” ಮಹಾನುಭಾವರು ಅನೇಕರು “
ನಾದೋಪಾಸನೆಯ ಮೂಲಕ ಭಗವತ್ ತತ್ವವನ್ನು ವೀಕ್ಷಿಸಿರುವ ಶ್ರೀ ತ್ಯಾಗರಾಜಸ್ವಾಮಿ ತಮ್ಮ ಒಂದು ಪಂಚರತ್ನ ಕೀರ್ತನೆಯ ಮೂಲಕ “ಎಂದರೋ ಮಹಾನುಭಾವುಲು .. ಅಂದರಿಕೀ ವಂದನಮುಲು” (ತೆಲುಗಿನಲ್ಲಿ) ಎನ್ನುತ್ತಾ ಈ ಸೃಷ್ಟಿಯಲ್ಲಿರುವ ಭೂತ, ಭವಿಷ್ಯತ್, ವರ್ತಮಾನ ಕಾಲಗಳಿಗೆ ಸೇರಿದ ಎಲ್ಲಾ ಮಹಾನುಭಾವರಿಗೆ ವಂದನೆಗಳನ್ನು ಸಮರ್ಪಿಸಿದರು.
ಕರಗದ ಸಮುದ್ರವಾದ ಆಧ್ಯಾತ್ಮಿಕತೆಯಲ್ಲಿ ಎಷ್ಟು ಈಜಿದರೂ ಇನ್ನೂ ಇನ್ನೂ ಈಜಬೇಕಾದ್ದು ಉಳಿದಿರುತ್ತದೆ. ಹಾಗೆ ಈಜಿ ಈಜಿ .. ಲೋಕಕ್ಕೆಲ್ಲಾ ಆರಾಧ್ಯದೈವನಾದ ಶ್ರೀರಾಮಚಂದ್ರನ ಅಂದಚಂದಗಳನ್ನು ತಮ್ಮ ಅರಳಿದ ಆತ್ಮದ ಮೂಲಕ ಅಂದರೆ ದಿವ್ಯಚಕ್ಷುವಿನ ಮೂಲಕ ವೀಕ್ಷಿಸಿ “ಬ್ರಹ್ಮಾನಂದವನ್ನು” ಶ್ರೀ ತ್ಯಾಗರಾಜಸ್ವಾಮಿಯವರು ಅನುಭವಿಸಿದರು. ಅದಕ್ಕೆ “ಎಂದರೋ ಮಹಾನುಭಾವುಲು” ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಆ ಮಹಾಸ್ವಾಮಿಯೇ.
” ಚಂದುರು ವರ್ಣುನಿ ಅಂದಚಂದಮು ಹೃದಯಾರವಿಂದಮುನ ಜೂಚಿ
ಬ್ರಹ್ಮಾನಂದಮನುಭವಿಂಚು ವಾರೆಂದರೋ ಮಹಾನುಭಾವುಲು (ತೆಲುಗಿನಲ್ಲಿ)
.. ಎಂದು ಅವರು ರಾಮನನ್ನು ತಮ್ಮ ದಿವ್ಯಚಕ್ಷುವಿನಿಂದ ನೋಡಿ .. ಮಹಾನುಭವವನ್ನು ಹೊಂದಿ ತಾದಾತ್ಮ್ಯತೆಯನ್ನು ಹೊಂದಿದಂತೆ .. ರಾಮಚಂದ್ರನನ್ನು ಕೇವಲ ವಿಗ್ರಹರೂಪದಲ್ಲಿ ನೋಡಿದ ಅವರು ತಾದಾತ್ಮ್ಯತೆಯನ್ನು ಹೊಂದಲಾರರು. ಏಕೆಂದರೆ, ಅವರು ತಮ್ಮ ಸಾಧಾರಣ ಚರ್ಮಚಕ್ಷುಗಳಿಂದ ಮಾತ್ರವೇ ರಾಮಚಂದ್ರನ ವಿಗ್ರಹವನ್ನು ನೋಡುತ್ತಾ .. ಸಾಧಾರಣ ಅನುಭವಗಳನ್ನು ಮಾತ್ರವೇ ಹೊಂದುತ್ತಿದ್ದಾರೆ. ವಿಶಿಷ್ಟವಾದ ದಿವ್ಯಚಕ್ಷುವಿನಿಂದ ಹೊಂದುವುದು ಬ್ರಹ್ಮಾನಂದದಿಂದ ಕೂಡಿದ ಮಹಾ ಅನುಭವಗಳು. ಆದ್ದರಿಂದ, ದಿವ್ಯಚಕ್ಷುವಿನಿಂದ ಮಹಾನುಭವಗಳನ್ನು ಹೊಂದಿ ಬ್ರಹ್ಮಾನಂದವನ್ನು ಅನುಭವಿಸುವ ಮಹಾನುಭಾವರೆಲ್ಲರಿಗೂ ತ್ಯಾಗರಾಜಸ್ವಾಮಿ ವಂದನೆಗಳನ್ನು ಸಮರ್ಪಿಸಿದರು.
* * *
ನಾನು ನನ್ನ ಜೀವನದಲ್ಲಿ ಮೊದಲು ಭೇಟಿಯಾದ ಮಹಾನುಭಾವರು .. ನನಗೆ ಧ್ಯಾನವನ್ನು ಪರಿಚಯಿಸಿದ ನನ್ನ ಮಿತ್ರರಾದ ಶ್ರೀ ರಾಮಚೆನ್ನಾರೆಡ್ಡಿಯವರು. ಅವರು ತಮ್ಮ ಧ್ಯಾನಸಾಧನೆಯ ಮೂಲಕ ಮಹಾ ಮಹಾ ಅನುಭವಗಳನ್ನು ಪಡೆದು ನನಗೆ ಹೇಳುತ್ತಿದ್ದರು.
ನಾನು ಕೂಡಾ ಧ್ಯಾನ ಮಾಡಿ ಅನೇಕಾನೇಕ ಅನುಭವಗಳನ್ನು ಹೊಂದಿದ್ದೇನೆ. ಟಿಬೆಟ್ ಮಹಾಯೋಗಿ ಡಾಕ್ಟರ್ T. ಲೋಬ್ಸಾಂಗ್ ರಾಂಪಾ ಅವರು ಬರೆದ ಪುಸ್ತಕಗಳು “You Forever”..”Three Lives” .. “Three Lives” .. “Beyond the Tenth ” .. “The Tibetan Sage” ಅಂತಹ ಸ್ವಂತ ಧ್ಯಾನಾನುಭವಗಳಿಂದ ಕೂಡಿದ ಪುಸ್ತಕಗಳನ್ನು ಓದಿ ನಾನು ತುಂಬಾ ಉತ್ತೇಜಿತನಾಗಿದ್ದೇನೆ.
