ಬ್ರಹ್ಮರ್ಷಿ ಪತ್ರೀಜಿಯವರ ಯುಗಾದಿ ದಿನದ ಸಂದೇಶ
” ಭಕ್ತರಾಗಿ ದೇವಾಲಯಗಳಲ್ಲಿ ಪ್ರವೇಶಿಸಿ..
ಭಗವಂತರಾಗಿ ಹೊರಬರಬೇಕು “
“ನಂದನ ನಾಮ ಸಂವತ್ಸರದ ಪ್ರತ್ಯೇಕ ಸಂದೇಶ.”
” 2012 ಸಂವತ್ಸರದಲ್ಲಿ ಯುಗಾದಿ ತುಂಬಾ ಶ್ರೇಷ್ಠವಾದದ್ದು, ಅನೇಕ ವರ್ಷಗಳಿಂದ.. ’1999 ಮೊದಲನೆಯ ಯುಗಾಂತ’ ಎಂದರು; ’2012 ಎರಡನೆಯ ಯುಗಾಂತ’ ಎಂದರು ನಿಜವೇ ಆದರೆ, ಈ ಎರಡು ಯುಗಾಂತಗಳನ್ನು ಕುರಿತು ನಾವು ತಿಳಿದುಕೊಳ್ಳಬೇಕು.
“1987+25=2012…”
ಅಂದರೆ, 1987 ಇಂದ 25 ವರ್ಷಗಳನಂತರ 2012 ಬರುತ್ತದೆ. ಸರಿಯಾಗಿ ನಡುವೆ 1999 ಬರುತ್ತದೆ. ಆ ದಿನಗಳಲ್ಲಿ ಡಾ||ವೇದವ್ಯಾಸ ಅವರು 1999 ವರ್ಷವನ್ನೇ ಕಲಿಯುಗಾಂತ ಅಂದರು. ’ಕಲಿ’ ಅಂದರೆ ’ಅಂಧಕಾರ’ ಅಂದರೆ ’ಅಜ್ಞಾನ’ ’ಕಲಿಯುಗಾಂತ’ ಅಂದರೆ ’ಅಂಧಕಾರದಂತಹ ಅಜ್ಞಾನದಿಂದ ಕೂಡಿದ ಯುಗ ಅಂತ್ಯವಾಗಲಿದೆ.’ ಅದಕ್ಕಾಗಿ 25 ವರ್ಷಗಳ ಸಮಯ ಹಿಡಿಸುತ್ತದೆ. ಇದೆಲ್ಲಾ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ್ದು.
ಚಂದ್ರನು ಭೂಮಿಯ ಸುತ್ತ ಸುತ್ತುತ್ತಾನೆ. ಸೂರ್ಯನ ಸುತ್ತಲೂ ಭೂಮಿಯು ಸುತ್ತುತ್ತಿದೆ. ಈ ಸೂರ್ಯಮಂಡಲವೆಲ್ಲಾ ಸೇರಿ ’ಅಲ್ಸಿಯೊನ್’ ಎನ್ನುವ ನಾಲ್ಕನೆಯ ಆಯಾಮದಲ್ಲಿರುವ ನಕ್ಷತ್ರದ ಸುತ್ತಲೂ ಸುತ್ತುತ್ತಿವೆ. ಅಲ್ಸಿಯೊನ್ . . ’ಗೆಲಾಕ್ಟಿಕ್ ಕೇಂದ್ರ’ ದ ಸುತ್ತಲೂ ಸುತ್ತುತ್ತಿದೆ.
ಭೂಮಿ ಸೂರ್ಯನ ಸುತ್ತ ಸುತ್ತಲು ಒಂದು ವರ್ಷದ ಕಾಲ ಬೇಕಾಗುತ್ತದೆ. ಚಂದ್ರನು ಭೂಮಿಯ ಸುತ್ತೂ ಸುತ್ತಲು ಒಂದು ತಿಂಗಳಕಾಲ ಬೇಕಾಗುತ್ತದೆ. ಭೂಮಿ ತನ್ನ ಸುತ್ತ ತಾನು ಸುತ್ತಲು ಒಂದು ದಿನವಾಗುತ್ತದೆ. ಸೂರ್ಯನು ಅಲ್ಸಿಯೊನ್ ಸುತ್ತ್ತಾ ಸುತ್ತಲು 26,000 ವರ್ಷಗಳಕಾಲ ಹಿಡಿಸುತ್ತದೆ; ಅಲ್ಸಿಯೊನ್ ತನ್ನ ಮಹಾಕೇಂದ್ರದ ಸುತ್ತಾ ಪರಿಭ್ರಮಿಸಲು ಕೆಲವು ಲಕ್ಷಾಂತರ ವರ್ಷಗಳಾಗುತ್ತದೆ.
