“ಧ್ಯಾನಶಕ್ತಿಯಿಂದ ಸಮೃದ್ಧ ಬೇಸಾಯ”
ರೈತರೆಲ್ಲರೂ ಧ್ಯಾನಿಗಳಾಗಿ ಆತ್ಮಶಕ್ತಿಯನ್ನು ಬೆಳೆಸಿಕೊಂಡರೆ ಫಸಲು ಇನ್ನೂ ಚೆನ್ನಾಗಿ ಬೆಳೆಯುತ್ತದೆ. ವಾತಾವರಣ ಅನುಕೂಲವಾಗಿ ಬದಲಾಗುತ್ತದೆ. ಸಕಾಲಕ್ಕೆ ಮಳೆ ಬೀಳುತ್ತದೆ. ಗ್ರಾಮ ಪ್ರಜೆಗಳಿಗೆ ಫಸಲೇ ಜೀವನಾಧಾರವಲ್ಲವೇ. ಈ ರೀತಿಯಾಗಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ವ್ಯವಸಾಯದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕಡಿಮೆಮಾಡಿ, ಸಾವಯವ ಗೊಬ್ಬರಗಳ ಉಪಯೋಗ ಹೆಚ್ಚಿಸಿ, ಆಧ್ಯಾತ್ಮಿಕ ವ್ಯವಸಾಯ ವಿಧಿಯಾಗಿ ಸಾಗಿಸಬೇಕು. ಗ್ರಾಮಗಳಲ್ಲಿ ಆಧ್ಯಾತ್ಮಿಕ ಬೇಸಾಯ ಅನಿವಾರ್ಯವಾಗಬೇಕು. ಗ್ರಾಮಗಳಲ್ಲಿ ಇರುವ ದೇವಾಲಯಗಳಲ್ಲಿ, ವಿದ್ಯಾಲಯಗಳಲ್ಲಿ ಎಲ್ಲರೂ ತಪ್ಪದೇ ಧ್ಯಾನ ಅಭ್ಯಾಸ ಮಾಡಬೇಕು. ಗ್ರಾಮಗಳೆಲ್ಲಾ ಹಸಿರಾಗಿ ಕಳೆಕಳೆಯಾಗಿ, ಪಟ್ಟಣದ ಪ್ರಜೆಗಳೆ ಗ್ರಾಮಗಳಿಗೆ ವಲಸೆ ಹೋಗಬೇಕು.
“ರೈತರಿಗೆ ಆತ್ಮಜ್ಞಾನ ಅನಿವಾರ್ಯ“
ಫಸಲು ಸರಿಯಾಗಿ ಬರದೇ ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ ಆತ್ಮಜ್ಞಾನ ಅನಿವಾರ್ಯ. ’ನಾನು’ ಎನ್ನುವುದು ’ ಶರೀರ ’ ಅಲ್ಲ ’ ಆತ್ಮ ’ … ಎಂದು ತಿಳಿದುಕೊಂಡಾಗ ರೈತರು ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.
ಆರ್ಥಿಕ ನಿಸ್ಸಹಾಯ ಸ್ಥಿತಿಯಲ್ಲಿ ಒಬ್ಬ ರೈತ ಸಾಯಲು ನಿರ್ಧರಿಸಿಕೊಳ್ಳುವುದು, ತನ್ನ ಕುಟುಂಬವನ್ನು ಕೊಲ್ಲುವುದು ಎನ್ನುವುವು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಉಳಿದಿದೆ ಎಂದರೆ ನಮ್ಮ ದೇಶದಲ್ಲಿರುವ ಎಲ್ಲಾ ವಿದ್ಯಾವಂತರಿಗೆ ಇದು ನಾಚಿಕೆಗೇಡು.
* * *
ಪ್ರತಿಯೊಂದು ಪ್ರಾಣ ಪವಿತ್ರವಾದದ್ದು. ಪ್ರಾಣ ತೆಗೆಯುವ ಹಕ್ಕು ಯಾವ ಪ್ರಾಣಿಗೂ ಇಲ್ಲ. ಪ್ರಾಣ ಕೊಡುವ ಹಕ್ಕು ನಮಗೆ ನಿಜವಾಗಲೂ ಇಲ್ಲವೇ ಇಲ್ಲ. ಆದರೆ, ಪ್ರಾಣ ರಕ್ಷಿಸುವ ಶಕ್ತಿ ಮಾತ್ರವೇ ಇದೆ.
