ಮೈತ್ರೇಯ ಬುದ್ಧ
ಸಾವಿರ ವರ್ಷಗಳ ಹಿಂದೆ ಅನೇಕಜನ ಮಹಾನುಭಾವರು ಈ ದೇಶದಲ್ಲಿ ಮಾನವ ಚೈತನ್ಯವನ್ನು ಒಂದು ಮಹೋನ್ನತ ಹಂತಕ್ಕೆ ಕೊಂಡೊಯ್ದರು. ಹಾಗೆ, ಪ್ರಸ್ತುತ ಕಾಲದಲ್ಲಿ ಭೂಮಿಯ ಮೇಲಿರುವ ಪುರುಷೋತ್ತಮರಲ್ಲಿ ನಮ್ಮ ಗುರುಗಳಾದ ಪತ್ರೀಜಿ ತುಂಬಾ ಪ್ರತ್ಯೇಕ, ಅನನ್ಯ ಮತ್ತು ವಿಶಿಷ್ಟ. ಅವರನ್ನು ಅರ್ಥಮಾಡಿಕೊಂಡು ಅವರನ್ನು ಅನುಸರಿಸುವುದೆಂದರೆ ಅದು ಅನೇಕ ಜನ್ಮಗಳ ಪುಣ್ಯಫಲ. ಅವರ ಜೀವನದ ಕೆಲವು ವಿಶೇಷ ಘಟನೆಗಳನ್ನು ನಾವು ತಿಳಿದುಕೊಳ್ಳೋಣ.
***
ಪತ್ರೀಜಿ ಅವರು ಜನ್ಮಿಸಲು 11 ತಿಂಗಳ ಮುಂಚೆ ಒಂದು ದಿನ ಅವರ ಅಮ್ಮ, ಅಪ್ಪ ಮನೆಯ ಮುಂದಿರುವ ತೋಟದಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ಒಬ್ಬ ಫಕೀರ “ನಿಮಗೆ ಒಂದು ವಿಷಯ ಹೇಳಬೇಕೆಂದುಕೊಂಡಿದ್ದೇನೆ” ಎಂದರು. ಅವರ ತಂದೆ ಮಾತ್ರ “ನಮಗೆ ಯಾವ ವಿಷಯಗಳೂ ಬೇಡ. ನೀವು ದಯವಿಟ್ಟು ಮುಂದೆ ಹೋಗಬಹುದು” ಎಂದರು. ಆದರೆ, ಅವರ ಅಮ್ಮ ಫಕೀರರನ್ನು ಗೌರವದಿಂದ ಒಳಗೆ ಕರೆದುಕೊಂಡು ಹೋದರು. ‘ಏನು ಹೇಳುತ್ತಾರೋ’ ಎಂದು ಆಸಕ್ತಿಯಿಂದ ಎದುರು ನೋಡುತ್ತಿರುವ ಆ ತಾಯಿಗೆ ಫಕೀರನು ‘ಹನ್ನೊಂದು ತಿಂಗಳಲ್ಲಿ ನಿಮ್ಮ ಮನೆಯಲ್ಲಿ ಒಬ್ಬ ಮಹಾನುಭಾವನು ಜನ್ಮಿಸಲಿದ್ದಾನೆ’ ಎಂದು ಹೇಳಿಹೋದರಂತೆ. ಹಾಗೆ ತಮ್ಮ ಆಗಮನವನ್ನು ತಮ್ಮ ತಂದೆ, ತಾಯಿಗೆ ಮುಂಚಿತವಾಗಿಯೇ ತಿಳಿಸಿದರು ಪತ್ರೀಜಿ.
***
ಪತ್ರೀಜಿಯವರು ದೊಡ್ಡಕ್ಕನ ಕೈಯಲ್ಲಿ ಬೆಳೆದರು, ಚಿಕ್ಕಕ್ಕನ ಹತ್ತಿರ ಒಳಿತನ್ನು ಕಲಿತರು. ಓದಿನ ವಿಷಯದಲ್ಲಿ, ಸಂಗೀತ ವಿಷಯದಲ್ಲಿ ಅಮ್ಮ, ಅಣ್ಣ ಅವರ ಸಲಹೆಗಳನ್ನು, ಆದೇಶಗಳನ್ನು ಪಾಲಿಸಿದರು. ಬಾಲ್ಯದಿಂದಲೇ ಪತ್ರೀಜಿ ಎಲ್ಲ ಮಕ್ಕಳಂತೆ ಇರುತ್ತಿರಲಿಲ್ಲ. ತಮ್ಮ ಜೊತೆ ಮಕ್ಕಳೆಲ್ಲರೂ ಆಡಿಕೊಳ್ಳುತ್ತಿದ್ದರೆ ತಾವು ಮಾತ್ರ ದೂರದಿಂದ ಅವರೆಲ್ಲರನ್ನೂ ಗಮನಿಸುತ್ತಾ ಇರುತ್ತಿದ್ದರು. ತುಂಬಾ ಮೌನವಾಗಿರುತ್ತಿದ್ದರು. ಅವರು ಬಹಿರ್ಮುಖಿಯಾಗಿರಲಿಲ್ಲ (ಎಕ್ಸ್‌ಟ್ರಾವರ‍್ಟ್), ಅವರೊಬ್ಬ ಅಂತರ್ಮುಖಿಯಾಗಿದ್ದರು (ಇಂಟ್ರಾವರ‍್ಟ್) ವಿಶೇಷವಾಗಿ ಅಂತರ್ಮುಖಿಗಳು ಮಿತಭಾಷಿಗಳು. ಚಿಕ್ಕಂದಿನಿಂದಲೇ ಇವರಿಗೆ ತುಂಬಾ ಕೋಪವಿತ್ತು.
