“ಧ್ಯಾನ ಮಾಡುವವರು ಊರ್ಧ್ವಲೋಕಗಳಿಗೆ ಹೋಗುತ್ತಾರೆ”
ಜುಲೈ 6 ರಂದು ಸಂಜೆ ಪತ್ರೀಜಿಯವರು ಬೆಂಗಳೂರಿನಲ್ಲಿರುವ CMRS ಧ್ಯಾನ ಕೇಂದ್ರಕ್ಕೆ ಆಗಮಿಸಿದರು. ಅಲ್ಲಿ, ಮೊದಲು ಧ್ಯಾನಕೇಂದ್ರದ ನಿರ್ವಾಹಕರಾದ ಶ್ರೀ ರಂಗಸ್ವಾಮಿಯವರು ಧ್ಯಾನದ ವಿಶಿಷ್ಟತೆಯನ್ನು ವಿವರಿಸಿದರು.
ಪತ್ರೀಜಿ ಸಂದೇಶ:
ನಾವು ಎಂದಿಗೂ ಎನ್ಜಾಯ ಮಾಡುವುದನ್ನೂ, ಪಾಠಗಳನ್ನು ಕಲಿಯುವುದನ್ನೂ, ಹೇಳಿಕೊಡುವುದನ್ನೂ Postpone ಮಾಡಬಾರದು. ಏಕೆಂದರೆ, ನಾಳೆಯೇ ನಾವು ಮರಣಿಸಬಹುದು. ಆದ್ದರಿಂದ, ನಾಳೆ ಎನ್ನುವುದು ಇಲ್ಲ. ಈ ದಿನವೇ ನಾವು ಮಾಡಬೇಕೆಂದುಕೊಂಡಿದ್ದನ್ನೆಲ್ಲಾ ಮಾಡಿಬಿಡಬೇಕು.
ನಮಗೆ ಏಳು ಶರೀರಗಳಿರುತ್ತವೆ:
ಅನ್ನಮಯಕೋಶ – Physical Body
ಪ್ರಾಣಮಯಕೋಶ – Etheric Body
ಮನೋಮಯಕೋಶ- Astral Body
ವಿಜ್ಞಾನಮಯಕೋಶ -Causal Body
ಆನಂದಮಯಕೋಶ -Supracausal Body
ವಿಶ್ವಮಯಕೋಶ – Cosmic Body
ನಿರ್ವಾಣಮಯಕೋಶ – Nirvanic Body
ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶ ದಾಟಿದಾಗ ಜನ್ಮಚಕ್ರದಿಂದ ಹೊರಬರುತ್ತೇವೆ. ನಾವು ಕಲಿತಿರುವ ಜ್ಞಾನವನ್ನು ಇತರರಿಗೆ ಬೋಧಿಸಿದಾಗ ವಿಶ್ವಮಯಕೋಶದಲ್ಲಿ ಪ್ರವೇಶಿಸುತ್ತೇವೆ. ಕೋಟ್ಯಾಂತರ ಜನಕ್ಕೆ ಆ ಜ್ಞಾನವನ್ನು, ಅಂದರೆ, ಪ್ರಪಂಚದಾದ್ಯಂತ ಹಂಚಲು ಯಾರು ತಪಿಸುತ್ತಾರೊ ಅವರು ನಿರ್ವಾಣಮಯಕೋಶಕ್ಕೆ ತಲುಪುತ್ತಾರೆ.
ನಾವು ಯಾವತರಹದ ಕರ್ಮಗಳನ್ನು ಮಾಡುತ್ತೇವೊ ಅಂತಹ ಫಲಗಳನ್ನೇ ಹೊಂದುತ್ತೇವೆ. ಮಾಂಸಾಹಾರ ತಿನ್ನುವವರು ಅಧೋಲೋಕಗಳಿಗೆ ಹೋಗುತ್ತಾರೆ. ಧ್ಯಾನ ಮಾಡುವವರು ಊರ್ಧ್ವಲೋಕಗಳಿಗೆ ಹೋಗುತ್ತಾರೆ.
ಅನ್ನಮಯಕೋಶ – Physical Body- ಕರ್ಮ ಭೂಮಿ
ಮನೋಮಯಕೋಶ -Astral Body- ಕರ್ಮಫಲಭೂಮಿ.
ಮೂರು ಬಗೆಯ ಮನುಷ್ಯರಿದ್ದಾರೆ:
Animal human beings- ಮಾಂಸಾಹಾರ ಸೇವಿಸುವವರು
Human human beings – ಸಸ್ಯಾಹಾರ ಸೇವಿಸುವವರು
Divine human beings -ಧ್ಯಾನ ಮಾಡುವವರು, ಧ್ಯಾನ ಪ್ರಚಾರ ಮಾಡುವರು
Recent Comments