“ಜೀವನವೆಂಬುವುದು ಸದಾ ಬಹು ಆಯಾಮದ್ದಾಗಿರಬೇಕು”
ಸಾಮಾನ್ಯ ಮನುಷ್ಯ ಜೀವನವನ್ನೆಲ್ಲಾ ಒಂದೇ ಒಂದು ವಿದ್ಯೆಯ ಮೇಲೆ ಆಧಾರಪಟ್ಟಿರುತ್ತಾನೆ. ಅವನು ಇತರೆ ಯಾವುದೇ ವಿದ್ಯೆಗಳನ್ನು ಅಭ್ಯಸಿಸುವುದಿಲ್ಲ. ‘ಎಕನಾಮಿಸ್ಟ್’ ಆದರೆ ಜೀವನವೆಲ್ಲಾ ಆ ಒಂದು ‘ಎಕನಾಮಿಕ್ಸ’ ನ್ನೇ ಓದುತ್ತಿರುತ್ತಾನೆ. ಅವನು ಸಂಗೀತ ಕಲಿತುಕೊಳ್ಳುವುದಿಲ್ಲ.. ಡಾನ್ಸ್ ಕಲಿತುಕೊಳ್ಳುವುದಿಲ್ಲ. ಕಬಡ್ಡಿ ಕಲಿತುಕೊಳ್ಳುವುದಿಲ್ಲ. ಇಸ್ಪೇಟ್ ಆಡುವುದಿಲ್ಲ. ಅವೆಲ್ಲಾ ತನಗೆ ಸಂಬಂಧಿಸಿದ್ದಲ್ಲವೆಂದು ಅಂದುಕೊಳ್ಳುತ್ತಾನೆ, ‘ಎಕನಾಮಿಕ್ಸ್’ ನಲ್ಲೇ ಹುಟ್ಟುತ್ತಾನೆ, ‘ಎಕನಾಮಿಕ್ಸ್’ ನಲ್ಲೇ ಸಾಯುತ್ತಾನೆ.
ಜೀವನವೆಂಬುದು ಸದಾ ಬಹು ಆಯಾಮದ್ದು (ಮಲ್ಟೀ ಡೈಮೆನ್ಷನಲ್) ಆಗಿರಬೇಕು. ಅಷ್ಟೇ ವಿನಹ ‘ಏಕ ಆಯಾಮದ್ದು’ (ಯೂನೀ ಡೈಮೆನ್ಷನಲ್) ಆಗಿರಬಾರದು. ಅಂದರೆ, ‘ಏಕಸೂತ್ರಪಥ’ ಆಗಿರಬಾರದು. ‘ಬಹುಸೂತ್ರಪಥ’ ಆಗಿರಬೇಕು. ಆಗಲೇ ನವೀನ ಆನಂದ ವಿಸ್ತರಿಸುತ್ತದೆ.
‘ಲಾ ಆಫ್ ಡಿಮಿನಿಷಂಗ್ ರಿಟರ್ನ್ಸ್ .. law of diminishing returns’ ಎಂದು ಒಂದು ಸಿದ್ಧಾಂತವಿದೆ. ಒಂದು ಸೇಬು ಹಣ್ಣು ತಿಂದೆವೆಂದುಕೊಳ್ಳೋಣ ತುಂಬಾ ಚೆನ್ನಾಗಿರುತ್ತದೆ. ಎರಡನೆಯ ಸೇಬು ತಿಂದೆವೆಂದುಕೊಳ್ಳಿ ಚೆನ್ನಾಗಿರುತ್ತದೆ. ಮೂರನೆಯ ಸೇಬು ತಿನ್ನಬೇಕೆಂದುಕೊಂಡರೆ ಇನ್ನು ತಿನ್ನಬಾರದೆನಿಸುತ್ತದೆ. ನಾಲ್ಕನೆಯ ಸೇಬು ತಿನ್ನಲುಹೋದರೆ ವಾಂತಿ ಬರುತ್ತದೆ. ಆಗ ಏನು ಮಾಡಬೇಕು?
ಮೊದಲನೆಯದು ಸೇಬು ತಿನ್ನಬೇಕು; ಇನ್ನೊಂದು ಸೀತಾಫಲವನ್ನು ತಿನ್ನಬೇಕು. ಅನಂತರ ಮಾವಿನಹಣ್ಣನ್ನು ತಿನ್ನಬೇಕು. ಅನಂತರ ಸೀಬುಹಣ್ಣು ತಿನ್ನಬೇಕು. ವೆರೈಟಿಯಾಗಿ ತಿಂದರೆ ಆಗ ವಾಂತಿ ಬರುವುದಿಲ್ಲ. ಎಲ್ಲಾ ತಿನ್ನಬಹುದು ಆದರೆ, ತಿಂದಿದ್ದನ್ನೇ ತಿನ್ನುತ್ತಿದ್ದರೇ ವಾಂತಿ ಬರುತ್ತದೆ. ಮೊದಲನೆಯ ಬಾರಿ ತಿನ್ನುವಾಗ ಇರುವ ಆನಂದ ಕೊನೆಗೆ ಆವಿಯಾಗಿ ಬಿಡುತ್ತದೆ. ಆದ್ದರಿಂದ, ಆಗಿಂದಾಗ ವೈವಿಧ್ಯ ತೋರಿಸಬೇಕು.