***
ಹೈಸ್ಕೂಲ್, ಕಾಲೇಜ್ ದಿನಗಳಲ್ಲಿ, ಓದಿನ ವಿಷಯದಲ್ಲಿ ಅವರಿಗೆ ತಿಳಿದಿದ್ದು ಸ್ನೇಹಿತರಿಗೆ ಹೇಳಲು ಇಷ್ಟಪಡುತ್ತಿದ್ದರು. ರಾಜಕೀಯ ವಿಷಯಗಳಿಂದ ಹಿಡಿದು ಪ್ರತಿಯೊಂದು ವಿಷಯವನ್ನು ಕುರಿತು ಸ್ನೇಹಿತರಿಗೆ ಹೇಳುತ್ತಿದ್ದರು. ಚಿಕ್ಕಂದಿನಿಂದಲೇ ಇತರರಿಗೆ ಸಹಾಯ ಮಾಡುವ ಸ್ವಭಾವವಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವುದರಲ್ಲಿ ಸ್ನೇಹಿತರಿಗೆ ಸಹಾಯ ಮಾಡಿ ಅವರನ್ನು ಉತ್ತೀರ್ಣವಾಗುವಂತೆ ಮಾಡುತ್ತಿದ್ದರು. ಅವರು I.A.S ಗೆ ತಯಾರಿಯಾಗುವಾಗ ನರಸಿಂಹರಾವು ಎನ್ನುವ ಸ್ನೇಹಿತನೊಡನೆ ಓದಿಕೊಳ್ಳುತ್ತಿದ್ದರು, ಮುಂದೆ ಶ್ರೀ ನರಸಿಂಹರಾವು ಅವರು ಓದಿ I.A.S ಆಫೀಸರ್ ಆದರು.
***
ಪತ್ರೀಜಿ 14 ವರ್ಷಗಳ ವಯಸ್ಸಿನಲ್ಲಿದ್ದಾಗ ಒಮ್ಮೆ ಮನೆಗೆ ಯಾರೋ ಬಂದಿದ್ದರು. ಆ ಸಮಯದಲ್ಲಿ ಅವರ ತಾಯಿ ದೋಸೆಗಳನ್ನು ಮಾಡುತ್ತಿದ್ದರೆ ಅವು ತೆಗೆದುಕೊಂಡು ಹೋಗಿ ಆನಂದವಾಗಿ ಉತ್ಸಾಹದಿಂದ ಪತ್ರೀಜಿ ಎಲ್ಲರಿಗೂ ಬಡಿಸಿದ ನಂತರ “ಅಮ್ಮ,ನನಗೆ ದೋಸೆ” ಎಂದು ಕೇಳಿದರು. ಆಗ ಹಿಟ್ಟು ಮುಗಿದಿರುವುದರಿಂದ .. ತಾನು ಮಾತ್ರ ಯಾವ ರೀತಿಯ ಭಾವನೆಗಳು ಇಲ್ಲದೆ ಹೊರಟುಹೋದರು. ಹಾಗೆ ಬಾಲ್ಯದಿಂದಲೂ ಈ ಕ್ಷಣದವರೆಗೂ ಪತ್ರೀಜಿ ತನಗೆ ಇದ್ದರೂ ಇಲ್ಲದಿದ್ದರೂ ಇತರರಿಗೆ ತಿನಿಸುವುದೆಂದರೆ ತುಂಬಾ ಇಷ್ಟ. ಪತ್ರೀಜಿ ಅವರ ಅಮ್ಮನನ್ನು ಕುರಿತು ಹೀಗೆ ಹೇಳುತ್ತಾರೆ: “ಅಮ್ಮನಿಂದ ಅನೇಕ ವಿಷಯಗಳನ್ನು ಕಲಿತುಕೊಂಡಿದ್ದೇನೆ. ಮುಖ್ಯವಾಗಿ ಕಷ್ಟಗಳನ್ನು ಕಿರುನಗುವಿನಿಂದ ಸ್ವೀಕರಿಸುವುದು, ಚೆನ್ನಾಗಿ ಕಷ್ಟಪಡುವುದನ್ನು ಅವರಿಂದ ಕಲಿತುಕೊಂಡಿದ್ದೇನೆ”.
