“ಧ್ಯಾನಮಹಾಚಕ್ರ-5- ಪತ್ರೀಜಿ ಸಂದೇಶಗಳು”
ಕೈಲಾಸಪುರಿಯಲ್ಲಿ ಡಿಸೆಂಬರ್ 18 ರಿಂದ 31 ರವರೆಗೆ ಧ್ಯಾನ ಮಹಾಚಕ್ರ-5 ತುಂಬಾ ಅದ್ದೂರಿಯಾಗಿ ನಡೆದಿದೆ. ಪ್ರಾತಃಕಾಲ ಶ್ರೀ ಸರಸ್ವತೀ ಸಭಾವೇದಿಕೆಯ ಮೇಲೆ 5ರಿಂದ 7ಗಂಟೆಯವರೆಗೆ ಪತ್ರೀಜಿಯವರ ಕೊಳಲು, ಸಂಜಯ್ ಕಿಂಗಿರವರ ಸಿತಾರ್, ಗಣೇಶ್ ಕುಮಾರ್ರವರ ವಯೋಲಿನ್, ಅರುಣ್ ಕುಮಾರ್ರವರ ಮೃದಂಗ ಮತ್ತು P.ರಮಾಕಾಂತ್ರವರ ತಬಲದೊಂದಿಗೆ ಎರಡು ಗಂಟೆಗಳ ಕಾಲ ಅದ್ಭುತವಾದ ಸಂಗೀತದ ಜೊತೆ ಧ್ಯಾನ ನಡೆಯಿತು. ಧ್ಯಾನದ ನಂತರ ಪತ್ರೀಜಿಯವರು ವಿಶೇಷವಾದ ಜ್ಞಾನವನ್ನು ನೀಡಿದ್ದಾರೆ. 13ದಿನಗಳ ಪತ್ರೀಜಿಯವರು ಪ್ರತಿನಿತ್ಯ ನೀಡಿದ ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.
“ಮಾನವನು ಏಳು ಶರೀರಗಳ ಸಂಪೂರ್ಣ ಸಮುದಾಯ”
“ನಮಗೆ ಏಳು ಶರೀರಗಳಿವೆ. ಕೊನೆಯ ಶರೀರ ಅನ್ನಮಯಕೋಶ. ಅದಕ್ಕೆ ಆಧಾರವಾದದ್ದು ಮೊಟ್ಟ ಮೊದಲನೆಯದು ಪ್ರಾಣಮಯಕೋಶ. ಅದಕ್ಕೆ ಆಧಾರ ಮನೋಮಯಕೋಶ. ಅದಕ್ಕೆ ಆಧಾರ ವಿಜ್ಞಾನಮಯಕೋಶ. ಅದಕ್ಕೆ ಆಧಾರ ಆನಂದಮಯಕೋಶ. ಅದಕ್ಕೆ ಆಧಾರ ವಿಶ್ವಮಯಕೋಶ. ಅದಕ್ಕೆ ಆಧಾರ ನಿರ್ವಾಣಮಯಕೋಶ. ಈ ಏಳು ಶರೀರಗಳನ್ನು ಅರ್ಥಮಾಡಿಕೊಂಡರೆ ಮಾತ್ರ ನಮಗೆ ನಮ್ಮ ಜೀವನ, ನಮ್ಮ ಆರೋಗ್ಯ ವಿಧಾನ ಅರ್ಥವಾಗುತ್ತದೆ. ನಾವು ಏಳು ಶರೀರಗಳಿಂದ ಕೂಡಿದ ಒಂದು ಅಸ್ತಿತ್ವವಾಗಿದ್ದೇವೆ. ಏಳು ಬಣ್ಣಗಳು ಸೇರಿ ಒಂದು ಬಿಳಿಯ ಬಣ್ಣ ಹೇಗಾಗುತ್ತದೆಯೋ, ಆ ಬಿಳಿಯ ಬಣ್ಣವನ್ನು ವಿಕೇಂದ್ರೀಕರಣ ಮಾಡಿದರೆ ಏಳು ಬಣ್ಣಗಳು ಹೇಗೆ ಬರುತ್ತವೋ ಹಾಗೆಯೇ ನಾವು ಏಳು ಶರೀರಗಳ ಸಮುದಾಯವಾಗಿದ್ದೇವೆ”. ಈ ಏಳು ಶರೀರಗಳ ಬಗ್ಗೆ ತಿಳಿದುಕೊಳ್ಳಬೇಕೆಂದರೆ, ಥಿಯೋಸಾಫಿಕಲ್ ಪುಸ್ತಕಗಳನ್ನು ಓದಬೇಕು. ಥಿಯೋಸಾಫಿಕಲ್ ಸೊಸೈಟಿಯು ಕರ್ನಲ್ ಆಲ್ಕಾಟ್, ಬ್ಲವಾಟ್ಸ್ಕೀಯವರಿಂದ ಸಂಸ್ಥಾಪನೆಗೊಂಡಿತು. ಈ ದಿನದ ಸಂದೇಶದ ಮೂಲಕ ಥಿಯೊಸಾಫಿಕಲ್ ಸೊಸೈಟಿಯ ಹಿರಿಮೆಯನ್ನು ಗುರುತಿಸೋಣ. ಹೆಲೆನಾ ಪೆಟ್ರೋನಾ ಬ್ಲಾವಾಟ್ಸ್ಕಿಯು ಒಬ್ಬ ಯೋಗಿನಿ, ಒಬ್ಬ ಶ್ರೇಷ್ಠ ಮಾಸ್ಟರ್. ಅವರು ರಷ್ಯಾ ದೇಶದವರು ಹಿಮಾಲಯ ಯೋಗಿಗಳ ಸಂಪರ್ಕದಲ್ಲಿದ್ದವರು. ಭಾರತದೇಶಕ್ಕೆ ಬಂದು ಮದ್ರಾಸ್ ನಗರದ ಅಡೆಯಾರ್ನಲ್ಲಿ ಥಿಯೋಸಾಫಿಕಲ್ ಸೊಸೈಟಿಯನ್ನು ಸ್ಥಾಪಿಸಿದರು. ಅನಿಬಿಸೆಂಟ್ ಅದಕ್ಕೆ ಅಧ್ಯಕ್ಷರಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಗೂ ಅವರು ಅಧ್ಯಕ್ಷರಾಗಿದ್ದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದೊಂದಿಗೂ ಅವರಿಗೆ ಸಂಬಂಧವಿತ್ತು. ಭಾರತದೇಶವು ಹೆಮ್ಮಪಡಬಹುದಾದ ಮಹಿಳೆ ಅನಿಬಿಸೆಂಟ್. ಲೆಡ್ಬೀಟರ್, ಅವರೂ ಸಹ ಶ್ರೇಷ್ಠ ಮಾಸ್ಟರ್. ಅವರು ಅತ್ಯದ್ಭುತವಾದ ಪುಸ್ತಕ ಬರೆದಿದ್ದಾರೆ ಸೂಕ್ಷ್ಮಶರೀರ, ಕಾರಣಶರೀರ, ಪ್ರಾಣಮಯಶರೀರ ಎಂಬುದು ಅದರ ಹೆಸರು. ನೀವೆಲ್ಲಾ ಆ ಪುಸ್ತಕವನ್ನು ಓದಬೇಕು, ಇದು ಆಧ್ಯಾತ್ಮಿಕ ಶಾಸ್ತ್ರ. ಪುಸ್ತಕಗಳನ್ನು ಓದದಿದ್ದರೆ ಬುದ್ಧಿ ವಿಕಾಸವಾಗುವುದಿಲ್ಲ. ಏಳು ಶರೀರಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಥಿಯೋಸಾಫಿಕಲ್ ಸೊಸೈಟಿಯನ್ನು ನಮ್ಮ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿ ಮೂವ್ಮೆಂಟ್ನ ಒಂದು ಪ್ರಮುಖ ಆಧಾರಸ್ಥಂಭ ಎಂದು ಪರಿಗಣಿಸಬಹುದು. ನಾನು ಆ ಥಿಯೋಸಾಫಿಕಲ್ ಪುಸ್ತಕಗಳನ್ನೆಲ್ಲಾ ಓದಿದ್ದೇನೆ.
ನಾನು ಎಲ್ಲ ಸೇರಿ ಒಂದು ಲಕ್ಷ ಪುಸ್ತಕಗಳನ್ನು ಓದಿದ್ದೇನೆ. ಅದು ಮುಖ್ಯವಾಗಿ ಏಳು ಶರೀರಗಳ ಬಗ್ಗೆ. “ನಾವು ಏಳು ಶರೀರಗಳ ಸಮುದಾಯವೆಂದು ನಾವು ಗುರುತಿಸಿಕೊಂಡು, ನಮ್ಮ ಬಗ್ಗೆ ನಾವು ತಿಳಿದುಕೊಂಡು ನಮ್ಮಲ್ಲಿ ನಾವು ಏಕವಾಗಿ ನಮ್ಮ ಆರೋಗ್ಯ ಸರಿಮಾಡಿಕೊಳ್ಳುತ್ತೇವೆ. ಇಲ್ಲದಿದ್ದರೆ ನಮ್ಮ ಆಯುಷ್ಯವನ್ನು ಹೆಚ್ಚಿಸಿಕೊಳ್ಳಲಾರೆವು”.
“ಐದು ಬೆರಳುಗಳಲ್ಲಿ ಆಧ್ಯಾತ್ಮಿಕ ಸತ್ಯಗಳು”
“ಈ ದಿನ ಐದು ಬೆರಳುಗಳ ಪರಿಕಲ್ಪನೆ ಬಗ್ಗೆ ತಿಳಿದುಕೊಳ್ಳೋಣ. ಶರೀರ, ಮನಸ್ಸು, ಬುದ್ಧಿ, ಶ್ವಾಸ, ನಾನು – ಇವುಗಳು ಒಂದೊಂದು ಬೆರಳಿಗೆ ಸಂಕೇತಗಳು ಎಂದು ಇಟ್ಟುಕೊಳ್ಳೋಣ. ಆಂಗ್ಲದಲ್ಲಿ body, mind, intellect, breath,me.ಈ ಶರೀರ ನಮಗೆ ಎಲ್ಲಿಂದ ಬಂದಿದೆ? ತಂದೆತಾಯಂದಿರಿಂದ ಬಂದಿದೆ. ಮನಸ್ಸು ಎಲ್ಲಿಂದ ಬಂದಿದೆ? ನಮ್ಮ ಸಮಾಜದಿಂದ. ನಮ್ಮನ್ನು ಯಾರು ಬೆಳೆಸಿ, ಪೋಷಿಸಿದ್ದಾರೋ, ಆ ಸಂಘದ ಮನಸ್ಸಿನ ಒಂದು ಕನ್ನಡಿ ನಮ್ಮ ಮನಸ್ಸು. The mind of the society is your mind. ನೀವು ಹಿಂದುಗಳಲ್ಲಿ ಹುಟ್ಟಿದರೆ ಹಿಂದುವಿನ ಮನಸ್ಸು ಬರುತ್ತದೆ. ಮುಸ್ಲಿಂ ಮನೆತನದಲ್ಲಿ ಹುಟ್ಟಿದರೆ ಇಸ್ಲಾಂ ಮನಸ್ಸು ಬರುತ್ತದೆ. ಒಬ್ಬ ನಾಸ್ತಿಕ ಕಮ್ಯುನಿಸ್ಟ್ ಮನೆತನದಲ್ಲಿ ಹುಟ್ಟಿದರೆ ಅಂತಹ ಮನಸ್ತತ್ವ ಬರುತ್ತದೆ. ಒಬ್ಬ ಪಿರಮಿಡ್ ಮಾಸ್ಟರ್ ಮನೆಯಲ್ಲಿ ಹುಟ್ಟಿದರೆ ಆಗ ಆ ಪಿರಮಿಡ್ ಮಾಸ್ಟರ್ ಮನಸ್ಸು ಬರುತ್ತದೆ. ಒಬ್ಬ ಬುದ್ಧನ ಬಳಿ ಹುಟ್ಟಿದರೆ ಆ ಬುದ್ಧನ ಮನಸ್ಥಿತಿ ಬರುತ್ತದೆ. ಶರೀರ, ಮನಸ್ಸು, ಬುದ್ಧಿ. ಬುದ್ಧಿ ಎಲ್ಲಿಂದ ಬರುತ್ತದೆ? ಬುದ್ಧಿ ಕರ್ಮಾನುಸಾರಿಣಿ. ನೀವು ಕರ್ಮಗಳು ಹೇಗೆ ಮಾಡುತ್ತೀರೋ ನಿಮ್ಮ ಬುದ್ಧಿ ಹಾಗೇ ಇರುತ್ತದೆ. ’ಶರೀರವು ಮಾತಾಪಿತಾನುಸಾರಿಣಿ’, ’ಮನಸ್ಸು ಸಮಾಜಾನುಸಾರಿಣಿ’, ’ಬುದ್ಧಿ ಕರ್ಮಾನುಸಾರಿಣಿ’, ಅನೇಕ ಜನ್ಮಗಳಿಂದ ನಾವು ಕರ್ಮಗಳನ್ನು ಮಾಡುತ್ತಾ ಬಂದಿದ್ದೇವೆ. ಸಕಲ ಕರ್ಮಗಳ ಸಾರವೇ ಈಗ ನಮಗೆ ಇರುವ ಬುದ್ಧಿ”.
ಪಾಂಡವರು, ಕೌರವರು ಒಂದೇ ಕುಟುಂಬದಲ್ಲಿ ಹುಟ್ಟಿದರು, ಆದರೆ ಪಾಂಡವರ ಬುದ್ಧಿ ಬೇರೆ ಕೌರವರ ಬುದ್ಧಿ ಬೇರೆ. ಹಾಗೆಯೇ ಶ್ರೀಕೃಷ್ಣ ಕೂಡಾ ಅದೇ ಮನೆತನದಲ್ಲಿ ಹುಟ್ಟಿದ. ಆದರೆ, ಶ್ರೀಕೃಷ್ಣನ ಬುದ್ಧಿ ಬೇರೆ. ಮೂರು ವಿಧವಾದ ಬುದ್ಧಿಗಳಿವೆ. ಕೌರವ ಬುದ್ಧಿ, ಪಾಂಡವ ಬುದ್ಧಿ, ಶ್ರೀಕೃಷ್ಣನ ಬುದ್ಧಿ. ಕೌರವರ ಬುದ್ಧಿ ಹಾಗೇಕೆ ಇದೆ? ಪಾಂಡವರ ಬುದ್ಧಿ ಹಾಗೇಕೆ ಇದೆ? ಶ್ರೀಕೃಷ್ಣನ ಬುದ್ಧಿ ಹಾಗೇಕೆ ಇದೆ? ಗತಜನ್ಮದ ಅನುಸಾರವಾಗಿ ಈ ಜನ್ಮದ ಬುದ್ಧಿ ಇರುತ್ತದೆ. ಅದಕ್ಕಾಗಿಯೇ ಹೇಳುವುದು ಬುದ್ಧಿಯು ಕರ್ಮಾನುಸಾರಿಣಿ. ಎಷ್ಟೋ ಜನ್ಮಗಳು ಕರ್ಮ ಮಾಡಿದರೆ ಮಾತ್ರ ಆ ಒಂದು ಸಾರವು ಬುದ್ಧಿಯಾಗಿ ಬರುತ್ತದೆ.
ಕೌರವರು ಕಡಿಮೆ ಜನ್ಮಗಳನ್ನು ತೆಗೆದುಕೊಂಡಿದ್ದಾರೆ ಅದಕ್ಕಾಗಿಯೇ ಅವರಿಗೆ ಅಂತಹ ಬುದ್ಧಿಯಿದೆ. ಪಾಂಡವರು ಹೆಚ್ಚು ಜನ್ಮಗಳನ್ನು ತೆಗೆದುಕೊಂಡಿದ್ದಾರೆ ಅದಕ್ಕಾಗಿಯೇ ಅವರಿಗೆ ಆ ಬುದ್ಧಿಯಿದೆ. ಕೃಷ್ಣನು ಬಹಳಷ್ಟು ಜನ್ಮಗಳ ಧ್ಯಾನಸಾಧನೆ ಮಾಡಿ ಅಂತಹ ಬುದ್ಧಿಯನ್ನು ಸಂಪಾದಿಸಿಕೊಂಡಿದ್ದಾನೆ.
ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದತ್ಯೇ |
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ||
ನಾವು ಎಷ್ಟೋ ಜನ್ಮಗಳನ್ನು ತೆಗೆದುಕೊಂಡ ನಂತರ ಕೊನೆಗೆ ಈ ಒಂದು ಧ್ಯಾನಕ್ಕೆ, ಜ್ಞಾನಕ್ಕೆ ಬರುತ್ತೇವೆ. ಮೊಟ್ಟ ಮೊದಲನೆಯ ಜನ್ಮದಲ್ಲೇ ಬರಲಾರೆವು ಅಲ್ಲವೇ.
ಮೈ ಡಿಯರ್ ಫ್ರೆಂಡ್ಸ್, ಮೈ ಡಿಯರ್ ಮಾಸ್ಟರ್ಸ್, ಮೈ ಡಿಯರ್ ಗಾಡ್ಸ್, ನಿನ್ನೆ ಏಳು ಶರೀರಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ಏಳು ಸ್ಥಿತಿಯಲ್ಲಿರುವ ಆತ್ಮಗಳನ್ನು ತಿಳಿದುಕೊಳ್ಳೋಣ: 1)ಶೈಶವಾತ್ಮ, 2)ಬಾಲಾತ್ಮ 3)ಯುವಾತ್ಮ, 4)ಪ್ರೌಢಾತ್ಮ 5)ವೃದ್ಧಾತ್ಮ 6)ವಿಮುಕ್ತಾತ್ಮ7)ಪರಮಾತ್ಮ. ಮೊಟ್ಟಮೊದಲು ಹುಟ್ಟಿದಾಗ ನಾವೆಲ್ಲರೂ “ಶೈಶವಾತ್ಮರು”, ABCDಕಲಿತುಕೊಳ್ಳುತ್ತೇವೆ. ನಂತರ ಕೆಲವು ಜನ್ಮಗಳಾದ ಬಳಿಕ “ಬಾಲಾತ್ಮ”ರಾಗುತ್ತೇವೆ, ಆಗ EFGH ಕಲಿತುಕೊಳ್ಳುತ್ತೇವೆ. ನಂತರ ಕೆಲವು ಜನ್ಮಗಳಿಲ್ಲಿ ನಾವು “ಯುವಾತ್ಮ”ರಾಗುತ್ತೇವೆ, IJKLಕಲಿತುಕೊಳ್ಳುತ್ತೇವೆ. ಕೆಲವು ಜನ್ಮಗಳಾದ ನಂತರ ಇನ್ನೂ ಕೆಲವು ಜನ್ಮಗಳಲ್ಲಿ “ಪ್ರೌಢಾತ್ಮ”ರಾಗಿ, MNOP ಕಲಿಯುತ್ತೇವೆ. ಇನ್ನೂ ಕೆಲವು ಜನ್ಮಗಳಾದ ನಂತರ ನಾವು ವೃದ್ಧಾತ್ಮ, “ವಿಮುಕ್ತಾತ್ಮ”ರಾಗುತ್ತೇವೆ. ಕೊನೆಯ ಜನ್ಮದಲ್ಲಿ ಪ್ರತಿಯೊಬ್ಬರೂ “ಪರಮಾತ್ಮ” ಸ್ಥಿತಿಗೆ ಸೇರಲೇಬೇಕು, ಸೇರುತ್ತಾರೆ ಕೂಡಾ. ಹುಟ್ಟಿದ ಪ್ರತಿ ಮಗುವು ಹೇಗೆ ಬೆಳೆದು ದೊಡ್ಡದಾಗುತ್ತದೋ ಹಾಗೆ, ಹುಟ್ಟಿದ ಪ್ರತಿ ಆತ್ಮ ಕೂಡಾ (ಅಂದರೆ ಪೂರ್ಣಾತ್ಮದಿಂದ ಆ ಆತ್ಮ ಬರುತ್ತದೆ) ಪರಮಾತ್ಮ ಸ್ಥಿತಿಗೆ ಸೇರುತ್ತದೆ. ಧ್ಯಾನ ಮಹಾಚಕ್ರದಲ್ಲಿ ಆತ್ಮಜ್ಞಾನ, ಆತ್ಮವಿಜ್ಞಾನವನ್ನು ಕಲಿತುಕೊಳ್ಳಲು ಬಂದಿದ್ದೇವೆ. ನಾವು ಪ್ರತಿಯೊಬ್ಬರೂ ಒಬ್ಬೊಬ್ಬ ಆಧ್ಯಾತ್ಮಿಕ ವಿಜ್ಞಾನಿಯಾಗಬೇಕು.
ಏಳು ಬಣ್ಣಗಳಂತೆ ಏಳು ಶರೀರಗಳಿವೆ. ಏಳು ಸಮುದ್ರಗಳಾಚೆ, ಏಳು ಬೆಟ್ಟಗಳಾಚೆ ಒಂದು ಪ್ರಾಣಪಕ್ಷಿ ಇರುತ್ತದೆ. ನಾವು ಕೂಡಾ ಏಳು ಶರೀರಗಳಿಂದ ಕೂಡಿದ ಒಂದೇ ವಿಧವಾಗಿದ್ದೇವೆ. ನಾವೆಲ್ಲಾ ಒಂದೇ. ನಾವೆಲ್ಲಾ ಒಂದೇ ಬೃಹತ್ ಆತ್ಮರು. ಏಳು ಶರೀರವುಳ್ಳವರಾಗಿ ವಿರಾಜಿಸುತ್ತಿದ್ದೇವೆ. ಕೊನೆಯ ಶರೀರ ಅನ್ನಮಯ ಶರೀರ, ನಂತರ ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ, ವಿಶ್ವಮಯ, ನಿರ್ವಾಣಮಯಶರೀರ. ಹಾಗೆಯೇ ಮೊದಲಲ್ಲಿ ನಾವೆಲ್ಲಾ ಶೈಶವಾತ್ಮರು ನಂತರ ಬಾಲಾತ್ಮ, ಯುವಾತ್ಮರು, ಪ್ರೌಢಾತ್ಮರು, ವೃದ್ಧಾತ್ಮ, ಆನಂತರ ವಿಮುಕ್ತಾತ್ಮರೇ. ಎಲ್ಲರೂ ಪರಮಾತ್ಮರೇ. ಜನ್ಮಗಳಲ್ಲಿ ವ್ಯತ್ಯಾಸವಷ್ಟೇ. ಹೀಗೆ ಪ್ರತಿ ಆತ್ಮವು ಶೈಶವಾತ್ಮದಿಂದ ಆರಂಭಗೊಂಡು ಕೆಲವು ನೂರು ಜನ್ಮಗಳಲ್ಲಿ, ಕೊನೆ ಜನ್ಮದಲ್ಲಿ ಪರಮಾತ್ಮವಾಗುತ್ತದೆ. ಯಾವಾಗ ನಾವು ಪರಮಾತ್ಮರಾಗುತ್ತೇವೋ ಆಗ ಮತ್ತೆ ಹುಟ್ಟುವುದಿಲ್ಲ. ಅಲ್ಲಿಯವರೆಗೂ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತೇವೆ. ’ಪುನರಪಿ ಮರಣಂ ಪುನರಪಿ ಜನನಂ’. ಪ್ರತಿಯೊಂದು ಬಾರಿ ನಾವು ಸ್ವಲ್ಪ ಸ್ವಲ್ಪ ಕಲಿತುಕೊಂಡು ಹೋಗುತ್ತಿರುತ್ತೇವೆ. ಪ್ರತಿಯೊಬ್ಬರೂ ಕೂಡಾ, ಪ್ರತಿಯೊಂದು ಬಾರಿ ಕಲಿತುಕೊಳ್ಳುತ್ತಾ ಇರುತ್ತಾರೆ. ಎಲ್ಲಿಯವರೆಗೆ ಎಂದರೆ ಒಬ್ಬ ತಾನು ಪರಮಾತ್ಮನಾಗುವವರೆಗೂ. ನಾವೆಲ್ಲಾ ಆತ್ಮವಿಜ್ಞಾನ ಶಾಸ್ತ್ರಜ್ಞರಾಗಬೇಕು.
ಶ್ವಾಸವು ಪ್ರಕೃತಿ ಅನುಸಾರಿಣಿ, ಮೂಲ ಪ್ರಕೃತಿ. ಪೂರ್ಣಾಸ್ತಿತ್ವದ ಮೂಲಭೂತ ಚೈತನ್ಯಶಕ್ತಿಯನ್ನು ಈ ಉಸಿರು ಪ್ರತಿನಿಧಿಸುತ್ತದೆ. ನಮಗೆ ಐದು ಬೆರಳುಗಳು. ನಾಲ್ಕು ಬೆರಳುಗಳು ಒಂದು ಕಡೆ ಇದ್ದರೆ ಹೆಬ್ಬೆರಳು ಮಾತ್ರ ಒಂದು ಕಡೆ ಇರುತ್ತದೆ. ಶರೀರ, ಮನಸ್ಸು, ಬುದ್ಧಿ, ಶ್ವಾಸ ಒಂದು ಕಡೆ ಇದೆ. ನಾನು ಬೆಂಬುದು ಬೇರೆಯಾಗಿದೆ, ಅದು ಬೇರೆ ಬೆರಳಿಗಳೊಂದಿಗೆ ಒಂದಾಗಿಲ್ಲ. ನಾನು ಎಂಬುದು ಯಾವಾಗಲೂ ಸಾಕ್ಷಿಯಾಗಿರುತ್ತದೆ. ಅದೇ ಅರಿವು, ಚೈತನ್ಯ. ಇದು ಶರೀರವನ್ನು ಹೊಂದಿಲ್ಲ. ನಾನು ಎನ್ನುವುದು ಬೇರೆಯಾಗಿದೆ. ಧ್ಯಾನವೆಂದರೆ ಏನು, ಹೇಗೆ ಮಾಡಬೇಕು ಎಂದು ಕಲಿತಿದ್ದೇವೆ. ಮೂರು ಬೆರಳನ್ನು ಬಿಡಬೇಕು, ಎರಡು ಬೆರಳನ್ನು ಹಿಡಿದುಕೊಳ್ಳಬೇಕು. ಶರೀರ, ಮನಸ್ಸು, ಬುದ್ಧಿ, ಶ್ವಾಸ ಮತ್ತು ನಾನು. ಶ್ವಾಸ, ನಾನು ಎಂಬ ಎರಡು ಬೆರಳನ್ನು ಹಿಡಿದುಕೊಳ್ಳಿ, ಉಳಿದಿರುವ ಮೂರು ಬೆರಳನ್ನು ಬಿಡಿ, ಇದೇ ಧ್ಯಾನ.
ನಿಮ್ಮ ಶರೀರದ ಬಗ್ಗೆ ಆಲೋಚಿಸದೆಯೇ, ನಿಮ್ಮ ಮನಸ್ಸಿನ ಬಗ್ಗೆ ಆಲೋಚಿಸದೆಯೇ, ಬುದ್ಧಿಯ ಬಗ್ಗೆ ಆಲೋಚಿಸದೆಯೇ ಪ್ರಕೃತಿಯೊಂದಿಗೆ ಚೈತನ್ಯವು, ಅರಿವು ಎರಡೂ ಬೆರೆಯಬೇಕು. ಶ್ವಾಸ ಮತ್ತು ಚೈತನ್ಯ ಎರಡೂ ಬೇಕು. ಆಗ ನನ್ನ ಶರೀರ, ನನ್ನ ಮನಸ್ಸು, ಇದು ನನ್ನ ಬುದ್ಧಿ, ಇದು ನನ್ನ ಶ್ವಾಸ, ಇದು ನಾನು, ನನ್ನ ಧ್ಯಾನ. ಯಾವಾಗ ಶ್ವಾಸದೊಂದಿಗೆ ಅನುಸಂಧಾನರಾಗುವಿರೋ, ವಿಶ್ವದಲ್ಲಿರುವ ಶಕ್ತಿಯೆಲ್ಲಾ ಒಂದಾಗಿ, ಸಂಪೂರ್ಣವಾಗಿ ಆ ಶಕ್ತಿಯೆಲ್ಲಾ ಆಕಾಶಗಂಗೆ ಎಂಬ ಕಾಸ್ಮಿಕ್ ಎನರ್ಜಿ ಎಲ್ಲಾ ನಮ್ಮೊಳಗೆ ಪ್ರವಹಿಸಿ ಶರೀರದೊಳಗೆ ಹೋಗಿ, ಅಲ್ಲಿಂದ ಮನಸ್ಸಿನೊಳಗೆ ಹೋಗಿ ಅಲ್ಲಿಂದ ಬುದ್ಧಿಯೊಳಗೆ ಹೋಗಿ ಶರೀರವೆಲ್ಲಾ ವ್ಯಾಪಿಸಿ ನಿರೋಗವಾಗಿ, ಮನಸ್ಸೆಲ್ಲಾ ಆನಂದಮಯವಾಗಿ ಬುದ್ಧಿ ಪ್ರಕಾಶಮಾನವಾಗುತ್ತದೆ.
ಯಾವ ವಿಗ್ರಹವನ್ನು ನೋಡಿದರೂ ಚಿನ್ಮುದ್ರೆಯಲ್ಲಿರುತ್ತದೆ. ಇದರ ಅರ್ಥವೇನೆಂದರೆ – ನಾನು, ನನ್ನ ಶ್ವಾಸ ಯಾವಾಗಲೂ ಏಕವಾಗಿರುತ್ತೇವೆ. ಯಾವಾಗಲೂ ಧ್ಯಾನದಲ್ಲಿರುತ್ತೇನೆ. ಶರೀರ, ಮನಸ್ಸು, ಬುದ್ಧಿಯನ್ನು ತ್ಯಜಿಸಿದ್ದೇನೆ ಎಂಬುದು ಇದರರ್ಥ. ಯಾರು ಶ್ವಾಸ ಮತ್ತು ನಾನು ಎಂಬುದರಲ್ಲಿ ಏಕವಾಗುತ್ತಾರೋ, ಈ ಮೂರು ಲೋಕಗಳಿಗೆ ಅಧಿಪತಿಯಾಗುತ್ತಾರೆ (ಶರೀರ, ಮನಸ್ಸು, ಬುದ್ಧಿ). ತ್ರಿಲೋಕಾಧಿಪತಿಯಾಗುತ್ತಾರೆ. ಶರೀರ ಚೆನ್ನಾಗಿರುತ್ತದೆ, ಮನಸ್ಸು ಹಾಯಾಗಿರುತ್ತದೆ, ಬುದ್ಧಿ ಯಾವಾಗಲೂ ಪ್ರಕಾಶಮಾನವಾಗಿ, ವೈಜ್ಞಾನಿಕವಾಗಿರುತ್ತದೆ.
ಧ್ಯಾನ ಎಂಬುವುದು ಅತ್ಯಂತ ಮುಖ್ಯವಾದ ವಿಚಾರ ಪ್ರತಿದಿನ, ಪ್ರತಿಯೊಬ್ಬರೂ ಧ್ಯಾನ ಮಾಡಲೇಬೇಕು. ಬೆಳಗ್ಗೆಯಾಗಲಿ, ಮಧ್ಯಾಹ್ನ, ಸಾಯಂಕಾಲ, ರಾತ್ರಿಯಾಗಲಿ ಯಾವ ಸಮಯವಾದರೂ ಧ್ಯಾನ. ಕಣ್ಣೆರೆಡು ಮುಚ್ಚಿ ಶ್ವಾಸದ ಮೇಲೆ ಗಮನವಿಡಿ. ನೀವು ಧ್ಯಾನವನ್ನು ಮಾಡಿದರೆ ಎಲ್ಲರೂ ಮಾಡುತ್ತಾರೆ. ನಾನೊಬ್ಬನೇ ಶುರು ಮಾಡಿದೆ. ಈಗ ನೀವು ಇಷ್ಟು ಜನ ಬಂದಿದ್ದೀರಿ. ನಾನು ಮಾಡಿರದಿದ್ದರೆ ನೀವು ಬರುತ್ತಿರಲಿಲ್ಲ. ಆದ್ದರಿಂದ ನಾವು ಮಾಡಿದರೆ ನಮ್ಮ ಪಕ್ಕದ ಮನೆಯವರು ಮಾಡುತ್ತಾರೆ. ಕಡ್ತಾಲ್ನಲ್ಲಿ ಧ್ಯಾನ ಮಾಡಿದರೆ, ಸುತ್ತಮುತ್ತಲಿರುವ ಗ್ರಾಮದಲ್ಲೂ ಧ್ಯಾನ ಮಾಡುತ್ತಾರೆ. ನಿನ್ನ ರೋಗ ನಿನ್ನಿಂದಲೇ ಬಂದಿದೆ, ನಿನ್ನಿಂದಲೇ ಹೋಗುತ್ತದೆ. ಎಲ್ಲಾ ನೋವುಗಳೂ, ಕ್ಯಾನ್ಸರ್, B.P., ಸಂಧಿವಾತ ಎಲ್ಲವೂ ನಿನ್ನಿಂದಲೇ ಬಂದಿದೆ. ಅವು ನಿನ್ನ ಪ್ರಯತ್ನದಿಂದಲೇ ಹೋಗುತ್ತದೆ. ಆದ್ದರಿಂದ, ನಿಮ್ಮನ್ನು ನೀವೇ ಗುಣಪಡಿಸಿಕೊಳ್ಳಬೇಕು. ನಿನ್ನ ಧ್ಯಾನವೇ ನಿನ್ನನ್ನು ಗುಣಮುಖನನ್ನಾಗಿಸುತ್ತದೆ.
“ಏಳು ಳೋಕಗ್ಳು”
ಎಲ್ಲೆಲ್ಲೂ ಪಿರಮಿಡ್ಗಳು ಸಿಗುವಂತಾಗಬೇಕು. ಎಲ್ಲರೂ ಪಿರಮಿಡ್ಗಳನ್ನು ಕಟ್ಟಿಸಬೇಕು.
ಶ್ವಾಸದೊಂದಿಗೆ ಏಕವಾಗುವ ಪ್ರಕ್ರಿಯೆಯೇ ಧ್ಯಾನ ಮನುಷ್ಯನಿಗೆ ಬೇಕಾದದ್ದು. ಧ್ಯಾನ ಎನ್ನುವ ಕಾನ್ಸೆಪ್ಟ್ ನಾವು ಬುದ್ಧನನ್ನು ಆದರ್ಶವಾಗಿ ಇಟ್ಟುಕೊಂಡಿದ್ದೇವೆ. ಇದು ಮಹೇಶ್ವರ ಪಿರಮಿಡ್ ಪ್ರಾಂಗಣ. ಮಹೇಶ್ವರ ಏನು ಮಾಡಿದ? ಬುದ್ಧ ಏನು ಮಾಡಿದ? ಅವರು ತಮ್ಮ ಧ್ಯಾನದಲ್ಲಿ ತಾವು ಮುಳುಗಿರುತ್ತಾರೆ. ನೀರಿನಲ್ಲಿ ಮುಳುಗಿದರೆ ಸ್ನಾನ, ಶ್ವಾಸದಲ್ಲಿ ಮುಳುಗಿದರೆ ಧ್ಯಾನ. ನಾವು ಸತ್ಯದಲ್ಲಿ ಮುಳುಗಿದರೆ ಜ್ಞಾನ. ನಾವು ಸತ್ಯವನ್ನು ಹೇಗೆ ತಿಳಿದುಕೊಳ್ಳಬೇಕೆಂದರೆ, ಧ್ಯಾನ ಮಾಡಿದರೆ ನಮಗೆ ತಿಳಿಯುತ್ತದೆ.
ನಾನು ಈ ಜನ್ಮದಲ್ಲಿ ಒಬ್ಬ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದೆನು. ಗತಜನ್ಮದಲ್ಲಿ ನಾನೊಬ್ಬ ಸೂಫಿ ಮಾಸ್ಟರ್ ನನ್ನ ಹೆಸರು ಹಜ್ರತ್ ಇನಾಯತ್ ಖಾನ್. ಅದಕ್ಕೆ ಮುಂಚೆ ನಾನು ಅಮೇರಿಕಾದಲ್ಲಿ ಹುಟ್ಟಿದ್ದೆ. ಆಗ ನನ್ನ ಹೆಸರು ಬೆಂಜಮಿನ್ ಫ್ರಾಂಕ್ಲಿನ್. ನಾವೆಲ್ಲರೂ ಎಷ್ಟೋ ಜನ್ಮಗಳನ್ನು ತಿಳಿದುಕೊಳ್ಳುವುದೇ ಆತ್ಮಜ್ಞಾನ. ಅದು ಧ್ಯಾನದಲ್ಲಿ ನಮಗೆ ಗೊತ್ತಾಗುತ್ತದೆ.
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಚುನ |
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂಪತ ||
“ಓ ಅರ್ಜುನ ನೀನು ನಾನು ಎಷ್ಟೋ ಜನ್ಮಗಳನ್ನು ತೆಗೆದುಕೊಂಡಿದ್ದೇವೆ. ಅದು ನನಗೆ ಗೊತ್ತು”. ಆದರೆ ನಿನಗೆ ಅದರ ಅರಿವಿಲ್ಲ. ನನಗೆ ನನ್ನ ಜನ್ಮಗಳು ಗೊತ್ತು. ಅದೇ ವ್ಯತ್ಯಾಸ ಅರ್ಜುನನಿಗೆ, ಕೃಷ್ಣನಿಗೆ. ನರನಿಗೆ, ನಾರಾಯಣನಿಗೆ. ಪ್ರತಿ ನರನು ತನ್ನನ್ನು ತಾನು ಶರೀರವೆಂದುಕೊಳ್ಳುತ್ತಾನೆ. ನಾರಾಯಣನು ತನ್ನನ್ನು ತಾನು ’ಅಹಂ ಬ್ರಹ್ಮಾಸ್ಮಿ’ ಎಂದು ತಿಳಿದುಕೊಂಡಿದ್ದಾನೆ. ಅಹಂ ದೇಹೋಸ್ಮಿ ಎಂದು ನರನು ಅಂದುಕೊಳ್ಳುತ್ತಿದ್ದಾನೆ. ಪ್ರತಿ ಮಗುವು ದೊಡ್ಡವನಾದಂತೆ ಪ್ರತಿ ನರನು ನಾರಾಯಣನಾಗುತ್ತಾನೆ. ಒಂದು ಜನ್ಮದಲ್ಲಿ ಆಗದಿದ್ದರೆ ಮತ್ತೊಂದು ಜನ್ಮದಲ್ಲಿ. ಯಾವ ಜನ್ಮದಲ್ಲಿ ನಾವು ನಾರಾಯಣರಾಗುತ್ತೇವೋ ಆ ಜನ್ಮ ನಮಗೆ ಕೊನೆಯ ಜನ್ಮವಾಗುತ್ತದೆ. ಆನಂತರ ನಾವು ಮತ್ತೆ ಹುಟ್ಟುವ ಅಗತ್ಯವಿಲ್ಲ.
ಆಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋರ್ಜುನ |
ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ||
“ಓ ಅರ್ಜುನ ನೀನು ಬ್ರಹ್ಮಲೋಕಕ್ಕೆ ಹೋದರೂ ಮತ್ತೆ ಮತ್ತೆ ಬರುತ್ತೀಯಾ. ನಾನಿರುವ ಸ್ಥಿತಿಗೆ ಅಂದರೆ ಸತ್ಯಲೋಕಕ್ಕೆ ಹೋದರೆ ನೀನು ಮತ್ತೆ ಬರುವ ಅವಶ್ಯಕತೆಯಿಲ್ಲ”.
ಈ ಧ್ಯಾನಮಹಾಚಕ್ರದ ಮೊದಲನೆಯ ದಿನ ಏಳು ಶರೀರಗಳ ಬಗ್ಗೆ ತಿಳಿದುಕೊಂಡೆವು. ನಂತರ, ಎರಡನೆಯ ದಿನ ಏಳು ಆತ್ಮಸ್ಥಿತಿಗಳನ್ನು ತಿಳಿದುಕೊಂಡೆವು. ಈ ದಿನ, ಅಂದರೆ, ಮೂರನೆಯದಿನ, ಏಳು ಲೋಕಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ಭೂಲೋಕ, ಭುವರ್ಲೋಕ, ಸುವರ್ಲೋಕ, ಜನಾಲೋಕ, ಮಹಾಲೋಕ, ತಪೋಲೋಕ ಮತ್ತು ಸತ್ಯಲೋಕ, ಇವು ಏಳು ಲೋಕಗಳು. ತಪೋಲೋಕವನ್ನು ಬ್ರಹ್ಮಲೋಕವೆಂದೂ ಹೇಳುತ್ತಾರೆ. ಆದ್ದರಿಂದ ಆ ತಪೋಲೋಕಕ್ಕೆ ಹೋದರೆ ಮತ್ತೆ ಈ ಭೂಲೋಕಕ್ಕೆ ಬರಬೇಕು ಎಂದು ಭಗವದ್ಗೀತೆಯಲ್ಲಿ ವೇದವ್ಯಾಸರು ಶ್ರೀಕೃಷ್ಣನ ಮೂಲಕ ಪಾತ್ರವನ್ನು ಸೃಷ್ಟಿಸಿ ಈ ವಿಧವಾಗಿ ಹೇಳಿದ್ದಾರೆ. ಹೀಗೆ ವಿಧವಿಧವಾದ ಪಾತ್ರವನ್ನು ಸೃಷ್ಟಿಸಿ ಅರ್ಜುನನ ಪಾತ್ರ, ಕೌರವರ ಪಾತ್ರವನ್ನು, ಪಾಂಡವರ ಪಾತ್ರವನ್ನು ಸೃಷ್ಟಿಸಿ ಅವರು ಹೇಳಬೇಕಾದದ್ದನ್ನು ಎಲ್ಲಾ ಈ ಪಾತ್ರಗಳ ಮೂಲಕ ಹೇಳಿಸಿದ್ದಾರೆ .. ಏನೆಂದರೆ, ನೀನು ತಪೋಲೋಕಕ್ಕೆ ಹೋದರೂ ಮರಳಿ ಈ ಭೂಲೋಕ್ಕೆ ಬರಲೇಬೇಕು. ಏಕೆಂದರೆ ಎಲ್ಲಾ ಪಾಠಗಳನ್ನು ಕಲಿಯುವವರೆಗೂ, ಎಲ್ಲಾ ಪಾಠಗಳು ಮುಗಿಯುವವರೆಗೂ, ಪರಿಪೂರ್ಣವಾಗುವವರೆಗೂ ನಾವು ಈ ಭೂಲೋಕವೆನ್ನುವ ಪಾಠಶಾಲೆಗೆ ಬರುತ್ತಲೇ ಇರುತ್ತೇವೆ.
ನಾವು ಮೊಟ್ಟಮೊದಲ ಮಾನವ ಜನ್ಮವೆತ್ತಿದಾಗ ಶೈಶವಾತ್ಮ, ನೂರು ಜನ್ಮಗಳೆತ್ತಿದ ಮೇಲೆ ಬಾಲಾತ್ಮ ಹೀಗೆ ನೂರು, ನೂರು ಜನ್ಮಗಳೆತ್ತಿದ ಮೇಲೆ ಪ್ರತಿಯೊಂದು ಆತ್ಮಸ್ಥಿತಿ ದಾಟಿ ಪರಮಾತ್ಮರಾಗುತ್ತೇವೆ. ಎಲ್ಲಾ ಮಕ್ಕಳು ದೊಡ್ಡವರಾಗುವ ಹಾಗೆ. ಎಲ್ಲಾ ಬಾಲಾತ್ಮಗಳು ಪರಮಾತ್ಮಸ್ಥಿತಿಗೆ ಸೇರಲೇಬೇಕು.
ನಾವು ಈ ಭೂಲೋಕದಲ್ಲಿ ಶರೀರವನ್ನು ಬಿಟ್ಟರೆ ಭುವರ್ಲೋಕಕ್ಕೆ ಹೋಗುತ್ತೇವೆ. ಭುವರ್ಲೋಕವೆಂದರೆ ಕೆಳಹಂತದ ಸೂಕ್ಷ್ಮಲೋಕ (Lower Astral World) ಸುವರ್ಲೋಕವೆಂದರೆ, ಮೇಲ್ಮಟ್ಟದ ಸೂಕ್ಷ್ಮಲೋಕ (Higher Astral World) ಅಲ್ಲಿ ನಮ್ಮ ಸೂಕ್ಷ್ಮಶರೀರವನ್ನು ತ್ಯಜಿಸಿ, ಜನಾಲೋಕಕ್ಕೆ ಹೋಗುತ್ತೇವೆ. ಅಲ್ಲಿ ನಮ್ಮ ಕಾರಣ ಶರೀರ ಇರುತ್ತದೆ. ಯಾವಾಗ ಭೂಲೋಕದಲ್ಲಿ ನಾವು ನಿಸ್ವಾರ್ಥವಾಗಿ ಕೆಲಸ ಮಾಡುತ್ತೇವೊ ಆಗ ನಾವು ಜನಾಲೋಕದಿಂದ ಮಹಾಲೋಕಕ್ಕೆ ಹೋಗುತ್ತೇವೆ, ಮಹಾತ್ಮರಾಗುತ್ತೇವೆ. ಆನಂತರ ಧ್ಯಾನದ ಮೂಲಕ ತಪಸ್ಸುಮಾಡಿ ತಪೋಲೋಕಕ್ಕೆ ಹೋಗುತ್ತೇವೆ. ತಪಸ್ಸಿನಿಂದ ಸತ್ಯವನ್ನು ತಿಳಿದುಕೊಂಡು ಸತ್ಯಲೋಕಕ್ಕೆ ಹೋಗುತ್ತೇವೆ. ಇದು ಕ್ರಮವಾಗಿ ನಡೆಯುತ್ತದೆ. ಹೀಗೆ ಏಳು ಲೋಕಗಳಿರುತ್ತದೆ. ನಾವು ಎಷ್ಟೋ ಲೋಕಗಳಿಂದ ಬಂದಿದ್ದೇವೆ. ನಾವು ಇಲ್ಲಿಗೆ, ಅಂದರೆ, ಭೂಲೋಕಕ್ಕೆ ಬಂದ ಯಾತ್ರಿಕರು. ಇಲ್ಲಿ ನಮ್ಮ ಸ್ವಂತ ಭೂಮಿ, ಸ್ವಂತ ಮನುಷ್ಯರು ಯಾರೂ ಇಲ್ಲ. ಸ್ವಂತ ಎನ್ನುವುದು ಯಾವುದೂ ಇಲ್ಲ.
ಆಧ್ಯಾತ್ಮಿಕತೆಯನ್ನು ಜನರಿಗೆ ಬೋಧಿಸಲೆಂದೇ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿಗಳ ಆಂದೋಲನವು (ಪಿ.ಎಸ್.ಎಸ್.ಎಮ್) ಹುಟ್ಟಿಕೊಂಡಿದೆ. ನಾವೊಬ್ಬರೇ ಆಧ್ಯಾತ್ಮಿಕರಲ್ಲ. ಈ ಪ್ರಪಂಚದಲ್ಲಿ ಎಷ್ಟೋ ಉನ್ನತ ಆಧ್ಯಾತ್ಮಿಕ ಸಂಸ್ಥೆಗಳಿವೆ. ಅವರೆಲ್ಲರಿಗೂ ಪಿ.ಎಸ್.ಎಸ್.ಎಮ್ ಗೌರವಿಸುತ್ತದೆ. ಎಲ್ಲರೂ ಥಿಯೋಸೊಫಿಕಲ್ ಸೊಸೈಟಿಯ ಪುಸ್ತಕಗಳನ್ನು ಓದಲೇಬೇಕು. ಬ್ಲವಾಟ್ಸ್ಕೀ, ಕರ್ನಲ್ ಆಲ್ಕಾಟ್, ಜಿನರಾಜದಾಸ, ಡಾಲ್ಸೆನ್, ಅನಿಬಿಸೆಂಟ್, ಲೆಡ್ಬೀಟರ್ ಎಲ್ಲರೂ ಮಹಾನುಭಾವರು. ಇವರು ಬರೆದ ಪುಸ್ತಕಗಳನ್ನು ಓದಬೇಕು, ಓದಿದರೆ ಮಾತ್ರವೇ ಏಳು ಲೋಕಗಳ ಬಗ್ಗೆ, ಶರೀರಗಳ ಬಗ್ಗೆ, ಏಳು ಆತ್ಮಸ್ಥಿತಿಗಳ ಬಗ್ಗೆ ತಿಳಿಯುವುದು.
ರಸಾಯನಶಾಸ್ತ್ರದ ಪ್ರೊಫೆಸರ್ ಆಗಬೇಕೆಂದರೆ ಎಷ್ಟೋ ರಸಾಯನಶಾಸ್ತ್ರದ ಪುಸ್ತಕಗಳನ್ನು ಓದಬೇಕು. ಇತಿಹಾಸದ ಪ್ರೊಫೆಸರ್ ಆಗಬೇಕೆಂದರೆ ಎಷ್ಟೋ ಇತಿಹಾಸದ ಪುಸ್ತಕಗಳನ್ನು ಓದಬೇಕು. ಭೂಗೋಳ ಶಾಸ್ತ್ರದಲ್ಲಿ ನಿಷ್ಣಾತರಾಗಬೇಕೆಂದರೆ ಅದಕ್ಕೆ ಸಂಬಂಧಿಸಿದ ಎಷ್ಟೋ ಪುಸ್ತಕಗಳನ್ನು ಓದಬೇಕು. ಹಾಗೆಯೇ ಆಧ್ಯಾತ್ಮಿಕ ಶಾಸ್ತ್ರವನ್ನು ತಿಳಿದುಕೊಳ್ಳಬೇಕೆಂದರೆ, ಎಷ್ಟೋ ಆಧ್ಯಾತ್ಮಿಕಶಾಸ್ತ್ರದ ಪುಸ್ತಕಗಳನ್ನು ಓದಬೇಕು. ಇದಕ್ಕಾಗಿ ಎಷ್ಟೋ ಜನ ಮಹಾತ್ಮರು ಅವರ ಜೀವನವನ್ನೆಲ್ಲಾ ಮುಡುಪಾಗಿಟ್ಟು ಬಹಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಅನುಭವವನ್ನು ಪಡೆದು ಆ ಜ್ಞಾನವನ್ನು ಗ್ರಂಥಸ್ಥಗೊಳಿಸಿದ್ದಾರೆ. ನಾವು ಆಧ್ಯಾತ್ಮಿಕ ಶಾಸ್ತ್ರಜ್ಞರಾಗಬೇಕಂದರೆ, ನಾವು ಪುಸ್ತಕಗಳನ್ನು ಓದಲೇಬೇಕು.
“ತಪಃ, ಸ್ವಾಧ್ಯಾಯ, ಈಶ್ವರ ಪ್ರಣಿಧಾನೇನ ಕ್ರಿಯಾ ಯೋಗಃ” ಎಂದು ಪತಂಜಲಿ ಹೇಳಿದ್ದಾರೆ. ಏನು ಮಾಡಬೇಕು ಎಂದರೆ ತಪಸ್ಸು, ನಂತರ ಸ್ವಾಧ್ಯಾಯ, ನಂತರ ಈಶ್ವರ ಪ್ರಣಿಧಾನ. ಈಶ್ವರ ಪ್ರಣಿಧಾನವೆಂದರೆ ಸಕಲ ಪ್ರಾಣಿಕೋಟಿಯನ್ನು ಭಗವಂತನಂತೆ ನೋಡಬೇಕು. ಒಂದು ಮೇಕೆ, ಇರುವೆಯಲ್ಲೂ ಭಗವಂತನಿದ್ದಾನೆ. ಹಾಗಿರುವಾಗ ಮೇಕೆಯನ್ನು ಕೊಂದು ತಿನ್ನುತ್ತಿದ್ದೇವೆಂದರೆ ಭಗವಂತನನ್ನು ಕೊಂದು ತಿನ್ನುತ್ತಿದ್ದೇವೆ ಎಂದೇ ಅರ್ಥ. ಇದು ಭಗವತ್ ತತ್ವವೆನಿಸುವುದಿಲ್ಲ.
“ಈಶಾವಾಸಂ ಇದಂ ಸರ್ವಂ ಯತ್ ಕಿಂಚಾ ಜಗತ್ಯಾಂ ಜಗತ್ಯೇನ ಭುಂಜಿತಂ ಮಾಂ ಮೃದಂ ಕಸ್ಯಸ್ಮಿಂ ಧನಂ”. “ಈಶಾವಾಸಂ ಇದಂ ಸರ್ವಂ” ಇದೆಲ್ಲಾ ಕೂಡಾ ಬ್ರಹ್ಮತತ್ತ್ವದಿಂದ ತುಂಬಿದೆ. “ಸರ್ವಂ ಖಲ್ವಿದಂ ಬ್ರಹ್ಮ”. ಅದಕ್ಕಾಗಿ, ಮೈಡಿಯರ್ ಫ್ರೆಂಡ್ಸ್, ಯಾವ ಕೋಳಿಯನ್ನು ಮೇಕೆಯನ್ನು ಕೊಲ್ಲಬಾರದು, ಯಾವ ಮೀನನನ್ನು ಹಿಡಿದು ತಿನ್ನಬಾರದು. ಇದೇ ಪ್ರಾಥಮಿಕ ಆಧ್ಯಾತ್ಮಿಕ ಸೂತ್ರ.
ಪ್ರಪಂಚದಲ್ಲಿ ಎಲ್ಲರೂ ಸಸ್ಯಾಹಾರಿಗಳಾಗುವವರೆಗೂ ಈ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್ಮೆಂಟ್ ಈ ಸತ್ಯವನ್ನು ಹೇಳುತ್ತಲೇ ಇರುತ್ತದೆ. ಇಲ್ಲಿ ಸಸ್ಯಾಹಾರವಿದೆ, ಧ್ಯಾನವಿದೆ ಇವು ಪ್ರಾಥಮಿಕ ಸೂತ್ರಗಳು. ಅಹಿಂಸಾ ಪರಮೋಧರ್ಮಃ. ಧ್ಯಾನಮಹಾಚಕ್ರದಲ್ಲಿ ನಾವು ಈ ವಿಷಯವನ್ನು ಎಷ್ಟೋ ಬಾರಿ ತಿಳಿದುಕೊಂಡಿರುತ್ತೇವೆ. ಕೇಳುತ್ತಾ ಇದ್ದರೆ ರಾಗ ಇಂಪಾಗುತ್ತದೆ, ಇಷ್ಟಪಟ್ಟು ತಿಂದರೆ ಬೇವು ಕೂಡಾ ಸಿಹಿಯಾಗುತ್ತದೆ. ನಮಗೆ ಮೊಟ್ಟಮೊದಲಲ್ಲಿ ಇದೆಲ್ಲಾ ಅರ್ಥವಾಗುವುದಿಲ್ಲ. ಡಾಕ್ಟರ್ಗಳೇ ಮಾಂಸವನ್ನು ತಿನ್ನಬೇಕೆನ್ನುತ್ತಾರೆ. ಇಂಗ್ಲೀಷ್ನಲ್ಲಿ ಪ್ರೋಟೀನ್ಸ್ ಎನ್ನುವ ಪದವನ್ನು ‘ಮಾಂಸದಕಣ’ ಎಂದು ಯಾರೂ ಅನುವಾದಿಸಿದ್ದಾರೋ, ಇದರಿಂದ ಎಲ್ಲಾ ಸರ್ವನಾಶವಾಯಿತು. ಮಾಂಸಕ್ಕೂ ಪ್ರೋಟೀನ್ಸ್ಗೂ ಸಂಬಂಧವೇ ಇಲ್ಲ. ಮಿನರಲ್ನ್ನು ‘ಲವಣ’ ಎಂದಿದ್ದಾರೆ. ಆದರೆ ಪ್ರೋಟೀನ್ಸ್ನ್ನು ಮಾಂಸದಕಣ ಎಂದು ಹೇಗೆ ಹೇಳಿದ್ದಾರೋ, ಆದ್ದರಿಂದ ಪ್ರೋಟೀನ್ಸ್ನ್ನು ಮಾಂಸಕಣಗಳು ಎನ್ನುವುದನ್ನು ಮರೆತುಬಿಡಿ. ನಮಗೆ ಪ್ರೋಟೀನ್ಸ್ ಎಲ್ಲೆಲ್ಲೂ ಸಿಗುತ್ತದೆ. ಸಸ್ಯಾಹಾರ ಜೀವನ ಕ್ರಮವನ್ನು ಈ ಭೂಲೋಕದ ಮೇಲೆ ಸ್ಥಾಪಿಸಲಿಕ್ಕಾಗಿ ನಾವೆಲ್ಲರೂ ಹುಟ್ಟಿದ್ದೇವೆ. ಈ ಭೂಮಂಡಲದಲ್ಲಿ ಸಸ್ಯಾಹಾರವೇ ಇದ್ದಿದ್ದರೆ, ನಾವು ಇಲ್ಲಿಗೆ ಬರುತ್ತಲೇ ಇರಲಿಲ್ಲ. ಏಕೆಂದರೆ ನಮಗೆ ಕೆಲಸವಿಲ್ಲದ್ದಿದ್ದರೆ ನಾವಿಲ್ಲಿಗೆ ಬರುತ್ತಿರಲಿಲ್ಲ. ಈ ಧ್ಯಾನಮಹಾಚಕ್ರದಲ್ಲಿ ನಮಗೆ ಕೆಲಸವಿದೆ. ಆದ್ದರಿಂದ ನಾವಿಲ್ಲಿಗೆ ಬಂದಿದ್ದೇವೆ. ಹಾಗೆ ನಾವು ಈ ಭೂಮಂಡಲಕ್ಕೆ ಮಾಸ್ಟರ್ಗಳು ಕೆಲಸಕ್ಕಾಗಿ ಬರುತ್ತಾರೆ. ಮಾಸ್ಟರ್ಸ್ ಕಲಿಸುವುದಕ್ಕಾಗಿ ಬರುತ್ತಾರೆ. ನಾವೆಲ್ಲರೂ ಪಿರಮಿಡ್ ಮಾಸ್ಟರ್ಗಳು. ಏನು ಕಲಿಸಲು ಬಂದಿದ್ದೇವೆ ಅಂದರೆ, ಅಹಿಂಸೆಯನ್ನು ಕಲಿಸಲು ಬಂದಿದ್ದೇವೆ.
