” ಧ್ಯಾನ ಎನ್ನುವುದು ಒಂದು ಇಂಗಿತಜ್ಞಾನ ಶಾಸ್ತ್ರ “
ವಿದ್ಯಾರ್ಥಿ ಜೀವನಕ್ಕೆ ಬೇಕಾದವು “ಏಕಾಗ್ರತೆ” .. “ಛಲ” .. “ಜ್ಞಾಪಕಶಕ್ತಿ” .. “ಏಕಸಂಧಿಗ್ರಾಹ್ಯತೆ” .. “ಚುರುಕುತನ” .. “ಉತ್ಸಾಹ” .. “ಶಕ್ತಿ”.
ಇವೆಲ್ಲಾ ಕೂಡಾ ಮಕ್ಕಳು ಹುಟ್ಟಿದಾಗಲೇ ಸಹಜವಾಗಿ ಹೊಂದಿರುತ್ತಾರೆ. ಆದ್ದರಿಂದ, ಪ್ರತಿದಿನ ಅವರೊಂದಿಗೆ ನಿರ್ದಿಷ್ಟ ಸಮಯದಲ್ಲಿ ಧ್ಯಾನ ಮಾಡಿಸುತ್ತಿದ್ದರೆ ಅವರು ತಮ್ಮಲ್ಲೇ ಅಡಗಿರುವ ಈ ಅದ್ಭುತ ಲಕ್ಷಣಗಳನ್ನು ಅರಿವಿಗೆ ತಂದುಕೊಳ್ಳಬಲ್ಲರು.
ಸಾಧಾರಣವಾಗಿ ನಾವು ವಿದ್ಯಾರ್ಥಿಗಳನ್ನು “ನಿಮ್ಮ ಕೋರಿಕೆಗಳು ಏನು?” ಎಂದು ಕೇಳಿದಾಗ, “ನಾನು ಚೆನ್ನಾಗಿ ಓದಬೇಕು; ನನಗೆ ನೂರಕ್ಕೆ ನೂರು ಅಂಕಗಳು ಬರಬೇಕು” ಎನ್ನುತ್ತಾರೆ.
ಕೆಲವರು “ಕ್ಲಾಸಿಗೆ ನಾನೇ ಫಸ್ಟ್ ಬರಬೇಕು” ಎನ್ನುತ್ತಾರೆ. “ಕ್ಲಾಸಿನಲ್ಲಿ ನಾನೇ ಫಸ್ಟ್ ಬರಬೇಕು” ಎಂದುಕೊಳ್ಳುವುದು ಸರಿಯಾದ ಪದ್ಧತಿ ಅಲ್ಲವೇ ಅಲ್ಲ .. ನನಗೆ ನೂರಕ್ಕೆ ನೂರು ಅಂಕಗಳು ಬರಬೇಕು ಎಂದು ಕೋರಿಕೊಳ್ಳಬೇಕು.
ತರಗತಿಯಲ್ಲಿ ನೂರು ಮಂದಿ ಇದ್ದರೆ ನೂರು ಮಂದಿಗೂ ನೂರಕ್ಕೆ ನೂರು ಬರಬೇಕೆ ಹೊರತು ಒಬ್ಬನಿಗೆ ಮಾತ್ರ ನೂರು ಅಂಕಗಳು ಬಂದು ಉಳಿದವರಿಗೆ ಹತ್ತು ಬಂದರೆ ನಮಗೇಕೆ ಆನಂದ? ನಮ್ಮೊಂದಿಗೆ ಎಲ್ಲರಿಗೂ ನೂರಕ್ಕೆ ನೂರು ಬಂದಾಗಲೇ ನಮಗೆ ಆನಂದ.
