” ಪಿರಮಿಡ್ ವ್ಯಾಲಿಯಲ್ಲಿ ಪತ್ರೀಜಿ “
ಪತ್ರೀಜಿಯವರು ಫೆಬ್ರವರಿ 16ರಂದು ಪಿರಮಿಡ್ ವ್ಯಾಲಿಗೆ ಭೇಟಿನೀಡಿದ ಪಾಂಡಿಚೇರಿಯ ’ಆಚಾರ್ಯ ವರ್ಲ್ಡ್ಕ್ಲಾಸ್ ಎಜ್ಯುಕೇಷನಲ್ ಇನ್ಸ್ಟಿಟ್ಯೂಷನ್ಸ್’ನ ಸಿಬ್ಬಂದಿಗೆ ಸಾಮೂಹಿಕ ಧ್ಯಾನವನ್ನು ಮಾಡಿಸಿದರು. ಆ ಗುಂಪಿನಲ್ಲಿ 30 ಸಿಬ್ಬಂದಿಗಳಿದ್ದರು. ಮೆಗಾ ಪಿರಮಿಡ್ನೊಳಗೆ 90 ನಿಮಿಷಗಳ ಕಾಲ ಧ್ಯಾನ ನಡೆಯಿತು. ಕರ್ನಾಟಕದಿಂದ ಹಾಗೂ ಬೇರೆ ರಾಜ್ಯಗಳಿಂದ ಬಂದಿದ್ದ ಪಿರಮಿಡ್ ಮಾಸ್ಟರ್ಸ್ ಈ ಧ್ಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಪತ್ರೀಜಿ ಸಂದೇಶವನ್ನು ನೀಡಿದರು.
ಪತ್ರೀಜಿಯವರ ಸಂದೇಶ :
ಎರಡು ವಿಷಯಗಳಿವೆ. ಒಂದು ಭೌತಶಾಸ್ತ್ರ (physics) ಮತ್ತೊಂದು ಮೆಟಾ ಭೌತಶಾಸ್ತ್ರ (Meta physics). ಮೆಟಾ ಭೌತಶಾಸ್ತ್ರ. ಭೌತಶಾಸ್ತ್ರವು ದ್ರವ್ಯರಾಶಿ ಮತ್ತು ಶಕ್ತಿ ಇವುಗಳನ್ನು ಕುರಿತು ತಿಳಿಸುತ್ತದೆ. ಮೆಟಾ ಭೌತಶಾಸ್ತ್ರವು ಶಕ್ತಿಚೈತನ್ಯ ಮತ್ತು ಆಲೋಚನೆ ಹಾಗೂ ಆಲೋಚನೆ ಮತ್ತು ಪ್ರಜ್ಞೆ ಇವುಗಳನ್ನು ಕುರಿತು ತಿಳಿಸುತ್ತದೆ. ನಿಮ್ಮ ಆಲೋಚನೆಯಿಂದ ನೀವು ಹೇಗೆ ಶಕ್ತಿಚೈತನ್ಯವನ್ನು ಉತ್ಪಾದಿಸುತ್ತೀರಿ ಮತ್ತು ನಿಮ್ಮ ಪ್ರಜ್ಞೆಯಿಂದ ಹೇಗೆ ನಿಮ್ಮ ಆಲೋಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತೀರಿ ಎಂಬುದರ ಕುರಿತು ಈ ಮೆಟಾ ಭೌತಶಾಸ್ತ್ರವು ತಿಳಿಸುತ್ತದೆ.
ಹೀಗಾಗಿ, ಇಲ್ಲಿ ನಾಲ್ಕು ವಿಧಗಳಿವೆ.
