“ಕರ್ನಾಟಕ ಧ್ಯಾನ ಮಹಾಚಕ್ರ-2”
“ಬ್ರಹ್ಮರ್ಷಿ ಪತ್ರೀಜಿಯವರ ಜ್ಞಾನ ಸಂದೇಶಗಳು”
“ಬುದ್ಧತ್ವ”
ಪ್ರತಿದಿನ ಪ್ರತಿಯೊಬ್ಬರಿಗೂ ಧ್ಯಾನ ಬೇಕೇಬೇಕು. ಏಕೆಂದರೆ ಧ್ಯಾನದಿಂದಲೇ ಜ್ಞಾನ, ಜ್ಞಾನದಿಂದಲೇ ಮುಕ್ತಿ. ಧ್ಯಾನವೆಂದರೆ ಸುಖವಿಲಾಸವಲ್ಲ, ಅದು ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆ. ಭೋಜನವು ದುಬಾರಿ ಆಗಿರಬಹುದು. ಆದರೆ, ಧ್ಯಾನವು ಮನುಷ್ಯನ ಜೀವನಕ್ಕೆ ಅವಶ್ಯಕತೆಯಾಗಿದೆ. ಹಾಗೆಯೇ ನಿದ್ರೆಯು ಸುಖಭೋಗದಿಂದ ಕೂಡಿರಬಹುದು. ಧ್ಯಾನವು ಈ ಜೀವನದ ಅಗತ್ಯತೆಯಾಗಿದೆ. ಧ್ಯಾನವನ್ನು ಬೇಗ ಶೀಘ್ರವಾಗಿ ಆರಂಭ ಮಾಡಿದರೆ ಎಲ್ಲವೂ ನಂತರ ಬರುತ್ತದೆ. ಮಾತನಾಡುವುದು, ತಿನ್ನುವುದು, ನಿದ್ರೆ, ಆಲೋಚನೆ ಆಟ, ಹಾಡು, ನೃತ್ಯ ಎಲ್ಲವೂ ನಂತರ ಬರುತ್ತದೆ. ಯಾವಾಗ ಜೀವನದಲ್ಲಿ ಧ್ಯಾನಕ್ಕೆ ಮೊದಲ ಆದ್ಯತೆ ಕೂಡುತ್ತಿರೋ ಆಗ ನೀವು ಬುದ್ಧನಾಗುವಿರಿ. ಹಾಗೆಯೇ ಯಾವಾಗ ಧ್ಯಾನಕ್ಕೆ ಕೊನೆಯ ಪ್ರಾಶಸ್ತ್ಯ ಕೊಡುತ್ತೀರೊ ಆಗ ನೀವು ‘ಬುದ್ದು’ ಆಗುತ್ತೀರಿ (ದಡ್ಡನಾಗುತ್ತೀರಿ). ನೀವು ಬುದ್ಧನಾದರೂ, ದಡ್ಡನಾದರೂ ಎಲ್ಲಕ್ಕಿಂತ ಧ್ಯಾನಕ್ಕೆ ಮೊದಲ ಆದ್ಯತೆ ನೀಡಿದರೆ, ದಿನದ ಆರಂಭ ಧ್ಯಾನದಿಂದ ಮಾಡಿದರೆ ಆಗ ನೀವು ಬುದ್ಧನಾಗುವಿರಿ.
ಬುದ್ಧತ್ವವೆಂದರೆ ಏನು? ಧ್ಯಾನ ಎಂದರೇನು? ಧ್ಯಾನದ ಅರ್ಥವೇನು? ಬುದ್ಧತ್ವದ ಅರ್ಥವೇನು? ಎಂದರೆ ಬುದ್ಧತ್ವದ ಅರ್ಥ ಧ್ಯಾನ, ಧ್ಯಾನಕ್ಕೆ ಅರ್ಥ ಬುದ್ಧತ್ವ. ಇವು ಒಂದೇ ಪರಿಕಲ್ಪನೆಯ ಪರ್ಯಾಯ ಪದಗಳು. ಧ್ಯಾನಕ್ಕೆ ಎರಡು ರೆಕ್ಕಗಳಿವೆ. ಹಕ್ಕಿಗೆ ಹೇಗೆ ಎರಡು ರೆಕ್ಕೆಗಳಿವೆಯೋ ಹಾಗೆ. ಏಕೆಂದರೆ ಹಕ್ಕಿಯು ಒಂದೇ ರೆಕ್ಕೆಯಲ್ಲಿ ಹಾರಲಾಗುವುದಿಲ್ಲ. ಆ ಎರಡು ರೆಕ್ಕಗಳು ಯಾವುವೆಂದರೆ ; 1.ಮನೋಪೂರ್ಣತೆ 2. ಧ್ಯಾನ. ಪಕ್ಷಿ ಒಂದೇ ರೆಕ್ಕೆಗಳೆರೆಡು. ಮನೋಪೂರ್ಣತೆಯಿಂದ ಇರುವುದಿಂದರೆ, ನೀನು ಏನಾದರೂ ಮಾಡು, ಯಾವಾಗಲಾದರೂ ಮಾಡು ಮನಸ್ಸಿಟ್ಟು ಮಾಡು. ಆಗ ನೀನು ಈ ಎರಡು ಮುಖ್ಯ ಅಂಶಗಳನ್ನು ನೆನಪಿಡು. ಮಾಡುವುದು, ಅಸ್ತಿತ್ವದಲ್ಲಿರುವುದು ಅಂದರೆ ಜೊತೆಯಿರುವುದು. ಏಕೆಂದರೆ ನೀನು ಆತ್ಮ, ಆತ್ಮಕ್ಕೆ ಎರಡು ರೆಕ್ಕೆಗಳು ಇವೆ.
ಏನೇ ಮಾಡಿದರೂ ಏಕಾಗ್ರತೆಯಿಂದ ಮಾಡಿ. ನೀವೇನು ಮಾಡಿದರೂ ಅದರ ಕಡೆ ಮನಸ್ಸನ್ನು ಕೇಂದ್ರಿಕರಿಸಿ ಪೂರ್ತಿ ಗಮನವಿಡಿ. ನಡೆಯುವಾಗ ನಡಿಗೆಯೇ ನೀವಾಗಿರಿ. ತಿನ್ನುವಾಗ ಅದರಲ್ಲಿ ಲೀನರಾಗಿ, ಹಾಡುವಾಗ ಆ ಹಾಡೇ ನೀವಾಗಿರಿ, ಹಾಗೆಯೇ ನೃತ್ಯ ಮಾಡುವಾಗ, ಮಾತಾಡುವಾಗ, ಕೇಳುವಾಗ ಅದರಲ್ಲೇ ಪರಿಪೂರ್ಣರಾಗಿ ಪರವಶರಾಗಿರಿ. ಅದು ನಿಮಗೆ, ನಿಮ್ಮ ಮನಸ್ಸಿಗೇ ನಾಟುವಂತಿರಬೇಕು. ಆಗ ನೋಡಿ ವಿಸ್ಮಯ ಘಟಿಸುತ್ತದೆ. ನೀವು ಮನಸ್ಪೂರ್ತಿಯಿಂದ ಕೆಲಸವನ್ನು ಮಾಡಿದರೆ, ಧ್ಯಾನದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಿರಿ.
ರಮಣ ಮಹರ್ಷಿಗಳ ಮಾತಿನಲ್ಲಿ ಹೇಳಬೇಕೆಂದರೆ ; “ಜಾಗ್ರತಾವಸ್ಥೆಯಲ್ಲಿ ಜಾಗ್ರತೆಯಾಗಿದ್ದರೆ, ಸುಷುಪ್ತಿಯ ಅವಸ್ಥೆಯಲ್ಲಿ ಜಾಗ್ರತೆ” ಬರುತ್ತದೆ. ನಿದ್ರೆಯಲ್ಲಿ ಶರೀರಕ್ಕೆ ಏನಾಗುತ್ತದೆ, ಆತ್ಮಶರೀರವನ್ನು ಬಿಟ್ಟು ಹೊರಬರುತ್ತದೆ. ನೀವು ಧ್ಯಾನಿಗಳಾಗಿರದಿದ್ದರೆ ಈ ಸಮಯದಲ್ಲಿ ನಿಮಗೆ ಏನು ನಡೆಯುತ್ತಿದೆ ಎಂದು ಅರ್ಥವಾಗುವುದಿಲ್ಲ. ಆಮೇಲೆ ನಿದ್ರೆಯಿಂದ ಹೊರಬಂದಾಗ ಎಲ್ಲವೂ ಗೊತ್ತಾಗುತ್ತದೆ. ಅದನ್ನೇ ನಾವು ಕನಸುಗಳು ಎನ್ನುತ್ತೇವೆ, ಆಗ ನಾವು ನಿದ್ರಾವಸ್ಥೆಯಲ್ಲೂ ಎಚ್ಚರದಿಂದಿರುತ್ತೇವೆ. ನೀವು ಭೌತಿಕ ಶರೀರದಿಂದ ಹೊರಗಿದ್ದಾಗ, ಸೂಕ್ಷ್ಮಶರೀರದಲ್ಲಿದ್ದಾಗ ನೀವು ಮನೋಪೂರ್ಣತೆಯಿಂದ ಇರುವುದನ್ನು, ಎಚ್ಚರ ಸ್ಥಿತಿಯಲ್ಲಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದೇ ರಮಣ ಮಹರ್ಷಿಯವರ ಉತ್ತರ.
ಮಹರ್ಷಿ, ಮಹಾ+ಋಷಿ =ಮಹರ್ಷಿ, ಋಷಿ ಎಂದರೆ ಮೂರನೆಯ ಕಣ್ಣಿನಿಂದ ನೋಡುವವನು. ಕಣ್ಣು ಮುಚ್ಚಿದ ಮೇಲೆ ಏನು ನೋಡುತ್ತಾರೆ. ಅಗಾಧವಾದ ಕತ್ತಲೆಯನ್ನೇ ಆನಂದಿಸುತ್ತಿದ್ದರೆ, ಒಂದು ತಿಂಗಳಲ್ಲಿ, ಎರಡು ತಿಂಗಳಲ್ಲಿ, ಒಂದು ವರ್ಷ, ಎರಡು ವರ್ಷ ಹೀಗೆ ಕಳೆಯುತ್ತದೆ. “ಏನೂ ಧ್ಯಾನ ಆಗುತ್ತಿಲ್ಲ ಸ್ವಾಮೀಜಿ, ಒಂದು ವರ್ಷವಾಯಿತು. ಧ್ಯಾನವನ್ನು ನಿಲ್ಲಿಸಿಬಿಡಲೇ” ನೀವೂ ಎನ್ನುತ್ತೀರಾ. ಇಲ್ಲಿ ಇದು ಸರಿಯಲ್ಲ. ಹಾಗೇನಾದರೂ ನೀವೊಂದು ವೇಳೆ ನಿಲ್ಲಿಸಿದಿರೋ ನೀವೆಷ್ಟು ದಿನದಿಂದ ಧ್ಯಾನ ಮಾಡಿದ್ದೀರೋ ಅದೆಲ್ಲಾ ವ್ಯರ್ಥವಾಗುತ್ತದೆ. ಮತ್ತೆ ಮೊದಲಿಂದ ಶುರುಮಾಡಬೇಕು ಎಚ್ಚರ! ಆತ್ಮವು ವ್ಯರ್ಥವಾಗುತ್ತದೆ. ಮತ್ತೆ ಮೊದಲಿಂದ ಶುರುಮಾಡಬೇಕು ಎಚ್ಚರ! ಆತ್ಮಕ್ಕೆ ಈ ಕಾರ್ಯಬೇಕು. ನೀವು ಹಿಂದೇಟು ಹಾಕಿದರೆ ಎಷ್ಟೋ ಜನ್ಮಗಳನ್ನು ಮತ್ತೆ ತೆಗೆದುಕೊಳ್ಳಬೇಕಾಗುತ್ತದೆ. ಅದು ನಿಮ್ಮ ಆಯ್ಕೆ. ನೀವೇ ಹೇಳಿ ಒಂದೇ ಜನ್ಮದಲ್ಲಿ ಬುದ್ಧರಾಗುವಿರೋ ಇಲ್ಲಾ ನೂರಾರು ಜನ್ಮಗಳನ್ನು ತೆಗೆದುಕೊಳ್ಳುವಿರೋ. ನೀವು ಬುದ್ಧರಾಗಲು ನಿಮಗೆ ನೀವೇ ಸ್ಪೂರ್ತಿಯಾಗಬೇಕು. ಎಲ್ಲಾ ಆತ್ಮಗಳು ಸಹ ಬುದ್ಧರಾಗಬೇಕು.
ಎಲ್ಲಾ ಮಕ್ಕಳು ಸಹ ದೊಡ್ಡವರಾಗಬೇಕು. ಒಂದು ಮಗುವು ತಾನು ದೊಡ್ಡವನಾಗುತ್ತೇನೆಲ್ಲಾ ಎಂದು ಚಿಂತಿಸುವುದಿಲ್ಲ. ಅಥವಾ ತಾಯಿಯೂ ನನ್ನ ಮಗು ದೊಡ್ಡದಾಗುತ್ತದೆ ಎಂದು ಚಿಂತಿಸುವುದಿಲ್ಲ. ಪ್ರತಿ ತಾಯಿಗೂ ಗೊತ್ತು, ತನ್ನ ಮಗು ದೊಡ್ಡದಾಗುತ್ತದೆ ಎಂದು. ಹಾಗಾಗಿ ಪ್ರತಿಯೊಬ್ಬ ಬುದ್ಧನಿಗೂ ಗೊತ್ತು, ಪ್ರತಿ ದಡ್ಡನೂ ಬುದ್ಧನಾಗುತ್ತಾನೆ ಎಂದು.
2-3 ಜನ್ಮಗಳು ತೆಗೆದುಕೊಳ್ಳಬೇಕಾಗಿ ಬರಬಹುದಾದರೂ ಆಯ್ಕೆಯೂ ನಿಮ್ಮದಾಗಿರುತ್ತದೆ. ನಮ್ಮ ಏಳಿಗೆಯೇ ನಮ್ಮ ಕರ್ತವ್ಯ .
