“ಧ್ಯಾನ ಬಾಲ್ಯ……ಧ್ಯಾನ ಯೌವನ”

“ಗಮನ”
“ಗಮನ” ಅಂದರೆ ….. “ಮನೋಪ್ರವೃತ್ತಿ”
“ಗಮನ ಅಂದರೆ” …. “ಒಂದು ಪ್ರತ್ಯೇಕ ಮಾರ್ಗದಲ್ಲಿ ಪ್ರವಹಿಸುವ ಮನೋಪ್ರವೃತ್ತಿ”

“ಮನಸ್ಸು”
“ಮನಸ್ಸು” ಎಂದರೆ … “ಆಲೋಚನೆಗಳ ಸಮೂಹ”
ನಮ್ಮ “ಗಮನ” ಯಾವಕಡೆ ಇರುತ್ತದೋ….. ಅದೇ ಕಡೆ “ಮನಸ್ಸಿನ ಪ್ರವಾಹ” ಇರುತ್ತದೆ
ಶೈಶವ ಅವಸ್ಥೆಯಲ್ಲಿ “ತಾಯಿಯ ಮೇಲೆ ಗಮನ” ಇರುತ್ತದೆ… ಆ ಮಗುವಿಗೆ
ಬಾಲ್ಯದ ಅವಸ್ಥೆಯಲ್ಲಿ “ಆಟಗಳ ಮೇಲೆ ಗಮನ” ಇರುತ್ತದೆ… ಆ ಬಾಲಕನಿಗೆ ಮತ್ತು ಆ ಬಾಲಕಿಗೆ
“ತಾಯಿ ಮೇಲೆ ಗಮನ” ಸ್ವಲ್ಪ ಕಡಿಮೆ ಆಗುತ್ತದೆ

“ಎಲ್ಲಾ ಅನುಭವ ಮಾಡಬೇಕು – ದೊಡ್ಡ ಸಂಘರ್ಷಣೆ”
ಆದಮೇಲೆ ಯೌವನ ಅವಸ್ಥೆಯಲ್ಲಿ … “ಯೌವನದ ಆಸೆಆಕಾಂಕ್ಷೆಗಳ ಬಗ್ಗೆ ಗಮನ”
“ಎಲ್ಲರಿಗಿಂತ ಮೊದಲಿಗನಾಗಿರಬೇಕು ಎಂಬುವ ಗಮನ”
“ಪಕ್ಕದವನನ್ನು ಹೇಗಾದರೂ ಮೀರಿಸಬೇಕು ಎಂಬುವ ಗಮನ”
“ಪಕ್ಕದವನಿಗಿಂತ ಹೆಚ್ಚು ಅಂಕಗಳನ್ನು ಸಂಪಾದಿಸಬೇಕು ಎಂಬುವ ಗಮನ”
ಈ ವಿಧವಾಗಿ
ಯೌವನ ಅವಸ್ಥೆಯಲ್ಲಿ.. ಬಗೆ ಬಗೆಯ ಗಮನಗಳಲ್ಲಿ ಮುಳುಗಿ ತೇಲುತ್ತಿರುತ್ತಾರೆ.
ಮನೆಯಲ್ಲೂ ಇರಬೇಕು ಅನ್ನಿಸುತ್ತದೆ….. ಹೊರಗೂ ಇರಬೇಕು ಅನ್ನಿಸುತ್ತದೆ.
ಆಟಗಳೂ ಆಡಬೇಕು ಅನ್ನಿಸುತ್ತದೆ….. ಓದಿಕೊಳ್ಳಬೇಕೆಂದೂ ಅನ್ನಿಸುತ್ತದೆ.
“ಸಿನಿಮಾಗಳು ಎಲ್ಲವನ್ನೂ ನೋಡಬೇಕು”… “ಏನೇನೋ ಮಾಡಿಬಿಡಬೇಕು”
“ಎಲ್ಲಾ, ಎಲ್ಲಾ ಅನುಭವಿಸಿ ಬಿಡಬೇಕು”
ಎಲ್ಲಾ ಸೇರಿ “ದೊಡ್ಡ ತುಫಾನು”
ಸಕಲ ಗಮನಗಳ, ಸಕಲ ಮನೋಪ್ರವೃತ್ತಿಗಳ ಪರಸ್ಪರ ಮಹಾ ಅಂತರ್‌ಯುದ್ಧ
“ಬಾಲಸ್ತಾವತ್ ಕ್ರೀಡಾಸಕ್ತಃ… ತರುಣಸ್ತಾವತ್ ತರುಣೀಸಕ್ತಃ”