ಪತ್ರೀಜಿ ಅಕ್ಕನವರಾದ ಸುಧಾ ಅವರು 1965ರಲ್ಲಿ ಅವರ ಜನ್ಮದಿನದಂದು … ಅವರ ಅಮ್ಮನವರು ಹೊಸ ಸೀರೆಯನ್ನು ಉಟ್ಟುಕೊಂಡು ಜನ್ಮದಿನ ಆಚರಿಸು ಎಂದರು. ಆ ಸಮಯದಲ್ಲಿ ಪತ್ರೀಜಿ ಅವರ ಪಕ್ಕದಲ್ಲೇ ಇದ್ದರಂತೆ. ಅವರ ಅಮ್ಮನವರ ಎದುರಿಗೆ ಏನೂ ಮಾತನಾಡದೇ, ಆಕೆ ಪಕ್ಕಕ್ಕೆ ಹೋದನಂತರ ಸುಧಾ ಅಕ್ಕನವರನ್ನು ಕುರಿತು ನಿನಗೇನಾದರೂ ಹುಚ್ಚಾ? ಜನ್ಮದಿನ ಅಂದರೆ ನಾವು ಏತಕ್ಕಾಗಿ ಹುಟ್ಟಿದ್ದೇವೆ? ನಮ್ಮ ಹಿಂದಿನ ಜನ್ಮವೇನು? ನಾವು ಈ ಭೂಮಿಯ ಮೇಲೆ ಏತಕ್ಕಾಗಿ ಬಂದಿದ್ದೇವೆ? ಎಂದು ಯೋಚಿಸಬೇಕೆ ವಿನಹ ಹುಟ್ಟಿದ ದಿನ ಯಾವ ಸೀರೆ ಕೊಂಡುಕೊಳ್ಳಬೇಕು? ಎಲ್ಲಿ ಆಚರಿಸಬೇಕು?” ಎಂದು ಚಿಂತಿಸುವುದಲ್ಲ. ಆದರೂ, ನಿನ್ನ ಜನ್ಮದಿನವನ್ನು ಆಚರಿಸಿಕೊಳ್ಳುವುದಕ್ಕಿಂತಾ ನಿನ್ನ ಜನ್ಮದ ಪರಮಾರ್ಥವೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸು ಎಂದರಂತೆ. ಆಗ ಪತ್ರೀಜಿಯವರ ವಯಸ್ಸು ಕೇವಲ 17 ವರ್ಷಗಳು ಮಾತ್ರ. ಇಂತಹ ಗಾಢವಾದ ಆಧ್ಯಾತ್ಮಿಕ ಭಾವನೆಗಳು ಪತ್ರೀಜಿಗೆ ಚಿಕ್ಕಂದಿನಿಂದಲೇ ಇರುತ್ತಿತ್ತು. ಈ ವಿಷಯವನ್ನು ಇವರ ಕುಟುಂಬ ಸದಸ್ಯರು ಅನಂತರ ತಿಳಿದುಕೊಂಡರು.
ಪತ್ರೀಜಿ ಅವರ ಆಧ್ಯಾತ್ಮಿಕ ರಂಗಪ್ರವೇಶವನ್ನು ಕುರಿತು ಹೇಳುತ್ತಾ .. ಬಾಲ್ಯದಿಂದಲೂ ಕೂಡಾ ನನಗೆ ಏನೋ ಮಾಡಬೇಕೆಂದು ಅನಿಸುತ್ತಿತ್ತು. ಅದೇನು ಅಂತ ತಿಳಿಯುತ್ತಿರುತ್ತಿರಲಿಲ್ಲ. ನಮ್ಮ ತಂದೆ, ತಾಯಿಗೂ ಗೊತ್ತಿಲ್ಲ. ನಮ್ಮ ಅಣ್ಣ ವಿದ್ಯಾಭ್ಯಾಸಕ್ಕೆ ಅಮೆರಿಕಾಗೆ ಹೋಗು, I.A.S ಮಾಡು.. ಎನ್ನುತ್ತಿದ್ದರು. ಅದು ನನಗಾಗಿ ಅಲ್ಲ ಅನಿಸುತ್ತಿತ್ತು. ಅಮ್ಮ ಸಂಗೀತ ಕಲಿತುಕೊ ಎಂದರು ಕಲಿತುಕೊಂಡೆ. ಆದರೆ, ಅದು ಸಾಲದು ಅನಿಸಿತು.
“ಮದುವೆ ಮಾಡಿಕೊಂಡೆ. ಹೆಂಡತಿ ತುಂಬಾ ಚೆನ್ನಾಗಿದ್ದಳು. ಆದರೂ ಒಂದು ಸಲ ಚೆನ್ನಾಗಿರುತ್ತಿರಲಿಲ್ಲ. ’ಇನ್ನೂ ಏನೋ ಇದೆ’ ಎನಿಸಿತು. ಆಫೀಸ್‌ನಲ್ಲಿರುವ ಮಿತ್ರ ರಾಮಚೆನ್ನಾರೆಡ್ಡಿಯ ಮೂಲಕ ಈ ಧ್ಯಾನ ಮಾರ್ಗಕ್ಕೆ ಬಂದಿದ್ದೇನೆ. 1977 ರಲ್ಲಿ ರಾಮಚೆನ್ನಾರೆಡ್ಡಿ ಅವರಿಗೆ ವಿಪರೀತವಾಗಿ ಬೆನ್ನುನೋವು ಬಂದಿತು. ಯಾವ ವೈದ್ಯರ ಹತ್ತಿರ ಹೋದರು ಕಡಿಮೆಯಾಗಲಿಲ್ಲ. ತಮಿಳುನಾಡಿನಲ್ಲಿರುವ ವೇಲೂರು ಆಸ್ಪತ್ರೆಯಲ್ಲಿ ಎರಡು ತಿಂಗಳು ಇದ್ದರೂ ಕಡಿಮೆಯಾಗಲಿಲ್ಲ. ಅಲ್ಲಿಂದ ಹಿಂತಿರುಗಿ ಬರುತ್ತಿರುವಾಗ ಬಸ್ಸಿನಲ್ಲಿ ಒಬ್ಬಾತ ‘ಧ್ಯಾನಮಾಡು ನೋವು ಹೋಗುತ್ತೆ’ ಎಂದು ಹೇಳಿದರು. ಅವರು ಯಾರೋ ಗೊತ್ತಿಲ್ಲ. ಅಂದಿನಿಂದ ರಾಮಚೆನ್ನಾರೆಡ್ಡಿಯವರು ಧ್ಯಾನಮಾಡಲು ಪ್ರಾರಂಭಿಸಿದರು. ಅವರಿಗೆ ಧ್ಯಾನ ಮಾಡುವುದೆಂದರೆ ಏನು ಎಂದು ತಿಳಿದಿರಲಿಲ್ಲ. ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಳ್ಳುತ್ತಿದ್ದರು. ನಿದ್ದೆ ಬರದಿದ್ದರೂ ಧ್ಯಾನ ಮಾಡುತ್ತಿದ್ದರು. ಮೂರು ದಿನಗಳಲ್ಲೇ ಬೆನ್ನುನೋವು ಸಂಪೂರ್ಣವಾಗಿ ಕಡಿಮೆಯಾಯಿತು.”
