ಮಾರಂ ಶಿವಪ್ರಸಾದ್
“ಬ್ರಹ್ಮರ್ಷಿ ಪತ್ರೀಜಿಯವರೊಡನೆ ವಿಶೇಷ ಸಂದರ್ಶನ”
ಬ್ರಹ್ಮರ್ಷಿ ಪತ್ರೀಜಿ ’ ಷಕ್ಕರ್‌ನಗರ್ ’నಲ್ಲಿ ನವೆಂಬರ್ 11ನೇ ದಿನಾಂಕ 1947ನೇ ವರ್ಷದಲ್ಲಿ ಜನ್ಮಿಸಿದರು. ಅವರ ಬಾಲ್ಯ, ಹೈಸ್ಕೂಲು ವಿದ್ಯಾಭ್ಯಾಸ, ಕೊಳಲು ಮತ್ತು ಸಂಗೀತ ಅಭ್ಯಾಸ, ಅವರ ಉನ್ನತ ವಿದ್ಯಾಭ್ಯಾಸ, ಉದ್ಯೋಗ, ಪದವಿ ಗಳಿಕೆ, ಅವರ ಧ್ಯಾನ ಪ್ರಚಾರಾಂದೋళನ – ಇವೆಲ್ಲವೂ ಯಾವಾಗ ಹೇಗೆ ನಡೆದು ಬಂದವು, 1979 రಲ್ಲಿ ಅವರ ಧ್ಯಾನಪ್ರಚಾರ ಪ್ರಾರಂಭ ಪರ್ವವು ಹೇಗಾಯಿತು…. ಹೀಗೆ ಅನೇಕ ವಿಷಯಗಳನ್ನು ಕುರಿತು ಪತ್ರೀಜಿಯವರ ಸ್ವಂತ ಮಾತುಗಳಲ್ಲಿ ತಿಳಿದುಕೊಳ್ಳೋಣ.
ಮಾರಂಶಿವಪ್ರಸಾದ್: ಪತ್ರೀಜಿ, ಆತ್ಮ ಪ್ರయాణಗಳು. ಚಿಕ್ಕ ವಯಸ್ಸಿನಿಂದಲೇ ನಿಮ್ಮಲ್ಲಿ ಆಧ್ಯಾತ್ಮಿಕ ತೃಷೆ ಇತ್ತಾ ?
ಬ್ರಹ್ಮರ್ಷಿಪತ್ರೀಜಿ: ಅದು ’ ಆಧ್ಯಾತ್ಮಿಕ ತೃಷೆ ’ ಎಂದು ಬಾಲ್ಯದಿಂದಲೇ ಯಾರಿಗೂ ತಿಳಿಯುವುದಿಲ್ಲ. ದೊಡ್ಡವರಾದ ನಂತರ ಆ ಪದಪ್ರಯೋಗವನ್ನು ಕುರಿತು, ಅದರ ಅರ್ಥವನ್ನು ಕುರಿತು ಸ್ವಲ್ಪ ಸ್ವಲ್ಪ ತಿಳಿಯುತ್ತದೆ. ನನಗೆ ಸುಮಾರು ಎಂಟು ವರ್ಷ ವಯಸ್ಸಿದ್ದಾಗಲೇ ನಾನು “My Experiments with truth” ಎನ್ನುವ ಮಹಾತ್ಮಾ ಗಾಂಧೀಜಿಯವರ ಪುಸ್ತಕವನ್ನು ಓದಿದ್ದೇನೆ. ಹಾಗೆಯೇ, ರವೀಂದ್ರನಾಥ್ ಠಾಗೂರ್‌ರವರ ಶಾಂತಿನಿಕೇತನ್ ಕುರಿತು ತುಂಬಾ ಮನನ ಮಾಡಿಕೊಳ್ಳುತ್ತಿದ್ದೆ. ಮರಗಳ ಕೆಳಗೆ ಸಂಗೀತ ಕಲಿತುಕೊಳ್ಳಬೇಕು. ನೃತ್ಯ ಇರಬೇಕು. ಕಲಿಯಲು ವಿದ್ಯಾಲಯ ಗುರುಕುಲದ ಹಾಗೆ ಇರಬೇಕು ಎಂದು ಬಾಲ್ಯದಿಂದಲೇ ನನ್ನ ಮನಸ್ಸಿನಲ್ಲಿ ಇತ್ತು.
ಆಗ, ಗಾಂಧೀಜಿಯವರ ಪುಸ್ತಕ ನನ್ನ ತುಂಬಾ ಆಕರ್ಷಿಸಿತು. ಹಾಗೆಯೇ, ಆ ದಿನಗಳಲ್ಲಿ ಶಾಂತಿನಿಕೇತನ್.. ಭಾರತ ದೇಶವನ್ನೆಲ್ಲಾ ಪ್ರಭಾವಿಸಿತ್ತು. ಇವರಿಬ್ಬರೇ ಅಲ್ಲವೆ ಹೆಸರುವಾಸಿಯಾದ ಮಹಾನುಭಾವರು. ನನ್ನನ್ನೂ ಕೂಡಾ ಅವರೇ ಪ್ರಭಾವಿತನನ್ನಾಗಿ ಮಾಡಿದರು.
* * *
ಮಾರಂ: ನಿಮ್ಮ ಸಂಗೀತದ ಅಭಿರುಚಿ ಕುರಿತು ಹೇಳಿ ?
ಬ್ರಹ್ಮರ್ಷಿಪತ್ರೀಜಿ: ನನಗೆ ’ ವಯೊಲಿನ್ ’ ನುಡಿಸಬೇಕೆಂದು ಬಾಲ್ಯದಲ್ಲಿ ತುಂಬಾ ಬಯಕೆಯಿತ್ತು. ಆದರೆ, ನಮ್ಮ ಅಣ್ಣನ ಬಲವಂತದ ಮೇಲೆ ಕೊಳಲು ನುಡಿಸುವುದನ್ನು ಕಲಿತುಕೊಂಡೆ, ” ತಾನೊಂದು ನೆನೆದರೆ ಮಾನವ, ಬೇರೊಂದು ಬಗೆಯಿತು ದೈವ ” ಅಂದಹಾಗೆ.
ಷಕ್ಕರ್‌ನಗರ್‌ನಲ್ಲಿ ನಮ್ಮ ಮನೆಗೆ ತಬಲಾ ಹೇಳಿಕೊಡಲು, ಹಾರ್ಮೋನಿಯಮ್ ಹೇಳಿಕೊಡಲು ಮಾಸ್ಟರ್ ಶಿವರಾಂಜಿ ಗುರುಗಳು ಬರುತ್ತಿದ್ದರು. ನಮ್ಮ ತಾಯಿ ಅವರ ಹತ್ತಿರ ಕಲಿತುಕೊಳ್ಳುತ್ತಾ, ಎಲ್ಲರಿಗೂ ಮನೆಯಲ್ಲೇ ಹಾರ್ಮೋನಿಯಮ್‌ಅನ್ನು ತಾವೇ ಹೇಳಿಕೊಡುತ್ತಿದ್ದರು. ನಾನು ಅವರ ಹತ್ತಿರ ’ ತಬಲಾ ’ ಕಲಿತುಕೊಂಡೆ. ನಮ್ಮಮ್ಮನ ಹತ್ತಿರ ಕೆಲವು ಮೀರಾ ಭಜನೆಗಳನ್ನು ಕಲಿತುಕೊಂಡೆನು.. ಅವು ಹಿಂದುಸ್ಥಾನಿ ಭಜನ್‌ಗಳು. ಅಮ್ಮ ಹಾಡುತ್ತಿದ್ದರೆ, ಅದು ನನಗೆ ತುಂಬಾ ತುಂಬಾ ಇಷ್ಟವಾಗುತ್ತಿತ್ತು. 1956 ರಲ್ಲಿ ನನ್ನ ಸಂಗೀತ ಅಭಿರುಚಿ ಹೀಗೆ ಪ್ರಾರಂಭವಾಯಿತು.
* * *
ಮಾರಂ: ಈ ನಡುವೆ ನಾವು ಷಕ್ಕರ್‌ನಗರ್‌ಗೆ ಹೋದಾಗ ನನಗೆ ನೀವು ’ ರಾಮಾಲಯ ’ ತೋರಿಸಿದ್ದೀರ. ಆ ಪರಿಸರಗಳನ್ನು ನೋಡಿ ತುಂಬಾ ನೆನೆಸಿಕೊಂಡು ಆನಂದಿಸಿದ್ದೀರ ?
ಬ್ರಹ್ಮರ್ಷಿಪತ್ರೀಜಿ: ಅಮ್ಮ ಪ್ರತಿ ಶನಿವಾರ ನಮ್ಮ ಮನೆಯಲ್ಲಿ ಕಣಿಗಲೆ ಹೂವುಗಳನ್ನು ಕಿತ್ತು, ಹಾರ ಮಾಡಿದ ನಂತರ ರಾಮಾಲಯಕ್ಕೆ ಹೋಗಿ ಕೊಡುವ ಜವಾಬ್ದಾರಿ ನನ್ನದು. ಆ ದೇವಸ್ಥಾನದಲ್ಲಿ ಅಮೃತಶಿಲೆಯ ವಿಗ್ರಹಗಳು ತುಂಬಾ ಕಳೆಯಾಗಿ ಇರುತ್ತವೆ. ರಾಮಾಲಯ ಒಂದು ದೊಡ್ಡ ಸಾಂಸ್ಕೃತಿಕ ಕೇಂದ್ರ. ಅಲ್ಲಿ ಒಂಬತ್ತು ದಿನಗಳ ಶ್ರೀರಾಮನವಮಿ ಉತ್ಸವಗಳು ನಡೆಯುತ್ತಿತ್ತು. ರಾತ್ರಿಯೆಲ್ಲಾ ರಾಮಾಯಣಕ್ಕೆ ಸಂಬಂಧಿಸಿದ ಹರಿಕಥೆಗಳು ನಡೆಯುತ್ತಿತ್ತು. ತೆಲುಗೂ, ಹಿಂದಿಯಲ್ಲೂ ಸಹ. ಹಾಗೆಯೇ ಸಂಗೀತ ಕಚೇರಿಗಳು ನಡೆಯುತ್ತಿತ್ತು. ತುಂಬಾ ಎಂಜಾಯ್ ಮಾಡುತ್ತಿದ್ದೆ.