“ಕಿಂ ಸತ್ಯ?”
“ಯಾವುದು ಶಾಶ್ವತವಾದ ಸತ್ಯ?”
“ಯಾವುದು ಈಗಿನ ಸತ್ಯ?” “ಯಾವುದು ಈಗಿನ ಅಸತ್ಯ?”
“ಯಾವುದು ಈಗ ಮಾಡಬೇಕು?” “ಯಾವುದು ಈಗ ಮಾಡಬಾರದು”
ತಂದೆ ತಾಯಿಯರು ಹೇಳುವುದು “ಒಂದು ಸತ್ಯ”
ಸ್ನೇಹಿತರು ಹೇಳುವುದು “ಎರಡನೆಯ ಸತ್ಯ”
ಸಮಾಜ ಹೇಳುವುದು “ಮೂರನೆಯ ಸತ್ಯ”
ಮತ್ತೆ ಅಂತರಾತ್ಮ ಹೇಳುವುದು “ನಾಲ್ಕನೆಯ ಸತ್ಯ”
ಶರೀರ ಕೋರಿಕೊಳ್ಳುವುದು “ಒಂದು”
ಮನಸ್ಸು ಕೋರಿಕೊಳ್ಳುವುದು “ಎರಡು”
ಬುದ್ಧಿ ಹೇಳುವುದು “ಮೂರು”
“ಗುಡಿಯಲ್ಲಿ ದೇವರು” ಹೇಳುವುದು “ನಾಲ್ಕು”
ಗುಡಿ ಪೂಜಾರಿ ಕೇಳುವುದು “ಐದು”
ಮತ್ತೆ ಅಂತರಾತ್ಮ ಹೇಳುವುದು “ಆರು”
ಎಲ್ಲಾ ಕಲಸುಮೇಲೋಗರ… ಎಲ್ಲಾ ಅಸ್ತವ್ಯಸ್ತ
ಎಲ್ಲಾ ಅಲ್ಲೋಲಕಲ್ಲೋಲ…. ಎಲ್ಲಾ ಹಾಲಾಹಲ
ಎಲ್ಲಾ ಚುಕ್ಕಾಣಿ ಇಲ್ಲದ ನಾವೆ… ಎಲ್ಲಾ ಗಾಳಿಗೊಡ್ಡಿದ ದೀಪ

“ಕಿಂ ಕರ್ತವ್ಯ? ಕಿಂ ಆಚರಣೀಯ?”
“ಧ್ಯಾನ” ಎಂಬುದೇ “ಕರ್ತವ್ಯ”….”ಧ್ಯಾನ” ಎಂಬುದೇ “ಆಚರಣೀಯ”
ಬಾಲ್ಯಾವಸ್ಥೆಯಲ್ಲಿಯೇ “ಶ್ವಾಸದ ಮೇಲೆ ಗಮನ“ವನ್ನು ಬೋಧಿಸಬೇಕು
ಬಾಲ್ಯಾವಸ್ಥೆಯಲ್ಲಿಯೇ ಶ್ವಾಸಾನುಸಂಧಾನ ಅಭ್ಯಾಸ ಮಾಡಿಸಬೇಕು
ಬಾಲ್ಯಾವಸ್ಥೆಯಲ್ಲಿಯೇ ಆತ್ಮತತ್ವವನ್ನು ಸೂತ್ರಪ್ರಾಯವಾಗಿ ಬೋಧಿಸಬೇಕು
ಬಾಲ್ಯಾವಸ್ಥೆಯಲ್ಲಿಯೇ ದಿವ್ಯಚಕ್ಷುವನ್ನು ಉತ್ತೇಜಿಸಬೇಕು