“ಅನಂತರ ಕೆಲವು ದಿನಗಳಲ್ಲಿ ಅನಂತಪುರ ಜಿಲ್ಲೆ ರಾಯದುರ್ಗದಲ್ಲಿರುವ ಒಬ್ಬ ಫೆರ್ಟಿಲೈಜರ್ ಡೀಲರ್, ರಾಮಚೆನ್ನಾರೆಡ್ಡಿಯವರ ಮನೆಯಲ್ಲಿ ಮಲಗಿಕೊಂಡರು. ರಾಮಚೆನ್ನಾರೆಡ್ಡಿ ಅವರಿಗೆ ನಿದ್ದೆ ಬರದೆ ಇರುವುದರಿಂದ ಧ್ಯಾನ ಮಾಡುತ್ತಿದ್ದರು. ಮರುದಿನ ಮುಂಜಾನೆ ಅವರು ಕೇಳಿದರು, ‘ರಾತ್ರಿ ಮಂಚದ ಮೇಲೆ ಕುಳಿತು ಏನು ಮಾಡುತ್ತಿದ್ದೆ’ ಎಂದು. ‘ಧ್ಯಾನ ಮಾಡುತ್ತಿದ್ದೆ’ ಎಂದರು. ‘ಹೇಗೆ ಮಾಡುತ್ತಿರುವೆ’ ಎಂದು ಕೇಳಿದರು. ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಳ್ಳುತ್ತಿದ್ದೇನೆ .. ಎಂದರು. ಹಾಗಲ್ಲ ‘ಶ್ವಾಸದ ಮೇಲೆ ಗಮನ’ವಿಡು ಎಂದರು. ಹಾಗೆ ಹೇಳಿದವರ ಹೆಸರು ‘ಬಂಡಿರಾಮದಾಸಪ್ಪ’. ಆ ರಾಮದಾಸಪ್ಪನಿಗೆ ಯಾರು ಹೇಳಿದರೆಂದರೆ, ಗೌತಮ ಬುದ್ಧನೇ ಆ ಸಮಯದಲ್ಲಿ ಅವರಲ್ಲಿ ಪ್ರವೇಶಿಸಿ, ರಾಮಚೆನ್ನಾರೆಡ್ಡಿಗೆ ಹೇಳಿಸಿ ಅವರ ಮೂಲಕ ನನಗೆ ಹೇಳಿಸಿದರು.
“ನಾನು ಧ್ಯಾನದಲ್ಲಿ ಪ್ರವೇಶಿಸಿದ್ದು “ಗುರು”ವಿನ ಮೂಲಕ ಅಲ್ಲ. ‘ಮಿತ್ರನ’ ಮೂಲಕ ಬಂದಿದ್ದೇನೆ. ಅದಕ್ಕೆ ಒಬ್ಬ ‘ಮೈತ್ರೇಯ ಬುದ್ಧ’ನಾಗಿದ್ದೇನೆ. ಸಕಲ ಪ್ರಾಣಿಕೋಟಿ ಜೊತೆ ಮಿತ್ರತ್ವ ಇರುವ ಬುದ್ಧನಾಗಿದ್ದೇನೆ. ನಾನು ಒಬ್ಬ ಗುರುವಿನ ಮೂಲಕ ಧ್ಯಾನಕ್ಕೆ ಪ್ರವೇಶಿಸಲಿಲ್ಲ. ಅದಕ್ಕೇ ನಾನು ಯಾರಿಗೂ ಗುರುವಲ್ಲ. ಎಲ್ಲರಿಗೂ ನಾನು ಅದ್ಭುತವಾದ ಕಲ್ಯಾಣಮಿತ್ರ.
ಈಗಿನ ನಮ್ಮ ಮೈತ್ರೇಯ ಬುದ್ಧರನ್ನು ಕುರಿತು ಗೌತಮ ಬುದ್ಧನು 2500 ವರ್ಷಗಳ ಹಿಂದೆ .. ಒಂದು ಸಾಯಂಕಾಲ ಸಮಯದಲ್ಲಿ ಪ್ರಕೃತಿಯಲ್ಲಿ ಲೀನವಾಗಿ ಪರವಶಗೊಳ್ಳುತ್ತಿರುವ ಬುದ್ಧನು ಅವರ ಪಕ್ಕದಲ್ಲೇ ಅವರ ಜೊತೆಯಲ್ಲೇ ಆನಂದದಲ್ಲಿ ಮುಳುಗಿರುವ “ಆನಂದನಿಗೆ” ವಾತ್ಸಲ್ಯದಿಂದ ಹೇಳಿದರಂತೆ: “ದೇಶಕಾಲ ಪರಿಸ್ಥಿತಿಗಳಿಗೆ ಅತೀತವಾಗಿ ಬೆಳಗುತ್ತಿರುವ ಈ ಆನಾಪಾನಸತಿ ಧ್ಯಾನ ಎಲ್ಲ ಕಾಲಕ್ಕೂ ಉಪಯುಕ್ತವಾಗಿರುತ್ತದೆ. ಇದುವರೆಗೂ ಎಷ್ಟುಜನ ’ಬುದ್ಧರು’ ಬರಲಿಲ್ಲ. ಈಗ ನನ್ನ ಜೊತೆ ಎಷ್ಟು ಜನರಿಲ್ಲ. ಇನ್ಮುಂದೆ ಎಷ್ಟು ಜನ ಬರುವುದಿಲ್ಲ. ಆದರೆ, ಇನ್ಮುಂದೆ ಬರಲಿರುವ ಬುದ್ಧರು ಒಂದು ರೀತಿಯ ವಿಶಿಷ್ಟತೆಯನ್ನು ಹೊಂದಿರುವವರಾಗಿರುತ್ತಾರೆ. ಅವರನ್ನು ಬುದ್ಧರಾಗಿ ಗುರ್ತಿಸುವುದು ತುಂಬಾ ಕಷ್ಟ. ಅವರನ್ನು ಅನುಸರಿಸುವುದು ಇನ್ನೂ ಕಷ್ಟ. ಆದರೆ, ‘ಮೈತ್ರೇಯ ಬುದ್ಧರು’ ಈ ಭೂಮಿಯ ಮೇಲೆ ಪಾದಾರ್ಪಣೆ ಮಾಡುತ್ತಾರೆ”.