ತುಂಬಾ ಜನ ಮೂರ್ಖ ತಂದೆತಾಯಂದಿರು “ಕ್ಲಾಸಿಗೆ ನೀನೇ ಫಸ್ಟ್ ಬರಬೇಕು .. ನೀನೇ ಇಂಜನಿಯರ್ ಆಗಬೇಕು .. ಡಾಕ್ಟರ್ ಆಗಬೇಕು .. ಡೀಸಿ ಆಗಬೇಕು .. ನೀನೇ ಹೆಸರು ಗಳಿಸಿ ಪ್ರಖ್ಯಾತನಾಗಬೇಕು” .. ಎನ್ನುತ್ತಾ ಚಿಕ್ಕಂದಿನಿಂದ ಮಕ್ಕಳಿಗೆ ಬೋಧಿಸುತ್ತಾ ಇರುತ್ತಾರೆ.
ಆ ಮಕ್ಕಳು ಕೂಡಾ ಪಾಪ ಅದೇ ಕೇಳುತ್ತಾ .. ಕೋಗಿಲೆಯ ನುಡಿಗಳಂತೆ ಅಂತಹ ಮಾತುಗಳೇ ನಿತ್ಯ ಆಡುತ್ತಿರುತ್ತಾರೆ. ಇವುಗಳ ಫಲವಾಗಿಯೇ ಅವರು ತಮ್ಮತಮ್ಮ ಜೀವನದಲ್ಲಿ ಅಂತ್ಯವಿಲ್ಲದ ಅವಮಾನಗಳಿಗೆ, ಅಪಜಯಗಳಿಗೆ ಗುರಿಯಾಗುತ್ತಾ ಇರುತ್ತಾರೆ. ಆದ್ದರಿಂದ “ನಾನು ಎಲ್ಲರಿಗಿಂತ ಮುಂದೆ ಇರಬೇಕು” ಎನ್ನುವ ಭಾವನೆಗಿಂತ, “ಎಲ್ಲರೂ ಪಕ್ವವಾಗಿರಬೇಕು .. ಅದರಲ್ಲಿ ನಾನೂ ಒಬ್ಬನಾಗಬೇಕು!” ಎನ್ನುವ ಸರಿಯಾದ ಭಾವನೆಯೊಂದಿಗೆ ಮಕ್ಕಳು ಬೆಳೆಯಬೇಕು.
ಸೋಲು, ಗೆಲುವು ಎನ್ನುವುದು ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳಲ್ಲದವರಿಗೂ ಪ್ರಕೃತಿ ಸಹಜವಾದದ್ದು. ಅದರಿಂದ ಅಹಂಕಾರ, ದರ್ಪ, ನಿರಾಶೆ, ನಿಸ್ಪೃಹೆಗಳಿಗೆ ಒಳಗಾಗದೆ ಸಮತೋಲನದಲ್ಲಿರುವುದೇ “ವ್ಯಕ್ತಿಗತ ಗೆಲುವು”. ಈ ಆತ್ಮಜ್ಞಾನ ಮಕ್ಕಳಿಗೆ ಅಭ್ಯಾಸವಾಗಬೇಕೆಂದರೆ ಅವರಿಗೆ ಧ್ಯಾನ ವಿದ್ಯೆಯಲ್ಲಿ ಪ್ರವೇಶವಿರಬೇಕು, ಪರಿಶ್ರಮವಿರಬೇಕು.
“ಧ್ಯಾನವಿದ್ಯೆ” ಎನ್ನುವುದು ಯಾವ ಒಂದು ಮತಕ್ಕೂ ಪ್ರತ್ಯೇಕವಾಗಿ ಸಂಬಂಧಿಸಿದ್ದಲ್ಲ. ಅದು ಒಂದು ಶಾಸ್ತ್ರ. ಧ್ಯಾನದಿಂದ ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು ಎನ್ನುವುದು ಒಂದು ಮೂಲಭೂತ ಇಂಗಿತ ಜ್ಞಾನಸೂತ್ರ (ಸಾಮಾನ್ಯ ಜ್ಞಾನ).. Basic Commonsense.
