“ಮಾನಸ ಸರೋವರ ಧ್ಯಾನಯಾತ್ರೆಯಲ್ಲಿ ಕಾನ್ಸೆಪ್ಟ್‌ಗಳು”
ABCDಗಳ ಅರ್ಜುನ ಕೃಷ್ಣತತ್ವ
’A’ ಜ್ಞಾನವನ್ನು ಕಲಿತುಕೊಂಡ ತಕ್ಷಣ ಅಲ್ಲಿಯೇ ನಿಲ್ಲಬಾರದು. ’B’ ಜ್ಞಾನವನ್ನು ಕಲಿತುಕೊಳ್ಳಬೇಕು. ಇಲ್ಲಿ ’A’ ಅಂದರೆ ಅರ್ಜುನತತ್ವ … ಅಂದರೆ ತಿಳಿದುಕೊಂಡಿರುವುದು. ’B’ ಅಂದರೆ ಕೃಷ್ಣತತ್ವ … ತಿಳಿದುಕೊಳ್ಳಬೇಕಾಗಿರುವುದು. ABCDಗಳ ಜ್ಞಾನ ಅರ್ಜುನತತ್ವವಾದರೆ, ’E’ ಯನ್ನು ಕೃಷ್ಣತತ್ವವಾಗಿ ಗ್ರಹಿಸಬೇಕು. ಅಘಾತ ಜ್ಞಾನ ಸಾಗರದಲ್ಲಿ ಕಲಿತುಕೊಂಡಿರುವ ಜ್ಞಾನ ನೀರಿನ ಹನಿ … ಅಂದರೆ ಅರ್ಜುನತತ್ವ. ಕಲಿತುಕೊಳ್ಳಬೇಕಾಗಿರುವ ಜ್ಞಾನ ಸಾಗರ … ಅಂದರೆ ಕೃಷ್ಣತತ್ವ … ನಾವು ನಿರಂತರ ಅರ್ಜುನತತ್ವದಿಂದ ಕೃಷ್ಣತತ್ವ ಪ್ರಾಪ್ತಿಗೆ ಎಡಬಿಡದೇ ಕೃಷಿ ಮಾಡಬೇಕು.
ಶಿವತತ್ವ
’ ಶಿವ ’ ಅಂದರೆ ಶುಭಕರ. ಶುಭವನ್ನು ಉಂಟುಮಾಡುವವನು ಶಿವನು. ಶಿವನು ಸಂಗೀತ (ಢಮರುಗ ಚಿಹ್ನ), ನೃತ್ಯ (ತಾಂಡವಾಭಿನಯ), ಧ್ಯಾನ (ತ್ರಿನೇತ್ರ)ಗಳ ಮಿಲನ. ಶರೀರಧಾರಿಯಾಗಿರುವ ಯಾವ ಆತ್ಮವಾದರೂ ಶಿವತತ್ವದಿಂದ ಮಿಳಿತಗೊಳ್ಳಬೇಕಾದರೆ ಮೊದಲು ಢಮರುಗ ನಾದದಿಂದ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನ ಸಂಗೀತ ಗ್ರಾಹಿಯಾಗಿ, ತಾನು ಗ್ರಹಿಸಿದ ಆ ಸಂಗೀತಾಮೃತವನ್ನು ನೃತ್ಯ ಅಭಿನಯದಿಂದ ಆನಂದ ಪಾರವಶ್ಯರಾಗಿ ತಾಂಡವ ಮಾಡುತ್ತಾ ಜ್ಞಾನ ಸಂಗೀತಾಮೃತವನ್ನು ಎಲ್ಲರಿಗೂ ಹಂಚುತ್ತಾ ಅಮೃತತುಲ್ಯರಾಗಿ ಮಾಡಬೇಕು. ಅದರಿಂದ ನಿಶ್ಚಲವಾದ ಜ್ಞಾನ ಸ್ಥಿತಿಯನ್ನು ಹೊಂದಬೇಕು. ಶಿವನ ಕೈಯಲ್ಲಿರುವ ಅಗ್ನಿ ಕೆಂಡದ ಜೊತೆ ಆಟವಾಡಬೇಕೆಂದು (ಜೀವನದಲ್ಲಿ ಬರುವ ಸುಖ ದುಃಖಗಳನ್ನು ಧೈರ್ಯವಾಗಿ ಎದುರಿಸಬೇಕೆಂದು) ಭಿಕ್ಷೆಪಾತ್ರೆ … ಪ್ರತಿಯೊಬ್ಬರ ಹತ್ತಿರ ಭಿಕ್ಷೆ ಬೇಡಬೇಕೆಂದು (ಪ್ರತಿಯೊಬ್ಬರಿಂದ ಜ್ಞಾನ ಕಲಿತುಕೊಳ್ಳಬೇಕೆಂದು) ಕಪಾಲ. .. ಶರೀರದ ಕೊನೆಯ ಹಂತವನ್ನು ಸೂಚಿಸುತ್ತದೆ.