ಮಹಾತ್ಮಗಾಂಧಿ ಲಂಡನ್ಗೆ ಹೋಗಿದ್ದರು. ಅವರ ಮನೆಯವರು ಭಯಗೊಂಡರು, ಈ ಹುಡುಗ ಎಲ್ಲಿ ಮಾಂಸ ತಿಂದು ಬರುತ್ತಾನೋ ಎಂದು. ಅವರು ಮಹಾತ್ಮರು ಆದ್ದರಿಂದ ಅವರು ಇಂಗ್ಲೆಂಡ್ಗೆ ಹೋದರು ಸಸ್ಯಾಹಾರಿಯಾಗಿಯೇ ಮರಳಿ ಬಂದರು. ಸೌತ್ ಆಫ್ರಿಕಾದಲ್ಲಿ ಚಳವಳಿ ನಡೆಸಿದರು. ನಾವು ನಮ್ಮ ದೇಶದಲ್ಲಿ ಚಳವಳಿ ಮಾಡಲಾರೆವೇ? ಅವರಿಗೂ ನಮಗೂ ಇಷ್ಟು ವ್ಯತ್ಯಾಸವೇಕಿದೆ? ನಾವೇಕೆ ಅವರ ಹಾಗಿಲ್ಲ? ನಾವೇಕೆ ಗೌತಮಬುದ್ಧನಂತಿಲ್ಲ. ಮದರ್ಥೆರಿಸಾರಂತೆ ಇಲ್ಲ. ನಾವೇಕೆ ವೇದವ್ಯಾಸರಂತೆ ಇಲ್ಲ. ಒಬ್ಬ ಬೇಟೆಗಾರ, ರತ್ನಾಕರ ವಾಲ್ಮೀಕಿಯಾದ. ನಾವೇಕೆ ಆಗಲಿಲ್ಲ? “ಆಗಬೇಕು ಗತಂಗಃ”. ಇಂದಿನಿಂದ ನಾವೆಲ್ಲರೂ ವಾಲ್ಮೀಕಿಯಂತಾಗೋಣ. ಹಿಂದೆ ನಾವೇನೂ ಮಾಡಿದ್ದರೂ ಇಂದಿನಿಂದ ನಾನೇನು ಮಾಡಬೇಕು? ಮಾಂಸಾಹಾರಿಗಳಾಗಿದ್ದರೆ ಮೊದಲು ಸಸ್ಯಾಹಾರಿಗಳಾಗಬೇಕು. ಸಸ್ಯಾಹಾರಿಗಳಾಗಿದ್ದರೆ, ನೀವು ಧ್ಯಾನ ಮಾಡಿ. ಧ್ಯಾನಿಗಳಾದವರು ಸ್ವಾಧ್ಯಾಯ ಮಾಡಿ, ತಪಃ ಸ್ವಾಧ್ಯಾಯ. ನಾವು ಧ್ಯಾನ ಮಾಡುತ್ತಿದ್ದೇವೆ ಎಂದರೆ ಸಾಲದು. ಸ್ವಾಧ್ಯಾಯ ಮಾಡಲೇಬೇಕು. ನೀವು ಪುಸ್ತಕಗಳನ್ನು ಓದಲೇಬೇಕು. ಯಾರಿಗೋಸ್ಕರ ಪುಸ್ತಕ ಬಿಡುಗಡೆ ಮಾಡುತ್ತಿದ್ದೇವೆ? ಯಾರಿಗೋಸ್ಕರ ಬರೆಯುತ್ತಿದ್ದೇವೆ?
ಒಂದು ಸೇಬು ಇದೆ ಅದನ್ನು ತಿನ್ನಬೇಕು. ಸಂಗೀತ ವಾದನವಿದೆ ಅದನ್ನು ಕೇಳಬೇಕು. ಪಿ.ಎಸ್.ಎಸ್.ಎಮ್.ನಲ್ಲಿ ಮೊದಲನೆಯದು ‘ಧ್ಯಾನ’, ಎರಡನೆಯದು ‘ಸ್ವಾಧ್ಯಾಯ’ ನಂತರ ‘ಸಜ್ಜನಸಾಂಗತ್ಯ.’ ನಾಲ್ಕನೆಯದು ‘ಮೌನ’, ಐದನೆಯದು ಮಕ್ಕಳಿಗೆ ಚಿಕ್ಕಂದಿನಲ್ಲೇ ‘ಧ್ಯಾನ ಶಿಕ್ಷಣ’ ನೀಡಬೇಕು. ಆರನೆಯದು ಪೌರ್ಣಮಿ ರಾತ್ರಿಗಳಲ್ಲಿ ಧ್ಯಾನ ಮಾಡುವುದು. ಏಳನೆಯದು ವೈದ್ಯರ ಬಳಿ ಹೋಗದೆ, ಯಾವ ಔಷಧಿಯನ್ನು ತೆಗೆದುಕೊಳ್ಳದೇ ನಿನ್ನನ್ನು ನೀನೇ ಉದ್ಧರಿಸಿಕೊಳ್ಳಬೇಕು. ನಿನ್ನ ತಲೆನೋವು, ಹೊಟ್ಟೆನೋವು, B.P.ಯನ್ನು ನೀನೇ ಕಡಿಮೆ ಮಾಡಿಕೊಳ್ಳಬೇಕು. ಧ್ಯಾನಶಕ್ತಿಯಿಂದ ಯಾರಿಗೂ ಶಿಷ್ಯರಾಗದೇ, ಗುರುಗಳಾದೇ ಎಲ್ಲರೂ ಪರಸ್ಪರ ಮಿತ್ರರಾಗಿದ್ದೇವೆ. ನಾವೆಲ್ಲರೂ ಸಮಾನರು. Equality is the highest quality. ‘ಸಮತ್ವಂ ಯೋಗ ಉಚ್ಯತೇ’. ನಮಗಿಂತ ಯಾರು ಹೆಚ್ಚಲ್ಲ ಅಥವ ಕಡಿಮೆ ಅಲ್ಲ.
ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |
ಶುನಿ ಚೈವ ಸ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||
ವಿದ್ಯಾ ವಿನಯದಿಂದ ಕೂಡಿದ ಬ್ರಾಹ್ಮಣನಾಗಲಿ ಗವಿ ಹಸುವನ್ನಾಗಲ್ಲಿ, ಹಸ್ತಿನಿ ಆನೆಯನ್ನಾಗಲಿ, ಶುನಿ ನಾಯಿಯನ್ನಾಗಲಿ ಸ್ವಪಾಕೇ ಅದರ ಮಾಂಸವನ್ನಾಗಲಿ ತಿನ್ನುವ ಚಂಡಾಲವನ್ನಾಗಲಿ, ಸಮವಾಗಿ ನೋಡುವುದೇ ಆತ್ಮಜ್ಞಾನವೆನಿಸುತ್ತದೆ. ಇದು ತಪ್ಪು, ಇದನ್ನು ಮಾಡಬಾರದೆಂದು ಹೇಳಬೇಕು. ಆಂದರೆ ಎಲ್ಲದರಲ್ಲೂ ಸಮತ್ವವಿರಬೇಕು. ಎಲ್ಲರೂ ಒಂದಾಗಿ ಊಟಮಾಡಬೇಕು, ಜೀವನ ನಡೆಸಬೇಕು.
‘ಲೋಕಾ ಸಮಸ್ತಾ ಸುಖಿನೋಭವಂತು’. ಆ ಸುಖ ಎಲ್ಲಿಂದ ಬರುತ್ತದೆ. ಧರ್ಮದಿಂದ ಬರುತ್ತದೆ. ಐದು ನೀತಿಗಳಿವೆ. 1) ಸಾಯಿಸಬಾರದು 2)ಜಗಳ ಮಾಡಬಾರದು 3) ಮಧ್ಯೆ ಪ್ರವೇಶಿಸಬಾರದು 4) ಮಧ್ಯೆ ಮಾರ್ಗ 5) ಧ್ಯಾನ. ನೀನು ಏನನ್ನೂ ಸಾಯಿಸಬಾರದು; ಯಾರ ಮೇಲೂ ದಾಳಿ ಮಾಡಬಾರದು; ಯಾರ ಅಥವಾ ಇನ್ನೊಬ್ಬರ ಮಧ್ಯೆ ಪ್ರವೇಶಿಸಬಾರದು; ನೀನು ಹೇಗೆ ಬೇರೆಯವರ ಜೀವನದಲ್ಲಿ ಪ್ರವೇಶಿಸುವೆ? ಆ ಹಕ್ಕು ನಿನಗ್ಯಾರು ಕೊಟ್ಟಿದ್ದಾರೆ? ಆ ಮೀನನ್ನು ಹಿಡಿದುಕೊಳ್ಳುವ ಹಕ್ಕು ನಿನಗ್ಯಾರು ಕೊಟ್ಟಿದ್ದಾರೆ? ಅದು ವಿಲವಿಲ ಒದ್ದಾಡುತ್ತಿದೆ. ಇಷ್ಟು ಕ್ರೂರ ಕ್ರಿಯೆಯನ್ನು ನೀನು ಹೇಗೆ ಮಾಡುವೆ? ಮಧ್ಯೆ ಮಾರ್ಗ: ಹೆಚ್ಚು ಸಂಪಾದಿಸಬಾರದು, ಕಡಿಮೆ ಸಂಪಾದಿಸಬಾರದು. ಹೆಚ್ಚು ನಿದ್ರೆ ಮಾಡಬಾರದು, ಕಡಿಮೆ ನಿದ್ರೆ ಮಾಡಬಾರದು. ಹೆಚ್ಚು ಮಾತನಾಡಬಾರದು, ಕಡಿಮೆ ಮಾತನಾಡಬಾರದು. ಮಧ್ಯೆಮಾರ್ಗದಲ್ಲಿರಬೇಕು. ಧ್ಯಾನ ಮಾಡಬೇಕು.
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ||
ಸರಿಯಾದ ಆಹಾರ, ವಿಹಾರ, ಚೇಷ್ಟೆ (ಕ್ರಿಯೆ), ಸರಿಯಾದ ಸ್ವಪ್ನ, ಸರಿಯಾದ ಅವಬೋಧೆ ಈ ವಿಧವಾದ ಸರಿಯಾದ ಯೋಗದಿಂದ ದುಃಖ ನಿವಾರಣೆಯಾಗುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಭಗವದ್ಗೀತೆ ಯಾರಿಗೋಸ್ಕರ ಬರೆಯಲಾಗಿದೆ? ಪ್ರತಿ ನರನು ನಾರಾಯಣನಾಗಲು ಬರೆಯಲಾಗಿದೆ. ನರನಿಗೆ ನಾರಾಯಣನ ಬೋಧೆ. ’ನರ’ ಎಂದರೆ, ಯುಕ್ತವಾದ ಆಹಾರವಿಲ್ಲದವನು, ವಿಹಾರವಿಲ್ಲದವನು, ಸರಿಯಾದ ಕ್ರಿಯೆಯನ್ನು ಮಾಡದವನು, ಸ್ವಪ್ನ ಕಾಣದವನು, ಸರಿಯಾದ ಅವಬೋಧೆಯಿಲ್ಲದವನು. ಇವೆಲ್ಲಾ ಇರುವವನೇ ನಾರಾಯಣನು. ನೀನು ಯುಕ್ತದಲ್ಲಿದ್ದರೆ ದುಃಖ ಹರಣವಾಗುತ್ತದೆ. ಇಲ್ಲದಿದ್ದರೆ ದುಃಖದಲ್ಲಿರುತ್ತೀಯಾ. ಗೌತಮಬುದ್ಧ ಎಲ್ಲಾ ಕಡೆ ದುಃಖವನ್ನು ನೋಡಿದ ಏಕೆಂದರೆ ಅವರೆಲ್ಲಾ ಅಯುಕ್ತವಾಗಿ ಜೀವಿಸುತ್ತಿದ್ದಾರೆ. ಅಯುಕ್ತ ಆಹಾರ, ವಿಹಾರ, ಚೇಷ್ಟೆ, ಅಯುಕ್ತ ಸ್ವಪ್ನ, ಅಯುಕ್ತ ಅವಬೋಧೆಯಲ್ಲಿ ಜೀವಿಸುತ್ತಿದ್ದಾರೆ. ಅದರಿಂದ ಹೊರಬರಬೇಕು. ಅದೇ ಬುದ್ಧನ ಅಷ್ಟಾಂಗ ಮಾರ್ಗ. ಸರಿಯಾದ ನೋಟ, ಸರಿಯಾದ ಕೋರಿಕೆ, ಸರಿಯಾದ ನುಡಿ, ನಡವಳಿಕೆ, ಶ್ರದ್ಧೆ, ಏಕಾಗ್ರತೆ, ಸರಿಯಾದ ಧ್ಯಾನ.
ನಾವು ಚಿಕ್ಕಂದಿನಿಂದ ಬುದ್ಧನ ಭಾವಚಿತ್ರ, ಕೃಷ್ಣನ ಭಾವಚಿತ್ರ ಇಟ್ಟುಕೊಂಡಿದ್ದೇವೆ. ವೇದವ್ಯಾಸ, ಮಹಾತ್ಮಗಾಂಧಿ ಬಗ್ಗೆ ಕೇಳುತ್ತದ್ದೀವೆ ಆದರೆ ನಾವು ಮಾತ್ರ ಮಾಂಸ ತಿನ್ನುತ್ತಲೇ ಇದ್ದೇವೆ. ಯಾರನ್ನು ಪೂಜಿಸುತ್ತಿರುವೆ? ನಿನ್ನ ನೀನೇ ಪೂಜಿಸಿಕೋ, ನಿನ್ನನ್ನು ನೀನೇ ತಿಳಿದುಕೋ, ಉದ್ಧರಿಸಿಕೋ
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ||
ಇವೆಲ್ಲಾ ನಮ್ಮ ಪ್ರತಿ ಜೀವಕಣದಲ್ಲಿ ತುಂಬಬೇಕು. ಪ್ರತಿ ನರದಲ್ಲೂ ತುಂಬಿಸಿಕೊಳ್ಳಬೇಕು. ಅಂದರೆ ವಿಶೇಷವಾಗಿ ಸಜ್ಜನ ಸಾಂಗತ್ಯ ಮಾಡಬೇಕು. ಇಲ್ಲಿ ನಾವು ಪ್ರತಿದಿನ ಸಜ್ಜನ ಸಾಂಗತ್ಯ ಮಾಡುತ್ತಿದ್ದೇವೆ. ಇಲ್ಲಿರುವ ಎಷ್ಟೋ ಜನ ಮಾಸ್ಟರ್ಗಳನ್ನು ಭೇಟಿ ಮಾಡಿ ಎಲ್ಲರಿಂದಲೂ ಏನು ಕಲಿಯಬೇಕೋ ಅದನ್ನು ಕಲಿತುಕೊಳ್ಳಿರಿ. ಅವರು ಹೇಳುವುದನ್ನು ಕೇಳಿರಿ. ನಾನು ಎಲ್ಲರೂ ಹೇಳಿದ್ದನ್ನು ಕೇಳುತ್ತೇನೆ, ಬರೆದಿದ್ದನ್ನು ಓದುತ್ತೇನೆ. ನನ್ನ ಧ್ಯಾನ ನಾನು ಮಾಡುತ್ತೇನೆ. ನಾನು ಒಂದು ಕ್ಷಣವೂ ಏನೂ ಕಲಿತುಕೊಳ್ಳದಂತೆ ಎಂದಿಗೂ ಇರಲಾರೆನು.
ಮುವ್ವತ್ತು ವರ್ಷಗಳ ಹಿಂದೆ 1979ರಲ್ಲಿ ಕರ್ನೂಲಿನಲ್ಲಿ ಜ್ಞಾನೋದಯವಾಯಿತು (ಆತ್ಮಸಾಕ್ಷಾತ್ಕಾರವಾಯಿತು). ಪ್ರತಿ ಮನುಷ್ಯನಿಗೆ ಜ್ಞಾನೊದಯವಾಗುತ್ತದೆ, ಆಗಲೇಬೇಕು. ಅದೇನೆಂದರೆ ನಾನು ಭೌತಿಕ ಶರೀರ ಮಾತ್ರವೇ ಅಲ್ಲಾ ನಾನು ಚೈತನ್ಯ. ‘ಅಹಂ ದೇಹೋಸ್ಮಿ’ ಅಲ್ಲಾ ‘ಅಹಂ ಬ್ರಹ್ಮಾಸ್ಮಿ’ ಎಂದು. ಬೇರೆ ಕೆಲಸ ಇರದಿದ್ದಾಗ ಬಸ್ನಲ್ಲಿ, ಕಾರಿನಲ್ಲೋ ಇದ್ದಾಗ ಕಣ್ಣೆರೆಡು ಮುಚ್ಚಿ ಕೈಗಳೆರಡು ಜೋಡಿಸಿ ಉಚ್ಛ್ವಾಸ ನಿಶ್ವಾಸದಲ್ಲಿ ಏಕವಾಗಬೇಕು. ಎಲ್ಲಿದ್ದರೆ ಅಲ್ಲಿನ ಕೆಲಸಮಾಡಬೇಕು. ಈ ಮಧ್ಯೆ ಸುಮ್ಮನೆ ಕೆಲಸಕ್ಕೆಬಾರದ ಯೋಚನೆಗಳೇಕೆ. ಧ್ಯಾನ ಮಾಡಬೇಕು. ರಾತ್ರಿ ಎಲ್ಲರೂ ಊಟ ಮುಗಿಸಿ ಕುಳಿತುಕೊಳ್ಳುತ್ತೇವೆ. ಆಗ ಏನು ಮಾಡಬೇಕು. ಮನೆಯವರೆಲ್ಲಾ ಕುಳಿತು ಧ್ಯಾನ ಮಾಡಬೇಕು. ಧ್ಯಾನ ಮಾಡಿ ಮಲಗಬೇಕು. ಧ್ಯಾನ ಮಾಡದೇ ಬೆಳಗ್ಗೆ ಏಳಬಾರದು. 24 ಗಂಟೆಗಳು ಒಂದು ದಿನಕ್ಕೆ ಇರುತ್ತದೆ. ಎಷ್ಟು ಸಮಯವಿದೆಯೋ ಎಲ್ಲಾ ಕಲೆಗಳನ್ನು ಕಲಿಯಬಹುದು. ಎಲ್ಲಾ ವಿದ್ಯೆಯನ್ನು ಕಲಿಯಬಹುದು. ಸಕಲ ಕಲಾವಿದ್ಯಾ ಪಾರಂಗತರಾಗಬಹುದು. ಅನವಶ್ಯಕ ಮಾತುಗಳನ್ನಾಡಬೇಡಿ. ಗಂಡನೊಂದಿಗಾಗಲಿ, ಹೆಂಡತಿಯೊಂದಿಗಾಗಲಿ ಅಗತ್ಯವಿಲ್ಲದ ಮಾತುಗಳನ್ನಾಡಬಾರದು. ನಿನ್ನ ಜನ್ಮ ನಿನಗೆ ಮುಖ್ಯ. ಬರುತ್ತೀಯಾ, ಹೋಗುತ್ತೀಯಾ. ಹೋಗುವ ಮುಂಚೆ ನೀನು ನಾರಾಯಣನಾಗಬೇಕು. ಇದು ನಿನಗೆ ಸವಾಲು. ಇದು name of the game. ಅಲ್ಲಿ ನಾರಾಯಣನಾಗಿದ್ದೆ, ಹುಟ್ಟಿದ ತಕ್ಷಣ ನರನಾದೆ, ಹೋಗುವುದರೊಳಗೆ ನಾರಾಯಣನಾಗಬೇಕು. ನೀನು ನರನಾಗಿಯೇ ಮೇಲೆ ಹೋದೆಯೆಂದುಕೊ, ಹೋದನಂತರ ನೀನೇ ಚಿಂತಿಸುವೆ. ಶರೀರವನ್ನು ಬಿಟ್ಟನಂತರ ನಿನಗೆ ನೀನೇ ಪ್ರಶ್ನಿಸಿಕೊಳ್ಳುವೆ. ಏನು ಮಾಡಿದೆ ಒಂದೇ ಮಾಡಿದೇ ಒಂದೆ ತಿಳಿದುಮಾಡಲಿಲ್ಲವೇ ತಿಳಿಯದೇ ಮಾಡಲಿಲ್ಲವೇ. ತಿಳಿದಿದ್ದೂ ಮಾಡದಿದ್ದರೆ ಪಾಪ, ತಿಳಿದಿಲ್ಲದ್ದರಿಂದ ಮಾಡದಿದ್ದರೆ ಅಜ್ಞಾನ. ಮಾಂಸ ತಿನ್ನಬಾರದೆಂದು ತಿಳಿದರೂ ತಿನ್ನುತ್ತಿದ್ದೇನಾ. ಧ್ಯಾನ ಮಾಡಬೇಕೆಂದು ತಿಳಿದರೂ ಮಾಡಲಿಲ್ಲ, ಸ್ವಾಧ್ಯಾಯ ಮಾಡಬೇಕೆಂದು ಗೊತ್ತಿದ್ದರೂ ಮಾಡಲಿಲ್ಲ, ಧ್ಯಾನ ಇನ್ನೊಬ್ಬರಿಗೆ ಹೇಳಿಕೊಡಬೇಕೆಂದು ತಿಳಿದರೂ ನಾನು ಸುಮ್ಮನಿದ್ದೆನಾ, ತಿಳಿಯದೇ ಮಾಡಲಿಲ್ಲವೇ. ತಿಳಿಯದೇ ಮಾಡದಿದ್ದರೆ ಅದು ತಪ್ಪು. ತಿಳಿದೂ ಮಾಡದಿದ್ದರೇ, ಅದು ದೊಡ್ಡ ತಪ್ಪು. ಮತ್ತೆ ಮತ್ತೆ ನಮ್ಮ ಜೀವನ ಸರಿಮಾಡಿಕೊಳ್ಳಲು ನಾವೇ ಬರುತ್ತೇವೆ. ಮತ್ತೆ “ಪುನರಪಿ ಜನನಂ ಪುನರಪಿ ಮರಣಂ” ನಾವು ಹುಟ್ಟಿರುವುದೇ ನಾರಾಯಣರಾಗಲು, ಗಂಡನಿಗೋಸ್ಕರವಾಗಲಿ ಮಕ್ಕಳಿಗೋಸ್ಕರವಾಗಲಿ ಹುಟ್ಟಿಲಿಲ್ಲ.
“ಸರಿಯಾದ ಜೀವನ ವಿಧಾನ”
ನಾವೆಲ್ಲಾ ದೇವರುಗಳು. ಪ್ರತಿದಿನ ನಾವು ಇದನ್ನು ಮನನ ಮಾಡಿಕೊಳ್ಳುತ್ತಿರಬೇಕು, ಹೇಳುತ್ತಾ ಇರಬೇಕು. ಯಾವುದು ನಮ್ಮ ಬಾಯಿಯಿಂದ ಬರುತ್ತದೋ ಅದೇ ನಮ್ಮ ಹಣೆಬರಹವಾಗುತ್ತದೆ. ಇನ್ಯಾರೋ ನಮ್ಮ ಹಣೆಬರಹ ಬರೆಯುವುದಿಲ್ಲ. ನಾವೇ ದೇವರುಗಳು ನಮ್ಮ ಹಣೆಬರಹ ನಾವೇ ಬರೆದುಕೊಳ್ಳುತ್ತೇವೆ. ಅದು ಹೇಗೆಂದರೆ, ನಮ್ಮ ಬಾಯಿಯಿಂದ ಬರುವ ಮಾತುಗಳೇ ಲೇಖನಿಯಾಗಿ ಬರೆಯುತ್ತದೆ. ನಾನು ದಡ್ಡ ಎಂದುಕೊಂಡರೆ ಹಣೆ ಮೇಲೆ ಅದು ಬರುತ್ತದೆ. ನಮ್ಮ ಬಾಯಿಯಿಂದ ಬರುವ ಮಾತುಗಳೇ ನಮ್ಮ ಜೀವನವನ್ನು ನಿರ್ದೇಶಿಸುತ್ತವೆ. ನಮ್ಮ ಬಾಯಿಯಿಂದ ಯಾವಾಗಲೂ ನಕಾರಾತ್ಮಕ ಮಾತುಗಳು ಬರಬಾರದು. ಯಾವಾಗಲೂ ಸಕಾರಾತ್ಮಕ ಪದಗಳನ್ನೇ ಬಳಸಿ. ನನ್ನಿಂದಾಗದು ಎಂಬ ಮಾತು ಯಾವಾಗಲೂ ಹೇಳಬಾರದು. ಮಾತನಾಡುವಾಗ ತುಂಬಾ ಜಾಗ್ರತೆಯಿಂದ ಇರಬೇಕು. ಇಲ್ಲದಿದ್ದರೆ ಮೌನವಾಗಿರಬೇಕು. ಮಾತನಾಡುವ ಸಾಹಸ ಮಾಡಬಾರದು. ನಮ್ಮ ಬಾಯಿ ಎಂಬುದು ಒಂದು ವಾದ್ಯ ಇದ್ದಂತೆ, ಸುಮ್ಮನೆ ಮಾತನಾಡಬಾರದು. ತಿಳಿದರೆ ಮಾತನಾಡಬೇಕು. ಇಲ್ಲದಿದ್ದರೆ ಸುಮ್ಮನಿರಬೇಕು.
ಒಬ್ಬ ಬುದ್ಧನಾದವನು ಮಾತ್ರವೇ ಸರಿಯಾಗಿ ಮಾತನಾಡುತ್ತಾನೆ. ಏಕೆಂದರೆ ಬುದ್ಧನಾದವನು ಬುದ್ಧಿ ಇರುವವನು, ಸರಿಯಾದ ಮಾತುಗಳನ್ನಾಡುಲು ಕಲಿತುಕೊಂಡವನು. ನಿನಗೆ ಬುದ್ಧಿ ಇಲ್ಲದಿದ್ದರೆ ನಿನ್ನ ಮಾತುಗಳು ಬುದ್ಧಿಹೀನ ಮಾತುಗಳಾಗಿರುತ್ತವೆ, ವಕ್ರವಾಗಿರುತ್ತವೆ, ಯಾವುದಕ್ಕೂ ಕೆಲಸಕ್ಕೆ ಬಾರದಾಗಿರುತ್ತವೆ. ನೀನು ಬುದ್ಧನಾದರೆ ಮಾತ್ರವೇ ನೀನು ಬಾಯಿ ತೆಗೆದು ಮಾತನಾಡುವ ಹಕ್ಕು ಇರುತ್ತದೆ. ಕೇಳುವವರಿಗೆ ಇಂಪಾಗಿರುತ್ತದೆ. ನಿನಗೆ ಬುದ್ಧತ್ವ ಇಲ್ಲದಿದ್ದರೆ ಧ್ಯಾನ, ಜ್ಞಾನ ಸಾಧನೆ ಇಲ್ಲದಿದ್ದರೆ, ನಿನ್ನ ಮಾತುಗಳು ಅಪಸ್ವರಗಳ ಸಮೂಹ. ಆದರೂ ಬಹುತೇಕರು ಮಾತನಾಡುತ್ತಲೇ ಇರುತ್ತಾರೆ. ಮಾತನಾಡಿದರೆ ಷೇಕ್ಸ್ಪಿಯರ್ ಮಾತಾಡಿದಂತಿರಬೇಕು, ಬಿಸ್ಮಿಲ್ಲಾಖಾನ್ ಷಹನಾಯ್ ಮೂಲಕ ಹೇಗೆ ಮಾತನಾಡುತ್ತಾರೋ ಹಾಗೆ, ಒಬ್ಬ ಕಾಳಿದಾಸನ ಮಾತುಗಳಂತೆ ಇರಬೇಕು. ಇಲ್ಲದಿದ್ದರೆ ಸುಮ್ಮನೆ ಕುಳಿತುಕೊಳ್ಳಬೇಕು.
ನನಗೆ ಮಾತನಾಡಲಾಗದು ಎಂದರೆ ನಾನು ಸುಮ್ಮನಿರುತ್ತೇನೆ. ಬಾಯಿ ತೆಗೆದರೆ ಪಾಪ ಬರುತ್ತದೆ. ನಾನು ಮಾಂಸ ತಿನ್ನುತ್ತಿದ್ದೇನೆ ನಾನೇನು ಮಾತನಾಡಬಲ್ಲೆ. ನಾನು ಹಣದ ಹಿಂದೆ ಬಿದ್ದಿದ್ದೇನೆ, ನಾನೇನು ಮಾತನಾಡುತ್ತೇನೆ. ಸತ್ಯದ ಹಿಂದೆ ಬಿದ್ದವನೇ, ಸತ್ಯ ಮಾತನಾಡುವವನೇ, ಧ್ಯಾನಸಾಧನೆ ಮಾಡಿದವನೇ ಅದರಲ್ಲಿ ಚಕ್ರವೆಲ್ಲಾ ಉದ್ದೀಪನವಾಗಿ ದಿವ್ಯಚಕ್ಷು ಉತ್ತೇಜನವಾಗಿ, ದಿವ್ಯಜ್ಞಾನದಿಂದ ಇದ್ದಾಗಲೇ ಬಾಯಿ ತೆಗೆಯಬೇಕು. ಇಲ್ಲದಿದ್ದರೆ ಅವನಿಗೆ ಮಾತನಾಡುವ ಅರ್ಹತೆಯಿಲ್ಲ.
ಆತ್ಮಜ್ಞಾನವಿಲ್ಲದಿದ್ದಾಗ ವಿನಯ ವಿಧೇಯತೆಯಿಂದ ಸುಮ್ಮನೆ ಕುಳಿತುಕೊಳ್ಳಬೇಕು. ಮಾತನಾಡಿದರೆ ಒಬ್ಬ ರಮಣ ಮಹರ್ಷಿಯಂತಹವರೇ ಮಾತನಾಡಬೇಕು. ಒಮ್ಮೆ ಒಬ್ಬನು ರಮಣ ಮಹರ್ಷಿ ಬಳಿ ಹೋದಾಗ ಅವರು ಆತನನ್ನು “ನೀನು ಯಾರು?” ಎಂದು ಕೇಳಿದರು. ನಾನು ಸುಬ್ಬಾರಾವು ಅಂದ. ಅದಕ್ಕೆ ಅವರು ನಾನು ನಿನ್ನ ಹೆಸರು ಕೇಳಲಿಲ್ಲ, ನಿನ್ನ ಊರು ಯಾವುದು ಎಂದು ಕೇಳಲಿಲ್ಲ “ನೀನು ಯಾರು?” ಎಂದು ಕೇಳಿದ್ದು ಎಂದರು. ಅವನಿಗೆ ಇವರು ಹೇಳಿದ್ದು ಅರ್ಥವಾಗಲಿಲ್ಲ. ಮತ್ತೆ ಮತ್ತೆ ಕೇಳಿದರೂ ಅದೇ ಉತ್ತರವಾಗಿತ್ತು. ನೀನು M.L.A. ಆದರೇನು, ಗ್ರಾಮಪಂಚಾಯತಿ ಅಧ್ಯಕ್ಷನಾದರೇನು “ನೀನು ಯಾರು?” ಎಂಬುದು ಅವರ ಪ್ರಶ್ನೆಯಾಗಿತ್ತು. ಆತನಿಗೆ ರಮಣ ಮಹರ್ಷಿಯೊಬ್ಬ ಹುಚ್ಚನಂತೆ ಕಾಣಿಸಿದ. ನಿನ್ನ ಹೆಸರು ಹೇಳಬೇಡ, ನಿನ್ನ ಊರು ಹೇಳಬೇಡ, ನಿನ್ನ ಪದವಿ ಹೇಳಬೇಡ, “ನೀನು ಯಾರು?” ಎಂದು ಕೇಳಿದಾಗ ‘ನಾನು ಆತ್ಮಜ್ಞಾನಿ’ ಎಂಬುದು ಉತ್ತರವಾಗಿರಬೇಕು. ಹಾಗೆ ಹೇಳಿದರೆ ರಮಣ ಮಹರ್ಷಿ ಸಂತೋಷದಿಂದ ಆಲಂಗಿಸುತ್ತಿದ್ದರು. ಅವನಿಗೆ ತನ್ನ ಬಗ್ಗೆ ಅರಿವಿಲ್ಲ. ಯಾವಾಗ ತಾನು ಶರೀರವಲ್ಲ ಆತ್ಮ ಎಂದು ತಿಳಿದುಕೊಳ್ಳುವುದಿಲ್ಲವೋ ಆಗ ನಿನಗೆ ಎಲ್ಲಾ ದುಃಖವೇ. ನಾವೆಲ್ಲಾ ಆತ್ಮಪದಾರ್ಥಗಳೇ.
ರಮಣ ಮಹರ್ಷಿ ಜೀವನ ಪರ್ಯಂತ ಸಾಧನೆಮಾಡಿ, ನಾನೊಬ್ಬ ಆತ್ಮ ಎಂದು ತಿಳಿದುಕೊಂಡಿದ್ದರು. ಮತ್ತೇನೂ ಮಾತನಾಡುತ್ತಿರಲಿಲ್ಲ. ಮಾತನಾಡಲು ಏನೂ ಇಲ್ಲ, ಎಲ್ಲಾ ಬರಿ ವ್ಯರ್ಥಪ್ರಲಾಪ. ನಾವು ವ್ಯರ್ಥವಾದದ್ದನ್ನು ಮಾತನಾಡುತ್ತಿದ್ದೇವೆ, ಆಲೋಚಿಸುತ್ತಿದ್ದೇವೆ. ಅದೆಲ್ಲಾ ಆತ್ಮಜ್ಞಾನಕ್ಕೆ ಮೊದಲು. ಆತ್ಮಜ್ಞಾನ ಬಂದನಂತರ ಅವನ್ನೆಲ್ಲಾ ಬಿಟ್ಟು ನಂತರ ಜೀವನ ಶುಭ್ರವಾಗಿರುತ್ತದೆ. ಇನ್ನು ವ್ಯರ್ಥ ಎನ್ನುವುದು ಇರುವುದಿಲ್ಲ.
ಸರಿಯಾದ ಜೀವನ ವಿಧಾನಕ್ಕೆ ಒಂಬತ್ತು ಅಂಶಗಳಿವೆ. ಅದು ಯಾವುದು ಎಂದರೆ, ಇಲ್ಲಿ ತಿನ್ನಲು ೩ ಅಂಶಗಳು, ಮಾತನಾಡಲು ೩ ಅಂಶಗಳು, ಆಲೋಚಿಸಲು ೩ ಅಂಶಗಳು:
1) ಯುಕ್ತಾಹಾರ 2) ಮಿತಾಹಾರ 3) ನಿರಾಹಾರ
1) ಯುಕ್ತಭಾಷಣ 2) ಮಿತ ಭಾಷಣ 3) ನಿರ್ಭಾಷಣ
1) ಯುಕ್ತಾಲೋಚನೆ 2) ಮಿತ ಆಲೋಚನೆ 3) ನಿರಾಲೋಚನೆ
ಯುಕ್ತಾಹಾರ: ಅಂದರೆ ಯಾವುದು ತಿನ್ನಬೇಕೋ ಅದೇ ತಿನ್ನಬೇಕು. ಮೀನು ಮೇಕೆ, ಕೋಳಿ ತಿಂದರೆ ನೀನು ಮೂರ್ಖ. ತಿನ್ನಬಾರದ್ದನ್ನು ತಿನ್ನುತ್ತಿದ್ದೀಯಾ.
ಮಿತಾಹಾರ: ಮೂರು ಇಡ್ಲಿಯ ಹಸಿವಿದ್ದರೆ, ನಾಲ್ಕು ತಿನ್ನಬಾರದು. ಎಷ್ಟು ಹಸಿವು ಇದ್ದರೆ ಅಷ್ಟು ತಿನ್ನಬೇಕು.
ನಿರಾಹಾರ: ವಾರಕ್ಕೆ ಒಂದು ಬಾರಿ ಉಪವಾಸ. ಮಹಾತ್ಮಗಾಂಧಿ ವಾರಕ್ಕೊಂದು ಸಾರಿ ಉಪವಾಸ ಮಾಡುತ್ತಿದ್ದರು. “ಲಂಖಣಂ ಪರಮೌಷಧಂ”. ಶರೀರಕ್ಕೆ ಯಾವ ರೋಗ ಬಂದರೂ ಕೂಡಾ ನೀವು ಏನೂ ತಿನ್ನದೇ ಇದ್ದರೆ ಒಟ್ಟಾರೆ ಖಾಯಿಲೆಗಳೆಲ್ಲಾ ಹೋಗುತ್ತದೆ. ಇನ್ನೇನೂ ಮಾಡಬೇಕಿಲ್ಲ. ನೆಗಡಿ ಬಂದಿದೆಯಾ, ಕಲರಾ ಬಂದಿದೆಯಾ, ಮಲೇರಿಯಾ, ಟಿ.ಬಿ, ಕ್ಯಾನ್ಸರ್ ಏನೂ ಬಂದರೂ ತಿನ್ನುವುದನ್ನು ನಿಲ್ಲಿಸಿ. ನಿಮ್ಮ ಶರೀರ ಚೆನ್ನಾಗಿರುತ್ತದೆ. ವಜ್ರದಂತೆ ಆಗುತ್ತದೆ. ಕಡಿಮೆ ತಂದಷ್ಟೂ ಅದು ನಿಮಗೇ ಉತ್ತಮ. ಕಡಿಮೆ ತಿಂದರೆ ನಿಮ್ಮ ಆಯಸ್ಸು ಹೆಚ್ಚುತ್ತದೆ.
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ||
ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಭಗವದ್ಗೀತೆಯಲ್ಲಿ ಹೇಳಿದಂತೆ ಜೀವಿಸಬೇಕು. ಭಗವದ್ಗೀತೆಯಲ್ಲಿ ಸುಮ್ಮನೆ ಹೇಳಿದ್ದಾರೆಯೇ? ಪ್ರಪಂಚವೆಲ್ಲಾ ಅಯುಕ್ತಾಹಾರವನ್ನು ತಿನ್ನುತ್ತಿದೆ.
ಮಿತಾಹಾರ: ಊಟಕ್ಕೆ ಕುಳಿತಾಗ ಹಸಿವೆ ಇದ್ದಷ್ಟು ತಿನ್ನಬೇಕು. ಜಿಲೇಬಿ ತುಂಬಾ ಚೆನ್ನಾಗಿದೆ ಎಂದರೂ ಹಸಿವೆ ಇಲ್ಲದಿದ್ದರೂ ತಿಂದರೆ ಹೇಗೆ. ದಿನವೂ ಮಿತವಾಗಿ ತಿನ್ನಬೇಕು. ವಾರಕ್ಕೊಂದು ಬಾರಿ ಖಂಡಿತವಾಗಿ ಉಪವಾಸವಿರಬೇಕು. ನಾನು ಒಂದು ವರ್ಷ ಪೂರ್ತಿ ಕೇವಲ ಸೂಪ್ ಕುಡಿಯುತ್ತಿದ್ದೆ. ಟೊಮೇಟೋ ಸೂಪ್, ವರ್ಷದುದ್ದಕ್ಕೂ ಅದೇ.
ಯುಕ್ತ ಭಾಷಣ: ಅಂದರೆ ಏನು ಮಾತನಾಡಬೇಕೋ ಅದನ್ನೇ ಮಾತನಾಡಬೇಕು. ಮನೆಯ ಮಾತು ಆಫೀಸಿನಲ್ಲಿ ಮಾತನಾಡಬಾರದು. ಆಫೀಸಿನ ಮಾತು ಮನೆಯಲ್ಲಿ ಮಾತನಾಡಬಾರದು. ಆಫೀಸಿನಲ್ಲಿ ಹೆಂಡತಿ ಮಕ್ಕಳ ಮಾತು ಬೇಡ, ಮನೆಯಲ್ಲಿ ಆಫೀಸಿನ ಮಾತು ಹೆಂಡತಿಗೆ ಹೇಳಿದರೆ, ಆಕೆಗೇನು ಅರ್ಥವಾಗುತ್ತದೆ. ಯುಕ್ತವಾದ ಭಾಷಣವಿರಬೇಕು.
ಮಿತವಾದ ಭಾಷಣ: ಯಾರಿಗಾದರೂ ಮೈಕ್ ಕೊಟ್ಟು, ಸಾರ್, ಒಂದೆರೆಡು ಮಾತನಾಡಬೇಕು ಎಂದರೆ, ಎರಡು ಗಂಟೆಗಳು ಮಾತನಾಡುತ್ತಾರೆ. ಮೈಕ್ ವಾಪಸ್ ತೆಗೆದುಕೊಳ್ಳುವವರೆಗೂ ಮಾತನಾಡುತ್ತಲೇ ಇರುತ್ತಾರೆ, ಕೇಳುವವರಿಗೆ ಆಸಕ್ತಿ ಇರದು. ಆದರೂ ಹೇಳುತ್ತಲೇ ಇರುತ್ತಾನೆ. ಏಕೆಂದರೆ ಅವನ ಮಾತು ಅವನಿಗೆ ತುಂಬಾ ಪ್ರಿಯ. ಬೇರೆಯವರ ಮಾತುಗಳು ಮಾತ್ರ ಅಪ್ರಿಯ. ಆದಷ್ಟು ಮೌನವಿರಬೇಕು. ಮಹಾತ್ಮಗಾಂಧಿಗಿಂತ ದೊಡ್ಡ ಸಾಧಕರೇ ನಾವು.
ನಿರ್ಭಾಷಣ: ಅಂದರೆ ಮೌನವಾಗಿರಬೇಕು. ಮೆಹರ್ಬಾಬಾ ಜೀವನ ಪರ್ಯಂತ ಮೌನವಾಗಿದ್ದರು. ನಾವು ಜೀವನ ಪರ್ಯಂತ ಮಾತನಾಡುತ್ತಲೇ ಇರುತ್ತೇವೆ. ಆಂಗ್ಲದಲ್ಲಿ ಒಂದು ಮಾತು ಇದೆ. “Where angels fear to tread, fools rush in”. ನಾನು ಯಾವ ವಿಷಯವಾದರೂ ಮಾತನಾಡುತ್ತೇನೆ. ನನಗೆ ಅಷ್ಟು ಜ್ಞಾನವಿದೆ. ನಿನ್ನ ಸ್ವಾನುಭವದ ಜ್ಞಾನವಿಲ್ಲದ ವಿಷಯ ಅದು ಅಸಾಧ್ಯವಾದದ್ದು.
ಯುಕ್ತ ಯೋಚನೆ: ಅಂದರೆ ಮನೆಯಲ್ಲಿದ್ದಾಗ ಆಫೀಸಿನ ಯೋಚನೆ ಮಾಡಬಾರದು. ಬಾಸ್ ಏಕೆ ನನ್ನನ್ನೇ ಬೈಯ್ಯುತ್ತಾನೆ. ನನ್ನ ಪಕ್ಕದಲ್ಲಿರುವವನನ್ನು ಏಕೆ ಬೈಯ್ಯುವುದಿಲ್ಲ? ಎನ್ನುವ ವಿವಿಧ ಆಲೋಚನೆಗಳು. ಆಫೀಸಿನಲ್ಲಿದ್ದಾಗ ನನ್ನ ಹೆಂಡತಿ ಏನು ಮಾಡುತ್ತಿದ್ದಾಳೋ? ಮಕ್ಕಳೇನು ಮಾಡುತ್ತಿದ್ದಾರೋ? ಹೀಗೆ ಆಲೋಚಿಸಬಾರದು. Out of sight, out of mind. ನಾವೆಲ್ಲಾ ಈಗ ಕೈಲಾಸಪುರಿಯಲ್ಲಿ ಇದ್ದೇವೆ. ವಿವಿಧ ಪ್ರಾಂತಗಳಿಂದ ಇಲ್ಲಿಗೆ ಬಂದಿದ್ದೇವೆ. ಮನೆಯನ್ನೇ ಮರೆತಿದ್ದೇವೆ. Where there is body mind is there. ದೇಹ ಅಲ್ಲೇ ಬಿಟ್ಟು ಮನಸ್ಸೆಲ್ಲೋ ಹೋಗಬಾರದು. ಅದೇ ವಿಯೋಗ. ಯೋಗವೆಂದರೆ ಶರೀರ ಎಲ್ಲಿದೆಯೋ ಮನಸ್ಸು ಅಲ್ಲೇ ಇರುವುದು. ದೇಹ ಆಫೀಸಿನಲ್ಲಿದೆ, ಮನಸ್ಸು ಮನೆಯಲ್ಲಿದ್ದರೆ ಅದೇ ವಿಯೋಗ. ವಿಯೋಗ ಎಂಬುದು ದುಃಖಕ್ಕೆ ಮೂಲ. ಯೋಗ ಎಂಬುದು ಆನಂದಕ್ಕೆ, ಸುಖಕ್ಕೆ ಮೂಲ. ಯೋಗವೆಂದರೆ ಸಂಗಮ. ಶರೀರವಿರುವ ಕಡೆಯೇ, ಮನಸ್ಸು. ನೀನು ಅದನ್ನೇ ಯೋಚಿಸಬೇಕು. ಎಷ್ಟು ಯೋಚಿಸಬೇಕೋ ಅಷ್ಟೇ ಯೋಚಿಸಬೇಕು. ನಾಳೆ ನನಗೆ ಹತ್ತು ಸಾವಿರ ಬೇಕೆಂದರೆ, ಹತ್ತು ಗಂಟೆ ಆಲೋಚಿಸಿದರೆ ಬರುತ್ತದೆಯೇ? ಇಲ್ಲ. ನಾಳೆ ಅಲ್ಲವೇ ಬೇಕಾಗಿರುವುದು ನಾಳೆ ಯೋಚಿಸೋಣ, ಇವತ್ತಿಂದ ಏಕೆ? ನನ್ನ ಸ್ನೇಹಿತ ಒಬ್ಬ ನನ್ನನ್ನು ಭೇಟಿಯಾದ ಅವನ ಮುಖ ಚಿಂತೆಯಿಂದ ಕೂಡಿತ್ತು. ಏಕೆ ಅಷ್ಟು ದೀನನಾಗಿರುವೆ ಎಂದು ಕೇಳಿದರೆ ಮಗಳ ಮದುವೆಗಾಗಿ ಆಲೋಚಿಸುತ್ತಿದ್ದೇನೆ ಎಂದ. ಈಗ ಏಕೆ ಆ ಆಲೋಚನೆ ಎಂದರೆ ನಮ್ಮ ಮನೆಯಲ್ಲಿ ವರದಕ್ಷಿಣೆ ಕೊಡಬೇಕು. ಇಪ್ಪತ್ತು ಲಕ್ಷಗಳು ಎಂದ. ಆದರೆ ಅವನ ಮಗಳ ವಯಸ್ಸು ಇನ್ನು ಮೂರು ವರ್ಷಗಳು. ಅವನು ಈಗಿನಿಂದಲೇ ಅಳುತ್ತಿದ್ದ. ಅದು ಇಪ್ಪತ್ತು ವರ್ಷದ ಮಾತು. ನೀವೇ ಹೇಳಿ ಅವನೆಷ್ಟು ಯೋಚಿಸುತ್ತಿದ್ದಾನೆ. ಏನೋ ಹದಿನಾರು ವರ್ಷ ಬಂದ ಮೇಲೆ ಯೋಚಿಸಿದರೆ ಅದಕ್ಕೊಂದು ಅರ್ಥವಿದೆ. ಕೂಸು ಹುಟ್ಟುವ ಮುಂಚೆ ಕುಲಾವಿಯಂತೆ.
ನಿರ್ಯೋಚನೆ ಎಂದರೆ ಅನಗತ್ಯವಾಗಿ ಯೋಚಿಸ ಬಾರದು. ಕಡ್ತಾಲ್ನಲ್ಲಿರಬೇಕಾದರೆ ಹೈದರಾಬಾದ್ನ ಯೋಚನೆ ಮಾಡಬಾರದು. ಹೈದರಾಬಾದ್ನಲ್ಲಿದ್ದು ಕಡ್ತಾಲ್ನ ಯೋಚನೆ ಮಾಡಬಾರದು. ಕಡ್ತಾಲ್ ಸೇರಿದ ನಂತರ ಕಡ್ತಾಲ್ ಆಲೋಚನೆ. ಹೈದರಾಬಾದ್ ಸೇರಿದ ನಂತರ ಅಲ್ಲಿನ ಆಲೋಚನೆ, ದಾರಿ ಮಧ್ಯೆಯಲ್ಲಿ ಧ್ಯಾನ ಮಾಡಬೇಕು. ನೀನು ಯಾರನ್ನೋ ಕೊಂದಿರುವೆ, ಆದ್ದರಿಂದ, ಜೈಲಿಗೆ ಹೋಗಿರುವೆ. ನಾಲ್ಕು ವರ್ಷಗಳ ನಂತರ ಹೊರಗೆ ಬಂದ ನಂತರ ನಾನು ಏನು ಮಾಡಬೇಕು ಎಂದು ಯೋಚಿಸುವುದೇಕೆ? ಈ ನಾಲ್ಕು ವರ್ಷಗಳು ಹಾಯಾಗಿ ಜೈಲಿನಲ್ಲಿ ಧ್ಯಾನ ಮಾಡು. ಆಲೋಚನೆಗಳು ಬೇಡ. ಹೇಗೂ ಹೊರಗೆ ಬರುವುದಿಲ್ಲ. ಧ್ಯಾನ ಮಾಡಿದರೆ ೨ ತಿಂಗಳಲ್ಲಿ ಹೊರಬರುತ್ತಾನೆ. ಡೆಲ್ಲಿಯ ತಿಹಾರ್ ಜೈಲಿನಲ್ಲಿ ನಾವು ಧ್ಯಾನ ಕಲಿಸಿದ್ದೇವೆ. ಒಬ್ಬ ಹುಡುಗ ಕೊಲೆ ಮಾಡದಿದ್ದರೂ ಸಹ ಅವನ ಮೇಲೆ ಆರೋಪವಿತ್ತು. ಮೂರುವರೆ ವರ್ಷ ಜೈಲು ಶಿಕ್ಷೆಯಾಗಿತ್ತು. ಆದರೆ ಅವನು ಧ್ಯಾನ ಮಾಡಿದ ೨ ತಿಂಗಳಲ್ಲಿ ಹೊರಬಂದ.
ಕೆಲಸಕ್ಕೆಬಾರದ ಆಲೋಚನೆಗಳನ್ನು ಬಿಟ್ಟು ಕೆಲಸಕ್ಕೆ ಬರುವಂತಹ ಧ್ಯಾನ ಮಾಡಿದರೆ ಜೀವನ ಅತ್ಯಂತ ಮಧುರವಾಗಿರುತ್ತದೆ. ನಮ್ಮ ಜೀವನ ಏಕೆ ವ್ಯರ್ಥವಾಗುತ್ತಿದೆ ಎಂದರೆ, ಕೆಲಸಕ್ಕೆಬಾರದ ಆಲೋಚನೆಗಳು, ಮಾತುಗಳು, ಅಯುಕ್ತವಾದ ಯೋಚನೆಗಳು, ಅಮಿತವಾದ ಯೋಚನೆಗಳು, ಅಯುಕ್ತವಾದ, ಅಮಿತವಾದ ಭಾಷಣ, ಅಯುಕ್ತವಾದ ಆಹಾರ, ಅಮಿತವಾದ ಆಹಾರದಿಂದ ಜೀವನ ಸರ್ವನಾಶ. ಜೀವನ ಸರ್ವಮಂಗಳಕರವಾಗಿರಬೇಕು. ಈ ಒಂಬತ್ತು ಅಂಶಗಳಿಂದ ಕೂಡಿದ ಜೀವನ ವಿಧಾನವೇ ಸರಿಯಾದ ಜೀವನ ವಿಧಾನ.
ಪಿ.ಎಸ್.ಎಸ್.ಎಮ್.ನಲ್ಲಿ ನಾವು ಸರಿಯಾದ ಜೀವನ ವಿಧಾನವನ್ನು ಕಲಿಯುತ್ತೇವೆ. ಒಂದು ಸಂಗೀತ ಶಾಲೆಗೆ ಹೋಗಿ ಅಲ್ಲಿ ಸಂಗೀತ ಕಲಿಯುತ್ತೇವೆ. ಕರ್ನಾಟಕ ಸಂಗೀತ, ಶಾಸ್ತ್ರೀಯ ಸಂಗೀತ ಕಲಿಯಬೇಕು. ಕಲಿತರೆ ನಮಗೆ ಸಂಗೀತ ಬರುತ್ತದೆ. ಹಾಗೆಯೇ ಇಂಜನಿಯರಿಂಗ್ ಕಾಲೇಜ್ಗೆ ಹೋಗಿ ಸಿವಿಲ್ ಇಂಜನಿಯರಿಂಗ್, ಮೆಕಾನಿಕಲ್ ಇಂಜನಿಯರಿಂಗ್, ಎಲೆಕ್ಟ್ರಿಕಲ್ ಇಂಜನಿಯರಿಂಗ್ ಕಲಿಯುತ್ತೇವೆ. ಆದರೆ ಮನೆಯಲ್ಲಿ ಕುಳಿತರೆ ಇಂಜನಿಯರಿಂಗ್ ಬರುವುದಿಲ್ಲ. ಹಾಗೆಯೇ ಆಧ್ಯಾತ್ಮಿಕ ಶಾಸ್ತ್ರ ಜೀವನ ವಿಧಾನವನ್ನು ಕಲಿಸುವ ಕಾಲೇಜ್. ಪಿ.ಎಸ್.ಎಸ್.ಎಮ್ಗೆ ಬರದಿದ್ದರೆ ನಿಮಗೆ ಜೀವನ ವಿಧಾನ ಬರುವುದಿಲ್ಲ. ಇದು ಕಾಲೇಜ್. ಇಲ್ಲಿ ನೀನು ಯಾರು? ಎಂದು ಯಾರಾದರೂ ಕೇಳಿದರೆ ನೀವು ನಿಮ್ಮ ಹೆಸರನ್ನು ಹೇಳಬಾರದು. ನಾನು ಆತ್ಮ ಎಂದು ಹೇಳಬೇಕು.
ಭಗವದ್ಗೀತೆ ಅರ್ಧವಾದ ನಂತರ ಅರ್ಜುನನಿಗೆ ಸಂದೇಹವಾಯಿತು, ಕೃಷ್ಣನನ್ನು “ನೀನು ಯಾರು?” ಎಂದು ಕೇಳಿದ. ಇಂತಹ ಮಾತುಗಳನ್ನು ನಿನ್ನಿಂದ ನಾನು ಯಾವಾಗಲೂ ಕೇಳಲಿಲ್ಲವಲ್ಲ. ಇವನು ಕೇಳಲಿಲ್ಲ ಅವನು ಹೇಳಲಿಲ್ಲ. ಆಗ “ಅಹಮಾತ್ಮಾ ಗುಡಾಕೇಶ ಸರ್ವ ಭೂತಾಶಯ ಸ್ಥಿತಃ”| ಅಹಮಾದಿಶ್ಚ ಮಧ್ಯಂಚ ಭೂತಾನಾಯಂತ ಏವಚ|| ನೀನು ಯಾರಯ್ಯಾ? ಎಂದು ಕೇಳಿದಾಗ, ಕೃಷ್ಣ ಏನು ಹೇಳಿದ. ಅಹಮಾತ್ಮಾ ನಾನು ಆತ್ಮ ಗುಡಾಕೇಶ, ಓ ನಿದ್ರೆಯನ್ನು ಜಯಿಸಿರುವವನೇ ಎಲ್ಲರೂ ಮಾಯೆಯಲ್ಲಿದ್ದಾರೆ, ಎಲ್ಲರೂ ನಿದ್ರೆಯಲ್ಲಿದ್ದಾರೆ. ಕಣ್ಣುಗಳು ತೆರೆದೇ ಇದೆ, ಸಂಸಾರ ಮಾಡುತ್ತಿದ್ದಾರೆ ಆದರೂ ನಿದ್ರೆಯಲ್ಲಿದ್ದಾರೆ. ಮಕ್ಕಳಾಗಿವೆ, ಮನೆ ಕಟ್ಟಿಸಿದ್ದಾನೆ ಆದರೂ ಮನುಷ್ಯ ನಿದ್ರಿಸುತ್ತಿದ್ದಾನೆ. ಇದು ನಿದ್ರೆಯಲ್ಲಿ ನಡೆಯುವಂತಹುದು. ರಾತ್ರಿ ನಿದ್ರೆಯಲ್ಲಿ ನಡೆಯುತ್ತಿರುತ್ತಾನೆ. ಅವನಿಗೆ ಏನೂ ತಿಳಿಯುವುದಿಲ್ಲ ಎಲ್ಲಿ ಹೋಗುತ್ತಿದ್ದೇನೆಂದು ಆತ್ಮಜ್ಞಾನವಿಲ್ಲದವನು. ನಿದ್ರೆಯಲ್ಲಿ ನಡೆಯುವಂತಹವನು.
ಗುರ್ಜೈಫ್ ಎನ್ನುವ ಗ್ರೇಟ್ ಮಾಸ್ಟರ್ ಹೇಳಿದ್ದಾರೆ: “ಎಲ್ಲಾ ನಿದ್ರಿಸುತ್ತಿದ್ದಾರೆ ಒಬ್ಬ ಆತ್ಮಜ್ಞಾನಿ ಮಾತ್ರವೇ ಎಚ್ಚರದಿಂದ ಇರುವವನು, ಮಿಕ್ಕವರೆಲ್ಲ ನಿದ್ರಿಸುತ್ತಿರುವವರು” ಆದ್ದರಿಂದ, ನೀನು ಯಾರಯ್ಯಾ? ಎಂದು ಕೇಳಿದಾಗ, ಓ ನಿದ್ರೆಯನ್ನು ಜಯಿಸಿದವನೇ ನಾನು ಆತ್ಮ ಎಂದು ಕೃಷ್ಣ ಹೇಳುತ್ತಾನೆ. ನೀನು ನಿದ್ರೆಯನ್ನು ಜಯಿಸಿದರೆ ನಾನು ಹೇಳುವುದು ನಿನಗೆ ಅರ್ಥವಾಗುತ್ತದೆ. ನೀನು ನಿದ್ರಾಲೋಲನಾದರೆ, ಮಾಯೆಯಲ್ಲಿದ್ದರೆ ನಾನು ಹೇಳಿದ್ದು ನಿನಗೆ ಹೇಗೆ ಅರ್ಥವಾಗುತ್ತದೆ? ನಾನು ಎಲ್ಲೆಡೆಯಲ್ಲಿದ್ದೇನೆ. ನಾನು ಆದಿಯಲ್ಲಿ ಮಧ್ಯೆಯಲ್ಲಿ ಎಲ್ಲಾ ಕಡೆಯಲ್ಲೂ ಇದ್ದೇನೆ.
