“ನಾಲ್ಕು ಸ್ಥಿತಿಗಳು”
ಮಂತ್ರೋಚ್ಛಾರಣೆಯಿಂದ ಆತ್ಮೋನ್ನತಿಯನ್ನು ಸಾಧಿಸಲಾರೆವು, ಆನಾಪಾನಾಸತಿ ಧ್ಯಾನದಿಂದಲೇ ಸಾಧಿಸಬಲ್ಲೆವು.
ಗಾಂಧೀಜಿಯವರ ಹಾಗೆ ಎಲ್ಲರೂ ವಾರದಲ್ಲಿ ಒಂದು ದಿನ ಉಪವಾಸವನ್ನು, ಮತ್ತು ಮೌನವನ್ನು ಪಾಲಿಸಬೇಕು, ಮಾಂಸಾಹಾರ ತ್ಯಜಿಸಬೇಕು.
***
“ಮಾನವರಲ್ಲಿ ನಾಲ್ಕು ಸ್ಥಿತಿಯವರು ಇರುತ್ತಾರೆ – ಅಧಮರು, ಮಧ್ಯಮರು, ಉತ್ತಮರು, ಉತ್ತಮೋತ್ತಮರು. ಮಾಂಸಾಹಾರ ತಿನ್ನುವವರು ಅಧಮರು; ಸಸ್ಯಾಹಾರ ತಿನ್ನುತ್ತಾ, “ನಾನು ಶರೀರ”, ಎಂದು ತಿಳಿದುಕೊಂಡಿರುವವರೆಲ್ಲರೂ ಮಧ್ಯಮರು; ಧ್ಯಾನಮಾಡಿ “ನಾನು ಶರೀರವಲ್ಲ ಆತ್ಮ” ಎಂದು ಜ್ಞಾನ ಹೊಂದಿರುವವರು ಉತ್ತಮರು; ಧ್ಯಾನ ಪ್ರಚಾರ ಮಾಡುವವರೆಲ್ಲರೂ ಉತ್ತಮೋತ್ತಮರು!
***
“ಅಧಮನ ಹಾಗೆ ಮರಣಿಸಿದರೆ ಆಧಮನ ಹಾಗೆಯೂ, ಮಧ್ಯಮನ ಹಾಗೆ ಮರಣಿಸಿದರೆ ಮಧ್ಯಮನ ಹಾಗೆಯೂ, ಉತ್ತಮನ ಹಾಗೆ ಮರಣಿಸಿದರೆ ಉತ್ತಮನ ಹಾಗೆಯೂ ಪುನಃ ಜನ್ಮ ತೆಗೆದುಕೊಳ್ಳಬೇಕಾದ್ದೇ! ಆದರೆ, ಉತ್ತಮೋತ್ತಮನ ಹಾಗೆ ಮರಣಿಸಿದರೆ ಅವರಿಗೆ ಅದೇ ಅಂತಿಮ ಜನ್ಮ ಆಗುತ್ತದೆ! ಅವರಿಗೆ ಮರುಜನ್ಮ ಇರುವುದಿಲ್ಲ.”
“ತೃಪ್ತಿ ಇದ್ದರೆ ವೈಶ್ಯನು, ನಿರ್ಭಯನಾದರೆ ಕ್ಷತ್ರಿಯನು, ಆತ್ಮಜ್ಞಾನ ಅಥವಾ ಬ್ರಹ್ಮಜ್ಞಾನವಿದ್ದರೆ ಬ್ರಾಹ್ಮಣನು, ಮೇಲೆ ಹೇಳಿರುವ ಮೂರು ಗುಣಗಳು ಇಲ್ಲದಿದ್ದರೆ ಶೂದ್ರನು” ಎನ್ನುತ್ತಾರೆ.
Recent Comments