ನೀವು ಕಣ್ಣು ಮುಚ್ಚಿದಾಗ, ಗಾಢವಾದ ಕತ್ತಲೆ ಕಾಣಿಸಿದಾಗ, ನೀವು ಆ ಕತ್ತಲೆಯನ್ನೇ ಗಮನಿಸುತ್ತಾ ಇರಿ. ಸ್ವಲ್ಪದಿನಗಳಾದ ನಂತರ ನೀವು ಬಣ್ಣಗಳನ್ನು ಕಾಣುತ್ತೀರಿ.
ಬೆಳಕನ್ನು ಕಾಣುತ್ತೀರಿ. ಆಗ ಬಂದು ನನ್ನ ಬಳಿ ಹೇಳುತ್ತೀರಿ. ಸ್ವಾಮೀಜಿ ನಾನು ಕೆಲವು ಬಣ್ಣಗಳನ್ನು ಕಂಡೆ. ನೋಡುತ್ತಾ ನೋಡುತ್ತಾ ಅದು ಎಷ್ಟೋ ದೊಡ್ಡದಾಯಿತು. ಎಂತಹ ಸಾಧನೆ, ಎಷ್ಟೋ ವರ್ಷಗಳ ಕತ್ತಲೆಯ ನಂತರ ಬೆಳಕು ಕಂಡಿದ್ದೀರಿ. ಆಗ ನೀವು ಧ್ಯಾನ ಬಿಡುವುದಿಲ್ಲ ಇನ್ನೂ ಮುಂದೆ ಏನಿದೆಯೋ ನೋಡಬೇಕು ಎನ್ನುತ್ತೀರಿ. ಬುದ್ಧ ನೋಡಿರುವುದು ಸಹ ಇದನ್ನೇ. ಒಂದು ದೊಡ್ಡ ಸುರಂಗವಿದೆ ನೀವು ಅದರಲ್ಲಿ ಪ್ರಯಾಣಿಸುತ್ತಿದ್ದೀರಿ. ಅದು ಕತ್ತಲು ಬೆಳಕಿನಿಂದ ಕೂಡಿದೆ. ನೀವು ಬೆಳಕಿನ ಕೊನೆಯನ್ನು ಮುಟ್ಟಿದ್ದೀರಿ. ನೀವು ಸುರಂಗದ ಕೊನೆಯನ್ನು ನೋಡಬೇಕು ಆಗ “ಸ್ವಾಮೀಜಿ ಚಿಕ್ಕ ಬೆಳಕು ಬಂದು ಅದು ಕ್ರಮೇಣ ದೊಡ್ಡದಾಯಿತು. ನಾನು ಅದರೊಳಗೆ ಪ್ರಯಾಣಿಸಿದೆ”. ಎನ್ನುತ್ತೀರಿ. ಹಾಗಾಗಿ ನೀನು ಸುರಂಗದ ಅನುಭವ ಪಡೆದಾಯಿತು. ಎಂತಹ ಒಳ್ಳೆಯ ಅನುಭವವದು. ಆ ಮೇಲೆ ಒಂದು ವರ್ಷದಕಾಲ ಸುರಂಗದ ಅನುಭವ ಪಡೆದಿರಿ. ಈ ಒಂದು ವರ್ಷ ಎಲ್ಲೂ ಎದೆಗುಂದಲಿಲ್ಲ. ಎಲ್ಲೂ ಧೈರ್ಯಕಳೆದುಕೊಳ್ಳದಿರುವುದೇ ಬುದ್ಧತ್ವ. ನೆನಪಿಡಿ, ಅಪರಾಧೀ ಮನೋಭಾವ ಇರಬಾರದು. ಕೀಳರಿಮೆ ಇದ್ದರೆ ಅದು ನೀವು ಬುದ್ಧರಾಗಲು ತಡೆಯುತ್ತದೆ. ನೀವು ಬುದ್ಧರಾಗದೇ ಇರಲು ಕಾರಣವೆಂದರೆ 1.ಕೀಳರಿಮೆ 2.ನಾನೇ ಶ್ರೇಷ್ಠ ಎನ್ನುವ ಭಾವನೆ. ನಾವು ಯಾರಿಗಿಂತ ಕೀಳಲ್ಲ, ಯಾರಿಗಿಂತ ಮೇಲಲ್ಲ. ನಾವು ನಾವೇ.
ನಾವೆಲ್ಲಾ ಸುರಂಗದಲ್ಲಿ ಕೆಲವು ದಿನ ಪ್ರಯಾಣಿಸಿದ್ದೇವೆ. ನೀವು ಆ ಸುರಂಗದಿಂದ ಹೊರಬಂದ ಮೇಲೆ ಹೇಳುತ್ತೀರಿ. ಸ್ವಾಮೀಜಿ ಎಂತಹ ಸುಂದರ ಭೂಮಿಯಿದು ಎನ್ನುವಿರಿ. ದೊಡ್ಡಬೆಳಕನ್ನು ನೋಡಿದ ನಂತರ ಏನಾಗುತ್ತದೆ. ಕಣ್ಣು ಮಂಜಾಗುತ್ತದೆ. ಹಾಗೆಯೇ ಕತ್ತಲಿನಿಂದ ಬೆಳಕಿಗೆ ಬಂದಾಗಲೂ ಕಣ್ಣು ಮಂಜಾಗುತ್ತದೆ. ಇದು ಇನ್ನೂ ಒಂದು ವರ್ಷ ಹಾಗೆಯೇ ಸಾಗುತ್ತದೆ. ಒಂದು ವರ್ಷವೆಲ್ಲಾ ನೀವು ಯಾವಾಗ ಕುಳಿತರೂ, ಅದೇ ಬೆಳಕನ್ನು ಕಾಣುವಿರಿ. ನಂತರ “ಈಗ ಸ್ವಲ್ಪ ಸ್ವಲ್ಪ ಕಾಣಿಸುತ್ತಿದೆ ಸ್ವಾಮೀಜಿ, ಸುಂದರವಾದ ಭೂಮಿ, ಚಿನ್ನದಂಥ ನದಿಗಳು, ಮರಗಳು, ಕಾಣಿಸುತ್ತಿದೆ. ಕೆಲವೊಂದು ಸಲ ಇದನ್ನು ನಿರ್ಣಯಿಸಲು ಇಡೀ ಜೀವನಾವಧಿಯಷ್ಟು ಕಾಲ ಹಿಡಿಯಬಹುದು, ಬೆಟ್ಟಗಳು, ಪರ್ವತಗಳು, ನಂತರ ಜನರು.. .. ಕೆಲವರು ಅರೇ, ಸ್ವಾಮೀಜಿ ನಾನು ನನ್ನ ತಾಯಿಯನ್ನು ನೋಡಿದೆ. ಅವಳು ನನಗೆ ನಗುತ್ತಿರುವಂತೆ ಸುಂದರವಾಗಿ ಕಾಣಿಸಿದಳು. ಅವಳು ಸತ್ತಾಗ ಕ್ಯಾನ್ಸರ್ನಿಂದ ಪೀಡಿತಳಾಗಿ ನರಳಿ ಸತ್ತಿದ್ದಳು. ತುಂಬಾ ವಯಸ್ಸಾಗಿತ್ತು. ಆದರೆ ನನಗೆ ಚಿಕ್ಕವಯಸ್ಸಿನವಳಂತೆ ಕಾಣಿಸಿದಳು” ಎನ್ನುತ್ತಾರೆ. ಮತ್ತೆ ನಿಮ್ಮ ಸ್ನೇಹಿತರನ್ನು ನೋಡುವಿರಿ, ಸತ್ತ ತಂದೆ-ತಾಯಿ, ನೀವು ಕಳೆದುಕೊಂಡ ಮಕ್ಕಳು. ನಿಮ್ಮ ಮಕ್ಕಳು ನಿಮ್ಮನ್ನು ಕಾಯುತ್ತಿರುತ್ತಾರೆ. ಇದನ್ನು ನೋಡಲು ದುಃಖವೆನಿಸಿದರೂ ಇನ್ನೊಂದು ಕಡೆಯಿಂದ ನೋಡಲು ಇದು ಖುಷಿ ಎನಿಸುತ್ತದೆ. ಇದೊಂದು ದೊಡ್ಡ ಸಂತೋಷದ ಕ್ಷಣವಾಗುತ್ತದೆ. ನೀವು ದೇಹಸ್ಥಿತಿಯಿಂದ ಆತ್ಮಸ್ಥಿತಿಗೆ ಪ್ರವೇಶ ಮಾಡಿದಾಗ ಮಾತ್ರ ಆ ಸಂತೋಷವನ್ನು ಅನುಭವಿಸಲು ಸಾಧ್ಯ. ಹಾಗಾಗಿ, ನಾವು ನಮಗೆ ಪರಿಚಯವಿರುವ ಸ್ನೇಹಿತರು, friends, ಸತ್ತವರ ಆತ್ಮಗಳನ್ನು ನೋಡುತ್ತೇವೆ. ಅಲ್ಲಿ ಎಲ್ಲಾ ಆದ್ದೂರಿಯ ಆಚರಣೆಗಳು ಇರುತ್ತವೆ. ಇವೆಲ್ಲವನ್ನೂ ನಾವು ಧ್ಯಾನದಲ್ಲಿ ಮಾತ್ರ ಕಾಣಲು ಸಾಧ್ಯವಾಗುತ್ತದೆ. ಧ್ಯಾನದ ಪ್ರತಿ ಹಂತದಲ್ಲೂ ಏನೋ ಒಂದು ಹೊಸತನವಿರುತ್ತದೆ. ಹೆಚ್ಚಿನ ಅನುಭವಗಳು, ದಿನದಿಂದ ದಿನಕ್ಕೆ ಬದಲಾವಣೆ ನಿಮ್ಮ ಜೀವನದಲ್ಲಿ ಆಗುತ್ತದೆ.
ನೀವು ಹೆಚ್ಚಿಗೆ ಧ್ಯಾನಭ್ಯಾಸ ಮಾಡಿದಾಗ ಕಣ್ಣು ತೆರೆದ ಮೇಲೆ ನಿಮ್ಮ ಮುಂದೆ ಇಡ್ಲಿ, ಚಟ್ನಿ ಇದ್ದರೆ, ಅದನ್ನು ಆಸ್ವಾದಿಸಿಕೊಂಡು ತಿನ್ನುತ್ತೀರಿ. ಹಿಂದೆ ಯಾವಾಗಲೂ ಇದೇ ಇಡ್ಲೀ, ಅದೇ ಚಟ್ನಿ ಎನ್ನುತ್ತಿದ್ದವರು ನೀವು. ಈಗ ನಿಮ್ಮ ಭಾವನೆ ಬದಲಾಗಿರುತ್ತದೆ. ಅದೇ ಧ್ಯಾನದ ಒಂದು ವಿಭಿನ್ನತೆ. ಹೆಚ್ಚು ಹೆಚ್ಚು ಧ್ಯಾನದಲ್ಲಿ ಇಳಿಯುತ್ತಾ ಹೋದಂತೆ. ನಿಮ್ಮ ಅಂತರಂಗದದಲ್ಲಿ ಅನುಭವಗಳನ್ನು ಹೊಂದುತ್ತಾ, ಹೊಸ ಜೀವನದಲ್ಲಿ ಬದಲಾವಣೆ ಕಾಣುತ್ತೇವೆ.
ನಿಮ್ಮ ಗಂಡ ಇದೇ ಮೊದಲ ಬಾರಿ ನಿಮಗೆ ಒಳ್ಳೆಯ ವ್ಯಕ್ತಿಯಾಗಿ ಕಾಣುತ್ತಾನೆ. ನೀವು ಇಷ್ಟು ವರ್ಷದ ನಮ್ಮ ವೈವಾಹಿಕ ಜೀವನದಲ್ಲಿ ಅವರ ಇಂತಹ ಒಳ್ಳೆಯ ಗುಣವನ್ನು ಗಮನಿಸಿರಲಿಲ್ಲ. ಧ್ಯಾನ ಮಾಡುವ ಮೊದಲು ನಿಮ್ಮ ಗಂಡ ನಿಮಗೆ ಭಯಾನಕವಾಗಿ ಕಾಣುತ್ತಿದ್ದರು. ಈಗ ಧ್ಯಾನಕ್ಕೆ ಬಂದ ಮೇಲೆ ತುಂಬಾ ಸುಂದರವಾಗಿ ಒಳ್ಳೆಯವರಾಗಿ ಕಾಣಿಸುತ್ತಾರೆ. ನೀವೊಂದು ವೇಳೆ ದಿವ್ಯಚಕ್ಷುವಿನಿಂದ, ಜ್ಞಾನಚಕ್ಷುವಿನಿಂದ ನೋಡಿ ತಿಳಿಯದಿದ್ದರೆ ನೀವು ‘ದರಿದ್ರ ನಾರಾಯಣ’ ನಾಗುವಿರಿ. ಆದರೆ ಧ್ಯಾನಕ್ಕೆ ಹೋದ ಮೇಲೆ ಮಾತ್ರ ‘ಲಕ್ಷ್ಮೀನಾರಾಯಣ’ನಾಗುವಿರಿ. ಧ್ಯಾನ ಎನ್ನುವುದು ವಿಶಿಷ್ಟವಾದದ್ದು. ಮನಃಪೂರ್ಣತೆ, ಮನೋಶೂನ್ಯತೆ ಎಂಬ ಎರಡು ಅಂಶಗಳಿವೆ. ಧ್ಯಾನದಲ್ಲಿ ಮನೋಶೂನ್ಯತೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಧ್ಯಾನಂ ನಿರ್ವಿಷಯಂ ಮನಃ
ಶರೀರ, ಮನಸ್ಸು, ಬುದ್ಧಿ, ಶ್ವಾಸ ಮತ್ತು ನಾನು ಇದೇ ಧ್ಯಾನ. ನನ್ನ ಶರೀರ, ನನ್ನ ಮನಸ್ಸು, ನನ್ನ ಬುದ್ಧಿ, ನನ್ನ ಶ್ವಾಸ ಮತ್ತು ನಾನು, ನನ್ನ ಧ್ಯಾನ. ಧ್ಯಾನ ಮುದ್ರೆಯೆಂದರೆ ಚಿನ್ಮುದ್ರೆಯನ್ನು ತೋರಿಸುತ್ತಾರೆ. ಆದರೆ ಹಾಗೆ ಇಟ್ಟುಕೊಂಡು ಧ್ಯಾನ ಮಾಡಬಾರದು. ಬೆರಳಲ್ಲಿ ಬೆರಳು ಸೇರಿಸಿ ಇಟ್ಟುಕೊಳ್ಳಬೇಕು. ಮುದ್ರೆ ಎಂದರೆ ಅದೊಂದು ಭಂಗಿ. ಚಿನ್ಮುದ್ರೆಯು ನೀವು ಮತ್ತು ನಿಮ್ಮ ಉಸಿರಾಟವನ್ನು ಸೂಚಿಸುತ್ತದೆ. ಅದು ಧ್ಯಾನಮುದ್ರೆ, ಜ್ಞಾನಮುದ್ರೆಯನ್ನು ಸೂಚಿಸಿದರೂ ಬೆರಳಲ್ಲಿ ಬೆರಳು ಸೇರಿಸುವುದೇ ಧ್ಯಾನ ಮುದ್ರೆ ಇದರಿಂದ ನೀವು ಬೇಗ ಶೂನ್ಯಸ್ಥಿತಿಗೆ ತಲುಪುವಿರಿ. ಆರಾಮವಾಗಿ ಕುಳಿತುಕೊಳ್ಳಬೇಕು.
