“ಧ್ಯಾನಮೇವ ಶರಣಂ ಮಮ”

ಮಾರ್ಗವು ಒಂದೇ
ಸಮಸ್ಯೆಗಳು ಎಷ್ಟೋ .. ಪರಿಹಾರ ಮಾರ್ಗ ಮಾತ್ರ ಒಂದೇ
ಪ್ರಶ್ನೆಗಳು ಎಷ್ಟೇ ಇದ್ದರೂ .. ಉತ್ತರ ಪಡೆಯುವ ಮಾರ್ಗ ಮಾತ್ರ ಒಂದೇ
ಬಲಹೀನತೆಗಳು ಎಷ್ಟೇ ಇದ್ದರೂ .. ಶಕ್ತಿ ತೆಗೆದುಕೊಳ್ಳುವ ಮಾರ್ಗ ಮಾತ್ರ ಒಂದೇ
ಸಂಶಯಗಳು ಎಷ್ಟೇ ಇದ್ದರೂ .. ನಿವೃತ್ತಿಗೊಳಿಸುವ ಮಾರ್ಗ ಮಾತ್ರ ಒಂದೇ
ಭಿನ್ನ ಭಿನ್ನ ದೃಕ್ಪಥಗಳು, ವ್ಯತ್ಯಾಸಗಳು ಎಷ್ಟೇ ಇದ್ದರೂ .. ಏಕೀಕರಣದ ಮಾರ್ಗ ಮಾತ್ರ ಒಂದೇ
ದುಃಖಗಳು ಎಷ್ಟೇ ಇದ್ದರೂ .. ದುಃಖ ನಿವಾರಣೋಪಾಯ ಮಾರ್ಗ ಮಾತ್ರ ಒಂದೇ
ಅಜ್ಞಾನರೀತಿಗಳು ಎಷ್ಟೇ ಇದ್ದರೂ .. ಜ್ಞಾನರೀತಿ ಮಾತ್ರ ಒಂದೇ

ಧ್ಯಾನ ಎನ್ನುವುದು ಸಕಲ ದುಃಖಗಳ ನಿವಾರಿಣಿ
ಭವಿಷ್ಯತ್ತಿನಲ್ಲಿ ಬರಲಿರುವ ಶಾರೀರಿಕ ರೋಗಗಳು, ಮಾನಸಿಕ ದುಃಖಗಳು ಇನ್ನು ಬರದಂತೆ ಮಾಡುವುದೇ ಧ್ಯಾನ

ಧ್ಯಾನ ಸಕಲ ಭೋಗಕಾರಿಣಿ
ಧ್ಯಾನದಿಂದ ನಮ್ಮಲ್ಲಿರುವ ದೋಷಗಳೆಲ್ಲಾ ತೊಲಗಿ, ಗುಣಗಳು ಅಭಿವೃದ್ಧಿಹೊಂದಿ
ಸಾಟಿಯಿಲ್ಲದ .. ಭೋಗಗಳ ಪರಂಪರೆಗೆ ನಾವು ವಾರಸುದಾರರಾಗುತ್ತೇವೆ
ನಮ್ಮಲ್ಲಿನ ದೋಷಗಳಿಂದ .. ರೋಗಗಳು ಸಂಭವಿಸುತ್ತವೆ .. ದುಃಖಗಳು ಉದ್ಭವಿಸುತ್ತದೆ
ನಮ್ಮಲ್ಲಿನ ಗುಣಗಳಿಂದ ಭೋಗಗಳನ್ನು ಹೊಂದಿಸಿಕೊಳ್ಳುತ್ತೇವೆ

ಧ್ಯಾನ ಸತ್ಯ ಜ್ಞಾನ ಪ್ರಸಾದಿನಿ
ಪ್ರತಿನಿತ್ಯ ಧ್ಯಾನ ಅಭ್ಯಾಸದಿಂದ ಸತ್ಯವಾದ ನಿತ್ಯವಾದ ಆತ್ಮಜ್ಞಾನವನ್ನು ಹೊಂದುತ್ತೇವೆ
ಆತ್ಮ ಎನ್ನುವುದು ನಿತ್ಯವಾದದ್ದು .. ಸತ್ಯವಾದದ್ದು
ಆತ್ಮ ಎನ್ನುವುದು ಅಜರಾಮರವಾದ್ದದ್ದು
ಆತ್ಮ ಎನ್ನುವುದು ಸನಾತನವಾದದ್ದು .. ಶಾಶ್ವತವಾದದ್ದು
ಸೃಷ್ಟಿ ಎಲ್ಲವೂ ಕೂಡಾ ಬೃಹತ್ ಆತ್ಮದ ವಿರಾಟ್ ಸ್ವರೂಪವೇ
ಸೃಷ್ಟಿ ಎಲ್ಲವೂ ಕೂಡಾ ವಿರಾಟ್ ಆತ್ಮದ ಬೃಹತ್ ಕ್ರೀಡಾ ಲೀಲಾವಿನ್ಯಾಸವೇ
“ಮಮಾತ್ಮಾ ಸರ್ವಭೂತಾತ್ಮಾ”
ಅಂದರೆ,
“ನನ್ನ ಒಂದು ಆತ್ಮವೇ .. ನಿರಂತರವಾಗಿರುವ ನಾನೇ .. ಸರ್ವಭೂತಗಳ ಒಂದು ವಿರಾಟ್ ಆತ್ಮವಾಗಿದೆ”
ಧ್ಯಾನ ಸಾಧನೆಯಿಂದ ಈ ವಿಧವಾದ “ಅನುಭವ ಜ್ಞಾನ” ನಮಗೆ ಉಂಟಾಗುತ್ತದೆ
ಆದ್ದರಿಂದಲೇ ಧ್ಯಾನ ಎನ್ನುವುದು “ಸತ್ಯಜ್ಞಾನ ಪ್ರಸಾದಿನಿ”
ಪ್ರತಿ ಸ್ತ್ರೀಗೆ, ಪ್ರತಿ ಪುರುಷನಿಗೆ .. ಪ್ರತಿ ಪಂಡಿತನಿಗೆ, ಪ್ರತಿ ಪಾಮರನಿಗೆ ..
ಪ್ರತಿ ಬಾಲಕನಿಗೆ, ಪ್ರತಿ ಬಾಲಕಿಗೆ .. ಪ್ರತಿ ಧನಿಕನಿಗೆ, ಪ್ರತಿ ಬಡವನಿಗೆ
ಪ್ರತಿ ದಿನವೂ ವಿಶೇಷವಾಗಿ ಅಗತ್ಯವಾದದ್ದೇ .. ದಿನವಹಿ ಮಾಡುವ ಧ್ಯಾನ ಸಾಧನೆ
ನಮ್ಮೆಲ್ಲರಿಗೂ ಧ್ಯಾನ ಒಂದೇ ಶರಣು
ಧ್ಯಾನಮೇವ ಶರಣಂ ಮಮ