ಆತ್ಮಹತ್ಯೆಗಿಂತಾ ಮಹಾಪಾಪ ಮತ್ತೊಂದಿಲ್ಲ. ಆತ್ಮಜ್ಞಾನಕ್ಕಿಂತಾ ಮೀರಿದ ಮಹಾಜ್ಞಾನ ಮತ್ತೊಂದಿಲ್ಲ. ಆತ್ಮ ಅನುಭವಗಳಿಗೆ ಜೈ. ಆತ್ಮ ಜ್ಞಾನಕ್ಕೆ ಜೈ. ಆತ್ಮಾನುಭವಕ್ಕೆ ಇರುವ ಒಂದು ಮಾರ್ಗವೇ ’ ಶ್ವಾಸಾನುಸಂಧಾನ ’. ಇನ್ನು ಆತ್ಮಹತ್ಯೆಗಳು ಇರಬಾರದು … ಇರಬೇಕಾಗಿದ್ದೆಲ್ಲಾ ಆತ್ಮಜ್ಞಾನವೇ.
“ಕರ್ಮಸಿದ್ಧಾಂತ”
ಕರ್ಮ ಸಿದ್ಧಾಂತ ಎನ್ನುವುದು ಸೃಷ್ಟಿಯಲ್ಲಿ ಅನುಕ್ಷಣ ತಾಂಡವವಾಡುತ್ತಿದೆಯಲ್ಲವೇ. ಪುಣ್ಯಮಾಡಿದವನಿಗೆ ತಕ್ಕ ಫಲಸಿಗುತ್ತದೆ. ಪುಣ್ಯಮಾಡದಿದ್ದರೆ ಫಲ ಸಿಗುವುದಿಲ್ಲ. ಎಷ್ಟು ಪುಣ್ಯ ಮಾಡಿದರೆ ಅಷ್ಟು ಫಲ ಸಿಗುತ್ತದೆ. ಯಾವಾಗ ಪುಣ್ಯ ಮಾಡಿದರೆ ಆವಾಗ ಫಲ ಸಿಗುತ್ತದೆ. ಹೇಗೆ ಪುಣ್ಯ ಮಾಡಿದರೆ ಹಾಗೆ ಫಲ ಸಿಗುತ್ತದೆ. ಎಲ್ಲಿ ಪುಣ್ಯದ ಕೆಲಸ ಮಾಡುತ್ತೇವೊ ಅಲ್ಲಿ ಫಲ ಸಿಗುತ್ತದೆ. ಸ್ವಲ್ಪ ಪುಣ್ಯ ಮಾಡಿದರೆ ಸ್ವಲ್ಪ ಫಲ ಸಿಗುತ್ತದೆ. ಹೆಚ್ಚು ಪುಣ್ಯ ಮಾಡಿದರೆ ಹೆಚ್ಚು ಫಲ ಸಿಗುತ್ತದೆ. (ಮಾಡಿಕೊಂಡವನಿಗೆ ಮಾಡಿಕೊಂಡಷ್ಟು ಮಹಾದೇವಾ. ಮಾಡಿಕೊಳ್ಳದವನಿಗೆ ಮಾಡಿಕೊಳ್ಳದಷ್ಟು ಮಹಾದೇವಾ. ಎಷ್ಟು ಮಾಡಿಕೊಂಡರೆ ಅಷ್ಟು ಮಹಾದೇವಾ. ಯಾವಾಗ ಮಾಡಿಕೊಂಡರೆ ಆವಾಗ ಮಹಾದೇವಾ. ಹೇಗೆ ಮಾಡಿಕೊಂಡರೆ ಹಾಗೆ ಮಹಾದೇವಾ. ಎಲ್ಲಿ ಮಾಡಿಕೊಂಡರೆ ಅಲ್ಲಿ ಮಹಾದೇವಾ. ಸ್ವಲ್ಪ ಮಾಡಿಕೊಂಡರೆ ಸ್ವಲ್ಪ ಮಹಾದೇವಾ. ಹೆಚ್ಚು ಮಾಡಿಕೊಂಡರೆ ಹೆಚ್ಚು ಮಹಾದೇವಾ!) ಈ ವಿಧವಾಗಿ ಕರ್ಮ ಸಿದ್ಧಾಂತದ ವಿಶ್ವರೂಪವನ್ನು ಅರ್ಥ ಮಾಡಿಕೊಂಡವನು ತಕ್ಷಣ ಬುದ್ಧಿವಂತನಾಗುತ್ತಾನೆ, ತಕ್ಷಣ ಸಮರ್ಥನಾಗುತ್ತಾನೆ, ತಕ್ಷಣ ಶುಭಫಲಿತಗಳನ್ನು ಹೊಂದುತ್ತಾನೆ, ತಕ್ಷಣ ಮುಕ್ತನಾಗುತ್ತಾನೆ.