ದಶಾವತಾರಗಳು
ದಶಾವತಾರಗಳಿಂದ ಮಾನವನು ಗ್ರಹಿಸಿ ಆಚರಿಸಬೇಕಾದ ಸತ್ಯಗಳ ವಿವರಣೆ.
ಮತ್ಸ್ಯ : ನಿತ್ಯ ಚೈತನ್ಯ ಸ್ಥಿತಿ.
ಕೂರ್ಮ : ಪ್ರಾಪಂಚಿಕ ವಿಷಯಗಳಲ್ಲಿ ಅವಶ್ಯಕವಿದ್ದರೆ ಕೂಡಿರಬೇಕು, ಇಲ್ಲದಿದ್ದರೆ ಮುಡಚಿಕೊಂಡಿರಬೇಕು.
ವರಾಹ : ಭೂ ಭಾರವನ್ನು ಹೋರಬೇಕು. ಅಂದರೆ, ಭೂಲಕದಲ್ಲಿರುವ ಅಜ್ಞಾನ ಭಾರವನ್ನು.
ನೃಸಿಂಹ : ಸಮಾಜದಲ್ಲಿರುವ ಕೆಡಕನ್ನು ನುಚ್ಚುನೂರು ಮಾಡಬೇಕು.
ವಾಮನ : ಒಂದು ಪಾದ ಭೂಮಿಯ ಮೇಲೆ, ಎರಡನೆಯ ಪಾದ ಆಕಾಶದಮೇಲೆ. ಅಂದರೆ, ಸ್ಥೂಲ ಶರೀರದಿಂದ ಭೂಮಿಯ ಮೇಲೆ ಇರುತ್ತಾ ಧ್ಯಾನದಿಂದ ಸೂಕ್ಷ್ಮ ಶರೀರಯಾನ ಸಾಗಿಸುತ್ತಾ ಊರ್ಧ್ವಲೋಕಗಳನ್ನು ದರ್ಶಿಸಬೇಕು.
ಪರಶುರಾಮ : ಒಂದು ಗುರಿಗಾಗಿ ಹೋರಾಡಿಯಾದರೂ ಜಯಿಸಬೇಕು.
ರಾಮ : ಕುಟುಂಬ ವಿಷಯಗಳನ್ನು ಬಾಧ್ಯತೆಯಿಂದ ನೋಡಿಕೊಳ್ಳಬೇಕು.
ಬಲರಾಮ : ಕಷ್ಟಪಟ್ಟು ಅವರವರ ಸಂಪಾದನೆಯನ್ನು ಅವರೇ ಸಂಪಾದಿಸಿಕೊಳ್ಳಬೇಕು.
ಕೃಷ್ಣ : ಸದಾ ಎಚ್ಚರಿಕೆಯಿಂದ ಇರಬೇಕು.