ಇವರೇ ಅಲ್ಲದೆ ನಿರಂತರ ಧ್ಯಾನಪ್ರಚಾರದ ಮೂಲಕ, ಸತ್ಸಂಗಗಳ ಮೂಲಕ ವಿಶ್ವದಾದ್ಯಂತ ಇರುವ ಅನೇಕ ಮಹಾನುಭಾವರನ್ನು ನಾನು ಪ್ರತಿದಿನ, ಪ್ರತಿಕ್ಷಣ ಭೇಟಿಯಾಗುತ್ತಲೇ ಇದ್ದೇನೆ. ಅವರೆಲ್ಲರಿಗೂ ನನ್ನ ವಂದನೆಗಳು.
“ಮಹಾನುಭಾವರು” ಎನ್ನುವ ಸ್ಥಿತಿಗೆ ತಲುಪಲು ಮುಂಚಿತವಾಗಿ .. ನಾವು “ಮಹಾಶಯರು” ಆಗಬೇಕು.
“ಮಹಾಶಯರು” ಅಂದರೆ “ದೊಡ್ಡ ಆಶಯ ಇರುವವರು”. ಮಹಾಶಯರು ಆಗದೇ ಯಾರೂ ಮಹಾನುಭಾವರು ಅಗಲಾರರು. “ಜೀವಿಸಲಿಕ್ಕಾಗಿ ಯಾವುದೋ ಒಂದು ಉದ್ಯೋಗವನ್ನು ಸಂಪಾದಿಸಿಕೊಂಡು, ಮದುವೆ ಮಾಡಿಕೊಂಡು ಮಕ್ಕಳನ್ನು ಹಡೆದು, .. ‘ಕೃಷ್ಣಾ’, ‘ರಾಮ’, ಎಂದುಕೊಳ್ಳುತ್ತಾ ಮರಣಿಸಬೇಕು” ಎನ್ನುವ ಸಾಮಾನ್ಯ ಆಶಯಗಳನ್ನು ಹೊಂದಿರುವವರು ಯಾರೂ ಸಹ ‘ಮಹಾಶಯ’ ಆಗಲಾರರು. ಅಂತವರಿಗೆ ಜೀವಿಸುವುದೇ ಒಂದು ದೊಡ್ಡ ವರ. ಇನ್ನು “ಶ್ರೇಷ್ಠವಾಗಿ ಜೀವಿಸುವುದು” ಎನ್ನುವ ಮಹಾಆಶಯ ಅವರಿಗೆ ಊಹೆಗೆ ಸಹ ತಿಳಿಯದ ವಿಷಯ.
ಉದಾಹರಣೆಗೆ .. ಧ್ಯಾನದ ಹತ್ತಿರ ಬರೋಣ.
“ಧ್ಯಾನ ಮಾಡಿದರೆ ರೋಗಗಳು ಕಡೆಮೆಯಾಗುತ್ತದಂತೆ .. ತಲೆನೋವು ಸಹ ಕಡಿಮೆಯಾಗುತ್ತದಂತೆ; ವಿಶ್ರಾಂತಿಯಾಗಿ, ರಿಲಾಕ್ಸ್ ಆಗಿ ಇರುತ್ತದಂತೆ .. ಸಮಸ್ಯೆಗಳಲ್ಲಾ ಕಡಿಮೆಯಾಗುತ್ತದಂತೆ” ಎಂದುಕೊಳ್ಳುತ್ತಾ ಧ್ಯಾನಮಾಡಿ ಅವು ಪರಿಹಾರವಾದ ಮೇಲೆ ಧ್ಯಾನವನ್ನು ಬಿಟ್ಟು ಪುನಃ ಸಾಮಾನ್ಯ ಜೀವನವನ್ನು ಜೀವಿಸುವವರು .. ಸಾಧಾರಣ ಆಶಯವನ್ನು ಹೊಂದಿರುವವರು.
ಹಾಗಲ್ಲದೇ “ಅವೆಲ್ಲಾ ಪರಿಹರಿಸಲ್ಪಟ್ಟಿದೆ ಎಂದರೆ .. ಇದರಲ್ಲಿ ಇನ್ನೂ ಏನಾದರೂ ಶಾಸ್ತ್ರೀಯತೆ ಇದೆಯೇನೊ” ಎನ್ನುವ ಸರಿಯಾದ ದೃಕ್ಪಥದಿಂದ .. ಇನ್ನೂ ಹೆಚ್ಚು ಶ್ರದ್ಧೆಯಿಂದ .. ಇನ್ನೂ ಹೆಚ್ಚು ಧ್ಯಾನಸಾಧನೆ ಮಾಡುತ್ತಾ ದೊಡ್ಡ ದೊಡ್ಡ ಅನುಭವಗಳನ್ನು, ಅನಂತವಾದ ಜ್ಞಾನವನ್ನು, ಮುಕ್ತಿಮಾರ್ಗವನ್ನು ಹೊಂದುತ್ತಾ ಆತ್ಮಾನಂದವನ್ನು ಅನುಭವಿಸುವವರು ಮಹಾನುಭಾವರು.
“ಮಹಾಶಯರು” ಆದವರೆ “ಮಹಾಸಾಧನೆ” ಮಾಡಿ “ಮಹಾನುಭಾವರು” ಆಗುತ್ತಾರೆ. ಅಂದರೆ ಮಹಾಶಯರಿಗೂ, ಮಹಾನುಭಾವರಿಗೂ, ನಡುವೆ ಮಹಾಸಾಧನೆ ಒಂದು ಸಮುದ್ರದಂತೆ ಇದೆ.
“ಗೌತಮ ಸಿದ್ಧಾರ್ಥನು” ಎನ್ನುವ ಒಬ್ಬ ಮಹಾಶಯ .. “ದುಃಖದ ಮೂಲವನ್ನು ತಿಳಿದುಕೊಂಡು ಅದನ್ನು ಪ್ರಪಂಚದಿಂದಲೇ ಓಡಿಸಿಬಿಡಬೇಕು” ಎನ್ನುವ ಮಹಾಆಶಯಕ್ಕೆ ಕಂಕಣಬದ್ಧನಾದನು. ಆ ಆಶಯ ಸಾಧನೆಗಾಗಿ ಅವರು ಆರು ವರ್ಷಗಳ ಕಾಲ “ಮಹಾಸಾಧನೆ”ಯನ್ನು ಮಾಡಿ ದಿವ್ಯಚಕ್ಷುವಿನ ಅನುಭವಗಳ ಮೂಲಕ ದುಃಖದ ಮೂಲವನ್ನು ಮತ್ತು ಅದರ ನಿವಾರಣ ಮಾರ್ಗವನ್ನು ಕಂಡುಹಿಡಿದು .. ಲೋಕಕ್ಕೆ ತಿಳಿಸಿ “ಮಹಾನುಭಾವನು”, “ಬುದ್ಧನು” ಆದನು.