ಯೋಗ ಕ್ಲಾಸುಗಳಲ್ಲಿ ಏನು ಹೇಳುತ್ತಾರೆ? ನಿಮ್ಮ ಶರೀರವನ್ನು ನೇರವಾಗಿಟುಕೊಳ್ಳಿ ಕತ್ತು ನೇರವಾಗಿರಲಿ ಎನ್ನುತ್ತಾರೆ. ಆಗ ಜನರು “ನನಗೆ ಆಗುತ್ತಿಲ್ಲ ಸ್ವಾಮೀಜಿ, ಧ್ಯಾನ ನನಗೆ ಆಗಿಬರುವುದಿಲ್ಲ ಎನಿಸುತ್ತದೆ. ಮುಂದಿನ ಜನ್ಮದಲ್ಲಿ ನೋಡಿಕೊಳ್ಳೋಣ ಎನ್ನುತ್ತಾರೆ. ಈ ಸಂಪ್ರದಾಯವು ತಪ್ಪುಕಲ್ಪನೆಯಿಂದ ಬಂದಿದೆ. ಏಕೆಂದರೆ ಅವರು ಭಗವದ್ಗೀತೆಯ ಈ ಸಂಸ್ಕೃತ ಶ್ಲೋಕವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. “ನಮಃ ಕಾಯಃ ಶಿರೋಗ್ರೀವಂ”.
‘ಕಾಯ’ವೆಂದರೆ ಶರೀರ, ಶಿರ ಎಂದರೆ ತಲೆ, ಗ್ರೀವ ಎಂದರೆ ಕತ್ತು. ನಮಃ ಎಂದರೆ ಒಂದೇ ನೇರವಾಗಿಟ್ಟು ಕೊಳ್ಳುವುದು. ಇದು ಸಾಮಾನ್ಯ ಅರ್ಥ. ಇದು ಸಂಸ್ಕೃತವನ್ನು ಅಧ್ಯಯನ ಮಾಡಿ ಭಗವದ್ಗೀತೆ ವ್ಯಾಖ್ಯಾನಿಸುವವರು ಹೇಳುವುದು. ಈ ಜನರಿಗೆ ಸಂಸ್ಕೃತ ಮಾತ್ರ ಗೊತ್ತು, ಧ್ಯಾನ ಗೊತ್ತಿಲ್ಲ. ಸಂಸ್ಕೃತ ಮಾತ್ರ ತಿಳಿದುಕೊಂಡು ಭಗವದ್ಗೀತೆ ವ್ಯಾಖ್ಯಾನಿಸುವುದು ಜನರನ್ನು ತಪ್ಪುದಾರಿಗೆ ಎಳೆದಂತೆ ಆಗುವುದು. ನೀವು ಧ್ಯಾನಭ್ಯಾಸ ಮಾಡಿದ ಮೇಲೆ ಭಗವದ್ಗೀತೆಯನ್ನು ವ್ಯಾಖ್ಯಾನಿಸಿದರೆ, ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೀರೆಂದು ಅರ್ಥ. “ನಮಃ ಕಾಯ ಶಿರೋಗ್ರೀವಂ” ಎಂಬುದಕ್ಕೆ ನಿಗೂಢವಾಗಿರುವ ಅರ್ಥ ಹೀಗಿದೆ; “ಕಾಯ” ಎಂದರೆ ಶರೀರವಲ್ಲ, ಕಾಯವೆಂದರೆ ನೀವು ಏನು ಮಾಡುತ್ತಿದ್ದೀರೋ ಅದು. ಶಿರ ಎಂದರೆ ತಲೆಯಲ್ಲಾ ಕಂಠ. ಕಂಠವೆಂದರೆ ಅದರೆ ಮೂಲಕ ಏನು ಮಾಡುತ್ತೇವೆಯೋ ಅದು. ಶರೀರದಿಂದ ಏನು ಮಾಡುತ್ತೇವೆಯೋ ಕಂಠದಿಂದ ಏನು ಮಾತನಾಡುವೆವೋ ಎರಡೂ ಒಂದೇ ಆಗಿರಬೇಕು ಎಂಬುದೇ ಇದರ ಅರ್ಥ. ಇದನ್ನೇ ತ್ರಿಕರಣಶುದ್ಧಿ ಎನ್ನುತ್ತಾರೆ. ಏನು ಮಾತನಾಡುತ್ತೀಯೊ ಅದನ್ನೇ ಯೋಚಿಸು. ಯಾವುದನ್ನು ಯೋಚಿಸುವೆಯೋ ಅದನ್ನೇ ಮಾತನಾಡು. ಏನು ಮಾತನಾಡುವೆಯೋ ಅದನ್ನೇ ಮಾಡು, ಏನು ಮಾಡುವೆಯೋ ಅದನ್ನೇ ಯೋಚಿಸು. ಎನ್ನುವುದೇ ಇದರ ಅರ್ಥ.
ಯೋಗ ಶರೀರಕ್ಕಲ್ಲ. ನೀವು ಶರೀರವಲ್ಲ, ಯೋಗವು ಆತ್ಮವಾಗಿದೆ. ಆತ್ಮವು ತ್ರಿಕರಣಶುದ್ಧಿ ಹೊಂದಬೇಕು.
ಹಾಗಾಗಿ ಈ ಸಂಸ್ಕೃತ ಮನುಷ್ಯನಿಗೆ ಧ್ಯಾನ ಗೊತ್ತಿಲ್ಲ. ಅವನು ಯಾವತ್ತಿಗೂ ಶ್ರೀಕೃಷ್ಣನನ್ನು ನೋಡಲಾರ (ಭೇಟಿಯಾಗಲಾರ) ಪತಂಜಲಿಯನ್ನು ನೋಡಲಾರ. ಆದರೆ ಅವನು ಪಂಡಿತ, ದೊಡ್ಡ ದೊಡ್ಡ ಗ್ರಂಥಗಳನ್ನು ಓದುತ್ತಾನೆ. ಸಂಸ್ಕೃತ ಗೊತ್ತು. ಆದರೆ ಆರಾಮವಾಗಿ ಕುಳಿತುಕೊಳ್ಳುವುದು ಗೊತ್ತಿಲ್ಲ. “ಸ್ಥಿರಂ ಸುಖಂ ಆಸನಂ” ಆಸನವು ಸ್ಥಿರವಾಗಿರಬೇಕು, ಸುಖಕರವಾಗಿರಬೇಕು. ಕಷ್ಟಪಟ್ಟು ಕುಳಿತುಕೊಳ್ಳುವುದು ಸುಖಾಸನವಲ್ಲ. ಜೊತೆಗೆ “ಶಿರಃ ಕಾಯಂ ನಮಃ ಗ್ರೀವಂ” ಇರಬೇಕು. ಇಂತಹ ಎಷ್ಟೋ ಭಗವದ್ಗೀತೆಯಲ್ಲಿರುವ ಶ್ಲೋಕಗಳನ್ನು ಜನರು ಅಪಾರ್ಥಮಾಡಿಕೊಂಡು ಇತರರಿಗೂ ಇದನ್ನೇ ತಿಳಿಸಿದ್ದಾರೆ.
ನಿಮಗೆ ಚದುರಂಗ ಆಟವನ್ನು ಆಡುವ (ಚೆಸ್ ಪ್ಲೇಯರ್) ಆನಂದ್ ಗೊತ್ತು. ನೀವು ಇನ್ನೊಬ್ಬ ಚೆಸ್ ಪ್ಲೇಯರ್ ಆದರೆ ಮಾತ್ರ ಅವರು ಎಂತಹ ನಡೆಗಳನ್ನು (ಮೂವ್ಗಳನ್ನು) ನಡೆಸುತ್ತಾರೆ ಎಂದು ಅರ್ಥವಾಗುತ್ತದೆ. ಕ್ಯಾಸ್ಟೋ ಅಥವಾ ಕಾರ್ಪೋವಾ ಆದರೆ ಮಾತ್ರ ಅವರನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ನೀವು ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನೀವು ಕೃಷ್ಣನ ಮಟ್ಟದಲ್ಲಿ ಇರಬೇಕು. ನೀವು ಸಂಜಯ್ ಕಿಂಗಿಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ಅವರು ಯಾವ ರಾಗ, ತಾಳ, ತುಕಡಾ, ಠುಮರಿ (ಹಿಂದೂಸ್ಥಾನೀ ಸಂಗೀತಕ್ಕೆ ಸಂಬಂಧಿಸಿದ ನುಡಿಗಳು – ಸಂ)ನುಡಿಸುತ್ತಾರೆ ಎಂದು ನಮಗೆ ಅದರಷ್ಟು ಸಾಧನೆ ಮಾಡದಿದ್ದರೆ ಅರ್ಥವಾಗುವುದಿಲ್ಲ. ಸುಮ್ಮನೆ ಕೇಳುತ್ತಿದ್ದೇವೆ. ಆದರೂ ತುಕಡಾ ಎಂದರೆ ಗೊತ್ತಿಲ್ಲ ಠುಮರಿ ಎಂದರೇನು ಗೊತ್ತಿಲ್ಲ. ನೀವು ಬುದ್ಧನಾದರೆ ಮಾತ್ರ ನಿಮಗೆ ಬುದ್ಧನ ಬಗ್ಗೆ ತಿಳಿಯುತ್ತದೆ. ನೀವು ವೇದವ್ಯಾಸರಾದರೆ ಮಾತ್ರ ಅವರ ಬಗ್ಗೆ ನಿಮಗೆ ತಿಳಿಯುತ್ತದೆ. ಅವರೆಲ್ಲಾ ಧ್ಯಾನದಲ್ಲಿ ದೊಡ್ಡ ಸಾಧಕರು. ಭಗವದ್ಗೀತೆಯು ಸಾಹಿತ್ಯದ ಪ್ರಕಾರ ಅಲ್ಲಾ ಇದು ಧ್ಯಾನದ ಪರಿಭಾಷೆ ತುಣುಕು. ದಿವ್ಯಪ್ರಕಾಶದ ತುಣುಕು (ಪರಿಭಾಷೆ) ನೀವು ದಿವ್ಯಪ್ರಕಾಶವನ್ನು ಹೊಂದಿದ್ದರೆ. ನೀವು ಇದನ್ನು ಅರಿಯುತ್ತೀರಿ. ಕನ್ನಡ ಗೊತ್ತಿರುವವರಿಗೆ ಕುವೆಂಪು ಬಗ್ಗೆ ಗೊತ್ತಿರುತ್ತದೆ. ಅವರು ಎಂತಹ ದಿವ್ಯಮಾನವ, ಮಹಾನ್ ಕವಿ ಎಂದು ಅವರಿಗೆ ತಿಳಿದಿರುತ್ತದೆ. ಆದರೆ ಕನ್ನಡ ಗೊತ್ತಿಲ್ಲದ ’ನನಗೆ’ ಅವರೊಬ್ಬ ನಾಯಕ, ಕವಿ ಎಂಬ ಮಾಹಿತಿ ಮಾತ್ರವೇ ಗೊತ್ತು. ಆದರೆ ಕನ್ನಡಿಗರಿಗೆ ಅವರೊಬ್ಬ ‘ವಾಹ್’ ಎನ್ನುವಂಥ ಮಹಾನ್ ಕವಿ, ಸಾಹಿತಿ, ಉನ್ನತ ವ್ಯಕ್ತಿ.
ಸಂಸ್ಕೃತದ ಬಗ್ಗೆ ಅರಿವಿಲ್ಲದಿದ್ದರೆ ಕಾಳಿದಾಸನ ಬಗ್ಗೆ ತಿಳಿಯಲಾಗುವುದಿಲ್ಲ. ಕಾಳಿದಾಸ ಎಂದರೆ ಸಂಸ್ಕೃತ. ನೀವು ಧ್ಯಾನದಲ್ಲಿ ಮಾಸ್ಟರ್ ಆಗದಿದ್ದರೆ ನೀವು ಭಗವದ್ಗೀತೆಯ ಅರ್ಥ ತಿಳಿದುಕೊಳ್ಳಲಾಗುವುದಿಲ್ಲ. ಇದು ಸಾಹಿತ್ಯದ ಭಾಷೆ ಎಳ್ಳಷ್ಟೂ ಅಲ್ಲ ಎಂಬುದನ್ನು ನೆನಪಿಡಿ. ನಿಮ್ಮ ಬೆರಳುಗಳನ್ನು ಒಂದರಲ್ಲೊಂದು ಸೇರಿಸಿ, ಶರೀರ ಆರಾಮವಾಗಿರಲಿ, ಆದರೆ ಚಿನ್ಮುದ್ರೆ ಮಾತ್ರ ಬೇಡ.
