“ಧ್ಯಾನಗ್ರಾಮಿಣ”

ನಾವು 2004 ವರ್ಷಾಂತ್ಯದಲ್ಲಿ ಆಂಧ್ರರಾಷ್ಟ್ರದಲ್ಲಿರುವ ಎಲ್ಲಾ ಪಟ್ಟಣಗಳಲ್ಲಿ “ಧ್ಯಾನಾಂಧ್ರಪ್ರದೇಶ್” ಕಾರ್ಯಕ್ರಮ ಮುಗಿಸಿದ್ದೇವೆ.

ಪ್ರಸ್ತುತ ಆಂಧ್ರ ರಾಜ್ಯದಲ್ಲಿ ಎಲ್ಲಾ ಪಟ್ಟಣಗಳಲ್ಲೂ, ಎಲ್ಲಾ ನಗರಗಳಲ್ಲೂ ಧ್ಯಾನವು ತಲುಪಿದೆ. ಪ್ರಸ್ತುತ ಆಂಧ್ರರಾಜ್ಯದಲ್ಲಿ ಮುಖ್ಯ ಪಟ್ಟಣ, ನಗರಗಳಲ್ಲಿ ಧ್ಯಾನದ ಕುರಿತು ತಿಳಿಯದವರು ಇಲ್ಲ. ಆಂಧ್ರರಾಜ್ಯದಲ್ಲಿರುವ ಎಲ್ಲಾ ಪಟ್ಟಣ, ನಗರಗಳಲ್ಲಿ ಅನೇಕ ಪಿರಮಿಡ್ ಧ್ಯಾನ ಕೇಂದ್ರಗಳು ಸ್ಥಾಪಿಸಲಾಗಿವೆ. ಸಾವಿರಾರು ಜನ ಪಿರಮಿಡ್ ಧ್ಯಾನಬೋಧಕರು … ಪಿರಮಿಡ್ ಮಾಸ್ಟರ್ಸ್ … ವಿಶೇಷ ರೀತಿಯಲ್ಲಿ ಪರಿಣತಿ ಹೊಂದಿದ್ದಾರೆ.

 

“ಎಲ್ಲಾ ಗ್ರಾಮಗಳಲ್ಲೂ ಧ್ಯಾನಸಾಧನೆ”

ಆದರೆ, ಹಳ್ಳಿಗಳಲ್ಲಿ ಈಗಲೂ ಎಲ್ಲರೂ ಆಧ್ಯಾತ್ಮಿಕತೆ ಎಂದರೆ ವಿಗ್ರಹಪೂಜೆ ಎಂದು ತಿಳಿಯುತ್ತಿದ್ದಾರೆ. ಆದರೆ ಆಧ್ಯಾತ್ಮಿಕತೆ ಎಂದರೆ ಆತ್ಮಾನುಭವಕ್ಕಾಗಿ ಏಕಾಂತವಾಗಿಯೂ … ಸಾಮೂಹಿಕವಾಗಿಯೂ … ದೀಕ್ಷೆಯಿಂದ ಕೂಡಿ ಮಾಡಬೇಕಾದ ಧ್ಯಾನಸಾಧನೆ ಎಂದು ಇನ್ನು ತಿಳಿದುಕೊಳ್ಳದೇ ಇದ್ದಾರೆ.

ಇನ್ನು ಪ್ರತಿಯೊಂದು ಗ್ರಾಮದ ಹಂತದಲ್ಲಿಯೂ ಪಿರಮಿಡ್ ಧ್ಯಾನ ಬರಲೇಬೇಕು. ಎಲ್ಲಾ ಗ್ರಾಮಗಳಲ್ಲೂ ತಪ್ಪದೇ ಪಿರಮಿಡ್‌ಗಳು ನಿರ್ಮಿಸಲ್ಪಡಬೇಕು. ಗ್ರಾಮಪ್ರಜೆಗಳೆಲ್ಲರೂ ಪ್ರತಿದಿನ ಸಾಮೂಹಿಕವಾಗಿ ಧ್ಯಾನ ಮಾಡಿಕೊಳ್ಳುವ ದಿನಗಳು ಬರಬೇಕು.