ನಾವು ಸಹ ಹಿಂದಿನ ಜನ್ಮಗಳಲ್ಲಿ ಅನೇಕಾನೇಕ ಅನುಭವಗಳನ್ನು ಹೊಂದೇ ಇರುತ್ತೇವೆ. ಆದರೆ ವರ್ತಮಾನ ಜನ್ಮದಲ್ಲಿ ಕೂಡಾ ಧ್ಯಾನದ ಮೂಲಕ ಅವುಗಳಿಗೆ ಸ್ವಲ್ಪ ನೂತನ ಆಜ್ಯವನ್ನು ಹಾಕಿದರೇ ಅವು ಪುನಃ ಪ್ರಜ್ವಲಿಸಿ ನಾವು ಕೂಡಾ ಒಬ್ಬ ತ್ಯಾಗರಾಜಸ್ವಾಮಿಯ ಹಾಗೆ, ಒಬ್ಬ ಲೋಬ್ಸಾಂಗ್ ರಾಂಪಾರ ಹಾಗೆ, ಒಬ್ಬ ಗೌತಮಬುದ್ಧರ ಹಾಗೆ, ಒಬ್ಬ ಕೃಷ್ಣನ ಹಾಗೆ, ರಾಮನ ಹಾಗೆ, ಒಬ್ಬ ರಮಣ ಮಹರ್ಷಿಯ ಹಾಗೆ ದೊಡ್ಡ ಮಹಾನುಭಾವರಾಗಿ ಬದಲಾಗುತ್ತೇವೆ.
ಶ್ರೀ ರಮಣ ಮಹರ್ಷಿ ದೊಡ್ಡ ಮಹಾನುಭಾವರು. ಅವರು ತಮ್ಮ ಜೀವನವೆಲ್ಲಾ ಕೂಡಾ ಮಹಾಮೌನ ಸಮುದ್ರದಲ್ಲಿ ಇರುತ್ತಾ ತನ್ನ ಹತ್ತಿರಕ್ಕೆ ಯಾವಾಗ ಯಾರು ಬಂದರೂ .. “ನೀನು ಯಾರು?”, “ನಿನ್ನನ್ನು ನೀನು ತಿಳಿದುಕೊಂಡೆಯಾ?” ಎಂದು ಪ್ರಶ್ನಿಸುತ್ತಿದ್ದರು. ಅನೇಕ ಜನ “ನಮ್ಮ ಮನೆಯಲ್ಲಿ ಇಂತಹ ಸಮಸ್ಯೆ ಇದೆ ರೀ” ಎನ್ನುತ್ತಾ ಅವರ ಹತ್ತಿರ ಬಂದರೆ .. “ನಿಮ್ಮ ಸಮಸ್ಯೆಯ ವಿಚಾರ ಅನಂತರ ನೋಡೋಣ .. ಮುಂಚಿತವಾಗಿ ನೀವು ಯಾರೋ ನಿಮಗೆ ಗೊತ್ತಿದಿಯಾ?” ಎಂದು ಕೇಳುತ್ತಿದ್ದರು.
“ನನ್ನ ಹೆಸರು ರಾಮಾರಾವು ರೀ” ಅಂದರೆ ..
“ನಿನ್ನ ಹೆಸರು ಕೇಳಲಿಲ್ಲಯ್ಯಾ” ಎನ್ನುತಿದ್ದರು !
“ನಮ್ಮದು ಇಂತಹ ನೆಲ್ಲೂರು ರೀ “ಎಂದರೆ
“ನಿನ್ನ ಊರು ಕೇಳಲಿಲ್ಲಯ್ಯಾ” ಎನ್ನುತ್ತಿದ್ದರು !
ಅಲ್ಲಿಗೆ ಬಂದವರು ಏನೂ ತಿಳಿಯದೆ ತೆಲೆಕೆರೆದುಕೊಳ್ಳುತ್ತಿದ್ದರು. ರಮಣಮಹರ್ಷಿಯವರು ತನ್ನ ಹತ್ತಿರ ಬಂದವರಿಗೆಲ್ಲಾ “ಹಾಗೆ ಸುಮ್ಮನೆ ಕುಳಿತುಕೋಪ್ಪಾ; “ನಿನ್ನನ್ನು ನೀನು ತಿಳಿದುಕೊ; ಚುಮ್ಮಾ ಇರು” ಎಂದು ಮಾತ್ರವೇ ಹೇಳುತ್ತಿದ್ದರು. ರಮಣ ಮಹರ್ಷಿ ಪುಸ್ತಕಗಳನ್ನು ಓದಿ ಅವರ ಜೀವನವನ್ನು ಮಥಿಸಿದರೆ .. ಅವರು ತಮ್ಮನ್ನು ತಾವು ತಿಳಿದುಕೊಳ್ಳಲು ಎಂತಹ ಮಹಾಸಾಧನೆಯನ್ನು ಮಾಡಿದ್ದಾರೆ ಎಂಬುದು ತಿಳಿದುಬರುತ್ತದೆ.
ರಮಣ ಮಹಿರ್ಷಿಯ ಹಾಗೆ ಗ್ರೀಕ್ ದೇಶಕ್ಕೆ ಸೇರಿದ ಸಾಕ್ರೆಟಿಸ್, ಅರಿಸ್ಟಾಟಲ್, ಪ್ಲೆಟೋ, ಪೈಥಾಗೊರಸ್ ಅಂತಹ ದೊಡ್ಡ ತತ್ತ್ವವೇತ್ತರ ಮಹಾಪ್ರಬೋಧ ಸಹ “ನಿನ್ನನ್ನು ನೀನು ತಿಳಿದುಕೋ” ಎನ್ನುವುದೇ.
