ಪತ್ರೀಜಿಯೊಂದಿಗೆ ಪ್ರಶ್ನೋತ್ತರ
ಜಗಪತಿ ರಾಜು : “ಸತ್ಯ ತಿಳಿದುಕೊಂಡರೂ ಕೂಡಾ ಸತ್ಯಪೂರ್ವಕವಾಗಿ ಏಕೆ ಜೀವಿಸಲಾರದೇ ಹೋಗುತ್ತಿದ್ದೇವೆ?”
ಪತ್ರೀಜಿ : ಸತ್ಯದ ಬಗ್ಗೆ ಸಂಪೂರ್ಣ ಅರಿವುಂಟಾಗಬೇಕೆಂದರೆ ನಾವು ಬಹಳಷ್ಟು ಮಾನವ ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಭಗವದ್ಗೀತೆಯಲ್ಲಿ ಹೇಳಿರುವಂತೆ ಸಾವಿರಾರು ಮನುಷ್ಯರಲ್ಲಿ ‘ಸತ್ಯವನ್ನು ತಿಳಿದುಕೊಳ್ಳಬೇಕು’ ಎಂದುಕೊಳ್ಳುವವರು ಸ್ವಲ್ಪ ಜನರಾದರೆ .. ಅದರಲ್ಲೂ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸುವವರು .. ತಮ್ಮ ಪ್ರಯತ್ನಗಳಲ್ಲಿ ಸಫಲತೆ ಹೊಂದುವವರು ಇನ್ನೂ ಕಡಿಮೆ! ಅಂತಿಮವಾಗಿ ಸತ್ಯ ಸಾಕ್ಷಾತ್ಕಾರವನ್ನು ಹೊಂದಿರುವವರೇ .. ಸತ್ಯಪೂರ್ವಕವಾಗಿ ಜೀವಿಸುತ್ತಾ ಇರುತ್ತಾರೆ.
ಇದೆಲ್ಲಾ ಕೂಡಾ ಒಂದು ಅದ್ಭುತವಾದ ವಿಕಾಸ ಪ್ರಕ್ರಿಯೆ. ಇದರಲ್ಲಿ ಯಾರೂ “ಹೆಚ್ಚಲ್ಲ” .. ಯಾರೂ ಕಡಿಮೆಯಲ್ಲ. “ಕಡಿಮೆ” ಜನ್ಮಗಳ ಜ್ಞಾನದೊಂದಿಗೆ ಕೂಡಿದ “ಶೈಶವಾತ್ಮ” ಮೊದಲುಗೊಂಡು ಹೆಚ್ಚು ಜನ್ಮಗಳ ಪರಿಪೂರ್ಣ ಜ್ಞಾನದೊಂದಿಗೆ ಕೂಡಿದ “ವೃದ್ಧಾತ್ಮ”ದವರೆಗೂ ಪ್ರತಿಯೊಬ್ಬರ ಸ್ಥಿತಿಯೂ ಉನ್ನತವಾದದ್ದೇ!
ಈ ಸತ್ಯ ತಿಳಿದುಕೊಂಡು “ನಾವು ನಿನ್ನೆಗಿಂತ ಈ ದಿನ ಸ್ವಲ್ಪವಾದರೂ ಸುಧಾರಣೆಯಾಗಿದ್ದೇವೋ … ಇಲ್ಲವೋ” ಎನ್ನುವ ಅರಿವಿನೊಂದಿಗೆ ಜೀವಿಸುವುದೇ .. ಸತ್ಯಪೂರ್ವಕವಾದ ಜೀವನ ವಿಧಿವಿಧಾನ!
ಜಗಪತಿ ರಾಜು : ’ಭಯ’ವನ್ನು ಹೋಗಲಾಡಿಸಿಕೊಳ್ಳುವುದು ಹೇಗೆ?
ಪತ್ರೀಜಿ : ಈ ಪ್ರಪಂಚದಲ್ಲಿರುವ ಅರ್ಧದಷ್ಟು ಜನರಿಗೆ “ಸಾವು” ಎಂದರೆ ಭಯ .. ಇನ್ನರ್ಧ ಜನರಿಗೆ “ಬದುಕು” ಎಂದರೆ ಭಯ! ಇನ್ನರ್ಧ ಜನರಿಗೆ “ಸಂಸಾರ”ವೆಂದರೆ ಭಯ .. ಇನ್ನಷ್ಟು ಜನರಿಗೆ “ಸನ್ಯಾಸ”ವೆಂದರೆ ಭಯ.
ಹೀಗೆ “ಭಯ” ಎನ್ನುವುದು ಪ್ರತಿಯೊಬ್ಬರಿಗೂ ಇರುತ್ತದೆ! ಮತ್ತು ಅಂತಹ ಭಯಗಳಿಂದಲೇ ಅನೇಕಾನೇಕ ಸಂದೇಹಗಳೂ ಹುಟ್ಟುತ್ತದೆ.
ಕುರುಕ್ಷೇತ್ರ ಸಂಗ್ರಾಮದಲ್ಲಿ ಅರ್ಜುನನಿಗೆ ಯುದ್ಧದ ಬಗ್ಗೆ ಉಂಟಾದ ಭಯದಿಂದ ಅನೇಕಾನೇಕ ಸಂದೇಹಗಳು ಹುಟ್ಟಿ ಬಂದವು. ಶಸ್ತ್ರಾಸ್ತ್ರಗಳನ್ನು ಕೆಳಗೆ ಹಾಕಿ ಯುದ್ಧರಂಗದ ಮಧ್ಯದಲ್ಲಿ ಕುಳಿತುಕೊಂಡು .. ಒಬ್ಬ ಹೇಡಿಯಂತೆ ಭಯವನ್ನು ನಟಿಸುತ್ತಾ ಲೋಕದಲ್ಲಿರುವವರೆಲ್ಲರ ಪರವಾಗಿ ವಕಾಲತ್ತು ತೆಗೆದುಕೊಂಡು ಶ್ರೀಕೃಷ್ಣನನ್ನು ಅನೇಕಾನೇಕ ಸಂದೇಹಗಳನ್ನು ಕೇಳಿದನು. ಮತ್ತು ಈ ಲೋಕಕ್ಕೆ ಭಗವದ್ಗೀತೆ ದೊರೆಯುವುದಕ್ಕೆ ಕಾರಣವಾದನು. ಹೀಗೆ ಕೆಲವೊಮ್ಮೆ ಸುಜ್ಞಾನಿಗಳಿಗೆ ಆಗುವ ಭಯದಿಂದ ಲೋಕಕ್ಕೆ ಉಪಕಾರವೂ ಆಗುತ್ತದೆ.
ಆದ್ದರಿಂದ, ಭಯವನ್ನು ನೆನಪಿಸಿಕೊಂಡು ಸುಮ್ಮನೆ ಭಯಪಡುತ್ತಾ ಕುಳಿತುಕೊಳ್ಳದೇ …. ಭಯರಹಿತರಾಗಿರುವವರೊಂದಿಗೆ ಬೆರೆತು ತಿರುಗುತ್ತಾ ಇದ್ದರೆ ನಿಮಗೆ ಒಳ್ಳೆಯದಾಗುತ್ತದೆ.
ಜಗಪತಿ ರಾಜು : “ನಿಮ್ಮನ್ನು ಅರ್ಥಮಾಡಿಕೊಳ್ಳಬೇಕೆಂದರೆ ಏನು ಮಾಡಬೇಕು?!”
ಪತ್ರೀಜಿ : ಯಾರು .. ಯಾರನ್ನೂ ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ! ಹಾಗೆ “ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದನ್ನು ಪ್ರಯತ್ನಿಸುವುದು” ಎನ್ನುವುದು ಪರಮಮೂರ್ಖತನದ ಕೆಲಸ!
“ಒಬ್ಬರು ಇನ್ನೊಬ್ಬರನ್ನು ಯಾವತ್ತಿಗೂ ಅರ್ಥಮಾಡಿಕೊಳ್ಳಲಾರರು” ಎನ್ನುವ ಸತ್ಯ ತಿಳಿದುಕೊಂಡ ಆತ್ಮಜ್ಞಾನಿ .. ಇತರರನ್ನು ಅರ್ಥಮಾಡಿಕೊಳ್ಳುತ್ತಾ ತನ್ನ ಸಮಯವನ್ನು ವ್ಯರ್ಥಮಾಡಿಕೊಂಡು ಅವಸ್ಥೆಗಳನ್ನು ಬೀಳದೇ .. ಸ್ವಯಂ ಅಂತರಂಗ ಪರಿಶೀಲನೆಯಿಂದ ತನ್ನನ್ನು ತಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾ ಆತ್ಮವತ್ ಜೀವನವನ್ನು ನಡೆಸಲು ಸದಾ ಪ್ರಯತ್ನಿಸುತ್ತಿರುತ್ತಾನೆ.
ಜಗಪತಿ ರಾಜು : ಪ್ರಾಣಿಗಳನ್ನು ಸಾಯಿಸಿದರೆ ಅವುಗಳಿಗೆ ದುಃಖವಾಗುತ್ತದೆಯೇ?
ಪತ್ರೀಜಿ : ಪ್ರಾಣಿಗಳಿಗೆ ಉಂಟಾಗುವುದಿಲ್ಲ!! ಅವುಗಳನ್ನು ಕೊಂದು ತಿಂದವರಿಗೇ ಅಪಾರವಾದ ದುಃಖವುಂಟಾಗುತ್ತದೆ. ಪ್ರಾಣಿಗಳಿಗೆ ಶರೀರದೊಂದಿಗೆ ಸಾಮೂಹಿಕ ಆತ್ಮಚೈತನ್ಯವಿರುತ್ತದೆ. ಅವುಗಳಿಗೆ ’ಮನಸ್ಸು’ ಎನ್ನುವುದು ಇರುವುದಿಲ್ಲವಾದ್ದರಿಂದ, ಸಾಯುತ್ತಿರುವಾಗ ದುಃಖದ ಬದಲು ’ಸಂಕಟ’ ಮಾತ್ರವಿರುತ್ತದೆ!
ಮನುಷ್ಯನಿಗೆ ಮಾತ್ರ ಶರೀರಕ್ಕೆ, ಆತ್ಮಕ್ಕೂ ಮಧ್ಯೆ ಅನೇಕಾನೇಕ ಕರ್ಮಗಳೊಂದಿಗೆ ಕೂಡಿದ ’ಮನಸ್ಸು’ ಇರುತ್ತದೆ. ಆದ್ದರಿಂದ, ಪ್ರಾಣಿಗಳನ್ನು ಸಾಯಿಸಿದ ಕರ್ಮಫಲಿತದೊಂದಿಗೆ ಕೂಡಿದ “ದುಃಖ” ಆತನಿಗೆ ಇರುತ್ತದೆ. ಮಾನವ ಜೀವನದಲ್ಲಿ “ದುಃಖ” ಎಂಬುದು ಇರಬಾರದೆಂದರೆ ಮೂಕ ಜೀವಿಗಳನ್ನು ಸಾಯಿಸುವುದನ್ನು ಬಿಡಬೇಕು!
ಜಗಪತಿ ರಾಜು:ಕ್ರಿಯೆಗೆ (action)ಪ್ರತಿಕ್ರಿಯೆ (reaction) ಇರಬಹುದಾ?
ಪತ್ರೀಜಿ: ಕ್ರಿಯೆ-ಪ್ರತಿಕ್ರಿಯೆ .. “action-reaction”ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಅತ್ಯಂತ ಸಹಜವಾಗಿ ಇರುತ್ತವೆ. ಆದರೆ, ಉಪ್ಪು, ಖಾರ ತಿನ್ನುವ ಸಂಸಾರೇಶ್ವರರಲ್ಲಿ ಕ್ರಿಯೆಗಳಿಗೆ ಬದಲಾಗಿ .. “ಮಾಮೂಲು ಪ್ರತಿಕ್ರಿಯೆಗಳು” ಇದ್ದರೆ .. ಪ್ರಾಣಶಕ್ತಿಯೊಂದಿಗೆ ಪರಿಪುಷ್ಠರಾಗಿರುವ ಯೋಗೀಶ್ವರರಲ್ಲಿ ಕ್ರಿಯೆಗಳಿಗೆ ಬದಲಾಗಿ “ಸೃಜನಾತ್ಮಕ ಪ್ರತಿಕ್ರಿಯೆಗಳು” ಇರುತ್ತವೆ. ಆದ್ದರಿಂದ, ಸಂಸಾರದಲ್ಲಿದ್ದೇ ಧ್ಯಾನ ಯೋಗೀಶ್ವರರಂತೆ ಬದುಕಿದರೆ ನಮ್ಮ ಜೀವನ ಕೂಡಾ ಸೃಜನಾತ್ಮಕ ಪ್ರತಿಕ್ರಿಯೆಗಳೊಂದಿಗೆ ತುಂಬಿರುತ್ತದೆ.
ಜಗಪತಿ ರಾಜು : “ನೀವು ಪಿರಮಿಡ್ ಮಾಸ್ಟರ‍್ಸ್‌ರನ್ನು ಬಹಳಷ್ಟು ಗೌರವದಿಂದ ನೋಡುತ್ತೀರಿ. ಅವರೆಲ್ಲಾ ನಿಮಗೆ ತುಂಬಾ ಪರ್‌ಫೆಕ್ಟ್ ಆಗಿ ಕಾಣಿಸುತ್ತಾರೆ! ಇದು ಹೇಗೆ ಸಾಧ್ಯ??”
ಪತ್ರೀಜಿ : ನಾನು ಹೇಗಿರುತ್ತೇನೋ .. ನನ್ನೊಂದಿಗೆ ಇರುವವರು ಕೂಡಾ ನನಗೆ ಹಾಗೆಯೇ ಕಾಣಿಸುತ್ತಾರೆ! ನನ್ನನ್ನು ನಾನು ಹೇಗೆ ಗೌರವಿಸಿಕೊಳ್ಳುತ್ತೇನೋ ನನ್ನೊಂದಿಗೆ ಇರುವವರನ್ನು ಕೂಡಾ ನಾನು ಹಾಗೆಯೇ ಗೌರವಿಸುತ್ತೇನೆ!
ಜಗಪತಿ ರಾಜು : “‘ಷರತ್ತುಗಳಿಲ್ಲದ ಪ್ರೇಮ’ದ ಬಗ್ಗೆ ವಿವರಿಸಿ!”
ಪತ್ರೀಜಿ : ಈ ಪ್ರಪಂಚದಲ್ಲಿ ಇಲ್ಲದಿರುವುದು ಎರಡು:
ಒಂದು : “ಪ್ರೇಮ” .. ಎರಡು “ಸಾವು”.
ಇರುವುದು ಒಂದೇ ಅದೇ ಮೈತ್ರೀತತ್ವ!
“ಬೃಹದಾರಣ್ಯಕೋಪನಿಷತ್ತು”ನಲ್ಲಿ ಯಾಜ್ಞ್ಯವಲ್ಕನು ತನ್ನ ಹೆಂಡತಿಯಾದ ಮೈತ್ರೇಯಳೊಂದಿಗೆ ಹೇಳುತ್ತಾನೆ. ಈ ಪ್ರಪಂಚದಲ್ಲಿ ಪ್ರೇಮವೆನ್ನುವುದು ಎಲ್ಲೂ ಇಲ್ಲಾ. ಒಬ್ಬಳು ಸ್ತ್ರೀ, ಪುರುಷನನ್ನು ತನಗಾಗಿಯೇ ವಿವಾಹ ಮಾಡಿಕೊಳ್ಳುತ್ತಾಳೆ; ಹಾಗೆಯೇ ಪುರುಷನೂ ಸಹ ಸ್ತ್ರೀಯನ್ನು ತನಗೋಸ್ಕರವೇ ವಿವಾಹವಾಗುತ್ತಾನೆ; ಆ ಇಬ್ಬರೂ ಸೇರಿ ತಮಗಾಗಿ ಒಂದು ಮಗುವಿಗೆ ಜನ್ಮ ನೀಡುತ್ತಾರೆ. ಇದೆಲ್ಲವೂ ಕೂಡಾ ಯಾವ ಷರತ್ತುಗಳೂ ಇಲ್ಲದೆ ಮೈತ್ರೀತತ್ವದೊಂದಿಗೆ ಕೂಡಿಕೊಂಡಿದ್ದರೆ .. ಎಲ್ಲೂ ಒಬ್ಬರ ಮೇಲೆ ಒಬ್ಬರ ದಬ್ಬಾಳಿಕೆ ಇರುವುದಿಲ್ಲ. ಒಬ್ಬರೊಂದಿಗೆ ಒಬ್ಬರು ಪರಸ್ಪರ ಕಲಿತುಕೊಳ್ಳುವುದೇ ಇರುತ್ತದೆ!
ಜಗಪತಿ ರಾಜು : “ಅಜ್ಞಾನ ಮತ್ತು ಸುಜ್ಞಾನಗಳ ಮಧ್ಯೆ ಬೇಧವನ್ನು ಹೇಗೆ ತಿಳಿದುಕೊಳ್ಳಬೇಕು?”
ಪತ್ರೀಜಿ : ಒಂದು ವಸ್ತುವನ್ನು ಕುರಿತಾದ ಯಥಾರ್ಥ ನಮಗೆ ತಿಳಿದಿರುವುದು .. ’ಸುಜ್ಞಾನ’! ಆ ವಸ್ತುವನ್ನು ಕುರಿತಾದ ಯಥಾರ್ಥ ನಮಗೆ ತಿಳಿಯದಿರುವುದು ’ಅಜ್ಞಾನ’
ಸುಜ್ಞಾನದಿಂದ ನಮಗೆ ದುಃಖ ವಿಮುಕ್ತಿ ಲಭಿಸಿದರೆ .. ಅಜ್ಞಾನದಿಂದ ನಮಗೆ ದುಃಖ ಉಂಟಾಗುತ್ತದೆ. ಅದಕ್ಕೆ
“ಇಲ್ಲದಿದ್ದನ್ನು ಬೇಡಬಾರದು .. ಇರುವುದನ್ನು ಬೇಡವೆನ್ನಬಾರದು ಬಂದರೆ ಬಂದಿತು ಎಂದು ಸಂಭ್ರಮ ಪಡಬಾರದು ಹೋದರೆ ಹೋಯಿತು ಎಂದು ಕುಗ್ಗಬಾರದು” ಎಂದಿದ್ದಾರೆ ನಮ್ಮ ಗುರು ಶ್ರೀ ಸದಾನಂದಯೋಗಿಯವರು. ಅವರು ಹೇಳಿದಂತೆಯೇ ನಾನು ಜೀವನದ ಒಂದು ನಿಜತತ್ವವನ್ನು ತಿಳಿದುಕೊಂಡು ಸುಜ್ಞಾನ ಪೂರ್ವಕವಾದ ಅರಿವಿನೊಂದಿಗೆ ಜೀವಿಸುತ್ತಾ ಹಾಯಾಗಿದ್ದೇನೆ.
ಜಗಪತಿ ರಾಜು : “ನಿಜವಾದ ಸ್ವಾತಂತ್ರ್ಯ ಹೇಗಿರಬೇಕು?”
ಪತ್ರೀಜಿ : ಒಬ್ಬ ವಿದ್ಯಾರ್ಥಿ ಪರೀಕ್ಷೆಯ ಹಾಲ್‌ನಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದಾನೆ. ಅಂತಹ ಸಮಯದಲ್ಲಿ ಆತ ನನಗೆ ಸ್ವಾತಂತ್ರ್ಯ ಬೇಕು ಎಂದುಕೊಂಡು ಪರೀಕ್ಷೆಯ ಮಧ್ಯದಲ್ಲೇ ಎದ್ದು ಹೊರಗೆ ಹೋದರೆ ಏನಾಗುತ್ತದೆ? ಆ ’ಸ್ವಾತಂತ್ರ್ಯ’ ಆತನ ಅಭಿವೃದ್ಧಿಗೆ ಪ್ರತಿಬಂಧಕವಾಗುತ್ತದೆ.
ವರ್ಷವೆಲ್ಲಾ ಕಷಪಟ್ಟು ಓದಿ .. ಆ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣನಾದರೆ ಆತನಿಗೆ ಲಾಭ! ಇಷ್ಟರಲ್ಲೇ “ನನಗೆ ಸ್ವಾತಂತ್ರ್ಯ ಇಲ್ಲ” ಎಂದು ಆಕ್ರೋಶಿಸಿದರೆ ಆತನಿಗೆ ವರ್ಷದ ಹಣ, ಸಮಯ ಮತ್ತು ಶ್ರಮ ವ್ಯರ್ಥವಾಗುತ್ತದೆ.
ಹಾಗೆಯೇ, ನಾವು ಕೂಡಾ ಅನೇಕಾನೇಕ ನಕ್ಷತ್ರಲೋಕಗಳಲ್ಲಿ ಕೆಲವು ಯುಗಗಳು ಕಳೆದು ಬಹಳಷ್ಟು ವಿಷಯಗಳನ್ನು ಸಂಗ್ರಹಿಸಿಕೊಂಡು ಅದನ್ನು ಅನುಭವ ಜ್ಞಾನದಂತೆ ರೂಪಿಸಿಕೊಳ್ಳಲು ಈ “ಭೂಮಿ” ಎನ್ನುವ “ಪರೀಕ್ಷಾ ಹಾಲ್” ಗೆ ಬಂದಿದ್ದೇವೆ! ಇಲ್ಲಿನ ನಿಯಮ… ನಿಬಂಧನೆಗಳು… ಎಲ್ಲವನ್ನೂ ಸೂಕ್ಷ್ಮವಾಗಿ ತಿಳಿದುಕೊಂಡು ಬಂದಿದ್ದೇವೆ!
ಆದರೂ “ಜೀವನ” ಎನ್ನುವ ಪ್ರಶ್ನೆಪತ್ರಿಕೆ ಕೈಗೆ ಬಂದ ಮೇಲೆ ಅದನ್ನು ಪೂರ್ತಿಮಾಡದಂತೆ “ನನಗೆ ಸ್ವಾತಂತ್ರ್ಯ ಬೇಕು” ಎನ್ನುತ್ತಾ ಪರೀಕ್ಷೆಯ ಮಧ್ಯದಲ್ಲಿಯೇ ಎದ್ದು ಹೊರ ಬರುವುದು ‘ಮೂರ್ಖತನ’ ಎನಿಸಿಕೊಳ್ಳುತ್ತದೆ.
ಪರೀಕ್ಷೆಯ ಹಾಲ್‌ನಲ್ಲಿ ಕುಳಿತು ಪ್ರತಿಯೊಂದು ಪ್ರಶ್ನೆಗೂ ತನ್ನ ಬಳಿಯಿರುವ ಜ್ಞಾನವನ್ನು ಉಪಯೋಗಿಸಿ ಒಳ್ಳೆಯ “ಉತ್ತರಗಳನ್ನು” ಬರೆಯುತ್ತಾ .. ಹಾಗೆ ಬರೆಯುತ್ತಿದ್ದಾಗ ಹೊಂದುವ ಸ್ವಾತಂತ್ರ್ಯವನ್ನು ಒಂದೊಂದು ಕೋನದಲ್ಲೂ ಅನುಭವಿಸುತ್ತಾ ಇರುವುದೇ ಉತ್ತಮ ವಿದ್ಯಾರ್ಥಿಯ ಲಕ್ಷಣ.
ಜಗಪತಿ ರಾಜು : “ದ್ವೇಷವನ್ನು ಹೋಗಲಾಡಿಸಿಕೊಳ್ಳುವುದು ಹೇಗೆ?”
ಪತ್ರೀಜಿ : ಈ ಪ್ರಪಂಚದಲ್ಲಿ ವಿಧವಿಧವಾದ ಸಂಘಗಳಿವೆ. ಇಸ್ಪೇಟು ಆಟ ಆಡಬೇಕೆಂದರೆ, “ಇಸ್ಪೇಟು ಸಂಘ”ಕ್ಕೆ ಸೇರಬೇಕು; ಕುಡುಕನಾಗಬೇಕೆಂದರೆ “ಕುಡುಕರ ಸಂಘ”ದಲ್ಲಿ ಸೇರಬೇಕು; ಧ್ಯಾನವನ್ನು ಕಲಿಯಬೇಕೆಂದರೆ, “ಧ್ಯಾನಿಗಳ ಸಂಘ”ದಲ್ಲಿ ಸೇರಬೇಕು. ಒಬ್ಬ ಬುದ್ಧನಾಗಬೇಕೆಂದರೆ “ಬುದ್ಧರ ಸಂಘ”ದಲ್ಲಿ ಸೇರಬೇಕು .. ದ್ವೇಷ ರಹಿತರಾಗಬೇಕೆಂದರೆ ದ್ವೇಷರಹಿತರ ಸಂಘದಲ್ಲಿ ಸೇರಿ ಒಡನಾಡುತ್ತಾ ಇದ್ದರೆ, ಒಳಗಿರುವ ದ್ವೇಷಭಾವಗಳೆಲ್ಲಾ ಕ್ರಮಕ್ರಮವಾಗಿ ಅತ್ಯಂತ ಸಹಜವಾಗಿಯೇ ಹೋಗುತ್ತವೆ!
ಜಗಪತಿ ರಾಜು : “ಕರ್ಮಗಳನ್ನು ಮಾಡುತ್ತೇವೆ ಸರಿ .. ಆದರೆ, ಕರ್ಮಫಲಗಳನ್ನು ಹೇಗೆ ಗುರುತಿಸಬೇಕು?”
ಪತ್ರೀಜಿ : ನಮಗೆ ನಮ್ಮ ಶರೀರದ ಬಗ್ಗೆ ಗೊತ್ತು .. ಹಾಗೆಯೇ, ನಮ್ಮ ಶರೀರದ ಬೆನ್ನತ್ತಿ ಬರುತ್ತಿರುವ ’ನೆರಳನ್ನು’ ಗಮನಿಸಿದರೆ, ಕೆಲವೊಮ್ಮೆ ನಮ್ಮ ಹಿಂದೆ ಇರುತ್ತದೆ .. ಕೆಲವೊಮ್ಮೆ ಮುಂದಿರುತ್ತದೆ .. ಕೆಲವೊಮ್ಮೆ ನಮಗಿಂತ ದೊಡ್ಡದಾಗಿರುತ್ತದೆ .. ಕೆಲವೊಮ್ಮೆ ತುಂಬಾ ಚಿಕ್ಕದಾಗಿರುತ್ತದೆ.
ನಮ್ಮ ಶರೀರವನ್ನು ಬೆನ್ನತ್ತಿ ಬರುವ ’ನೆರಳಿ’ನಂತೆಂi “ಕರ್ಮಫಲಗಳು” ಎನ್ನುವುದು ಕೂಡಾ ನಾವು ಮಾಡುವ ವಿವಿಧ ಕರ್ಮಗಳನ್ನು .. ’ನೆರಳಿ’ನಂತೆಯೇ ಹಿಂಬಾಲಿಸುತ್ತವೆ.
ಸಾಧಾರಣವಾಗಿ ನಾವು ನಮ್ಮ ನೆರಳನ್ನು ಗಮನಿಸದಂತೆಯೇ .. ಕರ್ಮಗಳು ಮಾಡುತ್ತಿದ್ದಾಗ ಕೂಡಾ ಕರ್ಮಫಲಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ .. ಆದರೂ .. ಯಾವಾಗ, ಎಲ್ಲಿ, ಯಾವ ರೀತಿ ಅವು ನಮ್ಮನ್ನು ಪ್ರಭಾವಿತಗೊಳಿಸಬೇಕೋ ಅಲ್ಲಿ, ಆಗ ಆ ರೀತಿಯಲ್ಲಿ ಪ್ರಭಾವಿಸುತ್ತಾ ಇರುತ್ತವೆ.
ಇದೆಲ್ಲವನ್ನು ಸಹ ಅರ್ಥಮಾಡಿಕೊಂಡು ಆತ್ಮಚೈತನ್ಯದ ಅರಿವಿನೊಂದಿಗೆ ಜ್ಞಾನಪೂರ್ವಕವಾಗಿ ಜೀವಿಸಿದಾಗಲೇ ಕರ್ಮಗಳು ಚೆನ್ನಾಗಿರುತ್ತವೆ, ಕರ್ಮಫಲಗಳು ಚೆನ್ನಾಗಿರುತ್ತವೆ! ಹಾಗಾಗಿ ಜೀವನವೆಲ್ಲಾ ಆನಂದದಾಯಕವಾಗಿರುತ್ತವೆ!!
ಪ್ರಶ್ನೆ : “ಮನುಷ್ಯರೆಲ್ಲರೂ ನನ್ನ ಕುಟುಂಬ, ನನ್ನ ಮನೆ ಎನ್ನುತ್ತಾ ಅವರಿಗೋಸ್ಕರ ದುಡಿಯುತ್ತಿದ್ದರೆ ನೀವು ಅದಕ್ಕೆ ಭಿನ್ನವಾಗಿ ’ಪ್ರಪಂಚವೆಲ್ಲಾ ನನ್ನ ಕುಟುಂಬವೇ’ .. ನಾನು ‘ಎಲ್ಲರನ್ನೂ ಉನ್ನತಸ್ಥಿತಿಗೆ ತರಬೇಕು’ ಎಂದು ಏಕೆ ಅಂದುಕೊಂಡಿರಿ?”
ಪತ್ರೀಜಿ : “ನಾನು, ನನ್ನ ಮಕ್ಕಳು” ಎನ್ನುವ ಭಾವನೆಗಳು ಯಾರಿಗಾದರೂ ಸ್ವಲ್ಪ ಕಾಲವಿರುತ್ತದೆ. ಸ್ವಂತ ತಂದೆ-ತಾಯಂದಿರ ಬಳಿ ಒಂದು ಕುಟುಂಬದಲ್ಲಿ ಬೆಳೆದು, ಅನಂತರ ನಾವು ನಮ್ಮ ಮಕ್ಕಳಿಗೆ ತಂದೆ-ತಾಯಂದಿರಾಗಿ ಒಂದು ಕುಟುಂಬ ಸ್ಥಾಪಿಸಲು ಹೋರಾಡುತ್ತೇವೆ. ಅದಾದ ನಂತರ “ವಸುಧೈವಕ ಕುಟುಂಬ”ಕ್ಕೋಸ್ಕರ ತಪಿಸುವ ಹಂತ ಸಹ ಎಲ್ಲರಿಗೂ ಬಂದೇ ಬರುತ್ತದೆ. ಸೃಷ್ಟಿಯಲ್ಲಿ ತುಂಬಾ ಜನರಿಗೆ ಆ ಸ್ಥಿತಿ ಬಂದಂತೆ ನನಗೂ ಬಂದಿತು, ಅಷ್ಟೇ!
ಪ್ರಶ್ನೆ : “ನಿಮ್ಮ ಬಳಿ ಧ್ಯಾನ ಕಲಿತು ಸ್ವಲ್ಪ ಸಾಧನೆ ಮಾಡಿ ಜ್ಞಾನ ಹೊಂದಿದ ನಂತರವೂ ಕೂಡ ಕೆಲವರು ಜಾರಿ ಹೋಗುತ್ತಾರೆ, ಏಕೆ?”
ಪತ್ರೀಜಿ : ಅದೆಲ್ಲಾ ಸಹಜವೇ. ಪೌರ್ಣಮಿಯ ನಂತರ ಅಮಾವಾಸ್ಯೆ ಬಂದೇ ಬರುತ್ತದೆ. ಆ ಅಮಾವಾಸ್ಯೆಯ ನಂತರ ಮತ್ತೆ ಪೌರ್ಣಮಿ ಬಂದೇ ತೀರುತ್ತದೆ. ಈ ಅಮಾವಾಸ್ಯೆ, ಪೌರ್ಣಮಿಗಳ ಮಧ್ಯೆ ತೂಗಾಡುವ ಆಟದಲ್ಲಿ ಕ್ರಮಕ್ರಮವಾಗಿ ಸ್ಥಿತಪ್ರಜ್ಞತ್ವವು ಬರುತ್ತದೆ. ಆಟಪಾಟಗಳನ್ನು ತಡೆದುಕೊಳ್ಳುವುದೇ ಸ್ಥಿತಪ್ರಜ್ಞತೆ. ’ಸ್ಥಿತಪ್ರಜ್ಞತೆ’ ಎನ್ನುವುದು ಆಧ್ಯಾತ್ಮಿಕತೆಗೆ ಸೂಚನೆ.
ಪ್ರಶ್ನೆ : “ನೀವು ಯಾರಿಗಾದರೂ ಒಂದು ವಿಷಯ ಹೇಳಿದಾಗ ಅದನ್ನು ಯಥಾವತ್ತಾಗಿ ಅನುಸರಿಸದೇ ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ, ಅದನ್ನು ಬದಲಾವಣೆ ಮಾಡಿ ಅದೇ ಮಧ್ಯೆ ಮಾರ್ಗವೆಂದು, ಅದೇ ಉನ್ನತವಾದದ್ದೆಂದು ಭಾವಿಸುವುದು ಸರಿಯೇ?”
ಪತ್ರೀಜಿ: ಸರಿಯಾಗಿಯೇ ಇದೆ. ಯಾವಾಗಲೂ ನಮ್ಮ ಮೂಲಭೂತ ಜ್ಞಾನವನ್ನು ಉಪಯೋಗಿಸುತ್ತಲೇ ಇರಬೇಕು. ಉಳಿದವರು ಅವರವರ ಜ್ಞಾನಪರಿಧಿಯ ಅನುಸಾರ ಎಷ್ಟಾದರೂ ಹೇಳಬಹುದು. ಯಾರಿಗೆ ಯಾವಾಗ ಏನನಿಸುತ್ತದೋ ಅವರು ಅದನ್ನೇ ಮಾಡಬೇಕು. ಎಲ್ಲರೂ ಹಾಗೆಯೇ ಮಾಡುತ್ತಾರೆ ಕೂಡಾ. ಅವರ ದೃಕ್ಪಥ, ಅವರ ಧರ್ಮ, ಅವರಿಗೆ ಪ್ರತ್ಯೇಕವಾದದ್ದು.
“ಪ್ರತಿಯೊಬ್ಬರೂ ಅವರವರ ದೃಷ್ಟಿಕೋನದಿಂದ ಸರಿಯಾಗಿಯೇ ಇದ್ದಾರೆ” ಎಂದು ಗ್ರಹಿಸುವುದೇ ವಿಶಾಲ ದೃಕ್ಪಥ. ಒಂದು ಕಡೆ ಪ್ರತ್ಯೇಕ ದೃಕ್ಪಥದೊಂದಿಗೂ, ಇನ್ನೊಂದು ಕಡೆ ವಿಶಾಲ ದೃಕ್ಪಥದೊಂದಿಗೂ ಎರಡೂ ಪರಸ್ಪರ ವಿರುದ್ಧವಾಗಿದ್ದರೂ ಕೂಡ, ಈ ಎರಡರೊಂದಿಗೆ ಜೀವಿಸಬೇಕು. ಇದೇ ಮಧ್ಯೇಮಾರ್ಗವೆಂದರೆ.
ಪ್ರತಿ ಆಧ್ಯಾತ್ಮಿಕ ವ್ಯಕ್ತಿಯ ಜೀವನವೂ ಆಧ್ಯಾತ್ಮಿಕತೆ ಎನ್ನುವುದಕ್ಕೆ ಒಂದು ಹೊಸ ತಿರುವುಬೇಕು. ಆಧ್ಯಾತ್ಮಿಕ ಜೀವನ ಎಲ್ಲರಿಗೂ ಅಚ್ಚೊತ್ತಿದ್ದಂತೆ ಒಂದೇ ವಿಧವಾಗಿ ಇರುವುದಿಲ್ಲ. ದೃಕ್ಪಥಗಳು ಎಷ್ಟು ವಿಧವಾಗಿದ್ದರೂ ಕಿರುನಗೆಯಿಂದ ಸ್ವೀಕರಿಸುವುದೇ ಆಧ್ಯಾತ್ಮಿಕತೆ!
ಪ್ರಶ್ನೆ : “ಭೂಮಿಯ ಮೇಲೆ ಎಲ್ಲರೊಂದಿಗೂ ಮಿತ್ರತ್ವದೊಂದಿಗೆ ವ್ಯವಹರಿಸುತ್ತಾ ಒಳ್ಳೆಯ ಸಂಬಂಧಗಳನ್ನು ಹೊಂದಿ, ಮೂಲಭೂತ ಜ್ಞಾನದೊಂದಿಗೆ ವ್ಯವಹರಿಸುವುದು ಮುಖ್ಯವೋ? ಇತರ ಲೋಕಗಳ ಜ್ಞಾನ ತಿಳಿದುಕೊಳ್ಳುವುದು ಮುಖ್ಯವೋ?”
ಪತ್ರೀಜಿ : ಮೊದಲು ಒಂದು ಮನೆಯಲ್ಲಿ ಹುಟ್ಟಿ, ಬೆಳೆದು ನಂತರ ಪಕ್ಕದ ಮನೆಗೆ ಉತ್ಸುಕತೆಯಿಂದ ಹೋಗುತ್ತೇವೆ. ಅನಂತರ ಮೆಲ್ಲಮೆಲ್ಲನೆ ಅದರ ಪಕ್ಕದ ಮನೆಗೆ, ಇನ್ನೊಂದು ಪಕ್ಕದ ಮನೆಗೆ ಹೋಗುತ್ತೇವೆ. ಗೋಡೆಗಳು ದಾಟಿ ಅದರ ಹಿಂದೆ ಏನಿದೆಯೋ ನೋಡುತ್ತೇವೆ.
ನಂತರ ಪಕ್ಕದ ಊರಿಗೆ ಪಿಕ್‌ನಿಕ್‌ಗೆ ಹೋಗುತ್ತೇವೆ. ದೂರದಲ್ಲಿರುವ ಬೆಟ್ಟಹತ್ತಿ ಎಲ್ಲಾ ನೋಡಿ ಮರಳಿ ಬರುತ್ತೇವೆ. ಸ್ವಲ್ಪ ದೂರದಲ್ಲಿರುವ ಕಾಡಿಗೆ ಹೋಗಿ, ಅಲ್ಲೆಲ್ಲಾ ನೋಡಿ ಬರುತ್ತೇವೆ. ನಂತರ ಹತ್ತಿರದಲ್ಲಿರುವ ನಗರಕ್ಕೆ ಹೋಗಿ ಅಲ್ಲಿನ ವಿಸ್ಮಯ ವಿಶೇಷಗಳನ್ನು ನೋಡಿ ಬರುತ್ತೇವೆ. ಅಷ್ಟೇಅಲ್ಲದೆ, ದೇಶವಿದೇಶಗಳನ್ನೆಲ್ಲಾ ತಿರುಗಿ ಬರುತ್ತೇವೆ.
ಇದೆಲ್ಲಾ ಪ್ರಾಪಂಚಿಕ ಜೀವನದಲ್ಲಿ ಎಲ್ಲರೂ ಅನುಭವಿಸುತ್ತಿರುವುದೇ. ಆನಂತರ ಆಧ್ಯಾತ್ಮಿಕ ಜೀವನದಲ್ಲಿ ಕೂಡಾ ಇಂತಹ ಕ್ರಮವೇ ಇರುತ್ತದೆ. ಸರಿ, ಈ ಜನ್ಮದಲ್ಲಿ ಇಲ್ಲಿದ್ದೇನೆ; ಗತಜನ್ಮದಲ್ಲಿ ಏನಾಗಿರುತ್ತೇನೆ? ಎನ್ನುವ ಪ್ರಶ್ನೆ ಉದಯಿಸುತ್ತದೆ. ಗತಜನ್ಮಗಳನ್ನೆಲ್ಲಾ ದರ್ಶಿಸಬೇಕೆಂದು ಒಯಸುತ್ತೇವೆ. ಆಮೇಲೆ “ಜನ್ಮಜನ್ಮಕ್ಕೂ ಮಧ್ಯೆ ಎಲ್ಲಿದ್ದೆವು? ಅಲ್ಲಿ ಏನು ಮಾಡುತ್ತಿದ್ದೆವು?” ಎನ್ನುವುದು ತಿಳಿದುಕೊಳ್ಳುತ್ತೇವೆ! ಆನಂತರ “ಎಷ್ಟು ಗೆಲಾಕ್ಸಿಗಳಲ್ಲಿ ಎಷ್ಟು ಜೀವರಾಶಿಗಳಿದೆ? ಮನುಷ್ಯರಂತವರು ಇದ್ದಾರಾ? ಗ್ರಹಾಂತರವಾಸಿಗಳನ್ನು ಭೇಟಿಯಾಗಬಹುದಾ? ಅವರೊಂದಿಗೆ ಮಾತನಾಡಬಹುದಾ? .. ಎಂಬುವಂತಹುದು ಆಧ್ಯಾತ್ಮಿಕ ಜೀವನದಲ್ಲಿ ಸಹಜ.
ಪ್ರಶ್ನೆ : ಧ್ಯಾನ ತಿಳಿದ ಮೇಲೆ ಕೆಲವರು ಗಂಟೆಗಟ್ಟಳೆ, ದಿನಗಟ್ಟಳೆ ಧ್ಯಾನ ಸಾಧನೆ ಮಾಡುತ್ತಿರುತ್ತಾರೆ. ಕೆಲವರು ನಿರಂತರ ಧ್ಯಾನ ಪ್ರಚಾರದಲ್ಲೂ, ಅದಕ್ಕೆ ಸೇರಿದ ಅನೇಕ ಕೆಲಸಗಳಲ್ಲೂ ಮುಳುಗಿ ತೇಲುತ್ತಿರುತ್ತಾರೆ, ಯಾವುದನ್ನು ಅನುಸರಿಸಬೇಕು?
ಪತ್ರೀಜಿ : ಗತಜನ್ಮದಲ್ಲಿ ಅಧಿಕವಾಗಿ ಧ್ಯಾನ ಸಾಧನೆ ಮಾಡಿದವರೇ ಈ ಜನ್ಮದಲ್ಲಿ ಅಧಿಕವಾಗಿ ಧ್ಯಾನ ಪ್ರಚಾರ ಮಾಡುತ್ತಾ ಇರುತ್ತಾರೆ. ಈ ಜನ್ಮದಲ್ಲಿ ಧ್ಯಾನ ಮಾಡಬೇಕು .. ಅದೊಂದೇ ನನಗೆ ಬೇಕು ಎನ್ನುವವರಿಗೆ ಅದೊಂದೇ ಸತ್ಯ. ನನಗೆ ಧ್ಯಾನ ಸಾಧನೆಗಿಂತ ಪ್ರಚಾರವೇ ಇಷ್ಟ; ಅದಿಲ್ಲದೇ ನಾನಿರಲಾರೆ ಎಂದು ಹೇಳುವವರಿಗೆ ಅದೇ ಸತ್ಯ. ಅವರವರ ಸತ್ಯದಲ್ಲಿ ಅವರು ಜೀವಿಸಬೇಕು.
ಪ್ರಶ್ನೆ : ’ಪ್ರಾಪಂಚಿಕತೆ’ .. ’ಆಧ್ಯಾತ್ಮಿಕತೆ’ ಎರಡೂ ಒಂದೆಯೊ? ಬೇರೆ ಬೇರೆಯೊ?
ಪತ್ರೀಜಿ: ಸತ್ಯ ತಿಳಿದುಕೊಳ್ಳುವವರೆಗೂ ಅವೆರೆಡೂ ಬೇರೆಬೇರೆ. ಸತ್ಯ ತಿಳಿದನಂತರ ಅದೆರೆಡೂ ಒಂದೇ.
“ಪ್ರಾಪಂಚಿಕತೆ” ಎಂದರೆ ಪ್ರಪಂಚದಲ್ಲಿ ನಾವು ಜೀವಿಸುವ ಪದ್ಧತಿಮಾರ್ಗಗಳು. “ಆಧ್ಯಾತ್ಮಿಕತೆ” ಎಂದರೆ ಆತ್ಮಸ್ಫೂರ್ತಿಯೊಂದಿಗೆ ನಾವು ಜೀವಿಸುವ ಪದ್ಧತಿಮಾರ್ಗಗಳು.
ಈ ಪ್ರಪಂಚದಲ್ಲಿ ಹುಟ್ಟುವುದು, ಜೀವಿಸುವುದು, ಮರಣಿಸುವುದು – ಇದೆಲ್ಲಾ ಆತ್ಮದ ಆಯ್ಕೆಯೇ. ಒಟ್ಟಿನಲ್ಲಿ, ಪ್ರಾಪಂಚಿಕ ಜೀವನವು ಕೂಡಾ ಆತ್ಮದ ಆಯ್ಕೆಯೇ.
ಆಧ್ಯಾತ್ಮಿಕತೆ ತಿಳಿದವನಿಗೆ “ಆಧ್ಯಾತ್ಮಿಕತೆ, ಪ್ರಾಪಂಚಿಕತೆ ಎರಡೂ ಒಂದೇ” ಎಂದು ತಿಳಿಯುತ್ತದೆ. ಆಧ್ಯಾತ್ಮಿಕತೆ ತಿಳಿಯದವನಿಗೆ “ಆಧ್ಯಾತ್ಮಿಕತೆ ಬೇರೆ ಪ್ರಾಪಂಚಿಕತೆ ಬೇರೆ” ಎಂದು ಭ್ರಮೆಯಲ್ಲಿರುತ್ತಾರೆ.
ಪ್ರಾಪಂಚಿಕದಲ್ಲಿರುವ ಪ್ರತಿ ಚಿಕ್ಕ ವಿಷಯ ಆಧ್ಯಾತ್ಮಿಕತೆಯಲ್ಲಿ ಮಹಾವಿಷಯವೇ. ಏನು ಮಾತನಾಡಬೇಕು, ಎಷ್ಟು ಮಾತನಾಡಬೇಕು, ಹೇಗೆ ಮಾತನಾಡಬೇಕು, ಎಲ್ಲಿ ಮಾತನಾಡಬೇಕು .. ಇದೆಲ್ಲಾ ಆಧ್ಯಾತ್ಮಿಕ ವಿಜ್ಞಾನ ವಿಷಯವೇ. ಆಧ್ಯಾತ್ಮಿಕತೆ ಎನ್ನುವುದೇ ಪ್ರಾಪಂಚಿಕತೆಗೆ ಅರ್ಥಪೂರ್ಣವಾದ ಚುಕ್ಕಾಣಿ. ಚುಕ್ಕಾಣಿಯು ನಾವಿಕನ ಒಂದು ಪ್ರಧಾನ ಭಾಗವಲ್ಲವೇ, ಪ್ರಾಪಂಚಿಕತೆಯ ಅತ್ಯಂತ ಪ್ರಧಾನ ಭಾಗವೇ ಆಧ್ಯಾತ್ಮಿಕತೆ. ಶಾಂತಿಮಯ, ಪ್ರಗತಿಮಯ ಪ್ರಾಪಂಚಿಕತೆಗೋಸ್ಕರವೇ ಆಧ್ಯಾತ್ಮಿಕತೆ.
ಪ್ರಶ್ನೆ : ಧ್ಯಾನ ಮಾಡಲು ಶುರು ಮಾಡಿದಾಗಿನಿಂದ ನನಗಿದ್ದ ಖಾಯಿಲೆಗಳು ಹೋದವು. ಕಳೆದ ಮೂರು ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ಈಗ ಮತ್ತೆ ರೋಗಗಳು ಬಾಧಿಸುತ್ತಿವೆ. ಧ್ಯಾನ ಮಾಡಿದರೆ ಖಾಯಿಲೆಗಳೆಲ್ಲಾ ಹೋಗಬೇಕಲ್ಲಾ?
ಪತ್ರೀಜಿ : ಮಾಡಿದ ಕರ್ಮಗಳ ಗಂಟು ಎಷ್ಟು ಜನ್ಮಗಳಿಂದ ಇದೆಯೋ ಯಾರಿಗೆ ಗೊತ್ತು? ಒಳಗುಟ್ಟು ಪೆರುಮಾಳ್‌ಗೆ ಗೊತ್ತು! ಸ್ವಲ್ಪ ಧ್ಯಾನ ಮಾಡಿದರೆ ಸ್ವಲ್ಪ ಚೆನ್ನಾಗಿರುತ್ತೇವೆ. ಎಲ್ಲಾ ಸರಿಹೋಗಬೇಕೆಂದರೆ ಬಹಳಷ್ಟು ಧ್ಯಾನ ಮಾಡಬೇಕು.
ಸ್ವಲ್ಪ ಧ್ಯಾನ ಮಾಡಿದರೆ ಸ್ವಲ್ಪ ಚೆನ್ನಾಗಿಯಾಗಿ, ಸ್ವಲ್ಪವೇ ಚೆನ್ನಾಗಿ ಇರುತ್ತೇವೆ. ನಂತರ ಮತ್ತೆ ಗತಜನ್ಮಗಳಿಂದ ಕರ್ಮ ಮತ್ತೆ ಎಲ್ಲಿಯೋ ಎದುರಾಗಿ ಶರೀರದ ಸ್ವಾಸ್ಥ್ಯ ಕೆಡುತ್ತದೆ. ಅದರರ್ಥ ಏನೆಂದರೆ ನಮ್ಮ ಧ್ಯಾನ ಎಷ್ಟು ಇರುತ್ತದೋ ನಮ್ಮ ಸ್ವಾಸ್ಥ್ಯ ಅಷ್ಟು ಚೆನ್ನಾಗಿರುತ್ತದೆ. ಆದರೆ ಇನ್ನೂ ಎಷ್ಟೋ ಜನ್ಮಗಳಿಂದ ಬಂದದ್ದನ್ನು ಗುಣಪಡಿಸಿಕೊಳ್ಳಲು ಇನ್ನೂ ಎಷ್ಟೋ ಧ್ಯಾನ ಮಾಡಬೇಕು. ಅಷ್ಟೇ ಹೊರತು “ಚಿಕ್ಕ ಧ್ಯಾನಕ್ಕೆ ಎಲ್ಲಾ ರೋಗಗಳು ಹೋಗುತ್ತವೆ” ಎಂದುಕೊಳ್ಳುವುದು ತುಂಬಾ ಮೂರ್ಖತನ.
ನಾವು ಎಷ್ಟು ಜನ್ಮಗಳು ತೆಗೆದುಕೊಂಡಿದ್ದೇವೋ ಅದರಲ್ಲಿ ಎಷ್ಟು ಹೀನವಾದ ಕರ್ಮಗಳಿವೆಯೋ ಅದರ ಗುಟ್ಟು ನಮಗೆ ತಿಳಿಯದಲ್ಲವೇ! ತಿಳಿಯದಿದ್ದಾಗ ಇಂತಹ ಲೆಕ್ಕಗಳು ಕೇಳಬಾರದು. ನಮಗೆ ನಮ್ಮ ಗತಜನ್ಮದಲ್ಲಿನ ಲೆಕ್ಕಗಳು ತಿಳಿಯದಿದ್ದಾಗ ನಿರಂತರ ಧ್ಯಾನ ಮಾಡುತ್ತಲೇ ಇರಬೇಕು. ನಮ್ಮ ಪ್ರಣಾಳಿಕೆಯಲ್ಲಿ ಕೆಲವು ತಿಳಿದುಕೊಳ್ಳಬೇಕಾದ್ದು ಇರುತ್ತವೆ, ಕೆಲವು ಅನುಭವಿಸಬೇಕಾದ್ದೂ ಇರುತ್ತವೆ. ಆ ವಿಧವಾಗಿ “ಎಷ್ಟು ಧ್ಯಾನ ಮಾಡಿದರೂ ಕೆಲವು ಖಾಯಿಲೆ ಕಡಿಮೆಯಾಗುತ್ತಿಲ್ಲ, ಕೆಲವು ಹೊಸ ಖಾಯಿಲೆಗಳು ಬರುತ್ತಿವೆ” ಎಂದರೆ ಅವು ನಾವು ಕ್ರಮವಾಗಿ ಪ್ರಣಾಳಿಕಾಬದ್ಧವಾಗಿ ಅನುಭವಿಸಿಯೇ ತೀರಬೇಕಾದ್ದರಿಂದ ಬರುತ್ತಿವೆ. ಕೆಲವು ರೋಗಗಳು ಧ್ಯಾನಮಾಡಿದರೆ ನಿವಾರಣೆಗೊಳ್ಳುವಂತೆ ಇರುತ್ತವೆ.
ರೋಗಗಳು, ದುಃಖಗಳು ವಿಧವಿಧವಾಗಿರುತ್ತವೆ. ಎಲ್ಲಾ ಅನುಭವಿಸಲಿಕ್ಕಾಗಿ ನಾವು ಬಂದಿದ್ದೇವೆ. ಕಡಿಮೆಯಾಗುವಂತಹವು ಕಡಿಮೆಯಾಗುತ್ತವೆ, ಕಡಿಮೆಯಾಗದಂತಹವು ಆಗುವುದಿಲ್ಲ. ನಾವು ಮಾತ್ರ ಯಾವಾಗಲೂ ಧ್ಯಾನ ಅಭ್ಯಾಸ ಮಾಡುತ್ತಲೇ ಇರಬೇಕು. ದೀನಾವಸ್ಥೆಯಲ್ಲಿದ್ದರೂ ಕೂಡಾ ತಪ್ಪದೇ, ಬಿಡದೇ ಧ್ಯಾನ ಮಾಡುತ್ತಾ ಇರಬೇಕು. ಆಗಲೇ ನಮಗೆ ಜೀವನದ ಹಿರಿಮೆ ಮಹತ್ತರವಾಗಿ ತೋರುತ್ತದೆ.
ಪ್ರಶ್ನೆ : ಅನೇಕ ವಿಧಗಳ ಧ್ಯಾನ ಪದ್ಧತಿಗಳು ಇವೆಯಲ್ಲಾ, ಆನಾಪಾನಸತಿಯನ್ನೇ ಏಕೆ ಅನುಸರಿಸಬೇಕು?
ಪತ್ರೀಜಿ : ನಿಜವೇ! ಅನೇಕಾನೇಕ ಧ್ಯಾನಪದ್ಧತಿಗಳಿವೆ. ಉದಾಹರಣೆಗೆ, ಓಷೋರವರು 108 ಪದ್ಧತಿಗಳನ್ನು ಹೇಳಿದ್ದಾರೆ. ಇನ್ನೂ ಅನೇಕ ಮಾಸ್ಟರ್‌ಗಳು ಅನೇಕ ವಿಧದ ಧ್ಯಾನಪದ್ಧತಿಗಳನ್ನು ಬಹಳ ಹಿಂದೆಯೇ ಹೇಳಿದ್ದಾರೆ, ಹೇಳುತ್ತಾ ಬರುತ್ತಿದ್ದಾರೆ, ಹೇಳುತ್ತಲೇ ಇರುತ್ತಾರೆ ಕೂಡಾ. ತಮ್ಮ ಅನುಭವ ಜ್ಞಾನವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಸಹಜವೇ ಅಲ್ಲವೇ!
ಆದರೆ, ಅವರವರ ಅನುಭವ ಅವರವದು. ಅವರವರ ಜ್ಞಾನ ಅವರವರದು. ಮೊದಲ ಜನ್ಮದಲ್ಲಿದ್ದಾಗ ಒಂದು ವಿಧವಾದ ಅರಿವು ಇರುತ್ತದೆ. ತೆಗೆದುಕೊಂಡ ಜನ್ಮಗಳ ಸಂಖ್ಯೆ ಬೆಳೆಯುತ್ತಾ ಹೋದಂತೆ ಅರಿವು ಬದಲಾಗುತ್ತದೆ; ಅಂತಿಮ ಜನ್ಮದಲ್ಲಿರುವವರ ಜ್ಞಾನ, ಅರಿವು ಅತ್ಯಂತ ಸ್ವಚ್ಛವಾಗಿರುತ್ತವೆ. ಆದ್ದರಿಂದ, ಅವರ ಬೋಧನೆಗಳು ಅತ್ಯದ್ಭುತವಾಗಿರುತ್ತವೆ.
ಗೌತಮಬುದ್ಧ ಅನೇಕ ಜನ್ಮಗಳ ಹಿಂದೆಯೇ ಅರಿಹಂತ. ಆನಂತರದ ಜನ್ಮಗಳಲ್ಲಿ ಬೋಧಿಸತ್ವನಾಗಿ ರಾರಾಜಿಸಿದನು; ಅಂತಿಮ ಜನ್ಮದಲ್ಲಿಯೇ ಗೌತಮ ಬುದ್ಧನಾಗಿದ್ದು. ನಮ್ಮೆಲ್ಲರಿಗೂ ಅವರ ಜೀವನ ಅವರ ಬೋಧನೆಗಳು ಸುಪರಿಚಿತವೇ !
ಬುದ್ಧನ ಜನ್ಮದಲ್ಲೂ ಕೂಡಾ ಸುಮಾರು 500 ಗುರುಗಳ ಬಳಿಗೆ ಹೋಗಿ ಎಷ್ಟೋ ವಿಧದ ಧ್ಯಾನ ಪದ್ಧತಿಗಳನ್ನು ಕಲಿತುಕೊಂಡು ಅಭ್ಯಾಸ ಮಾಡಿದರು; ಆದರೆ, ಅವರು ಇರುವ ಸ್ಥಿತಿಗೆ ಅದು ಸರಿಹೊಂದದೇ ಕೊನೆಗೆ ಆನಾಪಾನಾಸತಿಯನ್ನು ಕಂಡುಹಿಡಿಯುಲಾಯಿತು. ಕೂಡಲೇ ತನ್ನ ಗುರಿಗಳಲ್ಲಿ, ಲಕ್ಷ್ಯದಲ್ಲಿ ಕೃತಕೃತ್ಯರಾಗಿ ಬುದ್ಧರಾಗಿ ವಿರಾಜಿಸುತ್ತಿದ್ದಾರೆ.
ಪ್ರಶ್ನೆ : ಔಷಧಿಗಳು, ಮುಖ್ಯವಾಗಿ ಅಲೋಪತಿ ಔಷಧಿಗಳನ್ನು ಬಳಸಬಾರದು ಎನ್ನಲು ಕಾರಣವೇನು?
ಪತ್ರೀಜಿ : ಪ್ರತಿಯೊಂದು ಚಿಕ್ಕ ಸಮಸ್ಯೆಗೂ, ಚಿಕ್ಕ ತಲೆನೋವಿಗೂ, ಹೊಟ್ಟೆನೋವಿಗೂ ಮಾತ್ರೆ ನುಂಗುವುದು ಎಲ್ಲರಿಗೂ ರೂಢಿಯಾಗಿದೆ. ಏನಾದರೂ ಸರಿ, ವೈದ್ಯರ ಬಳಿ ಓಡುವುದು .. ಆತ ಏನು ಚುಚ್ಚಿದರೂ ಚುಚ್ಚಿಸಿಕೊಳ್ಳುವುದು, ಕೊಟ್ಟಿದ್ದನ್ನು ನುಂಗುವುದು, “ಎಲ್ಲಾ ಸರಿಹೋಗುತ್ತದೆ” ಎಂದುಕೊಂಡು ಮನೆಗೆ ಬರುವುದು ರೂಢಿಯಾಗಿಬಿಟ್ಟಿದೆ.
ನಿಜವಾದ “MBSS” ಎಂದರೆ “Bachelor of Meditation and Bachelor of spirituality” ಎಂದು ಅರ್ಥ. M for Medicine and bachelor for Spirituality ಅಲ್ಲಾ .. ‘M’ for meditaton “M” for meditation… “S” for Surgery ಅಲ್ಲಾ .. “S” for spirituality ಎಂದು ಅರ್ಥಮಾಡಿಕೊಳ್ಳಬೇಕು.
ಕೆಲವು ವರ್ಷಗಳ ಹಿಂದೆ ನ್ಯೂಜಿಲ್ಯಾಂಡ್‌ನಲ್ಲಿ “ವಿಲಿಯಮ್ಸ್” ಎನ್ನುವಾತ ಮುಖಕ್ಕೆ, ಗಂಟಲಿಗೆ ಕ್ಯಾನ್ಸರ್ ಸೋಕಿದರೆ, ಡಾಕ್ಟರ‍್ಸ್ ಕಿಮೋಥೆರಪಿ ಕೂಡಾ ಮಾಡಿ ಇನ್ನು ಕಡಿಮೆಯಾಗದು ಎಂದು ಹೇಳಿದರು. ಆದರೆ, ಅವನು ಕೇವಲ ಎರಡು ತಿಂಗಳಲ್ಲಿ ಅಲ್ಲಿನ ನಮ್ಮ ಪಿರಮಿಡ್ ಮಾಸ್ಟರ‍್ಸ್‌ಗಳಿಂದ ಆನಾಪಾನಾಸತಿ ಧ್ಯಾನ ಕಲಿತು, ಧ್ಯಾನವನ್ನು ಮಾಡಿ ಅದನ್ನು ಪೂರ್ತಿಯಾಗಿ ಕಡಿಮೆ ಮಾಡಿಕೊಂಡರು! ಇದು ಹೇಗೆ ಆಯಿತು?
ಅನ್ನಮಯಕೋಶದ ಹಿಂದೆ ಪ್ರಾಣಮಯ ಕೋಶವಿದೆ. ಪ್ರಾಣಮಯಕೋಶ ಶುದ್ಧಿಯಾದರೆ ಮಾತ್ರ ಅನ್ನಮಯಕೋಶ ಚೆನ್ನಾಗಿರುತ್ತದೆ. ಅಲೋಪತಿ ವೈದ್ಯರ ಇಂಜಕ್ಷನ್, ಔಷಧಿಗಳೆಲ್ಲಾ ಅನ್ನಮಯಕೋಶಕ್ಕೆ ಸೇರಿದೆ! ಅವರಿಗೆ ಅದರ ಮೇಲೆ ಇರುವ ಪ್ರಾಣಮಯ, ಮನೋಮಯ, ವಿಜ್ಞಾನಮಯ ಕೋಶಗಳಿರುತ್ತವೆ ಎಂದು ಗೊತ್ತಿಲ್ಲ. ಏನೂ ಗೊತ್ತಿಲ್ಲದೆ ಇರುವವರ ಬಳಿ ಚಿಕಿತ್ಸೆ ಮಾಡಿಸಿಕೊಂಡರೆ ಏನಾದರು ಆಗುತ್ತದೆಯೇ? ಆಗುವುದಿಲ್ಲ!
“ಆಧ್ಯಾತ್ಮಿಕ ಆರೋಗ್ಯ” ಎನ್ನುವುದು “ತಾಯಿ ಬೇರು” ಆಗಿದೆ. ಶಾರೀರಕ ಆರೋಗ್ಯವು ಅದರ “ವೃಕ್ಷದ ಫಲ!”
“ಆಧ್ಯಾತ್ಮಿಕ ಆರೋಗ್ಯ” ಎನ್ನುವುದು ಆನಾಪಾನಾಸತಿ ಧ್ಯಾನ ಸಾಧನೆಯಿಂದಲೇ ಸಾಧ್ಯ.
ಪ್ರಶ್ನೆ : ಕರ್ಮಕ್ಕೂ, ಅರಿವಿಗೂ ಸಂಬಂಧವಿದೆಯೇ?
ಪತ್ರೀಜಿ : ಸೃಷ್ಟಿಯೆಲ್ಲಾ “ಅರಿವಿನಿಂದ” ವಾಸ್ತವಕ್ಕೆ ಬಂದಿದೆ. “ಅರಿವು” ಎಂದರೆ ಸೃಷ್ಟಿಪರ್ಯಂತ ಮಹಾಶುದ್ಧ ಚೈತನ್ಯವೇ.
“ಅರಿವು” ಎನ್ನುವುದು ಮೂಲಪದಾರ್ಥ; ಪದಾರ್ಥವಲ್ಲದ ಪದಾರ್ಥ. ಅರಿವು ಎನ್ನುವುದು ಶಾಶ್ವತವಾದದ್ದು. ಹುಟ್ಟು, ಸಾವು ಇಲ್ಲದ್ದು, ಅಜರಾಮರವಾದದ್ದು. “ಸೃಷ್ಟಿಯಾದ್ಯಂತ ಇರುವ ಮಹಾ ಶುದ್ಧ ಅರಿವುನಿಂದ ನಮ್ಮ “ಸ್ವಯಂ ಅರಿವು” ಹೊರಬಂದಿದೆ. ನಮ್ಮ ಸ್ವಂತ ಅರಿವಿನಿಂದ ನಮ್ಮ ಸ್ವಂತ ಕರ್ಮ ಪ್ರಕಟಿತವಾಗುತ್ತದೆ. ಸದಾ ಪ್ರಕಟವಾಗುತ್ತಲೇ ಇರುತ್ತದೆ.
ಜನ್ಮಗಳೆಲ್ಲಾ “ಅರಿವಿ”ನಿಂದ ಬರುವಂತದ್ದೇ. ಜನ್ಮ ತೆಗೆದುಕೊಂಡ ನಂತರ ಮಾಡುವ ಕಾರ್ಯಕ್ರಮಗಳೆಲ್ಲಾ ಕೂಡಾ ಮತ್ತೆ ಆಗಿಂದಾಗ್ಗೆ ಅರಿವಿನಿಂದ ಬರುವಂತಹುದ್ದೇ. ಪ್ರತಿ ಜನ್ಮದ ಕರ್ಮಗಳೆಲ್ಲಾ “ಅರಿವು “ನಿಂದ ಹುಟ್ಟಿರುವಂತುಹುದ್ದೇ. ಪ್ರತಿ ಕರ್ಮಕ್ಕೆ ಕರ್ತೃ ಅರಿವು. ಮಾಡಿದ ಕರ್ಮಗಳ ಫಲಿತಗಳನ್ನು ಅಧ್ಯಯನ ಮಾಡಿ ನಿರ್ಧರಿಸುವುದೇ ಅರಿವು.
ಈ ವಿಧವಾಗಿ “ಅರಿವು” ಎನ್ನುವುದು ಸಂತೋಷದಿಂದ ಚಿಮ್ಮುತ್ತಿರುತ್ತದೆ! “ಅರಿವಿನ ಮಹಾಪ್ರಸ್ಥಾನವನ್ನು ಏನೆಂದು ಹೇಳಬಲ್ಲೆವು”!
ಅರಿವನ್ನು ಇನ್ನಷ್ಟು ಅರಿವುಗೊಳಿಸುವ ಮಹಾಪ್ರಯತ್ನವೇ ಧ್ಯಾನ, ಧ್ಯಾನಕರ್ಮ, ಧ್ಯಾನ ಪ್ರಕ್ರಿಯೆ, ಧ್ಯಾನಮಹಾಕರ್ಮಗಳಿಂದ ನಮ್ಮ ಅರಿವನ್ನು ಪ್ರತಿದಿನ ನಾವು ಪ್ರಕಾಶಮಾನ ಮಾಡಿಕೊಳ್ಳೋಣ!
ಪ್ರಶ್ನೆ : “ಸಮಾಜದಲ್ಲಿ ಸುತ್ತಲೂ ನಡೆಯುತ್ತಿರುವ ಅನರ್ಥಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ”.
ಪತ್ರೀಜಿ : ಕೆಟ್ಟವರು ಕೆಟ್ಟ ಕೆಲಸಗಳನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಮತ್ತೇ ಒಳ್ಳೆಯವರು ಏನು ಮಾಡುತ್ತಿದ್ದಾರೆ? ಅವರು ದೇವಸ್ಥಾನಗಳಿಗೆ ಹೋಗಿ ಪೂಜೆಗಳು ಮಾಡುತ್ತಾರೆಯೇ ಹೊರತು .. ಅಲ್ಲಿ ಇನ್ನೂ ಏನು ಮಾಡಬಹುದೋ ಅವರಿಗೆ ಗೊತ್ತಾಗುವುದಿಲ್ಲ. ಚರ್ಚ್‌ಗಳಿಗೆ, ಮಸೀದಿಗಳಿಗೆ ಹೋಗಿ ಪ್ರಾರ್ಥನೆಗಳು ಮಾಡುತ್ತಾರೆಯೇ ಹೊರತು .. ಇನ್ನೂ ಏನು ಮಾಡಬೇಕೆಂದು ತಿಳಿಯದು. ಇದು ಸರಿಯಾದ ಪದ್ಧತಿಯಲ್ಲ!
ಕೆಟ್ಟವರ ಕೆಟ್ಟ ಕೆಲಸಗಳಿಂದ ಜರುಗಬೇಕಾದ ಅನರ್ಥಗಳು ಜರುಗುತ್ತಾ ಇದ್ದರೆ .. ಒಳ್ಳೆಯವರ ನಿಷ್ಕ್ರಿಯತೆಯಿಂದ ಪ್ರಪಂಚದಲ್ಲಿ ಬರಬೇಕಾದ ಒಳ್ಳೆಯ ಬದಲಾವಣೆಗಳು ಬರುತ್ತಿಲ್ಲ. ಆದ್ದರಿಂದ ಒಳ್ಳೆಯವರೆಲ್ಲಾ ಕೂಡಾ ಧ್ಯಾನ ಮಾಡಿ ಸಾಧ್ಯವಾದಷ್ಟು ಹೆಚ್ಚಾಗಿ ತಮ್ಮದಾದ ಆತ್ಮಶಕ್ತಿಯನ್ನು ಸೃಷ್ಟಿಸಿದರೆ .. ಆ ಶಕ್ತಿತರಂಗಗಳು ಈ ಭೂಮಿಯ ಮೇಲೆ ವ್ಯಾಪಿಸಿ .. ಕೆಟ್ಟವರಲ್ಲೂ ಒಳ್ಳೆಯ ಬದಲಾವಣೆಗಳು ತಕ್ಷಣದಲ್ಲಿಯೇ ಉಂಟಾಗುತ್ತವೆ.
ಗೌತಮಬುದ್ಧನ ಧ್ಯಾನದ ಶಕ್ತಿತರಂಗಗಳು ಪರಮ ಕಿರಾತಕನಾದ ಅಂಗುಲಿಮಾಲನನ್ನು ಪರಿವರ್ತಿಸಿದಂತೆ .. ಭೂಮಿಯ ಮೇಲಿರುವ ಅನೇಕಾನೇಕ ಮಂದಿ ಬುದ್ಧರ ಧ್ಯಾನಶಕ್ತಿ ತರಂಗಗಳು, ಸಮಾಜದಲ್ಲಿನ ಕೆಟ್ಟದ್ದನ್ನು ಪ್ರಕ್ಷಾಳನೆ ಮಾಡುತ್ತವೆ! ಆದ್ದರಿಂದ ಸುಮ್ಮನೆ ಪಶ್ಚಾತ್ತಾಪ ಪಡುತ್ತಾ ಕೂರದೇ ವಿಸ್ತೃತವಾಗಿ ಧ್ಯಾನ-ಜ್ಞಾನ ಪ್ರಚಾರಗಳಿಂದ ಅಜ್ಞಾತ ಬುದ್ಧರನ್ನು ತಟ್ಟಿ ಎಚ್ಚರಿಸಿ ಧ್ಯಾನಶಕ್ತಿ ತರಂಗಗಳನ್ನು ವಿಶ್ವವ್ಯಾಪ್ತಗೊಳಿಸಬೇಕು.
ಪ್ರಶ್ನೆ : “ಧ್ಯಾನವನ್ನು .. ಸರಿಯಾಗಿ 40 ದಿನಗಳು ಮಾಡಬೇಕಾ?”
ಪತ್ರೀಜಿ : ನಲವತ್ತು ದಿನಗಳ ಧ್ಯಾನವೆನ್ನುವುದು ಕಡ್ಡಾಯವಾಗಿ ಮಾಡಲೇಬೇಕು!
