“ಜನ್ಮಗಳೆಲ್ಲಾ ಆತ್ಮಾಭಿವೃದ್ಧಿಗಾಗಿಯೇ”

 

ಪ್ರತಿಯೊಂದು ಆತ್ಮಕ್ಕೂ

ಅನೇಕಾನೇಕ ಜನ್ಮಗಳು .. ಅನೇಕಾನೇಕ ಜೀವನಗಳು .. ಅನೇಕಾನೇಕ ಭಿನ್ನಭಿನ್ನ ಅನುಭವಗಳು

“ಜನ್ಮಗಳೆಲ್ಲಾ ಇರುವುದು ಆತ್ಮವತ್ – ಅಭಿವೃದ್ಧಿಗಾಗಿಯೇ” .. ಎಂಬುದನ್ನು ಅರಿತುಕೊಂಡಿರುವ ತತ್ತ್ವವೇ “ಬುದ್ಧತ್ವ”
ಸಕಲ “ಜನ್ಮಗಳಲ್ಲಿರುವ ದುಃಖಗಳು ನಮ್ಮ ಆಯ್ಕೆಗಳೇ” .. ಸುಖಗಳೂ ನಮ್ಮ ಆಯ್ಕೆಗಳೇ ..
ನಷ್ಟಗಳೂ ನಮ್ಮ ಆಯ್ಕೆಗಳೇ.. ಲಾಭಗಳೂ ನಮ್ಮ ಆಯ್ಕೆಗಳೇ..
ಆತ್ಮದ ಸರ್ವತೋಮುಖ ಅಭಿವೃದ್ಧಿಗಾಗಿಯೇ ಈ ಆಯ್ಕೆಗಳೇ ..
ಹೀಗೆ ಜನ್ಮಗಳೆಲ್ಲಾ ನಮ್ಮ ಆಯ್ಕೆಗಳೇ ಎಂದು ಹೇಳುವುದೇ
“ಆಧ್ಯಾತ್ಮಿಕ ವಿಜ್ಞಾನಶಾಸ್ತ್ರ” .. ಅಥವಾ “ಸ್ಪಿರಿಚ್ಯುವಲ್ ಸೈನ್ಸ್”
ಎಲ್ಲಾ ನಮ್ಮ ಒಳ್ಳೆಯದಕ್ಕಾಗಿಯೇ! ಎಲ್ಲಾ ಎಲ್ಲರ ಒಳ್ಳೆಯದಕ್ಕಾಗಿಯೇ!
ಜೀವನದಲ್ಲಿ ಪ್ರತಿಯೊಂದು ಅನುಭವ ಸಹ .. ಒಂದು ವಿಶಿಷ್ಟವಾದ ಜ್ಞಾನ – ಸೋಪಾನ (ಮೆಟ್ಟಲು)
“ಸೋಲು” ಎನ್ನುವುದು ಒಂದು “ಸೋಪಾನ “ ಎನ್ನುವುದು ಸಹ ಒಂದು ಸೋಪಾನ ..
ಎಲ್ಲಾ ನಮ್ಮ ಒಳ್ಳೆಯದಕ್ಕಾಗಿಯೇ .. ಎಲ್ಲಾ ಎಲ್ಲರ ಒಳ್ಳೆಯದಕ್ಕಾಗಿಯೇ!
ಆದರೆ, ಒಂದು ಮಾತ್ರ ಒಳ್ಳೆಯದಲ್ಲ ..
ಅದೇ ಮೂಕ ಪ್ರಾಣಿಗಳ ಮಾರಣಹೋಮಗಳು .. ಅಮೂಲ್ಯವಾದ ಪ್ರಾಣಿಕೋಟಿಯ ದಾರುಣ ಹತ್ಯೆಗಳು ..
ಯಾವ ಜೀವಿಗಳನ್ನೂ ನಮ್ಮ ಹೊಟ್ಟೆಯ ಸಲುವಾಗಿ ಸಾಯಿಸಬಾರದು
“ಪಕ್ಷಿಜಾತಿಯನ್ನು ಹಿಡಿದು .. ಪರಮ ಹಿಂಸೆ ಮಾಡಿ .. ಹೊಟ್ಟೆ ತುಂಬ
ಕೂಳನ್ನು ತುಂಬಿಸಲು ಬೇಯಿಸಿ ತಿನ್ನುವವನು ವಸುಧ ಚಾಂಡಾಲನು” ಎಂದರು ವೇಮನ ಮಹಾಶಯರು