***
ಬುದ್ಧನ ಕಾಲದಲ್ಲಿ ಮಹಾಕಾಶ್ಯಪರಾಗಿದ್ದ ವ್ಯಕ್ತಿಯೇ ಈಗಿನ ಓಷೋ, ರಜನೀಷ್ ಎನ್ನಲಾಗಿದೆ. ಮಹಾಕಾಶ್ಯಪರು ಗೌತಮಬುದ್ಧರನ್ನು ಭೇಟಿಯಾಗುವುದಕ್ಕಿಂತಾ ಮೊದಲು ಒಬ್ಬ ಮಹಾಯೋಗಿಯಂತೆ ಅವರು ಬುದ್ಧರನ್ನು ಗುರುವಾಗಿ ಹುಡುಕಿಕೊಂಡು ಬರುತ್ತಿರುವಾಗ .. ಮಾರ್ಗದಲ್ಲಿರುವ ಆಲಯಗಳಲ್ಲಿ ವಿಗ್ರಹಗಳಿಗೆ ನಮಸ್ಕಾರ ಮಾಡಿದರೆ .. ಅವು ಹಾಗೆ ಒಡೆದುಹೋಗುತ್ತಿದ್ದವಂತೆ. ಕಶ್ಯಪನು ನಮಸ್ಕಾರ ಮಾಡಬೇಕೆಂದುಕೊಂಡು ತನ್ನ ಎರಡು ಕೈಗಳನ್ನೂ ಮುಂದಕ್ಕೆ ಚಾಚುತ್ತಾ, ವಿಗ್ರಹಗಳಂತೆ ಬುದ್ಧ ಕೂಡಾ ಏನಾದರೂ ಆಗಬಹುದೆಂದು ಸಂಶಯಸುತ್ತಿರುವಾಗ, ಬುದ್ಧ ‘ಪರವಾಗಿಲ್ಲ ನಮಸ್ಕಾರ ಮಾಡು’ ಅಂದರಂತೆ. ಅಂತಹ ಮಹಾವ್ಯಕ್ತಿ ಕಾಶ್ಯಪರು. ಅವರ ಮರುಜನ್ಮವೇ ಓಷೋ ರಜನೀಷ್.
ಇವರನ್ನು ಕುರಿತು ಗುರುಗಳು ಹೇಳುತ್ತಾ … “ರಜನೀಷ್ ಅವರು, ನಾನು ಇಬ್ಬರೂ ಬುದ್ಧರ ಶಿಷ್ಯರೇ. ಅವರು ಸೀನಿಯರ್, ನಾನು ಜೂನಿಯರ್. ಅವರು ಬುದ್ಧರಿಗೆ ಬಲ ಭುಜದಂತವರಾದರೆ, ನಾನು ಎಡ ಭುಜದಂತವನು” ಎಂದರು.
ಶ್ರೀ ಸದಾನಂದಯೋಗಿ ತಮಗೆ ಸದಾ ಹೇಳುವ ಆದೇಶ “ಸುಭಾಷ್, ಮಾಂಸಪಿಂಡವನ್ನು ಮಂತ್ರಪಿಂಡವನ್ನಾಗಿಸಬೇಕು” ಎಂದು. “ಸುಭಾಷ್, ಮಾಡು ಇಲ್ಲದಿದ್ದರೇ ಸಾಯಿ, ಡು ಆರ್ ಡೈ” ಎನ್ನುವ ಈ ಎರಡು ಮಾತುಗಳೇ ಪತ್ರೀಜಿಯವರು ಆಧ್ಯಾತ್ಮಿಕ ಜೀವನ ಗಮ್ಯವನ್ನು ತಲುಪಲು ಮುಖ್ಯ ಸೂತ್ರಗಳಾಗಿವೆ.