“Be still and know Thyself” ಎನ್ನುತ್ತಾ “ನಿನ್ನದು ಕೋತಿಯಂತಹ ಮನಸ್ಸು .. ನೀನೂ ಸಹ ಸುಮ್ಮನೆ ಹಾಗೆ ಕದಲದೇ ನಿಶ್ಚಲವಾಗಿ ಕುಳಿತುಕೋ. ಅಂತಹ ನಿಶ್ಚಲ ಸ್ಥಿತಿಯಲ್ಲಿ ನೀನು ಯಾರೋ, ನಿನ್ನಲ್ಲಿ ನೋಡುವವರು ಯಾರೊ .. ನಿನ್ನಿಂದ ನೋಡಲ್ಪಡುವುದು ಯಾರೋ .. ನಿಜಕ್ಕೂ ಅದೆಲ್ಲಾ ಒಂದೇ ಎನ್ನುವುದು ಹೇಗೋ .. ನಿನಗೆ ಅರ್ಥವಾಗುತ್ತದೆ”. ಆದ್ದರಿಂದ `ಕದಲದೇ ಕುಳಿತುಕೋ’ ಎನ್ನುವುದೇ ಗ್ರೀಕ್ ಮಹಾನುಭಾವರೆಲ್ಲರ ಸಂದೇಶ.
ಇಂತಹ ಸಂದೇಶವನ್ನು ನೀಡಿದಕ್ಕೆ “ಯುವಕರನ್ನು ತಪ್ಪುದಾರಿ ಹಿಡಿಸುತ್ತಿದ್ದಾನೆ” ಎನ್ನುತ್ತಾ ಸಾಕ್ರೆಟಿಸ್ಗೆ ಅಂದಿನ ಸಮಾಜ ವಿಷಯಕೊಟ್ಟು ಸಾಯಿಸಿತು. ಆದರೂ ಸಾಕ್ರೆಟಿಸ್ ಸಾವಿಗೆ ಭಯಪಡಲಿಲ್ಲ. “ಸಾವಿನ ಅನುಭವ ಹೇಗೆ ಇರುತ್ತದೆಯಾ ನೋಡುತ್ತೇನೆ” ಎಂದುಕೊಳ್ಳುತ್ತಾ ಉತ್ಸಾಹವಾಗಿ ವಿಷಪಾತ್ರೆಯನ್ನು ಎತ್ತಿಕೊಂಡು ಅದರಲ್ಲಿರುವ ವಿಷವನ್ನು ಹಾಯಾಗಿ ಕುಡಿದುಬಿಟ್ಟನು. ಸಾಕ್ರೆಟಿಸ್ ಹಾಗೆ ಸಾವಿಗೆ ಭಯಪಡದೆ ಇರುವವರೇ “ಮಹಾನುಭಾವರು” ಆಗುತ್ತಾರೆ ಹೊರತು .. ಚಿಕ್ಕ ತಲೆನೋವಿಗೆ ಅತ್ತು ವೈದ್ಯರ ಹತ್ತಿರಕ್ಕೆ ಓಡುವವರು ಮಹಾಶಯರು ಮಹಾನುಭಾವರು ಹೇಗೆ ಆಗುತ್ತಾರೆ? !
ಮಹಾನುಭಾವರು ಯಾರೂ ಸಾವಿಗೆ ಭಯಪಡುವುದಿಲ್ಲ. ಅವರು ಏತಕ್ಕಾಗಿ ಭಯಪಡುವುದಿಲ್ಲವೆಂದರೇ .. ನಿಜಕ್ಕೂ ಮರಣ ಎನ್ನುವುದೇ ಇಲ್ಲ ಎಂದು ಅವರು ತಿಳಿದುಕೊಂಡಿದ್ದಾರೆ ಆದ್ದರಿಂದ.
“ಸಾವು ಇದೆ” ಎಂದು ಭಯಪಡುವ ಸಾಮಾನ್ಯ ಮಾನವರು “ಸಾವಿನ ಅಂತ್ಯ ನೋಡೋಣ” ಎನ್ನುವ ಮಹಾ ಆಶಯದಿಂದ ಛಲದಿಂದ ಧ್ಯಾನಮಾಡಿ ಅನೇಕಾನೇಕ ಸೂಕ್ಷ್ಮಶರೀರಾದಿ ಅನುಭವಗಳನ್ನು ಹೊಂದಿದರೆ, ಆತ್ಮಕ್ಕೆ ಸಾವು ಎನ್ನುವದೇ ಇಲ್ಲ ಎನ್ನುವ ಸತ್ಯವನ್ನು ತಿಳಿದುಕೊಂಡರೆ ಮಹಾನುಭಾವರಾಗಿ ರೂಪುಗೊಳ್ಳುತ್ತಾರೆ.
ಮಹಾನುಭಾವರಾದ ಯೋಗಿ ವೇಮನ “ಛಲ”ವನ್ನು ಕುರಿತು “ವೇಮನ ಶತಕ”ದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ :
” ಪಟ್ಟುಹಿಡಿಯೆಸಲ್ಲ ಹಿಡಿದು ಬಿಡಲು ಸಲ್ಲ
ಹಿಡಿಯೆ ಬಹಳ ಬಿಗಿಯೆ ಹಿಡಿಯಬೇಕು
ಹಿಡಿದು ಬಿಡುವುದಕಿಂತ ಸಾಯ್ವುದೆ ಲೇಸು
ವಿಶ್ವದಾಭಿರಾಮ ಕೇಳೈ ವೇಮ “
ಮಹಾಶಯವಾದವರು “ಛಲ”ದ ಮೂಲಕವೇ ಮಹಾಸಾಧನೆಯನ್ನು ಮಾಡಿ ಮಹಾನುಭಾವರಾಗುತ್ತಾರೆ.
ಮಹಾನುಭಾವರ ಮತ್ತೊಂದು ದೊಡ್ಡ ಲಕ್ಷಣ ಕ್ಷಮಾಗುಣ! ಅವರು ಸದಾ “ಪರನಿಂದೆ” ಮಾಡುವುದಿಲ್ಲ. ಮೂರ್ಖರಾದ ಪ್ರಜೆಗಳು ತಮ್ಮನ್ನು ಶಿಲುಬೆಗೆ ಹಾಕುತ್ತಿದ್ದರೆ ಏಸುಕ್ರಿಸ್ತ .. “ಇವರಿಗೆ ಏನೂ ತಿಳಿಯದು; ಇವರೆಲ್ಲಾ ಸಾಧಾರಣ ಅನುಭವಗಳಿಂದ ಕೂಡಿದ ಸಾಮಾನ್ಯ ಮನುಷ್ಯರು. ದಯೆಮಾಡಿ ಇವರನ್ನು ಕ್ಷಮಿಸಿ .. ಇವರ ಪಾಪವನ್ನು ಅಳಿಸಿಹಾಕು” ಎನ್ನುತ್ತಾ ತನ್ನ ತಂದೆಯಾದ ದೇವರನ್ನು ಪ್ರಾರ್ಥಿಸಿದ್ದಾರೆ.