ಮತ್ತೆ ನಮ್ಮ ಸ್ವಂತ ಪ್ರಾಣವನ್ನು ಕೂಡಾ ಆತ್ಮಹತ್ಯದ ಮೂಲಕ ತೆಗೆಯುವಂತಿಲ್ಲ
ಇನ್ನು ಜೀವನದಲ್ಲಿ ಉಳಿದಿದ್ದೆಲ್ಲಾ ನಮ್ಮ ಒಳ್ಳೆಯದಕ್ಕೆ! ಎಲ್ಲಾ ಎಲ್ಲರ ಒಳ್ಳೆಯದಕ್ಕೆ!
ಜೀವನ ಎನ್ನುವುದು “ಸುಖ-ದುಃಖ”ಗಳಿಂದ .. “ಲಾಭ-ನಷ್ಟ”ಗಳಿಂದ ವಿಸ್ತಾರವಾಗಿ ಕೂಡಿಕೊಂಡಿದೆ.
ದುಃಖಗಳಲ್ಲಿ – ನಷ್ಟಗಳಲ್ಲಿ ಇರುವಾಗ “ಸಹನೆ” ಎನ್ನುವ ಗುಣದಿಂದ ಕೂಡಿರಬೇಕು
ಲಾಭಗಳಲ್ಲಿ – ಸುಖಗಳಲ್ಲಿ ಇರುವಾಗ “ಔದಾರ್ಯ” ಎನ್ನುವ ಗುಣದಿಂದ ಕೂಡಿರಬೇಕು
“ಸಹನೆ-ಔದಾರ್ಯ” ಎನ್ನುವ ಎರಡು ಮಹಾಸುಗುಣಗಳಿಂದ ಸದಾ ಕೂಡಿರುವಾಗ
“ಎಲ್ಲಾ ಜನ್ಮಗಳೂ ನಮ್ಮ ಒಳ್ಳೇಯದಕ್ಕೇ” .. “ಎಲ್ಲಾ ಜನ್ಮಗಳೂ ಎಲ್ಲರ ಒಳ್ಳೆಯದಕ್ಕೇ”
ಎಂದು ಅನುಭವಪೂರ್ವಕವಾಗಿ ತಿಳಿದುಬರುತ್ತದೆ.
ಎಲ್ಲರಿಗೂ ಜೀವನಶಾಸ್ತ್ರವನ್ನು ತಿಳಿಸುವುದೇ “ಆತ್ಮವಿಜ್ಞಾನಶಾಸ್ತ್ರ”
ಪ್ರಜೆಗಳೆಲ್ಲರನ್ನೂ “ಸ್ಪಿರಿಚ್ಯುವಲ್ ಸೈನ್ಸ್”ನಲ್ಲಿ “ಆತ್ಮವಿಜ್ಞಾನಶಾಸ್ತ್ರ”ದಲ್ಲಿ ನಿಷ್ಣಾತರನ್ನಾಗಿಸುವುದಕ್ಕೇ
ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಹುಟ್ಟಿಕೊಂಡಿದೆ
“PSSM” ಎನ್ನುವುದು
ದಿವ್ಯಲೋಕಗಳಿಂದ ಭುವಿಗೆ ಇಳಿದು ಬಂದ ಒಂದು “ಮಹಾ-ಅವತರಣ”
ಮೇಲಿನಲೋಕಗಳಿಗೆ ಸೇರಿದ ಎಣಿಸಲಾರದಷ್ಟು ಯೋಗೀಶ್ವರರ ಸಮಷ್ಟಿ ಪ್ರಣಾಳಿಕೆ
ಪಿರಮಿಡ್ ಧ್ಯಾನಿಗಳಿಗೂ .. ಪಿರಮಿಡ್ ಮಾಸ್ಟರ‍್ಸ್‌ಗೂ .. ಪ್ರಣಾಮಗಳು!
ಪಿರಮಿಡ್ ಬುದ್ಧರೆಲ್ಲರಿಗೂ ಬುದ್ಧಪೂರ್ಣಿಮೆಯ ಸಂದರ್ಭದಲ್ಲಿ ಪ್ರತ್ಯೇಕ ಅಭಿನಂದನೆಗಳು!