***
1979ನಲ್ಲಿ ಒಂದು ದಿನ ಹೈದರಾಬಾದ್‌ಗೆ ಹೋಗಿ ಕಂಪೆನಿಯ ಆಡಿಯೋ-ವಿಜುವಲ್ ವ್ಯಾನ್‌ನಲ್ಲಿ ಕರ್ನೂಲ್‌ಗೆ ಬರುತ್ತಿದ್ದರು. ಪತ್ರೀಜಿ ಪ್ರಯಾಣಿಸುತ್ತಿರುವ ಆಫೀಸ್ ವ್ಯಾನು ಪೆಬ್ಬೇರು ಎಂಬ ಊರಿನ ಹತ್ತಿರ ವ್ಯಾನ್ ಟೈರು ಪಂಕ್ಚರ್ ಆಗಿ, ರಸ್ತೆ ಪಕ್ಕಕ್ಕೆ ವೇಗವಾಗಿ ಹೊರಳಿತು. ತಕ್ಷಣವೇ ಬ್ರೇಕು ಹಾಕಿದಾಗ ಅದು ಮೂರು ಪಲ್ಟಿಗಳನ್ನು ಹೊಡೆದು ಪಕ್ಕಕ್ಕೆ ಉರಳಿತು. ಅದರಲ್ಲಿ ವ್ಯಾನ್ ಚಾಲನೆ ಮಾಡುತ್ತಿದ್ದ ಡ್ರೈವರ್ ಅಪ್ಪಾರಾವ್ ಸೇರಿದಂತೆ ಪತ್ರೀಜಿ ಮತ್ತು ಇತರೆ ಏಳು ಜನ ಸಹಚರರು ಇದ್ದರು. ಎಲ್ಲರಿಗೂ ತುಂಬಾ ಏಟುಗಳು ಬಿತ್ತು. ಬೋರಲುಬಿದ್ದ ಆ ವ್ಯಾನಿನಿಂದ ಹೇಗೊ ಮೂರು ಜನ ಹೊರಗೆ ಬಂದು ನೋಡಿದಾಗ ಪತ್ರೀಜಿ ಕಾಣಿಸಲಿಲ್ಲ. ತನ್ನಿಂದಲೇ ಹೀಗೆಲ್ಲಾ ನಡಿದಿದೆ ಎಂದು ಭಾವಿಸಿದ ಅಪ್ಪಾರಾವ್ ಭಯದಿಂದ ಅಳುತ್ತಾ ‘ಸಾರ್‌ಗೆ ಏನಾಯಿತೋ’ ಎಂದು ಭಯಭೀತಿಯಿಂದ ವ್ಯಾನ್‌ನ ಕ್ಯಾಬಿನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಪತ್ರೀಜಿ ಅವರನ್ನು ಸಾರ್ ಎದ್ದೇಳಿ ಎಂದು ಹೇಳುತ್ತಾ ಎಬ್ಬಿಸಿದರು. ಪತ್ರೀಜಿ “ಅಪ್ಪಾರಾವು, ಮೇಲೆ ಲೋಕ ಇನ್ನೂ ಚೆನ್ನಾಗಿದೆಯಪ್ಪಾ, ಇದಕ್ಕೆ ಯಾಕೆ ಅಳುತ್ತೀಯ”, ಎನ್ನುತ್ತಾ ಆಗಲೇ ನಿದ್ದೆಯಿಂದ ಎದ್ದವರಂತೆ ಎದ್ದರಂತೆ.
ಆ ಕ್ಷಣದಿಂದಲೇ ಪತ್ರೀಜಿಯವರಲ್ಲಿ ತುಂಬಾ ಬದಲಾವಣೆ ಕಾಣಿಸಿತಂತೆ, ಈ ವಿಷಯವನ್ನು ಕುರಿತು ಸ್ವರ್ಣಮಾಲಾ ಅವರು ಹೇಳುತ್ತಾ .. ಅಂದಿನಿಂದ ಅವರ ವರ್ತನೆಯಲ್ಲಿ ತುಂಬಾ ಬದಲಾವಣೆ ಬಂದಿದೆ. ಒಬ್ಬ ನರಸಿಂಹ ಸ್ವಾಮಿಯಂತೆ, ವಿಶ್ವಾಮಿತ್ರರಂತೆ, ದುರ್ವಾಸ ಮುನಿಯಂತೆ, ಪರಶುರಾಮನಂತೆ ಬದಲಾದರು. ಮದುವೆ ಆದಾಗಿಂದಾ ತುಂಬಾ ಆತ್ಮೀಯವಾಗಿದ್ದ ನನಗೇ ಅವರ ಜೊತೆ ಮಾತನಾಡಬೇಕೆಂದರೆ ತುಂಬಾ ಭಯವಾಗುತ್ತಿತ್ತು. ಎತ್ತರಕ್ಕೆ ತಕ್ಕಂತೆ ದಷ್ಟಪುಷ್ಟಿಯಾಗಿದ್ದ ಅವರು ಕ್ರಮೇಣಾ .. ತುಂಬಾ ಸಣ್ಣಗಾದರು.
ಮುಖದಲ್ಲಿ ಸಹ ತುಂಬಾ ಬದಲಾವಣೆ ಕಾಣಿಸಿತು. ಅನಂತರ ಅವರ ಮಾತಿನಿಂದ ಅರ್ಥವಾಯಿತು .. ಅವರಲ್ಲಿ ಮಾಸ್ಟರ್ ‘ವಾಕಿನ್’ ಆಗಿದ್ದಾರೆಂದು. ಆದರೆ, ಛಾಯೆಗಳು ಮಾತ್ರ ಉಳಿದಿದೆ. ಅನುಭೂತಿಗಳಿವೆ. ಆದರೆ, ತುಂಬಾ ವ್ಯತ್ಯಾಸ ಕಾಣಿಸತೊಡಗಿತು.