 

“ಅವರವರ ಆರೋಗ್ಯ ಅವರವರ ಕೈಯಲ್ಲೇ”

ಗ್ರಾಮಗಳಲ್ಲಿ ನಿವಾಸಮಾಡುವ ಜನರು ಬಡಜನರು. ಅದೂ ಅಲ್ಲದೆ ಬೀಡಿ ಸೇದುವುದು, ಮದ್ಯವನ್ನು ಸೇವಿಸುವುದು ಮುಂತಾದ ಕೆಟ್ಟ ಹವ್ಯಾಸಗಳು ಬಡ ಗ್ರಾಮ ಪ್ರಜೆಗಳನ್ನು ಇನ್ನೂ ಹೆಚ್ಚಾಗಿ ಕೆಳಮಟ್ಟಕ್ಕೆ ಇಳಿಸುತ್ತಿವೆ. ಅದರಲ್ಲೂ ಗ್ರಾಮ ಪ್ರಜೆಗಳು ತುಂಬಾ ಅಮಾಯಕರು. ಅವರನ್ನು ಪಟ್ಟಣದ ವೈದ್ಯರು ಅನ್ಯಾಯವಾಗಿ ದೋಚಿಕೊಳ್ಳುತ್ತಿದ್ದಾರೆ. ಅವರಿಂದ ಹಳ್ಳಿ ಜನ ಒದ್ದಾಡುತ್ತಿದ್ದಾರೆ. ಗ್ರಾಮಗಳಲ್ಲಿ ಎಲ್ಲರೂ ಸಹ ವೈದ್ಯಕೀಯ ಸೌಲಭ್ಯಕ್ಕಾಗಿ ಪಟ್ಟಣಗಳಿಗೆ ಹೋಗುವುದು ಸಂಪೂರ್ಣವಾಗಿ ನಿಲ್ಲಿಸಬೇಕು.

ಆರೋಗ್ಯಕ್ಕೆ ಯಾವ ವೈದ್ಯರ ಅವಶ್ಯಕತೆಯೂ ಇಲ್ಲ. ಯಾವ ಔಷಧಿಗಳೂ ಸೇವಿಸಬೇಕಾಗಿಲ್ಲ … ಮುಖ್ಯವಾಗಿ ಆಲ್ಲೋಪತಿ ಔಷಧಿಗಳು. ನಮ್ಮ ಪಾಪಗಳೇ ನಮ್ಮ ರೋಗಗಳು. ನಮ್ಮ ಪುಣ್ಯಗಳೇ ನಮ್ಮ ಆರೋಗ್ಯಗಳು.

ಗ್ರಾಮ ಪ್ರಜೆಗಳೆಲ್ಲರಿಗೂ ಅವರವರ ಆರೋಗ್ಯ ಅವರ ಕೈಯಲ್ಲೇ ಇದೆ ಎಂದು ಕಡಾಖಂಡಿತವಾಗಿ ತಿಳಿಯಪಡಿಸಿ ಅವರ ಆರೋಗ್ಯವನ್ನು ಅವರೇ ಕಾಪಾಡಿಕೊಳ್ಳುವ ರೀತಿಯಲ್ಲಿ ಅವರಿಂದ ಧ್ಯಾನಸಾಧನೆ ಮಾಡಿಸಬೇಕು.

ಗ್ರಾಮೀಣ ಪ್ರದೇಶಗಳಲ್ಲಿ ಬಡ ಪ್ರಜೆಗಳಿಗೆ ನಿಜವಾದ ತರುಣೋಪಾಯ ಮಾರ್ಗ ಧ್ಯಾನವೇ. ಶ್ವಾಸದ ಮೇಲೆ ಗಮನದ ಮೂಲಕ ದೇಹ ಆರೋಗ್ಯವನ್ನೂ, ಬ್ರಹ್ಮಾನಂದವನ್ನೂ ಗ್ರಾಮ ಪ್ರಜೆಗಳೆಲ್ಲರೂ ವಿಧಿಯಾಗಿ ಅನುಭವಿಸಬೇಕು. ಇದಕ್ಕೆ ಪಿರಮಿಡ್ ಮಾಸ್ಟರ್ಸ್ ಎಲ್ಲರೂ ಪ್ರತ್ಯೇಕವಾಗಿ ಶ್ರಮಿಸಬೇಕು. ಪಿರಮಿಡ್ ಮಾಸ್ಟರ‍್ಸ್ ಅವರ ಸುತ್ತಮುತ್ತಲ ಗ್ರಾಮಗಳನ್ನು ಧ್ಯಾನ ಗ್ರಾಮಗಳಾಗಿ ಮಾಡಬೇಕು. ಇದ್ದಕ್ಕೆ ಪಿರಮಿಡ್ ಮಾಸ್ಟರ‍್ಸ್ ಕಂಕಣಬದ್ಧರಾಗಬೇಕು