ಗ್ರಾಮ ಪ್ರಜೆಗಳ ದಾರಿದ್ರ್ಯಕ್ಕೆ ಗ್ರಾಮ ಪ್ರಜೆಗಳೇ ಹೊಣೆಗಾರರು. ಇದಕ್ಕೆ ಕಾರಣಗಳು ಅನೇಕಾನೇಕ . ಉದಾಹರಣೆಗೆ:
* ಹಸಿರಾಗಿರುವ ಬತ್ತದ ಹೊಲಗಳನ್ನು – ಮೀನುಗಳ/ಸೀಗಡಿಗಳ ಕೆರೆಗಳನ್ನಾಗಿ ಬದಲಾಯಿಸುವುದು
* ಕೋಳಿಗಳನ್ನು, ಮೇಕೆಗಳನ್ನು – ಕುಯಿದುಕೊಂಡು ತಿನ್ನುವುದು
* ನೀರಿನಲ್ಲಿ ಆಡಿಕೊಳ್ಳುವ ಮೀನುಗಳನ್ನು – ಹಿಡಿದು ಪೀಡಿಸುವುದು
…ಅವುಗಳನ್ನು ಬೇಯಿಸಿಕೊಂಡು, ಭಕ್ಷಿಸುವುದು
“ಜೀವಿ ಜೀವಿಯನ್ನು ಕೊಂದು ಜೀವಿಗೆ ಹಾಕಿದಾಗ
ಜೀವಿಯಿಂದ ನಿನಗೆ ಏನು ತೊಂದರೆ
ಜೀವ ಹಿಂಸೆಗಳಿಗೆ ಸಿಗುವುದಾ ಮೋಕ್ಷವು ?
ವಿಶ್ವದಾಭಿರಾಮ ಕೇಳು ವೇಮ”
“ಪಕ್ಷಿ ಜಾತಿ ಹಿಡಿದು, ತುಂಬಾ ಹಿಂಸೆಗಳನ್ನು ಕೊಟ್ಟು
ಹೊಟ್ಟೆ ತುಂಬಾ ಕೂಳು ತುಂಬಿಸಿಕೊಳ್ಳಲು
ಬೇಯಿಸಿ ತಿನ್ನುವವನು ವಸುಧ ಚಾಂಡಾಲನು
ವಿಶ್ವದಾಭಿರಾಮ ಕೇಳು ವೇಮ”
ಗ್ರಾಮೀಣ ಪ್ರಜೆಗಳೆಲ್ಲರೂ ಸಸ್ಯಾಹಾರಿಗಳಾಗಿ ಬದಲಾಗುವವರೆಗೂ ಅವರನ್ನು ದಾರಿದ್ರ್ಯ ಬಿಡುವುದಿಲ್ಲ. ಗ್ರಾಮೀಣ ಪ್ರಜೆಗಳನ್ನು ಸಸ್ಯಾಹಾರಿಗಳನ್ನಾಗಿ, ಧ್ಯಾನಿಗಳಾಗಿ ಬದಲಾಯಿಸುವುದೇ ಪಿರಮಿಡ್ ಮಾಸ್ಟರ್‌ಗಳ ಧ್ಯೇಯ.
