“ದಿ ಗ್ರೇಟ್ ಲಾ ಆಫ್ ಕರ್ಮ”
‘ಲಾ’ ಎಂದರೆ ಸಿದ್ಧಾಂತ … ಮೂಲಸೃಷ್ಟಿ ರಹಸ್ಯಕ್ಕೆ ಸಂಬಂಧಿಸಿದ ಸಿದ್ಧಾಂತ. ಮೂಲಸೃಷ್ಟಿಯಲ್ಲಿರುವ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಧರ್ಮ ವಿಶೇಷ. ’ ಗ್ರೇಟ್ ’ ಎಂದರೆ ’ಮಹಾ’.
” ಸೃಷ್ಟಿಶಾಸ್ತ್ರ” ಎಂಬುವುದು ಕೆಲವು ಅದ್ಭುತ ಧರ್ಮಸೂತ್ರಗಳ ಅರಿವಿನ ಮೇಲೆ ಆಧಾರಪಟ್ಟಿದೆ. ಏಕೆಂದರೆ ಸೃಷ್ಟಿ ಎಂಬುವುದು ಮೌಲಿಕವಾಗಿ ಆಯಾ ಧರ್ಮಸೂತ್ರಗಳಿಗೆ ಆಧಾರವಾಗಿ ರಚಿಸಲ್ಪಟ್ಟಿದೆ. ಆದ್ದರಿಂದ, ಎಲ್ಲದಕ್ಕಿಂತಾ ಶ್ರೇಷ್ಠವಾದ ಸೃಷ್ಟಿ ರಹಸ್ಯ – ಯದ್ಭಾವಂ ತದ್ಭವತಿ ಎಂಬುವ ಸೂತ್ರ. ಇದನ್ನೇ ಆಂಗ್ಲ ಭಾಷೆಯಲ್ಲಿ ದಿ ಗ್ರೇಟ್ ಲಾ ಆಫ್ ಕರ್ಮ ಎಂದು ಹೇಳಿದ್ದಾರೆ.
ಕರ್ಮಸಿದ್ಧಾಂತ ” ಕಾರಣ ಕಾರ್ಯ ಸಂಬಂಧವನ್ನು” ಬಟ್ಟಬಯಲು ಮಾಡುತ್ತದೆ. ಕಾರಣವಿಲ್ಲದೇ ಯಾವ ಕಾರ್ಯವೂ ಇರುವುದಿಲ್ಲ. ಕಾರಣ ’ ಭಾವ ’; ಕಾರ್ಯ ’ ಭವ ’. ಕಾರಣ ಕಾರ್ಯವಾಗಿ ಬದಲಾಗಲು ಅವಶ್ಯಕವಾದ ಮೂಲ ಕ್ರಿಯಾರೂಪ, ದೇಶಕಾಲ ಪರಿಸ್ಥಿತಿಗಳು+ಪುರುಷ ಪ್ರಯತ್ನ+ಧ್ಯೇಯ.
ದೇಶಕಾಲ ಪರಿಸ್ಥಿತಿಗಳೇ ” ಜಗತ್ತು “, ಜಗತ್ತು ಎಂಬುವುದು ಮೂಲ ಚೈತನ್ಯ ಕಾರಣದ, “ಪ್ರಥಮ ಇಚ್ಛೆ”ಯ, ತಕ್ಷಣ ರೂಪಾಂತರ.
ವಿಸ್ತೃತ ಸೃಷ್ಟಿ ರಚನೆಯಲ್ಲಿ ಯಾವ ವಿಶೇಷಗಳಿವೆಯೊ, “ಮಾನವ ಸೃಷ್ಟಿ” ಯಲ್ಲಿ ಸಹ ಆ ವಿಶೇಷಗಳೇ ಇವೆ. ಮಾನವನ ಕಾರ್ಯ ಕಲಾಪಗಳಲ್ಲಿ ಯಾವ ವಿಶೇಷಗಳಿವೆಯೋ ಬ್ರಹ್ಮಾಂಡದ ಸೃಷ್ಟಿ ವಿಶೇಷಗಳಲ್ಲಿ ಸಹ ಅವೇ ಇವೆ. ಇದೇ ಮತ್ತೊಂದು ಗ್ರೇಟ್ ಲಾ ಅಂದರೆ, – ಇಲ್ಲಿ ಹೇಗಿದೆಯೊ ಅಲ್ಲಿ ಸಹ ಹಾಗೆಯೆ ಇದೆ – ಎಂಬುವ ಸಿದ್ಧಾಂತ. ’ ಇಲ್ಲಿ ’ ಇರುವ ವಿಶೇಷಗಳನ್ನು ಗಮನಿಸಿದರೆ ’ ಅಲ್ಲಿ ’ ಇರುವ ವಿಶೇಷಗಳನ್ನು ಗಮನಿಸದೆಯೆ ಇರಬಹುದು.