ಬುದ್ಧ : ಧ್ಯಾನದಿಂದ ಬುದ್ಧರಾಗಬೇಕು.
ಐದು ಬೆರಳುಗಳ ಕಥೆ
ಕಿರು ಬರಳು – ಶರೀರ (ಕುಂಭಕರ್ಣಾಯಣ)
ಉಂಗುರದ ಬೆರಳು – ಮನಸ್ಸು (ರಾವಣಾಯಣ)
ಮಧ್ಯೆ ಬೆರಳು – ಬುದ್ಧಿ (ವಿಭೀಷಣಾಯಣ)
ತೋರು ಬೆರಳು – ಜೀವನು/ಪ್ರಾಣಶಕ್ತಿ (ಸೀತಾಯಣ)
ಹೆಬ್ಬೆರಳು – ಆತ್ಮ /ಮೂಲಚೈತನ್ಯ (ರಾಮಾಯಣ)
ಜೀವನು (೪), ಶರೀರ, ಮನಸ್ಸು, ಬುದ್ಧಿ (೧,೨,೩)ಯನ್ನು ಬಿಟ್ಟು ಆತ್ಮದಲ್ಲಿ ಲಯವಾಗುವ ವಿಧಾನವನ್ನು (ಹನುಮಾಯಣ) ಎನ್ನುತ್ತೇವೆ. ಅಂದರೆ, ’ಆನಾಪಾನಸತಿ’. ಜೀವನು (೪), ಆತ್ಮನನ್ನು (೫) ಸೇರಿಸುವುದೆ ಆತ್ಮಾಯಣ. ಆಗಲೇ ವಿಜಯ ಪ್ರಾಪ್ತಿಯಾಗುವುದು. ಹೆಬ್ಬೆರಳು ವಿಜಯ ಪ್ರಾಪ್ತಿಗೆ ಸೂಚನೆ. ಈ ಎಲ್ಲದರ ಮಿಲನವೇ “ವಾಲ್ಮೀಕಾಯಣ”.
ಆತ್ಮಾಯಣ
ಮರಣಾನಂತರ ತನ್ನ ಕರ್ಮ ಫಲಿತಾನುಸಾರ ಆತ್ಮ, ಭುವರ್ಲೋಕ, ಸುವರ್ಲೋಕ, ಕಾರಣಲೋಕ, ಮಹಾಕಾರಣ ಲೋಕಕ್ಕೆ ಹೋಗುತ್ತದೆ ಎಂದು, ಧ್ಯಾನದಿಂದ ತಾನು ಆತ್ಮವೆಂದು ತಿಳಿದುಕೊಂಡ ಆತ್ಮ ಭೂಲೋಕದಲ್ಲಿ ಜನ್ಮಿಸಿ ತನ್ನ ಹತ್ತಿರ ಬಂದ ಆತ್ಮಗಳಿಗೆ ಆತ್ಮಜ್ಞಾನವನ್ನು ಪ್ರಸಾದಿಸಿ ತತ್ಫಲಿತವಾಗಿ ತಪೋಲೋಕಕ್ಕೆ ಸೇರುತ್ತದೆ. ಮರಳಿ ಜನ್ಮಿಸಿ ತಾನೇ ಅನೇಕ ಆತ್ಮಗಳ ಹತ್ತಿರಕ್ಕೆ ಹೋಗಿ ಆತ್ಮಜ್ಞಾನವನ್ನು ತಿಳಿಯಪಡಿಸಿ ಬುದ್ಧನಾಗಿ ಶರೀರ ತ್ಯಜಿಸಿ, ಸತ್ಯಲೋಕಕ್ಕೆ ಪರಿಪೂರ್ಣ ಆತ್ಮವಾಗಿ ಸೇರಿ ತಾನೇ ಅಂಶಾತ್ಮಗಳನ್ನು ಸೃಷ್ಟಿಸುತ್ತದೆ.
Recent Comments