“ಧ್ಯಾನಿಗಳಿಗೆ ಅನೇಕಾನೇಕ ನೂತನ ಪಾಠಗಳನ್ನು ‘ಟ್ರೆಕ್ಕಿಂಗ್’ ಹೇಳಿಕೊಡುತ್ತದೆ”
ಟ್ರೆಕ್ಕಿಂಗ್ ಎಂಬುವುದು ಆಂಗ್ಲ ಭಾಷೆಯ ಪದ. ಅಂದರೆ, ಕಾಡುಗಳಲ್ಲಿ ಮಾಡುವ ವಿಹಾರ, ವಿನೋದ, ವಿಜ್ಞಾನ ಸಾಹಸಯಾತ್ರೆ. ಅಂದರೆ, ನಗರಗಳಿಂದ, ಪಟ್ಟಣಗಳಿಂದ ಬಹುದೂರ ಹೋಗಿ ಅರಣ್ಯಗಳಲ್ಲಿ, ಬೆಟ್ಟಗಳಲ್ಲಿ ಕೆಲವು ದಿನಗಳು ಜೀವಿಸುವುದು.
ಮುಖ್ಯವಾಗಿ ಧ್ಯಾನಕ್ಕೆ ಪ್ರಶಸ್ಥವಾದ ಸ್ಥಳವೆಂದರೆ ಅರಣ್ಯಗಳು. ಕಾಡುಗಳಲ್ಲಿ, ಪ್ರಕೃತಿಯ ಮಡಿಲಲ್ಲಿ ‘ಧ್ಯಾನ’ ಮಾಡುವುದೆನ್ನುವುದು ಅತ್ಯಂತ ಆನಂದಕರವಾದ, ಅದ್ಭುತವಾದ ಶಕ್ತಿಯನ್ನು ಪ್ರಸಾದಿಸುತ್ತದೆ. ಪ್ರಕೃತಿಯಲ್ಲಿರುವ ಸಹಜತ್ವ, ನಿಷ್ಕಪಟತ್ವ, ನಿಷ್ಕಾಲುಷ್ಯ ಎಂಬುವುವು ನಗರಗಳ ಕಲುಷಿತ ಜೀವನಕ್ಕೆ, ಕಲ್ಮಷ ವಾತಾವರಣಕ್ಕೆ ಕೆಲವು ದಿನಗಳಾದರೂ ದೂರವಿಡಿಸುತ್ತದೆ.
ನಗರಗಳಲ್ಲಿ, ಪಟ್ಟಣಗಳಲ್ಲಿ, ಗ್ರಾಮಗಳಲ್ಲಿ ಸ್ಥಿರನಿವಾಸಕ್ಕೆ ವ್ಯವಸ್ಥೆ ಏರ್ಪಡಿಸಿಕೊಂಡಿರುವ ‘ನಾಗರಿಕರು’ ಆಗಿಂದಾಗ ಟ್ರೆಕ್ಕಿಂಗ್‌ಗಳನ್ನು ಏರ್ಪಡಿಸಿಕೊಳ್ಳುತ್ತಾ ಪ್ರಕೃತಿಯ ಜೊತೆ ಸಹಜವಾಗಿ ಕಳೆದರೇ ವಿನಹ ‘ಶಾಂತಿ’, ‘ಆರೋಗ್ಯ’ ಎಂಬುವುವು ಅವರಿಗೆ ಲಭ್ಯವಾಗುವುದಿಲ್ಲ.
ಟ್ರೆಕ್ಕಿಂಗ್ ಸಮಯದಲ್ಲಿ ಎಲ್ಲರಿಗೂ ಬಹಳಷ್ಟು ಸಮಯ ಇರುತ್ತದೆ. ಆದ್ದರಿಂದ, ಧ್ಯಾನಿಗಳೆಲ್ಲರೂ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳಲು ಅದ್ಭುತ ಅವಕಾಶ ಲಭಿಸುತ್ತದೆ. ಅನೇಕ ಹೊಸ ವಿದ್ಯೆಗಳನ್ನು – ಜಾಗ್ರತೆಯಿಂದ ನಡೆಯುವುದು , ಶರೀರಕ್ಕೆ ಹೆಚ್ಚಾಗಿ ಕಷ್ಟಕೊಡುವುದು , ಕನಿಷ್ಠ ಸೌಕರ್ಯಗಳಿಂದ ಜೀವಿಸುವುದು , ಮಳೆ, ಚಳಿ ಮುಂತಾದ ವಿಪರೀತ ವಾತಾವರಣ ಪರಿಸ್ಥಿತಿಗಳಿಗೆ ತಡೆದುಕೊಳ್ಳುವುದು ಅಂತಹ ಅನೇಕ ವಿಷಯಗಳನ್ನು ಕಲಿತುಕೊಳ್ಳಲಾಗುತ್ತದೆ. ಅನೇಕಾನೇಕ ಹೊಸ ಪಾಠಗಳನ್ನು ಧ್ಯಾನಿಗಳಿಗೆ ‘ಟ್ರೆಕ್ಕಿಂಗ್’ ಹೇಳಿಕೊಡುತ್ತದೆ. ಒಬ್ಬರ ಮೇಲೆ ಒಬ್ಬರು ಆಧಾರಪಡುವುದು ತಿಳಿಯುತ್ತದೆ. ಒಂಟಿಯಾಗಿ ಇರುವುದು ಸಹ ತಿಳಿಯುತ್ತದೆ. ಪ್ರಾಣಿ ಜಾತಿಯನ್ನು, ವೃಕ್ಷ ಜಾತಿಯನ್ನು ಪ್ರೀತಿಸುವುದನ್ನು ಕಲಿತುಕೊಳ್ಳತ್ತೇವೆ.
ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಕಾರ್ಯಕ್ರಮಗಳಿಗೆ ‘ಟ್ರೆಕ್ಕಿಂಗ್’ ಎಂಬುವುದು ಖಂಡಿತಾ ಬೇಕೆಂದು ನಿರ್ಣಯಿಸಲಾಗಿದೆ. ಪರಂಪರೆಯಾಗಿ ಅನೇಕ ಟ್ರೆಕ್ಕಿಂಗ್ ಪ್ರೋಗ್ರಾಮ್‌ಗಳನ್ನು ಆಗಿಂದಾಗ ಏರ್ಪಡಿಸಲಾಗಿದೆ, ನೂರಾರು ಜನ ಮಕ್ಕಳು, ಹಿರಿಯರು, ವೃದ್ಧರು ಉತ್ಸಾಹ ತೋರಿಸುವುದು ಅಪೂರ್ವವಾದ ವಿಶೇಷವಾದ ವಿಷಯ. ಮುಂದೆ ಇದು ಧ್ಯಾನಿಗಳಿಗೇ ಅಲ್ಲದೆ ಎಲ್ಲರಿಗೂ, ಅಂದರೆ, ಪ್ರಜೆಗಳೆಲ್ಲರಿಗೂ ಇದು ಕಡ್ಡಾಯವಾಗಿ ಬೇಕಾಗಿರುವ ಕಾರ್ಯಕ್ರಮವಾಗಿ, ಜೀವನದ ಒಂದು ಭಾಗವಾಗಿ ಆಗಿಯೇ ತೀರುತ್ತದೆ.
Recent Comments