* * *
ಮಾರಂ: ನಿಮ್ಮ ಆಟಗಳು/ಕ್ರಿಕೆಟ್ ಬಗ್ಗೆ ಹೇಳಿ
ಬ್ರಹ್ಮರ್ಷಿಪತ್ರೀಜಿ: ಬಾಲ್ಯದಿಂದಲೇ ನನಗೆ ಕ್ರಿಕೆಟ್ ಅಂದರೆ ತುಂಬಾ ತುಂಬಾ ಇಷ್ಟ. ಮಕ್ಕಳನ್ನೆಲ್ಲಾ ಸೇರಿಸಿಕೊಂಡು ಕ್ರಿಕೆಟ್ ಆಡುತ್ತಿದ್ದೆ, ಏಳು, ಎಂಟು ವರ್ಷಗಳ ವಯಸ್ಸಿನಿಂದಲೇ, ಸುಮಾರು ಪ್ರತಿದಿನ ಸಮಯಸಿಕ್ಕಾಗೆಲ್ಲಾ ಆಡುತ್ತಿದ್ದೆ.
ಟೇಬಲ್ ಟೆನ್ನಿಸ್, ಚೆಸ್ ಎಂದರೆ ಸಹ ತುಂಬಾ ಇಷ್ಟ.
* * *
ಮನೆಯಲ್ಲಿ ಸದಾ ಹಣ್ಣುಗಳಿರುವ ಮರದ ಮೇಲೆ ಸಮಯ ಕಳೆಯುತ್ತಿದ್ದೆ. ನಮ್ಮ ಕಾಲನಿಯಲ್ಲಿ ಪ್ರತಿಯೊಬ್ಬರ ಮನೆಗಳಲ್ಲೂ ಬಗೆ ಬಗೆಯ ಹಣ್ಣುಗಳ ಮರಗಳಿತ್ತು. ಸೀಬೇಹಣ್ಣಿನ ಮರಗಳ ಮೇಲೆ ಕುಳಿತುಕೊಂಡು, ಕಾಯಿಗಳು ತಿನ್ನುತ್ತಾ, ಎಂಜಾಯ್ ಮಾಡುತ್ತಿದ್ದೆ. ನಮ್ಮ ಕಾಲನಿಯಲ್ಲೇ ನಮ್ಮ ಭಾವ ಕೋಡೂರಿ ರಾಮಕೃಷ್ಣರವರ ಮನೆ ತುಂಬಾ ಹತ್ತಿರದಲ್ಲಿತ್ತು. ಬಹುತೇಕ ಪ್ರತಿನಿತ್ಯ ಅವರ ಮನೆಗೆ ಹೋಗುತ್ತಿದ್ದೆ.
* * *
ಮಾರಂ: ನಿಮ್ಮ ತಂದೆ ತಾಯಿಯವರ ಕುರಿತು ತಿಳಿಸಿ.
ಬ್ರಹ್ಮರ್ಷಿಪತ್ರೀಜಿ: ನಮ್ಮ ತಂದೆಯವರದು ತುಂಬಾ ವಿಶುದ್ಧಕರವಾದ ಜೀವನ. ಮಕ್ಕಳೆಲ್ಲರಿಗೂ ವಿದ್ಯಾಭ್ಯಾಸದ ಕಡೆ ಹೆಚ್ಚು ಶ್ರದ್ಧೆ ತೋರಿಸಿ ಎಂದು ಸದಾ ಹೇಳುತ್ತಿದ್ದರು. ಅವರಿಗೆ “ಸ್ಕ್ರೀಜೋಫ್ರೀನಿಯಾ” ವ್ಯಾಧಿ ಇತ್ತು. ಆರು ತಿಂಗಳು ಮೆಂಟಲ್ ಆಸ್ಪತ್ರೆಯಲ್ಲಿದ್ದರೆ, ಆರು ತಿಂಗಳು ಮಾತ್ರವೇ ಉದ್ಯೋಗ ಮಾಡುತ್ತಿದ್ದರು. ಅವರಿಂದ ನಮ್ಮ ಕುಟುಂಬದಲ್ಲಿ ಎಲ್ಲರಿಗೂ ತುಂಬಾ ಕಷ್ಟವಾಗುತ್ತಿತ್ತು. ನಮ್ಮ ತಾಯಿ ತುಂಬಾ ಮೃದು ಸ್ವಭಾವಿ. ಎಲ್ಲರನ್ನೂ ತುಂಬಾ ಪ್ರೀತಿಯಿಂದ, ಶ್ರದ್ಧೆಯಿಂದ ನೋಡಿಕೊಳ್ಳುತ್ತಿದ್ದರು. ತನ್ನ ಬಾಧೆಗಳನ್ನು ತಮ್ಮಲ್ಲೇ ಮುಚ್ಚಿಟ್ಟುಕೊಳ್ಳುತ್ತಿದ್ದರು.
ನಮ್ಮ ತಂದೆಗೆ ಓದಿನ ಮೇಲೆ ಆಸಕ್ತಿಯಾದರೆ, ತಾಯಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಆಸಕ್ತಿಯಿತ್ತು. ನಮ್ಮ ಕುಟುಂಬದಲ್ಲಿ ಎಲ್ಲರೂ ಉನ್ನತ ವಿದ್ಯಾಭ್ಯಾಸವನ್ನು ಪಡೆದವರೇ ಮತ್ತು ಸಂಗೀತ ಪ್ರಿಯರಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರೂಪುಗೊಂಡೆವು.
* * *
ಮಾರಂ: ನೀವು ಬೋಧನ್‌ನಲ್ಲಿದ್ದ ದಿನಗಳು ನೆನೆಸಿಕೊಂಡಾಗ, ಷಕ್ಕರ್‌ನಗರ್‌ನಲ್ಲಿದ್ದ ಮನೆ ಕುರಿತು, ಮತ್ತು ಬಾಲ್ಯವನ್ನು ಕುರಿತು ಹೇಳಿ?
ಬ್ರಹ್ಮರ್ಷಿಪತ್ರೀಜಿ: ನನಗೆ ಐದಾರು ವರ್ಷಗಳ ವಯಸ್ಸಿನಿಂದ ನನ್ನ ಬಾಲ್ಯ ನನಗೆ ನೆನಪಿದೆ. ಆಗ ಬೆಳೆದ ವಾತಾವರಣ, ಆ ಮರಗಳು, ಆ ಫ್ಯಾಕ್ಟರಿ, ರಾಮಾಲಯ, ಮಸೀದಿ ಎಲ್ಲಾ ಸುತ್ತಾಮುತ್ತಾ ಎಲ್ಲರೂ, ಎಲ್ಲಾ ಮತಗಳ, ಎಲ್ಲಾ ರಾಜ್ಯದವರೂ ಇದ್ದರು. ತಿಂಗಳಿಗೊಮ್ಮೆ ಜೀಪ್‌ನಲ್ಲಿ ಎಲ್ಲಾ ಮನೆಯವರೂ ಪಿಕ್ನಿಕ್ ಹೋಗುತ್ತಿದ್ದೆವು. ಷಕ್ಕರ್‌ನಗರ್ ಸುತ್ತಾ ಮುತ್ತಾ ನೋಡುವಂಥ ಅನೇಕ ಪಿಕ್ನಿಕ್ ಸ್ಥಳಗಳಿವೆ. ಉದಾಹರಣೆಗೆ “ಅಲೀಸಾಗರ್” ಅಲ್ಲಿಗೆ ಹೋಗಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಆನಂದಿಸುತ್ತಿದ್ದೆವು. ತಿಂಗಳಿಗೆ ಒಮ್ಮೆಯಾದರೂ ವಿಹಾರ ಇರುತ್ತಿತ್ತು.
* * *
ಮಾರಂ: ನಿಮ್ಮ ಹೈಸ್ಕೂಲು ಜೀವನ ?
ಬ್ರಹ್ಮರ್ಷಿಪತ್ರೀಜಿ: ಪ್ರಾಥಮಿಕ ಶಾಲೆ 5 ನೆಯ ತರಗತಿವರೆಗೂ ಷಕ್ಕರ್‌ನಗರ್‌ನಲ್ಲೇ, ಮನೆಯಮುಂದೆ, ಒಂದು ಬಾಲಕಿಯರ ಪ್ರೌಢಶಾಲೆಯಲ್ಲಿ 6ನೆಯ ಕ್ಲಾಸ್‌ನಿಂದ ಬೋಧನ್‌ನಲ್ಲಿ. ದಿನಾ ನಡೆದು ಹೋಗಿಬರುತ್ತಿದ್ದೆ; ಯಾವಾಗಾದರೂ ಜೀಪ್‌ನಲ್ಲಿ ಹೋಗುತ್ತಿದ್ದೆ. 10ನೆಯ ಕ್ಲಾಸ್‌ನಿಂದ ಶಾಲೆಯ ಕೊನೆಯವರೆಗೂ ಅಂದರೆ, 1960 ನಿಂದ 1963 ವರೆಗೂ ಸಿಕಂದ್ರಾಬಾದ್‌ನಲ್ಲಿರುವ ಮಹಬೂಬ್ ಕಾಲೇಜ್ ಪ್ರೌಢಶಾಲೆಯಲ್ಲಿ ಓದಿದ್ದೇನೆ.
* * *
ಮಾರಂ: ನೀವು ಕೊಳಲು ಯಾವ ವರ್ಷದಿಂದ ಕಲಿತುಕೊಳ್ಳಲು ಪ್ರಾರಂಭಿಸಿದ್ದೀರಿ?
ಬ್ರಹ್ಮರ್ಷಿಪತ್ರೀಜಿ: ಏಪ್ರಿಲ್ 13, 1963 ನಲ್ಲಿ… ನಾನು ಮೊದಲನೆಯ ಬಾರಿ ಕೊಳಲು ಹಿಡಿದುಕೊಂಡೆ. ನಮ್ಮ ಅಣ್ಣ ನನ್ನನ್ನು ಅವರ ಗುರುಗಳಾದ ಶ್ರೀ ಟಿ.ಎಸ್. ಚಂದ್ರಶೇಖರ್ ಅವರ ಹತ್ತಿರಕ್ಕೆ ಕರೆದುಕೊಂಡು ಹೋದರು. ನಮ್ಮ ಅಣ್ಣ ಅವರ ಹತ್ತಿರ ಮುಂಚೆಯೇ ಕೊಳಲು ನುಡಿಸುವುದನ್ನು ಕಲಿತುಕೊಳ್ಳುತ್ತಿದ್ದರು. ಮೊದಲು ಮೂರು ದಿನಗಳು ಕೊಳಲು ನುಡಿಸುವಾಗ ’ ಗಾಳಿ ’ ಮಾತ್ರವೇ ಬಂತು. ಅನಂತರ ನಿಧಾನಕ್ಕೆ ಶಬ್ದ ಬಂತು. ಶ್ರೀ ಚಂದ್ರಶೇಖರ್ ಅವರ ಹತ್ತಿರ ಹತ್ತು ವರ್ಷಗಳಕಾಲ ಕೊಳಲು, ಕರ್ನಾಟಕ ಸಂಗೀತವನ್ನು ಪೂರ್ಣವಾಗಿ ಕಲಿತುಕೊಂಡೆ.