ಒಂದು ಕಲ್ಲನ್ನು ಸುತ್ತಿಗೆಯಿಂದ ಜೋರಾಗಿ ಹೊಡೆಯುತ್ತಾ ಇದ್ದರೆ ಹತ್ತು-ಹದಿನೈದು ಹೊಡೆತಗಳವರೆಗೂ ಏನೂ ಆದಂತೆ ಗೊತ್ತಾಗುವುದಿಲ್ಲ; ಅನಂತರ ಕೇವಲ ಒಂದು ಚಿಕ್ಕ ಹೊಡೆತಕ್ಕೇ ಅದು ಎರಡಾಗುತ್ತದೆ. ಆದರೆ ಅದು ಆ ಕೊನೆಯ ಹೊಡೆತದ ದೊಡ್ಡತನವಲ್ಲ; ಅದು ಅಲ್ಲಿಯವರೆಗೂ ಶ್ರಮಿಸಿ ಹೊಡೆದ ಹದಿನಾಲ್ಕು ಹೊಡೆತದ ಫಲಿತವೇ!
ಹಾಗೆಯೇ ಧ್ಯಾನ ಕೂಡಾ 40 ದಿನಗಳು ಮಾಡಲೇಬೇಕು! ಮೊದಲು ಕೆಲವು ದಿನಗಳು ಏನೂ ಗೊತ್ತಾಗದಿದ್ದರೂ .. ಒಂದೊಂದು ಹೊಡೆತಕ್ಕೂ ಕಲ್ಲಿನ ಒಳಗೆ ಇರುವ ಪರಿಸ್ಥಿತಿಯಲ್ಲಿ ಸ್ವಲ್ಪ ಸ್ವಲ್ಪ ಬದಲಾವಣೆ ಬಂದು ಕೊನೆಗೆ ಒಡೆಯುವಂತೆ .. ಒಂದೊಂದು ದಿನದ ಧ್ಯಾನದಿಂದ ನಮ್ಮ ಅಂತರಂಗದ ಒಳಗಿನ ಒಂದೊಂದು ಚಕ್ರ ಸ್ಥಾಯಿಯಲ್ಲಿ ಸಿಕ್ಕಿಕೊಂಡಿರುವ ಜನ್ಮಜನ್ಮಗಳ ಕೆಟ್ಟ ಕರ್ಮದ ಫಲಿತಗಳು ವಿಘಟಿತ ಹೊಂದುತ್ತಾ ನಮ್ಮ ನಾಡೀಮಂಡಲವನ್ನು ನಾವು ಪರಿಶುದ್ಧಗೊಳಿಸುತ್ತಾ ಇರುತ್ತೇವೆ.
ತಪನೆಯಿಂದ ಕೂಡಿದ ಶ್ರದ್ಧೆಯಿಂದ ಧ್ಯಾನಸಾಧನೆ ಮಾಡುತ್ತಾ ಇದ್ದರೆ ಕಲ್ಲಿನಂತೆ ಇರುವ ನಾವು .. ಒಡೆಯುವ ಮುನ್ನ ನರನಾದ ಅರ್ಜುನನಂತೆ ಪದೇ ಪದೇ ದುಃಖಕ್ಕೆ ಗುರಿಯಾಗುತ್ತಾ ಇದ್ದವರು, ಧ್ಯಾನದಿಂದ ಒಡೆದು ಎರಡಾಗಿ ಬೇರ್ಪಟ್ಟು ನಂತರ .. ನಾರಾಯಣನಾದ ಕೃಷ್ಣನಂತೆ ಆತ್ಮಜ್ಞಾನದಿಂದ ಪ್ರಕಾಶಿಸುತ್ತಾ ಪ್ರತಿಕ್ಷಣ ಆನಂದದಿಂದ ಇರುತ್ತೇವೆ! ಅದಕ್ಕೆ ಮೊದಲು ಅನೇಕಾನೇಕ ಸಂದೇಹಗಳಿಂದ ತುಂಬಿದ್ದ ನಮಗೆ ನಲವತ್ತು ದಿನಗಳ ಧ್ಯಾನ ಸಾಧನೆಯ ನಂತರ ಪ್ರತಿಯೊಂದು ಸಂದೇಹಕ್ಕೂ ನಮ್ಮ ಅಂತರಂಗದಿಂದಲೇ ಉತ್ತರ ಬರಲಾರಂಭಿಸುತ್ತದೆ.
ಪ್ರಶ್ನೆ : “ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲಾಗದೇ ಕೆಲವೊಮ್ಮೆ ನಾನು ತುಂಬಾ ಅಳುತ್ತಿರುತ್ತೇನೆ. ಕೆಲವೊಮ್ಮೆ ಧ್ಯಾನ ಮಾಡಿ ‘ಇದೂ ಕೂಡಾ ಒಂದು ಅನುಭವವೇ’ ಎಂದು ತಿಳಿದುಕೊಳ್ಳುತ್ತೇನೆ. ಇದರಲ್ಲಿ ಯಾವುದು ಸರಿ?”
ಪತ್ರೀಜಿ : “ಅಳುವುದು” ಎನ್ನುವುದು ನಮಗೂ ನಮ್ಮ ಸುತ್ತಲೂ ಇರುವವರಿಗು ನಮ್ಮ ಭಾವಗಳನ್ನು ತಿಳಿಸುವ ಒಂದು ಅದ್ಭುತವಾದ ಭಾವ ಅಭಿವ್ಯಕ್ತೀಕರಣ ಕ್ರಿಯೆ! ಅದು ತಪ್ಪೇನಲ್ಲಾ! ಆದರೆ ಚೆನ್ನಾಗಿ ರೋಧಿಸಿದ ನಂತರ ಆರಾಮಾಗಿ ಕುಳಿತು ಧ್ಯಾನ ಮಾಡಿ!
ಪ್ರಶ್ನೆ : “ಕರ್ಮಫಲ ತ್ಯಾಗವೆಂದರೇನು?”
ಪತ್ರೀಜಿ : ಮಾಡುತ್ತಿರುವ ಸಕಲ ಕರ್ಮಗಳನ್ನು ಲೋಕಕಲ್ಯಾಣಾರ್ಥವಾಗಿ ಕೈಗೊಳುತ್ತಾ .. ಹಾಗೆ ಕೈಗೊಂಡ ಕರ್ಮಗಳ ಒಂದು ಅಂತಿಮ ಫಲವನ್ನು ಮತ್ತೆ ಆಶಿಸದೆ ಇರುವುದೇ ಕರ್ಮಫಲ ತ್ಯಾಗ.
ಪ್ರಶ್ನೆ : “ಒಂದೊಂದು ಸಾರಿ ಎಷ್ಟು ನಿಗ್ರಹಿಸಿಕೊಂಡರೂ ಆವೇಶ ಬಂದು ಬಿಡುತ್ತದೆ ಏಕೆ?”
ಪತ್ರೀಜಿ : ‘ಆವೇಶ’ ಎನ್ನುವುದು ದೊಡ್ಡ ‘ಶಕ್ತಿ’!
ಒಬ್ಬ ಬುದ್ಧನು ಎಲ್ಲಾ ವೇಳೆಯಲ್ಲಿ ಶಾಂತಸ್ವರೂಪನಾಗಿರುತ್ತಾ .. ಅಗತ್ಯವಾದಾಗ ಮಾತ್ರವೇ ತನ್ನ ಆವೇಶ ಶಕ್ತಿಯನ್ನು ಆಪದ್ಧರ್ಮವಾಗಿ ಬಳಸಿಕೊಳ್ಳುತ್ತಾನೆ! ಹಾಗೇ ಬಳಸಿಕೊಳ್ಳುತ್ತಿರುವ ಶಕ್ತಿಯ ಬಗ್ಗೆ ಆತ ಅತ್ಯಂತ ಅರಿವಿನಿಂದ ಇರುತ್ತಾನೆ. ಆದ್ದರಿಂದ, ಆತನಿಗೆ ಯಾವ ವಿಧವಾದ ಕರ್ಮಬಂಧಗಳೂ ಸೋಕುವುದಿಲ್ಲ.
ಪ್ರಶ್ನೆ : “ನಮ್ಮಲ್ಲಿ ಅಡಗಿರುವ ಅಂತರ್ಗತ ಶಕ್ತಿಯನ್ನು ಹೇಗೆ ತಿಳಿದುಕೊಳ್ಳಬೇಕು?”
ಪತ್ರೀಜಿ : “ಅಂತರ್ಗತ ಶಕ್ತಿಯನ್ನು ತಿಳಿದುಕೊಳ್ಳಬೇಕು” ಎಂದುಕೊಳ್ಳುವುದೇ ತುಂಬಾ ದೊಡ್ಡ ವಿಷಯ! ಅಂತರ್ಗತ ಶಕ್ತಿಯನ್ನು ತಿಳಿದುಕೊಳ್ಳಬೇಕೆಂದರೆ ಮೊದಲು ನಾವು ಹೊರಗಿನ ಅನವಶ್ಯಕ ವಿಷಯಗಳ ಬಗ್ಗೆ ಆಲೋಚಿಸುವುದು, ಕೇಳುವುದು, ನೋಡುವುದು ಮತ್ತು ಮಾತನಾಡುವುದನ್ನು ಪೂರ್ತಿಯಾಗಿ ಕಡಿಮೆ ಮಾಡಬೇಕು. ಅನಗತ್ಯವಾಗಿ ಸುತ್ತಾಡುವುದನ್ನು ನಿಲ್ಲಿಸಬೇಕು. ಮತ್ತು ಹೊರಗಿನ ವಿಷಯಗಳ ಮೇಲೆ ವ್ಯಾಮೋಹವನ್ನು ಕಡಿಮೆ ಮಾಡಿಕೊಂಡು ಶ್ವಾಸದ ಮೇಲೆ ಗಮನವಿಟ್ಟು ಅಂತರ್ಮುಖಿಗಳಾಗಬೇಕು! ಆಗಲೇ ನಮ್ಮಲ್ಲಿನ ಅಪಾರವಾದ ಅಂತರ್ಗತ ಶಕ್ತಿಯನ್ನು ನಾವು ತಿಳಿದುಕೊಳ್ಳುತ್ತೇವೆ.
ಪ್ರಶ್ನೆ : “‘ಮತಬೇಧ’ ಎನ್ನುವುದು ಏಕೆ ಬರುತ್ತದೆ?”
ಪತ್ರೀಜಿ : ಆತ್ಮಜ್ಞಾನ ಲೋಪದಿಂದ ಕೂಡಿದ ಮೂರ್ಖ ಮಾನವರಿಂದ ‘ಮತಬೇಧ’ ಎನ್ನುವುದು ಬರುತ್ತದೆ. ನಾವು ಒಂದು ಜನ್ಮದಲ್ಲಿ ’ಕ್ರಿಸ್ಚಿಯನ್’ ಆಗಿ, ಮತ್ತೊಂದು ಜನ್ಮದಲ್ಲಿ ’ಮಹಮ್ಮದೀಯನಾಗಿ’ .. ಹೀಗೆ ಅನೇಕಾನೇಕ ಜನ್ಮದಲ್ಲಿ ಅನೇಕ ರೀತಿಗಳಲ್ಲಿರುತ್ತೇವೆ. ಆದರೆ ಹುಟ್ಟಿದ ನಂತರ ಆ ಆತ್ಮಸತ್ಯವನ್ನು ಮರೆತು .. “ನಾನು ಮಹಮ್ಮದೀಯ”, “ನಾನು ಕ್ರೈಸ್ತ” ಅಥವಾ “ನಾನು ಹಿಂದು” ಎನ್ನುವ ಅಜ್ಞಾನದಲ್ಲಿ ಬಿದ್ದು ಮತಬೇಧದಲ್ಲಿ ಸಿಲುಕಿಕೊಂಡು ಇರುತ್ತೇವೆ. ಜನ್ಮಪರಂಪರೆಯ ಮೇಲೆ ಮತ್ತು ಕರ್ಮಸಿದ್ಧಾಂತದ ಬಗ್ಗೆ ಅರಿವಿನಿಂದ ಇರಬೇಕೆಂದರೆ .. ಧ್ಯಾನ ಮಾಡಲೇಬೇಕು!!
ಪ್ರಶ್ನೆ : “ಈ ಮಧ್ಯೆ ಎಲ್ಲಿ ನೋಡಿದರಲ್ಲಿ ಆಧ್ಯಾತ್ಮಿಕ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಇದರಲ್ಲಿ ನನಗೆ ಯಾವುದು ಸರಿಯಾದದ್ದು ಎಂದು ನಾನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು?”
ಪತ್ರೀಜಿ : ಒಂದೊಂದು ಪದ್ಧತಿಯನ್ನು ತೀಕ್ಷ್ಣವಾಗಿ ಪರೀಕ್ಷಿಸುತ್ತಾ ಹೋಗಬೇಕು; ಅದಕ್ಕೆ ಬಹಳಷ್ಟು ಸಹನೆ ಇರಬೇಕು! ಗೌತಮಬುದ್ಧ ಆರು ವರ್ಷಗಳ ಕಾಲ ಬೇಸರ, ವಿರಾಮಗಳಿಲ್ಲದೇ ಸುಮಾರು ಐದುನೂರು ಮಂದಿ ಗುರುಗಳ ಬಳಿ ಶಿಷ್ಯತ್ವ ಮಾಡಿದನು. ಅಲ್ಲಿ ತಾನು ಗ್ರಹಿಸಿದ ವಿಷಯಗಳೆಲ್ಲವನ್ನು ಆಚರಿಸಿ ನೋಡಿ .. ತನ್ನದಾದ “ಆನಾಪಾನಸತಿ” ದಾರಿಯನ್ನು ಆರಿಸಿಕೊಂಡನು. ಬುದ್ಧನಿಗಾದರೂ .. ಮತ್ತ್ಯಾರಿಗಾದರೂ .. ಆಯ್ಕೆಯ ಪದ್ಧತಿ ಒಂದೇ!
ಪ್ರಶ್ನೆ : “ಕಳೆದ ಕೆಲವು ವರ್ಷಗಳಿಂದ ಏನೋ ತಿಳಿಯದ ಭಯಗಳು ನನ್ನಲ್ಲಿ ತುಂಬಿಕೊಂಡು ನನ್ನನ್ನು ತುಂಬಾ ಬಾಧಿಸುತ್ತಿವೆ. ಅವುಗಳಿಂದ ಮುಕ್ತಿ ಹೊಂದುವುದು ಹೇಗೆ?”
ಪತ್ರೀಜಿ : ಧ್ಯಾನದಲ್ಲಿ ಕುಳಿತು .. ಈ ಹಿಂದೆ ನಿಮಗೆ ಯಾರ‍್ಯಾರ ಮಾತುಗಳಿಂದ, ಕ್ರಿಯೆಗಳಿಂದ ಬಾಧೆ ಉಂಟಾಗಿದೆಯೋ ನೆನಪು ಮಾಡಿಕೊಂಡು ಅವರ ಹೆಸರನ್ನು ನೆನಪಿಗೆ ತಂದುಕೊಂಡು .. ಅವರನ್ನು ಬೇಷರತ್ತಾಗಿ ಕ್ಷಮಿಸಿಬಿಡಿ.
ಹಾಗೆಯೇ .. ನೀವು ನಿಮ್ಮ ಮಾತುಗಳಿಂದ, ಕ್ರಿಯೆಗಳಿಂದ ಯಾರ‍್ಯಾರಿಗೆ ಬಾಧೆ ಕೊಟ್ಟಿರುವಿರೋ ನೆನಪಿಗೆ ತಂದುಕೊಂಡು ಹೆಸರು ಹೇಳುತ್ತಾ ಅವರಲ್ಲಿ ಕ್ಷಮೆಯನ್ನು ಕೇಳಿ. ಕ್ರಮಕ್ರಮವಾಗಿ ನಿಮ್ಮ ಅಂತಶ್ಚೇತನಾ ಮನಸ್ಸಿನ ಮೂಲೆ ಮೂಲೆಯಲ್ಲಿ ಅಡಗಿರುವ, ನೋವುಂಟು ಮಾಡುವ ಆಲೋಚನೆಗಳಿಂದ ನೀವು ವಿಮುಕ್ತಿ ಹೊಂದುವಿರಿ.
ಇನ್ನೂ ನಿಮ್ಮ ಧ್ಯಾನವನ್ನು, ಧ್ಯಾನ ಸಮಯವನ್ನು ಹೆಚ್ಚಿಸಿಕೊಳ್ಳುತ್ತಾ .. ಹೊಸ ಆಧ್ಯಾತ್ಮಿಕತೆಗೆ ಸೇರಿದ ಪುಸ್ತಕಗಳನ್ನು ಓದುತ್ತಾ .. ಪ್ರತಿದಿನ ಇದನ್ನು ಒಂದು ಅಭ್ಯಾಸದಂತೆ ಮಾಡಿ.
ಪ್ರಶ್ನೆ : “ಧರ್ಮವು ಎಷ್ಟು ವಿಧಗಳಾಗಿ ಸಾಕ್ಷಾತ್ಕಾರವಾಗುತ್ತದೆ?”
ಪತ್ರೀಜಿ : ಧರ್ಮವು ಎರಡು ವಿಧಗಳಾಗಿ ಸಾಕ್ಷಾತ್ಕರಿಸುತ್ತದೆ.
ಒಂದು: “ಸ್ವಧರ್ಮ”
ಎರಡು: “ಪರಧರ್ಮ”
ಧ್ಯಾನಮಾಡಿ ಸ್ವಾನುಭವದಿಂದ ಆತ್ಮಸತ್ಯವನ್ನು ತಿಳಿದುಕೊಳ್ಳುವುದು “ಸ್ವಧರ್ಮ”. ತಿಳಿದುಕೊಂಡ ಸತ್ಯವನ್ನು ಆಚರಣೆಯಲ್ಲಿಟ್ಟು “ನನ್ನ ಸುತ್ತಲೂ ಇರುವವರೆಲ್ಲಾ ನನ್ನಂತೆ ಆತ್ಮಸ್ವರೂಪರು” ಎಂದು ತಿಳಿದುಕೊಂಡು ನಡೆಯುವುದೇ “ಪರಧರ್ಮ”.
ಪ್ರಶ್ನೆ : “ಧ್ಯಾನ ಶಕ್ತಿಯಿಂದ ನಮ್ಮ ದೇಹದ ಒಳಗಿರುವ ಎರಡು ಎಳೆಗಳ DNA ಹನ್ನೆರಡು ಎಳೆಗಳ DNA ಆಗಿ ಅಭಿವೃದ್ಧಿ ಹೊಂದಲು ಸಾಧ್ಯವೇ?”
ಪತ್ರೀಜಿ: ಸಾಧ್ಯ! ಆದರೆ, ಅದು ನಾವು ಮಾಡುವ ಧ್ಯಾನ, ಸ್ವಾಧ್ಯಾಯ, ಸಜ್ಜನ ಸಾಂಗತ್ಯಾದಿ ಸಾಧನೆಗಳ ಪ್ರಕಾರ ಇರುತ್ತದೆ! ಆತ್ಮದ ವಿಕಾಸದಹಾದಿಯಲ್ಲಿರುವ ಅತಿಸಾಧಾರಣ ಮಾನವ ಹಂತವಾದ ಎರಡು ಎಳೆಗಳ ಪರಿಮಿತ DNAಯಿಂದ ಬಗೆಬಗೆಯ ಜೀವನ ಅನುಭವಗಳ ಸಾರದಿಂದ ಉಚ್ಛಸ್ಥಿತಿಗೆ ಸೇರಿದ 12 ಎಳೆಗಳ DNAಯಿಂದ ಕೂಡಿದ ಅಧಿಮಾನವ .. Higher Universal Man.. ಹಂತಕ್ಕೆ ಬೆಳೆಯುವುದೇ ಮಾನವ ಜೀವನದ ಪರಿಪೂರ್ಣ ಗುರಿ!
ಆ ಗುರಿ ಸಾಧನೆಯ ದಿಸೆಯಲ್ಲೇ ನಾವು ಮಾಡುವ ವಿವಿಧ ಸಾಧನೆಗಳಿಂದ ಮೊದಲು ಸೂಕ್ಷ್ಮ ಲೋಕಗಳಲ್ಲಿ ನಮ್ಮ ಮನೋಮಯ, ಕಾರಣಮಯ, ಮಹಾಕಾರಣಮಯ ಮತ್ತು ನಿರ್ವಾಣಮಯ ಕೋಶಗಳೆಲ್ಲಾ ಕೂಡಾ 12 ಎಳೆಯ ಆಓಂ ಹಂತಕ್ಕೆ ಉನ್ನತೀಕರಿಸಲ್ಪಡುತ್ತದೆ. ಅನಂತರವೇ ಭೂಲೋಕದಲ್ಲಿರುವ ನಮ್ಮ ಭೌತಿಕ ದೇಹ ಜೀವಕೋಶಗಳಲ್ಲಿರುವ ಕ್ರೋಮೊಜೋಮಿನ ಮೇಲಿರುವ ಆಓಂ ಸಹ ಎರಡು ಎಳೆಗಳಿಂದ 12 ಎಳೆಗಳಿಗೆ ಉನ್ನತೀಕರಿಸಲ್ಪಟ್ಟು ನಾವು ಬಹುಮುಖ ಪ್ರಜ್ಞಾಶೀಲರಾಗಿ ಮೆರೆಯಲಾರಂಭಿಸುತ್ತೇವೆ!
ಪ್ರಶ್ನೆ: “ಜ್ಞಾನ” ಎನ್ನುವುದರಲ್ಲಿ ಎಷ್ಟು ಬಗೆಗಳಿವೆ?”
ಪತ್ರೀಜಿ: “ಜ್ಞಾನ” ಎನ್ನುವುದರಲ್ಲಿ ಮುಖ್ಯವಾಗಿ ಎರಡು ಬಗೆಗಳಿವೆ:
ಒಂದು .. “ಆತ್ಮಪರವಾದ ಇಂಗಿತ ಜ್ಞಾನ”
ಎರಡು .. “ಭೌತಿಕಪರವಾದ ಇಂಗಿತ ಜ್ಞಾನ”
ನಮಗೆ ಆತ್ಮಪರವಾಗಿ ಅವಶ್ಯಕತೆ ಇರುವುದು ಯಾವುದು? ಅವಶ್ಯಕತೆ ಇಲ್ಲದ್ದು ಯಾವುದು? ಎಂಬುದನ್ನು ತಿಳಿದುಕೊಳ್ಳುವುದೇ “ಆತ್ಮಪರವಾದ ಇಂಗಿತ ಜ್ಞಾನ”.
ನಮ್ಮ ಭೌತಿಕ ಅವಶ್ಯಕತೆಗಳ ಜೊತೆ .. ಇತರರ ಭೌತಿಕ ಅವಶ್ಯಕತೆಗಳಲ್ಲಿ ಸಹ ಅವರಿಗೆ ಅವಶ್ಯಕತೆ ಇರುವುದು ಯಾವುದು .. ಅವಶ್ಯಕತೆ ಇಲ್ಲದ್ದು ಯಾವುದು ಎಂಬುದನ್ನು ತಿಳಿದುಕೊಳ್ಳುವುದೇ “ಭೌತಿಕಪರವಾದ ಇಂಗಿತ ಜ್ಞಾನ”.
ಪ್ರಶ್ನೆ: “ಧರ್ಮಬದ್ಧವಾಗಿ ಹೇಗೆ ಜೀವಿಸಬೇಕು?”
ಪತ್ರೀಜಿ: ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರೂ ಮುಖ್ಯವಾಗಿ ಮೂರು ಧರ್ಮಗಳನ್ನು ಖಂಡಿತಾ ಪಾಲಿಸಬೇಕು .. ಮೊದಲನೆಯದು .. “ದೇಹ ಧರ್ಮ”: ಈ ಭೂಮಿಯ ಮೇಲೆ ಅನೇಕಾನೇಕ ಅನುಭವಗಳ ಮೂಲಕ ಅನಂತವಾದ ಜ್ಞಾನವನ್ನು ಹೊಂದಲು ಜನ್ಮಪಡೆದಿರುವ ಆತ್ಮಸ್ವರೂಪರಾದ ನಮ್ಮೆಲ್ಲರಿಗೂ .. ದೇಹ ಒಂದು ’ವಾಹನ’!
ಈ ವಾಹನವನ್ನು ನಾವು ಆಗಿಂದಾಗ ಶ್ರುತಿಬದ್ಧವಾಗಿ, ಲಯಬದ್ಧವಾಗಿ ನೋಡಿಕೊಂಡರೇನೆ ಅದು ನಮಗೆ ಸರಿಯಾದ ರೀತಿಯಲ್ಲಿ ಸಹಕರಿಸುತ್ತಾ ಇರುತ್ತದೆ. ವಾಹನ ಚೆನ್ನಾಗಿದ್ದರೇನೆ ಅಲ್ಲವೇ ನಾವು ಎಲ್ಲಿಬೇಕಾದರೂ ಪ್ರಯಾಣ ಬೆಳೆಸಬಹುದು .. ಮತ್ತೆ ನಾವು ಬಂದ ಕೆಲಸವನ್ನು ಮಾಡಿಕೊಳ್ಳಬಹುದು! ಆದ್ದರಿಂದ ಶುದ್ಧ ಸಸ್ಯಾಹಾರದಿಂದ ಶರೀರಕ್ಕೆ ಸರಿಯಾದ ಪೋಷಣೆಯನ್ನು ನೀಡುತ್ತಾ, ಧ್ಯಾನದಿಂದ ಅದನ್ನು ಶಕ್ತಿಯುತಗೊಳಿಸಬೇಕು.
ನಮ್ಮ ಶರೀರದಲ್ಲಿ ಕೋಟ್ಯಾಂತರ ಜೀವಕೋಶಗಳಿವೆ. ಅವೆಲ್ಲಕ್ಕೂ ನಮ್ಮನ್ನು ಕುರಿತು ಚೆನ್ನಾಗಿ ಗೊತ್ತಿದೆ ಆದರೆ .. ನಮಗೇ ಅವುಗಳ ಕುರಿತು ಸ್ವಲ್ಪವೂ ಗೊತ್ತಿಲ್ಲ. ಅದಕ್ಕೆ ಸರಿಯಲ್ಲದ ಮಾಂಸಾಹಾರದಿಂದ ಅವುಗಳನ್ನು ಬಾಧಿಸುತ್ತಾ ಅವುಗಳನ್ನು ವೇದನೆಗೆ ಗುರಿಮಾಡುತ್ತಿದ್ದೇವೆ. ಪೆಟ್ರೋಲ್ ಕಾರಿನಲ್ಲಿ ಡೀಸೆಲ್ ಹಾಕಿ ನಡೆಸಿ ಅದರ ಇಂಜಿನ್‌ನ್ನು ಕೆಡಿಸಿದ ಹಾಗೆ .. ಮಾಂಸಾಹಾರದಿಂದ ನಮ್ಮ ದೇಹದ ಕೆಲಸದ ರೀತಿಯನ್ನು ಕೆಡಿಸಿ ನಾವು ಕಷ್ಟಗಳಿಗೆ ಗುರಿಯಾಗುತ್ತಿದ್ದೇವೆ!
ಈ ಕೋಟ್ಯಾಂತರ ಜೀವಕಣಗಳಲ್ಲಿ ಪ್ರತಿಯೊಂದು ಕಣವೂ ಸಹ ತುಂಬಾ ಜ್ಞಾನಯುತವಾದದ್ದು! ನಮ್ಮ ಜೀವಕೋಶಗಳೆಲ್ಲಾ ಸಹ ಪ್ರತಿಕ್ಷಣ ಒಂದಕ್ಕೊಂದು ಸಮನ್ವಯಗೊಳಿಸಿಕೊಳ್ಳುತ್ತಾ ಕ್ರಮೇಣಾ ಆತ್ಮಉದ್ದೀಪನ ದಿಸೆಯಲ್ಲಿ ಸಾಗುತ್ತಿರುತ್ತದೆ. ಆದ್ದರಿಂದ ಅದರ ಜೊತೆ ನಾವು ಸರಿಯಾದ ರೀತಿಯಲ್ಲಿ ವರ್ತಿಸಬೇಕು, ಅಂದರೆ .. ನಮಗೆ ನಿರಂತರ ಧ್ಯಾನಸಾಧನೆ ಮತ್ತೆ ಅಹಿಂಸಾ ಧರ್ಮಾಚರಣೆಯೇ ಮಾರ್ಗ!
ಎರಡನೆಯದು .. “ಸಮಾಜ ಧರ್ಮ”: ಸಮಾಜದಲ್ಲಿ ನಾವು ಸಹ ಭಾಗಿಗಳು. ಆದ್ದರಿಂದ ಎಲ್ಲರೂ ಸುಖವಾಗಿ, ಸಂತೋಷವಾಗಿ ಇದ್ದರೇನೆ ನಾವು ಕೂಡಾ ಸಂತೋಷವಾಗಿ ಇರುತ್ತೇವೆ. ಅದಕ್ಕಾಗಿ ನಮ್ಮಲ್ಲಿರುವ ಆರ್ಥಿಕ ಸಂಪತ್ತನ್ನು ಮತ್ತು ಆಧ್ಯಾತ್ಮಿಕ ಸಂಪತ್ತನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಅನ್ನದಾನ, ವಸ್ತ್ರದಾನ, ವಿದ್ಯಾದಾನ ಮುಂತಾದ ಅನೇಕಾನೇಕ ದಾನಗಳ ಜೊತೆ ಧ್ಯಾನದಾನ ಸಹ ಮಾಡಬೇಕು.
ಧ್ಯಾನ ಪ್ರಚಾರದ ಮೂಲಕ ಧ್ಯಾನದಾನ ಮಾಡದೇ ಹೋದರೆ .. ಉಳಿದ ಎಲ್ಲಾ ದಾನಗಳೂ ವ್ಯರ್ಥವಾಗಿಬಿಡುತ್ತವೆ.
ಮೂರನೆಯದು .. “ಆತ್ಮ ಧರ್ಮ”: ನಾವು ಯಾವ ಕೆಲಸಕ್ಕಾಗಿ ಈ ಭೂಮಿಯ ಮೇಲೆ ಜನ್ಮತಾಳಿದ್ದೇವೊ .. ವಿಶೇಷವಾಗಿ ಆ ಕೆಲಸದ ಮೇಲೆ ಧ್ಯಾನವಿಡುತ್ತಾ .. ಮತ್ತು ಇತರ ದಿನನಿತ್ಯದ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿರಬೇಕು. ಬಂದ ಕೆಲಸವನ್ನು ಸರಿಯಾಗಿ ಪೂರ್ಣಗೊಳಿಸದಿದ್ದರೆ .. ಇಲ್ಲಿ ಕಳೆದ ನಮ್ಮ ಜನ್ಮಕಾಲದ ಜೊತೆ ನಾವು ಸಂಪಾದಿಸಿದ ಸಂಪತ್ತೆಲ್ಲಾ ವ್ಯರ್ಥವಾಗಿಬಿಡುತ್ತವೆ! ಅನಂತರ ಮರಣಿಸಿ ಮೇಲಿನ ಲೋಕಗಳಿಗೆ ಹೋದನಂತರ .. ನಡೆದ ಅನರ್ಥಕ್ಕೆ ಚಿಂತಿಸಿದರೂ ಲಾಭವಿರುವುದಿಲ್ಲ .. ಪುನಃ ಜನ್ಮಪಡೆಯಲು ಕಾದಿರಬೇಕಾಗುತ್ತದೆ. ಆದ್ದರಿಂದ ಸಮಯವನ್ನು ಅನವಶ್ಯಕ ಕಾಲಕ್ಷೇಪಗಳಿಂದ ಅತಿಯಾಗಿ ವ್ಯರ್ಥಮಾಡಿಕೊಳ್ಳದೇ .. ಇತೋಧಿಕವಾಗಿ ಧ್ಯಾನ ಸಾಧನೆಗಳಲ್ಲಿ ಆತ್ಮವನ್ನು ಪರಿಪುಷ್ಠಿಗೊಳಿಸಬೇಕು! ವಿಶೇಷವಾಗಿ ಸ್ವಾಧ್ಯಾಯ ಸಾಧನೆ ಮಾಡುತ್ತಿರಬೇಕು .. ಸಜ್ಜನ ಸಾಂಗತ್ಯವನ್ನು ವಿಸ್ತೃತವಾಗಿ ಮಾಡಬೇಕು!
ಪ್ರಶ್ನೆ: “ಮರಣಾನಂತರ ನಮ್ಮ ಪರಿಸ್ಥಿತಿ ಏನು?”
ಪತ್ರೀಜಿ: “ಮರಣ” ಅಂದರೆ .. ಭೌತಿಕ ಶರೀರಕ್ಕೂ ಮತ್ತು ಸೂಕ್ಷ್ಮಶರೀರಕ್ಕೂ ನಡುವೆ ಇರುವ “ಬೆಳ್ಳಿ ತಂತಿ-Silver Cord”ನ ಸಂಬಂಧ ಕಡೆದು ಹೋಗುವುದು! ಮರಣದ ಮೂಲಕ ಚೈತನ್ಯದಿಂದ ಕೂಡಿರುವ ಅರಿವು ನಮ್ಮ ಭೌತಿಕ ಶರೀರದಿಂದ ಬಿಡುಗಡೆಯಾಗಿ .. “ಸೂಕ್ಷ್ಮಶರೀರ”ದೊಂದಿಗೆ ಶಾಶ್ವತವಾಗಿ ಅನುಸಂಧಾನಿಸಲ್ಪಟ್ಟು .. ಇನ್ನು ಅಲ್ಲಿಂದಲೇ ತನ್ನ ಕಾರ್ಯಕಲಾಪಗಳನ್ನು ಮುಂದುವರೆಸುತ್ತಿರುತ್ತದೆ.
ಒಬ್ಬ ಸಾಮಾನ್ಯ ವ್ಯಕ್ತಿಯ ಸೂಕ್ಷ್ಮಶರೀರ .. ಮರಣಾನಂತರವು ಸಹ .. ಈ ಭೂಮಿಯ ಮೇಲೆ ಕನಿಷ್ಠಪಕ್ಷ ಮೂರು ದಿನಗಳವರೆಗೂ ತಿರುಗುತ್ತಿರುತ್ತದೆ. ಆ ಸಮಯದಲ್ಲಿ “ಒಬ್ಬ ಆಸ್ಟ್ರಲ್ ಮಾಸ್ಟರ್” ಮತ್ತು “ಒಬ್ಬ ಆಸ್ಟ್ರಲ್ ಅಪ್ರೆಂಟಿಸ್” ಕಲೆತು ಆ ವ್ಯಕ್ತಿಗೆ ಸೂಚನೆಗಳನ್ನು ನೀಡುತ್ತಾ, ಶಕ್ತಿಯನ್ನು ನೀಡುತ್ತಾ ಮೇಲಿನಲೋಕಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸ್ವಲ್ಪ ವಿಶ್ರಾಮದ ನಂತರ ಆತನಿಗೆ ಅದುವರೆಗೂ ಆ ಜನ್ಮದಲ್ಲಿ ಕಳೆದ ಜೀವನವನ್ನು ಪುನವಿಮರ್ಶೆ ಮಾಡಿಸುತ್ತಾರೆ.
ಆಗಲೇ ಆತನ ಪಾಪ ಮತ್ತು ಪುಣ್ಯಕಾರ್ಯಗಳ ಲೆಕ್ಕವನ್ನು ತೋರಿಸಿ ಆತನ ಕರ್ಮಗಳ ಹಂತದನುಸಾರ ಪುನಃಪರಿಶೀಲಿಲ್ಪಟ್ಟ ಗುರಿಗಳಿಂದ .. ಮತ್ತೆ ಪುನರ್‌ವ್ಯವಸ್ಥೀಕರಿಸಲ್ಪಟ್ಟ ಗಮ್ಯಗಳಿಂದ .. ಆತನ ಪುನರ್ಜನ್ಮ ಪ್ರಣಾಳಿಕೆ ರಚಿಸಲ್ಪಡುತ್ತದೆ.
ಪ್ರಶ್ನೆ: ಧ್ಯಾನ ನಮ್ಮ ನಿತ್ಯಜೀವನದಲ್ಲಿ ಹೇಗೆ ಸಹಾಯವಾಗುತ್ತದೆ?
ಪತ್ರೀಜಿ: ನಿರಂತರ ಧ್ಯಾನದಿಂದ ನಾವು ಹೊಂದುವ “ವಿಶ್ವಶಕ್ತಿ”ಯಿಂದ ನಮ್ಮಲ್ಲಿರುವ “ಶಕ್ತಿಕೇಂದ್ರಗಳೆಲ್ಲಾ” ಉತ್ತೇಜಿಸಲ್ಪಟ್ಟು ನಾವು “ಶಕ್ತಿಸ್ವರೂಪ”ರಂತೆ ಬದಲಾಗಿಬಿಡುತ್ತೇವೆ. ಇದರಿಂದ ನಾವು ಮಾಡುತ್ತಿರುವ ಎಲ್ಲಾ ಕೆಲಸಗಳಲ್ಲಿ .. ಸುನಿಶಿತವಾದ ನಾಣ್ಯತೆ, ನಿಪುಣತೆಗಳು ಹೆಚ್ಚಾಗಿ ಎಂತಹ ಕೆಲಸವನ್ನಾದರೂ ಸುಲಭವಾಗಿ ಮತ್ತೆ ಆನಂದವಾಗಿ ಒಂದು ಆಟದಂತೆ ಪೂರ್ತಿ ಮಾಡಬಲ್ಲವರಾಗುತ್ತೇವೆ.
ಧ್ಯಾನ ಎನ್ನುವುದು ನಮ್ಮನ್ನು ಒಂದು “ನಿಶ್ಚಲಾನಂದ ಸ್ಥಿತಿ”ಯಲ್ಲಿ ಇರುವುದರಿಂದ ನಾವು ಆತ್ಮಶಾಂತಿಯಿಂದ .. ಸಾಕ್ಷಿತತ್ವದೊಂದಿಗೆ ಕಣ್ಣುಮುಂದೆ ಇರುವ ಪರಿಸ್ಥಿತಿಗಳು ಯಾವ ರೀತಿಯ ಬದಲಾವಣೆ ಹೊಂದುತ್ತಿದ್ದರೂ ಸರಿ .. ಸಮತಾ ಸ್ಥಿತಿಯಲ್ಲಿ ಅವುಗಳ ಫಲಿತಗಳನ್ನು ಗ್ರಹಿಸುತ್ತಾ .. ನಾವು ಮಾಡುತ್ತಿರುವ ಕೆಲಸದ ಮೇಲೆ ಮಾತ್ರವೇ ಗಮನ ಇಡಬಹುದು.
ಧ್ಯಾನ ಎನ್ನುವುದು ನಮ್ಮನ್ನು ಕ್ರಮೇಣ “ಅತ್ಯಂತ ಒಳ್ಳೆಯ ರೀತಿಯಲ್ಲಿ ಅಧ್ಯಯನ ಮಾಡಲಾದ ಶಾಸ್ತ್ರೀಯ ದೃಕ್ಪಥಗಳಿಂದ” ಕೂಡಿರುವ “ಬುದ್ಧಿಜೀವಿ”ಗಳಂತೆ ಬದಲಾಯಿಸುತ್ತದೆ. ಅದರಿಂದ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮತ್ತು ಇತರರನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಮ್ಮಲ್ಲಿ ತುಂಬಾ ಒಳ್ಳೆಯ ಬದಲಾವಣೆ ಬರುತ್ತದೆ. ಪ್ರತಿ ವಿಷಯವನ್ನು ಪಕ್ವವಾದ ಶಾಸ್ತ್ರೀಯ ಅರಿವಿನಿಂದ ಅರ್ಥಮಾಡಿಕೊಳ್ಳುತ್ತಾ ಮತ್ತು “ಸಂಪೂರ್ಣ ಆತ್ಮಯುತ ಸ್ವೇಚ್ಛೆ”ಯಿಂದ ನಮ್ಮ ನಿರ್ಣಯಗಳನ್ನು ನಾವೇ ಮಾಡಿಕೊಳ್ಳುತ್ತಾ ಮತ್ತೆ ಇತರರ ಆತ್ಮಯುತಸ್ವಾತಂತ್ರ್ಯವನ್ನು ಕೂಡಾ ಗೌರವಿಸುತ್ತಾ .. ಅವರ ಜೊತೆ ಅದ್ಭುತವಾದ ಅನುಬಂಧಗಳನ್ನು ಇಟ್ಟುಕೊಳ್ಳುತ್ತೇವೆ. ಹೀಗೆ “ವಿಶ್ವದ ಏಕತ್ವ”ದ ಕಡೆ .. ಮತ್ತೆ “ವಿಶ್ವಸಮಭಾವನೆ”ಯ ಕಡೆ ನಾವು ಪ್ರಯಾಣ ಮಾಡುತ್ತಾ .. ಸದಾ ಬ್ರಹ್ಮಾನಂದ ಸ್ಥಿತಿಯಲ್ಲಿರುತ್ತೇವೆ.
ಸರಿಯಾದ ಧ್ಯಾನ ಎನ್ನುವುದು ನಮ್ಮನ್ನು 1) ಶಕ್ತಿ ಸ್ವರೂಪರಂತೆ 2) ನಿಶ್ಚಲಾನಂದ ಸ್ವರೂಪರಂತೆ 3) ಬುದ್ಧ ಜೀವಿಗಳಂತೆ ಬದಲಾಯಿಸಿ ಬಿಡುತ್ತದೆ.
ಪ್ರಶ್ನೆ: “ದಿವ್ಯಜ್ಞಾನ ಪ್ರಕಾಶವನ್ನು ಹೊಂದಲು ಪ್ರತ್ಯೇಕ ಪದ್ಧತಿಗಳು ಏನಾದರೂ ಇವೆಯಾ?”
ಪತ್ರೀಜಿ: “ದಿವ್ಯಜ್ಞಾನ ಪ್ರಕಾಶ” ಎನ್ನುವುದು ಅಂದಿನ ಗೌತಮಬುದ್ಧರಿಗೆ ಆದಂತೆ .. ಕಲಿತುಕೊಳ್ಳುವ ಸಹನೆಯ ಪ್ರಕಾರ .. ಕಲಿತುಕೊಳ್ಳಲಾಗುವ ಪರಿಸ್ಥಿತಿಯ ಪ್ರಕಾರ .. ಪ್ರತಿಯೊಬ್ಬರಲ್ಲೂ ಸ್ವಲ್ಪವಾದರೂ ಇರುತ್ತದೆ. ಮತ್ತೆ ನಿರಂತರ ಧ್ಯಾನ-ಜ್ಞಾನ ಸಾಧನೆಗಳ ಮೂಲಕ ತಮ್ಮ ಬುದ್ಧಿಯನ್ನು ಇನ್ನೂ ಹೆಚ್ಚಾಗಿ ಹದವಾಗಿ ಹಿಡಿದುಕೊಳ್ಳುವವರೆಲ್ಲಾ ಬುದ್ಧರೇ!
ಬುದ್ಧರಾಗಿರುವವರೆಲ್ಲಾ ಸಮಾಜದಲ್ಲಿರುವ ಪ್ರತಿಯೊಬ್ಬರನ್ನೂ ಭೇಟಿಯಾಗುತ್ತಾ “ಹೇಗೆ ಇರಬೇಕು?” .. “ಹೇಗೆ ಮಾತನಾಡಬೇಕು” .. “ಹೇಗೆ ಮಾತನಾಡಬಾರದು .. “ಏನು ಉಣ್ಣಬೇಕು?” ..” ಏನು ಉಣ್ಣಬಾರದು?” ಮುಂತಾದ ಅನೇಕ ವಿಷಯಗಳ ಬಗ್ಗೆ ಸಂಬಂಧಿಸಿದ ಉತ್ತಮವಾದ ಬುದ್ಧಿಯನ್ನು, ಮೂಲಭೂತ ಇಂಗಿತ ಜ್ಞಾನವನ್ನು ಪ್ರತಿಕ್ಷಣ ಧಾರಾಳವಾಗಿ ಹೊಂದುತ್ತಲೇ ಇರುತ್ತಾರೆ!
ಪ್ರಶ್ನೆ: ಆತ್ಮ “ಪುರೋಗಮನ ದಿಸೆ”ಯಲ್ಲಿ ಇದೆಯೆಂದು ತಿಳಿದುಕೊಳ್ಳುವುದು ಹೇಗೆ?
ಪತ್ರೀಜಿ: “ಆತ್ಮದ ಪುರೋಗತಿ” ಎನ್ನುವುದು .. ಆ ಆತ್ಮ ತನ್ನ ಜೀವಿತ ಕಾಲದಲ್ಲಿ ತಾನು ಸ್ವಯಂ ಆಗಿ ಆಯ್ಕೆ ಮಾಡಿಕೊಂಡ ವಿವಿಧ ಭೌತಿಕ ಮತ್ತು ಆಧ್ಯಾತ್ಮಿಕ ಪ್ರಯತ್ನಗಳ ಒಂದು ವಿಶಾಲ ಸಂಖ್ಯೆಯ ಮೇಲೆ ಆಧಾರವಾಗಿರುತ್ತದೆ. ಆಯಾ ಪ್ರಯತ್ನಗಳ ಒಂದು “ಕೊನೆಯ ಫಲಿತಾಂಶ” ಎನ್ನುವುದು ಜಯವಾಗಬಹುದು ಅಥವಾ ಅಪಜಯವಾಗಬಹುದು. ಆದರೆ .. ಪುರೋಗಮನ ಮಾತ್ರ ನಡೆಯುತ್ತಲೇ ಇರುತ್ತದೆ. “ಜಯ” ಎನ್ನುವುದು ಆ ಆತ್ಮಕ್ಕೆ ಪುನರುತ್ಸಾಹವನ್ನು ನೀಡಿದರೆ .. “ಅಪಜಯ” ಎನ್ನುವುದು ಆ ಆತ್ಮದಲ್ಲಿ ವಿಶೇಷ ಸಹನೆಯನ್ನು ಹೆಚ್ಚಿಸುತ್ತದೆ! ಅದಕ್ಕೆ ಆತ್ಮದ ಪುರೋಗತಿಗೆ “ಜಯಾಪಜಯಗಳು” ಎರಡೂ ಕೂಡಾ ಸರಿಸಮಾನವಾದ ಅರ್ಥದಲ್ಲಿ ಅಗತ್ಯವಾಗಿರುವ ಜಟಿಲ ಅಂಶಗಳು!
ಯಾವುದೇ ಪ್ರಯತ್ನವೇ ಇಲ್ಲದಿದ್ದಾಗ .. ಜಯವಿರುವುದಿಲ್ಲ .. ಅಪಜಯವಿರುವುದಿಲ್ಲ .. ಮತ್ತು “ಪುರೋಗಮನ” ಎನ್ನುವುದು ಇರುವುದೇ ಇಲ್ಲ. ಎಷ್ಟು ಜನ್ಮಗಳೆತ್ತಿದರೂ ಆತ್ಮಸ್ಥಿತಿ ಎನ್ನುವುದು ಅಲ್ಲಿಯೇ ನಿಂತುಕೊಂಡಿರುತ್ತದೆ.
ಪ್ರಶ್ನೆ: “ಅರಿವು” ಎನ್ನುವುದನ್ನು ಹೇಗೆ ಬೆಳೆಸಿಕೊಳ್ಳಬೇಕು?
ಪತ್ರೀಜಿ: ಏನಾದರೂ ಸರಿಯೇ ಒಂದು ವಿಷಯದ ಮೇಲೆ ಪೂರ್ತಿ ಚೈತನ್ಯ ಸ್ಥಿತಿಯನ್ನು ಹೊಂದಿರುವುದೇ “ಅರಿವು”! ನಮ್ಮ ಭೌತಿಕ ಶರೀರದ ಅಗತ್ಯಗಳ ಮೇಲೆ .. ನಮ್ಮ ಸುತ್ತಲೂ ಇರುವ ಪ್ರಕೃತಿಯಲ್ಲಿನ ಎಲ್ಲಾ ಕೋನಗಳ ಮೇಲೆ .. ಮತ್ತು ಈ ವಿಶಾಲ ವಿಶ್ವದಲ್ಲಿನ ಸಮಸ್ತ ಲೋಕಗಳ ಪರವಾಗಿ .. ಚೈತನ್ಯಪೂರಿತ ಅರಿವನ್ನು ಏಕಕಾಲದಲ್ಲಿ ಹೊಂದಿ ಆ ಪ್ರಕಾರವಾಗಿ ನಡೆದುಕೊಳ್ಳುವುದೇ “ಅರಿವು”!
ಪ್ರಶ್ನೆ: ಬಹಳ ಜನ ತಮ್ಮ ಜೀವನವನ್ನು ಹಾಯಾಗಿ ಆನಂದಿಸಲಾರದೆ ಹೋಗುತ್ತಿದ್ದಾರೇನೋ ಎಂದು ಅನಿಸುತ್ತಿದೆ?
ಪತ್ರೀಜಿ: ಅದು ನಿಮ್ಮ ಅರಿವಿನಲ್ಲಿ ಲೋಪವೇ! ಏಕೆಂದರೆ, ನಿಮ್ಮ ಸುತ್ತಲೂ ಇರುವ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನವನ್ನು ಹಾಯಾಗಿ ಆನಂದಿಸುತ್ತಿದ್ದಾರೆ .. ಪ್ರತಿಕ್ಷಣ ಹೊಸ ಹೊಸ ಪಾಠಗಳನ್ನು ಕಲಿಯುತ್ತಲೇ ಇದ್ದಾರೆ.
ಹೀಗೆ “ನಿರಂತರ ಕಲಿಯುವಿಕೆ” ಎನ್ನುವುದು ಅವರವರ ಆತ್ಮದ ಅಭಿವೃದ್ಧಿಯ ಮೇಲೆ “ಅರಿವಿನೊಂದಿಗೆ” ನಡೆಯಬಹುದು ಅಥವಾ “ಅರಿವಿಲ್ಲದೆ” ಕೂಡಾ ನಡೆಯಬಹುದು! ಆದರೆ, ಕಲಿತುಕೊಂಡ ಪಾಠ ಮಾತ್ರ ಅವರ ಭವಿಷ್ಯತ್ ಜೀವನದ ಮೇಲೆ ತನ್ನ ಪ್ರಭಾವವನ್ನು ತಪ್ಪದೇ ತೋರಿಸುತ್ತದೆ.
ಪ್ರಶ್ನೆ: “ತೃಪ್ತಿ” ಎನ್ನುವುದು ಹೇಗೆ ಉಂಟಾಗುತ್ತದೆ?
ಪತ್ರೀಜಿ: “ಜೀವನದಲ್ಲಿ ಯಾವ ರಂಗದಲ್ಲಿ ಕೂಡಾ ಯಾರಿಗೂ ಸಂಪೂರ್ಣವಾದ ಸಂತೃಪ್ತಿಯನ್ನು ಕೊಡಲಾಗದು! ಆದರೆ, ಧ್ಯಾನ, ಸ್ವಾಧ್ಯಾಯ, ಸಜ್ಜನಸಾಂಗತ್ಯಾದಿಗಳಿಂದ ಉಂಟಾಗುವ ದಿವ್ಯಜ್ಞಾನಪ್ರಕಾಶವನ್ನು ಹೊಂದಿದ ನಂತರವೇ ಯಾರಿಗಾದರೂ .. ಅವರವರ ಜೀವನದಲ್ಲಿನ ಯಾವ ಕಾರ್ಯಕ್ಷೇತ್ರವಾದರೂ ಕೂಡಾ .. ತನ್ನದೇ ಆದ ಸಂತೃಪ್ತಿಯನ್ನು ಸ್ವಲ್ಪವಾದರೂ ನೀಡಬಲ್ಲದು.”
ಪ್ರಶ್ನೆ: ಕರ್ಮ ಹೇಗೆ ಮಾಡಬೇಕು? ಭಗವಂತ ಅಂದರೆ ಏನು? ಆತ್ಮ ಎಂದರೇನು?
ಪತ್ರೀಜಿ: ಕರ್ಮ ಹೇಗೆ ಮಾಡಬೇಕು ಎಂದು ಕಲಿಯಬೇಕಾದರೆ ಧ್ಯಾನಮಾಡಬೇಕು. ಭಗವಂತನು ಯಾರೋ ಗುರುತಿಸಬೇಕೆಂದರೆ ಧ್ಯಾನ ಮಾಡಬೇಕು. ಆತ್ಮ ಎನ್ನುವುದು ತಿಳಿದುಕೊಳ್ಳಬೇಕೆಂದರೆ ಧ್ಯಾನ ಮಾಡಬೇಕು.
ಪ್ರಶ್ನೆ: 2012ರ ನಂತರದ ಪರಿಸ್ಥಿತಿ ಏನು?!
ಪತ್ರೀಜಿ: 2012ರ ನಂತರ ಪ್ರಪಂಚದಲ್ಲಿ ಸಕಾರಾತ್ಮಕ ಆಲೋಚನೆಗಳು ಮಾಡುವವರ ಸಂಖ್ಯೆ ವಿಶೇಷವಾಗಿ ಹೆಚ್ಚಿದೆ. ೨೦೧೬ಕ್ಕೆಲ್ಲಾ ಅವರೆಲ್ಲಾ ಆಧ್ಯಾತ್ಮಿಕ ದೃಕ್ಪಥದಲ್ಲಿ ಪರಿಪಕ್ವವಾಗಿ .. ೨೦೨೦ಕ್ಕೆಲ್ಲಾ ಪ್ರಪಂಚದಲ್ಲಿನ ಎಲ್ಲಾ ಕಾರ್ಯಕ್ಷೇತ್ರಗಳು ಕೂಡಾ ಆಧ್ಯಾತ್ಮಿಕ ವಿಜ್ಞಾನ ಶಾಸ್ತ್ರಜ್ಞರಿಂದ ತುಂಬುತ್ತದೆ. ಇದೆಲ್ಲಾ ಕೂಡಾ ಇಂಟರ್ ಗೆಲಾಕ್ಟಿಕ್ ಫೆಡರೇಷನ್‌ನ ಸೌಜನ್ಯದೊಂದಿಗೆ ನಡೆಯುತ್ತದೆ!
ಪ್ರಶ್ನೆ: ಮೂರ್ತಿ ಪೂಜೆಗಳು ಏಕೆ ಮಾಡಬಾರದು?
ಪತ್ರೀಜಿ: ಹಿಂದೂ ಸಮಾಜದಲ್ಲಿನ ಅನೇಕಾನೇಕ ಮೂಢನಂಬಿಕೆಗಳ ಮೇಲೆ ಹೋರಾಡಿದ ದಯಾನಂದ ಸರಸ್ವತಿಯವರು ನೀಡಿದ “ಸತ್ಯಾರ್ಥ ಪ್ರಕಾಶ” ಎನ್ನುವ ಗ್ರಂಥರಾಜವನ್ನು ಅಧ್ಯಯನ ಮಾಡಬೇಕು! “ಮೂರ್ತಿ ಪೂಜೆ ಮೆಟ್ಟಿಲಲ್ಲಿ ಕಂದಕ” ಎಂದು ಅವರು ಅದರಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಮಹಮ್ಮದ್ ಪ್ರವಕ್ತ ಮೂರ್ತಿ ಪೂಜೆಗಳನ್ನು ತಿರಸ್ಕರಿಸಿದ್ದಾರೆ .. ಮತ್ತೆ ಬುದ್ಧನ ಬೋಧನೆಗಳ ಸಾರಾಂಶ ಕೂಡಾ ಅದೇ! “ದೇವರ ರಾಜ್ಯದಲ್ಲಿ ನೀನು ನಾನೂ ಒಂದೇ” ಎನ್ನುವ ಏಸುಕ್ರಿಸ್ತನ ಸಂದೇಶವನ್ನು ಕೇಳಿ .. ಎಚ್ಚೆತ್ತು .. ನೀವು ಯಾರೋ .. ಏನು ಮಾಡಬೇಕೋ ತಿಳಿದುಕೊಳ್ಳಬೇಕು!
ಪ್ರಶ್ನೆ: “ಬೇಕಾದವುಗಳೆಲ್ಲಾ ಕೂಡಾ ಪ್ರಕೃತಿಯೇ ನಮಗೆ ಹೊಂದಿಸುತ್ತಿರುವಾಗ .. ಇನ್ನು ನಾವು ಕಷ್ಟಪಟ್ಟು ಕೆಲಸಮಾಡುವ ಅಗತ್ಯವೇನಿದೆ?” ಎಂದು ನನ್ನ ಸ್ನೇಹಿತನು ಹೇಳುತ್ತಿದ್ದಾನೆ!
ಪತ್ರೀಜಿ: ಹಾಗೆ ಮೂರ್ಖನಂತೆ ಮಾತನಾಡುವ ಸ್ನೇಹಿತರ ಸಂಗವನ್ನು ತಕ್ಷಣ ಬಿಡಬೇಕು! ಪ್ರಕೃತಿಯಿಂದ ಯಾವುದು ಹೊಂದಬೇಕೆಂದರೂ ನಾವು ಅದಕ್ಕೆ ತಕ್ಕಷ್ಟು ಕಷ್ಟಪಡಬೇಕಾದದ್ದೇ! ಚಾರ್ಲ್ಸ್ ಡಾರ್ವಿನ್ ಮಹಾಶಯರು ನಮಗೆ ನೀಡಿರುವ ಜೀವವಿಕಾಸ ಸಿದ್ಧಾಂತಗಳಾದ “Struggle for Existence” ಮತ್ತು “Survival of the Fittest”ಗಳ ಕುರಿತು ಯಾವಾಗಲೂ ಕೇಳಿಲಿಲ್ಲವೇ?! ಪ್ರಕೃತಿ ಯಾವಾಗಲೂ ಸರಿಯಾದುದ್ದನ್ನೇ ಆಯ್ಕೆ ಮಾಡಿಕೊಳ್ಳುತ್ತದೆ .. ಮತ್ತೆ ಸರಿಯಲ್ಲದ್ದನ್ನು ನಿರ್ಮೂಲನೆ ಮಾಡುತ್ತದೆ.
ಪ್ರಶ್ನೆ: ಬುದ್ಧ ಜಾತಕರೀತ್ಯಾ ಯೋಗೀಶ್ವರನಾದನೋ? ಅಥವಾ ಸಾಧನೆಯಿಂದ ಆದನೋ?
ಪತ್ರೀಜಿ: ಗೌತಮಬುದ್ಧ ಕಳೆದ ಅನೇಕ ಜನ್ಮಗಳಿಂದ ಯೋಗೀಶ್ವರನೇ! ಸರಿ. ಆತನ ವಿಷಯ ಹಾಗಿರಲಿ .. ಗೌತಮ ಬುದ್ಧನಂತೆ ನಾನು ಯೋಗೀಶ್ವರನಾಗಲು ಏನು ಮಾಡಬೇಕು?, “ಅದಕ್ಕೆ ನಾನು ಎಷ್ಟು ಸಾಧನೆ ಮಾಡಬೇಕು?” ಎನ್ನುವುದೇ ಈಗ ನೀವು ಆಲೋಚಿಸಬೇಕಾಗಿರುವ ವಿಷಯ!
ಪ್ರಶ್ನೆ: ಸಾಧಕನಿಗೆ ಆಹಾರ ಪರಿಮಿತಿಗಳು ಹೇಗಿರಬೇಕು?!
ಪತ್ರೀಜಿ: ಕೇವಲ ಯೋಗ ಸಾಧಕನೇ ಅಲ್ಲ .. ಬುದ್ಧಿ ಇರುವ ಪ್ರತಿಯೊಬ್ಬರೂ ಶ್ರೇಷ್ಠವಾದ ಸಸ್ಯಾಹಾರವನ್ನು ಮಾತ್ರವೇ ತಿನ್ನಬೇಕು! ಅದು ಕೂಡಾ ಅಧಿಕವಾಗಿ ತಿಂದರೆ ದೇಹ ಬಲಿತು ಇಂದ್ರಿಯಗಳು ಮಂದವಾಗುತ್ತದೆ. ಆದ್ದರಿಂದ, ಕ್ರಮಕ್ರಮವಾಗಿ ದೇಹ ಆಹಾರವನ್ನು ಕಡಿಮೆಮಾಡುತ್ತಾ ಆತ್ಮದ ಆಹಾರವಾದ ಧ್ಯಾನ ಸಮಯವನ್ನು ಹೆಚ್ಚಿಸುತ್ತಾ ಹೋಗಬೇಕು.
ಪ್ರಶ್ನೆ: ” ‘ಶಿವನಿಗೆ ಇಬ್ಬರು ಹೆಂಡತಿಯರು’ ಎಂದು ಪುರಾಣಗಳಲ್ಲಿ ಕೇಳುತ್ತಿರುತ್ತೇವೆ ನಿಜವೇನಾ?!”
ಪತ್ರೀಜಿ: ನಿಜವೇ! ಶಿವನಿಗೆ ಇಬ್ಬರು ಹೆಂಡತಿಯರಿದ್ದಾರೆ! ಮೊದಲನೆಯ ಹೆಂಡತಿ “ಪಾರ್ವತಿ”ಯಾದರೆ .. ಎರಡನೆಯ ಹೆಂಡತಿ “ಆಕಾಶಗಂಗೆ”! ಪಾರ್ವತಿ ಎಂದರೆ ಪ್ರಾಪಂಚಿಕತೆ .. ಆಕಾಶಗಂಗೆ ಎಂದರೆ ಆಧ್ಯಾತ್ಮಿಕತೆ.
ಹೀಗೆ ಇಬ್ಬರು ಹೆಂಡತಿಯರಿಂದ ಕೂಡಿ ಶಿವನು .. ಕೈಲಾಸದಲ್ಲಿ ಸದಾ ಆನಂದತಾಂಡವ ಮಾಡುತ್ತಿರುತ್ತಾನೆ.
ಶಿವನ ಹಾಗೆ ಪ್ರತಿಯೊಬ್ಬರ ಜೀವನದಲ್ಲಿ ಕೂಡಾ ಮೊದಲನೆಯ ಹೆಂಡತಿಯಾದ “ಪ್ರಾಪಂಚಿಕತೆಯ” ಜೊತೆ.. ಎರಡನೆಯ ಹೆಂಡತಿಯಾದ “ಆಧ್ಯಾತ್ಮಿಕತೆ” ಸಹ ಇರಲೇಬೇಕು! ಆಗಲೇ ಅವರು ಶಿವನ ಹಾಗೆ ಪ್ರತಿಕ್ಷಣ ಆನಂದವಾಗಿರುತ್ತಾರೆ. ಕೇವಲ ಪ್ರಾಪಂಚಿಕತೆಯೊಂದನ್ನೇ ಅಥವಾ ಕೇವಲ ಆಧ್ಯಾತ್ಮಿಕತೆಯೊಂದನ್ನೇ ಅವಲಂಬಿಸಿ ಬದುಕುವ ಜೀವನದಲ್ಲಿ ಆನಂದ ಎನ್ನುವುದು 50% ಮಾತ್ರವೇ ಇರುತ್ತದೆ.
ಹಾಗಲ್ಲದೇ ನೂರಕ್ಕೆ ನೂರರಷ್ಟು ಆನಂದವಾಗಿ ಜೀವಿಸಬೇಕಾದರೆ ಹಗಲು – ಪ್ರಾಪಂಚಕವಾದ ಜೀವನ ವ್ಯಾಪಾರಗಳನ್ನು ಧರ್ಮಬದ್ಧವಾಗಿ ಸಾಗಿಸುತ್ತಲೇ .. ರಾತ್ರಿ ಆನಾಪಾನಸತಿ ಧ್ಯಾನ ಸಾಧನೆಯನ್ನು ತಪ್ಪದೇ ಮಾಡಬೇಕು. ಆಧ್ಯಾತ್ಮಿಕ ರಹಸ್ಯಗಳೆಲ್ಲವನ್ನು ಸ್ವತಃ ತಿಳಿದುಕೊಳ್ಳಬೇಕು. ಮತ್ತೆ ಸಂಸಾರದಲ್ಲಿರುತ್ತಲೇ ನಿರ್ವಾಣವನ್ನು ಹೊಂದಬೇಕು. ಇವೇ ಇಬ್ಬರು ಹೆಂಡತಿಯರ ಜೊತೆ ಕೂಡಿರುವ ಶಿವತತ್ತ್ವದಲ್ಲಿರುವ ಪರಮಾರ್ಥ!
ಪ್ರಶ್ನೆ: “ಇಂದಿನ ಸಮಾಜಕ್ಕೆ ಆತ್ಮಜ್ಞಾನ ಪ್ರಭುತ್ವದ ಅವಶ್ಯಕತೆ ಎಷ್ಟರ ಮಟ್ಟಿಗಿದೆ?”
ಪತ್ರೀಜಿ: ಪೂರ್ವಕಾಲದಲ್ಲಿ ರಾಜರಿಗೂ, ಮಹಾರಾಜರಿಗೂ ಆಸ್ಥಾನಗಳಲ್ಲಿ ರಾಜಗುರುಗಳು ಇರುತ್ತಿದ್ದರು. ಆಯಾಯ ರಾಜರಿಗೆ ಅವರು ಆಡಳಿತ ಕುರಿತಾಗಿ ಸಲಹೆಗಳನ್ನು ನೀಡುತ್ತಿದ್ದರು. ದಶರಥನಿಗೆ “ವಸಿಷ್ಠರು” .. ಪಾಂಡವರಿಗೆ “ಶ್ರೀಕೃಷ್ಣ” .. ಚಂದ್ರಗುಪ್ತನಿಗೆ “ಚಾಣಕ್ಯ” .. ಛತ್ರಪತಿ ಶಿವಾಜಿಗೆ .. “ಸಮರ್ಥ ರಾಮದಾಸ್” ಅಂತಹ ಗುರುಗಳ ಆಧ್ಯಾತ್ಮಿಕಶಾಸ್ತ್ರ ವಿಜ್ಞಾನದ ಹಿನ್ನೆಲೆ ಹೊಂದಿದ ಸಲಹೆಗಳಿಂದ ಅವರು ತಮ್ಮ ಪ್ರಜೆಗಳನ್ನು ಪರಿಪಾಲಿಸುತ್ತಿದ್ದರು! ಇನ್ನು ಶ್ರೀರಾಮ, ಶ್ರೀಕೃಷ್ಣ ಅಂತಹ ಸ್ವರೂಪರಾದ ರಾಜರ ಸಂಗತಿ ನಮಗೆಲ್ಲರಿಗೂ ಗೊತ್ತಿರುವ ವಿಷಯವೇ!”
ಹೀಗೆ ಆಗಿನ ಕಾಲದಲ್ಲೇ ಅಲ್ಲ .. ಇಂದು ಕೂಡಾ ರಾಜಗುರುಗಳು, ಧರ್ಮನೀತಿಜ್ಞರಾದ ಪಾಲಕರಿಲ್ಲದ ಆಡಳಿತವು ಚುಕ್ಕಾಣಿಯಿಲ್ಲದ ದೋಣಿಯ ಹಾಗೆ ಯಾವಾಗ ಮುಳುಗಿ ಹೋಗುತ್ತದೆಯೋ ಗೊತ್ತಿಲ್ಲ .. ಮತ್ತೆ ಆಧ್ಯಾತ್ಮಿಕತೆ ಇಲ್ಲದ ಪ್ರಾಪಂಚಿಕತೆ “ಗುರಿಯಿಲ್ಲದ ಪ್ರಯಾಣ”ದ ಹಾಗೆ ಅಸ್ತವ್ಯಸ್ತವಾಗುತ್ತಿರುತ್ತದೆ.
“‘ಹೊಟ್ಟೆ ತುಂಬಾ ಊಟ’ .. ‘ಮೈ ತುಂಬಾ ವಸ್ತ್ರ’ .. ‘ಇರಲು ಮನೆ’ ಎನ್ನುವುದೇ ಮುಖ್ಯ .. ಇವುಗಳನ್ನು ಪ್ರಜೆಗಳಿಗೆ ಕಲ್ಪಿಸಿಕೊಡುವುದೇ ಮಹಾ ಮಹಾ ಆದರ್ಶ” ಎಂದು ಸರ್ಕಾರಗಳು ಅಂದುಕೊಳ್ಳುವವರೆಗೂ ಮನುಷ್ಯನ ಶಾಶ್ವತ ತತ್ವವಾದ ಆತ್ಮತತ್ತ್ವ ಮರೆಯಾಗಿರುತ್ತದೆ. ಅಂತಹ ಪ್ರಜೆಗಳಿಂದ ಕೂಡಿರುವ ಸಮಾಜದಲ್ಲಿ ಅಶಾಂತಿ, ಅನಾರೋಗ್ಯ, ಅಸಂತೃಪ್ತಿ ಎನ್ನುವುದು ಶಾಶ್ವತವಾಗಿ ನೆಲೆಸಿರುತ್ತವೆ.
ಪ್ರಶ್ನೆ: “ಒಗ್ಗಟ್ಟಿನಿಂದ ಇದ್ದರೆ ಸುಖ” ಎನ್ನುವುದು ಹಿರಿಯರು ಹೇಳಿರುವ ಮಾತು. ಆದರೆ, ಯಾರ ಜೊತೆ ಒಗ್ಗಟ್ಟಿನಿಂದ ಇರಬೇಕು?”
ಪತ್ರೀಜಿ: ನಮ್ಮ ಸ್ವಂತ ಆತ್ಮದ ಜೊತೆ ಸದಾ ಒಂದಾಗಿರಬೇಕು .. ಆತ್ಮಜ್ಞಾನದ ಪರಮ ರಹಸ್ಯಗಳೊಡನೆ ಒಂದಾಗಿರಬೇಕು .. ಆತ್ಮಜ್ಞಾನ ಪಾರಾಯಣದಿಂದ ಒಂದಾಗಿರಬೇಕು .. ಪಿರಮಿಡ್ ಶಕ್ತಿಯ ಜೊತೆ ಒಂದಾಗಿರಬೇಕು.
ಪ್ರಶ್ನೆ: “ಹಣೆಯ ಮೇಲೆ ಹಚ್ಚಿಕೊಳ್ಳುವ ’ಉದ್ದನಾಮಗಳು’, ’ಅಡ್ಡನಾಮಗಳು’ ಎನ್ನುವುವು ಆಧ್ಯಾತ್ಮಿಕ ಚಿಹ್ನೆಗಳೆಂದು ಹೇಳಿಕೊಳ್ಳಬಹುದಾ?!”
ಪತ್ರೀಜಿ: ನಿಜಕ್ಕೂ “ನಾಮಗಳನ್ನು” ತೆಗೆದು ಹಾಗುವುದೇ ಆಧ್ಯಾತ್ಮಿಕತೆ!
“ನಾಮಗಳು” ಅಂದರೆ ಬಾಹ್ಯವಾಗಿ ಮುಖದ ಮೇಲೆ ಹಚ್ಚಿಕೊಳ್ಳುವ ಅಲಂಕಾರಗಳಲ್ಲ. ಅವು ‘ನನ್ನ’ ಶರೀರ, ‘ನನ್ನ’ ಮನೆ .. ‘ನನ್ನ’ ಮಕ್ಕಳು .. ‘ನನ್ನ’ ಹೊಲ .. ‘ನನ್ನ’ ವ್ಯಾಪಾರದ ಜೊತೆ ಜೊತೆ .. ‘ನನ್ನ’ ಜಾತಿ .. ‘ನನ್ನ’ ವರ್ಗ .. ‘ನನ್ನ’ ಕುಲ .. ‘ನನ್ನ’ ದೇಶ .. ಎನ್ನುತ್ತ ಮಾನವಕುಲಕ್ಕೆ ಹಿಡಿದ ಪೀಡೆಗಳು!