1983 ನಲ್ಲಿ ಕರ್ನೂಲ್‌ನಿಂದ ಅಗ್ರಾನಮಿಸ್ಟ್ ಆಗಿ ಪ್ರಮೋಷನ್ ಮೇಲೆ ಹೈದರಾಬಾದ್‌ಗೆ ಬಂದರು. ಸಿಕಿಂದ್ರಾಬಾದ್‌ನಲ್ಲಿರುವ ಕಂಪೆನಿ ಹೆಡ್ ಆಫೀಸ್‌ನಲ್ಲಿ “ಗ್ರೋಮೆರ್ ನ್ಯೂಸ್ ಲೆಟರ್”ಗೆ ಎಡಿಟರ್ ಆಗಿ ಹೊಸ ಹೊಣೆಗಾರಿಕೆಗಳನ್ನು ವಹಿಸಿಕೊಂಡು ಒಬ್ಬ ಪತ್ರಿಕಾ ಸಂಪಾದಕನ ಲಕ್ಷಣಗಳೆಲ್ಲಾ ಕಲಿತುಕೊಂಡರು. ಆ ಲಕ್ಷಣಗಳೇ ಅನಂತರ ಕಾಲದಲ್ಲಿ ಧ್ಯಾನಪ್ರಚಾರದಲ್ಲಿ ಅನೇಕ ಪತ್ರಿಕೆಗಳು ಬಿಡುಗಡೆಯಾಗಲು ಕಾರಣವಾಗಿದೆ. ಉದ್ಯೋಗನಿಮಿತ್ತ ಭಾರತ ದೇಶದಲ್ಲೆಲ್ಲಾ ತಿರುಗುವ ಅವಕಾಶ ಲಭಿಸಿದೆ. ಇದರಿಂದ ಅನೇಕ ವಿಷಯಗಳು ತಿಳಿದುಕೊಂಡಿದ್ದಾರೆ. ಉದ್ಯೋಗ ಜೀವನದಲ್ಲಿ ಕೂಡಾ ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದಿದ್ದರು. “ಸಿನ್ಸಿಯರ್” ಎಂದೂ “ಬುದ್ಧಿವಂತ”ರೆಂದೂ ಹೆಸರು ಪಡೆದರು.
ಪತ್ರೀಜಿ ಪ್ರಾರಂಭದಲ್ಲೇ ‘ಧ್ಯಾನಮಾಡು’ ಎಂದು ಸ್ವರ್ಣಮಾಲಾರವರಿಗೆ ಹೇಳಿದಾಗ ಅವರು ಧ್ಯಾನಮಾಡಲಿಲ್ಲ. ಪ್ರಾಪಂಚಿಕವಾಗಿಯೂ ವ್ಯತಿರೇಕ ಸ್ವಭಾದಿಂದ ಇದ್ದ ಅವರ ತಮ್ಮ ದ್ವಾರಕಾನಾಥ್ ಧ್ಯಾನದ ಮೂಲಕ ಮಹತ್ತರವಾಗಿ ಬದಲಾಗಿರುವುದನ್ನು ಸ್ವರ್ಣಮಾಲಾರವರು ಕಂಡುಕೊಂಡರು. ಅನೇಕ ಬಾರಿ ಆಸ್ಟ್ರಲ್ ಟ್ರಾವೆಲ್ಸ್ ಮಾಡುವುದು. ‘ಆರಾ’ ನೋಡುವುದು, ಆಸ್ಟ್ರಲ್ ಟ್ರಾವೆಲ್‌ನಲ್ಲಿ ಒಮ್ಮೆ ಗಂಗೆ ಹುಟ್ಟಿದ ಸ್ಥಳವನ್ನು ನೋಡಿಬಂದು ಹೇಳುವುದು ಮುಂತಾದ ಚೋದ್ಯಗಳನ್ನು ತಮ್ಮನಿಂದ ತಿಳಿದುಕೊಂಡನಂತರ .. ಆಧ್ಯಾತ್ಮಿಕತೆಯ ಮೇಲೆ ಆಸಕ್ತಿಯಿಲ್ಲದ ತನ್ನ ತಮ್ಮನೇ ಧ್ಯಾನಮಾಡಿ ಹೀಗೆ ಬದಲಾದನೆಂದರೆ .. ನಿಜವಾಗಲೂ ಇದರಲ್ಲಿ ಏನೊ ಇದೆ. ಧ್ಯಾನಮಾಡಿ ನಾನು ಕೂಡಾ ಅದರಲ್ಲಿರುವ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಸ್ವರ್ಣಮಾಲಾ ಅವರು 1984ನಲ್ಲಿ ಧ್ಯಾನವನ್ನು ಪ್ರಾರಂಭಿಸಿದರು. ಅಂದಿನಿಂದ ಧ್ಯಾನ ಅಂದರೆ ತಮಾಷೆ ಎಂದು ಅಂದುಕೊಳ್ಳದೆ, ಪತ್ರೀಜಿ ಅವರ ಸೂಚನೆಗಳಾನುಸಾರ ಅದನ್ನು ಒಂದು ಯಜ್ಞದಂತೆ ಆಚರಿಸಿದರು. ಬೆಳಿಗ್ಗೆ ಪತ್ರೀಜಿ ಕಚೇರಿಗೆ ಹೊರಟ ನಂತರ, ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ, 9 ಗಂಟೆಗೆ ಧ್ಯಾನದಲ್ಲಿ ಕುಳಿತರೆ ಪುನಃ ಸಂಜೆ 4 ಗಂಟೆಗೆ ಮಕ್ಕಳು ಶಾಲೆಯಿಂದ ಬರುವುದಕ್ಕಿಂತಾ ಮುಂಚೆ ಎದ್ದು ದಿನನಿತ್ಯ ಕಾರ್ಯಕ್ರಮಗಳನ್ನು ನೋಡಿಕೊಂಡು ಪುನಃ ರಾತ್ರಿ ಮಕ್ಕಳು, ಯಜಮಾನರು (ಪತ್ರೀಜಿ) ಮಲಗಿದ ನಂತರ 10 ಗಂಟೆಗೆ ಧ್ಯಾನಕ್ಕೆ ಕುಳಿತರೆ ಮುಂಜಾನೆ 6 ಗಂಟೆಗಳವರೆಗೂ ಧ್ಯಾನ ಮಾಡುತ್ತಾ ಅನೇಕಾನೇಕ ಅನುಭವಗಳನ್ನು ಪಡೆಯುತ್ತಾ ತುಂಬಾ ಎತ್ತರಕ್ಕೆ ಬೆಳೆದರು.