ಪ್ರತಿಯೊಂದು ಚಿತ್ರಗಳಲ್ಲೂ ಚಿನ್ಮುದ್ರೆಯನ್ನು ಧ್ಯಾನಮುದ್ರೆಯನ್ನಾಗಿ ಕಲಾವಿದರು ಚಿತ್ರಿಸಿದ್ದಾರೆ. ಅವರು ಬರೀ ಚಿತ್ರಕಾರರಷ್ಟೇ. ಇಲ್ಲಿರುವುದನ್ನು ನೋಡಿ ಅಲ್ಲಿ ಚಿತ್ರಿಸುತ್ತಾರೆ. ಅವರು ಧ್ಯಾನಗಳಾಗಿದ್ದರೆ ಹಾಗಾಗುತ್ತಿರಲಿಲ್ಲ. ನಾವು ಆ ಚಿತ್ರಪಟವನ್ನೇ ನೋಡಿ ಹಾಗೇ ಕುಳಿತುಕೊಳ್ಳುತ್ತೇವೆ. ಇದು ಜ್ಞಾನವಿಲ್ಲದೇ ಮಾಡುವ ಕ್ರಿಯೆ. ಒಬ್ಬ ಕುರುಡ ಇನ್ನೊಬ್ಬ ಕುರುಡ ಮಾಡಿದ್ದನ್ನೇ ಮಾಡುತ್ತಾನೆ. ನಾವು ಕಲಿಯಬೇಕಾಗಿರುವುದು ಚಿತ್ರಗಳಿಂದಲ್ಲ ಬುದ್ಧನಿಂದ. ನಾವು ಬೆರಳುಗಳನ್ನು ಸೇರಿಸಿ ಒಂದು ಗೋಡೆಯನ್ನೋ, ಮರದ ಬೊಡ್ಡೆಯನ್ನೋ ಆಧಾರವಾಗಿ ತೆಗೆದುಕೊಂಡು ಕುಳಿತುಕೊಳ್ಳಬಹುದು. ವಯಸ್ಸಾದ ಮೇಲೆ ಕುಳಿತುಕೊಳ್ಳಲು ಸಹ ಸಾಧ್ಯವಾಗುವುದಿಲ್ಲ. ’ಏಳಿ’ ಈಗಲೇ ಸಿದ್ಧರಾಗಿ. ನೀವು ಕೈಗಳನ್ನು ಲಾಕ್ ಮಾಡುವುದರಿಂದ ಶೇಕಡಾ 10ರಷ್ಟು ಚೈತನ್ಯಶಕ್ತಿಯನ್ನು (energy) ಉಳಿಸಿಕೊಳ್ಳುತ್ತೀರಿ. ಹೀಗೆ energy ಯನ್ನು ಧ್ಯಾನದಿಂದ ಉಳಿಸುತ್ತಾ ಹೋದಂತೆ ನಾವು ಚೈತನ್ಯಶಕ್ತಿಯ ಭಂಡಾರವಾಗುತ್ತೇವೆ. ಕಣ್ಣುಗಳಿಂದ 80% ಶಕ್ತಿ ಉಳಿಸುತ್ತೇವೆ. ಅಂತರಂಗಿಕವಾಗಿ 80%, ಆದರೆ ಬಹಿರಂಗವಾಗಿ 10% ಉಳಿಸುತ್ತೇವೆ. ಧ್ಯಾನದಲ್ಲಿ ಕಣ್ಣು ಮುಚ್ಚಿರಲೇಬೇಕು. ಕೆಲವು ಬೇರೆ ಧ್ಯಾನ (ಸಾಂಪ್ರದಾಯ) ವ್ಯವಸ್ಥೆಗಳಲ್ಲಿ ಅವರು ಕಣ್ಣು ತೆರೆದಿರುತ್ತಾರೆ. ಆಗ ಅವರು ಯಾವ ಟನಲ್ಅನ್ನೂ ಸಹ (ಸುರಂಗ) ನೋಡಲಾಗುವುದಿಲ್ಲ. ಬೆಳಕು, ನಕ್ಷತ್ರಗಳನ್ನು ಅವರು ನೋಡಲಾರರು. ಹೀಗೆ ಇಪ್ಪತ್ತು ವರ್ಷಗಳು ಧ್ಯಾನ ಮಾಡಿದರೂ ಅದು ವ್ಯರ್ಥ ಪ್ರಯತ್ನವಾಗುತ್ತದೆ. ಅದಕ್ಕಾಗಿ ಕಣ್ಣು ಮುಚ್ಚಿಯೇ ಧ್ಯಾನ ಮಾಡಬೇಕು.
ಕಣ್ಣುಗಳಲ್ಲಿ 4 ವಿಧಗಳಿವೆ.
1.ಚರ್ಮಚಕ್ಷು 2 ಮನೋಚಕ್ಷು. 3. ದಿವ್ಯಚಕ್ಷು 4. ಜ್ಞಾನಚಕ್ಷು. ಈ ಜಗತ್ತನ್ನು ನೋಡಲು ನೀವು ಚರ್ಮಚಕ್ಷುವನ್ನು ತೆಗೆಯಬೇಕು. ಮನೋಚಕ್ಷು ಎಂದರೆ ಮನಸ್ಸಿನಕಣ್ಣು. ಮನಸ್ಸಿನ ಕಣ್ಣಿನಲ್ಲಿ ನಾವು ಈ ಭೂಮಿ ಮೇಲೆ ಇರದವರನ್ನು ಸಹ ನೋಡಬಹುದು. ನೀವು ನನ್ನ ತಾಯಿಯನ್ನು ನಿಮ್ಮ ಮನಸ್ಸಿನಲ್ಲಿ ನೋಡಲಾರಿರಿ. ಹಾಗೆಯೆ ನಿಮ್ಮ ತಾಯಿಯನ್ನು ನಾನು ನನ್ನ ಮನಸ್ಸಿನಿಂದ ನೋಡಲಾಗದು. ಏಕೆಂದರೆ ನಾವು ಯಾವಾಗ ನಮ್ಮ ಚರ್ಮಚಕ್ಷುವಿನಿಂದ ಒಬ್ಬ ವ್ಯಕ್ತಿಯನ್ನು ನೋಡಿರುತ್ತೇವೊ ಆ ಚರ್ಮಚಕ್ಷುವನ್ನು ಮುಚ್ಛಿದ ಮೇಲೆ ಮನೋಚಕ್ಷುವಿನಲ್ಲಿ ಮತ್ತೆ ಅದೇ ಅನುಭವವಾಗುತ್ತದೆ. ಹಾಗೆಯೇ ನೀವು ಇಚ್ಛಿಸಿದರೆ, ನಿಮ್ಮ ಗಂಡ ಅಥವಾ ಹೆಂಡತಿಯ ರೂಪವನ್ನು ನಿಮ್ಮ ಮನಸ್ಸಿನಲ್ಲಿ ಕಣ್ಮುಚಿಕೊಂಡು ತಂದುಕೊಳ್ಳಬಹುದು. ಆದರೆ ತೆರೆದ ಕಣ್ಣಿನಿಂದ ಇದು ಸಾಧ್ಯವಿಲ್ಲ. ಮನೋಹಂತದಿಂದ ನೀವು ಮೂರನೆಯ ಕಣ್ಣಿನ ಹಂತಕ್ಕೆ ಹೋಗಬಹುದು. ಆದರೆ ನಿಮ್ಮ ಮೂರನೆಯ ಕಣ್ಣು ತೆರೆದುಕೊಳ್ಳಲು ಮನಸ್ಸು ಮಾತ್ರ ಶೂನ್ಯದಲ್ಲಿ ಇರಬೇಕು.
ಚರ್ಮಚಕ್ಷು ಮುಚ್ಚಿದರೆ ಮನೋಚಕ್ಷು ತೆರೆದುಕೊಳ್ಳುತ್ತದೆ. ಮನೋಚಕ್ಷು ಮುಚ್ಚಿದರೆ ದಿವ್ಯಚಕ್ಷು ತೆರೆದುಕೊಳ್ಳುತ್ತದೆ. ಅಥವಾ ಮೂರನೆಯ ಕಣ್ಣು ತೆರೆದುಕೊಳ್ಳುತ್ತದೆ. ಹಾಗಾಗಿ ನಿಮ್ಮ ತಾಯಿಯ ಚಿತ್ರವನ್ನು ಮನಸ್ಸಿನಲ್ಲಿ ತಂದುಕೊಳ್ಳಬೇಕೆಂದರೆ, ನಿಮ್ಮ ಮನಸ್ಸು ಖಾಲಿಯಾಗಿರಬೇಕು. ನೀವು ಬೇರೆ ಪರಿಧಿಗೆ ಹೋಗಬೇಕೆಂದರೆ, ಕಣ್ಣುಗಳು ಮುಚ್ಚಿರಬೇಕು. ಚರ್ಮಚಕ್ಷುಗಳನ್ನು ಮುಚ್ಚುವುದೇ ‘ದಮ’, ಕಣ್ಣುಗಳು ಶರೀರಕ್ಕೆ ಸಂಬಂಧಿಸಿದೆ. “ಸ್ವಾಮೀಜಿ ನಾಳೆ ಬೆಳಗ್ಗೆಯವರೆಗೂ ಧ್ಯಾನದಲ್ಲೇ ಕುಳಿತಿರಿ, ಕಣ್ಣು ತೆಗೆಯಬೇಡಿ.” ಎಂದು ನಾನು ನಿಮಗೆ ಹೇಳುತ್ತೇನೆ. ನಿಮ್ಮ ಕಣ್ಣುಗಳೇನೋ ಮುಚ್ಚಿರುತ್ತದೆ. ಆದರೆ ಮನಸ್ಸಿನೊಳಗೆ ಕಿರಿಕಿರಿ ಶುರುವಾಗುತ್ತದೆ. ಆದರೂ ಕಣ್ಣು ತೆಗೆಯಬಾರದು. ಅದನ್ನೇ ‘ದಮ’ ಎನ್ನುತ್ತಾರೆ. ಇಲ್ಲಿ ‘ಸಮ’ ಇರುವುದಿಲ್ಲ. ಮನಸಿಗೆ ತೊಂದರೆಯಾಗುತ್ತಿದೆ, ಆದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯೋಚನೆ ಏನಿದ್ದರೂ ಮೊದಲು ’ದಮ’ ಮೇಲೆ ಇರಲಿ. ’ದಮ’ ಎನ್ನುವುದೇ ಮೊದಲ ಹಂತ. ನೀವು ಒಂದು ಗಂಟೆ ಎರಡು ಗಂಟೆಯಾದರೂ ಹಾಗೇ ಇರಬೇಕು. “ಏನು ಕಾಣುತ್ತಿಲ್ಲ” ಎನ್ನುತ್ತೀರಿ ತಲೆಕೆಡಿಸಿಕೊಳ್ಳರಿ. “ಎಷ್ಟುಹೊತ್ತು ಹೀಗೆ ಇರಬೇಕು” ಎಂದರೆ ಯಾವಾಗ ನಾನು ಓಕೆ ಹೇಳುತ್ತೇನೋ ಅಲ್ಲಿಯವರೆಗೂ. ನಾವು ನಾಲ್ಕು ಕಣ್ಣುಗಳನ್ನು ಹೊಂದಿದ್ದೇವೆ. ಅವುಗಳು ಹೀಗಿವೆ : ಚರ್ಮಚಕ್ಷು, ಮನೋಚಕ್ಷು, ದಿವ್ಯಚಕ್ಷು, ಜ್ಞಾನಚಕ್ಷು. ದಿವ್ಯಚಕ್ಷು ಹೊಂದಿದಾಗ ಜ್ಞಾನವು ಬರುತ್ತದೆ. ನೀವು ಒಂದು ಅಂಶದ ಇನ್ನೊಂದು ಮುಖವನ್ನು ಅಥವಾ ಅದರ ಮತ್ತೊಂದು ಆಯಾಮವನ್ನು ನೋಡಬೇಕೆಂದರೆ ನಿಮ್ಮ ಸ್ವಂತ ಪ್ರಯತ್ನವಿರಬೇಕು. ಇಲ್ಲದಿದ್ದರೆ, ನೀವು ಜ್ಞಾನಿ ಎನಿಸಿಕೊಳ್ಳುವುದಿಲ್ಲ. “ಪಂಡಿತ ಎನಿಸಿಕೊಳ್ಳುವಿರಿ. ಪಂಡಿತ ಎಂದರೆ ಸೃಷ್ಟಿಮಾಡಿದ ಜ್ಞಾನ” “ಜ್ಞಾನಿ ಎಂದರೆ ಅನುಭವೈಕ ಜ್ಞಾನ” ಈ ಅನುಭವಬರುವುದು ದಿವ್ಯಚಕ್ಷುವಿನಿಂದ. “ಧ್ಯಾನದಿಂದಲೇ ಜ್ಞಾನ, ಜ್ಞಾನದಿಂದಲೇ ಮುಕ್ತಿ” ನಮಗೆ ಧ್ಯಾನ ಬೇಕು. ಅದಕ್ಕಾಗಿಯೇ ಧ್ಯಾನ ಮಾಡಬೇಕು.
