“ಧ್ಯಾನದಿಂದಲೇ ಜ್ಞಾನ ಜ್ಞಾನದಿಂದಲೇ ಮುಕ್ತಿ”
ಧ್ಯಾನ ಎಂದರೆ ಶ್ವಾಸದ ಮೇಲೆ ಗಮನ
ಶ್ವಾಸದ ಮೇಲೆ ಗಮನದಿಂದಲೇ ಚಿತ್ತವೃತ್ತಿ ನಿರೋಧ.
ಚಿತ್ತವೃತ್ತಿ ನಿರೋಧದಿಂದಲೇ ವಿಶ್ವಶಕ್ತಿ ಆವಾಹನೆ.
ವಿಶ್ವಶಕ್ತಿ ಆವಾಹನೆಯಿಂದಲೇ ನಾಡೀಮಂಡಲ ಶುದ್ಧಿ.
ನಾಡೀಮಂಡಲ ಶುದ್ಧಿಯಿಂದಲೇ ದಿವ್ಯಚಕ್ಷುವು ಉತ್ತೇಜಿತವಾಗುತ್ತದೆ.
ಇದೆಲ್ಲಾ ಸೇರಿ ‘ಧ್ಯಾನ’ ಎನ್ನುತ್ತ್ತಾರೆ.
ನಂತರ ಜ್ಞಾನ
ಜ್ಞಾನ ಎಂದರೆ ಮಾತಿನ ಮೇಲೆ ಗಮನ .
ಮಾತಿನ ಮೇಲಿನ ಗಮನ ದಿಂದಲೇ ಮಾತಿನ ಮೇಲೆ ಹಿಡಿತ ;
ಮಾತಿನ ಮೇಲಿನ ಗಮನ ದಿಂದಲೇ ಮಾತಿನಲ್ಲಿ ಶುದ್ಧಿ .
ಧ್ಯಾನದಿಂದಲೇ ಜ್ಞಾನ
ಎಂದರೆ ಶ್ವಾಸದ ಮೇಲೆ ಗಮನ ದಿಂದಲೇ
ಮತ್ತೆ ಮಾತಿನ ಮೇಲೆ ಗಮನ ಎಂಬುವುದು ಸಂಭವ.
ನಾಡೀಮಂಡಲ ಶುದ್ಧಿ ಯಿಂದಲೇ ವಾಕ್ಶುದ್ಧಿ ಸಂಭವ.
ನಂತರ ಮುಕ್ತಿ
ಮುಕ್ತಿ ಎಂದರೆ ಆತ್ಮಸಿದ್ಧಿ .
ಜ್ಞಾನಾನ್ ಮುಕ್ತಿಃ , ಎಂಬುವುದು ಸಾಂಖ್ಯ;
ಎಂದರೆ ಮಾತಿನಲ್ಲಿ ಶುದ್ಧಿಯಿಂದಲೇ ಆತ್ಮಸಿದ್ಧಿ ಎನ್ನುವುದು.
ಆತ್ಮಸಿದ್ಧಿ ಎಂದರೆ ಆತ್ಮದ ಲಾಭ , ಆತ್ಮದ ಪ್ರಾಪ್ತಿ .
ಮಾತು ಶುದ್ಧಿ ಇರಬೇಕಣ್ಣೊ ಅಣ್ಣಂದಿರೇ, ಆತ್ಮಸಿದ್ಧಿ ಆಗಬೇಕಣ್ಣೊ.
Recent Comments