“ಬಾಯಿಯಲ್ಲಿ ‘ಶನಿದೇವರು’”
ನಾವೆಲ್ಲಾ ದೇವರುಗಳು
ನಾವೆಲ್ಲಾ ದಿವ್ಯಲೋಕಗಳಿಂದ
ಭೂಮಿಗೆ ಇಳಿದುಬಂದ ದೇವರುಗಳು
ದಿವ್ಯಲೋಕಗಳಲ್ಲಿ ಇದ್ದಾಗ ದಿವ್ಯಲೋಕವಾಸಿಗಳು
ಭೂಮಿಯಲ್ಲಿ ಇದ್ದಾಗ ಭೂಲೋಕವಾಸಿಗಳು
***
ದಿವ್ಯಲೋಕಗಳಲ್ಲಿ ಇದ್ದಾಗ ಭೂಲೋಕ “ಪರಲೋಕ”ವಾಗುತ್ತದೆ
ಭೂಮಿಯಲ್ಲಿ ಇದ್ದಾಗ ದಿವ್ಯಲೋಕಗಳು “ಪರಲೋಕಗಳು” ಎಂದೆನಿಸಿಕೊಳ್ಳುತ್ತದೆ
ಜನನದ ಮೂಲಕ, ಭೂಲೋಕ ಎಂದೆನಿಸಿಕೊಳ್ಳುವ ಪಾಠಶಾಲೆಗೆ ಪಯಣ
ಮರಣದ ಮೂಲಕ ದಿವ್ಯಲೋಕಕ್ಕೆ ಮರಳಿ ಪ್ರಯಾಣ
ಭೂಲೋಕವಾಸಿಗಳು ಆತ್ಮಜ್ಞಾನದಿಂದ ಮಾತ್ರವೇ ಮೇಲಿನ ಸತ್ಯಗಳನ್ನು ದರ್ಶಿಸುತ್ತಾರೆ ..
ದರ್ಶಿಸಿ ಆನಂದದಿಂದ ಜೀವಿಸುತ್ತಾರೆ .. ಆಯುರಾರೋಗ್ಯಗಳಿಂದ ವಿರಾಜಿಸುತ್ತಾರೆ ..
ಕೆಲವರು ಚಿರಂಜೀವಿಗಳಾಗಿ ಕೂಡಾ ಇರುತ್ತಾರೆ
***
ಇಳಿದುಬಂದ ದೇವರುಗಳೆಲ್ಲಾ ಸೃಷ್ಟಿಗೆ ವಿಶಿಷ್ಟವಾದ ಅಳಿಯಂದಿರುಗಳೇ!
ಪ್ರಕೃತಿ ಮಾತೆ ಎಲ್ಲಾ ಅಳಿಯಂದಿರನ್ನು ಆಶೀರ್ವದಿಸುತ್ತಾಳೆ!
ಪ್ರಕೃತಿ ಕಾಂತೆ ಧರೆಗಿಳಿದ ದೇವರುಗಳಿಗೆ ಸರ್ವವನ್ನು ಸಮರ್ಪಿಸುತ್ತಾಳೆ
ಪ್ರಕೃತಿ ಕಾಂತೆ ಪ್ರಕೃತಿ ಪುರುಷನೊಂದಿಗೆ ಸಮಾಗಮ ಆಗಬೇಕಲ್ಲವೇ
ಆದರೆ,
ಕೆಲವು ಅಳಿಯಂದಿರ ಬಾಯಿಯಲ್ಲಿ ಶನಿದೇವರು!
ಅದರೊಂದಿಗೆ ಎಲ್ಲಾ ರಸಾಭಾಸ .. ಎಲ್ಲಾ ಅಸ್ತವ್ಯಸ್ತ
ಎಲ್ಲಾ ದುಃಖ .. ಎಲ್ಲಾ ಅಂಧಕಾರ
ಭೋಗದ ಪ್ರಮಾಣ ಬಹು ಅಲ್ಪ .. ರೋಗದ ಪ್ರಮಾಣ ಅತಿ ಹೆಚ್ಚು
***
ಆತ್ಮಜ್ಞಾನ ಇಲ್ಲದಿರುವುದರಿಂದಲೇ ಅಳಿಯನ ಬಾಯಿಯಲ್ಲಿ “ಶನಿದೇವ”ನು ಇರುತ್ತಾನೆ
ಬಾಯಿಯಲ್ಲಿ ಶನಿದೇವನು ಇರುವುದರಿಂದಲೇ ಆತ್ಮಜ್ಞಾನ ಇಲ್ಲವಾಗುತ್ತದೆ
ಗಿಡ ಮೊದಲಾ?! ಬೀಜ ಮೊದಲಾ?!
ಎಲ್ಲಿಂದ ಯಾವ ಕಡೆಗಾದರೂ ಕಡಿಯಬಹುದು
ಬಾಯಿಯಲ್ಲಿರುವ ಶನಿಯು ಹೋದರೆ ಇನ್ನೆಲ್ಲಾ ನಂದನವನವೇ
ಇನ್ನು ಭೂಲೋಕ ದಿವ್ಯಲೋಕವೇ .. ಇನ್ನು ಭೂಮಿಯು ಸ್ವರ್ಗಸಮಾನವೇ
ಇಷ್ಟಕ್ಕೂ “ಬಾಯಿಯಲ್ಲಿ ಶನಿ” ಎಂದರೆ??
ತಿನ್ನಬಾರದ್ದು ತಿನ್ನುವುದೇ “ಬಾಯಿಯಲ್ಲಿ ಶನಿ” ಅಂದರೆ!
ಮಾತನಾಡಬಾರದ್ದು ಮಾತನಾಡಿದರೆ ಅದೇ “ಬಾಯಿಯಲ್ಲಿ ಶನಿ” ಎಂದರೆ!