1) ದ್ರವ್ಯರಾಶಿ [ಕಿರುಬೆರಳು ಈ ದ್ರವ್ಯರಾಶಿಗೆ ಪ್ರತೀಕ – ಭೌತಿಕ ಶರೀರ]
2) ಶಕ್ತಿಚೈತನ್ಯ [ಉಂಗುರಬೆರಳಿಗೆ ಪ್ರತೀಕ]
3) ಆಲೋಚನೆ [ಮಧ್ಯದಬೆರಳಿಗೆ ಪ್ರತೀಕ]
4) ಪ್ರಜ್ಞೆ [ತೋರುಬೆರಳಿಗೆ ಪ್ರತೀಕ – ವ್ಯಕ್ತಿಗತ ಪ್ರಜ್ಞೆ]
ಭೌತಿಕ ಶರೀರವು ತನ್ನ ಅಕ್ಕಪಕ್ಕದಲ್ಲಿರುವ ಶಕ್ತಿಚೈತನ್ಯವನ್ನು ಅರಿಯಬೇಕು. ಶಕ್ತಿಚೈತನ್ಯ ಎಂಬುದನ್ನು ಅರಿತುಕೊಳ್ಳುವುದಕ್ಕೆ ಮೊದಲು ಆಲೋಚನೆ ಎಂಬುದನ್ನು ಅರಿಯಬೇಕು. ನೀವು ಅವಿವೇಕತನದ ಆಲೋಚನೆಗಳನ್ನು ಹೊಂದಿದ್ದರೆ, ನೀವು ಶಕ್ತಿಚೈತನ್ಯವನ್ನು ಕಳೆದುಕೊಳ್ಳುತ್ತೀರಿ. ಆಲೋಚನೆಗಳನ್ನು ನಿಯಂತ್ರಣದಲ್ಲಿಟ್ಟರೆ ಹೆಚ್ಚಿನ ಶಕ್ತಿ ಬರುತ್ತದೆ. ಧ್ಯಾನದಲ್ಲಿ ನಾವು ಏನು ಮಾಡುತ್ತೇವೆ? ಆಲೋಚನೆಗಳನ್ನು ನಿಯಂತ್ರಿಸುವುದನ್ನೇ ಅಲ್ಲವೆ ಮಾಡುವುದು? ಧ್ಯಾನ ಮಾಡಿದಾಗ ನೀವು ಚೈತನ್ಯಯುತವಾಗಿರುವಂತೆ ನಿಮಗೆ ಅನಿಸುವುದಿಲ್ಲವೇ?
ಇನ್ನು ಈ ಆಲೋಚನೆ [ಮಧ್ಯದ-ಬೆರಳು] ಎಂಬುದನ್ನು ನೋಡೋಣ. ಆಲೋಚನೆ ಎಂಬುದಕ್ಕೂ ಪ್ರಜ್ಞೆ (ತೋರುಬೆರಳು) ಎಂಬುದಕ್ಕೂ ಸಂಬಂಧವಿದೆ. ಯಾವುದನ್ನಾದರು ಕುರಿತು ಹೇಳಬೇಕಾದರೆ, ಈ ತೋರುಬೆರಳಿಂದಲೇ ಸೂಚಿಸುತ್ತೇವೆ, ಬೇರೆ ಯಾವುದೇ ಬೆರಳುಗಳನ್ನು ಬಳಸಿ ಸೂಚಿಸುವುದಿಲ್ಲ. ಇದು ಬಹಳ ಮೂಲಭೂತವಾದ ವಿಷಯ. ಐದನೆಯ ಬೆರಳು ಅಂದರೆ, ಹೆಬ್ಬೆರಳು, ಎಂಬುದು ಬೇರೆ ಎಲ್ಲಾ ಬೆರಳುಗಳಿಂದ ಭಿನ್ನವಾಗಿದೆ.