ಸತ್ಯದಲ್ಲಿ ಜೀವಿಸುವ ಮಹಾನುಭಾವರೆಲ್ಲಾ ಕೂಡಾ ಹೀಗೆ ಸೃಷ್ಟಿಯಲ್ಲಿನ ಏಕತೆಯನ್ನು ಗ್ರಹಿಸುತ್ತಾ ತಾವು ಮಾತನಾಡುವ ಪ್ರತಿಯೊಂದು ಮಾತಿನಲ್ಲೂ, ತಾವು ಮಾಡುವ ಪ್ರತಿಯೊಂದು ಕ್ರಿಯೆಯಲ್ಲೂ ತಮ್ಮ ಆತ್ಮತತ್ವವನ್ನು ಪ್ರದರ್ಶಿಸುತ್ತಾ ಇರುತ್ತಾರೆ.
* * *
ಜೈನ ಮತ ಸ್ಥಾಪಕರಾದ ವರ್ಧಮಾನ ಮಹಾವೀರರು .. “ಸತ್ಯವನ್ನು ಕಂಡುಹಿಡಿಯಬೇಕು” ಎನ್ನುವ ಮಹಾಶಯದಿಂದ ಸಮಸ್ತ ರಾಜಭೋಗಗಳನ್ನು ತ್ಯಜಿಸಿ, ಹನ್ನೆರಡು ವರ್ಷಗಳ ಕಾಲ ಕಠೋರವಾದ ಮಹಾಧ್ಯಾನಸಾಧನೆಯನ್ನು ಮಾಡಿ ಮಹಾನುಭಾವನಾದನು. ರಾಜಕುಮಾರರಾದ ರಾಮ, ಕೃಷ್ಣ ಕೂಡಾ ಅತಿ ಸಾಮಾನ್ಯ ವಿದ್ಯಾರ್ಥಿಗಳಾಗಿ ತಮ್ಮ ತಮ್ಮ ಗುರುಗಳ ಹತ್ತಿರ ಗುರುಕುಲಗಳಲ್ಲೇ ಇರುತ್ತಾ .. ಅನೇಕಾನೇಕ ಪ್ರಾಪಂಚಿಕ, ಆಧ್ಯಾತ್ಮಿಕ ವಿದ್ಯೆಗಳನ್ನು ಅಭ್ಯಸಿಸಿ ಯೋಗೀಶ್ವರರಾದರು.
ಪ್ರಮುಖ ಆಧ್ಯಾತ್ಮಿಕ ಸಂಸ್ಥೆಯಾದ ಥಿಯೊಸಾಫಿಕಲ್ ಸೊಸೈಟಿಯನ್ನು ಭಾರತದೇಶದಲ್ಲಿ ಸ್ಥಾಪಿಸಿದ ಸಂಪನ್ನರಾದ ರಷ್ಯನ್ ಗ್ರೇಟ್ ಮಾಸ್ಟರ್ .. ಮೇಡಂ ಬ್ಲವಾಟ್ಸ್ಕೀ .. ಗುಪ್ತವಿದ್ಯೆಗಳಲ್ಲಿರುವ ನಿಗೂಢ ರಹಸ್ಯಗಳನ್ನು ಶೋಧಿಸಿ, ಸಾಧಿಸಬೇಕೆನ್ನುವ ಮಹಾಆಶಯದಿಂದ ತಮ್ಮ ದೇಶವನ್ನು ಬಿಟ್ಟು ಒಂಟಿಯಾಗಿ ಭಾರತದೇಶಕ್ಕೆ ಬಂದುಬಿಟ್ಟರು.
ಆಕೆಯ ನಂತರ ಥಿಯೊಸಫೀ ಆಂದೋಳನವನ್ನು ಮುನ್ನಡೆಸಿದ ಬಿಷಪ್ ಲೆಡ್ಬೀಟರ್, ಡಾ|| ಅನಿಬೆಸೆಂಟ್, ಕಲ್ನಲ್ ಅಲ್ಕಾಟ್ ಅಂತಹ ಮಹಾನುಭಾವರೆಲ್ಲಾ ಸ್ವಂತ ಅನುಭವಗಳಿಂದ ಕೂಡಿದ ಅದ್ಭುತವಾದ ಪುಸ್ತಕಗಳನ್ನು ರಚಿಸಿ ನಮಗೆ ನೀಡಿದ್ದಾರೆ. ಏಳು ಶರೀರಗಳನ್ನು ಕುರಿತು, ಪ್ರಾಣಮಯ ಕೋಶದಲ್ಲಿರುವ ಚಕ್ರಗಳನ್ನು ಕುರಿತು, ಆರಾ ಕುರಿತು, ಥಾಟ್ ಪವರ್ ಕುರಿತು .. ಮೇಡಂ ಬ್ಲವಾಟ್ಸ್ಕೀ, ಅನಿಬೆಸೆಂಟ್, ಜಿನರಾಜದಾಸ, ಲೆಡ್ಬೀಟರ್, ಆಲ್ಕಾಟ್ ಮುಂತಾದವರು ತಮ್ಮ ದಿವ್ಯಚಕ್ಷುವಿನ ಅನುಭವಗಳನ್ನು ಸೇರಿಸಿ ನೀಡಿರುವ ಈ ಪುಸ್ತಕಗಳೆಲ್ಲಾ ಪಿರಮಿಡ್ ಧ್ಯಾನಿಗಳಿಗೆ ಅನುದಿನ .. ಪಠ್ಯಪುಸ್ತಕಗಳು.
ಥಿಯೊಸಾಫಿಕಲ್ ಸೊಸೈಟಿ ಮಾಸ್ಟರ್ಗಳೆಲ್ಲರೂ ಸಹ “ಪರಮ ಗುರು ಮಂಡಲಿ”ಗೆ ಸೇರಿದ ಮಾಸ್ಟರ್ ಮೌರ್ಯ, ಮಾಸ್ಟರ್ ಕೂಟ್ ಹೂಮೀಲ ಸೂಚನೆಗಳ ಪ್ರಕಾರ ನಡೆದ ಮಹಾನುಭಾವರೇ.