* * *
ಮಾರಂ: ನಿಮಗೆ IAS ಮಾಡಬೇಕೆಂದು ಏಕೆ ಅನಿಸಿತು?
ಬ್ರಹ್ಮರ್ಷಿಪತ್ರೀಜಿ: ಏಕೆ ಅನಿಸಬಾರದು? ನಮ್ಮ ಅಣ್ಣ ದೊಡ್ಡ ಇಂಜಿನಿಯರಿಂಗ್ ಸೈಂಟಿಸ್ಟ್. ನಮ್ಮ ಸಿಸ್ಟರ್ ಮೆಡಿಕಲ್ ಡಾಕ್ಟರ್, ಸೈಕಿಯಾಟ್ರಿಸ್ಟ್. ನಮ್ಮ ಅಣ್ಣನ ಬಲವಂತದಿಂದ IASಗೆ ಮೂರು ಬಾರಿ ಪರೀಕ್ಷೆ ಬರೆದಿದ್ದೇನೆ. IAS ಎಂದರೆ ಅನೇಕ ಪುಸ್ತಕಗಳು ಓದಬೇಕು; ಸಾಮಾನ್ಯ ಜ್ಞಾನ ತುಂಬಾ ಇರಬೇಕು. ಮೂರು ವರ್ಷ ಎಡೆಬಿಡದೇ ರಾತ್ರಿಹಗಲು ಓದಿದ್ದೇನೆ. ಬೆಳಗ್ಗೆ ಉಸ್ಮಾನಿಯಾ ಯೂನಿವರ್ಸಿಟಿ ಗ್ರಂಥಾಲಯಕ್ಕೆ ಹೋದರೆ ಯಾವಾಗಲೋ ರಾತ್ರಿಗೆ ಮನೆಗೆ ಬರುತ್ತಿದ್ದೆ.
B.Sc.ನಲ್ಲಿ ಇರುವಾಗಲೇ ನಾನು B.Sc ಮಟ್ಟದ ಪುಸ್ತಕಗಳಲ್ಲದೇ M.Sc ಮಟ್ಟದ ಪುಸ್ತಕಗಳನ್ನೂ ಓದುತ್ತಿದ್ದೆ. ಉದಾಹರಣೆ, ಡಾರ್ವಿನ್ ಥಿಯರಿ ಸಿಲಬಸ್‌ನಲ್ಲಿ ಇದೆ ಎಂದುಕೊಳ್ಳೋಣ… ನಾನು ಲೈಬ್ರರಿಗೆ ಹೋಗಿ ಆ ಸಬ್ಜೆಕ್ಟ್ ಸಂಬಂಧಿಸಿದ ಚಾರ್ಲೆಸ್ ಡಾರ್ವಿನ್ ಮೂಲಗ್ರಂಥಗಳೆಲ್ಲಾ ಓದುತ್ತಿದ್ದೆ. ಕಾಲೇಜ್ ಮಟ್ಟದಿಂದಲೇ ಮೂಲಭೂತ ಪುಸ್ತಕಗಳೆಲ್ಲಾ ಓದುವ ಅಭ್ಯಾಸ ಇತ್ತು. IAS ನಲ್ಲಿ ಇನ್ನೂ ವಿವರವಾಗಿ ಎಲ್ಲಾ ವಿಷಯಗಳ ಕುರಿತು ಓದಿದೆ. ತೆಲುಗು, ಆಂಗ್ಲ ಪುಸ್ತಕಗಳು ಸಾವಿರಾರು ಓದಿದೆ.
* * *
ಮಾರಂ: ಹಿಂದಿ ಕೂಡಾ ಓದಿದ್ದೀರಾ ? ಹಿಂದಿ ತುಂಬಾ ಚೆನ್ನಾಗಿ ಮಾತನಾಡುತ್ತೀರ. ನೀವು ಒಬ್ಬ ಕವಿಯ ಹಾಗೆ ಧಾರಾಳವಾಗಿ ಮಾತನಾಡುತ್ತೀರ ?
ಬ್ರಹ್ಮರ್ಷಿಪತ್ರೀಜಿ: ನಮ್ಮ ತಾಯಿಗೆ ಎಲ್ಲರೂ ಹಿಂದಿ ಕಲಿತುಕೊಳ್ಳಬೇಕೆನ್ನುವ ಛಲ ಇದ್ದಿದ್ದರಿಂದ ನಮ್ಮ ಮನೆಯಲ್ಲಿ ಎಲ್ಲರೂ ಹಿಂದಿ ಕಲಿತುಕೊಂಡೆವು. ಹಿಂದಿಯಲ್ಲಿ ’ ಪ್ರಥಮ ’, ’ ಮಧ್ಯಮ ’, ’ ಉತ್ತಮ ’, ಪರೀಕ್ಷೆಗಳು ನಮ್ಮ ಮನೆಯಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಆದರೆ, ಹಿಂದಿ ಪುಸ್ತಕಗಳು ಹೆಚ್ಚು ಓದಲಿಲ್ಲ. ಸಂಗೀತ, ನೃತ್ಯದ ಜೊತೆ ಹಿಂದಿ ಕೂಡ ಸ್ವಲ್ಪ ಬಂದಿದೆ.
* * *
ಮಾರಂ: ಹಿಂದಿಯನ್ನು ಬಾಲ್ಯದಲ್ಲೇ ಓದುಕೊಳ್ಳುವುದು, ಸಂಗೀತ ಕಲಿತುಕೊಳ್ಳುವುದು. ವಿಜ್ಞಾನ ತತ್ವಶಾಸ್ತ್ರದ ಪುಸ್ತಕಗಳು ವಿಪರೀತವಾಗಿ ಓದುವುದು.. ತಿಂಗಳಿಗೆ 25 ದಿನಗಳು ಹೊರಗಡೆ ಪ್ರಯಾಣ ಇರುವ ಉದ್ಯೋಗ ಮಾಡುವುದು.. ಇವೆಲ್ಲಾ ಕೂಡ ಧ್ಯಾನ ಪ್ರಚಾರಕ್ಕೆ ಒಳ್ಳೆಯ ಬುನಾದಿ ಆಯಿತಲ್ಲವೇ?
ಬ್ರಹ್ಮರ್ಷಿಪತ್ರೀಜಿ: ಒಟ್ಟಾರೆ ಪ್ರಪಂಚದ ಭೂಪಟದಲ್ಲಿ ಇಂಡಿಯಾ ಉತ್ತಮವಾದ ಪ್ರದೇಶವೆಂದೂ, ಇಂಡಿಯಾದಲ್ಲಿ ಹೆಚ್ಚು ಜನಸಂಖ್ಯೆ ಇದೆ ಎಂದೂ, ಇಂಡಿಯಾದಲ್ಲಿ ಜನ್ಮ ತಾಳುವುದು. ಮತ್ತೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಸರಹದ್ದಿನಲ್ಲಿರುವ ಷಕ್ಕರ್‌ನಗರ್‌ನಲ್ಲಿ ಜನ್ಮಿಸುವುದು ಎಲ್ಲಾ ಭಾಷೆಗಳು ಬರಲಿಕ್ಕಾಗಿಯೆ ಇರಬಹುದು. ಷಕ್ಕರ್‌ನಗರ್‌ನಲ್ಲಿ ನಮ್ಮ ಕಾಲನಿಯಲ್ಲಿ ಒಬ್ಬ ತಮಿಳಿಯನ್, ಒಬ್ಬ ಕನ್ನಡಿಗ, ಒಬ್ಬ ಪಂಜಾಬಿ, ಒಬ್ಬ ಮುಸ್ಲಿಮ್, ಒಬ್ಬ ಕ್ರಿಶ್ಚಿಯನ್, ಹಿಂದೂಗಳು.. ಮುಂತಾದವರೆಲ್ಲಾ ಇರುವ ಕಾಲನಿಯಲ್ಲಿ ಹುಟ್ಟಿ ಬೆಳೆಯುವುದು, ಎಲ್ಲಾ ರಾಷ್ಟ್ರಗಳ ಸಂಸ್ಕೃತಿಗಳು ಅಭ್ಯಾಸ ಆಗಲಿಕ್ಕಾಗಿಯೇ ಇರಬಹುದು. ಮನೆ ಪಕ್ಕದಲ್ಲೇ ಮಸೀದಿ, ದೂರದಲ್ಲಿ ಶ್ರೀರಾಮ ದೇವಾಲಯ; ಪಕ್ಕದಲ್ಲೇ ಮಸೀದಿ ಆದ್ದರಿಂದ ದಿನನಿತ್ಯಾ ’ ಆಜಾ ’ ಕೇಳಿಸುತ್ತಿತ್ತು. ಮುಸ್ಲಿಂ ಸಂಸ್ಕೃತಿ, ಹಿಂದೂ ಸಂಸ್ಕೃತಿ…. ಎಲ್ಲಾ ಮತಗಳ ಸಮನ್ವಯಕ್ಕಾಗಿಯೆ ಇರಬಹುದು.
ಈಗ ನನಗೆ ಅರ್ಥವಾಗುತ್ತಿದೆ … ಇದೆಲ್ಲಾ ಕಾರಣಲೋಕಗಳಲ್ಲಿ ಆತ್ಮದ ಮುಂಗಡ ಯೋಜನೆ ಎಂದು, ಕಾಲೇಜಿನಲ್ಲಿ ಸಹ ನನಗೆ ಹೆಚ್ಚು ಮುಸ್ಲಿಂ ಸ್ನೇಹಿತರೇ ಇದ್ದರು. ಮುಸ್ಲಿಮ್ಸ್ ಸರಳ ಮನುಷ್ಯರು. ಅವರ ಮಾಂಸಾಹಾರವನ್ನು ಬಿಟ್ಟರೇ, ನಾನು ಮುಸಲ್ಮಾನರನ್ನು ತುಂಬಾ ಇಷ್ಟಪಡುತ್ತಿದ್ದೆ. .