ಧ್ಯಾನದಲ್ಲಿ ‘ದಮ’, ‘ಸಮ’ ಎಂಬ ಎರಡು ಬಗೆ ಇದೆ. ಕಣ್ಣು ಮುಚ್ಚಿದರೆ ‘ದಮ’. ಹಾಗೆ ಮನಸ್ಸು ಶೂನ್ಯವಾದರೆ ಸಮ. ಸಮತ್ವಂ ಯೋಗಂ ಉಚ್ಯತೆ ಉಸಿರಾಟವನ್ನು ಗಮನಿಸುತ್ತೀರಿ. ಉಸಿರಾಟ ಶರೀರದ ಒಂದು ಭಾಗವಲ್ಲ. ಆತ್ಮದ ಒಂದು ಭಾಗ, ಶರೀರ ಮತ್ತು ಆತ್ಮದ ನಡುವಣ ಸೇತುವೆ. ಉಸಿರಾಟವು ಶರೀರವಲ್ಲ, ನೀವೂ ಅಲ್ಲ. ಲೌಕಿಕವಾದ ಮನಸ್ಸಿನ ಮೂಲ ಧ್ಯಾನದ ಕಡೆ ಹರಿಯುತ್ತದೆ. ಮೊದಲಿಗೆ ಲೌಕಿಕ ಮನಸ್ಸು ನಿಮ್ಮಿಂದ ನಿರ್ಣಯಿಸಲ್ಪಡುತ್ತದೆ. ಆದರೆ ನೀವು ನಿರ್ಣಯಿಸುವುದರ ಬದಲಿಗೆ ಮನಸ್ಸಿನ ಮೇಲೆ ಕೇಂದ್ರೀಕರಿಸುವುದನ್ನು ಅಭ್ಯಾಸ ಮಾಡಬೇಕು. ಅದೇ ಮನೋಪೂರ್ಣತೆ. ಆಗ ನಿಮ್ಮ ಮನಸ್ಸು ಹಗುರವಾಗುತ್ತದೆ. ಹಾಗೆಯೇ ಯೋಚನೆಗಳು ಕಡಿಮೆಯಾಗುತ್ತದೆ. ನೀವು ಯಾವಾಗ ಕಣ್ಣು ಮುಚ್ಚುತ್ತೀರೋ, ಉಸಿರಾಟವನ್ನು ಗಮನಿಸುತ್ತೀರೋ ಆಗ ಮನಸ್ಸಿನ ಕೆಲಸ ಕಡಿಮೆಯಾಗುತ್ತಾ ಹೋಗುತ್ತದೆ. ನಂತರ ಶೇಕಡಾ 100 ರಷ್ಟು ಇರುವ ಮನಸ್ಸು ಶೇಕಡಾ 2 ಅಥವಾ ೩ರಷ್ಟಾಗುತ್ತದೆ. ನಂತರ ಆಗಾಗ ನುಸುಳುತ್ತಾ ಕೊನೆಗೆ ಶೇಕಡಾ 0% ಮನಸ್ಸಾಗುತ್ತದೆ. ಇದನ್ನೇ ‘ಸಮಾಧಿ’ ಎನ್ನುತ್ತಾರೆ. ಸಮಾಧಿಯಲ್ಲಿ ಎಷ್ಟೋ ವಿಧಗಳಿವೆ. ಸಬೀಜ ಸಮಾಧಿ, ನಿರ್ಬೀಜ ಸಮಾಧಿ. ಸವಿಕಲ್ಪ ಸಮಾಧಿ, ನಿರ್ವಿಕಲ್ಪ ಸಮಾಧಿ. ಇರಲಿ, ಹೀಗೆ ಎಷ್ಟೋ ವಿಷಯಗಳಿವೆ. ಆದರೆ, ‘ಸಮಾಧಿ’ ಎನ್ನುವುದನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು ನೀವು ‘ಮನಸ್ಸು’ ಎಂಬುದರ ಕುರಿತು ತಿಳಿಯಿರಿ. ನಿಮ್ಮ ಮನಸ್ಸನ್ನು ಶೂನ್ಯಗೊಳಿಸಿ.
“ಮನೋಷೂರ್ಣತೆ ಮತ್ತು ಮನೋಶೂನ್ಯತೆ”
ನಮ್ಮ ಶರೀರವನ್ನು ನಿಯಂತ್ರಿಸುವುದನ್ನು (ಶರೀರದ ಮೇಲೆ ಹಿಡಿತ) ‘ದಮ’ ಎನ್ನುತ್ತೇವೆ. ಮನಸ್ಸಿನ ಮೇಲಿನ ನಿಯಂತ್ರಣವನ್ನು ‘ಸಮ’ ಎನ್ನುತ್ತೇವೆ. ‘ದಮ’ ಮತ್ತು ‘ಸಮ’. ಇವು ಏನೆಂದು ತಿಳಿದುಕೊಳ್ಳೋಣ. ಇವೆರಡನ್ನೂ ಅರ್ಥಮಾಡಿಕೊಳ್ಳಿ. ಏಕೆಂದರೆ ನಾಳೆ ನಾವು ಇಡೀ ವಿಶ್ವಕ್ಕೆ ತಿಳಿಸೋಣ. ‘ದಮ’ ಮತ್ತು ‘ಸಮ’ ಆಧ್ಯಾತ್ಮಿಕತೆಯಲ್ಲಿದ್ದರೆ, ‘ಶೃತಿ’ ಮತ್ತು ‘ಲಯ’ ಸಂಗೀತ ಕ್ಷೇತ್ರದಲ್ಲಿದೆ.
‘ದಮ’ ಎಂದರೆ ಶರೀರದ ಮೇಲೆ ಹಿಡಿತ. ಈಗ ನಾನು ಧ್ಯಾನದಲ್ಲಿ ಕುಳಿತಿದ್ದೇನೆ. ನಾಳೆ ಬೆಳಗ್ಗೆಯವರೆಗೂ ಹೀಗೆ ಕುಳಿತುಕೊಳ್ಳಬೇಕು. ಅದೇ ಶರೀರದ ಮೇಲೆ ಹಿಡಿತ. ಹಿಂದಿನ ಕಾಲದಲ್ಲಿ ಒಂಟಿಕಾಲಿನ ಮೇಲೆ ನಿಂತು ಧ್ಯಾನ ಮಾಡುತ್ತಿದ್ದರು. ಅಂದರೆ, ವರ್ಷವಿಡೀ ಒಂದೇ ಕಾಲಿನ ಮೇಲೆ ಹಿಡಿತ. ಇಲ್ಲಿ ನಾವು ಎರಡು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಶರೀರ ಮತ್ತು ಮನಸ್ಸು. ಉದಾಹರಣೆಗೆ, ಹೆಂಡತಿ ಪಕ್ಕದಲ್ಲಿ ಇದ್ದಾಳೆ ನಮ್ಮ ವ್ರತವೇನೆಂದರೆ ಹೆಂಡತಿಯ ಕಡೆ ಮನಸ್ಸು ಹೋಗಬಾರದು. ಅದರ ಹೆಸರೇ ‘ಸಮ’, ಮನಸ್ಸಿನ ಮೇಲೆ ಹಿಡಿತ. ಮನಸ್ಸು ಬೇರೆ ಬೇರೆ ಕಡೆ ಸಂಚರಿಸಬಾರದು. ನಾವು ಬೆಂಗಳೂರಿನಲ್ಲಿದ್ದೇವೆ ನಮ್ಮ ಮನಸ್ಸು ಚೆನ್ನೈಗೆ ಹೋಗಬಾರದು. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ. ಶರೀರದ ಮೇಲೆ ನಿಯಂತ್ರಣ ಸಾಧಿಸಬಹುದು. ಇವೆರಡೂ ಒಂದಕ್ಕೊಂದು ಪೂರಕವಾಗಿದೆ.
ಮನಸ್ಸು ಹಿಂದೋಳ ರಾಗದಲ್ಲಿದ್ದರೆ, ಕಲ್ಯಾಣಿ ರಾಗದ ಕಡೆಗೆ ಹೊರಳುವುದಿಲ್ಲ. ಕಲ್ಯಾಣಿರಾಗ ಒಳ್ಳೆಯದೇ ಇರಬಹುದು. ಆದರೆ ಅದು ಈಗ ಬೇಕಾಗಿಲ್ಲ. ಹಿಂದೋಳ ಎಂದರೇನು? “ಸಗಮದನಿಸ ಸನಿದಮಗಸ” ||3|| ಸಂಗೀತಕ್ಕೆ ಮನಸ್ಸಿನ ಮೇಲೆ ಹಿಡಿತ ಬೇಕು. ಕಂಪ್ಯೂಟರ್ನಲ್ಲಿ ಕೆಲಸ ಮಾಡಲು ಮನಸ್ಸಿನ ಮೇಲೆ ನಿಯಂತ್ರಣ ಬೇಕು. ಕ್ರಿಕೆಟ್ ಆಡಲು ಶರೀರ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಬೇಕು. ನೀವು ಯಾವ ಕೆಲಸ ಮಾಡಿದರೂ ಮನಸ್ಸಿನ ಮೇಲೆ ನಿಯಂತ್ರಣವಿರಬೇಕು.
ಒಬ್ಬ ಬುದ್ಧನನ್ನು, ಸ್ವಾಮೀಜಿ ಧ್ಯಾನ ವೆಂದರೇನು? ಎಂದು ಕೇಳಿದರು. “ನಡೆಯುತ್ತಿರುವಾಗ ನಡೆಯುತ್ತಾ ಇರಬೇಕು. (ನಡೆಯುವುದರ ಮೇಲೆ ಗಮನ) ತಿನ್ನುತ್ತಿರುವಾಗ ತಿನ್ನುತ್ತಾ ಇರಬೇಕು” ಎಂದರು. ಅಂದರೆ ನಾನು ನಡೆಯುತ್ತಿದ್ದೇನೆ ಎಂದರೂ “ನೀನು ನಡೆಯುತ್ತಿದ್ದೀಯಾ ಸರಿ, ಆದರೆ ನಿನ್ನ ಮನಸ್ಸು ಬೇರೆ ಕಡೆ ಇದೆ. ಅದಕ್ಕಾಗಿಯೇ ಹೇಳುವುದು ನೀನು ಶರೀರದೊಂದಿಗೆ ಏನು ಮಾಡುತ್ತಿದ್ದೇಯೋ ನಿನ್ನ ಮನಸ್ಸು ಕೂಡಾ ಶರೀರದ ಜೊತೆಯಲ್ಲೇ ಇರಬೇಕು. ಮನಸ್ಸು ಶರೀರವನ್ನು ಅನುಸರಿಸಬೇಕು. ಯೋಗ ಎಂದರೆ ಸಂಗಮ. ಶರೀರ ಮನಸ್ಸು ಒಂದಾದರೆ ಅದನ್ನೇ ‘ಯೋಗ’ ಎನ್ನುತ್ತೇವೆ. ಶರೀರ ಬೆಂಗಳೂರಿನಲ್ಲಿದ್ದು ಮನಸ್ಸು ಹೈದರಾಬಾದ್ನಲ್ಲಿದ್ದರೆ, ಅದನ್ನು ‘ವಿಯೋಗ’ ಎನ್ನುತ್ತೇವೆ. ಯೋಗ, ವಿಯೋಗ; ಯೋಗವೆಂದರೆ ಶರೀರ ಮತ್ತು ಮನಸ್ಸಿನ ಮಿಲನ. ನೀವು ತಿನ್ನುವಾಗ ತಿನ್ನುವುದರ ಮೇಲೆ ಮಾತ್ರ ಗಮನವಿರಬೇಕು.
ಶರೀರದ ನಿಯಂತ್ರಣ ’ದಮ’, ಮನಸ್ಸಿನ ನಿಯಂತ್ರಣ ’ಸಮ’. ದಮ ಮತ್ತು ಸಮ ಇವುಗಳನ್ನು ಹೆಚ್ಚು ಹೆಚ್ಚಾಗಿ ಪಡೆಯಲು ನೀವು ಅಭ್ಯಾಸ ಮಾಡಬೇಕು. ಉದಾಹರಣೆಗೆ, ಒಂದು ತಿಂಗಳು ಮಾತನಾಡಬಾರದು ಎಂಬುದು ನಿರ್ಣಯ. ಮಾತನಾಡಲು ಬಯಸುತ್ತೇವೆ ಆದರೆ ಮಾತನಾಡಬಾರದು. ವ್ರತ ಮಾಡಬೇಕು. ವ್ರತ ಎಂದರೇನು? ಮೌನವ್ರತ, ಧ್ಯಾನವ್ರತ, ಸಂಗೀತವ್ರತ, ಪಾಕವ್ರತ. ವ್ರತವು ನಮಗೆ ಮನಸ್ಸಿನ ಮೇಲೆ ನಿಯಂತ್ರಣ ಮತ್ತು ಮನಸ್ಸಿಗೆ ಶಿಸ್ತನ್ನು ಕೊಡುತ್ತದೆ. ನೀವು ಮೊಸರನ್ನು ಒಂದು ತಿಂಗಳು ತಿನ್ನಬಾರದು ಎಂದು ವ್ರತ ಮಾಡಿದರೆ, ನಿಮಗೆ ಮೊಸರಿನ ಮೇಲೆ ಗಮನ ಹೋಗುತ್ತದೆ. ಆಗ ಅದು ನಿಮಗೆ ಪರೀಕ್ಷೆ ಮಾಡುವ ವೇಳೆ. ಅದರ ಮೇಲೆ ನಿಯಂತ್ರಣಬೇಕು. ನೀವು ಯಾವ ವ್ರತವನ್ನು ಮಾಡಿದರೂ. ನಿಮಗೆ ಅದೊಂದು ಸ್ವಯಂ-ಪರೀಕ್ಷೆಯ ಸಮಯ.
ಗಾಂಧೀಜಿ ಒಂದು ವಾರದಲ್ಲಿ ಒಂದುದಿನ ಉಪವಾಸ ಮತ್ತು ಮೌನವ್ರತ ಮಾಡುತ್ತಿದರು. ಏನೂ ತಿನ್ನುತ್ತಿರಲಿಲ್ಲ. ಮಾತಾಡುತ್ತಿರಲಿಲ್ಲ. ಆದರೆ ಕೆಲಸ ಮಾತ್ರ ಮಾಡುತ್ತಿದ್ದರು. ಏನಾದರೂ ಹೇಳಬೇಕೆಂದುಕೊಂಡಾಗ ಮಾತ್ರ ಬರೆದು ಕೂಡುತ್ತಿದ್ದರು. ಇಡೀ ದೇಶ ಅವರ ನಿಯಂತ್ರಣದಲ್ಲಿತ್ತು. ಅವರು ಮಾತನಾಡದಿದ್ದರೂ ಸಹ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುವ ಶಕ್ತಿಯಿತ್ತು. ಯಾರು ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೋ, ಅವನು ಇಡೀ ದೇಶವನ್ನು ನಿಯಂತ್ರಿಸಬಲ್ಲ. ನಿನ್ನ ಶರೀರ ಮತ್ತು ಮನಸ್ಸಿನ ಮೇಲೆ ನಿನ್ನ ಹಿಡಿತವಿದ್ದರೆ, ಇಡೀ ವಿಶ್ವವನ್ನೇ ನಿನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಶಕ್ತನಾಗುವೆ.