“ನಾವೆಲ್ಲಾ ಪರಸ್ಪರ ಸ್ನೇಹಿತರು”
ನನ್ನ ಪ್ರಿಯ ಮಿತ್ರರೇ, ನನ್ನ ಪ್ರಿಯ ಮಾಸ್ಟರ್ಗಳೇ, ನನ್ನ ಪ್ರಿಯ ದೇವರುಗಳೇ ನಾವು ತಿಳಿದುಕೊಳ್ಳಬೇಕಾದ ವಿಶೇಷ ಅಂಶವೇನೆಂದರೆ ನಾವೆಲ್ಲಾ ಪರಸ್ಪರ ಸ್ನೇಹಿತರು. ನಾವೆಲ್ಲರೂ ಎಂದರೆ ಯಾರು? ಮಾನವಕುಲ ಮತ್ತು ಪ್ರಾಣಿ ಸಾಮ್ರಾಜ್ಯ, ಮನುಜಕುಲ ಮತ್ತು ವೃಕ್ಷ ಸಾಮ್ರಾಜ್ಯ, ಮನುಜಕುಲ ಮತ್ತು ಖನಿಜ ಸಾಮ್ರಾಜ್ಯ, ಮಾನವಕುಲ ಮತ್ತು ದೇವತಾ ಸಾಮ್ರಾಜ್ಯ – ನಾವೆಲ್ಲಾ ಪರಸ್ಪರ ಮಿತ್ರರು. ಪ್ರತಿ ಗಿಡ, ಪಕ್ಷಿ, ಮೀನು, ಪ್ರತಿ ಪ್ರಾಣಿ, ದೇವರು, ದೇವತೆ, ಪ್ರತಿ ಖನಿಜ, ಭೂಮಿ, ಸೂರ್ಯ, ಪ್ರತಿ ನಕ್ಷತ್ರ – ನಾವೆಲ್ಲರೂ ಮಿತ್ರರು. ಪ್ರತಿಯೊಂದರೊಂದಿಗೂ ಮಿತ್ರತ್ವ. ಎಲ್ಲರೊಂದಿಗೆ ಮಿತ್ರತ್ವ. ನಮ್ಮ ಮುಂದೆ ನಾವು ಕಾಣಿಸಿದರೆ ನಮ್ಮೊಂದಿಗೆ ಮಿತ್ರತ್ವ.
ಕರ್ಣನು ಬಹಳ ಕಷ್ಟಪಟ್ಟು ಸಂಪಾದಿಸಿಕೊಂಡ ಕವಚ ಕುಂಡಲಗಳನ್ನು ಯಾರೋ ಭಿಕ್ಷುಕ ಬಂದು ಕೇಳಿದರೆ ಕೊಟ್ಟುಬಿಟ್ಟನು. ಅದು ಮಿತ್ರತ್ವ. ಕುಂತಿದೇವಿ ಬಂದು ಕೇಳಿದರೆ ನಿನಗೆ ಐದು ಜನ ಮಕ್ಕಳು ಯಾವಾಗಲೂ ಉಳಿಯುತ್ತಾರೆ. ಅರ್ಜುನ ಅಥವಾ ಕರ್ಣ ಇಬ್ಬರಲ್ಲಿ ಒಬ್ಬರು ಉಳಿಯುತ್ತಾರೆ ಎಂದನು. ಮಾಸ್ಟರ್ಸ್ ಎಂದರೆ ನಾವೆಲ್ಲಾ ನಮ್ಮ ನಮ್ಮ ಸ್ಥಿತಿಗತಿಗೆ, ಸ್ಥಾನಕ್ಕೆ (ಡೆಸ್ಟಿನಿ) ನಾವು ಮಾಸ್ಟರ್ಸ್. ನಾವು ಏನು ಮಾಡಬೇಕೆಂದು ನಿರ್ಣಯಿಸಿಕೊಳ್ಳುತ್ತೇವೋ ಅದೇ ಮಾಡುತ್ತೇವೆ. ಈ ಶರೀರ ಬೇಕೆಂದು ನಿರ್ಣಯಿಸಿಕೊಂಡಿದ್ದೇವೆ. ಆದ್ದರಿಂದ, ಈ ಶರೀರಕ್ಕೆ ಬಂದಿದ್ದೇವೆ. ಧ್ಯಾನ ಮಾಡಲು ನಿರ್ಣಯಿಸಿಕೊಂಡಿದ್ದೇವೆ. ಆದ್ದರಿಂದ, ಈ ಧ್ಯಾನಕ್ಕೆ ಬಂದಿದ್ದೇವೆ. ನಾವು ಏನಾಗಬೇಕೆಂದು ಇಚ್ಛಿಸುತ್ತೇವೋ ಅದೇ ಆಗುತ್ತೇವೆ. ನಾವು ನಮ್ಮ ಜೀವನಕ್ಕೆ ಮಾಸ್ಟರ್ಸ್. ನಾವು ನಮ್ಮ ಡೆಸ್ಟಿನಿಗೆ ಮಾಸ್ಟರ್ಸ್. ಇನ್ಯಾರೋ ನಿನ್ನ ಡೆಸ್ಟಿನಿಗೆ ಕಾರಣನಾಗಲಾರ. ನಿನ್ನನ್ನು ಸೃಷ್ಟಿಕರ್ತ ಮಾಡುವವನು ಮತ್ತೊಬ್ಬರಲ್ಲ. ನಿನ್ನನ್ನು ಈ ಸ್ಥಿತಿಯಲ್ಲಿ ಇರಿಸಲು ಬೇರೆ ಯಾರೂ ಇಲ್ಲ, ನಿನ್ನನ್ನು ಲಯ ಮಾಡುವವನು ಮತ್ತೊಬ್ಬನಿಲ್ಲ. ನಿನಗೆ ನೀನು ಸೃಷ್ಟಿಕರ್ತ, ಸ್ಥಿತಿಕರ್ತ, ಲಯಕರ್ತ. ನಮ್ಮ ವಾಸ್ತವಗಳನ್ನು ನಾವೇ ಸೃಷ್ಟಿಸುತ್ತೇವೆ. ನಮ್ಮ ಸ್ವಂತ ಭವಿಷ್ಯದ ಮೇಲೆ ಪರಿಪೂರ್ಣ ನಿಯಂತ್ರನಹೊಂದಿರುವವರು ನಾವೇ. ನಮ್ಮ ಗತವನ್ನು ಸೃಷ್ಟಿಸಿದ್ದವರೂ ನಾವೇ. ಎಷ್ಟು ಹೊತ್ತು ಮಾತನಾಡಬೇಕೋ, ಏನು ಮಾತನಾಡಬೇಕು ನಾವೇ ಸೃಷ್ಟಿಸಿಕೊಳ್ಳುತ್ತೇವೆ. ನಾವೇ ಸ್ಥಿತಿಯಲ್ಲಿರುತ್ತೇವೆ. ಇನ್ನು ಸಾಕು ಮಾತನಾಡುವುದು ಎಂದರೆ ಸುಮ್ಮನೆ ಕೂರುತ್ತೇವೆ. ಅಂದರೆ ಪರಿಸ್ಥಿತಿಯನ್ನು ನಾವೇ ಸೃಷ್ಟಿ ಮಾಡಿ, ಸ್ಥಿತಿಯಲ್ಲಿರಿಸಿ ಮತ್ತೆ ಲಯಗೊಳಿಸುತ್ತೇವೆ.
ನಮ್ಮ ಜೀವನದಲ್ಲಿ ಪ್ರತಿಯೊಂದೂ ನಮ್ಮ ಇಷ್ಟದ ಪ್ರಕಾರವೇ ಜರುಗುತ್ತಿದೆ. ನಮ್ಮ ಇಷ್ಟವಿಲ್ಲದೇ ಏನೂ ಜರುಗುವುದಿಲ್ಲ. ಒಬ್ಬರು ಇನ್ನೊಬ್ಬರಿಗೆ ಮಾಸ್ಟರ್ ಅಲ್ಲ ಮಿತ್ರರು. ನಿನಗೆ ಯಾರೂ ಮಾಸ್ಟರ್ ಅಲ್ಲ, ಗುರುವಲ್ಲ. ಬ್ರಹ್ಮ ಎಂದು ಯಾರೂ ಇಲ್ಲ. ನಿನಗೆ ನೀನೇ ಮಾಸ್ಟರ್. ನನಗೆ ನಾನೇ ಮಾಸ್ಟರ್. ಮೊದಲು ಅರ್ಥಮಾಡಿಕೊಳ್ಳುವುದೇನೆಂದರೆ ನಾವೆಲ್ಲಾ ಮಿತ್ರರು ಶತ್ರುಗಳಲ್ಲ. ಯಾರಾದರೂ ನಿನಗೆ ಶತ್ರು ಎಂದು ನಿಮ್ಮ ಮನಸ್ಸಿನಲ್ಲಿದ್ದರೆ ನೀನು ಎನ್ಲೈಟೆನ್ಡ್ ಮಾಸ್ಟರ್ ಅಲ್ಲ. ನೀನು ಆಧ್ಯಾತ್ಮಿಕ ವಿಜ್ಞಾನಿಯಲ್ಲ, ಆಧ್ಯಾತ್ಮಿಕನಲ್ಲ. ನೀನು ನಕಾರಾತ್ಮದಲ್ಲಿದ್ದೀಯಾ.
ಒಂದು ಚಿಕ್ಕ ಕಥೆ ಓದಿ. ಚೈನಾದಲ್ಲಿ ಒಂದು ಗ್ರಾಮವಿದೆ. ಗ್ರಾಮದ ಸುತ್ತಲೂ ಅರಣ್ಯವಿದೆ. ಒಬ್ಬ ರೈತ ಆ ಗ್ರಾಮದಲ್ಲಿದ್ದ, ಅವನ ಬಳಿ ಕುದುರೆಗಳಿದ್ದವು. ಒಂದು ದಿನ ಒಂದು ಕುದುರೆ ಕಾಡಿಗೆ ಓಡಿಹೋಯಿತು. ಆಗ ಗ್ರಾಮಸ್ಥರೆಲ್ಲಾ ರೈತನೊಂದಿಗೆ ನಿನ್ನ ಕುದುರೆ ಕಾಡಿಗೆ ಓಡಿಹೋಯಿತು ನೀನೇ ದುರದೃಷ್ಟವಂತ ಎಂದು ಹೇಳಿದರು. ನಾವೇ ಅದೃಷ್ಟವಂತರು ನಮ್ಮ ಕುದುರೆಗಳೆಲ್ಲಾ ನಮ್ಮ ಬಳಿಯೇ ಇದೆ. ನಿನಗೆ ನಷ್ಟ ಉಂಟಾಯಿತು ಎಂದರು. ಆಗ ರೈತ ನನ್ನ ಕುದುರೆ ಕಾಡಿಗೆ ಹೋಗಿದೆ ಅಷ್ಟು ಮಾತ್ರ ನನಗೆ ಗೊತ್ತು. ಅದೃಷ್ಟವೋ, ದುರಾದೃಷ್ಟವೋ. ಶುಭವೋ, ಅಶುಭವೋ ನಿಮಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ, ಆ ಮೇಲಿನವನಿಗೂ ಗೊತ್ತಿಲ್ಲ. ಲಾಭವೋ, ನಷ್ಟವೋ ಗೊತ್ತಿಲ್ಲ ಎಂದನು. ಯಾವಾಗ ಏನು ಜರುಗುತ್ತದೋ ಗೊತ್ತಿಲ್ಲ. ಯಾವ ಸಂದರ್ಭವೂ ನಿಮಗೆ ಶತ್ರುವಲ್ಲ. ಯಾವ ವ್ಯಕ್ತಿಯೂ ನಮ್ಮ ಶತ್ರುವಲ್ಲ. ಯಾವ ಸಂದರ್ಭವೂ ನಮಗೆ ವಿರುದ್ಧವಲ್ಲ.
ಒಂದು ವಾರದ ನಂತರ ಅಡವಿಗೆ ಹೋದ ಕುದುರೆ ಇನ್ನು ಹತ್ತು ಕುದುರೆಗಳನ್ನು ಕರೆದುಕೊಂಡು ಬಂದಿತು. ಆಗ ಗ್ರಾಮಸ್ಥರು ನೀನು ಎಷ್ಟು ಅದೃಷ್ಟವಂತ. ಒಂದು ಕುದುರೆ ಹತ್ತು ಕುದುರೆಗಳನ್ನು ಕರೆ ತಂದಿತು ಎಂದರು. ನಿನಗೆ ಶುಭವಾಯಿತು ಎಂದರು. ಆಗ ಮತ್ತೆ ಆ ರೈತನೆಂದ ನನ್ನ ಕುದುರೆ ಹೋಗಿ ಹತ್ತು ಕುರುದರೆಗಳನ್ನು ತಂದಿತು ಅದು ನಿಜ. ಆದರೆ, ಅದರಿಂದ ನನಗೆ ಅದು ಶುಭವೋ ಅಶುಭವೋ, ಅದೃಷ್ಟವೋ ದುರದೃಷ್ಟವೋ ನನಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಆ ಮೇಲಿನವನಿಗೂ ಗೊತ್ತಿಲ್ಲ ಎಂದನು. ಯಾರಿಗೂ ತಿಳಿಯದು ನಾವು ಆ ದೇವರಿಗೆ ಗೊತ್ತು ಎನ್ನುತ್ತೇವೆ. ಏನೂ ಗೊತ್ತಿಲ್ಲ ಅವನಿಗೆ. ನಾವೇ ಮೇಲಿನಿಂದ ಬಂದಿದ್ದೇವೆ.
ಇನ್ನೊಂದು ದಿನ ಆ ರೈತನ ಮಗ ಆ ಕಾಡಿನಿಂದ ಬಂದ ಕುದುರೆಯ ಮೇಲೆ ಹತ್ತಿ ಕಾಲು ಮುರಿದುಕೊಂಡುಬಿಟ್ಟನು. ಆಗ ಗ್ರಾಮಸ್ಥರೆಲ್ಲಾ, ರೈತನಿಗೆ ನಾವೇ ಅದೃಷ್ಟವಂತರು. ನಮ್ಮ ಕುದುರೆ ಕಾಡಿಗೆ ಹೋಗಲಿಲ್ಲ. ಹತ್ತು ಕುದುರೆಗಳನ್ನು ತರಲಿಲ್ಲ. ನಮ್ಮ ಮಗ ಅದರ ಮೇಲೆ ಸವಾರಿ ಮಾಡಲಿಲ್ಲ. ಕಾಲು ಮುರಿದುಕೊಳ್ಳಲಿಲ್ಲ. ನಾವೇ ಅದೃಷ್ಟವಂತರು. ನೀನೇ ದುರದೃಷ್ಟವಂತ. ನಿನಗೆ ಅಶುಭವಾಯಿತು ಎಂದರು. ನಂತರ ದೇಶದಲ್ಲಿ ಯುದ್ಧದ ವಾತಾವರಣ ಬಂದಿತು. ಪ್ರತಿ ಊರಿನಲ್ಲಿ ಚೆನ್ನಾಗಿರುವ ಮಕ್ಕಳನ್ನು ಸೈನ್ಯಕ್ಕೆ ಸೇರಿಸಿಕೊಂಡರು. ರೈತನ ಮಗನನ್ನು ಬಿಟ್ಟು ಊರಿನಲ್ಲಿದ್ದ ಮಿಕ್ಕವರನ್ನೆಲ್ಲಾ ಸೈನ್ಯಕ್ಕೆ ಸೇರಿಸಿಕೊಂಡರು. ಆಗ ಗ್ರಾಮಸ್ಥರು ನಿನ್ನ ಮಗನೇ ಅದೃಷ್ಟವಂತ. ನಮ್ಮ ಮಕ್ಕಳು ಕುದುರೆ ಮೇಲೆ ಹತ್ತಿ, ಬಿದ್ದು ಕಾಲು ಮುರಿದುಕೊಂಡಿದ್ದರೆ ಮನೆಯಲ್ಲೇ ಇರುತ್ತಿದ್ದರು ಎಂದರು.
ಆದರೆ ನಮಗೆ ಆಗುವ ಪರಿಸ್ಥಿತಿಗಳು ಅದೃಷ್ಟವೋ ದುರದೃಷ್ಟವೋ ನೀನೆ ಹೇಗೆ ಹೇಳುವೆ. ನಿನ್ನ ಕುರಿತು ನೀನು, ನಿನ್ನ ಜೀವನವನ್ನು, ಬೇರೆಯವರನ್ನು ನೀನು – ಹೇಗೆ ನಿರ್ಣಯಿಸುತ್ತೀಯೆ? ಜಡ್ಜ್ ಮಾಡುತ್ತೀಯೆ? ಹೇಗೆ ಬೇರೆಯವರು ನಿಮ್ಮ ಶತ್ರುಗಳಾಗುತ್ತಾರೆ. ಎಲ್ಲಾ ಜರುಗುತ್ತಾ ಇರುತ್ತದೆ. ಎಲ್ಲದಕ್ಕೂ ಸಾಕ್ಷಿಯಾಗಿದ್ದರೆ ಅದರಿಂದ ಶುಭವಾಗುತ್ತದೆ, ಸಾರವಿರುತ್ತದೆ. ಎಲ್ಲಾ ನಮ್ಮ ಒಳಿತಿಗಾಗಿ ನಡೆಯುತ್ತದೆ ಎಂದು ತಿಳಿದುಕೊಳ್ಳಬೇಕು.
ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ |
ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯಃ ಸ ಮೇ ಪ್ರಿಯಃ ||
ಯೋನ ದೃಶ್ಯತಿ ಯಾವುದಕ್ಕೂ ಹರ್ಷಿಸದವನು. ಯೋನ ದ್ವೇಷಿ ಯಾವುದನ್ನೂ ದ್ವೇಷಿಸದವನು. ನ ಶೋಚತಿಃ ಯಾವುದಕ್ಕೂ ಅಳಲಾರ, ನಕಾಂಕ್ಷತಿ ಯಾವುದನ್ನೂ ಕೋರುವುದಿಲ್ಲ. ಶುಭಾಶುಭ ಪರಿತ್ಯಾಗಿ; ನನಗೆ ಶುಭ ಜರುಗಿತು ಎಂದಾಗಲಿ ಅಶುಭ ಜರುಗಿತು ಎಂದಾಗಲಿ ಬೇರೆಯವರಿಗೆ ಶುಭವಾಯಿತು ಎಂದಾಗಲಿ, ಬೇರೆಯವರಿಗೆ ಅಶುಭವಾಯಿತು ಎಂದಾಗಲಿ ಯಾವುದಕ್ಕೂ ಮಧ್ಯೆ ಪ್ರವೇಶಿಸಲಾರ. ಅವನೇ ಶುಭ ಅಶುಭ ಪರಿತ್ಯಾಗಿ, ಬರೀತ್ಯಾಗಿಯಲ್ಲ, ಪರಿತ್ಯಾಗಿ.
ಸಾಧನೆ, ಪರಿಸಾಧನೆ, ಮಹಾಪರಿಸಾಧನೆ. ನಿರ್ವಾಣ, ಪರಿನಿರ್ವಾಣ, ಮಹಾ ಪರಿನಿರ್ವಾಣ. ಭಕ್ತಿವಂತ ಯಾರಿಗೆ ಭಕ್ತಿ. ವ್ಯಕ್ತಿಯ ಮೆಲೆ ಭಕ್ತಿಯಲ್ಲ. ಸೃಷ್ಟಿಯೊಂದರ ರಚನೆಯಲ್ಲಿ ಭಕ್ತಿ. ಸೃಷ್ಟಿಯ ನಿರ್ಮಾಣದ ಮೇಲೆ ಭಕ್ತಿ. ವಿಜ್ಞಾನದ ಮೇಲೆ ಭಕ್ತಿ. ಶಾಸ್ತ್ರದ ಮೇಲೆ ಭಕ್ತಿ. ಯಾವ ವ್ಯಕ್ತಿಗೆ ಶಾಸ್ತ್ರದ ಮೇಲೆ ಭಕ್ತಿಯಿರುತ್ತದೋ ಅವನೇ ಭಕ್ತ. ವ್ಯಕ್ತಿಯ ಮೇಲೆ ಭಕ್ತಿಯಲ್ಲ ಅದು ತುಂಬಾ ಚಿಕ್ಕದು. ಅದೇ ಬೆಳೆದು ದೊಡ್ಡದಾಗಿ ವ್ಯಕ್ತಿ ಮರೆಯಾಗಿ ಒಟ್ಟಾರೆ ಸೃಷ್ಟಿಯ ಮೇಲೆ, ಸಮಸ್ತ ಜೀವರಾಶಿಯ ಮೇಲೆ, ಘಟನೆಗಳ ಮೇಲೆ ನಾವು ಏಕವಾಗಿರುತ್ತೇವೆ ಅದೇ ಭಕ್ತಿ. ನಮ್ಮ ಮೇಲೆ ನಮಗೆ ಭಕ್ತಿ. ಅಹಂ ಬ್ರಹ್ಮಾಸ್ಮಿ ಎಂದು ತಿಳಿದುಕೊಂಡಾಗ, ಓಹೋ ನಾನೇ ಎಲ್ಲಾ ಎನ್ನುವ ಭಕ್ತಿ ಬರುತ್ತದೆ. ಭಕ್ತಿಯ ವ್ಯಾಖ್ಯಾನವೇನು ಎಂದರೆ ಸ್ವಸ್ವರೂಪಾನುಸಂಧಾನ ಭಕ್ತಿರೀತ್ಯಬಿಧೇಯತೆ. ನಾವು ನಮ್ಮ ರೂಪವನ್ನು ಪೂರ್ತಿಯಾಗಿ ತಿಳಿದುಕೊಳ್ಳುವುದೇ ಭಕ್ತಿ. ನಮಗೆ ನಾವೇ ಅಂಕಿತಗೊಳ್ಳುವುದೇ ಭಕ್ತಿ. ಕರ್ತವ್ಯದ ಮೇಲೆ ಭಕ್ತಿಯಿರಬೇಕು. ಯದಾರ್ಥದ ಮೇಲೆ ಭಕ್ತಿ. ಕೃಷ್ಣನ ಮೇಲೋ ರಾಮನ ಮೇಲೊ ಭಕ್ತಿಯಲ್ಲ. ಅದು ಚಿಕ್ಕ ಭಕ್ತಿ. ಎಲ್ಲರಲ್ಲೂ, ಶಾಸ್ತ್ರದ ಮೇಲೂ, ಸಮಾನವಾಗಿ, ನಮ್ಮ ಮೇಲೆ ಸಮಾನವಾಗಿ ಅಂಕಿತವಾಗಬೇಕು ಎನ್ನುವುದು ನಿಜವಾದ ಭಕ್ತಿ.
ಆ ರೈತನಿಗೆ ಒಳ್ಳೆಯದಾಯಿತೋ, ಕೆಟ್ಟದಾಯಿತೋ ಜಡ್ಜ್ಮೆಂಟ್ ಮಾಡಲಿಲ್ಲ. “ನನ್ನ ಕುದುರೆ ಕಾಡಿಗೆ ಹೋಯಿತು. ಹತ್ತು ಕುದುರೆಗಳನ್ನು ತಂದಿತು. ಅದು ಒಳ್ಳೆಯದೋ ಕೆಟ್ಟದೋ ನನಗೆ ತಿಳಿಯದು. ಅದರಲ್ಲೂ ನನ್ನ ಮಗ ಕುಳಿತು ಕಾಲು ಮುರಿದುಕೊಂಡ. ಅದು ಒಳ್ಳೆಯದೋ ಕೆಟ್ಟದೋ ನನಗೆ ತಿಳಿಯದು ಅಂದ.
ನಾವು ಯಾರಾದರೂ ಕಾಲು ಮುರಿದುಕೊಂಡರೆ ಅಯ್ಯೋ ಪಾಪ ಎಂದುಕೊಳ್ಳುತ್ತೇವೆ. ನಿನಗೆ ಹೇಗೆ ಗೊತ್ತು, ಅವನಿಗೆ ರೆಸ್ಟ್ ಬೇಕೇನೋ ಅವನು ಹೆಚ್ಚಾಗಿ ಕೆಲಸ ಮಾಡುತ್ತಿದ್ದಾನೇನೋ. ಕಾಲು ಮುರಿದರೆ ಮನೆಯಲ್ಲಿ ಕುಳಿತು ಭಗವದ್ಗೀತೆ ಓದುತ್ತಾನೆ. ಧ್ಯಾನ ಮಾಡುತ್ತಾನೆ. ಕಾಲು ಮುರಿಯದೇ ಹೋದರೆ ಅವನು ಭಗವದ್ಗೀತೆ ಓದುತ್ತಿರಲಿಲ್ಲ, ಧ್ಯಾನವನ್ನು ಮಾಡುತ್ತಿರಲಿಲ್ಲ, ಪಿರಮಿಡ್ಗೂ ಬರುತ್ತಿರಲಿಲ್ಲ.
ಆದ್ದರಿಂದ, ನಾವು ಅಜ್ಞಾನದಿಂದ ನನಗೆ ಕೆಟ್ಟದಾಯಿತು, ಬೇರೆಯವರಿಗೆ ಕೆಟ್ಟದಾಯಿತು ಎಂದುಕೊಳ್ಳುತ್ತೇವೆ. ನಾವು ಎನ್ನುವುದೇ ಇಲ್ಲ. ಇನ್ನು ಕೆಟ್ಟದ್ದೆನ್ನುವುದು ಹೇಗೆ ಇರುತ್ತದೆ. ನಾವು ಏನಾದರೂ ಕಲಿಯಲು ಎಲ್ಲಾ ಒಂದು ಅವಕಾಶವೇ. ಬಾಲಗಂಗಾಧರ್ ತಿಲಕ್ರವರನ್ನು ಐದು ವರ್ಷ ಅಂಡಮಾನ್ ಜೈಲಿಗೆ ಕಳುಹಿಸಿದರು. ಅವರಿಗೆ ಏನೂ ಕೆಟ್ಟದ್ದಾಗಲಿಲ್ಲ. ಬದಲಾಗಿ ದೊಡ್ಡ ಭಗವದ್ಗೀತೆಯ ಪುಸ್ತಕವನ್ನು ಬರೆದರು. ಅವರು ಭಗವದ್ಗೀತೆ ಬರೆದುದರಿಂದ ನಮಗೆ ಒಳ್ಳೆಯದಾಯಿತು. ಲೋಕಕಲ್ಯಾಣವಾಯಿತು. ನಿಮ್ಮನ್ನು ಒಂದು ಕೋಣೆಯಲ್ಲಿಟ್ಟು ಬೀಗ ಹಾಕುತ್ತೇನೆ. ನಿಮಗೆ ಅದು ಒಳ್ಳೆಯದೋ ಕೆಟ್ಟದ್ದೊ. ನೀವು ಹಾಯಾಗಿ ಕುಳಿತು ಧ್ಯಾನ ಮಾಡಬಹುದು ಯಾರ ತಂಟೆಯೂ ಇರದು.
ನೋಡುವ ದೃಷ್ಟಿಯ ಅನುಸಾರ ನೋಡುವುದು ಇರುತ್ತದೆ. You see what you want to always see. ನಮಗೆ ಅನ್ಯಾಯ ಜರುಗಿದೆ ಎಂದರೆ ಅನ್ಯಾಯ ಜರುಗುತ್ತದೆ. ನ್ಯಾಯ ಜರುಗಿದೆ ಎಂದರೆ ನ್ಯಾಯವೇ ಜರುಗಿದೆ. ಅನ್ಯಾಯವಿಲ್ಲ, ದುಃಖವೂ ಇಲ್ಲ. ರಿಚಾರ್ಡ್ ಬಾಕ್ “The mark of your ignorance is the depth of your belief injustice and tragedy”. ಎಂದಿದ್ದಾರೆ. ದೊಡ್ಡ ಆಧ್ಯಾತ್ಮಿಕ ಶಾಸ್ತ್ರಜ್ಞರು ಇವರು. ನಿನಗೆ ಎಷ್ಟು ಅನ್ಯಾಯವಾಗಿದೆ, ಅಕ್ರಮವಾಗಿದೆ ಎಂದುಕೊಳ್ಳುತ್ತಿರುವೆಯೋ ನಿನಗೆ ಅಷ್ಟು ಅಜ್ಞಾನವಿದೆ ಎಂದರ್ಥ. ನಾನು ಶರೀರ ಎಂಬ ದೃಷ್ಟಿಯಲ್ಲಿ ನೋಡಿದರೆ ನಿನಗೆ ಅನ್ಯಾಯವಾಗಿದೆ, ಅಕ್ರಮವಾಗಿದೆ ಎಂದುಕೊಳ್ಳುವೆ. ನಾನು ಆತ್ಮ ಎನ್ನುವ ದೃಷ್ಟಿಯಲ್ಲಿ ನೋಡಿದರೆ ಎಲ್ಲಿಯೂ ಅಕ್ರಮ, ಅನ್ಯಾಯವಿಲ್ಲ. ಪ್ರತಿ ಸಂದರ್ಭವೂ ಕೂಡಾ ನಿನ್ನಲ್ಲಿ ಇನ್ನೊಂದು ಬದಲಾವಣೆಯನ್ನು ತರುತ್ತದೆ. ಅದಕ್ಕೆ ಹೊರಗೆ ಬದಲಾವಣೆ ಬಂದಿದೆ. ಹೇಗೆಬಂದಿದೆ ನಿನ್ನೊಳಗಿನ ಬದಲಾವಣೆಯಿಂದ, ಕಾಲ ಹಿಂದೆಸರಿಯುತ್ತದೆ. ಪ್ರತಿ ಸಂದರ್ಭದಲ್ಲೂ ಬೇರೆಯವರಿಂದ ಕಲಿಯಬೇಕು. Either A or B, B or C, C or D, If the situation changes there is another oppourtunity for you to learn a different lesson. ಸಂದರ್ಭ ಬದಲಾಗುತ್ತಿದ್ದಂತೆ ನಿನಗೆ ಇನ್ನೊಂದು ಅವಕಾಶ ಒಂದು ಪಾಠ ಕಲಿಯಲು ಸಿಗುತ್ತದೆ.
ಚಳಿಗಾಲ ದೊಡ್ಡದೋ, ಬೇಸಿಗೆಕಾಲ ದೊಡ್ಡದೋ ಯಾವುದು ಸರಿ, ತಪ್ಪು ಈ ಎರಡರಲ್ಲಿ. ಮಾನವನಿಗೆ ಬರುವ ಸುಖಗಳು ತಪ್ಪೋ ಕಷ್ಟಗಳು ತಪ್ಪೋ. ಯಾವುದೂ ತಪ್ಪಲ್ಲ. ಸುಖಗಳು ಒಂದು ವಿಧವಾದ ಬೆಳವಣಿಗೆಯಾದರೆ, ಕಷ್ಟಗಳು ಇನ್ನೊಂದು ವಿಧವಾದ ಬೆಳವಣಿಗೆ ಆಗಿರುತ್ತದೆ.
ಪ್ರತಿ ಸಂದರ್ಭವೂ ನಿನ್ನ ಊಹೆಯಾನುಸಾರ, ದೃಷ್ಟಿಕೋನವನ್ನನುಸರಿಸಿ, ನಿನ್ನ ಜಡ್ಜ್ಮೆಂಟ್ಗೆ ಅನುಗುಣವಾಗಿ ಆ ಒಂದು ಫಲಿತಾಂಶ ಬರುತ್ತದೆ. ಅನುಕೂಲಕರ ಆಶೀರ್ವಾದವನ್ನಾಗಿ ಬದಲಾಯಿಸಿಕೊಳ್ಳಲಾಗದ ದುರಂತಗಳು ಯಾವುದೂ ಇಲ್ಲ. ಹಾಗೆಯೇ, ದುರಂತಗಳನ್ನಾಗಿ ಬದಲಾಯಿಸಿಕೊಳ್ಳಲಾಗದ ಆಶೀರ್ವಾದಗಳು ಅನುಕೂಲಗಳು ಯಾವುದೂ ಇಲ್ಲ. (There is no disaster which cannot be turned into a blessing. There is no blessing which cannot be turned into a disaster.) ನೋಡುವ ದೃಷ್ಟಿಗೆ ಅನುಗುಣವಾಗಿ ನೋಡುವುದು ಇರುತ್ತದೆ. ಇದೇ ಪರಮಸತ್ಯ. ಯಾರ ಬಳಿ ಏನು ಹೆಚ್ಚಾಗಿದ್ದರೆ ಅದನ್ನು ಲೋಕಕ್ಕೆ ನೀಡಬೇಕು. ನಿನ್ನಲ್ಲಿ ಹೆಚ್ಚಾಗಿ ಹಣವಿದ್ದಾಗ ನೀನು ಕೊಡುವ ಗುಣವನ್ನು ಬೆಳೆಸಿಕೊಳ್ಳಬೇಕು. ನನಗೆ ಸಮಯವಿದೆ. ಆದ್ದರಿಂದ ನಾನು 24 ಗಂಟೆಗಳು ಎಲ್ಲರಿಗೂ ಕೊಡುತ್ತಾ ಇರುತ್ತೇನೆ. ನಿಮ್ಮಲ್ಲಿ ಹಣವಿದ್ದರೆ, ಅದನ್ನು ಇತರರಿಗೆ ಕೊಡುವುದಲ್ಲಿ ಯೋಚಿಸಬೇಡಿ. ನಿಮ್ಮಲ್ಲಿ ಸಮಯವಿದ್ದರೆ ಅದನ್ನು ನಿಮಗೆ ನೀವೇ ಕೊಟ್ಟುಕೊಳ್ಳಿ ಅಥವಾ ಬೇರೆಯವರಿಗಾಗಿ ಸಮಯವನ್ನು ನೀಡಿ. ಒಂದು ಕ್ಷಣವೂ ವ್ಯರ್ಥಮಾಡುವುದು ಬೇಡ. ಯಾರಾದರೂ ನಮಗೆ ಹೊಡೆದರೆ, ಅವರು ಹೊಡೆದರೆಂದು ನೀನು ಅಳಬೇಡ. “ನನ್ನ ಗತಜನ್ಮದಲ್ಲಿ ನಾನು ಮಾಡಿದ ಕರ್ಮಗಳು ಪ್ರಕ್ಷಾಳನ (ಕಳೆಯಿತು) ಎಂದು ಸಂತೋಷಿಸಿ ಅವನಿಗೆ ಕೃತಜ್ಞತೆ ಸಲ್ಲಿಸಬೇಕು. ನಾವು ಈ ಜನ್ಮದಿಂದಲೇ ಬಂದಿಲ್ಲ. ಅನೇಕ ಜನ್ಮಗಳಿಂದ ಬಂದಿದ್ದೇವೆ ಎಂದು ತಿಳಿಯಕೊಳ್ಳುವುದೇ ಆಧ್ಯಾತ್ಮಿಕ ಶಾಸ್ತ್ರ”.
ಪ್ರತಿ ಚಿಕ್ಕ ವಿಷಯವನ್ನೂ ಅನೇಕಾನೇಕ ಜನ್ಮಗಳ ಪರಂಪರೆಗಳಿಂದ ಬಂದಿತೆಂದು ಆಲೋಚಿಸಬೇಕೆ ಹೊರತು ಕೇವಲ, ಈ ಜನ್ಮದ್ದೆಂದು ಮಾತ್ರ ಆಲೋಚಿಸಬಾರದು. ಒಂದು ಸಾವಿರ ಪುಟಗಳ ಪುಸ್ತಕವಿದೆ. ಮಧ್ಯೆ 499ನೆಯ ಪುಟ ತೆಗೆದು ಓದಿದರೆ ನಿನಗೇನಾದರೂ ಅರ್ಥವಾಗುತ್ತದೆಯೇ? ಹಾಗೆಯೇ ಈ ಜನ್ಮದ್ದು ಮಾತ್ರ ನೀನು ಆಲೋಚಿಸಿದರೆ ನಿನಗೇನು ಅರ್ಥವಾಗುವುದಿಲ್ಲ. 499ನೆಯ ಪುಟದ ಮುಂಚೆ 498 ಪುಟಗಳಿವೆ. ಅವೆಲ್ಲಾ ಓದದ ಹೊರತು ನಿನಗೆ ಕಥೆ ಅರ್ಥವಾಗುವುದಿಲ್ಲ. ಹಾಗೆಯೇ ಈ ಜನ್ಮದ ಕಥೆ ನಿನಗೆ ಅರ್ಥವಾಗದು. ನಾನು ಹೀಗೇಕೆ ಹುಟ್ಟಿದೆ? ನನಗೇಕೆ ಎರಡು ಕಾಲುಗಳೂ ಇಲ್ಲ? ಎರಡು ಕಣ್ಣುಗಳೂ ಏಕೆ ಇಲ್ಲ? ಬಡವನಾಗಿ ಏಕೆ ಹುಟ್ಟಿದೆ? ಒಂದೆ ಪುಟ ಓದಿದರೆ ಏನೂ ಅರ್ಥವಾಗದು. ಎಲ್ಲಾ ಪುಟಗಳೂ ಓದಿದರೆ ಮಾತ್ರವೇ ಎಲ್ಲಾ ಅರ್ಥವಾಗುತ್ತದೆ. ಜನ್ಮಪರಂಪರೆಯಲ್ಲಿ ಆಲೋಚಿಸಿದರೆ, ಪ್ರತಿ ಜನ್ಮ, ಇಲ್ಲಿರುವ ಪ್ರತಿಯೊಬ್ಬರ ಜನ್ಮ, ಇಲ್ಲಿಗೆ ಬರದೇ ಇರುವವರ ಜನ್ಮಗಳೂ ಕರಾರುವಾಕ್ಕಾಗಿವೆ (ಪರ್ಫೆಕ್ಟ್ ಆಗಿದೆ), ನೆನಪಿನಲ್ಲಿದೆ. ಕೇವಲ ಒಂದೇ ಜನ್ಮದ ಬಗ್ಗೆ ಆಲೋಚಿಸಿದರೆ ನೀನು ಆಧ್ಯಾತ್ಮಿಕ ವಿಜ್ಞಾನಿಯಲ್ಲ. ನೀನು ವಿವೇಕಿಯಲ್ಲ. ನಿನಗೆ ಸತ್ಯದ ಮೇಲೆ ಅರಿವಿಲ್ಲ. ಎಷ್ಟೋ ಜನ್ಮಗಳಾದ ನಂತರವೇ ಯಾರಾದರೂ ಈ ವಿಧವಾಗಿ ಧ್ಯಾನಕ್ಕೆ ಬರುತ್ತಾರೆ. ಧ್ಯಾನಕ್ಕೆ ಬಂದು ಆತ್ಮಜ್ಞಾನವನ್ನು ಸಂಪಾದಿಸಿಕೊಂಡು ನಾನು ಶರೀರವಲ್ಲ ಆತ್ಮ ಎಂದು ತಿಳಿದುಕೊಳ್ಳುತ್ತಾರೆ.
“ಬಹೂನಾಂ ಜನ್ಮನಾ ಯಂತೇ ಜ್ಞಾನವಾನ್ಮಾಂ ಪ್ರಪದ್ಯತೆ” ಎಷ್ಟೋ ಜನ್ಮಗಳಾದ ನಂತರ ಮನುಷ್ಯ ತನ್ನನ್ನು ತಾನು ತಿಳಿದುಕೊಳ್ಳುತ್ತಾನೆ. ಇದು ಎಲ್ಲರಿಗೂ ಒಂದೇ. ಬೇಸಿಗೆಕಾಲ ಎಲ್ಲರಿಗೂ ಬೇಸಿಗೆ ಕಾಲವೇ, ವಸಂತ ಋತು ಎಲ್ಲರಿಗೂ ವಸಂತಋತುವೇ, ಸಕ್ಕರೆ ಎಲ್ಲರಿಗೂ ಸಿಹಿಯಾಗಿರುತ್ತದೆ. ಉಪ್ಪು ಅಷ್ಟೇ. ಮೆಣಸಿನಕಾಯಿ ಎಲ್ಲರಿಗೂ ಖಾರವಾಗಿರುತ್ತದೆ. ಎಲ್ಲರೂ ತಾಯಿಯ ಗರ್ಭದಿಂದಲೇ ಹುಟ್ಟುತ್ತಾರೆ. ಎಲ್ಲರೂ ಶರೀರ ಬಿಡುತ್ತಾರೆ. ಬಿಟ್ಟ ನಂತರ ಸೂಕ್ಷ್ಮಶರೀರಧಾರಿಗಳಾಗುತ್ತಾರೆ. ಇದು ಸಾಮಾನ್ಯ. ಪ್ರತಿಯೊಂದು ನಮಗೆ ಸಹಾಯಕವಾಗುತ್ತದೆ. ಯಾವುದೋ ಒಂದು ಕಾರ್ಯಕ್ಕೆ, ಸುಗುಣಕ್ಕೆ, ಯಾವುದೋ ಒಂದು ಬೆಳವಣಿಗೆಗೆ, ಸಾವು ಎನ್ನುವುದು ಇಲ್ಲ. ಬರುತ್ತೇವೆ ಹೋಗುತ್ತೇವೆ. ಜನನವಿಲ್ಲ ಮರಣವಿಲ್ಲ. ಆತ್ಮಪದಾರ್ಥವೆನ್ನುವುದು ಸಾಗುತ್ತಾ ಹೋಗುತ್ತದೆ. ವಿಧವಿಧವಾದ ಲೋಕಗಳನ್ನು ತಿರುಗುತ್ತಾ, ಅನುಭವಗಳನ್ನು ಹೊಂದುತ್ತಾ, ವಿಧವಿಧವಾದ ಋತುಗಳೊಂದಿಗೆ ಏಕವಾಗುತ್ತಾ, ಪ್ರತಿಯೊಂದರಲ್ಲೂ ಒಳ್ಳೆಯ ಪರಿಸ್ಥಿತಿಗಳನ್ನು, ಅರಿವುಗಳನ್ನು ಸಂಪಾದಿಸಿಕೊಳ್ಳುತ್ತದೆ. ಇದೇ ಆಧ್ಯಾತ್ಮಿಕ ವಿಜ್ಞಾನ.
PSSMovement ಎಲ್ಲರಿಗೂ ಆಧ್ಯಾತ್ಮಿಕ ವಿಜ್ಞಾನವನ್ನು ಬೋಧಿಸಲೆಂದೇ ಹುಟ್ಟಿದೆ. ಒಂದೇ ಜನ್ಮವಲ್ಲ. ಅನೇಕ ಜನ್ಮಗಳ ಕೋನದಿಂದ ಆಲೋಚಿಸಬೇಕು. ದ್ರೌಪದಿ ಗತಜನ್ಮದಲ್ಲಿ ಒಳ್ಳೆಯ ಅಂದವಾದ ಗಂಡ ಬೇಕೆಂದು ಕೋರಿಕೊಂಡಳು. ನಂತರ ನನ್ನ ಗಂಡ ತುಂಬಾ ಬಲಿಷ್ಠವಾಗಿರಬೇಕು ಎಂದುಕೊಂಡಳು. ನನ್ನ ಗಂಡ ಯೋಗೀಶ್ವರನಾಗಿ ಕೂಡಾ ಇರಬೇಕೆಂದು ಕೋರಿಕೊಂಡಳು. ಹೀಗೆ ವಿಧವಿಧವಾದ ಕೋರಿಕೆಗಳಿಂದ ಮುಂದಿನ ಜನ್ಮದಲ್ಲಿ ಐದು ಜನ ಗಂಡಂದಿರನ್ನು ಆ ಗುಣಗಳಿರುವವರನ್ನು ಪಡೆದಳು. ಅವಳು ಕೋರಿಕೊಂಡಿದ್ದಕಷ್ಟೇ ಅಲ್ಲ. ನಾವು ಕೋರಿಕೊಂಡಿದ್ದೇ, ನಾವು ಸಂಕಲ್ಪಿಸಿದಂತೆಯೇ, ನಾವು ಯೋಚಿಸಿದಂತೆಯೇ ಆಗುತ್ತದೆ. ಯದ್ಭಾವಂ ತದ್ಭವತಿ.
ಮುಕ್ತಾಭಿಮಾನಿ ಮುಕ್ತೋಹಿ ಬಂಧೋಬದ್ಧಾಭಿಮಾಸ್ಯ ಭಿಃ |
ಕಿಂ ವಂದತೀ ಯ ಸಂದೇಹಂ ಯಾ ಮತಿಃ ಸ ಗತಿಃ ರ್ಭವೇತ್||
ನಾವು ಮುಕ್ತಿಯನ್ನು ಅಭಿಮಾನಿಸಿದರೆ ಮುಕ್ತಿಯನ್ನು ಹೊಂದುತ್ತೇವೆ. ಬಂಧವನ್ನು ಅಭಿಮಾನಿಸಿದರೆ ಬಂಧವನ್ನೇ ಹೊಂದುತ್ತೇವೆ. ನಮ್ಮ ’ಮತಿ’ ಹೇಗಿದೆಯೋ ನಮ್ಮ ’ಗತಿ’ಯೂ ಹಾಗೆಯೇ ಇರುತ್ತದೆ. ನಿಮ್ಮ ಮನಸ್ಸು ನಿಮ್ಮ ಸ್ಥಾನ, ಗಮ್ಯವನ್ನು ಸೃಷ್ಟಿಸುತ್ತದೆ. ಮತಿ ಎಂದರೆ ಮನಸ್ಸು (ಮೈಂಡ್) ‘ಗತಿ’ ಎಂದರೆ, ಸ್ಥಾನ- ಗಮ್ಯ is destiny, ಮತಿ is mind. ನನ್ನ ಮತಿಯಿಂದ ಈ ಗತಿ ಬಂತು. We all create our own reality. ನಾನು ಎನ್ಲೈಟೆನ್ ಆಗಬೇಕು, ಆತ್ಮಜ್ಞಾನಿ ಆಗಬೇಕು, ನನಗೆ ಮೂರನೆಯ ಕಣ್ಣು ಉತ್ತೇಜಿತವಾಗಿ ನನ್ನ ಜನ್ಮಗಳೆಲ್ಲಾ ನಾನು ನೋಡಿಕೊಳ್ಳಬೇಕು, ನನ್ನಿಂದ ಪ್ರಪಂಚವೆಲ್ಲಾ ಚೆನ್ನಾಗಿರಬೇಕು, ನನ್ನಿಂದ ಪ್ರಪಂಚವೆಲ್ಲಾ ಸಸ್ಯಾಹಾರಿಗಳಾಗಬೇಕು, ಎಲ್ಲರೂ ಧ್ಯಾನಿಗಳಾಗಬೇಕು, ಎಲ್ಲರ ಮನೆಯಲ್ಲೂ ಪಿರಮಿಡ್ ನಿರ್ಮಾಣವಾಗಬೇಕು ಎನ್ನುವುದೇ ನನ್ನ ಕೋರಿಕೆ. ಎಲ್ಲರೂ ಆಧ್ಯಾತ್ಮಿಕ ಶಾಸ್ತ್ರಜ್ಞರಾಗಬೇಕೆಂಬುದು ನನ್ನ ಕೋರಿಕೆ. ಹಾಗೆಯೇ ಆಗುತ್ತದೆ. ನಾನು ಕೋರಿಕೊಂಡಿದ್ದೇನೆ. ಆದ್ದರಿಂದ ಹಾಗೆಯೇ ಆಗುತ್ತದೆ. ಭವಿಷ್ಯದಲ್ಲಿ ನಮಗೇನು ಬೇಕೋ ಅದರತ್ತ ನಮ್ಮ ಸಂಕಲ್ಪಗಳಿರಬೇಕು. ಸಂಕಲ್ಪಿಸಿಕೊಂಡಿದ್ದನ್ನೇ ನಾವು ಪಡೆಯುತ್ತೇವೆ. ಒಂದು ಹೆಜ್ಜೆ ಮುಂದಕ್ಕೆ ಒಂದು ಹೆಜ್ಜೆ ಹಿಂದಕ್ಕೆ ಹಾಕಬಾರದು. ಒಂದು ಸಂಕಲ್ಪವಿಟ್ಟರೆ ಅದಕ್ಕೆ ವಿಕಲ್ಪವಿಡಬಾರದು. ಯಾವಾಗಲೂ ಮುಂದಡಿ ಇಡಬೇಕೆ ಹೊರತು ಹಿಂದಕ್ಕೆ ಅಲ್ಲ. ಒಂದು ಹೆಜ್ಜೆ ಮುಂದೆ ಇಟ್ಟು ಎರಡು ಹೆಜ್ಜೆ ಹಿಂದಕ್ಕೆ ಇಟ್ಟರೆ ಏನಾಗುತ್ತದೆ. ವಿಕಲ್ಪಗಳು ಬೇಡ ಸಂಕಲ್ಪವೇ ಬೇಕು.
ಈವತ್ತು ಪರೀಕ್ಷೆ ಬರೆದೆ ಅನುತ್ತೀರ್ಣನಾದೆ. ಇನ್ನು ಪರೀಕ್ಷೆ ಬರೆಯುವುದಿಲ್ಲ ಎಂದರೆ ಹೇಗೆ? ಇವತ್ತು ಅನುತ್ತೀರ್ಣನಾದರೇನು, ನಾಳೆ ಉತ್ತೀರ್ಣನಾಗುತ್ತೇನೆ. ಅಥವಾ ನಾಳೆ ಅನುತ್ತೀರ್ಣನಾದರೆ ಇನ್ನೊಂದು ದಿನ ಉತ್ತೀರ್ಣನಾಗುತ್ತೇನೆ. ಯಾವುದೋ ಒಂದು ದಿನ ಅದರ ಅಂತ್ಯ ನೋಡುತ್ತೇನೆ ಎನ್ನಬೇಕು. ಎಲ್ಲರೂ ಹಾಗೆಯೇ ಇರಬೇಕು. ಆಗ ಆ ಒಂದು ಗುರಿ ಸಾಧನೆಯಾಗುತ್ತದೆ. ಅದು ನಿನ್ನದಾಗುತ್ತದೆ. 700 ಕೋಟಿ ಮಂದಿ ಈ ಪ್ರಪಂಚದಲ್ಲಿದ್ದಾರೆ. ಪ್ರತಿಯೊಬ್ಬರೂ ಸಸ್ಯಾಹಾರಿಗಳಾಗುತ್ತಾರೆ. ಧ್ಯಾನಿಗಳಾಗಿಯೇ ತೀರುತ್ತಾರೆ. ಪ್ರತಿಯೊಬ್ಬರಿಗೂ ಮೂರನೆಯ ಕಣ್ಣು ಉತ್ತೇಜಿತವಾಗಿಯೇ ಆಗುತ್ತದೆ. ಎಲ್ಲರೂ ಬುದ್ಧರಾಗುತ್ತಾರೆ. ಅದು ನಮ್ಮ ಸಂಕಲ್ಪವಾಗಿರಬೇಕು. ಈ ಧ್ಯಾನಮಹಾಚಕ್ರದಲ್ಲಿ ಪ್ರತಿದಿನ, ಕ್ಷಣ, ನಮ್ಮ ಸಂಕಲ್ಪವೇನೆಂದರೆ, ಸರ್ವೇಜನ ಸುಖಿನೋಭವಂತು. ಪ್ರತಿಯೊಬ್ಬರೂ ಸಂತೋಷದಿಂದ ಬದುಕಬೇಕು. ಪ್ರತಿಯೊಬ್ಬರೂ ಸಹ ವಿವೇಕಿಗಳಾಗಬೇಕು/ಆತ್ಮಸಾಕ್ಷಾತ್ಕಾರ ಹೊಂದಬೇಕು. ನಮ್ಮ ಶಕ್ತಿ ಅನಂತವಾದದ್ದು. ನಮ್ಮ ಆಲೋಚನಾಶಕ್ತಿಯು , ನಮ್ಮ ಆತ್ಮಶಕ್ತಿಯು ಅನಂತವಾದುದು.
ಒಂದು ದೊಡ್ಡ ಕೆರೆಯಿದೆ ಒಂದು ಕಲ್ಲು ಹಾಕಿದ್ದೇನೆ. ಆ ಅಲೆ ಅಲ್ಲೇ ಇರುತ್ತದೆಯೇ? ಇಲ್ಲ ಅದು ಕೊನೆಯವರೆಗೂ ಸಾಗುತ್ತಾ ಇರುತ್ತದೆ. ಅಲೆ ಅಲೆಯಾಗಿ ಹರಡುತ್ತದೆ. ಇಲ್ಲಿ ನಾವು ಧ್ಯಾನ ಮಾಡುತ್ತಿದ್ದೇವೆ. ಪ್ರಪಂಚವೆಲ್ಲಾ ಧ್ಯಾನ ತರಂಗಗಳು ಸೃಷ್ಟಿಸಲ್ಪಡುತ್ತವೆ! ಇಲ್ಲಿ ನಾವು ಹಾಯಾಗಿ ಜೀವಿಸುತ್ತಿದ್ದೇವೆ. ಅದು ಎಲ್ಲ ಕಡೆ ಪ್ರಸರಿಸುತ್ತದೆ. ಇಲ್ಲಿ ನಾವು ಅಜ್ಞಾನದಿಂದ ಇದ್ದೇವೆಂದರೆ ಆ ಅಜ್ಞಾನವೇ ಎಲ್ಲಾ ಕಡೆ ಪ್ರಸರಿಸುತ್ತದೆ. ಇಲ್ಲಿ ನಾವು ಸುಜ್ಞಾನದಿಂದ ಇದ್ದರೆ, ಆ ಸುಜ್ಞಾನವೆಲ್ಲಾ ಎಲ್ಲಾ ಕಡೆ ಪ್ರಸರಿಸುತ್ತದೆ. ಜಗತ್ತಿನಲ್ಲಿ ಪ್ರತಿಯೊಂದೂ ಸಹ ಪರಸ್ಪರ ಜೋಡಣೆಗೊಂಡಿದೆ. ಒಂದು ಕಡೆ ಕಲ್ಲು ಹಾಕಿದರೆ ಅದರ ಅಲೆ ಎಷ್ಟೋ ದೂರ ಹರಡುವುದನ್ನು ನಾವು ನೋಡಬಹುದು. ಇಲ್ಲಿ ಧ್ಯಾನ ಮಾಡುತ್ತಿದ್ದೇವೆ, ಪ್ರಪಂಚವೆಲ್ಲಾ ಸ್ಪಂದಿಸುತ್ತಿದೆ. Everything is connected.
ಹಾಗೆಯೇ, ಇಡೀ ಸೃಷ್ಟಿಯೇ ಒಂದು ಸಂಪರ್ಕಜೋಡಣೆ ಇದ್ದಂತೆ. ಎಲ್ಲಿ ಏನು ಮಾಡಿದರೂ ಅದು ಇನ್ನೊಂದು ಕಡೆ ಪ್ರಭಾವಿಸಲ್ಪಡುತ್ತದೆ. ಎಲ್ಲವೂ ಜೋಡಣೆಗೊಂಡಿದೆ. ಯಾವುದೂ ಸಹ ಪ್ರತ್ಯೇಕವಲ್ಲ. ನಾವೆಲ್ಲರೂ ದೊಡ್ಡ ಧ್ಯಾನಿಗಳು. ನಮ್ಮ ಪ್ರಭಾವ ಪ್ರಪಂಚವೆ ಅಲ್ಲದೆ, ಭೂಮಂಡಲವೇ ಅಲ್ಲದೆ, ಎಷ್ಟೊ ಗೆಲಾಕ್ಸಿಗಳಿವೆಯೊ, ಎಷ್ಟೊ ಗ್ರಹಗಳು ಇದೆಯೋ ಅವುಗಳ ಮೇಲೆ ನಮ್ಮ ಪ್ರಭಾವ ಪ್ರಸರಿಸುತ್ತದೆ. ಈ ಶರೀರ ಬೇರೆ ಆ ಶರೀರ ಬೇರೆ ಕಾಣಬಹುದು. ಆದರೆ, ಪ್ರತಿಯೊಂದೂ ಸಹ ಜೋಡಣೆಗೊಂಡಿವೆ. ಈ ಮೈಂಡ್ ಬೇರೆ ಆ ಮೈಂಡ್ ಬೇರೆ ಅಲ್ಲ. ನಾನು ನಿಮ್ಮನ್ನು ಪ್ರಭಾವಿಸುತ್ತಿದ್ದೇನೆ, ನೀವು ನನ್ನನ್ನು ಪ್ರಭಾವಿಸುತ್ತಿದ್ದೀರಿ. ಎಲ್ಲವೂ ಎಲ್ಲರನ್ನೂ ಪ್ರಭಾವಿಸುತ್ತಿದೆ. ಎಲ್ಲ ಕಾಲಕ್ಕೂ ಇದರ ಹೊರತಾದುದು ಬೇರೆ ಇಲ್ಲ. ಆದ್ದರಿಂದ ಎಲ್ಲರೂ ಸೇವೆಯಲ್ಲಿ, ಧ್ಯಾನದಲ್ಲಿ, ಸ್ವಾಧ್ಯಾಯ, ಸಜ್ಜನಸಾಂಗತ್ಯದಲ್ಲಿ ಸಕಲ ಕಲೆಗಳಲ್ಲಿ ಸಕಲ ವಿದ್ಯೆಗಳಲ್ಲಿ ಔನ್ನತ್ಯವನ್ನು ಸಾಧಿಸಬೇಕು.