ಅನೇಕ ವಿದ್ಯೆಗಳನ್ನು ಕಲಿತುಕೊಳ್ಳುತ್ತಿರಬೇಕು. ಆಗ ಆನಂದ ಮಲ್ಟಿಪುಲ್ ಆಗಿರುತ್ತದೆ. ಬಹುಮುಖವಾಗಿ ತುಂಬುತುಳುಕುತ್ತದೆ. ಆಗ ಅದು ಲಾ ಆಫ್ ಡಿಕ್ರೀಜಿಂಗ್ ರಿಟರ್ನ್ಸ್ ಅಲ್ಲ, ಅದು ‘ಲಾ ಆಫ್ ಇಂಕ್ರೀಜಿಂಗ್ ರಿಟರ್ನ್ಸ್’. ಆದ್ದರಿಂದ, ನಾವು ಅನೇಕಾನೇಕ ಲಾಭಗಳನ್ನು ಹೊಂದುತ್ತೇವೆ. ಇವಲ್ಲಾ ಕೂಡಾ ಆನಂದ ಶಾಸ್ತ್ರದ ಮೂಲ ಸೂತ್ರಗಳು.
ಆನೇಕ ಜನ ಕಾಲೇಜ್ ಮುಗಿಯುತ್ತಲೇ, ಪುಸ್ತಕಗಳಿಗೆ ಗುಡ್ಬೈ ಹೇಳುತ್ತಾರೆ. ಇನ್ನು ಪುಸ್ತಕಗಳು ಓದುವ ಸ್ಟೇಜ್ ದಾಟಿದೆ ಎಂದು ತಿಳಿಯುತ್ತಾರೆ. ಪಾಪ ಹುಚ್ಚರು, ಪುಸ್ತಕಗಳಲ್ಲಿರುವಷ್ಟು ಆನಂದ ಮತ್ಯಾವುದರಲ್ಲೂ ಇಲ್ಲ. ಅದರಲ್ಲಿ ಎಷ್ಟು ಆನಂದ ಇದೆಂi. ಎಷ್ಟು ವಿಜ್ಞಾನ ಇದೆಯೋ. ಎಷ್ಟು ವಿಶ್ರಾಂತಿ ಇದೆಯೋ. ಎಷ್ಟು ಹರ್ಷ ಇದೆಯೋ.
ಮಹಾನುಭಾವರ ಪುಸ್ತಕಗಳು ಓದುತ್ತಿದ್ದರೇ, ಶ್ರೇಷ್ಠ ಕೃತಿಕಾರರ ಪುಸ್ತಕಗಳು ಓದುತ್ತಿದ್ದರೆ ಎಷ್ಟು ವಿಶ್ರಾಂತಿ, ಎಷ್ಟು ವಿನೋದ, ಎಷ್ಟು ಆನಂದ. ಷೇಕ್ಸ್ಪಿಯರ್ ಪುಸ್ತಕಗಳನ್ನು ಓದದೇ ಇದ್ದರೆ ನಿಜಕ್ಕೂ ಜೀವನವೇ ವ್ಯರ್ಥ.
ಸಿನಿಮಾಗಳಿಗೆ ಹೋಗಿ ಮಾತ್ರವೇ ಆನಂದವನ್ನು ಹೊಂದಬಹುದು. ಮನೆಯಲ್ಲಿ ಕುಳಿತುಕೊಂಡು ಆನಂದವನ್ನು ಹೊಂದಲಾಗುವುದಿಲ್ಲ ಎಂದು ಕೆಲವರು ಅಂದುಕೊಳ್ಳುತ್ತಾರೆ. ಸಿನಿಮಾಗೆ ಹೋದರೇನೇ ಆನಂದ, ಟಿ.ವಿ ಮುಂದೆ ಕುಳಿತುಕೊಂಡರೇನೇ ಆನಂದ, ಟಿ.ವಿ ಅದ್ಭುತವಾದ ಆನಂದವನ್ನು ನೀಡುತ್ತದೆ; ಆದರೆ, ಟಿ.ವಿ ಒಂದೇ ಆನಂದವಲ್ಲ. ಪುಸ್ತಕಗಳು ಸಹ ಅದ್ಭುತವಾದ ಆನಂದವನ್ನು ನೀಡುತ್ತವೆ; ಆದರೆ ‘ಪುಸ್ತಕಗಳು’ ಮಾತ್ರವೇ ಆನಂದವಲ್ಲ. ಪುಸ್ತಕಗಳನ್ನೂ ಓದಬೇಕು, ಟಿ.ವಿ ಸಹ ನೋಡಬೇಕು. ಇವು ಎರಡೇ ಆನಂದವಲ್ಲ. ಕ್ರಿಕೆಟ್ ಸಹ ಆಡಬೇಕು. ಅಡುಗೆ ಸಹ ಕಲಿತುಕೊಳ್ಳಬೇಕು. ಧ್ಯಾನ ಕೂಡಾ ಮಾಡಬೇಕು. ಆತ್ಮಜ್ಞಾನ ಸಹ ಅಳವಡಿಸಿಕೊಳ್ಳಬೇಕು. ಆಗ ಎಲ್ಲಾ ಸೇರಿ ಎಷ್ಟು ಆನಂದವೋ.
Recent Comments