ಮಾಂಸಾಹಾರ ಎನ್ನುವುದು ಧರೆಗಿಳಿದು ಬಂದ ದೇವರುಗಳನ್ನು ಮೃಗಗಳನ್ನಾಗಿ ಮಾರ್ಪಡಿಸುತ್ತದೆ
ಮಾಂಸಾಹಾರ = 50% ಶನಿದೇವರು
ಇನ್ನೂ ಹೇಳಬೇಕೆಂದರೆ ಮಾತಿನಲ್ಲಿ ಅನಾಗರಿಕತೆ
ವಾಣಿಯಲ್ಲಿ ದರಿದ್ರತೆ .. ವಾಣಿಯಲ್ಲಿ ಅಸಭ್ಯತೆ
ವಾಣಿಯಲ್ಲಿ ಅಶಾಸ್ತ್ರೀಯತೆ .. ವಾಣಿಯಲ್ಲಿ ಅನಾಧ್ಯಾತ್ಮಿಕತೆ
***
ಇದೆಲ್ಲಾ ಸೇರಿ ಮತ್ತೊಂದು 50% ಭಾಗ ಶನಿದೇವರು
ಈ ವಿಧವಾಗಿ 100% ಶನಿದೇವರು ಅಳಿಯನ ಬಾಯಿಯಲ್ಲಿದ್ದರೆ ಆ ಅಳಿಯನಿಗೆ ಇನ್ನು ಭೋಗ ಎಲ್ಲಿಯದು?
ಸೃಷ್ಟಿಮಾತೆಗೆ ಅಳಿಯನಾಗಿದ್ದರೂ ಏನು ಲಾಭ? ಭೋಗಿಸಲು ಆಗುವುದಿಲ್ಲವಲ್ಲಾ!
ವಾಣಿಯಲ್ಲಿ ಅತಿ ಸರ್ವತ್ರ ವರ್ಜಯೇತ್
ವಾಣಿಯಲ್ಲಿ ಅಶುದ್ಧತೆ ಸರ್ವತ್ರ ವರ್ಜಯೇತ್
ವಾಣಿಯಲ್ಲಿ ಅಶಾಸ್ತ್ರೀಯತೆ ಸರ್ವತ್ರ ವರ್ಜಯೇತ್
ವಾಣಿಯಲ್ಲಿ ಅನಾಧ್ಯಾತ್ಮಿಕತೆ ಸರ್ವತ್ರ ವರ್ಜಯೇತ್
ಸಂಪೂರ್ಣವಾಗಿ ಸಸ್ಯಾಹಾರಿಗಳಾದಾಗ, ಶುದ್ಧ ಸಸ್ಯಾಹಾರಿಗಳಾದಾಗ
ಅಳಿಯನ ಬಾಯಿಯಲ್ಲಿನ “ಶನಿದೇವರು” ಅರ್ಧ ಮಾಯವಾದ ಹಾಗೆ
ಅನಂತರ ವಾಣಿ ಶುದ್ಧವಾದಾಗ .. ವಾಕ್ಕು ಆಧ್ಯಾತ್ಮಿಕಮಯವಾದಾಗ
ಉಳಿದ ಅರ್ಧಭಾಗ “ಶನಿದೇವರು” ಪೂರ್ತಿಯಾಗಿ ಅದೃಶ್ಯವಾಗುತ್ತಾನೆ
ಅಳಿಯನ ಬಾಯಿಯಲ್ಲಿ “ಶನಿದೇವರು” ಇಲ್ಲದಿದ್ದರೆ ಇನ್ನೆಲ್ಲಾ ವೀರ ಭೋಗವೇ ..
ಇನ್ನೆಲ್ಲಾ ಕ್ಷಣಕ್ಷಣ ಆನಂದವೇ ..
ಇನ್ನೆಲ್ಲಾ ನಿತ್ಯಕಲ್ಯಾಣ ಹಸಿರುತೋರಣವೇ ..
***
ಮಾನವರೆಲ್ಲರ ಬಾಯಿಯಲ್ಲಿ ಶನಿದೇವರು ಪೂರ್ಣವಾಗಿ ಅದೃಶ್ಯವಾಗುವ ಯುಗವನ್ನು
ನಾವು ಇನ್ನು ಶೀಘ್ರದಲ್ಲೇ ದರ್ಶಿಸಲಿದ್ದೇವೆ
ಮಾನವ ಜೀವನದಲ್ಲಿ ದರಿದ್ರ, ನರಕ ಎನ್ನುವುವು ಹೇಳಹೆಸರಿಲ್ಲದಂತಾಗುವುದು
ಆ ನವ್ಯ-ದಿವ್ಯ-ಭವ್ಯ ಯುಗಕ್ಕೋಸ್ಕರವೇ
ಪಿರಮಿಡ್ ಮಾಸ್ಟರ್ಗಳು ಎಷ್ಟೋ ಕಷ್ಟಪಟ್ಟಿದ್ದಾರೆ – ಎಷ್ಟೋ ಕಷ್ಟಪಡುತ್ತಾ ಇದ್ದಾರೆ
ಇನ್ನೂ ಕೆಲವು ಸಂವತ್ಸರಗಳು ಕೂಡಾ ಮತ್ತಷ್ಟು ಕಷ್ಟಪಡಬೇಕಿದೆ
***
ಧ್ಯಾನ ಸ್ವಾಧ್ಯಾಯ ಸಜ್ಜನ ಸಾಂಗತ್ಯಗಳಿಂದ ಮಾತ್ರವೇ
ಶನಿದೇವರು ಮಾಯವಾಗುತ್ತಾನೆ
No more ಶನಿದೇವ Please ..
Recent Comments