ನಿಗದಿತ ಸಮಯದಲ್ಲಿ ನಿರ್ದೇಶಿಸಲ್ಪಟ್ಟ ನಿರಂತರ ಧ್ಯಾನಾಭ್ಯಾಸದಿಂದ ವಿದ್ಯಾರ್ಥಿಗಳಲ್ಲಿ ಏನಾದರೂ ಕೆಟ್ಟ ಅಭ್ಯಾಸಗಳಿದ್ದರೆ .. ಮುಖ್ಯವಾಗಿ ಅತಿಯಾಗಿ ಮಾತನಾಡುವುದು, ಅತಿಯಾಗಿ ತಿನ್ನುವುದು, ಕೆಲಸಕ್ಕೆಬಾರದ್ದನ್ನು ಕೇಳುವುದು ಇಂತಹವುಗಳೇನಾದರೂ ಇದ್ದರೆ .. ಅವೆಲ್ಲಾ ಕೂಡಾ ಅತ್ಯಂತ ಸಹಜವಾಗಿ ಅದೃಶ್ಯವಾಗುತ್ತದೆ.
ನಮ್ಮ ಕೈಯಲ್ಲಿ ಐದು ಬೆರಳುಗಳಿವೆ.
ಕಿರು ಬೆರಳು .. Little finger
ಉಂಗುರದ ಬೆರಳು .. Ring finger
ಮಧ್ಯೆ ಬೆರಳು .. Middle finger
ತೋರು ಬೆರಳು .. Index finger
ಹೆಬ್ಬೆರಳು .. Thumb finger
ಈ ಐದು ಬೆರಳಿನ ಪರವಾಗಿ ವಿದ್ಯಾರ್ಥಿಗಳು ಏನು ಮಾಡಿದರೆ ಅವರ ಜೀವನ ಅದ್ಭುತವಾಗಿ ವಿಕಾಸಗೊಳ್ಳುತ್ತವೆಯೊ ತಿಳಿದುಕೊಳ್ಳೋಣ.
ಮೊದಲನೆ ಬೆರಳು .. ಕಿರು ಬೆರಳು: ಇದು “ಆಟ”ಕ್ಕೆ ಸಂಬಂಧಿಸಿದ್ದು. ವಿದ್ಯಾರ್ಥಿ ಜೀವನದಲ್ಲಿ ಆಟಗಳು ಬಹಳ ಮುಖ್ಯ. ಅವರ ಭೌತಿಕ ಶರೀರದ ಅಭಿವೃದ್ಧಿಗೆ ಮತ್ತು ಅವರ ಮಾನಸಿಕ ಉಲ್ಲಾಸಕ್ಕೆ ಆಟಗಳು ಕಡ್ಡಾಯ .. ಆದ್ದರಿಂದ ವಿದ್ಯಾರ್ಥಿಗಳು ವಿಧವಿಧವಾದ ಆಟಗಳನ್ನು ಆಡಬೇಕು.
ಎರಡನೆಯ ಬೆರಳು .. ಉಂಗುರದ ಬೆರಳು: ಇದು “ಹಾಡಿಗೆ”, “ಕಲೆ”ಗೆ ಸಂಬಂಧಿಸಿದ್ದು. ಮಕ್ಕಳು ಹಾಡುಗಳನ್ನು ಕೊರಳೆತ್ತಿ ಚೆನ್ನಾಗಿ ಹಾಡಬೇಕು. ಭಜನೆಗಳು, ಪ್ರಾರ್ಥನೆಗಳು, ವೃಂದಗಾಯನ, ಇವುಗಳನ್ನೆಲ್ಲಾ ಮಕ್ಕಳಿಗೆ ಕಲಿಸುತ್ತಾ ಇದ್ದರೆ ಅವರಲ್ಲಿ ಒಳ್ಳೆಯ ಸಾಮಾಜಿಕ ಅರಿವು ಏರ್ಪಡುತ್ತದೆ. ವಿಧವಿಧವಾದ ’ಕಲೆ’ಗಳಲ್ಲಿ ಅವರು ನಿಷ್ಣಾತರಾಗಬೇಕು.