“ಈ 26,000 ವರ್ಷಗಳಲ್ಲಿ ಭೂಮಿ ಫೋಟಾನ್ ಬ್ಯಾಂಡ್ ಒಳಗೆ ಎರಡು ಸಲ ಪ್ರವೇಶಿಸುತ್ತದೆ. ನಮ್ಮ ಸೋಲಾರ್ ಸಿಸ್ಟಮ್ 1987 ನೆಯ ವರ್ಷದಲ್ಲಿ ಫೋಟಾನ್ ಬ್ಯಾಂಡ್ ಒಳಗೆ ಪ್ರವೇಶಿಸಿ ಈಗ 2012 ನೇ ವರ್ಷ ಡಿಸೆಂಬರ್ 21 ರಂದು ಪೂರ್ತಿಯಾಗಿ ಫೋಟಾನ್ ಬ್ಯಾಂಡ್ ಒಳಗೆ ಬಂದು ಬಿಡುತ್ತದೆ. ಇವೆಲ್ಲಾ ಖಗೋಳ ಶಾಸ್ತ್ರ ಸತ್ಯಗಳು.
“ನಮಗೆ ಸೂರ್ಯನ ಪರಿಚಯವಿದೆ. ಕಣ್ಣಿಗೆ ಕಾಣಿಸುತ್ತದೆ. ಆದರೆ, ’ಅಲ್ಸಿಯೊನ್’ ಈ ಕಣ್ಣಿಗೆ ಕಾಣಿಸುವುದಿಲ್ಲ. ಅದನ್ನು ದಿವ್ಯಚಕ್ಷುವಿನ ಮೂಲಕವೇ ತಿಳಿದುಕೊಳ್ಳಬೇಕು. ಹಾಗೆಯೇ, ವಿಶ್ವದ ಸುತ್ತಾ ನಡೆಯುತ್ತಿರುವುದನ್ನೆಲ್ಲಾ ಧ್ಯಾನದ ಮೂಲಕ ತಿಳಿದುಕೊಳ್ಳುತ್ತೇವೆ. ’ಸತ್ತನಂತರ ಎಲ್ಲಿಗೆ ಹೋಗುತ್ತೇವೆ?’ ’ಹುಟ್ಟುವುದಕ್ಕಿಂತಾ ಮುಂಚೆ ಎಲ್ಲಿ ಇದ್ದೆವು?’ ಎನ್ನುವುದೆಲ್ಲಾ ಕೂಡಾ ನಮಗೆ ಶ್ವಾಸದ ಮೇಲೆ ಗಮನ ಇರಿಸುವ ಈ ಧ್ಯಾನದಿಂದಲೇ ತಿಳಿದುಕೊಳ್ಳುತ್ತೇವೆ.
ನಮ್ಮ ಜೇಬಿನಲ್ಲಿ ಹಣವಿದೆ. ಆದರೆ, ನಮ್ಮ ಜೇಬಿನಲ್ಲಿ ಹಣ ಇರುವ ಸಮಾಚಾರ ನಮಗೆ ತಿಳಿಯದಿದ್ದರೆ, ಎಲ್ಲರನ್ನೂ ’ಹಣ ಬೇಕೆಂದು’ ಕೇಳುತ್ತೇವೆ. ಹಾಗೆಯೇ ಆತ್ಮ ಇದೆ. ಆದರೆ, ಆತ್ಮದ ಹತ್ತಿರಕ್ಕೆ ಹೇಗೆ ಹೋಗಬೇಕೋ ತಿಳಿಯದು. ಆತ್ಮವನ್ನು ಮುಚ್ಚಿಡಲಾಗಿಲ್ಲ, ಅದು ತೆರೆದುಕೊಂಡೇ ಇದೆ. ಆತ್ಮದ ಹತ್ತಿರ ತಲುಪಬೇಕಾದರೆ ಶ್ವಾಸದ ಮೇಲೆ ಗಮನ ಇಡಬೇಕು. ಆಗ ಆತ್ಮದ ಕುರಿತು ಜ್ಞಾನ ದೊರೆಯುತ್ತದೆ. ’ಯಾವುದು ಸತ್ಯ?, ಯಾವುದು ನಿತ್ಯ?’ ಎನ್ನುವುದನ್ನು ತಿಳಿದುಕೊಳ್ಳುತ್ತೇವೆ. ಅದನ್ನೇ ’ವಿಚಕ್ಷಣಾ ಜ್ಞಾನ’ ಎನ್ನುತ್ತೇವೆ. ಆತ್ಮಸತ್ಯವನ್ನು ತಿಳಿದುಕೊಳ್ಳುವುದೇ ಆತ್ಮಜ್ಞಾನ ಎನ್ನುತ್ತೇವೆ. ಜ್ಞಾನ ಪಡೆಯಲು ಧ್ಯಾನ ಮಾಡಿದರೆ.. ಪಡೆಯಬೇಕಾದ್ದೆಲ್ಲಾ ಪಡೆಯುತ್ತೇವೆ.
