“ಧ್ಯಾನಕ್ಕಿಂತಾ ಮುಂಚೆ, ತದನಂತರ”
’ಕೋರಿಕೆ ’ಗೂ, ’ ಅವಶ್ಯಕತೆ ’ಗೂ ಇರುವ ವ್ಯತ್ಯಾಸವೇನೆಂದರೆ ಪ್ರಕೃತಿ ನಮ್ಮ ಅವಶ್ಯಕತೆಗಳನ್ನು ತೀರಿಸುತ್ತದೆ. ನಾವು ನಮ್ಮ ಆಧ್ಯಾತ್ಮಿಕ ಅವಶ್ಯಕತೆಗಳನ್ನು ತೀರಿಸಿಕೊಂಡರೆ, ನಮ್ಮ ಪ್ರಾಪಂಚಿಕ ಅವಶ್ಯಕತೆಗಳೆಲ್ಲಾ ತೀರುತ್ತವೆ. ಅದರಿಂದ ನಮ್ಮ ಪ್ರಾಪಂಚಿಕ ಕೋರಿಕೆಗಳೂ ನೆರವೇರುತ್ತವೆ. ಅದಕ್ಕೇ ’ ಧ್ಯಾನಿ ’ ಆಗದಿರುವವನು ’ ಭೋಗಿ ’ ಆಗಲಾರ. ”
ಯಕ್ಷನು ಧರ್ಮರಾಜನಿಗೆ ಒಂದು ಪ್ರಶ್ನೆ ಹಾಕಿದನು ಸೃಷ್ಟಿಯಲ್ಲಿ ಅತ್ಯಂತ ಆಶ್ಚರ್ಯಕರವಾದ ವಿಷಯವೇನು ? ಧರ್ಮರಾಜ ಅದಕ್ಕೆ ಉತ್ತರ ಮೃತ್ಯುವು ಎಂದು ನೀಡಿದನು. ನಿಜವಾಗಲೂ ಮೃತ್ಯುವು ತುಂಬಾ ಆಶ್ಚರ್ಯಕರವಾದದ್ದು. ಎಲ್ಲರಿಗೂ ಬರುತ್ತಿರುವ ಆ ಮೃತ್ಯುವು ನನಗೆ ಬರುವುದಿಲ್ಲ ಎಂದು ಅಂದುಕೊಳ್ಳುತ್ತಾನೆ ಅದೇ ಆಶ್ಚರ್ಯ. ಸಾವಿಲ್ಲದ ಜೀವನ, ಜೀವನವಿಲ್ಲದ ಸಾವು, ಎಲ್ಲೂ ಇಲ್ಲ.
ಧ್ಯಾನ ಮಾಡದಿರುವವನು ‘B.C’ ಕಾಲದವನು.. ’B.C’ ಅಂದರೆ, ’BeforeChrist’. ಅಂದರೆ, ’Before Christ Consciousness, ಅಂದರೆ, ಜ್ಞಾನದಯವಾಗದ ಹಿಂದಿನ ಕಾಲದವನು. ಅಂದರೆ, ಆತ್ಮಜ್ಞಾನವನ್ನು ಹೊಂದದೇ ಇರುವವರೆಲ್ಲರೂ ’B.C.’ ಕಾಲದವರೇ. ಜ್ಞಾನೋದಯ ಹೊಂದದಿರುವವನು, ಕುಟುಂಬದಲ್ಲಿ ಯಾರು ಮರಣಿಸಿದರೂ ಅಳುತ್ತಿರುತ್ತಾನೆ. ಪ್ರತಿಯೊಂದಕ್ಕೂ ಅಳುತ್ತಿರುವುದೇ ಇವನ ಲಕ್ಷಣ. ಧ್ಯಾನ ಮಾಡಿದವನು ’A.D.’ ಕಾಲದವನು. ಅಂದರೆ, ’After Death’ ಕಾಲದವನು. ನೀನು ಪ್ರಾಣಬಿಟ್ಟರೇನೆ ಪುನಃ ಜೀವಿಸಲಾಗುವುದು. ಧ್ಯಾನ ಮಾಡುವವನು ಮರಣಿಸಿ, ನೂತನ ಜನ್ಮವನ್ನು ಪಡೆದಿರುವವನು. ಧ್ಯಾನ ಮಾಡುವವನು. ಸಾವು ಎಂದರೆ ಒಂದು ತಮಾಷೆ ಎಂದು ತಿಳಿದಿರುವವನು. ಸಾವು ಎಂದರೆ ಭಯ ಎಂದುಕೊಳ್ಳುವವನು ’B.C.’ ಕಾಲದವನು. ’ ಸಾವು ’ ಎಂಬುವುದೇ ಇಲ್ಲ ಎಂದು ತಿಳಿದುಕೊಂಡಿರುವವನು ’A.D.’ ಕಾಲದವನು.
ಹೊಸತನವೇ ಒಂದು ಉತ್ಸವ. ಎಲ್ಲಿ ಧ್ಯಾನವಿದೆಯೋ ಅಲ್ಲಿ ನಿತ್ಯ ಹೊಸತನವಿರುತ್ತದೆ. ನಿನ್ನ ಸರಿಯಾದ ವಾಕ್ಕುಗಳಿಂದ ಇತರರನ್ನು ಒಂದು ಸುಂದರ ಶಿಲ್ಪದ ಹಾಗೆ ರೂಪಿಸಿಕೊಳ್ಳಬೇಕು. ಗೌತಮಬುದ್ಧನು ಅನೇಕರನ್ನು ತನಗೆ ಬೇಕಾಗಿರುವ ರೀತಿಯಲ್ಲಿ ರೂಪಿಸಿಕೊಂಡನು. ಒಳ್ಳೆಯ ಮಾತುಗಳನ್ನು ಹೇಳಿಕೊಡುವ ವಿದ್ಯೆ, ಆಧ್ಯಾತ್ಮಿಕ ವಿದ್ಯೆ. ಮೌನವಾಗಿರುವುದು ಬಂದರೇನೆ ಮಾತನಾಡುವ ಕಲೆ ಬರುತ್ತದೆ. ನಿನ್ನ ಮಾತುಗಳು ಆತ್ಮದಿಂದ ಬರುವ ರಾಮಬಾಣದಂತೆ ಇರಬೇಕು.
ಧ್ಯಾನಕ್ಕೆ ಬರುವ ಮುಂಚೆ ಧ್ಯಾನಕ್ಕೆ ಬಂದನಂತರ
೧. ಸತ್ತರೇ ಅಳುತ್ತಾನೆ. ೧. ’ ಸಾವು ’ಗೆ ಅಳುವುದಿಲ್ಲ.
೨. ವಾಕ್‌ಕ್ಷೇತ್ರ ಸರಿಯಾಗಿರುವುದಿಲ್ಲ. ೨. ಅವಶ್ಯಕತೆ ಇದ್ದರೇನೆ ಮಾತನಾಡುತ್ತಾನೆ.
೩. ನಾನೇ ಮಾಡಿದ್ದೇನೆ ಎನ್ನುತ್ತಾನೆ. ೩. ನಾನು ಇಲ್ಲ ಎಂದು ತಿಳಿದುಕೊಳ್ಳುತ್ತಾನೆ.
೪. ಮರಣವೇ ಅಂತಿಮ ಮೆಟ್ಟಲು ೪. ಮರಣದ ನಂತರ ’ ನಾನು ’ ಇರುತ್ತೇನೆ
ಎಂದುಕೊಳ್ಳುತ್ತಾನೆ. ಎಂದು ತಿಳಿದುಕೊಂಡಿರುವವನು.
Recent Comments