* * *
ಮಾರಂ: ನೀವು ಸದಾಚಾರಸಂಪನ್ನವಾದ, ಸಂಸ್ಕಾರವಂತವಾದ ಬ್ರಾಹ್ಮಣ ಕುಟುಂಬದಲ್ಲಿ ಜನ್ಮಿಸಿದ್ದೀರ. ಈ ರೀತಿ ಜನ್ಮ ತಾಳಲು ಕಾರಣ ?
ಬ್ರಹ್ಮರ್ಷಿಪತ್ರೀಜಿ: ಶುದ್ಧವಾದ, ಹಿತಕರವಾದ ಜೀವನಕ್ಕೆ ಸಂಸ್ಕೃತಿಯು ಸರಿಯಾದ ಅಡಿಪಾಯ ಹಾಕುತ್ತದೆ. ಎಲ್ಲಿ ಸಂಸ್ಕೃತಿ ಚೆನ್ನಾಗಿದೆಯೊ-ಸಂಗೀತ, ಧ್ಯಾನ, ಕಲೆಗಳು, ವಿದ್ಯಾಭ್ಯಾಸ… ಅಲ್ಲಿ ಖಂಡಿತಾ ಯೋಗಿಗಳು ಜನ್ಮ ತಾಳುತ್ತಾರೆ. ನಾನೂ ಸಹ ಹಾಗೆಯೆ. ಅಲ್ಲದೆ, ಮೂರ್ಖತನದಿಂದ ತುಂಬಿರುವ ವಿದ್ಯಾಭ್ಯಾಸ, ಪೂಜೆಗಳು ಇರುವ ಬ್ರಾಹ್ಮಣತ್ವವನ್ನು ಉರುಳಿಸಲು ಸಹ ಅದರಲ್ಲಿ ಜನ್ಮತಾಳಲಾಗಿದೆ.
* * *
ಮಾರಂ: 1979ನಲ್ಲಿ ನೀವು ಇತರರಿಗೆ ಧ್ಯಾನವನ್ನು ಕುರಿತು ಬೋಧಿಸಲಾರಂಭಿಸಿದ್ದೀರ. ವಿಶ್ವಮಟ್ಟದ ಪರಮಗುರುವು ಆಗುತ್ತೀರೆಂದು ಆಗ ನಿಮಗೇನಾದರೂ ಅನಿಸಿತ್ತಾ?” ಪ್ರಾರಂಭದಲ್ಲಿ ನನ್ನ ಬೋಧನೆ ಕೇಳಿ ಧ್ಯಾನ ಮಾಡಿದವರು ನಾಲಕ್ಕು ಜನಮಾತ್ರ ಇದ್ದರು” ಎಂದು ಕೆಲವು ಸಂದರ್ಭಗಳಲ್ಲಿ ನೀವು ಹೇಳಿದ್ದೀರಿ?
ಬ್ರಹ್ಮರ್ಷಿಪತ್ರೀಜಿ: ಪ್ರಪಂಚದಾದ್ಯಂತದ ದೂರದೃಷ್ಟಿಯು ಯಾವುದು ಆಗ ಇರಲಿಲ್ಲ. ಕೇವಲ ನಮಗೆ ತಿಳಿದಿದ್ದೆಲ್ಲಾ ಸಿಕ್ಕಿದವರಿಗೆಲ್ಲಾ ಬೋಧಿಸುತ್ತಾ ಹೋಗುವುದೇ ಬಾಲ್ಯದಿಂದಲೂ ನನ್ನ ಅಭ್ಯಾಸ… ತಿಳಿದಿದ್ದನ್ನು ಪಕ್ಕದವರಿಗೆ ಸುತ್ತಿಗೆಯಿಂದ ಹೊಡೆದಂತೆ ಹೇಳುವುದು. ಚಿಕ್ಕಂದಿನಲ್ಲಿ ನಾನು ನಮ್ಮ ಕಾಲೇಜಿನಲ್ಲಿ ಹೈಯರ್ ಪುಸ್ತಕಗಳನ್ನು ಓದುತ್ತಿದ್ದೆ. ಆದ್ದರಿಂದ, ರಸಾಯನಶಾಸ್ತ್ರ ಓದುವವರಿಗೆ ರಸಾಯಶಾಸ್ತ್ರ ಬೋಧಿಸುತ್ತಿದ್ದೆ. ಗಣಿತ ಬೇಕಾದವರಿಗೆ ಗಣಿತ, ಇತಿಹಾಸ ಬೇಕಾದವರಿಗೆ ಇತಿಹಾಸ ಹೇಳಿಕೊಡುತ್ತಿದ್ದೆ. ಬಾಲ್ಯದಿಂದಲೂ ನಾನು ಕ್ರಿಕೆಟ್‌ನಲ್ಲಿ ಕ್ಯಾಪ್ಟನ್. ಎಲ್ಲರಿಗೂ ಕ್ರಿಕೆಟ್ ಹೇಳಿಕೊಡುತ್ತಿದ್ದೆ, ಫೀಲ್ಡಿಂಗ್, ಬ್ಯಾಟಿಂಗ್, ಬೌಲಿಂಗ್ ಎಲ್ಲಾ… ನನಗೆ ಅರ್ಥವಾಯಿತು. ಇತರರೆಲ್ಲರಿಗೂ ಅರ್ಥವಾಗಬೇಕೆನ್ನುವ ತಪನೆ. ಹಾಗೆಯೇ, ಆ ದಿನಗಳಲ್ಲಿ ಧ್ಯಾನ ಹೊಸದಾಗಿ ಪರಿಚಯವಾಗಿತ್ತು. ಹೊಸದಾಗಿ ಹುಚ್ಚನಾದವನಿಗೆ ಸಮಯದ ಅರಿವು ಇರುವುದಿಲ್ಲ ಎಂದಹಾಗೆ, ಎಲ್ಲರಿಗೂ ಧ್ಯಾನ ಹೇಳಿಕೊಡಬೇಕು ಎಂದುಕೊಳ್ಳುತ್ತಿದೆ. ತಿಳಿದಿರುವ ವಿಷಯ ಎಲ್ಲರಿಗೂ ಹೇಳಬೇಕು. ಧ್ಯಾನವನ್ನು ಕುರಿತು ಹೇಳಲು ಪ್ರಾರಂಭಿಸಿದೆನು. ಅಷ್ಟೇ ವಿನಹ ಪ್ರಪಂಚದಾದ್ಯಂತದ ದೂರದೃಷ್ಟಿ ಎಂದು ಆಗ ಇರಲಿಲ್ಲ.
* * *
ಮಾರಂ: ಹಣದ ಕುರಿತು ನಿಮ್ಮ ನಿರಾಸಕ್ತಿಯು ಎಲ್ಲರಿಗೂ ತಿಳಿದಿದ್ದೇ. ಚಿಕ್ಕಂದಿನಿಂದಲೂ ಅಷ್ಟೆನಾ?
ಬ್ರಹ್ಮರ್ಷಿಪತ್ರೀಜಿ: ಚಿಕ್ಕಂದಿನಿಂದಲೂ ಮನೆಯಲ್ಲಿ ಯಾರಿಗೂ ಹಣದ ಕುರಿತು ಆಲೋಚನೆಗಳು ಇರಲಿಲ್ಲವಲ್ಲ. ಸದಾ ಓದು, ಸಂಗೀತ, ಸಂಸ್ಕೃತಿ-ಇವುಗಳ ಮೇಲೆ ವಿಶೇಷ ಆಸಕ್ತಿ. ’Ph.D.’ ಮಾಡಬೇಕು, ’ಇಂಜಿನಿಯರ್’ ಆಗಬೇಕು, ’ ಸೈಂಟಿಸ್ಟ್ ’ ಆಗಬೇಕು.. ಹೀಗೆ.. ನಮ್ಮದು ಹಣದ ಮೇಲೆ ಆಸಕ್ತಿ ಇರುವ ಮನೆಯಲ್ಲ. ಆ ವಾತಾವರಣದಿಂದ ನನ್ನ ಗುಣಗಳು ಕೂಡಾ ಹಾಗೇ ಬಂದಿವೆ.
* * *
ಮಾರಂ: 1992 ನಲ್ಲಿ ಉದ್ಯೋಗಕ್ಕೆ ರಾಜಿನಾಮೆ ನೀಡಿದ ನಂತರ ನಿಮ್ಮ ಕುಟುಂಬವನ್ನು ಕುರಿತು ನೀವು ಏನು ಆಲೋಚಿಸಿದ್ದೀರಿ?
ಬ್ರಹ್ಮರ್ಷಿಪತ್ರೀಜಿ: ರಾಜೀನಾಮೆ ನೀಡುವುದಕ್ಕಿಂತಾ ಮುಂಚೆ ಸಹ ನಾನು ಏನೂ ಆಲೋಚಿಸಿಲ್ಲ. ಉದಾಹರಣೆಗೆ: ನಾನು 1975 ರಲ್ಲಿ “ಕೋರಮಂಡಲ್ ಫರ್ಟಿಲೈಜರ್ಸ್ನ” ನಲ್ಲಿ ಸೇರಿದೆ. ಮೂರು ವರ್ಷಗಳು ಕೆಲಸಮಾಡಿದ ನಂತರ ಮನೆ ಕಟ್ಟಿಕೊಳ್ಳಲು ’ಸಾಲ’ ಕೊಡುತ್ತಾರೆ. ಡ್ರೈವರ್ ಸಹ ಸೇರಿದಂತೆ ಎಲ್ಲರೂ ಕಂಪೆನಿಯಿಂದ ಸಾಲ ತೆಗೆದುಕೊಂಡು ಮನೆ ಕಟ್ಟಿಕೊಂಡರು. ಎರಡು, ಮೂರು ಲಕ್ಷಗಳು ಕೊಡುತ್ತಿದ್ದರು. ನಾನು ಎಂದಿಗೂ ಸಾಲ ತೆಗೆದುಕೊಳ್ಳಲಿಲ್ಲ. ಮನೆ ಕಟ್ಟಿಕೊಳ್ಳಲಿಲ್ಲ. ಮನೆ ಬೇಡ, ಏನೂ ಬೇಡ ಎನ್ನುತ್ತಿದ್ದೆ. ನನ್ನ ಎಲ್ಲರೂ ಹುಚ್ಚ ಎಂದುಕೊಳ್ಳುತ್ತಿದ್ದರು.
* * *
ಮಾರಂ: ಮತ್ತೆ, ಮೇಡಮ್, ಮಕ್ಕಳು ಸಹಿಸಿಕೊಳ್ಳುತ್ತಿದ್ದರಾ?