ಆಧುನಿಕ ಕಾಲಕ್ಕೆ ಸೇರಿದ ಡಾ||ರೇಮಂಡ್ ಮೂಡೀ, ಕಾರ್ಲೋಸ್ ಕಾಸ್ಟಾನೆಡಾ, ಡಾನ್ ಯುವಾನ್, ಎಲಿಜಬೆತ್ ಕ್ಯೂಬ್ಲರ್ ರಾಸ್, ಡಾ|| ಬೆರ್ನೀ ಸೀಗಲ್, ರಿಚರ್ಡ್ ಬಾಕ್, ಪೀಟರ್ ರಿಛೇಲೂ .. ಅಂತಹ ಅನೇಕ ಜನ ಎಣಿಸಲಾರದಷ್ಟು ಜನ ಮಹಾನುಭಾವರು .. ಆಧ್ಯಾತ್ಮಿಕ ಶಾಸ್ತ್ರ ಸಂಶೋಧನೆಗಳನ್ನು ಮಾಡಿ ಅನೇಕಾನೇಕ ಅನುಭವಗಳನ್ನು ಹೊಂದಿ .. ತಮ್ಮ ಸ್ವಂತ ಅನುಭವಗಳಿಂದ ಕೂಡಿದ ವಿಷಯಗಳನ್ನು ವಿಶೇಷವಾಗಿ ಈ ಸಮಾಜಕ್ಕೆ ಪುಸ್ತಕಗಳ ರೂಪದಲ್ಲಿ ನೀಡಿದ್ದಾರೆ.
ಮುಖ್ಯವಾಗಿ ಕಾರ್ಲೋಸ್ ಕಾಸ್ಟಾನೆಡಾ .. ತನ್ನ ಸ್ವಂತ ಭೌತಿಕ ಶರೀರವನ್ನು ತಮ್ಮ ಇಷ್ಟಾನುಸಾರ ಅದೃಶ್ಯ ಮಾಡಿಕೊಳ್ಳಬಲ್ಲ ದಿಟ್ಟೆ. ಒಂದು ಬೆಟ್ಟದ ಮೇಲಿಂದ ತಮ್ಮಷ್ಟಕ್ಕೆ ತಾವಾಗಿ ದುಮುಕಿ .. ಮರಣಿಸಿ .. ಪುನಃ ಇನ್ನೊಂದು ರೂಪ ಪಡೆದು .. ಅನೇಕಾನೇಕ ಪ್ರದೇಶಗಳನ್ನು ಓಡಾಡುತ್ತಾ ತಾನು ಗ್ರಹಿಸಿದ ಜೀವನ ಸತ್ಯಗಳನ್ನು, ಯೋಗ ಸೂತ್ರಗಳನ್ನು ಗ್ರಂಥಸ್ಥ ಮಾಡಿದರು. ಇದೆಲ್ಲಾ ಈ ನಿಜವಾಗಿಯೂ ನಡೆದಿದೆ ಹೊರತು.. ಇವುಗಳು ಹರಟೆ ಪುರಾಣಗಳಲ್ಲಿನ ಕಥೆಗಳಲ್ಲ.
ಮಹಾನುಭಾವರಲ್ಲಿ ನಾವು ನೆನೆಯಬೇಕಾಗಿರುವುದು ಓಷೋ .. ಅಂದರೆ ಆಚಾರ್ಯ ರಜನೀಷ್. ಅವರು ತಮ್ಮ ಬೋಧನೆಗಳ ಮೂಲಕ ಈ ವಿಶ್ವಕ್ಕೆ ಒಂದು ದೊಡ್ಡ ಆಧ್ಯಾತ್ಮಿಕ ರೂಪವನ್ನು ನೀಡಿದರು. ಆತ್ಮನ್ಯೂನತಾ ಭಾವನೆಗಳಿಂದ ತಮ್ಮನ್ನು ತಾವು ವಿಮರ್ಶಿಸಿಕೊಳ್ಳುವ ಪ್ರಜೆಗಳೆಲ್ಲರನ್ನೂ ಮೂಖತನ ಎಂಬುದರಿಂದ ಮಹಾವಿಜ್ಞಾನದ ಕಡೆಗೆ ಅವರು ನಡೆಸಿದರು. 605ಕ್ಕೂ ಹೆಚ್ಚಾಗಿರುವ ಓಷೋ ಬೋಧನೆಗಳಿಂದ ಕೂಡಿದ ಪುಸ್ತಕಗಳನ್ನು ಓದದೇ ಇದ್ದರೆ ನಮ್ಮ ಜನ್ಮ ವ್ಯರ್ಥ. ಜಗತ್ತಿನಲ್ಲಿರುವ ಎಲ್ಲಾ ಗುರುಗಳನ್ನು ಕುರಿತು ಒಂದು ಅಮೃತಧಾರೆಯಂತೆ ಅವರು ಅದ್ಭುತವಾಗಿ ತಿಳಿಸಿದ್ದಾರೆ.
ಹೀಗೆ ಒಬ್ಬರಲ್ಲ, ಇಬ್ಬರಲ್ಲ .. ಶೋಧಿಸುತ್ತಾ ಹೋಗುತ್ತಿದ್ದರೆ ಅನೇಕಾನೇಕ ಮಹಾನುಭಾವರನ್ನು ನಾವು ಭೇಟಿಯಾಗುತ್ತಲೇ ಇರುತ್ತೇವೆ .. ಅವರವರ ಜ್ಞಾನಧಾರೆಗಳನ್ನು ಪಡೆಯುತ್ತಲೇ ಇರುತ್ತೇವೆ.
ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್ ದೇಶವಿದೇಶಗಳ ಮಹಾನುಭಾವರೆಲ್ಲರ ಪುಸ್ತಕಗಳನ್ನು ಅನೇಕ ಭಾಷೆಗಳಲ್ಲಿ ಅನುವಾದಿಸಿ ಎಲ್ಲರಿಗೂ ನೀಡುತ್ತಿದೆ. ದಿನಕ್ಕೆ ಒಂದು ಪುಸ್ತಕವನ್ನು ಓದುತ್ತಾಹೋದರೂ .. ಒಂದು ಜೀವನಕಾಲ ಸಾಲದು. ಅರ್ಥವಿಲ್ಲದ ಹುಚ್ಚು ಹುಚ್ಚು ಸಮಸ್ಯೆಗಳಿಂದ ಒದ್ದಾಡುತ್ತಿರುವ ಸಾಮಾನ್ಯ ಮನುಷ್ಯನಿಗೆ ಜೀವನ ಎನ್ನುವುದು ಪ್ರತಿನಿತ್ಯ ಗಂಡಾಂತರವಾದರೇ .. ಅನುಕ್ಷಣ ಉನ್ನತ ಲೋಕವಾಸಿಗಳಿಂದ ಅನುಸಂಧಾನಗೊಂಡು ವಿಶೇಷ ಧ್ಯಾನ ಅನುಭವಗಳಿಂದ ಪ್ರಕಾಶಮಾನವಾಗುವ ಪಿರಮಿಡ್ ಮಾಸ್ಟರ್ಗಳಿಗೆ ಜೀವನ ಪ್ರತಿನಿತ್ಯ ಜ್ಞಾನ !