“ಸರಿಯಾದ ಆಧ್ಯಾತ್ಮಿಕ ಜೀವನ”
My dear friends, my dear masters and my dear Gods, ನಾವು ಯಾವಾಗಲು ತಿಳಿದುಕೊಳ್ಳಬೇಕಾದ ಸತ್ಯವೇನೆಂದರೆ, ಪ್ರತಿಕ್ಷಣ ಚಪ್ಪಾಳೆ ಹೊಡೆಯುತ್ತಿರಬೇಕು. ಒಮ್ಮೆ ನಾನು 1994ನಲ್ಲಿ ನಮ್ಮ ಪಿರಮಿಡ್ ಮಾಸ್ಟರ್ ಒಬ್ಬರ ಮನೆಗೆ ತಿರುಪತಿಗೆ ಹೋದಾಗ ಅವರ ಮೂರು ವರ್ಷ ಮಗಳ ಹುಟ್ಟಿದ ದಿನ. ಕೆಲವು ಚಾಕ್ಲೇಟ್ ತೆಗೆದುಕೊಂಡು ಹೋದೆನು. ಅರ್ಧ ಚಾಕ್ಲೇಟ್ಗಳು ಕೊಟ್ಟು ಅರ್ಧ ಚಾಕ್ಲೇಟನ್ನು ಪಕ್ಕಕ್ಕೆ ಇಟ್ಟೆನು. ಅವರು ಏಕೆ ಎಂದು ಕೇಳಿದರು. ಮಗು ಬರ್ತ್ಡೇ ಅದಕ್ಕೆ ಚಾಕ್ಲೇಟ್ ಕೊಟ್ಟೆ. ಇನ್ನು ೨ ನಿಮಿಷದಲ್ಲಿ ಮಗು ಸಾಯುತ್ತದೆ ಆಗ ಇನ್ನು ಉಳಿದ ಚಾಕ್ಲೇಟ್ ಕೊಡುತ್ತೇನೆ ಎಂದೆನು. ಮನುಷ್ಯ ಯಾವಾಗಲಾದರೂ ಸಾಯಬಹುದು ನೆನಪಿಡಿ ಜನನಕ್ಕೂ, ಮರಣಕ್ಕೂ ಚಾಕ್ಲೇಟ್ಗಳನ್ನು ಕೊಡಬೇಕು. ಆಗ ಮಗುವಿನ ತಾಯಿ ಗೊಳೋ ಎಂದು ಅಳತೊಡಗಿದಳು. ಶುಭವಾಗಿ ಹುಟ್ಟಿದ ದಿನ ಆಚರಿಸಿಕೊಳ್ಳುತ್ತಿದ್ದರೆ ಬರ್ತ್ಡೇ ಪಾರ್ಟಿಗೆ ಕರೆದರೆ ಸಾವಿನ ಬಗ್ಗೆ ಮಾತಾಡುತ್ತಿದ್ದಾರಲ್ಲ ಎಂದು ದುಃಖಿಸಿದಳು.
“ಹುಟ್ಟುವುದು ನಿಜ ಸಾಯುವುದು ನಿಜ” ನಿಜವಾದದ್ದಕ್ಕೆ ನಾವು ಯಾವಾಗಲೂ ಚಪ್ಪಾಳೆ ಹೊಡೆಯಬೇಕು. ಈ ಕಾರ್ಯಕ್ರಮಕ್ಕೆ ನಾವು ಬರುತ್ತೇವೆ. ಶುರುವಾದಾಗ ಚಪ್ಪಾಳೆ ಹೊಡೆಯುತ್ತೇವೆ. ಕಾರ್ಯಕ್ರಮ ಮುಗಿದು ಹೊರಡುವಾಗ ಚಪ್ಪಾಳೆ ಹೊಡೆಯುತ್ತೇವೆ ಅಲ್ಲವೇ. ಇಲ್ಲಿ ವೇದಿಕೆ ಮೇಲೆ ಬಂದಿದ್ದೇವೆ ಏನು ಕೆಲಸ ಮಾಡಬೇಕೋ ಆ ಕೆಲಸಮಾಡಿ ಹೊರಟು ಹೋಗುತ್ತೇವೆ ಅಷ್ಟೇ. ನಾಟಕ ಮಾಡಲು ಬಂದಿದ್ದೇವೆ. ಪಾತ್ರ ಮಾಡುತ್ತೇವೆ ಹೊರಟು ಹೋಗುತ್ತೇವೆ. ಕೆಲವರು ಸ್ಟೇಜ್ ಮೇಲೆ ೨ ದಿನ ಇರಬಹುದು, 2 ಗಂಟೆಗಳಿರಬಹುದು ಅವರವರ ಪಾತ್ರಕ್ಕೆ ಅನುಗುಣವಾಗಿ ಅವರು ಇರುವುದು ನಡೆಯುತ್ತದೆ. ಈ ದಿನ ಹುಟ್ಟಿದ ಮಗು ನಾಳೆ ಸಾಯುತ್ತಾನೆ. ಹುಟ್ಟಿದಾಗ ಚಾಕ್ಲೇಟ್, ಸತ್ತಾಗ ಚಾಕ್ಲೇಟ್ ಕೊಡಬೇಕು. ಅದಕ್ಕೆ ಚಪ್ಪಾಳೆ ಹೊಡೆಯಿರಿ. ಹುಟ್ಟಿದಾಗ ಎಷ್ಟು ಆನಂದದಿಂದ ಇರುತ್ತೇವೋ ಸತ್ತಾಗಲೂ ಅಷ್ಟೇ ಆನಂದದಿಂದ ಇರಬೇಕು. ಹಾಗಿರಬಲ್ಲೆರಿ ಎಂದಾಗ ಮಾತ್ರ ನಿಮ್ಮ ಆತ್ಮಜ್ಞಾನ ಸಂಪೂರ್ಣವಾಗಿದೆ ಎಂದರ್ಥ. ಆತ್ಮಜ್ಞಾನ ಸಂಪೂರ್ಣವಾಗುವವರೆಗೂ ಮತ್ತೆ ಮತ್ತೆ ಅಭ್ಯಾಸ ಮಾಡುತ್ತಾ ಇರುತ್ತೇವೆ. ಹುಟ್ಟುತ್ತಲೇ ಇರುತ್ತೇವೆ. ಎಲ್ಲಿಯವರಿಗೆ ಎಂದರೆ ಈ ಜನನ ಮರಣ ಎರಡೂ ಸಮಾನ ಎಂದು ತಿಳಿದುಕೊಳ್ಳುವವರೆಗೂ. ಹುಟ್ಟಿದಾಗಲೂ ಚಾಕ್ಲೇಟ್ ಕೊಟ್ಟು ಸತ್ತಾಗಲೂ ಚಾಕ್ಲೇಟ್ ಕೊಡುತ್ತೀರೋ ಆಗ ನಿಮ್ಮ ಆತ್ಮಜ್ಞಾನ ಪರಿಸಮಾಪ್ತಿಯಾಗಿದೆ ಎಂದರ್ಥ. ಇದು ಲಿಟ್ಮಸ್ ಪರೀಕ್ಷೆ. ಆಸಿಡ್ ಅಥವಾ ಆಲ್ಕಲೈನ್ ಎಂದು ತಿಳಿಯಲು ಲಿಟ್ಮಸ್ ಪೇಪರ್ ಪರೀಕ್ಷೆ ಬರುತ್ತದೆ. ಅದು ಕೆಂಪಾದರೆ ಆಸಿಡ್, ನೀಲಿಯಾದರೆ ಆಲ್ಕಲೈನ್.
ಇವತ್ತು ಹುಟ್ಟಿದ ಮಗು ನಾಳೆ ಸತ್ತರೆ ನಾವು ಅದೇ ಆನಂದದಿಂದ ಇದ್ದರೆ ನಮಗೆ ಆತ್ಮಜ್ಞಾನ ಉಂಟಾಗಿದೆ ಎಂದರ್ಥ. ಇದು ಸ್ವಯಂ ಪರೀಕ್ಷೆ. ಈಗತಾನೆ ಮದುವೆ ಮಾಡಿಕೊಂಡಿರುವೆ ಮರುದಿನ ಗಂಡ/ಹೆಂಡತಿ ಸತ್ತಾಗ ಅತ್ತರೆ ಆಗ ಆತ್ಮಜ್ಞಾನವಿಲ್ಲ ಎಂದರ್ಥ. ಯಾವಾಗ ಯಾವುದ್ದಕ್ಕೆ ಅತ್ತರೂ ಆತ್ಮಜ್ಞಾನವಿಲ್ಲ ಎಂದರ್ಥ.
ಅಶೋಚ್ಯಾನನ್ವ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ |
ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ ||
ಅಯ್ಯೋ ನನ್ನ ಗಂಡ, ಹೆಂಡತಿ, ಮಕ್ಕಳು, ತಾಯಿ, ತಂದೆ ಸತ್ತರು ಎಂದು ನೀನು ಅಳಲಾರಂಭಿಸಿದರೆ ನಿನಗೆ ಅಂಕಗಳಿಲ್ಲ. ಅಳುವುದೇಕೆ? ‘ಜನನ’ ಜನನವಲ್ಲ ‘ಮರಣ’ ಮರಣವಲ್ಲ. ಅದಕ್ಕೆ ಪಂಡಿತನು ಅಳುವುದಿಲ್ಲ. ವೇದಿಕೆಯ ಮೇಲೆ ಬರುತ್ತೇವೆ ವೇದಿಕೆಯಿಂದ ಹೋಗುತ್ತೇವೆ. ವೇದಿಕೆ ಇಳಿದ ನಂತರ ಬೇರೆ ಕೆಲಸಗಳಿರುತ್ತವೆ. ಭೂಲೋಕದಲ್ಲಿ ಕೆಲಸವಿರುವುದರಿಂದ ಅಲ್ಲಿನ ಮೇಲಿನ ಲೋಕದ ಕೆಲಸಗಳನ್ನು ಬಿಟ್ಟುಬಂದಿದ್ದೇವೆ. ಇಲ್ಲಿಗೆ ಬರುವುದು ಎಷ್ಟು ಮುಖ್ಯವೋ ಅಲ್ಲಿಗೆ ಹೋಗುವುದು ಸಹ ಅಷ್ಟೇ ಮುಖ್ಯ. ಸಂಗೀತಗಾರರು ಹೈದರಾಬಾದ್ ಬಿಟ್ಟು ಕಡ್ತಾಲ್ಗೆ ಬಂದಿದ್ದಾರೆ. ಇಲ್ಲಿ ಕೆಲಸ ಮುಗಿದ ಮೇಲೆ ಮತ್ತೆ ಹೈದರಾಬಾದ್ಗೆ ಹೋಗಲೇಬೇಕು. ಅಲ್ಲಿ ಅವರಿಗೆ ಹೆಂಡತಿ ಮಕ್ಕಳು ಇದ್ದಾರೆ. ಅಲ್ಲಿ ಬೇಕಾದಷ್ಟು ಕೆಲಸವಿದೆ. ಕಡ್ತಾಲ್ಗೆ ಬರುವುದು ಎಷ್ಟು ಮುಖ್ಯವೋ ಹೈದರಾಬಾದ್ಗೆ ಹೋಗುವುದು ಅಷ್ಟೇ ಮುಖ್ಯ. ನೀನು ಅನೇಕ ಲೋಕಗಳು ತಿರುಗುತ್ತಿರುತ್ತೀಯಾ. ಅನೇಕ ಕೆಲಸಗಳನ್ನು, ಪಾಠಗಳನ್ನು ಮಾಡಲು ಕಲಿತುಕೊಳ್ಳಲು ಬಂದು ಹೋಗುತ್ತಿರುತ್ತೀಯಾ. ಹಾಗಿದ್ದಾಗ ಹುಟ್ಟು ಸಾವು ಎಲ್ಲಿದೆ?
ಅಜೋಶಿಕ್ಯಃ ಶಾಶ್ವತ್ಸೋಯಂ ಪುರಾಣೋ ನಸಹ್ನಯತೇ ನ ಹನ್ಯ ಮಾನೇ ಶರೀರೆ |
ಸಜಾಯತೇ ಮ್ರಿಯತೇ ವಾ ಕದಾಚಿತ್ ನಾಯಂ ಭೂತ್ವಾಭ ವಿತಾ ವಾ ನ ಭೂಯಃ ||
ಈ ಆತ್ಮಕ್ಕೆ ಹುಟ್ಟಿಲ್ಲದ್ದು, ಸಾವಿಲ್ಲದ್ದು. ಸಾವಿಗೆ ರೋಧಿಸಿದರೆ ನಿನಗೆ ಆತ್ಮಜ್ಞಾನವಿಲ್ಲ. ಒಂದು ಕ್ಷಣ ಮಾತ್ರ ಅಳಬಹುದು. ಎರಡು ಕ್ಷಣ ಅಳಬಾರದು. ಇಲ್ಲಿ ಅಂದರೆ ಎಲ್ಲರು ನೋಡುತ್ತಾರೆ ಅಳದಿದ್ದರೆ, ಏನೆಂದುಕೊಳ್ಳುತ್ತಾರೆ. ಆದ್ದರಿಂದ, ನಾನು ಅರ್ಧ ಚಾಕಲೇಟ್ ಕೊಟ್ಟೆನು. ಇನ್ನೊಂದು ಐದು ನಿಮಿಷಕ್ಕೆ ಮತ್ತೆ ಸಾಯುತ್ತಾಳೇನೋ ಎಂದು ಇನ್ನರ್ಧ ಹಾಗೇ ಇಟ್ಟುಕೊಂಡೆ. All the world is a stage, we are all mere actors, we struct and fume, do our part and depart ಎಂದು ವಿಲಿಯಂ ಷೇಕ್ಸ್ಪಿಯರ್ ಹೇಳಿದ್ದಾರೆ. ಜಗವೆಲ್ಲಾ ಒಂದು ದೊಡ್ಡ ನಾಟಕರಂಗ. ನಾವುಗಳೆಲ್ಲಾ ಕೇವಲ ಪಾತ್ರಧಾರಿಗಳು. ಇನ್ನೂ ಎಷ್ಟು ಪಾತ್ರಗಳಿವೆ. ಇನ್ನೂ ಎಷ್ಟು ಕೆಲಸಗಳಿವೆ. ನನ್ನ ಪಾತ್ರವೇನು? ಭಗವದ್ಗೀತೆ ಹೇಳುವುದು, ಸತ್ಯವನ್ನು ಹೇಳುವುದು, ಎಲ್ಲರೂ ಆನಂದವಾಗಿರಬೇಕೆಂದು ಚಪ್ಪಾಳೆ ಹೊಡೆಸುವುದು. ಇದು ನನ್ನ ಪಾತ್ರ. ನಾವೆಲ್ಲರೂ ಪಾತ್ರಧಾರಿಗಳು. ಇಲ್ಲಿ ರಾಜನ ಪಾತ್ರ ದೊಡ್ಡದು. ರಕ್ಷಕನ ಪಾತ್ರ ದೊಡ್ಡದು. ಯಾವ ಪಾತ್ರವನ್ನು ನೀನು ಚೆನ್ನಾಗಿ ನಿರ್ವಹಿಸಿದರೆ, ಪೋಷಿಸಿದರೆ ಅದೇ ದೊಡ್ಡದು. ಅದಕ್ಕಿಂತ ಪಾತ್ರದಲ್ಲಿ ಏನು ದೊಡ್ಡತನವಿಲ್ಲ.
ಅಬ್ರಹಂ ಲಿಂಕನ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಏನಂದರು ಗೊತ್ತೆ, ನನಗಿಂತ ನನ್ನ ತಂದೆಯೇ ಉನ್ನತವಾದವನು. ಅವರ ತಂದೆ ಚಪ್ಪಲಿ ಹೊಲೆಯುವವರು. ಇವರು ಅಮೇರಿಕಾಗೆ ಪ್ರೆಸಿಡೆಂಟ್ ಆದರೂ ಆತ ತನ್ನ ತಂದೆಯೇ ಉನ್ನತವಾದವನು ಎನ್ನುತ್ತಾನೆ. ಆತ ಚಪ್ಪಲಿ ಹೊಲೆಯುವುದರಲ್ಲಿ ಪಾರಂಗತ, ಪರಿಪೂರ್ಣ (ಪರ್ಫೆಕ್ಟ್) ಆದರೆ, ನಾನು ಪ್ರೆಸಿಡೆಂಟ್ ಆಗಲು ಅಷ್ಟು ಪರಿಪೂರ್ಣನಲ್ಲ ಎಂದು ಹೇಳುವುದು ಇದರ ಯಥಾರ್ಥ.
ನೀವು ಮಾಡುವ ಕೆಲಸದಲ್ಲಿ ನಿರ್ವಹಿಸುವ ಪಾತ್ರದಲ್ಲಿ ಪರಿಪೂರ್ಣತೆ ತೋರಿಸಬೇಕು. ನಾನು ಒಬ್ಬ ಆತ್ಮಜ್ಞಾನಿಯ ಪಾತ್ರ ನಿರ್ವಹಿಸುತ್ತಿದ್ದೇನೆ. ರಾಮನು ಆತ್ಮಜ್ಞಾನಿಯಾದರೂ ಆತ್ಮಜ್ಞಾನಿಯ ಪಾತ್ರ ಹಾಕಲಿಲ್ಲ. ಹೆಂಡತಿಯು ಹೋದರೆ ಅಳುತ್ತಾ ಕುಳಿತುಕೊಂಡ. ಆ ಪಾತ್ರ ನಿರ್ವಹಿಸಿದ. ಅಷ್ಟೇ ಹೊರತು ಆತನಿಗೆ ಆತ್ಮಜ್ಞಾನವಿಲ್ಲ ಎಂದಲ್ಲ. ಸೀತಾ ವಿಯೋಗವಾದರೆ ದುಃಖಿಸಿದ ಎಂದರೆ, ಆ ಪಾತ್ರ ಪೋಷಿಸಿದ ಅಷ್ಟೇ ನಾಟಕವಾಡಿದ ಅಷ್ಟೇ. ಆತನಿಗೆ ದುಃಖವಿಲ್ಲ. ನಾವೆಲ್ಲಾ ಪಾತ್ರಧಾರಿಗಳು. “ನಾನಾಟಿ ಬ್ರತುಕು ನಾಟಕಮು” ಎಂದು ಅನ್ನಮಯ್ಯ ಹೇಳಿದ್ದಾರೆ. “ನಾಲ್ಕು ದಿನಗಳ ಈ ಬದುಕು ನಾಟಕವು”. “ಕಾನಕ ಕನ್ನದಿ ಕೈವಲ್ಯಮು”. “ಈ ಎರಡು ಕಣ್ಗಳಿಂದ ನೋಡದೇ ಮೂರನೆಯ ಕಣ್ಣಿಂದ ನೋಡುವುದೇ ಕೈವಲ್ಯ”ವು. ಹುಟ್ಟುವುದು ನಿಜ. ಹೋಗುವುದು ನಿಜ. ಈ ನಡುವೆ ನೀನು ಮಾಡುವುದು ನಾಟಕ. ಯಾವ ಪಾತ್ರ ತೆಗೆದುಕೊಂಡರೂ ಸರಿ ಪರ್ಫೆಕ್ಟ್ ಆಗಿ ನಿರ್ವಹಿಸಬೇಕು. ನಾವು ಯಾವ ರಾಗ ನುಡಿಸುತ್ತೇವೊ ಆ ರಾಗ ಪರ್ಫೆಕ್ಟ್ ಆಗಿ ಇರಬೇಕೆಂದು ಪ್ರಯತ್ನಿಸಬೇಕು. ಯಾವ ತಾಳ ನುಡಿಸುತ್ತೇವೊ ಆ ತಾಳದಲ್ಲಿ ಪರ್ಫೆಕ್ಷನ್ ಇರಬೇಕು. ಅಡಿಗೆ ಮಾಡಿದರೆ ಅಡಿಗೆಯಲ್ಲಿ ಪರ್ಫೆಕ್ಷನ್ ಬೇಕು. ಹೆಣ್ಣಾಗಿ ಹುಟ್ಟಿದರೆ ಹೆಣ್ಣಾಗಿ, ರಾಜನಾಗಿ ಹುಟ್ಟಿದರೆ ರಾಜನಾಗಿ, ಗಂಡಾಗಿ ಹುಟ್ಟಿದರೆ ಗಂಡಾಗಿ ಯಾವ ಸಂದರ್ಭವಾದರೂ ಅದರಲ್ಲಿ ಪರ್ಫೆಕ್ಷನ್ ಇರಬೇಕು. ಎಲ್ಲಾ ನಾಟಕವೇ ಯಾರೂ ಇಲ್ಲಿ ದೊಡ್ಡವರಲ್ಲ. ಕೃಷ್ಣನು ಹೆಚ್ಚು, ಅರ್ಜುನ ಕಡಿಮೆ, ಪಾಂಡವರು ಹೆಚ್ಚು ಕೌರವರು ಕಡಿಮೆ ಯಾವುದೂ ಅಲ್ಲಾ. ಆ ಪಾತ್ರ ದೊಡ್ಡದು. ದುರ್ಯೋಧನ ಹೇಳಿದ, ಚಾನಾಯಿ ಧರ್ಮಃ ನ ಚ ಮೇ ಪ್ರವೃತ್ತಿ ಚಾನಾಮಿ ಅಧರ್ಮಃ ನಚಮೇ ನಿವೃತ್ತಿಃ ಧರ್ಮವೆಂದರೆ ಏನೆಂದು ನನಗೆ ಗೊತ್ತು. ಆದರೆ, ಅದು ನನ್ನ ಪಾತ್ರವಲ್ಲ ಅಧರ್ಮವೇ ಮಾಡಬೇಕೆನಿಸುತ್ತಿದೆ. ಅದೇ ನನ್ನ ಪಾತ್ರ. ಅದೇ ನಾನು ಮಾಡಬೇಕು.
ಇಲ್ಲಿಂದ ನಾವು ಮೇಲಿನ ಲೋಕಗಳನ್ನು ನೋಡುತ್ತಿದ್ದೇವೆ. ಮೇಲಿನ ಲೋಕಗಳಿಂದ ಇಲ್ಲಿ ನೋಡುವಂತಾಗಬೇಕು. ಅದು ಆತ್ಮಜ್ಞಾನವೆಂದರೆ. ಅಲ್ಲಿಂದ ಇಲ್ಲಿ ನೋಡಿದರೆ ಇದೆಲ್ಲಾ ಚಿಕ್ಕ ಸುಂದರ ನಾಟಕ. ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಪ್ರಾಪಂಚಿಕತೆಯೆಂದರೆ ಈ ಶರೀರ ನಾನೆಂದು ತಿಳಿದು ಇಲ್ಲಿಂದ ಅಂದರೆ, ಈಕಡೆಯಿಂದ ಆಕಡೆಗೆ ನೋಡುತ್ತೇವೆ. ಆಧ್ಯಾತ್ಮಿಕತೆ ಎಂದರೆ ಆತ್ಮ ನಾನೆಂದು ತಿಳಿದು, ಆ ಕಡೆಯಿಂದ ಈ ಶರೀರ ನೋಡುತ್ತೇವೆ. ಇದೇ ವ್ಯತ್ಯಾಸ ಆಗ ಸತ್ಯ ದೃಗ್ಗೋಚರವಾಗುವುದು, ತಿಳಿಯಾಗುವುದು. ಆಗ ನಾವೆಲ್ಲರೂ ಪ್ರತಿದಿನ ಪ್ರತಿಕ್ಷಣ ಚಪ್ಪಾಳೆ ಹೊಡೆಯುತ್ತಲೇ ಇರುತ್ತೇವೆ.
ಇಲ್ಲಿಂದ ಅಲ್ಲಿ ನೋಡಿದರೆ ಯಾವಾಗಲೂ ಅಳುತ್ತೀರ. ಅಲ್ಲಿಂದ ಈಕಡೆಗೆ ಜೀವನವನ್ನು ನೋಡಿದರೆ ಯಾವಾಗಲೂ ಚಪ್ಪಾಳೆ ಹೊಡೆಯುತ್ತಿರುತ್ತೇವೆ. ಇಲ್ಲಿಂದ ಮೇಲಿನ ಲೋಕ ನೋಡಿದರೆ ನಾವು ನರರು, ಮೇಲಿನ ಲೋಕದಿಂದ ಕೆಳಗಿನ ಲೋಕ ನೋಡಿದರೆ ನಾವು ನಾರಾಯಣರಾಗುತ್ತೇವೆ. ನೀನು ನೋಡುವ ನೋಟದ ದಿಕ್ಕನ್ನು ಬದಲಿಸಿಕೋ. ದೇಹದಿಂದ ಆತ್ಮದೆಡೆಗೆ ನೋಡಬೇಡ, ಆತ್ಮದಿಂದ ದೇಹವನ್ನು ನೋಡು. ನೀನು ಆತ್ಮನು, ಕೆಲವೊಮ್ಮೆ ದೇಹಿಯಾಗುತ್ತೀಯೆ, ಅಂದರೆ, ನೀನು ದೇಹದೊಂದಿಗೆ ಜನ್ಮಿಸುವೆ. ಕೆಲವು ಬಾರಿ ನೀನು ಅನ್ನಮಯಕೋಶದಲ್ಲಿರುವೆ.
ಕೋಶಗಳ ಬಗ್ಗೆ ಮತ್ತೊಂದು ಬಾರಿ ತಿಳಿದುಕೊಳ್ಳೋಣ. ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯ ಕೋಶ, ವಿಶ್ವಮಯ ಕೋಶ, ನಿರ್ವಾಣಮಯ ಕೋಶ. ಏಳು ಶರೀರಗಳು ಮೂಲಾಧಾರ ಚಕ್ರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞಾ, ಸಹಸ್ರಾರ. ನಾವು ಯಾವಾಗಲೂ ಕೂಡಾ ಕುಂಡಲಿನಿ, ಚಕ್ರಗಳನ್ನು ಚಿತ್ರದಲ್ಲಿ ಕೆಳಗಿನಿಂದ ನೋಡುತ್ತೇವೆ. ಅದು ತಪ್ಪು. ಹೇಗೆ ನೋಡಬೇಕೆಂದರೆ, ಸಮನಾಗಿ ನೊಡಬೇಕು. ಎಲ್ಲಾ ಚಕ್ರಗಳು ಒಂದೇ ಹಂತದಲ್ಲಿದೆ. ಕೊಳಲಿಗೆ 7 ಚಕ್ರಗಳಿವೆ. ನೇರವಾಗಿ ನೋಡಬಾರದು. ಅಡ್ಡವಾಗಿ ನೋಡಬೇಕು. ಚಕ್ರಗಳು ಒಂದರ ಮೇಲೆ ಒಂದು ಇರುವಂತೆ ನೋಡುವವನು ನರ. ಒಂದೇ ಸಮನಾಗಿ ನೋಡುವವನು ನಾರಾಯಣನು. ಮೂಲಾಧಾರ ಕಡಿಮೆಯಲ್ಲ, ಸಹಸ್ರಾರ ಹೆಚ್ಚಲ್ಲ. ಎಲ್ಲಾ ಚಕ್ರಗಳೂ ಸಹ ಸರಿಸಮಾನ ಸ್ಥಾನಮಾನವನ್ನು ಹೊಂದಿವೆ.
ಸಂಗೀತದಲ್ಲಿ ಏಳು ಸ್ವರಗಳಿವೆ: ಷಡ್ಜಮ, ರಿಷಭ, ಗಾಂಧಾರ, ಮಧ್ಯಮ, ಪಂಚಮ, ದೈವತಮು, ಇಲ್ಲಿ ಏಳು ಸ್ವರಗಳೇ, ಏಳು ಶರೀರಗಳೇ, ಏಳು ಚಕ್ರಗಳೇ.
ಷಡ್ಜಮ = ಮೂಲಾಧಾರ
ರಿಷಭ = ಸ್ವಾಧಿಷ್ಟಾನ
(ನಾನು ಹೆಚ್ಚು ಎಂಬ ಗರ್ವ ಹೊಂದಿರುತ್ತದೆ)
ಗಾಂಧಾರ = ಮಣಿಪೂರಕ (ಎಲ್ಲರೂ ಸಂಗೀತ ನುಡಿಸುತ್ತಾರೆ)
ಮಧ್ಯಮ = ಅನಾಹತ (ನಿಶ್ಶಬ್ಧ ಅದಕ್ಕೆ ಅನಾಹತವನ್ನು ಮಧ್ಯಮ ಎನ್ನುತ್ತಾರೆ)
ಪಂಚಮ = ವಿಶುದ್ಧ
ದೈವತಮು = ಆಜ್ಞಾ (ಆದ್ದರಿಂದ ಯಾವುದೂ ಹೆಚ್ಚಲ್ಲ ಕಡಿಮೆಯಲ್ಲಾ)
ನಿಷಾದ = ಸಹಸ್ರಾರ
ರಿಷಭ ಎಷ್ಟು ಉನ್ನತವಾದದ್ದೂ, ದೈವತವು ಅಷ್ಟೇ ಉನ್ನತವಾದದ್ದು. ನಿನ್ನೆಯೋ, ಮೊನ್ನೆಯೋ ಬಂದಿದ್ದೇವೆ, ನಾಳೆ, ನಾಡಿದ್ದು ಹೋಗುತ್ತೇವೆ. ಆದ್ದರಿಂದ ಈ ಮಧ್ಯೆ ಯಾವ ನಾಟಕ ಮಾಡಬೇಕೊ ಆ ಪಾತ್ರಕ್ಕೆ ಜೀವ ತುಂಬಬೇಕು. ಸ್ವಲ್ಪ ಆ ಕೆಲಸ, ಸ್ವಲ್ಪ ಈ ಕೆಲಸ ಮಾಡುತ್ತೇವೆ. ಪಾಪ, ಪುಣ್ಯದ ಚಕ್ರವು ಸುತ್ತುತ್ತಾ ಇರುತ್ತದೆ.
“ಯೇಸುವಿನ ದಿವ್ಯಸಂದೇಶ”
My dear friends, my dear masters and my dear gods ಕುರಿಯನ್ನು ನಾವು ಎಷ್ಟೊ ಮುದ್ದಿನಿಂದ ಸಾಕಿ, ಕೊನೆಗೆ ಅದನ್ನು ಕೊಯ್ದು ತಿನ್ನುತ್ತಿದ್ದೇವೆ. ಇದೇ ಏನು ಕ್ರಿಸ್ಮಸ್ ಎಂದರೆ? ಅದು ಕ್ರಿಸ್ಮಸ್ ಆಗುವುದೇನು? ಮೀನನ್ನು ಕೊಯ್ದು, ಕುರಿಯನ್ನು, ಮೇಕೆಯನ್ನು, ಹಸುವನ್ನು, ಎತ್ತನ್ನು, ಒಂಟೆಯನ್ನು ಕೊಯ್ದು ತಿನ್ನುವುದು. ಇದೇನಾ ಯೇಸು ಪ್ರಭುವಿನ ಸಂದೇಶ? ಇದೆಲ್ಲಾ ನೋಡಿ ಮೇಲಿರುವ ಜೀಸಸ್ ಅಳುತ್ತಿದ್ದಾನೆ. ಈ ಕುರಿ-ಮೇಕೆಗಳನ್ನು ಕೊಯ್ದು ತಿನ್ನುವ ಹಬ್ಬಗಳನ್ನು ನೋಡಿ ಬುದ್ಧ ಅಳುತ್ತಿದ್ದಾನೆ, ಮಹಾವೀರ ಅಳುತ್ತಿದ್ದಾನೆ. ಹೀಗೆ ಕೊಲ್ಲುವುದರಲ್ಲಿ ಸತ್ಯವಿಲ್ಲ. ಈ ರಕ್ತಪಾತವನ್ನು ನೋಡಿ ಅಳುತ್ತಿದ್ದಾರೆ. ಕೊಲ್ಲುವುದರಲ್ಲಿ ಹಬ್ಬವಿಲ್ಲ. ಕರುಣೆ ತೋರಿಸಬೇಕಾದದ್ದು ಸಹವರ್ತಿಯಾದ ಮಾನವನ ಮೇಲಲ್ಲಾ ಪ್ರಾಣಿಗಳ ಮೇಲೆ, ಪಕ್ಷಿಗಳ ಮೇಲೆ, ಮೀನಿನ ಮೇಲೆ. ದಸರಾ ಹಬ್ಬ ಎಂದು ಮಾಡುವುದು ಕೋಳಿ ಮೇಕೆಗಳನ್ನು ಕೊಯ್ದು ತಿನ್ನುವುದು, ದೀಪಾವಳಿ ಮಾಡಿ ಮೇಕೆ, ಹದ್ದುಗಳನ್ನು ತಿಂದು, ಸಂಕ್ರಾಂತಿ ಹಬ್ಬ ಮಾಡಿ ಎಲ್ಲಾ ಪ್ರಾಣಿಗಳನ್ನು ಕತ್ತರಿಸಿ, ಬಕ್ರೀದ್ ಎಂದು ಹೇಳಿ ಮೇಕೆಯನ್ನು ಕೊಯ್ದು ದೇವರಿಗೆ ರಕ್ತತರ್ಪಣ ಕೊಡುವುದು ಇದು ಮಾನವತೆಯೇ? ಈ ಮತಗಳು ಸಮ್ಮತವಲ್ಲ. ಇರುವುದು ಒಂದೇ ಮತ ಅದು ಕರುಣಾಮತ, ಅದು ಸಸ್ಯಾಹಾರ ಮತ. ಬೇರೊಂದು ಮತವಿಲ್ಲ.
ಯಾವ ಯೇಸುಪ್ರಭುವಿಗೆ, ಬುದ್ಧನಿಗೆ, ಮಹಾವೀರನಿಗೆ ಪ್ರಾಮುಖ್ಯತೆಯಿಲ್ಲ. ಸಸ್ಯಾಹಾರಕ್ಕೆ ಪ್ರಾಮುಖ್ಯತೆ ಇದೆ. ನೆನಪಿಟ್ಟುಕೊಳ್ಳಿ, ಅದೇ PSSMನ ಏಕೈಕ ಮತ, ಏಕೈಕ ಸಿದ್ಧಾಂತ. ಅಹಿಂಸೆ, ಸಸ್ಯಾಹಾರ. ಪ್ರಪಂಚದಲ್ಲಿರುವವರೆಲ್ಲಾ ಸಸ್ಯಾಹಾರಿಗಳಾಗುವವರೆಗೂ ಪಿರಮಿಡ್ ಮಾಸ್ಟರ್ ಹೋರಾಡುತ್ತಾರೆ.
ಯಾವಾಗ ಭೂಮಿಯ ಮೇಲಿರುವ ಕಟ್ಟಕಡೆಯ ವ್ಯಕ್ತಿಯೂ ಸಸ್ಯಾಹಾರಿಯಾಗುತ್ತಾನೋ ಅಂದಿನಿಂದ ಹಬ್ಬಗಳು ಶುರುವಾಗುತ್ತದೆ. ಅಲ್ಲಿಯವರೆಗೂ ಹಬ್ಬಗಳಿಲ್ಲ. ಅಲ್ಲಿಯವರೆಗೂ ಕರ್ತವ್ಯವಿದೆ. ಈ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯೂ ಸಸ್ಯಾಹಾರಿಯಾಗಿ ಬದಲಾಗುವವರೆಗೆ ಕ್ರಿಸ್ಮಸ್ ಅನ್ನು ಆಚರಿಸುವುದು ಸಾಧ್ಯವೇ ಇಲ್ಲ. ಇದೇ ಯೇಸುವಿನ ದಿವ್ಯಸಂದೇಶ. ನಿನ್ನ ಹೃದಯಪೂರ್ವಕವಾಗಿ ನಿನ್ನನ್ನು ನೀನು ಪ್ರೀತಿಸು. ನಿನ್ನನ್ನು ನೀನು ಪ್ರೀತಿಸುವ ರೀತಿಯಲ್ಲಿಯೇ ನಿನ್ನ ನೆರೆಹೊರೆಯವರನ್ನು ಪ್ರೀತಿಸು. ನಿನ್ನ ನೆರೆಹೊರೆ ಎಂದರೆ ಯಾರು? ನಿನ್ನ ಅಕ್ಕಪಕ್ಕದಲ್ಲಿ ಯಾರ್ಯಾರು ಜೀವಿಸುತ್ತಿರುವರೋ ಅವರನ್ನು ನಿನ್ನಂತೆಯೇ ಪ್ರೀತಿಸು. ಶಿವನಿಗೆ ಹಾವು, ಗಣಪತಿಗೆ ಇಲಿ, ಅಯ್ಯಪ್ಪ ಸ್ವಾಮಿಗೆ ನವಿಲು, ದುರ್ಗಾದೇವಿಗೆ ಹುಲಿ ಇದೇ ನೆರೆಹೊರೆ ಎಂದರೆ. ಯಮಧರ್ಮ ರಾಜನಿಗೆ ಕಾಗೆ, ಶಿವನಿಗೆ ನಂದಿ, ಸರಸ್ವತಿಗೆ ಹಂಸ ನೆರೆಹೊರೆ.
ಸತ್ಯವನ್ನು ಮಾತನಾಡಿಕೊಳ್ಳೋಣ. ನಾವು ಇನ್ನೂ ಸತ್ಯದಲ್ಲಿ ಜೀವಿಸುತ್ತಿದ್ದೇವೆಯೇ? ನೆರೆಯವರನ್ನು ಪ್ರೀತಿಸುವುದೇ ಮತವು, ಸಮ್ಮತವು. ಅದೇ ಆನಂದ, ಆರೋಗ್ಯ. ಅದೇ ಮುಕ್ತಿ, ಅದೇ ಜ್ಞಾನ, ಅದೇ ವಿಜ್ಞಾನ. ಯೇಸು ಪ್ರಭುವು ನಮಗೆ ಎರಡು ಕಮಾಂಡ್ಮೆಂಟ್ಸ್ ಕೊಟ್ಟಿದ್ದಾರೆ. 1) ನಿನ್ನನು ನೀನು ಪ್ರೇಮಿಸು 2) ನಿನ್ನನ್ನು ನೀನು ಪ್ರೀತಿಸಿದಂತೆ ನಿನ್ನ ನೆರೆಹೊರೆಯರನ್ನು ಪ್ರೀತಿಸು. ಅಹಿಂಸೆಯೇ ಪರಮಧರ್ಮ. ಕರುಣೆಯೆನ್ನುವುದೇ ಪರಮಸತ್ಯ. ನಿನ್ನನ್ನು ನೀನು ಪ್ರೀತಿಸಿದಾಗಲೇ ನಿನ್ನ ನೆರೆಯವರನ್ನು ನೀನು ಪ್ರೀತಿಸುವೆ. ನಿನ್ನನ್ನು ನೀನು ಪ್ರೀತಿಸುವುದೆಂದರೆ ನಿನ್ನ ಕೈಗೆ ನೀನು ಮುತ್ತಿಟ್ಟುಕೊಳ್ಳುವುದಲ್ಲ. ನಿನ್ನ ಶರೀರವನ್ನಲ್ಲ. ರಮಣ ಮಹರ್ಷಿ ನೀನು ಯಾರು ಎಂದು ಕೇಳುತ್ತಿದ್ದರೋ, ಆ ಆತ್ಮವನ್ನೇ ಪ್ರೇಮಿಸಿಕೊಳ್ಳಬೇಕು. ಅದರ ಹೆಸರೇ ಧ್ಯಾನ. ಜೀಸಸ್ರವರ ಮೊದಲನೆ ಕಮಾಂಡ್ಮೆಂಟ್ ಏನೆಂದರೆ ‘ನಿನ್ನನ್ನು ನೀನು ಪ್ರೇಮಿಸು’. ನಿನ್ನ ಆತ್ಮವನ್ನು ಮುದ್ದಿಸು, ಆಲಂಗಿಸು ಎಂದು.
ನಿನ್ನ ಸಮಸ್ತ ಯುಕ್ತಿಗಳಿಂದ ನಿನ್ನ ಆತ್ಮವನ್ನು ಚುಂಬಿಸಿಕೋ, ಆತ್ಮದ ಆಲಿಂಗನದಲ್ಲಿ ಪರವಶನಾಗು ಅದೇ Love thyself ಎಂದರೆ. We must be clear in jesus words.. ಜೀಸಸ್ರನ್ನು ಅರ್ಥಮಾಡಿಕೊಳ್ಳಬೇಕೆಂದರೆ ಇನ್ನೊಬ್ಬ ಯೇಸುವೇ ಬರಬೇಕು. ಒಬ್ಬ ಬುದ್ಧನನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅವನು ಇನ್ನೊಬ್ಬ ಬುದ್ಧನೇ ಆಗಬೇಕು. ಒಬ್ಬ ಕಾಳಿದಾಸನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಅವನು ಕಾಳಿದಾಸನೇ ಆಗಬೇಕು. ಪಂಡಿತ್ ರವಿಶಂಕರ್ರನ್ನು ಅರ್ಥಮಾಡಿಕೊಳ್ಳಬೇಕೆಂದರೆ ಇನ್ನೊಬ್ಬ ಪಂಡಿತ್ ರವಿಶಂಕರ್ ಬರಬೇಕು. ನನ್ನನ್ನು ಅರ್ಥಮಾಡಿಕೊಳ್ಳಬೇಕೆಂದರೆ ಇನ್ನೊಬ್ಬ ಪತ್ರೀಜಿಯೇ ಬರಬೇಕು. ಹಾಗೆಯೇ ಓಶೋರವರ ಪಕ್ಕದ ಮನೆಯವರಿಗೆ ಅವರು ಅರ್ಥವಾಗಲಾರರು, ಮತ್ತೆ ಅಂತಹವರೇ ಬರಬೇಕು ಆಗ ಅವರಿಗೆ ಅರ್ಥವಾಗುತ್ತಾರೆ.
ಕಾಗೆ, ಗೂಬೆ ಕಥೆಗಳ ರೀತಿ ಜೀವಿಸುವಂತಹ ಕಾಲ ಹೋಯಿತು. ಈಗ ಸತ್ಯದಲ್ಲಿ ಜೀವಿಸುವ ಕಾಲ. 2012ರ ವರ್ಷಕ್ಕೆ ಮೊದಲೇ ಕಾಗೆ, ಗುಬ್ಬಿ ಕಥೆಗಳು ಹೊರಟು ಹೋದವು. ಇನ್ನು ಮುಂದೆ ಸತ್ಯದ ಕಥೆಗಳು. ಅವು ಎರಡು ಇವೆ. ಅದನ್ನೇ ಯೇಸುಪ್ರಭು ಹೇಳಿ ಬಿಟ್ಟಿದ್ದಾರೆ. ನಿನ್ನನ್ನು ನೀನು ಪ್ರೇಮಿಸಿಕೋ ಎಂದರೆ “ಧ್ಯಾನ”. ನಿನ್ನ ನೆರೆಯವರನ್ನು ನಿನ್ನಂತೆ ಪ್ರೀತಿಸು ಅಂದರೆ “ಅಹಿಂಸೆ”. ನೆರೆಯವನನ್ನು ಪ್ರೀತಿಸು ಎಂದರೆ ಹೋಗಿ ಮುತ್ತಿಡುವುದಲ್ಲ, ಅವನಿಗೆ ಕೆಟ್ಟದ್ದು ಮಾಡದಿದ್ದರೆ ಸಾಕು. ಕೋಳಿ, ಮೇಕೆ, ಮೀನನ್ನು ಕೊಯ್ದು ತಿನ್ನುವುದಲ್ಲ ಅವು ನಿಮಗಾಗಿ ಹುಟ್ಟಿಲ್ಲ. ಅವು ತಮಗಾಗಿಯೇ ಹುಟ್ಟಿವೆ. ಯೇಸು ಪ್ರಭುವಿನ ತಂದೆ ಯಾರೋ ಮೇಕೆಗೂ ತಂದೆ ಅವನೇ. ಮೀನಿಗೆ, ಕೋಳಿಗೆ ತಂದೆ ಅವನೇ. ನಾವೆಲ್ಲರೂ ಸ್ವಯಂಭೂಗಳೂ. ಅದೇ ಆಧ್ಯಾತ್ಮಿಕ ವಿಜ್ಞಾನ. ನಮಗೆ ತಂದೆ ತಾಯಿ ಯಾರೂ ಇಲ್ಲ ಎಲ್ಲಾ ಸ್ವಯಂಭುಗಳು. ನಮ್ಮ ಇಷ್ಟಕ್ಕೆ ನಾವು ಹುಟ್ಟಿದ್ದೇವೆ. ಆತ್ಮಪದಾರ್ಥ ಆಲೋಚಿಸಿ ನಾನು ಆನೆಯಾಗಿ ಹುಟ್ಟುತ್ತೇನೆ ಎಂದು ಆನೆಯಾಗಿ ಬರುತ್ತದೆ. ಕೋಳಿಯಾಗಿ ಹುಟ್ಟುತ್ತೇನೆಂದು ಬರುತ್ತದೆ. ಅದು ಆತ್ಮಪದಾರ್ಥ. ನಮ್ಮ ನಿಶ್ಚಯದೊಂದಿಗೆ, ಅರಿವಿನೊಂದಿಗೆ, ನಿರ್ಣಯದಿಂದ ಆಯ್ಕೆಯೊಂದಿಗೆ ನಾವು ಬರುತ್ತೇವೆ. ನಮ್ಮನ್ನು ಹುಟ್ಟಿಸುವ ದೇವರಿಲ್ಲ ನಾವೇ ನಮ್ಮನ್ನು ಹುಟ್ಟಿಸಿಕೊಳ್ಳುವ ದೇವರುಗಳು. ಕೋಳಿಯ ಅನುಭವಕ್ಕಾಗಿ ಕೋಳಿಯಾಗಿ, ಮೇಕೆಯ ಅನುಭವಕ್ಕಾಗಿ ಮೇಕೆಯಾಗಿಯೂ, ಮಾನವನಾಗಿ ಶರೀರಧಾರಣೆ ಬೇರೆ ಬೇರೆ ಆದರೆ ಆತ್ಮವೊಂದೇ. ಇದೇ ಸ್ಪಿರಿಚ್ಯುವಲ್ ಸೈನ್ಸ್.
ವೇಮನ ಹೀಗೆಂದಿದ್ದಾನೆ, ಪಕ್ಷಿಜಾತಿಯನ್ನು ಹಿಡಿದು ನಾನಾ ರೀತಿಯಲ್ಲಿ ಹಿಂಸಿಸಿ, ಹೊಟ್ಟೆ ತುಂಬಾ ಕೂಳು ತುಂಬಿಸಿಕೊಳ್ಳಲು, ಬೇಯಿಸಿ ತಿನ್ನುವವನು ವಸುಧೆಗೆ ಚಂಡಾಲನು. ಎಲ್ಲಾ ಕಡೆ ಮಾರಣ ಹೋಮ ನಡೆಯುತ್ತಿದೆ. ಹೇಗೆ ನೀನು ಹಬ್ಬ ಆಚರಣೆ ಮಾಡುವೆ? ಈ ಭೂಮಂಡಲವೆಲ್ಲಾ ರಕ್ತಪಾತ ನಡೆಯುತ್ತಿದೆ. ಇನ್ನು ಸಂಭ್ರಮ ಎಲ್ಲಿದೆ? ಸಿದ್ಧಾಂತ ವೇದಾಂತಗಳು ಎಷ್ಟೇ ಸರಿಯಾಗಿವೆ ಎಂದರೂ ರಕ್ತಪಾತ ಎಂಬುದು ಬೇಡ. ಎಷ್ಟು ನಾಟಕವಾದರೂ ದಯವಿಟ್ಟು ರಕ್ತಪಾತ ಬೇಡ. ಯೇಸುವು ಹೇಳಿದ್ದಾನ “Unless thine two eyes become one, you cannot enter the kingdom of God”. ನಿನ್ನ ಎರಡು ಕಣ್ಣುಗಳು ಒಂದಾಗುವವರೆಗೂ ನೀನು ದೇವರ ರಾಜ್ಯ ಪ್ರವೇಶಿಸಲಾರೆ. ಎರಡು ಕಣ್ಣೆಂದರೇನು? ದೇವರ ರಾಜ್ಯವೆಂದರೇನು? ಒಂದಾಗುವುದೆಂದರೇನು? ಎರಡು ಕಣ್ಣುಗಳು ಎಂದರೆ ಒಂದು ಚರ್ಮ ಚಕ್ಷು, ಇನ್ನೊಂದು ಮನೋಚಕ್ಷು. ಇವೆರಡೂ ಸೇರಿ ದಿವ್ಯಚಕ್ಷು ಆಗದಿದ್ದರೆ, ನಿನಗೆ ದೇವರ ರಾಜ್ಯದಲ್ಲಿ ಪ್ರವೇಶವಿಲ್ಲ, ಅಸಾಧ್ಯ ಎಂದಿದ್ದಾನೆ.
ನಿನ್ನ ಮನೋಚಕ್ಷು, ಚರ್ಮಚಕ್ಷು ಎರಡೂ ಲಯವಾದರೆ, ಶೂನ್ಯವಾದರೆ ಮೂರನೆಯ ಕಣ್ಣು ತೆರೆದುಕೊಳ್ಳುತ್ತದೆ. ಅದೇ ದಿವ್ಯಚಕ್ಷು. ಅದೇ ಯೇಸುಪ್ರಭುವಿನ ಬೋಧನೆ. ನಾನು ನಲವತ್ತು ದಿನ ಉಪವಾಸ ಮಾಡಿದೆ ಎಂದು ಜೀಸಸ್ ಹೇಳಿದ್ದಾರೆ. ಹಾಗೆಂದರೆ, ನಾನು ಎಂದರೆ ಶರೀರವಲ್ಲ. ಆ ಆಲೋಚನೆ ತೆಗೆದು ಹಾಕಿ. ನಾನು ಎಂದರೆ ಸ್ಥೂಲಶರೀರವಲ್ಲ, ಆತ್ಮ. ಶರೀರಕ್ಕಾಗಿ ಇಡ್ಲಿ ತಿನ್ನು, ದೋಸೆ ತಿನ್ನು ಆದರೆ ಆತ್ಮಕ್ಕೆ ಮಾತ್ರ ಉಪವಾಸ, ಅಂದರೆ ಮನಸ್ಸು ಶೂನ್ಯ ಮಾಡಿದರು. ಏಳು ವರ್ಷ ವಯಸ್ಸಿನಲ್ಲಿ ಎಸ್ಸೀನ್ಸ್ ಎಂಬುವವರ ಬಳಿ ಅದನ್ನು ಕಲಿತರು. ಈಜಿಪ್ಟ್ನ ಗ್ರೇಟ್ ಪಿರಮಿಡ್ನಲ್ಲಿ ಧ್ಯಾನ ಕಲಿತರು. ಏಳನೆಯ ವರ್ಷ ವಯಸ್ಸಿನಲ್ಲಿ ಅವರಿಗೆ ಉಪನಯನವಾಯಿತು. ಅಂದರೆ ಮೂರನೆಯ ಕಣ್ಣು ಬಂದಿತು ಎಂದರ್ಥ. ಅದರಿಂದಲೇ ಹೇಳುವುದು Unless two eyes become one cannot enter the kingdom of god”. ಎಂದು. ನೀನೊಬ್ಬ ಬಾಲಕನಾಗದೇ ನಿನಗೆ ದೇವರ ರಾಜ್ಯದಲ್ಲಿ ಪ್ರವೇಶವಿಲ್ಲ. ಏಕೆಂದರೆ ಚಿಕ್ಕ ಮಕ್ಕಳಿಗೆಲ್ಲಾ ಮೂರನೆಯ ಕಣ್ಣು ಉತ್ತೇಜಿತವಾಗಿಯೇ ಇರುತ್ತದೆ. ನಂತರ ಮುಚ್ಚಿಕೊಂಡು ಹೋಗುತ್ತದೆ. ಏಕೆಂದರೆ ಸಮಾಜವು ಪಾಪದ ಆಹಾರವಾದ ಚಿಕನ್, ಮಟನ್ ತಿನ್ನಿಸುತ್ತದಲ್ಲಾ ಮೂರನೆಯ ಕಣ್ಣೆಲ್ಲಾ ಕಣ್ಮರೆಯಾಗುತ್ತದೆ.
ಚಿಕ್ಕ ಮಕ್ಕಳಿಗೆ ಯೋಚನೆಯಿರುವುದಿಲ್ಲ, ಅವರು ಜೀವಿಸುತ್ತಾರೆ A great living without any thinking. That is how you become a yogi . ಚಿಕ್ಕ ಮಗು ಕೋಳಿ ಕೊಯ್ದು ತಿನ್ನುತ್ತಾನ? ಕೋಳಿಯೊಂದಿಗೆ ಆಡಿಕೊಳ್ಳುತ್ತಾನ? ದೊಡ್ಡವನಾದ ಮೇಲೆ ಕೋಳಿ, ಮೇಕೆ ಕೊಯ್ದು ತಿನ್ನುತ್ತಾನೆ. ಅದಕ್ಕೆ ಯೇಸುಪ್ರಭು ಚಿಕ್ಕ ಮಗುವಿನ ಮನಸ್ಸಿನಂತಾಗಬೇಕು ಎಂದು ಹೇಳಿದರು. ಆದರೆ ಬೇರೆಯವರಿಗೆ ಅರ್ಥವಾಗಲಿಲ್ಲ. ಏಕೆಂದರೆ ಅವರು ಧ್ಯಾನ ಮಾಡಲಿಲ್ಲವಲ್ಲಾ. ನಿರಂತರವಾಗಿ ಅವರು ೪೦ ದಿನ ಧ್ಯಾನ ಮಾಡಿದರು. ಹಾಗೇ ೪೦ ದಿನ ಧ್ಯಾನ ಮಾಡುವವರಿಗೆ ಅವರು ಹೇಳಿದ ಮಾತುಗಳು ಅರ್ಥವಾಗುತ್ತದೆ. ನಲವತ್ತು ದಿನ ಮೇಕೆ ತಿನ್ನುವವರಿಗೆ ಅರ್ಥವಾಗುವುದಿಲ್ಲ. ನಲವತ್ತು ದಿನ ರಕ್ತಪಾತ ಮಾಡಿ ಯೇಸುಪ್ರಭುವನ್ನು ಹೊಂದುವುದು ಸಾಧ್ಯವೇನು? ಸತ್ಯ ಎನ್ನುವುದು ಸರಳವಾದುದು. ಸರಳವಾಗಿ ಜೀವಿಸುವವರಿಗೆ ಮಾತ್ರ ಅರ್ಥವಾಗುತ್ತದೆ. ಬನ್ನಿ ನಾವೆಲ್ಲಾ ಆತ್ಮವನ್ನು ಪ್ರೀತಿಸೋಣ, ಚುಂಬಿಸೋಣ ಯೇಸುವಿನ ಈ ತತ್ವವಲ್ಲೇ ಜೀವಿಸೋಣ.
“ಏಳು ಸ್ಥಿತಿಗಳು”
ಮೈ ಡಿಯರ್ ಫ್ರೆಂಡ್ಸ್, ಮೈ ಡಿಯರ್ ಮಾಸ್ಟರ್ಸ್, ಮೈ ಡಿಯರ್ ಗಾಡ್ಸ್, ನಾವೆಲ್ಲಾ ಪರಸ್ಪರ ಮಿತ್ರರು. ನಾವೆಲ್ಲರೂ ಸದಾ ನಮ್ಮ ಜೀವನಕ್ಕೆ ಅಧಿಷ್ಟಾನ ವರ್ಗ ಇರುವ ಆತ್ಮಗಳು. ಈ ದಿನ ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞಾ, ಸಹಸ್ರಾರ, ಇವುಗಳ ಬಗ್ಗೆ ತಿಳಿದುಕೊಳ್ಳೋಣ.
ಮೂಲವು, ಆಧಾರವು ಆಗಿರುವುದು ಮೂಲಾಧಾರ. ಇಲ್ಲಿ ಎರಡು ಪದಗಳಿವೆ ಮೂಲ+ಆಧಾರ. ಆದ್ದರಿಂದ, ಈ ಶರೀರ ಮೂಲಾಧಾರ. ನಖ ಶಿಖ ಪರ್ಯಂತವು ಏನಿದೆಯೋ ಅದು ಮೂಲಾಧಾರ. ’ನಖ’ ಅಂದರೆ ಉಗುರು. ’ಶಿಖ’ ಎಂದರೆ ತಲೆಕೂದಲು. ಈ ಶರೀರವೆಲ್ಲಾ, ಅಂದರೆ, ಮೂಳೆಗಳು, ಹೃದಯ, ಮೂತ್ರಪಿಂಡಗಳು, ಶ್ವಾಸಕೋಶಗಳು, ಪಿತ್ತಜನಕಾಂಗ, ನರವ್ಯವಸ್ಥೆ, ಹೃತ್ಕೋಶ ವ್ಯವಸ್ಥೆ, ರಕ್ತಪರಿಚಲನಾ ವ್ಯವಸ್ಥೆ, ಜಲಶುದ್ಧೀಕರಣ ವ್ಯವಸ್ಥೆ – ಇವೆಲ್ಲವನ್ನು ಒಟ್ಟಾಗಿ ಅನ್ನಮಯಕೋಶ ಎನ್ನುತ್ತೇವೆ. ಇವೆವೂ ಮೂಲಾಧಾರ. ನಾನು ಶರೀರ ಎಂದುಕೊಂಡಾಗ ನೀನು ನಿನ್ನ ಮೂಲಾಧಾರ ಸ್ಥಿತಿಯಲ್ಲಿದ್ದೀಯಾ. ಈ ಮೂಲಾಧಾರದಿಂದ ಆಜ್ಞಾದವರೆಗೆ ಎಲ್ಲವೂ ಸಹ ಕೇವಲ ಸ್ಥಿತಿಗಳು ಅಷ್ಟೇ. ಅಲ್ಲೇನು ಚಕ್ರಗಳಿರುವುದಿಲ್ಲ. ಈ ಭೌತಿಕ ಶರೀರವೆಲ್ಲಾ ಅನ್ನಮಯಕೋಶ ಇವೆಲ್ಲವೂ ಸೇರಿಸಿ ಮೂಲಾಧಾರ ಎನ್ನಲಾಗಿದೆ. ಈ ಶರೀರದೊಂದಿಗೆ ಬರುವ ಸಂಬಂಧಗಳಿರುತ್ತವೆಯಲ್ಲಾ ತಂದೆ, ತಾಯಿ, ಮಗ, ಮಗಳು, ಅಣ್ಣ, ಅಕ್ಕ, ತಂಗಿ ಇವೆಲ್ಲಾ ಕೂಡಾನೂ ಮೂಲಾಧಾರಕ್ಕೆ ಸಂಬಂಧಿಸಿದ್ದು. ನಾವು ಆ ಪರಿಸ್ಥಿತಿಯಲ್ಲಿದ್ದರೆ, ನಾವು ಮೂಲಾಧಾರದಲ್ಲಿದ್ದೇವೆ ಎಂದರ್ಥ. ನೆನಪಿನಲ್ಲಿಟ್ಟುಕೊಳ್ಳಬೇಕಾದ್ದೇನೆಂದರೆ ಚಕ್ರಗಳೆಲ್ಲಾ ಒಂದಕ್ಕಿಂತ ಒಂದು ಹೆಚ್ಚು ಎನ್ನುವುದು ಇಲ್ಲ. ಎಲ್ಲವೂ ಸರಿಸಮಾನ. ಶರೀರವನ್ನು ಕಡಿಮೆ ಎಂದು ಭಾವಿಸಬಾರದು. ನನ್ನ ಶರೀರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಶರೀರಕ್ಕೆ ಸಂಬಂಧಿಸಿದ ಅನುಬಂಧಗಳೆಲ್ಲೂ ಮೂಲಾಧಾರ.