ಬ್ರಹ್ಮರ್ಷಿಪತ್ರೀಜಿ: ಇಲ್ಲವಾ ಮತ್ತೆ? ಅದು ಅವರ ಜೀವನದ ಪ್ರಣಾಳಿಕೆ.
* * *
ಮಾರಂ: ನೀವು ಭೂಸಾರಶಾಸ್ತ್ರದಲ್ಲಿ Post Graduate ಅಲ್ಲವೇ? M.Sc.(Ag) ಕುರಿತು ಸ್ವಲ್ಪ ವಿವರಿಸಿ.
ಬ್ರಹ್ಮರ್ಷಿಪತ್ರೀಜಿ: 1966 ನಲ್ಲಿ B.Sc. ಆದನಂತರ ನನಗೆ M.Sc. ರಸಾಯನಶಾಸ್ತ್ರದಲ್ಲಿ ಪ್ರವೇಶ ಸಿಗಲಿಲ್ಲ. ನನ್ನ ಸ್ನೇಹಿತರೆಲ್ಲರೂ M.Sc ರಸಾಯನಶಾಸ್ತ್ರ ಮಾಡಿದ್ದಾರೆ. ನನ್ನ ಸಹೋದರಿ ಸಹ! ’ರಸಾಯನಶಾಸ್ತ್ರ’ ಅಂದರೆ ನನಗೆ ತುಂಬಾ ಇಷ್ಟ ಇತ್ತು. ಅನಂತರ B.Sc(Ag) ಮಾಡಿದೆ. ಅನಂತರ ನನಗೆ Soil Chemistry ನಲ್ಲಿ M.Sc.(Ag) ನಲ್ಲಿ ಸ್ಥಾನ ಸಿಕ್ಕಿದ್ದರಿಂದ ನನ್ನ ಜೀವನದಲ್ಲಿ ಒಳ್ಳೆಯ ಮನ್ವಂತರ ವ್ಯಕ್ತಿಗತವಾಗಿ ನನಗೆ ಅತ್ಯಧಿಕ ತೃಪ್ತಿಯನ್ನು ನೀಡಿದ ಶಾಸ್ತ್ರ್ತSoil Chemistry .1966ನಲ್ಲಿ M.A ಆಂಗ್ಲ ಸಾಹಿತ್ಯದಲ್ಲಿ ಸೀಟ್ ಸಿಕ್ಕಿತು. ಆರು ತಿಂಗಳು ಅದು ಮಾಡಿದ ನಂತರ, ನಮ್ಮ ಅಣ್ಣನ ಸಲಹೆಯಿಂದ ಅದನ್ನು ಬಿಟ್ಟು B.Sc.(Ag) ಸೇರಿದೆ.
* * *
ಮಾರಂ: ತೆನಾಲಿಯಲ್ಲಿ ಇನ್‌ಕಮ್‌ಟಾಕ್ಸ್ ಇನ್‌ಸ್ಪೆಕ್ಟರ್ ಆಗಿ 1970 ವರ್ಷದಲ್ಲಿ ಮೊದಲನೆಯ ಉದ್ಯೋಗ ಮಾಡಿ ಕೆಲವು ತಿಂಗಳ ನಂತರ ನೀವು ಅದಕ್ಕೆ ರಾಜೀನಾಮೆ ನೀಡಿದರೆಂದು ಕೇಳಿದೆ?
ಬ್ರಹ್ಮರ್ಷಿಪತ್ರೀಜಿ: 1970 ನಲ್ಲಿ ತೆನಾಲಿಯಲ್ಲಿ ಇನ್‌ಕಮ್‌ಟಾಕ್ಸ್ ಇನ್‌ಸ್ಪೆಕ್ಟರ್ ಆಗಿ ಸೇರಿದ ನಂತರ, ಆ ವೃತ್ತಿ ಮಾಡುತ್ತಾ IAS ಗೆ ತಯಾರಿಯಾಗುತ್ತಿದ್ದೆ. ಆದರೆ, ಎರಡೂ ಮಾಡಲಿಕ್ಕೆ ಸಮಯ ಸಾಕಾಗುತ್ತಿರಲಿಲ್ಲ. ಅಣ್ಣನಿಗೆ ಹೇಳಿದರೆ ಬಿಟ್ಟುಬಿಡೊ ಕೆಲಸ ರಾಜೀನಾಮೆ ನೀಡಿ IAS ಪೂರ್ತಿ ಮಾಡು ಎಂದರು. ಅಷ್ಟೆ, ಕೆಲಸಕ್ಕೆ ರಾಜೀನಾಮೆ ನೀಡಿ IAS ಗೆ ಮೂರು ಬಾರಿ ಪರೀಕ್ಷೆ ಬರೆದೆ.
* * *
ಮಾರಂ: ನೀವು ಕೋರಮಂಡಲ್ ಉದ್ಯೋಗಕ್ಕೆ ಯಾವಾಗ ರಾಜಿನಾಮೆ ನೀಡಿದಿರಿ?
ಬ್ರಹ್ಮರ್ಷಿಪತ್ರೀಜಿ: 1992 ಜನವರಿ 16ರಂದು ರಾಜೀನಾಮೆ ಪತ್ರವನ್ನು ಸಮರ್ಪಿಸಿದೆ. 1992 ಏಪ್ರಿಲ್ 16.. ಅದು ನನ್ನ ಕೊನೆಯ ಕೆಲಸದ ದಿನ.
* * *
ಮಾರಂ: ಕರ್ನೂಲ್‌ನಲ್ಲೇ ಪಿರಮಿಡ್ ಕಟ್ಟಬೇಕೆಂದು ನಿಮಗೆ ಏಕೆ ಅನಿಸಿತು? ಅದರ ಪ್ರೇರೇಪಣೆಗೆ ಕಾರಣ? ಪಿರಮಿಡ್ ನಿರ್ಮಾಣ ಆಗುವಾಗ ನಿಮ್ಮ ಅನುಭವಗಳು ಹೇಗಿತ್ತು?
ಬ್ರಹ್ಮರ್ಷಿಪತ್ರೀಜಿ: ಕರ್ನೂಲ್‌ನಲ್ಲೇ ಉದ್ಯೋಗ ಮಾಡುವುದು, ಅಲ್ಲಿಂದ ಧ್ಯಾನಪ್ರಚಾರ ಹೆಚ್ಚು ಜನರಿಂದ ಪ್ರಾರಂಭಿಸುವುದು.. ಉದ್ಯೋಗ ನಿಮಿತ್ತ, ಧ್ಯಾನಪ್ರಚಾರದಿಂದ ಅಲ್ಲಿ ಅನೇಕ ಜನ ಮಿತ್ರರಾದರಿಂದ ಕರ್ನೂಲ್‌ನಲ್ಲೇ ಮೊದಲನೆಯ ಪಿರಮಿಡ್ ನಿರ್ಮಾಣಕ್ಕೆ ಕಾರಣವಾಯಿತು.
ಆ ನಿರ್ಮಾಣ ಸಹ ತುಂಬಾ ಬೇಗ ನಡೆಯಿತು. 1990 ಡಿಸೆಂಬರ್ 31ನೇ ದಿನಾಂಕ ಆ ಪಿರಮಿಡ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದೆವು. 4-5 ತಿಂಗಳಲ್ಲಿ ಪಿರಮಿಡ್ ನಿರ್ಮಾಣ ಪೂರ್ಣಗೊಂಡಿತು. ವರ್ಷದಲ್ಲೇ ಉಳಿದ ಕೆಲಸ ಪೂರ್ತಿಯಾಯಿತು.
ಈ ಪಿರಮಿಡ್ ನಿರ್ಮಾಣಕ್ಕೆ ಮುಖ್ಯ ಕಾರಣಕರ್ತರು ಶ್ರೀ ಬಿ.ವಿ.ರೆಡ್ಡಿಯವರು. ಅವರು ಧ್ಯಾನ ಕಲಿತ ನಂತರ, ನಿಮಗಾಗಿ ಏನಾದರು ಒಂದು ’ ದೊಡ್ಡ ಕೆಲಸ ’ ಮಾಡಬೇಕೆಂದು ಅನಿಸುತ್ತಿದೆ; ಏನು ಮಾಡಲಿ ? ಎಂದು ಕೇಳಿದರು. ನನಗೊಂದು ಪಿರಮಿಡ್ ಕಟ್ಟಿಸಿಕೊಡಿ ಎಂದು ಕೇಳಿದೆ. ರಘುನಾಥ್ ಥಿಯೇಟರ್ ಹತ್ತಿರದಿಂದ ಇರುವ ಸ್ಥಳವೆಲ್ಲಾ ನನ್ನದೇ, ಆ ಸ್ಥಳದಲ್ಲಿ ನೀವು ಎಲ್ಲಿ ಬೇಕು ಎಂದು ಬಯಸಿದರೇ ಅಲ್ಲಿ ಈ ಪಿರಮಿಡ್ ನಿರ್ಮಾಣ ಮಾಡಿಸಿಕೊಡುತ್ತೇನೆ ಎಂದರು. ಸಮೀರ್ ಬಾಬಾ ಸಮಾಧಿ ಸುತ್ತಲೂ ಇರುವ ಸ್ಥಳ ಪಿರಮಿಡ್ ನಿರ್ಮಾಣಕ್ಕೆ ನಾನು ಆರಿಸಿಕೊಂಡೆ. ಬಿ.ವಿ.ರೆಡ್ಡಿ ಅವರು ತಕ್ಷಣ ಕೆಲಸ ಪ್ರಾರಂಭಿಸಿ ನಿರ್ಮಾಣ ಮಾಡಿಕೊಟ್ಟರು. ಇನ್ನೂ ಅನೇಕ ಜನ ಮಹಾನುಭಾವರು ಆ ಪಿರಮಿಡ್ ನಿರ್ಮಾಣಕ್ಕೆ ಸಹಕರಿಸಿದರು. ಶ್ರೀ ಬಿ.ವಿ.ರೆಡ್ಡಿ ಅವರು ಹಿಡಿದ ಕೆಲಸ ಯಾವುದಾದರೂ ಸರಿ ತಕ್ಷಣ ಮಾಡಿ ಮುಗಿಸುತ್ತಾರೆ. ಅಷ್ಟು ಛಲ ಇರುವ ಮನುಷ್ಯ. ಅದಕ್ಕೆ ಬುದ್ಧಾ ಪಿರಮಿಡ್ ಅಷ್ಟು ಶೀಘ್ರವಾಗಿ ಪೂರ್ಣಗೊಂಡಿತು.