ಯೋಗ ಶರೀರವನ್ನು ಮಾತ್ರ ಕಂಟ್ರೋಲ್ ಮಾಡುತ್ತದೆ. ನಿಮಗೆ ಗೊತ್ತೇ ಧ್ಯಾನ ಮಾತ್ರ ಮನಸನ್ನು ಕಂಟ್ರೋಲ್ ಮಾಡುತ್ತದೆ. ಶರೀರವನ್ನು ನಿಯಂತ್ರಿಸುವ ಸಾಮಥವಿದ್ದರೆ, ಮನಸ್ಸನ್ನು ನಿಯಂತ್ರಿಸುವ ಸಾಮರ್ಥ್ಯ ಬರುತ್ತದೆ. ಜೀವನವು ಮನಸ್ಸಿನ ವಿಷಯವಾಗಿದೆ. ಜೀವನವು ಮನಸ್ಸಿನ ಮೇಲೆ ನೂರಕ್ಕೆ ನೂರು ಪಾಲು ಆಧಾರವಾಗಿದೆ. ನೀವು ಧ್ಯಾನಕ್ಕೆ ಬಂದರೆ ಶರೀರದ ಬಗೆ ಯೋಚಿಸುವುದಿಲ್ಲ. ಶರೀರವನ್ನು ನಿಯಂತ್ರಿಸುವ ಬಗ್ಗೆ ಯೋಚಿಸುವುದಿಲ್ಲ (ಚಿಂತಿಸುವುದಿಲ್ಲ) ಶರೀರವನ್ನು ಕ್ರಮಶಿಕ್ಷಣದಲ್ಲಿಡಲು ಯೋಚಿಸುವುದಿಲ್ಲ. ಅದೇ ಧ್ಯಾನದ ಒಂದು ಸುಂದರತೆಯಾಗಿದೆ.
ಮನ, ತನುವನ್ನು ಒಳಗೊಂಡಿದೆ, ಆದರೆ ತನುವು ಮನಸ್ಸನ್ನು ಒಳಗೊಂಡಿಲ್ಲ. ಪಿರಮಿಡ್, ಸ್ಪಿರಿಚ್ಯುಯಲ್ ಸೊಸೈಟಿ ಮೂವ್ಮೆಂಟ್ನಲ್ಲಿ ’ತನು’ವಿನ ಪಾತ್ರವಿಲ್ಲದೇ ಒಟ್ಟಾರೆಯಾಗಿ ಮನಸ್ಸಿನ ಕ್ರಮಶಿಕ್ಷಣದ ಮೇಲೆ ಕೇಂದ್ರಿಕೃತವಾಗಿದೆ. ಶರೀರಕ್ಕೆ ರಿಯಾಯಿತಿ ಇದೆ. ಬೇರೆ ವಿಧವಾದ ಸಂಪ್ರದಾಯಗಳಲ್ಲಿ ಅವರು ’ತನು’ವಿನಿಂದಾ ಶುರುಮಾಡಿ ಆನಂತರ ’ಮನ’ದ ವಿಷಯಕ್ಕೆ ಬರುತ್ತಾರೆ, ನಮ್ಮ ಸಂಪ್ರದಾಯದಲ್ಲಿ ’ಮನಸ್ಸಿ’ನಿಂದ ಶುರುಮಾಡುತ್ತೇವೆ, ಶರೀರದಿಂದಲ್ಲ.
ಕೆಲವರು ನನ್ನ ಬಳಿ ಬರುತ್ತಾರೆ. ನಾನು ಕಾಫೀ ಬೇಕೆಂದು ಕೇಳಿದರೆ, ಅವರು ತರುತ್ತಾರೆ. ಆದರೆ, ಅವರ ಕೈ ನಡುಗುತ್ತಿರುತ್ತದೆ, ಕಾಫಿ ಹನಿಗಳು ನೆಲದ ಮೇಲೆ ಬೀಳುತ್ತವ. ನಾನು ಅವರನ್ನು ನನ್ನ ಬಳಿಬರಲು ಅನುಮತಿ ನೀಡುವುದಿಲ್ಲ. ನಿನ್ನ ಮನಸ್ಸೇಕೆ ಹೀಗೆ ನಡುಗುತ್ತಿದೆ ಎಂದು ಕೇಳುತ್ತೇನೆ. ಜಪಾನಲ್ಲಿ Zen ಸಂಪ್ರದಾಯವಿದೆ. ಅಲ್ಲಿ ಟೀ ಉತ್ಸವ ನಡೆಯುತ್ತದೆ. ಒಬ್ಬ ಮಹಿಳೆ ಬಂದು ಕುಳಿತು, ಒಂದು ಖಾಲಿ ಕಪ್ ತೆಗೆದುಕೊಂಡು ಅದರಲ್ಲಿ ನೀರು ಹಾಕಿ, ಟೀ ಪುಡಿ, ಸಕ್ಕರೆ ಹಾಕಿ ಕುದಿಸುತ್ತಾಳೆ. ಈ ಕಲಾತ್ಮಕವಾದ ಪ್ರಕ್ರಿಯೆ ಒಂದು ಗಂಟೆಕಾಲ ನಡೆಯುತ್ತದೆ. ಆಕೆ ಹೇಗೆ ತಯಾರಿಸಿ ಕೊಡುತ್ತಾಳೆ ಎನ್ನುವುದು ಮುಖ್ಯವಲ್ಲ. ಅದು ಸಾಮಾನ್ಯವಾದ ಸಂಗತಿಯಲ್ಲಾ. ಮನಸ್ಸನ್ನು ಕೇಂದ್ರೀಕರಿಸುವುದೇ ಮುಖ್ಯ. ಟೀ ಮುಖ್ಯವಲ್ಲ.
ನೀವೆಲ್ಲಾ ಇಲ್ಲಿ ಕುಳಿತಿದ್ದೀರಿ ಎಂದರೆ ಇದೇನು ಚಿಕ್ಕ ವಿಷಯವಲ್ಲ. ಇಲ್ಲಿ ಮನಸ್ಸನ್ನು ಕೇಂದ್ರಿಕರಿಸುವುದೇ ಮುಖ್ಯ. ಹೇಗೆ ಕುಳಿತಿದ್ದೀರಿ ಎನ್ನುವುದು ಮುಖ್ಯವಾದ ವಿಷಯ. ನೀವು ಮನಸ್ಸಿನ ಜೊತೆ ಇದ್ದು, ಸ್ವಾಮೀಜಿ ಏನೋ ಹೇಳುತ್ತಾರೆ ಕೇಳಬೇಕು ಎನ್ನುವುದು ನಿಮಗೆ ಮುಖ್ಯವಾದ ವಿಷಯ.
ಬುದ್ಧನ ಕಾಲದಲ್ಲಿ ಮನಸ್ಪೂರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆಧ್ಯಾತ್ಮಿಕತೆಯಲ್ಲಿ ಎರಡು ಮುಖ್ಯ ವಿಷಯಗಳಿವೆ. 1. ಮನಪೂರ್ವಕವಾಗಿ ಕೆಲಸ ಮಾಡುವುದು 2. ಧ್ಯಾನ. ನಾಳೆ ಇದನ್ನು ಇಡೀ ವಿಶ್ವಕ್ಕೆ ಹೇಳಬಹುದು. ಅದು ಎಷ್ಟೋ ಕ್ರಿಯೆಗಳೊಂದಿಗೆ, ಮುಖ್ಯವಾಗಿ, ಮಾಡುವುದರ ಮೂಲಕ ಎಂದು ಬುದ್ಧ ಈದಿನ ಹೇಳಿದ್ದಾನೆ. ಇವರೆಡು. ಅಂಶಗಳನ್ನು ಅರ್ಥ ಮಾಡಿಕೊಳ್ಳೋಣ. ಏನನ್ನು ಮಾಡಿದರೂ ಸಹ ಅದನ್ನು ಮನಃಪೂರ್ವಕವಾಗಿ ಮಾಡು ಎಂದು ಬುದ್ಧನು ಶ್ರೀಸಾಮಾನ್ಯನಿಗೆ ಸಹ ಕಲಿಸಿದ. ಮುಂಚೂಣಿಯಲ್ಲಿರುವ (ಚುರುಕಾದ) ವಿದ್ಯಾರ್ಥಿಗೆ ಧ್ಯಾನ ಕಲಿಸಲಿಲ್ಲ. ಅದರ ಬಗ್ಗೆ ಮಾತನಾಡಲಿಲ್ಲ. ಏಕೆಂದರೆ ಆತನಿಗೆ ಮೊದಲು ಮನಪೂರ್ವಕವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಶಿಸ್ತು ಕಲಿಸಿದ. ನಿಧಾನವಾಗಿ ಆತ ಧ್ಯಾನದಲ್ಲಿ ಮುನ್ನಡೆ ಸಾಧಿಸುವಂತೆ ಮಾಡುತ್ತಿದ್ದ. ಅದಕ್ಕಾಗಿ ಆ ಶ್ರೀಸಾಮಾನ್ಯ ಧ್ಯಾನದ ಬಗ್ಗೆ ಕೇಳಿದಾಗ ನೀನು ನಡೆಯುವಾಗ, ತಿನ್ನುತ್ತಿರುವಾಗ ನಿನ್ನ ಮನಸ್ಸು ನಿನ್ನ ಶರೀರದ ಜೊತೆಯಿದ್ದರೆ ಅದೇ ಧ್ಯಾನ ಎಂದು ಹೇಳಿದ.
ಜೆನ್ ಮಾಸ್ಟರ್ ಇದ್ದಾರೆ. ಅವರ ಶಿಷ್ಯನೇನಾದರೂ ತಪ್ಪು ಮಾಡಿದರೆ ಹೇಗೆ ಹೊಡೆಯುತ್ತಾರೆ ಎಂದರೆ ಜೀವನ ಪೂರ್ತಿ ಆ ಶಿಷ್ಯನು ಸುಧಾರಿಸಿಕೊಳ್ಳಬೇಕು. ಆ ಕೂಡಲೇ ಆತ ದುಃಖಿತವಾಗಿ, ಕ್ರೋಧದಿಂದ ಗುರುವಿನ ಮೇಲೆ ಅಪಪ್ರಚಾರ ಮಾಡಲು ಶುರುಮಾಡುತ್ತಾನೆ. “ಅವರು ತುಂಬಾ ಕೆಟ್ಟವರು, ಸ್ವಾಮೀಜಿಯಾದವರು ಹಾಗೆ ಹೊಡೆಯುತ್ತಾರೆಯೇ? ಅವರು ಹಾಗೆ ಕೋಪ ಮಾಡಿಕೊಳ್ಳುತ್ತಾರೆ. ಇಂತಹವರು ಸ್ವಾಮೀಜಿಯಾಗಲು ಹೇಗೆ ಸಾಧ್ಯ” ಎಂದು ಹೇಳುತ್ತಾನೆ. ಅವನ ಮನಸ್ಸು ಹೇಗಿರುತ್ತದೆಯೋ ಹಾಗೆ ಸ್ವಾಮೀಜಿಯನ್ನು ಅರ್ಥಮಾಡಿಕೊಂಡಿರುತ್ತಾನೆ.
ಮಾರ್ಪಾ ಮತ್ತು ಮಿಲೇರೆಪಾರ ಕಥೆ ನಿಮಗೆ ಗೊತ್ತಿರಬೇಕಲ್ಲಾ ಶ್ರೇಷ್ಠ ಗುರು ಮಾರ್ಪಾ, ಶ್ರೇಷ್ಠ ಶಿಷ್ಯ ಮಿಲೇರೆಪಾ. ಈ ಕಥೆ ಗೊತ್ತಿಲ್ಲದವರು ಆಧ್ಯಾತ್ಮಿಕತೆಯ ಬಗ್ಗೆ ತಿಳಿಯದವರಾಗಿರುತ್ತಾರೆ. ಮಾಸ್ಟರ್ ಆಗಲು ಅರ್ಹರಲ್ಲ ಮಿಲಾರೆಪಾ ತನ್ನ ಕರ್ಮಫಲಗಳಿಂದ ಹೊರಬೀಳಬೇಕೆಂದು ಗುರು ಹೇಳಿದಹಾಗೆ ಆತನೊಬ್ಬನೇ ಒಂದೊಂದೇ ಕಲ್ಲು ತಂದು ಗುರುವಿನ ಆದೇಶಾನುಸಾರ ಮನೆಕಟ್ಟುತ್ತಾನೆ, ಗುರುಗಳು ಸರಿಯಿಲ್ಲ ಆ ಕಲ್ಲುಗಳನ್ನು ತೆಗೆದು ಅವುಗಳ ಯಥಾಸ್ಥಾನದಲ್ಲಿಟ್ಟು. ಮತ್ತೆ ಮನೆಕಟ್ಟಲು ಸೂಚಿಸುತ್ತಾರೆ. ಹೀಗೆ ಎಷ್ಟೋ ಬಾರಿ ಕಟ್ಟುವುದು ಮತ್ತೆ ಅದನ್ನು ಕೆಡವುವುದು ಮಾಡುತ್ತಾನೆ. ಕಲ್ಲುಗಳನ್ನು ಹೊತ್ತುಕೊಂಡು ಬರುವುದು ಹೋಗುವುದು ಮಾಡಿ ಆತನ ಬೆನ್ನು ಗಾಯಗಳಿಂದ ಜರ್ಝರಿತವಾಗುತ್ತದೆ. ಆದರೆ ಮಾರ್ಪಾ ಮಾತ್ರ ಒಪ್ಪಿಕೊಳ್ಳುತ್ತಿರಲಿಲ್ಲ. ಇದರಿಂದ ಏನು ಕಲಿಯಬಹುದು, ನೀನು ಮಾಸ್ಟರ್ ಆಗಬೇಕೆಂದು ಬಯಸಿದರೆ, ನಿನ್ನ ಮಾಸ್ಟರ್ ಹೇಳಿದ್ದನ್ನು ನೀನು ಮಾಡಬೇಕು. ಆಗ ಮಾಸ್ಟರ್ ನಿನಗೆ ಮನಪೂರ್ವಕವಾಗಿ ಹೇಳಿಕೂಡುತ್ತಾರೆ.