ಆಧ್ಯಾತ್ಮಿಕ ವಿಜ್ಞಾನಶಾಸ್ತ್ರ ನಮ್ಮನ್ನು ’ನನ್ನ’, ’ನನ್ನನ್ನು’ ಎನ್ನುವ ಪೀಡೆಗಳಿಂದ ಬೇರ್ಪಡಿಸಿ ’ನಮ್ಮ’ ಎನ್ನುವ ವಿಶಾಲ ಸೃಷ್ಟಿತತ್ವದಿಂದ ಅರಳುವ ಹಾಗೆ (ವಿಕಸನ ಹೊಂದುವ ಹಾಗೆ) ಮಾಡುತ್ತದೆ.
ಪ್ರಶ್ನೆ: ‘ಸಾವು’, ‘ನಿದ್ರೆ’, ‘ಧ್ಯಾನ’ .. ಇವುಗಳ ನಡುವೆ ಮುಖ್ಯವಾದ ವ್ಯತ್ಯಾಸವೇನು?
ಪತ್ರೀಜಿ: ‘ಸಾವು’, ‘ನಿದ್ರೆ’, ‘ಧ್ಯಾನ’ ಈ ಮೂರು ಸಹ ಮುಖ್ಯವಾಗಿ ನಾವು ನಮ್ಮ ಸ್ಥೂಲಶರೀರವನ್ನು ಶಾಶ್ವತವಾಗಿಯೊ .. ಅಶಾಶ್ವತವಾಗಿಯೊ .. ಪೂರ್ತಿಯಾಗಿಯೋ .. ಸ್ವಲ್ಪವೊ .. ತಿಳಿದೊ .. ತಿಳಿಯದೇನೊ ತ್ಯಜಿಸುವ ಪ್ರಕ್ರಿಯೆಗಳು.
‘ಸಾವಿನಲ್ಲಿ’ ನಾವು ನಮ್ಮ ಸ್ಥೂಲಶರೀರವನ್ನು ಶಾಶ್ವತವಾಗಿ ತ್ಯಜಿಸುತ್ತೇವೆ. ‘ನಿದ್ರೆ’ಯಲ್ಲಿ ನಾವು ನಮಗೆ ತಿಳಿಯದೆಯೇ ನಮ್ಮ ಸ್ಥೂಲಶರೀರದೊಳಗಿಂದ ಹೊರಬಂದು ಸೂಕ್ಷ್ಮಶರೀರಧಾರಿಗಳಾಗಿ ವಿಹರಿಸಿ ಕೆಲವು ಗಂಟೆಗಳನಂತರ ಪುನಃ ನಮಗೆ ಗೊತ್ತಿಲ್ಲದೆಯೇ ಮರಳಿ ಸ್ಥೂಲಶರೀರದೊಳಗೆ ಪ್ರವೇಶಿಸುತ್ತೇವೆ!
“ಧ್ಯಾನ”ದಲ್ಲಿ ನಾವು ಪೂರ್ತಿ ಅರಿವಿನಿಂದ ನಮ್ಮ ಸ್ಥೂಲಶರೀರವನ್ನು ತ್ಯಜಿಸಿ ಸೂಕ್ಷ್ಮಶರೀರದಿಂದ ಕೂಡಿ ಅನೇಕಾನೇಕ ಲೋಕಗಳಲ್ಲಿ ಸೂಕ್ಷ್ಮಶರೀರಯಾನಗಳನ್ನು ಮಾಡಿ .. ಅಲ್ಲಿಯ ಜ್ಞಾನದಿಂದ ಮರಳಿ ಅರಿವಿನಿಂದ ಪುನಃ ಸ್ಥೂಲಶರೀರದೊಳಗೆ ಪ್ರವೇಶಿಸುತ್ತೇವೆ!
ಅಷ್ಟೇಅಲ್ಲದೆ, .. ಧ್ಯಾನ ಮಾಡುವುದರಿಂದ ನಾವು ನಿದ್ರಾವಸ್ಥೆಯಲ್ಲಿ ಮಾಡುವ ಸ್ಥೂಲಶರೀರಯಾತ್ರೆಯ ಪರಮಾರ್ಥ ಕೂಡಾ ತಿಳಿದುಕೊಳ್ಳುತ್ತೇವೆ .. ಮತ್ತೆ ಮರಣಾನಂತರ ಜೀವನವನ್ನು ಕುರಿತು ಪೂರ್ತಿಯಾಗಿ ಅರ್ಥಮಾಡಿಕೊಳ್ಳಬಲ್ಲೆವು!
ಪ್ರಶ್ನೆ: ” ‘ರಾಜಕೀಯ’ ಅಂದರೆ ಜನರಿಗೆ ಸ್ವಲ್ಪವೂ ಸದಭಿಪ್ರಾಯ ಇಲ್ಲದ ಈ ದಿನಗಳಲ್ಲಿ ’ಆತ್ಮಜ್ಞಾನಿಗಳೇ ಪರಿಪಾಲಕರಾಗಬೇಕು’ ಎನ್ನುವ ದನಿಎತ್ತಿ ಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಅಂತರಾರ್ಥ?”
ಪತ್ರೀಜಿ: ಜೀವನದಲ್ಲಿ ನಾವು ಎಲ್ಲಾ ಬಗೆಯ ಆಟಗಳಾಡಬೇಕು; ಎಲ್ಲಾ ರೀತಿಯ ಕಲೆಗಳನ್ನು ಅಭ್ಯಸಿಸಬೇಕು, ಎಲ್ಲಾ ಬಗೆಯ ರುಚಿಗಳನ್ನೂ ಆಸ್ವಾದಿಸಬೇಕು; ಎಲ್ಲಾ ಬಗೆಯ ರಸಗಳನ್ನೂ ಹೀರಬೇಕು!
ಅನೇಕಾನೇಕ ಸಂಘಪರವಾದ ಕ್ರಿಯಾತಕ ಕಾರ್ಯಕಲಾಪಗಳಲ್ಲಿ “ರಾಜಕೀಯ” ಎನ್ನುವುದು ಕೂಡಾ ಅತ್ಯಂತ್ಯ ಪ್ರಮುಖವಾದದ್ದು. ಆದ್ದರಿಂದ, ಹೊಣೆಗಾರಿಕೆ ಇರುವ ಪ್ರತಿಯೊಬ್ಬ ಪೌರನಿಗೂ ಕೂಡಾ ರಾಜಕೀಯ ಪ್ರಜ್ಞೆ ಮತ್ತು “ರಾಜಕೀಯ ಅವಗಾಹನೆ” ಎನ್ನುವುದು ತುಂಬಾ ಮುಖ್ಯ! ಆತ್ಮಜ್ಞಾನ ಹೊಂದಿರುವ ಪೌರರಿಗೆ ಅವು ಇನ್ನೂ ಅತಿಮುಖ್ಯ!
ಆದ್ದರಿಂದ, ಧರ್ಮಬದ್ಧವಾದ ಸ್ವಧರ್ಮಾಚರಣೆ ಮಾಡುತ್ತಾ ವ್ಯಕ್ತಿಗತ ಕ್ಷೇಮವನ್ನು ಸಾಧಿಸಿ ತಮ್ಮನ್ನು ತಾವು ತೊಳೆದ ಮುತ್ತಿನಂತೆ ಮಾಡಿಕೊಂಡ ಆತ್ಮಜ್ಞಾನ ಹೊಂದುವುದು ಪೌರರ ಮೊದಲ ಕರ್ತವ್ಯ. ನಂತರದ ಅವರ ಕರ್ತವ್ಯವೇನೆಂದರೆ, ಸಂಘವನ್ನು ಕೂಡಾ ತೊಳೆದ ಮುತ್ತಿನಂತೆ ಮಾಡುವುದರ ಜೊತೆ .. ಸಾಂಘಿಕ ಕಾರ್ಯಕಲಾಪಗಳಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತಿರುವ ರಾಜಕೀಯ ಕ್ಷೇತ್ರವನ್ನು ಶುಚಿಗೊಳಿಸುವುದು!! “ಆತ್ಮನೋ ಮೋಕ್ಷಾಯ ಜಗದ್ಧಿತಾಯ ಚ” ಎಂದಿದ್ದಾರಲ್ಲವೆ ಜ್ಞಾನಿಗಳು! ಆತ್ಮಜ್ಞಾನ ಪಾರಾಯಣರಾದ ಪಿರಮಿಡ್ ಮಾಸ್ಟರ್‌ಗಳಿಗೆ ಧ್ಯಾನ-ಜ್ಞಾನ-ಸಸ್ಯಾಹಾರ ಪ್ರಚಾರಗಳಂತೇ “ಪಿರಮಿಡ್ ಪಾರ್ಟಿ ಪ್ರಚಾರ” ಸಹ ಒಂದು ನೂತನ ಆಟ .. ಒಂದು ನೂತನ ವಿದ್ಯಾಭ್ಯಾಸ .. ಒಂದು ನೂತನ ವಿಜ್ಞಾನ .. ಮತ್ತು ಒಂದು ನೂತನ ಜೀವನ ವಿಕಾಸ!
ಪ್ರಶ್ನೆ: ಧ್ಯಾನ ಸರಿಯಾಗಿ ಕುದುರುವುದಕ್ಕೆ ಏನಾದರು ’ಚಿಟಿಕೆಗಳು’ (ಟಿಪ್ಸ್) ಇದ್ದರೆ ಹೇಳಿ?
ಪತ್ರೀಜಿ: ಇದಕ್ಕೂ ಮುನ್ನಾ ಯಾವುದೇ ವಿಧವಾದ ಪೂಜೆಗಳು, ಮತಕೃತ್ಯಗಳು, ಶಾಸ್ತ್ರ ಚರ್ಚೆಗಳನ್ನು ಮಾಡದವರಿಗೆ ಧ್ಯಾನ ಸ್ವಲ್ಪ ಚೆನ್ನಾಗಿಯೇ ಕುದುರುತ್ತದೆ!
ಐವತ್ತು ವರ್ಷಗಳ ಕಾಲ ಮನಸ್ಸಿನ ಮೇಲೆ ನಿರಂತರವಾಗಿರುವ ಪುರಾತನ ಮುದ್ರೆಗಳು ಹೊಸದಾಗಿ ಧ್ಯಾನ ಅಭ್ಯಾಸಕ್ಕೆ ಅಡ್ಡಿಗಳಾಗುತ್ತವೆ. ಅವುಗಳನ್ನು ಅಳಸಿಕೊಳ್ಳುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ! ಐವತ್ತು ವರ್ಷ ವಯಸ್ಸಿನಲ್ಲಿ ಹೊಸ ಭಾಷೆ ಕಲಿತುಕೊಳ್ಳುವವರಿಗಿಂತ, ಅದಕ್ಕಿಂತ ಮುಂಚೆ ಬೇರೆ ಇತರ ಯಾವ ಮುದ್ರೆಗಳೂ ಮನಸ್ಸಿನ ಮೇಲೆ ಪ್ರಭಾವಬೀರದ ಚಿಕ್ಕ ಮಕ್ಕಳು ಎಷ್ಟೋ ಬೇಗನೆ ಕಲಿತುಕೊಳ್ಳುತ್ತಾರೆ. ಅದಕ್ಕಾಗಿ ಆಲೋಚನೆಗಳೆಲ್ಲ ಬಿಟ್ಟು ಸ್ವಲ್ಪ ಹೊತ್ತು ಮಾನಸಿಕವಾಗಿ ಚಿಕ್ಕ ಮಕ್ಕಳಾಗಿ ಬದಲಾಗಿ ಅತಿ ಸಹಜವಾದ ಸ್ಥಿತಿಯಲ್ಲಿ ಧ್ಯಾನನಾಭ್ಯಾಸವನ್ನು ಆರಂಭಿಸುವುದೇ .. ಒಳ್ಳೆಯ ಚಿಟಿಕೆ!
ಪ್ರಶ್ನೆ: ಓದುವುದು ಒಂದು ವ್ಯಾಪಾರವಾಗಿ ಬದಲಾಗುತ್ತಿರುವ ಈ ಸಮಯದಲ್ಲಿ .. ನಿಜಕ್ಕೂ ಎಂಥಹ ಓದನ್ನು ಓದಬೇಕೋ ಎಂದು ಅರ್ಥವಾಗುತ್ತಿಲ್ಲ?
ಪತ್ರೀಜಿ: ಓದು ಎನ್ನುವುದು ಪ್ರತಿಯೊಬ್ಬರಲ್ಲಿಯೂ ವಿಜ್ಞಾನವನ್ನೂ, ವಿಜ್ಞತೆಯನ್ನು ಮತ್ತೆ ವಿಚಕ್ಷಣ ಜ್ಞಾನವನ್ನು ಹೆಚ್ಚಿಸಿ ಸರಿಯಾದ ಜೀವಿತಶಾಸ್ತ್ರವನ್ನು ಬೋಧಿಸುತ್ತದೆ. ಅದಕ್ಕೆ ಈ ಲಕ್ಷಣಗಳನ್ನು ಹೊಂದಿರುವವರನ್ನು ನಿಜವಾದ ಓದು ಓದಿಕೊಂಡಿದ್ದಾರೆ ಅಂತ ಹೇಳುತ್ತಾರೆ!
ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿ, ಜೀಸಸ್ ಕ್ರೈಸ್ಟ್, ಶಿರಡಿ ಸಾಯಿಬಾಬಾ, ಮಹಮ್ಮದ್ ಪ್ರವಕ್ತರಂತಹ ಮಹಾನ್ ಯೋಗಿಗಳು ಪ್ರಾಪಂಚಿಕ ಓದುಗಳೇನೂ ಓದಿಲ್ಲ .. ಆದರೆ, ಓದಿ ಲೆಕ್ಕವಿಲ್ಲದಷ್ಟು ಡಿಗ್ರಿಗಳ ಹೆಸರನ್ನು ಹಚ್ಚಿಕೊಂಡ ಎಷ್ಟೋ ಜನ ಇವರ ಹತ್ತಿರ ನಿಜವಾದ ಜೀವಿತ ಶಾಸ್ತ್ರವನ್ನು ಕಲಿತುಕೊಳ್ಳುವುದಕ್ಕೆ ಬಂದವರೇ!
ಪ್ರಶ್ನೆ: ಧ್ಯಾನ ಮಾಡುತ್ತಿರುವ ನಾವು ಎಲ್ಲೆಲ್ಲೊ ಬೇರೆ ಲೋಕದಲ್ಲಿ ಇರುವವರನ್ನು ಭೇಟಿಯಾಗಬಹುದಾ?!
ಪತ್ರೀಜಿ: ತುಂಬ ಚೆನ್ನಾಗಿ ಭೇಟಿಯಾಗಬಹುದು!! ಎಲ್ಲೋ ಬೇರೆ ಲೋಕದಲ್ಲಿರುವ ಮಾಸ್ಟರ್ ನಮ್ಮ ಹತ್ತಿರ ಬರುವಾಗ, ಅವರನ್ನು ನೋಡುವ ಶಕ್ತಿ .. ಅವರ ಜೊತೆ ಮಾತನಾಡುವ ಶಕ್ತಿ ಮತ್ತೆ ಅವರಿಂದ ಸಂದೇಶಗಳನ್ನು ಕೂಡ ತೆಗೆದುಕೊಳ್ಳುವ ಶಕ್ತಿಯನ್ನು .. ನಾವು ಈ ಧ್ಯಾನದ ಮೂಲಕ ಮಾತ್ರವೇ ಪಡೆಯಲು ಸಾಧ್ಯವಾಗುತ್ತವೆ!
ಪ್ರಶ್ನೆ: ಶ್ವಾಸದ ಮೇಲೆಯೇ ಗಮನವಿಟ್ಟು ಧ್ಯಾನ ಏಕೆ ಮಾಡಬೇಕು?
ಪತ್ರೀಜಿ: ಶ್ವಾಸ ಎನ್ನುವುದು ಈ ದಿನಕ್ಕೆ, ಈ ಕ್ಷಣಕ್ಕೆ ಸಂಬಂಧಿಸಿದ ವರ್ತಮಾನ ಅದ್ಭುತ! ಅದು ನಿನ್ನೆಯ ಭೂತಕಾಲಕ್ಕೆ ಸೇರಿದ ಪೆಡಂಭೂತದ ಹಿಡಿತದಿಂದ ಮತ್ತು ನಾಳೆ ಎನ್ನುವ ಭವಿಷ್ಯತ್ತಿಗೆ ಸೇರಿದ ’ಗಾಳಿಗೂಡಿ’ನಿಂದ ನಮ್ಮನ್ನು ಸಂಪೂರ್ಣವಾಗಿ ಮುಕ್ತಗೊಳಿಸುತ್ತದೆ. ಅಲ್ಲದೆ, ಅರಿವು, ಎಚ್ಚರಿಕೆಗಳನ್ನು ನೀಡುತ್ತದೆ .. ವರ್ತಮಾನ ಕ್ಷಣದಲ್ಲಿರಿಸಿ ಅದ್ಭುತ ಆನಂದವನ್ನು ಕೊಟ್ಟು ನಮ್ಮನ್ನು ಒಂದು ಮಾಡುತ್ತದೆ. ಅದಕ್ಕಾಗಿಯೇ ಶ್ವಾಸದ ಮೇಲೆ ಗಮನವಿಟ್ಟು ಧ್ಯಾನ ಮಾಡಿ ಆತ್ಮ ವಿಜ್ಞಾನ ಬಯಸುವವರೆಲ್ಲರೂ ವರ್ತಮಾನ ಕ್ಷಣದಲ್ಲಿರುವ ಪ್ರತಿಯೊಂದು ಅನುಭವವನ್ನು ಕೂಡ ಶ್ರೇಷ್ಠ ಜ್ಞಾನವನ್ನಾಗಿ ಸ್ವೀಕರಿಸುತ್ತಾ ತಮ್ಮ ತಮ್ಮ ಆತ್ಮಗಳನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಾರೆ.
ಪ್ರಶ್ನೆ: ನಿಮ್ಮನ್ನು ಭೇಟಿ ಮಾಡಿದ ಪ್ರತಿಯೊಬ್ಬರಿಗೂ, ನೀವು ಎಷ್ಟೋ ಆತ್ಮೀಯರಾಗಿ ಕಾಣಿಸುವಿರಿ .. ಏಕೆ?!!
ಪತ್ರೀಜಿ: ಏಕೆಂದರೆ, ನಾನು ಎಲ್ಲರಿಗೂ ಕನ್ನಡಿಯಂತೆ ಕಾಣುತ್ತೇನೆ. ಅದಕ್ಕೆ! ಕನ್ನಡಿ ಎನ್ನುವುದು ಯಾವತ್ತು ಅವರ ಮುಂದೆ ಇರುವ ವ್ಯಕ್ತಿಯ ನಿಜರೂಪವನ್ನು ಪ್ರತಿಬಿಂಬಿಸುತ್ತದೆ! ಮತ್ತೆ ಪ್ರತಿಯೊಬ್ಬರಿಗೂ ಕೂಡ ಕನ್ನಡಿಯ ಮುಂದೆ ತಮನ್ನು ತಾವು ನೋಡಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ ಅಲ್ಲವೇ!
ನಾನು ಕೂಡ ಕನ್ನಡಿಯಂತೆ ಹತ್ತಿರ ಬಂದಿರುವವರ ಗುಣಗಣಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಾ ಇರುತ್ತೇನೆ. ಅದಕ್ಕೆ ನನ್ನ ಹತ್ತಿರ ಬಂದಿರುವ ಪ್ರತಿಯೊಬ್ಬರು ತಮ್ಮನ್ನು ತಾವು ಎಷ್ಟು ಪ್ರೀತಿಸುತ್ತಾರೋ .. ಹಾಗೆಯೇ ಕನ್ನಡಿಯಂತಿರುವ ನನ್ನನ್ನು ಕೂಡ ಅಷ್ಟೇ ಪ್ರೀತಿಸುತ್ತಾರೆ.
ಪ್ರಶ್ನೆ: ’ದೇವರು’ ಎಲ್ಲಿ ಇರುತ್ತಾರೆ?
ಪತ್ರೀಜಿ: ಸರ್ವಂ ಖಲ್ವಿದಂ ಬ್ರಹ್ಮಂ .. ಅಂದರೆ ಈ ಇರುವುದೆಲ್ಲ ದೈವವೇ .. ಅದಕ್ಕೆ ನನ್ನ ಕಣ್ಣಿಗೆ ಕಾಣಿಸುವ ಜೀವದೇವರೆಲ್ಲರನ್ನು ಆರಾಧಿಸುತ್ತೇನೆ; ಮತ್ತೆ ಪ್ರತಿಯೊಂದು ದೇವರ ಹತ್ತಿರ ಮಾತನಾಡುತ್ತಿರುತ್ತೇನೆ; ಎಲ್ಲರ ಹತ್ತಿರ ಕಲೆತು ಇರುವುದಕ್ಕೆ ಇಷ್ಟಪಡುತ್ತೇನೆ.
ಪ್ರಶ್ನೆ: ’ಆಧ್ಯಾತ್ಮಿಕತೆ’ ಎಂದರೆ?
ಪತ್ರೀಜಿ: ನಾವು ಪೂರ್ಣ ದೇವರುಗಳಿಂದ ಬೇರ್ಪಟ್ಟ ಅಂಶ ದೇವರುಗಳು .. ನಾವು ದೇವರಿಂದ ತಯಾರು ಮಾಡಲ್ಪಟ್ಟ ದೇವರುಗಳು ಎಂದು ಅರ್ಥಮಾಡಿಕೊಳ್ಳುವುದೇ ಆಧ್ಯಾತ್ಮಿಕತೆ. ಈ ಸತ್ಯವನ್ನು ತಿಳಿದುಕೊಳ್ಳುವುದಕ್ಕೆ ನಾವು ಮಾಡಬೇಕಾದ ದಿನನಿತ್ಯ ಕ್ರಿಯೆಗಳಲ್ಲಿ ಮುಖ್ಯವಾದದ್ದು ಧ್ಯಾನಾಭ್ಯಾಸ! ನೀರಿನಲ್ಲಿ ಮುಳುಗಿದರೆ – ಸ್ನಾನ .. ಶ್ವಾಸದಲ್ಲಿ ಮುಳುಗಿದರೆ – ಧ್ಯಾನ .. ಸತ್ಯದಲ್ಲಿ ಮುಳುಗಿದರೆ – ಜ್ಞಾನ!
ಪ್ರಶ್ನೆ: ನಮ್ಮಲ್ಲಿ ಶಕ್ತಿ ಎಷ್ಟು ವಿಧವಾಗಿ ಪ್ರಕಟಿತವಾಗುತ್ತದೆ?
ಪತ್ರೀಜಿ: ತಾಮಸಿಕ, ರಾಜಸಿಕ, ಸಾತ್ವಿಕ, ನಿರ್ಗುಣ .. ತಾಮಸಿಕ ಶಕ್ತಿ ಭೌತಿಕ ಶರೀರಕ್ಕೆ .. ರಾಜಸಿಕ ಶಕ್ತಿ ಮನಸ್ಸಿನಿಂದ .. ಸಾತ್ವಿಕ ಶಕ್ತಿ ಬುದ್ಧಿಯಿಂದ .. ಮತ್ತೆ ನಿರ್ಗುಣ ಶಕ್ತಿ ಆತ್ಮದ ಜೊತೆ ಕಲೆತು ಪ್ರಕಟಿತವಾಗುತ್ತದೆ.
ಪ್ರಶ್ನೆ: ಪ್ರಾಣಿಗಳ ಲೋಕಕ್ಕೆ ಕೂಡ ಪ್ರಕೃತಿ ಸೂತ್ರಗಳು ಅನ್ವಯಿಸುತ್ತದೆಯಾ?
ಪತ್ರೀಜಿ: ಖಚಿತವಾಗಿ ಅನ್ವಯಿಸುತ್ತದೆ! ಪಶು-ಪಕ್ಷಾದಿಗಳೆಲ್ಲ ಕೂಡಾ ಪ್ರಕೃತಿ ಸೂತ್ರಕ್ಕೆ ಬದ್ಧರಾಗಿ ಅತಿ ಸಹಜವಾಗಿ ಜೀವಿಸುತ್ತಾ, ಆನಂದದಿಂದ ಇರುತ್ತವೆ. ಅದಕ್ಕೆ ವಿಚಾರ ಪರವಾಗಿ ಇರುತ್ತಾ, ಸಾವನ್ನು, ಬಾಧೆಗಳನ್ನು ಸ್ಮರಿಸುತ್ತಾ, ಭಯಪಡುತ್ತಾ, ಮಾನಸಿಕ ಬಾಧೆಗೆ ಒಳಗಾಗುವ ಪ್ರಾಣಿಗಳನ್ನು, ಪಕ್ಷಿಗಳನ್ನು ನಾವು ಯಾವತ್ತೂ ನೋಡುವುದಿಲ್ಲ.
ಪ್ರಶ್ನೆ: ’ಜ್ಞಾನ’ವನ್ನು ಹೇಗೆ ಶೇಖರಿಸಿಕೊಳ್ಳಬೇಕು?
ಪತ್ರೀಜಿ: ಪ್ರತಿಯೊಂದು ಹೂವಿನಲ್ಲಿ ಅಷ್ಟೋ ಇಷ್ಟೋ ಮಕರಂದವಿದ್ದ ಹಾಗೇ .. ಪ್ರತಿಯೊಬ್ಬ ಮನುಷ್ಯನಲ್ಲೂ ಕೂಡ ಸ್ವಲ್ಪವಾದರೂ, ಅಧಿಕವಾಗಿಯೊ ಇಂಗಿತ ಜ್ಞಾನ (ಮೂಲಭೂತ ಜ್ಞಾನ) ಎನ್ನುವುದು ಇದ್ದೇ ಇರುತ್ತದೆ. ಅದಕ್ಕಾಗಿ ಪ್ರತಿ ಹೂವಿನಿಂದ ಮಕರಂದವನ್ನು ಸಂಗ್ರಹಿಸಿದಂತೆ ಪ್ರತಿಯೊಬ್ಬ ಮುಮುಕ್ಷುವು ಯಾರನ್ನೂ ಮರೆಯದೆ, ಕಡೆಗಣಿಸದೆ, ಪ್ರತಿಯೊಬ್ಬರಿಂದ ಇಂಗಿತ ಜ್ಞಾನವನ್ನು ಕ್ರಮಬದ್ಧವಾಗಿ ಸಂಗ್ರಹಿಸಬೇಕು. ಹಾಗೆ ಸಂಗ್ರಹಿಸಿದ ಜ್ಞಾನವನ್ನು ಆಚರಣೆಯಲ್ಲಿಟ್ಟು ತನ್ನ ಅನುಭವ ಜ್ಞಾನವನ್ನಾಗಿ ರೂಪಿಸಿಕೊಳ್ಳುತ್ತಾ .. ಅದನ್ನು ಮತ್ತೆ ಹತ್ತು ಜನರೊಂದಿಗೆ ಹಂಚಿಕೊಳ್ಳಬೇಕು; ಸರ್ವಕಾಲ, ಸರ್ವವ್ಯವಸ್ಥೆಯಿಂದಲೂ ಜ್ಞಾನ ಸಂಗ್ರಹಣಾ ಸೂತ್ರ” ಇದೇ.
ಹನಿ ಹನಿ ಸೇರಿ
ಸಮುದ್ರ ತಯಾರಾದ ಹಾಗೇ!
ಪ್ರಶ್ನೆ: “ ‘ಸನ್ಯಾಸ’ ಅಂದರೆ ಏನು? ಅದರಲ್ಲಿ ಎಷ್ಟು ವಿಧಗಳು?”
ಪತ್ರೀಜಿ:
“ಸಮ್ಯಕ್” .. ಅಂದರೆ “ಸರಿಯಾದ”
“ನ್ಯಾಸ” .. ಅಂದರೆ “ತ್ಯಜಿಸುವುದು”
ಸಮ್ಯಕ್ + ನ್ಯಾಸ = ಸನ್ಯಾಸ
“ಸನ್ಯಾಸ”ವೆಂದರೆ “ಸರಿಯಾದವುಗಳನ್ನು ತ್ಯಜಿಸುವುದು”
ಸನ್ಯಾಸ ಎನ್ನುವುದು ನಾಲ್ಕು ವಿಧಗಳಲ್ಲಿದೆ:
೧.ಮರ್ಕಟ ಸನ್ಯಾಸ: ಚಿಕ್ಕಚಿಕ್ಕ ಕಾರಣಗಳಿಗೆ ಸನ್ಯಾಸಿಗಳಾಗಿ ಬದಲಾಗಿ, ಇರುವ ಸಂಸಾರವನ್ನು ಬಿಡುವುದು .. ಮರ್ಕಟ ಸನ್ಯಾಸ. ಇದು “ಶೂದ್ರಸನ್ಯಾಸ” .. ಮತ್ತೆ ಇಂತಹವರು ಕೆಲವು ದಿನಗಳಲ್ಲೇ ಮತ್ತೊಂದು ಸಂಸಾರದಲ್ಲಿ ಬೀಳುತ್ತಾರೆ.
೨.ಆಪತ್ ಸನ್ಯಾಸ: ಈಗಲೋ .. ಸ್ವಲ್ಪ ಹೊತ್ತಿಗೋ .. ಸತ್ತು ಹೋಗುತ್ತೇವೆಂದು ತಿಳಿದು “ಸ್ವರ್ಗದಲ್ಲಿ ಸ್ಥಾನವನ್ನು ಹೊಂದಬೇಕು” ಎನ್ನುವ ಆಸೆಯಿಂದ ಸನ್ಯಾಸವನ್ನು ಸ್ವೀಕರಿಸುವುದು ಆಪತ್ ಸನ್ಯಾಸ; ಇದು “ವೈಶ್ಯ ಸನ್ಯಾಸ”.
೩.ವಿವಿಧಿಷ ಸನ್ಯಾಸ: ಸತ್ಯವನ್ನು ತಿಳಿದುಕೊಳ್ಳಬೇಕೆಂಬ ತೀವ್ರ ಆಕಾಂಕ್ಷೆಯಿಂದ ಮತ್ತೆ ಜ್ಞಾನದಾಹದೊಂದಿಗೆ ತಮಗಿರುವ ಪ್ರತಿಯೊಂದನ್ನು ತ್ಯಜಿಸಿ ತೆಗೆದುಕೊಳ್ಳುವ ಸನ್ಯಾಸವನ್ನು ವಿವಿಧಿಷ ಸನ್ಯಾಸ. ಮೇಧೋತತ್ವಕ್ಕೆ ಸೇರಿದ ವಿವೇಕಾನಂದ ಅಂತಹವರು ಇದಕ್ಕೆ ಉದಾಹರಣೆ; ಇದು “ಕ್ಷತ್ರಿಯ ಸನ್ಯಾಸ”
೪.ವಿದ್ವತ್ ಸನ್ಯಾಸ: ಸನ್ಯಾಸಗಳಲ್ಲಿ ಅತ್ಯುನ್ನತ ಆತ್ಮಸ್ಥಾಯಿಗೆ ಸೇರಿದ ಸನ್ಯಾಸವೇ ವಿದ್ವತ್ ಸನ್ಯಾಸ! ಬ್ರಹ್ಮಜ್ಞಾನಿಗಳಾದ ವಿದ್ವತ್ ಸನ್ಯಾಸಿಗಳು .. ತಮ್ಮ ಸಂಸಾರವನ್ನಲ್ಲದೇ ಸಂಸಾರದ ಬಗ್ಗೆ ತಮಗಿರುವ ಅಜ್ಞಾನವನ್ನು ಮಾತ್ರ ಬಿಟ್ಟುಬಿಡುತ್ತಾರೆ.
ಅವರು ತಮ್ಮ ದೈನಂದಿನ ಜೀವನದಲ್ಲಿ ಅನಗತ್ಯವಾದವುಗಳನ್ನು ಬಿಟ್ಟು ಅಗತ್ಯವಾದವುಗಳಿಗೆ ಪರಿಮಿತಗೊಳ್ಳುತ್ತಾ “ಸಂಸಾರದಲ್ಲೇ ನಿರ್ವಾಣ” ಹೊಂದುತ್ತಾ ಇರುತ್ತಾರೆ; ಇದು ಬ್ರಾಹ್ಮಣ ಸನ್ಯಾಸ. ಪಿರಮಿಡ್ ಮಾಸ್ಟರ್ಗಳದ್ದು ಇಂಥ ಸನ್ಯಾಸ!
ಪ್ರಶ್ನೆ: “ಧ್ಯಾನ ಕಲಿತುಕೊಳ್ಳಬೇಕೆಂದರೆ ಏನಾದರೂ ಬಂಡವಾಳ ಇಡಬೇಕೆ?”
ಪತ್ರೀಜಿ: ಇಡಬೇಕು! “ಬಂಡವಾಳ” ಅಂದರೆ “ಇನ್ಪುಟ್!” 24 ಗಂಟೆಗಳಲ್ಲಿ ಸ್ವಲ್ಪ ಸಮಯವನ್ನು ಪ್ರತ್ಯೇಕವಾಗಿ ಧ್ಯಾನಕ್ಕಾಗಿ ಬಂಡವಾಳವನ್ನಾಗಿ ಇಡಬೇಕು! ಒಂದು ವ್ಯಾಪಾರದಲ್ಲಿ ಇನ್ಪುಟ್ನ ಮೇರೆಗೆ ಲಾಭವಿರುವಂತೆ .. ನಾವು “ಸಮಯ” ಎನ್ನುವ “ಇನ್ಪುಟ್”ಅನ್ನು ಇಟ್ಟಷ್ಟು ನಮಗೆ “ಧ್ಯಾನ ಫಲ” ಎನ್ನುವ ಲಾಭವಿರುತ್ತದೆ.
ಪ್ರಶ್ನೆ: ‘ಶಾಸ್ತ್ರ’ ಅಂದರೆ ಏನು?
ಪತ್ರೀಜಿ: ಯಾವ ಕೆಲಸ ಮಾಡಿದರೆ, ಯಾವ ಫಲಿತಾಂಶ ಬರುತ್ತದೆಯೊ .. ಯಾವ ಕಾರಣವು ಯಾವ ಪರಿಣಾಮವಾಗಿ ಬದಲಾಗುವುದೋ .. ವಿಶದೀಕರಿಸುವುದೇ“ಶಾಸ್ತ್ರ”!
ಪ್ರಶ್ನೆ: “ನಿಮ್ಮ ಜೀವನವನ್ನು ಧ್ಯಾನಕ್ಕೆ ಅಂಕಿತಗೊಳಿಸಿದ್ದೀರಾ?”
ಪತ್ರೀಜಿ: ಕ್ರಿಕೆಟ್ ಆಟಕ್ಕೂ ಕೂಡಾ ಅಂಕಿತಗೊಳಿಸಿದ್ದೇನೆ .. ಮೊನ್ನೆ ನಡೆದ ಮ್ಯಾಚ್ ಎಲ್ಲಾ ನೋಡಿದೆನಲ್ಲ! ನನ್ನ ಜೀವನವನ್ನು TVಯಲ್ಲಿನ ಎಲ್ಲಾ ಛಾನೆಲ್ ನೋಡಲು ಅಂಕಿತ ಮಾಡಿದ್ದೇನೆ! ನನ್ನ ಜೀವಿತವನ್ನು ಪ್ರಪಂಚದ ಎಲ್ಲಾ ಜನರೊಂದಿಗಿನ ಸ್ನೇಹಕ್ಕಾಗಿ ಅಂಕಿತ ಮಾಡಿದ್ದೇನೆ!
ಪ್ರಶ್ನೆ: “ಜೀವನ ಒಂದು ಉತ್ಸವದಂತೆ ಯಾವಾಗ ಆಗುತ್ತದೆ?”
ಪತ್ರೀಜಿ: ಧ್ಯಾನ-ಜ್ಞಾನಾದಿಗಳಿಂದ ನಮಗೆ ಸೃಷ್ಟಿಯ ಮೂಲ ಸಿದ್ಧಾಂತಗಳೆಲ್ಲಾ ಅರ್ಥವಾದಾಗ ನಮಗೂ ಮತ್ತ್ತು ವಿಶ್ವದಲ್ಲಿರುವ ಅನೇಕಾನೇಕ ನಕ್ಷತ್ರಲೋಕವಾಸಿಗಳಿಗೂ ಮಧ್ಯೆಯಿರುವ ಸಂಬಂಧವನ್ನು ತಿಳಿದುಕೊಳ್ಳುವಂತಹ “ಆತ್ಮಜ್ಞಾನಪ್ರಕಾಶ” ನಮ್ಮದಾಗುತ್ತದೆ. “ಆತ್ಮಜ್ಞಾನಪ್ರಕಾಶವನ್ನು” ಹೊಂದಿದ ನಾವು ಯುಕ್ತಾಯುಕ್ತ ವಿಚಕ್ಷಣೆಯಿಂದ ಕೂಡಿರುತ್ತಾ ನಮ್ಮ ಜೀವನವನ್ನು ಪ್ರತಿಕ್ಷಣ ಒಂದು ಉತ್ಸವದಂತೆ ಜೀವಿಸುತ್ತೇವೆ!
ಪ್ರಶ್ನೆ: “ಈ ಮಧ್ಯೆ ತುಂಬಾ ಜನ ವೈದ್ಯರು .. ತಮ್ಮ ತಮ್ಮ ಪ್ರಿಸ್ಕ್ರಿಪ್ಷನ್ನಲ್ಲಿ ಔಷಧಿಗಳೊಂದಿಗೆ ಧ್ಯಾನವನ್ನು ಕೂಡಾ ಮಾಡಿ ಎಂದು ಬರೆಯುತ್ತಿದ್ದಾರೆ!?”
ಪತ್ರೀಜಿ: “ಸತ್ಯ” ಬೇಕೆಂದು ಯಾರು ಬಯಸದೇ ಇರುತ್ತಾರೆ? ಅವರು ‘ಡಾಕ್ಟರ್’ ಆಗಲಿ .. ‘ಪೇಷೆಂಟ್’ ಆಗಲಿ .. ‘ಗೃಹಿಣಿ’ಯಾಗಲಿ .. ‘ರಾಜ’ನಾಗಲಿ ..‘ಬಡವ’ನಾಗಲಿ .. ‘ಪಂಡಿತ’ನಾಗಲಿ .. ‘ಪಾಮರ’ನಾಗಲಿ.. ‘ಪ್ರಧಾನಮಂತ್ರಿ’ಯಾಗಲಿ .. ಅಥವಾ ‘ನೌಕರ’ನಾಗಲಿ .. ಯಾರ್ಯಾರಿಗೆ ಸತ್ಯ ಎಂಬುದು ಬೇಕೋ .. ಮತ್ತು ಯಾರ್ಯಾರು ಜೀವನವನ್ನು ಶಾಂತಿಯುತವಾಗಿ ಜೀವಿಸಬೇಕು ಎಂದು ಬಯಸುತ್ತಾರೋ .. ಅವರೆಲ್ಲಾ ಸಹ ಧ್ಯಾನ ಮಾಡಬೇಕಾದ್ದೇ! ಕ್ರಮವಾಗಿ ಸತ್ಯದಿಂದ ಜೀವಿಸುತ್ತಾ ಆತ್ಮಜ್ಞಾನ ಹೊಂದಬೇಕಾದ್ದೇ! ಧ್ಯಾನದಿಂದಲೇ ಆರೋಗ್ಯ ಎನ್ನುವುದು ಸರಿಹೋಗುತ್ತದೆ. ಆದ್ದರಿಂದ, ವೈದ್ಯರು ಕೂಡ ಔಷಧಿಗಳೊಂದಿಗೆ “ಧ್ಯಾನ ಮಾಡಿ”ಎಂದು ಪೇಷೆಂಟ್ಗಳಿಗೆ ಸೂಚಿಸುತ್ತಿರುವುದು ಆನಂದಪಡಬೇಕಾದ ವಿಷಯ.
ಪ್ರಶ್ನೆ: “ಧ್ಯಾನ ಮಾಡುವವರಿಗೆ ಸಂಸಾರ ಇರಬಹುದಾ?”
ಪತ್ರೀಜಿ: ಅಂದರೆ ಇರಬಾರದು ಎನ್ನುವುದು ನಿಮ್ಮ ಉದ್ದೇಶವೇ?! ಯೋಗೀಶ್ವರನಾದ ಕೃಷ್ಣನಿಗೆ ಎಂಟು ಜನ ಹೆಂಡತಿಯರೊಂದಿಗೆ ಕೂಡಿದ ದೊಡ್ಡ ಸಂಸಾರ ಇದೆ! ವಶಿಷ್ಠ ಮತ್ತು ಅರುಂಧತಿ ಯೋಗೀಶ್ವರರೇ ಅಲ್ಲವೇ! ಸುಖಮಯ ಸಂಸಾರದಲ್ಲೇ .. ನಿರ್ವಾಣಮಯ ಆತ್ಮವತ್ ಜೀವನ ಎನ್ನುವುದೇ “ಪಿರಮಿಡ್ ಸಿದ್ಧಾಂತ”.
ಪ್ರಶ್ನೆ: ಪಾಪಗಳನ್ನು ಮಾಡಿದವರೆಲ್ಲಾ ಮತ್ತೆ ಜನ್ಮ ತೆಗೆದುಕೊಂಡು ಕ್ರಿಮಿಕೀಟಗಳಾಗಿ ಹುಟ್ಟುತ್ತಾರೆಂದು ಪುರಾಣಗಳಲ್ಲಿ ಬರೆದಿದೆ. ಇದು ನಿಜವೇನಾ?
ಪತ್ರೀಜಿ: ಅವೆಲ್ಲಾ ಕೂಡಾ ಆಧ್ಯಾತ್ಮಿಕ ಪರವಾಗಿ ಕೆಲವರು ಬರೆದ ಕೆಲಸಕ್ಕೆ ಬರುವ ತುಂಟ ಬರಹಗಳು! ಮಾನವ ಜನ್ಮದ ನಂತರ ಮಾನವ ಜನ್ಮಗಳೇ ಇರುತ್ತವೆ! ಒಂದು ಮಾನವ ಜನ್ಮದಲ್ಲಿ ಕಲಿತ ಪಾಠಗಳನ್ನು ಮತ್ತೊಂದು ಮಾನವ ಜನ್ಮದಲ್ಲಿ ಸರಿಮಾಡಿಕೊಳ್ಳಲೇಬೇಕು!
ಪ್ರಶ್ನೆ: “ಸಮಾಜಕ್ಕಾಗಿ ನಮ್ಮ ಕರ್ತವ್ಯವೇನು?”
ಪತ್ರೀಜಿ: ಸಮಾಜದಲ್ಲಿ ಎಲ್ಲರೂ ಸುಖವಾಗಿ, ಸಂತೋಷವಾಗಿ ಮತ್ತು ಆರೋಗ್ಯವಾಗಿದ್ದರೇನೆ ನಾವೂ ಆನಂದವಾಗಿರುತ್ತೇವೆ! ಅದಕ್ಕಾಗಿ ನಮ್ಮ ಬಳಿಯಿರುವ ಸರ್ವಸಂಪನ್ಮೂಲಗಳನ್ನು ನಮಗೆ ಅಗತ್ಯವಾದಷ್ಟು ಮಾತ್ರ ಖರ್ಚುಮಾಡಿ ಉಳಿದವುಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು.
ಅನ್ನದಾನ, ವಸ್ತ್ರದಾನ, ವಿದ್ಯಾದಾನ ಅಂತಹ ದಾನಗಳೊಂದಿಗೆ “ಧ್ಯಾನದಾನ” ಮತ್ತೆ “ಜ್ಞಾನದಾನ” ಅಂತಹ ದಾನಗಳನ್ನು ನಮ್ಮ ಶಕ್ತಿಯ ಅನುಸಾರವಾಗಿ ಮಾಡಬೇಕು.
ಪ್ರಶ್ನೆ : ಕರ್ಮಯೋಗವನ್ನು ಕುರಿತು ನೀವು ಹೇಳಿರುವ ಉಪನ್ಯಾಸದಲ್ಲಿ ’ನಮ್ಮ ಆತ್ಮದ ಹಂತದ (ಉದಾ : ಶೈಶವಾತ್ಮ, ಬಾಲಾತ್ಮ, ಪ್ರೌಢಾತ್ಮ, ವಿಮುಕ್ತಾತ್ಮ, ಮತ್ತು ಪೂರ್ಣಾತ್ಮ) ಪ್ರಕಾರ ನಾವು ಕರ್ಮ ಮಾಡುತ್ತಿರಬೇಕು’ ಎಂದು ಕೇಳಿದ್ದೇನೆ. ನನ್ನ ಪ್ರಶ್ನೆ ಏನೆಂದರೆ ’ನಮ್ಮ ಆತ್ಮದ ಹಂತವನ್ನು ಹೇಗೆ ತಿಳಿದುಕೊಳ್ಳುವುದು?’ ಎಂದು…
ಪತ್ರೀಜಿ : ಧ್ಯಾನ ಮಾಡಲು ಪ್ರಾರಂಭಿಸಿದರೆ ಅವರವರ ಹಂತವನ್ನು ಅವರೇ ಕ್ರಮಕ್ರಮವಾಗಿ ಅರ್ಥಮಾಡಿಕೊಳ್ಳಬಲ್ಲಿರಿ. ನಿಮ್ಮ ಜೀವನದ ಧ್ಯೇಯ(ಗುರಿ) ಏನೋ ತಿಳಿಯದಿದ್ದರೆ ನೀವು ಒಂದು ಬಾಲಾತ್ಮ. ಧ್ಯಾನಕ್ಕೆ ಮುಂಚೆ ಪ್ರತಿಯೊಂದು ನೀವು ಯಾವ ಹಂತದಲ್ಲಿದ್ದರೂ ಸಹ ಮೊದಲು ನೀವು ಧ್ಯಾನವನ್ನು ಪ್ರಾರಂಭಿಸಿ. ವಿವರಗಳ ತಂಟೆಗೆ ಹೋಗಬೇಡಿ. ನಿಧಾನಕ್ಕೆ ನೀವು ಯಾವ ಮಟ್ಟದಲ್ಲಿದ್ದೀರೊ ನೀವೇ ತಿಳಿದುಕೊಳ್ಳುವಿರಿ. ನಂತರ ನಿಧಾನಕ್ಕೆ ಒಂದರ ಸಹಾಯದಿಂದ ಇನ್ನೊಂದು … ಹೀಗೆ ಎಲ್ಲಾ ಹಂತಗಳನ್ನು ಕೂಡಾ ದಾಟುವಿರಿ.
ಪ್ರಶ್ನೆ : ಆಧ್ಯಾತ್ಮಿಕ ಮಾರ್ಗದಲ್ಲಿ ‘ನಿಜವಾದ ಗುರು’ವನ್ನು ಹೇಗೆ ಗುರುತಿಸುವುದು?
ಪತ್ರೀಜಿ : ‘ಗುರು’ ಆಗದವನು .. ಗುರುವನ್ನು ಗುರುತಿಸುವುದು ಅಸಂಭವ. ಆಯಾ ಜಾತಿ ಪಕ್ಷಿಗಳು ಆ ಜಾತಿಯನ್ನೇ ಗುರುತಿಸಿ ಆ ಜಾತಿಯಲ್ಲೇ ಸಂಚರಿಸಿದಹಾಗೆ ‘ಗುರು’ವನ್ನು ಗುರುತಿಸಲಾದವನು ಮಾತ್ರವೇ ಗುರುವಿನ ಜೊತೆ ಕೂಡಿ ಸಂಚರಿಸುತ್ತಾನೆ.
ಗುರು ಆಗದವನಿಗೆ ಗುರುಗಳ ಗುರುತುಗಳನ್ನು ಹೇಳಿದರೂ ಲಾಭವಿಲ್ಲ. ಮತ್ತೆ ಗುರುವಾದವನಿಗೆ ಗುರುಗಳ ಗುರುತುಗಳನ್ನು ಹೇಳುವ ಅವಶ್ಯಕತೆ ಇಲ್ಲ.
ಆದ್ದರಿಂದ, ‘ನಿಜವಾದ ಗುರುಗಳನ್ನು ಗುರುತಿಸುವುದು ಹೇಗೆ?’ ಎಂದು ಯೋಚಿಸುವುದಕ್ಕಿಂತಾ ಮೊದಲು ‘ನಾನು ಗುರು ಹೇಗೆ ಆಗಬೇಕು?’ ಎನ್ನುವ ಪ್ರಯತ್ನವನ್ನು ಪ್ರಾರಂಭಿಸುವುದು ಮುಖ್ಯ.
ಪ್ರಶ್ನೆ : ಜೀವನವನ್ನು ನಾವು ಹೇಗೆ ‘ಸಾರ್ಥಕ’ ಮಾಡಿಕೊಳ್ಳಬೇಕು?
ಪತ್ರೀಜಿ : ‘ಸಾರ್ಥಕ’ ಅಂದರೆ ‘ಅರ್ಥದಿಂದ ಕೊಡಿಕೊಂಡಿದೆ’ ಎಂದು ಅರ್ಥ. ‘ಜೀವನ’ ಎಂದರೆ ಹುಟ್ಟುವುದರಿಂದ ಹಿಡಿದು ಮರಣಿಸುವವರೆಗೂ ಇರುವ ದೇಶಕಾಲ ಪರಿಸ್ಥಿತಿಗಳ ಪರಂಪರೆಯಲ್ಲಿ ಉಂಟಾದ ಸ್ಪಂದನೆ ಮತ್ತು ಪ್ರತಿಸ್ಪಂದನೆಗಳ ಪ್ರವಾಹ.
ಕೇವಲ ‘ಒಂದು ಗಂಟೆ ಕಾಲವೋ ಒಂದು ದಿನದಲ್ಲೋ .. ಒಂದು ಊರಿನಲ್ಲೋ .. ಅಥವಾ ಒಬ್ಬ ಮನುಷ್ಯನಿಂದಲೋ ಜೀವನವನ್ನು ಅರ್ಥಯುತವಾಗಿ ಜೀವಿಸಿದರೆ ಅದು ಕೇವಲ ಅಷ್ಟರವರೆಗೆ ಸಾರ್ಥಕತೆ ಅನಿಸಿಕೊಳ್ಳುತ್ತದೆ. ಹಾಗಲ್ಲದೇ, ಪ್ರತಿಯೊಂದು ದೇಶಕಾಲ ಪರಿಸ್ಥಿತಿಯಲ್ಲೂ .. ಕ್ಷಣಕ್ಷಣ ಸೃಜನಾತ್ಮಕವಾಗಿ, ಕ್ರಿಯಾಶೀಲವಾಗಿ, ಅರ್ಥಸಹಿತವಾಗಿ, ದುಃಖರಹಿತವಾಗಿ ಮತ್ತು ಎಲ್ಲರಿಗೂ ಶ್ರೇಯಸ್ಸನ್ನು ಉಂಟುಮಾಡುವ ರೀತಿಯಲ್ಲಿ ಇರುತ್ತಾ .. ಸತ್ಯಸ್ಥಿತರಾಗಿ, ಧರ್ಮಪ್ರವರ್ತಕರಾಗಿ .. ಅಂತಿಮ ಶ್ವಾಸದವರೆಗೂ ಜೀವಿಸಿದರೆ .. ಅದನ್ನೇ ‘ಜೀವನದ ಸಂಪೂರ್ಣ ಸಾರ್ಥಕತೆ’ ಎನ್ನುತ್ತೇವೆ.
ಜೀವನದಲ್ಲಿ ಇಂತಹ ಸಾರ್ಥಕತೆಯನ್ನು ಹೊಂದಬೇಕಾದರೆ .. ನಾವು ಬಿಡಬೇಕಾಗಿರುವುದು .. ‘ಹಿಂಸೆ’ ಮತ್ತು ಹಿಡಿದುಕೊಳ್ಳಬೇಕಾಗಿರುವುದು ‘ಹಂಸ’.
ಪ್ರಶ್ನೆ : ಧ್ಯಾನ ಮಾಡುವುದರಿಂದ ಮನೆಯಲ್ಲಿರುವ ವಾಸ್ತು ದೋಷಗಳು ಹೋಗುತ್ತದೆಯಾ?
ಪತ್ರೀಜಿ : ‘ಕೋತಿಯು ತಾನೂ ಕೆಟ್ಟು ವನವನ್ನೆಲ್ಲಾ ಕೆಡಸಿದಹಾಗೆ’ ಅಸಂಖ್ಯವಾದ ದೋಷಗಳು ನಮ್ಮಲ್ಲಿ ತುಂಬಿದ್ದು ನಾವು ಅಧ್ವಾನವಾಗಿ ಇದ್ದರೆ .. ನಮ್ಮ ಸುತ್ತಲಿನ ವಸ್ತು ಸಮುದಾಯದಲ್ಲಿ ಕೂಡಾ ಇಲ್ಲಸಲ್ಲದ ಅಧ್ವಾನಗಳು ಹುಟ್ಟಿಬರುತ್ತವೆ. ಆದ್ದರಿಂದ, ‘ವಾಸ್ತು ಹೆಸರಿನಲ್ಲಿ ನಮ್ಮ ಸುತ್ತಲಿನ ಪ್ರಪಂಚದಲ್ಲಿರುವ ದೋಷಗಳನ್ನು ಸರಿಮಾಡುವುದಲ್ಲಷ್ಟೇ ಅಲ್ಲದೆ .. ಮೊದಲು ನಮ್ಮಲ್ಲಿರುವ ದೋಷಗಳನ್ನು ಸರಿಮಾಡಿಕೊಳ್ಳಬೇಕು. ಇದಕ್ಕಾಗಿ ಸ್ವಂತ ಪರಿಶೀಲನಾ ಶಕ್ತಿಯನ್ನು ಹೊಂದಿರುವ ‘ಧ್ಯಾನ’ ಒಂದೇ ನಮಗೆ ಮಾರ್ಗ; ನಿರಂತರ ಧ್ಯಾನಸಾಧನೆಯ ಮೂಲಕ ನಮ್ಮಲ್ಲಿರುವ ದೋಷಗಳೆಲ್ಲಾ ದೂರವಾಗಿ .. ನಮ್ಮ ದೃಕ್ಪಥದಲ್ಲಿ ವಿಶೇಷವಾದ ಬದಲಾವಣೆ ಬಂದರೆ .. ನಮ್ಮ ಸುತ್ತಲಿನ ದೋಷಗಳೆಲ್ಲಾ ಕೂಡಾ ಅದಕ್ಕೆ ಅನುಗುಣವಾಗಿ ಸರಿಹೋಗುತ್ತವೆ.
ಪ್ರಶ್ನೆ : ಎಲ್ಲರೂ ‘ದೇವರು ಇದ್ದಾರೆ’ ಎನ್ನುತ್ತಾರೆ. ಆದರೇ .. ನಾವು ದೇವರನ್ನು ನೋಡುವುದು ಹೇಗೆ?
ಪತ್ರೀಜಿ : ಎಲ್ಲರೂ ದೇವರುಗಳೇ ನಾನು ಪ್ರತಿಯೊಬ್ಬ ದೇವರನ್ನು ನೋಡುತ್ತಿದ್ದೇನೆ. ಮತ್ತು, ನಾನು ಪ್ರತಿಯೊಬ್ಬ ದೇವರ ಜೊತೆ ಮಾತನಾಡುತ್ತಿದ್ದೇನೆ ‘ಸರ್ವಂ ಖಲ್ವಿದಂ ಬ್ರಹ್ಮ’ .. ಕಾಣಿಸುವುದೆಲ್ಲಾ ಆ ದೇವರೇ.
ಪ್ರಶ್ನೆ : ನಮಗೆ ಮತ್ತೊಂದು ಜನ್ಮ ಎನ್ನುವುದು ಇರುತ್ತದೆಯಾ?
ಪತ್ರೀಜಿ : ‘190′ ಲಕ್ಷ ಜನ್ಮಗಳಿರುತ್ತವೆ.. ಅಥವಾ 190 ಜನ್ಮಗಳೆ ಇರಬಹುದು. ಇದು ಅವರವರ ಆಯ್ಕೆ. ನಾನು ನಿಮ್ಮ ಊರಿಗೆ ಎಷ್ಟು ಸಲ ಬೇಕಾದರೂ ಬರಬಹುದು. ಬರದೇನೂ ಇರಬಹುದು. ಅದು ನಿನ್ನ ಆಯ್ಕೆ. ಜನ್ಮತಾಳುವುದು ಅಂದರೆ .. ನಿಮ್ಮ ಊರಿಗೆ ಬರುವಂತಹದೇ.
ಪ್ರಶ್ನೆ : ರಾಜಕೀಯ ಎಂದರೆ .. ಜನಗಳಿಗೆ ಸ್ವಲ್ಪವೂ ಸದಭಿಪ್ರಾಯವಿಲ್ಲದ ಈ ದಿನಗಳಲ್ಲಿ ‘ಧ್ಯಾನಿಗಳೇ ಪರಿಪಾಲಕರಾಗಬೇಕು’ ಎನ್ನುವ ಉದ್ದೇಶದಿಂದ ಒಂದು ರಾಜಕೀಯ ಪಾರ್ಟಿಯನ್ನು ಪ್ರಾರಂಭಿಸಿ .. ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಎಂದರೆ…?
ಪತ್ರೀಜಿ : ಜೀವನದಲ್ಲಿ ಎಲ್ಲಾ ಬಗೆಯ ಆಟಗಳನ್ನೂ ಆಡಬೇಕು .. ಎಲ್ಲಾ ಬಗೆಯ ಹಾಡುಗಳನ್ನೂ ಹಾಡಬೇಕು .. ಎಲ್ಲಾ ಬಗೆಯ ರುಚಿಗಳನ್ನು ಅನುಭವಿಸಬೇಕು. ಮತ್ತು ಎಲ್ಲಾ ಬಗೆಯ ರಸಗಳನ್ನು ಹೀರಬೇಕು.
ಸಮಾಜಪರವಾದ ಕ್ರಿಯಾತ್ಮಕ ಕಾರ್ಯಕಲಾಪಗಳಲ್ಲಿ ‘ರಾಜಕೀಯ’ ಎನ್ನುವುದು ಕೂಡಾ ಒಂದು ಮುಖ್ಯವಾದ ಕಾರ್ಯಕಲಾಪ. ಆದ್ದರಿಂದ, ಜವಾಬ್ದಾರಿ ಇರುವ ಪ್ರತಿಯೊಬ್ಬ ಪ್ರಜೆಗೆ ಸಹ ‘ರಾಜಕೀಯ ಪ್ರಜ್ಞೆ’ ಮತ್ತು ‘ರಾಜಕೀಯ ಅರಿವು’ ಎನ್ನುವುದು ತುಂಬಾ ಮುಖ್ಯ. ಸಾಮಾನ್ಯ ಪೌರರಿಗೆ ಇಷ್ಟು ರಾಜಕೀಯ ಚೈತನ್ಯದ ಅವಶ್ಯಕತೆ ಇರುವಾಗ .. ಆಧ್ಯಾತ್ಮಿಕ ಪೌರರಿಗೆ ಇದು ಇನ್ನೂ ಹೆಚ್ಚು ಅವಶ್ಯಕ.
‘ಆಧ್ಯಾತ್ಮಿಕ ಪೌರರು’ ಎಂದರೆ .. ತಮ್ಮ ಸ್ವಂತ ವ್ಯಕ್ತಿಗತ ಸಂಕ್ಷೇಮವನ್ನು ಪೂರ್ಣವಾಗಿ ಸಾಧಿಸಿ .. ತಮ್ಮ ಸ್ವಂತ ವ್ಯಕ್ತಿಗತ ಜೀವನವನ್ನು ಮುತ್ತಿನಹಾಗೆ ಹೊಳೆಯುತ್ತಿರುವಂತೆ ಮಾಡಿಕೊಂಡಿರುವವರು. ಅಂತಹವರ ಅನಂತರ ಭವಿಷ್ಯತ್ ಕಾರ್ಯಕ್ರಮ .. ಸಮಾಜವನ್ನು ಮುತ್ತಿನಹಾಗೆ ಹೊಳೆಯುವ ಹಾಗೆ ಮಾಡುವುದೇ ಅವರ ಮುಖ್ಯ ಕರ್ತವ್ಯವಾಗಿಸಿಕೊಳ್ಳುವುದು. ರಾಜಕೀಯಗಳಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸುತ್ತಾ ಅವುಗಳನ್ನು ಶುದ್ಧೀಕರಿಸುವುದು ಆಧ್ಯಾತ್ಮಿಕ ಪೌರನ ಪ್ರಧಾನ ಕರ್ತವ್ಯ.
ಪ್ರಶ್ನೆ : ನಿಮಗೆ ಮೊಂಡು ಧೈರ್ಯ ಜಾಸ್ತಿ?
ಪತ್ರೀಜಿ : ನನಗೆ ಮೊಂಡು ಧೈರ್ಯವೇನೂ ಇಲ್ಲ. ನಾನು ಕೇವಲ ಸತ್ಯವನ್ನು ಗುರುತಿಸಿದ್ದೇನೆ .. ಮತ್ತೆ ಇದು ‘ಸತ್ಯ’ ಎಂದು ಎಲ್ಲರಿಗೂ ಹೇಳುತ್ತಿದ್ದೇನೆ. ಸತ್ಯವನ್ನು ‘ಸತ್ಯ’ ಎಂದು ಹೇಳಲು .. ಐಸ್‌ಕ್ರೀಮ್ ಅನ್ನು .. ಐಸ್‌ಕೀಮ್ ಎಂದು ಹೇಳಲು ಮೊಂಡುಧೈರ್ಯದ ಅವಶ್ಯಕತೆ ಇಲ್ಲ .. ಅದರ ಕುರಿತು ಸಂಪೂರ್ಣ ವಾಸ್ತವ (ನಿಜಾಂಶ) ತಿಳಿದರೆ ಸಾಕು.
ನನಗೆ ‘ಸತ್ಯ’ ಯಾವುದು, ‘ಅಸತ್ಯ’ ಯಾವುದು ಎಂಬುದು ಖಂಡಿತವಾಗಿ ಗೊತ್ತಿದೆ .. ಆದ್ದರಿಂದಲೇ, ನಾನು ಅಷ್ಟು ಖಂಡಿತವಾಗಿ ‘ಸತ್ಯ’ವನ್ನು ಕುರಿತು ಹೇಳಲು ನನಗೆ ಸಾಧ್ಯವಾಗುತ್ತಿದೆ.
ಪ್ರಶ್ನೆ : ’ಪಿರಮಿಡ್ಸ್’, ’ಕ್ರಿಸ್ಟಲ್ಸ್’, ’ಕ್ರಾಪ್ ಸರ್ಕಲ್ಸ್’ .. ಮೇಲೆ ಆಧಾರಪಡುವುದು ಒಂದು ಮಾಸ್ಟರ್‌ಗೆ ಎಷ್ಟರ ಮಟ್ಟಿಗೆ ಆವಶ್ಯಕತೆ ಇದೆ ?
ಪತ್ರೀಜಿ : ಒಬ್ಬ ಮಾಸ್ಟರ್‌ಗೆ ಯಾವುದರ ಸಹಾಯದ ಅವಶ್ಯಕತೆಯೂ ಇಲ್ಲ. ಆದರೆ, ಒಬ್ಬ ಅಂಧನಿಗೆ (ಕುರುಡನಿಗೆ), ಒಬ್ಬ ಬಾಲನಿಗೆ, ಒಬ್ಬ ವೃದ್ಧನಿಗೆ, ಒಬ್ಬ ರೋಗಿಗೆ ಮಾತ್ರ ರಸ್ತೆ ದಾಟಲು ಇನ್ನೊಬ್ಬರ ಸಹಾಯದ ಅವಶ್ಯಕತೆ ಖಂಡಿತಾ ಇದೆ. ನಾವು ಆನಂದವಾಗಿಯೂ, ಆರೋಗ್ಯವಾಗಿಯೂ ಇರುವಾಗ ಯಾರ ಸಹಾಯ ಇಲ್ಲದೇನೆ ರಸ್ತೆ ದಾಟಬಲ್ಲೆವು.
ಪ್ರಾರಂಭದೆಸೆಯಲ್ಲಿರುವವರಿಗಾಗಲೀ, ಯಾವುದಾದರೂ ತೀವ್ರವಾದ ಸಮಸ್ಯೆಗಳು ಇರುವ ಮಾಸ್ಟರ್‌ಗಳಿಗಾಗಲೀ ನೀವು ಉದಾಹರಿಸಿದವೆಲ್ಲವೂ ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತವೆ. ಅಲ್ಲಿ .. ಆ ಸಮಯದಲ್ಲಿ .. ಅವೆಲ್ಲಾ ನಿಮಗೆ ಕೈಗೆ ಎಟುಕುವ ಹಾಗೆ ಇದ್ದರೂ ಕೂಡ .. ಅಜ್ಞಾನದಿಂದ ಉಪಯೋಗಿಸಿಕೊಳ್ಳದಿದ್ದರೆ ಅದು ಅವರ ’ಕರ್ಮ’. ಯಾವಾಗ ಸಹಾಯವನ್ನು ತೆಗೆದುಕೊಳ್ಳಬೇಕೋ, ಯಾವಾಗ ಸ್ವಂತ ಶಕ್ತಿಯನ್ನು ಉಪಯೋಗಿಸಿಕೊಳ್ಳಬೇಕೋ ಎನ್ನುವ ವಿವೇಚನಾ ಜ್ಞಾನ ಇರುವವನೇ ಮಾಸ್ಟರ್. ಯಾರಾದರೂ ರಸ್ತೆ ದಾಟಲು ಸಹಾಯಮಾಡಿದರೆ ಸಹಾಯ ಪಡೆದುಕೊಂಡು ಕೃತಜ್ಞತೆಗಳು ತಿಳಿಸಿದ ಹಾಗೆ .. ಪಿರಮಿಡ್ ಶಕ್ತಿ, ಸಾಮೂಹಿಕ ಧ್ಯಾನ ಶಕ್ತಿ, ಹುಣ್ಣಿಮೆ ಧ್ಯಾನ ಶಕ್ತಿ, ಪ್ರಕೃತಿ ಶಕ್ತಿ, ಕ್ರಿಸ್ಟಲ್ ಶಕ್ತಿ .. ಹೀಗೆ ಯಾವುದು ನಮಗೆ ಸಿಗುತ್ತದೊ ಅದರ ಸಹಾಯ ಪಡೆದುಕೊಳ್ಳುತ್ತಾ ಅವುಗಳ ಬಗ್ಗೆ ನಾವು ಎಷ್ಟಾದರೂ ’ಕೃತಜ್ಞತೆ’ಯಿಂದ ಇರಬೇಕು. ನೀವು ಒಬ್ಬ ’ಧ್ಯಾನಿ’ ಆದರೂ, ಆಗದೇ ಇದ್ದರೂ .. ಒಬ್ಬ ’ಮಾಸ್ಟರ್’ ಆದರೂ, ಆಗದೇ ಇದ್ದರೂ ಸಹಾಯವಾಗುವ ವಿಷಯಗಳು ಎಲ್ಲರಿಗೂ ಸಹಾಯವಾಗುತ್ತಲೇ ಇರುತ್ತವೆ.
ಪ್ರಶ್ನೆ : ’ಅಹಂ’ ಅಂದರೆ ಏನು ? ಅದನ್ನು ಯಾವ ರೀತಿಯಲ್ಲಿ ಗುರ್ತಿಸಬಹುದು ?
ಪತ್ರೀಜಿ : ನಾವೆಲ್ಲರೂ ತಿಳಿದುಕೊಳ್ಳಬೇಕಾದ ಒಂದು ಪರಮಸತ್ಯ ಏನೆಂದರೆ .. ಈ ಲೋಕದಲ್ಲಿ ’ಅಜ್ಞಾನ’ ಎನ್ನುವುದು ಇದೆಯೇ ಹೊರತು ಅಹಂಕಾರವೆನ್ನುವುದು ಇಲ್ಲವೇ ಇಲ್ಲ; ಒಳಮುಖದಲ್ಲಿ, ಅಂತರಂಗದಲ್ಲಿ ಎಲ್ಲರೂ ಸ್ವಚ್ಛತೆ ಮತ್ತು ಅಮಾಯಕತೆಯ ಮಿಳಿತವಾಗಿರುವವರೆ. ಆದರೆ, ಸಂಘ ಪ್ರಭಾವದಿಂದ ಮಾತ್ರವೇ ಅವರು ಸಮಾಜದಲ್ಲಿ ಅಹಂಕಾರ ಉಳ್ಳವರಾಗಿ ನಟಿಸುತ್ತಿದ್ದಾರೆ.
ನಮ್ಮ ಪಿರಮಿಡ್ ಸಿದ್ಧಾಂತಗಳಲ್ಲಿ ಅಹಂಕಾರವನ್ನು ನಾಶಮಾಡುದು ಎನ್ನುವ ಮಾತು ನಾವು ಎಂದಿಗೂ ಬಳಸುವುದಿಲ್ಲ. ಕಣ್ಣುಗಳನ್ನು ಮುಚ್ಚಿಕೊಂಡು ಶ್ವಾಸವನ್ನು ಗಮನಿಸುತ್ತಾ ಅಂತರ್ಮುಖರಾಗಿ .. ನಾವು ಏನಾದರೂ ಆಗಿರಿ, ನಾವು ಹೇಗಿದ್ದರೂ .. ಜೀವನ ನಮಗೆ ಕಲಿಸುವ ಅನುಭವಗಳನ್ನು ಅರಿವಿನಿಂದ ಗ್ರಹಿಸುತ್ತಾ ಇರುವುದೇ ಪರಮಭಾಗ್ಯ.
ಪ್ರಶ್ನೆ : ನನ್ನ ಗತ ಜೀವನದಲ್ಲಿ ಇರುವ ನೋವುಗಳನ್ನು ಮರೆಯುವುದು ಹೇಗೆ ?
ಪತ್ರೀಜಿ : ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದಲ್ಲವೇ.
ಪ್ರಶ್ನೆ : ಆತ್ಮದ ಮೂಲ, ಆತ್ಮದ ಗಮ್ಯ .. ಒಂದೇ ಆದರೆ ಅದಕ್ಕೆ ಅನೇಕ ಜನ್ಮಗಳು, ಅನೇಕ ಶರೀರಗಳೇಕೆ ?
ಪತ್ರೀಜಿ : ಪ್ರತಿಯೊಂದು ಜನ್ಮ ಆತ್ಮಕ್ಕೆ ಎಣಿಸಲಾರದಷ್ಟು ಅನುಭವಗಳನ್ನು ತಂದುಕೊಡುತ್ತದೆ. ಅದು ಒಳ್ಳೆಯದಾದ್ದರೂ, ಕೆಟ್ಟದ್ದಾದರೂ .. ಆ ಅನುಭವ ಎನ್ನುವುದು ಆತ್ಮವನ್ನು ಸುಸಂಪನ್ನವಾಗಿಸುತ್ತದೆ. ಕೊನೆಗೆ, ಜನ್ಮಜನ್ಮಗಳ ಅನುಭವಸಾರದಿಂದ ಹಣ್ಣಾಗಿದ್ದ ಆತ್ಮ ಸ್ಥಿತಪ್ರಜ್ಞಸ್ಥಿತಿಯಲ್ಲಿ ಇರುತ್ತಾ .. ನಿರ್ವಾಣ ಸ್ಥಿತಿಯಲ್ಲಿರುವ ಪೂರ್ಣತ್ವವನ್ನು ಹೊಂದುತ್ತದೆ. ಅದಕ್ಕಾಗಿಯೇ ಆತ್ಮ ಅನೇಕಾನೇಕ ಭೌತಿಕ ವ್ಯವಸ್ಥೆಗಳಲ್ಲಿ, ಅನೇಕ ಭೌತಿಕ ಶರೀರಗಳನ್ನು ಧರಿಸುತ್ತದೆ. ಆದ್ದರಿಂದ, ಆತ್ಮದ ಗಮ್ಯ ಗರಿಷ್ಠಮಟ್ಟದಲ್ಲಿರುವ ಅನುಭವಗಳೇ . ಆತ್ಮದ ಮೂಲ ಅನುಭವಗಳ ಶೂನ್ಯತೆ . ಒಂದು ಆತ್ಮ .. ಆತ್ಮವಾಗಿ ತನ್ನ ಆತ್ಮ ಜೀವನವನ್ನು ಪ್ರಾರಂಭಿಸಿದಾಗ ಅದು ನಿಜಕ್ಕೂ ಏನೂ ತಿಳಿಯದ ಒಂದು ವಿಧವಾದ ಅಮಾಯಕ, ಸ್ವಚ್ಛಸ್ಥಿತಿ.