* * *
ಮಾರಂ: ಪಿರಮಿಡ್ ಪೂರ್ಣವಾದ ನಂತರ ಒಬ್ಬೊಬ್ಬರನ್ನೂ ಪಿರಮಿಡ್ ಒಳಗೆ ಕಳಿಸಿ, ಅವರು ಧ್ಯಾನ ಮಾಡುವವರೆಗೂ ನೀವು ಹೊರಗೆ ಪುಸ್ತಕ ಓದುತ್ತಾ ಕುಳಿತುಕೊಂಡು, ಅವರು ಪಿರಮಿಡ್ ಒಳಗಿಂದ ಹೊರಗೆ ಬಂದನಂತರ, ಒಬ್ಬೊಬ್ಬರ ಅನುಭವಗಳು ತಾಳ್ಮೆಯಿಂದ ಕೇಳಿಸಿಕೊಂಡು, ನೀವು ತುಂಬಾ ಆನಂದಿಸುತ್ತಿದ್ದರೆಂದು ಪತ್ರಿ ಮೇಡಮ್ ಹೇಳಿದ್ದಾರೆ.
ಬ್ರಹ್ಮರ್ಷಿಪತ್ರೀಜಿ: ಸರಿ, ಇತರರು ಆನಂದಪಡುವುದನ್ನು ನೋಡಿ ಆನಂದಿಸುವ ಮನಸ್ತತ್ವ ನನ್ನದು. ಪಿರಮಿಡ್‌ನಲ್ಲಿ ಧ್ಯಾನ ಮಾಡಿ ಬಂದವರ ಅನುಭವಗಳು ಕೇಳಿ ನಾನೇ ಆ ಅನುಭವಗಳನ್ನು ಹೊಂದಿದಷ್ಟು ಆನಂದವನ್ನು, ಅನುಭೂತಿಯನ್ನೂ ಹೊಂದುತ್ತಿದ್ದೆ.
* * *
ಮಾರಂ: ನೀವು ಪ್ರತಿಯೊಬ್ಬರ ಅನುಭವಗಳನ್ನೂ ತುಂಬಾ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತೀರ. ಶ್ರದ್ಧೆಯಿಂದ ಕೇಳುತ್ತೀರ. ಮುಖದಲ್ಲಿ ಅಸಹನೆ ಕಾಣಿಸುವುದಿಲ್ಲ. ಎಷ್ಟು ಹೊತ್ತಾದರು ಕೇಳಿಸಿಕೊಳ್ಳುತ್ತೀರ. ನಿಮ್ಮ ಹಾಗೆ ಕೇಳಿಸಿಕೊಳ್ಳುವವರು 0.01% ಕೂಡಾ ಇರುತ್ತಾರಾ ಎಂದು ನನಗೆ ಸಂದೇಹ?
ಬ್ರಹ್ಮರ್ಷಿಪತ್ರೀಜಿ: ಬಾಲ್ಯದಿಂದಲೂ ನಾನು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಎಲ್ಲೋ ಒಂದು ಕಡೆ ಅಡಗಿ ಕುಳಿತುಕೊಳ್ಳುತ್ತಿದ್ದೆ. ಮಾತನಾಡಲು ನಾಲಿಗೆ ಒಪ್ಪಿಕೊಳ್ಳುತ್ತಿರಲಿಲ್ಲ. ನಾಲಿಗೆ ಧಾರಾಳವಾಗಿ ಇರುತ್ತಿರಲಿಲ್ಲ. ಹಾಗೆ ಅಭ್ಯಾಸವಾಗಿದೆ.
* * *
ಮಾರಂ: ನಿಮ್ಮ ಸೋದರಿ ಸುಧಾ ಮೇಡಮ್‌ರೊಡನೆ ಸಂದರ್ಶನ ಮಾಡಿದಾಗ ನಿಮಗೆ ಚಿಕ್ಕ ವಯಸ್ಸಿನಲ್ಲೇ ಜೀವನ ಅಂದರೆ ಏನು? ಜೀವನದ ನಂತರ ಪರಿಸ್ಥಿತಿ ಏನು? ಎನ್ನುವ ಜಿಜ್ಞಾಸೆಯಿಂದ ಕೂಡಿರುವ ಪ್ರಶ್ನೆಗಳಿರುತ್ತಿತ್ತು ಎಂದು ಹೇಳಿದ್ದಾರೆ?
ಬ್ರಹ್ಮರ್ಷಿಪತ್ರೀಜಿ: ನನಗೆ ಅವೆಲ್ಲಾ ಸರಿಯಾಗಿ ನೆನಪಿಲ್ಲ, ಆದರೆ, ಶಾಲೆ ಅಂತ್ಯವಾದಾಗ ಎರಡು ತಿಂಗಳು ಬೇಸಿಗೆ ರಜೆ ಬಂದರೆ.. ಆಗ ನಮ್ಮ ಅಣ್ಣ ವೇಣುವಿನೋದ್ ವರಂಗಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿದ್ದರು.. ಅಲ್ಲಿಗೆ ಹೋಗಿದ್ದೆ. ಆಗ ಪಂಡಿತ್ ರಾಧಾಕೃಷ್ಣನ್ ಬರೆದ ಇಂಡಿಯನ್ ಫಿಲಾಸಫಿ ಎರಡು ಸಂಪುಟಗಳು ನನ್ನ ಹದಿನೈದನೇ ವರ್ಷದಲ್ಲಿ ತುಂಬಾ ಶ್ರದ್ಧೆಯಿಂದ ಓದಿದೆ.
ನನ್ನ ಹತ್ತನೆಯ ವರ್ಷದಲ್ಲೇ ವಿಶ್ವನಾಥ ಸತ್ಯನಾರಾಯಣರವರ ಸಾವಿರ ಹೆಡೆಗಳು ಪುಸ್ತಕ ಓದಿದೆ. ಅದು ನನ್ನ ಅಚ್ಚುಮೆಚ್ಚಿನ ಕಾದಂಬರಿ. ಅದರಲ್ಲಿರುವ ಧರ್ಮಾರಾವು, ಪಸರಿಕ, ದೊಡ್ಡ ಅರುಂಧತಿ, ಚಿಕ್ಕ ಅರುಂಧತಿ.. ಈ ಪಾತ್ರಗಳು ನನ್ನನ್ನು ತುಂಬಾ ಪ್ರಭಾವಿತಗೊಳಿಸಿತು. ಅನಂತರ, ಆ ಪುಸ್ತಕವನ್ನು ನಾನು ಅನೇಕ ಬಾರಿ ಓದಿದೆ. ಹಾಗೆಯೆ, ಪತ್ತೆದಾರಿ ಪುಸ್ತಕಗಳು, ಅದರಲ್ಲಿರುವ ಪಾತ್ರಗಳು ’ಭಗವಾನ್’, ’ ರಾಂಬಾಬು ’, ’ ಕಿರಣ್ಮಯಿ ’ – ಅವರ ಸಂಶೋಧನೆಗಳು, ತುಂಬಾ ಮನೋರಂಜಕವಾಗಿ ಓದುತ್ತಿದ್ದೆ. ಹಾಗೆ ನಾನು ಪುಸ್ತಕಗಳ ಹುಳು ಆಗಿ ಬಾಲ್ಯದಿಂದಲೇ ಇದ್ದೆ.
* * *
ಮಾರಂ: ಕರ್ನೂಲ್ ಮಾಸ್ಟರ್ ಗುಣಾಕರ್ ಮತ್ತು ಇತರರು ಹೇಳುತ್ತಿರುತ್ತಾರೆ, ಪತ್ರೀಜಿ ಸದಾ ಕಟ್‌ತ್ರೊಟ್ ಎಂದು!
ಬ್ರಹ್ಮರ್ಷಿಪತ್ರೀಜಿ: 1979 ನಲ್ಲಿ ಮಾಸ್ಟರ್ ವಾಕಿನ್ ಆದಾಗಿನಿಂದಲೇ ನಾನು ’ ಕಟ್‌ತ್ರೊಟ್ ’. ಅದಕ್ಕೂ ಮುಂಚೆ ನಾನು ತುಂಬಾ ತುಂಬಾ ಮೃದು.
* * *
ಮಾರಂ: ’ ವಾಕಿನ್ ’ ಆಗುವುದನ್ನು ಕುರಿತು ಸ್ವಲ್ಪ ವಿವರಿಸಿ ?
ಬ್ರಹ್ಮರ್ಷಿಪತ್ರೀಜಿ: ಒಂದು ಆತ್ಮ ಹೋಗಿ ಮತ್ತೊಂದು ಆತ್ಮ ಒಂದು ಶರೀರದಲ್ಲಿ ಮಧ್ಯಂತರವಾಗಿ ಬಂದು ಸೇರುವುದನ್ನು ’ ವಾಕಿನ್ ಆತ್ಮ ’ ಎನ್ನುತ್ತೇವೆ.
* * *
ಮಾರಂ: ಆಗ ಕುಟುಂಬ, ಮತ್ತು ಅದಕ್ಕೂ ಮುಂಚೆ ಸಂಬಂಧಿಸಿದ ಜ್ಞಾಪಕಗಳು ಹೇಗಿರುತ್ತವೆ?
ಬ್ರಹ್ಮರ್ಷಿಪತ್ರೀಜಿ: ಮಿದುಳಿನ ಕಣಗಳಲ್ಲಿ ಆ ನೆನಪುಗಳೆಲ್ಲಾ ಅಡಗಿರುತ್ತವೆ. ಆದ್ದರಿಂದ, ಆ ’ಸ್ಮೃತಿ’ ಇರುತ್ತದೆ. ಆದರೆ, ಕುಟುಂಬ ಸದಸ್ಯರ ಜೊತೆ ವಿಶೇಷವಾಗಿ ಭಾವೋದ್ವೇಗಗಳು, ಬಂಧ ಏನೂ ಇರುವುದಿಲ್ಲ. ಬಂಧರಹಿತವಾಗಿಯೇ ಇರುತ್ತೇವೆ. ನೀನು ಆ ಕುಟುಂಬಕ್ಕೆ ಸಂಬಂಧಿಸಿದವನು ಅಲ್ಲವಲ್ಲ. ನೀನು ಆ ಕುಟುಂಬದಲ್ಲಿ ಜನ್ಮಿಸಲಿಲ್ಲ… ಆ ಕುಟುಂಬದಲ್ಲಿ ಬೆಳೆಯಲಿಲ್ಲ. ತಾವರೆ ಎಲೆಯ ಮೇಲೆ ನೀರಿನ ಹನಿಯ ಹಾಗೆ.. ಇರುತ್ತದೆ ಆ ಸ್ಥಿತಿ.
