಲೋಕಕ್ಕೆ ಮಹಾಶಾಂತಿ ಇದೆ, ಆದರೆ, ಮೋಕ್ಷ ಇಲ್ಲ. ಆಜ್ಞಾ ಲೋಕಕ್ಕೆ ಆತ್ಮಜ್ಞಾನ ಇದೆ, ಆದರೆ, ಮೋಕ್ಷದ ಒಳಗೆ ಪ್ರವೇಶ ಮಾತ್ರವೇ ಇರುತ್ತದೆ. ಸಹಸ್ರಾರ ಲೋಕಕ್ಕೆ ವಿಶಾಲವಾದ, ವಿಸ್ತಾರವಾದ ಮೋಕ್ಷವಿದೆ.

ಅಖಂಡಮೋಕ್ಷ ಸಾಮ್ರಾಜ್ಯವನ್ನು ಆಳುವವರೇ ಸಹಸ್ರಾರರು. ಅವರೇ ಪಿರಮಿಡ್ ಮಾಸ್ಟರ್ಸ್.

ಮೈಡಿಯರ್ ಫ್ರೆಂಡ್ಸ್ … ಆ ಶಿಖರಾಗ್ರಕ್ಕೆ ತಲುಪಬೇಕಾದರೆ ನಾಸಿಕಾಗ್ರಕ್ಕೆ ತಲುಪಬೇಕು. ನಾಸಿಕ ನಮ್ಮ ಶರೀರದಲ್ಲಿರುವ ಪ್ರಧಾನ ಪಿರಮಿಡ್. ನಾಸಿಕಾಗ್ರ ಎಂದರೆ ಮೊದಲನೆಯ ಅಗ್ರಸ್ಥಾನ. ನಾಸಿಕಾಗ್ರವೇ ಆಜ್ಞಾಚಕ್ರ. ಆಜ್ಞಾಲೋಕವೆಂದರೆ ತ್ರಿನೇತ್ರ … ಈ ಎರಡು ನೇತ್ರಗಳಿಂದ ಕಾಣಿಸುವುದಲ್ಲದೇ ಆಕಡೆ ಇರುವುದನ್ನೂ ತೋರಿಸುವುದು. ಈ ಎರಡು ಕಣ್ಣುಗಳಿಗೆ ಕಾಣಿಸುವುದರ ಮೇಲೆ ಆಧಾರಪಟ್ಟಿರುವ ವಿಶುದ್ಥಚಕ್ರ ಸಹ ಮೋಕ್ಷವನ್ನು ನೀಡುವುದಿಲ್ಲ. ನಾಸಿಕಾಗ್ರಸ್ಥಿತಿಗೆ ಸೇರಿಕೊಂಡ ಆ ಶ್ವಾಸಧಾರೆಯ ಸ್ಪರ್ಶಕ್ಕೆ ಮಾತ್ರವೇ ಮೋಕ್ಷದ್ವಾರ ತೆಗೆದುಕೊಳ್ಳುತ್ತದೆ.

ಆದ್ದರಿಂದ, ಆನಾಪಾನಸತಿ ಧ್ಯಾನದಿಂದ ಎಲ್ಲರೂ ಮೋಕ್ಷ ಸಾಮ್ರಾಜ್ಯವನ್ನು ತಮ್ಮದನ್ನಾಗಿ ಸ್ವಂತ ಮಾಡಿಕೊಳ್ಳಬೇಕು.