ಇನ್ನೊಂದು ಹೆಜ್ಜೆ ಮುಂದೆ ಹೋದರೆ, ಮನಸ್ಸಿನೊಂದಿಗೆ ಇರುವ ಸಂಬಂಧಗಳೆಲ್ಲಾ “ಸ್ವಾಧಿಷ್ಟಾನ” ಉದಾಹರಣೆಗೆ ಸಂಜಯ್ ಕಿಂಗಿ ನನಗೆ ಮಿತ್ರ, ಇದು ಶಾರೀರಕ ಸಂಬಂಧವೇ ಅಥವಾ ಮನಸ್ಸಿಗೆ ಸಂಬಂಧಿಸಿದ್ದಾ? ಇಲ್ಲಿ ಮನಸ್ಸೆ ಮುಖ್ಯ. ‘ನಾನು ಪಂಚಾಯಿತಿ ಸದಸ್ಯ’ ಎಂದರೆ ಮನಸ್ಸಿಗೆ ಸಂಬಂಧಿಸಿದ್ದು ಶರೀರಕ್ಕೆ ಸಂಬಂಧಿಸಿದ್ದಲ್ಲ. ನನಗೆ ಸಾವಿರ ರೂಪಾಯಿ ಸಂಬಳ ಆ ಹುಡುಗನಿಗೆ ಹತ್ತು ಸಾವಿರ ಸಂಬಳ ನನಗೆ ದ್ವೇಷ, ಅಸೂಯೆ, ಕೋಪ ಬಂದಿದೆ ಎಂದರೆ ಇವೆಲ್ಲಾ ‘ಸ್ವಾಧಿಷ್ಟಾನ’ ಕ್ರಿಯೆಗಳು. ಸ್ವ ಅಧಿಷ್ಟಾನ ‘ಸ್ವ’ ಎಂದರೆ ನಾನು ‘ಅಧಿಷ್ಟಾನ’ ಎಂದರೆ ಸ್ಥಾಪಿತವಾಗಿರುತ್ತದೆ. ಈ ಊರಿಗೇ ದೊಡ್ಡವನು ಎಂಬ ಅಹಮಿಕೆ.
ಇನ್ನೊಂದು “ಮಣಿಪೂರಕ” ಇದರಲ್ಲಿ ಎರಡು ಶಬ್ಧಗಳಿವೆ: ಮಣಿ, ಪೂರಕ. ಒಳಗೆ ಟೊಳ್ಳಾಗಿದೆ, ಮೇಲೆ ಮಣಿಯಿದೆ. ಒಳಗೆ ಏನಿಲ್ಲ, ಮೇಲೆ ಮಾತ್ರ ಹೊಳೆಯುತ್ತಿದೆ. ವಿಜ್ಞಾನಿಗಳು, ಕಲಾಕಾರರು ಮಣಿಪೂರಕದಲ್ಲಿರುತ್ತಾರೆ. I am P.hd, ನಾನು ಸಿತಾರ್ ಪ್ಲೇಯರ್ ಎನ್ನುವವರೆಲ್ಲಾ ಮಣಿಪೂರಕದಲ್ಲಿರುತ್ತಾರೆ. ಒಳಗೆ ಮಾತ್ರ ಆತ್ಮಜ್ಞಾನವಿರುವುದಿಲ್ಲ ಹೊರಗೆ ಮಾತ್ರ ವಿಧವಿಧವಾದ ಕಲೆಗಳಲ್ಲಿ ಇರುತ್ತಾರೆ. ಕಣ್ಣು ಕುಕ್ಕುವಂತಿರುತ್ತಾರೆ. ಒಳಗೆ ಆತ್ಮಜ್ಞಾನವಿರುವುದಿಲ್ಲ.
ಇವೆಲ್ಲಾ ಸ್ಥಿತಿಗಳು. ನಾವು ಪೂರ್ಣಾತ್ಮದಿಂದ ಅಂಶಾತ್ಮವಾಗಿ ಬಿಡುಗಡೆಯಾದಾಗ ಕೆಲವು ಜನ್ಮಗಳು ಎಲ್ಲರೂ ಮೂಲಧಾರದಲ್ಲಿ ಇರುತ್ತಾರೆ. ಕೆಲವು ಜನ್ಮಗಳಾದ ಮೇಲೆ ಒಂದು ಮೆಟ್ಟಿಲು ಬದಲಾಯಿಸಿ ಸ್ವಾಧಿಷ್ಟಾನಕ್ಕೆ ಪ್ರವೇಶಿಸುತ್ತಾರೆ. ಮೂಲಾಧಾರವೂ ಇರುತ್ತದೆ, ಸ್ವಾಧಿಷ್ಟಾನವೂ ಇರುತ್ತದೆ. ಎರಡು ಸ್ವರಗಳಲ್ಲಿ ನುಡಿಸುತ್ತಿರುತ್ತಾರೆ. ನಂತರ ಮೂರು ಸ್ವರಗಳಲ್ಲಿ ನುಡಿಸುತ್ತಾರೆ. ಅದು ಮಣಿಪೂರಕ. ಕೆಲವರು ಚೆನ್ನಾಗಿ ಮಾತನಾಡುತ್ತಾರೆ. ಉಪನಿಷತ್ತುಗಳಿಂದ, ವೇದಗಳಿಂದ ಎಷ್ಟು ಚೆನ್ನಾಗಿ ಮಾತನಾಡುತ್ತಾರೆಂದರೆ, ಆಗ ಎಲ್ಲರೂ ಏನು ಪಾಂಡಿತ್ಯವಿದೆಯಪ್ಪಾ ಈತನಲ್ಲಿ ಎಂದು ಮೆಚ್ಚಿಕೊಳ್ಳುತ್ತಾರೆ. ಮಣಿಪೂರಕವೆಂದರೆ ಪಾಂಡಿತ್ಯ. ಸ್ವಾಧಿಷ್ಟಾನ ಎಂದರೆ ಮನಸ್ಸಿನ ವಿಕೃತಿ, ಕ್ರಿಯೆಗಳು. ಮೂಲಾಧಾರ ಎಂದರೆ ಶರೀರ. ಮಣಿಪೂರಕ ಎಂದರೆ ಬುದ್ಧಿ. ಜ್ಞಾನ ಬೇರೆ, ಬುದ್ಧಿ ಬೇರೆ. ಜ್ಞಾನ ಆಧ್ಯಾತ್ಮಿಕತೆ, ಬುದ್ಧಿ ಪ್ರಾಪಂಚಿಕತೆ. ಮಣಿಪೂರಕದಲ್ಲಿರುವವರು ಬುದ್ಧಿಯೊಂದಿಗೆ ಕೂಡಿರುತ್ತಾರೆ. ಅವರ ಜೀವನ ಚೆನ್ನಾಗಿರುತ್ತದೆ ಪಂಡಿತರಾಗುತ್ತಾರೆ. ಪಂಡಿತ ಎಂದರೆ ಮಣಿಪೂರಕ ಚಕ್ರ.
ನನ್ನ ಶರೀರ ಮೂಲಾಧಾರ. ನಾನು ಹಿಂದೂ, ನಾನು ಮುಸ್ಲಿಂ ಇದು ಮನಸ್ಸಿನ ಒಂದು ಕ್ರಿಯೆ. ನಾನು ಶಿವನಿಗೆ ಸಂಬಂಧಿಸಿದವನು, ನಾನು ವೈಷ್ಣವ, ಕ್ಯಾಥೋಲಿಕ್ಸ್, ಪ್ರೊಟೆಸ್ಟೆಂಟ್, ನಾನು ಕಮ್ಯೂನಿಸ್ಟ್ ಇವೆಲ್ಲಾ ಮನಸ್ಸಿಗೆ ಸಂಬಂಧಿಸಿದ್ದು. ನೀನು ಶೂದ್ರ, ನಾನು ವೈಶ್ಯ, ಕ್ಷತ್ರಿಯ ಇವು ಮನಸ್ಸಿಗೆ ಸಂಬಂಧಿಸಿದ್ದು. ಶರೀರದಿಂದ ಯಾರೂ ಶೂದ್ರ. ಬ್ರಾಹ್ಮಣ, ಕ್ಷತ್ರಿಯ ಅಲ್ಲಾ. ಆದ್ದರಿಂz, ಈ ಮತಗಳೆಲ್ಲಾ ಸ್ವಾಧಿಷ್ಟಾನ ಸ್ಥಿತಿಗೆ ಸಂಬಂಧಿಸಿದ್ದು. ನಾನು PhD ಪಂಡಿತ, ತೆಲುಗು ಪಂಡಿತ, ಕನ್ನಡ ಪಂಡಿತ, ಹಿಂದಿ ಪಂಡಿತ ಇದು ಮಣಿಪೂರಕ.
ಇನ್ನು ಸ್ವಲ್ಪ ಮುಂದಕ್ಕೆ “ಅನಾಹತ” ಇಲ್ಲಿ ಕೂಡಾ ಎರಡು ಪದಗಳಿವೆ. ಅನ+ಆಹತ, ಆಹತ ಎಂದರೆ ಶಬ್ದ. ಅನಾಹತ ಎಂದರೆ ನಿಶ್ಶಬ್ದ. ಅನಾಹತಕ್ಕೆ ಬರುವ ಹೊತ್ತಿಗೆ ಇಲ್ಲಿ ನಿಶ್ಶಬ್ದ. ನಾನು ಶರೀರವಲ್ಲ, ಮನಸ್ಸಲ್ಲ, ನಾನು ಬುದ್ಧಿಯಲ್ಲ, ನಾನು ’ಮೌನ’. ಅವನು ಮಾತನಾಡುವುದಿಲ್ಲ ಮುನಿ. ಯಾರು ಮೌನದಲ್ಲಿರುತ್ತಾನೋ ಅವನು ಮುನಿ. ಯಾರು ಮಣಿಪೂರಕದಲ್ಲಿರುತ್ತಾರೋ ಅವನು ಪಂಡಿತ. ಯಾರು ಸ್ವಾಧಿಷ್ಟಾನದಲ್ಲಿರುತ್ತಾನೋ ಅವನು ಗರ್ವಿ. ನಾನು ಅಪ್ಪ, ಅಮ್ಮ, ಮಗ, ಗಂಡ, ಹೆಂಡತಿ ಇದೆಲ್ಲಾ ಮೂಲಾಧಾರಕ್ಕೆ ಸಂಬಂಧಿಸಿದ್ದು. ನಾನು ಹಿಂದೂ, ನಾನು ಮುಸ್ಲಿಂ, ಶಿಯಾ, ಸುನ್ನಿ ಇದೆಲ್ಲಾ ಸ್ವಾಧಿಷ್ಟಾನಕ್ಕೆ ಸಂಬಂಧಿಸಿದ್ದು. ನಾನು ಪಂಡಿತ, ವಿಜ್ಞಾನಿ, ಸಂಗೀತಗಾರ ಇದೆಲ್ಲಾ ಮಣಿಪೂರಕ್ಕೆ ಸಂಬಂಧಿಸಿದ್ದು. ನಾನು ನಿಶ್ಶಬ್ದ ಇದು ಅನಾಹತ. ರಮಣ ಮಹರ್ಷಿ ಜೀವನವೆಲ್ಲಾ ನಿಶ್ಶಬ್ದವಾಗಿದ್ದರು. ಅವರು ‘ಅನಾಹತ ಚಕ್ರವರ್ತಿ’. ಮೆಹರ್ ಬಾಬಾ ನಿಶ್ಶಬ್ದವಾಗಿದ್ದರು. ನೀನು ಯಾರು ಎಂದು ಮೂಲಾಧಾರದಲ್ಲಿ ಇರುವವರನ್ನು ಕೇಳಿದರೆ, ನಾನು ಗಂಡ, ಇವಳು ನನ್ನ ಹೆಂಡತಿ ಎಂದು ಹೇಳುತ್ತಾರೆ. ಸ್ವಾಧಿಷ್ಟಾನದಲ್ಲಿ ಇರುವವರನ್ನು ಕೇಳಿದರೆ ನಾನು ಪಂಚಾಯಿತಿ ಅಧ್ಯಕ್ಷ ಎನ್ನುತ್ತಾರೆ. ಮಣಿಪೂರಕದಲ್ಲಿ ಇರುವವರೆಲ್ಲಾ ನಾನು ಪಂಡಿತ, ವಿಜ್ಞಾನಿ ಎನ್ನುತ್ತಾರೆ. ಅನಾಹತದಲ್ಲಿರುವವರು ನಿಶ್ಶಬ್ದ ಎನ್ನುತ್ತಾರೆ. ನಿಶ್ಶಬ್ದದ ಹೊರತು ಇನ್ನೇನು ಇಲ್ಲ ಎನ್ನುತ್ತಾರೆ.
“ವಿಶುದ್ಧ” ಎಂದರೆ ವಿಶೇಷವಾಗಿ ಶುದ್ಧವಾಗಿರುವವನು. ಆಗ ಏನಾಗುತ್ತದೆಯೆಂದರೆ, ಮೊಟ್ಟಮೊದಲಲ್ಲಿ ಮೂಲಾಧಾರ ಸ್ಥಿತಿಯಲ್ಲಿರುವಾಗ, ನಂತರ, ಮೂಲಾಧಾರ + ಸ್ವಾಧಿಷ್ಟಾನ ಸ್ಥಿತಿಯಲ್ಲಿರುವಾಗ + ಮಣಿಪೂರಕ + ಅನಾಹತ ಸ್ಥಿತಿಯಲ್ಲಿರುವಾಗ ಎಷ್ಟೋ ಶುಕರ್ಮಗಳನ್ನು ಮಾಡಿರುತ್ತೇವೆ. ಪ್ರಾಣ ರಕ್ಷಿಸಿಕೊಳ್ಳಲು ಪಕ್ಕದಲ್ಲಿರುವವನ ಪ್ರಾಣವನ್ನು ತೆಗೆದಿರುತ್ತೇವೆ. ಎಷ್ಟೋ ಕರ್ಮಗಳ ಸಂಚಯನ ಮಾಡಿಕೊಂಡಿರುತ್ತೇವೆ. ಅನಾಹತ ಸ್ಥಿತಿಯಲ್ಲಿ ಕರ್ಮಗಳ ಸಂಚಯನ ಮಾಡಿಕೊಳ್ಳುವುದಿಲ್ಲ. ಆದರೆ ವಿಶುದ್ಧ ಸ್ಥಿತಿಯಲ್ಲಿ ನಾವು ಕರ್ಮಗಳ ಪ್ರಕ್ಷಾಳನೆ ಮಾಡಿಕೊಳ್ಳಬೇಕು. ವಿಮಲ ಮಾಡಿಕೊಳ್ಳಬೇಕು. ನಮ್ಮ ನಕಾರಾತ್ಮಕಗಳನ್ನೆಲ್ಲಾ ಕಳೆದುಕೊಳ್ಳಬೇಕು. ಸಕಾರಾತ್ಮಕಗಳನ್ನಾಗಿಸಿ ಸಾಲಗಳನ್ನೆಲ್ಲಾ ಕಳೆದುಕೊಂಡರೆ ನಾವು ಶುದ್ಧರಾಗುತ್ತೇವೆ, ವಿಶೇಷವಾಗಿ ವಿಶುದ್ಧರಾಗುತ್ತೇವೆ. ಆಗ ನೀನು ವಿಶುದ್ಧಚಕ್ರದಲ್ಲಿರುವೆಯೆಂದು ಅರ್ಥ.
ಆನಂತರ ಇನ್ನೊಂದು ಸ್ಥಿತಿ ಸೇರುತ್ತದೆ. ಆಗ ಧ್ಯಾನಕ್ಕೆ ಎಲ್ಲರೂ ಬರುತ್ತಾರೆ. ಇವರೆಲ್ಲಾ “ಆಜ್ಞಾ” ಚಕ್ರದಲ್ಲಿರುವವರು. ವಿಶುದ್ಧ ಆದ ನಂತರ ಮುಂದೆ ಆಜ್ಞಾ ಬರುತ್ತದೆ. ಕರ್ಮಗಳೆಲ್ಲ ಇಲ್ಲ, ಬಂಧಗಳಿಲ್ಲ ಸತ್ಯಮಾತ್ರ ಗೊತ್ತಿಲ್ಲ. ಪುಸ್ತಕಗಳನ್ನು ಓದಿದ್ದೇವೆ, ಭಗವದ್ಗೀತೆ ತಿಳಿದುಕೊಂಡಿದ್ದೇವೆ, ಪಾಂಡಿತ್ಯ ಬಂದಿದೆ. ಆದರೆ, ಅನುಭವವಿಲ್ಲ. ಅದಕ್ಕಾಗಿ ಇನ್ನು ಕಣ್ಣೆರೆಡು ಮುಚ್ಚಿಕೊಳ್ಳಬೇಕು, ಕೈಯಲ್ಲಿ ಕೈ ಜೋಡಿಸಿ ಉಚ್ಛ್ವಾಸ ನಿಶ್ವಾಸಗಳನ್ನು ಗಮನಿಸಬೇಕು. ನಮಗೆ ಮೂರನೆಯ ಕಣ್ಣುತೆರೆದುಕೊಳ್ಳಬೇಕು, ದಿವ್ಯಚಕ್ಷು ಉತ್ತೇಜಿತವಾಗಬೇಕು. ಪಾಂಡಿತ್ಯ ಯಾವಾಗಲೋ ಆಗಿಹೋಗಿದೆ. ಶ್ಲೋಕಗಳನ್ನೆಲ್ಲಾ ಉರುಹೊಡೆದಾಗಿದೆ. ಆದರೆ, ಶೋಕಗಳು ಹೋಗಿಲ್ಲವಾದ್ದರಿಂದ ಅನಾಹತದಲ್ಲಿ ನಿಶ್ಶಬ್ದವಾಗಿದ್ದೇವೆ. ನಂತರ ತಿಳಿಯಿತು ನಿನ್ನ ಕರ್ಮಗಳು ನಾಡೀಮಂಡಲದಲ್ಲಿ ಮಲ ರೂಪದಲ್ಲಿ ಕೂಡಿರುತ್ತದೆ. ಬ್ಲಾಕ್ಸ್ನಿಂದ ಕೂಡಿರುತ್ತದೆ. ಅದನ್ನು ತೆಗೆಯಲು ವಿಶುದ್ಧ ಚಕ್ರದಲ್ಲಿ ಎಷ್ಟೋ ಜನ್ಮಗಳಾಗುತ್ತದೆ. 72,000 ನಾಡೀಮಂಡಲವೆಂದು ಪುಸ್ತಕದಲ್ಲಿ ಹೇಳುತ್ತಾರೆ. ಆದರೆ, ಅದು 2,72, 000 ನಾಡಿಗಳು. ನಾವು ನಾಲ್ಕು ಪುಸ್ತಕ ಬರೆಯುತ್ತೇವೆ. ಹಾಗೆ ಪುಸ್ತಕ ಬರೆಯುತ್ತಾ ಬರೆಯುತ್ತಾ ಕೆಲವು ಪದಗಳು ಬಿಟ್ಟು ಹೋದಂತೆ, ಈ ಎರಡು ಎನ್ನುವುದು ಬಿಟ್ಟುಹೋಗಿದೆ. ಯಾರೂ ನೋಡಿಲ್ಲ, ಏನೂ ಇಲ್ಲ. ಅವರು ಕುಳಿತು ಧ್ಯಾನ ಮಾಡಿದರೇನೆ ತಿಳಿಯುವುದು. ಎಲ್ಲಾ ಕೇಳುವಿಕೆ ನಂತರ ಸ್ವಾನುಭವಕ್ಕೋಸ್ಕರ ಆಗ ಕುಳಿತುಕೊಳ್ಳುತ್ತೇವೆ. ನಾವು ಕುಳಿತುಕೊಂಡು ನೋಡಬೇಕು ಅದೇ ಆಜ್ಞಾಚಕ್ರ. ಎಲ್ಲಾ ಇದೆ ಭಗವದ್ಗೀತೆಯಲ್ಲಿ ಆ ಬ್ರಹ್ಮ ಭುವನಾಲೋಕಃ ಪುನರಾವರ್ತಿನೋರ್ಜುನ| ಭುಲೋಕವೇನು? ಸ್ವರ್ಗಲೋಕವೇನು? ನಾನು ನೋಡಬೇಕು ಎಲ್ಲಾ ಹೇಳಿದ್ದಾರೆ ಆದರೆ ಸರಿಯೋ ಅಲ್ಲವೋ ಎಂದು ನಾವು ನೋಡಬೇಕಲ್ಲಾ ಎಂದು ಇನ್ನು ನಾವು ಧ್ಯಾನದಲ್ಲಿ ಕುಳಿತುಕೊಳ್ಳುತ್ತೇವೆ.
ಶಾರೀರಕ ಸಂಸಾರವೆನ್ನುವುದು ಮೂಲಾಧಾರವಾದರೆ, ಮಾನಸಿಕ ಸಂಸಾರ ಸ್ವಾಧಿಷ್ಟಾನ, ಪಾಂಡಿತ್ಯ ಸಂಸಾರ ಮಣಿಪೂರಕ, ಮೌನ ಸಂಸಾರ ಅನಾಹತವಾದರೆ, ಪ್ರಕ್ಷಾಳನಾ ಪ್ರಕರಣ ವಿಶುದ್ಧವಾದರೆ, ಧ್ಯಾನವೆನ್ನುವುದು ಆಜ್ಞಾಚಕ್ರಕ್ಕೆ ಸಂಬಂಧಿಸಿದ್ದು. ಇಲ್ಲಿ ಅವನ ಬಯಕೆ ಎಂದರೆ ನಾನು ಎಲ್ಲವನ್ನೂ ನೋಡಬೇಕು. ಏಳು ಶರೀರಗಳಿವೆಯಂತೆ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ, ವಿಶ್ವಮಯ ಶರೀರಗಳಿವೆಯಂತೆ, ನಾನು ನೋಡಬೇಕು. ಹಿಮಾಲಯಗಳಿವೆಯಂತೆ, ನಾನು ನಡೆದುಕೊಂಡು ಹೋಗಬೇಕು. ಶ್ರೀವೇದಾನಂದ ಬಾಬಾಜಿಯವರು ಕಾಲು ನಡಿಗೆಯಲ್ಲಿ ಹಿಮಾಲಯವನ್ನು ಸುತ್ತಿ ಬಂದಿದ್ದಾರೆ ಹಾಗೆಯೇ ಈ ಲೋಕಗಳನ್ನೆಲ್ಲಾ ನೋಡಬೇಕು. ಕೃಷ್ಣನು ಅರ್ಜುನನೊಂದಿಗೆ ಹೇಳಿದ್ದಾನಲ್ಲ “ಬಹೂನಿಮೇ ವ್ಯತೀತಾನಿ ಜನ್ಮಾನಿ ತವಚಾರ್ಜುನ” .. “ನೀನು ನಾನು ಎಷ್ಟೋ ಜನ್ಮಗಳನ್ನು ತಳೆದಿದ್ದೇವೆ. ನನಗೆಲ್ಲಾ ಗೊತ್ತು ನಿನಗಿನ್ನು ತಿಳಿದಿಲ್ಲ” ಎಂದು. ಅದಕ್ಕೆ ನಾವು ನಮ್ಮ ಜನ್ಮಗಳನ್ನು ನೋಡಿಕೊಳ್ಳಬೇಕು. ಧ್ಯಾನಕ್ಕೆ ಕುಳಿತುಕೊಳ್ಳಬೇಕು. ಹೇಗೆ ನೋಡುವುದು? ದಿವ್ಯಚಕ್ಷುವಿನಿಂದ, ಅದರ ಹೆಸರೇ ಆಜ್ಞಾಚಕ್ರ, ಸುದರ್ಶನ ಚಕ್ರ ಅಥವಾ ಗುರುಚಕ್ರ. ಸುದರ್ಶನ ಎಂದರೆ “ಸು” ಎಂದರೆ ವಿಶೇಷ ದರ್ಶನ. ಸುಪರಿಮಳ, ಸ್ವರ್ಗಕ್ಕೆ ‘ಸು’ವರ್ಗ ಎನ್ನುತ್ತಾರೆ. ಸುವರ್ಣ, ಸುದೂರ. ಒಂದು ವಾಕ್ಯದಲ್ಲಿರುವ ಅರ್ಥಕ್ಕೆ ವಿಶೇಷ ಅರ್ಥ ಕೊಡಲು ಅದರ ಮುಂದೆ ‘ಸು’ ಸೇರಿಸಲಾಗಿದೆ. ಆದ್ದರಿಂದ, ಇದು ಸುದರ್ಶನ ಚಕ್ರ. ಇಲ್ಲಿ ಎಲ್ಲಾ ದರ್ಶನಗಳಾಗುತ್ತವೆ.
ಅರ್ಜುನ ಕೃಷ್ಣನನ್ನು ಕೇಳುತ್ತಾನೆ “ಕೃಷ್ಣ… ಈ ಯೋಗಿಗಳೆಲ್ಲಾ ಕುಳಿತು ಏನು ಮಾಡುತ್ತಾರೆ?” ಎಂದು. “ಆಶ್ಚರ್ಯವತ್ ಪಶ್ಯತಿ” ಅವರು ಕುಳಿತು ಆಶ್ಚರ್ಯದಿಂದ ದಿವ್ಯಚಕ್ಷುವಿನೊಂದಿಗೆ ಎಲ್ಲಾ ನೋಡುತ್ತಿರುತ್ತಾರೆ, “ಆಶ್ಚರ್ಯವತ್ ಶೃಣೋತಿ” ನಂತರ ಎಷ್ಟೋ ಸಂಭಾಷಣೆಗಳು ಕೇಳುತ್ತಿರುತ್ತಾರೆ. ಎಷ್ಟೋ ಒಳ್ಳೆಯ ನಾದಗಳು, ಸಂಗೀತಗಳು ಒಳ್ಳೆಯ ಸಂದೇಶಗಳು ಕೇಳುತ್ತಿರುತ್ತಾರೆ. “ಆಶ್ಚರ್ಯವತ್ ವದತಿ” ನಂತರ ಆ ಅನುಭವಗಳನ್ನು ಆಶ್ಚರ್ಯದಿಂದ ಎಲ್ಲರಿಗೂ ವಿವರಿಸುತ್ತಾರೆ. ಎಂತಹ ಬಂಗಾರದಂತಹ ಲೋಕವದು ನಾನು ಎಲ್ಲಾ ನೋಡಿದೆ ಎಂದು ಹೇಳುತ್ತಾರೆ.
ಕುಂಡಲಿಯನ್ನು ಪುಸ್ತಕದಲ್ಲಿ ನೋಡಿದಂತೆ ಉದ್ದವಾಗಿ ಊಹಿಸಿಕೊಳ್ಳಬೇಡ ಅಡ್ಡವಾಗಿ ನೋಡಿದರೆ ನಿನ್ನ ಪ್ರಗತಿ ಯಾವುದೂ ಹೀನವಲ್ಲ, ಯಾವುದೂ ಅಲ್ಪವಲ್ಲ, ಯಾವುದೂ ಅಧಿಕವಲ್ಲ, ಉನ್ನತವಲ್ಲ. ಸರಿಸಮಾನವನ್ನು ಹೊಂದಿರುತ್ತೇವೆ. ನಂತರ ಇವೆಲ್ಲಾ ಆದ ನಂತರ ಇನ್ನು “ಸಹಸ್ರಾರ”. ಷಟ್ಚಕ್ರಗಳಾದ ನಂತರ ಸಹಸ್ರಾರ ಚಕ್ರಾತೀತಸ್ಥಿತಿ. ಸಪ್ತಚಕ್ರಗಳಲ್ಲ. ಚಕ್ರಗಳೇನೆಂದರೆ ಭ್ರಮಣವು ಅಂದರೆ, ನಾವು ಗಿರ್… ಎಂದು ತಿರುಗುತ್ತಿರುತ್ತೇವೆ. ಸ್ವಲ್ಪಹೊತ್ತು ‘ಸ’ ಎಂದು ನುಡಿಸುತ್ತಿರುತ್ತೇವೆ. ಸ್ವಲ್ಪಹೊತ್ತಿಗೆ ‘ರಿ’ಗೆ ಹೋಗುತ್ತೇವೆ. ನಂತರ ‘ಗ’ ಅದಾದ ಮೇಲೆ, ಮಧ್ಯಮಕ್ಕೆ ಹೋಗುತ್ತೇವೆ. ನಂತರ ಪಂಚಮಕ್ಕೆ ಹೋಗುತ್ತೇವೆ. ನಂತರ ದೈವತ್ವಕ್ಕೆ ಹೋಗುತ್ತೇವೆ. ಅಂದರೆ ಪ್ರತಿಯೊಂದನ್ನು ನಾನು ಅನ್ವೇಶಿಸುತ್ತಾ ಹೋಗುತ್ತೇವೆ.
ಷಟ್ ಚಕ್ರಗಳಿವೆ. ಶರೀರವನ್ನು ಅನ್ವೇಷಣೆ ಮಾಡಿದರೆ ಮೂಲಾಧಾರ, ಮನಸ್ಸನ್ನು ವ್ಯಕ್ತಮಾಡಿದರೆ ಸ್ವಾಧಿಷ್ಟಾನ, ಬುದ್ಧಿಯನ್ನು ಅನ್ವೇಷಣೆ ಮಾಡಿದರೆ ಮಣಿಪೂರಕ. ಮೌನವನ್ನು ಅನ್ವೇಷಣೆ ಮಾಡಿದರೆ ಅನಾಹತ. ಕರ್ಮ ಪ್ರಕ್ಷಾಳನೆಯಾದಾಗ, ಶುದ್ಧಮಾಡಿಕೊಂಡರೆ ವಿಶುದ್ಧ. ನಂತರ ಮೂರನೆಯ ಕಣ್ಣನ್ನು ಧ್ಯಾನದಲ್ಲಿ ಉತ್ತೇಜಿತಗೊಳಿಸುತ್ತಿರುವಾಗ ಆಜ್ಞಾನಚಕ್ರ. ಮೂರನೆಯ ಕಣ್ಣಿನಿಂದ ತತ್ತ್ವ ತಿಳಿಯಿತು, ಎಲ್ಲಾ ನೋಡಿದ್ದಾಯಿತು. ತ್ರಿಕಾಲಜ್ಞಾನ ತ್ರಿಲೋಕಸಂಚಾರ ಎಲ್ಲಾ ಆಗಿಹೋಯಿತು. ನೀನು ಗುರುವಾದೆ. ಏಕೆಂದರೆ ಇದು ಗುರುಚಕ್ರ. ಗುರು ಎಂದರೆ ಭಾರವಾಗಿರುವವನು. ಯಾವುದರಿಂದ ಭಾರವಾಗಿದ್ದಾನೆ, ಜ್ಞಾನದಿಂದ. ಮಣಿಪೂರಕ ಪ್ರಾಪಂಚಿಕ ಬುದ್ಧಿಯಾದರೆ ಆಜ್ಞಾ ಆಧ್ಯಾತ್ಮಿಕ ಜ್ಞಾನ. ಇದು ಬುದ್ಧಿ ಅದು ಜ್ಞಾನ. ಏನೋ ನಿನಗೆ ಬುದ್ಧಿ ಜ್ಞಾನ ಇಲ್ಲವೇನು? ಎನ್ನುತ್ತಾರೆ. ಬುದ್ಧಿಯೂ ಇರಬೇಕು. ಜ್ಞಾನವೂ ಇರಬೇಕು. ಜ್ಞಾನ ಬಂದ ಮೇಲೆ ಬುದ್ಧಿ ಹೋಗಬಾರದು. ಆದ್ದರಿಂದ, ನೀನು ಗುರುವಾದ ಮೇಲೆ ಚಕ್ರಭ್ರಮಣ ಮಾಡುತ್ತೀಯಾ.
ನೀನು ಒಂದೊಂದು ಚಕ್ರವನ್ನು ಪರಿಣಿತಿ ಹೊಂದುತ್ತೀಯಾ. ಒಂದೊಂದು ಚಕ್ರದಲ್ಲೂ ಅದರ ಪ್ರತಿನಿಧಿಗಳಾಗಿರುವ ಗುಣಗಳನ್ನೂ ಪರಿಣಿತಿ ಹೊಂದುವೆ. ಮೂಲಧಾರದಲ್ಲಿ ಪರಿಣಿತಿ ಮಾಡುವೆ. ಸ್ವಾಧಿಷ್ಟಾನದಲ್ಲಿ ಮನಸ್ಸಿನ ಕ್ರಿಯೆಗಳ ಮೇಲೆ ಪರಿಣಿತಿ ಪಡೆಯುತ್ತೀಯಾ. ನಂತರ ಪ್ರಾಪಂಚಿಕ ವಿದ್ಯೆಗಳ ಮೇಲೆ ಪಾರಂಗತನಾಗುವೆ. ನಂತರ ಮೌನವಾಗಿರುತ್ತೀಯಾ. ಆನಂತರ ನೀನು ಪ್ರಜೆಗಳಿಗೆ ಸೇವೆಗಳನ್ನು ಮಾಡುತ್ತಾ ವಿಶುದ್ಧದಲ್ಲಿರುತ್ತೀಯಾ. ಪ್ರಜೆಗಳಿಗೆ ಹಾನಿ ಮಾಡಿ ನೀನು ನಾಡೀಮಂಡಲ ಅಶುದ್ಧಮಾಡಿಕೊಂಡಿದ್ದೀಯಾ. ಈಗ ಎಲ್ಲರಿಗೂ ಸೇವೆಗಳನ್ನು ಮಾಡಿ ನೀನು ವಿಶುದ್ಧನಾಗುವೆ. ಆದರೂ ಅನುಭವ ಜ್ಞಾನ ಬಂದಿಲ್ಲ ಎನ್ನುತ್ತೀಯಾ. ಜೀವನಪರ್ಯಂತ ಸೇವೆಗಳನ್ನು ಮಾಡಿದ್ದಾನೆ, ಆದರೆ, ಎಲ್ಲಾ ಲೋಕಗಳಿವೆ ಎಂದು ಗೊತ್ತಿಲ್ಲವಲ್ಲ. ಅನುಭವವಾಗಿಲ್ಲ ಎನ್ನುತ್ತೀಯಾ? ಆಗ ಕಣ್ಣು ಮುಚ್ಚಿಕೋ ಧ್ಯಾನ ಮಾಡು ಬೆಳಗ್ಗೆ ಕುಳಿತುಕೋ ರಾತ್ರಿ ಏಳು. ರಾತ್ರಿ ಕುಳಿತುಕೋ ಬೆಳಗ್ಗೆ ಏಳು. ಅದು ಧ್ಯಾನವೆಂದರೆ. ಧ್ಯಾನವೆಂದರೆ ಧಿ+ಯಾನ ‘ಧಿ’ ಎಂದರೆ ಸೂಕ್ಷ್ಮಶರೀರಾದಿ ಸಮುದಾಯ ‘ಯಾನ’ ಎಂದರೆ ಪ್ರಯಾಣ. ಸ್ಥೂಲದಿಂದ ಸೂಕ್ಷ್ಮಕ್ಕೆ ಬರಬೇಕು. ಸೂಕ್ಷ್ಮದಿಂದ ಕಾರಣಕ್ಕೆ ಬರಬೇಕು. ಧ್ಯಾನ ಮಾಡಬೇಕು. ಆಸ್ಟ್ರಲ್ ಟ್ರಾವೆಲ್, ಕಾಸಲ್ ಟ್ರಾವೆಲ್, ಸುಪ್ರಾಕಾಸಲ್ ಟ್ರಾವಲ್ ಮಾಡಬೇಕು. ಆಗ ನಿನಗೆ ಎಲ್ಲಾ ತಿಳಿಯುತ್ತದೆ. ಚಕ್ರಾತೀತಸ್ಥಿತಿ. ಹೀಗೆ ಒಂದೊಂದೇ ಚಕ್ರವನ್ನು ದಾಟುವುದು. ನಂತರ ಏಳನೆಯ ಸ್ಥಿತಿಗೆ ಹೋಗುವೆ. ಅದೇನೆಂದರೆ, ಆಧ್ಯಾತ್ಮಿಕ ಸೇವೆ. ವಿಶುದ್ಧವು ಪ್ರಾಪಂಚಿಕ ಸೇವೆ, ಸಹಸ್ರಾರವು ಆಧ್ಯಾತ್ಮಿಕ ಸೇವೆ.
ಸ್ವಾಮಿ ರಾಮಾ ಅವರು ಚಿಕ್ಕವನಿದ್ದಾಗ ಹಿಮಾಲಯದಲ್ಲಿ ಗುರುಗಳ ಬಳಿ ಧ್ಯಾನ ಕಲಿತುಕೊಳ್ಳುತ್ತಿದ್ದರು. ಆ ದಿನಗಳಲ್ಲಿ ಸ್ವಾತಂತ್ರ್ಯ ಚಳವಳಿ ನಡೆಯುತ್ತಿತ್ತು. ದೇಶಭಕ್ತಿಯಿಂದ “ನಾನು ಹೋಗಿ ದೇಶಕ್ಕಾಗಿ ಹೋರಾಡುವೆ” ಎಂದರು ರಾಮಾ. ಆಗ ಅವರ ಗುರುಗಳು ಹೇಳಿದರು “ಅದು ನಿನ್ನ ಹಂತಕ್ಕೆ ಚಿಕ್ಕದು ಮಗು. ದೇಶಕ್ಕಾಗಿ ಸೇವೆ ಮಾಡುವುದು, ರಕ್ತ ಎರೆಯುವುದು ಇದು ದೊಡ್ಡ ಕಲಸಗಳೇ. ಆದರೆ, ನಿನ್ನ ಹಂತಕ್ಕೆ ಅದು ಕಡಿಮೆ. ನೀನು ಆಧ್ಯಾತ್ಮಿಕ ಸೇವೆಗಾಗಿ ಹುಟ್ಟಿರುವೆ. ಆದ್ದರಿಂದ, ಮೊದಲು ಆಧ್ಯಾತ್ಮಿಕ ಸಾಧನೆಮಾಡಿ, ನಂತರ ಸೇವೆ ಮಾಡು” ಎಂದರು. ಎಲ್ಲರಿಗೂ ಧ್ಯಾನ ಕಲಿಸುವುದೇ ಆಧ್ಯಾತ್ಮಿಕ ಸೇವೆ. ಧ್ಯಾನ ಅಭ್ಯಾಸ ಮಾಡುವುದು, ಧ್ಯಾನದಲ್ಲಿ ಪರಾಕಾಷ್ಠೆ ತಲುಪುವುದು ‘ಆಜ್ಞಾ’ ಸ್ಥಿತಿಯಾದರೆ, ಎಲ್ಲರಿಗೂ ಧ್ಯಾನ ಸೇವೆ ಮಾಡುವವನು, ಆಧ್ಯಾತ್ಮಿಕವಾಗಿ ಲೋಕಕಲ್ಯಾಣಕ್ಕೆ ಸೇವೆಗಳನ್ನು ಮಾಡುವವನು, ಸಹಸ್ರಾರದಲ್ಲಿರುವವನು. ಪ್ರಾಪಂಚಿಕವಾಗಿ ಲೋಕ ಕಲ್ಯಾಣಕ್ಕಾಗಿ ಮೀಸಲಾಗಿರುವವನು, ಅದನ್ನೇ ಮಾಡುವವನು, ವಿಶುದ್ಧದಲ್ಲಿ ಇರುವವನು. ಆ ಸೇವೆಗಳಾದ ಮೇಲೆ ಆಧ್ಯಾತ್ಮಿಕ ಅನುಭವ/ಜ್ಞಾನಬೇಕು. “ಜ್ಞಾನಾನ್ ಮುಕ್ತಿಃ”. ಆದ್ದರಿಂದ, ಆ ಜ್ಞಾನಕ್ಕಾಗಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಾನೆ. ಧ್ಯಾನದಿಂದ ಜ್ಞಾನ, ಜ್ಞಾನದಿಂದ ಮುಕ್ತಿ. ಮುಕ್ತಿ ಬಂದ ನಂತರ ತಾನು ದುಃಖರಹಿತನಾದ ನಂತರ, ತಾನು ನಿರ್ವಾಣ, ಪರಿನಿರ್ವಾಣ, ಮಹಾಪರಿನಿರ್ವಾಣವನ್ನು ಹೊಂದಿದ ನಂತರ ಇನ್ನು ಎಲ್ಲರಿಗೂ ಅದು ಹೇಳುವುದೇ ಉಳಿದ ಕೆಲಸ. ಎಲ್ಲರಿಗೂ ಧ್ಯಾನ ಹೇಳುವುದೇ ಸಹಸ್ರಾರ ಸ್ಥಿತಿ. ಪಿರಮಿಡ್ ಮಾಸ್ಟರ್ಸ್ರೆಲ್ಲರೂ ಸಹಸ್ರಾರ ಸ್ಥಿತಿಯಲ್ಲಿ ಇರುವವರು.
ಸಹಸ್ರಾರ ಸ್ಥಿತಿಯಲ್ಲಿದ್ದಾರೆ ಎಂದರೆ ಅವರಿಗೆ ಹೆಂಡತಿ/ಗಂಡ ಇರುವುದಿಲ್ಲ, ಮಕ್ಕಳು ಇರುವುದಿಲ್ಲ, ಸಂಸಾರವಿರುವುದಿಲ್ಲ ಎಂದೇನೂ ಇಲ್ಲ. ಮೊದಲನೆಯ ಜನ್ಮದಲ್ಲಿ ಮೂಲಾಧಾರದಿಂದ ಆಜ್ಞದವರೆಗೂ ಒಂದಕ್ಕೊಂದು ಸಂಕಲನವಾಗಿ ಕೊನೆಯ ಸ್ಥಿತಿಯಲ್ಲಿ ಅಂದರೆ ಸಂಸಾರದಲ್ಲೂ (ಮೂಲಾಧಾರದಲ್ಲಿ) ಕೊನೆಯ ಜನ್ಮದಲ್ಲಿ ಸಹಸ್ರಾರ ಸ್ಥಿತಿಯಲ್ಲಿ ಇರುತ್ತೇವೆ. ಸ್ವಾಧಿಷ್ಟಾನದಲ್ಲೂ ಇರುತ್ತೇವೆ. ಮಣಿಪೂರಕದಲ್ಲೂ ಇರುತ್ತೇವೆ. ಎಲ್ಲಾ ವಿದ್ಯೆಗಳು ಕಲಿತುಕೊಳ್ಳುತ್ತೇವೆ. ಮೌನವಾಗಿಯೂ ಇರುತ್ತೇವೆ. ಆದರೆ ಸೇವೆಗಳು ವಿಶೇಷವಾಗಿ ಮಾಡುತ್ತೇವೆ. ಸೇವೆ ಎಂದರೆ ಧ್ಯಾನ ಕಲಿಸುವುದು.
ಈ ಏಳು ಸ್ಥಿತಿಗಳಲ್ಲೂ ನಾವು ಚೆನ್ನಾಗಿ ಒಂದೇ ಜನ್ಮದಲ್ಲಿ ಪರಿಪಕ್ವವಾಗಿ ಜೀವಿಸಿದರೆ ಮೂಲಾಧಾರದಲ್ಲಿ 100%, ಸ್ವಾಧಿಷ್ಟಾನದಲ್ಲಿ 100%,ಗ್ರಾಮಪಂಚಾಯತಿ ಅಧ್ಯಕ್ಷನಾಗಿ ಸ್ವಾಧಿಷ್ಟಾನದಲ್ಲಿ ಚೆನ್ನಾಗಿ ಸಾಧನೆ ಮಾಡಬೇಕು. ಅದರೊಂದಿಗೆ ಮೌನವಾಗಿರು. ಅದರೊಂದಿಗೆ ಧ್ಯಾನ ಮಾಡು. ಅದರೊಂದಿಗೆ ಎಲ್ಲರಿಗೂ ಧ್ಯಾನವು ಹೇಳುತ್ತಾ ಏಳು ಸ್ಥಿತಿಗಳನ್ನು ಒಂದೇ ಜನ್ಮದಲ್ಲಿ ಪರಿಪೂರ್ಣನಾಗಿ ಎಲ್ಲದಕ್ಕೂ ನೂರು ಅಂಕಗಳನ್ನು ತೆಗೆದುಕೊಂಡರೆ ಆಗ ನೀನು ಮತ್ತೆ ಹುಟ್ಟುವ ಅಗತ್ಯವಿಲ್ಲ. ಎಲ್ಲಾ ಮಾಡಿದ್ದೀಯಲ್ಲಾ. ಆಗ ಕಾಲೇಜು ಹಂತಕ್ಕೆ ಹೋಗುತ್ತೀಯಾ. ಭೂಮಂಡಲ ಒಂದು ಶಾಲೆ, ಶಾಲೆಯಿಂದ ಕಾಲೇಜಿಗೆ ಹೋಗುತ್ತೇವೆ. ನಂತರ ಕೆಲವು ಲೋಕಗಳನ್ನು ಸೃಷ್ಟಿಸುವುದು. ಕೆಲವು ಪ್ರಾಣಿಸಾಮ್ರಾಜ್ಯ ಮತ್ತು ವೃಕ್ಷ ಸಾಮ್ರಾಜ್ಯಗಳನ್ನು ಬೇರೆ ಲೋಕಗಳಲ್ಲಿ ಸೃಷ್ಟಿಸುವುದು. ಆ ಸೃಷ್ಟಿಕರ್ತನ ಹಂತದಲ್ಲಿ ಸಹ ಸೃಷ್ಟಿಕರ್ತನಾಗಿರುತ್ತಾನೆ. ಕೋಟ್ಯಾಂತರ ಮಂದಿ ಸಹ ಸೃಷ್ಟಿಕರ್ತರಿದ್ದಾರೆ. ನಾನು ಒಬ್ಬ ಚಿಕ್ಕ ಸಹಸೃಷ್ಟಿಕರ್ತ. ಈ ಭೂಮಂಡಲ ಒಂದು ಶಾಲೆ ಮತ್ತೆ ಈಗ ಪರೀಕ್ಷೆಯ ಕಾಲ. ನೀನು ಆಸ್ಟ್ರಲ್ ವರ್ಲ್ಡ್, ಕಾರಣಲೋಕಗಳಲ್ಲಿರುವಾಗ ನೀನು ಅಲ್ಲಿ ಎಲ್ಲಾ ಕಲಿಯುತ್ತೀಯಾ. ಅಲ್ಲಿ ಕಲಿತುಬಂದ ಮೇಲೆ ಭೂಲೋಕದಲ್ಲಿ ಪರೀಕ್ಷೆ. ನೀನು ಸರಿಯಾಗಿ ಕಲಿತಿದ್ದೀಯೋ ಇಲ್ಲವೋ ಎನ್ನುವುದಕ್ಕೆ ಈ ಪರೀಕ್ಷೆ. ಮೇಲಿನ ಲೋಕದಲ್ಲಿ ಪುಸ್ತಕಗಳಿದ್ದು ಬರೆಯುತ್ತೇವೆ. ಇಲ್ಲಿ ಪುಸ್ತಕಗಳಿರುವುದಿಲ್ಲ ಜ್ಞಾಪಕಶಕ್ತಿಯಿಂದ ಬರೆಯಬೇಕು. ಆ ಜನ್ಮಗಳೆಲ್ಲಾ, ಲೋಕಗಳನ್ನೆಲ್ಲಾ ಮರೆತು ಬರುತ್ತೇವೆ. ಇಲ್ಲಿ ನಮ್ಮ ಇಂಟೆಲೆಕ್ಟ್ನಿಂದ ಅಂತರಾವಬೋಧೆಯಿಂದ ಸಂಪರ್ಕ ಮಾಡುತ್ತಾ ನಾವು ಜೀವಿಸಬೇಕಾಗುತ್ತದೆ.
ಇದೆಲ್ಲಾ ಕೂಡಾ ಆಧ್ಯಾತ್ಮಿಕ ವಿಜ್ಞಾನ. ನಾನು ಶರೀರವಲ್ಲ ಆತ್ಮ ಎಂದು ತಿಳಿದುಕೊಂಡರೆ ಜ್ಞಾನ. ಜ್ಞಾನದ ನಂತರ ವಿಜ್ಞಾನ ಪ್ರಾರಂಭವಾಗುತ್ತದೆ. ಮೂಲಾಧಾರವೇನು? ಸ್ವಾಧಿಷ್ಟಾನವೇನು? ನಾಡೀಮಂಡಲವೇನು? ಇವೆಲ್ಲಾ ಕೂಡಾ ಮಹಾನದಿಯಂತೆ, ಮಹಾ ವಿಜ್ಞಾನವಾಗಿರುತ್ತದೆ. ಅದೂ ಮಹಾ ಅನುಭವದೊಂದಿಗೆ ಮಾತ್ರ. ಪಿರಮಿಡ್ ಮಾಸ್ಟರ್ ಜೀವನ ಎಲ್ಲಾ ಚಕ್ರಸ್ಥಿತಿಗಳೊಂದಿಗೆ ಚೆನ್ನಾಗಿರುತ್ತದೆ. ಆದ್ದರಿಂದ, ಎಲ್ಲಾ ಪಿರಮಿಡ್ ಮಾಸ್ಟರ್ಗಳಿಗೆ ನಮಸ್ಕಾರಗಳು.
“ಆಧ್ಯಾತ್ಮಿಕ ಶಸ್ತ್ರದ ಆರು ಸುದ್ಧಾಂತಗಳು”
ಮೈ ಡಿಯರ್ ಫ್ರೆಂಡ್ಸ್, ಮೈ ಡಿಯರ್ ಮಾಸ್ಟರ್ಸ್ ಅಂಡ್ ಮೈ ಡಿಯರ್ ಗಾಡ್ಸ್ ಪ್ರತಿದಿನವೂ ನಾವು ಇದೇ ಕೊನೆಯ ದಿನವೆಂದು ತಿಳಿದು ಜೀವಿಸಬೇಕು. ಇಂದೇ ಕೊನೆಯ ದಿನ ಎಂದುಕೊಂಡಾಗ ನಾವು ಹೇಗೆ ಜೀವಿಸುತ್ತೇವೆ? ಹಾಗೆಯೇ ಪ್ರತಿದಿನ ಜೀವಿಸಬೇಕು. ಅಂದರೆ, ಈ ದಿನ ನಾವು ಎಲ್ಲವನ್ನೂ ಅನುಭವಿಸಬೇಕು. ನಾಳೆ ಹೊರಟು ಹೋಗುತ್ತಿದ್ದೇವೆ. ನಾಳೆಯ ಬಗ್ಗೆ ಅಧಿಕವಾಗಿ ಆಲೋಚಿಸಬಾರದು.
ಒಂದು ದಿನ ಒಬ್ಬಾತ ನನ್ನ ಬಳಿಗೆ ಬಂದು, ಸ್ವಾಮೀಜಿ ನಿಮಗೆ ಭವಿಷ್ಯತ್ ತಿಳಿದಿದೆಯಲ್ಲ ಎಂದನು. ನಾನು ಹೌದು ಎಂದೆನು. ಹಾಗಾದರೆ ನನ್ನ ಭವಿಷ್ಯತ್ತು ಹೇಗಿದೆ ಹೇಳುವಿರಾ ಎಂದನು. ಆಗ ನಾನು ನಿನಗೆ ಸಾವು ಇದೆ, ಇದೇ ನಿನ್ನ ಭವಿಷ್ಯತ್ತು ಎಂದೆನು. “ಜಾತಸ್ಯಹಿ ಧೃವೋ ಮೃತ್ಯುಃ” ಆಗ ಅವನು ಕಂಪಿಸಿ ನಾನು ಸತ್ತರೆ ನನ್ನ ಮಕ್ಕಳ ಭವಿಷ್ಯತ್ತೇನು? ಎಂದಾಗ ನಾನು ಅವರೂ ಸಾಯುತ್ತಾರೆ ಎಂದೆನು. ನಿನ್ನ ಹೆಂಡತಿ/ಗಂಡ, ನನ್ನ ಮಕ್ಕಳು ಸತ್ತು ಹೋಗುತ್ತಾರೆ. ಅದೇ ಎಲ್ಲಾ ಜನರ ಭವಿಷ್ಯತ್ತು. ಎಲ್ಲಾ ಪ್ರಾಣಿಗಳು ಕೂಡಾ ಸಾಯುತ್ತವೆ. ಆಮೇಲೆ ಮತ್ತೆ ಅವನಿಗೆ ಹೀಗೆ ಹೇಳಿದೆನು ನಿಲ್ಲು ಅರ್ಧವೇ ಕಾಣಿಸಿತು ಇನ್ನರ್ಧ ಕಾಣಿಸುತ್ತಿದೆ ಎಂದೆನು. ಹೇಳಿ ಸಾರ್ ಹೇಳಿ ಎಂದನು. ಆಗ ನಿನಗೆ ಸಾವು ಇಲ್ಲ ಎಂದೆನು.
ಸಾವು ಇದೆ, ಸಾವು ಇಲ್ಲ. ಶರೀರವತ್ ಸಾವು ಇದೆ. ಆತ್ಮವತ್ ಸಾವಿಲ್ಲ. ಇಷ್ಟೇ ಇದು ತುಂಬಾ ಸಿಂಪಲ್ ಆಗಿದೆ, ಚಿಕ್ಕ ವಿಷಯವಾಗಿದೆ. ಇದೇ ಒಟ್ಟಾರೆ ಆಧ್ಯಾತ್ಮದ ಸಾರ. ಎಲ್ಲರಿಗೂ ಗೊತ್ತು ಆದರೂ ಅಭ್ಯಾಸಮಾಡಬೇಕು. ಪ್ರತಿಬಾರಿ ನಾವು ಬೆಳಗ್ಗೆ ಎದ್ದು ಕಾಫಿ ಕುಡಿದಂತೆ, ನಂತರ ಟಿಫಿನ್ ಮಾಡಿದಂತೆ, ಮಧ್ಯಾಹ್ನ ಊಟ ಮಾಡಿದಂತೆ, ಸಂಜೆ ಕಾಫಿ ಕುಡಿದಂತೆ, ರಾತ್ರಿ ಊಟ ಮಾಡಿದಂತೆ ಪ್ರತಿ ದಿನ ಈ ಶರೀರಕ್ಕೆ ನಾವು ತಿಂಡಿ ನೀಡುತ್ತಿದ್ದೇವೆ. ಪ್ರತಿದಿನ, ಪ್ರತಿಕ್ಷಣವೂ ಜೀವನ ಪರ್ಯಂತ ಸಾಗುತ್ತಾ ಇರುತ್ತದೆ. ಒಂದು ಬಾರಿಗೆ ಇದು ಮುಗಿಯುವುದಿಲ್ಲ. ಇವತ್ತು ತಿಂದಿದ್ದೇವೆ, ನಾಳೆ ಮತ್ತೆ ತಿನ್ನಬೇಕಾಗಿಲ್ಲ ಎನ್ನುವಂತಿಲ್ಲ, ನಾಳೆ ಮತ್ತೆ ಹಸಿವು. ಹಸಿವು ನಿರಂತರವೂ ಈ ಶರೀರ ಇದ್ದಷ್ಟು ಕಾಲವೂ ಇರುವಂತಹುದು. ಅದಕ್ಕಾಗಿ ನಾವು ಅಡುಗೆ ಮಾಡಲೇಬೇಕು, ತಿನ್ನಲೇಬೇಕು.
ಅದೇ ವಿಧವಾಗಿ ಆತ್ಮಕ್ಕೆ ಪ್ರತಿದಿನ, ಪ್ರತಿಕ್ಷಣ ಹಸಿವೆಯೆನ್ನುವುದು ಇರುತ್ತದೆ. ನಾವು ಪ್ರತಿ ದಿನ ಧ್ಯಾನ ಮಾಡಿ ಜ್ಞಾನವನ್ನು ಸಿದ್ಧಪಡಿಸಿಕೊಂಡು ತಿನ್ನಬೇಕು. ಪ್ರತಿದಿನ ಬೆಳಗ್ಗೆ ಕಾಫಿಯೊಂದಿಗೆ ಸ್ವಲ್ಪ ಆತ್ಮಜ್ಞಾನ ಟಿಫಿನ್ನೊಂದಿಗೆ ಸ್ವಲ್ಪ, ಮಧ್ಯಾಹ್ನ ಊಟದೊಂದಿಗೆ ಹೆಚ್ಚು ಆತ್ಮಜ್ಞಾನ, ಸಂಜೆ ಕಾಫಿಯೊಂದಿಗೆ ಮೆಣಸಿನಕಾಯಿ ಬಜ್ಜಿ, ರಾತ್ರಿ ಊಟದೊಂದಿಗೆ ಸ್ವಲ್ಪ ಆತ್ಮಜ್ಞಾನ. ಹೇಗೆ ನಮ್ಮ ಶರೀರದ ಹಸಿವೆಗೆ ತಿನ್ನುತ್ತೇವೋ ಹಾಗೆಯೇ ದಿನವೆಲ್ಲಾ ನಮ್ಮ ಆತ್ಮಕ್ಕೆ ಜ್ಞಾನವನ್ನು ಕೊಡಬೇಕು. ಶರೀರಕ್ಕೆ ಹೇಗೆ ಹಸಿವೆ ಇದೆಯೋ ಹಾಗೆಯೇ ಆತ್ಮಕ್ಕೂ ಹಸಿವು ಇದೆ.