ಮಾನವ ಜೀವನ ಮಾನವನ ಮನೋಸೃಷ್ಟಿ. ದೇಶ ಕಾಲ ಪರಿಸ್ಥಿತಿಗಳು ಜಗತ್ ಸೃಷ್ಟಿ. ಅಂದರೆ, ’ವಿರಾಟ್’ ಪುರುಷನ ಸೃಷ್ಟಿ. ವಿರಾಟ್ ಪುರುಷನ ವಿರಾಟ್ ಅಂಶವೇ ಮಾನವ. ಮಾನವನ ಶಕ್ತಿ ಸಹ ಅನಂತ, ಅನಲ್ಪ. ಜಗತ್ ಸೃಷ್ಟಿ ಮಾನವನ ಸೃಷ್ಟಿಗಾಗಿ ನಿರ್ದೇಶಿಸಲಾಗಿದೆ. ಮಾನವನ ಸೃಷ್ಟಿಯ ರಂಗಸ್ಥಳವೇ ಜಗತ್ಸೃಷ್ಟಿ. ಮಾನವನ ಸೃಷ್ಟಿ ಸ್ವಂತ ಮಸ್ತಿಷ್ಕದಿಂದ ಆಗಿಂದಾಗ ಉಕ್ಕಿ ಬರುತ್ತದೆ. ಬಟ್ಟಬಯಲಾಗುತ್ತದೆ. ಯಾವುದನ್ನು ಭಾವಿಸಿದರೇ, ಯಾವುದಕ್ಕಾಗಿ ಪ್ರಯತ್ನಿಸಿದರೇ ಅದು ಸೃಷ್ಟಿಯಾಗುತ್ತದೆ; ಅನುಭವಕ್ಕೆ ಬರುತ್ತದೆ. ಪ್ರತಿಯೊಂದು ಅನುಭವ ಹೊಸ ಭಾವನೆಗೆ ಸಹಜವಾಗಿಯೇ ದಾರಿ ತೋರಿಸುತ್ತದೆ. ಪ್ರತಿಯೊಂದು ನೂತನ ಭಾವನೆಗೆ ’ ಯತ್ನ ’ವನ್ನು ಜೋಡಿಸಿದರೆ, ’ ಆಯ್ಕೆ ’ಯನ್ನು ಜೋಡಿಸಿದರೆ ತತ್ಸಂಬಂಧವಾದ ಅನುಭವವನ್ನು ಪುನಃ ಪ್ರಸಾದಿಸುತ್ತದೆ. ಇದೇ ದಿ ಗ್ರೇಟ್ ಲಾ ಆಫ್ ಕರ್ಮ .
ಈ ವಿಶೇಷವನ್ನು, ಈ ಸೂತ್ರವನ್ನು ಅರ್ಥ ಮಾಡಿಕೊಂಡಿರುವವರು ಮುಕ್ತಪುರುಷರು. ಬಂಧನರಹಿತರು. ಆನಂದಸಾಗರದಲ್ಲಿ ಮುಳುಗಿರುವವರು. ತಮ್ಮ ’ ತಲೆ ಬಾಲ ’ ತಿಳಿದಿರುವವರು. ತಮ್ಮ ’ ತಲೆ ’ಂi ತಮ್ಮ ’ ಬಾಲ ’ ಎಂದು ತಿಳಿದಿರುವವರು. ತಮ್ಮ ’ ಭಾವನೆ ’ಯೇ ತಮ್ಮ ’ ಸೃಷ್ಟಿ ’ ಎಂದು ತಿಳಿದುಕೊಂಡಿರುವವರು.
ಈ ಕರ್ಮ ವಿಶೇಷವೂ, ಕರ್ಮ ಸೂತ್ರವೂ, ತಿಳಿಯದೇ ಇರುವವರು – ಮುಕ್ತಿರಹಿತರು, ಬಂಧಜೀವಿಗಳು. ದುಃಖಸಾಗರದಲ್ಲಿ ಮುಳುಗಿರುವವರು.
Recent Comments