ಮೊದಲು ಗುರುವು ಹೇಳಿದಂತೆ ಕೇಳಬೇಕು. ಬುದ್ಧ ಪೂರ್ಣಿಮೆಯ ಈ ಸಂದರ್ಭದಲ್ಲಿ ಎಲ್ಲರೂ ಬಂದಿದ್ದಾರೆ. ಅವರಿಗೆ ಅಡುಗೆ ಮಾಡಿ ಬಡಿಸಬೇಕಲ್ಲಾ, ನೀನು ಹೋಗಿ ತರಕಾರಿ “ಕತ್ತರಿಸು” ಎಂದರೆ, ಅತ ಸ್ವಾಮೀಜಿ ನಾನು ಧ್ಯಾನ ಮಾಡಲು ಬಂದಿದ್ದೇನೆ ಎನ್ನುತ್ತಾನೆ. ನಾನು “ತರಕಾರಿ ಕತ್ತರಿಸು” ಎಂದೇ ಹೇಳುತ್ತೇನೆ. ನಾನು ಮಾಸ್ಟರ್ ಆಗಬೇಕು ಎನ್ನುತ್ತಾನೆ. ನಾನು “ತರಕಾರಿ ಕತ್ತರಿಸು” ಎನ್ನುತ್ತೇನೆ. ನೀನು ಯಾವಾಗ ಮನಸ್ಸನ್ನು ಕೇಂದ್ರೀಕರಿಸಿ ಕೆಲಸದಲ್ಲಿ ನಿನ್ನನ್ನು ನೀನು ತೊಡಗಿಸಿಕೊಳ್ಳುವೆಯೋ, ಆ ನಂತರವೇ ಧ್ಯಾನ ಮಾಡಲು ಅರ್ಹನಾಗುವೆ. ತರಕಾರಿ ಕಟ್ ಮಾಡಬೇಕೇ ಹೊರತು ನಿಮ್ಮ ಬೆರಳನ್ನು ಕತ್ತರಿಸಿಕೊಳ್ಳಬಾರದು. ಆ ತರಕಾರಿ ಕಟ್ ಮಾಡಿದ್ದೆಲ್ಲವೂ ಒಂದೇ ಆಕಾರದಲ್ಲಿ ಮತ್ತು ಒಂದೇ ಗಾತ್ರದಲ್ಲಿ ಇರಬೇಕು. ಮನಸ್ಸು ಚಂಚಲವಾದರೆ ಸೆಕೆಂಡುಗಳಲ್ಲಿ ತರಕಾರಿ ಹೋಳುಗಳ ಗಾತ್ರ, ಆಕಾರಗಳಲ್ಲಿ ಹೆಚ್ಚು ಕಡಿಮೆಯಾಗುವುದು.
ತಬಲಾಬಾರಿಸುವಾಗ ನಿನ್ನ ಗಮನ ತಬಲಾದ ಮೇಲೆ, ವಯಲಿನ್ ನುಡಿಸುವಾಗ ನಿನ್ನ ಗಮನ ವಯಲಿನ್ ಮೇಲೆ ಕೇಂದ್ರಿಕರಿಸಬೇಕು. ನೀನು ಮನಸ್ಸಿಟ್ಟು ಮಾಡುವ ಕೆಲಸದ ಮೇಲೆ ಜಾಗ್ರತೆಯಿಂದ ಇರಬೇಕು.
ರಮಣ ಮಹರ್ಷಿಯ ಬಳಿ ಒಬ್ಬ ಹೋದ. ಸ್ವಾಮೀಜಿ, ನನಗೆ ಧ್ಯಾನ ಅಥವಾ ದಿವ್ಯಜ್ಞಾನಪ್ರಕಾಶ ಬೇಕು ಎಂದನು. ಆಗ ರಮಣ ಮಹರ್ಷಿ ನಕ್ಕು ಜಾಗ್ರತಾವಸ್ಥೆಯಲ್ಲಿ ಜಾಗ್ರತೆಯಾಗಿದ್ದರೆ, ಸುಷುಪ್ತಿಯಲ್ಲಿ ಜಾಗ್ರತೆ ಬರುತ್ತದೆ. ಎಂದರು.
ಮೂರು ಅವಸ್ಥೆಗಳಿವೆ: 1. ಜಾಗೃತಾವಸ್ಥೆ (Wake full state) 2. ಸ್ವಪ್ನಾವಸ್ಥೆ (Dream state) 3. ಸುಷುಪ್ತಿ ಅವಸ್ಥೆ (Sleep state) ನೀನು ಜಾಗೃತಾವಸ್ಥೆಯಲ್ಲಿ ಜಾಗ್ರತೆಯಾಗಿದ್ದರೆ ಸುಷುಪ್ತಿಯಲ್ಲಿ ಅಂದರೆ Dream state ಮತ್ತು ನಿದ್ರಾವಸ್ಥೆಯಲ್ಲಿ ಜಾಗ್ರತೆ ಬರುತ್ತದೆ. ಇದನ್ನು ರಮಣ ಮಹರ್ಷಿ ಹೇಳಿದ್ದಾರೆ.
ಹಾಗೆ ಮೈಡಿಯರ್ ಫ್ರೆಂಡ್ಸ್, ನನಪಿಡಿ, ಆಧ್ಯಾತ್ಮಿಕತೆಯಲ್ಲಿ ಎರಡು ಅಂಶಗಳಿವೆ. ಮನಪೂರ್ವಕವಾಗಿ ಮಾಡುವುದು ಮತ್ತು ಧ್ಯಾನ ಮಾಡುವುದು. ಬುದ್ಧಪೂರ್ಣಿಮೆ ಆಚರಣೆಯ ಈ ಮೂರು ದಿನಗಳ ಕಾಲ ನಿಮಗೆ ನಾನು ಇದನ್ನೇ ಕಲಿಸುತ್ತೇನೆ. ನೀವು ಈ ವ್ಯಾಲಿ ಪ್ರವೇಶಿಸುವಾಗ ನೀವು ಮನಪೂರ್ವಕವಾಗಿ ಪ್ರವೇಶಿಸಬೇಕು. ಬೇರೆಯವರ ಜೊತೆ ಮಾತನಾಡುವಾಗ, ಇನ್ನೊಬ್ಬರು ಹೇಳುವುದನ್ನು ಕೇಳುವಾಗ ಮನಪೂರ್ವಕವಾಗಿ ಕೇಳಬೇಕು. ಪ್ರಕೃತಿಯನ್ನು ನೋಡುತ್ತಿರುವಾಗ ಮನಸಾರೆ ನೋಡಿ ಆನಂದಿಸಬೇಕು. ಹೀಗೆ ನೀವು ಅಭ್ಯಾಸ ಮಾಡುತ್ತಿದ್ದರೆ, ಹೆಚ್ಚಾಗಿ ಧ್ಯಾನಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ.
ಧ್ಯಾನವೆಂದರೇನು? ಇದು ಮನಸ್ಸಿನ ಜೊತೆಯಲ್ಲಿ ಮಾಡುವುದಲ್ಲ. ಮನಸ್ಸನ್ನು ಶೂನ್ಯಗೊಳಿಸಿ ಮಾಡುವ ಒಂದು ಕ್ರಿಯೆ. ನೀವು ಮನಪೂರ್ವಕವಾಗಿ ಇಲ್ಲದಿದ್ದರೆ. ಶೂನ್ಯಗೊಳಿಸಲು ಸಾಧ್ಯವಿಲ್ಲ. “Unless you cannot be full. you cannot be the less”.
ನೀವು ಕಣ್ಣು ಮುಚ್ಚಿಕೊಂಡಾಗ ನಿಮಗೆ ಏನಾಗುತ್ತದೆ ಎಂದು ಅರ್ಥವಾಗುವುದಿಲ್ಲ. ಅಲ್ಲಿ ಶೂನ್ಯತೆಯಿರುತ್ತದೆ. ಮನಸ್ಸು ಶೂನ್ಯವಾಗುವುದು ಧ್ಯಾನದ ಒಂದು ಪ್ರಕ್ರಿಯೆ. ಮನಸ್ಸಿನ ಜೊತೆಯಿರುವುದನ್ನು ಬಿಟ್ಟುಮನೋಶೂನ್ಯತೆಯ ಕಡೆಗೆ ಹೋಗುವುದೇ ಧ್ಯಾನದ ಗುರಿ ಆಗಿರುತ್ತದೆ.”Mindfullness to mind emptiness that is the goal in Meditation”. ಶ್ವಾಸವೇ ಈ ಇವೆರೆಡಕ್ಕೂ ದಾರಿಯಾಗಿರುತ್ತದೆ. ನೀವು ಮನಃಪೂರ್ವಕವಾಗಿ ಮನೋಶೂನ್ಯತೆಯ ಕಡೆಗೆ ಹೋಗಬೇಕು. . ಉಸಿರಾಟದ ಮೇಲೆ ಗಮನ ಹೋದರೆ, ಮನಸ್ಸಿನಿಂದ ಮನೋಶೂನ್ಯತೆಯ ಕಡೆಗೆ ನಿಧಾನವಾಗಿ ಚಲಿಸುತ್ತಾ ಪೂರ್ಣವಾಗಿ ಮಹಾಶೂನ್ಯತೆಗೆ ಹೋಗುತ್ತೇವೆ.
ಇದರಲ್ಲಿ ಎಲ್ಲರೂ ಯಶಸ್ವಿಯಾಗಿದ್ದಾರೆ. ಆದರೆ ಅವರು ಯಾವ ಕ್ಷೇತ್ರದಲ್ಲಿದ್ದರೂ, ಮನಃಪೂರ್ವಕವಾಗಿ ೨೪ ಗಂಟೆಯೂ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಶ್ರೀಮಂತರಾಗಲು ಸಾಧ್ಯವಾಗುವುದಿಲ್ಲ. ಯಶಸ್ವೀ ಜನರು ಗಮನವಿಟ್ಟು ಕೆಲಸ ಮಾಡುವ ನುರಿತ ಮಾಸ್ಟರ್ಗಳಾಗಿರುತ್ತಾರೆ.
ಆದರೆ ಇಲ್ಲಿ ನಮ್ಮ ಧ್ಯಾನ ಕ್ಷೇತ್ರದಲ್ಲಿ, ನಮ್ಮ ಕೆಲಸವೇನೆಂದರೆ, ನಾವು ಬುದ್ಧರಾಗುವುದು. ಅದಕ್ಕೆ ಬೇಕಾಗಿರುವುದು ಮನಸ್ಸಿನ ಶೂನ್ಯತೆ. ಕಣ್ಣು ಮುಚ್ಚಿಕೊಂಡಾಗ ಮನಸ್ಸು ಶೂನ್ಯವಾಗುತ್ತದೆ, ಆಗ ನಿಮ್ಮ ಮನಸ್ಸಿನ ಹೊರಗೆ ಇದ್ದ ಪ್ರಕೃತಿ ನಿಮಗೆ ಕಾಣುತ್ತದೆ. ಏಕೆಂದರೆ ನೀವು ಮನಃಪೂರ್ವಕವಾಗಿರುವುದನ್ನು ಅಭ್ಯಾಸ ಮಾಡಿದ್ದರಿಂದ, ನೀವು ಕಣ್ಮುಚ್ಚಿ ಉಸಿರಾಟದಮೇಲೆ ಗಮನವಿಟ್ಟಕೂಡಲೇ ಪ್ರಕೃತಿ ನಿಮ್ಮ ಕಣ್ಣಿನ ಮುಂದೆ ಬಂತು.
ಹೀಗೆ ಉಸಿರಾಟದ ಮೇಲೆ ಗಮನದ ಪ್ರಕ್ರಿಯೆ ಮುಂದುವರೆಯುತ್ತಾ ಹೋದಂತೆ ನಿಧಾನವಾಗಿ ಆಹ್ಲಾದಕರವಾಗಿರುವ ವಾತಾವರಣ ಉಂಟಾಗುತ್ತದೆ. ಅದೇ ಅಭ್ಯಾಸವಾಗುತ್ತಾ ಹೋಗುತ್ತದೆ. ನೀವು ಆನಾಪಾನಾಸತಿ ಅಭ್ಯಾಸ ಮಾಡಿದರೆ, ಮನೋಶೂನ್ಯತೆಯ ಕಡೆ ಸಾಗುತ್ತೀರಿ.
ಉಸಿರಾಟವು ಹೊರ ಜಗತ್ತಿಗೂ, (ಪ್ರಪಂಚ) ಒಳಗಿನ ಪ್ರಪಂಚಕ್ಕು ನಡುವಿನ ದಾರಿಯಾಗಿದೆ. ಹೊರಜಗತ್ತು ಪೂರ್ಣತೆಯಿಂದ ಕೂಡಿದ್ದರೆ. ಒಳಜಗತ್ತು ಶೂನ್ಯತೆಯಿಂದ ಕೂಡಿದೆ. ಮನವು ಶೂನ್ಯವಾದಾಗ ಸೂಕ್ಷ್ಮಶರೀರ ಭೌತಿಕ ದೇಹದಿಂದ ಹೊರಬರುತ್ತದೆ. ಆಗ ನೀವು ನಿಮ್ಮ ಸೂಕ್ಷ್ಮಶರೀರವನ್ನು ನೋಡಬಹುದು.