ಶರೀರ ಇದ್ದಷ್ಟು ದಿನ ಹೊಟ್ಟೆ ಹಸಿವು. ಆತ್ಮ ಇದ್ದಷ್ಟು ದಿನ ಆತ್ಮಕ್ಕೆ ಹಸಿವು. ಆತ್ಮ ಸದಾ ಇರುವಂತಹುದು ಆದ್ದರಿಂದ ಆತ್ಮಕ್ಕೆ ಸದಾ ಹಸಿವು ಇರುತ್ತದೆ. ಶರೀರ ಆಗಾಗ ಬರುತ್ತದೆ. ಆದ್ದರಿಂದ, ಶರೀರವಿದ್ದಾಗ ಶರೀರಕ್ಕೆ ಹಸಿವು. ಆತ್ಮದ ಹಸಿವೆ ತೀರುವುದಿಲ್ಲ. ಅದಕ್ಕೆ ಕಾಳು ಹಾಕುತ್ತಲೇ ಇರಬೇಕು. ಅದೇ ಇಡ್ಲಿ ದಿನಾ ತಿನ್ನುತ್ತಿರುತ್ತೇವೆ, ಅದೇ ಕಾಫಿ ದಿನವೂ ಕುಡಿದಂತೆ ಅದೇ ಧ್ಯಾನ ದಿನವೂ ಮಾಡಬೇಕು, ಅದೇ ಧ್ಯಾನದ ಶ್ರವಣ ದಿನವೂ ಕೇಳಬೇಕು. ಅದೇ ಸ್ವಾಧ್ಯಾಯ, ಸಜ್ಜನ ಸಾಂಗತ್ಯ ದಿನವೂ ಮಾಡುತ್ತಾ ಇರಬೇಕು. ನಿನ್ನೆ ಏನೋ ಹೇಳಿದರು ಇವತ್ತು ಏನು ಹೇಳುತ್ತಾರೆ ಎಂದರೆ ಬೇರೆ ಏನು ಹೇಳುತ್ತಾನೆ? There is nothing under the sky or above the sky.
ಭಗವದ್ಗೀತೆಯೆಲ್ಲಾ ಹೇಳಿದನಂತರ ಕೃಷ್ಣ ಏನು ಹೇಳಿದನೆಂದರೆ, ಉಪನಿಷತ್ತುಗಳಲ್ಲಿ ಏನಿದೆಯೋ ಅದೇ ನಾನು ಹೇಳಿದ್ದೇನೆ, ಅದಕ್ಕಿಂತ ಬೇರೆ ಏನಿಲ್ಲ. ಈ ಭಗವದ್ಗೀತೆ ಎಲ್ಲಾ ಉಪನಿಷತ್ತಿನ ಸಾರವೇ. ಹೊಸದಾಗಿ ಸತ್ಯವು ಆವಿಷ್ಕರಿಸಲಾಗದು. ಆದರೆ ನಮ್ಮ ಜೀವನ ಹೊಸದಾಗಿ ಆವಿಷ್ಕರಿಸಲಾಗುತ್ತದೆ. ಈ ದಿನ ಇನ್ನೂ ಸ್ವಲ್ಪ ಕಾಫಿ ರುಚಿಯಾಗಿ, ಇಡ್ಲಿ ಇನ್ನೂ ರುಚಿಯಾಗಿ, ಈ ದಿನ ನಮ್ಮ ಸಂಗೀತ ಇನ್ನೂ ಇಂಪಾಗಿ ಪ್ರಯತ್ನಿಸಬಲ್ಲೆವು. ನಿನ್ನೆಗಿಂತ ಈ ದಿನ ಇನ್ನೂ ಚೆನ್ನಾಗಿ ಇಡ್ಲಿಯಾಗಲಿ, ಕಾಫಿಯಾಗಲಿ, ಸಂಗೀತವಾಗಲಿ ಇರುತ್ತದೆ. ಹಾಗೆ ನಾವು ಮಾಡಬಲ್ಲೆವು. ನಿನ್ನೆಗಿಂತ ಧ್ಯಾನವನ್ನು ಇಂದು ಇನ್ನೂ ಆಳವಾಗಿ ಮಾಡಬಲ್ಲೆವು. ಧ್ಯಾನವೆನ್ನುವುದು ಕಡ್ಡಾಯ. ಆದರೆ ಆ ಧ್ಯಾನ ಇನ್ನೂ ಚೆನ್ನಾಗಿ ಮಾಡುತ್ತೇವೆ. ಆ ಪುಸ್ತಕ ಇನ್ನೂ ಶ್ರದ್ಧೆಯಿಂದ ಓದುತ್ತೇವೆ. ಬೇರೆಯವರ ಅನುಭವಗಳು ಇನ್ನೂ ಆಸಕ್ತಿಯಿಂದ ಕೇಳುತ್ತೇವೆ.
ಸತ್ಯ ಎಂದೂ ಬದಲಾಗದು. ಅದು ಬದಲಾದದ್ದೇ ಆದರೆ ಅದು ಸತ್ಯ ಎನಿಸುವುದಿಲ್ಲ. ನಿತ್ಯವೂ ಇರುವುದು ಸತ್ಯ. ಆಗಾಗ ಬಂದು ಹೋಗುವುದು ಮಿಥ್ಯ. ಆತ್ಮ ಯಾವಾಗಲೂ ಇರುತ್ತದೆ. ಹಾಗೆಯೇ ಹಸಿವು ಕೂಡಾ ಯಾವಾಗಲೂ ಇರುತ್ತದೆ. ಆತ್ಮವೆನ್ನುವುದು ಸತ್, ಚಿತ್, ಆನಂದವಲ್ಲ. ಸತ್ ಚಿತ್ ಹಸಿವು.
ದೇವತೆಗಳೆಲ್ಲರಿಗೂ ಕೆಲವು ಅನುಮಾನ ಬಂದು ಪರಮೇಶ್ವರನ ಬಳಿಗೆ ಹೋಗಬೇಕೆಂದು ನಿಶ್ಚಯಿಸಿದರು. ದೇವತೆಗಳೆಲ್ಲಾ ಕಾರಣಲೋಕಗಳಲ್ಲಿ ಇರುತ್ತಾರೆ. ಪರಮೇಶ್ವರ ಸತ್ಯಲೋಕದಲ್ಲಿ ಇರುತ್ತಾನೆ. ಇವರು ಕಾರಣಲೋಕದಲ್ಲಿ ಧ್ಯಾನ ಮಾಡಿ, ಅವರ ಕಾರಣಶರೀರಗಳಿಂದ ಹೊರಬಂದು, ಮಹಾಕಾರಣ ಲೋಕದಲ್ಲಿ ಶಿವನು ಧ್ಯಾನ ಮಾಡುತ್ತಿದ್ದ ಸ್ಥಳಕ್ಕೆ ಹೋದರು. ಎಲ್ಲರೂ ಧ್ಯಾನ ಮಾಡುತ್ತಿದ್ದ ಶಿವನ ಮುಂದೆ ಕುಳಿತರು. ಸ್ವಲ್ಪ ಹೊತ್ತಿನ ನಂತರ ಶಿವನು ಕಣ್ಣುಬಿಟ್ಟು ದೇವತೆಗಳನ್ನೆಲ್ಲಾ ನೋಡಿ, ಏನು ನಿಮ್ಮ ಸಮಸ್ಯೆ ಎಂದು ಕೇಳಿದ. ಅವರು ಯಾವುದೋ ಸಮಸ್ಯೆಯೊಂದಿಗೆ ತೆರಳಿದ್ದರು. ನೀವೇ ಅಲ್ಲವೇ ಸರ್ವಾಂತರಯಾಮಿ, ನೀವೇ ಉನ್ನತವಾದ ಮಟ್ಟದಲ್ಲಿದ್ದೀರ, ನೀವೇಕೆ ಧ್ಯಾನ ಮಾಡುತ್ತಿದ್ದೀರಿ? ಎಂದು ಕೇಳಿದಾಗ ನೋಡಿ ನಿಮಗೆ ನಾನು ಹೇಗೋ ಹಾಗೆ ನನಗೆ ನನ್ನ ಮೇಲಾಧಿಕಾರಿ ಮೇಲೆ ಎಲ್ಲೋ ಇದ್ದಾರೆ ಎಂದನು. ಆತನೂ ಹುಡುಕುತ್ತಿದ್ದಾನೆ. ಪ್ರತಿಯೊಬ್ಬರೂ ಯಾವಾಗಲೂ ಧ್ಯಾನ ಮಾಡುತ್ತಾ ಅವರವರ ಜ್ಞಾನದ ಹಸಿವನ್ನು ತೀರಿಸಿಕೊಳ್ಳುತ್ತಾ ಇರುತ್ತಾರೆ. ಹಾಗೆಯೇ ಪರಮಶಿವನಿಗೆ ಯಾವಾಗಲೂ ಹಸಿವು. ಅವನು ಹಸಿವೆ ತೀರಿದವನಲ್ಲ. ಜ್ಞಾನದ ಹಸಿವು ಯಾವಾಗಲೂ ಇರುತ್ತದೆ.
ಇನ್ನೊಂದು ಲಕ್ಷ ಜನ್ಮಗಳ ನಂತರ, ಹತ್ತು ಲಕ್ಷ ಜನ್ಮಗಳ ನಂತರ ನಾವು ಯಾವುದೋ ಒಂದು ಗಾಲಾಕ್ಸಿಯಲ್ಲಿ ಸೇರುತ್ತೇವೆ. ಆಗ ಮತ್ತೆ ಇದೇ ಸ್ವಲ್ಪ ಹೊತ್ತು ಧ್ಯಾನ ಮಾಡೋಣ. ಹಸಿವಾಗಿದೆ ಎಂದು ಮತ್ತೆ ಧ್ಯಾನ ಮಾಡುತ್ತೇವೆ. ಆನಂತರ ಒಬ್ಬರನ್ನೊಬ್ಬರು ಹುಡುಕಿಕೊಳ್ಳುತ್ತೇವೆ. ನಾವು ಮತ್ತೆ ಧ್ಯಾನ ಮಾಡುತ್ತೇವೆ. ಪರಿಸ್ಥಿತಿ ಬದಲಾಗುತ್ತದೆ. ಆದರೆ ಧ್ಯಾನ ಬದಲಾಗದು, ಹಸಿವೆ ಬದಲಾಗದು. ಆದ್ದರಿಂದ, ಈ ಹಸಿವನ್ನು ಕಡಿಮೆಯಾಗುವಂತಹುದೆಂದು ಗ್ರಹಿಸಬೇಡಿ. ಇದು ತೀರದ ಹಸಿವು.
ನಾವು ಜೀವನದಲ್ಲಿ ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಲ್ಲೆವು? ಎಷ್ಟಾದರೂ ಮಾಡಬಲ್ಲೆವು. ಅದಕ್ಕೆ ಅಂತ್ಯವಿಲ್ಲ. ಒಳ್ಳೆಯ ಕೆಲಸಗಳಿಗೆ ಅಂತ್ಯವಿಲ್ಲ. ಒಂದಾದ ನಂತರ ಒಂದು ಯಾವಾಗಲೂ ಮುಂದೆ ಬರುತ್ತಾ ಇರುತ್ತದೆ. ಈ ಭೂಲೋಕವಾದ ನಂತರ ಇನ್ನೊಂದು ಲೋಕಕ್ಕೆ ಹೋಗುತ್ತೇವೆ. ಆಲೋಕ ಆದಮೇಲೆ ಇನ್ನೊಂದು ಲೋಕಕ್ಕೆ ಹೋಗುತ್ತೇವೆ. ಸೃಷ್ಟಿ ಅನಂತವಾಗಿ ಹೊಸ ಹೊಸ ಸೃಷ್ಟಿಗಳು ಚಿಗುರುತ್ತಾ ಇವೆ. ಸೃಷ್ಟಿಗೆ ಅಂತ್ಯವಿಲ್ಲ. ಆತ್ಮಕ್ಕೆ ಅಂತ್ಯವಿಲ್ಲ, ಆತ್ಮದ ಹಸಿವಿಗೆ ಅಂತ್ಯವಿಲ್ಲ. ಸೃಷ್ಟಿಯಲ್ಲಿ ನಾವು ಮಾಡಬೇಕಾದ ಒಳ್ಳೆಯ ಕೆಲಸಗಳಿಗೆ ಅಂತ್ಯವಿಲ್ಲ.
ಆಧ್ಯಾತ್ಮಿಕ ಶಾಸ್ತ್ರದಲ್ಲಿ ಆರು ಸಿದ್ಧಾಂತಗಳಿವೆ: 1) ಆತ್ಮಸಿದ್ಧಾಂತ, ನಾನು ಆತ್ಮ ಇದು ಮೊದಲನೆಯ ಸಿದ್ಧಾಂತ. 2) ಜನ್ಮ ಪುನರ್ಜನ್ಮ ಸಿದ್ಧಾಂತ, ಮೊಟ್ಟಮೊದಲು ಮಾನವ ಜನ್ಮಕ್ಕೆ ಬರುತ್ತೇವೆ. ಆಗಿನಿಂದ ಪುನರ್ಜನ್ಮಗಳು ಮೊದಲಾಗುತ್ತವೆ. ಮೊದಲ ಜನ್ಮದಲ್ಲಿ ಕರ್ಮಗಳಿರುವುದಿಲ್ಲ. ಆದರೆ, ಬಹುಜನ್ಮಗಳಲ್ಲಿ ಕರ್ಮಗಳನ್ನು ಮಾಡುತ್ತಾ ಸಾಗುತ್ತೇವೆ. ಎರಡನೆಯ ಜನ್ಮದಿಂದ ಕರ್ಮಗಳು ಪ್ರಾರಂಭವಾಗುತ್ತವೆ. ಮೊದಲ ಸಿದ್ಧಾಂತವೇನೆಂದರೆ ನಾವೆಲ್ಲಾ ಅರಿವಿನ ಪದಾರ್ಥಗಳು, ಚೈತನ್ಯ ಪದಾರ್ಥಗಳು. ಎರಡನೆಯದು ಜನ್ಮ ಮತ್ತು ಪುನರ್ಜನ್ಮಸಿದ್ಧಾಂತ. 3) ಕರ್ಮ-ಕರ್ಮಫಲ ಸಿದ್ಧಾಂತ ಅಂದರೆ ಹೀಗೆ ಮಾಡಿದರೆ ಹಾಗೆ ಆಗುತ್ತದೆ. 4) ಪುರೋಗಮನ ಸಿದ್ಧಾಂತ ಅಂದರೆ ಯಾವಾಗಲೂ ನಾವು ಪುರೋಗಮನ (ಪ್ರಗತಿ) ಸಿದ್ಧಾಂತದಲ್ಲಿರುತ್ತೇವೆ 5) ಯೋಗ ಸಿದ್ಧಾಂತ 6) ಅನೇಕಾನೇಕ ಸಿದ್ಧಾಂತ.
ಪುರೋಗಮನ ಸಿದ್ಧಾಂತದಲ್ಲಿ ನಾವು ಸದಾ ಪುರೋಗಮನದಲ್ಲಿ ಇರುತ್ತೇವೆ ತಿರೋಗಮನದಲ್ಲಿ ಅಲ್ಲ. Failure is also a stepping stone for success. ನಾವು ವೈಫಲ್ಯವನ್ನು ನಿರಾಶೆಯಿಂದ ತೆಗೆದುಕೊಳ್ಳಬಾರದು. ಅದರಲ್ಲಿ ನಾವು ಎಲ್ಲಿ ತಪ್ಪುಗಳು ಮಾಡಿದ್ದೇವೆ ಎಂದು ಅರ್ಥವಾಗುತ್ತದೆ. ಆದ್ದರಿಂದ, ನಾವು ಅದನ್ನು ಸರಿಪಡಿಸಿಕೊಳ್ಳಲು ಇನ್ನೂ ಅಭ್ಯಾಸ ಮಾಡಲು ಒಂದು ಅವಕಾಶ ಸಿಗುತ್ತದೆ. ಇಲ್ಲಿ ನಾನು ದುರ್ಬಲವಾಗಿದ್ದೇನೆಂದು ವೈಫಲ್ಯದಲ್ಲಿ ತಿಳಿಯುತ್ತದೆ. ಯಶಸ್ಸಿನಲ್ಲಿ ಪ್ರಬಲವಾಗಿ ಎಲ್ಲಿದ್ದೇವೆ ಎಂದು ತಿಳಿಯುತ್ತದೆ, ವೈಫಲ್ಯದಲ್ಲಿ ನಾವು ಎಷ್ಟು ದುರ್ಬಲವಾಗಿದ್ದೇವೆ ಎಂದು ತಿಳಿಯುತ್ತದೆ. ಆಗ ಮತ್ತೆ ಅಭ್ಯಾಸಮಾಡುತ್ತೇವೆ. ಆದ್ದರಿಂದ, ನಾವು ಪ್ರತಿಯೊಂದು ಅನುಭವದಲ್ಲಿ ಪುರೋಗಮನದಲ್ಲೇ ಇದ್ದೇವೆ. ಎಲ್ಲೂ ತಿರೋಗಮನ ಇಲ್ಲ. ಯಾವ ಆತ್ಮಕ್ಕೂ ಸದಾ ಪುರೋಗಮನವೆ. The law of constant progression. ಯೋಗ ಸಿದ್ಧಾಂತ – The law of the principle of hastening your evolution. ನಾವು ಹೀಗೆ ಹೋದರೆ ಈ ವೇಗದಲ್ಲಿ ಹೋಗುತ್ತೇವೆ. ಸ್ವಲ್ಪ ಸೇವೆ ಮಾಡಿದರೆ, ಪಿರಮಿಡ್ಗಳು ಕಟ್ಟಿದರೆ ನಮ್ಮ ಪುರೋಗಮನ ಮತ್ತಷ್ಟು ವೇಗವಾಗುತ್ತದೆ. ಇದು ಯೋಗಸಿದ್ಧಾಂತ. ನೀನು ಧ್ಯಾನ ಮಾಡಿದರೂ ಮಾಡದೇ ಹೋದರೂ, ಸ್ವಾಧ್ಯಾಯ ಮಾಡಿದರೂ ಮಾಡದಿದ್ದರೂ, ಸಜ್ಜನಸಾಂಗತ್ಯ ಮಾಡಿದರೂ ಮಾಡದಿದ್ದರೂ, ಮಾಂಸ ತಿಂದರೂ, ತಿನ್ನದಿದ್ದರೂ ಮುಂದೆ ಹೋಗುತ್ತಾ ಇರುತ್ತೀಯಾ. ಆದರೆ ಮಾಂಸ ತಿನ್ನುವುದನ್ನು ನಿಲ್ಲಿಸಿದರೆ ಆಗ ಮತ್ತಷ್ಟು ವೇಗವಾಗಿ ಹೋಗುತ್ತೀಯಾ, ಸ್ವಾಧ್ಯಾಯ ಮಾಡು ಇನ್ನಷ್ಟು ವೇಗವಾಗಿ ಹೋಗುತ್ತೀಯಾ, ಸಜ್ಜನ ಸಾಂಗತ್ಯ ಮಾಡು ಇನ್ನಷ್ಟು ವೇಗವಾಗಿ ಹೋಗುವೆ. ಅಂದರೆ, ನಿನ್ನ ಪುರೋಗಮನವನ್ನು ಇನ್ನಷ್ಟು ವೇಗಗೊಳಿಸುವಂತಹುದು ಈ ಕ್ರಿಯೆಗಳು. ನಾನು ಮಾಂಸವನ್ನೆ ತಿನ್ನುತ್ತೇನೆ ಎಂದರೆ ನಿನ್ನಿಷ್ಟ. ಅವನು ಕೆಲವು ಜನ್ಮಗಳು ಹೆಚ್ಚಾಗಿ ಎತ್ತಿ ಮುಂದಕ್ಕೆ ಹೋಗುತ್ತಾ ಇರುತ್ತಾನೆ. ಆದರೆ ನೀನು ಸಸ್ಯಾಹಾರಿಯಾಗು ಬೇಗನೇ ಹೋಗುತ್ತೀಯಾ. ಧ್ಯಾನಮಾಡು, ನಿನ್ನ ಗಮನ ಮತ್ತಷ್ಟು ವೇಗವಾಗುತ್ತದೆ. ದಿನವೂ ಭಗವದ್ಗೀತೆ ಓದು, ದಿನವೂ ಬೇರೆಯವರ ಅನುಭವಗಳನ್ನು ಕೇಳು. ನಿನ್ನ ಅನುಭವ ಉನ್ನತವಾದದ್ದೇ. ಆದರೆ ಬೇರೆಯವರ ಅನುಭವ ನಿನಗಿಂತ ಹೆಚ್ಚಾಗಿಯೇ ಇರಬಹುದು. ನಿನಗಿಂತ ಉನ್ನತವಾದವರು ಇದ್ದೇ ಇರುತ್ತಾರೆ. ಯಾವಾಗಲೂ ಕಲಿಯುತ್ತಿರಬೇಕು. ಆಗ ನಿನ್ನ ಪುರೋಗಮನ ವೇಗಗೊಳ್ಳುತ್ತದೆ.
ಅನೇಕಾನೇಕ ಸಿದ್ಧಾಂತ: ನೀನು ಯಾವಾಗ ಮೂರನೆಯ ಕಣ್ಣು ಉತ್ತೇಜಿಸಿಕೊಳ್ಳುತ್ತೀಯೋ ಆಗ ನಿನಗೆ ನಿನ್ನ ಗತಜನ್ಮಗಳು ತಿಳಿದುಕೊಳ್ಳುವಿಕೆ ಶುರುವಾಗುವುದು. ಎಷ್ಟೋ ಗಾಲಾಕ್ಸಿಗಳಿವೆ, ಎಷ್ಟೋ ಜೀವರಾಶಿಗಳಿವೆ ಇದಕ್ಕೆ ಅಂತ್ಯವೇ ಇಲ್ಲ. ಭವಿಷ್ಯತ್ತಿನಲ್ಲಿ ನಾನು ಏನು ಮಾಡಬಲ್ಲೆ? ಎಷ್ಟಾದರೂ ಮಾಡಬಲ್ಲೆ. ಅನೇಕಾನೇಕ ಎಲ್ಲೆಲ್ಲೂ ನೋಡಿದರೂ ಅನೇಕಾನೇಕ (Infinity) ಅನಂತ. ಅದಕ್ಕೆ ಶ್ರೀಕೃಷ್ಣನು ಅರ್ಜುನನಿಗೆ ಯೋಗಿಯಾಗು ಎಂದು ಭಗವದ್ಗೀತೆಯಲ್ಲಿ ಹೇಳಿದ. ನೀನು ಚೆನ್ನಾಗಿಯೇ ಇದ್ದೀಯಾ, ಆದರೆ ಯೋಗಿಯಾಗು. ನಿನ್ನ ಧ್ಯಾನದಿಂದ ನೀನು ಮಾಡುವ ಕೆಲಸಗಳಲ್ಲಿ ಮತ್ತಷ್ಟು ನೈಪುಣ್ಯತೆ ಬರುತ್ತದೆ, ಪುರೋಗಮನ ಬರುತ್ತದೆ. ಆದರೆ ಮೊದಲು ನೀನು ಯೋಗಿಯಾಗು.
ಧ್ಯಾನ ಮಾಡು. ನೀನು ಆರೋಗ್ಯವಾಗಿಯೇ ಇದ್ದೀಯಾ ಮತ್ತಷ್ಟು ಸುನಿಶ್ಚಿತವಾಗುತ್ತದೆ, ಯೋಗಸಿದ್ಧಾಂತ. ಯೋಗವೆಂದರೆ ಧ್ಯಾನಯೋಗ, ಜ್ಞಾನಯೋಗ, ಕರ್ಮಯೋಗ, ನಾದಯೋಗ. ನಾನು ಕಣ್ಣುಮುಚ್ಚಿಕೊಂಡು ನಾದದೊಂದಿಗಿದ್ದರೆ ನನಗೂ ನಿಮಗೂ ಸಂಬಂಧವಿಲ್ಲ. ನಮಗೆ ಆಗ ಯಾರೂ ಬೇಕಾಗಿಲ್ಲ. ಹೆಂಡತಿ/ಗಂಡ ಮಕ್ಕಳು ಬೇಕಾಗಿಲ್ಲ. ನನ್ನ ನಾದದೊಂದಿಗೆ ನಾನು ಏಕವಾಗಿದ್ದೇನೆ. ಅದೇ ನಾದಯೋಗ. ಯೋಗದಲ್ಲಿ ಮನಸ್ಸು ಏಕವಾಗುತ್ತದೆ. ಬೇರೆಬೇರೆ ವಿಧಗಳಲ್ಲಿ ಅಲ್ಲ ಏಕವಿಧದಲ್ಲಿ ಇರುತ್ತದೆ. ನೀನು ಯೋಗಿಯಾಗದಿದ್ದರೆ ಮನಸ್ಸು ಪರಿಪರಿ ವಿಧಗಳಲ್ಲಿ ಎಷ್ಟೋ ಶಕ್ತಿಯನ್ನು ಕಳೆದುಕೊಂಡು ಎಷ್ಟು ಹಾಯಾಗಿ ಇರಬೇಕೆಂದುಕೊಂಡಿದ್ದೀಯೋ ಹಾಗಿರುವುದಿಲ್ಲ.
ಯೋಗದಲ್ಲಿ ಮನಸ್ಸಿನ ಮೇಲೆ ಹಿಡಿತ ಬರುತ್ತದೆ. ಬಹುಮುಖವಾಗಿರುವುದು ಏಕಮುಖವಾಗುತ್ತದೆ. ಪಕ್ಕದ ಮನೆಯವರು ಏನು ಮಾಡುತ್ತಿದ್ದಾರೋ ನಮಗೇಕೆ? ನಿನ್ನಲ್ಲಿ ನೀನು ಏಕವಾಗಿಲ್ಲ. ಬೇರೆಯವರಲ್ಲಿ ನಿನ್ನ ಪ್ರವೇಶ ಬೇಡ. ನಾವು ನಮ್ಮ ಜೀವನದಲ್ಲಿರಬೇಕು. ಸುತ್ತಮುತ್ತಲಿನ ಸಂಸಾರವನ್ನು ನಾನು ನೋಡಿಯೂ ನೋಡದಂತೆ ಇರಬೇಕು. ಅವರ ಮಾತುಗಳನ್ನು ಕೇಳಿಯೂ ಕೇಳದಂತಿರಬೇಕು. ಅವರ ಕ್ರಿಯೆಗಳ ಕುರಿತು ಆಲೋಚಿಸಬಾರದು. ನಿನ್ನ ಸಮಯವನ್ನು ನಿನ್ನ ಸಾಧನೆಗೆ ಮೀಸಲಿಡು. ಯೋಗಸಾಧನೆ ಮಾಡಿ ಯೋಗಿಯಾಗು. ಪ್ರಪಂಚವೆಲ್ಲಾ ಸರಿಹೋಗುತ್ತದೆ. ಪ್ರತಿವ್ಯಕ್ತಿಯೂ ಸರಿಹೋಗುತ್ತಾನೆ. ಯೋಗದಿಂದ ಯೋಗ ಸಿದ್ಧಾಂತ. ಅದರಿಂದ ನಾವು ಅನೇಕಾನೇಕ ಸಿದ್ಧಾಂತ ತಿಳಿದುಕೊಳ್ಳುತ್ತೇವೆ. ನಾವೆಷ್ಟೋ ಜನ್ಮಗಳು ತಿಳಿದುಕೊಳ್ಳುತ್ತೇವೆ. ಪಕ್ಕದವನ ಎಷ್ಟೋ ಜನ್ಮಗಳನ್ನು ನೋಡುತ್ತೇವೆ.
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ |
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ ||
ಓ ಅರ್ಜುನ ನಾನು, ನೀನು ಎಷ್ಟೋ ಜನ್ಮಗಳನ್ನೆತ್ತಿದ್ದೇವೆ. ನಿನ್ನದು, ನನ್ನದು ಎಲ್ಲಾ ಜನ್ಮಗಳೂ ನನಗೆ ಗೊತ್ತು ನಿನಗೆ ಗೊತ್ತಿಲ್ಲ. ಏಕೆಂದರೆ ನೀನು ಯೋಧನಾದೆ ಹೊರತು ಯೋಗಿಯಾಗಲಿಲ್ಲ. ಆದ್ದರಿಂದ ಯೋಗಿಯಾಗು ತಸ್ಮಾತ್ ಯೋಗಿ ಭರ್ವಾಜುನ. ಎಲ್ಲರೂ ಯೋಗಿಗಳಾಗಬೇಕು.
ನಾನು ಯಾವಾಗಲೂ ನನ್ನ ಸಮಯವನ್ನು ನನ್ನ ಅಭಿವೃದ್ಧಿಗಾಗಿ ಪ್ರತಿಕ್ಷಣ ಉಪಯೋಗಿಸಿಕೊಳ್ಳುತ್ತೇನೆ. ಆದ್ದರಿಂದ ನಾನು ಅಭಿವೃದ್ಧಿ ಹೊಂದಿದ ವ್ಯಕ್ತಿ. You have to develop yourself. ಯಾವುದೋ ಒಂದು ಯೋಗ ಸ್ವಲ್ಪ ಹೊತ್ತು ಧ್ಯಾನಯೋಗ, ಜ್ಞಾನಯೋಗ, ವಿಜ್ಞಾನಯೋಗ, ಕರ್ಮಯೋಗ. ಸ್ವಲ್ಪ ಹೊತ್ತು ಸೇವಾಯೋಗ, ನಾದಯೋಗ, ಹಠಯೋಗ. ಸ್ವಲ್ಪಹೊತ್ತು ಆಸನ ಹಠಯೋಗ. ಯಾವುದೋ ಒಂದು ಯೋಗದಲ್ಲಿ ಸ್ವಲ್ಪ ಹೊತ್ತು ಇರಬೇಕು. ಯಾವ ಕ್ಷಣವೂ ಯೋಗಿಯಾಗದೇ ಇರಬಹುದು. ಆದ್ದರಿಂದ ನೆನಪಿನಲ್ಲಿಡಿ ಬೇರೆಯವರ ಸಂಬಂಧದಲ್ಲಿ ಮೂಗು ತೂರಿಸಬೇಡಿ. ಪ್ರವೇಶಿಸಿದರೂ ಕೇಳಬೇಡಿ, ಕೇಳಿದರೂ ಸುಮ್ಮನಿರಿ. ನಿಮ್ಮ ಜೀವನವು ಎರಡು ವಿಧಗಳಾಗಿರಬೇಕು. ನಿನ್ನ ಆಧ್ಯಾತ್ಮಿಕ ಪ್ರಗತಿಯ ಮೇಲೆ ಶ್ರದ್ಧೆ. ಮತ್ತೊಂದು ಸಬೂರಿ, ನಿನ್ನ ಜೀವನ ಚೆನ್ನಾಗಿ ಇಲ್ಲದಿರುವಾಗ, ಪ್ರಶಾಂತವಾಗಿ ಇರಬೇಕು, ಸಹನೆಯಿಂದಿರಬೇಕು. ಒಂದು ಶ್ರದ್ಧೆ ಮತ್ತೊಂದು ಸಬೂರಿ.
ಸಂಸಾರದಲ್ಲಿ ಪ್ರತಿಯೊಬ್ಬರಿಗೂ ಸಹನೆಯ ಅಗತ್ಯವಿದೆ. ಪ್ರತಿಯೊಬ್ಬರಿಗೂ ಇನ್ನೊಬ್ಬರಿಂದ ಸಮಸ್ಯೆಗಳು ಬರುತ್ತಿರುತ್ತದೆ. ಆಗ ಸಹನೆಯಿಂದಿರಬೇಕು. ನಮ್ಮ ಶ್ರದ್ಧೆಯು ಮಾತ್ರ ಯೋಗಸಾಧನೆಯ ಮೇಲಿರಬೇಕು. ನಮ್ಮ ಧ್ಯಾನದ ಮೇಲೆ, ಜ್ಞಾನದ ಮೇಲೆ, ಸೇವೆಯ ಮೇಲೆ, ಸಾಧನೆಯ ಮೇಲೆ ಇರಬೇಕು. ಶ್ರದ್ಧೆ ಯಾವಾಗಲೂ ನಮ್ಮ ಆಧ್ಯಾತ್ಮಿಕ ಪ್ರಗತಿಯ ಮೇಲಿರಬೇಕು.
ಎಷ್ಟು ಒಳ್ಳೆಯ ಕೆಲಸಗಳು ಮಾಡಬಲ್ಲೆ, ಎಷ್ಟು ಧ್ಯಾನ ಮಾಡಬಲ್ಲೆ, ಎಷ್ಟು ಪುಸ್ತಕಗಳು ಓದಬಲ್ಲೆ, ಎಷ್ಟು ಜನರಿಗೆ ಧ್ಯಾನ ಹೇಳಿಕೊಡಬಲ್ಲೆ, ಜ್ಞಾನ ಹೇಳಬಲ್ಲೆ, ಎಷ್ಟು ಜನರಿಗಾದರೂ ಹೇಳಬಲ್ಲೆ. ಎಷ್ಟು ಸಮಯವಾದರೂ ವ್ಯರ್ಥ ಮಾಡಬಹುದು. ಎಷ್ಟು ಸಂಗೀತ ಸಾಧನೆಯಾದರೂ ಮಾಡಬಲ್ಲೆ. ಆದ್ದರಿಂದ ನಮ್ಮ ಜ್ಞಾನಕ್ಕೆ ಅಂತ್ಯವಿಲ್ಲ. ಆತ್ಮಕ್ಕೆ ಅಂತ್ಯವಿಲ್ಲ, ಆತ್ಮದ ಹಸಿವೆಗೆ ಅಂತ್ಯವಿಲ್ಲ. ಯಾವಾಗಲೂ ಸಾಧನೆ ಮಾಡುತ್ತಲೇ ಇರಬೇಕು. ಇದು ಅಂತ್ಯವಿಲ್ಲದೆ ಕಥೆ. ಆತ್ಮಕ್ಕೆ ಆದಿ ಇಲ್ಲ. ಅಂತ್ಯವಿಲ್ಲ. ಇದು ಅನಾದಿ, ಅನಂತ. ಆತ್ಮದ ಹಸಿವು ಕೂಡಾ ಅನಾದಿ, ಅನಂತವಾದದ್ದು. ಆತ್ಮದ ಹಸಿವೆ ತೀರಿಸುವ ಆ ಒಂದು ವಿಧಾನಗಳು ಕೂಡಾ ಅನಾದಿ, ಅನಂತಗಳು.
“ಸಬ್ಕೋ ಸನ್ಮತಿ ದೇ ಭಗವಾನ್”
“ಸಬ್ಕೋ ಸನ್ಮತಿ ದೇ ಭಗವಾನ್” ಎಂದು ನಾವು ದೇವರಲ್ಲಿ ಯಾವಾಗಲೂ ಪ್ರಾರ್ಥಿಸುತ್ತೇವೆ. ನಾವು ಭಿಕಾರಿಗಳಂತೆ ಯಾವಾಗಲೂ ದೇವರೇ ನನಗೆ ಅದುಕೊಡು, ಇದುಕೊಡು ಎಂದು ಬೇಡುತ್ತೇವೆ. ಮಂದಿರಕ್ಕೆ ಹೋಗುವುದು ಮಸೀದಿಗೆ, ಚರ್ಚ್ಗೆ ಹೋಗುವುದು ಪ್ರಾರ್ಥನೆಗಳನ್ನು ಮಾಡುವುದು.
ದೇವರೇ ನನಗೆ ಸನ್ಮತಿ ಕೊಡು, ನನಗೆ ಮಾತ್ರ ಕೊಡು ಎನ್ನುತ್ತೇವೆ. ಆದರೆ ಮಹಾತ್ಮಾ ಗಾಂಧಿಯವರು ಸಬ್ಕೋ ಸನ್ಮತಿ ದೇ ಭಗವಾನ್ ಎನ್ನುತ್ತಾರೆ. ಅವರು ನನಗೆ ಮಾತ್ರ ಕೊಡು ಎಂದು ಕೇಳಲಿಲ್ಲ. “ದೇವರೇ ಎಲ್ಲರಿಗೂ ಸನ್ಮತಿ ಕೊಡು” ಎಂದು ಕೇಳುತ್ತಾರೆ. ಎಲ್ಲರಿಗೂ ಶಾಂತಿ ಕೊಡು ಎನ್ನುತ್ತಾರೆ. ಎಲ್ಲರಿಗೂ ಹಣಬೇಕು, ಮೋಕ್ಷಬೇಕು, ಶಾಂತಿಬೇಕು, ಭಾಗ್ಯಬೇಕು ಎನ್ನುವುದೇ ನಿಜವಾದ ಪ್ರಾರ್ಥನೆ, ಒಳ್ಳೆಯ ಪ್ರಾರ್ಥನೆ. ನಾವು ನಮಗೋಸ್ಕರ ಪ್ರಾರ್ಥಿಸುತ್ತೇವೆ. ಆದರೆ, ನಮ್ಮ ಅಕ್ಕಪಕ್ಕದವರಿಗಾಗಿ ಪ್ರಾರ್ಥಿಸಬೇಕು. ನಮಗಾಗಿ ನಾವು ಸಾಧನೆ ಮಾಡಬೇಕು. ಪ್ರಾರ್ಥನೆ ಯಾವಾಗಲೂ ನಮಗಾಗಿ ಅಲ್ಲ. ಎಲ್ಲರ ಒಳಿತನ್ನು ಕೋರಿ ಪ್ರಾರ್ಥನೆ ಮಾಡಬೇಕು. ಯಾವಾಗಲು ಅದು ಬೇರೆಯವರನ್ನು ಕುರಿತೇ ಇರಬೇಕು. ಪ್ರಾರ್ಥಿಸಬೇಕೆನಿಸಿದರೆ ನಿಮ್ಮ ಸ್ವಂತಕ್ಕಾಗಿ ಪ್ರಾರ್ಥಿಸಬೇಡಿ. ಹಾಗೆ ಮಾಡಿದರೆ ಏನೇನೂ ದೊರೆಯುವುದಿಲ್ಲ. ಬೇರೆಯವರಿಗಾಗಿ ಪ್ರಾರ್ಥಿಸಿದರ ಎಲ್ಲವೂ ಸಹ ದೊರೆಯುತ್ತದೆ.
ನೀನು ನಿನ್ನ ನೆರೆಯವರಿಗಾಗಿ ಪ್ರಾರ್ಥಿಸಿದರೆ ನಿನಗೆ ಕೊಡಲ್ಪಡುತ್ತದೆ. ಇದೇ ದೊಡ್ಡ ರಹಸ್ಯ. ಅಕ್ಕಪಕ್ಕದವರನ್ನು ನೀನು ನೆನಪಿಸಿಕೋ, ಅವರಿಗಾಗಿ ಬೇಡು. ಪ್ರಾರ್ಥನೆ ತುಂಬಾ ಮುಖ್ಯ. ಆದರೆ, ನಿನಗಾಗಿ ಅಲ್ಲ. ನಿನಗೋಸ್ಕರ ಧ್ಯಾನ, ಅಕ್ಕಪಕ್ಕದವರಿಗಾಗಿ ಪ್ರಾರ್ಥನೆ. ಅಕ್ಕಪಕ್ಕದವರಿಗಾಗಿ ಏನು ಕೇಳಬೇಕು? ಹಣ, ಉದ್ಯೋಗ ಕೊಡು ಎಂದಲ್ಲ, ಸನ್ಮತಿಯನ್ನು ಕೊಡು ಭಗವಂತ ಎಂದು ಪ್ರಾರ್ಥಿಸಬೇಕು. ಸನ್ಮತಿ ಎಂದರೆ ಸತ್ಯವಾದ ಮತಿಕೊಡು ಎನ್ನಬೇಕು. ಆಗ ಅದು ಸುಂದರವಾದ ಪ್ರಾರ್ಥನೆಯಾಗುತ್ತದೆ. ಅದು ಪ್ರಾಪಂಚಿಕವಾಗಿ ಅಲ್ಲ ಆಧ್ಯಾತ್ಮಿಕವಾಗಿ ಮಾತ್ರ ಇರಬೇಕು. ಸನ್ಮತಿ ಎಂದರೆ ನಿಜವಾದ ಮತಿ, ಸತ್ಯವಾದ ಮತಿ ಎಂದರ್ಥ. ತಾಯಿಯಾದವಳು ಕೂಡಾ ಮಗು ಕೇಳದೆಯೇ ಏನನ್ನೂ ಸಹ ಕೊಡುವುದಿಲ್ಲ. ನಮಗೆ ಹಸಿವೆಯಾಗಿದೆ ನಾವು ಕೇಳದೆ ಇದ್ದರೆ ಅವಳಿಗೆ ಹೇಗೆ ಅರ್ಥವಾಗುತ್ತದೆ? ಹಸಿವೆಯಾಗುತ್ತಿದೆ ಎಂದರೆ ಸರಸರನೆ ಹೋಗಿ ಅನ್ನವನ್ನು ತಂದು ಬಡಿಸುತ್ತಾಳೆ. ಕೇಳದಿದ್ದರೆ ಇವನಿಗೆ ಹಸಿವೆಯಿಲ್ಲ ಅಂದುಕೊಳ್ಳುತ್ತಾಳೆ. ಒಳಗಿರುವ ಹಸಿವು ಹೊರಗೆ ಹೇಗೆ ತಿಳಿಯುತ್ತದೆ. ಅದು ಅಮ್ಮನಿಗಾದರೂ, ಯಾರಿಗಾದರೂ ತಿಳಿಯದು.
ಆದರೆ, ಅದು ಆ ಭಗವಂತನಿಗೆ ತಿಳಿದರೂ, ನೀನು ಯಾವಾಗ ಕೇಳುತ್ತೀಯಾ ಎಂದು ಎದುರು ನೋಡುತ್ತಾನೆ. ನೀನು ಕೇಳದಿದ್ದರೆ ಅವನು ಯೋಗ ನಿದ್ರೆಯಲ್ಲಿರುತ್ತಾನೆ. ಕೇಳಿದರೆ ತಕ್ಷಣ ಎದ್ದು ಕೊಡುತ್ತಾನೆ. ಆಗ ನೀನು ನಿನಗೋಸ್ಕರವಲ್ಲದೇ ನೆರೆಯಾತನಿಗೋಸ್ಕರ ಕೇಳಬೇಕು. ಸನ್ಮತಿಯನ್ನು ಕೇಳಬೇಕು. ಧ್ಯಾನ ಎಷ್ಟು ಮುಖ್ಯವೋ, ಪ್ರಾರ್ಥನೆ ಸಹ ಅಷ್ಟೇ ಮುಖ್ಯ. ಆದರೆ, ಎಂತಹ ಪ್ರಾರ್ಥನೆಯಿರಬೇಕೋ ಅಂತಹ ಪ್ರಾರ್ಥನೆಯಿರಬೇಕು. ನಿನಗೋಸ್ಕರ ನೀನು ಪ್ರಾಪಂಚಿಕವಾಗಿಯೂ ಕೇಳಬಾರದು. ಆಧ್ಯಾತ್ಮಿಕವಾಗಿ ಕೂಡಾ ಕೇಳಬಾರದು. ಆಧ್ಯಾತ್ಮಿಕ ಶಾಸ್ತ್ರವೆಂದರೆ ನಿನ್ನನ್ನು ನೀನು ಮರೆತು ಇತರರಿಗೆ ಶುಭ ಹಾರೈಸುವುದು. ನೀನಿನ್ನೂ ನಾನು, ನನ್ನದು ಎಂಬ ಮಮಕಾರದಲ್ಲಿರುವೆ ಎಂದರೆ, ನೀನಿನ್ನು ಪ್ರಾಪಂಚಿಕತೆಯಲ್ಲಿರುವೆ ಎಂದರ್ಥ. ನಾನು, ನನ್ನದು ಎನ್ನುವ ಭಾವನೆಗಳು ಸಾಮಾನ್ಯವಾಗಿ ಇರುತ್ತವೆ. ಆದರೆ, ಅವುಗಳನ್ನು ಹೋಗಲಾಡಿಸಿಕೊಳ್ಳಬೇಕು, ಕಡಿಮೆಮಾಡಿಕೊಳ್ಳಬೇಕು.
“ಲೋಕಾ ಸಮಸ್ತಾ ಸುಖಿನೋಭವಂತು” ಅದಕ್ಕಾಗಿಯೇ ಈ ಪ್ರಾರ್ಥನೆ. ಆ ಸುಖ ಎಲ್ಲಿಂದ ಬರುತ್ತದೆ?
ಸುಖವೆನ್ನುವುದು ಹೆಸರು, ಪ್ರಖ್ಯಾತಿ, ಸಂತಾನದಿಂದಲ್ಲ, ಸಂಸಾರದಿಂದಲ್ಲ. ಸುಖವಾದ ಶಾಶ್ವತವಾದ ಸಂತೋಷವು ಬರುತ್ತದೆ, ಅದೇ ಸನ್ಮತಿ. ನಿಜವಾದ ಮೈಂಡ್, ಮತಿ ಸತ್ಯದಿಂದ ಕೂಡಿರುವ ಮತಿ, ಬುದ್ಧಿ ಸಬ್ ಕೋ ಸನ್ಮತಿ ದೇ ಭಗವಾನ್. ಈ ಸನ್ಮತಿ ವಾಕ್ಯವನ್ನು ನೆನಪಿಸುವ ಒಂದು ಕಥೆಯಿದೆ. ಎದುರು ಬದಿರಿನ ಎರಡು ಸಾಲಿನಲ್ಲಿ ಊಟಕ್ಕೆ ಜನರು ಕುಳಿತ್ತಿದ್ದಾರೆ. ಎಲ್ಲರ ಮುಂದೆ ತಟ್ಟೆಗಳಿವೆ. ಎಲ್ಲಾ ಬಡಿಸಿದ್ದಾರೆ. ಪಾಯಸ, ಚಿತ್ರಾನ್ನ, ಮೊಸರನ್ನ, ಇತ್ಯಾದಿಗಳಿವೆ. ಎಲ್ಲವನ್ನೂ ಬಡಿಸಿ ಎಲ್ಲರಿಗೂ ಚಮಚವನ್ನು ಕೊಟ್ಟಿದ್ದಾರೆ. ನೀವು ಚಮಚದಿಂದ ತಿನ್ನಬೇಕು ಅದು ನಿಯಮ. ಎದುರು ಬದಿರು ಕುಳಿತಿದ್ದಾರೆ. ಎಲ್ಲರ ಬಳಿ ಚಮಚವಿದೆ. ಆದರೆ ಅದು ತುಂಬಾ ದೊಡ್ಡದಾಗಿದೆ. ಕೈ ಚಿಕ್ಕದಾಗಿದೆ ಚಮಚ ತುಂಬಾ ದೊಡ್ಡದಿದೆ ಯಾರೂ ತಿನ್ನಲಾಗುತ್ತಿಲ್ಲ. ಅವರೆಲ್ಲಾ ಪ್ರಯತ್ನ ಮಾಡಿದರೂ ಆಗಲಿಲ್ಲ. ಇವರನ್ನು ‘ಎ’ ತಂದ ಎನ್ನೋಣ. ಸರಿಯೆಂದು ಇನ್ನೊಂದು ತಂಡವನ್ನು ಕರೆಸಿದರು. ಅವರು ‘ಬಿ’ ತಂಡದವರು. ಅವರು ಒಬ್ಬರಿಗೊಬ್ಬರು ತಮ್ಮ ಎದುರಿಗೆ ಇರುವವರಿಗೆ ತಿನ್ನಿಸಿದರು. ‘ಎ’ ತಂಡದವರು ಪ್ರಾಪಂಚಿಕತೆಯುಳ್ಳವರು, ‘ಬಿ’ ತಂಡದವರು ಆಧ್ಯಾತ್ಮಿಕತೆಯಲ್ಲಿರುವವರು. ಆಗ ಅವರು ತುಂಬಾ ಅಚ್ಚುಕಟ್ಟಾಗಿ ತಿಂದು ಮುಗಿಸಿದರು. ಯಾವಾಗಲೂ ನಿನ್ನದನ್ನು ನೋಡಿಕೊಂಡರೆ ಪ್ರಯೋಜನವಿಲ್ಲ ನಿನ್ನ ನೆರೆಯವನನ್ನು ನೀನು ಗಮನಿಸಿಕೊಂಡರೆ ನಿನಗಾಗಿ ಎಲ್ಲವೂ ಬರುತ್ತದೆ.
ಪ್ರಾಪಂಚಿಕತೆಯಲ್ಲಿರುವವನು ಅವನ ಬಗ್ಗೆ ಮಾತ್ರ ಆಲೋಚಿಸುತ್ತಾನೆ ಬೇರೆಯವರ ಬಗ್ಗೆ ಆಲೋಚಿಸುವುದಿಲ್ಲ. ‘ಬಿ’ ತಂಡದವರೆಲ್ಲರೂ ಆಧ್ಯಾತ್ಮಿಕರು, ಪಿರಮಿಡ್ ಮಾಸ್ಟರ್ಗಳು. ಅವರು ಬೇರೆಯವರ ಬಗ್ಗೆ ಆಲೋಚಿಸುತ್ತಾರೆ. ಇನ್ನೊಬ್ಬರಿಗೆ ತಿನ್ನಿಸುತ್ತಾರೆ. ನಾವು ಹಾಗೆ ಮಾಡಿದರೆ, ಆಸ್ಟ್ರಲ್ ಮಾಸ್ಟರ್ ನಮಗೆ ತಿನ್ನಿಸುತ್ತಾರೆ. ನಾವು ಕಣ್ಣಿಗೆ ಕಾಣುವವರಿಗೆ ತಿನ್ನಿಸಿದರೆ ನಮಗೆ ಕಾಣದ ಮಾಸ್ಟರ್ಗಳು ನಮಗೆ ಹೊಟ್ಟೆ ತುಂಬಿಸುತ್ತಾರೆ. ನೀನು ಪಕ್ಕದವರನ್ನು ನೋಡಿಕೊಂಡರೆ ನಿನ್ನನ್ನು ಆ ಭಗವಂತನು ನೋಡಿಕೊಳ್ಳುತ್ತಾನೆ. ನೀನು ನೋಡಿಕೊಳ್ಳದಿದ್ದರೆ, ನೀನು ಸತ್ತರೂ ಭಗವಂತ ನೋಡಿಕೊಳ್ಳುವುದಿಲ್ಲ. ಇದೇ equation. ಇದೇ ಸೂತ್ರ.
ನಾವು “ಸಬ್ಕೋ ಸನ್ಮತಿ ದೇ ಭಗವಾನ್” ಎಂದರೆ, ನಮಗೆ ಪುಷ್ಕಳವಾಗಿ ಸನ್ಮತಿ ನೀಡಲಾಗುತ್ತದೆ. ಕೆಲವರು ನನ್ನ ಬಳಿ ಬಂದು ನಮ್ಮನ್ನು ಆಶೀರ್ವದಿಸಿ ನನಗೆ ಮದುವೆಯಾಗಬೇಕು, ಮಕ್ಕಳಾಗಬೇಕು ಎಂದು ಕೇಳುತ್ತಾರೆ. ನಾನು ಎಲ್ಲರಿಗೂ ಧ್ಯಾನ ಬೇಕೆಂದು ಮಾತ್ರ ಪ್ರಾರ್ಥಿಸುತ್ತೇನೆ. ಅದರ ಹೊರತು ಬೇರೇನೂ ಮಾಡುವುದಿಲ್ಲ. “ಸಬ್ಕೋ ಸನ್ಮತಿ” ಎನ್ನುವುದೇ ಧ್ಯೇಯವಾಕ್ಯವಾಗಿರಬೇಕು, ಪ್ರಾರ್ಥನೆಯಾಗಿರಬೇಕು. ಅದನ್ನು ಚರ್ಚ್ಗೆ, ಮಸೀದಿಗೆ ಹೋಗಿ, ದೇವಾಲಯಗಳಿಗೆ ಹೋಗಿಯೇ ಮಾಡಬೇಕೆಂದೇನಿಲ್ಲ. ನೀನೆಲ್ಲಿದ್ದರೆ ಅಲ್ಲೇ ಪ್ರಾರ್ಥನೆ ಮಾಡಬಹುದು. Ask it would be given.. Knock it should be opend” ಎಂದು ಬೈಬಲ್ನಲ್ಲಿ ಹೇಳಲಾಗಿದೆ. ನಿನ್ನೊಳಗಿರುವುದನ್ನು ನಿನ್ನ ಆಲೋಚನೆಯ ಮುಖಾಂತರ ನಿನ್ನ ಬಾಯಿಯಿಂದ, ನಿನ್ನ ಸಂಕಲ್ಪದಿಂದ ನೀನು ವ್ಯಕ್ತಗೊಳಿಸಬೇಕು. You must express yourself.ಕ್ರಿಸ್ಟಲ್ನಂತೆ ಸ್ಪಷ್ಟವಾಗಿ ಅವ್ಯಕ್ತವಾದದ್ದನ್ನು ವ್ಯಕ್ತಗೊಳಿಸು. ಸೃಷ್ಟಿ ನಿನಗೆಲ್ಲಾ ಕೊಡುತ್ತಿದೆ. ಆದರೆ ನೀನೇನು ಕೋರುತ್ತಿದ್ದೀಯಾ?
ಒಬ್ಬಾತ ತಪಸ್ಸು ಮಾಡುತ್ತಿದ್ದ. ಶ್ವಾಸದ ಮೇಲೆ ಗಮನವಿಟ್ಟು ಮೂರನೆಯ ಕಣ್ಣು ಉತ್ತೇಜನಗೊಳಿಸಿದರು. ಈಶ್ವರ ಪ್ರತ್ಯಕ್ಷನಾದ ಭಕ್ತ ನಿನ್ನ ಕೋರಿಕೆಯೇನು ಎಂದು ಕೇಳಿದ. ಆಗ ಅವನೇನು ಕೇಳಬೇಕು? ನನ್ನ ಪಕ್ಕದ ಮನೆಯವನು ದುಷ್ಟ ಅವನ ಎರಡು ಕಣ್ಣು ಹೋಗಬೇಕು ಎಂದ. ಆಗ ಈಶ್ವರ ತಥಾಸ್ತು ಎಂದ. ಪಕ್ಕದ ಮನೆಯವನ ಎರಡು ಕಣ್ಣುಗಳು ಹೋಯಿತು. ನೀನು ಏನು ಕೇಳಿದರೆ ಅದು ಕೊಡಲ್ಪಡುತ್ತದೆ. ಇವನು ತಪಸ್ಸು ಮಾಡಿ ಶಿವ ಪ್ರತ್ಯಕ್ಷನಾದ ಏನು ಕೇಳಿದನೋ ಅದು ಕೊಟ್ಟನು. ಅವರೇನೂ ಆಲೋಚಿಸುವುದಿಲ್ಲ. ಒಬ್ಬ ಚೆನ್ನಾಗಿ ತಪಸ್ಸು ಮಾಡಿದ. ಆಗ ಯಾರೋ ಒಬ್ಬರು ಪ್ರತ್ಯಕ್ಷರಾದರು. ಈಶ್ವರ, ಬ್ರಹ್ಮ ಯಾರೋ ಒಬ್ಬರು. ಆಗ ಅವನು ಸಾರ್ ನಾನು ಬೆಳಗ್ಗೆ ಸಾಯಬಾರದು, ರಾತ್ರಿ ಸಾಯಬಾರದು, ಭೂಮಿ ಮೇಲೆ ಸಾಯಬಾರದು, ಆಕಾಶದಲ್ಲಿ ಸಾಯಬಾರದು, ಹಗಲಲ್ಲಿ, ರಾತ್ರಿಯಲ್ಲಿ ಸಾಯಬಾರದು, ಪ್ರಾಣಿಗಳಿಂದ, ಮಾನವರಿಂದಲೂ ಸಾಯಬಾರದು ಎಂಬ ಕೋರಿಕೆಯಿಟ್ಟ. ಆದರೆ ಅವನು ಸಾಯದೇ ಇರುವುದು ಸಾಧ್ಯವೆ? ನರಸಿಂಹಸ್ವಾಮಿ ಬಂದು, ಹಗಲೂ ಅಲ್ಲ ರಾತ್ರಿಯೂ ಅಲ್ಲ, ಕೆಳಗೂ ಅಲ್ಲ, ಮೇಲೂ ಅಲ್ಲ, ತನ್ನ ಉಗುರುಗಳಿಂದ ಸಾಯಿಸಿದ. ತಪಸ್ಸು ಮಾಡದಿದ್ದರೆ ವರಗಳು ಬರುವುದಿಲ್ಲ. ಕೋರಿಕೆ ಎನ್ನುವುದೇ ತಪಸ್ಸು.
ನೀನು ನಿಜವಾಗಿ ತಪಸ್ಸು ಮಾಡಿದರೆ ಶಕ್ತಿ ಸಂಪಾದಿಸಿದರೆ, ತಥಾಸ್ತು ದೇವತೆಗಳಿರುತ್ತಾರೆ. ನೀನು ಏನು ಕೋರಿದರೂ ಕೊಡುತ್ತಾರೆ. ಆದರೆ, ಮೇಲೆ ಕರ್ಮದೇವತೆಗಳೂ ಇರುತ್ತಾರೆ, ಚಿತ್ರಗುಪ್ತನ ಗ್ರಂಥದಲ್ಲಿ ಬರೆಯಲ್ಪಡುತ್ತದೆ. ಮುಂದಿನ ಜನ್ಮದಲ್ಲಿ ಆ ಕರ್ಮಗಳನ್ನು ಅನುಭವಿಸಬೇಕು. ಇವನು ಈ ಜನ್ಮದಲ್ಲಿ ಹಾಯಾಗಿ ಜೀವಿಸುತ್ತಾನೆ. ಆ ನಂತರ, ಅವಸಾನ ಹೊಂದಿ ಮೇಲಿನ ಲೋಕಕ್ಕೆ ಹೋಗುತ್ತಾನೆ. ಆಗ ನಿನ್ನ ಜನ್ಮವನ್ನು ನೀನೇ ನೋಡಿಕೊಳ್ಳುತ್ತೀಯಾ. ಭೂಮಿಯ ಮೇಲೆ ನಿನ್ನ ತಪ್ಪುಗಳು ನಿನಗೆ ಗೊತ್ತಾಗುವುದಿಲ್ಲ. ನೀನು ಸತ್ತ ಮೇಲೆ ಅಲ್ಲಿಗೆ ಹೋದ ನಂತರ, ಅಲ್ಲಿ ಆಕಾಶೀಯ ದಾಖಲೆಗಳು (‘ಆಕಾಶಿಕ್ ರಿಕಾರ್ಡ್ಸ್’) ಎಂಬುವುದು ಇರುತ್ತದೆ. ಅಲ್ಲಿ ನೀನು ಹೋಗಿ ನಿನ್ನ ಜನ್ಮ ನೋಡಿಕೋ ಎಂದು ಕಳುಹಿಸುತ್ತಾರೆ.
