“ತಾಪತ್ರಯ”
’ ತಾಪ ’ ಎಂದರೆ ದುಃಖ;
’ ತ್ರಯ ’ ಎಂದರೆ ಮೂರು.
ತ್ರಿವಿಧ ದುಃಖಗಳೇ ’ ತಾಪತ್ರಯ ’.
ತಾಪಗಳು ಮೊತ್ತ ಮೂರು ವಿಧಗಳು:
ಆಧ್ಯಾತ್ಮಿಕತಾಪ
ನಮ್ಮಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ಎಂದು ಹೇಳುವ ಅರಿಷಡ್ವರ್ಗಗಳಿಂದ ನಮಗೆ ಆಗುವ ಬಾಧೆಗಳನ್ನೇ “ಆಧ್ಯಾತ್ಮಿಕ ತಾಪಗಳು” ಎನ್ನುತ್ತೇವೆ.
ಪ್ರತಿ ಮನುಷ್ಯನಿಗೂ ಇರುವ ಒಟ್ಟು ಬಾಧೆಗಳಲ್ಲಿ
ನಿಜಕ್ಕೂ 90% ಬಾಧೆಗಳು ಈ ರೀತಿಯಲ್ಲೇ ಸಂಭವಿಸುತ್ತವೆ.
ಉದಾಹರಣಗೆ ನಮ್ಮ ಜೊತೆ ಕೆಲಸಮಾಡುವವನಿಗೆ ಪದೋನ್ನತಿ (ಪ್ರಮೋಷನ್) ಬಂದು ನಮಗೆ ಬರದೇಹೋದರೆ ನಾವು ಪಡುವ ಬಾಧೆ ಆಧ್ಯಾತ್ಮಿಕ ತಾಪ.
ಹಾಗೆಯೇ .. ನಾನು ಬಯಿಸಿದ ಹುಡುಗಿ ನನ್ನ ಇಷ್ಟಪಡದೇಯಿದ್ದರೆ ಬರುವ ಬಾಧೆ.
ಅವರಿಗವರೇ ಕಲ್ಪಿಸಿಕೊಂಡ, ಹೀಗೆ ಕಲ್ಪಿಸಿಕೊಳ್ಳುತ್ತಿರುವ ಬಾಧಗಳೇ “ಆಧ್ಯಾತ್ಮಿಕ ತಾಪಗಳು”.
ಆದಿಭೌತಿಕತಾಪ
ಇತರ ಪ್ರಾಣಿಕೋಟಿಯಿಂದ ಆಗುವ ತಾಪಗಳನ್ನು ಆದಿಭೌತಿಕ ತಾಪಗಳು ಎನ್ನುತ್ತೇವೆ.
ನಮ್ಮ ಪ್ರಮೇಯವಿಲ್ಲದೆ ಇತರರ ಅಜ್ಞಾನ, ಅಕ್ರಮ ಕೆಲಸಗಳಿಂದ
ನಮಗೆ ಆಗುವ ಬಾಧೆಗಳು ಎಂದರ್ಥ.
ಪ್ರತಿ ಮನುಷ್ಯನಿಗೂ 9% ಬಾಧೆಗಳು ಈ ವರ್ಗಕ್ಕೆ ಸೇರಿದ್ದು.
ಉದಾ: ರಸ್ತೆಯಲ್ಲಿ ಪ್ರಯಾಣ ಮಾಡುತ್ತಿರುವಾಗ ಎದುರಿನಿಂದ ಲಾರಿ ಬಂದು ಗುದ್ದುತ್ತದೆ; ನಮ್ಮ ಕಾಲುಗಳು ಮುರಿದುಹೋದವು .. ಇದು “ಆದಿಭೌತಿಕ ತಾಪ” . ಹಾಗೆಯೇ, ಒಂದು ಚೇಳು ಕುಟುಕುತ್ತದೆ .. ಈ ರೀತಿಯಲ್ಲಿ ಕೆಲವು ಬಾಧೆಗಳು ಸಾಂಘಿಕ ಜೀವನದಿಂದ ಉಂಟಾಗುತ್ತಲೇ ಇರುತ್ತವೆ. ಆದರೆ, ಆಧ್ಯಾತ್ಮಿಕ ತಾಪಗಳು ಜೀವನದಲ್ಲಿ 90% ಇದ್ದರೆ, ಈ ವಿಧವಾದ ನೋವುಗಳು ಕೇವಲ 9% ಮಾತ್ರವೇ ಇರುತ್ತವೆ.
ಆದಿದೈವಿಕತಾಪ
ಪ್ರಕೃತಿ ಸಹಜವಾದ ಬದಲಾವಣೆಗಳಿಂದ ಆಗುವ ತಾಪಗಳನ್ನು
ಆದಿದೈವಿಕ ತಾಪಗಳು ಎನ್ನುತ್ತೇವೆ.
ಉದಾಹಾರಣೆಗೆ: ಅತಿವೃಷ್ಟಿ, ಅನಾವೃಷ್ಟಿ, ಭೂಕಂಪಗಳು ಮುಂತಾದವು.
ಪ್ರತಿ ಮನುಷ್ಯನಿಗೂ 1% ಬಾಧೆಗಳು ಮಾತ್ರವೇ ಈ ವರ್ಗಕ್ಕೆ ಸಂಬಂಧಿಸಿದ್ದವು.
* ಬುದ್ಧಪುರುಷನಿಗೆ ತಾಪತ್ರಯಗಳಿರುತ್ತವೆ
* ಮುಕ್ತಪುರುಷನಿಗೆ ತಾಪತ್ರಯಗಳಿರುವುದಿಲ್ಲ
* ತಾಪತ್ರಯಗಳು ಇರದ ಸ್ಥಿತಿಯೇ ಮುಕ್ತ ಸ್ಥಿತಿ.
Recent Comments