ಮೂರನೆಯ ಬೆರಳು .. ಮಧ್ಯೆ ಬೆರಳು : ಇದು “ಓದಿಗೆ” ಸಂಕೇತ. ಅಷ್ಟೇ ಹೊರತು ಮೊದಲನೆಯ ಬೆರಳು ಓದು, ಎರಡನೆಯದು ಓದು, ಮೂರನೆಯದು ಓದು, ನಾಲ್ಕನೆಯದು ಓದು, ಐದನೆಯ ಬೆರಳು ಓದುವುದು ಅಲ್ಲ. ಎಲ್ಲಾ ಬೆರಳುಗಳು ಓದಿಗೆ ಸೀಮಿತವಾದರೆ ಆ ಮಕ್ಕಳು, ಆ ವಿದ್ಯಾರ್ಥಿಗಳು ಸರ್ವನಾಶವಾಗುವುದು ಖಚಿತ. Too much is too bad! ಆದ್ದರಿಂದ, “ಮಕ್ಕಳು ಓದಿಕೊಳ್ಳುವ ಯಂತ್ರಗಳಲ್ಲ. ಓದು ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಒಂದು ಪ್ರಧಾನಭಾಗ ಮಾತ್ರವೇ” ಎಂದು ಹಿರಿಯರು ತಿಳಿದುಕೊಳ್ಳಬೇಕು.
ಚೆನ್ನಾಗಿ ಓದುತ್ತಾ ದೊಡ್ಡವರಾಗುತ್ತಾ ಹೋದಂತೆ ಓದಿನಲ್ಲಿ ವಿಶಿಷ್ಟತೆಯನ್ನು ಸಂಪಾದಿಸಬೇಕು .. ಓದಿನಲ್ಲಿ ಚುರುಕುತನ ಇರಬೇಕು ಮತ್ತು ಮೇಧಸ್ಸನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು.
ನಾಲ್ಕನೆಯ ಬೆರಳು .. ಉಂಗುರದ ಬೆರಳು: ಇದು “ಕೆಲಸಗಳು” ಎನ್ನುವುದಕ್ಕೆ ಸಂಕೇತ!
ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನಿ ಕೂಡಾ ಎಷ್ಟೋ ಕೆಲಸಗಳು ಮಾಡಬೇಕು. ಅವರ ಮನೆ ಕೆಲಸ ಅವರು ನೋಡಿಕೊಳ್ಳಬೇಕು .. ಅವರ ತಂದೆತಾಯಿಯರಿಗೆ ಸೇವೆ ಮಾಡಬೇಕು. ಮನೆ ಕೆಲಸಗಳು ಮಾಡುವಷ್ಟು ಮಾಡಿ ಸ್ಕೂಲಿಗೆ, ಕಾಲೇಜ್ಗೆ ಬರಬೇಕು. ಆದ್ದರಿಂದ, ಈ ನಾಲ್ಕನೆಯ ಬೆರಳು “ಕೆಲಸಗಳು” ಎನ್ನುವುದಕ್ಕೆ ಸಂಕೇತವಾಗಿದೆ.
ಐದನೆಯ ಬೆರಳು .. ಹೆಬ್ಬೆರೆಳು: ಇದು “ಧ್ಯಾನ” ಎನ್ನುವುದಕ್ಕೆ ಸಂಕೇತ.
ಪ್ರತಿದಿನ ಆಟಗಳು, ಹಾಡುಗಳು, ಓದು, ಕೆಲಸಗಳು ಇರುವಂತೆ ಪ್ರತಿದಿನ ಧ್ಯಾನ ಇರಬೇಕು. ಧ್ಯಾನವಿಲ್ಲದಿದ್ದರೆ ಆ ದಿನವು ಪೂರ್ಣವಾಗದು.
ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಈ ಐದು ಬೆರಳಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಧ್ಯಾನ. “ಧ್ಯಾನ” ಎನ್ನುವುದು ಎಷ್ಟು ಚೆನ್ನಾಗಿ ಮಾಡಿದರೆ ನಾವು ಆಡುವ ಆಟಗಳು ಅಷ್ಟು ಚೆನ್ನಾಗಿರುತ್ತವೆ ; ಧ್ಯಾನ ಎನ್ನುವುದು ಎಷ್ಟು ಚೆನ್ನಾಗಿ ಮಾಡಿದರೆ, ಅಷ್ಟು ನಮ್ಮ ವಿದ್ಯಾಭ್ಯಾಸ ಚೆನ್ನಾಗಿರುತ್ತದೆ.
Recent Comments