ಇನ್ನೊಬ್ಬರು ನಿನ್ನ ಜನ್ಮ ಹೀಗಿದೆ ಎಂದು ತೀರ್ಪು ನೀಡುವುದಿಲ್ಲ. ನಿನ್ನನು ನೀನೇ ಜಡ್ಜ್ ಮಾಡಿಕೊಳ್ಳುವ ಹಾಗೆ ಅವರು ಮಾಡುತ್ತಾರೆ. ಅಲ್ಲಿ ಆಕಾಶಿಕ್ ರಿಕಾರ್ಡ್ ಸಿನಿಮಾ ಹಾಲ್ ತರಹ ಇರುತ್ತದೆ. ಅಲ್ಲಿಗೆ ಒಬ್ಬನೇ ಹೋಗುತ್ತಾನೆ. ಆಗ ಅವನು ಹೇಗೆ ಹುಟ್ಟಿದ, ಬೆಳೆದ, ಏನು ಮಾಡಿದ ಎಂಬುದೆಲ್ಲಾ ಅವನಿಗೆ ತೋರಿಸುತ್ತಾರೆ. ಆಗ ಅವನಿಗೆ ಹೇಗಿರುತ್ತದೆಯೆಂದರೆ, ಅವನಿಗೆ ಎಲ್ಲಾ ಹಿಂದು ಮುಂದಾಗಿ ತೋರಿಸುತ್ತಾರೆ. ಪಕ್ಕದ ಮನೆಯವನಿಗೆ ಎರಡೂ ಕಣ್ಣು ಹೋಗಿ ಹೇಗೆ ವ್ಯಥೆ ಪಡುತ್ತಿದ್ದಾನೋ ಅವನ ಜಾಗದಲ್ಲಿ ಇವನು ಇರುತ್ತಾನೆ. ಅವನು ಎಷ್ಟು ನೋವನ್ನು ಅನುಭವಿಸಿದ ಇವನೂ ಅಷ್ಟು ನೋವು ಅನುಭವಿಸಬೇಕು. ಆ ಸಿನಿಮಾ ನೋಡಿದಷ್ಟು ಸಮಯವೂ, ಅವನ ಕಣ್ಣು ಹೋದಂತೆ, ಅಳುತ್ತಾ ಜೀವಿಸುವುದು, ಇವನಿಂದ ಅವನಷ್ಟು ನಷ್ಟ ಹೊಂದಿದ ಎಂಬುದನ್ನು ಅವನ ಸ್ಥಾನದಲ್ಲಿ ಇವನಿದ್ದು ನೋವನ್ನು ಅನುಭವಿಸುತ್ತಾನೆ.
ಉದಾಹರಣೆಗೆ ನೀನೊಂದು ಮೇಕೆಯನ್ನು ಕೊಂದು ಕತ್ತರಿಸಿ ತಿಂದೆ ಎಂದುಕೋ. ಆಗ ಪ್ರತಿ ಮೇಕೆ ಎಷ್ಟು ಗೋಳಾಡಿತು, ಆ ಸಮಯದಲ್ಲಿ, ನೀನು ಮೇಕೆ ಶರೀರದಲ್ಲಿದ್ದು ಆ ಸಿನಿಮಾ ನೋಡುತ್ತಾ ಅಷ್ಟು ಗೋಳಾಡುತ್ತೀಯ. ಆಕಾಶಿಕ್ ರಿಕಾರ್ಡ್ಸ್ನಲ್ಲಿ ಎಲ್ಲಾ ಉಲ್ಟಾ ನೋಡುತ್ತಿಯಾ. ನೀನು ಎಷ್ಟು ಜನರಿಗೆ ನೋವನ್ನು ನೀಡಿದೆಯೋ ಅವರು ಅನುಭವಿಸಿದಷ್ಟು ನೋವನ್ನು ನೀನು ಅನುಭವಿಸುತ್ತೀಯಾ. ಹಾಗೆ ನೀನು ಎಷ್ಟು ಜನರನ್ನು ಆನಂದದಿಂದ ಇರುವಂತೆ ಮಾಡಿದೆಯೋ ಅಷ್ಟು ಆನಂದವನ್ನು ನೀನು ಅನುಭವಿಸುವೆ. ಇಲ್ಲಿ ಎಷ್ಟು ಜೀವಿಗಳನ್ನು ಹಿಂಸಿಸಿದ್ದೀಯೋ, ಎಷ್ಟು ಜನರು ನೋವು ಅನುಭವಿಸುವಂತೆ ಮಾಡಿರುತ್ತೇವೆಯೋ ಅಲ್ಲಿ ನಾವು ಅವರ ಜಾಗದಲ್ಲಿದ್ದು ಅನುಭವಿಸಲೇಬೇಕು. ಆಗ ಅರ್ಥವಾಗುತ್ತದೆ. ನಾನು ಇಷ್ಟು ಹೀನವಾದ ಕೆಲಸಗಳನ್ನು ಮಾಡಿದ್ದೇನೆಯೇ ಎಂದು ಸಿನಿಮಾ ಹಾಲ್ನಿಂದ ಹೊರಬಂದು (ಆಕಾಶಿಕ್ ರಿಕಾರ್ಡ್ಸ್ ಹಾಲ್) ಸ್ವಾಮಿ ನನಗೆ ನನ್ನ ಜೀವನ ಅರ್ಥವಾಯಿತು. ನನಗಿನ್ನೊಂದು ಅವಕಾಶ ಕೊಡಿ ನನ್ನನ್ನು ನಾನು ಸರಿಪಡಿಸಿಕೊಳ್ಳುತ್ತೇನೆ ಎಂದು ಕೇಳುತ್ತಾನೆ. ಅಷ್ಟು ಬೇಗ ಇನ್ನೊಂದು ಅವಕಾಶ ಸಿಗುವುದೇನು? ಒಬ್ಬ ಹುಡುಗ, ಹುಡುಗಿ ಪ್ರೇಮದಲ್ಲಿ ಬೀಳಬೇಕು. ಆ ಎಲ್ಲಾ ವಿಧಿಗಳು ಆಗಬೇಕು. ಆನಂತರ ಆ ಹುಡುಗಿ ಗರ್ಭಧರಿಸಬೇಕು. ಆಗ ಇವನಿಗೆ ಚೀಟಿ ಬರೆದು ಕೊಡುತ್ತಾರೆ, ಮೀಸಲಾತಿ ಆಗಿದೆ ಎಂದು.
ಆಗ ನೀನು ಅಲ್ಲಿ ಕಾಯ್ದುಕೊಂಡಿರಬೇಕು. ನೀನು ಅಲ್ಲಿ ರಿಹರ್ಸಲ್ ಮಾಡಿಕೊಳ್ಳುತ್ತೀಯಾ. ನಾನು ಮೊನ್ನೆ ಕ್ರಿಕೇಟ್ ಆಡಿ ಮೊದಲನೆಯೇ ಬಾಲ್ನಲ್ಲಿ ಔಟ್ ಆದೆನು. ಈಗ ಜಾಗ್ರತೆಯಿಂದ ಆಡುತ್ತೇನೆ, ಔಟಾಗುವುದಿಲ್ಲ. ನನ್ನನ್ನು ನಾನು ಫಾಸಿಗೊಳಿಸಿಕೊಳ್ಳುವುದಿಲ್ಲ ಎನ್ನುತ್ತೀಯಾ. ಏಕೆಂದರೆ ಆ ನೆರೆಮನೆಯವನೂ ನೀನೆ. ಆಕಾಶಿಕ್ ರಿಕಾರ್ಡ್ಸ್ನಲ್ಲಿ ನೀನು ಆ ನೋವುಗಳೆಲ್ಲವನ್ನೂ ಅನುಭವಿಸಿದೆ. ಆಗ ಮತ್ತೆ ತಪಸ್ಸು ಮಾಡುವೆ. ಆಗ ಮತ್ತೆ ಶಿವನೋ, ಬ್ರಹ್ಮನೋ ಯಾರೋ ಬರುತ್ತಾರೆ. ಭಕ್ತಾ ನಿನ್ನ ಕೋರಿಕೆಯೇನು ಎಂದು ಕೇಳಿದರೆ. “ಸಬ್ಕೋ ಸನ್ಮತಿ ದೇ ಭಗವಾನ್” ಎನ್ನುವೆ. ಅದಕ್ಕೆ ಮೊದಲಿನ ಜನ್ಮದಲ್ಲಿ ಏನು ಕೋರಿದೆ? ನನ್ನ ಪಕ್ಕದ ಮನೆಯವನ ಎರಡೂ ಕಣ್ಣು ತೆಗೆದು ಬಿಡು ಎಂದು. ನಿನಗೆ ಸಾಕ್ಷಾತ್ಕಾರವಾಯಿತು. ಮಾಡಿದ ತಪ್ಪುಗಳು ನೀನು ಅನುಭವಿಸಿದೆ. ನೀನು ಒಂದು ಕಣಕಣವೂ ಅನುಭವಿಸಬೇಕು. ಮತ್ತೆ ಜನ್ಮವನ್ನೆತ್ತಿ ಹತ್ತಿರವಿರುವ ಪಿರಮಿಡ್ ಮಾಸ್ಟರ್ ಬಳಿ ಹೋಗಿ ಧ್ಯಾನ ಕಲಿತು, ಶ್ವಾಸದ ಮೇಲೆ ಗಮನವಿಟ್ಟು, ಮನಸ್ಸನ್ನು ನಿನ್ನ ಅಧೀನದಲ್ಲಿಟ್ಟುಕೊಂಡು ಆಗ ಮೂರನೆಯಕಣ್ಣು ಉತ್ತೇಜಿತವಾಗಿ ಈಶ್ವರ ಪ್ರತ್ಯಕ್ಷನಾಗಿ ಮತ್ತೆ ಭಕ್ತ ಏನು ನಿನ್ನ ಕೋರಿಕೆಯೆಂದರೆ, ಸಬ್ ಕೋ ಸನ್ಮತಿ ದೇ ಭಗವಾನ್ ಎನ್ನುವೆ.
ತನಗೋಸ್ಕರ ಏನೂ ಕೋರಲಿಲ್ಲ, ಪಕ್ಕದವನಿಗೆ ಕೆಟ್ಟದ್ದು ಬಯಸಲಿಲ್ಲ ಬೇರೆಯವರಿಗಾಗಿ ಪ್ರಾಪಂಚಿಕವಾಗಿ ಏನೂ ಕೋರಲಿಲ್ಲ. ಇದೇ “ಸಬ್ ಕೋ ಸನ್ಮತಿ ದೇ ಭಗವಾನ್” ಎನ್ನುವುದರ ಅರ್ಥ. ನೀನು ಧ್ಯಾನ ಮಾಡಿದಾಗ ಭಗವಂತ ಪ್ರತ್ಯಕ್ಷನಾಗುತ್ತಾನೆ. ಯಾರು ಭಗವಂತ ಎಂದರೆ ನಿನಗಿಂತ ಜ್ಞಾನವುಳ್ಳವನು ನಿನಗೆ ಭಗವಂತನಾಗುತ್ತಾನೆ. ಪ್ರಾಥಮಿಕ ಶಾಲೆಯಿರುತ್ತದೆ. ಅಲ್ಲಿ ಸ್ನಾತಕ ಪದವಿ ಪಡೆದವರು ಪ್ರಾಥಮಿಕ ಶಾಲೆಗೆ, ಮಾಧ್ಯಮಿಕ ಶಾಲೆಗೆ ಉಪಾಧ್ಯಾಯರಾಗಿರುತ್ತಾರೆ. ಕಾಲೇಜ್ ಹಂತದಲ್ಲಿರುವವರಿಗೆ ಸ್ನಾತಕೋತ್ತರ ಪದವಿ ಪಡೆದವರು ಶಿಕ್ಷಕರಾಗಿ ಬರುತ್ತಾರೆ. ಸ್ನಾತಕೋತ್ತರ ಪದವಿ (ಪೋಸ್ಟ್ ಗ್ರಾಜ್ಯುಯೇಷನ್) ಮಾಡುವವರಿಗೆ Ph.D ಮಾಡಿರುವವರು ಪ್ರೊಫೆಸರ್ಗಳಾಗಿರುತ್ತಾರೆ. ಅವರವರ ಹಂತಕ್ಕೆ ತಕ್ಕ ಗುರುಗಳು ಅವರವರಿಗೆ ಲಭಿಸುತ್ತಾರೆ. ತಜ್ಞರು, ಪರಿಣಿತರು ಲಭಿಸುತ್ತಾರೆ.
ನಾನು ಸಂಗೀತ ಕಲಿಯಬೇಕು. ನಾನು ಸ ರಿ ಗ ಮ ಕಲಿಯಬೇಕೆಂದರೆ ಬಿಸ್ಮಿಲ್ಲಾಖಾನ್, ಪಂಡಿತ್ ರವಿಶಂಕರ್ ಬಳಿಗೆ ಹೋಗಬೇಕೆಂದೇನೂ ಇಲ್ಲ. ನಮ್ಮ ಪ್ರದೇಶದಲ್ಲಿ ಯಾರಾದರೊಬ್ಬರು ಇದ್ದರೆ ಅವರು ಹಾಯಾಗಿ ನಮಗೆ ಕಲಿಸುತ್ತಾರೆ. ನಾನು ಸಂಸ್ಕೃತ ಕಲಿಯಬೇಕು. ಕಾಳಿದಾಸನೇ ಆಗಬೇಕೆಂದೇನೂ ಇಲ್ಲ. ಸಂಸ್ಕೃತ ಬರುವವರು ಯಾರಾದರೂ ಸರಿಯೇ ಅವನೇ ನಿನಗೆ ಭಗವಂತ. ಆದ್ದರಿಂದ, ನಾವು ತಪಸ್ಸು ಮಾಡಿದಾಗ ಯಾರೋ ಒಬ್ಬರು ನಮ್ಮ ಮುಂದೆ ಪ್ರತ್ಯಕ್ಷರಾಗುತ್ತಾರೆ. ಅವರು ಶಿವನ ವೇಷದಲ್ಲೋ, ಬ್ರಹ್ಮನ ವೇಷದಲ್ಲೋ ವೇಷಗಳು ಹಾಕಿಕೊಂಡು ಯಾರೋ ಒಬ್ಬರು ಬರುತ್ತಾರೆ. ನೀನು ಕೇಳಿದ್ದನ್ನು ಕೊಡುತ್ತಾರೆ. ನಿನ್ನ ಎಂತಹ ಕೋರಿಕೆಗಳಾದರೂ ಈಡೇರುತ್ತದೆ. ಆದರೆ ನೀನೇನು ಮಾಡಿದ್ದೆಯೋ ಅದರ ಫಲ ಅನುಭವಿಸಲೇಬೇಕು. ಅದನ್ನು ಅನುಭವಿಸಿ ಕೊನೆಗೊಳಿಸಿಕೊಳ್ಳಲೇಬೇಕು. ಆದ್ದರಿಂದ, ತುಂಬಾ ಜಾಗ್ರತೆಯಿಂದ ಬೇಡಿಕೆಗಳನ್ನು ದೇವರ ಮುಂದೆ ಇಡಿ. You will have to face it.
ಭಗವಂತನು ನೋಡುತ್ತಾ ಇರುತ್ತಾನೆ. ಯಾರು ಬೇರೆಯವರ ಬಗ್ಗೆ ಆಲೋಚಿಸುತ್ತಾನೆ ಎಂದು. ಆಗ ಯಾರು ಬೇರೆಯವರ ಬಗ್ಗೆ ಆಧ್ಯಾತ್ಮಿಕವಾಗಿ ಪ್ರಾರ್ಥನೆ ಮಾಡುತ್ತಾನೋ ಅವನಿಗೆ ದೇವರು ಒಲಿಯುತ್ತಾನೆ. ಭಗವಂತ ಮೇಲೆ ಸುಮ್ಮನೆ ಕುಳಿತಿಲ್ಲ, ನಮ್ಮನ್ನು ನೋಡುತ್ತಿರುತ್ತಾರೆ. ನಾವು ನಮಗಿಂತ ಕೆಳ ಹಂತದಲ್ಲಿರುವವರಿಗೆ ಸಹಾಯ ಮಾಡಬೇಕು. ರಸ್ತೆಯನ್ನು ಒಂದು ಚಿಕ್ಕ ಮಗು ದಾಟಬೇಕೆಂದರೆ ಯಾರು ಸಹಾಯ ಮಾಡುತ್ತಾರೆ? ಅಲ್ಲಿ ಹೋಗುತ್ತಿರುವವರು ಯಾರೋ ಒಬ್ಬರು ಆ ಮಗುವನ್ನು ಮುನ್ನಡೆಸುತ್ತಾರೆ. ಆಗ ಆ ಮಗುವಿಗೆ ಅವನೇ ಭಗವಂತ. ಆದ್ದರಿಂದ, ನಮಗಿಂತ ಸ್ವಲ್ಪ ಉನ್ನತ ಹಂತದಲ್ಲಿರುವವರು, ವಿಸ್ತೃತ ಹಂತದಲ್ಲಿರುವವರು ನಮಗೆ ಭಗವಂತರು. ಹೀಗೆ ಇದು ರೆಂಬೆಕೊಂಬೆ ಕವಲುಗಳಂತೆ ವಿಸ್ತರಿಸುತ್ತಾ ಸಾಗುತ್ತದೆ.
ನೀನು ಧ್ಯಾನ ಮಾಡಿದರೆ ಎಲ್ಲಾ ಸಿಗುತ್ತದೆ. ಧ್ಯಾನವೆನ್ನುವುದು ನಿನ್ನನ್ನು ನೀನು ಶೂನ್ಯ ಮಾಡಿಕೊಳ್ಳುವುದು ಅಷ್ಟೇ. ಆಗ ನಿನಗಿಂತ ಮೇಲಿರುವವರು ನಿನ್ನ ವಿಷಯವನ್ನು ಪರಿಶೀಲಿಸಿ ನಿನಗೇನುಬೇಕೋ ಅದು ಕೊಡುತ್ತಾರೆ. ಎಲ್ಲರೂ ಸಸ್ಯಾಹಾರಿಗಳಾಗಬೇಕೆಂದು ಕೋರಿಕೊಳ್ಳೋಣ, ಧ್ಯಾನಿಗಳಾಗಬೇಕೆಂದು ಕೋರಿಕೊಳ್ಳೊಣ. ಎಲ್ಲರೂ ಪಿರಮಿಡ್ ಕಟ್ಟಬೇಕೆಂದು ಕೋರಿಕೊಳ್ಳೋಣ, “ಜೈ ಧ್ಯಾನ ಜಗತ್, ಸಸ್ಯಾಹಾರ ಜಗತ್, ಜೈ ಪಿರಮಿಡ್ ಜಗತ್”.
“ಬ್ರಹ್ಮವೊಂದೇ, ಪರಬ್ರಹ್ಮವೊಂದೇ”
ಮೈ ಡಿಯರ್ ಫ್ರೆಂಡ್ಸ್, ಮೈ ಡಿಯರ್ ಮಾಸ್ಟರ್ಸ್, ಮೈ ಡಿಯರ್ ಗಾಡ್ಸ್,” ಬ್ರಹ್ಮವೊಂದೇ, ಪರಬ್ರಹ್ಮವೊಂದೇ”. ಬ್ರಹ್ಮವೆಂದರೆ ಸಕಲ ಚರಾಚರ ಸೃಷ್ಟಿ. ಪರಬ್ರಹ್ಮವೆಂದರೆ ಈ ಸಕಲ ಚರಾಚರ ಸೃಷ್ಟಿಯ ಮೂಲ. ಆದ್ದರಿಂದ, ಒಂದು ಬೀಜದಿಂದ ಒಂದು ಮಹಾವೃಕ್ಷ ಬಂದಂತೆ ಶಾಖೆಗಳಾಗಿ, ಕವಲುಗಳಾಗಿ ವಿಸ್ತರಿಸಿ ಅನೇಕಾನೇಕ ಕೊಂಬೆಗಳೊಂದಿಗೆ, ರೆಂಬೆಗಳೊಂದಿಗೆ, ಎಲೆಗಳೊಂದಿಗೆ ವಿರಾಟ್ ಸ್ವರೂಪ ಹೊಂದಿದೆಯಾದರೂ ಆ ವೃಕ್ಷ ಬಂದದ್ದು ಒಂದು ಸಾಮಾನ್ಯ ಬೀಜದಿಂದಲೇ. ಹಾಗೆಯೇ, ಈ ಸೃಷ್ಟಿ, ಗೆಲಾಕ್ಸಿಗಳೆಲ್ಲವೂ, ಸಕಲ ಲೋಕಗಳು ಒಂದೇ ಆದಿಶಕ್ತಿಯಿಂದ ಬಂದಿದೆ. ಅದೇ ಪರಬ್ರಹ್ಮ. ಆ ಪರಬ್ರಹ್ಮ ಎಂಬುದು ಒಂದೇ ಅದರ ಹೆಸರಲ್ಲ. ಆದಿಶಕ್ತಿ, ಪರಾಶಕ್ತಿ, ಬ್ರಹ್ಮ, ಪರಬ್ರಹ್ಮ ಎಲ್ಲ ಹೆಸರುಗಳು ಇವೆ. ಅದು ಅರ್ಥವಾದಾಗ ನಮಗೆ ಆಧ್ಯಾತ್ಮಿಕತೆ ಅರ್ಥವಾದಂತೆಯೇ. ಭಗವತ್ ಸ್ವರೂಪರು ಲೆಕ್ಕವಿಲ್ಲದಷ್ಟು ಜನರಿದ್ದರೆ. ಭಗವತ್ ತತ್ತ್ವ ಒಂದೇ. ಸಂಗೀತಜ್ಞರು ಲೆಕ್ಕವಿಲ್ಲದಷ್ಟು ಮಂದಿಯಿದ್ದರೂ ಸಂಗೀತ ಎಲ್ಲರಿಗೂ ಒಂದೇ. ನಾದೋಪಾಸಕರು ಲೆಕ್ಕವಿಲ್ಲದಷ್ಟು ಮಂದಿ. ಆದರೆ ನಾದವೊಂದೇ. ಜ್ಞಾನಿಗಳು ಎಷ್ಟೋ ಮಂದಿ ಇದ್ದಾರೆ ಜ್ಞಾನವು ಒಂದೇ. ಆಕಾಶದಲ್ಲಿ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿವೆ, ಆದರೆ ಆಕಾಶವೊಂದೇ. ಮೊದಲು ನಾವು ಇದನ್ನು ಅನುಭವಜ್ಞರಿಂದ ಕೇಳಿ ತಿಳಿಯುತ್ತೇವೆ. ನಂತರ ಅದನ್ನು ಅನುಭವಿಸಿ ತಿಳಿದುಕೊಳ್ಳುತ್ತೇವೆ.
“ಮಗೂ ಎಲ್ಲವೂ ಒಂದೇ” ಎನ್ನುವ ವಾಕ್ಯ ಯೋಗಿಗಳಿಂದ, ಜ್ಞಾನಿಗಳಿಂದ, ಋಷಿಗಳಿಂದ ಬರುವ ಮಾತುಗಳು. ಎಲ್ಲಾ ಒಂದೇ, ಒಂದೇ ಎಲ್ಲದರಲ್ಲೂ ಅಡಕಗೊಂಡಿದೆ. ನೀನು ಅದೇ ಆಗಿರುವೆ. “ತತ್ವಮಸಿ”. ತತ್ ಎಂದರೆ ’ಅದು’. ಆ ಪರಬ್ರಹ್ಮ ನೀನೇ ಆಗಿರುವೆ. ತತ್-ತ್ವಂ-ಅಸಿ, ತ್ವಂ ಎಂದರೆ ನೀನು, ಇರುವುದೆಲ್ಲಾ ಅದೇ. ಇದನ್ನೇ ಮೋಸೆಸ್ “I am that I am” ಎಂದಿದ್ದಾನೆ. ಮೋಸೆಸ್ ಬೆಟ್ಟದ ಮೇಲೆ ಹತ್ತಿದಾಗ ಒಂದು ಬ್ರಹ್ಮಾಂಡವಾದ ಅಗ್ನಿಗೋಳ ಕಾಣಿಸಿತು. ಅದರಿಂದ ಮಾತುಗಳು ಕೇಳಿಸಿತು. ಆ ಅಗ್ನಿಗೋಳವನ್ನು ನೀನು ಯಾರು? ನೀನು ಏನು ಎಂದು ಮೋಸೆಸ್ ಕೇಳಿದ. ಅದರಿಂದ ಒಂದು ಪ್ರಾಣಿ ಬಂದಿತು. I am that I am that ಈ ನಾನು ಆ ನಾನು ಅಹಂ ಬ್ರಹ್ಮಾಸ್ಮಿ. ಇದು ಮೋಸೆಸ್ಗೆ ಬೆಟ್ಟದ ಮೇಲೆ ಆದ ಒಂದು ಅನುಭವ. ಇದು ಅದ್ಭುತವಾದ ಮಾತು I am that I am that ನೀನು ಕೂಡಾ ಅದೇ. “ಅಹಂ ಬ್ರಹ್ಮಾಸ್ಮಿ, ತತ್ತ್ವಮಸಿ.. ಶ್ವೇತಕೇತು”… ಒಂದು ವೇಳೆ ಈ ಶರೀರವಿದೆ ಎಂದುಕೊಳ್ಳಿ, ಈ ರೂಪವನ್ನು ನಾವು ಎಂದುಕೊಳ್ಳುತ್ತೇವೆ. ಆದರೆ, ಈ ಶರೀರ ನಾವಲ್ಲ, “ಅಹಮಾತ್ಮ ಬ್ರಹ್ಮ” ನಾನು ಆತ್ಮನು, ಅತ್ಮನು ಬ್ರಹ್ಮ. ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಜ್ಞಾನವಿರಬೇಕು. ಜ್ಞಾನವೆಂದರೆ ಅನುಭವೈಕವಾದದ್ದೇ ಜ್ಞಾನ. ಅನುಭವವೇ ಜ್ಞಾನ.
ನಮ್ಮ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್ನಲ್ಲಿ ಒಂಬತ್ತು ನವರತ್ನಗಳಿವೆ: 1. ಅಹಂ ಬ್ರಹ್ಮಾಸ್ಮಿ, ಅಂದರೆ ಆತ್ಮವೇ ಪರಬ್ರಹ್ಮ. 2.ಜೀವಿಯೇ ದೇವನು 3. ದೇಹವೇ ದೇವಾಲಯ 4. ಶ್ವಾಸವೇ ಗುರು 5. ಸಮಯವೇ ಸಾಧನೆ. ನೀನೆಷ್ಟು ಸಾಧನೆ ಮಾಡುವೆ ಎಂದರೆ ದಿನಕ್ಕೆ 3ಗಂಟೆ, ಅಂದರೆ ನಿನ್ನ ಸಾಧನೆಯನುಸಾರ ನಿನ್ನ ಧ್ಯಾನವಿರುತ್ತದೆ. ಎಷ್ಟು ಸಮಯವನ್ನು ಧ್ಯಾನಕ್ಕೆ ವಿನಿಯೋಗಿಸುವೆಯೋ ಅದರ ಹೆಸರೇ ಸಾಧನೆ. ಆದ್ದರಿಂದ, ನಿನ್ನ ಸಮಯವೇ ಸಾಧನೆಯಾಗುತ್ತದೆ. ಒಮ್ಮೆ M.S.ಗೋಪಾಲ್ ಕೃಷ್ಣನ್ರವರನ್ನು ಸ್ವಾಮೀಜಿ ನೀವು ಅಷ್ಟು ಚೆನ್ನಾಗಿ ವಯೊಲಿನ್ ಹೇಗೆ ನುಡಿಸುವಿರಿ, ನಿಮ್ಮ ಬೆರಳುಗಳಲ್ಲಿ ಏನಾದರೂ ಮಹತ್ವವಿದೆಯೇ ಹಾಗೆ ನುಡಿಸುತ್ತೀರಿ ಎಂದೆನು. ಆಗ ಅವರು ಏನೂ ಇಲ್ಲಾ, ನಾನು ಆರು ಗಂಟೆಯ ಕಾಲ ಸಾಧನೆ ಮಾಡುತ್ತೇನೆ ಅಷ್ಟೇ ಅಂದರು. ಡಾ|| ಶ್ರೀಪಾದ ಪಿನಾಕಪಾಣಿಯವರ ಬಳಿ ಸಂಗೀತ ಕಲಿತುಕೊಂಡೆ ಮತ್ತು ವೇಣುವಿನ ಗುರುಗಳಾದ ಟಿ.ಚಂದ್ರಶೇಖರನ್ರವರು ವೇಣುವಿನಲ್ಲಿ ಪಕ್ಷಿಗಳ ನಾದವನ್ನು ಹೊಮ್ಮಿಸುತ್ತಿದ್ದರು. ಅವರು ಮಹಾಸಾಧಕರು. ಸಾಧನೆಯೆಂದರೆ ಅದು. ಆದ್ದರಿಂದ, ಸಮಯವೇ ಸಾಧನೆ ಎಷ್ಟು ಸಮಯವನ್ನು ಮೀಸಲಿಡುತ್ತೇವೋ ಅಷ್ಟು ಸಾಧನೆಯಾಗುತ್ತದೆ. ಹೆಚ್ಚುಹೆಚ್ಚು ಸಮಯ ಧ್ಯಾನವನ್ನು ಮಾಡಿ ಮತ್ತು ನಿಮ್ಮ ಧ್ಯಾನಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ಹೆಚ್ಚುಹೆಚ್ಚು ಪರಿಣಿತರಾಗಿ, ಪರಿಪೂರ್ಣರಾಗಿ.
ಮೈಡಿಯರ್ ಫ್ರೆಂಡ್ಸ್, ಮೊಟ್ಟಮೊದಲನೆಯದು ಈ ಆತ್ಮವೇ ಪರಬ್ರಹ್ಮವು. ವೇಮನ ಹೀಗೆ ಹೇಳಿದ್ದಾನೆ. ಬ್ರಹ್ಮವೆಂದರೆ ಬೇರೆ ಪರದೇಶದಲ್ಲಿಲ್ಲ, “ಬ್ರಹ್ಮವೆಂದರೆ ತನ್ನನ್ನು ತಾನು ಅರಿತವನೇ ಬ್ರಹ್ಮ”. ಆಧ್ಯಾತ್ಮಿಕ ಜ್ಞಾನವಿಜ್ಞಾನ ಪರಿಭಾಷೆಯಲ್ಲಿ ದೇವರು ಎನ್ನುವ ಪದಕ್ಕೆ ’ಬ್ರಹ್ಮವು’ ಎನ್ನುವ ಪದ ಬರುತ್ತದೆ. ದೇವರು ಎನ್ನುವ ಪದ ಹೇಗೆ ಬಂದಿತೆಂದರೆ ‘ದಿವ್ಯವು’ ಎನ್ನುವ ಪದವು ಕ್ರಮೇಣ ‘ದಿವ್ಯರು’ ಎಂದಾಗಿ, ಮುಂದೆ ‘ದೇವರು’ ಎಂದಾಯಿತು. ದಿವ್ಯವಾದವನು ಎಂದರೆ ದಿವಿಗೆ ಸಂಬಂಧಿಸಿದವನು. ಭವ್ಯವಾದದ್ದು ಎಂದರೆ ಭುವಿಗೆ (ಭೂಮಿಗೆ) ಸಂಬಂಧಿಸಿದ್ದು. ದಿವ್ಯವು ದಿವಿಗೆ ಸಂಬಂಧಿಸಿದ್ದು. ದಿವ್ಯಲೋಕದಲ್ಲಿರುವವರೆಲ್ಲರೂ ದಿವ್ಯರು. ಅದು ದೇವರಾಗಿ ಬದಲಾಯಿತು. ಆದ್ದರಿಂದ, “ದೇಹೋ ದೇವಾಲಯೋ ಪ್ರೋಕ್ತಃ ಜೀವೋ ದೇವೋ ಸನಾತನ” ಇದು ಆದಿಶಂಕರಾಚಾರ್ಯರ ದಿವ್ಯಪ್ರಸಾದವು. ದೇಹವನ್ನು ದೇವಾಲಯವೆನ್ನುತ್ತಾರೆ ಮಗೂ. “ಜೀವೋ ದೇವೋ ಸನಾತನ” ಈ ಜೀವನೇ ದೇವರು ಅದು ಸನಾತನವಾದ ದೇವರು. ಇದೇ ಆಧ್ಯಾತ್ಮಿಕ ಶಾಸ್ತ್ರ, ಆತ್ಮಶಾಸ್ತ್ರ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಮೂವ್ಮೆಂಟ್ ಆತ್ಮಜ್ಞಾನಕ್ಕೆ, ಆತ್ಮವಿಜ್ಞಾನಕ್ಕೆ ಅಂಕಿತ. ಇದೇ ನಮ್ಮ ಜೀವನ. ಪಿರಮಿಡ್ ಮಾಸ್ಟರ್ ಎಂದು ಕರೆಸಿಕೊಳ್ಳುವ ನಾವುಗಳೇ ದೇವರುಗಳು. ನಾವು ಪಿರಮಿಡ್ ಎಂಬ ದೇವಾಲಯಗಳಲ್ಲಿ ವಾಸಿಸುತ್ತಿದ್ದೇವೆ. ಮಂದಿರಗಳಿಗೆ ಹೋಗುತ್ತೇವೆ, ಹಲವಾರು ದೇವರುಗಳನ್ನು ಸ್ತುತಿಸುತ್ತೇವೆ. ದೇವರು ಎಲ್ಲಿ ಎಂದು ಹುಡುಕಾಡುವವನೇ ದೇವರು. ತಿರುಪತಿ ಬೆಟ್ಟಕ್ಕೆ ಹತ್ತುವವನೇ ವೇಂಕಟೇಶ್ವರ ಸ್ವಾಮಿ. ಆ ಸ್ವಾಮಿಯು ನಮ್ಮ ಒಳಗೇ ಇದ್ದಾನೆ. ಅಂದರೆ ನಾವೆಲ್ಲರೂ ವೆಂಕಟೇಶ್ವರ ಸ್ವಾಮಿಗಳೇ, ನಾವೆಲ್ಲಾ ಜೀಸಸ್ ಪ್ರಭುಗಳೇ, ನಾವೆಲ್ಲರೂ ಬ್ರಹ್ಮರೇ, ಬುದ್ಧರೇ, ನಾವೆಲ್ಲರೂ ವರ್ಧಮಾನ ಮಹಾವೀರರೇ.
ಒಂದು ದೊಡ್ಡ ಮರವಿದೆ ಕೆಲವು ಲಕ್ಷ ಎಲೆಗಳಿವೆ. ಒಂದು ಎಲೆ ನಾನು ಬೇರೆ ನೀನು ಬೇರೆ ಎಂದು ಇನ್ನೊಂದು ಎಲೆಗೆ ಹೇಳುತ್ತದೆ. ಆಗ ಆ ಮರವು ನಗುತ್ತದೆ. ಎಲ್ಲಾ ಒಂದೇ, ನಾವೆಲ್ಲಾ ಒಂದೇ. ನಾನು ನೀನು ಬೇರೆಯಾಗಿ ಕಾಣುತ್ತೇವೆ. ದೇಹವು ಬೇರೆಯೇ ಹೊರತು, ಆತ್ಮವು ಒಂದೇ. ಮನಸ್ಸುಗಳು ಬೇರೆ ಆತ್ಮವೊಂದೇ, ಬುದ್ಧಿಗಳು ಬೇರೆ ಆತ್ಮವೊಂದೇ. ನಾನೇ ಬ್ರಹ್ಮವೆಂದು ನೀನು ತಿಳಿದಾಗ ಆಗ ನಿನಗೆ ವಿಜಯವು ಲಭಿಸುತ್ತದೆ. ಆತ್ಮವೇ ಪರಬ್ರಹ್ಮವು. ನಿನ್ನನು ನೀನು ಎಲೆಯ ಹಾಗೆ ನೋಡಿಕೊಂಡರೆ ನೀನು ಜೀವನು, ವೃಕ್ಷದಂತೆ ನೋಡಿಕೊಂಡರೆ ಬ್ರಹ್ಮನು. ಶ್ವಾಸವೇ ಗುರುವು. ಶ್ವಾಸವೆಂದರೆ ಪ್ರಕೃತಿ ವಿಶ್ವಮಯ ಪ್ರಾಣಶಕ್ತಿ. ಒಂದು ದೊಡ್ಡ ಬಳ್ಳಿಯಿದೆ ಅದರಲ್ಲಿರುವ ಒಂದು ಬಳ್ಳಿಯನ್ನು ಎಳೆದರೆ ಟೊಂಗೆಯೆಲ್ಲಾ ಕದಲುತ್ತದೆ. ಬಳ್ಳಿ ನಮಗೆ ಕಾಣಿಸದಿದ್ದರೆ ಆ ಟೊಂಗೆ ಹಾಗೆಯೇ ಇರುತ್ತದೆ. ಆ ಬ್ರಹ್ಮವೇ ಶ್ವಾಸ, ಆ ಟೊಂಗೆಯೇ ಪರಬ್ರಹ್ಮ. ಆ ಆದಿಶಕ್ತಿ ಪರಾಶಕ್ತಿಯೊಂದರ ಬಳ್ಳಿಯೇ ನಾವುಗಳು. ಆದ್ದರಿಂದ ಆ ಶ್ವಾಸವಿದೆ. ಅದು ಒಳಗೆ ಹೊರಗೆ ಹೋಗುತ್ತದೆ. ಅದನ್ನು ಹಿಡಿದುಕೋ ಆ ಬಳ್ಳಿಯನ್ನು ಹಿಡಿದು ಓಲಾಡಿದರೆ ಆ ಟೊಂಗೆ ನಿನ್ನ ಮಡಿಲಲ್ಲಿ ಬೀಳುತ್ತದೆ. ಆಗ ಏನಾಗುತ್ತದೆ ಎಂದರೆ ‘ಅಹಂ ಬ್ರಹ್ಮಾಸ್ಮಿ’ ನೀನೇ ಬ್ರಹ್ಮ. ‘ತತ್ವಮಸಿ’ ನೀನು ಕೂಡಾ ಅದೇ. ಯಾವ ವ್ಯಕ್ತಿಯೂ ನಿನಗೆ ಗುರುವಲ್ಲಾ, ನಿನ್ನ ಶ್ವಾಸದ ಒಂದು ಶಕ್ತಿಯೇ ನಿನಗೆ ಗುರು.
ದೊಡ್ಡ ಸಮುದ್ರವಿದೆ. ಒಂದು ಬೊಗಸೆಯಲ್ಲಿ ನೀರು ತೆಗೆದುಕೊಂಡಿದ್ದೇವೆ. ಆದರೆ, ಆ ನೀರು ಈ ನೀರು ಎರಡೂ ಒಂದೇ. ಬಿಡಿ ಆಕಾಶವೇ ಘಟಾಕೇಶವು. ವಿಶ್ವಮಯ ಪ್ರಾಣಶಕ್ತಿಯು ಆ ಒಂದು ಆದಿಶಕ್ತಿ, ಪರಾಶಕ್ತಿಯು ಅದರ ಒಂದು ಬಳ್ಳಿಯೇ ಈ ಶ್ವಾಸ. ಆ ಬಳ್ಳಿ ನಮ್ಮ ಬಳಿಯಿದೆ. ಹಾಯಾಗಿ ಕುಳಿತು ಕೈಗಳನ್ನು ಒಂದರಲ್ಲಿ ಒಂದು ಸೇರಿಸಿ ಧ್ಯಾನ ಮಾಡಬೇಕು. ಕೆಲವರು ಹೇಳುತ್ತಾರೆ ನೇರವಾಗಿ ಕುಳಿತುಕೊಳ್ಳಬೇಕು. ಬೆನ್ನುಮೂಳೆ ನೇರವಾಗಿರಬೇಕು ಎಂದು ಹೇಳುತ್ತಾರೆ. ಏಕೆಂದರೆ “ಸಮತ್ ಕಾಯೋ ಶಿರೋಗ್ರೀವಂ” ಎಂದಿದೆ ಭಗವದ್ಗಿತೆಯಲ್ಲಿ. ಆದರೆ ಭಗವತ್ಗೀತೆ ಎನ್ನುವುದು ಎಲ್ಲರಿಗೂ ಅರ್ಥವಾಗದು. ಅದು ಸಂಸ್ಕೃತದಿಂದ ಬಂದ ಕಾವ್ಯವಲ್ಲ. ಅದು ಯೋಗದಿಂದ ಬಂದ ಕಾವ್ಯ.
ಒಂದುಸಾರಿ ಏನಾಯಿತೆಂದರೆ ವೇದವ್ಯಾಸ ದೊಡ್ಡ ಪುಸ್ತಕವನ್ನು ಬರೆದರು “ಮಹಾಭಾರತ”. ಅದು ಪ್ರಕಟವಾಯಿತು. ನಂತರ ಎಲ್ಲಾ ನ್ಯೂಸ್ ಪೇಪರ್, ಟಿ.ವಿಯಲ್ಲಿ ಬಂತು. ವೇದವ್ಯಾಸ ರಸ್ತೆಯ ಮೇಲೆ ನಡೆಯುತ್ತಿದ್ದರೆ ಒಬ್ಬ ಅಗಸ ಎದುರಿಗೆ ಬಂದ “ಸ್ವಾಮೀಜಿ ನಿನ್ನೆಯೆಲ್ಲಾ ನಿಮ್ಮನ್ನು ಟಿ.ವಿ.ಯಲ್ಲಿ ನೋಡಿದೆನು. ದೊಡ್ಡ ಕಾರ್ಯಕ್ರಮವಾಯಿತು. ಎಷ್ಟು ದೊಡ್ಡ ಪುಸ್ತಕ ಬರೆದಿದ್ದೀರಿ. ನನಗೆ ಓದಲು ಬಾರದು ಅಷ್ಟು ದೊಡ್ಡ ಪುಸ್ತಕ ಬೇರೆ, ಅದರಲ್ಲಿ ಏನಿದೆ ನೀವೇ ಹೇಳುತ್ತೀರಾ?” ಎಂದು ವೇದವ್ಯಾಸರನ್ನು ಕೇಳಿದ. ಆಗ ವೇದವ್ಯಾಸ “ಎಲ್ಲವೂ ಹುಚ್ಚು, ಸುಮ್ಮನೆ ಅಷ್ಟು ದೊಡ್ಡ ಪುಸ್ತಕ ಬರೆದಿದ್ದೇನೆ ಅಷ್ಟೆ. ಅದರಲ್ಲಿ ಎರಡು ಚಿಕ್ಕ ವಿಷಯಗಳಿವೆ: “ಪರೋಪಕಾರ ಪುಣ್ಯ, ಪರ ಅಪಕಾರ ಪಾಪ” ಅಷ್ಟೇ ಹೋಗಪ್ಪಾ… ಎಂದರು. “ಅಷ್ಟೇನಾ ಸ್ವಾಮಿ… ಅಷ್ಟು ದೊಡ್ಡ ಪುಸ್ತಕದಲ್ಲಿ ನೀವು ಬರೆದಿರುವುದು” ಎಂದು ಕೇಳಿದ ಅಗಸ. “ಹೌದಪ್ಪಾ ಅಷ್ಟೇ… ನೀನು ಪರರಿಗೆ ಉಪಕಾರವೇ ಮಾಡು ಅಪಕಾರ ಮಾಡಬೇಡ. ಉಪಕಾರ ಎಂದರೆ ಸಹಾಯ. ನಿನ್ನ ಕೈಯ್ಯಲ್ಲಿ ಆದಷ್ಟು ನೀನು ಬೇರೆಯವರಿಗೆ ಉಪಕಾರ ಮಾಡು, ಯಾವ ಪ್ರಾಣಿಗೂ ಅಪಕಾರ ಮಾಡಬೇಡ, ಅಷ್ಟೇ” ಎಂದರು ವೇದವ್ಯಾಸ. ಅಗಸ ಇಷ್ಟೇನಾ ಎಂದು ತೃಪ್ತಿಯಿಂದ ಹೊರಟುಹೋದ.
ಅದೇ ರೀತಿ, ವೇದವ್ಯಾಸನ ಬಳಿಗೆ ದೊಡ್ಡ ಪಂಡಿತ ಬಂದನು. ಅವನು ಹೇಳಿದ “ಸ್ವಾಮೀಜಿ… ನಿನ್ನೆ ನೀವು ಪ್ರಕಟಿಸಿದ ಪುಸ್ತಕ ರಾತ್ರಿಯಿಡೀ ಓದಿದೆದನು. ಎಷ್ಟು ಒಳ್ಳೆಯ ಪುಸ್ತಕವದು. ಆ ಪುಸ್ತಕದಲ್ಲರುವುದು ಎಲ್ಲಾ ಅರ್ಥವಾಯಿತು. ಆದರೆ ಏನೂ ಅರ್ಥವಾದಂತಿಲ್ಲ”. ಆಗ ವೇದವ್ಯಾಸ “ಹೌದಪ್ಪಾ.. ನಿಜವೇ. ನಿನಗೆ ಸಂಸ್ಕೃತ ಭಾಷೆ ಗೊತ್ತು. ಆದರೆ, ನೀನು ಯೋಗಿಯಲ್ಲ. ಆದರೆ, ಆ ಪುಸ್ತಕ ಯೋಗ ಭಾಷೆಯಲ್ಲಿ ಬರೆದಿದ್ದೇನೆ. ಸಂಸ್ಕೃತ ಭಾಷೆ ಅದರ ಮೇಲುಹೊದಿಕೆ ಮಾತ್ರ. ನೀನು ಯೋಗಿಯಾದರೆ ಮಾತ್ರ ಅದು ನಿನಗೆ ಅರ್ಥವಾಗುತ್ತದೆ” ಎಂದರು ವೇದವ್ಯಾಸ. “ಮತ್ತೆ ನೀವೇ ಹೇಳಿ ಸ್ವಾಮಿ” ಎಂದು ಆ ಪಂಡಿತೋತ್ತಮ ಕೇಳಿದ. ಆಗ ವೇದವ್ಯಾಸ ಹೀಗೆ ಕೇಳಿದರು : “ಮಹಾಭಾರತದಲ್ಲಿ ‘ವಿರಾಟ ಪರ್ವವು’ ಯಾವ ಪರ್ವದ ನಂತರ ಬರುತ್ತದೆ”. ಆಗ ಪಂಡಿತ :‘ಅರಣ್ಯಪರ್ವ’ದ ನಂತರ ಬರುತ್ತದೆ ಸ್ವಾಮೀಜಿ ಎಂದನು. ‘ಅರಣ್ಯವಾಸ’ವಾದ ನಂತರ ಯಾವ “ವಾಸ”ವು ಬರುತ್ತದೆ ಎಂದು ಕೇಳಿದರು ವೇದವ್ಯಾಸರು. “ಅಜ್ಞಾತವಾಸ” ಬರುತ್ತದೆ ಸ್ವಾಮಿ ಎಂದ ಪಂಡಿತ. ಹನ್ನೆರೆಡು ವರ್ಷಗಳ ಕಾಲ ಅರಣ್ಯವಾಸ ನಂತರ ಒಂದು ವರ್ಷ ಕಾಲ “ಅಜ್ಞಾತವಾಸ” ಎಂದರೆ ಅಲ್ಲಿ ಯುಧಿಷ್ಟರ, ಭೀಮ, ಅರ್ಜುನ, ನಕುಲ, ಸಹದೇವರು ಇವರೆಲ್ಲರೂ ಅವರಾಗಿ ಇರಲಿಲ್ಲ ಅಲ್ಲಿ. ಅಷ್ಟು ದೊಡ್ಡ ವೀರ ಅರ್ಜುನ ನಪುಂಸಕನಾಗಿ, ಮಹಾರಾಜ ಧರ್ಮರಾಜ ಕಂಕುರ್ಭವನಾದ, ಭೀಮನು ಅಡುಗೆಯವನು ಅಂದರೆ ಅವರ ಊರು, ಹೆಸರು ಎಲ್ಲಾ ಮಾಯ ಅಜ್ಞಾತವಾಸದಲ್ಲಿ. ಅರಣ್ಯವಾಸ 12ವರ್ಷ, ಅಜ್ಞಾತವಾಸ ಒಂದು ವರ್ಷವಾದ ಮೇಲೆ ವಿರಾಟ್ಪರ್ವ. ಅಜ್ಞಾತವಾಸವೆಂದರೆ ಧ್ಯಾನವು. ಅರಣ್ಯವಾಸವೆಂದರೆ ಧ್ಯಾನಕ್ಕೆ ಬರುವ ಮುಂಚೆ ನಿನ್ನ ಹುಡುಕಾಟ. ದಟ್ಟಾರಣ್ಯದಲ್ಲಿ, ಅಲ್ಲಲ್ಲಿ ಇರುವ ಗುರುಗಳ ಬಳಿ ಹೋಗಿ ಸತ್ಯವೆಲ್ಲಿದೆ ಎಂದು ಮಾಡಿದ ಹುಡುಕಾಟವೇ ಅರಣ್ಯವಾಸ. ಓಹೋ ಅಜ್ಞಾತವಾಗಿರಬೇಕು. ನನಗೆ ತಿಳಿದಿರುವುದು ನಾನು ಮರೆತು ಹೋಗಬೇಕು ಎಂದು ಧ್ಯಾನದಲ್ಲಿ ಕುಳಿತು ‘ನಾನು, ನಾನಲ್ಲ’ ಎನ್ನುವುದೇ ಅಜ್ಞಾತವಾಸ. ಯಾವಾಗ ನಾವು ಧ್ಯಾನ ಮಾಡುತ್ತೇವೋ, ನಿನ್ನ ವಿರಾಟ್ಸ್ವರೂಪ ನಿನಗೇ ತಿಳಿಯುತ್ತದೆ. ಅದೇ ವಿರಾಟ್ಪರ್ವ ಅಷ್ಟೆ ಇದರ ಸಾರಾಂಶ ಎಂದು ಆ ಪಂಡಿತನಿಗೆ ವೇದವ್ಯಾಸ ಹೇಳಿದನು.
ಮೈಡಿಯರ್ ಫ್ರೆಂಡ್ಸ್, ನಾವು ಧ್ಯಾನದಲ್ಲಿ ಅಜ್ಞಾತವಾಸ ಮಾಡುತ್ತೇವೆ. ನಾವು ಯಾರೋ ಮರೆಯುತ್ತೇವೆ. ನಾವು ಆಗ ಶೂನ್ಯರಾಗುತ್ತೇವೆ. ಆಗ ನಮ್ಮ ವಿರಾಟ್ ಸ್ವರೂಪ ತಿಳಿಯುತ್ತದೆ. ಈ ನಖಶಿಖ ಪರ್ಯಂತವೂ ಅಹಂ ದೇಹೋಸ್ಮಿಯಲ್ಲಾ, ಬ್ರಹ್ಮಾಸ್ಮಿ ಎಂದು ತಿಳಿಯುತ್ತದೆ. ಇದು ಅನುಭವೈಕ ಜ್ಞಾನ. ಪಾಂಡಿತ್ಯವೆಂದರೆ ಕೇಳಿದ ಜ್ಞಾನಮಾತ್ರ, ಪರಿಚಯ ಮಾತ್ರ. ಜ್ಞಾನವೆಂದರೆ ಅನುಭವವು. ಆದ್ದರಿಂದ, ನಮ್ಮ ಜ್ಞಾನ ನವರತ್ನಗಳಲ್ಲಿ 1) ಆತ್ಮವೇ ಪರಬ್ರಹ್ಮ 2) ಜೀವರೇ ದೇವರು 3) ದೇಹವೇ ದೇವಾಲಯ 4) ಶ್ವಾಸವೇ ಗುರು 5) ಸಮಯವೇ ಸಾಧನೆ 6)ಸಹನೆಯೇ ಪ್ರಗತಿ 7) ಅನುಭವವೇ ಜ್ಞಾನ. ವೇದಾನಂದ ಬಾಬಾಜಿಯವರಿಗೆ ಹಿಮಾಲಯ ಸುತ್ತಿ ಅನುಭವವಿದೆ, ಅಲ್ಲಿನ ಚಳಿಗೆ ಗುಹೆಗಳಲ್ಲಿ ಅಲೆದಾಡುವುದನ್ನು ನಾವು ಕೇಳಿ ತಿಳಿದುಕೊಂಡಿದ್ದೇವೆ. ಅವರದು ಅನುಭವೈಕ ಜ್ಞಾನ. ವೇದವ್ಯಾಸನಿಗೆ, ಆ ಪಂಡಿತನಿಗೆ ಸರಿಸಮಾನವಾದ ಪಾಂಡಿತ್ಯವಿದೆ. ಆದರೆ, ವೇದವ್ಯಾಸರು ಸಂಸ್ಕೃತ ಪಂಡಿತ ಅಷ್ಟೇ ಅಲ್ಲಾ ಮಹಾಯೋಗೀಶ್ವರ, ಆ ದಿನಗಳಲ್ಲಿರುವ ವೇದವ್ಯಾಸನನ್ನು ಈಗ ನಾವು ಮಹಾವತಾರ್ ಬಾಬಾ ರೂಪದಲ್ಲಿ ನೋಡುತ್ತಿದ್ದೇವೆ. ಆದರೆ ಇಬ್ಬರೂ ಒಬ್ಬರೇ.
ಸಹನೆಯೇ ಪ್ರಗತಿ. ಶಿರಡಿ ಸಾಯಿಬಾಬಾ ಏನು ಹೇಳಿದ್ದಾರೆ? ಶ್ರದ್ಧಾ, ಸಬೂರಿ ಎಂದು. ಆ ಸಬೂರಿ ಎಂಬುವುದನ್ನೇ ‘ಸಹನೆ’ ಎನ್ನುತ್ತಾರೆ. ನಾವು ಎರಡು ಕುದುರೆಗಳ ಮೇಲೆ ಸವಾರಿ ಮಾಡುತ್ತಿದ್ದೇವೆ. ಒಂದು ಪ್ರಾಪಂಚಿಕ ಜೀವನ ಮತ್ತೊಂದು ಆಧ್ಯಾತ್ಮಿಕ ಜೀವನ. ಪ್ರಾಪಂಚಿಕ ಜೀವನದಲ್ಲಿ ನಮಗೆ ಸಹನೆಯಿರಬೇಕು, ಆಧ್ಯಾತ್ಮಿಕ ಜೀವನದಲ್ಲಿ ಶ್ರದ್ಧೆಯಿರಬೇಕು. ಪ್ರಾಪಂಚಿಕ ಜೀವನದಲ್ಲಿ ಪ್ರಗತಿಯು ಬೇಕಿಲ್ಲ. ದಿನಕ್ಕೆ ನಮಗೆಷ್ಟು ಊಟ ಬೇಕೊ ಅಷ್ಟು ಸಂಪಾದಿಸುತ್ತೇವೆ. ಪ್ರಾಪಂಚಿಕ ಜೀವನದಲ್ಲಿ ಶ್ರದ್ಧೆ ಬೇಕಿಲ್ಲ. ಆಧ್ಯಾತ್ಮಿಕ ಜೀವನದಲ್ಲಿ ಶ್ರದ್ಧೆಯಿರಬೇಕು. “ಶ್ರದ್ಧವಾನ್ ಲಭತೇ ಜ್ಞಾನಂ”. ಜ್ಞಾನವೆನ್ನುವುದು ಆಧ್ಯಾತ್ಮಿಕತೆಗೆ ಸಂಬಂಧಿಸಿದ್ದು. ಆದ್ದರಿಂದ ಸಹನೆಯಿರಬೇಕು. ಇದನ್ನೇ ತಿತೀಕ್ಷ ಎಂದಿದ್ದಾರೆ. ಷಟ್ಸಂಪತ್ತಿ: ಶಮ, ಧಮ, ತಿತೀಕ್ಷಾ, ಉಪರತಿ, ಶ್ರದ್ಧ, ಸಮಾಧಾನ ಇವೆಲ್ಲಾ ಇದ್ದರೇನೆ ಮುಮುಕ್ಷತ್ವ ಬರುತ್ತದೆ. ನಂತರ ಆತ್ಮಸಾಕ್ಷಾತ್ಕಾರವಾಗುತ್ತದೆ. ಬ್ರಹ್ಮ ಸಾಕ್ಷಾತ್ಕಾರವಾದಾಗ ನಮಗೆಷ್ಟೋ ನೋವುಗಳು ಬರುತ್ತದೆ. ಅದನ್ನೆಲ್ಲಾ ಅನುಭವಿಸಬೇಕು. ಕುಳಿತಾಗ ಮೈ ಕೈ ನೋವು, ಕಾಲುನೋವು ಬರುತ್ತದೆ. ಆದರೂ ನಾವು ಸಾಧನೆಮಾಡಬೇಕು. ನಮಗೋಸ್ಕರ ನಾವು ಸಂಗೀತ ಸಾಧನೆ ಮಾಡಬೇಕು. ನಮಗೋಸ್ಕರ ನಾವು ಧ್ಯಾನ ಸಾಧನೆ ಮಾಡುತ್ತೇವೆ. ಯಾರು ಬೈದರೂ, ಹೊಡೆದರೂ ನಾವು ಸಹನೆಯನ್ನು ಅನುಸರಿಸಬೇಕು. ನಿಮ್ಮನ್ನು ಹೊಡೆದ, ಬೈಗಳ ಸುರಿಮಳೆ ಸುರಿಸಿದ ಪ್ರಪಂಚಕ್ಕೆ ನೀವು ಕೃತಜ್ಞತೆ ಹೇಳಿ. ಅದೇ ಸಹನೆ. ಇಲ್ಲದೇ ನೀನು ನನ್ನ ಹೊಡೆದೆಯಾ, ಬೈದೆಯಾ ಎಂದರೆ ನಿನಗೆ ಸೊನ್ನೆ ಅಂಕಗಳು ದೊರೆಯುತ್ತವೆ. ಅದೇ ಪ್ರಗತಿ. ಸಹನೆಯಿಲ್ಲದಿದ್ದರೆ ದುರ್ಗತಿ. ಈ ಶ್ವಾಸದ ಮೇಲೆ ಗಮನವಿಲ್ಲದಿದ್ದರೆ ಅದು ಕುರುಡು ವಿದ್ಯೆ. ಅದು ಬೀಜವಾಗಿಯೇ ಇದೆಯೇ ಹೊರತು ಅಂಕುರಿಸಿಲ್ಲ, ವೃಕ್ಷವಾಗಿಲ್ಲ, ಪುಷ್ಪಗಳನ್ನು ನೀಡಲಿಲ್ಲ, ಫಲ ನೀಡಲಿಲ್ಲ. ಆದ್ದರಿಂದ, ಗುರುವಿಲ್ಲದ ವಿದ್ಯೆ, ಕುರುಡು ವಿದ್ಯೆ. ಆದ್ದರಿಂದ, ನಾವು ಶ್ವಾಸವೆನ್ನುವ ಗುರುವಿನ ಬಳಿಗೆ ಬರಬೇಕು. ನಮ್ಮ ಲೌಕಿಕ ಕರ್ತವ್ಯಗಳನ್ನು ಮಾಡಿ ಮತ್ತೆ ನಾವು ಧ್ಯಾನಕ್ಕೆ ಬರಬೇಕು. ಇನ್ನೊಬ್ಬ ವ್ಯಕ್ತಿ ನಿನಗೆ ಗುರುವಲ್ಲಾ, ನಿನ್ನ ಶ್ವಾಸ ಮಾತ್ರವೇ ನಿನಗೆ ಗುರು.