ದೇವಾಲಯಗಳಿಗೂ, ಚರ್ಚ್‌ಗಳಿಗೂ, ಮಸೀದಿಗಳಿಗೂ ಹೋಗಬೇಕು, ಅಲ್ಲಿಗೆ ಹೋಗಿ ಧ್ಯಾನ ಮಾಡಬೇಕು. ವೆಂಕಟೇಶ್ವರಸ್ವಾಮಿ ಗುಡಿ ಒಳಗೆ ಭಕ್ತನಾಗಿ ಹೋಗಬೇಕು… ವೆಂಕಟೇಶ್ವರನ ಹಾಗೆ ಬದಲಾಗಿ ಹೊರಗೆ ಬರಬೇಕು. ಏಳು ಶರೀರಗಳನ್ನು ಉದ್ದೀಪನ ಮಾಡಿಕೊಂಡು ಬರಬೇಕು. ಅಯ್ಯಪ್ಪಸ್ವಾಮಿ ದೇವಸ್ಥಾನದೊಳಗೆ ಅಯ್ಯಪ್ಪಸ್ವಾಮಿಯ ಭಕ್ತನಾಗಿ ಹೋಗಬೇಕು… ಅಯ್ಯಪ್ಪನ ಹಾಗೆ ತಯಾರಾಗಿ ಹೊರಗೆ ಬರಬೇಕು. ಜೀಸಸ್ ಭಕ್ತನ ಹಾಗೆ ಚರ್ಚ್ ಒಳಗೆ ಹೋಗಬೇಕು ಜೀಸಸ್ ಆಗಿ ಹೊರಗೆ ಬರಬೇಕು.
ಮುಂಚಿತವಾಗಿ ಪ್ರಾಪಂಚಿಕವಾಗಿ ಪರಿಪೂರ್ಣತೆಯಿಂದ ಜೀವಿಸಬೇಕು. ಅನಂತರ ಆಧ್ಯಾತ್ಮಿಕವಾಗಿ ಪರಿಪೂರ್ಣವಾಗಿ ಬೆಳೆಯಬೇಕು. ಮೊದಲು ’ಅರ್ಜುನ’ ಆಗಬೇಕು.. ಅನಂತರ ಧ್ಯಾನ ಮಾಡಿ ’ಕೃಷ್ಣ’ನಾಗಿ ಬೆಳೆಯಬೇಕು
ಭೂಮಿಯ ಮೇಲೆ ’ಸ್ವರ್ಗ’ ಎನ್ನುವುದು ಅಹಿಂಸೆಯಿಂದಲೇ ಸಾಧ್ಯ. ಭೂಮಿಯ ಮೇಲೆ ಇರುವ ಕೊನೆಯ ವ್ಯಕ್ತಿಯು ಮಾಂಸಾಹಾರ ತಿನ್ನುವುದು ಬಿಡುವವರೆಗೂ ನಾನು ಈ ಭೂಮಿಯ ಮೇಲೆ ಇರುತ್ತೇನೆ. ತಿಳಿದೂ ತಿಳಿದು ಮಾಂಸಾಹಾರ ತಿಂದರೆ ಪಾಪ… ತಿಳಿಯದೇ ಮಾಂಸಾಹಾರ ತಿಂದರೆ ಅದು ಅಜ್ಞಾನ. ಪಾಪಗಳು ರೋಗಗಳಿಗೆ ಮೂಲಕಾರಣ.. ಅಜ್ಞಾನ ಅಸ್ವಸ್ಥತೆಗೆ ಮೂಲಕಾರಣ.
ಮೇಲಿನ ಲೋಕಗಳಲ್ಲಿ ಎಲ್ಲರೂ ಒಂದೇ ತರಹ ಇರುತ್ತಾರೆ. ಭೂಲೋಕದಲ್ಲೇ ಮನುಷ್ಯರು ವಿಧವಿಧವಾಗಿರುತ್ತಾರೆ. ಇಲ್ಲಿ ಎಲ್ಲರೂ ಕಲೆತುಬೆರೆತು ಜೀವಿಸುವುದು ತುಂಬಾ ದೊಡ್ಡ ವಿಷಯ. ಇಲ್ಲಿ ಇರುವ ಎಲ್ಲಾ ನವರಸಗಳನ್ನೂ ಅನುಭವಿಸಬೇಕು. ಮೇಲಿನ ಲೋಕಗಳಿಂದ ಇಲ್ಲಿಗೆ ಬರುವುದು ಅದಕ್ಕೇ. ವಿಶೇಷವಾದ ಅನುಭವಗಳಿಗಾಗಿಯೇ ನಾವು ಜನ್ಮ ತೆಗೆದುಕೊಂಡು ಬಂದಿದ್ದೇವೆ. ಒಂದು ಸಲ ಬಡವನಾಗಿ, ಒಂದು ಬಾರಿ ಧನಿಕನಾಗಿ, ಒಂದು ಸಲ ಪುರುಷನಾಗಿ, ಒಂದು ಬಾರಿ ಸ್ತ್ರೀಯಾಗಿ, ಪ್ರತಿಯೊಂದು ಜನ್ಮ ಕೂಡಾ ಬಗೆ ಬಗೆಯ ಅನುಭವಗಳ ಹುತ್ತ.
Recent Comments