ಪ್ರಶ್ನೆ : ಒಂದೊಂದು ಬಾರಿ ನಾನು, ನನಗೆ ಕೊಡಬೇಕಾಗಿರುವ ಪ್ರಾಧಾನ್ಯತೆ ಕೊಡುತ್ತಿಲ್ಲವೆಂದು ಒದ್ದಾಡುತ್ತಿರುತ್ತೇನೆ. ಅದು ನನಗೆ ನೋವನ್ನು ಉಂಟುಮಾಡುತ್ತದೆ. ಕೋಪ ತರಿಸುತ್ತದೆ. ಅಲ್ಲಿ ನೋವು ಆಗುವುದು ನನಗಲ್ಲವೆಂದು ಆತ್ಮಸ್ಥಿತಿಯಲ್ಲಿ ನಾನು ಅರ್ಥಮಾಡಿಕೊಳ್ಳಬಲ್ಲೆ .. ಆದರೂ, ಅದು ಇನ್ನೂ ನನ್ನನ್ನು ಬಾಧಿಸುತ್ತಲೇ ಇದೆ. ನಾನು ಈ ಅಹಂನು ದಾಟಿ ನನ್ನಲ್ಲಿ ಶಾಂತಿಯನ್ನೂ, ಸಮತ್ವವನ್ನೂ ಹೊಂದಿ ಕ್ಷಮೆ, ಕರುಣಾ ಗುಣಗಳನ್ನು ವ್ಯಕ್ತೀಕರಿಸಲಾಗುವ ಮಾರ್ಗವೇನಾದರೂ ಇದೆಯಾ ? ಅದು ಋಷಿಗಳಿಗೆ ಮಾತ್ರ ಸಾಧ್ಯವಾಗುವ ವಿಷಯವಾ ?
ಪತ್ರೀಜಿ : ದಯವಿಟ್ಟು ಕೆಲಸಕ್ಕೆ ಬಾರದ ಮಾತುಗಳನ್ನು ಪೂರ್ತಿಯಾಗಿ ಕಡಿಮೆ ಮಾಡಿಬಿಟ್ಟು ಇನ್ನೂ ಹೆಚ್ಚಾಗಿ ಧ್ಯಾನಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಪ್ರಶ್ನೆ : ಧ್ಯಾನ ಮಾಡಲು ಹತ್ತು ನಿಮಿಷ ಸಹ ಕೂಡಲು ಆಗುತ್ತಿಲ್ಲ. ಅದರ ಜೊತೆ ಅನೇಕಾನೇಕ ಧರ್ಮ ಸಂದೇಹಗಳು ಕೂಡಾ ಬರುತ್ತಿವೆ. ಇದಕ್ಕೆ ಏನು ಮಾಡಬೇಕೆಂದು ಹೇಳುತ್ತೀರಾ?
ಪತ್ರೀಜಿ : ಧ್ಯಾನದಿಂದ ಪ್ರಥಮವಾಗಿ “ಮನಸ್ಸು ಸಮಾಧಾನ ಸ್ಥಿತಿಗೆ” ಬರುತ್ತದೆ. ಒಬ್ಬ ಮಗುವನ್ನು ಮೊದಲನೆಯ ಬಾರಿ ಶಾಲೆಗೆ ಕರೆದುಕೊಂಡು ಹೋದಾಗ “ನಾನು ಹೋಗುವುದಿಲ್ಲ” ಎಂದು ಮೊಂಡುತನ ಮಾಡಿದ ಹಾಗೆ… ಮೊದಲನೆಯ ಬಾರಿ ಧ್ಯಾನದಲ್ಲಿ ಕೂಡಿಸಿದರೇ ಮನಸ್ಸು ಕೂಡಾ ಬೇಡವೇ ಬೇಡ ಎಂದು ಹಠ ಮೊಂಡುತನ ಮಾಡುತ್ತದೆ. “ಶಾಲೆಗೆ ಹೋಗುವುದಿಲ್ಲ” ಎಂದು ಹೇಳಿದ ಮಗುವನ್ನು “ಹೋಗಲಿ ಬಿಡು” ಎನ್ನುತ್ತಾ ಹಾಗೆಯೇ ಬಿಡದೇ ಅವರ ಉಜ್ವಲ ಭವಿಷ್ಯತ್ತಿಗಾಗಿ, ಹೇಗಾದರೂ ಸಮಾಧಾನ ಮಾಡಿ, ಪ್ರತಿದಿನ ಶಾಲೆಗೆ ಕರೆದುಕೊಂಡು ಹೋದ ಹಾಗೇ… ನಾವು ಸಹ ಮನಸ್ಸನ್ನು ಕ್ರಮತಪ್ಪದೇ ಧ್ಯಾನದಲ್ಲಿ ಕರೆದುಕೊಂಡು ಹೋಗಬೇಕು. ಮಗುವಿಗೆ ಶಾಲೆಗೆ ಹೋಗಲು ಇಷ್ಟವಿಲ್ಲವೆಂದು ಶಾಲೆಗೆ ಕಳಿಸದೆಯೇ ಇರುತ್ತೇವೆಯೆ… ಮನಸ್ಸು ಒಲ್ಲೆ ಎನ್ನುತ್ತದೆ ಎಂದು ಧ್ಯಾನಮಾಡುವುದನ್ನು ಬಿಡಲು ಸಾಧ್ಯವೆ? ಮುದ್ದು ಮಾಡಿಯೋ… ಹೆದರಿಸಿಯೋ… ಮಗುವನ್ನು ಶಾಲೆಗೆ ಕಳಿಸಿದ ಹಾಗೆ… ಮನಸ್ಸಿನ ಮೇಲೆ ಸಹ ಅಂಕುಶವನ್ನು ಇಟ್ಟುಕೊಂಡು ಧ್ಯಾನಕ್ಕೆ ಕುಳಿತುಕೊಳ್ಳಬೇಕು. ಪ್ರಾರಂಭದಲ್ಲಿ ಕೆಲವು ದಿನಗಳು ಮಗು ಅತ್ತು ಅತ್ತು… ಶಾಲೆಯಲ್ಲಿ ಮಲಗಿದ ಹಾಗೇ… ನಮ್ಮ ಮನಸ್ಸು ಸಹ ಧ್ಯಾನದಲ್ಲಿ ಕುಳಿತ ತಕ್ಷಣ ಸ್ವಲ್ಪ ಹೊತ್ತು ಆಲೋಚನೆಗಳೊಂದಿಗೆ ಹೊಡೆದಾಗಿ… ಕೊನೆಗೆ ನಿದ್ರಿಸುತ್ತದೆ.
ಮೊದಲನೆಯ ಹಂತದಲ್ಲಿ ಮನಸ್ಸು ಹಠಮಾಡುತ್ತದೆ… ಮತ್ತು ಎರಡನೆಯ ಹಂತದಲ್ಲಿ ಮಗು ಶಾಲೆಯ ಪರಿಸ್ಥಿತಿಗಳಿಗೆ ಹೊಂದಿಕೊಂಡು ನಿಧಾನವಾಗಿ ಪಾಠಗಳನ್ನು ಕಲೆತುಕೊಳ್ಳಲು ಪ್ರಾರಂಭಿಸುವ ಹಾಗೇ… ಮನಸ್ಸು ಸಹ ದಿವ್ಯಚಕ್ಷುವಾಗಿ ಬದಲಾಗಿ ನಿಧಾನವಾಗಿ ಧ್ಯಾನಾನುಭವಗಳಿಂದ ಆತ್ಮಕ್ಕೆ ಸಂಬಂಧಿಸಿದ ಪಾಠಗಳನ್ನು ಕಲಿತುಕೊಳ್ಳುತ್ತಿರುತ್ತದೆ.
ಮೊದಲನೆಯ ದಿನ, ಎರಡನೆಯದಿನ ಮತ್ತು ಮೂರನೆಯ ದಿನ. ಅಷ್ಟೇ ನಿಧಾನವಾಗಿ ಬದಲಾವಣೆ ಬರುತ್ತದೆ… ಮನಸ್ಸು ಕೂಡಾ ಹಾಯಾಗಿ, ಪ್ರಶಾಂತವಾಗಿ ಸಮಾಧಾನ ಸ್ಥಿತಿಗೆ ಬರುತ್ತದೆ. ಬೇಕಾದಷ್ಟು ಕಾಸ್ಮಿಕ್ ಎನರ್ಜಿ ಬರುತ್ತದೆ… ಮತ್ತು ಅದರಿಂದ ಶರೀರದಲ್ಲಿ ಎಲ್ಲೆಲ್ಲೋ (ಅನೇಕ ಸ್ಥಳಗಳಲ್ಲಿ), ಅನೇಕ ಜನ್ಮಗಳಿಂದ ಹೆಪ್ಪುಕಟ್ಟಿಕೊಂಡಿರುವ ಅನಾರೋಗ್ಯದ ಬ್ಲಾಕ್ಸ್ ಎಲ್ಲಾ ಶುಚಿಗೊಳ್ಳುತ್ತದೆ. ’ಬುದ್ಧಿ ಕುಶಲತೆ’ ಬೆಳೆಯುವುದರ ಜೊತೆ ಸಹನಾಶಕ್ತಿ ಕೂಡಾ ನಮಲ್ಲಿ ವಿಶೇಷ ರೀತಿಯಲ್ಲಿ ಅಭಿವೃದ್ಧಿ ಆಗುತ್ತದೆ.
ಈ ಭೂಮಿಯ ಮೇಲೆ ಜನ್ಮಿಸಿದನಂತರ ಯಾವ ವಿದ್ಯೆ ಕಲಿಯಬೇಕಾದರೂ, ವ್ಯಾಪಾರ ಮಾಡಬೇಕಾದರೂ… ಅಥವಾ ಸಂಸಾರ ಚೆನ್ನಾಗಿ ನಿರ್ವಹಿಸಬೇಕಾದರೂ ನಮಗೆ ತುಂಬಾ “ಸಹನಾಶಕ್ತಿ” ಬೇಕಾಗಿದೆ. ಅದು ನಮಗೆ ಧ್ಯಾನದಲ್ಲಿ ಕುಳಿತುಕೊಳ್ಳುವುದರಿಂದ ಮಾತ್ರವೇ ವಿಶೇಷವಾಗಿ ಸಿದ್ಧಿಸುತ್ತದೆ. “ಅಸಹನೆಯಿಂದ” ಮನುಷ್ಯ ಪತನ ಹೊಂದುವುದು ಮತ್ತು ಸಹನೆಯಿಂದ ಇರುವುದರಿಂದ ತುಂಬಾ ಪ್ರಗತಿ ಹೊಂದುವುದು ಎಂಬುವುದು ಚರಿತ್ರೆ ಹೇಳುತ್ತಿರುವ ಅನುಭವಪೂರ್ವಕ ಸತ್ಯ. ಆದ್ದರಿಂದ, ಧ್ಯಾನದಲ್ಲಿ ಅರ್ಥಗಂಟೆ ಅಥವಾ ಒಂದು ಗಂಟೆಯ ಕಾಲ ಸಹನೆಯಿಂದ ಕುಳಿತುಕೊಳ್ಳಲಾದರೆ, ನಮಗೆ ’ಆಸನಸಿದ್ಧಿ’ ಎಂಬುವುದು ಬರುತ್ತದೆ. ಆದರಿಂದ “ಓಹೋ. ನಾನು ಚೆನ್ನಾಗಿ ಯಾವ ಕೆಲಸವಾದರೂ ಮಾಡಬಲ್ಲೆ.” ಎಂಬುವ ಆತ್ಮವಿಶ್ವಾಸ ನಮ್ಮಲ್ಲಿ ಮೂಡುತ್ತದೆ.
ಆದ್ದರಿಂದ, ಮಗುವನ್ನು ಬಲವಂತವಾಗಿ ಆದರೂ ಸರಿ ಶಾಲೆಗೆ ಬಿಟ್ಟು ಬರುವ ಹಾಗೆ ನಮ್ಮ ಮನಸ್ಸನ್ನು ಕೂಡಾ “ಧ್ಯಾನ” ಎನ್ನುವ ಶಾಲೆಯಲ್ಲಿ ತಪ್ಪದೇ ದಿನ ನಿತ್ಯಾ ಬಿಡಬೇಕು, ಮತ್ತು, ಯಾರ ವಯಸ್ಸು ಎಷ್ಟು ಇರುತ್ತದೋ… ಅಷ್ಟು ನಿಮಿಷಗಳ ಕಾಲ ನಿರಂತರವಾಗಿ ತಪ್ಪದೇ ಧ್ಯಾನ ಮಾಡಬೇಕು.
ಧ್ಯಾನ ಮಾಡುತ್ತಿದ್ದರೆ… ಅನೇಕಾನೇಕ “ಧರ್ಮ ಸಂದೇಹಗಳು… ಬರುತ್ತಿರುತ್ತವೆ” ಎನ್ನುತ್ತಿರುವಿರಿ… ಆದರೆ, ಹೀಗೆ ಧರ್ಮ ಸಂದೇಹಗಳು ಬರುತ್ತಿರುವವರೆಲ್ಲಾ ತುಂಬಾ ಸೋಂಬೇರಿಗಳು. ಅವರು ಸರಿಯಾದ ಸಾಧನೆ ಮಾಡದೇ ಇರುವುದರಿಂದಲೇ ಅವರಿಗೆ ಹೀಗೆ ಬಗೆಬಗೆಯ ಧರ್ಮ ಸಂದೇಹಗಳು ಬರುತ್ತಿರುತ್ತವೆ.
ನಿಜಕ್ಕೂ ಅರ್ಪಣಾ ಭಾವದಿಂದ ಧ್ಯಾನಸಾಧನೆ ಮಾಡುವವರಿಗೆ ಯಾವ ರೀತಿಯ ಸಂದೇಹಗಳು ಬರುವುದಿಲ್ಲ. ಬಂದರೂ… ಅವರಿಗೆ ಪುನಃ ಧ್ಯಾನದಲ್ಲೇ ಅವುಗಳ ಉತ್ತರಗಳು ಕೂಡಾ ಲಭಿಸುತ್ತಿರುತ್ತವೆ. ನಿಜಕ್ಕೂ “ಸಾಧನೆ” ಎನ್ನುವುದು ಮಾಡದೇ ಇರಲಿಕ್ಕಾಗಿಯೇ… ಅವರಿಗೆ ಈ “ಧರ್ಮ ಸಂದೇಹಗಳು” ಎನ್ನುವುದು ಉಪಯೋಗವಾಗುತ್ತವೆ. “ಪ್ರಾಣಾಯಾಮ ಮಾಡಬೇಕಾ? ಹಠಯೋಗ ಮಾಡಬೇಕಾ? ಕಾಲುಗಳನ್ನು ಹೇಗೆ ಮಡಿಚಿಕೊಳ್ಳಬೇಕು? ಕೈಗಳನ್ನು ಹೇಗೆ ಜೋಡಿಸಿಕೊಳ್ಳಬೇಕು? ಮಯೂರಾಸನವೋ? ಮರ್ಕಟಾಸನವೋ? ವೃಷಭಾಸನವೋ?” ಎನ್ನುತ್ತಾ… ಒಂದೇ ಸಮ ಸಂದೇಹಗಳು ಬರುತ್ತಿರುತ್ತವೆ.
ಸರಿಯಾದ ಧ್ಯಾನಸಾಧನೆಯಲ್ಲಿ ’ನಾಸಿಕ’, ’ನಾಸಿಕಾಗ್ರ’, ’ನಾಭಿ’ ಎನ್ನುತ್ತಾ ನಿಜಕ್ಕೂ ಶರೀರದ ಬಗ್ಗೆ ಪ್ರಸ್ತಾವನೆ ಇಲ್ಲವೇ ಇಲ್ಲ. ಸೃಷ್ಟಿಯಲ್ಲಿರುವ ಯಾವ ಇತರ ಪ್ರಾಣಿ ಕೂಡಾ ಪ್ರಾಣಾಯಾಮ ಎನ್ನುತ್ತಾ ಪ್ರತ್ಯೇಕವಾಗಿ ಮಾಡದೇ ಇರುವಹಾಗೇ… ನಾವು ಸಹ ಯಾವುದೂ ಪ್ರತ್ಯೇಕವಾಗಿ ಮಾಡಬೇಕಾಗಿಲ್ಲ. ನಮ್ಮ ಪ್ರಕೃತಿ ಸಹಜವಾದ ಶ್ವಾಸ ಹೇಗಿದೆಯೋ… ಹಾಗೆ ಹಿತವಾಗಿ ಇರುವುದನ್ನು ಮಾತ್ರವೇ ನಾವು ಆಹ್ಲಾದಕರವಾಗಿ ಒಬ್ಬ ಸಾಕ್ಷಿಯಾಗಿ ಗಮನಿಸಬೇಕು. ಯಥಾರೀತಿಯಲ್ಲಿ ಒಂದುಗೂಡಿಸಬೇಕು.
ಸಾಧಾರಣವಾಗಿ ನಮ್ಮ ಮನಸ್ಸು ಸಹ ನಿನ್ನೆ ನಡೆದ ವಿಚಾರಗಳನ್ನು ನೆನೆಸಿಕೊಂಡು ಭಯಪಡುತ್ತಲೇ ಇರುತ್ತದೆ. ಆದರೆ, “ಶ್ವಾಸ” ಎನ್ನುವುದು ವರ್ತಮಾನ ಸ್ಥಿತಿ. ಆದ್ದರಿಂದ, ನಾವು ಶ್ವಾಸವನ್ನೇ ಗಮನಿಸುತ್ತಿದ್ದರೆ, ಈ ಭೂತ ಭವಿಷ್ಯತ್ ಕಾಲಗಳಿಗೆ ಸಂಬಂಧಿಸಿದ ಆಲೋಚನೆಗಳು ನಮ್ಮ ಮನಸ್ಸಿನಿಂದ ಮಾಯವಾಗಿ ಶೂನ್ಯಸ್ಥಿತಿಯಲ್ಲಿ ಇರುವ ವರ್ತಮಾನದಲ್ಲಿ ನಾವು ಸ್ಥಿರವಾಗಿರುತ್ತೇವೆ. ಆಗಲೇ “ಪ್ರೆಜೆಂಟ್” ಎನ್ನುವ ವರ್ತಮಾನ ನಮಗೆ ಒಂದು “ಬಹುಮಾನ”ವನ್ನು ತಪ್ಪದೇ ನೀಡುತ್ತದೆ.
ಪ್ರಶ್ನೆ : ’ಕಾಮನ್ ಸೆನ್ಸ್’ ಎಂದರೆ ಏನು?
ಪತ್ರೀಜಿ : ’ಬೇರೆಯವರ ವ್ಯಕ್ತಿಗತ ಜೀವನಗಳಲ್ಲಿ ಅನಾವಶ್ಯಕವಾಗಿ ಮೂಗುತೂರಿಸಿಕೊಂಡು ಹೋಗದೆ, ಅವರ ಪಾಡಿಗೆ ಅವರನ್ನು ಜೀವಿಸಲು ಬಿಡುತ್ತಾ … ನಮ್ಮನ್ನು ನಾವು ಬೇರೆಯವರ ಕೋನದಿಂದ ನೋಡಲಾಗುವುದೇ ’ಕಾಮನ್ ಸೆನ್ಸ್’
ಸಾಧಾರಣವಾಗಿ ಕೆಲವರು ಪ್ರತಿಯೊಬ್ಬರನ್ನೂ ಅನೇಕ ವಿಷಯಗಳಲ್ಲಿ ತಪ್ಪುಗಳನ್ನು ಹುಡುಕುತ್ತಾ, ಹೀಯಾಳಿಸುತ್ತಾ, ವಿಮರ್ಶಿಸುತ್ತಾ ಇರುತ್ತಾರೆ. ಹಾಗಲ್ಲದೇ, ’ಅವರ ಸ್ಥಾನದಲ್ಲಿ ನಾವೇ ಇದ್ದರೆ ನಾವು ಸಹ ಹಾಗೆ ಮಾಡಿರುತಿದ್ದವೇನೊ’ ಎನ್ನುವ ಇಂಗಿತ ಜ್ಞಾನವನ್ನು ಪಡೆದಿರುವುದನ್ನುವುದನ್ನೇ ’ಕಾಮನ್ ಸೆನ್ಸ್’ ಎನ್ನಲಾಗುತ್ತದೆ!
ಪ್ರಶ್ನೆ : ’ಲಾಜಿಕ್’ ಮತ್ತು ’ರೀಸನಿಂಗ್’ ಇವೆರಡರ ನಡುವೆ ಇರುವ ವ್ಯತ್ಯಾಸವೇನು ಸಾರ್?
ಪತ್ರೀಜಿ : ’ಲಾಜಿಕ್ ಎನ್ನುವುದು ಆಗಿನ ವರ್ತಮಾನ ಸಂಭಾಷಣೆಗೆ ಸಂಬಂಧಿಸಿದ್ದು. ಅಂದರೆ, ’ವಾಕ್ ಚಾತುರ್ಯ’ ಮತ್ತೂ ’ಸಂಭಾಷಣ ಶಕ್ತಿ’ ಪಡೆದಿರುವವರು ತಮ್ಮ ತಮ್ಮ ತಂತ್ರಗಳನ್ನು ಉಪಯೋಗಿಸಿ ಅಲ್ಲಿರುವ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ತಮಗೆ ಅನುಕೂಲವಾಗಿ ಮಾಡಿಕೊಳ್ಳುವುದೇ … ಲಾಜಿಕ್. ’ರೀಸನಿಂಗ್’ ಎನ್ನುವುದು ಮಾತ್ರ ಒಳ್ಳೆಯ ಶಾಸ್ತ್ರೀಯ ಪರಿಜ್ಞಾನ. ಮೂಲ ಘಟನೆಯನ್ನೆಲ್ಲಾ, ಎಲ್ಲರಿಗೂ, ಅದು ಇರುವ ಹಾಗೆ ತೋರಿಸುವ ’ಶಾಶ್ವತ ಸತ್ಯ’.
ಪ್ರಶ್ನೆ : ಸಾರ್, ನಿಮ್ಮನ್ನು ಎಲ್ಲರೂ ಹೊಗಳುತ್ತಿರುತ್ತಾರೆ. ಆದರೆ, ಕೆಲವರು ನಿಮ್ಮ ಅಭಿಮುಖವಾಗಿ ನಿಮ್ಮನ್ನು ಹೊಗಳುತ್ತಲೆ … ತೆರೆ ಹಿಂದೆ ಬೇರೆ ತರಹ ಮಾತನಾಡುತ್ತಾ ಇರುತ್ತಾರೆ. ಇಂತಹವರ ದ್ವಿಪಾತ್ರಾಭಿನಯನ ನಿಮಗೆ ತಿಳಿಯುತ್ತದಾ? ತಿಳಿದೂ ತಿಳಿದೂ ಮತ್ತೇ ಏತಕ್ಕಾಗಿ ಮೌನವಾಗಿ ಸಹಿಸಿಕೊಳ್ಳುತ್ತಿರುವಿರಿ?
ಪತ್ರೀಜಿ : ಖಂಡಿತವಾಗಿಯೂ ಗೊತ್ತಾಗುತ್ತದೆ. ನನ್ನೆದುರಿಗೆ ಬಂದವರ ಹೃದಯ ಶುದ್ಧತೆ, ಮನಸ್ಸಿನ ನಿರ್ಮಲತೆ ಮತ್ತು ನಿಜಾಯಿತೀ ನನಗೆ ಅವರ ಚಲನವಲನಗಳಿಂದಲೇ ತಿಳಿದುಬಿಡುತ್ತದೆ; ಅವರ ಅಮಾಯಕತ್ವಕ್ಕೂ, ಅವರ ಹುಚ್ಚುತನಕ್ಕೂ ನನಗೆ ನಗುಬರುತ್ತದೆ ಆದರೆ, ನಾನು ಮೌನವಾಗಿರಲು ಕಾರಣ: ನಾನು ಒಬ್ಬ ಆಧ್ಯಾತ್ಮಿಕ ಶಾಸ್ತ್ರಜ್ಞ ಮತ್ತೂ ಬ್ರಹ್ಮಜ್ಞಾನಿ … ಆದ್ದರಿಂದ, ಒಬ್ಬ ವೈದ್ಯನು ಒಬ್ಬ ರೋಗಿಯ ಶರೀರದಲ್ಲಿ ಹಾಳಾದ ಭಾಗಗಳನ್ನು ಹೇಗೆ ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ಮಾತ್ರ ತೆಗೆದು ಹಾಕಿ ರೋಗಿಯನ್ನು ಕಾಪಾಡುತ್ತಾನೋ … ಹಾಗೆಯೇ, ನಾನು ಸಹ ಸಮಯ ಸಂದರ್ಭ ಬಂದಾಗ ನನ್ನ ನೋಟದಿಂದ, ಮಾತುಗಳಿಂದ ಅಥವಾ ನನ್ನ ಕ್ರಿಯೆಗಳಿಂದ ಅವರಲ್ಲಿರುವ ಅಜ್ಞಾನವನ್ನು ದೂರಮಾಡಿ ಅವರನ್ನು ಸರಿಮಾಡುತ್ತಿರುತ್ತೇನೆ.
ಪ್ರಶ್ನೆ : ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀ ಮೂವ್‌ಮೆಂಟ್‌ನಲ್ಲಿ ಸ್ವಲ್ಪಕಾಲ ಇದ್ದು ಯಾವುದೋ ಕಾರಣಗಳಿಂದ ಸೊಸೈಟೀ ಬಿಟ್ಟುಹೋಗಿ … ಪುನಃ ಇದೇ ಗೂಡಿಗೆ ಬಂದು ಸೇರುವವರ ಕುರಿತು?
ಪತ್ರೀಜಿ : ಇಲ್ಲಿ ಇರುವಷ್ಟು ಕಾಲ ಅವರು ಪಿರಮಿಡ್ ಸಂಸ್ಥೆಗೆ ಮಾಡಿರುವ ಸೇವೆ ಅದರಿಂದ ಅವರು ನೀಡಿರುವಂತಹ ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ ಉಪಕಾರಗಳನ್ನು ನಾನು ತಪ್ಪದೇ ನೆನೆಪಿನಲ್ಲಿಟ್ಟುಕೊಳ್ಳುತ್ತೇನೆ. ಆದರೆ, ’ಅವರು ನನ್ನ ಜೊತೆ ಕಲೆತು ಇದ್ದಾರಾ ಇಲ್ಲವಾ’ ಎನ್ನುವುದರಕ್ಕಿಂತ, ಬೇರೆ ಇದ್ದರೂ ಸಹ ಅವರು ವಿಶ್ವಕಲ್ಯಾಣ ನಿರತರಾಗಿದ್ದಾರೆ. ಎಂದು ತಿಳಿದಾಗ ಇನ್ನೂ ಹೆಚ್ಚಾಗಿ ಸಂತೋಷಿಸುತ್ತೇನೆ. ಪುನಃ ಮರಳಿ ಬಂದಾಗ ಮಾತ್ರ ಅದಕ್ಕೂ ಮುಂಚೆ ಇರುವ ಸ್ಥಾನವನ್ನು ಮರಳಿ ಹೊಂದಲು ಅವರು ಕಾದಿರಬೇಕಾಗುತ್ತದೆ. ಏಕೆಂದರೆ … ಆಗಲೇ ’ಕ್ಯೂ’ನಲ್ಲಿ ಹಿಂದೆ ಇರುವ ಸಾವಿರಾರು ಜನ ಮುಂದಕ್ಕೆ ಬಂದು ಬಿಡುತ್ತಾರೆ. ಆದ್ದರಿಂದ ಅಂತಹ ಪರಿಸ್ಥಿತಿ ತಪ್ಪಿದ್ದಲ್ಲ. ಇದು ಪ್ರಕೃತಿ ಏರ್ಪಡಿಸಿದ ನಿಯಮವೇ.
ಪ್ರಶ್ನೆ : ಲೋಕ ಕಲ್ಯಾಣವನ್ನು ಕುರಿತು ಚಿತ್ತಶುದ್ಧಿಯಿಂದ ಆಧ್ಯಾತ್ಮಿಕ ಕಾರ್ಯಕ್ರಮಗಳು ಮಾಡುತ್ತಿದ್ದರೆ ವಿಶ್ವಾತ್ಮ ನಮಗೆ … ಕುಟುಂಬಪರವಾಗಿ ಸಹಾಯ ಮಾಡುತ್ತದೆಯಾ?
ಪತ್ರೀಜಿ : ನಿಸ್ಸಂದೇಹವಾಗಿ ಮಾಡುತ್ತದೆ. ನಾವೆಲ್ಲರೂ ಸಹ ಆತ್ಮಸ್ವರೂಪರೆ. ಆದ್ದರಿಂದ … ವಿಶ್ವಕಲ್ಯಾಣಕ್ಕಾಗಿ ನಾವು ಕೆಲಸಗಳನ್ನು ಕೈಹಿಡಿದಾಗ … ಮೂಲ ವಿರಾಟ್ ಸ್ವರೂಪವಾದ ನಮ್ಮ ವಿಶ್ವಾತ್ಮ ನಮ್ಮನ್ನು ಪ್ರಕೃತಿಯ ಜೊತೆ ಅನುಸಂಧಾನ ಮಾಡುತ್ತಾ ನಮ್ಮ ದೇಹಕ್ಕೂ, ಮನಸ್ಸಿಗೂ, ಬುದ್ಧಿಗೂ ಮತ್ತು ಆತ್ಮಗೂ ಎಣೆ ಇಲ್ಲದ … ಅಂದರೆ, ನಮಗೆ ನಾವು ಕೂಡಾ ಸ್ವಯಂ ಆಗಿ ಮಾಡಿಕೊಳ್ಳಲಾರದಷ್ಟು … ಒಳ್ಳೆಯದನ್ನು ಮಾಡುತ್ತಿರುತ್ತದೆ ಮತ್ತು ನಮ್ಮನ್ನು ಸದಾ ಆನಂದ ಸ್ವರೂಪವಾಗಿ ಸ್ಥಿರವಾಗಿಡುತ್ತದೆ.
ಪ್ರಶ್ನೆ : ಮಾಂಸಾಹಾರವನ್ನು ತಿಂದರೆ … ಘೋರವಾದ ಕಷ್ಟಗಳು ತಪ್ಪುವುದಿಲ್ಲವೆಂದು ಹೇಳುತ್ತಿದ್ದೀರ! ಮಾಂಸವನ್ನು ತಿನ್ನುವವರ ಮನೆಯಲ್ಲಿ ಹುಟ್ಟಿರುವ ಒಂದು ಚಿಕ್ಕಮಗುವಿಗೆ ತಂದೆ ತಾಯಿಯರೇ ಅದನ್ನು ಅಭ್ಯಾಸ ಮಾಡಿಸಿ ತಿನ್ನಿಸುತ್ತಾರೆ. ಆ ಪುಟ್ಟ ಮಗುವಿಗೆ ಹೀಗೆ ಶಿಕ್ಷೆ ಬೀಳುವುದು ನ್ಯಾಯವಾ?
ಪತ್ರೀಜಿ : ನ್ಯಾಯವಲ್ಲ, ಅದಕ್ಕೆ ಚಿಕ್ಕ ಮಗುವಿಗೆ ಬೀಳಬೇಕಾದ ಶಿಕ್ಷೆ ಸಹ ಹಡದವರಿಗೆ ಬದಲೀ ಆಗಿ… ಇನ್ನೂ ಬಲವಾದ ಪಾಪಕರ್ಮವಾಗಿ ರೂಪಗೊಳ್ಳುತ್ತದೆ. ಆದರೆ, ಆ ಪುಟ್ಟಮಗು ಬೆಳೆದು ದೊಡ್ಡವನಾದನಂತರ … ’ಅದು ಪಾಪದ ಕೂಳು’ ಎನ್ನುವ ಜ್ಞಾನವನ್ನು ಪಡೆದೂ ಸಹ ಅದನ್ನೇ ತಿಂದರೆ ಮಾತ್ರ ಅದು ಆತನ ಸ್ವಂತ ಪಾಪಕರ್ಮವಾಗಿ ರೂಪುಗೊಳ್ಳುತ್ತದೆ. ಅದಕ್ಕೆ ತಂದೆ-ತಾಯಿಯರು ಚಿಕ್ಕಂದಿನಿಂದಲೇ ಮಕ್ಕಳಿಗೆ ಆತ್ಮಜ್ಞಾನವನ್ನೂ ಸಸ್ಯಾಹಾರದ ಪ್ರಾಮುಖ್ಯತೆಯನ್ನೂ ಬೋಧಿಸಿ … ಅವರನ್ನು ಪಾಪಕೂಪದಲ್ಲಿ ಬೀಳದೇ ಇರುವಹಾಗೆ ಕಾಪಾಡಬೇಕು. ಅದೇ ಅವರ ಹೊಣೆಗಾರಿಕೆ.
ಪ್ರಶ್ನೆ : ಸೇತ್ ಮಹಾಶಯರ ಪುಸ್ತಕಗಳು ಓದುತ್ತಿದ್ದರೆ, ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗುತ್ತಿಲ್ಲ?
ಪತ್ರೀಜಿ : ಕಳೆದ ಮೂವತ್ತೂ ವರ್ಷಗಳಿಂದ ಸಾವಿರಾರು ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳನ್ನು ಸುಲಭವಾಗಿ ಜೀರ್ಣಮಾಡಿಕೊಂಡಿರುವ ನನಗೇ ಸೇತ್ ಮಹಾಶಯನ ಆಂತರ್ಯ ಪೂರ್ತಿಪ್ರಮಾಣದಲ್ಲಿ ತಕ್ಷಣ ಅರ್ಥವಾಗಲಿಲ್ಲ! ಅಂತಹ ಕ್ಲಿಷ್ಟಕರವಾದ ಮಹಾತ್ಮನನ್ನು ಕುರಿತು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ.
ಪ್ರಶ್ನೆ : ಅದೇನು ಸಾರ್? ಹಾಗೆ ಹೇಳಿಬಿಟ್ಟಿದ್ದೀರ
ಪತ್ರೀಜಿ : ಹೌದು … ’ಸೇತ್’ನನ್ನು ಅಧ್ಯಯನಮಾಡಿ. ಅದರಲ್ಲಿ ಯಾವಯಾವ ಅಂಶಗಳು ಅರ್ಥವಾಗುತ್ತವೆಯೊ … ಅವುಗಳನ್ನು ಮನನ ಮಾಡಿಕೊಳ್ಳಿ, ಯಾವುದು ನಿಮಗೆ ಅರ್ಥವಾಗುವುದಿಲ್ಲವೋ … ಅವುಗಳನ್ನು ಅಧ್ಯಯನ ಮಾಡಬೇಡಿ. ಏಕೆಂದರೆ, ಅವು ನನಗೆ ಎಂದಿಗೂ ಅರ್ಥವಾಗುವುದಿಲ್ಲ’ ಅನಿಸುತ್ತದೆ. ಆದರೆ, ಅರ್ಥವಾಗಿದ್ದದನ್ನೇ ಪುನಃ ಪುನಃ ಓದುತ್ತಿದ್ದರೆ … ಎಂದಿಗೊ, ಎಲ್ಲೊ, ಯಾವುದೋ ಒಂದು ಕೊಂಡಿ ಸಿಕ್ಕಿ … ಅರ್ಥವಾಗದೇ ಇರುವುದೆಲ್ಲಾ ಕೂಡಾ ಕ್ರಮೇಣಾ ಅರ್ಥವಾಗಲು ಪ್ರಾರಂಭವಾಗುತ್ತವೆ. ನಿಮಗೆ ಜರ್ಮನಿ ಭಾಷೆ ಬರದೇ ಇದ್ದರೂ … ಹೇಗೆ ಆ ದೇಶಕ್ಕೆ ಹೋಗಿ ಅಲ್ಲಿರುವ ಅಂದಗಳನ್ನೂ, ಆನಂದಗಳನ್ನೂ, ಕಣ್ಣುಗಳಿಂದ, ಮನಸ್ಸಿನಿಂದ ಅನುಭವಿಸಿ ಬಂದು .. ಪದೇ ಪದೇ ಅದನ್ನು ಮನನ ಮಾಡಿಕೊಳ್ಳುತ್ತಿದ್ದರೆ, ಆ ದೇಶದಿಂದ ನಮಗೆ ಒಂದು ಸಂಬಂಧ ಹೇಗೆ ಏರ್ಪಡುತ್ತದೊ .. ಹಾಗೆಯೇ ಅರ್ಥವಾಗಿದ್ದನ್ನು ನೆನೆಸಿಕೊಂಡು ಆನಂದಿಸುತ್ತಿದ್ದರೆ… ಕಾಲಕೂಡಿ ಬಂದು ಅರ್ಥವಾಗದೇ ಇರುವುದು ಕೂಡಾ ಯಾವತ್ತಾದರೂ ನಮಗೆ ಅರ್ಥವಾಗುತ್ತವೆ.
ಪ್ರಶ್ನೆ : ಬ್ರಹ್ಮಜ್ಞಾನಿ ಆಗಬೇಕಾದರೆ … ಏನು ಮಾಡಬೇಕು?
ಪತ್ರೀಜಿ : ಬ್ರಹ್ಮಜ್ಞಾನಿ ಆಗಬೇಕಾದರೆ … ಒಬ್ಬ ಬ್ರಹ್ಮಜ್ಞಾನಿಯ ಜೊತೆ ಸ್ನೇಹ ಬೆಳಸಬೇಕು! ಒಬ್ಬ ಬ್ರಹ್ಮಜ್ಞಾನಿಯನ್ನು ನೋಡಿ ಕಲಿತುಕೊಳ್ಳಬೇಕು. ನಮ್ಮ ಸುತ್ತಾಮುತ್ತಾ ಇರುವ ಬ್ರಹ್ಮಜ್ಞಾನಿಗಳನ್ನು ಅಧ್ಯಯನ ಮಾಡಬೇಕು! ನಾನು ನನ್ನ ಗುರುಗಳನ್ನು ನೋಡಿ ಕಲಿತುಕೊಂಡೆ. ವರ್ತಮಾನದಲ್ಲಿ ನಾನು ನಿಮಗೆ ಸಮೀಪದಲ್ಲಿದ್ದೇನೆ … ಆದ್ದರಿಂದ, ನನ್ನ ನೋಡಿ ನೀವೆಲ್ಲಾ ಕೂಡಾ ಮಮಾತ್ಮಾ ಸರ್ವ ಭೂತಾತ್ಮ ಎನ್ನುವ ವೇದ ವಾಕ್ಯವನ್ನು ಅರ್ಥಮಾಡಿಕೊಂಡು ಯಾರಾದರೂ ನಿಮ್ಮ ಪಾದಗಳಿಗೆ ನಮಸ್ಕರಿಸಿದರೆ … ಪುನಃ ನೀವು ಅವರ ಪಾದಗಳಿಗೆ ನಮಸ್ಕರಿಸಬೇಕು. ಇದು ಎಂತಹ ದೊಡ್ಡ ಸಂಸ್ಕಾರವೋ ನೋಡಿ!! ಹಾಗೆಯೆ, ಎಲ್ಲಾ ನೋಡಿ ಕಲಿತುಕೊಳ್ಳುತ್ತಿದ್ದರೇ ಎಲ್ಲರೂ ಬ್ರಹ್ಮಜ್ಞಾನಿಗಳೇ!!
ಪ್ರಶ್ನೆ : ಸಾರ್, ನೀವು ಮಹಾ ಅವತಾರವೆಂದು ಎಲ್ಲರೂ ಭಾವಿಸುತ್ತಿದ್ದಾರೆ!
ಪತ್ರೀಜಿ : ’ಅವತಾರ’ ಅಂದರೆ ಒಂದು ಉತ್ಕೃಷ್ಟವಾದ ಗುರಿಯನ್ನು ಈ ಭೂಮಿಯ ಮೇಲೆ ಸಾಕ್ಷಾತ್ಕರಿಸಲು ಪರಿಪೂರ್ಣವಾಗಿ ಇಳಿದು ಬರುವುದೇ! ನಿಮ್ಮ ದೃಷ್ಟಿಯಲ್ಲಿ ನಾನು ಒಂದು ಅವತಾರವಾದರೆ … ನನ್ನ ದೃಷ್ಟಿಯಲ್ಲಿ ನೀವೆಲ್ಲರೂ ಕೂಡಾ ನಿಮ್ಮ ನಿಮ್ಮ ಮಟ್ಟದಲ್ಲಿ ಪರಿಪೂರ್ಣವಾಗಿ ಇಳಿದು ಬಂದ ಅವತಾರಗಳೇ!
ಪ್ರಶ್ನೆ : ಧ್ಯಾನ ಮಾಡಲು ಹತ್ತು ನಿಮಿಷ ಸಹ ಕೂಡಲು ಆಗುತ್ತಿಲ್ಲ… ಅದರ ಜೊತೆ ಅನೇಕಾನೇಕ ಧರ್ಮಸಂದೇಹಗಳು ಕೂಡಾ ಬರುತ್ತಿವೆ. ಇದಕ್ಕೆ ಏನು ಮಾಡಬೇಕೆಂದು ಹೇಳುತ್ತಿರಾ?
ಪತ್ರೀಜಿ : ಧ್ಯಾನದಿಂದ ಪ್ರಥಮವಾಗಿ ಮನಸ್ಸು ಸಮಾಧಾನಸ್ಥಿತಿಗೆ, ಶಾಂತ ಸ್ಥಿತಿಗೆ ಬರುತ್ತದೆ. ಒಬ್ಬ ಮಗುವನ್ನು ಮೊದಲನೆಯ ಬಾರಿ ಪಾಠಶಾಲೆಗೆ ಕರೆದುಕೊಂಡು ಹೋದಾಗ ನಾನು ಹೋಗುವುದಿಲ್ಲ ಎಂದು ಮೊಂಡುತನ ಮಾಡಿದ ಹಾಗೆ… ಮೊದಲನೆಯ ಬಾರಿ ಧ್ಯಾನದಲ್ಲಿ ಕೂಡಿಸಿದರೇ ಮನಸ್ಸು ಕೂಡಾ ಬೇಡವೇ ಬೇಡ ಎಂದು ಹಠ ಮಾಡುತ್ತದೆ. ಶಾಲೆಗೆ ಹೋಗುವುದಿಲ್ಲ ಎಂದು ಹೇಳಿದ ಮಗುವನ್ನು ಹೋಗಲಿ ಬಿಡು ಎನ್ನುತ್ತಾ ಹಾಗೆಯೆ ಬಿಡದೇ, ಅವನ ಉಜ್ವಲ ಭವಿಷ್ಯತ್ತಿಗಾಗಿ ಹೇಗೋ ಸಮಾಧಾನಮಾಡಿ ಪ್ರತಿ ದಿನಾ ಶಾಲೆಗೆ ಕರೆದುಕೊಂಡು ಹೋದಹಾಗೆ… ನಾವು ಸಹ ಮನಸ್ಸನ್ನು ಕ್ರಮ ತಪ್ಪದೇ ಧ್ಯಾನದಲ್ಲಿ ಕರೆದುಕೊಂಡು ಹೋಗಬೇಕು. ಮಗುವಿಗೆ ಶಾಲೆಗೆ ಹೋಗಲು ಇಷ್ಟವಿಲ್ಲವೆಂದು ಶಾಲೆಗೆ ಕಳಿಸದೇ ಇರುತ್ತೇವೆಯೆ… ಮನಸ್ಸು ಒಲ್ಲೆ ಎನ್ನುತ್ತದೆ ಎಂದು ಧ್ಯಾನಮಾಡುವುದನ್ನು ಬಿಡಲು? ಮುದ್ದು ಮಾಡಿಯೋ… ಹೆದರಿಸಿಯೋ… ಮಗುವನ್ನು ಶಾಲೆಗೆ ಕಳಿಸಿದ ಹಾಗೇ… ಮನಸ್ಸಿನ ಮೇಲೆ ಅಂಕುಶವನ್ನು ಇಟ್ಟುಕೊಂಡು ಕುಳಿತುಕೊಳ್ಳಬೇಕು. ಪ್ರಾರಂಭದಲ್ಲಿ ಕೆಲವು ದಿನಗಳು ಮಗು ಅತ್ತು ಅತ್ತು ಶಾಲೆಯಲ್ಲಿ ಮಲಗಿದ ಹಾಗೆ… ನಮ್ಮ ಮನಸ್ಸು ಸಹ ಧ್ಯಾನದಲ್ಲಿ ಕುಳಿತ ತಕ್ಷಣ ಸ್ವಲ್ಪ ಹೊತ್ತು ಆಲೋಚನೆಗಳಿಂದ ಹೊರತಾಗಿ… ನಿದ್ರಿಸುತ್ತದೆ.
ಮೊದಲನೆಯ ಹಂತದಲ್ಲಿ ಮನಸ್ಸು ಹಠ ಮಾಡುತ್ತದೆ ಮತ್ತು ಎರಡನೆಯ ಹಂತದಲ್ಲಿ ನಿದ್ರಿಸುತ್ತದೆ. ಮೂರನೆಯ ಹಂತದಲ್ಲಿ ಮಗು ಶಾಲೆಯ ಪರಿಸ್ಥಿತಿಗಳಿಗೆ ಹೊಂದಿಕೊಂಡು ನಿಧಾನವಾಗಿ ಪಾಠಗಳನ್ನು ಕಲಿತುಕೊಳ್ಳಲು ಪ್ರಾರಂಭಿಸಿದ ಹಾಗೆ… ಮನಸ್ಸು ಸಹ ದಿವ್ಯಚಕ್ಷುವಾಗಿ ಬದಲಾಗಿ ನಿಧಾನವಾಗಿ ಧ್ಯಾನಾನುಭವಗಳಿಂದ ಆತ್ಮಕ್ಕೆ ಸಂಬಂಧಿಸಿದ ಪಾಠಗಳನ್ನು ಕಲಿತುಕೊಳ್ಳುತ್ತಿರುತ್ತದೆ.
ಮೊದಲನೆಯ ದಿನ, ಎರಡನೆಯ ದಿನ ಮತ್ತು ಮೂರನೆಯ ದಿನ! ಅಷ್ಟೇ ನಿಧಾನವಾಗಿ ಬದಲಾವಣೆ ಬರುತ್ತದೆ. ಮನಸ್ಸು ಕೂಡಾ ಹಾಯಾಗಿ, ಪ್ರಶಾಂತವಾಗಿ ಸಮಾಧಾನ ಸ್ಥಿತಿಗೆ ಬರುತ್ತದೆ. ಬೇಕಾದಷ್ಟು ಕಾಸ್ಮಿಕ್‌ಎನರ್ಜಿ ಬರುತ್ತದೆ. ಮತ್ತು ಅದರಿಂದ ಶರೀರದಲ್ಲಿ ಎಲ್ಲೆಲ್ಲೊ (ಅನೇಕ ಸ್ಥಳಗಳಲ್ಲಿ), ಅನೇಕ ಜನ್ಮಗಳಿಂದ ಹೆಪ್ಪುಕಟ್ಟಿಕೊಂಡಿರುವ ಅನಾರೋಗ್ಯದ ಬ್ಲಾಕ್ಸ್ ಎಲ್ಲಾ ಶುಚಿಯಾಗುತ್ತವೆ. ಬುದ್ಧಿಕುಶಲತೆ ಬೆಳೆಯುವುದರ ಜೊತೆ ಸಹನಾಶಕ್ತಿ ಕೂಡಾ ನಮ್ಮಲ್ಲಿ ವಿಶೇಷರೀತಿಯಲ್ಲಿ ಅಭಿವೃದ್ಧಿ ಆಗುತ್ತದೆ.
ಈ ಭೂಮಿಯ ಮೇಲೆ ಜನ್ಮಿಸಿದನಂತರ ಯಾವ ವಿದ್ಯೆಕಲಿಯ ಬೇಕಾದರೂ, ವ್ಯಾಪಾರ ಮಾಡಬೇಕಾದರೂ ಅಥವಾ ಸಂಸಾರ ಚೆನ್ನಾಗಿ ನಿರ್ವಹಿಸಬೇಕಾದರೂ ನಮಗೆ ತುಂಬಾ ಸಹನಾಶಕ್ತಿ ಬೇಕಾಗಿದೆ… ಅದು ನಮಗೆ ಧ್ಯಾನದಲ್ಲಿ ಕುಳಿತುಕೊಳ್ಳುವುದರಿಂದ ಮಾತ್ರವೇ ವಿಶೇಷವಾಗಿ ಸಿದ್ಧಿಸುತ್ತದೆ. ಅಸಹನೆಯಿಂದ ಮನುಷ್ಯ ಪತನ ಹೊಂದುವುದು ಮತ್ತು ಸಹನೆಯಿಂದ ಇರುವುದರಿಂದ ತುಂಬಾ ಅಭಿವೃದ್ಧಿ ಹೊಂದುವುದು ಎಂಬುವುದು ಚರಿತ್ರೆ ಹೇಳುತ್ತಿರುವ ಅನುಭವೈಕ ಸತ್ಯ. ಆದ್ದರಿಂದ, ಧ್ಯಾನದಲ್ಲಿ ಅರ್ಧಗಂಟೆ ಅಥವಾ ಗಂಟೆಕಾಲ ಸಹನೆಯಿಂದ ಕುಳಿತುಕೊಳ್ಳಲಾದರೆ, ನಮಗೆ ಆಸನ ಸಿದ್ಧಿ ಎಂಬುವುದು ಬರುತ್ತದೆ. ಮತ್ತು ಅದರಿಂದ ಓಹೋ! ನಾನು ಚೆನ್ನಾಗಿ ಯಾವ ಕೆಲಸವಾದರೂ ಮಾಡಬಲ್ಲೆ ಎಂಬುವ ಆತ್ಮವಿಶ್ವಾಸ ನಮ್ಮಲ್ಲಿ ಮೂಡುತ್ತದೆ.
ಆದ್ದರಿಂದ, ಮಗುವನ್ನು ಬಲವಂತವಾಗಿ ಆದರೂ ಸರಿ ಶಾಲೆಗೆ ಬಿಟ್ಟು ಬರುವಹಾಗೆ ನಮ್ಮ ಮನಸ್ಸನ್ನು ಕೂಡಾ ಧ್ಯಾನ ಎನ್ನುವ ಶಾಲೆಯಲ್ಲಿ ತಪ್ಪದೇ ದಿನನಿತ್ಯಾ ಬಿಡಬೇಕು, ಮತ್ತು ಯಾರ ವಯಸ್ಸು ಎಷ್ಟು ಇರುತ್ತದೋ… ಅಷ್ಟು ನಿಮಿಷಗಳ ಕಾಲ ನಿರಂತರವಾಗಿ ತಪ್ಪದೇ ಧ್ಯಾನ ಮಾಡಬೇಕು.
ಧ್ಯಾನ ಮಾಡುತ್ತಿದ್ದರೆ… ಅನೇಕಾನೇಕ ಧರ್ಮ ಸಂದೇಹಗಳು ಬರುತ್ತಿರುತ್ತವೆ ಎನ್ನುತ್ತಿರುವಿರಿ… ಆದರೆ, ಹೀಗೆ ಧರ್ಮ ಸಂದೇಹಗಳು ಬರುತ್ತಿರುವವರೆಲ್ಲಾ ತುಂಬಾ ಸೋಂಬೇರಿಗಳು! ಅವರು ಸರಿಯಾದ ಸಾಧನೆ ಮಾಡದೇ ಇರುವುರಿಂದಲೆ ಅವರಿಗೆ, ಹೀಗೆ, ಬಗೆಬಗೆಯ ಧರ್ಮ ಸಂದೇಹಗಳು ಬರುತ್ತಿರುತ್ತವೆ.
ನಿಜಕ್ಕೂ ಅರ್ಪಣಾಮನೋಭಾವದಿಂದ ಧ್ಯಾನ ಸಾಧನೆ ಮಾಡುವವರಿಗೆ ಯಾವ ವಿಧವಾದ ಸಂದೇಹಗಳೂ ಬರುವುದಿಲ್ಲ. ಬಂದರೂ… ಅವರಿಗೆ ಪುನಃ ಧ್ಯಾನದಲ್ಲೇ ಅವುಗಳಿಗೆ ಉತ್ತರಗಳು ಕೂಡಾ ಲಭಿಸುತ್ತಿರುತ್ತದೆ. ನಿಜಕ್ಕೂ ಸಾಧನೆ ಎನ್ನುವುದು ಮಾಡದೇ ಇರಲಿಕ್ಕಾಗಿಯೇ… ಅವರಿಗೆ ಈ ಧರ್ಮ ಸಂದೇಹಗಳು ಎನ್ನುವುದು ಉಪಯೊಗವಾಗುತ್ತದೆ. ಪ್ರಾಣಾಯಾಮ ಮಾಡಬೇಕಾ? ಹಠಯೋಗ ಮಾಡಬೇಕಾ? ಕಾಲುಗಳನ್ನು ಹೇಗೆ ಮಡಿಚಿಕೊಳ್ಳಬೇಕು? ಕೈಗಳನ್ನು ಹೇಗೆ ಜೋಡಿಸಿಕೊಳ್ಳಬೇಕು? ಮಯೂರಾಸನವಾ? ಮರ್ಕಟಾಸನವಾ? ವೃಷಭಾಸನವಾ? ಎನ್ನುತ್ತಾ… ಒಂದೇ ಸಮ ಸಂದೇಹಗಳು ಬರುತ್ತಿರುತ್ತವೆ.
ಸರಿಯಾದ ಧ್ಯಾನಸಾಧನೆಯಲ್ಲಿ ನಾಸಿಕ, ನಾಸಿಕಾಗ್ರ, ನಾಭಿ ಎನ್ನುತ್ತಾ ನಿಜಕ್ಕೂ ಶರೀರದ ಬಗ್ಗೆ ಪ್ರಸ್ತಾವನೆ ಇಲ್ಲವೇ ಇಲ್ಲ. ಸೃಷ್ಟಿಯಲ್ಲಿರುವ ಯಾವ ಇತರ ಪ್ರಾಣಿ ಕೂಡಾ ಪ್ರಾಣಾಯಾಮ ಎನ್ನುತ್ತಾ ಪ್ರತ್ಯೇಕವಾಗಿ ಮಾಡದೇ ಇರುವಹಾಗೇ… ನಾವು ಸಹ ಯಾವುದೂ ಪ್ರತ್ಯೇಕವಾಗಿ ಮಾಡಬೇಕಾಗಿಲ್ಲ! ನಮ್ಮ ಪ್ರಕೃತಿ ಸಹಜವಾದ ಶ್ವಾಸ ಹೇಗಿದೆಯೋ…ಹಾಗೆ ಸುಲಭವಾಗಿ ಇರುವುದನ್ನು ಮಾತ್ರವೇ ನಾವು ಆಹ್ಲಾದಕರವಾಗಿ ಒಬ್ಬ ಸಾಕ್ಷಿಯಾಗಿ ಗಮನಿಸಬೇಕು. ಯಾಥಾರೀತಿಯಲ್ಲಿ ನಡೆಯುತ್ತಿರುವ ಶ್ವಾಸಧಾರೆಯನ್ನು ನಮ್ಮ ಧ್ಯಾಸಧಾರೆಯಲ್ಲಿ ಐಕ್ಯಮಾಡಬೇಕು.
ಸಾಧಾರಣವಾಗಿ ನಮ್ಮ ಮನಸ್ಸು ನಿನ್ನೆ ನಡೆದ ವಿಚಾರಗಳನ್ನು ಸದಾ ನೆನೆದು ಚಿಂತಿಸುತ್ತಲೋ ಅಥವಾ ನಾಳೆ ನಡೆಯಲಿರುವ ವಿಚಾರಗಳನ್ನು ನೆನೆಸಿಕೊಂಡು ಭಯಪಡುತ್ತಲೋ ಇರುತ್ತದೆ. ಆದರೆ, ಶ್ವಾಸ ಎನ್ನುವುದು ವರ್ತಮಾನಸ್ಥಿತಿ. ಆದ್ದರಿಂದ, ನಾವು ಶ್ವಾಸವನ್ನೇ ಗಮನಿಸುತ್ತಿದ್ದರೆ ಈ ಭೂತ ಭವಿಷ್ಯತ್ ಕಾಲಗಳಿಗೆ ಸಂಬಂಧಿಸಿದ ಆಲೋಚನೆಗಳು ನಮ್ಮ ಮನಸ್ಸಿನಿಂದ ಮಾಯವಾಗಿ ಶೂನ್ಯಸ್ಥಿತಿಯಲ್ಲಿ ಇರುವ ವರ್ತಮಾನದಲ್ಲಿ ನಾವು ಸ್ಥಿರವಾಗಿರುತ್ತೇವೆ. ಆಗಲೇ ಪ್ರೆಸೆಂಟ್ ಎನ್ನುವ ವರ್ತಮಾನ ನಮಗೆ ಒಂದು ಬಹುಮಾನವನ್ನು ತಪ್ಪದೇ ನೀಡುತ್ತದೆ.
ಪ್ರಶ್ನೆ : “ದೇವರು ಕೆಲವರನ್ನು ಸಿರಿವಂತರಾಗಿ, ಇನ್ನೂ ಕೆಲವರನ್ನು ಬಡವರಾಗಿ ಏಕೆ ಹುಟ್ಟಿಸುತ್ತಾನೆ?”
ಪತ್ರೀಜಿ : ಯಾರೂ, ಯಾರನ್ನೂ ಹುಟ್ಟಿಸುವುದಿಲ್ಲ. ಅವರಷ್ಟಕ್ಕೆ ಅವರೇ ಹುಟ್ಟುತ್ತಾರೆ.. ಅಲ್ಲದೆ, ಅದು ಅವರವರ ವ್ಯಕ್ತಿಗತ ಆಯ್ಕೆ! ಇಂದಿನ ಜಮೀನುದಾರ ಒಂದುಕಾಲದಲ್ಲಿ ಭಿಕಾರಿಯೆ. ಮತ್ತು ಇಂದಿನ ಭಿಕಾರಿಗಳೆಲ್ಲಾ ಒಂದು ಕಾಲದಲ್ಲಿ ಜಮೀನುದಾರರೇ! ಈ ಜಗತ್ತು ಎನ್ನುವ ನಾಟಕದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಇಷ್ಟದ ಪ್ರಕಾರವೇ ಜನ್ಮಗಳನ್ನು ಪಡೆಯುತ್ತ… ಒಂದೊಂದು ಜನ್ಮದಲ್ಲಿ ಒಂದೊಂದು ಪಾತ್ರವನ್ನು ನಿರ್ವಹಿಸುತ್ತಾ.. ಅದರ ಮೂಲಕ ಅನೇಕಾನೇಕ ಜೀವನದ ಅನುಭವಗಳನ್ನು ಜಮಾ ಮಾಡಿಕೋಳ್ಳುತ್ತಾ ಇರುತ್ತಾರೆ. ಆದರೆ, ಸದಾ ಪ್ರಾಪಂಚಿಕ ಮಾಯೆಯಲ್ಲಿ ಬಿದ್ದು ಆ ವಿಷಯವನ್ನು ಮರೆತುಹೋಗುತ್ತಿರುತ್ತಾರೆ.
ಪ್ರಶ್ನೆ : “ಇತರ ಪ್ರಾಣಿಗಳಮೇಲೆ ಕರುಣೆ ತೋರಿಸುವುದರಿಂದ ನಮಗೆ ಲಾಭವೇನು?”
ಪತ್ರೀಜಿ : ಇತರ ಪ್ರಾಣಿಗಳ ಮೇಲೆ ನಾವು ಖಂಡಿತಾ ಕರುಣೆಯನ್ನು ತೋರಿಸಬೇಕು. ಇಲ್ಲದಿದ್ದರೆ.. ಜೀಸಸ್ ಕ್ರೈಸ್ಟ್ ಸಂದೇಶ ನೀಡಿದಹಾಗೆ… “ಚಾಕುವಿನಿಂದ ಕೊಲ್ಲುವವರು ಅದೇ ಚಾಕುವಿನಿಂದಲೇ ಕೊಲ್ಲಲ್ಪಡುತ್ತಾರೆ”.
ಕುರಿಮರಿ ಜೊತೆ ನಾವು ಪ್ರೀತಿಯಿಂದ ಆಡಿಕೊಳ್ಳಬೇಕೆ ವಿನಹ.. ಅದನ್ನು ಕೊಂದುತಿನ್ನಬಾರದು.. ಕುರಿಮರಿಯನ್ನು ಕೊಂದು, ಕಿತ್ತು ತಿಂದರೆ.. ರೋಗಗಳ ರೂಪದಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ನಮ್ಮನ್ನು ಸಹ ಕಿತ್ತುತಿಂದು ಕೊಲ್ಲುತ್ತವೆ.
ಪ್ರಶ್ನೆ : “‘ಪಂಡಿತರು’ ಅಂದರೆ ಯಾರು?”
ಪತ್ರೀಜಿ : ‘ಆತ್ಮಜ್ಙಾನ’ದಲ್ಲಿ ಅನುಭವ ಇರುವವರನ್ನು ಪಂಡಿತರು ಎನ್ನುತ್ತೇವೆ! ಯಾವ ವಿಷಯಕ್ಕೂ ದುಃಖಿಸದೆ ಇರುವವನು, ಸೃಷ್ಟಿಯಲ್ಲಿರುವ ಎಲ್ಲಾ ವಿಷಯದಲ್ಲೂ ಸಮದೃಷ್ಟಿಯಿಂದ ಇರುವವನು, ಮಾನ, ಅವಮಾನಗಳಿಗೆ ಚಲಿಸದವನು, ವಿಜಯ, ಅಪಜಯಗಳನ್ನು ಸವಿನಯದಿಂದ ಸ್ವೀಕರಿಸುವವನೇ ‘ಪಂಡಿತನು’
ಪ್ರಶ್ನೆ : ” ಈ ನಡುವೆ ಎಲ್ಲಿ ನೋಡಿದರೂ ಆಧ್ಯಾತ್ಮಿಕತೆಯಿಂದ ಕೂಡಿದ ಜೀವನವನ್ನು ಕುರಿತೇ ಚರ್ಚಗಳು ಹೆಚ್ಚಾಗಿವೆ! ನಿಜಕ್ಕೂ ಆಧ್ಯಾತ್ಮಿಕತೆ ಅಂದರೆ ಏನು?”
ಪತ್ರೀಜಿ : ‘ಆಧ್ಯಾತ್ಮಿಕ’ ಅಂದರೆ.. ಗುಡಿಗಳಿಗೆ ಹೋಗಿ ದೇವರನ್ನು ಪೂಜಿಸುವುದಲ್ಲದೇ… “ನಾವೇ ದೇವರು” ಎಂದು ತಿಳಿದುಕೋಳ್ಳುವುದೇ! “ನಾವೇ ದೇವರು” ಎನ್ನುವ ಸತ್ಯವನ್ನು ತಿಳಿದುಕೊಂಡು ಅನಂತರ “ಎಲ್ಲರೂ ದೇವರೆ” ಎನ್ನುವ ಸತ್ಯವನ್ನು ತಿಳಿದುಕೋಳ್ಳುತ್ತಾ ಎಲ್ಲರನ್ನೂ ಗೌರವಿಸುವುದೇ ‘ಆಧ್ಯಾತ್ಮಿಕತೆ’ ಸಕಲ ವಿದ್ಯಾ ವಿಷಯಸಂಪನ್ನನಾದ ಪಂಡಿತನನ್ನೂ… ಮತ್ತು ಯಾವ ವಿದ್ಯೆಯನ್ನು ಅರಿಯದ ಪಾಮರನನ್ನೂ ಕೂಡ ಸರಿಮಾನವಾಗಿ ಗೌರವಿಸುವುದೇ ‘ಆಧ್ಯಾತ್ಮಿಕತೆ’ ದಿನನಿತ್ಯದ ಜೀವನದಲ್ಲಿ ಅತ್ಯಂತ ಚೈತನ್ಯಯುತವಾಗಿ ಇರುತ್ತಾ ಪ್ರತಿಕ್ಷಣದಲ್ಲೂ ಇರುವ ಆನಂದವನ್ನು ಆಸ್ವಾದಿಸುವುದೇ ‘ಆಧ್ಯಾತ್ಮಿಕತೆ’
ಪ್ರಶ್ನೆ : “ಧ್ಯಾನ ಸರಿಯಾಗಿ ಕುದುರಲು ಏನಾದರು ತಂತ್ರಗಳನ್ನು ಹೇಳಿ!”
ಪತ್ರೀಜಿ : ಇದಕ್ಕೂ ಮುಂಚೆ ಯಾವ ಪೂಜೆಗಳೂ, ಮತಾಚಾರಗಳೂ, ಶಾಸ್ತ್ರಚರ್ಚೆಗಳೂ ಮಾಡದೇ ಇರುವವರಿಗೆ ಧ್ಯಾನ ಸ್ವಲ್ಪ ಚೆನ್ನಾಗೇ ಮಾಡಲಾಗುತ್ತದೆ. ಐವತ್ತು ವರ್ಷಗಳ ವಯಸ್ಸಿನಲ್ಲಿ ಹೊಸ ಭಾಷೆಯನ್ನು ಕಲಿತುಕೋಳ್ಳುವುದು ಸ್ವಲ್ಪ ಕಷ್ಟ. ಆದರೆ, ಚಿಕ್ಕ ಮಕ್ಕಳು ಮಾತ್ರ ಚಕ..ಚಕ.. ಅಂತ ಕಲಿಯುತ್ತಾರೆ. ಏಕೆಂದರೆ, ಅವರ ಮನಸ್ಸಿನ ಮೇಲೆ ಅದಕ್ಕೂ ಮುಂಚೆ ಬೇರೆ ಭಾಷೆಗಳಿಗೆ ಸೇರಿದ ಮುದ್ರೆಗಳೇನೂ ಇರುವುದಿಲ್ಲ ಆದ್ದರಿಂದ, ಏನಾದರೂ ಸರಿ ಅವರು ಸಹಜವಾಗಿಯೆ ಕಲಿತುಬಿಡುತ್ತಿರುತ್ತಾರೆ. ಮುದ್ರೆಗಳೆಲ್ಲಾ ಒತ್ತಿದನಂತರ ಹೊಸ ವಿಷಯ ಕಲೆತುಕೊಳ್ಳಬೇಕೆಂದರೆ.. ಮುಂಚೆತವಗಿ ಆ ಮುದ್ರೆಗಳೆಲ್ಲಾ ಅಳಿಸಿಹಾಕಲು ತುಂಬಾ ಸಮಯ ಬೇಕಾಗುತ್ತದೆ. ಧ್ಯಾನದ ವಿಷಯದಲ್ಲಿ ಸಹ ಅಷ್ಠೇ! ಧ್ಯಾನದಲ್ಲಿ ಏಕಾಗ್ರತೆ ಬರಲು ಹಿರಿಯರಿಗಿಂತಾ ಕಿರಿಯರಿಗೇ ಕಡಿಮೆ ಸಮಯ ಹಿಡಿಸುತ್ತದೆ. ಆದ್ದರಿಂದ, ಇಲ್ಲಿ ‘ತಂತ್ರ’ ಏನಂದರೆ ಆಲೋಚನೆಗಳನ್ನೆಲ್ಲಾ ಬಿಟ್ಟು ಆ ಸ್ವಲ್ಪ ಹೊತ್ತು ನಾವು ಕೂಡಾ ‘ಚಿಕ್ಕ ಮಕ್ಕಳ ಹಾಗೆ’ ಬದಲಾಗಿ…ಅತಿ ಸಹಜವಾದ ಸ್ಥಿತಿಯಲ್ಲಿ ಧ್ಯಾನಕ್ಕೆ ಉಪಕ್ರಮಿಸುವುದೇ!
ಪ್ರಶ್ನೆ : ” ‘ಎನ್‌ಲೈಟೆನ್‌ಮೆಂಟ್’ ಅಂದರೆ ಏನು?”
ಪತ್ರೀಜಿ : ನಮ್ಮ ಜನ್ಮಕ್ಕೆ ಕಾರಣವಾದ ಮಹದಾಶಯವನ್ನು ಅರಿವಿಗೆ ತಂದುಕೊಂಡು… ಅದಕ್ಕೆ ಅನುಗುಣವಾಗಿ ಪ್ರಯತ್ನಗಳನ್ನು ಮಾಡುತ್ತಾ… ಲೋಕ ಕಲ್ಯಾಣಾರ್ಥವಾಗಿ ಆ ಮಹಾಕಾರ್ಯವನ್ನು ಪ್ರಯತ್ನದಿಂದ ನೆರವೇರಿಸಲಾಗುವುದೆ ‘ಎನ್‌ಲೈಟನ್‌ಮೆಂಟ್’ ಹೀಗೆ ನಮ್ಮಲ್ಲಿರುವ ದಿವ್ಯತ್ವವನ್ನು ಮತ್ತು ನಿಜಾಯಿತಿಯನ್ನು ಅತ್ಯಂತ ವಿಶ್ವಾಸದಿಂದ ದರ್ಶಿಸುವ ತತ್ವವೇ ‘ಎನ್‌ಲೈಟೆನ್‌ಮೆಂಟ್’.
ಪ್ರಶ್ನೆ : “‘ಸನ್ಯಾಸ’ ಅಂದರೆ ಏನು?
ಪತ್ರೀಜಿ : “ಸಮ್ಯಕ್” =ಸರಿಯಾದ ರೀತಿಯಲ್ಲಿ “ನ್ಯಾಸ”= (ಬಿಡಬೇಕದದ್ದನ್ನು) ಬಿಟ್ಟುಬಿಡುವುದು… “ನಾನು ಬೇರೆ, ನೀನು ಬೇರೆ” ಎನ್ನುವ ಭವನೆಯನ್ನು ಸಂಪೂರ್ಣವಾಗಿ ತ್ಯಜಿಸಲಾಗುವದೇ “ಸನ್ಯಾಸ”
ಪ್ರಶ್ನೆ : “ಶ್ವಾಸದ ಮೇಲೆಯೇ ಏಕೆ ಗಮನವಿಟ್ಟು ಧ್ಯಾನ ಮಾಡಬೇಕು?”