“ಸ್ವಾಧ್ಯಾಯ”ದ ಮೂಲಕ ಅಪಾರವಾಗಿ ಜ್ಞಾನವನ್ನು ಪಡೆಯುತ್ತಾ, ಧ್ಯಾನಸಾಧನೆಯ ಮೂಲಕ ವಿಶೇಷವಾಗಿ ಆತ್ಮಶಕ್ತಿಯನ್ನು ಹೊಂದುತ್ತಾ ಅದ್ಭುತವಾದ ದಿವ್ಯಚಕ್ಷುವಿನ ಅನುಭವಗಳನ್ನು ಹೊಂದುತ್ತಿರುವ ಪಿರಮಿಡ್ ಮಾಸ್ಟರ್ಗಳೆಲ್ಲರೂ ಕೂಡಾ ಮಹಾನುಭಾವರೇ.
“ರಾಮ ರಾಮ” ಎನ್ನುತ್ತಾ ರಾಮನಾಮವನ್ನು ಉಚ್ಛರಿಸಿದರೆ, “ಗೋವಿಂದಾ .. ಗೋವಿಂದಾ” ಎಂದು ಭಜನೆ ಮಾಡಿದರೆ ಮಹಾನುಭಾವರಾಗಲಾರವು. ಆ ದೇವರ ಹಾಗೆ ಸತ್ಯವನ್ನು ತಿಳಿದುಕೊಂಡು ಅವರು ಆಚರಿಸಿದ ಹಾಗೆ ಧರ್ಮವನ್ನು ಆಚರಿಸಿದರೆ ಮಾತ್ರವೇ ಅವರಂತೆ ನಾವು ಆಗುತ್ತೇವೆ. ಮಹಾನುಭಾವರಾದ ಶ್ರೀ ತಾಳ್ಳಪಾಕ ಅನ್ನಮಾಚಾರ್ಯರು .. “ಈ ಶರೀರದ ಉಸಿರಿನಲ್ಲಿ ಗಣಿ ಇದೆ .. ಉಸಿರಿನಲ್ಲಿ ದೇವರಿದ್ದಾರೆ ಯೋಗೀಂದ್ರರಿದ್ದಾರೆ” ಎನ್ನುತ್ತಾ ಆನಾಪಾನಸತಿ ಧ್ಯಾನವನ್ನು ಕುರಿತು ಚೆನ್ನಾಗಿ ತಿಳಿಸಿದ್ದಾರೆ.
ನಾಸ್ತಿಕರಿಗೆ ದೇವರು ಎಲ್ಲೂ ಇಲ್ಲ; ಅಜ್ಞಾನ ಆಸ್ತಿಕರಿಗೆ ದೇವರು ಆಯ್ಕೆ ಮಾಡಲಾದ ಕೆಲವು ಕ್ಷೇತ್ರಗಳಲ್ಲೇ ಇದ್ದಾರೆ; ವೇದಾಂತರಿಗೆ ದೇವರು ಎಲ್ಲೆಡೆ ಇದ್ದಾರೆ; ಆದರೆ ಇವರೆಲ್ಲರಿಗೂ ಮೀರಿದ ಉನ್ನತ ಸ್ಥಿತಿಗೆ ಸೇರಿದ ಯೋಗಿಗಳಿಗೆ ದೇವರು ತಮ್ಮ ಉಸಿರಿನಲ್ಲೇ ಇದ್ದಾರೆ.
“ಉಸಿರಿನ” ಮೂಲಕವೇ ಧ್ಯಾನಯೋಗಸಾಧನೆ ಪ್ರಾರಂಭವಾಗುತ್ತದೆ; ಯೋಗಿಯಾದವನು ಋಷಿ ಆಗುತ್ತಾನೆ ಮತ್ತು ಋಷಿಯಾದವನೇ ಬ್ರಹ್ಮರ್ಷಿಯಾಗುತ್ತಾನೆ. ಹಾಗೆ ಬ್ರಹ್ಮರ್ಷಿಗಳಾದವರೇ ಏಸುಕ್ರಿಸ್ತ, ಕೃಷ್ಣನು, ಬುದ್ಧನು, ವೆಂಕಟೇಶ್ವರಸ್ವಾಮಿ.
ಆದ್ದರಿಂದ, ನಾವು ನಮ್ಮ ಆಧ್ಯಾತ್ಮಿಕ ಸಾಧನಾಕ್ರಮದಲ್ಲಿ ಪರಿಣಿತಿಯನ್ನು ಸಾಧಿಸಬೇಕಾದರೆ .. ವೇದಾಂತವನ್ನು ಮೀರಿ ಪ್ರತಿದಿನ ಧ್ಯಾನಯೋಗ ಸಾಧನೆಗೆ ತಕ್ಷಣ ಉಪಕ್ರಮಿಸಬೇಕು. “ಶ್ವಾಸದ ಮೇಲೆ ಗಮನ”ವನ್ನಿಟ್ಟು ಆಂಜನೇಯನಂತೆ ದಿವ್ಯದೃಷ್ಟಿಯನ್ನು ಸಂಪಾದಿಸಿಕೊಂಡು .. ಋಷಿ, ಬ್ರಹ್ಮರ್ಷಿ ಆಗಬೇಕು. ಅನ್ನಮಾಚಾರ್ಯರು ಹೀಗೆ ಹೇಳಿದ್ದಾರೆ.