* * *
ಮಾರಂ: ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಇಂಡಿಯನ್ ಫಿಲಾಸಫಿ ಓದಿದ ನಂತರ ನಿಮ್ಮಲ್ಲಿ ಏನಾದರೂ ಪ್ರಶ್ನೆಗಳು ಬರುತ್ತಿತ್ತಾ? ಆಧ್ಯಾತ್ಮಿಕ ಟ್ರೆಂಡ್ ಇರುತ್ತಿತ್ತಾ? ಆತ್ಮಗಳನ್ನು ಕುರಿತಾದ ವಿಶ್ಲೇಷಣೆ ನಿಮ್ಮಲ್ಲಿ ಏನಾದರೂ ಆಗ ಇರುತ್ತಿತ್ತಾ?
ಬ್ರಹ್ಮರ್ಷಿಪತ್ರೀಜಿ: ಒಂದೇ ಒಂದು ಸಂಶಯ ಮಾತ್ರ ಇರುತ್ತಿತ್ತು.. ’ ಮನಸ್ಸಿ ’ಗೂ, ’ ಮೆದುಳಿ ’ಗೂ ಇರುವ ವ್ಯತ್ಯಾಸವೇನು ? ಎನ್ನುವ ಪ್ರಶ್ನೆ ಮೆದುಳಿಗೂ, ಮನಸ್ಸಿಗೂ ವ್ಯತ್ಯಾಸವೇನು? ಎನ್ನುವ ಪ್ರಶ್ನೆ ಸದಾ ಇರುತ್ತಿತ್ತು.
* * *
ಮಾರಂ: ಮನಸ್ಸಿಗೂ, ಮಿದುಳಿಗೂ ಇರುವ ವ್ಯತ್ಯಾಸವೇನು?
ಬ್ರಹ್ಮರ್ಷಿಪತ್ರೀಜಿ: ಮೆದುಳು-ಮಸ್ತಿಷ್ಕ ಎನ್ನುವುದು ಭೌತಿಕ ಶರೀರದ ಒಂದು ಭಾಗ, ಅಷ್ಟೇ. ಆದರೆ, ಮೈಂಡ್-ಮನಸ್ಸು ಎನ್ನುವುದು ಈ ಶರೀರದಲ್ಲಿರುವ ನಮ್ಮ ಆತ್ಮದ ಪ್ರತಿಬಿಂಬ. ಭಾರತೀಯ ತತ್ವಶಾಸ್ತ್ರದಲ್ಲಿ ’ ವೇದಾಂತ ’ ಇದೆ. ಆದರೆ, ಆತ್ಮಗಳನ್ನು ಕುರಿತು ಹೆಚ್ಚಿನ ವಿವರಣೆ ಇಲ್ಲವಲ್ಲ. ಒಬ್ಬ ಯೋಗಿ ಆದರೇನೆ ಆತ್ಮಗಳ ಕುರಿತಾದ ಪ್ರತ್ಯಕ್ಷ ಪರಿಜ್ಞಾನವಿರುತ್ತದೆ. ಯಾವಾಗ ಯೋಗಿಗಳ ಪುಸ್ತಕಗಳು ಓದಲು ಪ್ರಾರಂಭಿಸಿದ್ದೆನೋ ಆಗಲೇ ಆಸ್ರ್ಟಲ ಬಾಡೀ-ಆಸ್ರ್ಟಲ್ ಟ್ರಾವೆಲ್ಸ್ .. ಇವುಗಳನ್ನು ಕುರಿತು ಅನೇಕಾನೇಕ ಶ್ರೇಷ್ಠಕರವಾದ ಮಾಹಿತಿ ವಿಶೇಷಗಳು ತಿಳಿದುಬಂತು.
* * *
ಮಾರಂ: ಪ್ರಪಂಚದಾದ್ಯಂತ ಧ್ಯಾನಪ್ರಚಾರ ಮಾಡಬೇಕೆಂದು ನಿಮಗೆ ಯಾವಾಗಿನಿಂದ ಅನಿಸಿತು?
ಬ್ರಹ್ಮರ್ಷಿಪತ್ರೀಜಿ: 1999ನಲ್ಲಿ ಕರ್ನೂಲ್‌ನಲ್ಲಿ ಮೊದಲನೆಯ ಧ್ಯಾನಮಹಾಯಜ್ಞ ಪೂರ್ಣಗೊಂಡ ನಂತರ, 2000ನೇ ವರ್ಷದಲ್ಲಿ ಈ ವಿಷಯಗಳು ಹೊರಗೆ ಬಂದವು, 2004-ಧ್ಯಾನಾಂಧ್ರಪ್ರದೇಶ್, 2008-ಧ್ಯಾನಭಾರತ್, 2012-ಧ್ಯಾನ ಜಗತ್ ಎನ್ನುವ ಪ್ರಣಾಳಿಕೆಗಳು ತಯಾರಾದವು.
* * *
ಮಾರಂ: ನಿಮ್ಮ ’ ವರ್ತನೆ ’ಯಲ್ಲಿ (Attitude) ಒಂದೊಂದು ಬಾರಿ ಒಬ್ಬೊಬ್ಬರ ಮಾಸ್ಟರ್ ಪ್ರಭಾವ ಕಾಣಿಸುತ್ತಿರುತ್ತದೆ. ಅಷ್ಟರಲ್ಲೇ ಮತ್ತೊಂದು ತರಹ ಬದಲಾಗುತ್ತದೆ. ವಿವರಿಸಬೇಕಾಗಿ ಪ್ರಾರ್ಥನೆ!
ಬ್ರಹ್ಮರ್ಷಿಪತ್ರೀಜಿ: ನನಗೆ ಎಲ್ಲದಕ್ಕಿಂತಾ ತುಂಬಾ ಇಷ್ಟವಾದ ವಿಷಯ ಎಂದರೆ, ಎಲ್ಲ ಮಾಸ್ಟರ್‌ಗಳನ್ನೂ ಅವರ ಹಿರಿಮೆಯನ್ನು ಅಧ್ಯಯನ ಮಾಡುವುದು. ಯಾವ ವಿಷಯವನ್ನು ನಾವು ತುಂಬಾ ಅಧ್ಯಯನ ಮಾಡುತ್ತೇವೊ ಅದನ್ನೇ ನಾವು ಪೂರ್ತಿಯಾಗಿ ಗ್ರಹಿಸುತ್ತೇವೆ. ಉದಾ: ನೀವು ಮಹಾಭಾರತ ಓದಿದ್ದೇರೆಂದುಕೊಳ್ಳೋಣ… ಆ ಪಾತ್ರಗಳನ್ನೂ, ರಾಮಾಯಣ ಓದಿದರೇ… ಅದರಲ್ಲಿರುವ ಪಾತ್ರಗಳನ್ನೂ ಪೂರ್ತಿಯಾಗಿ ಗ್ರಹಿಸುತ್ತೇವೆ, ರಮಣಮಹರ್ಷಿ ಪುಸ್ತಕಗಳು ಓದಿದರೇ, ನಿಮಗೆ ಸಹಜವಾಗಿಯೇ ಆ ವಿಷಯಗಳು ನೆನಪಿಗೆ ಬರುತ್ತಿರುತ್ತವೆ.
* * *
ಮಾರಂ: ವಿಭಿನ್ನ ಯೋಗಿಗಳ ಪುಸ್ತಕಗಳು ನೀವು ಈ ಪ್ರಪಂಚಕ್ಕೆ ನೀಡುತ್ತಿರುವಿರಿ. ವಿಭಿನ್ನ ಯೋಗಿಗಳು ವಿಭಿನ್ನ ಅಭಿಪ್ರಾಯಗಳು ಪ್ರಕಟಿಸುತ್ತಾ ಇರುತ್ತಾರೆ ಅಲ್ಲವೇ… ಇವರೆಲ್ಲರ ಅಭಿಪ್ರಾಯಗಳು, ಅದು ಸ್ವಲ್ಪ ಅಸ್ಪಷ್ಟತೆಯನ್ನು, ಸ್ವಲ್ಪ ಘರ್ಷಣೆಯನ್ನೂ, ಸೃಷ್ಟಿಸುತ್ತಿರುತ್ತದೆ ಅಲ್ಲವೇ ? ಮತ್ತೆ ಸಾಧಕರು ಅವುಗಳನ್ನು ಹೀಗೆ ದಾಟಿಕೊಳ್ಳಬೇಕು?
ಬ್ರಹ್ಮರ್ಷಿಪತ್ರೀಜಿ: ಪ್ರತಿಯೊಂದು ಸೋಲು ಒಂದು ಗೆಲವಿಗೆ ನಾಂದಿ ಎನ್ನುತ್ತೇವಲ್ಲವೇ ಹಾಗೆಯೇ, ಪ್ರತಿಯೊಂದು ಗಲಭೆ ಒಂದು ಅರಿವಿನ ಕಡೆ, ಒಂದು ಸ್ಪಷ್ಟತೆಯ ಕಡೆ ನಮ್ಮನ್ನು ಖಂಡಿತ ಕರೆದುಕೊಂಡು ಹೋಗುತ್ತದೆ. ಆದ್ದರಿಂದ, ’ ಸೋಲಾ ’ಗಲಿ ’ ಗೆಲ ’ವಾಗಲಿ ಮೌಲಿಕವಾಗಿ ತಪ್ಪೇನಿಲ್ಲ.
* * *
ಮಾರಂ: ಹೊಸದಾಗಿ ಧ್ಯಾನಕ್ಕೆ ಬಂದವರನ್ನೂ ಕೂಡ ನೀವು ತುಂಬಾ ಚೆನ್ನಾಗಿ ಶ್ರದ್ಧೆಯಿಂದ ಆಲಿಸುತ್ತೀರ. ಅದು ಅಷ್ಟು ಅದ್ಭುತವಾಗಿ ನಿಮಗೆ ಹೇಗೆ ಸಾಧ್ಯವಾಯಿತು??
