ಭೂಲೋಕದಲ್ಲಿ ಮಾನವಜನ್ಮ ಒಂದು ‘ಕ್ರಾಷ್ ಕೋರ್ಸ್’ ಇದ್ದಹಾಗೆ
ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಹಾಗೆ ಧ್ಯಾನ ಮಾಡಲು ಪಿರಮಿಡ್ ನಿರ್ಮಿಸಿಕೊಳ್ಳಬೇಕು.
ಹಾಗೆಯೇ, ಪ್ರತಿ ಪಿರಮಿಡ್ ಮಾಸ್ಟರ್ ತಪ್ಪದೇ ತನ್ನ ಸ್ವಾನುಭವಗಳಿಂದ ಒಂದು ಪುಸ್ತಕವನ್ನು ಬರೆಯಬೇಕು. ಒಬ್ಬೊಬ್ಬ ಪಿರಮಿಡ್ ಮಾಸ್ಟರ್ ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಂಡು ಧ್ಯಾನ, ಜ್ಞಾನ ಬೋಧನೆ ಮಾಡಬೇಕು … ಅದು ಪ್ರತಿ ಪಿರಮಿಡ್ ಮಾಸ್ಟರ್ನ ತಕ್ಷಣ ಕರ್ತವ್ಯ.
ಪ್ರತಿ ಮನುಷ್ಯನಲ್ಲಿರುವ ಷಟ್ಚಕ್ರಗಳು ಆ ಮನುಷ್ಯನ ಹಂತವನ್ನು ತಿಳಿಸುತ್ತದೆ. ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ ಚಕ್ರಗಳ ಮಟ್ಟದಲ್ಲಿರುವ ಮನುಷ್ಯ ದೇವರು ಎಲ್ಲೋ ಹೊರಗಿದ್ದಾನೆ ಎಂದು ಹುಡುಕಾಡುತ್ತಾನೆ. ಹಾಗೆಯೇ, ಅನಾಹತ, ವಿಶುದ್ಧ, ಆಜ್ಞಾ ಚಕ್ರಗಳ ಹಂತದಲ್ಲಿರುವ ಮನುಷ್ಯ ದೇವರು ನನ್ನಲ್ಲೇ ಇದ್ದಾನೆ ಎಂದು ಹುಡುಕುತ್ತಾನೆ… ಆದರೆ, ಸಹಸ್ರಾರ ಸ್ಥಿತಿಯಲ್ಲಿರುವ ಮನುಷ್ಯ ನಾನೇ ದೇವರು ಎಂದು ತಿಳಿದುಕೊಳ್ಳುತ್ತಾನೆ. ಇಂದ್ರಿಯಗಳನ ಜಯಿಸಿದವನೇ ಇಂದ್ರನು.
೧೯೮೭ನೇ ವರ್ಷದಿಂದ ೨೦೧೨ರ ವರೆಗೂ ಭೂಮಿಯ ತರಂಗಾಂತರದಲ್ಲಿ ಆಗಿರುವ ಭಾರಿ ಬದಲಾವಣೆಯ ಕಾರಣದಿಂದ ಹೆಚ್ಚು ಶಕ್ತಿ ತರಂಗಗಳು ಬಿಡುಗಡೆ ಆಗುತ್ತಿರುವುದರಿಂದ ಪ್ರತಿಯೊಬ್ಬರೂ ತಪ್ಪದೇ ಧ್ಯಾನ ಮಾಡಬೇಕು ಮತ್ತು ಧ್ಯಾನ ಮಾಡಿಸಬೇಕು. ಈ ಸಮಯದಲ್ಲಿ ಪ್ರತಿ ಒಬ್ಬ ಮನುಷ್ಯನಿಗೂ… ಮೆಡಿಟೇಟರ್ ಆದರೂ, ಆಗದೇ ಇದ್ದರೂ ಬಗೆಬಗೆಯ ದೈಹಿಕ ನೋವುಗಳು ಬರುತ್ತವೆ … ಅವೆಲ್ಲಾ ಕೂಡಾ ಧ್ಯಾನ ಮಾಡುವುದರ ಮೂಲಕ ನಿವಾರಿಸಿಕೊಳ್ಳಬೇಕು. ೨೦೦೦ರಕ್ಕೂ ಹಿಂದೆ ಹುಟ್ಟಿರುವ ಮಕ್ಕಳೆಲ್ಲರೂ ಕರ್ಮಫಲಗಳನ್ನು ಅನುಭವಿಸಲು ಹುಟ್ಟಿದ್ದಾರೆ. ೨೦೦೦ರ ತರುವಾಯ ಹುಟ್ಟಿದ ಮಕ್ಕಳೆಲ್ಲರೂ Indigo Children ಅವರು ವಿಶುದ್ಧಕರ್ಮರು … ಅವರಿಗೆ ಕರ್ಮಫಲಗಳಿರುವುದಿಲ್ಲ. ಹಾಗೆಯೇ, ೨೦೧೨ ತರುವಾಯ ಜನ್ಮಿಸಿದ ಮಕ್ಕಳೆಲ್ಲರೂ Golden Children. ಅಂದರೆ, ಪರಮಾತ್ಮರು ನೇರವಾಗಿ ಜನ್ಮಿಸುತ್ತಾರೆ. ಆತ್ಮವನ್ನು ಉದ್ಧರಿಸಿಕೊಳ್ಳಲು ಭೂಲೋಕದಲ್ಲಿ ಮಾನವಜನ್ಮ ‘crash course’ ಇದ್ದಹಾಗೆ.
Recent Comments