E=mc2 ಎಂಬ ಸೂತ್ರದ ಅನ್ವಯ “ದ್ರವ್ಯರಾಶಿಯೇ ಶಕ್ತಿಚೈತನ್ಯ” ಎಂಬಲ್ಲಿಗೆ ಭೌತಶಾಸ್ತ್ರವು ಪರಿಸಮಾಪ್ತಿಯಾಗುತ್ತದೆ. ದ್ರವ್ಯರಾಶಿಯು ಕೇವಲ ದ್ರವ್ಯರಾಶಿ ಮಾತ್ರವೇ ಎಂದು ಜನರು ಭಾವಿಸುತ್ತಾರೆ. ಆದರೆ, “ದ್ರವ್ಯರಾಶಿಯು ಶಕ್ತಿಚೈತನ್ಯ” ಎಂದು ಕ್ವಾಂಟಂ ಭೌತಶಾಸ್ತ್ರವು ಹೇಳುತ್ತದೆ. ದ್ರವ್ಯರಾಶಿಯೊಳಗೆ ಶಕ್ತಿಚೈತನ್ಯವು ಅಡಕವಾಗಿದೆ. – ಕಿರುಬೆರಳು ಶುದ್ಧಲೌಕಿಕವಾಗಿದೆ. (ಪದಾರ್ಥಮಯ ಆಗಿದೆ) ಕಿರುಬೆರಳು ಮತ್ತು ಉಂಗುರ ಬೆರಳುಗಳ ಸಂಯೋಜನೆಯೇ ಕ್ವಾಂಟಂ ಭೌತಶಾಸ್ತ್ರ; ಇದು ಮೆಟಾ ಭೌತಶಾಸ್ತ್ರವನ್ನೂ ಸಹ ಮೀರಿದ್ದು. ಮೆಟಾಭೌತಶಾಸ್ತ್ರದೊಂದಿಗೆ ಬೆಳೆಯುತ್ತಿರುವ ಭೌತಶಾಸ್ತ್ರವು ಹೇಗೆಂದರೆ, ವಯಸ್ಕರೊಂದಿಗೆ ಬೆಳೆಯುತ್ತಿರುವ ಮಗುವಿನಂತೆ. ಭೌತಶಾಸ್ತ್ರದಲ್ಲಿ ಕೊನೆಗೊಂಡ ಎಲ್ಲವೂ ಸಹ ಮೆಟಾಭೌತಶಾಸ್ತ್ರದಲ್ಲಿ ಒಳಗೊಂಡು ಮುಂದುವರೆಯುತ್ತದೆ. ಮೆಟಾಭೌತಶಾಸ್ತ್ರದಲ್ಲಿರುವುದು ಮತ್ತೆ ಭೌತಶಾಸ್ತ್ರದೊಳಗೆ ಹೋಗುವುದಿಲ್ಲ. ಅದು ಹೇಗೆಂದರೆ ಮಗು ಒಮ್ಮೆ ಬೆಳೆದು ವಯಸ್ಕನಾದರೆ, ಅದು ಮತ್ತೆ ಮಗುವಾಗಲಾಗದು. ಮಯಸ್ಕನಾದವನಲ್ಲಿ ಮಕ್ಕಳ ಮನೋವರ್ತನೆ ಇರಬಹುದು, ಆದರೆ, ಅವನು ಮಗುವಲ್ಲ, ಆತ ವಯಸ್ಕ ಮಾತ್ರ. ನೀವು ಆಧ್ಯಾತ್ಮಿಕ ವಿಜ್ಞಾನಿಯಾದಾಗ, ನೀವು ಒಬ್ಬ ಪರಿಪಕ್ವ ವ್ಯಕ್ತಿಯಾಗುತ್ತೀರಿ, ವಯಸ್ಕರಾಗುತ್ತೀರಿ. ನೀವು ಆಧ್ಯಾತ್ಮಿಕ ವಿಜ್ಞಾನಿಯಾಗದಿದ್ದರೆ, ನೀವು ಒಂದು ಮಗುವಿನಂತೆ ದೇಹತ್ಯಾಗ ಮಾಡುತ್ತೀರಿ. ಇದು ಕೇವಲ ಒಬ್ಬ ಲೌಕಿಕವ್ಯಕ್ತಿಯ ಸಾವಿನಂತೆ ಇರುತ್ತದೆ (ಕಿರುಬೆರಳು). ನಾನು ದೇಹ, ನಾನು ಮೂತ್ರಪಿಂಡ, ನಾನು ಮೂಳೆ, ರಕ್ತಮಾಂಸ ಮಾತ್ರ ಎಂದು ತಿಳಿಯಬಾರದು. ಇದಕ್ಕೆ ಬದಲಾಗಿ ನಾನು ಆತ್ಮ ಎಂದು ತಿಳಿದುಕೊಳ್ಳಬೇಕು.
ನಮ್ಮನ್ನು ನಾವು ಕೇವಲ ಶರೀರವೆಂದುಕೊಂಡರೆ, ನಾವು ಶಿಶುಗಳೇ, ನಾನು ಆತ್ಮ ಎಂದು ಅರಿತರೇ, ಎಲ್ಲೆಲ್ಲೂ ನಾವೇ ಇರುತ್ತೇವೆ.