ಪತ್ರೀಜಿ : “ಶ್ವಾಸ” ಎನ್ನುವುದು ನಿನ್ನೆಗೆ ಸಂಬಂಧಿಸಿದ ಭೂತಕಾಲವಲ್ಲ… ಮತ್ತೆ ನಾಳೆಗೆ ಸೇರಿದ ಭವಿಷ್ಯತ್ತು ಅಲ್ಲ. ಅದು ಕೇವಲ ಈ ದಿನದ ಈ ಕ್ಷಣಕ್ಕೆ ಸಂಬಂಧಿಸಿದ ವರ್ತಮಾನ. ಆದ್ದರಿಂದ, ಆ ವರ್ತಮಾನ ಕ್ಣಣದಿಂದ ನಮ್ಮ ಮನಸ್ಸುಗಳನ್ನು ಒಂದುಗೊಡಿಸಬೇಕಾದರೆ ಅದಕ್ಕೆ ಶ್ವಾಸದ ಮೇಲೆ ಗಮನ ಒಂದೇ ಮಾರ್ಗ. ಶ್ವಾಸದ ಮೇಲೆ ಗಮನದಿಂದ ಭೂತಕಾಲ ಎನ್ನುವ ದೊಡ್ಡಭೂತದಿಂದ.. ಮತ್ತು ಕನಸಿನ ಅರಮನೆಗಳಂತಹ ಭವಿಷ್ಯತ್ತಿನಿಂದ ಹೊರಗೆ ಬಂದು ನಾವು ವರ್ತಮಾನ ಕ್ಷಣದಲ್ಲಿರುವ ಅನಂತವಾದ ಆನಂದದಲ್ಲಿ ಸಂಪೂರ್ಣ ಅರಿವಿನಿಂದ ಜೀವಿಸಬಲ್ಲೆವು! ವರ್ತಮಾನದಲ್ಲಿರುವ ಪ್ರತಿಯೊಂದು ಅನುಭವವನ್ನೂ ಒಂದು ದೊಡ್ಡ ಜ್ಙಾನವಾಗಿ ಸ್ವೀಕರಿಸುತ್ತಾ… ತನ್ನ ಆತ್ಮವನ್ನು ಉನ್ನತಗೊಳಿಸಿಕೊಳ್ಳುತ್ತಾ ಜೀವಿಸುವವನೇ.. ಆಧ್ಯಾತ್ಮಿಕ ಶಾಸ್ತ್ರಜ್ಞನು.
ಪ್ರಶ್ನೆ : ಮಾನವರಿಗೆ ‘ಸನ್ಯಾಹಾರವೇ’ ತಪ್ಪದೆ ಬೇಕಾ?!
ಪತ್ರೀಜಿ : ಈ ಪ್ರಪಂಚದಲ್ಲಿ ಯಾವುದೂ ‘ತಪ್ಪದೇ ಬೇಕು‘ ಎಂದಿಲ್ಲ! ಬೇಕಾದರೆ ಮನುಷ್ಯನನ್ನೂ ಸಹ ಕೊಂದು ಆ ಮಾಂಸವನ್ನು ಕೂಡಾ ಬೇಯಿಸಿ ತಿನ್ನಬಹುದು. ಇಂದಿಗೂ ನರಮಾಂಸ ಭಕ್ಷಕರಿಲ್ಲವೇ? ಅವರು ಸಹ ಹಯಾಗಿ ಬದುಕುತ್ತಿದ್ದಾರೆ. ಈ ಭೂಮಿಯ ಮೇಲೆ ಪ್ರತಿಯೊಂದು ನಮಗೆ ಒಂದು ಆಯ್ಕೆ… ಆದರೆ, ಇಲ್ಲಿ ನಾವು ತಿಳಿದುಕೊಳ್ಳಬೇಕಾದ ‘ಸತ್ಯ’ ಏನೆಂದರೆ ನಮ್ಮ ಭೌತಿಕಶರೀರ ಕೇವಲ ಸಸ್ಯಾಹಾರಕ್ಕೆ ಅನುಗುಣವಾಗಿ ರೂಪುಗೊಂಡಿದೆ. ಅದು ಮಾಂಸಾಹಾರ ಸೇವನೆಗೆ ಸ್ವಲ್ಪವೂ ಉಪಯೋಗವಾಗುವುದಿಲ್ಲ. ಈ ಸತ್ಯವನ್ನು ಅರಿವಿನಲ್ಲಿಟ್ಟುಕೊಂಡು ಪ್ರಕೃತಿ ಸಿದ್ಧಾಂತಗಳಿಗೆ ಅನುಗುಣವಾಗಿ ಧರ್ಮಾಚರಣೆಯಲ್ಲಿದ್ದರೆ… ನಾವು ಒಳ್ಳೆಯ ಫಲಗಳನ್ನು ಪಡೆಯುತ್ತೇವೆ.. ಇಲ್ಲದಿದ್ದರೆ ದುರ್ಭರವಾದ ಜೀವನವನ್ನು ಕಳೆಯುತ್ತೇವೆ!
ಪ್ರಶ್ನೆ : ” ಸೈನ್ಸ್ ಹೇಳುವುದು ಸತ್ಯ’ ಎಂದು ನಿರ್ಧರಿಸಿಕೊಳ್ಳಬಹುದಾ?”
ಪತ್ರೀಜಿ : ಕಣ್ಣಿಗೆ ಕಾಣಿಸುವ ವಿಷಯಗಳನ್ನು ಸ್ವಲ್ಪ ಮತ್ರ ವಿವರಿಸಿ ಹೇಳುವ ‘ಸೈನ್ಸ್’ ಸ್ವಲ್ಪ ಮಾತ್ರ ನಮಗೆ ವಿಷಯ ಪರಿಜ್ಙಾನವನ್ನು ಉಂಟುಮಾಡುತ್ತದೆ.. ಅಷ್ಟು ಮಾತ್ರಕ್ಕೆ ಅದೇ ‘ಸತ್ಯ‘ ಆಗಲಾರದು. ಉದಾಹರಣೆಗೆ: ಬೆಳಕು ಪರಿವರ್ತನೆ ಹೊಂದಿದಾಗ ಕಾಣಿಸುವ ವರ್ಣಪಟ್ಟಿಕೆಯಲ್ಲಿ.. ಕೆಂಪು ವರ್ಣದಿಂದ ನೀಲಿ ವರ್ಣದವರೆಗೂ ಇರುವ ಕಿರಣಗಳನ್ನು ಮಾತ್ರವೇ ‘ಸೈನ್ಸ್’ ನಮಗೆ ತೋರಿಸುತ್ತದೆ.. ಆದರೆ, ಬೆಳಕಿನಲ್ಲಿ ಅಲ್ಟ್ರಾವಾಯೊಲೆಟ್, ಇನ್‌ಫ್ರಾರೆಡ್ ನಂತಹ್ ನಮ್ಮ ಕಣ್ಣಿಗೆ ಇನ್ನೂ ಕಾಣಿಸದ 190 ಲಕ್ಷಗಳಿಗೂ ಮೀರಿದ, ಘನರಾವರ್ತಿತವಾಗಿ ಬರುವ ಪರಿಧಿಗಳಲ್ಲಿರುವ ಕಿರಣಗಳು ಬೇಕಾದಷ್ಟು ಇವೆ. ಅವೆಲ್ಲವನ್ನು ‘ಸೈನ್ಸ್’ ನಮಗೆ ತೋರಿಸಲಾರದೇ ಇರಬಹುದು. ಆದರೆ, ಇವುಗಳನ್ನೆಲ್ಲ ನಮ್ಮ ದಿವ್ಯಚಕ್ಷುವಿಗೆ ‘ಧ್ಯಾನ’ವು ಎಲ್ಲಾ ಸುಸ್ಪಷ್ಟವಾಗಿ ತೋರಿಸುತ್ತದೆ.. ಅಲ್ಲದೆ, ಅವುಗಳನ್ನು ಕುರಿತು ಸಂಪೂರ್ಣಜ್ಙಾನವನ್ನು ನಮಗೆ ನೀಡುತ್ತದೆ!
ಪ್ರಶ್ನೆ : ಭಾರತದಲ್ಲಿ ಹಲವಾರು ಆಧ್ಯಾತ್ಮಿಕ ಸೊಸೈಟಿಗಳು/ತರಗತಿಗಳು/ಕೇಂದ್ರಗಳು ಇವೆ. ಸರಿಯಾಗಿರುವುದನ್ನು ಹೇಗೆ ಆಯ್ಕೆಮಾಡಿಕೊಳ್ಳುವುದು? ಹಾಗೇ, ಸುಮ್ಮನೆ ಯಾವುದಾದರೊಂದನ್ನು ನಾವು ಆಯ್ದುಕೊಳ್ಳಬಹುದೇ? ಅಥವಾ ನಮ್ಮ ಜೀವಿತಾವಧಿಯಲ್ಲಿ ಎಲ್ಲವನ್ನೂ ಸಹ ಪ್ರಯತ್ನಿಸಬಹುದೇ?
ಪತ್ರೀಜಿ : ಇದಕ್ಕೆ ಒಂದೇ ಒಂದು ವಿಧಾನವಿದೆ. ಅದು ಯಾವುದೆಂದರೆ, ಮೊದಲು ಒಂದನ್ನು ಪ್ರಯತ್ನಿಸುವುದು. ಅದು ಸರಿಯಿಲ್ಲವೆಂದು ಕಂಡುಬಂದರೆ, ಅದನ್ನು ಅಲ್ಲಿಯೇ ಬಿಟ್ಟು ಮತ್ತೊಂದನ್ನು ಪ್ರಯತ್ನಿಸುವುದು. ನಮಗೆ ಸರಿಯಾದುದು ಸಿಗುವವರೆಗೂ ಇದನ್ನೇ ಮಾಡಬೇಕಷ್ಟೇ. ಬೇರೆ ಮಾರ್ಗವಿಲ್ಲ. ಯಾವುದಾದರೊಂದನ್ನು ಸುಮ್ಮನೆ ಆಯ್ದುಕೊಂಡು ಅನುಸರಿಸುವುದು ಸಲ್ಲದು. ಹಾಗೆ ಆಯ್ದುಕೊಳ್ಳಲು ಇದು ಅದೃಷ್ಟದ ಲಾಟರಿ ಇದ್ದಂತೆ ಅಲ್ಲ. ನೀವು ಹಾಗೆ ತಿಳಿದರೆ ನೀವೊಬ್ಬ ತಲೆತಿರುಕರು ಎಂದೇ ಹೇಳಬಹುದು. ಆತ್ಮಸಾಕ್ಷಾತ್ಕಾರ ಎಂಬುದು ಕಠಿಣವಾದ ಪರಿಶ್ರಮವಾಗಿದೆ. ಪ್ರಶಾಂತವಾಗಿದ್ದುಕೊಂಡು, ತಾಳ್ಮೆಯಿಂದ ಪ್ರತಿಯೊಂದೂ ಮಾರ್ಗವನ್ನೂ ಒಂದಾದ ನಂತರ ಮತ್ತೊಂದನ್ನು ಪ್ರಯತ್ನಿಸಿ. ಗೌತಮ ಬುದ್ಧನು 500 ಗುರುಗಳ ಬಳಿಗೆ ಹೋದನು ಮತ್ತು ಆ ಎಲ್ಲ ಮಾರ್ಗಗಳನ್ನೂ ಸಹ ಅನುಸರಿಸಿದನು ಹಾಗೂ ಕೊನೆಯದಾಗಿ ತನ್ನದೇ ಮಾರ್ಗವನ್ನು ಆತ ಕಂಡುಕೊಂಡನು. ಇದಕ್ಕೆ ಒಳಹಾದಿಗಳು ಇಲ್ಲ. ಬುದ್ಧನನ್ನು ಅನುಸರಿಸಿ ಮತ್ತು ನೀವೂ ಸಹ ಒಬ್ಬ ಬುದ್ಧರಾಗಿ.
ಪ್ರಶ್ನೆ : ನಾನು ಧ್ಯಾನ ಮಾಡುವುದನ್ನು 2006ರಲ್ಲಿ ಆರಂಭಿಸಿದೆ ಮತ್ತು 2007 ರವರೆವಿಗೆ ಮಾಂಸಾಹಾರವನ್ನು ಮುಂದುವರೆಸಿದೆ. ನಂತರ, ಮಾಂಸಾಹಾರವನ್ನು ತ್ಯಜಿಸಿದೆ. ಅದನ್ನು ತಿನ್ನುವಂತೆ ನನ್ನ ತಂದೆ-ತಾಯಿಯರು ನನ್ನನ್ನು ಬಲವಂತಪಡಿಸುತ್ತಾರೆ. ನಾನೇನು ಮಾಡಲಿ? ಇದರಿಂದ ನನಗೆ ಮುಕ್ತಿ ಎಂದು ದೊರಕುತ್ತದೆ?
ಪತ್ರೀಜಿ : ತಕ್ಷಣವೇ ನೀನು ನಿನ್ನ ಮನೆಯನ್ನು ಬಿಟ್ಟುಹೊರಗೆ ಬಂದುಬಿಡು. ಪ್ರತಿಯೊಂದೂ ದುಷ್ಟಪ್ರಭಾವಗಳು ನಿನ್ನ ಮನೆಯಲ್ಲಿ ಇರಲಿಕ್ಕೆ ಸಾಧ್ಯವಿದೆ. ಹಿರಣ್ಯಕಷ್ಯಪ ಮತ್ತು ಪ್ರಹ್ಲಾದನ ಕಥೆ ಗೊತ್ತಿಲ್ಲವೇ? ನಿನ್ನ ತಂದೆತಾಯಿಯರು ಮೂರ್ಖರಾಗಿದ್ದರೆ… ನಿನ್ನ ಜೀವನದಲ್ಲಿ ಇನ್ನೂ ಹೆಚ್ಚಿನ ಮೂರ್ಖತನಕ್ಕೆ ಅವಕಾಶ ಇಲ್ಲದಂತೆ, ನೀನು ನಿನ್ನ ತಂದೆ ತಾಯಿಯರಿಂದ ತಕ್ಷಣವೇ ದೂರವಾಗು.
ಪ್ರಶ್ನೆ : ಸತ್ಯಯುಗವು ಯಾವಾಗ ಪ್ರಾರಂಭವಾಗುತ್ತದೆ? 2012ರ ಡಿಸೆಂಬರ್ ನಂತರವೇ? ದಯವಿಟ್ಟು ತಿಳಿಸಿ.
ಪತ್ರೀಜಿ : ಎಲ್ಲಾ ವ್ಯಕ್ತಿಗಳಿಗೆ ಒಂದೇ ಒಂದು ಸಾಮಾನ್ಯವಾದ ಯುಗ ಎಂಬುದು ಇಲ್ಲ. ನೀವು ಸತ್ಯಯುಗದಲ್ಲಿ ಇರಬಹುದು. ನಿಮ್ಮ ಕುಟುಂಬದ ಸದಸ್ಯರು ಅಸತ್ಯಯುಗದಲ್ಲಿ ಇರಬಹುದು. ಅಥವಾ ಹೀಗೆ ಹೇಳಬಹುದು.. ನಿಮ್ಮ ಕುಟುಂಬದ ಸದಸ್ಯರೆಲ್ಲರೂ ಸಹ ಸತ್ಯಯುಗದಲ್ಲಿರಬಹುದು ಮತ್ತು ನೀವು ಕಲಿಯುಗದಲ್ಲಿರಬಹುದು. ಮೂರ್ಖರಂತೆ ವರ್ತಿಸದಿರಿ. ಮೊದಲು ನೀವು ಸತ್ಯದೊಳಗೆ ಬಂದಿದ್ದೀರಾ?… ಇಲ್ಲಿ ಪ್ರಶ್ನೆ ಅದೇ. ಯಾವುದಾದರೂ ವೈಯಕ್ತಿಕ ಪ್ರಶ್ನೆ ಇದ್ದರೆ ಕೇಳಿ.
ಪ್ರಶ್ನೆ : ಸ್ಟಾಕ್ ಮಾರ್ಕೆಟ್ ಮತ್ತು ಇನ್‌ಶೂರೆನ್ಸ್ ಕಂಪನಿಗಳಿಗೆ 2012ರಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಬಯಸುತ್ತೇನೆ. ಎಲ್ಲಿಯವರೆವಿಗೆ ಅವು ಉಳಿದಿರುತ್ತವೆ. ದಯವಿಟ್ಟು ತಿಳಿಸಿ.
ಪತ್ರೀಜಿ : 2012ಕ್ಕೂ ಮೊದಲಾಗಲಿ ಅಥವಾ ನಂತರವಾಗಲಿ… ಎಲ್ಲವೂ ಸಹ ಒಂದೇ. ನೀವು ಇನ್ನೂ ಸಹ ಸ್ಟಾಕ್ ಮಾರ್ಕೆಟ್ ಮತ್ತು ಇನ್‌ಶೂರೆನ್ಸ್ ಕಂಪನಿಗಳ ಕುರಿತೇ ಚಿಂತಿಸುತ್ತಿದ್ದೀರಿ ಎಂದಾದರೆ, ನೀವು ಇಲ್ಲಿ ಪ್ರಶ್ನೆಯನ್ನು ಕೇಳಲು ಸರಿಯಾದ ಅಭ್ಯರ್ಥಿಯಲ್ಲ.
ಪ್ರಶ್ನೆ : ಭಯದಿಂದ ಮುಕ್ತರಾಗುವುದು ಹೇಗೆ?
ಪತ್ರೀಜಿ : ಭಯರಹಿತ ವ್ಯಕ್ತಿಗಳೊಂದಿಗೆ ಜೀವಿಸಿ.
ಪ್ರಶ್ನೆ : “ವಿಗ್ರಹಗಳನ್ನು ಅಥವಾ ಜೀವಂತ ವ್ಯಕ್ತಿಗಳ ಪೂಜೆಯಲ್ಲಿ ಏಕೆ ನಿರತರಾಗಬಾರದು?” ಎಂಬುದರ ಕುರಿತು ದಯವಿಟ್ಟು ವಿವರಿಸಿ.
ಪತ್ರೀಜಿ : ಸಮಾಜದಲ್ಲಿರುವ ಈ ಕಂದಾಚಾರಗಳೆಲ್ಲವನ್ನೂ ಖಂಡಿಸಿದ ಸ್ವಾಮಿ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ ಕೃತಿಯನ್ನು ಓದಿ. ಎಲ್ಲಾ ವಿಗ್ರಹ ಪೂಜೆಯನ್ನು ನಿಷೇಧಿಸಿದ ಮಹಮ್ಮದರ ಇಸ್ಲಾಂ ಅನ್ನು ಓದಿ. ಬುದ್ಧನ ಎಲ್ಲ ಸಾಹಿತ್ಯವನ್ನು ಓದಿ, “ದೇವರ ರಾಜ್ಯದಲ್ಲಿ ನಾನು ಮತ್ತು ನೀನು ಇಬ್ಬರೂ ಸಹ ಒಂದೇ” ಎಂಬ ಜೀಸಸ್‌ರ ಹೇಳಿಕೆಯನ್ನು ಅರ್ಥಮಾಡಿಕೊಳ್ಳಿ. ಕನಸಿನ ಸ್ಥಿತಿಯಿಂದ ಎಚ್ಚರಗೊಳ್ಳಿ. ನೀವು ಯಾರು ಎಂಬುದನ್ನು ಕಂಡುಕೊಳ್ಳಿ. ಧ್ಯಾನ ಮಾಡಿ.
ಪ್ರಶ್ನೆ : ನಾವು ಮಾಂಸ ಮತ್ತು ಮೊಟ್ಟೆಗಳ ಸೇವನೆಯನ್ನು ಏಕೆ ಬಿಡಬೇಕು? ದಯವಿಟ್ಟು ಸಂಕ್ಷಿಪ್ತವಾಗಿ ವಿವರಿಸಿ. ಮಾಂಸಾಹಾರವನ್ನು ತ್ಯಜಿಸಿದಾಗ, ನಾವು ಖಾಯಿಲೆ ಬೀಳುತ್ತೇವೆ. ಮತ್ತು ದೇಹಕ್ಕೆ ಸಸ್ಯಾಹಾರವು ಸೂಕ್ತವಾಗದ ಕಾರಣ ಮಾಂಸಾಹಾರ ಸೇವನೆಯನ್ನು ಮುಂದುವರೆಸುವಂತೆ ವೈದ್ಯರು ಸಲಹೆ ನೀಡುತ್ತಾರೆ
ಪತ್ರೀಜಿ : ಸಸ್ಯಾಹಾರದ ಕುರಿತಾಗಿ ಇರುವ ಎಲ್ಲಾ ವೆಬ್‌ಸೈಟ್‌ಗಳಿಗೆ ಭೇಟಿನೀಡಿ ಪರಿಶೀಲಿಸಿ. ಪ್ರತಿಯೊಂದನ್ನೂ ಸಹ ಇಂಟರ್‌ನೆಟ್‌ನಲ್ಲಿ ವಿವರಿಸಲಾಗಿದೆ. ಗೂಗಲ್ ಮೂಲಕ ಮಾಹಿತಿ ಹುಡುಕಿ. ನಿಮ್ಮ ಸೋಮಾರಿತನದಿಂದ ಹೊರಬನ್ನಿ ಮತ್ತು ಸತ್ಯ ಏನು ಎಂಬುದನ್ನು ತಕ್ಷಣವೇ ತಿಳಿದುಕೊಳ್ಳಿ.
ಪ್ರಶ್ನೆ : “ಮೊದಲು ನಾನು ಬಾಲವಿಕಾಸ ತರಗತಿಗಳಿಗೆ ಹೋಗುತ್ತಿದ್ದೆ ಮತ್ತು ಅಲ್ಲಿನ ಶಿಕ್ಷಕರು ಒಂದು ಬೆಳಕನ್ನು ಕಲ್ಪಿಸಿಕೊಂಡು ಅದರ ಮೇಲೆ ಗಮನವನ್ನು ಕೇಂದ್ರೀಕರಿಸಿ ಧ್ಯಾನ ಮಾಡುವಂತೆ ನನಗೆ ಬೋಧಿಸಿದ್ದಾರೆ. ಹೀಗೆ ಮಾಡುವುದರಿಂದ ನನಗೆ ಕಾಸ್ಮಿಕ್ ಎನರ್ಜಿ ಮತ್ತು ಆಧ್ಯಾತ್ಮಿಕ ವಿವೇಕವು ದೊರಕುತ್ತದೆಯೇ?”
ಪತ್ರೀಜಿ : ಕಲ್ಪಿತ ಬೆಳಕಿನ ಮೇಲೆ ಗಮನ ಕೇಂದ್ರೀಕರಿಸುವ ಪ್ರಶ್ನೆಯೇ ಇಲ್ಲ. ಸಹಜವಾದ ಮತ್ತು ಸಾಮಾನ್ಯವಾಗಿ ನಡೆಯುತ್ತಿರುವ ನಿಮ್ಮ ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸಿ. ಮುಂದೆ ಬೇರೆಲ್ಲವೂ ಸಹ ತಾನಾಗಿಯೇ ದೊರೆಯುತ್ತದೆ.
ಪ್ರಶ್ನೆ : ನಾನು ಕಳೆದ ಮೂರು ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ಆದರೂ, ಧ್ಯಾನ ಮಾಡುವಾಗ ಬರುವ ಅನಗತ್ಯವಾದ ಆಲೋಚನೆಗಳನ್ನು ತಪ್ಪಿಸಿ ನನ್ನ ಮರ್ಕಟ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸಹಜವಾದ ಉಸಿರಾಟವನ್ನು ಗಮನಿಸುವ ಮೂಲಕ ಅನಗತ್ಯವಾದ ಆಲೋಚನೆಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿಯೇ ಇಡೀ ಸಮಯ ಕಳೆದುಹೋಗುತ್ತದೆ. ನನ್ನ ಕಥೆ ಹೀಗಾದರೆ, ಆಲೋಚನಾರಹಿತ ಸ್ಥಿತಿಯನ್ನು ಯಾವಾಗ ನಾನು ಸಾಧಿಸುವುದು? ನಿಯಮಿತವಾದ ಧ್ಯಾನದ ಸಮಯದಲ್ಲಿ ಆಲೋಚನಾರಹಿತ ಸ್ಥಿತಿಯನ್ನು ಸಾಧಿಸಿ ನಾನು ಗುಣಾತ್ಮಕವಾಗಿ ಧ್ಯಾನಮಾಡುವಂತಾಗಲು ನೀವು ಏನಾದರೂ ಸಲಹೆಗಳನ್ನು ನೀಡುತ್ತೀರಾ? ಮನೆಯಲ್ಲಿ 4 x 4 ಗಾತ್ರದ ಪಿರಮಿಡ್ ಇಟ್ಟುಕೊಂಡಿದ್ದೇನೆ. ಅದರ ಕೆಳಗೆ ಕುಳಿತು ನಿತ್ಯ ಒಂದು ಗಂಟೆಯ ಕಾಲ ಧ್ಯಾನಾಭ್ಯಾಸವನ್ನು ಮಾಡುತ್ತೇನೆ. ಆದರೂ, ನನ್ನ ಮರ್ಕಟ ಮನಸ್ಸನ್ನು ನಿಯಂತ್ರಿಸುವಲ್ಲಿ ನನಗೆ ತೃಪ್ತಿಯಾಗಿಲ್ಲ.
ಪತ್ರೀಜಿ : ನಿರಂತರ ಅಭ್ಯಾಸವು ಮಾನವನಿಗೆ ಪರಿಣಿತಿಯನ್ನು ತಂದುಕೊಡುತ್ತದೆ. ಭರವಸೆಯನ್ನು ಕಳೆದುಕೊಳ್ಳಬೇಡಿ. ಏಕೆಂದರೆ, ರೋಂ ಸಾಮ್ರಾಜ್ಯವನ್ನು ಒಂದು ದಿನದಲ್ಲಿ ನಿರ್ಮಿಸಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
ಪ್ರಶ್ನೆ : ಧ್ಯಾನಮಾಡುವ ಮೂಲಕ ವಿಕಾಸವನ್ನು ಹೊಂದಬೇಕೆಂಬ ಪ್ರಬಲವಾದ ಬಯಕೆ ನನ್ನಲ್ಲಿದೆ. ಆದಾಗ್ಯೂ, ಸರಿಯಾಗಿ ಧ್ಯಾನವನ್ನು ಮಾಡದಿರುವಂತೆ ಸೋಮಾರಿತನ ಮತ್ತು ಭಯದ ಆಲೋಚನೆಗಳನ್ನು ನನ್ನ ಮನಸ್ಸು ಸೃಷ್ಟಿಸುತ್ತಿದೆ. ಹೆಚ್ಚು ಹೆಚ್ಚು ಧ್ಯಾನವನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುವಂತೆ ನನ್ನ ಮನಸ್ಸನ್ನು ಹೇಗೆ ಸಜ್ಜುಗೊಳಿಸಬೇಕು?
ಪತ್ರೀಜಿ : ನಿರಂತರ ಅಭ್ಯಾಸವು ಮಾನವನಿಗೆ ಪರಿಣಿತಿಯನ್ನು ತಂದುಕೊಡುತ್ತದೆ. ಭರವಸೆಯನ್ನು ಕಳೆದುಕೊಳ್ಳಬೇಡಿ. ಏಕೆಂದರೆ, ರೋಂ ಸಾಮ್ರಾಜ್ಯವನ್ನು ಒಂದು ದಿನದಲ್ಲಿ ನಿರ್ಮಿಸಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
ಪ್ರಶ್ನೆ : “ಧ್ಯಾನ ಮಾಡಿ ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಿ” ಎಂದು ನೀವು ಕೆಲವು ಜನರಿಗೆ ಹೇಳುತ್ತೀರಿ ಮತ್ತು ಕೆಲವರಿಗೆ ಅವರ ಕಷ್ಟಗಳಿಂದ ಹೊರಬರಲು ಮಾರ್ಗದರ್ಶನ ಮಾಡಿ, ಅವರನ್ನು ಸರಿದಾರಿಯಲ್ಲಿ ಇರಿಸುತ್ತೀರಿ. ಸತ್ಯವನ್ನು ಪ್ರಾಮಾಣಿಕವಾಗಿ ಹುಡುಕುವವರಲ್ಲಿ ನಾನೂ ಒಬ್ಬ, ಸತ್ಯವನ್ನು ತಿಳಿಯಲು ಮತ್ತು ಕಲಿಯಲು ನಾನು ಧ್ಯಾನ ಮಾಡುತ್ತಿದ್ದೇನೆ ಮತ್ತು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ನನ್ನ ಪ್ರಗತಿಗೆ ಅಡ್ಡಿಯಾಗಿರುವುದು ಏನು ಮತ್ತು ನನ್ನ ದೋಷಗಳು ಯಾವುವು ಎಂಬುದನ್ನು ದಯವಿಟ್ಟು ತಿಳಿಸಿ, ಮಾರ್ಗದರ್ಶಿಸುವಿರಾ? ಗುರುಗಳೇ, ನನಗೆ ದಯವಿಟ್ಟು ಸಹಾಯ ಮಾಡಿ. ನನ್ನ ಅಜ್ಞಾನವನ್ನು ನಿವಾರಿಸಿ.
ಪತ್ರೀಜಿ : ಯಾವ ಗುರುವೂ ಸಹ ನಿಮಗೆ ಸಹಾಯ ಮಾಡಲಾರರು. ನಿಮ್ಮ ಅಜ್ಞಾನವನ್ನು ಯಾವ ಗುರುವೂ ಸಹ ನಿವಾರಿಸಲಾಗುವುದಿಲ್ಲ. ನಿಮ್ಮ ಉದ್ದೇಶದಲ್ಲಿ ನೀವು ನಿಜಕ್ಕೂ ಪ್ರಾಮಾಣಿಕರಾಗಿದ್ದಲ್ಲಿ, ನಿಮ್ಮ ಅಭ್ಯಾಸದಲ್ಲಿ ನೀವು ನಿಜಕ್ಕೂ ಪ್ರಾಮಾಣಿಕರಾಗಿದ್ದಲ್ಲಿ… .. ನಿಜವಾಗಿಯೂ ಸಹ ನೀವು ಆತ್ಮಸಾಕ್ಷಾತ್ಕಾರವನ್ನು ಪಡೆದೇಪಡೆಯುತ್ತೀರಿ.
ಪ್ರಶ್ನೆ : 2012ರ ಹೊತ್ತಿಗೆ ಧ್ಯಾನ ಜಗತ್’ ಸಾಕಾರಗೊಳಿಸುವುದೇ ನಮ್ಮ ಮುಖ್ಯ ಗುರಿ. ನಾವು ಅದನ್ನು ಸಾಧಿಸುತ್ತೇವೆ, ಇಲ್ಲಿ, 2012ರ ನಂತರದ ಜೀವನದ ಕುರಿತಾಗಿ ನಾನು ತಿಳಿಯಬಯಸುತ್ತೇನೆ. ಹಾಗಾಗಿ, 2012ರ ನಂತರದ ಜೀವನದ ಕುರಿತಾಗಿ ಸ್ವಲ್ಪ ವಿವರಿಸಲು ನಾನು ಕೋರುತ್ತೇನೆ.
ಪತ್ರೀಜಿ : 2012ರ ನಂತರ… ಈ ಭೂಮಿಯ ಮೇಲೆ ನಕಾರಾತ್ಮಕ ಜನರಿಗಿಂತ ಸಕಾರಾತ್ಮಕ ಜನತೆ ಹೆಚ್ಚಾಗಿರುತ್ತಾರೆ. 2016ರ ನಂತರ… ಈ ಭೂಮಿಯ ಮೇಲೆ ಆಧ್ಯಾತ್ಮಿಕರಲ್ಲದ ಜನರಿಗಿಂತ ಆಧ್ಯಾತ್ಮಿಕರಾದ ಜನತೆ ಹೆಚ್ಚಾಗಿರುತ್ತಾರೆ. 2020ರ ಹೊತ್ತಿಗೆ… ಈ ಭೂಮಿ ಮೇಲಿನ ಎಲ್ಲಾ ಜನರು ಆಧ್ಯಾತ್ಮಿಕ ವಿಜ್ಞಾನಿಗಳಾಗಿರುತ್ತಾರೆ.
ಪ್ರಶ್ನೆ : “ಇಡೀ ಭೂಮಂಡಲದಲ್ಲಿಯೇ ಬೃಹತ್ ಆಧ್ಯಾತ್ಮಿಕ ಕ್ರಾಂತಿಯೊಂದು ಸ್ಫೋಟಿಸುತ್ತಿದೆ. ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿಸ್ ಮೂವ್‌ಮೆಂಟ್ ಆಫ್ ಇಂಡಿಯಾ ಈ ಬೃಹತ್ ಬದಲಾವಣೆಯ ಭಾಗವಾಗಿದೆ” ಎಂಬ ನಿಮ್ಮ ಮಾತುಗಳು ಈಗಲೂ ನನಗೆ ನೆನಪಿನಲ್ಲಿದೆ. ಹೌದು ಸರ್, ಪಿ.ಎಸ್.ಎಸ್.ಎಂ.ನ ಕಾರ್ಯಚಟುವಟಿಕೆಗಳ ಮೂಲಕ ನಾವು ಅದನ್ನು ಗಮನಿಸಬಹುದಾಗಿದೆ… ಮತ್ತು 2012ರ ಹೊತ್ತಿಗೆ ’ಧ್ಯಾನ ಜಗತ್’ಅನ್ನು ನಾವು ಸಾಕಾರಗೊಳಿಸಲಿದ್ದೇವೆ…. 2012ರ ನಂತರ ನಮ್ಮ ಪಿರಮಿಡ್ ಮಾಸ್ಟರ್‌ಗಳ ಪಾತ್ರವೇನು?
ಪತ್ರೀಜಿ : 2012ರ ನಂತರ… ಎಲ್ಲಾ ಪಿರಮಿಡ್ ಮಾಸ್ಟರ್‌ಗಳನ್ನು ವಿಶ್ವಮಾನ್ಯತೆಯನ್ನು ಪಡೆದ ಮಾಸ್ಟರ್‌ಗಳಾಗಿ ಪರಿಗಣಿಸಲ್ಪಡುತ್ತಾರೆ.
ಪ್ರಶ್ನೆ : ನಾನು ಕಳೆದ ಎರಡು ವರ್ಷಗಳಿಂದ ಧ್ಯಾನವನ್ನು ಮಾಡುತ್ತಿದ್ದೇನೆ. ಧ್ಯಾನದ ಮೂಲಕ ನಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದು ಹೇಗೆ, ಮತ್ತು ಸಂಕಲ್ಪವು ಹೇಗಿರಬೇಕು ಮತ್ತು ಅದಕ್ಕಾಗಿ ಎಷ್ಟು ದಿನಗಳ ಕಾಲ ಮತ್ತು ದಿನಕ್ಕೆ ಎಷ್ಟು ಗಂಟೆಗಳ ಕಾಲ ನಾನು ಧ್ಯಾನವನ್ನು ಮಾಡಬೇಕು?
ಪತ್ರೀಜಿ : ನಿಮ್ಮ ಅಭ್ಯಾಸಕ್ಕೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸದೆ ಧ್ಯಾನಾಭ್ಯಾಸವನ್ನು ಮುಂದುವರೆಸಿ.
ಪ್ರಶ್ನೆ : “ಇತರರನ್ನು ಅರ್ಥಮಾಡಿಕೊಳ್ಳುವುದು ಹೇಗೆ?”
ಪತ್ರೀಜಿ : ಮೊದಲು ನಮ್ಮನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು, ಹೀಗೆ ’ನಮ್ಮನ್ನು ನಾವು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ’ ನಮ್ಮ ಜೊತೆ ನಾವು ಕೂಡಿರಬೇಕು. ಯಾವಾಗ ನಮ್ಮನ್ನು ನಾವು ಸಂಪೂರ್ಣವಾಗಿ, ಸರಿಯಾಗಿ ಅರ್ಥಮಾಡಿಕೊಳ್ಳುತ್ತೇವೆಯೋ ಆಗಲೇ ನಾವು ಇತರರನ್ನು ಕೂಡಾ ಅರ್ಥಮಾಡಿಕೊಳ್ಳಬಲ್ಲೆವು. ನಮ್ಮನ್ನು ನಾವು ಪ್ರೀತಿಸಿದ ಹಾಗೆ ಇತರರನ್ನು ಕೂಡಾ ಪ್ರೀತಿಸಬಲ್ಲವರಾಗುತ್ತೇವೆ. ಇದೆಲ್ಲಾ ಕೇವಲ ನಿರಂತರ ಧ್ಯಾನ ಸಾಧನೆಯಿಂದ ಮಾತ್ರವೇ ಸಾಧ್ಯವಾಗುತ್ತದೆ.
ಪ್ರಶ್ನೆ : “ಕಷ್ಟಗಳನ್ನು ನಾವು ಹೇಗೆ ಎದುರಿಸಬೇಕು?”
ಪತ್ರೀಜಿ : ‘ಮನುಷ್ಯ’ ಎನ್ನುವ ಪ್ರತಿಯೊಬ್ಬನಿಗೂ ಚಿಕ್ಕದ್ದೊ, ದೊಡ್ಡದೊ ಕಷ್ಟಗಳು ಇರುತ್ತಲೇ ಇರುತ್ತವೆ. ಅನೇಕ ಜನರು ಹೇಡಿತನದಿಂದ ಅವುಗಳಿಂದ ದೂರ ಓಡಿಹೋಗಲು ಪ್ರಯತ್ನಿಸುತ್ತಿರುತ್ತಾರೆ. ಹಾಗೆ ಅಲ್ಲದೆ, ಅವುಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ, ಸರಿಯಾದ ರೀತಿಯಲ್ಲಿ ಪರಿಹರಿಸಿಕೊಳ್ಳಲಾದರೇ ನಮ್ಮ ಆತ್ಮಶಕ್ತಿಯನ್ನು ನಾವು ಅರಿವಿಗೆ ತಂದುಕೊಳ್ಳಬಲ್ಲೆವು. ನಮಗೇ ತಿಳಿಯದೆ ನಮ್ಮ ಒಳಗೇ ಅಡಗಿರುವ ಅತ್ಯಂತ್ಯ ಅಮೂಲ್ಯವಾದ (ಬೆಲೆಬಾಳುವ) ‘ಆತ್ಮಶಕ್ತಿ’ ಎನ್ನುವ ಫಲವನ್ನು ಹೊರತಂದು ನಮಗೆ ಎಟುಕುವ ಹಾಗೆ ಇಡುವ ಸಾಧನೆಗಳೇ ಕಷ್ಟಗಳು, ಅದಕ್ಕೇ ‘ಕಷ್ಟೇಫಲೆ’ ಎಂದರು
ಪ್ರಶ್ನೆ : “ನಿದ್ದೆಯನ್ನು ಜಯಿಸುವುದು ಹೇಗೆ?”
ಪತ್ರೀಜಿ : ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ .. ಅರ್ಜುನನನ್ನು ‘ಗುಡಾಕೇಶ’ ಎಂದು ಸಂಬೋಧಿಸಿದರು. ‘ಗುಡಾಕೇಶ’ ಅಂದರೆ ‘ನಿದ್ದೆಯನ್ನು ಜಯಿಸಿದವನು’ ಎಂದು ಅರ್ಥ. ‘ನಿದ್ದೆಯನ್ನು ಜಯಿಸುವುದು’ ಅಂದರೆ, ಅದನ್ನು ನಮ್ಮ ಆಧೀನದಲ್ಲಿ ಇಟ್ಟುಕೊಳ್ಳುವುದು .. ಮತ್ತು ಅದರ ಮೇಲೆ ನಮ್ಮ ಹಿಡಿತವನ್ನು ಸಾಧಿಸುವುದು. ರಾತ್ರಿಹೊತ್ತು ತಿನ್ನುವುದನ್ನು ಕಡಿಮೆ ಮಾಡಬೇಕು.. ಒಳ್ಳೆಯ ಆತ್ಮಜ್ಞಾನದಿಂದ ಕೂಡಿರುವ ಪುಸ್ತಕಗಳನ್ನು ಓದಬೇಕು.. ಇನ್ನೂ ಹೆಚ್ಚು ಧ್ಯಾನ ಮಾಡಬೇಕು, ಆಗಲೇ ನಮ್ಮ ನಿದ್ದೆ ನಮ್ಮ ಆಧೀನದಲ್ಲಿರುತ್ತದೆ.
ಪ್ರಶ್ನೆ : “ನಿದ್ದೆಗೂ, ಧ್ಯಾನಕ್ಕೂ ನಡುವೆ ಇರುವ ವ್ಯತ್ಯಾಸವೇನು?”
ಪತ್ರೀಜಿ : ‘ನಿದ್ದೆ’ ಅಂದರೆ ಅರಿವು ಇಲ್ಲದ ಧ್ಯಾನ.. ‘ಧ್ಯಾನ’ ಅಂದರೆ ಅರಿವಿನಿಂದ ಕೂಡಿದ ನಿದ್ದೆ. ನಿದ್ದೆಯಲ್ಲಿ ಅಥವಾ ಧ್ಯಾನದಲ್ಲಿ ಎರಡರಲ್ಲಿಯೂ ನಡೆಯುವುದು ಹೆಚ್ಚುಕಡಮೆ ಒಂದೇಆಗಿರುತ್ತದೆ. ನಮ್ಮ ಭೌತಿಕ ಶರೀರದಿಂದ ನಮ್ಮ ಸೂಕ್ಷ್ಮಶರೀರ ಹೊರಬರುವುದು. ಆದರೆ, ನಿದ್ದೆಯಲ್ಲಿ ಅರಿವಿಲ್ಲದೆಯೇ ಹೊರಬಂದ ಸೂಕ್ಷ್ಮಶರೀರ ಅನೇಕಾನೇಕ ಲೋಕಗಳಲ್ಲಿ ತಿರುಗಾಡುತ್ತಾ ಎಷ್ಟೆಷ್ಟೋ ಜ್ಞಾನವನ್ನು ಹೊಂದುತ್ತದೆ. ಆದರೆ, ಪುನಃ ಮರಳಿ ಭೌತಿಕ ಶರೀರದೊಳಗೆ ಬಂದನಂತರ ಆ ಜ್ಞಾನವನ್ನೆಲ್ಲಾ ಮರೆತುಬಿಡುತ್ತದೆ. ಅದೇ ‘ಧ್ಯಾನ’ದಲ್ಲಾದರೇ ನಮ್ಮ ಭೌತಿಕ ದೇಹದಿಂದ ತುಂಬಾ ಅರಿವಿನಿಂದ ಹೊರಬಂದ ಸೂಕ್ಷ್ಮಶರೀರ ಅನೇಕಾನೇಕ ಲೋಕಗಳಿಗೆ ಅರಿವಿನಿಂದ ಕೂಡಿದ ಪ್ರಯಾಣವನ್ನು ಬೆಳಸಿ ಅಲ್ಲಿರುವ ಜ್ಞಾನವನ್ನೆಲ್ಲಾ ಭದ್ರವಾಗಿ ಹೊತ್ತುಕೊಂಡು .. ಮರಳಿ ಭೌತಿಕಶರೀರದೊಳಗೆ ಬಂದು ಸೇರುತ್ತದೆ. ಈ ‘ಅನುಭವ ಜ್ಞಾನ’ ಎನ್ನುವುದು ನಮ್ಮ ಪ್ರಾಪಂಚಿಕ ಜೀವನದ ವ್ಯವಹಾರಗಳನ್ನು ಸರಿಮಾಡಿಕೊಳ್ಳುವುದರಲ್ಲಿ ನಮಗೆ ತುಂಬಾ ಸಹಾಯ ಮಾಡುತ್ತದೆ. ಇದರಿಂದ ನಮ್ಮ ಆತ್ಮೋನ್ನತಿಗೆ ತುಂಬಾ ಉಪಯೋಗವಾಗುತ್ತದೆ.
ಪ್ರಶ್ನೆ : “ಒಬ್ಬ ಯೋಗಿಗೂ .. ಮತ್ತು ಒಬ್ಬ ಶಾಸ್ತ್ರಜ್ಞನಿಗೂ ಇರುವ ವ್ಯತ್ಯಾಸವೇನು?”
ಪತ್ರೀಜಿ : ಯೋಗಿಯಾದ ಪ್ರತಿಯೊಬ್ಬನೂ ಒಬ್ಬ ಶಾಸ್ತ್ರಜ್ಞನೇ .. ಆಧ್ಯಾತ್ಮಿಕ ಶಾಸ್ತ್ರದಲ್ಲಿ ಪ್ರಯೋಗಗಳನ್ನು ಮಾಡುವ ಆತ್ಮಜ್ಞಾನ ಶಾಸ್ತ್ರಜ್ಞ. ಯೋಗಿಗಳೆಲ್ಲರೂ ಶಾಸ್ತ್ರಜ್ಞರೇ. ಶಾಸ್ತ್ರಜ್ಞರೆಲ್ಲರೂ ಯೋಗಿಗಳಾಗಿ ತೀರಬೇಕು.
ಪ್ರಶ್ನೆ : “ಯೋಗಿಗೆ ಸಮಸ್ಯೆಗಳಿರುತ್ತವೆಯಾ?”
ಪತ್ರೀಜಿ : “ಮರ ಎಷ್ಟು ದೊಡ್ಡದಿರುತ್ತದೆಯೋ ಅಷ್ಟು ಗಾಳಿಯಲ್ಲವೇ. ಅವರವರ ಸಮಸ್ಯೆಗಳು ಅವರವರಿಗಿರುತ್ತವೆ. ಮೀನಿನ ಸಮಸ್ಯೆ ಮೀನಿಗೆ, ತಿಮಿಂಗಲದ ಸಮಸ್ಯೆ ತಿಮಿಂಗಲದ್ದು. ಆದರೆ, ಒಬ್ಬ ಧ್ಯಾನಯೋಗಿ ಸಾಮಾನ್ಯ ಮಾನವನಂತೆ ಸಮಸ್ಯೆಯನ್ನು ನೋಡಿ ಹೆದರದೇ ಸ್ಥಿತಪ್ರಜ್ಞತೆಯಿಂದ ಮೊದಲು ಆ ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳುತ್ತಾನೆ. ಆ ಸಮಸ್ಯೆಯನ್ನು ಎದುರಿಸಲು ಇರುವ ಸಾವಿರಾರು ಪರಿಹಾರ ಮಾರ್ಗಗಳನ್ನು ಅಧ್ಯಯನ ಮಾಡುತ್ತಾನೆ. ಧ್ಯಾನದ ಮೂಲಕ ಆ ಸಮಸ್ಯೆಯನ್ನು ಎದುರಿಸುವ ಆತ್ಮಶಕ್ತಿಯನ್ನು ವೃದ್ಧಿಗೊಳಿಸಿಕೊಂಡು ಅತಿಸುಲಭವಾಗಿ ಆ ಸಮಸ್ಯೆಯನ್ನು ತನ್ನಷ್ಟಕ್ಕೆ ತಾನೇ ಪರಿಹರಿಸಿಕೊಳ್ಳುತ್ತಾನೆ.
ಪ್ರಶ್ನೆ : “ಧ್ಯಾನದಲ್ಲಿ ಅನುಭವಿಸುವ ಆನಂದಕ್ಕೂ.. ಮತ್ತು ನಿತ್ಯಜೀವನದಲ್ಲಿ ಹೊಂದುವ ಆನಂದಕ್ಕೂ ನಡುವೆ ಇರುವ ವ್ಯತ್ಯಾಸವೇನು?”
ಪತ್ರೀಜಿ : “ಆನಂದಗಳು ಮೂರು ಬಗೆ ಇವೆ: ಒಂದು- ಶಾರೀರಿಕ ಆನಂದ.. ಎರಡನೆಯದು – ಮಾನಸಿಕ ಆನಂದ.. ಮೂರನೆಯದು – ಆತ್ಮಾನಂದ. ಊಟ, ಬಟ್ಟೆ, ವಸತಿ ಎನ್ನಲಾಗುವ ಶಾರೀರಿಕ ಅವಶ್ಯಗಳೆಲ್ಲಾ ಒದಗಿಸುವುದರಿಂದ ಶರೀರವು ಆನಂದವನ್ನು ಹೊಂದುತ್ತದೆ. ಒಳ್ಳೆಯ ಸುಮಧುರವಾದ ಸಂಗೀತವನ್ನು ಆಲಿಸುವುದು, ಪ್ರೀತಿಕರವಾದ ಮಾತುಗಳನ್ನು ಕೇಳಿಸಿಕೊಳ್ಳುವುದರ ಮೂಲಕ ಮಾನಸಿಕ ಆನಂದ ಸಿಗುತ್ತದೆ. ಧ್ಯಾನದಲ್ಲಿ ದಿವ್ಯಚಕ್ಷುವಿನ ಅನುಭವಗಳನ್ನು ಹೊಂದುವುದರಿಂದ, ಸೂಕ್ಷ್ಮಶರೀರಯಾನಗಳನ್ನು ಮಾಡುವುದರಿಂದ, ಅನೇಕಾನೇಕ ಉನ್ನತ ಲೋಕವಾಸಿಗಳ ದಿವ್ಯಸಂದೇಶಗಳನ್ನು ಕೇಳಿಸಿಕೊಳ್ಳುವುದರಿಂದ ಆತ್ಮಾನಂದವಾಗುತ್ತದೆ. ಈ ಭೂಮಿಯ ಮೇಲೆ ಜನ್ಮಪಡೆದ ಪ್ರತಿಯೊಬ್ಬರೂ ಕೂಡಾ ಈ ಮೂರು ಆನಂದಗಳನ್ನೂ ಸಮಪಾಲಿನಲ್ಲಿ ಅನುಭವಿಸಿಯೇ ತೀರಬೇಕಾದ್ದೇ. ಹಾಗೆ ಅನುಭವಿಸುತ್ತಾ ಆನಂದಿಸುವುದೇ ಬುದ್ಧತ್ವ.”
ಪ್ರಶ್ನೆ : “ದೇವರು ಒಬ್ಬನೇ, ಆದರೆ.. ವಿವಿಧ ಮತಗಳು ಏತಕ್ಕಾಗಿವೆ?”
ಪತ್ರೀಜಿ : “ಒಳ್ಳೆಯ ಪ್ರಶ್ನೆ, ಇದೇ ಪ್ರಶ್ನೆ ಬಾಲ್ಯದಲ್ಲಿ ನನಗೆ ಸಹ ಬಂದಿತ್ತು. ಅದಕ್ಕೇ ನಾನು ಈ ನ್ಯೂ ಏಜ್ ಸ್ಪಿರಿಚ್ಯುವಲ್ ಮೂವ್‌ಮೆಂಟನ್ನು ಆರಂಭಿಸಿದ್ದೇನೆ. ಇದರ ಮೂಲಕವೇ ‘ಯೂನಿವರ್ಸಲ್ ರಿಲಿಜಿಯನ್’ ಎನ್ನುವುದು ಸಾಧ್ಯ.”
ಪ್ರಶ್ನೆ : “ವಿವಿಧ ಮತಸ್ಥರು ಧ್ಯಾನ ಮಾಡಿದರೆ .. ಒಂದೇ ಅನುಭೂತಿ ಉಂಟಾಗುತ್ತದೆಯಾ?”
ಪತ್ರೀಜಿ : “ವಿವಿಧ ಮತಸ್ಥರು ರಾಸಾಯನಿಕ ಪ್ರಯೋಗಗಳನ್ನು ಮಾಡಿದರೆ ಫಲಿತಾಂಶ ಒಂದೇ ತರಹ ಇರುತ್ತದೆಯೊ… ಇಲ್ಲವೊ?, ಹಾಗೆಯೇ, ಧ್ಯಾನದಲ್ಲಿ ಕೂಡಾ ಎಲ್ಲ ಮತಸ್ಥರಿಗೂ ಬರುವ ಅನುಭವ ಒಂದೇ.”
ಪ್ರಶ್ನೆ : “ನಾನು ನನ್ನ ಅಂತರ್ಗತಶಕ್ತಿಯನ್ನು ಹೇಗೆ ತಿಳಿದುಕೊಳ್ಳಬೇಕು?”
ಪತ್ರೀಜಿ : “‘ಅಂತರ್ಗತ ಶಕ್ತಿಯನ್ನು ತಿಳಿದುಕೊಳ್ಳಬೇಕು’ ಎಂದುಕೊಳ್ಳುವುದು ತುಂಬಾ ಒಳ್ಳೆಯ ವಿಷಯ; ಆದರೆ, ಅಂತರ್ಗತ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ ಮೊದಲು ನಾವು ಬಹಿರ್ಗತವಾಗಿರುವ ಅನವಶ್ಯಕ ವಿಷಯಗಳನ್ನು ಕುರಿತು ಯೋಚಿಸುವುದನ್ನು, ಕೇಳಿಸಿಕೊಳ್ಳುವುದನ್ನೂ, ಮಾತನಾಡುವುದನ್ನೂ, ನೋಡುವುದನ್ನೂ ಕಡಿಮೆ ಮಾಡಬೇಕು; ಅನವಶ್ಯಕವಾಗಿ ಹೊರಗೆ ತಿರುಗುವುದನ್ನು ಬಿಡಬೇಕು, ಅನವಶ್ಯಕ ಬಹಿರ್ಮುಖ ವಿಷಯಗಳ ಮೇಲೆ ವ್ಯಾಮೋಹವನ್ನು ಕಡಿಮೆ ಮಾಡಿಕೊಂಡು.. ಶ್ವಾಸದ ಮೇಲೆ ಗಮನವಿಟ್ಟು ಅಂತರ್ಮುಖರಾಗಬೇಕು. ಆಗಲೇ ನಮ್ಮೊಳಗೆ ಇರುವ ಅಖಂಡವಾದ, ಅಪಾರವಾದ ಅಂತರ್ಗತ ಶಕ್ತಿಯನ್ನು ನಾವು ತಿಳಿದುಕೊಳ್ಳಬಲ್ಲೆವು.”
ಪ್ರಶ್ನೆ : “ಪ್ರಾಪಂಚಿಕ ವಿದ್ಯೆಗೂ.. ಆತ್ಮಜ್ಞಾನಕ್ಕೂ.. ನಡುವೆ ಇರುವ ವ್ಯತ್ಯಾಸವೇನು?”
ಪತ್ರೀಜಿ : “ಪ್ರಾಪಂಚಿಕ ವಿದ್ಯೆ ನಮಗೆ ಕೇವಲ ಪದಾರ್ಥಜ್ಞಾನವನ್ನು ಮಾತ್ರವೇ ಉಂಟು ಮಾಡಿದರೆ .. ಆಧ್ಯಾತ್ಮಿಕ ಜ್ಞಾನವು ನಮಗೆ ಸೃಷ್ಟಿಯ ಸಿದ್ಧಾಂತಗಳಿಗೆ ಅನುಗುಣವಾಗಿ ಹೇಗೆ ಜೀವಿಸಬೇಕೊ ಹೇಳಿಕೊಡುತ್ತದೆ.”
ಪ್ರಶ್ನೆ : “ಆಧ್ಯಾತ್ಮಿಕತೆ ಅಂದರೆ ನಿಜವಾದ ಅರ್ಥವೇನು?”
ಪತ್ರೀಜಿ : ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನವೇ ಆಧ್ಯಾತ್ಮಿಕತೆ!
ಒಂದು ಆನೆಯ ಕುರಿತು ಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಆನೆಯ ಬಾಲದಿಂದ ಹಿಡಿದು ಕಾಲು, ಹೊಟ್ಟೆ, ಕುಂಭಸ್ಥಳದವರೆಗೂ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಆಗಲೇ ಆನೆಯ ಕುರಿತು ಪೂರ್ಣಸ್ವರೂಪ ನಮಗೆ ತಿಳಿಯುತ್ತದೆ. ಹಾಗೆಯೇ, ನಮ್ಮ ಭೌತಿಕ ಶರೀರದೊಂದಿಗೆ ನಮ್ಮ ಸೂಕ್ಷ್ಮ ಶರೀರ, ನಮ್ಮ ಕಾರಣ ಶರೀರ, ನಮ್ಮ ಮಹಾಕಾರಣ ಶರೀರಗಳನ್ನು ಕುರಿತು ಕೂಡಾ ನಾವು ಸಂಪೂರ್ಣವಾಗಿ ತಿಳಿದುಕೊಂಡರೇನೇ ನಮ್ಮ ಕುರಿತು ಸಂಪೂರ್ಣ ಜ್ಞಾನ ನಮಗೆ ಉಂಟಾಗುತ್ತದೆ.
ಅಷ್ಟೇ ವಿನಃ .. “ಕಣ್ಣಿಗೆ ಕಾಣಿಸುವ ಭೌತಿಕ ಶರೀರ”ವನ್ನು ಕುರಿತು ಮಾತ್ರವೇ ತಿಳಿದುಕೊಂಡು ಇನ್ನು “ಅದೇ ಸಂಪೂರ್ಣ ಜ್ಞಾನ” ಎಂದುಕೊಂಡರೆ .. ಕೇವಲ ಆನೆಯ ‘ಬಾಲ’ವನ್ನು ಕುರಿತು ಮಾತ್ರವೇ ನಮಗೆ ತಿಳಿದಂತಾಗುತ್ತದೆ!
ಧ್ಯಾನದ ಮೂಲಕ ನಮ್ಮ ಸ್ಥೂಲ ಶರೀರದಿಂದ ಬಿಡುಗಡೆಯಾಗಿ ಸೂಕ್ಷ್ಮಶರೀರ ಕುರಿತು ತಿಳಿದುಕೊಳ್ಳಬೇಕು. ಸೂಕ್ಷ್ಮಶರೀರದಿಂದ ಕೂಡಾ ಬಿಡುಗಡೆಯಾಗಿ ಕಾರಣಶರೀರವ ಕುರಿತು ತಿಳಿದುಕೊಳ್ಳಬೇಕು. ಕಾರಣ ಶರೀರದಿಂದ ಸಹ ಬಿಡುಗಡೆಯಾಗಿ ಮಹಾಕಾರಣ ಶರೀರವನ್ನು ಕುರಿತು ತಿಳಿದುಕೊಳ್ಳಬೇಕು. ಮಹಾಕಾರಣ ಶರೀರದಿಂದ ಮಹಾಕಾರಣ ಲೋಕಗಳಲ್ಲಿ ವಿಹರಿಸುತ್ತಾ .. “ಅಹಂ ಬ್ರಹ್ಮಾಸ್ಮಿ ತತ್ವ”ದಿಂದ ಆನಂದದಿಂದ ಇರುವುದೇ .. ಆಧ್ಯಾತ್ಮಿಕತೆ!
ಪ್ರಶ್ನೆ : ಗುರುಗಳಲ್ಲಿ ಬಗೆ ಬಗೆಯ ಗುರುಗಳು ಇರುತ್ತಾರಾ?
ಪತ್ರೀಜಿ : ‘ಬಗೆ ಬಗೆ’ ಎನ್ನುವುದು ಯಾವುದರಲ್ಲಿಲ್ಲ?! ಬಗೆ ಬಗೆಯ ಹಣ್ಣುಗಳು, ಬಗೆ ಬಗೆಯ ಹಕ್ಕಿಗಳು, ಬಗೆ ಬಗೆಯ ಪ್ರಾಣಿಗಳು, ಬಗೆ ಬಗೆಯ ಮನುಷ್ಯರೂ ಇದ್ದಾರೆ. ಹಾಗೆಯೇ, ಬಗೆ ಬಗೆಯ ಗುರುಗಳು ಸಹ ಇರುತ್ತಾರೆ. ಬಗೆ ಬಗೆಯ ಗುರುಗಳು ತಮಗಿರುವ ಸೀಮಿತ ಅನುಭವದಿಂದ ಬಗೆ ಬಗೆಯ ಬೋಧನೆಗಳನ್ನು ಮಾಡುತ್ತಾ .. ತಮಗೆ ತಿಳಿದಿರುವಂತಹ ಸೀಮಿತ ಸತ್ಯಗಳನ್ನು ಯಥಾಶಕ್ತಿಯಿಂದ ಪ್ರಕಾಶಗೊಳಿಸುತ್ತಿರುತ್ತಾರೆ.
ಆ ಸೀಮಿತ ಸತ್ಯಗಳು ಬೇಕಾದವರಿಗೆ ಅದು ಮಹಾಪ್ರಕಾಶ ಮತ್ತು ಮಹಾಪ್ರಸಾದವಾಗುತ್ತದೆ.
ಪ್ರಶ್ನೆ : “ಓದಿಗೂ, ಜ್ಞಾನಕ್ಕೂ ಇರುವ ವ್ಯತ್ಯಾಸವೇನು?”
ಪತ್ರೀಜಿ : ಓದು ಎಂಬುದು ನಮಗೆ ಪ್ರಪಂಚ ಸಂಬಂಧಿತ ವಿಷಯ ಪರಿಜ್ಞಾನವನ್ನು (ಲೌಕಿಕ ಜ್ಞಾನ) ನೀಡುತ್ತದೆ. ಆದರೆ, ಜ್ಞಾನ ಎಂಬುದು ಸರಿಯಾಗಿ ಹೇಗೆ ಜೀವಿಸಬೇಕು ಎಂಬುದನ್ನು ನಮಗೆ ಕಲಿಸುತ್ತದೆ.
ಪ್ರಶ್ನೆ : ಬಂಧುತ್ವ – ಮಿತ್ರತ್ವ .. ಈ ಎರಡನ್ನೂ ಬಿಡಿಸಿ ನೋಡುವುದು ಹೇಗೆ?
ಪತ್ರೀಜಿ : ಎಲ್ಲಿ ‘ಅಪೇಕ್ಷೆ’ ಅಂದರೆ ‘expectation’ .. ಎನ್ನುವುದು ಇರುತ್ತದೆಯೊ ಅಲ್ಲಿ ಬಂಧುತ್ವ ಇರುತ್ತದೆ. ಬಂಧುತ್ವ ಎನ್ನುವುದು ಬಂಧನಗಳನ್ನು ಉಂಟುಮಾಡುತ್ತದೆ. ಒಬ್ಬ ತಂದೆ ತನ್ನ ಮಗನನನ್ನು ಉಪಯುಕ್ತ ವ್ಯಕ್ತಿಯನ್ನಾಗಿಸುವುದು ತನ್ನ ಧರ್ಮ ಎಂದು ಗುರುತಿಸಬೇಕು. ಅವನು ಉಪಯುಕ್ತ ವ್ಯಕ್ತಿಯಾದ ನಂತರ ಆ ತಂದೆ ಪುನಃ ತನ್ನ ಮಗನಿಂದ ಏನನ್ನೂ ಆಶಿಸದೇ ಯಥಾರ್ಥ ಪರಿಸ್ಥಿತಿಯನ್ನು ಸ್ವೀಕರಿಸುತ್ತಾ ಎಲ್ಲಾ ಪರಿಸ್ಥಿತಿಗಳಲ್ಲೂ ಕೂಡಾ ಸಂತೋಷವಾಗಿ ಇರುವಂತಾದರೆ .. ಅವರಿಬ್ಬರ ನಡುವೆ ಮಿತ್ರತ್ವ ಇದ್ದಂತೆ. ಬಂಧುತ್ವದ ಬಂಧನಗಳು ಕಡಿತಗೊಂಡ ಕ್ಷಣದಿಂದಲೇ ಮಿತ್ರತ್ವ ಎನ್ನುವುದು ಪ್ರಾರಂಭವಾಗುತ್ತದೆ ಎಂದು ತಿಳಿದುಕೊಳ್ಳಬೇಕು.
ಪ್ರಶ್ನೆ : “ಜೀವನ ಧ್ಯೇಯ ಹೇಗೆ ಏರ್ಪಡಿಸಿಕೊಳ್ಳಬೇಕು?”
ಪತ್ರೀಜಿ : ಪ್ರತಿಕ್ಷಣ ಆನಂದವಾಗಿ ಜೀವಿಸುವುದೇ .. ಜೀವನ ಧ್ಯೇಯ. ಸಿರಿತನದಲ್ಲಾಗಲಿ .. ಬಡತನದಲ್ಲಾಗಲಿ .. ಜಯದಲ್ಲಾಗಲಿ .. ಅಪಜಯದಲ್ಲಾಗಲಿ .. ಮಾನದಲ್ಲಾಗಲಿ .. ಅವಮಾನದಲ್ಲಾಗಲಿ .. ಒಂಟಿಯಾಗಿ ಇದ್ದಾಗಲಾಗಲಿ .. ಸಮೂಹದಲ್ಲಾಗಲಿ .. ಹುಟ್ಟಿದಾಗಲಾಗಲಿ .. ಮರಣದಲ್ಲಾಗಲಿ .. ಎಲ್ಲಾ ಪರಿಸ್ಥಿತಿಗಳಲ್ಲೂ ಕೂಡಾ ಆನಂದವಾಗಿ ಜೀವಿಸಬಲ್ಲವರಾಗಬೇಕು.
ನಮ್ಮ ಆನಂದ ನಮಗೆಷ್ಟು ಮುಖ್ಯವೋ ಇತರರ ಆನಂದವು ಕೂಡಾ ನಮಗೆ ಅಷ್ಟೇ ಮುಖ್ಯವಾಗಿರಬೇಕು. ನಮ್ಮ ಮೌನ ನಮಗೆಷ್ಟು ಮುಖ್ಯವೋ ಇತರರ ಮೌನವು ಕೂಡಾ ನಮಗಷ್ಟೇ ಮುಖ್ಯವಾಗಿ ಇರಬೇಕು. ನಮ್ಮ ಏಕಾಂತ ನಮಗೆಷ್ಟು ಮುಖ್ಯವೋ ಇತರರ ಏಕಾಂತವು ಕೂಡಾ ನಮಗಷ್ಟೇ ಮುಖ್ಯವಾಗಿ ಇರಬೇಕು. ಹೀಗೆ ಪ್ರತಿಕ್ಷಣ ಅರಿವಿನಿಂದ ಜೀವಿಸಲಾಗುವುದೇ .. ಜೀವನ ಧ್ಯೇಯ.
ಪ್ರಶ್ನೆ : “ವಿದ್ಯೆ ಒಂದು ವ್ಯಾಪಾರವಾಗಿ ಬದಲಾಗುತ್ತಿರುವ ಈ ಸಮಯದಲ್ಲಿ ನಿಜಕ್ಕೂ ಎಂತಹ ವಿದ್ಯೆಯನ್ನು ಅಭ್ಯಸಿಸಬೇಕು ಎಂಬುದೇ ತಿಳಿಯುತ್ತಿಲ್ಲ”.
ಪತ್ರೀಜಿ : ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿ, ಜೀಸಸ್ ಕ್ರೈಸ್ಟ್, ಗೌತಮಬುದ್ಧರು, ಷಿರಿಡಿ ಸಾಯಿಬಾಬಾ, ಮಹಮ್ಮದ್ ಪ್ರವಕ್ತ .. ಹೀಗೆ ಅನೇಕ ಜನ ಯೋಗಿಗಳು ಪ್ರಾಪಂಚಿಕ ವಿದ್ಯೆಯನ್ನೇನೂ ಅಭ್ಯಸಿಸಲಿಲ್ಲ. ಆದರೆ, ಪ್ರಾಪಂಚಿಕ ವಿದ್ಯೆಯನ್ನು ತುಂಬಾ ಓದಿ ಎಣಿಕೆಯಿಲ್ಲದಷ್ಟು ಡಿಗ್ರಿಗಳನ್ನು ತಮ್ಮ ಹೆಸರಿನ ಕೊನೆಯಲ್ಲಿ ಹಾಕಿಕೊಂಡಿರುವ ಬಹಳಷ್ಟು ಜನ ಇವರ ಹತ್ತಿರ ಕಲಿಯಲು ಬಂದರು. ನಿಜವಾದ ವಿದ್ಯೆ ವಿನಯವನ್ನೂ, ವಿಜ್ಞಾನವನ್ನೂ ಹೆಚ್ಚುವಂತೆ ಇರುತ್ತದೆ ಮತ್ತು ಆ ವಿನಯ, ವಿಜ್ಞಾನ ಯಾರಿಗೆ ಇರುತ್ತದೆಯೊ ಅವರೇ ನಿಜವಾದ ವಿದ್ಯೆಯನ್ನು ಪಡೆದಿರುವವರು. ಅವು ಇಲ್ಲದವರು ಎಷ್ಟು ಸರ್ಟಿಫಿಕೇಟ್‌ಗಳು ಇದ್ದರೂ .. ವಿದ್ಯೆ ಇಲ್ಲದವರ ಸಮಾನವೇ.
ಪ್ರಶ್ನೆ : “ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು ಹೇಗೆ?”
ಪತ್ರೀಜಿ : ಸಾರ್ಥಕ ಅಂದರೆ .. ಅರ್ಥದಿಂದ ಕೂಡಿಕೊಂಡಿರುವುದು. ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದೆಂದರೆ ಹುಟ್ಟಿದ ಕ್ಷಣದಿಂದ ಮರಣಿಸುವವರೆಗು ಪ್ರತಿಕ್ಷಣ ತುಂಬಾ ಅರ್ಥಯುತವಾಗಿ ಜೀವಿಸುವುದು. ಪ್ರತಿಯೊಂದು ದೇಶಕಾಲ ಪರಿಸ್ಥಿತಿಯಲ್ಲೂ, ಪ್ರತಿಯೊಂದು ಕ್ಷಣವನ್ನೂ ಸೃಜನಾತ್ಮಕವಾಗಿ, ಕ್ರಿಯಾಶೀಲವಾಗಿ, ದುಃಖರಾಹಿತ್ಯವಾಗಿ, ಎಲ್ಲರಿಗೂ ಶ್ರೇಯಸ್ಸನ್ನು ಉಂಟುಮಾಡುವ ರೀತಿಯಲ್ಲಿ ಜೀವಿಸಬೇಕು .. ಹೀಗೆ ಸತ್ಯಸ್ಥಿತರಾಗಿ, ಧರ್ಮಪ್ರವರ್ತಕರಾಗಿ, ಸಕಲ ಪ್ರಾಣಿಕೋಟಿಯ ಬಗ್ಗೆ ಅನುರಾಗ ಪೂರಿತರಾಗಿ ಲೋಕಕಲ್ಯಾಣಕರವಾಗಿ ಜೀವಿಸುತ್ತಾ ಇದ್ದರೆ ಅದನ್ನು “ಸಾರ್ಥಕ ಜೀವನ” ಎನ್ನುತ್ತೇವೆ.
ಸಾರ್ಥಕವಾದ ಜೀವನವನ್ನು ಜೀವಿಸಬೇಕಾದರೆ .. ನಾವು ಹಿಡಿದುಕೊಳ್ಳಬೇಕಾಗಿರುವುದು “ಹಂಸ”. ಬಿಡಬೇಕಾಗಿರುವುದು “ಹಿಂಸೆ”.
ಪ್ರಶ್ನೆ : “‘ಹೋಲಿಕೆ’ ಎನ್ನುವುದು ಇರಬಹುದೇ?”
ಪತ್ರೀಜಿ : “‘ಹೋಲಿಕೆ’ ಎನ್ನುವುದು ಯಾವಾಗಲೂ ಇರಬೇಕಾದ್ದೇ. ಅದು ಇಲ್ಲದಿದ್ದರೆ ನಮ್ಮಲ್ಲಿ ಅಭಿವೃದ್ಧಿ ಎನ್ನುವುದು ನಿಂತುಹೋಗುತ್ತದೆ.
“ಆದರೆ, ಆ ‘ಹೋಲಿಕೆ’ ಎನ್ನುವುದು ಇತರರೊಂದಿಗೆ ಅಲ್ಲ. ಅದು ನಮ್ಮೊಂದಿಗೆ ನಾವೇ ಹೋಲಿಸಿಕೊಳ್ಳಬೇಕು. ‘ನಿನ್ನೆ ನಾನು ಹೇಗಿದ್ದೆ?’ .. ‘ಈ ದಿನ ಹೇಗಿದ್ದೇನೆ?’ .. ‘ನಾಳೆ ಹೇಗಿರಬೇಕು?’ .. ಎನ್ನುವ ನಮ್ಮ ವಿವಿಧ ಹಂತಗಳ ಮಧ್ಯೆ ಇರುವ ಹೋಲಿಕೆಯೇ ನಮ್ಮನ್ನು ಜ್ಞಾನವಂತರಾಗಿ ರೂಪಿಸುತ್ತದೆ”.
ಪ್ರಶ್ನೆ : “‘ಸುಖ’, ‘ಆನಂದ’, ‘ಪರಮಾನಂದ’ .. ಇವುಗಳ ಮಧ್ಯೆ ಇರುವ ವ್ಯತ್ಯಾಸವೇನು?”
