“ಪೂಜಾರಿ-ಟು-ಪೂರ್ಣಾತ್ಮ”
“ಪೂಜಾರಿ”
- ಎಲೆಗಳನ್ನು, ಹೂವುಗಳನ್ನು ಕೀಳುವುದು, ಕೀಳಿಸುವುದರಿಂದ ಪ್ರಕೃತಿಯನ್ನು ನಾಶ ಮಾಡುವವನು.
- ಚಿಕ್ಕ ಮಕ್ಕಳು ಬೊಂಬೆಗಳಿಂದ ಆಡಿಕೊಳ್ಳುವಹಾಗೆ, ದೊಡ್ಡ ಬೊಂಬೆಗಳಾದ ವಿಗ್ರಹಗಳಿಂದ ಆಡಿಕೊಳ್ಳುವ ’ಹಿರಿಯ ಬಾಲಕನು’.
“ಮಂತ್ರೋಪಾಸಕನು”
- ಸ್ವಲ್ಪ ಬೆಳೆದಿರುವವನು. ಬೊಂಬೆಯಾಟ ಬಿಟ್ಟಿರುವವನು. ಸಾಧನೆಯನ್ನು ನಂಬಿಕೊಂಡಿರುವವನು. ಆದರೂ, ತನ್ನಲ್ಲೇ ಎಲ್ಲಾ ಶಕ್ತಿಗಳಿವೆಯೆಂದು ಗ್ರಹಿಸಿದರೂ, ಆ ಶಕ್ತಿಯನ್ನು ಹೊರತೆಗೆಯಲು ಯಾವ ಸಾಧನೆಯನ್ನೂ ಮಾಡದ ಮೂರ್ಖನು.
“ವೇದಾಂತಿ”
- ಪ್ರಕೃತಿಯನ್ನು ನಾಶ ಮಾಡದ ಪಂಡಿತನು. ಆತ್ಮತತ್ವವನ್ನು ಗ್ರಹಿಸಿದರೂ, ತನ್ನಲ್ಲೇ ಶಕ್ತಿಗಳೆಲ್ಲಾ ಇವೆಯೆಂದು ಗ್ರಹಿಸಿದರೂ, ಆ ಶಕ್ತಿಯನ್ನು ಹೊರಗೆ ತೆಗೆಯಲು ಯಾವ ಸಾಧನೆಯನ್ನೂ ಮಾಡದ ಮೂರ್ಖನು. ತನ್ನ ಪದಜಾಲಕ್ಕೆ, ವಾಕ್‌ಚಾತುರ್ಯಕ್ಕೆ, ತಾನೇ ಮುಗ್ಧನಾಗುವ ಹುಚ್ಚನು.
“ಧ್ಯಾನಸಾಧಕನು”
- ನಿಜವಾದ, ಬುದ್ಧಿವಂತ ಮನುಷ್ಯ, ತನ್ನಲ್ಲೇ ಶಕ್ತಿಗಳೆಲ್ಲಾ ಇವೆಯೆಂದು ಗ್ರಹಿಸಿ ತಕ್ಷಣ ಆ ಶಕ್ತಿಯನ್ನು ಹೊರಗೆ ತೆಗೆಯಲು ಮಾಡಬೇಕಾದ ಧ್ಯಾನ ಸಾಧನೆಯಲ್ಲಿ ಪೂರ್ಣವಾಗಿ ಮಗ್ನವಾಗಿರುವವನು.
“ಅವಧೂತ”
- ಧ್ಯಾನಾನುಭವಗಳಲ್ಲಿ ತುಂಬಾ ಮುಂದುವರಿದಿರುವವನು. ನಿರಂತರವಾಗಿ ಇತರೆ ಲೋಕಗಳಲ್ಲಿ ಸೂಕ್ಷ್ಮಶರೀರ ಯಾತ್ರೆ ಮಾಡುವವನು. ಆದರೆ, ಈ ಶರೀರವನ್ನು ಈ ಲೋಕವನ್ನು ನೂರಕ್ಕೆ ತೊಂಬತ್ತು ಭಾಗ ತ್ಯಜಿಸಿರುವವನು. ಆದ್ದರಿಂದಲೇ, ’ಹುಚ್ಚ’ನೆಂದು ಈ ಲೋಕದ ಹುಚ್ಚರು ಎಂದುಕೊಳ್ಳುತ್ತಾರೆ.
“ಸಿದ್ಧನು”
- ಧ್ಯಾನ ಪರಮಾವಧಿಯನ್ನು ಹೊಂದಿರುವವನು. ಅಷ್ಟ ಸಿದ್ಧಿಗಳನ್ನು ಕರಗತ ಮಾಡಿಕೊಂಡಿರುವವನು. ಪ್ರಪಂಚ ಈತನ ಸಿದ್ಧಿಗಳನ್ನು ನೋಡಿ ಭಯಪಡುತ್ತದೆ; ಆಶ್ಚರ್ಯಪಡುತ್ತದೆ.
“ಬುದ್ಧನು”
- ಎಲ್ಲರ ಸಿದ್ಧತ್ವಕ್ಕೆ, ಬುದ್ಧತ್ವಕ್ಕೆ ದಾರಿ ತೋರಿಸುವವನು, ಕೊನೆಯ ಜನ್ಮದಲ್ಲಿರುವವನು, ನಿರಂತರ ಧ್ಯಾನ, ಜ್ಞಾನ ಬೋಧನೆ ಮಾಡಿ ಆ ಹಸಿವು ಸಹ ತೀರಿದ ನಂತರ ಪುನಃ ಜನ್ಮ ತೆಗೆದುಕೊಳ್ಳದೇ ಇರುವವನು.
“ಒಂದುಪೂಣಾತ್ಮ”
- ಸತ್ಯ ಲೋಕದಲ್ಲಿ ’ತಾರೆ’ಯಾಗಿ ಶಾಶ್ವತವಾಗಿ ಉಳಿದು, ತನ್ನೊಳಗಿಂದ ನೂತನ ಅಂಶಾತ್ಮಗಳನ್ನು ಸೃಷ್ಟಿಸಿ, ಅವರನ್ನು ಜನನ-ಮರಣ ಚಕ್ರದಲ್ಲಿ ಪ್ರವೇಶಿಸುವ ಹಾಗೆಮಾಡಿ ಅವರು ಸಹ ಬುದ್ಧರಾಗುವವರೆಗೂ ಅವರ ಕಷ್ಟ-ಸುಖಗಳನ್ನು ನೋಡಿಕೊಳ್ಳುವವನು.
’ಸಿದ್ಧನು’ ಆಗಬೇಕಾದರೇ ಧ್ಯಾನ ಮಾಡಬೇಕು.
“ಸಿದ್ಧತ್ವಕ್ಕೆ ದಾರಿ ತೋರಿಸುವುದು” ಎಂದರೇ ಧ್ಯಾನ ಮಾಡಿಸುವುದು.
’ಬುದ್ಧನು’ ಆಗಬೇಕಾದರೇ ಧ್ಯಾನ ಜ್ಞಾನ ಬೋಧನೆ ನಿರಂತರ ಮಾಡಬೇಕು.
“ಬುದ್ಧತ್ವಕ್ಕೆ ದಾರಿ ತೋರಿಸುವುದು” ಎಂದರೆ ಎಲ್ಲರನ್ನೂ ಧ್ಯಾನ ಜ್ಞಾನ ಬೋಧಕರನ್ನಾಗಿ ತಯಾರು ಮಾಡುವುದು.
Recent Comments