ಅರ್ಜುನ ‘ನೀನು ಯಾರು?’ ಎಂದು ಕೃಷ್ಣನನ್ನು ಕೇಳಿದಾಗ, ಕೃಷ್ಣನು ಹೇಳುತ್ತಾನೆ : “ನಾನು ಆತ್ಮ, ಅಹಂ ಆತ್ಮ ಗುಡಾಕೇಶ”
ಸರ್ವ-ಭೂತಾಸಯ – ಸ್ಥಿತಃ ಅಹಃ ಆದ್ಸಿಚಃ
ಮಧ್ಯಾಂ ಚ ಭೂತಾನಾಂ ಅಂತ ವಾ ಭಾಃ|| (ಭಗವದ್ಗೀತ)
ಕೃಷ್ಣನು ಎಲ್ಲವನ್ನು ಕಂಡರಿತವನು. ಕೃಷ್ಣನು ಗುಡಾಕೇಶ (‘ಗುಡಾಕೇಶ’ ಎಂದರೆ ನಿದ್ರೆಯನ್ನು ಗೆದ್ದವನು, ಸದಾ ಪ್ರಜ್ಞೆಯ ಸ್ಥಿಯಲ್ಲಿರುವವರು ಎಂದರ್ಥ), ನಾನು ಆತ್ಮ, ದೇಹವಲ್ಲ, ಶಕ್ತಿಯೂ ಅಲ್ಲ ಆಲೋಚನೆಯೂ ಅಲ್ಲ. ನಾನು ಎಲ್ಲೆಲ್ಲೂ ವಿಸ್ತರಿಸಿರುವ ವಿಶ್ವಪ್ರಜ್ಞೆ. ಈ ಹೆಬ್ಬೆರಳು ವಿಶ್ವಪ್ರಜ್ಞೆಯ ಸಂಕೇತ. ಈ ಕಿರುಬೆರಳು ವ್ಯಕ್ತಿಗತ ಪ್ರಜ್ಞೆ.
ಅರ್ಜುನನು ವ್ಯಕ್ತಿಗತ ಪ್ರಜ್ಞೆಯ ಸಂಕೇತ, ಕೃಷ್ಣನು ವಿಶ್ವಪ್ರಜ್ಞೆ ಸಂಕೇತ. ಅರ್ಜುನನು ನರ, ಕೃಷ್ಣನು ನಾರಾಯಣ. ಈ ’ನರ-ನಾರಾಯಣ’ ಒಂದಾದಾಗ ಅದನ್ನು ಚಿನ್ನ್ಮುದ್ರ, ಜ್ಞಾನಮುದ್ರ ಎನ್ನುತ್ತಾರೆ. ಹೆಬ್ಬೆರಳು ತೋರುಬೆರಳನ್ನು ಸೇರಿದಾಗ ಅಗಾಧಪ್ರಮಾಣದ ಶಕ್ತಿಯು ಹರಿಯುತ್ತದೆ. ಇದೇ ಧ್ಯಾನವು. ನೀವು ನಿಮ್ಮ ಭೌತಿಕ ಸ್ಥಿತಿಯಿಂದ ಹೊರಬಂದು ಅಲೌಕಿಕವಾದ, ವಿಶ್ವಾತ್ಮಕ ಶಕ್ತಿಚೈತನ್ಯದೊಂದಿಗೆ ಒಂದಾಗುತ್ತೀರಿ. ಅಂದರೆ, ವ್ಯಕ್ತಿಗತ ಪ್ರಜ್ಞೆಯಿಂದ ವಿಶ್ವಪ್ರಜ್ಞೆ ಎಡೆಗೆ ನಾವು ಪಯಣಿಸುತ್ತೇವೆ.
ನಾವು ಎಲ್ಲಿ ವಾಸಿಸುತ್ತೇವೋ, ಅಲ್ಲಿನ ಭಾಷೆ ರೂಢಿಯಾಗುತ್ತದೆ. ತಮಿಳುನಾಡಿನಲ್ಲಿದ್ದರೆ ತಮಿಳು ಕಲಿಯುತ್ತೇವೆ. ಆಂಧ್ರದಲ್ಲಿದ್ದರೆ ತೆಲುಗು ಅಭ್ಯಾಸವಾಗಿ ಹೋಗುತ್ತದೆ. ಹಾಗೆಯೇ, ಕಾಡಿನಲ್ಲಿ ನೀವು ವಾಸಿಸಿದರೆ, ಸ್ವಲ್ಪಕಾಲದಲ್ಲಿಯೇ ಪ್ರಾಣಿಗಳ ಭಾಷೆಯು ನಿಮಗೆ ತಿಳಿಯಲಾರಂಭಿಸುತ್ತದೆ. ಇದನ್ನೇ ನಾವು ಸಹವರ್ತನೆ ಎನ್ನಬಹುದು. ಇದೇ ಚಿನ್ಮುದ್ರೆ.