ಪತ್ರೀಜಿ : ‘ಸುಖ’ ಎನ್ನುವುದು ಶರೀರಕ್ಕೆ ಸಂಬಂಧಿಸಿದ ಅನುಭವ. ಅದನ್ನು ನಾವು ಕಣ್ಣು, ಮೂಗು, ಕಿವಿ, ನಾಲಿಗೆ, ಚರ್ಮ ಎನ್ನುವ ಪಂಚೇಂದ್ರಿಯದ ಅವಯವಗಳಿಂದ ಹೊಂದುತ್ತಾ ಇರುತ್ತೇವೆ.
“‘ಆನಂದ’ ಎನ್ನುವುದು ಮನಸ್ಸಿಗೆ ಸಂಬಂಧಿಸಿದ ಅನುಭವ. ಅದನ್ನು ನಾವು ನೋಟ, ವಾಸನೆ, ರುಚಿ, ಕೇಳುವಿಕೆ, ಸ್ಪರ್ಶ ಎನ್ನುವ ಪಂಚೇಂದ್ರಿಯ ಜ್ಞಾನದಿಂದ ಹೊಂದುತ್ತಾ ಇರುತ್ತೇವೆ”.
” ‘ಪರಮಾನಂದ’ ಎನ್ನುವುದು ಆತ್ಮಕ್ಕೆ ಸಂಬಂಧಿಸಿದ ಅನುಭವ. ಅದನ್ನು ನಾವು ಧ್ಯಾನ, ಸೂಕ್ಷ್ಮಶರೀರಯಾನ, ಸ್ವಾಧ್ಯಾಯ, ಸಜ್ಜನ ಸಾಂಗತ್ಯಗಳಿಂದ ಹೊಂದುತ್ತಾ ಇರುತ್ತೇವೆ.
“ಶರೀರ ಹೊಂದುವ ಸುಖಕ್ಕೆ, ಮನಸ್ಸು ಹೊಂದುವ ಆನಂದಕ್ಕೆ ಮಿತಿಗಳು, ನಿಯಮಗಳು ಇರುತ್ತವೆ. ಆದರೆ, .. ಆತ್ಮ ಹೊಂದುವ ಪರಮಾನಂದಕ್ಕೆ ಇಂತಹ ಸರಹದ್ದುಗಳು ಇರುವುದಿಲ್ಲ”.
ಪ್ರಶ್ನೆ : “ಬಂಧರಾಹಿತ್ಯವನ್ನು ಹೊಂದಲು ಏನು ಮಾಡಬೇಕು?”
ಪತ್ರೀಜಿ : “ಏನೂ ಮಾಡದೇ ಒಂದು ಸಾಕ್ಷಿಯಾಗಿ ಇರಬೇಕು. ಮನಸ್ಸು ಇರುವವರೆಗೂ ‘ಬಂಧ’ ಎನ್ನುವುದು ಇರುತ್ತದೆ ಆದ್ದರಿಂದ .. ಮನಸ್ಸು ಇಲ್ಲದಂತೆ ಮಾಡಲು ಧ್ಯಾನಮಾಡಬೇಕು. ಧ್ಯಾನ ಮಾಡುತ್ತಾ ಇದ್ದರೆ ‘ಬಂಧಸ್ಥಿತಿ’ ಪೂರ್ತಿಯಾಗಿ ಹೋಗುವುದಿಲ್ಲವಾದರೂ .. ಅದರ ತೀವ್ರತೆ ಸ್ವಲ್ಪ ಕಡಿಮೆಯಾಗುತ್ತದೆ. ಹಾಗೆ ಕಡಿಮೆಯಾದರೆ ಈ ಭೂಮಿ ಎನ್ನುವ ಪಾಠಶಾಲೆಯಲ್ಲಿ ನಾವು ’ಪ್ರಾಪಂಚಿಕ ಪರೀಕ್ಷೆ’ ಪಾಸ್ ಆದಂತೆ.
“ಪ್ರಾಪಂಚಿಕ ಪರೀಕ್ಷೆ ಪಾಸ್ ಆದಮೇಲೆ ನಾವು ಆಧ್ಯಾತ್ಮಿಕ ಪರೀಕ್ಷೆಗಳು ಕೂಡಾ ‘ಪಾಸ್’ ಆಗಬೇಕು. ಹೀಗೆ ಎಲ್ಲಾ ಪರೀಕ್ಷೆಗಳಲ್ಲಿ ಕೂಡಾ ಉತ್ತೀರ್ಣಗೊಂಡ ಮೇಲೆ ಇನ್ನು ಈ ಭೂಮಿಯ ಮೇಲೆ ನಮಗಿಷ್ಟವಿದ್ದರೆ ಹುಟ್ಟುತ್ತೇವೆ ಇಲ್ಲದಿದ್ದರೆ ಇಲ್ಲ.
ಪ್ರಶ್ನೆ : “‘ಸ್ವರ್ಗ-ನರಕ’ಗಳು ಎನ್ನುವುದು ಇದೆಯೇ?
ಪತ್ರೀಜಿ : “ತಪ್ಪದೇ ಇರುತ್ತವೆ. ‘ಈ ಪ್ರಪಂಚದಲ್ಲಿನ ಸಕಲ ಪ್ರಾಣಿಕೋಟಿಯೆಲ್ಲವೂ ಕೂಡ ಭಗವತ್ ಪದಾರ್ಥ’ ಎನ್ನುವ ಸತ್ಯದಲ್ಲಿ ನಾವು ಜೀವಿಸುತ್ತಾ ಧರ್ಮಬದ್ಧವಾಗಿ ಜೀವಿಸಿದಾಗ ಕಣ್ಣಿನಲ್ಲಿ ನೀರು ಇರದು; ದೇಹದಲ್ಲಿ ರೋಗ ಇರುವುದಿಲ್ಲ.
ನಿರಂತರ ಧ್ಯಾನ ಸಾಧನೆಯಿಂದ ಸದಾ ಆತ್ಮಾನಂದದಲ್ಲಿ ಮುಳುಗಿರುವ ಸಾಧಕರಿಂದ ತುಂಬಿದ ಭೂಮಿ ’ಸ್ವರ್ಗ’ ಎಂದು ಕರೆಯಲ್ಪಡುತ್ತದೆ. ತದ್ವಿರುದ್ಧವಾಗಿ ಜೀವಿಸುವವರಿಂದ ತುಂಬಿದ ಭೂಮಿ ‘ನರಕ’ ಎಂದು ಕರೆಯಲ್ಪಡುತ್ತದೆ.
ಪ್ರಶ್ನೆ : “‘ಪಂಡಿತ’ ಎಂದರೆ ಯಾರು?’
ಪತ್ರೀಜಿ : ‘ಯಾವುದಕ್ಕೂ ದುಃಖಿಸದವನೇ ಪಂಡಿತ’ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣರವರು ಸ್ಪಷ್ಟವಾಗಿ ತಿಳಿಸಿದ್ದಾರೆ.
“ಹುಟ್ಟುವವರಿಗೋಸ್ಕರವಾಗಲಿ .. ಸಾಯುವವರಿಗೋಸ್ಕರವಾಗಲಿ, ಸತ್ತವರಿಗೋಸ್ಕರವಾಗಲಿ ದುಃಖಿಸದೆ ಇರುವವನೇ ‘ಪಂಡಿತ’. ಅಷ್ಟೇ ಹೊರತು, ಸಂಸ್ಕೃತ ಇತ್ಯಾದಿ ಭಾಷೆಗಳಲ್ಲಿ ಡಿಗ್ರಿ ತೆಗೆದುಕೊಂಡವನೋ ಅಥವಾ ಕಾಳಿದಾಸನ ಕವಿತ್ವವನ್ನು ಉಪಾಸನೆ ಮಾಡುವವನು ’ಪಂಡಿತ’ ಎಂದು ಅನಿಸಿಕೊಳ್ಳಲಾರ.
ಪ್ರಶ್ನೆ : ‘ಸತ್ಯ’ ಎನ್ನುವುದು ನಮಗೆ ಹೇಗೆ ತಿಳಿಯುತ್ತದೆ?
ಪತ್ರೀಜಿ : ‘ಧ್ಯಾನ’ ಮಾಡಿದರೆ ತಿಳಿಯುತ್ತದೆ.
ಅಲ್ಲಿಯವರೆವಿಗೂ ‘ನಾನು ಕೇವಲ ಒಂದು ತಲೆ, ಎರಡು ಕೈಗಳು, ಎರಡು ಕಾಲುಗಳು, ಒಂದು ಮುಂಡ ಮಾತ್ರವೇ ದೇಹವಾಗಿರುವ ಮನುಷ್ಯನೆನ್ನುವ ‘ಅಸತ್ಯ’ದಲ್ಲಿ ಬದುಕುತ್ತಿದ್ದೇವೆ. ನಾವು .. ಧ್ಯಾನ ಮಾಡಿದರೆ ‘ನಾನು ಒಬ್ಬ ಸರ್ವಾತ್ಮ ಎನ್ನುವ ವಿರಾಟ್ ಸ್ವರೂಪದಲ್ಲಿ ಇರುವ ನಾರಾಯಣರು’ ಎನ್ನುವ ಮಹಾ ಅನುಭವದೊಂದಿಗೆ ಕೂಡಿದ ಸತ್ಯವನ್ನು ತಿಳಿದುಕೊಳ್ಳುತ್ತೇವೆ.
“ಧ್ಯಾನ ಮಾಡದಿದ್ದರೆ ಅನೇಕಾನೇಕ ಲೋಕಗಳಿಂದ ಇಳಿದು ಬಂದ ನಾರಾಯಣರಾದ ನಾವು .. ಆ ವಿಷಯವನ್ನು ಮರೆತು ಮನುಷ್ಯನಾಗಿ ದುಃಖಕರ ಬದುಕನ್ನು ನಡೆಸುತ್ತಾ ನರರಾಗಿಯೇ ಸಾಯುತ್ತೇವೆ. ನಾವು ನರನ ರೂಪದಲ್ಲಿ ಇರುವ ನಾರಾಯಣರು’ ಎನ್ನುವ ಸತ್ಯ ತಿಳಿದುಕೊಳ್ಳುವವರೆಗೆ ಹೀಗೆ ಭೂಮಿಗೆ ಬರುವುದು ಹೋಗುವುದು ತಪ್ಪುವುದಿಲ್ಲ”.
ಪ್ರಶ್ನೆ : “ಸಂಪೂರ್ಣ ಆರೋಗ್ಯಕ್ಕೆ ಸೂತ್ರವೇನು?”
ಪತ್ರೀಜಿ : “ಸಹಜವಾಗಿ ಜೀವಿಸುವುದು, ಕೃತಕವಾಗಿ ಮಾತನಾಡುವುದು ಬಿಟ್ಟು, ಮನಸ್ಸಿನಲ್ಲೇನಿದೆಯೋ ಅದನ್ನು ಹೊರಗೆ ಪ್ರಕಟಿಸಬೇಕು. ಎಲ್ಲರನ್ನೂ ಸಮಾನವಾಗಿ ಪ್ರೇಮಿಸುತ್ತಾ ಚಿಕ್ಕಮಕ್ಕಳ ಮಧ್ಯೆ ಚಿಕ್ಕವರಂತೆ ಇರುವಂತಹ ಸಹಜತ್ವವನ್ನು ಅಳವಡಿಸಿಕೊಳ್ಳಬೇಕು”.
ಪ್ರಶ್ನೆ : “ಸಹಜೀವನ ಎಂದರೇನು?”
ಪತ್ರೀಜಿ : “‘ಸಹಜೀವನ’ ಎಂದರೆ ಸಕಲ ಜೀವರಾಶಿಯೊಂದಿಗೆ ಕೂಡಿಬಾಳುವುದು. ಅನೇಕಾನೇಕ ಜನ್ಮಗಳಲ್ಲಿ ನಾವು ಮಾಡಿದ ಅನೇಕ ದುಷ್ಕರ್ಮಗಳ ಫಲಗಳೊಂದಿಗೆ ಮತ್ತು ಸತ್ಕರ್ಮಗಳ ಫಲಗಳೊಂದಿಗೆ ಕೂಡಿ ಅರಿವಿನಿಂದ ಜೀವಿಸುವುದೇ ಸಹಜೀವನ”.
ಪ್ರಶ್ನೆ : ‘ಮನಸ್ಸು-ಬುದ್ಧಿ’ಯನ್ನು ಕುರಿತು ವಿವರಿಸಿ.
ಪತ್ರೀಜಿ : “ಮನಸ್ಸು” ಎನ್ನುವುದು ಕಣ್ಣಿಗೆ ಕಾಣುವ ಈ ದೃಶ್ಯಜಗತ್ತಿಗೆ ಸಂಬಂಧಿಸಿದ ಪ್ರಪಂಚಜನಿತವಾದರೆ .. “ಬುದ್ಧಿ” ಎನ್ನುವುದು ಕಣ್ಣಿಗೆ ಕಾಣದ ಚೈತನ್ಯ ಜಗತ್ತಿಗೆ ಸಂಬಂಧಿಸಿದ ಆತ್ಮಜನಿತ. ಮನಸ್ಸೆನ್ನುವುದು ಕೋರಿಕೆಗಳ ಸಮೂಹವಾದರೆ .. ಬುದ್ಧಿ ಎನ್ನುವುದು ಜ್ಞಾನ ಭಂಡಾರದ ಸಮೂಹ. ನಮಗೆ ಎರಡೂ ಮುಖ್ಯವೇ .. ಎರಡೂ ನಮಗೆ ಬೇಕಾದದ್ದೇ. ಮನಸ್ಸು, ಬುದ್ಧಿ ಎರಡೂ ಸರಿಸಮಾನವಾದ ಪ್ರಾಧಾನ್ಯತೆಯನ್ನು ಹೊಂದಿದೆ. ಆದ್ದರಿಂದ, ನಾವು .. ಏಕಕಾಲದಲ್ಲಿ ಪ್ರಾಪಂಚಿಕವಾದ ಮನಸ್ಸಿನಿಂದ ವಿರಾಜಿಸುತ್ತಾ … ಆಧ್ಯಾತ್ಮಿಕಪರವಾದ ಬುದ್ಧಿಯೊಂದಿಗೆ ವಿಕಸಿಸುತ್ತಾ ಇರಬೇಕು”.
ಪ್ರಶ್ನೆ : “ವಿಧವಿಧವಾದ ಜನ್ಮಗಳನ್ನು ತೆಗೆದುಕೊಳ್ಳುವುದು ಅಗತ್ಯವೇ?”
ಪತ್ರೀಜಿ : “ವಿಧವಿಧವಾದ ಅನುಭವಗಳ ಜ್ಞಾನದೊಂದಿಗೆ ಕೂಡಿದ ನಮ್ಮ ಆತ್ಮವನ್ನು ಉನ್ನತೀಕರಿಸಿಕೊಳ್ಳಲು ನಾವು ವಿಧವಿಧವಾದ ಜನ್ಮಗಳು ತೆಗೆದುಕೊಳ್ಳುತ್ತಿರುತ್ತೇವೆ. ಒಂದು ಜನ್ಮಕ್ಕೆ ಸಂಬಂಧಿಸಿದ ಅನುಭವಗಳನ್ನು ಸಂಪೂರ್ಣ ಅರಿವಿನಿಂದ ತೆಗೆದುಕೊಂಡ ಮೇಲೆ ನಾವು ಅಂತಹುದ್ದೇ ಮತ್ತೊಂದು ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಇನ್ನೇನೋ ಹೊಸದಾಗಿ ಮಾಡಲು .. ಹೊಸ ವಿಧವಾದ ಜನ್ಮವನ್ನು ತೆಗೆದುಕೊಳ್ಳುತ್ತೇವೆ”.
“ಕೆಲವೊಮ್ಮೆ ನಮಗೆ ಈ ಮೊದಲು ಗೊತ್ತಿಲ್ಲದ ಕೆಲವು ವಿಷಯಗಳು ಹಾಗೆಯೇ ಅರ್ಥವಾಗುತ್ತಾ ಇರುತ್ತವೆ. ಅದಕ್ಕೆ ಕಾರಣ ಹಿಂದಿನಜನ್ಮದಲ್ಲಿನ ಅನುಭವಜ್ಞಾನ ನಮಗೆ ಜ್ಞಾಪಕ ಬರುವುದೇ ಆಗಿರುತ್ತದೆ! ಸಂಗೀತ ಕಲಾನಿಧಿ ಡಾ|| ಮಂಗಳಂಪಲ್ಲಿ ಬಾಲಮುರಳಿ ಕೃಷ್ಣರವರು ತಮ್ಮ ಚಿಕ್ಕಂದಿನಲ್ಲೇ ದೊಡ್ಡ ಸಂಗೀತ ವಿದ್ವಾಂಸನಂತೆ ಸಂಗೀತ ಕಛೇರಿಯನ್ನು ಅತ್ಯದ್ಭುತವಾಗಿ ಮಾಡುತ್ತಿದ್ದರು. ಹೇಗೆ ಹೂವು ಅರಳಿದಾಕ್ಷಣವೇ ಪರಿಮಳ ಬೀರುತ್ತದೆಯೋ ಹಾಗೆ ಹಿಂದಿನ ಜನ್ಮದಲ್ಲಿ ಮಾಡಿದ ಸಾಧನೆಯಿಂದಾಗಿ ಈ ಜನ್ಮದಲ್ಲಿ ಅವರು ಸಂಗೀತದ ಪರಿಮಳ ಬೀರಿದರು”.
“ಶ್ರೀಕೃಷ್ಣ, ಶ್ರೀರಾಮ, ಪ್ರಹ್ಲಾದ ಮೊದಲಾದ ಮಹಾಮಹಿಮರೆಲ್ಲಾ ಕೂಡಾ ತಮ್ಮ ತಮ್ಮ ಹಿಂದಿನ ಜನ್ಮದಲ್ಲೇ ಆತ್ಮಜ್ಞಾನವನ್ನೆಲ್ಲಾ ಉಪಾಸನೆ ಮಾಡಿದವರು. ಅದಕ್ಕೇ ಅವರು ಇಲ್ಲಿನ ಕೆಲಸಗಳನ್ನೆಲ್ಲಾ ಅನಾಯಾಸವಾಗಿ ಮಾಡಿ ದೇವರುಗಳಾದರು. ಆದ್ದರಿಂದ, ನಾವು ಹಿಂದಿನ ಜನ್ಮದಲ್ಲಿ ಮಾಡಿರುವುದನ್ನೇ ಮತ್ತೆ ಮತ್ತೆ ಮಾಡದೇ ಹೊಸದಾಗಿ ಇನ್ನೇನೋ ಮಾಡಬೇಕಾದ ಕೆಲಸ ಎಲ್ಲಿದೆಯೋ, ಹೇಗಿದೆಯೋ ತಿಳಿದುಕೊಂಡು ಅದನ್ನು ಪೂರ್ಣಗೊಳಿಸಲು ಭೂಲೋಕದಲ್ಲಿದ್ದರೂ ಮತ್ತ್ಯಾವ ಲೋಕದಲ್ಲಿದ್ದರೂ ಬರುತ್ತಾ ಹೋಗುತ್ತಾ ಇರುತ್ತೇವೆ”.
ಪ್ರಶ್ನೆ : “ಧ್ಯಾನದಲ್ಲಿ ಇರುವಾಗ ಕೆಲವೊಮ್ಮೆ ಸುಶ್ರಾವ್ಯವಾದ ಸಂಗೀತ ಕೇಳಿಬರುತ್ತಿರುತ್ತದೆ .. ಏತಕ್ಕಾಗಿ?”
ಪತ್ರೀಜಿ : ಧ್ಯಾನದಲ್ಲಿ ನಾವು ನಮ್ಮ ಅಂತರಂಗದೊಳಗೆ ಪ್ರಯಾಣ ಮಾಡುತ್ತಿರುವಾಗ ನಮಗೆ ಬಗೆಬಗೆಯ ಅನುಭವಗಳು ಬರುತ್ತವೆ; ಇವೆಲ್ಲಾ ದಿವ್ಯದೃಷ್ಟಿ ಉತ್ತೇಜಿತವಾಗುವುದರಿಂದ ಬರುವ ಫಲಗಳು.
“ಕ್ರಿಕೆಟ್ ಆಟದಲ್ಲಿ ಬಾಟ್ಸ್‌ಮಾನ್ ಚೆಂಡನ್ನು ಹೊಡೆದಾಗಲೆಲ್ಲಾ ಆತನ ಖಾತೆಯಲ್ಲಿ ‘ರನ್ಸ್’ ಜಮಾ ಆದಹಾಗೆ .. ಒಬ್ಬ ಯೋಗಿ ಇನ್ನೂ, ಇನ್ನೂ ಆಳವಾದ ಧ್ಯಾನದಲ್ಲಿ ಮಗ್ನವಾದಾಗ ಇಂತಹ ‘ದಿವ್ಯಚಕ್ಷುವಿನ ಫಲಗಳು’ ಆತನ ಖಾತೆಯಲ್ಲಿ ಜಮಾ ಆಗುತ್ತಿರುತ್ತದೆ.
ಪ್ರಶ್ನೆ : “ಭೌತಿಕ, ಮಾನಸಿಕ ಶರೀರಗಳ ಸ್ವಸ್ಥತೆಗಳನ್ನು ಕುರಿತು ವಿವರಿಸಿ.”
ಪತ್ರೀಜಿ : “ನಮ್ಮ ಭೌತಿಕ ಶರೀರದ ಸ್ವಸ್ಥತೆ .. ನಮ್ಮ ಮನೋಸ್ಥಿತಿಯ ಮೇಲೆ ಆಧಾರಪಟ್ಟಿರುತ್ತದೆ. ನಮ್ಮ ಮನಸ್ಸಿನ ಸ್ವಸ್ಥತೆ ನಮ್ಮ ಬುದ್ಧಿಯ ಮೇಲೆ ಅಧಾರಪಟ್ಟಿರುತ್ತದೆ”. ನಿರಂತರ ಧ್ಯಾನ ಸಾಧನೆಯಿಂದ ನಮ್ಮ ಬುದ್ಧಿ ಸುಸ್ಥಿತಿಯನ್ನು ಹೆಚ್ಚಿಸುವುದರಿಂದ ಪ್ರಯೋಜನಕರವಾದ ಆಲೋಚನೆಗಳಿಂದ ಕೂಡಿದ ಮಾನಸಿಕ ಸ್ವಸ್ಥತೆ ನಮಗೆ ಉಂಟಾಗುತ್ತದೆ. ಸ್ವಸ್ಥತೆಯನ್ನು ಹೊಂದಿದ ಆನಂದಕರವಾದ ಮನಸ್ಸು ಭೌತಿಕ ಶರೀರದ ಮೇಲೆ ತನ್ನ ಅಪಾರವಾದ ಪ್ರಭಾವವನ್ನು ತೋರಿಸುತ್ತಾ ನಮ್ಮ ಜೀವನದ ಗುರಿಯನ್ನು ನಿರ್ದೇಶಿಸುತ್ತದೆ.
“ಧ್ಯಾನಶಕ್ತಿ ಎನ್ನುವುದು ಒಂದು ವಿದ್ಯುತ್ ಶಕ್ತಿವಲಯದಂತೆ ಸರ್ವಾತ್ಮ ->ಆತ್ಮ -> ಬುದ್ಧಿ -> ಮನಸ್ಸು -> ಶರೀರ ಇವುಗಳನ್ನು ಪರಸ್ಪರ ಅನುಸಂಧಾನಗೊಳಿಸುತ್ತಾ ನಮಗೆ ಸತ್ಯದರ್ಶನವನ್ನು ಮಾಡಿಸುತ್ತಾ ಇರುತ್ತದೆ. ಸತ್ಯದರ್ಶನವಾದಾಗಲೇ ನಾವು ಸರ್ವದುಃಖಗಳಿಂದ ಹೊರಬರುತ್ತೇವೆ”.
“ಧ್ಯಾನದ ಮೂಲಕ ತಮ್ಮ ಬುದ್ಧಿಯನ್ನು ಎಚ್ಚರಗೊಳಿಸಲು ಆಗದಿರುವರು ಮಾತ್ರ ವಿಚಲಿತ ಮನಸ್ಸುಗಳಿಂದ ಕೂಡಿ ದುಃಖದಲ್ಲಿ ವಿಶೇಷವಾಗಿ ಹೂತುಕೊಂಡು ಹೋಗುತ್ತಿರುತ್ತಾರೆ”.
ಪ್ರಶ್ನೆ : “ಉನ್ನತಿ ಅಂದರೆ?”
ಪತ್ರೀಜಿ : ” ‘ಕಳೆಯುತ್ತಿರುವ ಪ್ರತಿಕ್ಷಣವೂ ಸಹ ಕಳೆದ ಕ್ಷಣಕ್ಕಿಂತಾ ಮತ್ತಷ್ಟು ಅಭಿವೃದ್ಧಿ ಹೊಂದಿರುತ್ತದೆ’ ಎನ್ನುವುದು ಕಾಲನಿಯಮ! ಆ ನಿಯಮವನ್ನು ಅನುಸರಿಸಿ ನಮ್ಮ ‘ಅಸ್ತಿತ್ವ’ ಕೂಡಾ ಪ್ರತಿಕ್ಷಣ ಉನ್ನತಿಯ ದಿಸೆಯಲ್ಲೇ ಸಾಗುತ್ತಾ ಇರುವುದೆ .. ‘ಉನ್ನತಿ’. ಧ್ಯಾನ ನಮ್ಮ ಉನ್ನತಿಗೆ ಇನ್ನೂ ಹೆಚ್ಚು ಸಹಾಯಕವಾಗುತ್ತದೆ”.
ಪ್ರಶ್ನೆ : “ವಿದ್ಯಾಭ್ಯಾಸ ಎನ್ನುವುದು ಒಂದು ವ್ಯಾಪಾರದಂತೆ ಬದಲಾಗುತ್ತಿರುವ ಈ ಸಮಯದಲ್ಲಿ ನಿಜಕ್ಕೂ ಎಂತಹ ವಿದ್ಯೆಯನ್ನು ಅಭ್ಯಸಿಸಬೇಕೊ ತಿಳಿಯುತ್ತಿಲ್ಲ?”
ಪತ್ರೀಜಿ : “ನಿಜವಾದ ವಿದ್ಯೆ ವಿನಯವನ್ನು, ವಿಜ್ಞಾನವನ್ನು ಹೆಚ್ಚಿಸುವ ಹಾಗೆ ಇರುತ್ತದೆ. ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿ, ಜೀಸಸ್ ಕ್ರೈಸ್ಟ್, ಗೌತಮ ಬುದ್ಧ, ಶಿರಡೀ ಸಾಯಿಬಾಬಾ, ಮಹಮ್ಮದ್ ಪ್ರವಕ್ತ .. ಅಂತಹ ಅನೇಕ ಜನ ಯೋಗಿಗಳು ಪ್ರಾಪಂಚಿಕ ಓದನ್ನು ಓದಲಿಲ್ಲ. ಆದರೂ ಪ್ರಾಪಂಚಿಕ ವಿದ್ಯೆಗಳನ್ನು ತುಂಬಾ ಓದಿ ಎಣಿಸಲಾರದಷ್ಟು ಡಿಗ್ರಿಗಳನ್ನು ತಮ್ಮ ಹೆಸರಿನ ಕೊನೆಯಲ್ಲಿ ಇಟ್ಟುಕೊಂಡಿರುವವರೆಲ್ಲರೂ ಕೂಡಾ ಇವರ ಹತ್ತಿರಕ್ಕೆ ಕಲಿತುಕೊಳ್ಳಲು ಬಂದಿದ್ದಾರೆ”.
ಪ್ರಶ್ನೆ : “ಜೀವನವನ್ನು ಸಾರ್ಥಕಗೊಳಿಸುವುದು ಹೇಗೆ?”
ಪತ್ರೀಜಿ : ” ‘ಸಾರ್ಥಕ’ ಅಂದರೆ .. ‘ಅರ್ಥದಿಂದ ಕೂಡಿಕೊಂಡು ಇರುವುದು” .. ಜೀವನವನ್ನು ಸಾರ್ಥಕಗೊಳಿಸುವುದು ಅಂದರೆ ಬಾಲ್ಯದಿಂದಲೂ ಮರಣಿಸುವವರೆಗೂ ಪ್ರತಿಕ್ಷಣ ತುಂಬಾ ಅರ್ಥಯುತವಾಗಿ ಜೀವಿಸುವುದು. ಪ್ರತಿಯೊಂದು ದೇಶ, ಕಾಲ, ಪರಿಸ್ಥಿತಿಯಲ್ಲೂ, ಪ್ರತಿಯೊಂದು ಕ್ಷಣವನ್ನೂ ಸೃಜನಾತ್ಮಕವಾಗಿ, ಕ್ರಿಯಾಶೀಲವಾಗಿ, ಎಲ್ಲರಿಗೂ ಶ್ರೇಯಸ್ಸನ್ನು ಉಂಟುಮಾಡುವ ರೀತಿಯಲ್ಲಿ ಜೀವಿಸುವುದು.
“ಸತ್ಯಸ್ಥಿತರಾಗಿ, ಧರ್ಮದಲ್ಲಿ ಇರುವಂಥವರಾಗಿ, ಸಕಲ ಪ್ರಾಣಿಕೋಟಿಯ ಬಗ್ಗೆ ಅನುರಾಗಪೂರಿತರಾಗಿ ಲೋಕಕಲ್ಯಾಣಕರವಾಗಿ ಜೀವಿಸುತ್ತಿದ್ದರೆ ಅದನ್ನು ‘ಸಾರ್ಥಕ ಜೀವನ’ ಎನ್ನುತ್ತೇವೆ. ಸಾರ್ಥಕವಾದ ಜೀವನವನ್ನು ಜೀವಿಸಬೇಕಾದರೆ .. ನಾವು ಹಿಡಿಯಬೇಕಾಗಿರುವುದು ‘ಹಂಸ’, ಬಿಡಬೇಕಾಗಿರುವುದು ‘ಹಿಂಸೆ’.
ಪ್ರಶ್ನೆ : “ಆಧ್ಯಾತ್ಮಿಕ ಮಾರ್ಗದಲ್ಲಿ ‘ಗುರುವು’ ಖಂಡಿತಾ ಇರಬೇಕು ಎಂದು ಹೇಳುತ್ತಾರಲ್ಲವೆ .. ನಿಜವಾದ ‘ಗುರು’ವನ್ನು ಗುರುತಿಸುವುದು ಹೇಗೆ?”
ಪತ್ರೀಜಿ : ‘ಗುರುವು’ ಆಗದವನು ಗುರುವನ್ನು ಗುರುತಿಸುವುದು ಅಸಂಭವ! ಆದ್ದರಿಂದ .. ‘ಗುರುವನ್ನು ಹೇಗೆ ಗುರುತಿಸಬೇಕು?’ ಎನ್ನುವುದು ಮೂರ್ಖತನದ ಪ್ರಶ್ನೆ.ಗುರುವು ಆಗದವನಿಗೆ ಗುರುಗಳ ಗುರುತುಗಳನ್ನು ಹೇಳುವುದು ಎಂದರೆ ಬೂದಿಯಲ್ಲಿ ಹಾಕಿದ ಪನ್ನೀರಿನಂತೆ ಆಗುತ್ತದೆ .. ಮತ್ತು ಗುರುವು ಆದವನಿಗೆ ಗುರುಗಳ ಗುರುತುಗಳನ್ನು ಹೇಳುವುದು ಕೂಡಾ ಮೂರ್ಖತನವಾಗುತ್ತದೆ.
” ‘ಜೀಸಸ್’ ಕಾಲದಲ್ಲಿ ಪ್ರಜೆಗಳು ಜೀಸಸ್‌ನ ಗುರ್ತಿಸಲಿಲ್ಲ. ಕೃಷ್ಣನ ಕಾಲದಲ್ಲಿ ತಮ್ಮ ಜೊತೆಯಲ್ಲೇ ಇರುತ್ತಾ ತಮ್ಮಲ್ಲಿ ಒಬ್ಬನಾಗಿ ತಿರುಗುತ್ತಿರುವ ಕೃಷ್ಣನನ್ನು ಕೌರವರು ಗುರ್ತಿಸಲಿಲ್ಲ. ರಾಘವೇಂದ್ರಸ್ವಾಮಿಯನ್ನು ಅವರ ಪತ್ನಿ ಗುರುತಿಸಲಿಲ್ಲ. ಸಾಕ್ರೆಟಿಸ್‌ರನ್ನು ಅಂದಿನ ಸಮಾಜ ಗುರುತಿಸಲಿಲ್ಲ. ಆ ಜಾತಿಯ ಪಕ್ಷಿಗಳು ಆ ಜಾತಿಯನ್ನೇ ಗುರುತಿಸಿ ಆ ಜಾತಿಯಲ್ಲೇ ಸಂಚರಿಸಿದ ಹಾಗೆ ಗುರುವನ್ನು ಗುರುತಿಸಬಲ್ಲವನು ಒಬ್ಬ ಗುರುವೇ.
“ಆದ್ದರಿಂದ, ಗುರುವನ್ನು ಗುರುತಿಸುವುದು ಹೇಗೆ?’ ಎನ್ನುವ ಪ್ರಶ್ನೆಯನ್ನು ಕೇಳದೆ ನಾನು ಗುರುವು ಹೇಗೆ ಆಗುವುದು?’ ಎಂದು ಸರಿಯಾದ ಪ್ರಶ್ನೆಯನ್ನು ಹಾಕಿಕೊಳ್ಳಬೇಕು.
ಪ್ರಶ್ನೆ : “ಕಷ್ಟಗಳನ್ನು ಹೇಗೆ ಎದುರಿಸಬೇಕು?”
ಪತ್ರೀಜಿ : ‘ಮನುಷ್ಯ’ ಎನ್ನುವ ಪ್ರತಿಯೊಬ್ಬನಿಗೂ ಚಿಕ್ಕದೊ, ದೊಡ್ಡದೊ ಕಷ್ಟಗಳು ಇದ್ದೇ ಇರುತ್ತದೆ. ಅನೇಕ ಜನ ಹೇಡಿತನದಿಂದ ಅವುಗಳಿಂದ ದೂರ ಓಡಿಹೋಗಲು ಪ್ರಯತ್ನಿಸುತ್ತಾ ಇರುತ್ತಾರೆ. ಹಾಗಲ್ಲದೇ ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ ಸರಿಯಾದ ರೀತಿಯಲ್ಲಿ ಅವುಗಳನ್ನು ಪರಿಹರಿಸುತ್ತಿದ್ದರೆ ಅವರವರ ಆತ್ಮಶಕ್ತಿಯನ್ನು ಅವರವರೆ ಅರಿವಿಗೆ ತಂದುಕೊಳ್ಳ ಬಲ್ಲವರಾಗುತ್ತಾರೆ.
“ನಮಗೆ ತಿಳಿಯದೆ ನಮ್ಮೊಳಗೆ ಅಡಗಿರುವ ಅತ್ಯಂತ ಬೆಲೆಬಾಳುವ ‘ಆತ್ಮಶಕ್ತಿ’ ಎನ್ನುವ ಫಲವನ್ನು ಹೊರಗೆ ತಂದು ನಮಗೆ ಎಟುಕುವಷ್ಟು ಹತ್ತಿರ ಇರುವ ಸಾಧನೆಗಳೇ ಕಷ್ಟಗಳು. ಆದ್ದರಿಂದ, ‘ಕಷ್ಟೇ ಫಲೆ’ ಎಂದು ಹಿರಿಯರು ಹೇಳಿದ್ದಾರೆ”.
ಪ್ರಶ್ನೆ : “ಶ್ವಾಸದ ಮೇಲೆಯೇ ಗಮನವಿಟ್ಟು ಏತಕ್ಕಾಗಿ ಧ್ಯಾನ ಮಾಡಬೇಕು?”
ಪತ್ರೀಜಿ : ‘ಶ್ವಾಸ’ ಎನ್ನುವುದು ನಿನ್ನೆಗೆ ಸೇರಿದ ಭೂತಕಾಲ ಅಲ್ಲ .. ನಾಳೆಗೆ ಸೇರಿದ ಭವಿಷ್ಯತ್ತು ಅಲ್ಲ. ಅದು ಕೇವಲ ಈ ದಿನದ ಈ ಕ್ಷಣಕ್ಕೆ ಸೇರಿದ ವರ್ತಮಾನ.
“ವರ್ತಮಾನ ಕ್ಷಣದಲ್ಲಿ ನಮ್ಮ ಮನಸ್ಸನ್ನು ಒಂದುಗೂಡಿಸಬೇಕಾದರೆ ನಾವು ಮೂರು ಕಾಲಗಳಿಗೂ ಸಾಕ್ಷೀಭೂತವಾದ ನಮ್ಮ ಸಹಜವಾದ ಶ್ವಾಸವನ್ನು ಹಿಡಿಯಬೇಕು. ಶ್ವಾಸದ ಮೆಲೆ ಗಮನದಿಂದ ನಾವು ಭೂತಕಾಲ ಎನ್ನುವ ದೊಡ್ಡಭೂತದಿಂದ, ಗಾಳಿಯಲ್ಲಿನ ಅರಮನೆಯಂತೆ ಇರುವ ಭವಿಷ್ಯತ್ತಿನಿಂದ ಹೊರಬಂದು .. ವರ್ತಮಾನ ಕ್ಷಣದಲ್ಲಿರುವ ಅನಂತವಾದ ಆನಂದದಲ್ಲಿ ಸಂಪೂರ್ಣ ಅರಿವಿನಿಂದ ಜೀವಿಸಬಲ್ಲವರಾಗುತ್ತೇವೆ.
ಪ್ರಶ್ನೆ : “‘ದಿವ್ಯಚಕ್ಷುವಿನ ಅನುಭವಗಳು’ ಎನ್ನುವುದು ಎಷ್ಟರಮಟ್ಟಿಗೆ ನಿಜ? ಅದು ಪ್ರತಿಯೊಬ್ಬರಿಗೂ ಬರುತ್ತವೆಯಾ?”
ಪತ್ರೀಜಿ : ಈ ಭೂಮಿಯ ಮೇಲೆ ಮನುಷ್ಯರಾಗಿ ಹುಟ್ಟಿದ ಪ್ರತಿಯೊಬ್ಬರೂ ಅನೇಕಾನೇಕ ಪರಿಸ್ಥಿತಿಗಳಲ್ಲಿ ಪ್ರತ್ಯಕ್ಷವಾಗಿಯಾಗಲಿ ಪರೋಕ್ಷವಾಗಿಯಾಗಲಿ ದಿವ್ಯಚಕ್ಷುವಿನ ಅನುಭವಗಳನ್ನಾಗಲಿ ಸೂಕ್ಷ್ಮಶರೀರಯಾನ ಅನುಭವಗಳನ್ನಾಗಲಿ ಕನಿಷ್ಟಪಕ್ಷ ಒಮ್ಮೆಯಾದರೂ ಅನುಭವಿಸಿದವರೇ. ಆದರೆ, ತಮ್ಮ ನೆರಳನ್ನು ನೋಡಿ ತಾವೇ ಭಯಪಡುವ ಸಾಮಾನ್ಯರು ಮಾತ್ರ ಅದರಲ್ಲಿರುವ ಶಾಸ್ತ್ರೀಯ ದೃಕ್ಪಥವನ್ನು ಅರ್ಥಮಾಡಿಕೊಳ್ಳದೆ ತಮ್ಮ ಸ್ವಂತ ಅನುಭವಗಳನ್ನು ಕೂಡಾ ನಂಬದೆ ಮೂರ್ಖರಂತೆ ಅವುಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ.
“‘ಯದೃಶ್ಯಂ .. ತನ್ಯಶ್ವರಂ’ ಎನ್ನುತ್ತಾ ಧ್ಯಾನಭ್ಯಾಸಕ್ಕೆ ದೂರವಾಗಿ ಕೆಲವರು .. ಧ್ಯಾನಾನುಭವಗಳಿಂದ ಏನೂ ಲಾಭವಿಲ್ಲವೆಂದು ನಿರ್ಧಾರವಾಗಿ ಹೇಳಿಬಿಡುತ್ತಾರೆ”.
“ಇನ್ನೂ ಕೆಲವರು ‘ಈ ಧ್ಯಾನ ಶಕ್ತಿಗಳ ಕಡೆ ಹೋಗಬಾರದು; ಕೆಲವು ದಿನಗಳ ನಂತರ ಅವು ನಮ್ಮನ್ನು ನುಂಗಿ ಹಾಕಿಬಿಡುತ್ತವೆ’ ಎಂದು ಮುಂಚಿತವಾಗಿಯೇ ‘ಅತಿ ಜಾಗ್ರತೆ’ಯಿಂದ ಇರುತ್ತಾರೆ”.
“‘ಇವೆಲ್ಲಾ ಸಹ ಸಬ್‌ಕಾನ್ಷಿಯಸ್ ಮೈಂಡ್‌ನ ರಿಯಾಕ್ಷನ್ಸ್’ ಎನ್ನುತ್ತಾ ನಿರ್ಲಕ್ಷ್ಯಮಾಡುತ್ತಾ ಕೆಲವರು ತಮಗೆ ತಾವೇ ನಷ್ಟಕ್ಕೆ ಒಳಗಾಗುತ್ತಾರೆ”.
“‘ನನಗೆ ತಿಳಿದಿದ್ದು ರವೆಯಷ್ಟು, ತಿಳಿಯದೇ ಇರುವುದು ಬೆಟ್ಟದಷ್ಟು’ ಎಂದು ಎಂದಿಗೂ ಮರೆಯದೆ ನಿರಂತರ ಧಾನಾಭ್ಯಾಸದಿಂದ ತಮ್ಮನ್ನು ತಾವು ಪ್ರೋತ್ಸಾಹಿಸಿಕೊಳ್ಳುತ್ತಾ, ಇತರ ಧ್ಯಾನಾನುಭವಗಳನ್ನು ಕೇಳಿಸಿಕೊಳ್ಳುತ್ತಾ .. ಅವರನ್ನು ಕೂಡಾ ಪ್ರೋತ್ಸಾಹಿಸುವವರೇ ಸತ್ಯವಿದ್ಯಾರ್ಥಿಗಳು.
ಪ್ರಶ್ನೆ : “ಧ್ಯಾನ ಸಾಧನೆಯಲ್ಲಿ ಇರುವ ಅಡ್ಡಿ ಆತಂಕಗಳು ಯಾವುದು?”
ಪತ್ರೀಜಿ : ಧ್ಯಾನ ಸಾಧನೆಯಲ್ಲಿ ಇರುವ ಪ್ರಾಥಮಿಕ ಪ್ರತಿಬಂಧಕಗಳು :
1. ಸೋಂಬೇರಿತನ .. 2. ಭಯ .. 3. ಅಹಂ ..
“ಸೋಂಬೇರಿತನ”: ಕಂಠಭರಿತ ಉಂಡು, ಕುಡಿದು ಮಲಗಿಕೊಳ್ಳುವುದು .. ಟೀವಿಯಲ್ಲಿ ಬರುವ ಕಾರ್ಯಕ್ರಮಗಳನ್ನು ಕಣ್ಣುಗಳನ್ನು ಅಗಲಿಸಿ ನೋಡುತ್ತಾ .. ಸ್ವಲ್ಪ ಸಮಯ ಸಿಕ್ಕಿದರೂ ಅಕ್ಕ-ಪಕ್ಕದವರ ಜೊತೆ ನಿಷ್ಪ್ರಯೋಜಕವಾದ ಹರಟೆ ಹೊಡೆಯುತ್ತಾ ಕಾಲವನ್ನು ವ್ಯರ್ಥವಾಗಿ ಕಳೆಯುವುದು.
“ಭಯ”: ತುಂಬಾ ಹೀನಾಯಮಾನವಾದ ಹಳೇ ವಿಷಯಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಪರದಾಡುವುದು .. ಹೊಸ ವಿಷಯಗಳನ್ನು ಕೇಳಿಸಿಕೊಳ್ಳಲು ಸಹ ಹೆದರುವುದು; ಕೇಳಿಸಿಕೊಂಡರೂ ಆ ಹೊಸ ವಿಷಯಗಳನ್ನು ಸಂಶೋಧಿಸಲು ಹಿಂದೇಟು ಹಾಕುವುದು.
“ಅಹಂ”: ’ದೇವರು’ .. ’ಬುದ್ಧಿ’ .. ’ಆತ್ಮ’ ಎನ್ನುವ ವಿಷಯಗಳನ್ನು ಕುರಿತು ಒಂದು ಅಕ್ಷರ ಸಹ ತಿಳಿಯದಿದ್ದರೂ ಎಲ್ಲಾ ತಿಳಿದಿರುವಹಾಗೆ ಮಾತನಾಡುವುದು .. ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ನಿರ್ಲಕ್ಷ್ಯವಹಿಸುವುದು.
ಈ ಮೂರು ಮೂಲಭೂತವಾದ ಪ್ರತಿಬಂಧಕಗಳು .. ಧ್ಯಾನ ಸಾಧನೆಯ ವಿಷಯದಲ್ಲೇ ಅಲ್ಲ .. ಇನ್ನು ಯಾವ ವಿಷಯದಲ್ಲಾದರೂ ಸರಿ ಸಮಾನವಾಗಿ ವರ್ತಿಸುತ್ತದೆ.
ಪ್ರಶ್ನೆ : “ಹೊಸ ಕಟ್ಟಡಗಳ ನಿರ್ಮಾಣಮಾಡುವ ಮೊದಲು ಭೂಮಿ ಪೂಜೆ ಮಾಡಬೇಕೆ?”
ಪತ್ರೀಜಿ : “ಹೌದು ಮಾಡಲೇಬೇಕು. ಹೊಸದಾಗಿ ನಿರ್ಮಾಣ ಮಾಡುವ ಮೊದಲು ಆ ಜಾಗದಲ್ಲಿ ಧ್ಯಾನಕ್ಕೆ ಕುಳಿತು ಸ್ವಲ್ಪಹೊತ್ತು ಚಿತ್ತವೃತ್ತಿಗಳನ್ನು ನಿರೋಧಿಸಬೇಕು. ನಮ್ಮ ಗಮನವನ್ನು ಆ ಭೂತಾಯಿಯಲ್ಲಿ ಪ್ರವೇಶಿಸುವಂತೆ ಮಾಡಿ ಆ ತಾಯಿಯೊಂದಿಗೆ ಲೀನಗೊಂಡು .. ಅಲ್ಲಿ ಕಟ್ಟಲಿರುವ ಹೊಸ ನಿರ್ಮಾಣಕ್ಕೆ ಆಕೆಯ ಅನುಮತಿಯನ್ನು ತೆಗೆದುಕೊಳ್ಳಬೇಕು. ಭೂ ತಾಯಿಯೊಂದಿಗೆ ಅಂತಹ ಅವಿನಾಭಾವ ಸಂಬಂಧವನ್ನು ನಾವು ಏರ್ಪಡಿಸಿಕೊಂಡಾಗ ಇಬ್ಬರೂ ಸೇರಿ ಮಾಡುವ ಕೆಲಸಗಳೆಲ್ಲಾ ನಿರ್ವಿಘ್ನವಾಗಿ ನೆರವೇರುತ್ತವೆ.
ಒಳ್ಳೆಯ ಸುವಾಸನೆಗಳನ್ನು ಹರಡುವ ಅಗರಬತ್ತಿಗಳನ್ನು ಆ ಪ್ರದೇಶದಲ್ಲಿ ಹಚ್ಚಿಟ್ಟು .. ತೆಂಗಿನಕಾಯಿಯನ್ನೋ, ಬಾಳೆಹಣ್ಣನ್ನೋ, ಸಿಹಿ ತಿಂಡಿಯನ್ನೋ ಅಲ್ಲಿರುವ ಕ್ರಿಮಿಕೀಟಗಳಿಗೆ ಹಬ್ಬದೂಟವಾಗಿ ನೀಡಬೇಕು. ಬಿಸ್ಮಿಲ್ಲಾಖಾನ್‌ರಂಥವರು ನುಡಿಸಿದ ಸುಶ್ರಾವ್ಯವಾದ ಸಂಗೀತ ಕೇಳುತ್ತಾ ಧ್ಯಾನ ಮಾಡಬೇಕು.
ಪ್ರಶ್ನೆ : “ಆಚಾರ್ಯನೆಂದರೆ ಯಾರು?”
ಪತ್ರೀಜಿ : “ಯಃ ಯಾಚಿನೋತಿ, ಆಚರತಿ, ಆಚಾರಯತಿ ಚ
ಸಃ ಆಚಾರ್ಯಃ ಎನ್ನುವುದು ಶಾಸ್ತ್ರ!
ಅನೇಕಾನೇಕ ಗುರುಗಳ ಹತ್ತಿರ ಆತ್ಮಜ್ಞಾನವನ್ನು ಯಾಚಿಸಿ, ಯಾಚಿಸಿ” ಪಡೆದು .. ಹಾಗೆ “ಯಾಚಿಸಿ, ಯಾಚಿಸಿ” ಪಡೆದಿರುವ ಆತ್ಮಜ್ಞಾನವನ್ನು ಸಾಧನೆಯ ಮೂಲಕ ತನ್ನ “ಸ್ವ ಅನುಭವ”ವಾಗಿ ಬದಲಾಯಿಸಿಕೊಂಡು ಹಾಗೆ ತಾನು ಮಾಡಿದ ಆ ಆತ್ಮಾಭ್ಯಾಸವನ್ನೇ ಇತರರಿಂದ ಕೂಡಾ ಮಾಡಿಸುವವನೇ “ಆಚಾರ್ಯ”.
ಪ್ರಶ್ನೆ : “….’ಸ್ವೇಚ್ಛೆ’ಯ ಕುರಿತು ವಿವರಿಸಿರಿ”
ಪತ್ರೀಜಿ : ಸ್ವ=ಸ್ವಂತ .. ಇಚ್ಛೆ=ಕೋರಿಕೆ .. ಸ್ವೇಚ್ಛೆ ಅಂದರೆ ನಮ್ಮ ಸ್ವಂತ ಇಚ್ಛೆ!
“ನಾವೆಲ್ಲಿದ್ದರೂ, ಯಾವ ಲೋಕದಲ್ಲಿ ಸಂಚರಿಸಿದರೂ ನಮ್ಮ ವಾಸ್ತವವನ್ನು ನಮ್ಮ ಸ್ವಂತ ಕೋರಿಕೆಗಳ ಪ್ರಕಾರ ನಾವೇ ಸೃಷ್ಟಿಸಿಕೊಳ್ಳುತ್ತಿದ್ದೇವೆ” ಎನ್ನುವ ಆತ್ಮಜ್ಞಾನದ ಅರಿವಿನೊಂದಿಗೆ ಸದಾ ಆನಂದವಾಗಿ ಜೀವಿಸುವುದೇ ಸ್ವೇಚ್ಛೆ, ಸ್ವಾತಂತ್ರ್ಯ.
ಪ್ರಶ್ನೆ : “ಕರ್ಮಯೋಗ ಅಂದರೆ ಏನು?”
ಪತ್ರೀಜಿ : ಸಮಯವನ್ನು ವ್ಯರ್ಥಮಾಡದೆ ವಿವಿಧ ಸುಕರ್ಮಗಳಲ್ಲಿ ನಮ್ಮನ್ನು ನಾವು ಆಗಿಂದಾಗ್ಗೆ ನಿಯಮಿಸಿಕೊಳ್ಳುವುದೇ .. “ಕರ್ಮಯೋಗ”.
* ಸಂಸಾರಚಕ್ರದಲ್ಲಿ “ಮೇಲೆ ಇರುವಾಗ” ಜಂಭಪಡದೇ .. “ಕೆಳಗೆ ಇರುವಾಗ” ಕುಗ್ಗದೇ ಸದಾ ಸ್ಥಿರಚಿತ್ತದಿಂದ ಧೈರ್ಯವಾಗಿ ಸದಾ ನಿಲ್ಲುವಂತಾಗುವುದೇ .. “ಕರ್ಮಯೋಗ”.
* ನಮ್ಮ ಆಲೋಚನೆಗಳು, ಮಾತುಗಳು, ಕೆಲಸಗಳು .. ಎಲ್ಲದರ ವಿಷಯದಲ್ಲೂ ಸಮಯ ಸಂದರ್ಭಗಳಾನುಸಾರ ಜಾಗರೂಕತೆಯಿಂದ ಇರುವುದೇ “ಕರ್ಮಯೋಗ”.
* ಪ್ರತಿಯೊಂದು ಕರ್ಮ ಕೂಡಾ ಮತ್ತೊಂದು ಕರ್ಮಕ್ಕೆ ಕಾರಣಭೂತವಾಗಿರುತ್ತದೆ ಎಂದು ಕಾರ್ಯಕಾರಣ ಸಂಬಂಧವನ್ನು ಅರ್ಥಮಾಡಿಕೊಂಡು ಕರ್ಮಚಕ್ರವನ್ನು ಜಾಗರೂಕತೆಯಿಂದ ಪರಿಶೀಲಿಸುವುದೇ .. “ಕರ್ಮಯೋಗ”.
* “ಮಾಡಿಕೊಂಡವನಿಗೆ ಮಾಡಿಕೊಂಡಷ್ಟು” ಎನ್ನುವ ಸಿದ್ಧಾಂತವನ್ನು ಅರ್ಥಮಾಡಿಕೊಂಡು .. ಆ ಜ್ಞಾನದಿಂದ ಜೀವನದಲ್ಲಿ ಮುಂದುವರೆಯುವುದೇ “ಕರ್ಮಯೋಗ”.
ಪ್ರಶ್ನೆ : “ತಪ್ಪುಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು?”
ಪತ್ರೀಜಿ : ಪ್ರಗತಿಪಥದಲ್ಲಿ ಇರುವವರು ಪ್ರತಿಯೊಬ್ಬರೂ ತಪ್ಪದೇ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಅವು “ನಡೆಯುವುದನ್ನು ಕಲಿತುಕೊಳ್ಳುವ ಹಾದಿಯಲ್ಲಿ”ದಲ್ಲಿ ಆಗುವ ಚಿಕ್ಕಚಿಕ್ಕ ತಪ್ಪುಹೆಜ್ಜೆಗಳು ಮಾತ್ರವೇ!
ಅವುಗಳಿಂದ ಪಾಠಗಳನ್ನು ಕಲಿತುಕೊಳ್ಳುತ್ತಾ .. ಪುನಃಪುನಃ ತಕ್ಷಣ ಹೊಸ ಹೊಸ ಸೃಜನಾತ್ಮಕವಾದ ಕಾರ್ಯಕ್ರಮಗಳಲ್ಲಿ ಮುಳುಗುತ್ತಿರಬೇಕು. “ನಾನು ಪಾಪಿ .. ನಾನು ಪಾಪಿ” ಎಂದು ಪದೇ ಪದೇ ಎಂದುಕೊಳ್ಳುತ್ತಾ ಆತ್ಮನ್ಯೂನತೆಗೆ ಗುರಿಯಾಗುವುದಾಗಲಿ .. “ನೀನು ಪಾಪಿ .. ನೀನು ಪಾಪಿ” ಎನ್ನುತ್ತಾ ಇತರರನ್ನು ನಿಂದಿಸುವುದಾಗಲಿ ಮಾಡಲೇಬಾರದು. ಎಲ್ಲರಿಂದಲೂ ಸಹ ಪಾಠಗಳನ್ನು ಸದಾ ಕಲಿತುಕೊಳ್ಳುತ್ತಿರುವುದೇ ಬುದ್ಧಿವಂತರ ಲಕ್ಷಣ.
ಪ್ರಶ್ನೆ : ಸಜ್ಜನ ಸಾಂಗತ್ಯಕ್ಕೆ, ಆಚಾರ್ಯ ಸಾಂಗತ್ಯಕ್ಕೆ ಇರುವ ವ್ಯತ್ಯಾಸವೇನು?
ಪತ್ರೀಜಿ : “ಸಜ್ಜನ ಸಾಂಗತ್ಯ”ವೆಂದರೆ ‘ಸತ್ಯ’ವನ್ನು ತಿಳಿದುಕೊಂಡಿರುವವರೊಂದಿಗೆ ಇರುವುದು” .. ಅಂದರೆ ಆತ್ಮವಿದ್ಯೆಯ ಬಗ್ಗೆ, ಆತ್ಮಶಕ್ತಿಯ ಬಗ್ಗೆ ಸ್ಪಷ್ಟವಾದ ಅರಿವು ಹೊಂದಿರುವ ಸಜ್ಜನರೊಂದಿಗೆ ಕೂಡಿದ ಸಾಂಗತ್ಯ.
“ಆಚಾರ್ಯ”ರೆಂದರೆ “ತಾವು ತಿಳಿದುಕೊಂಡ ಸತ್ಯದಲ್ಲಿ ಸದಾ ಜೀವಿಸುತ್ತಾ ತಮ್ಮ ಜೀವನವನ್ನು ಮತ್ತಷ್ಟು ಸತ್ಯಸಾಧನೆಗೆ ಅಂಕಿತ ಮಾಡಿದವರು, ಮಾಡುತ್ತಿರುವವರು. ಆಧ್ಯಾತ್ಮಿಕತೆಯಲ್ಲಿ ಪರಿಪೂರ್ಣ ಪ್ರಗತಿಯನ್ನು ಸಾಧಿಸಿದ ಇಂತಹ ಆಚಾರ್ಯರೊಂದಿಗೆ ಒಡಗೂಡಿ ಜೀವಿಸುವುದೇ “ಆಚಾರ್ಯ ಸಾಂಗತ್ಯ”.
ಪ್ರತಿಯೊಬ್ಬ ಸಾಧಕನು ಕೂಡಾ ಧ್ಯಾನದೊಂದಿಗೆ “ಸಜ್ಜನ ಸಾಂಗತ್ಯ” ಮತ್ತು “ಆಚಾರ್ಯ ಸಾಂಗತ್ಯ”ವನ್ನು ಕ್ರಮವಾಗಿ ಮಾಡಬೇಕು. ಆಗಲೇ ಆತನ ಆತ್ಮವು ಪ್ರಗತಿಪಥದಲ್ಲಿ ನಿಶ್ಚಿಂತೆಯಾಗಿ ಮುಂದೆ ಸಾಗುತ್ತಾ ಇರುತ್ತದೆ.
ಪ್ರಶ್ನೆ : “ಬುದ್ಧನ ಮೂರ್ತಿಗಳನ್ನು .. ಕುಳಿತಿರುವ ಭಂಗಿಯಲ್ಲಿ, ನಿಂತಿರುವ ಭಂಗಿಯಲ್ಲಿ ಮತ್ತು ಮಲಗಿರುವ ಭಂಗಿಯಲ್ಲಿ ನೋಡುತ್ತೇವೆ. ಅದರ ಅಂತರಾರ್ಥವೇನು?”
ಪತ್ರೀಜಿ : ಧ್ಯಾನಸ್ಥಿತಿಯಲ್ಲಿ ಕುಳಿತಿರುವ ಬುದ್ಧಮೂರ್ತಿ .. “ಧ್ಯಾನದಿಂದ ಜ್ಞಾನ” ಎನ್ನುವ ಶಿವ-ಪಾರ್ವತಿ ತತ್ತ್ವವನ್ನು ಸೂಚಿಸುತ್ತದೆ.
ನಿಶ್ಚಲವಾಗಿ ನಿಂತಿರುವ ಬುದ್ಧಮೂರ್ತಿ .. ಕಾರ್ಯೋನ್ಮುಖತೆಗೆ, ಸೃಜನಾತ್ಮಕತೆಗೆ ಪ್ರತಿರೂಪವಾಗಿ ಇರುವ ಬ್ರಹ್ಮವಾಗೇಶ್ವರಿ ತತ್ತ್ವವನ್ನು ಸೂಚಿಸುತ್ತದೆ.
ಇನ್ನು ಮಲಗಿರುವ ಬುದ್ಧಮೂರ್ತಿ .. ಕ್ಷೀರಸಮುದ್ರದಲ್ಲಿ ಯೋಗನಿದ್ರಾಪರವಶನಾಗಿ ಮುಕ್ತಸ್ಥಿತಿಯಲ್ಲಿ ಇರುವ ವಿಷ್ಣುತತ್ತ್ವವನ್ನು ಸೂಚಿಸುತ್ತದೆ.
ಪ್ರಶ್ನೆ : ಜೀವನ್ಮುಕ್ತನು ಹೇಗೆ ಇರುತ್ತಾನೆ?
ಪತ್ರೀಜಿ : ಯಾವುದಕ್ಕೂ ತಾಪತ್ರಯಪಡದೇ ಪ್ರಶಾಂತ, ನಿರ್ಮಲ ತತ್ವದೊಂದಿಗೆ ಬುದ್ಧಿಪರಿಣಿತಿಯನ್ನು ಸಾಧಿಸಿರುವವನೇ “ಒಬ್ಬ ಜೀವನ್ಮುಕ್ತನು”; ಅಂತಹ ನಿಷ್ಕಾಮ ನಿಶ್ಚಲಮೂರ್ತಿಯಾದ ಜೀವನ್ಮುಕ್ತನಿಗೆ ಸಿರಿ ದಾಸನಾಗಿರುತ್ತದೆ .. ವಿಜಯ ಇಷ್ಟಪಟ್ಟು ಬಂದು ಬಾಗಿಲು ತಟ್ಟುತ್ತದೆ.
ಎಲ್ಲದರಲ್ಲೂ ತೃಪ್ತರಾಗಿರುವ ಜೀವನ್ಮುಕ್ತರ ವಾಕ್ಕುಗಳು, ಕರ್ಮಗಳು ಆತ್ಮಹಿತಕರವಾಗಿ, ಲೋಕಹಿತಕರವಾಗಿ ವಿರಾಜಿಸುತ್ತವೆ.
ಪ್ರಶ್ನೆ : “ಲಂಖಣ ಪರಮೌಷಧ ಎನ್ನುತ್ತಾರೆ ..”
ಪತ್ರೀಜಿ : ’ಲಂಖಣ’ ಅಂದರೇ ನಿರಾಹಾರವಾಗಿರುವುದು ..
ಮೂರು ಬಗೆಯ ಲಂಖಣಗಳಿವೆ: 1. “ಶಾರೀರಕ ಲಂಖಣ” 2. “ವಾಂಚಿಕ ಲಂಖಣ” 3. “ಮಾನಸಿಕ ಲಂಖಣ”
ಶಾರೀರಕ ಲಂಖಣಕ್ಕಿಂತಾ ’ವಾಂಚಿಕ ಲಂಖಣ’ ಶಕ್ತಿಯುತವಾದದ್ದು ಮತ್ತೆ ಆರೋಗ್ಯದಾಯಕವಾದದ್ದು; ಇದಕ್ಕಿಂತಾ ಶಕ್ತಿಯುತವಾದದ್ದು ಮತ್ತೆ ವಿಶೇಷ ಆರೋಗ್ಯದಾಯಕವಾದದ್ದು ’ಮಾನಸಿಕ ಲಂಖಣ’ .. ಅಥವಾ ’ಧ್ಯಾನ’. ಆದ್ದರಿಂದ ಲಂಖಣ ಕೇವಲ ಭೌತಿಕ ದೇಹಕ್ಕೆ ಮಾತ್ರವೇ ಪರಿಮಿತಗೊಳಿಸದೆ ’ಮೌನ’ದಿಂದ ಮಾತುಗಳನ್ನು .. ’ಧ್ಯಾನ’ದ ಮೂಲಕ ಮನಸ್ಸನ್ನು .. ಶೂನ್ಯಗೊಳಿಸುವ ಅಭ್ಯಾಸ ಮಾಡುತ್ತಿರಬೇಕು.
ಪ್ರಶ್ನೆ : “ನಮ್ಮ ತಾಯಿ ಈ ನಡುವೆ ತೀರಿಕೊಂಡಿದ್ದಾರೆ; ಅದಕ್ಕೆ ನನಗೆ ತುಂಬಾ ಬಾಧೆಯಾಗಿದೆ .. ”
ಪತ್ರೀಜಿ : ’ಮರಣ’ ಎನ್ನುವುದು ಅಂತಹ ದೊಡ್ಡ ವಿಷಯವೇನಲ್ಲ. ಅದು ‘ಒಂದು ಮನೆ’ಯಿಂದ ’ಇನ್ನೊಂದು ಮನೆ’ಗೆ .. ’ಒಂದು ಸ್ಥಾನ’ದಿಂದ ಮತ್ತೊಂದು ಸ್ಥಾನಕ್ಕೆ .. ’ಒಂದು ದೇಶ’ದಿಂದ ’ಮತ್ತೊಂದು ದೇಶಕ್ಕೆ’ ಹೋಗುವ ಸರ್ವೇಸಾಧಾರಣದ ಕಾರ್ಯಕ್ರಮ.
ಎಲ್ಲರೂ ಏತಕ್ಕಾಗಿ ಮರಣಿಸುತ್ತಿದ್ದಾರೊ ನಿಮ್ಮ ತಾಯಿ ಸಹ ಅದಕ್ಕೆ ಮರಣಿಸಿದ್ದಾರೆ; ಆದ್ದರಿಂದ, ಈಗ ನೀವು ನಿಮ್ಮ ತಾಯಿ ಮರಣಿಸಿದಕ್ಕೆ ಬಾಧೆಪಡದೆ .. ನಿಜಕ್ಕೂ ಅವರು ಮರಣಿಸಿ ಎಲ್ಲಿಗೆ ಹೋಗಿದ್ದಾರೊ .. ಮತ್ತೆ ನಿಮ್ಮ ತಾಯಿಯ ಹಾಗೆ ಎಲ್ಲರೂ ಮರಣಿಸಿ ಯಾವ ಯಾವ ಲೋಕಗಳಿಗೊ ಹೋಗಿ ಪುನಃ ಪುನಃ ಬರುತ್ತಿದ್ದಾರೊ .. ಆ ಪ್ರದೇಶಗಳನ್ನು ಕುರಿತು, ಮತ್ತೆ ಆಯಾ ಲೋಕಗಳನ್ನು ಕುರಿತು ಪೂರ್ಣವಾಗಿ ವಿಚಾರಿಸಿ; ಮತ್ತೆ ಮರಣಾನಂತರ ಜೀವನವನ್ನು ಕುರಿತು ಅಧ್ಯಯನ ಮಾಡುವುದನ್ನು ತಕ್ಷಣ ಪ್ರಾರಂಭಿಸಿ.
ಪ್ರಶ್ನೆ : “’ಒದ್ದೆಯಾಗಿರುವುದು ಭಾರ’ ಎಂದು ಸದಾ ಕೇಳುತ್ತಿರುತ್ತೇವೆ ..”
ಪತ್ರೀಜಿ : ’ಒಂದು ಹಿಡಿ’ – ‘ಒಂದು ಹೊರೆ’ ಎನ್ನುವ ಪದಗಳನ್ನು ಬಳಸುತ್ತಿರುತ್ತೇವೆ. ಯಾವುದಾದರೂ ಸರಿ ಒದ್ದೆ ಆಗದಿದ್ದರೆ ಅದನ್ನು ನಾವು ನಮ್ಮ ಮುಷ್ಟಿಯಲ್ಲಿ ’ಹಿಡಿ’ಯಬಹುದು ಆದರೆ, ಅದೇ ಹಿಡಿಯಷ್ಟಿದ್ದದ್ದು ಒದ್ದೆಯಾದರೆ ಮಾತ್ರ ತಲೆಯ ಮೇಲೆ ಹೊರಲಾರದಷ್ಟು ಭಾರವಾಗಿ ’ಹೊರೆ’ಯಾಗಿ ಬಿಡುತ್ತವೆ.
ಹುಟ್ಟಿನಿಂದ ನಾವು ತಂದುಕೊಳ್ಳುವ ಕರ್ಮಗಳು ಸದಾ ಒಂದು ಹಿಡಿಯಷ್ಟೇ ಇರುತ್ತವೆ. ಆದರೆ, ಜೀವನಗಮನದಲ್ಲಿ ನಾವೇ ಅವುಗಳನ್ನು ಒದ್ದೆ ಮಾಡಿ, ಅಂದರೆ, ಅಜ್ಞಾನದಿಂದ ಬೆಳೆಸಿಕೊಂಡು ’ಹೊರ’ಲಾರದೆ ತಬ್ಬಿಬ್ಬಾಗುತ್ತಿರುತ್ತೇವೆ.
ಪ್ರತಿನಿತ್ಯಾ ಧ್ಯಾನ ಮಾಡುತ್ತಾ .. ಮತ್ತೆ ಶಾರೀರಕ ಬಾಧೆಗಳನ್ನು ಸ್ವಲ್ಪ ಸಹಿಸಿಕೊಳ್ಳುತ್ತಾ ಸಹನೆಯಿಂದ ಇದ್ದರೆ ಆ ಹಿಡಿಯಷ್ಟು ರೋಗಗಳು .. ಕಷ್ಟಗಳು .. ಅನಾಯಾಸವಾಗಿ ಅಳಿಸಿಹೋಗುತ್ತದೆ. ಹಾಗಲ್ಲದೇ .. “ಆ ಡಾಕ್ಟರ್… ಈ ಔಷಧಿ” .. “ಆ ದೇವರು .. ಈ ಮಾಂತ್ರಿಕ” ಎನ್ನುತ್ತಾ ಅಸಹನೆಯಿಂದ ಓಡುತ್ತಿದ್ದರೆ ಅವು ಒದ್ದೆಯಾಗಿ ಹೊರಲಾರದಷ್ಟು ಭಾರ ಆಗಿಬಿಡುತ್ತದೆ.
ಧ್ಯಾನಿಗಳು, ಆತ್ಮಜ್ಞಾನಿಗಳು ಆದವರು ಆ “ಸ್ವಲ್ಪ-ಹಿಡಿಯಷ್ಟು” ಕಷ್ಟಗಳನ್ನು ಸಹನೆಯಿಂದ ಅನಾಯಾಸವಾಗಿ ಮೀರುತ್ತಾ ಸದಾ ಆನಂದವಾಗಿ ಜೀವಿಸಬಲ್ಲವರಾಗುತ್ತಾರೆ.
ಮಾಯಾಸಭೆಯಲ್ಲಿ ದ್ರೌಪದಿಯ ನಗುವಿನಿಂದ ಅವಮಾನಿತನಾದ ದುರ್ಯೋಧನನು ಆ ವಿಷಯವನ್ನು ಅಲ್ಲಿಗೆ ಬಿಡದೆ ಪದೇಪದೇ ಯೋಚಿಸುತ್ತಾ .. “ನನಗೆ ಇಷ್ಟು ಅವಮಾನವೇ?” .. “ನಾನು ಇಷ್ಟು ಕೀಳಾದವನೇ?” ಎಂದು ಆ ವಿಷಯವನ್ನು ಒದ್ದೇ ಮಾಡಿ ಮಾಡಿ ಹೊರಲಾರದಷ್ಟು ಹೊರೆಮಾಡಿಕೊಂಡು .. ಮಹಾಭಾರತ ಮಹಾಯುದ್ಧವನ್ನು ಸೃಷ್ಟಿಸಿ .. ಎಲ್ಲರ ವಿನಾಶಕ್ಕೆ ಕಾರಣಕರ್ತನಾದನು.
ಪ್ರಶ್ನೆ : ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲಾರದೆ ಕೆಲವೊಮ್ಮೆ ನಾನು ತುಂಬಾ ಅಳುತ್ತಿರುತ್ತೇನೆ. ಕೆಲವೊಮ್ಮೆ ’ಇದು ಕೂಡಾ ಒಂದು ಅನುಭವವೇ’ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಇದರಲ್ಲಿ ಸರಿಯಾದದ್ದು ಯಾವುದು?