ಯಾರು ಮಾಂಸ ತಿನ್ನುತ್ತಿರುತ್ತಾರೋ ಅವರ ಜೀವನ ಪೂರ್ತಿ ನರಕ. ಇಲ್ಲಿಯೇ ಎಲ್ಲಾ ರೋಗಗಳು, ನರಕಗಳನ್ನು ಅನುಭವಿಸುತ್ತಾ ಇರುತ್ತಾರೆ. ಸಕಲ ಅಶಾಂತಿಗಳಿಂದ, ನಿರಾಸೆ, ನಿಸ್ಪೃಹಗಳಿಂದ, ಆರೋಗ್ಯ ಕ್ಷೀಣಿಸಿ ಸವೆದು ಹೋಗಿರುತ್ತಾರೆ.
“ಮಾಂಸಾಹಾರ ದರಿದ್ರ .. ಸಸ್ಯಾಹಾರ ಸೌಭಾಗ್ಯ ..”
ಮಾಂಸಾಹಾರ ಜೀವಿಗಳಿಗೆ ಜೀರ್ಣ ವ್ಯವಸ್ಥೆ ಮಾಂಸವನ್ನು ಜೀರ್ಣಿಸಿಕೊಳ್ಳುವ ರೀತಿಯಲ್ಲಿರುತ್ತದೆ. ಆದರೆ, ಮಾನವರ ಜೀರ್ಣ ವ್ಯವಸ್ಥೆ ಬೇರೆ ತರಹ ಇರುತ್ತದೆ. ಆದ್ದರಿಂದ, ಮಾನವರು ಮಾಂಸಭಕ್ಷಣೆ ಮಾಡಿದರೆ ಜೀರ್ಣವಾಗುವುದಿಲ್ಲ, ಅದರಿಂದ ಜೀರ್ಣವ್ಯವಸ್ಥೆಗೆ ಪೆಟ್ಟಾಗುತ್ತದೆ. ಅಲ್ಸರ್, ಜೀರ್ಣವ್ಯವಸ್ಥೆಗೆ ಸಂಬಂಧಿಸಿದ ಕ್ಯಾನ್ಸರ್ ಮುಂತಾದ ವ್ಯಾಧಿಗಳು ಬರುತ್ತವೆ.
ಒಂದು ಜೀವಿಯನ್ನು ಹಿಂಸಿಸುವುದರಿಂದ ಎಷ್ಟು ಜನ ಆ ಮಹಾಪಾಪಕ್ಕೆ ಭಾಗಿಗಳಾಗುತ್ತಾರೆ ? … ಅಂದರೆ … ಸಂತೋಷಿಸುವವನು .. ಕೊಲ್ಲುವವನು .. ಅವಯವಗಳನ್ನು ಕತ್ತರಿಸುವವನು .. ಮಾರುವವನು .. ಕೊಂಡುಕೊಳ್ಳುವವನು.. ಬೇಯಿಸುವವನು .. ಬಡಿಸುವವನು .. ತಿನ್ನುವವನು !!!
ಮಾಂಸ ಅಂದರೆ ವಿಷಾಹಾರ
ಮಾಂಸ ಅಂದರೆ ರಾಕ್ಷಸ ಪ್ರವೃತ್ತಿ
ಮಾಂಸ ಅಂದರೆ ಪರಮ ದರಿದ್ರ
ಮಾಂಸ ಅಂದರೆ ಹಿಂಸೆ ಕೂಳು
ಇನ್ನು ಮಾಂಸಾಹಾರವನ್ನು ಬಿಡೋಣ, ಇನ್ನು ಜೀವ ಹಿಂಸೆಗೆ ದೂರವಾಗೋಣ, ಅಹಿಂಸಾ ಧರ್ಮವನ್ನು ಹೃದಯದಲ್ಲಿ ಸ್ಥಿರವಾಗಿ ನಿಲ್ಲಿಸಿಕೊಂಡು ಗ್ರಾಮೀಣ ಪ್ರಜೆಗಳೆಲ್ಲರೂ ಭಗವಂತನ ನಿಜವಾದ ಪ್ರತಿರೂಪರಾಗಿ ರೂಪುಗೊಳ್ಳಬೇಕು. ಅದಕ್ಕಾಗಿ ಪಿರಮಿಡ್ ಮಾಸ್ಟರ್‌ಗಳೆಲ್ಲರೂ ಕಂಕಣ ಬದ್ಧರಾಗಬೇಕು.
Recent Comments