ಧ್ಯಾನದ ನಂತರ, ಬುದ್ಧಿವಂತಿಕೆ ಎಂಬುದು ಆಲೋಚನೆಯಾಗಿ ಪರಿವರ್ತನೆಯಾಗುತ್ತದೆ. ನಿಮ್ಮ ಸೂಕ್ಷ್ಮಶರೀರಕ್ಕೆ ಹೆಚ್ಚಿನ ಶಕ್ತಿಚೈತನ್ಯವು ಸೇರ್ಪಡೆಗೊಳ್ಳುತ್ತದೆ. ಸೂಕ್ಷ್ಮಶರೀರದಿಂದ ಭೌತಿಕ ಶರೀರಕ್ಕೆ ಈ ಶಕ್ತಿಚೈತನ್ಯವು ಹರಿಯುತ್ತದೆ. ಹೀಗೆ ಪ್ರಸರಿಸಿದ ಶಕ್ತಿಚೈತನ್ಯವೇ ಬಿ.ಪಿ., ಶುಗರ್, ಕ್ಯಾನ್ಸರ್ ಮುಂತಾದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಇದೇ ಧ್ಯಾನ. ಧ್ಯಾನದಲ್ಲಿ ನಮ್ಮ ವ್ಯಕ್ತಿಗತ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯೊಂದಿಗೆ ಸೇರಿಸುತ್ತಿರುವವರು ನಾವೇ ಆಗಿರುತ್ತೇವೆಯೇ ಹೊರತು ಬೇರೆ ಯಾರೋ ಆಗಿರುವುದಿಲ್ಲ.
ನಾನೇ ವಿಶ್ವಪ್ರಜ್ಞೆ ಅಹಂ ಬ್ರಹ್ಮಾಸ್ಮಿ
ತೋರುಬೆರಳೆಂದರೆ ಅಹಂ ಆತ್ಮೋಸ್ಮಿ
ಉಂಗುರದ ಬೆರಳಿನೊಂದಿಗೆ ಅಹಂ ಬುದ್ಧೋಸ್ಮಿ
ಕಿರುಬೆರಳು – ಅಹಂ ಶರೀರೋಸ್ಮಿ, ಅಹಂ ದೇಹೋಸ್ಮಿ
ಹರಳುಗಟ್ಟಿದ ಆಲೋಚನೆಗಳೇ ವಿವೇಕ. (ಆಯ್ದು, ಹೆಕ್ಕಿ, ಪರಿಶೋಧಿಸಿದ ಆಲೋಚನೆಗಳನ್ನೇ ಬುದ್ಧಿ ಎನ್ನಲಾಗಿದೆ) ಬೌದ್ಧಿಕ ಆಲೋಚನೆಗಳು ಭೌತಿಕ ದೇಹವಾಗಿ ಪರಿಣಮಿಸುತ್ತವೆ. ಅಂದರೆ, ಮಾನಸಿಕ ಸಂರಚನೆಯ ಒಟ್ಟುತಿರುಳು ಈ ಭೌತಿಕ ದೇಹವಾಗಿರುತ್ತದೆ.