“ಶುಭಸ್ಯ ಶೀಘ್ರಂ”
“ಗಿಡವಾಗಿ ಬಗ್ಗದೇ ಇದ್ದದ್ದು….. ಮರವಾಗಿ ಬಗ್ಗುವುದಿಲ್ಲ”
“A Stitch in time saves Nine”
“ಕಲ್ ಕರೆ ಸೋ ಆಜ್ …ಆಜ್ ಕರೆ ಸೋ ಅಬ್”
“Prevention is better than cure”
ಕೈಗಳು ಸುಡುವುದಕ್ಕೆ ಮುನ್ನವೇ ಸತ್ಯಜ್ಞಾನ ಎಂಬುವ ಎಲೆಗಳನ್ನು ಹಿಡಿದುಕೊಳ್ಳಬೇಕು
ಯೌವನಾವಸ್ಥೆಯಲ್ಲಿ ದೊಡ್ಡತುಫಾನು ತರಹ ಬರಲಿರುವ ಸಂಕಷ್ಟವನ್ನು ಬಾಲ್ಯಾವಸ್ಥೆಯಲ್ಲಿ ಮೊಗ್ಗಿನ ಹಂತದಲ್ಲಿದ್ದಾಗಲೇ ತುಂಡರಿಸಬೇಕಲ್ಲವೇ…
“ಇವತ್ತಿನ ಧ್ಯಾನ ಬಾಲಬಾಲಕಿಯರು ನಾಳಿನ ಜ್ಞಾನ, ವಿಜ್ಞಾನ ಪ್ರಜೆಗಳು”
ಬಾಲ್ಯಾವಸ್ಥೆಯಲ್ಲಿಯೇ “ಶ್ವಾಸದ ಮೇಲೆ ಗಮನ” ಅಭ್ಯಾಸವಾದಾಗ
ಯೌವನದಲ್ಲಿ ಸುಲಲಿತವಾಗಿ … ಶಾಂತಿಯುತವಾಗಿ ..ಸಂಸ್ಕಾರವಂತವಾಗಿ
ಅಭಿವೃದ್ಧಿ ಪಥದಲ್ಲಿ … ಸಂಪೂರ್ಣ ಉತ್ಸಾಹದಿಂದ … ನಿತ್ಯನೂತನವಾಗಿ
ಸಂಭ್ರಮಕರವಾಗಿ … ಆಶ್ಚರ್ಯಕರವಾಗಿ … ವಿಕಾಸಹೊಂದಿ
ಪ್ರತಿ ಯುವಕನೂ… ಯುವತಿಯೂ “ಭಾವೀ ಯಶಸ್ವೀ ವ್ಯಕ್ತಿ”ಯಾಗಿ ಮಾರ್ಪಡುತ್ತಾರೆ.
ಬಾಲ್ಯಾವಸ್ಥೆಯಲ್ಲಿಯೇ “ಶ್ವಾಸದ ಮೇಲೆ ಗಮನ – ಅಂದರೆ – ಧ್ಯಾನ” ಅಭ್ಯಾಸವಾಗಬೇಕು
ಬಾಲ್ಯಾವಸ್ಥೆಯಲ್ಲಿಯೇ ಅಭ್ಯಾಸವಾದ ಧ್ಯಾನ ಯೌವನಾವಸ್ಥೆಯಲ್ಲಿ ಅರಳುತ್ತದೆ, ವೃದ್ಧಿಸುತ್ತದೆ
ಪ್ರೌಢಾವಸ್ಥೆಯಲ್ಲಿ … ಪರಿಮಳವನ್ನು ಬೀರುತ್ತದೆ, ಫಲಿಸುತ್ತದೆ.
ಅಂದಿನಿಂದ ಜೀವನವೆಲ್ಲಾ “ಮೂರು ಹೂವು… ಆರು ಕಾಯಿಗಳಾ”ಗಿ
“ನಿತ್ಯಕಲ್ಯಾಣ ಹಸಿರು ತೋರಣ”ವಾಗಿ ಸ್ವರ್ಗಧಾಮವಾಗುತ್ತದೆ
ಆದ್ದರಿಂದ, ಬಾಲ್ಯಾವಸ್ಥೆಯಲ್ಲಿಯೇ, ಯೌವನಾವಸ್ಥೆಯಲ್ಲಿಯೇ
“ಶ್ವಾಸದ ಮೇಲೆ ಗಮನ”, “ಪ್ರತಿನಿತ್ಯ ಧ್ಯಾನದ ಬಗ್ಗೆ ಗಮನ”, “ಪ್ರಗತಿ ಜೀವನದ ಬಗ್ಗೆ ಗಮನ”
“ಸಂಕಷ್ಟರಹಿತ ಜೀವನದ ಬಗ್ಗೆ ಗಮನ”, “ಮಕ್ಕಳ ಭವಿಷ್ಯದ ಬಂಗಾರಮಯ ಜೀವನದ ಬಗ್ಗೆ ಗಮನ”
ಆ ಕಾರಣದಿಂದಾಗಿ ಜಾಗ್ರತೆ, ಹಾಗಾಗಿ ಜಾಗ್ರತೆ ಅದಕ್ಕಾಗಿಯೇ ಜಾಗ್ರತೆ