ಪತ್ರೀಜಿ : ಅಳುವುದು ಎನ್ನುವುದು ನಮ್ಮ ಭಾವಗಳನ್ನು ನವಗೂ ಮತ್ತು ಸುತ್ತಲೂ ಇರುವವರಿಗೆ ತಿಳಿಸುವ ಒಂದು ಒಳ್ಳೆಯ ಅಭಿವ್ಯಕ್ತಿಯ ಕ್ರಿಯೆ! ಅದು ತಪ್ಪೇನೂ ಅಲ್ಲ. ಆದ್ದರಿಂದ, ಚೆನ್ನಾಗಿ ಅತ್ತಮೇಲೆ ಕುಳಿತುಕೊಂಡು ಚೆನ್ನಾಗಿ ಧ್ಯಾನ ಮಾಡಿ .. ಧ್ಯಾನ, ಬಿಡುವಾಗಿ ಕುಳಿತು ಅಳುವುದು .. ಎರಡೂ ಕೂಡಾ ಆತ್ಮಪ್ರಗತಿಗೆ ಸಹಾಯಕ ವಾಗುವಂತಹುದೇ!
ಪ್ರಶ್ನೆ : ಗೌತಮಬುದ್ಧ ತನ್ನ ಜಾತಕದ ಪ್ರಕಾರ ಯೋಗೀಶ್ವರನಾದನೇ? ಅಥವಾ ..
ಪತ್ರೀಜಿ : ಕಳೆದ ಅನೇಕಾನೇಕ ಜನ್ಮಗಳಿಂದಲೇ .. ಗೌತಮಬುದ್ಧ ಮಹಾಯೋಗೀಶ್ವರ! ಆದರೆ ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯವೇನೆಂದರೆ .. ಗೌತಮನಂತೆ ನಾವು ಯಾವಾಗ ಯೋಗೀಶ್ವರರಾಗುತ್ತೇವೆ? ಬುದ್ಧನಂತೆ ನಾವು ಹೇಗೆ ಜೀವಿಸಬಲ್ಲೆವು? ಎನ್ನುವುದೇ ಹೊರತು ಮತ್ತೇನೂ ಅಲ್ಲಾ! ಅನೇಕಾನೇಕ ಮಂದಿ ಯೋಗೀಶ್ವರರು ನಮಗೆ ನೀಡಿರುವ ಅನುಭವದಿಂದ ಬಂದ ಶಾಸ್ತ್ರೀಯ ಆತ್ಮಜ್ಞಾನವನ್ನು ತೆಗೆದುಕೊಂಡು ಅದನ್ನು ನಮ್ಮ ಸ್ವಂತ ಅನುಭವಜ್ಞಾನದಂತೆ ಮಾಡಿಕೊಳ್ಳುವುದೇ ನಾವು ಮಾಡಬೇಕಾದ ಕೆಲಸವೇ ಹೊರತು .. ಅವರ ಜಾತಕಗಳನ್ನು ವಿಶ್ಲೇಷಿಸಿಕೊಳ್ಳುತ್ತಾ ಕುಳಿತುಕೊಳ್ಳುವುದರಿಂದ ನಮಗೇನೂ ಉಪಯೋಗ ಆಗುವುದಿಲ್ಲ.
ಪ್ರಶ್ನೆ : ಕಳೆದ ಕೆಲವು ವರ್ಷಗಳಿಂದ ನನ್ನಲ್ಲಿ ಯಾವುದೋ ಅರಿಯದ ಭಯಗಳು ನನ್ನನ್ನು ತುಂಬಾ ಬಾಧಿಸುತ್ತಿವೆ. ಅವುಗಳಿಂದ ವಿಮುಕ್ತಿ ಹೊಂದುವುದು ಹೇಗೆ?
ಪತ್ರೀಜಿ : ಧ್ಯಾನದಲ್ಲಿ ಕುಳಿತು .. ಹಿಂದೆ ನಮಗೆ ಯಾರ‍್ಯಾರಿಂದ ನೋವುಂಟಾಗಿದೆಯೋ ಅವರನ್ನು ನೆನಪುಮಾಡಿಕೊಂಡು .. ಅವರೆಲ್ಲರನ್ನೂ ಪ್ರತಿಯೊಬ್ಬರ ಹೆಸರುಗಳನ್ನು ಹೇಳಿಕೊಂಡು ಯಾವುದೇ ಷರತ್ತು ಇಲ್ಲದೆ ಅವರನ್ನು ಕ್ಷಮಿಸಿಬಿಡಿ. ಹಾಗೆಯೇ, ನಿಮ್ಮಿಂದ ಯಾರಿಗೆ ನೋವುಂಟಾಗಿದೆಯೋ ಅವರನ್ನು ನೆನಪಿಸಿಕೊಂಡು .. ಅವರ ಹೆಸರಗಳನ್ನು ಹೇಳಿಕೊಂಡು ಅವರನ್ನು ಕ್ಷಮಾಪಣೆ ಕೇಳಿ.
ಹಂತಹಂತವಾಗಿ ನಿಮ್ಮ ಅಂತಃಶ್ಚೇತನಾ ಮನಸ್ಸಿನ ಮೂಲೆ ಮೂಲೆಯಲ್ಲಿ ಅಡಗಿರುವ ನೋವುಂಟುಮಾಡುವ ಆಲೋಚನೆಗಳಿಂದ ನೀವು ವಿಮುಕ್ತಿ ಹೊಂದುತ್ತೀರಿ. ನಿಮ್ಮ ಧ್ಯಾನ ಸಮಯವನ್ನು ಹೆಚ್ಚಿಸಿಕೊಂಡು .. ಹೊಸ ಆಧ್ಯಾತ್ಮಿಕತೆಗೆ ಸೇರಿದ ಪುಸ್ತಕಗಳನ್ನು ಓದುವುದನ್ನು ಮುಂದುವರೆಸಿ… ಪ್ರತಿದಿನ ಇದನ್ನು ಒಂದು ಅಭ್ಯಾಸದಂತೆ ಮಾಡಿ.
ಪ್ರಶ್ನೆ : ‘ನಾವು ಪಡೆಯಬೇಕಾದುದನ್ನೆಲ್ಲಾ, ನಮಗೆ ದೊರೆಯಬೇಕಾದವುಗಳೆಲ್ಲಾ ನಾವು ಕೇಳದೆಯೇ ಪ್ರಕೃತಿಯು ನಮಗೆ ಒದಗಿಸುತ್ತದೆ. ಆದ್ದರಿಂದ, ನಾವು ಯಾವ ಕೆಲಸವನ್ನು ಮಾಡದಿದ್ದರೂ ಪರವಾಗಿಲ್ಲ’ ಎಂದು ನನ್ನ ಸ್ನೇಹಿತ ಹೇಳುತ್ತಿರುತ್ತಾನೆ ..
ಪತ್ರೀಜಿ :ಅಂತಹ ಮೂರ್ಖಶಿಖಾಮಣಿ ನಿಮಗೆ ಸ್ನೇಹಿತನಾಗಬಾರದು! ಅವನ ಸ್ನೇಹವನ್ನು ಬಿಡಿ! ಚಾರ್ಲ್ಸ್ ಡಾರ್ವಿನ್ ಮಹಾಶಯರು ನೀಡಿದ ಸಿದ್ಧಾಂತಗಳನ್ನು ಕುರಿತು ನೀವು ಓದಿಲ್ಲವೇ? ವಿಕಾಸದ ಹಾದಿಯ ಭಾಗವಾಗಿ ಪ್ರಕೃತಿ ಯಾವಾಗಲೂ ನಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳಿಗೆ ನಮ್ಮನ್ನು ಗುರಿಮಾಡುತ್ತಾ ಇರುತ್ತದೆ: ಅಸ್ತಿತ್ವಕ್ಕಾಗಿ ಹೋರಾಟ ನಿರಂತರ (Struggle for Existence) ಆ ಪರೀಕ್ಷೆಯಲ್ಲಿ ಗೆದ್ದವರನ್ನೇ ಅರ್ಹರಾಗಿ ಆಯ್ಕೆಮಾಡಿ .. ಕ್ರಮಕ್ರಮವಾಗಿ ಅವರಿಗೆ ಸೇರಬೇಕಾದ್ದುದ್ದನ್ನು ಅವರಿಗೆ ಕೊಡುತ್ತಾ ಇರುತ್ತದೆ : ಅರ್ಹರಾದವರು ಮಾತ್ರವೇ ಉಳಿಯುತ್ತಾರೆ (Survival of The Fittest)
ಪ್ರಶ್ನೆ : ಮನೆಯವರನ್ನು ಗೆದ್ದನಂತರ ಹೊರಗಿನವರನ್ನು ಗೆಲ್ಲು ಎಂದು ಹಿರಿಯರು ಹೇಳುತ್ತಾರೆ .. ಅದು ಹೇಗೆ?
ಪತ್ರೀಜಿ : ಧ್ಯಾನ, ಸಜ್ಜನ ಸಾಂಗತ್ಯ, ಸ್ವಾಧ್ಯಾಯ ಎನ್ನುವ ಮೂರು ಸೇರಿದ ಆಧ್ಯಾತ್ಮಿಕ ಜೀವನ ಕೂಡಾ ಶೇ.೫೦ರಷ್ಟು ಇದ್ದಾಗಲೇ ಉಳಿದ ಶೇ.೫೦ರಷ್ಟು ಪ್ರಾಪಂಚಿಕ ಜೀವನ ಎನ್ನುವುದು ಸಮತೋಲನ ಸ್ಥಿತಿಯಲ್ಲಿ ಸಾಗುತ್ತದೆ.
ಆತ್ಮವೆಂಬ ಮನೆ ಗೆದ್ದ ಒಬ್ಬ ಬುದ್ಧ ಮಾತ್ರವೇ ಪ್ರಾಪಂಚಿಕತೆಯೆಂಬ ಹೊರಗಿನವರನ್ನು ಕೂಡಾ ಗೆದ್ದು ಸಮತೋಲನ ಸ್ಥಿತಿಯಲ್ಲಿ ತನ್ನ ಜೀವನವನ್ನು ಸಂಪೂರ್ಣವಾಗಿ ಜೀವಿಸುತ್ತಾ ಇರುತ್ತಾನೆ!
ಪ್ರಶ್ನೆ : ಈಗ ಎಲ್ಲಿ ನೋಡಿದರೂ ನಾಮುಂದು ತಾಮುಂದು ಎಂದು ಆಧ್ಯಾತ್ಮಿಕ ಸಂಸ್ಥೆಗಳು ಹುಟ್ಟಿಕೊಳ್ಳುತ್ತಾ ಇವೆ. ಇವುಗಳಲ್ಲಿ ಸರಿಯಾದದ್ದು ಯಾವುದೋ ಆಯ್ಕೆ ಮಾಡಿಕೊಳ್ಳಲು ಯಾವುದಾದರೂ Short-cut ಪದ್ಧತಿ ಇದೆಯೇ?!
ಪತ್ರೀಜಿ :Short-cut ಎನ್ನುವುದು ಎಲ್ಲೂ ಇಲ್ಲ! ಪ್ರತಿಯೊಂದು ಪದ್ಧತಿಯನ್ನು ಪರೀಕ್ಷಿಸುತ್ತಾ ಹೋಗಲೇಬೇಕು! .. ಇದಕ್ಕೆ ಬಹಳಷ್ಟು ಸಹನೆ ಇರಬೇಕು. ಗೌತಮಬುದ್ಧ ಆರು ವರ್ಷಗಳ ಕಾಲ ಯಾವುದೇ ಅಸಹನೆ, ವಿರಾಮವಿಲ್ಲದಂತೆ ಸುಮಾರು ೫೦೦ ಮಂದಿ ಗುರುಗಳ ಬಳಿ ಶಿಷ್ಯನಾದನು. ಅಲ್ಲಿ ತಾನು ಗ್ರಹಿಸಿದ ವಿಷಯಗಳೆಲ್ಲವನ್ನೂ ಆಚರಿಸಿ ಆ ಅನುಭವಜ್ಞಾನವನ್ನೆಲ್ಲಾ ಕ್ರೋಢೀಕರಿಸಿಕೊಳ್ಳುತ್ತಾ ಕೊನೆಗೆ ತನ್ನದೇ ಆದ ಆನಾಪಾನಾಸತಿ ದಾರಿಯನ್ನು ಆರಿಸಿಕೊಂಡ. ಗೌತಮಬುದ್ಧನಿಗಾದರೂ .. ಮತ್ಯಾರಿಗಾದರೂ ಅನಾಯಾಸವಾದ ಸುಲಭ ಪದ್ಧತಿಗಳು ಎಂದು ಯಾವುದೂ ಇಲ್ಲ!
ಪ್ರಶ್ನೆ : ’ಕೋಪ, ಅಳು, ಕರುಣೆ, ಪ್ರೇಮ, ದಯೆ, ಸಹಾನುಭೂತಿ ಎನ್ನುವ ಭಾವಗಳನ್ನು ಹೊರಗೆ ವ್ಯಕ್ತಪಡಿಸಿದರೆ ಮಾತ್ರವೇ ಆತ ಅವುಗಳಿಂದ ವಿಮುಕ್ತನಾಗುತ್ತಾನೆ’ ಎಂದು ನಾನು ತುಂಬಾ ಸಂದರ್ಭಗಳಲ್ಲಿ ಓದಿದ್ದೇನೆ. ಆದರೆ, ಹಾಗೆ ಮಾಡುವುದರಿಂದ ನನ್ನ ಸುತ್ತಲಿನವರು ನನ್ನನ್ನು ಅರ್ಥಮಾಡಿಕೊಳ್ಳದೇ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ.
ಪತ್ರೀಜಿ :ಕ್ಷೀರಸಾಗರ ಮಥನದಲ್ಲಿ ಮೊದಲು ಹಾಲಾಹಲ ಬಂದು ಅನಂತರ ’ಕಲ್ಪವೃಕ್ಷ’, ’ಕಾಮಧೇನು’, ’ಐರಾವತ’, ’ವಜ್ರಾಯುಧ’ಗಳಂತಹವು ಬಂದು ಕೊನೆಗೆ ಅಮೃತ ಸಿಗುತ್ತದೆ. ಆಧ್ಯಾತ್ಮಿಕ ಸಾಧನಾ ಕ್ರಮದಲ್ಲಿ ಮೊದಲು ನನ್ನವರು ಅಂದುಕೊಂಡುವರಿಂದಲೇ ಛೀಕಾರ, ವ್ಯಂಗ್ಯಗಳು ಕೇಳಿ ಬರುತ್ತವೆ! ಎಲ್ಲವನ್ನೂ ಸಹಿಸಿಕೊಂಡು ಮನೋದೃಢತೆ ಕಳೆದುಕೊಳ್ಳದೇ ಸತ್ಯಸಾಧನೆ ಮಾಡುತ್ತಿದ್ದರೆ ಕ್ರಮಕ್ರಮವಾಗಿ ನಮಗೆ ಸಿಗಬೇಕಾದದ್ದೆಲ್ಲವೂ ಬರುತ್ತಾ ಇರುತ್ತವೆ. ಆಗ ನಮ್ಮ ಧ್ಯಾನಸಾಧನಾ ತರಂಗಗಳ ಪ್ರಭಾವದಿಂದ ಎಲ್ಲರ ಸ್ಥಿತಿಗತಿಗಳಲ್ಲಿ ಕೂಡಾ ಬದಲಾವಣೆ ಕಂಡು ಕ್ರಮಕ್ರಮವಾಗಿ ಅವರೂ ಕೂಡಾ ಈ ರಹದಾರಿಯಲ್ಲೇ ಬಂದು ಅಲ್ಲಿಯವರೆಗೂ ಅಪಾರ್ಥ ಮಾಡಿಕೊಂಡವರೆಲ್ಲಾ ಕೂಡಾ ಆಗ ಸ್ವಲ್ಪವಾದರೂ ಅರ್ಥಮಾಡಿಕೊಳ್ಳುತ್ತಾರೆ.
ಪ್ರಶ್ನೆ : ನಾನು ಧ್ಯಾನ ಮಾಡುತ್ತಾ .. ಮಾಂಸಾಹಾರದ ಅನರ್ಥಗಳನ್ನು ತಿಳಿದುಕೊಂಡ ತಕ್ಷಣವೇ ಪೂರ್ಣ ಶಾಕಾಹಾರಿಯಾಗಿ ಬದಲಾದೆನು. ಆದರೆ, ಇಲ್ಲಿ ಸಮಸ್ಯೆ ಏನೆಂದರೆ ನಮ್ಮ ಮನೆಯವರೆಲ್ಲಾ ನನ್ನನ್ನು ಮಾಂಸಾಹಾರ ತಿನ್ನಬೇಕೆಂದು ಬಲವಂತ ಮಾಡುತ್ತಿದ್ದಾರೆ. ಅವರ ಮಾತು ಒಪ್ಪಿಕೊಂಡಾಗಲೆಲ್ಲಾ ನನಗೆ ಧ್ಯಾನ ಸರಿಯಾಗಿ ಆಗದೆ ನನ್ನ ಹೃದಯ ಎಷ್ಟೋ ವೇದನೆಯೊಂದಿಗೆ ತುಂಬಿಹೋಗುತ್ತದೆ. ಇದಕ್ಕೇನು ಮಾಡಬೇಕು? (ಕಿಂ ಕರ್ತವ್ಯಂ?!)
ಪತ್ರೀಜಿ : ತಕ್ಷಣ ನೀವು ನಿಮ್ಮ ಮನೆಯಿಂದ ಹೊರಬನ್ನಿ! ನಿಮ್ಮನ್ನು ಪಾಪಕೊಪಕ್ಕೆ ತಳ್ಳುವವರು ನಿಮ್ಮವರು ಹೇಗಾಗುತ್ತಾರೆ? ಪ್ರಹ್ಲಾದ-ಹಿರಣ್ಯಕಶ್ಯಪುವಿನ ಕಥೆ ಕೇಳಿದ್ದೀರಲ್ಲಾ?!
ಪ್ರಶ್ನೆ : ಗುರುಗಳೇ, ಸತ್ಯಯುಗ ಶುರುವಾಗಿದೆಯೇ?!
ಪತ್ರೀಜಿ : ವಿಭಿನ್ನತೆಯಿಂದ ಕೂಡಿದ ಈ ಸೃಷ್ಟಿಯಲ್ಲಿ ಯಾವುದೂ ಎಲ್ಲರಿಗೂ ಒಂದೇ ರೀತಿಯಾಗಿ ಇರದು! ನಿಮಗೆ ಸತ್ಯಯುಗ ಶುರುವಾಗಿ ನಿಮ್ಮ ಮನೆಯವರಿಗೆಲ್ಲಾ ಇನ್ನೂ ಕಲಿಯುಗವೇ ಆಗಿರಬಹುದು! ಅಥವಾ ನಿಮ್ಮ ಮನೆಯವರೆಲ್ಲಾ ಸತ್ಯಯುಗಕ್ಕೆ ಹೋಗಿ ನೀವು ಇನ್ನೂ ಕಲಿಯುಗದಲ್ಲೇ ನರಳುತ್ತಾ ಇರಬಹುದು!
ಪ್ರಶ್ನೆ : “ಪ್ರಕೃತಿಯ ಜೊತೆ ಜೀವಿಸುವುದು ಹೇಗೆ?”
ಪತ್ರೀಜಿ : ಪ್ರಕೃತಿಯನ್ನು ಎರಡು ರೀತಿಯಲ್ಲಿ ನೋಡಬಹುದು, ಒಂದು ಸ್ಥೂಲ ಪ್ರಕೃತಿ .. ಚರ್ಮಚಕ್ಷುಗಳಿಂದ ನೋಡುವುದು. ಎರಡು, ಸೂಕ್ಷ್ಮ ಪ್ರಕೃತಿ .. ದಿವ್ಯಚಕ್ಷುಗಳಿಂದ ನೋಡುವುದು.
ಒಂದೇ ಜೀವನ ಕಾಲದಲ್ಲಿ ಈ ಎರಡು ಬದಿಗಳಿಂದ ಕೂಡಿದ ಪ್ರಕೃತಿಯಲ್ಲಿ ವಿಶೇಷವಾಗಿ ಕಲೆತು ಜೀವಿಸುವುದೇ ಶಾಸ್ತ್ರೀಯವಾದ ಜೀವನ ವಿಧಾನ.
ಚರ್ಮಚಕ್ಷುಗಳಿಂದ ನೋಡಬಹುದಾದ ಸ್ಥೂಲ ಪ್ರಕೃತಿಯಾದ ಬೆಟ್ಟ-ಗುಡ್ಡಗಳು .. ಗಿಡ-ಮರಗಳು .. ಪ್ರಾಣಿ-ಪಕ್ಷಿಗಳು .. ನದಿ-ಸರೋವರಗಳು .. ಸ್ವಚ್ಛವಾದ ಗಾಳಿ, ಸಮುದ್ರಗಳು ಅಂತಹ ಶಕ್ತಿಕ್ಷೇತ್ರಗಳಲ್ಲಿ ಸಮಯವನ್ನು ಕಳೆಯುತ್ತಾ ಅವುಗಳಿಂದ ಹಚ್ಚುಹೆಚ್ಚು ವಿಶ್ವಮಯ ಪ್ರಾಣಶಕ್ತಿಯನ್ನು ಹೊಂದಬೇಕು.
ಧ್ಯಾನದ ಮೂಲಕ ದಿವ್ಯಚಕ್ಷುವನ್ನು ಉತ್ತೇಜಿಸಿಕೊಂಡು ಸಾಮಾನ್ಯವಾದ ಚರ್ಮಚಕ್ಷುಗಳಿಂದ ನೋಡಲಾರದ ಸೂಕ್ಷ್ಮಕಾರಣ, ಮಹಾಕಾರಣ ಅಂತಹ ಅನೇಕಾನೇಕ ಉನ್ನತ ಲೋಕಗಳನ್ನು ದರ್ಶಿಸಿ .. ಆಯಾಯ ಲೋಕಗಳಿಂದ ವಿಶ್ವಶಕ್ತಿಯನ್ನು, ಆಯಾಯ ಲೋಕಗಳ ಭಾವಸಂಪತ್ತನ್ನು ಗ್ರಹಿಸಿ ನೂತನ ಉನ್ನತವಾದ ಮನೋವಿಕಾಸವನ್ನು ಹೊಂದಬೇಕು.
ಹೀಗೆ ಸ್ಥೂಲ, ಸೂಕ್ಷ್ಮಪ್ರಕೃತಿಗಳಿಂದ ಕೂಡಿ ಶಾಸ್ತ್ರೀಯ ಪದ್ಧತಿಯಲ್ಲಿ ಏಕಕಾಲದಲ್ಲಿ ಜೀವಿಸಲಾದಾಗಲೇ ನಾವು ವಿಶ್ವಜೀವಿಗಳಾಗಿ ಪರಿಣಿತಿಯನ್ನು ಪಡೆಯುತ್ತೇವೆ!
ಪ್ರಶ್ನೆ : “ಆನಂದ ಹೇಗೆ ಬರುತ್ತದೆ?”
ಪತ್ರೀಜಿ : ಮನಸಾ, ವಾಚಾ, ಕರ್ಮಣಾ – ತ್ರಿಕರಣಶುದ್ಧಿಯಾಗಿ, ನಿಜಾಯಿತಿಯಿಂದ ಇರುವಾಗ ನಮಗೆ ಆನಂದ ಎನ್ನುವುದು ವಿಶೇಷವಾಗಿ ಲಭ್ಯವಾಗುತ್ತಿರುತ್ತದೆ. ಧ್ಯಾನಾನುಭವದ ಮೂಲಕ ನಾವು ತಿಳಿದುಕೊಂಡಿದ್ದನ್ನೇ ಮಾತನಾಡುತ್ತಾ .. ಹಾಗೆ ಮಾತನಾಡಿದ್ದನ್ನೇ ಆಚರಿಸುತ್ತಾ .. ನಿತ್ಯ ಜಾಗರೂಕತೆಯಿಂದ ಇರುವಾಗ ನಾವು ಆನಂದಮಯರಾಗಿ ಇರುತ್ತೇವೆ.
ಈ ನಿತ್ಯ ಜೀವನ ಆನಂದಮಯ ಸೂತ್ರವನ್ನು ಮಕ್ಕಳಿಗೆ, ಹಿರಿಯರಿಗೆ, ಬಂಧು-ಬಾಂಧವ್ಯರಿಗೆ ಮತ್ತು ನಮ್ಮನ್ನು ಶತ್ರುಗಳಂತೆ ನೋಡುತ್ತಿರುವವರಿಗೆ ಕೂಡಾ ತಿಳಿಸುತ್ತಾ ಅವರನ್ನೂ ಸಹ ಆನಂದಮಯರಾಗಿ ಇರುವಂತೆ ಮಾಡುತ್ತಿದ್ದರೆ ನಾವು ಬ್ರಹ್ಮಾನಂದವನ್ನು ಅನುಭವಿಸುತ್ತಿರುತ್ತೇವೆ.
ಪ್ರಶ್ನೆ : “ಯೋಗಭ್ರಷ್ಟತೆ ಅಂದರೆ ಏನು?”
ಪತ್ರೀಜಿ : ಸರಿಯಾದ ಧ್ಯಾನ ಸಾಧನೆಯನ್ನು ವಿಶೇಷವಾಗಿ ಮಾಡಿದ ಪ್ರತಿಯೊಬ್ಬರಿಗೂ ಅಪರಿಮಿತವಾದ ಶಕ್ತಿ ಸಾಮರ್ಥ್ಯಗಳು ಸಂಚಯಗೊಳ್ಳುತ್ತಾ ಇರುತ್ತದೆ. ಅದರ ಮೂಲಕ ಅವರು ಏನು ಕೋರಿಕೊಂಡರೆ ಅದು ಪ್ರಾಪಂಚಿಕವಾಗಿಯೇ ಅಲ್ಲದೆ ಆಧ್ಯಾತ್ಮಿಕವಾಗಿ ಕೂಡ ಅನಾಯಾಸವಾಗಿ ಕೂಡಿಬರುತ್ತಾ ಇರುತ್ತದೆ.
“ಪ್ರಾಪ್ತಿ” .. “ಪ್ರಕಾಮ್ಯ” .. “ಈಶತ್ವ” .. “ವಶಿತ್ವ” ಎನ್ನಲಾಗುವ ಇಂತಹ ಸಿದ್ಧಿಗಳಿಂದ ನಾವು ಗರ್ವ, ಅಹಂಕಾರ ಮತ್ತು ಡಂಭಾಚಾರಗಳನ್ನು ಬೆಳೆಸಿಕೊಂಡರೆ .. ಅದು ನಮ್ಮ ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪತನಕ್ಕೆ ದಾರಿಮಾಡಿ ನಮ್ಮನ್ನು ಯೋಗಭ್ರಷ್ಟರನ್ನಾಗಿ ರೂಪಿಸಿ ಮರುಜನ್ಮಗಳಲ್ಲಿ ಇನ್ನಷ್ಟು ಕ್ಲಿಷ್ಟಪರಿಸ್ಥಿತಿಗಳಲ್ಲಿ ಜನ್ಮ ಪಡೆಯುವಂತೆ ಮಾಡುತ್ತದೆ.
ಹಾಗಲ್ಲದೆ ನಿರಂತರ ಧ್ಯಾನ ಸಾಧನೆಯ ಮೂಲಕ ನಮಗೆ ಸಿಗುತ್ತಿರುವ ಸಿದ್ಧಿಗಳ ಬಗ್ಗೆ ಅರಿವಿನಿಂದ ಕೂಡಿದ ಸಮದೃಷ್ಟಿಯನ್ನು ಹೊಂದಿರಬೇಕು. ಬಯಸಿದ್ದಾದರೂ .. ಅಥವಾ ಅನಾಯಾಸವಾದರೂ ಸರಿ .. ನಮಗೆ ಕೂಡಿಬರುತ್ತಿರುವ ಅದ್ಭುತವಾದ ಫಲಿತಾಂಶಗಳ ಬಗ್ಗೆ ಕೃತಜ್ಞತೆಯಿಂದಿದ್ದು, ಗರ್ವಕ್ಕೆ ಒಳಗಾಗದೇ ಜಾಗರೂಕತೆ ವಹಿಸಬೇಕು. ಆಗಲೇ ಆತ್ಮವು ತನ್ನ ವಿಕಾಸದ ಹಾದಿಯಲ್ಲಿ ಮುಂದಕ್ಕೆ ಸಾಗುತ್ತಾ ಇರುತ್ತದೆ.
ಪ್ರಶ್ನೆ : “ಎಲ್ಲಿಯ ತನಕ ಸಾಧನೆ ಮಾಡಬೇಕು?”
ಪತ್ರೀಜಿ : ಆತ್ಮಸಾಕ್ಷಾತ್ಕಾರ ಆಗುವವರೆಗೂ ಧ್ಯಾನಸಾಧನೆ ಮುಂದುವರೆಯುತ್ತಲೇ ಇರಬೇಕು. ದಿವ್ಯಚಕ್ಷುವನ್ನು ಉತ್ತೇಜಿಸಿಕೊಳ್ಳಬೇಕು .. ಸೂಕ್ಷ್ಮಶರೀರ ಯಾನಗಳನ್ನು ಮಾಡಬೇಕು .. ಗತಜನ್ಮಗಳ ಜ್ಞಾನಸಂಪತ್ತು ಎಲ್ಲವನ್ನು ಮತ್ತೆ ಪಡೆಯಬೇಕು .. ಪರಲೋಕ ಗುರುಗಳ ಜೊತೆ ಸಂಪರ್ಕವನ್ನು ಹೊಂದಿರುತ್ತಾ ಆತ್ಮಜ್ಞಾನವೆಲ್ಲವನ್ನೂ ಸಂಗ್ರಹಿಸಿ ಹಿಡಿಯಬೇಕು. “ಈ ಪ್ರಕ್ರಿಯೆಯನ್ನೆಲ್ಲಾ ಈಗಲೇ ಪ್ರಾರಂಭಿಸಿ ಈ ಜನ್ಮದಲ್ಲೇ ಪರಾಕಾಷ್ಠೆಯನ್ನು ಸಾಧಿಸಬೇಕು” ಎನ್ನುವ ದೃಢನಿರ್ಧಾರದಿಂದ ಮುಂದಕ್ಕೆ ಸಾಗುವುದು ಉತ್ತಮರ ಲಕ್ಷಣ!
ಪ್ರಶ್ನೆ : “ಎಲ್ಲಿಯ ತನಕ ಗುರುಗಳ ಅವಶ್ಯಕತೆ ಬೇಕಾಗುತ್ತದೆ?”
ಪತ್ರೀಜಿ : ಅಪರಿಮಿತವಾದ ಆಲೋಚನೆಗಳಿಂದ ಕೂಡಿದ ಪ್ರಾಪಂಚಿಕ ಮಾಯೆಯಿಂದ ಹೊರಬೀಳುವವರೆಗೂ ನಮಗೆ ಬಾಹ್ಯ ಗುರುಗಳ ಸಲಹೆಗಳು, ಸೂಚನೆಗಳ ಅವಶ್ಯಕತೆಯಿದೆ. ಧ್ಯಾನ ಸಾಧನೆಯ ಮೂಲಕ ನಮ್ಮನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಾಗ ಸ್ವಯಂಪ್ರಕಾಶದಿಂದ ಕೂಡಿದ ಗುರುಗಳ ಹಾಗೆ ನಮಗೆ ನಾವೇ ಮಾರ್ಗದರ್ಶನ ಮಾಡಿಕೊಳ್ಳುತ್ತೇವೆ. ಇದಕ್ಕೆ ಸ್ವಾಧ್ಯಾಯ, ಸಜ್ಜನಸಾಂಗತ್ಯ ಇತ್ಯಾದಿಗಳು ನಮಗೆ ತುಂಬಾ ಸಹಾಯವಾಗುತ್ತವೆ!
ಪ್ರಶ್ನೆ : “ಸಾಧಕನಿಗೆ ಆಹಾರ ಅಭ್ಯಾಸಗಳು ಹೇಗಿರಬೇಕು?”
ಪತ್ರೀಜಿ : ಶ್ರೇಷ್ಠವಾದ ಸಸ್ಯಾಹಾರ ಮಾತ್ರವೇ ಸರಿಯಾದ ಆಹಾರ. ಅದು ಕೂಡಾ .. ಅಧಿಕವಾಗಿ ತಿಂದರೆ ದೇಹ ಬಲಿತು .. ಇಂದ್ರಿಯಗಳು ಮಂದಗತಿಯಲ್ಲಿ ಕೆಲಸ ಮಾಡುತ್ತವೆ. ಅದಕ್ಕೆ ಕ್ರಮೇಣ ದೇಹ ಆಹಾರವನ್ನು ಕಡಿಮೆಮಾಡುತ್ತಾ .. ಆತ್ಮ ಆಹಾರವಾದ ಧ್ಯಾನ ಸಮಯವನ್ನು ಹೆಚ್ಚಿಸುತ್ತಾ ಇರಬೇಕು. ಆಗಲೇ ಇಂದ್ರಿಯಗಳು ಸುವ್ಯವಸ್ಥಿತವಾಗಿ ಬದಲಾಗಿ .. ಜೀವಾತ್ಮ ಪರಮಾತ್ಮವಾಗಿ ವಿಕಾಸ ಹೊಂದುತ್ತಾ ಇರುತ್ತದೆ.
ಪ್ರಶ್ನೆ : “ಟೆನ್ಷನ್ ಎನ್ನುವುದು ಇಲ್ಲದೆ ಸದಾ ಶಾಂತಿಯಿಂದ ಇರುವುದು ಹೇಗೆ ? ”
ಪತ್ರೀಜಿ : ಟೆನ್ಷನ್ ಎನ್ನುವುದು ನಿಮಗೇ ಅಲ್ಲ .. ಎಲ್ಲರಿಗೂ ಇರುತ್ತದೆ. ಮಹಾಭಾರತದ ಯುದ್ಧ ಮಾಡಲು ಶಸ್ತ್ರಾಸ್ತ್ರಗಳ ಸಹಿತ ಹೊರಟ ಅರ್ಜುನನಿಗೆ ತೀರಾ ಯುದ್ಧರಂಗದ ನಡುವೆ ಬಂದ ತಕ್ಷಣವೇ “ಟೆನ್ಷನ್” ಪ್ರಾರಂಭವಾಯಿತು.
“ಶತ್ರು ಸೈನ್ಯದಲ್ಲಿರುವ ಆ ದ್ರೋಣಾಚಾರ್ಯರನ್ನು ಊಕೆ ಕೊಲ್ಲಬೇಕು?”, “ಕುರುವೃದ್ಧರಾದ ಭೀಷ್ಮಪಿತಾಮಹರನ್ನು ಊಕೆ ಸದೆಬಡೆಯಬೇಕು?” .. “ನಿಜಕ್ಕೂ ಈಗ ಯುದ್ಧ ಮಾಡುವ ಅವಶ್ಯಕತೆ ಇದೆಯಾ?” .. ಎನ್ನುತ್ತಾ ಅನೇಕಾನೇಕ ಉದ್ರೇಕಗಳಿಗೆ ಗುರಿಯಾದ ಅರ್ಜುನನ ಪರಿಸ್ಥಿತಿಗೆ ಕನಿಕರಿಸಿದ ಶ್ರೀಕೃಷ್ಣನು ಅರ್ಜುನಾ! ನೀನು ಮೊದಲು ಯೋಗಿಯಾಗು! ಎಂದು ಹೇಳಿದನು.
ಮಹಾವೀರನು ಮತ್ತು ಅನೇಕಾನೇಕ ಆಯುಧಗಳನ್ನು ಕೈಯಲ್ಲಿಟ್ಟುಕೊಂಡಿದ್ದರೂ ಸಹ ಅರ್ಜುನನು ಟೆನ್ಷನ್ ಆದನೇ ವಿನಹ .. ಕೈಯಲ್ಲಿ ಯಾವ ಆಯುಧವೂ ಇಲ್ಲದೇ ಯುದ್ಧ ರಂಗದಲ್ಲಿ ರಥವನ್ನು ಓಡಿಸುತ್ತಾ ಕುಳಿತಿರುವ ಶ್ರೀಕೃಷ್ಣನು ಮಾತ್ರ ಯಾವ ಟೆನ್ಷನ್ ಇಲ್ಲದೆ ನೆಮ್ಮದಿಯಿಂದ ಕುಳಿತಿದ್ದನು. ಕಾರಣ ಆತನು ಬಾಲ್ಯದಿಂದಲೇ ಧ್ಯಾನ ಸಾಧನೆಯಲ್ಲಿ ತನ್ನ ಜೀವನವನ್ನು ರೂಪಿಸಿಕೊಂಡ ಮಹಾ ಯೋಗೀಶ್ವರನು! ಧ್ಯಾನವಿದ್ಯೆಯಲ್ಲಿ ನಿಷ್ಣಾತರಾದವರಿಗೆ ಶ್ರೀಕೃಷ್ಣನ ಹಾಗೆ ಸದಾ ಟೆನ್ಷನ್ ಎನ್ನುವುದು ಇರುವುದಿಲ್ಲ.
ಪ್ರಶ್ನೆ: ಧ್ಯಾನ ಮಾಡುವುದರಿಂದ ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆಯೇ?
ಪತ್ರೀಜಿ: ಧ್ಯಾನ ಮಾಡುವುದರಿಂದ ಅಧಿಕವಾಗುವುದೇ .. ಆತ್ಮವಿಶ್ವಾಸ! “ಸಾಸಿವೆಕಾಳಷ್ಟು ಆತ್ಮವಿಶ್ವಾಸವಿದ್ದರೇ ಸಾಕು .. ಪರ್ವತಗಳನ್ನು ಸಹ ಕದಲಿಸಬಹುದು” ಎಂದರು ಜೀಸಸ್ ಕ್ರೈಸ್ಟ್. ಆದ್ದರಿಂದ, ಧ್ಯಾನ ಮಾಡುವವರಿಗೆ ಬೆಟ್ಟದಷ್ಟು ಆತ್ಮವಿಶ್ವಾಸವಿರುತ್ತದೆ ಮತ್ತು ಅವರು ಸಂಕಲ್ಪಿಸಿದ್ದನ್ನು, ಅಂದುಕೊಂಡಿದ್ದನ್ನು ಸಾಧಿಸಬಲ್ಲರು!
ಪ್ರಶ್ನೆ: ‘ಕೋಪ’, ‘ಭಯ’, ‘ಬೇಸರ’ ಅಂತಹ ಲಕ್ಷಣಗಳನ್ನು ಹೋಗಲಾಡಿಸಿಕೊಳ್ಳುವುದು ಹೇಗೆ?
ಪತ್ರೀಜಿ: ‘ಕೋಪ’, ‘ಭಯ’, ‘ಬೇಸರ’ ಅಂತಹ ಮಾನವ ಸಹಜವಾದ ಲಕ್ಷಣಗಳನ್ನು ಕಳೆದುಕೊಳ್ಳುವುದು ಅಲ್ಲದೇ .. ಯಾವುದನ್ನು, ಎಲ್ಲಿ, ಯಾವಾಗ, ಹೇಗೆ ಇಡಬೇಕೋ .. ಎಲ್ಲಿ, ಆಗ, ಹಾಗೆ ಇಡುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಬಚ್ಚಲುಮನೆಯಲ್ಲಿ ಮಂಚಗಳನ್ನು ಇಡುವುದು ಮತ್ತು ಹಜಾರದಲ್ಲಿ (ಡ್ರಾಯಿಂಗ್ ರೂಮ್) ಸ್ನಾನದ ತೊಟ್ಟಿ (ಬಾತ್‌ಟಬ್) ಇಡುವಂತಹ ಮೂರ್ಖ ಕೆಲಸ ಮಾಡುವುದಿಲ್ಲವಲ್ಲ! ಪ್ರತಿಯೊಂದು ವಸ್ತುವಿಗೂ ಒಂದು ನಿಗದಿಮಾಡಲ್ಪಟ್ಟ ಸ್ಥಾನವಿದ್ದ ಹಾಗೆ .. ಕೋಪ, ಭಯ, ಬೇಸರ, ನಗು, ಆನಂದ .. ಅಂತಹ ಪ್ರತಿಯೊಂದು ಲಕ್ಷಣಕ್ಕೂ ಸಹ ಒಂದು ನಿರ್ದಿಷ್ಟವಾದ ಸ್ಥಾನ ಖಂಡಿತಾ ಇರುತ್ತದೆ!
ನಿರಂತರ ಧ್ಯಾನ ಸಾಧನೆ ಮಾಡುವುದರಿಂದ ನಮ್ಮ ಅಂತರಂಗ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತಾ .. ನಮ್ಮ ಸಹಜ ಲಕ್ಷಣಗಳೆಲ್ಲಾ ನಮಗೆ ಅರಿವಾಗುತ್ತವೆ. ಜೀವನದಲ್ಲಿ ಯಾವುದು, ಎಲ್ಲಿ, ಹೇಗೆ ಇರಬೇಕೊ ಅಲ್ಲಿ, ಹಾಗೆ ಸರಿಯಾದ ರೀತಿಯಲ್ಲಿ ಇರುತ್ತಾ .. ಪ್ರತಿಯೊಂದು ಕ್ಷಣದಲ್ಲೂ ಇರುವ ಆನಂದವನ್ನು ನಮಗೆ ಅನುಭವಕ್ಕೆ ತರುತ್ತವೆ. ಧ್ಯಾನ ಮಾಡದೇ ಇದ್ದರೆ, ಈ ಲಕ್ಷಣಗಳೆಲ್ಲಾ ಯಾವುದು, ಎಲ್ಲಿ, ಯಾವಾಗ, ಹೇಗೆ ಇರಬಾರದೊ ಹಾಗೆ ಸರಿಯಾದ ರೀತಿಯಲ್ಲಿ ಇರದೇ ಜೀವನವನ್ನು ತುಂಬಾ ಗೊಂದಲಕ್ಕೆ ಈಡುಮಾಡುತ್ತವೆ.
ಪ್ರಶ್ನೆ: ಮರಣಾನಂತರ ಆತ್ಮಕ್ಕೆ ಏನಾಗುತ್ತದೆ?
ಪತ್ರೀಜಿ: ನಿಮ್ಮ ಶರೀರದ ಮೇಲಿಂದ ಅಂಗಿ ಕಳಚಿಹಾಕಿದಾಗ ನಿಮ್ಮ ಶರೀರಕ್ಕೆ ಏನಾಗುತ್ತದೆ?! ಏನೂ ಆಗುವುದಿಲ್ಲ!! ಶರೀರಕ್ಕೆ ವಸ್ತ್ರ ಹೇಗೊ .. ಹಾಗೆ ಆತ್ಮಕ್ಕೆ ಈ ಶರೀರ. ಆದ್ದರಿಂದ .. ಮರಣಾನಂತರ ಸಹ ನಮ್ಮ ಆತ್ಮ ಶಾಶ್ವತವಾಗಿರುತ್ತದೆ .. ಮತ್ತು ಇನ್ನೂ ಅನೇಕಾನೇಕ ನೂತನ ಅನುಭವಗಳನ್ನು ಹೊಂದುವ ದಿಸೆಯಲ್ಲಿ ತನ್ನ ಅನಂತಕಾಲಗಳ ಪ್ರಯಾಣವನ್ನು ಮುಂದುವರೆಸುತ್ತಲೇ ಇರುತ್ತದೆ.
ಪ್ರಶ್ನೆ: ಒತ್ತಡ (ಟೆನ್ಷನ್) ಎನ್ನುವುದಿಲ್ಲದೇ ಸದಾ ಶಾಂತಿಯಿಂದ ಇರುವುದು ಹೇಗೆ?
ಪತ್ರೀಜಿ: ‘ಒತ್ತಡ’ ಎನ್ನುವುದು ನಿಮಗೆ ಮಾತ್ರವಲ್ಲ .. ಎಲ್ಲರಿಗೂ ಇರುತ್ತದೆ. ಮಹಾಭಾರತ ಯುದ್ಧ ಮಾಡಲು ಶಸ್ತ್ರಾಸ್ತ್ರಗಳೊಂದಿಗೆ ಹೊರಟ ಅರ್ಜುನನಿಗೆ ಸಹ ತೀರಾ ಯುದ್ಧರಂಗದ ನಡುವೆ ಬಂದ ತಕ್ಷಣ ‘ಟೆನ್ಷನ್’ ಆರಂಭವಾಯಿತು.
ಶತ್ರು ಸೈನ್ಯದಲ್ಲಿರುವ ಆ ದ್ರೋಣಾಚಾರ್ಯರನ್ನು ಹೇಗೆ ಕೊಲ್ಲಲಿ?” ಕುರುವೃದ್ಧನಾದ ಭೀಷ್ಮಪಿತಾಮಹರನ್ನು ಹೇಗೆ ಸದೆಬಡಿಯಲಿ?” .. “ನಿಜಕ್ಕೂ ಈಗ ಯುದ್ಧ ಮಾಡುವ ಅವಶ್ಯಕತೆ ಇದೆಯಾ?” .. ಎನ್ನುತ್ತಾ ಹಲವು ರೀತಿಯ ಗೊಂದಲಗಳಿಗೆ ಗುರಿಯಾದನು. ಅರ್ಜುನನ ಪರಿಸ್ಥಿತಿಯ ಬಗ್ಗೆ ಕನಿಕರ ಉಂಟಾಗಿ ಶ್ರೀಕೃಷ್ಣನು “ಅರ್ಜುನಾ! ನೀನು ಮೊದಲು ಯೋಗಿಯಾಗು” ಎಂದು ಹೇಳಿದನು.
ಮತ್ತು ಅನೇಕಾನೇಕ ಆಯುಧಗಳನ್ನು ಕೈಯಲ್ಲಿಟ್ಟುಕೊಂಡ ಮಹಾವೀರನಾದ ಅರ್ಜುನನಿಗೆ ಟೆನ್ಷನ್ ಆಗಿತ್ತು. ಆದರೆ .. ಕೈಯಲ್ಲಿ ಯಾವ ಆಯುಧವೂ ಇಲ್ಲದೇ ಯುದ್ಧರಂಗದಲ್ಲಿ ರಥವನ್ನು ಓಡಿಸುತ್ತಾ ಕುಳಿತಿರುವ ಶ್ರೀಕೃಷ್ಣನು ಮಾತ್ರ ಯಾವ ಟೆನ್ಷನ್ ಇಲ್ಲದೇ ನೆಮ್ಮದಿಯಿಂದ, ಆನಂದದಿಂದ ಕುಳಿತಿದ್ದನು. ಕಾರಣವೇನೆಂದರೆ, ಆತನು ಬಾಲ್ಯದಿಂದಲೇ ಧ್ಯಾನ ಸಾಧನೆಯಲ್ಲಿ ತನ್ನ ಜೀವನವನ್ನು ಧನ್ಯವಾಗಿಸಿಕೊಂಡ ಶ್ರೇಷ್ಠ ಯೋಗೀಶ್ವರ! ಧ್ಯಾನವಿದ್ಯೆಯಲ್ಲಿ ನಿಷ್ಣಾತರಾದವರಿಗೆ ಶ್ರೀಕೃಷ್ಣನಂತೆ ಎಂದಿಗೂ ಟೆನ್ಷನ್ ಎನ್ನುವುದಿರುವುದಿಲ್ಲ.
ಅದಕ್ಕೆ ಯಾವ ಕೆಲಸವಾದರೂ ಟೆನ್ಷನ್ ಇಲ್ಲದೇ ಮಾಡಬೇಕಾದರೇ .. ಮುಂಜಾನೆ ಎದ್ದ ತಕ್ಷಣ ಧ್ಯಾನ ಮಾಡಬೇಕು. ಇಲ್ಲದಿದ್ದರೆ ಅರ್ಜುನನ ಹಾಗೆ .. ಟೆನ್ಷನ್ ಹೆಚ್ಚಾಗಿ .. ನಿಜವಾದ ಸಮಸ್ಯೆಯಿಂದಲೇ ಪಲಾಯನ ಮಾಡಬೇಕು ಅನಿಸುತ್ತದೆ.
ಪ್ರಶ್ನೆ: ಮತಭೇದ ಎನ್ನುವುದು ಏತಕ್ಕಾಗಿ ಬರುತ್ತಿದೆ?
ಪತ್ರೀಜಿ: ಆತ್ಮಜ್ಞಾನದ ಕೊರತೆಯಿಂದ, ಮೂರ್ಖತನದಿಂದ ಮಾನವರಲ್ಲಿ ಮತಭೇದ ಎನ್ನುವುದು ಬರುತ್ತಿದೆ.
ನಾವು ಒಂದು ಜನ್ಮದಲ್ಲಿ ‘ಕ್ರಿಶ್ಚಿಯನ್’ ಆಗಿ, ಮತ್ತೊಂದು ಜನ್ಮದಲ್ಲಿ ಮಹಮ್ಮದೀಯರಾಗಿ- ಹೀಗೆ ಬೇರೆಬೇರೆ ಜನ್ಮಗಳಲ್ಲಿ ಅನೇಕಾನೇಕ ರೀತಿಯಿಂದ ಜನ್ಮಿಸುತ್ತೇವೆ. ಆದರೆ, ಹುಟ್ಟಿದನಂತರ ಆ ಆತ್ಮದ ಸತ್ಯವನ್ನು ಮರೆತು .. ನಾನು “ಕೇವಲ ಮಹಮ್ಮದೀಯನು”, “ನಾನು ಕೇವಲ ಕ್ರಿಶ್ಚಿಯನ್”, ಅಥವಾ “ನಾನು ಕೇವಲ ಹಿಂದು” ಎನ್ನುವ ಅಜ್ಞಾನದಲ್ಲಿ ಬಿದ್ದು ನಾವು ನಮ್ಮ ಜನ್ಮಪರಂಪರೆಯನ್ನು ಮರೆತು ಮತಭೇದಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ .. ಜನ್ಮಪರಂಪರೆಯನ್ನು ಕುರಿತು ಮತ್ತು ಕರ್ಮ ಸಿದ್ಧಾಂತವನ್ನು ಕುರಿತು ಅರಿವಿನಿಂದ ಇರಬೇಕೆಂದರೇ .. ಖಂಡಿತಾ ಧ್ಯಾನ ಮಾಡಬೇಕಾದ್ದೆ.
ಪ್ರಶ್ನೆ: ಧ್ಯಾನ ಸರಿಯಾಗಿ ಕುದುರಲು ಏನಾದರೂ ತಂತ್ರಗಳನ್ನು ಹೇಳಿ?
ಪತ್ರೀಜಿ: ಇದಕ್ಕೂ ಮುಂಚೆ ಯಾವ ಪೂಜೆಗಳೂ, ಮತಾಚಾರಗಳೂ, ಶಾಸ್ತ್ರಚರ್ಚೆಗಳೂ ಮಾಡದೇ ಇರುವವರಿಗೆ ಧ್ಯಾನ ಸ್ವಲ್ಪ ಚೆನ್ನಾಗೇ ಮಾಡಲಾಗುತ್ತದೆ. ಐವತ್ತು ವರ್ಷಗಳ ವಯಸ್ಸಿನಲ್ಲಿ ಹೊಸ ಭಾಷೆಯನ್ನು ಕಲಿತುಕೊಳ್ಳುವುದು ಸ್ವಲ್ಪ ಕಷ್ಟ. ಆದರೆ, ಚಿಕ್ಕ ಮಕ್ಕಳು ಮಾತ್ರ ಚಕ .. ಚಕ .. ಅಂತ ಕಲಿಯುತ್ತಾರೆ. ಏಕೆಂದರೆ, ವಯಸ್ಸಾದವರ ಮನಸ್ಸಿನ ಮೇಲೆ ಅದಕ್ಕೂ ಮುಂಚೆ ಬೇರೆ ವಿಷಯಗಳಿಗೆ ಸೇರಿದ ಮುದ್ರೆಗಳೆಲ್ಲಾ ಒತ್ತಲಾಗಿರುತ್ತದೆ. ನಂತರ ಹೊಸ ವಿಷಯ ಕಲೆತುಕೊಳ್ಳಬೇಕೆಂದರೆ .. ಮೊದಲು ಆ ಮುದ್ರೆಗಳೆಲ್ಲಾ ಅಳಿಸಿಹಾಕಬೇಕು. ಇದಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಧ್ಯಾನದ ವಿಷಯದಲ್ಲಿ ಸಹ ಅಷ್ಟೇ! ಧ್ಯಾನದಲ್ಲಿ ಏಕಾಗ್ರತೆ ಬರಲು ಹಿರಿಯರಿಗಿಂತಾ ಕಿರಿಯರಿಗೇ ಕಡಿಮೆ ಸಮಯ ಹಿಡಿಸುತ್ತದೆ. ಆದ್ದರಿಂದ, ಇಲ್ಲಿ ‘ತಂತ್ರ’ ಏನೆಂದರೆ .. ಆಲೋಚನೆಗಳನ್ನೆಲ್ಲಾ ಬಿಟ್ಟು ಆ ಸ್ವಲ್ಪ ಹೊತ್ತು ನಾವು ಕೂಡಾ ‘ಚಿಕ್ಕಮಕ್ಕಳ ಹಾಗೆ’ ಬದಲಾಗಿ .. ಅತಿ ಸಹಜವಾದ ಸ್ಥಿತಿಯಲ್ಲಿ ಧ್ಯಾನಕ್ಕೆ ಉಪಕ್ರಮಿಸುವುದೇ!
ಪ್ರಶ್ನೆ: ‘ವಿಜ್ಞಾನ (ಸೈನ್ಸ್) ಹೇಳುವುದು ಸತ್ಯ’ ಎಂದು ನಿರ್ಧರಿಸಿಕೊಳ್ಳಬಹುದಾ?
ಪತ್ರೀಜಿ: ಕಣ್ಣಿಗೆ ಕಾಣಿಸುವ ವಿಷಯಗಳನ್ನು ಸ್ವಲ್ಪ ಮಾತ್ರ ವಿವರಿಸಿ ಹೇಳುವ ‘ಸೈನ್ಸ್’ .. ಸ್ವಲ್ಪ ಮಾತ್ರ ನಮಗೆ ವಿಷಯ ಪರಿಜ್ಞಾನವನ್ನು ಉಂಟುಮಾಡುತ್ತದೆ. ಅಷ್ಟು ಮಾತ್ರಕ್ಕೆ ಅದೇ ‘ಸತ್ಯ’ ಆಗಲಾರದು. ಉದಾಹರಣೆಗೆ: ಬೆಳಕು ಪರಿವರ್ತನೆ ಹೊಂದಿದಾಗ ಕಾಣಿಸುವ ವರ್ಣಪಟ್ಟಿಕೆಯಲ್ಲಿ .. ಕೆಂಪು ವರ್ಣದಿಂದ ನೀಲಿ ವರ್ಣದವರೆಗೂ ಇರುವ ಕಿರಣಗಳನ್ನು ಮಾತ್ರವೇ ‘ಸೈನ್ಸ್’ ನಮಗೆ ತೋರಿಸುತ್ತದೆ .. ಆದರೆ, ಬೆಳಕಿನಲ್ಲಿ ಅಲ್ಟ್ರಾವಾಯೊಲೆಟ್, ಇನ್‌ಫ್ರಾರೆಡ್‌ನಂತಹ ನಮ್ಮ ಕಣ್ಣಿಗೆ ಇನ್ನೂ ಕಾಣಿಸದ ಪುನರಾವರ್ತಿತವಾಗಿ ಬರುವ ಪರಿಧಿಗಳಲ್ಲಿರುವ ಕಿರಣಗಳು ಬೇಕಾದಷ್ಟು ಇವೆ. ಅವೆಲ್ಲವನ್ನು ‘ಸೈನ್ಸ್’ ನಮಗೆ ತೋರಿಸಲಾರದೇ ಇರಬಹುದು. ಆದರೆ, ಇವುಗಳನ್ನೆಲ್ಲ ನಮ್ಮ ದಿವ್ಯಚಕ್ಷುವಿಗೆ ‘ಧ್ಯಾನ’ವು ಸುಸ್ಪಷ್ಟವಾಗಿ ತೋರಿಸುತ್ತದೆ. ಅಲ್ಲದೆ, ಅವುಗಳನ್ನು ಕುರಿತು ಸಂಪೂರ್ಣ ಜ್ಞಾನವನ್ನು ನಮಗೆ ನೀಡುತ್ತದೆ.
ಪ್ರಶ್ನ: ಶ್ವಾಸದ ಮೇಲೆಯೇ ಏಕೆ ಗಮನವಿಟ್ಟು ಧ್ಯಾನ ಮಾಡಬೇಕು?
ಪತ್ರೀಜಿ: “ಶ್ವಾಸ” ಎನ್ನುವುದು ನಿನ್ನೆಗೆ ಸಂಬಂಧಿಸಿದ ಭೂತಕಾಲವಲ್ಲ .. ಮತ್ತೆ ನಾಳೆಗೆ ಸೇರಿದ ಭವಿಷ್ಯತ್ತು ಅಲ್ಲ. ಅದು ಕೇವಲ ಈ ದಿನದ ಈ ಕ್ಷಣಕ್ಕೆ ಸಂಬಂಧಿಸಿದ ವರ್ತಮಾನ. ಆದ್ದರಿಂದ, ಆ ವರ್ತಮಾನ ಕ್ಷಣದಿಂದ ನಮ್ಮ ಮನಸ್ಸುಗಳನ್ನು ಒಂದುಗೊಡಿಸಬೇಕಾದರೆ ಅದಕ್ಕೆ ಶ್ವಾಸದ ಮೇಲೆ ಗಮನ ಒಂದೇ ಮಾರ್ಗ. ಶ್ವಾಸದ ಮೇಲೆ ಗಮನದಿಂದ ಭೂತಕಾಲ ಎನ್ನುವ ದೊಡ್ಡಭೂತದಿಂದ ಮತ್ತು ಕನಸಿನ ಅರಮನೆಗಳಂತಹ ಭವಿಷ್ಯತ್ತಿನಿಂದ ಹೊರಗೆ ಬಂದು ನಾವು ವರ್ತಮಾನ ಕ್ಷಣದಲ್ಲಿರುವ ಅನಂತವಾದ ಆನಂದದಲ್ಲಿ ಸಂಪೂರ್ಣ ಅರಿವಿನಿಂದ ಜೀವಿಸಬಲ್ಲೆವು! ವರ್ತಮಾನದಲ್ಲಿರುವ ಪ್ರತಿಯೊಂದು ಅನುಭವವನ್ನೂ .. ಒಂದು ದೊಡ್ಡ ಜ್ಞಾನವಾಗಿ ಸ್ವೀಕರಿಸುತ್ತಾ .. ತನ್ನ ಆತ್ಮವನ್ನು ಉನ್ನತಗೊಳಿಸಿಕೊಳ್ಳುತ್ತಾ ಜೀವಿಸುವವನೇ .. ಆಧ್ಯಾತ್ಮಿಕ ಶಾಸ್ತ್ರಜ್ಞ.
ಪ್ರಶ್ನೆ: ಮರಣಾನಂತರ ಆತ್ಮಕ್ಕೆ ಏನಾಗುತ್ತದೆ?
ಪತ್ರೀಜಿ: ನಿಮ್ಮ ಶರೀರದ ಮೇಲಿಂದ ಅಂಗಿ ಕಳಚಿಹಾಕಿದಾಗ ನಿಮ್ಮ ಶರೀರಕ್ಕೆ ಏನಾಗುತ್ತದೆ?! ಏನೂ ಆಗುವುದಿಲ್ಲ!! ಶರೀರಕ್ಕೆ ವಸ್ತ್ರ ಹೇಗೋ .. ಹಾಗೆ ಆತ್ಮಕ್ಕೆ ಈ ಶರೀರ. ಆದ್ದರಿಂದ .. ಮರಣಾನಂತರ ಸಹ ನಮ್ಮ ಆತ್ಮ ಶಾಶ್ವತವಾಗಿರುತ್ತದೆ .. ಮತ್ತು ಇನ್ನೂ ಅನೇಕಾನೇಕ ನೂತನ ಅನುಭವಗಳನ್ನು ಹೊಂದುವ ದಿಸೆಯಲ್ಲಿ ತನ್ನ ಅನಂತ ಕಾಲಗಳ ಪ್ರಯಾಣವನ್ನು ಮುಂದುವರೆಸುತ್ತಲೇ ಇರುತ್ತದೆ.
ಪ್ರಶ್ನೆ: ಮತಭೇದ ಎನ್ನುವುದು ಏತಕ್ಕಾಗಿ ಇದೆ?
ಪತ್ರೀಜಿ: ಆತ್ಮಜ್ಞಾನದ ಕೊರತೆಯಿಂದ, ಮೂರ್ಖತನದಿಂದ ಮಾನವರಲ್ಲಿ ಮತಭೇದ ಎನ್ನುವುದು ಇದೆ. ನಾವು ಒಂದು ಜನ್ಮದಲ್ಲಿ ‘ಕ್ರಿಶ್ಟಿಯನ್’ ಆಗಿ, ಮತ್ತೊಂದು ಜನ್ಮದಲ್ಲಿ ‘ಮಹಮ್ಮದೀಯ’ರಾಗಿ .. ಹೀಗೆ ಅನೇಕ ಜನ್ಮಗಳಲ್ಲಿ ಅನೇಕಾನೇಕ ರೀತಿಯಿಂದ ಜನ್ಮಿಸುತ್ತಿರುತ್ತೇವೆ. ಆದರೆ, ಹುಟ್ಟಿದನಂತರ ಆ ಆತ್ಮದ ಸತ್ಯವನ್ನು ಮರೆತು .. ನಾನು “ಕೇವಲ ಮಹಮ್ಮದೀಯನು”, “ನಾನು ಕೇವಲ ಕ್ರಿಶ್ಚಿಯನ್”, ಅಥವಾ “ನಾನು ಕೇವಲ ಹಿಂದು” ಎನ್ನುವ ಅಜ್ಞಾನದಲ್ಲಿ ಬಿದ್ದು ನಾವು ನಮ್ಮ ಜನ್ಮಪರಂಪರೆಯನ್ನು ಮರೆತುಹೋಗುತ್ತಾ ಮತಬೇಧಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ .. ಜನ್ಮಪರಂಪರೆಯನ್ನು ಕುರಿತು ಮತ್ತು ಕರ್ಮಸಿದ್ಧಾಂತವನ್ನು ಕುರಿತು ಅರಿವಿನಿಂದ ಇರಬೇಕೆಂದರೆ .. ಖಂಡಿತಾ ಧ್ಯಾನ ಮಾಡಬೇಕಾದ್ದೆ.
ಪ್ರಶ್ನೆ: ಆಟಗಳನ್ನು ಆಡುತ್ತಾ, ಹಾಡುಗಳನ್ನು ಹಾಡುತ್ತಾ ಹಾಯಾಗಿ ಇರುವ ಮಕ್ಕಳಿಗೆ ಧ್ಯಾನದ ಅವಶ್ಯಕತೆ ಇದೆಯೆ?
ಪತ್ರೀಜಿ: ಆಟಗಳನ್ನು ಇನ್ನೂ ಚೆನ್ನಾಗಿ ಆಡಲಿಕ್ಕಾಗಿ, ಹಾಡುಗಳನ್ನು ಇನ್ನೂ ಚೆನ್ನಾಗಿ ಹಾಡಲಿಕ್ಕಾಗಿ .. ಮತ್ತು ಇನ್ನೂ .. ಇನ್ನೂ ಹಾಯಾಗಿ ಆನಂದವಾಗಿ ಇರಲಿಕ್ಕಾಗಿ .. ಧ್ಯಾನದ ಅವಶ್ಯಕತೆ ಖಂಡಿತಾ ಇದೆ.
ಪ್ರಶ್ನೆ: ಧ್ಯಾನ ಮಾಡುವುದರಿಂದ ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆಯಾ?
ಪತ್ರೀಜಿ: ಧ್ಯಾನ ಮಾಡುವುದರಿಂದ ಅಧಿಕವಾಗುವುದೇ .. ಆತ್ಮವಿಶ್ವಾಸ! “ಸಾಸಿವೆ ಕಾಳಿನಷ್ಟು ಆತ್ಮವಿಶ್ವಾಸವಿದ್ದರೇ ಸಾಕು .. ಪರ್ವತಗಳನ್ನು ಸಹ ಕದಲಿಸಬಹುದು” ಎಂದರು ಜೀಸಸ್ ಕ್ರೈಸ್ಟ್. ಆದ್ದರಿಂದ, ಧ್ಯಾನ ಮಾಡುವವರಿಗೆ ಬೆಟ್ಟದಷ್ಟು ಆತ್ಮವಿಶ್ವಾಸವಿರುತ್ತದೆ ಮತ್ತು ಅವರು ಸಂಕಲ್ಪಿಸಿದ್ದನ್ನು, ಅಂದುಕೊಂಡಿದ್ದನ್ನು ಸಾಧಿಸಬಲ್ಲರು!
ಪ್ರಶ್ನೆ: ನಾನು ನನ್ನ ಅಂತರ್ಗತ ಶಕ್ತಿಯನ್ನು ಹೇಗೆ ತಿಳಿದುಕೊಳ್ಳಬಹುದು?
ಪತ್ರೀಜಿ: ‘ಅಂತರ್ಗತ ಶಕ್ತಿಯನ್ನು ತಿಳಿದುಕೊಳ್ಳಬೇಕು’ ಎಂದುಕೊಳ್ಳುವುದು ತುಂಬಾ ಒಳ್ಳೆಯ ವಿಷಯ. ಆದರೆ, ಅಂತರ್ಗತ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ ಮೊದಲು ನಾವು ಬಹಿರ್ಗತವಾಗಿರುವ ಅನವಶ್ಯಕ ವಿಷಯಗಳನ್ನು ಕುರಿತು ಯೋಚಿಸುವುದನ್ನು, ಕೇಳಿಸಿಕೊಳ್ಳುವುದನ್ನೂ, ಮಾತನಾಡುವುದನ್ನೂ, ನೋಡುವುದನ್ನೂ ಕಡಿಮೆ ಮಾಡಬೇಕು. ಅನವಶ್ಯಕ ಬಾಹ್ಯ ವಿಷಯಗಳ ಮೇಲೆ ವ್ಯಾಮೋಹವನ್ನು ಕಡಿಮೆ ಮಾಡಿಕೊಂಡು .. ಶ್ವಾಸದ ಮೇಲೆ ಗಮನವಿಟ್ಟು ಅಂತರ್ಮುಖರಾಗಬೇಕು. ಆಗಲೇ ನಮ್ಮೊಳಗೆ ಇರುವ ಅಖಂಡವಾದ, ಅಪಾರವಾದ ಅಂತರ್ಗತ ಶಕ್ತಿಯನ್ನು ನಾವು ತಿಳಿದುಕೊಳ್ಳಬಲ್ಲೆವು”.
ಪ್ರಶ್ನೆ: ಪ್ರಾಪಂಚಿಕ ವಿದ್ಯೆಗೂ .. ಆತ್ಮಜ್ಞಾನಕ್ಕೂ .. ನಡುವೆ ಇರುವ ವ್ಯತ್ಯಾಸವೇನು?
ಪತ್ರೀಜಿ: “ಪ್ರಾಪಂಚಿಕ ವಿದ್ಯೆ ನಮಗೆ ಕೇವಲ ಪದಾರ್ಥ ಜ್ಞಾನವನ್ನು ಮಾತ್ರವೇ ಉಂಟು ಮಾಡಿದರೆ .. ಆಧ್ಯಾತ್ಮಿಕ ಜ್ಞಾನವು ನಮಗೆ ಸೃಷ್ಟಿಯ ಸಿದ್ಧಾಂತಗಳಿಗೆ ಅನುಗುಣವಾಗಿ ಹೇಗೆ ಜೀವಿಸಬೇಕು ಎನ್ನುವುದನ್ನು ಹೇಳಿಕೊಡುತ್ತದೆ.”
ಪ್ರಶ್ನೆ: ಧ್ಯಾನದಲ್ಲಿ ಅನುಭವಿಸುವ ಆನಂದಕ್ಕೂ .. ಮತ್ತು ನಿತ್ಯ ಜೀವನದಲ್ಲಿ ಹೊಂದುವ ಆನಂದಕ್ಕೂ ನಡುವೆ ಇರುವ ವ್ಯತ್ಯಾಸವೇನು?
ಪತ್ರೀಜಿ: “ಆನಂದಗಳು ಮೂರು ಬಗೆ ಇವೆ: ಒಂದು ಶಾರೀರಿಕ ಆನಂದ .. ಎರಡನೆಯದು .. ಮಾನಸಿಕ ಆನಂದ .. ಮೂರನೆಯದು .. ಆತ್ಮಾನಂದ.
ಊಟ, ಬಟ್ಟೆ, ವಸತಿ ಎನ್ನಲಾಗುವ ಶಾರೀರಿಕ ಅವಶ್ಯಕತೆಗಳೆಲ್ಲಾ ಒದಗಿಸುವುದರಿಂದ ಶರೀರವು ಆನಂದವನ್ನು ಹೊಂದುತ್ತದೆ. ಒಳ್ಳೆಯ ಸುಮಧುರವಾದ ಸಂಗೀತವನ್ನು ಆಲಿಸುವುದು, ಪ್ರಿಯವಾದ ಮಾತುಗಳನ್ನು ಕೇಳಿಸಿಕೊಳ್ಳುವುದರ ಮೂಲಕ ಮಾನಸಿಕ ಆನಂದ ಸಿಗುತ್ತದೆ. ಧ್ಯಾನದಲ್ಲಿ ದಿವ್ಯಚಕ್ಷುವಿನ ಅನುಭವಗಳನ್ನು ಹೊಂದುವುದರಿಂದ, ಸೂಕ್ಷ್ಮಶರೀರ ಯಾನಗಳನ್ನು ಮಾಡುವುದರಿಂದ, ಅನೇಕಾನೇಕ ಉನ್ನತ ಲೋಕವಾಸಿಗಳ ದಿವ್ಯಸಂದೇಶಗಳನ್ನು ಕೇಳಿಸಿಕೊಳ್ಳುವುದರಿಂದ ಆತ್ಮಾನಂದವಾಗುತ್ತದೆ. ಈ ಭೂಮಿಯ ಮೇಲೆ ಜನ್ಮ ಪಡೆದ ಪ್ರತಿಯೊಬ್ಬರೂ ಕೂಡಾ ಈ ಮೂರು ಆನಂದಗಳನ್ನೂ ಸಮನಾಗಿ ಅನುಭವಿಸಿಯೇ ತೀರಬೇಕಾದ್ದೇ. ಹಾಗೆ ಅನುಭವಿಸುತ್ತಾ ಆನಂದಿಸುವುದೇ ಬುದ್ಧತ್ವ.”
ಪ್ರಶ್ನೆ : ಪ್ರಾಣಿಗಳನ್ನು ಸಾಯಿಸಿದರೆ ಅವುಗಳಿಗೆ ದುಃಖವಾಗುತ್ತದೆಯೇ?
ಪತ್ರೀಜಿ : ಪ್ರಾಣಿಗಳಿಗೆ ದುಃಖ ಉಂಟಾಗುವುದಿಲ್ಲ!! ಅವುಗಳನ್ನು ಕೊಂದು ತಿಂದವರಿಗೇ ಅಪಾರವಾದ ದುಃಖವುಂಟಾಗುತ್ತದೆ. ಪ್ರಾಣಿಗಳಿಗೆ ಶರೀರದೊಂದಿಗೆ ಸಾಮೂಹಿಕ ಆತ್ಮಚೈತನ್ಯವಿರುತ್ತದೆ. ಅವುಗಳಿಗೆ ’ಮನಸ್ಸು’ ಎನ್ನುವುದು ಇರುವುದಿಲ್ಲವಾದ್ದರಿಂದ, ಸಾಯುತ್ತಿರುವಾಗ ದುಃಖದ ಬದಲು ’ಸಂಕಟ’ ಮಾತ್ರವಿರುತ್ತದೆ!