ಪ್ರತಿಯೊಂದು ರಸಾಯನಿಕ ಕ್ರಿಯೆಯಲ್ಲಿ ಕ್ರಿಯಾವೇಗವರ್ಧಕ (ಕೆಟಲಿಸ್ಟ್) ಇರುತ್ತದೆ. ಹಾಗೆಯೇ ಪಿರಮಿಡ್ ಶಕ್ತಿ ಎಂಬುದು ವಿಶ್ವಪ್ರಜ್ಞೆ (ಹೆಬ್ಬೆರಳು) ಮತ್ತು ವ್ಯಕ್ತಿಗತ ಪ್ರಜ್ಞೆ (ತೋರುಬೆರಳು) ಇವುಗಳ ನಡುವಿನ ಒಂದು ಕ್ರಿಯಾವೇಗವರ್ಧಕ. ಇವೆರಡೂ ಒಂದಾಗುವ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುವ ಕೆಲಸವನ್ನು ಪಿರಮಿಡ್ ಶಕ್ತಿಯು ಮಾಡುತ್ತದೆ. ಹೀಗಾಗಿ, ನಾವು ಪಿರಮಿಡ್ನ ಒಳಗೆ ಧ್ಯಾನ ಮಾಡುತ್ತೇವೆ. ಪಿರಮಿಡ್ ಶಕ್ತಿಯು ಧ್ಯಾನಕ್ಕೆ ಪೂರಕವಾಗಿದೆ. ಧ್ಯಾನಪ್ರಕ್ರಿಯೆಯು ಹಲವುಪಟ್ಟು ವೇಗವಾಗುತ್ತದೆ. ಇದರಿಂದಾಗಿ ಬಯಸಿದ ಫಲಿತಾಂಶವು ಶೀಘ್ರವಾಗಿ ದೊರೆಯುತ್ತದೆ. ಆದ್ದುದ್ದರಿಂದ ನಾವು ಪಿರಮಿಡ್ ನಿರ್ಮಿಸುತ್ತೇವೆ. ಇದೇ ಪಿ.ಎಸ್.ಎಸ್.ಮ್.ನ ಗುರಿ. ಪಿರಮಿಡ್ ಧ್ಯಾನಕ್ಕಾಗಿ ಬೇಕು, ಧ್ಯಾನದಿಂದ ಚಿತ್ತವೃತ್ತಿಯು ನಿರೋಧವಾಗುತ್ತದೆ. ಯೋಗಃ ಚಿತ್ತವೃತ್ತಿ ನಿರೋಧಃ. ಏಕೆಂದರೆ, ಎಲ್ಲಾ ಸಮಸ್ಯೆಗಳಿಗೆ ಮೂಲ ಎಂದರೆ ಈ ಆಲೋಚನೆಗಳೇ. ಇವುಗಳನ್ನು ನಿಲ್ಲಿಸುವುದ್ದಕ್ಕಾಗಿಯೇ ಧ್ಯಾನ. ಶಕ್ತಿಚೈತನ್ಯದ ಕೊರತೆಯ ಸಮಸ್ಯೆ ಇದ್ದರೆ, ಆಲೋಚನೆಗಳಲ್ಲಿಯೂ (ಮಧ್ಯದಬೆರಳು) ಸಹ ಸಮಸ್ಯೆಗಳಿರುತ್ತವೆ. ಇದಕ್ಕೆ ಪರಿಹಾರವೆಂದರೆ ಹೆಬ್ಬೆರಳು (ವಿಶ್ವಪ್ರಜ್ಞೆ) ಮತ್ತು ತೋರುಬೆರಳು (ವ್ಯಕ್ತಿಗತ ಪ್ರಜ್ಞೆ) ಎರಡನ್ನು ಒಂದಾಗಿಸುವುದು.
ಈ ಕಾರಣಕ್ಕಾಗಿಯೇ ’ನೀನು ಯೋಗಿಯಾಗು’ ಎಂದು ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ಅರ್ಜುನನು ಶ್ರೇಷ್ಠ ವೀರ, ಕೃಷ್ಣನು ಶ್ರೇಷ್ಠ ಯೋಗಿ. ಅರ್ಜುನನು ದ್ರೋಣಾಚಾರ್ಯನ ಹತ್ತಿರ ಹೋದನು. ಆತ ದ್ರೋಣರಂತೆ ಆದನು. ಕೃಷ್ಣನು ತನ್ನ ನಾಲ್ಕನೇ ವಯಸ್ಸಿನಲ್ಲಿ ಸಾಂದೀಪ ಮುನಿಯ ಬಳಿ ಹೋದನು. ಆತನು ಯೋಗೀಶ್ವರನಾದನು. ಮಹಾಜ್ಞಾನಿಯಾದನು. ಆದ್ದರಿಂದ, ವೃಥಾ ಸಮಯವನ್ನು ಕಳೆಯಬಾರದು, ಚಿಕ್ಕವಯಸ್ಸಿನಲ್ಲಿಯೇ ಧ್ಯಾನಮಾರ್ಗಕ್ಕೆ ಎಲ್ಲರೂ ಬರಬೇಕು.
Recent Comments