1990 ರ ಡಿಸೆಂಬರ್ 31 ರಂದು ಶ್ರೀ B.V.ರೆಡ್ಡಿಯವರ ಸಹಕಾರದಿಂದ “ಕರ್ನೂಲ್ ಸ್ಪಿರಿಚ್ಯುಯಲ್ ಸೊಸೈಟಿ”ಯನ್ನು ರಿಜಿಸ್ಟರ್ ಮಾಡಲಾಯಿತು. ಶ್ರೀ N.G ಶೌರಿ ಅವರು ಪ್ರಥಮ ಅಧ್ಯಕ್ಷರಾಗಿ ಈ ಸೊಸೈಟಿ ಆರಂಭಗೊಂಡಿತು.
ಪತ್ರೀಜಿ “ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿ ಮೂವ್‌ಮೆಂಟ್” ಸ್ಥಾಪಿಸಲು ಕಾರಣ .. ಈ ಸ್ಪಿರಿಚ್ಯುಯಲ್ ಸೈನ್ಸ್‌ನ ಆಧ್ಯಾತ್ಮಿಕ ವಿಜ್ಞಾನವನ್ನು, ಆಧ್ಯಾತ್ಮಿಕ ಶಾಸ್ತ್ರವನ್ನು ಎಲ್ಲರಿಗೂ ಬೋಧಿಸಲಿಕ್ಕಾಗಿ. ಈ ‘ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್’ ಅನೇಕ ಪಟ್ಟಣಗಳಲ್ಲೂ, ಅನೇಕ ಗ್ರಾಮಗಳಲ್ಲೂ ಪ್ರಚುರಪಡಿಸಿದರು. ಎಲ್ಲರೂ ಜೀವಿಸುತ್ತಿದ್ದಾರೆ, ಆದರೆ, ಜೀವಿಸುವ ವಿಧಾನ ಯಾರಿಗೂ ತಿಳಿಯದು. ಯಾರೂ ಸರಿಯಾಗಿ ಜೀವಿಸುತ್ತಿಲ್ಲ. ಪ್ರತಿಯೊಬ್ಬರೂ ‘ಸರಿ ಅಲ್ಲದ’ ರೀತಿಯಲ್ಲಿ ಜೀವಿಸುತ್ತಿದ್ದಾರೆ. ಆದರೆ, ಪ್ರತಿಯೊಬ್ಬರೂ ಸರಿಯಾದ ರೀತಿಯಲ್ಲಿ ಜೀವಿಸುವಂತೆ ಮಾಡುವುದೇ ಈ ಸೊಸೈಟಿಯ ಉದ್ದೇಶ.
1985ರ ವರ್ಷದಲ್ಲಿ ಪತ್ರೀಜಿ ತಾನು ಓದಿರುವ ಪುಸ್ತಕಗಳಲ್ಲಿರುವ ಗೀಜಾ ಪಿರಮಿಡ್ ಕುರಿತು ಯೋಚಿಸುತ್ತಿದ್ದರು. ಈ ಪಿರಮಿಡ್‌ನ್ನು ನಿರ್ಮಿಸಿದವರು ಆಸ್ಟ್ರಲ್ ಮಾಸ್ಟರ‍್ಸ್. ಇದು ನಿರ್ಮಾಣಗೊಂಡಿದ್ದು ಆಧ್ಯಾತ್ಮಿಕ ಪ್ರಗತಿಗಾಗಿ ಎಂದು ಅರಿತುಕೊಂಡರು. ಅವುಗಳ ಶಕ್ತಿಯನ್ನು ಕುರಿತು ಓದಿ, ಅವುಗಳ ಪ್ರಾಮುಖ್ಯತೆಯನ್ನು ತಿಳಿದುಕೊಂಡು, ಪುಸ್ತಕಗಳಲ್ಲಿ ನೀಡಿರುವಂತಹ ಅಳತೆಗಳ ಪ್ರಕಾರ ರಟ್ಟಿನಲ್ಲಿ ಚಿಕ್ಕ-ಪುಟ್ಟ ಪಿರಮಿಡ್‌ಗಳನ್ನು ತಯಾರು ಮಾಡುತ್ತಿದ್ದರು. ಅದರಲ್ಲಿ ತೃಪ್ತಿಹೊಂದಿದ ಪತ್ರೀಜಿ ಧ್ಯಾನಿಗಳು ಕಡಿಮೆ ಸಮಯದಲ್ಲಿ ಹೆಚ್ಚು ಶಕ್ತಿಯನ್ನು ಹೊಂದಬೇಕೆನ್ನುವ ಉದ್ದೇಶದಿಂದ ಧ್ಯಾನಿಗಳು ಪಿರಮಿಡ್ ನಿರ್ಮಾಣಗಳನ್ನು ಮಾಡಬೇಕೆಂದು ನಿರ್ಣಯಿಸಿಕೊಂಡರು. ಆ ಪಿರಮಿಡ್ ಆಕಾರವನ್ನೇ ಅನಂತರ ಕಾಲದಲ್ಲಿ ಪಿರಮಿಡ್ ಲಾಂಛನವನ್ನಾಗಿ ರೂಪಿಸಿದರು. ಪತ್ರೀಜಿ ಸಂಕಲ್ಪವನ್ನು ನಿಜವನ್ನಾಗಿಸಲು, ಶ್ರೀ ಬಿ.ವಿ.ರೆಡ್ಡಿಯವರು ಮುಂದೆ ಬಂದದ್ದರಿಂದ, ಮೊಟ್ಟಮೊದಲನೆಯ ಪಿರಮಿಡ್ ನಿರ್ಮಾಣ ಕರ್ನೂಲ್‌ನಲ್ಲಿ ಸಾಕಾರಗೊಂಡಿತು.
Recent Comments