ಬ್ರಹ್ಮರ್ಷಿಪತ್ರೀಜಿ: ಕೋರಮಂಡಲ್ನಲ್ಲಿ ಕೆಲಸ ಮಾಡುವಾಗ, ರೈತರನ್ನು ಆಗಾಗ ದೊಡ್ಡದೊಡ್ಡ ಸಂಸ್ಥೆಗಳಿಗೆ ಕರೆದುಕೊಂಡು ಹೋಗುತ್ತಿದ್ದೆವು. ಉದಾ: ಇಲ್ಲಿ ಹೈದರಾಬಾದ್‌ನಲ್ಲಿ ’ ಇಕ್ರಿಸಾಟ್ ’ ಇದೆ. ಅಲ್ಲಿಗೆ ಸಹ ರೈತರನ್ನು ಕರೆದುಕೊಂಡು ಹೋಗುತ್ತಿದ್ದೆವು. ’ ಇಕ್ರಿಸಾಟ್ ’ ಪ್ರಪಂಚ ಪ್ರಸಿದ್ಧಿಯಾದ ಅಮೆರಿಕಾ ಸಂಸ್ಥೆ. ಹಾಗೆ ರೈತರು ಬಂದಾಗ ಇಕ್ರಿಸಾಟ್‌ನ ಮೊದಲನೆಯ ಮಟ್ಟದ ಅಧಿಕಾರಿಯು (ಡೈರೆಕ್ಟರ್) ಬಂದು ಭೇಟಿಮಾಡುತ್ತಿದ್ದನು.
ಆತ ಏನು ಹೇಳಿದನೆಂದು ಗೊತ್ತಾ? – ಅತ್ಯುನ್ನತ ಮಟ್ಟದ ಅಧಿಕಾರಿ ಮಾತ್ರವೇ ಸಂಸ್ಥೆಯಲ್ಲಿರುವ ಮೊದಲನೆಯ ಮಟ್ಟದಲ್ಲಿರುವವರಿಗೆ ಸಮಾಚಾರವನ್ನು ಸರಿಯಾಗಿ ತಿಳಿಸಬಲ್ಲ ” ಎಂದು ಆ ಕಾನ್ಸೆಪ್ಟ್ ನನಗೆ ತುಂಬಾ ಚೆನ್ನಾಗಿ ನೆನಪಿನಲ್ಲಿದೆ.
* * *
ಮಾರಂ: ಪ್ರತಿಯೊಂದು ಊರಿನಲ್ಲೂ ಪ್ರತಿ ಪಿರಮಿಡ್ ಮಾಸ್ಟರ್ ಕೂಡ ನಿಮ್ಮನ್ನು ಭೇಟಿಯಾದಾಗ, ಫೋನ್ ಮಾಡಿದಾಗ ಪತ್ರೀಜಿ ನನಗೇ ಆತ್ಮೀಯರು ಎಂದು ಭಾವಿಸುತ್ತಾ ಇರುತ್ತಾರೆ. ಅದು ಹೇಗೆ ಸಾಧ್ಯವಾಯಿತು?
ಬ್ರಹ್ಮರ್ಷಿಪತ್ರೀಜಿ: ನಾನು ’ ಕನ್ನಡಿ ’ಯ ಹಾಗೆ ಇದ್ದೇನೆ. ಆದ್ದರಿಂದ, ಯಾವ ಮನೆಯಲ್ಲಾದರೂ, ಯಾರನ್ನಾದರೂ ನೋಡಿದರೆ ಅವರು ಹೆಚ್ಚಾಗಿ ಪ್ರೀತಿಸುವುದು ’ ಕನ್ನಡಿ ’ಯನ್ನು The Mirror. ಏಕೆಂದರೆ, ಕನ್ನಡಿಯಲ್ಲಿ ಅವರ ಮುಖವೇ ಕಾಣಿಸುತ್ತದೆ. ಆದ್ದರಿಂದ, ಅದು ಅವರಿಗೆ ತುಂಬಾ ಚೆನ್ನಾಗಿರುತ್ತದೆ. ಆದ್ದರಿಂದ, ನಾವು ’ಕನ್ನಡಿ’ಯ ಹಾಗೇ ಇದ್ದೇವೆ. ಆದ್ದರಿಂದ, ಪ್ರತಿಯೊಬ್ಬರನ್ನೂ ನಾವು ಹಾಗೆ ನೋಡಲಾಗುತ್ತಿದೆ. ಆದ್ದರಿಂದ, ಅದು ಸಾಧ್ಯವಾಯಿತು. ಕನ್ನಡಿಯ ಕಾನ್ಸೆಪ್ಟ್ ಇದು.
* * *
ಮಾರಂ: ಯಾರು ಏನು ಮಾತನಾಡಿದರೂ ನೀವು ಅವರನ್ನು ತಪ್ಪಾಗಿ ನೋಡುವುದಿಲ್ಲ. ಹೀಗಿರು, ಹಾಗಿರು ಎಂದು ನಿರ್ದೇಶಿಸುವುದಿಲ್ಲ
ಬ್ರಹ್ಮರ್ಷಿಪತ್ರೀಜಿ: ನಾನು ದ್ವೇಷಿಸುವುದು ಮಾಂಸಾಹಾರವನ್ನು ಮತ್ತು ಜೀವ ಹಿಂಸೆಯನ್ನು ಮಾತ್ರವೇ. ಪ್ರಾಣಿವಧೆ, ಪಕ್ಷಿವಧೆ, ಮಾಂಸಭಕ್ಷಣೆ.. ಇವು ನನಗೆ ಕೋಪ ತರಿಸುವ ವಿಷಯಗಳು. ಇವುಗಳನ್ನು ಕುರಿತು ನನಗೆ ತುಂಬಾ ದ್ವೇಷ. ಸೀಳಿ ಬಿಡುತ್ತೇನೆ. ಉಳಿದದ್ದು ಯಾವುದಾದರೂ ಸರಿಯೆ, ಯಾರಾದರೂ ಸರಿಯೆ, ಯಾವ ವಿಷಯವಾದರೂ ಸಂತೋಷವಾಗಿ ಸ್ವೀಕರಿಸುತ್ತೇನೆ.
* * *
ಮಾರಂ: ಇದು ಹೇಗೆ ಸಾಧ್ಯ? ಜನ್ಮಜನ್ಮಗಳ ಸಂಸ್ಕಾರವಾ?
ಬ್ರಹ್ಮರ್ಷಿಪತ್ರೀಜಿ: ಸಂಸ್ಕಾರ ಎಂದರೇನೇ ಜನ್ಮಜನ್ಮಗಳಿಂದ ಬರುವುದು.
* * *
ಮಾರಂ: ನೀವು ’ ನಾಳೆ ’ ಕುರಿತು ಯಾವಾಗಲಾದರೂ ಆಲೋಚಿಸುತ್ತೀರಾ?
ಬ್ರಹ್ಮರ್ಷಿಪತ್ರೀಜಿ: ’ನಾಳೆ’ ಕುರಿತು ಚೆನ್ನಾಗಿ ಆಲೋಚಿಸುತ್ತೇನೆ; ಆದರೆ, ’ ವರ್ತಮಾನ ’ದಲ್ಲಿ ಮಾತ್ರವೇ ಜೀವಿಸುತ್ತಿರುತ್ತೇನೆ.
* * *
ಮಾರಂ: ’ ನಿನ್ನೆ ’ ಕುರಿತು ನಿಮ್ಮ ಅಭಿಪ್ರಾಯ?
ಬ್ರಹ್ಮರ್ಷಿಪತ್ರೀಜಿ: ನಿನ್ನೆ ಯನ್ನು ಅಧ್ಯಯನ ಮಾಡಿ, ಅದರಿಂದ ಪೂರ್ಣ ಸಾರವನ್ನು ತೆಗೆದುಕೊಳ್ಳುತ್ತೇನೆ. ಅದನ್ನು ವರ್ತಮಾನದಲ್ಲಿ ಸಂಪೂರ್ಣವಾಗಿ ಉಪಯೋಗಿಸುತ್ತಾ ಇರುತ್ತೇನೆ.
* * *
ಮಾರಂ: ನೀವು ಮಾತಿನ ಮಧ್ಯದಲ್ಲಿ ಅಲ್ಲಾಹೋ ಅಕ್ಬರ್ ಎಂದೂ, ರಾಮಚಂದ್ರಾ ಎಂದೂ ಎನ್ನುತ್ತಿರುತ್ತೀರ !
ಬ್ರಹ್ಮರ್ಷಿಪತ್ರೀಜಿ: ಗತಜನ್ಮದಲ್ಲಿ ನಾನೊಬ್ಬ ಮುಸ್ಲಿಮ್. ಅದಕ್ಕೆ ಈ ಜನ್ಮದಲ್ಲೂ ಅಲ್ಲಾಹೋ ಅಕ್ಬರ್ ಎಂದು ನನ್ನ ಬಾಯಿಂದ ಸಹಜವಾಗಿಯೇ ಬರುತ್ತಿರುತ್ತದೆ. ಈ ಜನ್ಮದಲ್ಲಿ ಹಿಂದುವಾಗಿ ಹುಟ್ಟಿದ್ದೇನೆ. ಅದಕ್ಕೆ ತಕ್ಕ ಹಾಗೇ ನಮ್ಮ ಊರಿನಲ್ಲಿರುವ ರಾಮಾಲಯದಿಂದ ನಮ್ಮ ಕುಟುಂಬಕ್ಕೆ ಬಾಲ್ಯದಿಂದಲೂ ಇರುವ ಅನುಭೂತಿಗಳು ಹೆಚ್ಚು. ಆದ್ದರಿಂದ, ರಾಮಚಂದ್ರಾ ಎಂದು ನನ್ನ ಬಾಯಿಂದ ಬರುತ್ತಿರುತ್ತದೆ.
* * *
ಮಾರಂ: ಪಿರಮಿಡ್ ಪ್ರಪಂಚಕ್ಕೆ ನಿಮ್ಮ ಸಂದೇಶ??
ಬ್ರಹ್ಮರ್ಷಿಪತ್ರೀಜಿ: ಪ್ರತಿಯೊಂದೂ ಪ್ರಾಣಿ ಹಾಯಾಗಿ, ನಿಶ್ಚಿಂತೆಯಿಂದ ಬದುಕಬೇಕು. ಪ್ರತಿಯೊಂದೂ ಭೂಚರ, ಪ್ರತಿಯೊಂದೂ ಜಲಚರ, ಪ್ರತಿಯೊಂದೂ ಖೇಚರ, ಪ್ರತಿಯೊಬ್ಬ ಮನುಷ್ಯ ಹಾಯಾಗಿ ಬದುಕಬೇಕು. ಪ್ರತಿಯೊಂದೂ ಕುಟುಂಬ ಹಾಯಾಗಿ ಜೀವಿಸಬೇಕು.
Recent Comments