“ಆತ್ಮವೆನ್ನುವುದು ಯಾವಾಗಲೂ ಚಟುವಟಿಕೆಯಿಂದ ಇರುತ್ತದೆ”
ಮೈ ಡಿಯರ್ ಫ್ರೆಂಡ್ಸ್, ಮೈ ಡಿಯರ್ ಮಾಸ್ಟರ್ಸ್ ಅಂಡ್ ಮೈ ಡಿಯರ್ ಗಾಡ್ಸ್. ನಾವೆಲ್ಲರೂ ಪ್ರಸ್ತುತ ಈ ಭೂಮಿಯ ಮೇಲಿದ್ದೇವೆ. ನಾವು ಸೂರ್ಯ ಎಂಬ ನಕ್ಷತ್ರ ಮಂಡಲಕ್ಕೆ ಸೇರಿದ ಭೂ ಗ್ರಹವಾಸಿಗಳು. ಸೂರ್ಯನು ಕೂಡಾ ಒಂದು ನಕ್ಷತ್ರ. ಪ್ರತಿಯೊಂದು ನಕ್ಷತ್ರವೂ ಕೂಡಾ ಸೂರ್ಯರಾಗಿದ್ದಾರೆ. ಪ್ರತಿ ಸೂರ್ಯನ ಸುತ್ತಲೂ, ಪ್ರತಿ ನಕ್ಷತ್ರದ ಸುತ್ತಲೂ ಕೆಲವು ಗ್ರಹಗಳಿರುತ್ತದೆ. ಇರಬಹುದು, ಇಲ್ಲದೆಯೊ ಇರಬಹುದು. ಪ್ರತಿ ಗ್ರಹದಲ್ಲೂ ಎಷ್ಟೋ ವಿಧವಾದ ಜೀವರಾಶಿಗಳು ಇರಬಹುದು, ಇಲ್ಲದೆಯೂ ಇರಬಹುದು. ನಮ್ಮ ಸೂರ್ಯನಾರಾಯಣನ ಸುತ್ತಲೂ, ನಮ್ಮ ಭೂಮಿ ತಿರುಗುತ್ತಿದೆ. ಈ ಭೂಮಿಯಲ್ಲಿ, ಭೂಮಿಯ ಮೇಲೆ ನಾವು ಇದ್ದೇವೆ. ಇಂತಹ ಸೂರ್ಯರು ಕೋಟ್ಯಾಂತರ ಲೆಕ್ಕದಲ್ಲಿದ್ದಾರೆ. ಅವೆಲ್ಲವೂ ನಕ್ಷತ್ರಗಳ ರೂಪದಲ್ಲಿವೆ. ನಮ್ಮ ಭೂಮಿಗಿಂತ ನೂರಾರುಪಟ್ಟು ದೊಡ್ಡವನು ಸೂರ್ಯ. ಆದರೆ, ನಮಗೆ ದೂರದಲ್ಲಿರುವುದರಿಂದ ಎಷ್ಟೋ ಚಿಕ್ಕದಾಗಿ ಕಾಣುತ್ತಾನೆ. ಅದಕ್ಕಿಂತ ಲಕ್ಷಪಟ್ಟು ದೊಡ್ಡದು ನಕ್ಷತ್ರಗಳು. ಆದರೆ, ಅವು ಇನ್ನೂ ಎಷ್ಟೋ ದೂರದಲ್ಲಿರುವುದರಿಂದ ಮಿಣುಕು ಮಿಣುಕು ಎನ್ನುತ್ತಿರುತ್ತವೆ.
ಕಣ್ಣಿಗೆ ಕಾಣುವ ನಕ್ಷತ್ರಗಳು ಕೆಲವಿದ್ದರೆ, ಕಾಣದ ನಕ್ಷತ್ರಗಳು ಇನ್ನೂ ಎಷ್ಟೋ ಇವೆ. ಪ್ರತಿ ನಕ್ಷತ್ರದ ಸುತ್ತಲೂ ಎಷ್ಟೋ ಗ್ರಹಗಳು, ಲೆಕ್ಕವಿಲ್ಲದಷ್ಟು ಅನಂತಕೋಟಿ ಜೀವರಾಶಿಗಳು ಇವೆ. ಭೂಮಿಯೆಂಬ ಒಂದು ಗ್ರಹದಲ್ಲಿ ನಾವಿದ್ದೇವೆ. ಇದು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾಗಿದೆ. ಭೂಮಿಯು ತನ್ನ ಸುತ್ತಲೂ ತಾನು ಸುತ್ತುವುದಕ್ಕೆ ಒಂದು ದಿನ, ಚಂದ್ರ ಭೂಮಿ ಸುತ್ತಾ ಸುತ್ತಲು ಒಂದು ತಿಂಗಳು, ಭೂಮಿ ಸೂರ್ಯನ ಸುತ್ತಾ ಸುತ್ತುವುದಕ್ಕೆ ಒಂದು ವರ್ಷ ಕಾಲದ ಅಗತ್ಯವಿದೆ. ಸೂರ್ಯ ತನ್ನ ಈ ಸೌರಕುಟುಂಬದ ಸಮೇತ ಇನ್ನೊಂದು ನಕ್ಷತ್ರದ ಸುತ್ತಲೂ ಸುತ್ತುತ್ತಾನೆ. ಅದರ ಹೆಸರೇ ಅಲ್ಸಿಯೋನ್, ಅದು ಈ ಕಣ್ಣಿಗೆ ಕಾಣದು. ಅದರ ಸುತ್ತಲೂ ಸುತ್ತುವುದಕ್ಕೆ ೨೬,೦೦೦ ವರ್ಷಗಳಾಗುತ್ತದೆ. ಆ ಅಲ್ಸಿಯೋನ್ ಎನ್ನುವುದು ತನ್ನ ಮಕ್ಕಳೊಂದಿಗೆ, ಮತ್ತು ಗೆಲಾಕ್ಸಿಗಳ ಸುತ್ತಲೂ ತಿರುಗುವುದಕ್ಕೆ ೪ ಮಿಲಿಯನ್ ವರ್ಷಗಳು ತೆಗೆದುಕೊಳ್ಳುತ್ತದೆ. ಇದೆಲ್ಲಾ ಖಗೋಳಶಾಸ್ತ್ರ. ಕಣ್ಣಿಗೆ ಕಾಣುವ ಖಗೋಳವೆಷ್ಟೋ ಇದ್ದರೆ ಕಣ್ಣಿಗೆ ಕಾಣದ ಖಗೋಳ ಶಾಸ್ತ್ರ ಇನ್ನೂ ಎಷ್ಟೋ ಇದೆ. ನಾವು ಈ ಶರೀರವನ್ನು ಬಿಟ್ಟು ಎಷ್ಟೋ ಲೋಕಗಳು, ಗ್ರಹಗಳು, ಎಷ್ಟೋ ಗೆಲಾಕ್ಸಿಗಳು ತಿರುಗಬಹುದು. ತಿರುಗುತ್ತೇವೆ ಕೂಡಾ. ರಾತ್ರಿ ಕನಸಿನಲ್ಲಿ ನಾವು ಎಷ್ಟೋ ಕಡೆಗೆ ಹೋಗುತ್ತೇವೆ. ಬೆಳಗ್ಗೆ ಎಚ್ಚರವಾದಾಗ ಏನೋ ವಿಧವಿಧವಾಗಿ ಕಾಣಿಸಿತು ಎನ್ನುತ್ತೇವೆ. ರಾತ್ರಿ ನಾವು ಶರೀರದಿಂದ ಹೊರಬಂದು ಸೂಕ್ಷ್ಮಶರೀರಯಾನ ಮಾಡಿ ಎಷ್ಟೋ ಗ್ರಹಗಳು, ಗೆಲಾಕ್ಸಿಗಳಿಗೆ ಹೋಗುತ್ತೇವೆ. ಬೆಳಗ್ಗೆ ನಾವು ಭೂಮಿಯ ಮೇಲೆ ಜ್ಞಾನೇಂದ್ರಿಯಗಳೊಂದಿಗೆ, ಕರ್ಮೇಂದ್ರಿಯಗಳೊಂದಿಗೆ ಬಹಳಷ್ಟು ಚಟುವಟಿಕೆಯಿಂದ ಇರುತ್ತೇವೆ. ರಾತ್ರಿ ವೇಳೆ ಸೂಕ್ಷ್ಮಶರೀರದೊಂದಿಗೆ ಕ್ರಿಯಾಶೀಲರಾಗಿರುತ್ತೇವೆ.
ಆತ್ಮವೆನ್ನುವುದು ಯಾವಾಗಲೂ ಚಟುವಟಿಕೆಯಿಂದ ಇರುತ್ತದೆ. ಬೆಳಗ್ಗೆ ಇಲ್ಲಿ, ರಾತ್ರಿ ಅಲ್ಲಿ. ಈ ಭೌತಿಕ ಶರೀರದೊಂದಿಗೆ ಕೂಡಾ ನಾವು ಎಷ್ಟೋ ಗ್ರಹಗಳಿಗೆ ಹೋಗಬಹುದು, ಅವರು ಬಂದು ಕರೆದುಕೊಂಡು ಹೋದರೆ. ಸೃಷ್ಟಿಯಲ್ಲಿನ ಚಿತ್ರವಿಚಿತ್ರಗಳು, ವಿಸ್ಮಯಗಳು ಇವಿಷ್ಟೇ ಎಂದು ನಾವು ಹೇಳಲಾರೆವು. ಎಷ್ಟು ನೋಡಿದರೂ ಇನ್ನೂ ಆಶ್ಚರ್ಯವೇ, ಎಷ್ಟು ತಿಳಿದುಕೊಂಡರೂ ಇನ್ನೂ ಎಷ್ಟೋ ತಿಳಿದುಕೊಳ್ಳುವುದು ಇರುತ್ತದೆ. ಯಾವಾಗಲೂ ಹೊಸದಾಗಿ ನಾವು ತಿಳಿದುಕೊಳ್ಳುತ್ತಲೇ ಇರಬೇಕು. ನಾನು ಯಾವಾಗಲೂ ಹೊಸ ವಿಷಯ, ವಿಸ್ಮಯಗಳನ್ನು ತಿಳಿದುಕೊಳ್ಳುತ್ತಾ ಇರುತ್ತೇನೆ. ಒಂದು ಕಡೆ ಯಾವಾಗಲೂ ಕಲಿತುಕೊಳ್ಳುತ್ತಾ ಇರುವುದು, ಒಂದು ಕಡೆ ಯಾವಾಗಲೂ ಸುಖವಾಗಿ ಆನಂದವಾಗಿ ಜೀವಿಸುವುದು, ಎರಡೂ ಇರಬೇಕು. ಒಂದು ಕಡೆ ಯಾವಾಗಲೂ ಸಂಗೀತವನ್ನು ಆಸ್ವಾದಿಸುತ್ತಾ, ಇನ್ನೊಂದು ಕಡೆ ಸಂಗೀತದಲ್ಲಿ ಇನ್ನೂ ಏನಾದರೂ ಪ್ರಯೋಗ ಮಾಡಬಹುದಾ ಎಂದು ಸಂಗೀತಜ್ಞರು ಆಲೋಚಿಸುತ್ತಾ ಇರುತ್ತಾರೆ. ಬೇರೆಯವರು ತಮ್ಮ ವಾದ್ಯಗಳನ್ನು ನುಡಿಸುತ್ತಿದ್ದರೆ ಅರೇ ಹಾಗೆ ಕೂಡಾ ನುಡಿಸಬಹುದೇ ನಾನು ಕೂಡ ಹಾಗೇ ನುಡಿಸಬೇಕೆಂದು ಕಲಿಯುತ್ತಾರೆ. ಆದ್ದರಿಂದ, ಎರಡು ವಿಷಯಗಳಿವೆ: ಒಂದು ಕಲಿಯುವುದು, ಇನ್ನೊಂದು ಆನಂದವಾಗಿ ಜೀವಿಸುವುದು.
ಒಂದು ಸಿನಿಮಾಗೆ ಹೋಗುತ್ತೇವೆ. ಅಲ್ಲಿ ಕಲಿಯಲು ಎಷ್ಟೋ ವಿಷಯ ಸಿಗುತ್ತದೆ. ಸಿನಿಮಾ ಎಂದರೆ ಎಷ್ಟು ಇರುತ್ತದೆಯೆಂದರೆ, ಅವರು ಎಷ್ಟೋ ಆಲೋಚಿಸಿ ಪ್ರತಿ ಸಂಭಾಷಣೆಗಳನ್ನು ಬರೆಯುತ್ತಾರೆ. ಆದ್ದರಿಂದ, ಪುಸ್ತಕಗಳನ್ನು ಓದುವುದು ಎಷ್ಟು ಮುಖ್ಯವೋ, ಸಿನಿಮಾಗಳನ್ನು ನೋಡುವುದು ಅಷ್ಟೇ ಮುಖ್ಯ. ಆಧ್ಯಾತ್ಮಿಕ ಚಿತ್ರಗಳು ಎಷ್ಟೋ ಇವೆ. ಎಲ್ಲರೂ ಅವುಗಳನ್ನು ನೋಡಬೇಕು. ಈ ಬಾರಿಯ ಸ್ಪಿರಿಚ್ಯುವಲ್ ಇಂಡಿಯಾ ಸಂಚಿಕೆಯಲ್ಲಿ ಆಧ್ಯಾತ್ಮಿಕ ಚಿತ್ರಗಳ ವೆಬ್ಸೈಟ್ ಹೆಸರಿದೆ ಸ್ಪಿರಿಚ್ಯುವಲ್ ಮೂವೀಸ್ ಎಂದು. ನೀವು ಗೂಗಲ್ನಲ್ಲಿ ಹುಡುಕಿದರೆ, 1,90,000 ಚಿತ್ರಗಳು ಬರುತ್ತವೆ. ಕೆಲವು ಚಿತ್ರಗಳಲ್ಲಿ ಸತ್ತನಂತರ ಏನಾಗುತ್ತದೆ ಎಂದು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಸಿನಿಮಾ ಮನೋರಂಜನೆಗಾಗಿ ನೋಡಬೇಕು. ಅದರಲ್ಲಿರುವ ಒಳ್ಳೆಯದನ್ನು ತೆಗೆದುಕೊಳ್ಳಬೇಕು. 1987ನಲ್ಲಿ ಒಂದು ಹಾಡನ್ನು ಕೇಳಿದೆ, ಹಲವು ಬಾರಿ ಕೇಳಿ ಅದರ ಅರ್ಥ ತಿಳಿದುಕೊಂಡೆನು. ನನ್ನ ದಾರಿ ಮರುಭೂಮಿ, ನನ್ನ ಹೆಸರು ಭಿಕಾರಿ, ಮನಸ್ಸಿದ್ದ ಕಡೆ ಟಿಕಾಣೆ, ಬೇಡವೆಂದರೆ ಸಾಕು ಬದಲಾವಣೆ. ಇದು ಒಂದು ತೆಲುಗು ಚಿತ್ರದ ಹಾಡು. ’ನನ್ನ ಹೆಸರು ಭಿಕಾರಿ’ ಎಂದರೆ ನಾನು ಯಾವಾಗಲೂ ಶೂನ್ಯವೇ. ಹೊರಗೆಲ್ಲಾ ಶೂನ್ಯವೇ. ಒಂದು ಸಿನಿಮಾಗೆ ಹೋಗುತ್ತೇವೆ ಅಲ್ಲಿ ಶೂನ್ಯವಾಗಿರುತ್ತದೆ. ತೆರೆಯ ಮೇಲೆ ಮಾತ್ರ ಚಿತ್ರ ಮೂಡುತ್ತದೆ, ಆಡುತ್ತದೆ. ಆದರೆ, ನಾವು ಎಂಜಾಯ್ ಮಾಡುತ್ತೇವೆ. ಈ ಪ್ರಪಂಚವೆಲ್ಲಾ ಒಂದು ತೆರೆ. ತೆರೆಯ ಮೇಲಿನ ಚಿತ್ರಗಳು ನಾವು. ಈ ಪ್ರಪಂಚ ಮನೋರಂಜನೆಗಾಗಿ ಇದೆ. ಇಲ್ಲಿ ಕಲಿಯುವಿಕೆ ಮತ್ತು ಎಂಜಾಯ್ಮೆಂಟ್. ಸಿನಿಮಾ ಎನ್ನುವುದು ಸತ್ಯ. ಏಕಿದೆ? ಕಲಿಯಲು, ಆನಂದಿಸಲು.
ಯಾವಾಗಲೂ ಕಲಿಯಬೇಕು ಎಂಬ ಬಯಕೆ ಇರುವವನಿಗೆ, ಪ್ರತಿಕ್ಷಣ ಸುತ್ತಲೂ ಇರುವ ಪರಿಸ್ಥಿತಿಗಳು, ಸಮಾಜ ಎಲ್ಲವೂ ಕಲಿಸಲು ಸಿದ್ಧವಾಗಿರುತ್ತದೆ. ನಾವು ಎಷ್ಟಾದರೂ ಕಲಿಯಬಹುದು. ಪ್ರಕೃತಿಯನ್ನು ನೋಡಿ ಆನಂದಿಸಬೇಕು. ಪ್ರಕೃತಿಯಲ್ಲಿನ ಪುರುಷನಿಂದ ನೋಡಿ ಕಲಿಯಬೇಕು. ಪುನರ್ಜನ್ಮ ಎನ್ನುವ ಆಧ್ಯಾತ್ಮಿಕ ಚಿತ್ರ, ಜೊನಾಥನ್ ಲಿವಿಂಗ್ಸ್ಟನ್ ಸೀಗಲ್, ದಿ ಸೆಲೆಸ್ಟಿಯನ್ ಪ್ರಾಫೆಸಿ, ದಿ ಪೀಸ್ಫುಲ್ ವಾರಿಯರ್, ಯು ಕಾನ್ ಹೀಲ್ ಯುವರ್ ಲೈಫ್, ಕಾನ್ವರ್ಸೇಷನ್ ವಿತ್ ಗಾಡ್ ಇವೆಲ್ಲವೂ ಚಿತ್ರಗಳಿವೆ. ಮಕ್ಕಳಿಗೂ ಇವೆ ದೊಡ್ಡವರಿಗೂ ಇದೆ. ದಿ ಬ್ಲೂ ಬಟರ್ಫ್ಲೈ, ದಿ ಲಾಸ್ಟ್ ಮಿಮ್ಜಿ, ಯೆಸ್ಟರ್ಡೇ ಚಿಲ್ಡ್ರನ್, ಇಂಡಿಗೋಸ್, ದಿ ಲೈಫ್ ಆಫ್ ಬುದ್ಧ, ದಿ ಲೆಜೆಂಡ್ ಆಫ್ ಬುದ್ಧ, ಬುದ್ಧನ ಕುರಿತು ಚಿತ್ರಗಳು. ನಾವು ಪುಸ್ತಕಗಳನ್ನು ಓದುತ್ತೇವೆ. ಚಲನ ಚಿತ್ರಗಳನ್ನು ಕೂಡಾ ನೋಡಬೇಕು. ಅದರಲ್ಲಿರುವ ಆಧ್ಯಾತ್ಮಿಕತೆಯನ್ನು ತಿಳಿದುಕೊಳ್ಳಬೇಕು.
“ಗುರಿಯೇನೋ ಜೀವನವೂ ಅದೇ”
ಮೈ ಡಿಯರ್ ಫ್ರೆಂಡ್ಸ್, ಮೈ ಡಿಯರ್ ಮಾಸ್ಟರ್ಸ್ ಅಂಡ್ ಮೈ ಡಿಯರ್ ಗಾಡ್ಸ್ ಹದಿನಾಲ್ಕು ದಿನದ ಪ್ರಾತಃಕಾಲದ ಧ್ಯಾನ ಈ ದಿನ ಸಮಾಪ್ತಗೊಳಿಸುತ್ತಿದ್ದೇವೆ. ನಮಗೆ ನಾವೇ ಕೃತಜ್ಞತೆಗಳನ್ನು ಸಲ್ಲಿಸಿಕೊಳ್ಳೋಣ. ಮೈಡಿಯರ್ ಫ್ರೆಂಡ್ಸ್, ನಮ್ಮ ಲಕ್ಷ್ಯವೇನು? ನಾವು ಮನಸ್ಸಿನಲ್ಲಿ ಏನು ಲಕ್ಷ್ಯವಿಟ್ಟುಕೊಳ್ಳುತ್ತೇವೆ. ಜೀವನದಲ್ಲಿ ಏನು ಗುರಿ ಇಟ್ಟುಕೊಳ್ಳುತ್ತೇವೆಯೋ ನಮ್ಮ ಜೀವನ ಆ ಕಡೆಗೆ ಹೋಗುತ್ತದೆ. ಯಾವ ಗುರಿಯೂ ಇಲ್ಲದಿದ್ದರೆ ಗುರಿಯನ್ನು, ಲಕ್ಷ್ಯವನ್ನು ಅಲಕ್ಷ್ಯ ಮಾಡಿದರೆ, ಜೀವನವು ಚುಕ್ಕಾಣಿಯಿಲ್ಲದ ದೋಣಿಯಂತೆ ಯಾವ ದಿಕ್ಕೂ, ದಿಶೆಯೂ ಇಲ್ಲದೇ, ಅಗಮ್ಯಗೋಚರವಾಗಿ ಆ ಕಡೆ ಈ ಕಡೆ ತೊಯ್ದಾಡುತ್ತಾ ಅಸ್ತವ್ಯಸ್ತವಾಗಿರುತ್ತದೆ. ಜೀವನಕ್ಕೆ ಲಕ್ಷ್ಯವಿರಬೇಕು. ಆ ಲಕ್ಷ್ಯವೇ ಜೀವನವನ್ನು ಮುನ್ನಡೆಸುತ್ತದೆ. ಯಾವ ಮನುಷ್ಯ ಏನು ಎಂದು ತಿಳಿದುಕೊಳ್ಳಲು ಆ ಮನುಷ್ಯನ ಜೀವನದಲ್ಲಿರುವ ಲಕ್ಷ್ಯವೇನು ಎಂದು ತಿಳಿದುಕೊಂಡರೆ ಸಾಕು. ಅವನ ಬಗ್ಗೆ ತಿಳಿಯುತ್ತದೆ.
ಮನುಷ್ಯನ ಜೀವನವೇನು? ಎಂದರೆ ಅವನ ಜೀವನವೇ ಒಂದು ಲಕ್ಷ್ಯ. ನಮ್ಮೆಲ್ಲರ ಗುರಿಯೇನು 14 ದಿನಗಳು ನಾವು ಈ ಕೈಲಾಸಪುರಿಯಲ್ಲಿ ಇರಬೇಕು ಎಂದುಕೊಂಡಿದ್ದೆವು, ಇದ್ದೇವೆ. ನಮಗೆ ಬೇರೆ ಕೆಲಸಗಳು ಬೇಡ. ಎಲ್ಲರೂ ಇಲ್ಲಿರಬೇಕೆಂದುಕೊಂಡಿದ್ದೇವೆ ಅಷ್ಟೇ. ಆ ಲಕ್ಷ್ಯಕ್ಕೋಸ್ಕರ ನಾವು ನಮ್ಮ ಜೀವನವನ್ನು ಅದರತ್ತಲೇ ನಡೆಸಿ ಆ ಲಕ್ಷ್ಯವನ್ನು ಸಾಕಾರ ಮಾಡಿಕೊಳ್ಳುತ್ತೇವೆ.
ಗುರಿಯೇನೋ ಜೀವನವೂ ಅದೇ. ಒಂದು ನೌಕೆ ಯಾವ ಕಡೆ ಸಾಗುತ್ತದೆ? ತನ್ನ ಲಕ್ಷ್ಯದ ಕಡೆಗೆ ಸಾಗುತ್ತದೆ. ನಮ್ಮ ಪ್ರಯಾಣವೂ ಕೂಡಾ ಅದೇ ರೀತಿ ಆಗಿರುತ್ತದೆ. ನಮ್ಮ ಜೀವನವೂ ಅಷ್ಟೇ ಲಕ್ಷ್ಯದ ಕಡೆ ಇರುತ್ತದೆ. ಹೇಗೋ ಬದುಕೋಣ ಬಿಡು ಎಂದರೆ ಯಾವುದೋ ತಿರುವಿನಲ್ಲಿರುತ್ತದೆ. ಪಾಸಾದರೆ ಸಾಕು ಮುವ್ವತ್ತು ಅಂಕಗಳು ಬಂದರೆ ಸಾಕು ಎಂದರೆ ಅದೇ ಮುವ್ವತ್ತು ಅಂಕಗಳು ಬರುತ್ತದೆ. ಫಸ್ಟ್ಕ್ಲಾಸ್ ಬರುವುದು ನನ್ನ ಲಕ್ಷ್ಯ ಎನ್ನಬೇಕು. ಆಗ ಆ ದಿಶೆಯಲ್ಲಿ ನಮ್ಮ ವಿದ್ಯಾರ್ಜನೆ ಮುಂದುವರೆಯುತ್ತದೆ. ಹಾಗೇ ಡಿಸ್ಟಿಂಕ್ಷನ್ ಬರಬೇಕು 90% ಅಂಕಗಳು ಬರಬೇಕೆಂದುಕೊಂಡರೆ ನಮಗೆ ಸಿಗುವ ಆ ಜ್ಞಾನ, ಬೇರೆಯವರು ನಮಗೆ ನೀಡುವ ಸಹಕಾರ, ಸೃಷ್ಟಿ ನಮಗೆ ಒದಗಿಸಿಕೊಡುವ ಪರಿಸ್ಥಿತಿಗಳು ಎಲ್ಲವೂ ನಮಗೆ ಆ ಡಿಸ್ಟಿಂಕ್ಷನ್ ಕಡೆಗೆ ನಡೆಸುತ್ತವೆ.
ಏನು ವಿದ್ಯಾಭ್ಯಾಸವೋ, ನನಗೆ ಬೇಡ, ನಾನು ವ್ಯಾಪಾರ ಮಾಡಬೇಕು ಎಂದರೆ, ಅವನಿಗೆ ವಿದ್ಯಾಭ್ಯಾಸದ ನಂಟು ತಪ್ಪಿ ಅವನನ್ನು ಕೊಡಲೇ ಶಾಲೆಯಿಂದ ಹೊರ ಹಾಕಲ್ಪಟ್ಟು ಅವನು ವ್ಯಾಪರವೇ ಮಾಡುತ್ತಾನೆ. ನಾನು ಚಿಕ್ಕವನಿದ್ದಾಗ ಧ್ಯಾನಕ್ಕೆ ಬರಬೇಕು, ನನಗೆ ಆತ್ಮಜ್ಞಾನ ಬರಬೇಕು, ನಾನು ಒಬ್ಬ ಬುದ್ಧನಂತೆ, ರಮಣ ಮಹರ್ಷಿಯಂತಾಗಬೇಕು ಎಂಬ ಲಕ್ಷ್ಯವನ್ನು ಇಟ್ಟುಕೊಂಡರೆ ನಮ್ಮ ಜೀವನ ಅದರ ಕಡೆಗೆ ಸಾಗುತ್ತದೆ. ಇಲ್ಲ ನಾನು ದೊಡ್ಡ ಧನವಂತನಾಗಬೇಕು ಟಾಟಾ, ಬಿರ್ಲಾರಂತೆ ಕೋಟ್ಯಾಧೀಶನಾಗಬೇಕು ಎಂಬ ಲಕ್ಷ್ಯವಿಟ್ಟುಕೊಳ್ಳಬೇಕು. ಅಂದರೆ, ಕುದುರೆಗೆ ಅದು ಕಣ್ಣಿಗೆ ಕಡಿವಾಣ ಕಟ್ಟಿ ಬೇರೆ ಯಾವ ದಿಕ್ಕುಗಳೂ ಅದು ನೋಡದಂತೆ ಅದು ಮುನ್ನಡೆಯುವಂತೆ ಮಾಡುತ್ತಾರಲ್ಲವೇ, ಅದೇ ರೀತಿ ಇದೂ ಸಹ. ನಮಗೂ ನಮ್ಮ ಲಕ್ಷ್ಯದ ಕಡೆಗೆ ಗಮನವಿದ್ದರೆ ಬೇರೆ ಕಡೆಗೆ ನಮ್ಮ ಮನಸ್ಸು ಹೊರಳದೇ ನಮ್ಮ ಗುರಿಯನ್ನು ನಾವು ಮುಟ್ಟುತ್ತೇವೆ. ಲಕ್ಷ್ಯವೆನ್ನುವುದು ನಾವು ಮುಂದೆ ಸಾಗುವಂತೆ ಮಾಡುತ್ತದೆ. ನನಗೆ ಸಂಗೀತದ ಹೊರತು ಬೇರೆ ಲಕ್ಷ್ಯವಿಲ್ಲ ಎಂಬುದಿದ್ದರೆ ಸಂಗೀತವನ್ನು ತುಂಬಾ ಚೆನ್ನಾಗಿ ಕಲಿತುಕೊಳ್ಳುತ್ತೇವೆ. ಸಂಗೀತವೂ ಬೇಕು, ಧ್ಯಾನವೂ ಬೇಕು ಎಂಬ ಲಕ್ಷ್ಯವಿದ್ದರೆ ಸಂಗೀತವೂ ಬರುತ್ತದೆ, ಧ್ಯಾನವನ್ನೂ ಕಲಿಯುತ್ತೇವೆ.
ನಿನ್ನ ಸಂಗೀತ ಮತ್ತು ಧ್ಯಾನ ಎರಡಕ್ಕೂ ಪ್ರತಿಬಂಧಕವಾಗುವುದಿಲ್ಲ. ನಾವು ಎಷ್ಟು ಮಾಡುತ್ತೇವೆ ಅಂದುಕೊಳ್ಳುತ್ತೇವೆಯೋ ಅಷ್ಟನ್ನೂ ಮಾಡಬಲ್ಲೆವು. ಎಷ್ಟು ಮಾಡಬಲ್ಲವೆಂಬ ಲಕ್ಷ್ಯದ ಮೇಲೆ ಅದು ಆಧಾರವಾಗಿರುತ್ತದೆ. ನನ್ನ ಕೈಯ್ಯನ್ನು ನೋಡಿ ನನ್ನ ಜಾತಕ ಹೇಳುವಿರಾ ಎಂದು ನನ್ನನ್ನು ಕೇಳುತ್ತಾರೆ. ನಿನ್ನ ಶರೀರವನ್ನೇ ನೋಡುವುದಿಲ್ಲ ನಿನ್ನ ಕೈಯ್ಯನ್ನು ನೋಡಿ ನಾನೇನು ಹೇಳಬಲ್ಲೆ? ನನ್ನ ಜಾತಕ ಹೇಳಿ ಎಂದು ಯಾರಾದರೂ ಕೇಳಿದರೆ ಮೊದಲು ನಿನ್ನ ಗುರಿಯೇನು? ಎಂದು ನಾನು ಕೇಳುತ್ತೇನೆ. ನಿನ್ನ ಗುರಿಯ ಅನುಸಾರವಾಗಿ ನಿನ್ನ ಜೀವನವಿರುತ್ತದೆ. ಜಾತಕವೆಂದರೆ ಜೀವನದ ಗಮ್ಯ, ಜೀವನ ಸಾಫಲ್ಯ. ಅದು ಯಾವ ಕಡೆ ಸಾಗುತ್ತದೆ ಎಂದರೆ ನಿನ್ನ ಲಕ್ಷ್ಯದ ಕಡೆಗೆ ಅದು ಸಾಗುತ್ತದೆ.
ದೇಶಕ್ಕೆ ಸ್ವಾತಂತ್ರ್ಯ ಬೇಕು ಅದಕ್ಕಿಂತ ನನಗೆ ಬೇರೇನೂ ಬೇಕಾಗಿಲ್ಲ ಎಂದರು ಮಹಾತ್ಮ ಗಾಂಧೀಜಿ. ಅವರು ತಮ್ಮ ಮಕ್ಕಳಿಗಾಗಿ ಹುಟ್ಟಲಿಲ್ಲ ದೇಶಕ್ಕಾಗಿ ಹುಟ್ಟಿದರು. ಒಂದು ಲಕ್ಷ್ಯವಿಟ್ಟುಕೊಂಡರು.
ನಾವು ಏನು ಲಕ್ಷ್ಯವಿಟ್ಟುಕೊಂಡಿದ್ದೇವೆಂದರೆ:
ಧ್ಯಾನ ತೆಲಂಗಾಣ, ಧ್ಯಾನ ಕರ್ನಾಟಕ, ಧ್ಯಾನ ಭಾರತ್, ಧ್ಯಾನ ಜಗತ್.
ಸಸ್ಯಾಹಾರ ತೆಲಂಗಾಣ, ಸಸ್ಯಾಹಾರ ಕರ್ನಾಟಕ, ಸಸ್ಯಾಹಾರ ಭಾರತ್, ಸಸ್ಯಾಹಾರ ಜಗತ್.
ಅಹಿಂಸಾ ತೆಲಂಗಾಣ, ಅಹಿಂಸಾ ಕರ್ನಾಟಕ, ಅಹಿಂಸಾ ಭಾರತ್, ಅಹಿಂಸಾ ಜಗತ್.
ಪಿರಮಿಡ್ ತೆಲಂಗಾಣ, ಪಿರಮಿಡ್ ಕರ್ನಾಟಕ, ಪಿರಮಿಡ್ ಭಾರತ್, ಪಿರಮಿಡ್ ಜಗತ್.
ಸ್ವಚ್ಛ ತೆಲಂಗಾಣ, ಸ್ವಚ್ಛ ಕರ್ನಾಟಕ, ಸ್ವಚ್ಛ ಭಾರತ್, ಸ್ವಚ್ಛ ಜಗತ್.
ನೋಡಿದಿರಾ! ನಮ್ಮ ರಾಜ್ಯಗಳು, ನಮ್ಮ ದೇಶ, ನಮ್ಮ ಪ್ರಪಂಚ. ಭಾಗ್ಯ ತೆಲಂಗಾಣ, ಸುವರ್ಣ ಕರ್ನಾಟಕ, ಸೌಭಾಗ್ಯ ಭಾರತ್, ಜಗತ್ ಇವೇ ನಮ್ಮ ಲಕ್ಷ್ಯಗಳು. ನಮ್ಮ ಲಕ್ಷ್ಯ ಹೇಗಿದ್ದರೆ ನಮ್ಮ ಜೀವನ ಹಾಗಿರುತ್ತದೆ. ಗುರಿಯಲ್ಲಿ ನಮಗೆ ಸ್ಪಷ್ಟತೆಯಿರಬೇಕು.
ಸ್ವಾಧ್ಯಾಯ ತೆಲಂಗಾಣ, ಸ್ವಾಧ್ಯಾಯ ಕರ್ನಾಟಕ, ಸ್ವಾಧ್ಯಾಯ ಭಾರತ್, ಸ್ವಾಧ್ಯಾಯ ಜಗತ್.
ಸಜ್ಜನ ಸಾಂಗತ್ಯ ತೆಲಂಗಾಣ, ಸಜ್ಜನ ಸಾಂಗತ್ಯ ಕರ್ನಾಟಕ, ಸಜ್ಜನ ಸಾಂಗತ್ಯ ಭಾರತ, ಸಜ್ಜನ ಸಾಂಗತ್ಯ ಜಗತ್.
ಪ್ರತಿಯೊಬ್ಬನೂ ಧ್ಯಾನಿಯಾಗಬೇಕು, ಸ್ವಾಧ್ಯಾಯಿಯಾಗಬೇಕು ಮತ್ತು ಸಜ್ಜನ ಸಾಂಗತ್ಯ ಮಾಡಬೇಕು. ಈ ಮೂರು ಅಂಶಗಳು ಮುಖ್ಯವಾದವು. ಪಿರಮಿಡ್ ಕಟ್ಟಬೇಕು. ಎಷ್ಟೋ ಪುಸ್ತಕಗಳಿವೆ, ನಾವೆಷ್ಟೊ ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಸ್ವಾಧ್ಯಾಯ ಆಧ್ಯಾತ್ಮಪಥದಲ್ಲಿ ಅತ್ಯಂತ ಮುಖ್ಯವಾದ ಭಾಗ. ಪ್ರತಿಯೊಬ್ಬರೂ ಪುಸ್ತಕಗಳನ್ನು ಓದಬೇಕು. ಸ್ವಾಧ್ಯಾಯ ಮಾಡಬೇಕೆಂಬ ಲಕ್ಷ್ಯವಿರಬೇಕು. ಒಬ್ಬ ಆಧ್ಯಾತ್ಮಿಕ ಶಾಸ್ತ್ರಜ್ಞರಾಗಬೇಕೆಂಬ ಗುರಿಯಿರಬೇಕು. ಆಧ್ಯಾತ್ಮಿಕಶಾಸ್ತ್ರವಿಜ್ಞಾನಿ ಆಗಬೇಕೆಂಬ ಲಕ್ಷ್ಯವಿರಬೇಕು. ನಾನು ಹಾಗೆಯೇ ಆಗಬೇಕೆಂದುಕೊಂಡೆ ನಾನು ಆಧ್ಯಾತ್ಮಿಕಶಾಸ್ತ್ರವಿಜ್ಞಾನಿಯಾಗಿದ್ದೇನೆ.
ನಾನು ವೇಣುವಾದನದಲ್ಲಿ ಹರಿಪ್ರಸಾದ್ ಚೌರಾಸಿಯಾರಂತೆ ಆಗಬೇಕು, ಪನ್ನಾಲಾಲ್ ಘೋಷ್ರಂತೆ ಆಗಬೇಕು ಎಂದು ನಾನು ಲಕ್ಷ್ಯವಿಟ್ಟುಕೊಂಡಿದ್ದರೆ ನಾನು ಅದೇ ವಿಧವಾಗಿರುತ್ತಿದ್ದೆ. ಆದರೆ ನನಗೆ ಬೇಕಾದ್ದು ಆಧ್ಯಾತ್ಮಿಕತೆ, ಸ್ಪಿರಿಚ್ಯುವಲ್ ಸೈನ್ಸ್ನ್ನು ಎಲ್ಲರಿಗೂ ಹೇಳಬೇಕು. ಪ್ರತಿಯೊಬ್ಬರನ್ನೂ ಸ್ಪಿರಿಚ್ಯುವಲ್ ಸೈಂಟಿಸ್ಟ್ ಮಾಡುವುದೇ ನನ್ನ ಲಕ್ಷ್ಯ. ನಮಗೆ ಏನುಬೇಕು ಎಂದು ನಾವೆಂದುಕೊಳ್ಳುತ್ತೇವೋ ಆ ಕಡೆಗೆ ನಮ್ಮ ಜೀವನ ಸಾಗುತ್ತದೆ.
ಧ್ಯಾನ ಭಾರತ್, ಸಜ್ಜನ ಸಾಂಗತ್ಯ, ಸ್ವಾಧ್ಯಾಯ ಭಾರತ್, ಸಸ್ಯಾಹಾರ ಭಾರತ್, ಅಹಿಂಸಾ ಭಾರತ್, ಪಿರಮಿಡ್ ಭಾರತ್, ಸ್ವಚ್ಛ ಭಾರತ್ ಇವೇ ನಮ್ಮ ಲಕ್ಷ್ಯಗಳು. ನಮ್ಮ ಗುರಿಯನ್ನು ನೆರವೇರಿಸಿಕೊಳ್ಳಬೇಕಾದಂತಹ ಶಕ್ತಿ ನಮಗೆ ಧ್ಯಾನದಲ್ಲಿ ಸಿಗುತ್ತದೆ. ನಾವೆಷ್ಟು ಧ್ಯಾನ ಮಾಡುತ್ತೇವೋ ಅಷ್ಟು ಶಕ್ತಿಯನ್ನು ನಾವು ಸಂಪಾದಿಸಿಕೊಳ್ಳುತ್ತೇವೆ. ಯಾವುದಕ್ಕೆ ನಮಗೆ ಶಕ್ತಿಬೇಕು? ನಮ್ಮ ಗುರಿಯ ಕಡೆಗೆ, ನಮ್ಮ ಗಮನ ಸರಿಯಾಗಿ ಸಾಗಬೇಕು. ನಮ್ಮ ಲಕ್ಷ್ಯ ಸ್ಪಷ್ಟವಾಗಿರಬೇಕು. ತಪಸ್ಸೆಲ್ಲಾ ಮಾಡಿದ ಮೇಲೆ ಶಿವನೋ, ಬ್ರಹ್ಮನೋ ಬಂದು ಭಕ್ತ ನಿನ್ನ ಕೋರಿಕೆಯೇನು ಎಂದು ಕೇಳಿದಾಗ ಏನೋ ಸ್ವಾಮಿ ನನಗೇನೋ ತಿಳಿಯದು ಎಂದರೆ ಆಗ ಹೌದಾ ಮಗೂ ನಾನು ಮತ್ತೆ ಬರುತ್ತೇನೆ ಎಂದು ಹೊರಟುಹೋಗುತ್ತಾನೆ.
ಭಕ್ತ ನಿನಗೇನು ಬೇಕು ಎಂದು ಕೇಳಿದಾಗ, ನಿನಗೇನು ಬೇಕೆಂದು ನೀನು ತಿಳಿದುಕೊಂಡಿರಬೇಕು. ಅದನ್ನು ಸರಿಯಾಗಿ ವ್ಯಕ್ತಪಡಿಸಬೇಕು. 20,30ವರ್ಷಗಳಿಂದ ನನಗೇನು ಬೇಕೋ ನನಗೆ ಗೊತ್ತು. ಪ್ರತಿಯೊಬ್ಬನೂ ಸಸ್ಯಾಹಾರಿಯಾಗಬೇಕು ಅದೇ ನನ್ನ ಗುರಿ. ಕಟ್ಟಕಡೆಯ ಮನುಷ್ಯ ಸಸ್ಯಾಹಾರಿಯಾಗುವವರೆಗೂ ನಾನು ಶರೀರವನ್ನು ಬಿಡುವುದಿಲ್ಲ. ನಾನು 70 ವರ್ಷ ಜೀವಿಸಿದರೆ ಸಾಕು ಎಂದರೆ ಅಷ್ಟೇ ವರ್ಷಗಳು ಜೀವಿಸುತ್ತೇವೆ. , 100.150 ವರ್ಷಗಳು ಜೀವಿಸಬೇಕೆಂದು ನಮ್ಮ ಗುರಿಯಿದ್ದರೆ ನಾವು ಅಷ್ಟು ದಿನಗಳೇ ಜೀವಿಸುತ್ತೇವೆ. ನಮ್ಮ ಜೀವನ ಯಾವಾಗಲೂ ನಮ್ಮ ಲಕ್ಷ್ಯದ ಕಡೆಗೆ ಸಾಗುತ್ತದೆ. ನಮ್ಮ ಜೀವನ ನಮ್ಮ ಇಷ್ಟ, ಬೇರೆಯವರ ಇಷ್ಟಾನಿಷ್ಟಗಳ ಮೇಲೆ ನಮ್ಮ ಜೀವನ ನಿರ್ಧಾರಿತವಾಗಿರುವುದಿಲ್ಲ. ಬೇರೆಯವರು ನೀನು ಧ್ಯಾನ ಮಾಡಬೇಡ ಎಂದರೆ ನಾವು ಮಾಡದೇ ಇರುತ್ತೇವೆಯೇ? ಇಲ. ಯಾರು ಧ್ಯಾನ ಮಾಡದಿದ್ದರೂ ನಾವು ಧ್ಯಾನ ಮಾಡುತ್ತೇವೆ. ಎಲ್ಲರೂ ಮಾಂಸಹಾರಿಗಳಾದರೂ ನಾವು ಸಸ್ಯಾಹಾರಿಗಳಾಗಿರುತ್ತೇವೆ. ಮಹಾತ್ಮ ಗಾಂಧಿಯವರು ಇಂಗ್ಲೆಂಡ್ಗೆ ಹೋದಾಗ ಅವರ ಮನೆಯವರು ಭಯಗೊಂಡರು ಅವರು ಯಾವ ಮಾಂಸವನ್ನು ತಿನ್ನುತ್ತಾರೋ ಎಂದು. ಆದರೆ ಗಾಂಧೀಜಿಯವರು ಇಂಗ್ಲೆಂಡ್ಗೆ ಹೋಗಿ ಬಂದರೂ ಶುದ್ಧಸಸ್ಯಾಹಾರಿಗಳಾಗಿಯೇ ಇದ್ದರು. ಮಹಾತ್ಮಾ ಗಾಂಧೀಜಿಯವರು ಆ ದಿನಗಳಲ್ಲಿ ಇಂಗ್ಲೆಂಡ್ಗೆ ಹೋಗಿ ಬಂದರು. ತಮ್ಮ ಸಿದ್ಧಾಂತಕ್ಕೆ ಕಟ್ಟು ಬಿದ್ದಿದ್ದರು. ಸಾಸಿವೆ ಕಾಳಷ್ಟು ಸಹ ವಿಚಲಿತರಾಗಲಿಲ್ಲ. ಪಿರಮಿಡ್ ಮಾಸ್ಟರ್ಗಳ ಲಕ್ಷ್ಯವೇನು? ಧ್ಯಾನ, ಸಜ್ಜನಸಾಂಗತ್ಯ, ಸ್ವಾಧ್ಯಾಯ, ಸಸ್ಯಾಹಾರ, ಅಹಿಂಸಾ ಭಾರತ್, ಪಿರಮಿಡ್ ಭಾರತ್, ಸ್ವಚ್ಛ ಭಾರತ್.
ಈ ಲಕ್ಷ್ಯಕ್ಕೋಸ್ಕರವೇ ನಮ್ಮ ಜೀವನವಿದೆ. ನಮ್ಮ ಜೀವನವೂ ಸಾಗುತ್ತಿದೆ ಕೂಡಾ. ಆ ಲಕ್ಷ್ಯ ಸಾಧಿಸುವುದಕ್ಕಾಗಿ ನಾವು ಈ ಶರೀರದಲ್ಲಿರುತ್ತೇವೆ. ನಾನು 2095 ರವರೆಗೆ ಇರಬೇಕೆಂಬ ಲಕ್ಷ್ಯವನ್ನು ನಾನು ಹೊಂದಿದ್ದೇನೆ. ನಾನು ಆ ಲಕ್ಷ್ಯ ಹೊಂದಿದ್ದರೆ ನನಗಿನ್ನು ಯಾವ ಖಾಯಿಲೆಗಳು ಬಾರದು.2095ನೇ ಇಸವಿಗೆ ಎಲ್ಲಾ ನಮ್ಮ ಪಿರಮಿಡ್ ಮಾಸ್ಟರ್ಗಳ ಲಕ್ಷ್ಯಗಳು ನೆರವೇರುತ್ತವೆ. ನಮಗೆ ಧ್ಯಾನ ಭಾರತ ಬೇಕು, ಸಜ್ಜನ ಸಾಂಗತ್ಯ ಭಾರತ್, ಸ್ವಾಧ್ಯಾಯ ಭಾರತ್, ಪಿರಮಿಡ್ ಭಾರತ ಬೇಕು. ಪಿರಮಿಡ್ನಲ್ಲಿ ಮಾಡುವ ಧ್ಯಾನ ಮೂರುಪಟ್ಟು ಹೆಚ್ಚು ಶಕ್ತಿಯುತವಾಗಿರುತ್ತದೆ. ಪ್ರತಿಯೊಂದು ಮನೆಯಲ್ಲಿ ಪಿರಮಿಡ್ ಇರಬೇಕು. ದೇವಾಲಯಗಳು ಹಿಂದೂಗಳಿಗೆ, ಮಸೀದಿಗಳು ಮುಸ್ಲಿಮರಿಗೆ, ಚರ್ಚ್ ಕ್ರಿಸ್ಟಿಯನ್ನರಿಗೆ, ಗುರುದ್ವಾರ ಸಿಖ್ಖರಿಗೆ, ಆದರೆ, ಪಿರಮಿಡ್ ಎಲ್ಲಾ ಮತದವರಿಗೂ ಇದೆ. Pyramid is the symbol for stability, pyramid is the symbol for seymbol for secularism, pyramid is te for all sides becomind is symbol ವಿಧವಿಧವಾದ ಕಟ್ಟಡಗಳಲ್ಲಿ ಒಂದು ಪಿರಮಿಡ್ ಇದೆ ಎಂದುಕೊಳ್ಳಿ. ನಮ್ಮ ಕಣ್ಣುಗಳು ಪಿರಮಿಡ್ ಕಡೆಗೆ ಹೋಗುತ್ತವೆ.
ತಿಂದರೆ ವಡೆಗಳನ್ನೇ ತಿನ್ನಬೇಕು, ಕೇಳಿದರೆ ಮಹಾಭಾರತವನ್ನೇ ಕೇಳಬೇಕು, ಕಟ್ಟಿದರೆ ಪಿರಮಿಡ್ನ್ನೇ ಕಟ್ಟಬೇಕು. ನಮ್ಮ ಸಮಯವು ಏಕೆ ಇದೆ ಎಂದರೆ, ಧ್ಯಾನ ಮಾಡಿಕೊಳ್ಳಲು. ನಮ್ಮ ಬುದ್ಧಿ ಏಕಿದೆ ಸಸ್ಯಾಹಾರಿಯಾಗಲು, ನಮ್ಮ ಹಣ ಪಿರಮಿಡ್ ಕಟ್ಟುವುದಕ್ಕಾಗಿ ಇದೆ. ಪ್ರತಿ ಮನೆಯಲ್ಲೂ ಪಿರಮಿಡ್ ಇರಲಿ, ಧ್ಯಾನವಿರಲಿ, ಪ್ರತಿ ವ್ಯಕ್ತಿಯೂ ಬುದ್ಧನಾಗಲಿ, ಶ್ವಾಸದ ಆಧಾರದ ಮೇಲೆ ನಾವು ಬುದ್ಧರಾಗುತ್ತೇವೆ.
‘ಉಸಿರೇ ಗುರು’ವಾದರೆ ಮನಸ್ಸು ಗುರುವಿನ ಗುಲಾಮನಾಗುತ್ತಾನೆ. ಬಾಯಿ ಮುಚ್ಚಿದರೆ ಮೌನ, ಮನಸ್ಸು ನಿಂತರೆ ಧ್ಯಾನ. ಯೋಗಃ ಚಿತ್ತವೃತ್ತಿ ನಿರೋಧಃ. ಚಿತ್ತವೃತ್ತಿಯನ್ನು ನಿಲ್ಲಿಸುವುದೇ ಯೋಗ. ಶ್ವಾಸದೊಂದಿಗೆ ಮಿಲನವಾದ ತಕ್ಷಣವೇ ನೀನು ಯೋಗಿಯಾಗುವೆ. ನಿನ್ನ ಜೀವನ ನಿನ್ನ ಮೇಲೆ ನಿರ್ಧಾರಿತವಾಗಿದೆ. ನನ್ನ ಜೀವನ ನೀನು ನಿರ್ಧರಿಸುವಂತಿಲ್ಲ. ನಮಗೆ ೨೪ ಗಂಟೆಗಳಿವೆ ಒಂದು ದಿನಕ್ಕೆ, ಆ ಸಮಯವನ್ನು ನಾವೇನು ಮಾಡುತ್ತಿದ್ದೇವೆ? ಒಂದು ಗಂಟೆ ಧ್ಯಾನ, ಒಂದು ಗಂಟೆ ಸ್ವಾಧ್ಯಾಯ, ಒಂದು ಗಂಟೆ ಸಜ್ಜನಸಾಂಗತ್ಯ, ಒಂದು ಗಂಟೆ ಸಂಗೀತ ಕೇಳೋಣ. ಬಿಸ್ಮಿಲ್ಲಾ ಖಾನ್, ಪಂಡಿತ್ ರವಿಶಂಕರ್ರವರ ಸಂಗೀತ ಕೇಳೋಣ, ಸಂಗೀತ ಕೇಳಬೇಕು. ಸಂಗೀತವನ್ನು ೨೪ ಗಂಟೆಗಳ ಕಾಲವೂ ಮನೆಯಲ್ಲಿ ಕೇಳುತ್ತಾ ಇರಬೇಕು. ಕೆಲಸಮಾಡಿಕೊಳ್ಳಿ, ಅಡುಗೆ ಮಾಡಿಕೊಳ್ಳಿ, ಒಂದು ಕಡೆ ಯಾವಾಗಲೂ ಸಂಗೀತವಿರಲಿ. ಕಣ್ಣುಗಳಿಗೆ ರೆಪ್ಪೆಗಳಿವೆ ಮುಚ್ಚಲು, ಕಿವಿಗಳಿಗೆ ಇಲ್ಲವಲ್ಲಾ. ಬಾಯಿಗೆ ತುಟಿಗಳಿವೆ ಮುಚ್ಚಲು, ಆದರೆ, ಕಿವಿಗಳಿಗೆ ಇಲ್ಲ. ನೀವು ಯಾವಾಗಲೂ ಸಂಗೀತವನ್ನು ಆಲಿಸಬಹುದು.
24 ಗಂಟೆಗಳ ಕಾಲ ನಾನು ಯಾವ ಕೆಲಸವನ್ನಾದರೂ ಮಾಡಬಹುದು, ಯಾವ ಕಲೆಯನ್ನು ಬೇಕಾದರೂ ಕಲಿಯಬಹುದು. ನಾನು ಸಕಲ ಕಲಾಕೋವಿದ ಪಾರಂಗತನಾಗಬೇಕು ಎಂಬ ಲಕ್ಷ್ಯವಿಟ್ಟುಕೊಳ್ಳಬೇಕು. ನಿನ್ನ ಗುರಿ ಬದಲಾದರೆ, ನಿನ್ನ ಜೀವನ ಬದಲಾಗುತ್ತದೆ. ಪುಸ್ತಕಗಳನ್ನು ಓದಬೇಕು. ನೀವು ಪುಸ್ತಕಗಳನ್ನು ಓದದಿದ್ದರೆ ನಿಮಗೆ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಬಾವಿಯಲ್ಲಿನ ಕಪ್ಪೆಯಂತೆ ಇರುತ್ತೇವೆ. ನೀವು ಎಲ್ಲಾ ಮಾಸ್ಟರ್ಗಳ ಪುಸ್ತಕಗಳನ್ನು ಓದಬೇಕು. ಎಲ್ಲಾ ಗುರುಗಳು ಹೇಳಿದ್ದನ್ನು ಪರಿಶೀಲಿಸಬೇಕು. ಒಬ್ಬ ಗುರುವಿಗೇ ಸೀಮಿತವಾಗಿ ಇರಬೇಡಿ. ವಿಧವಿಧವಾದ ಹಣ್ಣುಗಳನ್ನು, ಹೂಗಳನ್ನು ಆಸ್ವಾದಿಸುತ್ತೇವೆ. ಹಾಗೆ ವಿಧವಿಧವಾದ ಗುರುಗಳಿಂದ ಕಲಿಯಬೇಕು.
ಎಲ್ಲಾ ಗುರುಗಳೂ ಮಹನೀಯರೇ. ನಾವು ಎಲ್ಲಾ ಗುರುಗಳಿಂದಲೂ ಕಲಿಯಬೇಕು. ಮಾವಿನ ಹಣ್ಣು ಒಳ್ಳೆಯದೋ, ಪಪ್ಪಾಯ ಒಳ್ಳೆಯದಾ? ನಾವು ಒಂದೇ ಹಣ್ಣನ್ನು ಮಾತ್ರ ತಿನ್ನುವುದು ಎಂದರೆ ಇನ್ನೊಂದರ ರುಚಿಯನ್ನು ಕಳೆದುಕೊಳ್ಳುವೆವು. ನೀವು ಒಬ್ಬರೇ ಗುರುವನ್ನು ಆಯ್ಕೆಮಾಡಿಕೊಂಡರೆ ನೀವು ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಳ್ಳುತ್ತೀರಿ. ಪ್ರತಿಯೊಬ್ಬ ಮಾಸ್ಟರ್ರನ್ನು ನೀವು ತಿಳಿದುಕೊಳ್ಳಬೇಕು. ಯಾವುದೇ ಗುರುವನ್ನು ನೀವು ಅದು ಹೇಗೆ ಬಿಟ್ಟುಬಿಡುತ್ತೀರಿ? ನಾವು ಎಲ್ಲಾ ಗುರುಗಳ ಬಳಿ ಕಲಿಯಬೇಕು. ಅದಕ್ಕಾಗಿ ಎಲ್ಲಾ ಗುರುಗಳ ಪುಸ್ತಕಗಳನ್ನು ಓದಿ.
Recent Comments