ಮನುಷ್ಯನಿಗೆ ಮಾತ್ರ ಶರೀರ ಮತ್ತು ಆತ್ಮಕ್ಕೂ ಮಧ್ಯೆ ಅನೇಕಾನೇಕ ಕರ್ಮಗಳಿಂದ ಕೂಡಿದ ’ಮನಸ್ಸು’ ಇರುತ್ತದೆ. ಆದ್ದರಿಂದ, ಪ್ರಾಣಿಗಳನ್ನು ಸಾಯಿಸಿದ ಕರ್ಮಫಲದೊಂದಿಗೆ ಕೂಡಿದ “ದುಃಖ” ಆತನಿಗೆ ಇರುತ್ತದೆ. ಮಾನವ ಜೀವನದಲ್ಲಿ “ದುಃಖ” ಎಂಬುದು ಇರಬಾರದೆಂದರೆ ಮೂಕ ಜೀವಿಗಳನ್ನು ಸಾಯಿಸುವುದನ್ನು ಬಿಡಬೇಕು!
ಪ್ರಶ್ನೆ : “ಸಮಾಜದಲ್ಲಿ ಸುತ್ತಲೂ ನಡೆಯುತ್ತಿರುವ ಅನರ್ಥಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ”.
ಪತ್ರೀಜಿ : ಕೆಟ್ಟವರು ಕೆಟ್ಟಕೆಲಸಗಳನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಮತ್ತೆ ಒಳ್ಳೆಯವರು ಏನು ಮಾಡುತ್ತಿದ್ದಾರೆ? ಅವರು ದೇವಸ್ಥಾನಗಳಿಗೆ ಹೋಗಿ ಪೂಜೆಗಳನ್ನು ಮಾಡುತ್ತಾರೆಯೇ ಹೊರತು .. ಅಲ್ಲಿ ಇನ್ನೂ ಏನು ಮಾಡಬಹುದೋ ಅವರಿಗೆ ಗೊತ್ತಾಗುವುದಿಲ್ಲ. ಚರ್ಚ್‌ಗಳಿಗೆ, ಮಸೀದಿಗಳಿಗೆ ಹೋಗಿ ಪ್ರಾರ್ಥನೆಗಳನ್ನು ಮಾಡುತ್ತಾರೆಯೇ ಹೊರತು .. ಇನ್ನೂ ಏನು ಮಾಡಬೇಕೆಂದು ತಿಳಿಯದು. ಇದು ಸರಿಯಾದ ಪದ್ಧತಿಯಲ್ಲ!
ಕೆಟ್ಟವರ ಕೆಟ್ಟಕೆಲಸಗಳಿಂದ ನಡೆಯಬಾರದ ಅನರ್ಥಗಳು ನಡೆಯುತ್ತಿದ್ದರೆ .. ಒಳ್ಳೆಯವರ ನಿಷ್ಕ್ರಿಯತೆಯಿಂದ ಪ್ರಪಂಚದಲ್ಲಿ ಬರಬೇಕಾದ ಒಳ್ಳೆಯ ಬದಲಾವಣೆಗಳು ಬರುತ್ತಿಲ್ಲ. ಆದ್ದರಿಂದ, ಒಳ್ಳೆಯವರೆಲ್ಲಾ ಧ್ಯಾನ ಮಾಡಿ ಸಾಧ್ಯವಾದಷ್ಟು ಹೆಚ್ಚಾಗಿ ತಮ್ಮದಾದ ಆತ್ಮಶಕ್ತಿಯನ್ನು ಸೃಷ್ಟಿಸಿದರೆ .. ಆ ಶಕ್ತಿತರಂಗಗಳು ಈ ಭೂಮಿಯ ಮೇಲೆ ವ್ಯಾಪಿಸಿ .. ಕೆಟ್ಟವರಲ್ಲೂ ಒಳ್ಳೆಯ ಬದಲಾವಣೆಗಳು ಕೂಡಲೇ ಉಂಟಾಗುತ್ತವೆ.
ಗೌತಮಬುದ್ಧನ ಧ್ಯಾನದ ಶಕ್ತಿತರಂಗಗಳು ಪರಮ ಕಿರಾತಕನಾದ ಅಂಗುಲಿಮಾಲನನ್ನು ಪರಿವರ್ತಿಸಿದಂತೆ .. ಭೂಮಿಯ ಮೇಲಿರುವ ಅನೇಕಾನೇಕ ಮಂದಿ ಬುದ್ಧರ ಧ್ಯಾನಶಕ್ತಿತರಂಗಗಳು, ಸಮಾಜದಲ್ಲಿನ ಕೆಟ್ಟದ್ದನ್ನು ಪ್ರಕ್ಷಾಳನೆ ಮಾಡುತ್ತವೆ! ಆದ್ದರಿಂದ, ಸುಮ್ಮನೆ ಪಶ್ಚಾತ್ತಾಪ ಪಡುತ್ತಾ ಕೂರದೇ ವಿಸ್ತೃತವಾಗಿ ಧ್ಯಾನ-ಜ್ಞಾನ ಪ್ರಚಾರಗಳಿಂದ ಅಜ್ಞಾತ ಬುದ್ಧರನ್ನು ತಟ್ಟಿ ಎಚ್ಚರಿಸಿ ಧ್ಯಾನಶಕ್ತಿತರಂಗಗಳನ್ನು ವಿಶ್ವವ್ಯಾಪ್ತಗೊಳಿಸಬೇಕು.
ಪ್ರಶ್ನೆ : “ಧರ್ಮವು ಎಷ್ಟು ವಿಧಗಳಾಗಿ ಸಾಕ್ಷಾತ್ಕಾರವಾಗುತ್ತದೆ?”
ಪತ್ರೀಜಿ : ಧರ್ಮವು ಎರಡು ವಿಧಗಳಾಗಿ ಸಾಕ್ಷಾತ್ಕರಿಸುತ್ತದೆ.
ಒಂದು: “ಸ್ವಧರ್ಮ”
ಎರಡು: “ಪರಧರ್ಮ”
ಧ್ಯಾನಮಾಡಿ ಸ್ವಾನುಭವದಿಂದ ಆತ್ಮಸತ್ಯವನ್ನು ತಿಳಿದುಕೊಳ್ಳುವುದು “ಸ್ವಧರ್ಮ”. ತಿಳಿದುಕೊಂಡ ಸತ್ಯವನ್ನು ಆಚರಣೆಯಲ್ಲಿಟ್ಟು “ನನ್ನ ಸುತ್ತಲೂ ಇರುವವರೆಲ್ಲಾ ನನ್ನಂತೆ ಆತ್ಮಸ್ವರೂಪರು” ಎಂದು ತಿಳಿದುಕೊಂಡು ನಡೆಯುವುದೇ “ಪರಧರ್ಮ”.
ಪ್ರಶ್ನೆ : “ಧರ್ಮಬದ್ಧವಾಗಿ ಹೇಗೆ ಜೀವಿಸಬೇಕು?”
ಪತ್ರೀಜಿ : ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರೂ ಮುಖ್ಯವಾಗಿ ಮೂರು ಧರ್ಮಗಳನ್ನು ಖಂಡಿತಾ ಪಾಲಿಸಬೇಕು .. ಮೊದಲನೆಯದು .. “ದೇಹ ಧರ್ಮ”: ಈ ಭೂಮಿಯ ಮೇಲೆ ಅನೇಕಾನೇಕ ಅನುಭವಗಳ ಮೂಲಕ ಅನಂತವಾದ ಜ್ಞಾನವನ್ನು ಹೊಂದಲು ಜನ್ಮಪಡೆದಿರುವ ಆತ್ಮಸ್ವರೂಪರಾದ ನಮ್ಮೆಲ್ಲರಿಗೂ .. ದೇಹ ಒಂದು ’ವಾಹನ’!
ಈ ವಾಹನವನ್ನು ನಾವು ಆಗಿಂದಾಗ ಶ್ರುತಿಬದ್ಧವಾಗಿ, ಲಯಬದ್ಧವಾಗಿ ಇರುವಂತೆ ನೋಡಿಕೊಂಡರೇನೆ ಅದು ನಮಗೆ ಸರಿಯಾದ ರೀತಿಯಲ್ಲಿ ಸಹಕರಿಸುತ್ತಾ ಇರುತ್ತದೆ. ವಾಹನ ಚೆನ್ನಾಗಿದ್ದರೇನೆ ನಾವು ಎಲ್ಲಿಗೆ ಬೇಕಾದರೂ ಪ್ರಯಾಣ ಬೆಳೆಸಬಹುದು ಅಲ್ಲವೇ?. ಮತ್ತೆ ನಾವು ಈ ಭೂಮಿಗೆ ಬಂದ ಕೆಲಸವನ್ನು ಮಾಡಿಕೊಳ್ಳಬಹುದು! ಆದ್ದರಿಂದ, ಶುದ್ಧ ಸಸ್ಯಾಹಾರದಿಂದ ಶರೀರಕ್ಕೆ ಸರಿಯಾದ ಪೋಷಣೆಯನ್ನು ನೀಡುತ್ತಾ, ಧ್ಯಾನದಿಂದ ಅದನ್ನು ಶಕ್ತಿಯುತಗೊಳಿಸಬೇಕು.
ನಮ್ಮ ಶರೀರದಲ್ಲಿ ಕೋಟ್ಯಾಂತರ ಜೀವಕೋಶಗಳಿವೆ. ಅವೆಲ್ಲಕ್ಕೂ ನಮ್ಮನ್ನು ಕುರಿತು ಚೆನ್ನಾಗಿ ಗೊತ್ತಿದೆ. ಆದರೆ .. ನಮಗೇ ಅವುಗಳ ಕುರಿತು ಸ್ವಲ್ಪವೂ ಗೊತ್ತಿಲ್ಲ. ಅದಕ್ಕೆ ಸರಿಯಲ್ಲದ ಮಾಂಸಾಹಾರದಿಂದ ಅವುಗಳನ್ನು ಬಾಧಿಸುತ್ತಾ ಅವುಗಳನ್ನು ವೇದನೆಗೆ ಗುರಿಮಾಡುತ್ತಿದ್ದೇವೆ. ಪೆಟ್ರೋಲ್ ಕಾರಿನಲ್ಲಿ ಡೀಸೆಲ್ ಹಾಕಿ ನಡೆಸಿ ಅದರ ಇಂಜಿನ್‌ನ್ನು ಕೆಡಿಸಿದ ಹಾಗೆ .. ಮಾಂಸಾಹಾರದಿಂದ ನಮ್ಮ ದೇಹದ ಕೆಲಸದ ರೀತಿಯನ್ನು ಕೆಡಿಸಿ ನಾವು ಕಷ್ಟಗಳಿಗೆ ಗುರಿಯಾಗುತ್ತಿದ್ದೇವೆ!
ಈ ಕೋಟ್ಯಾಂತರ ಜೀವಕಣಗಳಲ್ಲಿ ಪ್ರತಿಯೊಂದು ಕಣವೂ ಸಹ ತುಂಬಾ ಜ್ಞಾನಯುತವಾದದ್ದು! ನಮ್ಮ ಜೀವಕೋಶಗಳೆಲ್ಲವೂ ಸಹ ಪ್ರತಿಕ್ಷಣ ಒಂದನ್ನೊಂದು ಸಮನ್ವಯಗೊಳಿಸಿಕೊಳ್ಳುತ್ತಾ ಕ್ರಮೇಣ ಆತ್ಮಉದ್ದೀಪನ ದಿಸೆಯಲ್ಲಿ ಸಾಗುತ್ತಿರುತ್ತದೆ. ಆದ್ದರಿಂದ, ಅದರ ಜೊತೆ ನಾವು ಸರಿಯಾದ ರೀತಿಯಲ್ಲಿ ವರ್ತಿಸಬೇಕು. ಅಂದರೆ .. ನಮಗೆ ನಿರಂತರ ಧ್ಯಾನಸಾಧನೆ ಮತ್ತೆ ಅಹಿಂಸಾ ಧರ್ಮಾಚರಣೆಯೇ ಮಾರ್ಗ!
ಎರಡನೆಯದು .. “ಸಮಾಜ ಧರ್ಮ”: ಸಮಾಜದಲ್ಲಿ ನಾವು ಸಹಭಾಗಿಗಳು. ಆದ್ದರಿಂದ, ಎಲ್ಲರೂ ಸುಖವಾಗಿ, ಸಂತೋಷವಾಗಿ ಇದ್ದರೇನೆ ನಾವು ಕೂಡಾ ಸಂತೋಷವಾಗಿ ಇರುತ್ತೇವೆ. ಅದಕ್ಕಾಗಿ ನಮ್ಮಲ್ಲಿರುವ ಆರ್ಥಿಕ ಸಂಪತ್ತನ್ನು ಮತ್ತು ಆಧ್ಯಾತ್ಮಿಕ ಸಂಪತ್ತನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಅನ್ನದಾನ, ವಸ್ತ್ರದಾನ, ವಿದ್ಯಾದಾನ ಮುಂತಾದ ಅನೇಕಾನೇಕ ದಾನಗಳ ಜೊತೆ ಧ್ಯಾನದಾನ ಸಹ ಮಾಡಬೇಕು.
ಧ್ಯಾನ ಪ್ರಚಾರದ ಮೂಲಕ ಧ್ಯಾನದಾನ ಮಾಡದೇ ಹೋದರೆ .. ಉಳಿದ ಎಲ್ಲಾ ದಾನಗಳೂ ವ್ಯರ್ಥವಾಗಿಬಿಡುತ್ತವೆ.
ಮೂರನೆಯದು .. “ಆತ್ಮ ಧರ್ಮ”: ನಾವು ಯಾವ ಕೆಲಸಕ್ಕಾಗಿ ಈ ಭೂಮಿಯ ಮೇಲೆ ಜನ್ಮತಾಳಿದ್ದೇವೊ .. ವಿಶೇಷವಾಗಿ ಆ ಕೆಲಸದ ಮೇಲೆ ಗಮನವಿಡುತ್ತಾ .. ಇತರ ದಿನನಿತ್ಯದ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿರಬೇಕು. ಬಂದ ಕೆಲಸವನ್ನು ಸರಿಯಾಗಿ ಪೂರ್ಣಗೊಳಿಸದಿದ್ದರೆ .. ಇಲ್ಲಿ ಕಳೆದ ನಮ್ಮ ಜನ್ಮಕಾಲದ ಜೊತೆ ನಾವು ಸಂಪಾದಿಸಿದ ಸಂಪತ್ತೆಲ್ಲಾ ವ್ಯರ್ಥವಾಗಿಬಿಡುತ್ತವೆ! ಅನಂತರ ಮರಣಿಸಿ ಮೇಲಿನ ಲೋಕಗಳಿಗೆ ಹೋದನಂತರ .. ನಡೆದ ಅನರ್ಥಕ್ಕೆ ಚಿಂತಿಸಿದರೂ ಪ್ರಯೋಜನವಿರುವುದಿಲ್ಲ .. ಪುನಃ ಜನ್ಮಪಡೆಯಲು ಕಾಯಬೇಕಾಗುತ್ತದೆ. ಆದ್ದರಿಂದ, ಸಮಯವನ್ನು ಅನವಶ್ಯಕ ಕಾಲಕ್ಷೇಪಗಳಿಂದ ವ್ಯರ್ಥಮಾಡಿಕೊಳ್ಳದೇ .. ಅತ್ಯಧಿಕ ಧ್ಯಾನ ಸಾಧನೆ ಮಾಡಿ ಆತ್ಮವನ್ನು ಪರಿಪುಷ್ಠಿಗೊಳಿಸಬೇಕು! ವಿಶೇಷವಾಗಿ ಸ್ವಾಧ್ಯಾಯ ಸಾಧನೆ ಮಾಡುತ್ತಿರಬೇಕು .. ಸಜ್ಜನ ಸಾಂಗತ್ಯವನ್ನು ವಿಸ್ತೃತವಾಗಿ ಮಾಡಬೇಕು!
ಪ್ರಶ್ನೆ : ಜೀವನವನ್ನು ನಾವು ಹೇಗೆ ‘ಸಾರ್ಥಕ’ ಮಾಡಿಕೊಳ್ಳಬೇಕು?
ಪತ್ರೀಜಿ : ‘ಸಾರ್ಥಕ’ ಅಂದರೆ ‘ಅರ್ಥದಿಂದ ಕೊಡಿಕೊಂಡಿದೆ’ ಎಂದು ಅರ್ಥ. ‘ಜೀವನ’ ಎಂದರೆ ಹುಟ್ಟುವುದರಿಂದ ಹಿಡಿದು ಮರಣಿಸುವವರೆಗೂ ಇರುವ ದೇಶಕಾಲ ಪರಿಸ್ಥಿತಿಗಳ ಪರಂಪರೆಯಲ್ಲಿ ಉಂಟಾದ ಸ್ಪಂದನೆ ಮತ್ತು ಪ್ರತಿಸ್ಪಂದನೆಗಳ ಪ್ರವಾಹ.
ಕೇವಲ ‘ಒಂದು ಗಂಟೆ ಕಾಲವೋ, ಒಂದು ದಿನದಲ್ಲೋ .. ಒಂದು ಊರಿನಲ್ಲೋ .. ಅಥವಾ ಒಬ್ಬ ಮನುಷ್ಯನಿಂದಲೋ ಜೀವನವನ್ನು ಅರ್ಥಯುತವಾಗಿ ಜೀವಿಸಿದರೆ ಅದು ಕೇವಲ ಅಷ್ಟರವರೆಗೆ ಸಾರ್ಥಕತೆ ಅನಿಸಿಕೊಳ್ಳುತ್ತದೆ. ಹಾಗಲ್ಲದೇ, ಪ್ರತಿಯೊಂದು ದೇಶಕಾಲ ಪರಿಸ್ಥಿತಿಯಲ್ಲೂ .. ಪ್ರತಿಕ್ಷಣವೂ ಸೃಜನಾತ್ಮಕವಾಗಿ, ಕ್ರಿಯಾಶೀಲವಾಗಿ, ಅರ್ಥಸಹಿತವಾಗಿ, ದುಃಖರಹಿತವಾಗಿ ಮತ್ತು ಎಲ್ಲರಿಗೂ ಶ್ರೇಯಸ್ಸನ್ನು ಉಂಟುಮಾಡುವ ರೀತಿಯಲ್ಲಿ ಇರುತ್ತಾ .. ಸತ್ಯಸ್ಥಿತರಾಗಿ, ಧರ್ಮಪ್ರವರ್ತಕರಾಗಿ .. ಅಂತಿಮ ಶ್ವಾಸದವರೆಗೂ ಜೀವಿಸಿದರೆ .. ಅದನ್ನೇ ‘ಜೀವನದ ಸಂಪೂರ್ಣ ಸಾರ್ಥಕತೆ’ ಎನ್ನುತ್ತೇವೆ.
ಜೀವನದಲ್ಲಿ ಇಂತಹ ಸಾರ್ಥಕತೆಯನ್ನು ಹೊಂದಬೇಕಾದರೆ .. ನಾವು ಬಿಡಬೇಕಾಗಿರುವುದು .. ‘ಹಿಂಸೆ’ ಮತ್ತು ಹಿಡಿದುಕೊಳ್ಳಬೇಕಾಗಿರುವುದು ‘ಹಂಸ’ (ಉಸಿರು-ಅರ್ಥಾತ್ ಧ್ಯಾನ).
ಪ್ರಶ್ನೆ : “ಇತರ ಪ್ರಾಣಿಗಳಮೇಲೆ ಕರುಣೆ ತೋರಿಸುವುದರಿಂದ ನಮಗೆ ಲಾಭವೇನು?”
ಪತ್ರೀಜಿ : ಇತರ ಪ್ರಾಣಿಗಳ ಮೇಲೆ ನಾವು ಖಂಡಿತಾ ಕರುಣೆಯನ್ನು ತೋರಿಸಬೇಕು. ಇಲ್ಲದಿದ್ದರೆ.. ಏಸು ಕ್ರಿಸ್ತ ನೀಡಿದ ಸಂದೇಶದ ಹಾಗೆ… “ಚಾಕುವಿನಿಂದ ಕೊಲ್ಲುವವರು ಅದೇ ಚಾಕುವಿನಿಂದಲೇ ಕೊಲ್ಲಲ್ಪಡುತ್ತಾರೆ”.
ಕುರಿಮರಿ ಜೊತೆ ನಾವು ಪ್ರೀತಿಯಿಂದ ಆಟವಾಡಿಕೊಳ್ಳಬೇಕೇ ವಿನಹ.. ಅದನ್ನು ಕೊಂದುತಿನ್ನಬಾರದು.. ಕುರಿಮರಿಯನ್ನು ಕೊಂದು, ಕಿತ್ತು ತಿಂದರೆ.. ರೋಗಗಳ ರೂಪದಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ನಮ್ಮನ್ನು ಸಹ ಕಿತ್ತು ತಿಂದು ಕೊಲ್ಲುತ್ತವೆ.
ಪ್ರಶ್ನೆ : ಮಾನವರಿಗೆ ‘ಸಸ್ಯಾಹಾರ’ ತಪ್ಪದೇ ಬೇಕಾ?!
ಪತ್ರೀಜಿ : ಈ ಪ್ರಪಂಚದಲ್ಲಿ ಯಾವುದೂ ‘ತಪ್ಪದೇ ಬೇಕು‘ ಎಂದಿಲ್ಲ! ಬೇಕಾದರೆ ಮನುಷ್ಯನನ್ನೂ ಸಹ ಕೊಂದು ಆ ಮಾಂಸವನ್ನು ಕೂಡಾ ಬೇಯಿಸಿ ತಿನ್ನಬಹುದು. ಇಂದಿಗೂ ನರಮಾಂಸ ಭಕ್ಷಕರಿಲ್ಲವೇ? ಅವರು ಸಹ ಹಾಯಾಗಿ ಬದುಕುತ್ತಿದ್ದಾರೆ. ಈ ಭೂಮಿಯ ಮೇಲೆ ಪ್ರತಿಯೊಂದೂ ನಮ್ಮ ಆಯ್ಕೆ… ಆದರೆ, ಇಲ್ಲಿ ನಾವು ತಿಳಿದುಕೊಳ್ಳಬೇಕಾದ ‘ಸತ್ಯ’ ಏನೆಂದರೆ ನಮ್ಮ ಭೌತಿಕ ಶರೀರ ಕೇವಲ ಸಸ್ಯಾಹಾರಕ್ಕೆ ಅನುಗುಣವಾಗಿ ರೂಪುಗೊಂಡಿದೆ. ಅದು ಮಾಂಸಾಹಾರ ಸೇವನೆಗೆ ಸ್ವಲ್ಪವೂ ಉಪಯೋಗವಾಗುವುದಿಲ್ಲ. ಈ ಸತ್ಯವನ್ನು ಅರಿವಿನಲ್ಲಿಟ್ಟುಕೊಂಡು ಪ್ರಕೃತಿ ಸಿದ್ಧಾಂತಗಳಿಗೆ ಅನುಗುಣವಾಗಿ ಧರ್ಮಾಚರಣೆಯಲ್ಲಿದ್ದರೆ… ನಾವು ಒಳ್ಳೆಯ ಫಲಗಳನ್ನು ಪಡೆಯುತ್ತೇವೆ. ಇಲ್ಲದಿದ್ದರೆ ದುರ್ಭರವಾದ ಜೀವನವನ್ನು ಕಳೆಯುತ್ತೇವೆ!
ಪ್ರಶ್ನೆ : ನಾವು ಮಾಂಸ ಮತ್ತು ಮೊಟ್ಟೆಗಳ ಸೇವನೆಯನ್ನು ಏಕೆ ಬಿಡಬೇಕು? ದಯವಿಟ್ಟು ಸಂಕ್ಷಿಪ್ತವಾಗಿ ವಿವರಿಸಿ. ಮಾಂಸಾಹಾರವನ್ನು ತ್ಯಜಿಸಿದಾಗ, ನಾವು ಖಾಯಿಲೆ ಬೀಳುತ್ತೇವೆ ಮತ್ತು ದೇಹಕ್ಕೆ ಸಸ್ಯಾಹಾರವು ಸೂಕ್ತವಾಗದ ಕಾರಣ ಮಾಂಸಾಹಾರ ಸೇವನೆಯನ್ನು ಮುಂದುವರೆಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಪತ್ರೀಜಿ : ಸಸ್ಯಾಹಾರದ ಕುರಿತಾಗಿ ಇರುವ ಎಲ್ಲಾ ವೆಬ್‌ಸೈಟ್ ಗಳಿಗೆ ಭೇಟಿನೀಡಿ ಪರಿಶೀಲಿಸಿ. ಪ್ರತಿಯೊಂದನ್ನೂ ಸಹ ಜಾಲತಾಣದಲ್ಲಿ (ಇಂಟರ್‌ನೆಟ್) ವಿವರಿಸಲಾಗಿದೆ. ಗೂಗಲ್ ಮೂಲಕ ಮಾಹಿತಿ ಹುಡುಕಿ. ನಿಮ್ಮ ಸೋಮಾರಿತನದಿಂದ ಹೊರಬನ್ನಿ ಮತ್ತು ಸತ್ಯ ಏನು ಎಂಬುದನ್ನು ತಕ್ಷಣವೇ ತಿಳಿದುಕೊಳ್ಳಿ.
ಪ್ರಶ್ನೆ : ನಾನು ಧ್ಯಾನ ಮಾಡುತ್ತಾ .. ಮಾಂಸಾಹಾರದ ಅನರ್ಥಗಳನ್ನು ತಿಳಿದುಕೊಂಡ ತಕ್ಷಣವೇ ಪೂರ್ಣ ಶಾಕಾಹಾರಿಯಾಗಿ ಬದಲಾದೆನು. ಆದರೆ, ಇಲ್ಲಿ ಸಮಸ್ಯೆ ಏನೆಂದರೆ ನಮ್ಮ ಮನೆಯವರೆಲ್ಲಾ ನನ್ನನ್ನು ಮಾಂಸಾಹಾರ ತಿನ್ನಬೇಕೆಂದು ಬಲವಂತ ಮಾಡುತ್ತಿದ್ದಾರೆ. ಅವರ ಮಾತು ಒಪ್ಪಿಕೊಂಡಾಗಲೆಲ್ಲಾ ನನಗೆ ಧ್ಯಾನ ಸರಿಯಾಗಿ ಆಗದೆ ನನ್ನ ಹೃದಯ ಹೆಚ್ಚಿನ ವೇದನೆಯಿಂದ ತುಂಬಿಹೋಗುತ್ತದೆ. ಇದಕ್ಕೇನು ಮಾಡಬೇಕು? (ಕಿಂ ಕರ್ತವ್ಯಂ?!)
ಪತ್ರೀಜಿ : ನಿಮ್ಮನ್ನು ಪಾಪಕೊಪಕ್ಕೆ ತಳ್ಳುವವರು ನಿಮ್ಮವರು ಹೇಗಾಗುತ್ತಾರೆ? ಪ್ರಹ್ಲಾದ-ಹಿರಣ್ಯಕಶ್ಯಪುವಿನ ಕಥೆ ಕೇಳಿದ್ದೀರಲ್ಲಾ!
ಪ್ರಶ್ನೆ : “ಸಾಧಕನಿಗೆ ಆಹಾರದ ಅಭ್ಯಾಸಗಳು ಹೇಗಿರಬೇಕು?”
ಪತ್ರೀಜಿ : ಶ್ರೇಷ್ಠವಾದ ಸಸ್ಯಾಹಾರ ಮಾತ್ರವೇ ಸರಿಯಾದ ಆಹಾರ. ಅದನ್ನು ಕೂಡಾ .. ಅಧಿಕವಾಗಿ ತಿಂದರೆ ದೇಹ ಬಲಿತು, ಇಂದ್ರಿಯಗಳು ಮಂದಗತಿಯಲ್ಲಿ ಕೆಲಸ ಮಾಡುತ್ತವೆ. ಅದಕ್ಕೆ ಕ್ರಮೇಣ ದೇಹದ ಆಹಾರವನ್ನು ಕಡಿಮೆಮಾಡುತ್ತಾ .. ಆತ್ಮದ ಆಹಾರವಾದ ಧ್ಯಾನದ ಸಮಯವನ್ನು ಹೆಚ್ಚಿಸುತ್ತಾ ಇರಬೇಕು. ಆಗಲೇ ಇಂದ್ರಿಯಗಳು ಸುವ್ಯವಸ್ಥಿತವಾಗಿ ಬದಲಾಗಿ .. ಜೀವಾತ್ಮ ಪರಮಾತ್ಮವಾಗಿ ವಿಕಾಸ ಹೊಂದುತ್ತಾ ಇರುತ್ತದೆ.
ಪ್ರಶ್ನೆ: ನನ್ನ ಜೀವನದಲ್ಲಿ ಸಂಭವಿಸಿರುವ ನೋವನ್ನು ನಾನು ಮರೆಯುವುದು ಹೇಗೆ?
ಪತ್ರೀಜಿ: ಹೊಸಬರೊಂದಿಗೆ ಸ್ನೇಹ ಮಾಡಿ.
ಪ್ರಶ್ನೆ: ಮೂಲ ಮತ್ತು ಗಮ್ಯ ಒಂದೇ ಆಗಿದ್ದರೆ ಆತ್ಮವು ಅನೇಕ ಜನ್ಮಗಳಲ್ಲಿ ಅನೇಕ ಭೌತಿಕ ದೇಹಗಳನ್ನು ಏಕೆ ತೆಗೆದುಕೊಳ್ಳಬೇಕು?
ಪತ್ರೀಜಿ: ಮೂಲ ಮತ್ತು ಗಮ್ಯ ಒಂದೇ ಅಲ್ಲ. ಮೂಲದಲ್ಲಿ ಏನೂ ಅನುಭವಿರುವುದಿಲ್ಲ, ಗಮ್ಯವು ಅನುಭವದ ಪರಮಾವಧಿ. ಮೂಲ ಆತ್ಮಕ್ಕೆ ಯಾವುದೇ ಅನುಭವಗಳಿರುವುದಿಲ್ಲ. ಪ್ರತಿ ಜನ್ಮವು ಆತ್ಮಕ್ಕೆ ಹೇರಳವಾದ ಅನುಭವಗಳನ್ನು ನೀಡುತ್ತದೆ. ಪ್ರತಿ ಒಳ್ಳೆಯ / ಕೆಟ್ಟ ಅನುಭವಗಳು ಆತ್ಮವನ್ನು ಶ್ರೀಮಂತಗೊಳಿಸುತ್ತದೆ. ಆತ್ಮವು ಅನುಭವಗಳಲ್ಲಿ ಶ್ರೀಮಂತವಾಗಲು ಬಯಸುತ್ತದೆ. ಅದಕ್ಕಾಗಿಯೇ ಆತ್ಮವು ಅನೇಕ ಭೌತಿಕ ವ್ಯವಸ್ಥೆಗಳಲ್ಲಿ ಅನೇಕ ಭೌತಿಕ ದೇಹಗಳನ್ನು ತೆಗೆದುಕೊಳ್ಳುತ್ತದೆ.
ಪ್ರಶ್ನೆ: ಸರ್, ನನ್ನ ಮನಸ್ಸನ್ನು ನಾನು ತೆಗೆದುಹಾಕುವುದು ಹೇಗೆ?
ಪತ್ರೀಜಿ: ನಿಮ್ಮ ಮನಸ್ಸನ್ನು ಗ್ರೈಂಡರ್‌ನಲ್ಲಿ (ರುಬ್ಬುವ ಯಂತ್ರ) ಹಾಕಿ ಗುಂಡಿ (ಸ್ವಿಚ್) ಒತ್ತಿ, ಮನಸ್ಸು ಮುರಿದುಹೊಗುತ್ತದೆ. ಇದನ್ನು ಧ್ಯಾನ ಎಂದು ಕರೆಯುತ್ತಾರೆ. ಮನಸ್ಸನ್ನು ಮುರಿಯುವುದನ್ನು ಧ್ಯಾನ ಎಂದು ಕರೆಯುತ್ತಾರೆ. ಮನಸ್ಸು ಒಂದು ನಾಯಕ ಮತ್ತು ಖಳನಾಯಕನೂ ಆಗಿದೆ. 90% ಇದು ಖಳನಾಯಕ ಮತ್ತು 10% ಇದು ನಾಯಕ. ಆದ್ದರಿಂದ, ಧ್ಯಾನದಲ್ಲಿ 90% ಖಳನಾಯಕ ಸಾಯುತ್ತದೆ ಮತ್ತು 10% ಉಳಿಯುತ್ತದೆ. ನಾವು ಹೊರಗೆ ಬರಬೇಕು. ಬೇರೆ ದಾರಿ ಇಲ್ಲ. ನಾವು ಧ್ಯಾನವನ್ನು ಹೆಚ್ಚಾಗಿ ಮಾಡಬೇಕು. ಪ್ರತಿ ಮಾಸ್ಟರ್ ಸಂಪೂರ್ಣವಾಗಿ ತಮ್ಮ ಮನಸ್ಸನ್ನು ನಾಶಮಾಡುವನು. ಮತ್ತು ಪ್ರತಿಯೊಬ್ಬರೂ ಮಾಸ್ಟರ್ ಆಗಬೇಕು. ಹೇಗೆ…? ಧ್ಯಾನಕ್ಕೆ ಹೆಚ್ಚು ಸಮಯ ಕೊಡಿ ಮತ್ತು ಕುಟುಂಬ ಹಾಗು ಮಕ್ಕಳೊಂದಿಗೆ ಜಗಳ ಮಾಡಲು ಕಡಿಮೆ ಸಮಯವನ್ನು ನೀಡಿ. ಧ್ಯಾನದ ನಂತರ ಪ್ರಶ್ನೆ ಮತ್ತು ಉತ್ತರದ ಅಧಿವೇಶನ, ಅನುಭವಗಳ ವಿನಿಮಯದ ಅಧಿವೇಶನ ಬಹಳ ಮುಖ್ಯ. ಅದು ನಮ್ಮ ಬುದ್ಧಿಶಕ್ತಿಯ ಬಾಗಿಲುಗಳನ್ನು ತೆರೆಯುತ್ತದೆ.
ಪ್ರಶ್ನೆ: ಮೋಹರಹಿತತೆ ಎಂದರೇನು?
ಪತ್ರೀಜಿ: “ನಿಮ್ಮನ್ನು ಅವಗಾಹನೆಯಲ್ಲಿಟ್ಟುಕೊಳ್ಳುವ ಮತ್ತು ಪ್ರಾಮುಖ್ಯತೆ ಕೊಡುವ ಸ್ಥಳದಿಂದ ಹೊರಹೋಗುವುದು .. ಆ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಎಲ್ಲಿ ಮತ್ತು ಯಾವಾಗ ನಿಮ್ಮ ಪ್ರಸ್ತುತಿ ಅಗತ್ಯವಿಲ್ಲವೊ ಅವಾಗ.”
ಪ್ರಶ್ನೆ: ತಪ್ಪಾದ ಮಾನಸಿಕ ಹವ್ಯಾಸಗಳನ್ನು ನಾಶಮಾಡುವುದು ಹೇಗೆ?
ಪತ್ರೀಜಿ: “ತಪ್ಪು ಎಂಬ ಪದವನ್ನು ಬಳಸುವುದಕ್ಕಿಂತ ‘ಪ್ರತಿಫಲ ನೀಡದ’ ಎಂಬ ಪದವನ್ನು ಬಳಸುವುದು ಉತ್ತಮ. ಏಕೆಂದರೆ, ಮೂಲತಃ ಯಾವುದೂ ’ತಪ್ಪು’ ಅಥವಾ ’ಸರಿ’ ಅಲ್ಲ. ಪ್ರತಿಯೊಂದೂ ಹೆಚ್ಚು ಲಾಭದಾಯಕ ಅಥವಾ ಕಡಿಮೆ ಲಾಭದಾಯಕ ಅಷ್ಟೆ. ”
“ಪುನರಾವರ್ತಿತ ಕ್ರಿಯೆಯನ್ನು ‘ಅಭ್ಯಾಸ’ ಎಂದು ಕರೆಯಲಾಗುತ್ತದೆ. ಮನಸ್ಸಿನಲ್ಲಿ ಪದ್ಧತಿಗಳು ಮಾನಸಿಕ ಮಾದರಿಗಳಂತೆ ಉಂಟಾಗುತ್ತವೆ, ತದನಂತರ, ಭೌತಿಕಕ್ಕೆ ಅನುಗುಣವಾದ ರೂಪಗಳಲ್ಲಿ ಹರಳುಗಟ್ಟುತ್ತವೆ ”
“ಪ್ರತಿ ಆಲೋಚನೆ ಮೂಲತಃ ಮನಸ್ಸಿನ ಒಂದು ಕ್ರಿಯೆ. ಆದ್ದರಿಂದ, ಒಂದೇ ತರಹದ ಆಲೋಚನೆಗಳು ಪುನರಾವರ್ತನೆಯಾದಾಗ ವಿಶಿಷ್ಟವಾದ ಆಲೋಚನ-ಮಾದರಿ ರಚನೆಯಾಗುತ್ತದೆ. ಹಾಗು ಆಲೋಚನ-ಮಾದರಿಗಳು ಲಾಭದಾಯಕ ಅಥವಾ ಲಾಭದಾಯಕವಲ್ಲದವು ಆಗಿರಬಹುದು. ಒಬ್ಬ ವ್ಯಕ್ತಿಯ ಆಲೋಚನ ಮಾದರಿಗಳು ವಿಶ್ವದ ಪ್ರಕೃತಿಯ ನಿಯಮಗಳೊಂದಿಗೆ ಹೊಂದಾಣಿಕೆಯಲ್ಲಿದ್ದಾಗ ಅವು ತಂತಾನೆ ಲಾಭದಾಯಕವಾಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಒಬ್ಬ ವ್ಯಕ್ತಿಯ ಆಲೋಚನ ಮಾದರಿಗಳು ವಿಶ್ವದ ಪ್ರಕೃತಿಯ ನಿಯಮಗಳೊಂದಿಗೆ ಅಸಂಗತವಾದಾಗ ಅವು ಖಂಡಿತವಾಗಿ ಮರಳುತ್ತವೆ ಮತ್ತು ಪ್ರತಿಫಲ ನೀಡುವುದಿಲ್ಲ.”
“ನಕಾರಾತ್ಮಕ ಆಲೋಚನೆ-ಮಾದರಿಗಳನ್ನು ಅಳಿಸಿಹಾಕುವುದು .. ನಿರಂತರವಾದ ಧ್ಯಾನ ಮತ್ತು ಸಕಾರಾತ್ಮಕ ಆಲೋಚನೆಯ ಅಭ್ಯಾಸದ ಮೂಲಕ .. ಆರಂಭದಲ್ಲಿ ಇದು ಎಂದೆಂಗೂ ಸುಲಭವಾಗಿರುವುದಿಲ್ಲ. ವಾಸ್ತವವಾಗಿ ಆರಂಭದಲ್ಲಿ ಎಲ್ಲವು ಕಠಿಣವಾದ ಪ್ರತಿಪಾದನೆಯೆ. ಆದಾಗ್ಯೂ, ಒಂದು ಬಾರಿ ಆರಂಭ ಮಾಡಿದ ನಂತರ ಲಾಭದಾಯಕವಲ್ಲದ ಆಲೋಚನಾ-ಮಾದರಿಗಳನ್ನು ಯಶಸ್ವಿಯಾಗಿ ಲಾಭದಾಯಕ ಆಲೋಚನಾ-ಮಾದರಿಗಳಾಗಿ ಬದಲಿಸಬಹುದು. ನಿಧಾನವಾಗಿ ಆದರೆ, ಖಂಡಿತವಾಗಿಯೂ, ಸುಸಂಗತವಾದ ಆನಂದದಾಯಕವಾದ ಮನಸ್ಸಿನ ಸ್ಥಿತಿ ಖಾತರಿ. ”
ಪ್ರಶ್ನೆ: ಅರಿವನ್ನು ಬೆಳೆಸಿಕೊಳ್ಳುವುದು ಹೇಗೆ?
ಪತ್ರೀಜಿ “ನಿರ್ದಿಷ್ಟ ಪರಿಸ್ಥಿತಿಯ ಎಲ್ಲಾ ಕೋನಗಳ ಬಗ್ಗೆ ಸಂಪೂರ್ಣ ಅರಿವು ಇರುವುದು” ಎಂದು ಜಾಗೃತ ಸ್ಥಿತಿಯನ್ನು ವ್ಯಾಖ್ಯಾನಿಸಲಾಗಿದೆ. ಜಾಗೃತಿ ಎಂಬುದು ‘ಪ್ರಜ್ಞೆ’ ಎಂಬ ಪದದ ಸಮಾನಾರ್ಥಕವಾಗಿದೆ. ‘ಜಾಗೃತವಾಗಿರುವಿಕೆ’ ಮತ್ತು ‘ಪ್ರಜ್ಞಾಪೂರ್ವಕವಾಗಿರುವಿಕೆ’ ಪದಗುಚ್ಛಗಳು ಒಂದನ್ನೇ ಸೂಚಿಸುತ್ತದೆ.”
“ನಾವು ಜಾಗೃತಿ ಎಂಬ ಸಂಗತಿಯಿಂದಲೇ ಮಾಡಲ್ಪಟ್ಟಿದ್ದೇವೆ. ನಾವು ಯಾವುದು ಎಂದರೆ ‘ತತ್ ತ್ವಂ ಅಸಿ ಶ್ವೇತಕೇತು’, ‘ತತ್’ ಎಂದರೆ ‘ಅದು’, ‘ತ್ವಂ’ ಎಂದರೆ ‘ನೀವು’, ‘ಅಸಿ’ ಎಂದರೆ ‘ಇದ್ದೀರಿ’. ಅಂದರೆ, ನಾವು ಕೇವಲ ಈ ಭೌತಿಕ ರಚನೆ ಅಲ್ಲ ಎಂದರ್ಥ. ನಾವು ಬರಿ ಮೂಳೆಗಳು, ಸ್ನಾಯುಗಳು ಮತ್ತು ಇಂದ್ರಿಯಗಳ ಜೋಡಣೆಯಲ್ಲ. ನಾವು ಮೂಳೆಗಳ, ಸ್ನಾಯುಗಳು ಮತ್ತು ಇಂದ್ರಿಯಗಳಿಂದ ಸಂಪೂರ್ಣವಾಗಿ ಸ್ವತಂತ್ರವಾಗಿರುವ ಜಾಗೃತಿ. ಈ ಭೌತಿಕ ದೇಹ ನಾವಲ್ಲ. ಯಾವುದು ಭೌತಿಕ ಶರೀರವನ್ನು ಬಳಸಿಕೊಂಡು ಸ್ವತಃ ವ್ಯಕ್ತಪಡಿಸುತ್ತಿದೆಯೋ ..ಆ ಪ್ರಜ್ಞೆಯೇ ನಾವು.”
“ಸ್ವಯಂ” ಅನ್ನು ಅಭಿವೃದ್ಧಿಪಡಿಸಿ. ‘ನಾನು’ ಎಂಬುದನ್ನು ಅಭಿವೃದ್ಧಿಸಿ. ನಿಮ್ಮ ಮೂಳೆಗಳು, ಸ್ನಾಯುಗಳು ಮತ್ತು ಇಂದ್ರಿಯಗಳೊಂದಿಗಲ್ಲದೆ ಸ್ವಯಂ ಜೊತೆಗೆ ಹೆಚ್ಚು ಬದುಕಿ. ಮೂಳೆಗಳು, ಸ್ನಾಯುಗಳು ಮತ್ತು ಇಂದ್ರಿಯಗಳೊಂದಿಗೆ ನಾವು ಹೆಚ್ಚು ಬದುಕುತ್ತಿದ್ದರೆ ನಾವು ಅವುಗಳನ್ನು ಮಾತ್ರ ಅಭಿವೃದ್ಧಿಪಡಿಸುತ್ತೇವೆ, ನಮ್ಮ ಅರಿವನ್ನಲ್ಲ. ನಾವು ನಮ್ಮೊಂದಿಗೆ ಹೆಚ್ಚು ಹೆಚ್ಚು ಇರಲು ಪ್ರಾರಂಭಿಸಿದರೆ, ನಾವು ಜಾಗೃತಿಯ ಘನತೆಯನ್ನು, ಅರಿವಿನ ಎಲ್ಲಾ-ವ್ಯಾಪಕ ಸ್ವಭಾವವನ್ನು, ಜಾಗೃತಿಯ ಹೇರಳ ಸ್ವಭಾವವನ್ನು ಅರಿತುಕೊಳ್ಳಲು ಪ್ರಾರಂಭಿಸುತ್ತೇವೆ. ”
ಪ್ರಶ್ನೆ: ಭೂಮಿಯ ಮೇಲೆ ಹೊಸ ಯುಗದ ಆಧ್ಯಾತ್ಮಿಕ ಚಳವಳಿಯ ಪ್ರಸ್ತುತ ಸ್ಥಿತಿ ಏನು?
ಪತ್ರೀಜಿ: “ಎಲ್ಲಾ ನಿರೀಕ್ಷೆಗಳನ್ನು ಮೀರಿಸಿದೆ, ಅದೇ ಈಗಿನ ಪರಿಸ್ಥಿತಿ. ಪ್ರಪಂಚದ ಹೊಸ ಯುಗದ ಆಧ್ಯಾತ್ಮಿಕ ಚಳವಳಿ ಪ್ರಪಂಚದ ಚೈತನ್ಯವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಮನುಷ್ಯನಿಗೆ ಮೊದಲು ಇದ್ದ ಭಯವು ಬಹುತೇಕ ಭಸ್ಮವಾಗಿದೆ.
“ಸನ್ನಿಹಿತವಾದ ಭೂಮಂಡಲದ ವಿನಾಶವು ಇನ್ನು ಮುಂದೆ ‘ಸನ್ನಿಹಿತ’ವಲ್ಲ. ಪ್ರಪಂಚದಾದ್ಯಂತ ಸಾವಿರಾರು ನಿಸ್ವಾರ್ಥ ಆಧ್ಯಾತ್ಮಿಕ ಮಾಸ್ಟರ್‌ಗಳ ಪ್ರಯತ್ನಗಳು ಅತ್ಯಂತ ಅದ್ಭುತವಾದ ಲಾಭಾಂಶಗಳನ್ನು ನೀಡಿದೆ ಮತ್ತು ನೀಡುತ್ತಲಿದೆ. ಇದರ ಅರ್ಥ ಜಗತ್ತಿನ ಅಲ್ಲಲ್ಲಿ ದೊಡ್ಡ ವಿಕೋಪಗಳು ಸಂಭವಿಸುವುದಿಲ್ಲವೆಂದಲ್ಲ. ಅವುಗಳು ಸಂಭವಿಸುತ್ತವೆ. ಆದಾಗ್ಯೂ, ನಿರ್ಣಾಯಕವಾದ ‘ತಿರುವ’ನ್ನು ಸಾಧಿಸಲಾಗಿದೆ. ”
ಪ್ರಶ್ನೆ: ಪಿರಮಿಡ್‌ಗಳು, ಸ್ಫಟಿಕಗಳ (Crystals) ಅವಲಂಬನೆ ಮಾಸ್ಟರ್‌ಗಳಿಗೆ ಎಷ್ಟು ಬೇಕಾಗುತ್ತವೆ?
ಪತ್ರೀಜಿ: ಆರಂಭಿಕರಿಗೆ ಎಲ್ಲವೂ ಸಹಕಾರಿಯಾಗುತ್ತವೆ.
ಪ್ರಶ್ನೆ: ಧ್ಯಾನವನ್ನು ನಿಯಮಿತವಾಗಿ ಅಭ್ಯಾಸ ಮಾಡುವವರಿಗೆ ಮತ್ತು ಹೊಸಬರಿಗೆ ಧ್ಯಾನವನ್ನು ಕಲಿಸುವವರಿಗೂ ಸಹ ಇದು ಒಂದೇ ರೀತಿಯಾಗಿರುತ್ತದೆಯೇ?
ಪತ್ರೀಜಿ: ಒಬ್ಬ ಮಾಸ್ಟರ್‌ಗೆ ಯಾವುದೂ ಅಗತ್ಯವಿಲ್ಲ. ಕುರುಡು ವ್ಯಕ್ತಿ, ಚಿಕ್ಕ ಮಗು ಅಥವಾ ವೃದ್ಧ ವ್ಯಕ್ತಿಗೆ ರಸ್ತೆ ದಾಟಲು ಒಬ್ಬರ ಸಹಾಯ ಬೇಕು ಎಂಬುದು ನಮಗೆ ತಿಳಿದಿದೆ. ಆದರೆ, ನೀವು ಸಂತೋಷ ಮತ್ತು ಆರೋಗ್ಯದಿಂದಿದ್ದಾಗ ನಿಮಗೆ ಯಾರ ಸಹಾಯವೂ ಅಗತ್ಯವಿರುವುದಿಲ್ಲ ಮತ್ತು ನೀವು ನಿಮ್ಮ ಪಾಡಿಗೆ ರಸ್ತೆಯನ್ನು ದಾಟಬಹುದು. ನೀವು ಮಾಸ್ಟರ್ ಆಗಿರುವಾಗ ನಿಮಗೆ ಏನೂ ಅಗತ್ಯವಿಲ್ಲ. ಆದರೆ, ಆರಂಭದಲ್ಲಿ ಅಥವಾ ಕೆಲವು ಸಮಸ್ಯೆಗಳಿರುವ ವ್ಯಕ್ತಿಗೆ ಈ ಎಲ್ಲಾ ವಿಷಯಗಳು ಸಹಾಯದ ರೂಪದಲ್ಲಿವೆ ಮತ್ತು ಅವರು ಅದನ್ನು ಬಳಸಿಕೊಳ್ಳಬಹುದು. ಆದರೆ, ಸಹಾಯ ಇದ್ದು ಸೊಕ್ಕಿನಿಂದ ನೀವು ಅದನ್ನು ಬಳಸದಿದ್ದರೆ, ಅದು ನಿಮಗೆ ಬಿಟ್ಟಿದ್ದು. ಅಸ್ತಿತ್ವದಲ್ಲಿರುವ ಎಲ್ಲಾ ಸಹಾಯವನ್ನು ಪಡೆಯಲು ನಿಮ್ಮಲ್ಲಿ ನಮ್ರತೆ ತುಂಬಿರಬೇಕು. ರಸ್ತೆ ದಾಟಲು ಯಾರಾದರೂ ಸಹಾಯ ಮಾಡಿದಾಗ ಅವರ ಸಹಾಯ ತೆಗೆದುಕೊಳ್ಳಿ ಮತ್ತು ಅವರಿಗೆ ಧನ್ಯವಾದ ಹೇಳಿ. ಅಂತೆಯೇ, ಪಿರಮಿಡ್ ಶಕ್ತಿ, ಗುಂಪಿನ ಶಕ್ತಿ, ಹುಣ್ಣಿಮೆಯ ಶಕ್ತಿ, ಪ್ರಕೃತಿಯ ಶಕ್ತಿ, ಸ್ಫಟಿಕದ ಶಕ್ತಿಗಳಲ್ಲಿ ಲಭ್ಯವಿರುವುದರ ಸಹಾಯ, ಬೆಂಬಲ ನೀವು ತೆಗೆದುಕೊಳ್ಳಬಹುದು. ಯಾವುದೇ ಕಡೆಯಿಂದ ಬರುವ ಯಾವುದೇ ಸಹಾಯಕ್ಕೆ ನೀವು ಕೃತಜ್ಞರಾಗಿರಬೇಕು. ನೀವು ಮಾಸ್ಟರ್ ಆಗಿದ್ದರೂ ನಿಮಗೆ ಸಮಸ್ಯೆಯಿದ್ದರೆ ನೀವು ಅವುಗಳ ಸಹಾಯ ಪಡೆಯಬಹುದು, ನೀವು “ನಾನು ಸ್ವತಂತ್ರನಾಗಿದ್ದೇನೆ ಮತ್ತು ನನಗೆ ಎಲ್ಲಿಂದಲೂ ಯಾವುದೇ ಸಹಾಯ ಬೇಕಿಲ್ಲ” ಎಂದು ಸೊಕ್ಕಿನಿಂದ ಹೇಳಬೇಕಾಗಿಲ್ಲ, ಹಾಗೆ ಏನೂ ಇಲ್ಲ. ನೀವು ಮಾಸ್ಟರ್ ಆಗಿದ್ದರೂ ಅಥವಾ ಮಾಸ್ಟರ್ ಆಗದಿದ್ದರೂ, ನೀವು ಧ್ಯಾನಿಯಾಗಿದ್ದರೂ ಅಥವಾ ಧ್ಯಾನಿಯಲ್ಲದಿದ್ದರೂ, ಉಪಯುಕ್ತ ವಸ್ತುಗಳು ಎಲ್ಲ ಜನರಿಗೂ ಸಹಾಯಕಾರಿಯೇ.
ಪ್ರಶ್ನೆ: ಕರ್ಮ ಎಂದರೇನು? ನಾನು ದೇವರು/ ಆತ್ಮ ಎಂಬುದನ್ನು ನಾನು ತಿಳಿಯುವುದು ಹೇಗೆ? ಆತ್ಮಸಾಕ್ಷಾತ್ಕಾರ (Self – Realization) ಹೊಂದಲು ನಾನು ಏನು ಮಾಡಬೇಕು?
ಪತ್ರೀಜಿ: ಕರ್ಮದ ಬಗ್ಗೆ ತಿಳಿಯಲು, ಧ್ಯಾನ ಮಾಡಿ. ಆತ್ಮದ ಬಗ್ಗೆ ತಿಳಿದುಕೊಳ್ಳಲು ಧ್ಯಾನ ಮಾಡಿ. ಸಾಕ್ಷಾತ್ಕಾರದ (Self – Realization) ನಂತರ ನೀವು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಧ್ಯಾನ ಮಾಡಿ.
ಪ್ರಶ್ನೆ: ಜನರು ಸುಂದರವಾದ ಜೀವನಪ್ರವಾಹದೊಂದಿಗೆ ಒಂದಾಗಿರಲು ಯಾಕೆ ಕಷ್ಟ ಪಡುತ್ತಾರೆ? ಜೀವನದ ಮೇಲೆ ತಮ್ಮ ನಿಯಂತ್ರಣವನ್ನು ‘ಬಿಡುವುದು’ ಕಷ್ಟವೆಂದು ಯಾಕೆ ಅಂದುಕೊಳ್ಳುತ್ತಾರೆ?
ಪತ್ರೀಜಿ: ನಿಮ್ಮ ಅನಿಸಿಕೆ ಸರಿಯಲ್ಲ. ಎಲ್ಲಾ ಜನರು ಜೀವನದ ಗತಿಯಲ್ಲೇ ಸಾಗುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ಅವನ/ಅವಳ ದೃಷ್ಟಿಕೋನದ ಪ್ರಕಾರ ಯಾವಾಗಲೂ “ಸರಿ” ಆಗಿದ್ದಾನೆ/ಳೆ. ಹಾಗು ಪ್ರತಿಯೊಬ್ಬ ವ್ಯಕ್ತಿಯು ನಿಜವಾಗಿಯೂ “ಆನಂದಿಸುತ್ತಿದ್ದಾನೆ”. ಎಲ್ಲರೂ “ಕಲಿಯುತ್ತಿದ್ದಾರೆ”. ಆದರೆ, ನಾವು ಏನನ್ನು ತಿಳಿದುಕೊಳ್ಳಬೇಕೆಂದರೆ, ಪ್ರತಿ ಆತ್ಮವೂ ಕಲಿಕೆಯ ವಿಭಿನ್ನ ಮಟ್ಟದಲ್ಲಿದೆ ಹಾಗು ತಮ್ಮದೇ ಆದ ಆಯಾ ಹಂತಗಳಲ್ಲಿ .. ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ (subconciously) .. ಬಯಸಿದ ಮತ್ತು ಪೂರ್ವನಿರ್ದಿಷ್ಟವಾದ ಮುಂದಿನ ಹಂತಕ್ಕೆ ತಮ್ಮ ಜ್ಞಾನವನ್ನು ಮುಂದುವರೆಸುವಲ್ಲಿ ಅವರೆಲ್ಲರೂ ಶ್ರದ್ಧಾಪೂರ್ವಕವಾಗಿರುತ್ತಾರೆ.
ಪ್ರಶ್ನೆ: ಪ್ರತಿ ವ್ಯಕ್ತಿಯು ತಮ್ಮ ಅತ್ಯುತ್ತಮ ಕಲಿಕೆಯಲ್ಲಿದ್ದರೆ, ನಾವು ಧ್ಯಾನವನ್ನು ಏಕೆ ಕಲಿಸಬೇಕು?ಪತ್ರೀಜಿ: ನೀವು ಅವರಿಗೆ ಧ್ಯಾನ ಕಲಿಸಬೇಕು. ಏಕೆಂದರೆ ಅದು ಅವರ ಕಲಿಕೆಯ ವೇಗವನ್ನು ಹೆಚ್ಚಿಸಲು ಮಹತ್ತರವಾದ ಮಾರ್ಗ.
ಮಿನೂದ್: ಆಶ್ರಮಗಳು ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಆಸಕ್ತಿಯನ್ನು ಹೊಂದಿರುವವರಿಗೆ ಸಹಾಯ ಮಾಡುತ್ತವೆಯೆ?
ಪತ್ರೀಜಿ: ಆಶ್ರಮಗಳೇ ಭವಿಷ್ಯದ ಪರಿಸ್ಥಿತಿಯ ಮುಖ್ಯ ಲಕ್ಷಣಗಳು. ಭವಿಷ್ಯದಲ್ಲಿ ಎಲ್ಲೆಡೆ ಆಶ್ರಮಗಳು ಇರುತ್ತವೆ. ಇಡೀ ಭೂಮಿ-ಮಾನವಸಂಕುಲ ಒಂದು ಆಶ್ರಮವಾಗಲಿದೆ.
“ಜ್ಞಾನೋದಯ” ಎಂದರೆ ವೈಯಕ್ತಿಕ ಅಥವಾ ಕುಟುಂಬ ಆಧಾರಿತ ಜೀವನದಿಂದ ವಿಸ್ತಾರವಾದ ಸಮುದಾಯ ಆಧಾರಿತ ಜೀವನ ಮಾಡುವುದು.
ಪ್ರಶ್ನೆ: ‘ವಿಜ್ಞಾನ’ದ ಪರಿಕಲ್ಪನೆಯು ತರ್ಕಬದ್ಧವಾದದ್ದು. ಆಧ್ಯಾತ್ಮವನ್ನು ‘ವಿಜ್ಞಾನ’ವೆಂದು ನಾವು ಹೇಗೆ ಸ್ವೀಕರಿಸುವುದು? ಆಧ್ಯಾತ್ಮಿಕತೆ ಕೂಡ ತರ್ಕಬದ್ಧವೇ? ಇದು ಮುಖ್ಯವಾಗಿ ನಂಬಿಕೆಗಳ ಮೇಲೆ ಆಧಾರಿತವಲ್ಲವೇ?
ಪತ್ರೀಜಿ: ನಿಮಗೆ ನಿಜವಾದ ಭಾರತದ ಬಗ್ಗೆ ತಿಳಿದಿಲ್ಲವೇ? ಅರಬಿಂದೋ ಮತ್ತು ರಮಣ ಮಹರ್ಷಿ ಮತ್ತು ಅವರಂತಹ ಎಲ್ಲಾ ಮಹಾನ್ ಗುರುಗಳ ಬಗ್ಗೆಯೂ ನೀವು ಮರೆತಿರಾ?
ನೀವು ಅರ್ಥಮಾಡಿಕೊಳ್ಳುತ್ತೀರೋ ಇಲ್ಲವೋ, ಆಧ್ಯಾತ್ಮಿಕತೆ ಅತಿದೊಡ್ಡ ಮತ್ತು ಸಂಪೂರ್ಣವಾದ ವಿಜ್ಞಾನ. ಭಗವದ್ಗೀತೆಯಲ್ಲಿ ಪ್ರತಿ ಅಧ್ಯಾಯದ ಕೊನೆಯಲ್ಲಿ
“ಇದು ಯೋಗ ವಿಜ್ಞಾನ” ಅಥವಾ “ಯೋಗ ಶಾಸ್ತ್ರ” ಎಂಬ ಹೇಳಿಕೆಯನ್ನು ನೀವು ಕಾಣಬಹುದು.
ಪ್ರಪಂಚದ ಎಲ್ಲ ಧರ್ಮಗಳು ಆಧ್ಯಾತ್ಮಿಕ ವಿಜ್ಞಾನ ಆಧಾರಿತವಾಗಿವೆ. ಯಾವುದೇ “ವಿಜ್ಞಾನ” ಪ್ರಯೋಗ ಮತ್ತು ಅನುಭವದ ಮೇಲೆ ಆಧಾರಿತವಾಗಿದೆ. ಹಾಗೆಯೇ, ಆಧ್ಯಾತ್ಮಿಕ ವಿಜ್ಞಾನವೂ ಪ್ರಯೋಗ ಮತ್ತು ಅನುಭವದ ಮೇಲೆ ಆಧಾರಿತವಾಗಿದೆ, ಎಲ್ಲವೂ ಧ್ಯಾನದ ಪರಿಧಿಯಲ್ಲಿ. ಆಧ್ಯಾತ್ಮಿಕತೆಯು ಖಂಡಿತವಾಗಿಯೂ ಕುರುಡು ನಂಬಿಕೆಗಳ ಮೇಲೆ ಆಧಾರಿತವಲ್ಲ.
ಪ್ರಶ್ನೆ: ‘ಗ್ಲೋಬಲ್ ಕಾನ್ಫರೆನ್ಸ್ ಆಫ್ ಸ್ಪಿರಿಚ್ಯುಯಲ್ ಸೈಂಟಿಸ್ಟ್’ನ (ಆಧ್ಯಾತ್ಮಿಕ ವಿಜ್ಞಾನಿಗಳ ಜಾಗತಿಕ ಸಮಾವೇಶ) ಉದ್ದೇಶ ಏನು? ದಯವಿಟ್ಟು ’ಆಧ್ಯಾತ್ಮಿಕ ವಿಜ್ಞಾನಿ’ ಎಂಬ ಪದವನ್ನು ವಿವರಿಸಿ?
ಪತ್ರೀಜಿ: ಎಲ್ಲಾ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ಮಾಡಿರುವ ಒಬ್ಬ ವ್ಯಕ್ತಿ ಆಧ್ಯಾತ್ಮಿಕ ವಿಜ್ಞಾನಿ. ವೈಯಕ್ತಿಕ ಪ್ರಯೋಗ ಮತ್ತು ವೈಯಕ್ತಿಕ ಅನುಭವದ ಮೂಲಕ ಆಧ್ಯಾತ್ಮವನ್ನು ಅರ್ಥಮಾಡಿಕೊಳ್ಳಲು ತನ್ನ ಸಂಪೂರ್ಣ ಜೀವನವನ್ನು ಸಮರ್ಪಿಸಿರುವ ವ್ಯಕ್ತಿ ಕೂಡ ಆಧ್ಯಾತ್ಮಿಕ ವಿಜ್ಞಾನಿ.
ಪ್ರಪಂಚದ ದೊಡ್ಡ ದೊಡ್ಡ ಆಧ್ಯಾತ್ಮಿಕ ವಿಜ್ಞಾನಿಗಳನ್ನು ಬೆಂಗಳೂರು ನಗರಕ್ಕೆ ಮತ್ತು ಭಾರತಕ್ಕೆ ಆಹ್ವಾನಿಸುವುದು ಜಾಗತಿಕ ಸಮ್ಮೇಳನದ (ಗ್ಲೋಬಲ್ ಕಾಂಗ್ರೆಸ್‌ನ) ಗುರಿ.
ಇಂತಹ ಸಮ್ಮೇಳನಗಳನ್ನು ಐಎಫ್‌ಎಸ್‌ಎಸ್ (ಇಂಡಿಯನ್ ಫೆಡರೇಶನ್ ಆಫ್ ಸ್ಪಿರಿಚ್ಯುಯಲ್ ಸೈಂಟಿಸ್ಟ್ಸ್- ಆಧ್ಯಾತ್ಮಿಕ ವಿಜ್ಞಾನಿಗಳ ಭಾರತೀಯ ಒಕ್ಕೂಟ) ಪತಾಕೆಯ (ಬ್ಯಾನರ್) ಅಡಿಯಲ್ಲಿ ಆಯೋಜಿಸುವುದು ಪಿರಮಿಡ್ ಆಧ್ಯಾತ್ಮಿಕ ಆಂದೋಲನಕ್ಕೆ (ಪಿಎಸ್‌ಎಸ್‌ಎಮ್) ಬಹಳ ಹೆಮ್ಮೆಯ ವಿಷಯ. ಇದನ್ನು 2009ರಲ್ಲಿ ಟೈಮ್ಸ್ ಫೌಂಡೇಶನ್‌ನೊಂದಿಗೆ ಪಿಎಸ್‌ಎಸ್‌ಎಮ್ ಸ್ಥಾಪಿಸಿತು.
ಪ್ರಶ್ನೆ: ಪಿರಮಿಡ್ ಸ್ಪಿರಿಚ್ಯುಯಲ್ ಟ್ರಸ್ಟ್ (ಇಂಡಿಯಾ) ಸಾಮಾನ್ಯ ಜನರನ್ನು ತಲುಪಲು ಹೇಗೆ ಕೆಲಸ ಮಾಡುತ್ತಿದೆ? ‘ಪಿರಮಿಡ್ ಧ್ಯಾನ’ ಎಂಬುದಕ್ಕೆ ಸಾಮಾನ್ಯ ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆಂಬುದನ್ನು ನೀವು ನಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವೇ?
ಪತ್ರೀಜಿ: ದೂರದಲ್ಲಿರುವ ಗ್ರಾಮಗಳಿಗೆ ಹೋಗಿ ಧ್ಯಾನ ವಿಜ್ಞಾನವನ್ನು ಹರಡಲು ತರಬೇತಿ ಪಡೆದ ಸಾವಿರಾರು ಮಾಸ್ಟರುಗಳು ಪಿಎಸ್‌ಎಸ್‌ಎಮ್‌ನಲ್ಲಿ ಇದ್ದಾರೆ. ಭಾರತದ ಎಲ್ಲಾ ಜನರಿಗೆ ಪಿಎಸ್‌ಎಸ್‌ಎಮ್‌ನ ಕೆಲಸ ಚೆನ್ನಾಗಿ ತಿಳಿದಿದೆ.
ಆರೋಗ್ಯ ಕ್ಷೇತ್ರದಲ್ಲಿ ಪಿರಮಿಡ್ ಧ್ಯಾನದ ಮೂಲಕ ಗಳಿಸಿದ ಅಗಾಧ ಪ್ರಯೋಜನಗಳನ್ನು ತಿಳಿದುಕೊಳ್ಳಲು ಕನ್ನಡದ “ಧ್ಯಾನ ಕಸ್ತೂರಿ”, ತೆಲುಗು ಭಾಷೆಯ “ಧ್ಯಾನ ಜಗತ್ ” ಮುಂತಾದ ನಮ್ಮ ಮಾಸಪತ್ರಿಕೆಗಳನ್ನು ಓದಿ.
ಪ್ರಶ್ನೆ: ‘ಕೆಲಸ’ ಮಾತ್ರ ’ಆರಾಧನೆ’ ಆಗಿರುವ ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆ. ನಮ್ಮ ಆಂತರಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಅಭಿವೃದ್ಧಿಗೊಳಿಸಲು ನಮಗೆ ಸಮಯವಿಲ್ಲ. ಪತ್ರೀಜಿ, ತಾವು ತಮ್ಮ ಸಂದೇಶದ ಮೂಲಕ ನಮ್ಮ ಓದುಗರಿಗೆ ಮಾರ್ಗದರ್ಶನ ನೀಡಿ ಸಹಾಯ ಮಾಡುವಿರಾ?
ಪತ್ರೀಜಿ: ನಿಮ್ಮ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಲು ನಿಮಗೆ ಸಮಯವಿಲ್ಲದಿದ್ದರೆ ನೀವು ಇನ್ನೂಂದು ಜನ್ಮವನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ಇನ್ನೊಂದು ದೇಹ ಬೇಕಾಗುತ್ತದೆ. ಮುಂದಿನ ಜನ್ಮಕ್ಕೋಸ್ಕರ ಕಾಯುವುದಕ್ಕಿಂತ ಈಗ ಮಾಡುವುದೇ ಉತ್ತಮ.
ಧ್ಯಾನವು ನೀವು ಮಾಡಬಹುದಾದ “ಅತ್ಯುತ್ತಮ ಕೆಲಸ”. ಆದ್ದರಿಂದ, ಇದು ನೀವು ಮಾಡಬಹುದಾದ “ಅತ್ಯುತ್ತಮ ಆರಾಧನೆ”!
ಪ್ರಶ್ನೆ: ಸರ್, ನೀವು ಮೆಹರ್ ಬಾಬಾರ ‘ಗಾಡ್ ಸ್ಪೀಕ್ಸ್’ ಪುಸ್ತಕವನ್ನು ಶಿಫಾರಸು ಮಾಡಿದ್ದೀರಿ. ಆ ಪುಸ್ತಕದಲ್ಲಿ ಒಂದು ಸಮಯಕ್ಕೆ ಒಂದು ಅವತಾರ ಮತ್ತು 5 ಪರಿಪೂರ್ಣ ಗುರುಗಳು ಪ್ರಪಂಚದಲ್ಲಿ ಎಲ್ಲಾ ಸಮಯದಲ್ಲೂ ಅಸ್ತಿತ್ವದಲ್ಲಿ ಇರುತ್ತಾರೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ಅವತಾರ (ಗಾಡ್ ಮ್ಯಾನ್) ಮತ್ತು 5 ಪರಿಪೂರ್ಣ ಗುರುಗಳು ಯಾರು?
ಪತ್ರೀಜಿ: ಪುಸ್ತಕವನ್ನು ಶಿಫಾರಸು ಮಾಡಿದಾಗ ಅದರಲ್ಲಿ ನಿಮ್ಮನ್ನು ಬಲಪಡಿಸುವುದು ಏನೋ ಅದನ್ನು ತೆಗೆದುಕೊಳ್ಳಿ ಮತ್ತು ಯಾವುದು ನಿಮ್ಮನ್ನು ಗೊಂದಲಕ್ಕೊಳಗಾಗಿಸುತ್ತದೆಯೋ ಅದನ್ನು ಬಿಟ್ಟು ಮುಂದಿನ ಪುಸ್ತಕಕ್ಕೆ ಹೋಗಿ. ಒಂದೇ ಪುಸ್ತಕಕ್ಕೆ ಅಂಟಿಕೊಳ್ಳಬೇಡಿ, ಅನೇಕ ಮಾಸ್ಟರುಗಳ ಅನೇಕ ಪುಸ್ತಕಗಳನ್ನು ಓದಿ.
ಒಂದು ಅವತಾರ ಮತ್ತು ಐದು ಗುರುಗಳು ಎನ್ನುವಂತಹುದು ಏನು ಇಲ್ಲ. ಮಾಸ್ಟರುಗಳ ಅವಿವೇಕದ ಹೇಳಿಕೆಗಳನ್ನು ಕೇಳಬೇಡಿ, ಅವುಗಳನ್ನು ಶಾಂತವಾಗಿ ತೆಗೆದುಕೊಳ್ಳಿ ಮತ್ತು ಆಧ್ಯಾತ್ಮಿಕ ಜ್ಞಾನೋದಯಕ್ಕೆ ಪ್ರಯತ್ನಿಸಿ.
Recent Comments