“ನೋ ಕಂಪ್ಲೈಂಟ್ಸ್, ನೋ ಜಡ್ಜ್ಮೆಂಟ್ಸ್”
ಯಾರೂ ಯಾರ ಮೇಲೂ ಕಂಪ್ಲೈಂಟ್ಸ್ ಹೇಳಬಾರದು. ಅದೇ ರೀತಿ ಯಾರೂ ಯಾರನ್ನೂ ಜಡ್ಜ್ ಮಾಡಬಾರದು. ಯಾರ ಜೀವನವನ್ನು ಕುರಿತು ಮತ್ತೊಬ್ಬರಿಗೆ ಸ್ವಲ್ಪವೂ ತಿಳಿಯದು. ಅವರವರ ಅಭಿಪ್ರಾಯ ಅವರವರದು. ಯಾರ ಜೀವನ ವಿಧಾನ ಅವರದು. ಯಾರೂ ಮತ್ತೊಬ್ಬರನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಆದ್ದರಿಂದ ನೋ ಕಂಪ್ಲೈಂಟ್ಸ್, ನೋ ಜಡ್ಜ್ಮೆಂಟ್ಸ್. ಅವರವರ ಇಷ್ಟಕ್ಕೆ ಅವರನ್ನು ಬಿಟ್ಟು ಬಿಡುವುದೇ ಸರಿಯಾದದ್ದು.
ಶರೀರಕ್ಕೆ ಚೆನ್ನಾಗಿ ಸಿಂಗಾರದ ಅವಶ್ಯಕತೆ … ವಸ್ತ್ರಗಳು, ಒಡೆವೆಗಳು, ಪೌಡರ್ಗಳು, ಸೋಪುಗಳು ಹೀಗೆ ಅನೇಕ … ಹಾಗೆಯೇ ಶರೀರಕ್ಕೆ ಪುಷ್ಟಿಯಾಗಿ ವಿಶೇಷವಾಗಿ ಪೋಷಣೆಯ ಅವಶ್ಯಕತೆ ಇದೆ. ಆದರೆ ನಾವು ಶರೀರ ಮಾತ್ರವಲ್ಲ, ಆತ್ಮ ಸ್ವರೂಪರು. ಆತ್ಮಕ್ಕೆ ಸಹ ಸಿಂಗಾರ, ಪೋಷಣೆ ಅವಶ್ಯಕತೆ ಇದೆ. ಆತ್ಮಕ್ಕೆ ಸಿಂಗಾರ ಮಾಡಬೇಕು. ಆತ್ಮಕ್ಕೆ ಅತ್ಯಧಿಕವಾಗಿ ಪೋಷಣೆ ನೀಡಬೇಕು. ಅದಕ್ಕೆ ಮಾರ್ಗವೇ ಧ್ಯಾನ. ಧ್ಯಾನ ಎಂಬುವುದು ಆತ್ಮ ಪೋಷಣೆ; ಜ್ಞಾನ ಎಂಬುವುದು ಆತ್ಮ ಸಿಂಗಾರ. ವಸ್ತ್ರಗಳು ಕಳಚಿಹಾಕಿದರೂ ಶರೀರಕ್ಕೆ ಏನೂ ಆಗುವುದಿಲ್ಲ. ಹಾಗೆಯೇ, ಶರೀರ ನಶಿಸಿದರೂ ಆತ್ಮಕ್ಕೆ ಏನೂ ಆಗುವುದಿಲ್ಲ. ಧ್ಯಾನ ಮಾಡಿದರೆ ಶರೀರ ಉಕ್ಕು (ಹದಗೊಳಿಸಿದ ಕಬ್ಬಣ). ಇಲ್ಲದಿದ್ದರೆ ತುಕ್ಕು.
Recent Comments