“ನಾನಾಟಿ ಬ್ರತುಕು ನಾಟಕಮು”
ಅಂದರೆ, ಅನೇಕಾನೇಕ ಜನ್ಮಗಳಿಂದ ಜೀವನವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅದೆಲ್ಲಾ ನಾಟಕ ಎಂದು ಅರ್ಥ
ಕಾನಕ ಕನ್ನದಿ ಕೈವಲ್ಯಮು
ಅಂದರೆ ಕಾಣದೇ ಇರುವುದನ್ನು ಕಾಣುವುದೇ ಕೈವಲ್ಯ
ಪುಟ್ಟಟಯು ನಿಜಮು, ಪೋವುಟಯು ನಿಜಮು
ಅಂದರೆ ಹುಟ್ಟುವುದೂ ನಿಜ, ಸಾಯುವುದು ನಿಜ
ನಟ್ಟನಡಿ ಮೀ ಪನಿ ನಾಟಕಮು
ಅಂದರೆ, ಹುಟ್ಟಿ ಸಾಯುವಷ್ಟರಲ್ಲಿ ನಾವು ಜೀವಿಸುವ ಜೀವನವೆಲ್ಲಾ ನಾಟಕ ಎಂದು ತಿಳಿಸಿದ್ದಾರೆ
ಎಟ್ಟ ಎದುಟಗಲವಿ ಪ್ರಪಂಚಮು
ಅಂದರೆ ನಿಮ್ಮ ಎದುರಿಗೆ ಇರುವುದು ಪ್ರಪಂಚವು
ಕಟ್ಟಕಡಪಟಿದಿ ಕೈವಲ್ಯಮು
ಅಂದರೆ ಕಡೆಗೆ ನಾವು ತಲುಪಬೇಕಾಗಿರುವುದು ಕೈವಲ್ಯವು
ಕುಡಿಚೇದನ್ನಮು ಕೋಕಚೆಟ್ಟೆಡಿದಿ
ಅಂದರೆ ನಾವು ಉಂಡುವುದು ಅನ್ನ; ಧರಿಸುವುದು ವಸ್ತ್ರ
ನಡುಮಂತ್ರಪು ಪನಿ ನಾಟಕಮು
ಅಂದರೆ ಅನಿರೀಕ್ಷಿತವಾಗಿ ಬಂದು ಮಾಡುತ್ತಿರುವ
ಕೆಲಸವೆಲ್ಲಾ ನಾಟಕವು
ವೊಡಿಗಟ್ಟುಕೊನಿನ ಉಭಯಕರ್ಮಮುಲು
ಅಂದರೆ ಎರಡು ಕರ್ಮಗಳನ್ನು ಮಡಿಲಲ್ಲಿ ಕಟ್ಟುಕೊಂಡಿದ್ದೇವೆ.
ಗಡಿ ದಾಟಿನಪ್ಪಡೇ ಕೈವಲ್ಯಮು
ಅಂದರೆ, `ಪುನರಪಿ ಜನನಂ ಪುನರಪಿ ಮರಣಂ’ ಎನ್ನುವ
ಚಕ್ರದ ಗಡಿ ದಾಟಿದಾಗಲೇ ನಮಗೆ ಕೈವಲ್ಯ ಸಿಗುವುದು ಎಂದು ಅರ್ಥ
ತೆಗೆದು ಪಾಪಮು, ತೀರದು ಪುಣ್ಯಮು
ಅಂದರೆ ಪಾಪದ ಭಾರ ಕಡಿಮೆ ಆಗುವುದಿಲ್ಲ. ಪುಣ್ಯ ತೀರುವುದಿಲ್ಲ
ನಗಿ ನಗಿ ಕಾಲಮು ನಾಟಕಮು
ನಡುವೆ ಇರುವ ಕಾಲವೆಲ್ಲಾ ನಾಟಕವೇ
ಎಗುವಲೋ ಶ್ರೀ ವೇಂಕಟೇಶ್ವರುಡೇ ನಿಜಮು
ಅಂದರೆ ಮೇಲೆ ಇರುವ ಶ್ರೀ ವೇಂಕಟೇಶ್ವರನೇ ನಿಜ
ಗಗನಮು ಮೀದಿದಿ ಕೈವಲ್ಯಮು
ಅಂದರೆ “ಮೇಲಿನ ಲೋಕದಲ್ಲಿರುವುದೇ ಕೈವಲ್ಯ”
“ಅನೇಕಾನೇಕ ಜನ್ಮಗಳಿಂದ ಜೀವಿಸುತ್ತಿರುವ ಬದುಕು ನಾಟಕ” ಎನ್ನುತ್ತಾ .. ಮಾನವನು ಈ ಭೂಮಿಯ ಮೇಲೆ ಜೀವಿಸಬೇಕಾದ ಶಾಸ್ತ್ರೀಯ ವಿಧಾನವನ್ನು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. “ಕಾಣದೇ ಇರುವುದನ್ನೇ ಕಾಣುವುದೇ ಕೈವಲ್ಯ” ಅಂದರೆ “ಧ್ಯಾನದ ಮೂಲಕ ದಿವ್ಯಚಕ್ಷುವಿನಿಂದ ನೋಡಿದ್ದೇ ಕೈವಲ್ಯ, ಅಂದರೆ ಸತ್ಯ. ಅಷ್ಟೇ ಹೊರತು .. “ಸಾಮಾನ್ಯ ಚರ್ಮಚಕ್ಷುಗಳಿಂದ ನೋಡಿದ್ದೆಲ್ಲಾ ಕ್ಷಣದಲ್ಲಿ ಮಾಯವಾಗುವುದು ನಾಟಕವೇ ಹೊರತು ಮತ್ತೇನಲ್ಲ” ಎಂದರು. ಶ್ರೀ ಅನ್ನಮಾಚಾರ್ಯರಿಗೆ ಶತಕೋಟಿ ಧ್ಯಾನವಂದನೆಗಳನ್ನು ಅರ್ಪಿಸುತ್ತಿದ್ದೇನೆ.
ಮಹಾನುಭಾವರನ್ನು ಕುರಿತು ತಿಳಿದುಕೊಳ್ಳುತ್ತಾ, ಅವರವರ ಜೀವನದಲ್ಲಿ ನಡೆದ ಅದ್ಭುತಗಳನ್ನು ಸಂಶೋಧಿಸುತ್ತಾ, ಅವರ ಹಾಗೆ ಮಹಾನುಭಾವರಾಗಿ ರೂಪುಗೊಳ್ಳುವುದೇ ಮಾನವ ಜೀವನದ ಲಕ್ಷ್ಯ. ಆ ಗುರಿಯನ್ನು ಪೂರ್ತಿಮಾಡಿಕೊಳ್ಳುವವರೆಗೂ ಪುನರಪಿ ಜನನಂ .. ಪುನರಪಿ ಮರಣಂ ಎನ್ನುತ್ತಾ ಮಾರ್ಗಾಯಾಸದಿಂದ ಭೂಮಿಗೆ ಬರುತ್ತಾ .. ಹೋಗುತ್ತಲೇ ಇರಬೇಕು.
Recent Comments