ನಿಮ್ಮ ಮನಸ್ಸು ಪೂರ್ಣತೆಯಿಂದ ತುಂಬುತ್ತದೆ. ಪೂರ್ಣತ್ವ ಎಂಬುದು ಬಂದರೆ ಅದು ಮತ್ತೆ ಶೂನ್ಯ ವಾಗಲೇಬೇಕು. ಇದೇ ಆಧ್ಯಾತ್ಮಿಕ ಶಾಸ್ತ್ರ. ನಾನು ಶರೀರವಲ್ಲ. ನಾನು ಇಲ್ಲಿದ್ದೇನೆ, ನನ್ನ ಶರೀರ ಅಲ್ಲಿದೆ ಎಂದು ನಿಮ್ಮ ಸೂಕ್ಷ್ಮಶರೀರ ಹೇಳುತ್ತದೆ. ನಿಮ್ಮ ಮನಸ್ಸು ಶೂನ್ಯತೆಯನ್ನು ಕಾಣದಿದ್ದರೆ, ಮನೋಪೂರ್ಣತೆಯ ಎರಡನೆಯ ಮುಖದ ಅರಿವು ಆಗುವುದಿಲ್ಲ. ಶೂನ್ಯದಲ್ಲಿದ್ದಾಗ ನೀವು ನಿಮ್ಮ ಗತಜನ್ಮಗಳನ್ನು ನೋಡಿಕೊಳ್ಳುವಿರಿ. ನಾನು ಶರೀರವಲ್ಲಾ, ನಾನು ಈ ಜೀವನಾವಧಿ ಅಷ್ಟೇ ಅಲ್ಲಾ. ಈಗಿರುವ ನಿಮ್ಮ ತಂದೆ, ತಾಯಿ, ಹೆಂಡತಿ ಗಂಡ ಮಕ್ಕಳು ನಮ್ಮ ಸ್ವಂತದವರಲ್ಲ ಎಂದು ತಿಳಿದುಕೊಳ್ಳುವಿರಿ.
ಹಾಗೇ ಹೋಗುತ್ತಾ ನೀವು ಆತ್ಮ ಮಾತ್ರವೇ ಅಲ್ಲ ಎಂದು ನಿಮಗೇ ತಿಳಿಯುತ್ತದೆ. ಎಷ್ಟೋ ವಿಷಯಗಳು ನಿಮ್ಮ ಮನಸ್ಸು ಶೂನ್ಯವಾದಾಗ ಘಟಿಸುತ್ತದೆ. ಮತ್ತೆ ನಿಮ್ಮ ಮನಸ್ಸು ಉನ್ನತ ಸೃಷ್ಟಿಯಿಂದ ತುಂಬುತ್ತದೆ. ನಂತರ ನೀನು ಬುದ್ಧನಾಗುವೆ.
ಒಬ್ಬ ಬುದ್ಧನನ್ನು ಕೇಳಿದ. ನೀವು ನಮಗೆ ಎಲ್ಲಾ ವಿಷಯಗಳನ್ನು ಹೇಳಿದ್ದೀರಾ ಅಲ್ಲವೇ? ಎಂದ. ಆಗ ಬುದ್ಧ ಏನು ಹೇಳಿದ ಗೊತ್ತೆ? “ನಿಮಗೆ ನಾನೇನು ಹೇಳಿದ್ದೇನೆ?, ನೀನು ಹೋಗಿ ಮಾವಿನ ಮರದಲ್ಲಿರುವ ಕೆಲವು ಎಲೆಗಳನ್ನು ಕಿತ್ತುಕೊಂಡು ಬಾ” ಎಂದ. ಆಗ ಆತ ಸ್ವಲ್ಪ ಎಲೆಗಳನ್ನು ಕಿತ್ತುತಂದುಬುದ್ಧನ ಬಳಿ ಬಂದ. ಆಗ ಬುದ್ಧ ಹೀಗೆ ಹೇಳಿದ : “ನಾನು ನಿನಗೆ ಏನು ಹೇಳಿದ್ದೇನೆ ಅದು ನಿನ್ನ ಕೈಗಳಲ್ಲಿರುವಷ್ಟು ಎಲೆಗಳಿಗೆ ಸಮ. ನಾನು ನಿನಗೆ ಏನು ಹೇಳಲ್ಲವೋ ಅದು ಅ ಮರದಲ್ಲಿರುವ ಎಲೆಗಳಷ್ಟಕ್ಕೆ ಸಮ” ಕೆಲವರು ಸಂಜಯ್ ಕಿಂಗಿಗೆ ನೀನು ಸಂಗೀತದಲ್ಲಿ ಗ್ರೇಟ್ ಮಾಸ್ಟರ್ ಎಂದು ಹೇಳುತ್ತಾರೆ ಆಗ ಆತ ನಾನು ಕಲಿತದ್ದು ಇಷ್ಟು. ಕಲಿಯಬೇಕಾದ್ದು ಎಷ್ಟೋ ಉಳಿದಿದೆ.” ಎಂದು ಹೇಳುತ್ತಾನೆ. ಸಂಗೀತವಾಗಲಿ, ದಿವ್ಯಜ್ಞಾನಪ್ರಕಾಶವಾಗಲಿ, ಆಧ್ಯಾತ್ಮಿಕ ಶಾಸ್ತ್ರವಾಗಲಿ ಎಲ್ಲದರಲ್ಲೂ ಅಷ್ಟೇ ಕಲಿಯಬೇಕಾದ್ದು ಎಷ್ಟೋ ಉಳಿದಿರುತ್ತದೆ.
ಮೈ ಡಿಯರ್ ಫ್ರೆಂಡ್ಸ್ ಈ ಎರಡು ಪದಗಳನ್ನು ನೆನಪಿನಲ್ಲಿಡಿ, 1. ಮನೋಪೂರ್ಣತೆ 2. ಧ್ಯಾನ
ಧ್ಯಾನವೆಂದರೆ ಮನೋಶೂನ್ಯತೆ. “ಯೋಗಃ ಚಿತ್ತ ವೃತ್ತಿ ನಿರೋಧಃ” ಮನಸ್ಸನ್ನು ಶೂನ್ಯಗೊಳಿಸಬೇಕು. ಹೇಗೆಂದರೆ ಧ್ಯಾನ ಅಭ್ಯಾಸದ ಮೂಲಕ. ನಿನಗೆ ಏನು ಹೇಳಲಾಗಿದೆಯೋ ಅದನ್ನು ಮಾಡು. ನೀನೇನಾದರೂ ಸಾಧಿಸಬೇಕೆಂದಿದ್ದರೆ, ಅದನ್ನೇ ಸಾಧನೆ ಮಾಡು. ಒಬ್ಬ ವ್ಯಕ್ತಿ ಮಾಸ್ಟರ್ ಆಗಿ ತನ್ನ ಶರೀರವನ್ನು ಕಂಟ್ರೋಲ್ ಮಾಡಿದರೆ ಕೊನೆಗೆ ’ದಮ’ದಿಂದ ’ಸಮ’ಕ್ಕೆ ಹೋಗುತ್ತಾನೆ. ಮನಸ್ಸು ಶೂನ್ಯವಾಗುತ್ತದೆ. ಮೈಡಿಯರ್ ಫ್ರೆಂಡ್ಸ್, ಬುದ್ಧಪೂರ್ಣಿಮೆ ಆಚರಣೆಯ ಈ ಮೂರು ದಿನಗಳು ನಾವು ಈ ಸತ್ಯಗಳ ಬಗ್ಗೆ ಧ್ಯಾನದ ಮೂಲಕ ತಿಳಿದುಕೊಳ್ಳೋಣ.
“ಎಲ್ಲರೂ ಬುದ್ಧರೇ”
ನನಗೆ ತುಂಬಾ ಖುಷಿಯಾಗುತ್ತದೆ. ನಾನೆಷ್ಟೋ ಅದೃಷ್ಟವಂತ. ನಾನು ಇಬ್ಬರು ಮಹಾನ್ ಬುದ್ಧರ ನಡುವೆ ಇದ್ದೇನೆ. ಮತ್ತು ನನ್ನ ಮುಂದೆ ಎಷ್ಟೋ ಜನ ಬುದ್ಧರು ಇದ್ದಾರೆ. ಹಾಗೆಯೇ ನನ್ನ ಹಿಂದೆಯೂ ಎಷ್ಟೋ ಜನ ಬುದ್ಧರು ಇದ್ದಾರೆ. ನಾವೆಲ್ಲರೂ ಬುದ್ಧರು. ನಾವೆಲ್ಲರೂ ಧೈರ್ಯದಿಂದ ಇರಬೇಕು. ದಿಟ್ಟತನದಿಂದ ಇಲ್ಲದಿದ್ದರೆ ನೀವು ಬುದ್ಧರಾಗುವುದಿಲ್ಲ. ಬುದ್ಧ ಎಂದರೆ ಒಂದು ಆಟ, ಒಂದು ಸಂಭ್ರಮಾಚರಣೆ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್ನ ರಜತೋತ್ಸವದ ಈ ವಿಶೇಷ ಆಚರಣೆಯಲ್ಲಿ, ಪ್ರಮುಖವಾಗಿ ನಾವು 25 ವರ್ಷಗಳನ್ನು ಪೂರೈಸಿದೇವೆ. ಮುಂದಿನ ವರ್ಷ 26ನೆಯ ವರ್ಷವಾಗುತ್ತದೆ. ಆದರೆ 25 ವರ್ಷ ಎನ್ನುವುದು ಒಂದು ಹೆಗ್ಗುರುತು, ಮಹತ್ವದ ವಿಷಯವಾಗಿದೆ. ನಮ್ಮ ಮುಂದಿನ ಹೆಗ್ಗುರುತು, ಸುವರ್ಣಸಂಭ್ರಮ. ನಾವು ಐವತ್ತು ವರ್ಷಗಳಾಗಲು ಕಾಯುತ್ತಿದ್ದೇವೆ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್ನ ಐವತ್ತು ವರ್ಷಗಳ ಸಂಭ್ರಮಾಚರಣೆಯನ್ನು ಊಹಿಸಿಕೊಳ್ಳಿ. 2040ಕ್ಕೆ ಸುವರ್ಣ ಮಹೋತ್ಸವದ ಆಚರಣೆ. ಆಗ ಇಲ್ಲಿರುವ ನೀವೆಲ್ಲಾ ಮುದುಕರಾಗಿರುವುದಿಲ್ಲ. ಬದಲಾಗಿ ಎಷ್ಟೋ ಕಾರುಣ್ಯದಿಂದ ಕೂಡಿರುತ್ತೀರಿ.
ಬುದ್ಧತ್ವ ಎಂದರೆ, ಈಗಿರುವ ವಯಸ್ಸಿಗಿಂತ ಹಿಂದಕ್ಕೆ ಹೋಗುವುದು ಅದೇ ಬುದ್ಧತ್ವ. 2040ಕ್ಕೆ ಎಲ್ಲಾ ಈಗ ಹೇಗಿದ್ದೀರೋ ಹಾಗೇ ಇರುತ್ತೀರಿ. ನಿಮಗೆ ವಯಸ್ಸಾಗಿರುತ್ತದೆ ಎಂದರೆ, ಹೌದು ನೀವು ಮುದುಕರಾಗಿರುತ್ತೀರಿ. ಆದರೆ ನೀವು ಹೇಗೆ ನಿಮ್ಮ ಜೀವನ ವಿನ್ಯಾಸವನ್ನು ನೀವೇ ನಿರ್ಧರಿಸುತ್ತೀರೋ ಹಾಗೇ ಇರುತ್ತೀರಿ. ನೀವು ಮಾತಿನಲ್ಲಿ ಸುಧಾರಣೆ ತಂದುಕೊಂಡರೆ, ನೀವು ಮುದುಕರಾಗುವುದಿಲ್ಲ. “ಯದ್ಭಾವಂ ತದ್ಭವತಿ” ಬುದ್ಧತ್ವವೆಂದರೆ, ಯಾವಾಗಲೂ ದಿಟ್ಟತನದಿಂದ ಇರುವುದು. ಎಳೆಯರಾಗಿರುವುದು, ಯುವಕರಾಗಿರುವುದು. ಬುದ್ಧತ್ವವೆಂದರೆ ಜೀವಿಸಿರುವ ವ್ಯಕ್ತಿಗಳ ಮತ್ತು ಪ್ರಾಣಿಕೋಟಿಯ ಮೇಲೆ ಅಪಾರ ಕರುಣೆಯಿಂದ ಇರುವಂತೆ ನಿಮ್ಮೊಂದಿಗೆ ನೀವು ಒಪ್ಪಂದ ಮಾಡಿಕೊಳ್ಳುವುದು.
ಯಾವ ಪ್ರಾಣಿಯೂ ಬುದ್ಧತ್ವವನ್ನು ಬೇಡುವುದಿಲ್ಲ. ಆದರೆ ಪ್ರತಿಯೊಬ್ಬ ಮನುಷ್ಯನೂ ಬುದ್ಧತ್ವವನ್ನು ಬೇಡುತ್ತಾನೆ. ಹಾಗಾದರೆ ಪ್ರಾಣಿಗಳು ಏನು ಬೇಡುತ್ತೇವೆ? ಎಂದರೆ ಮಿತ್ರತ್ವ ಮಾತ್ರ, ಮೈತ್ರೀಭಾವ. ಪ್ರಾಣಿಗಳು ಇರುವುದು ಅವುಗಳನ್ನು ಕತ್ತರಿಸಿ ತಿನ್ನಲು ಅಲ್ಲ. ಎಂಥ ಭಯಾನಕ ವಿಷಯ. ಈ ಶುಭಸಂದರ್ಭದಲ್ಲಿ “ದ ಗ್ರೇಟ್ ಮಾಸ್ಟರ್” ಮಹಾವೀರನನ್ನು ನಾವು ನೆನಪಿಸಿಕೊಳ್ಳೋಣ. ಆತ ಅಹಿಂಸೆ ಮತ್ತು ಸಸ್ಯಾಹಾರಕ್ಕೆ ಪ್ರತೀಕವಾಗಿದ್ದಾನೆ.
ಬುದ್ಧನು ತುಂಬಾ ಸೌಮ್ಯ ಸ್ವಭಾವವುಳ್ಳವನು, ತನ್ನನ್ನು ತಾನು ಬಲವಂತವಾಗಿ ಯಾವುದಕ್ಕೂ ಒಪ್ಪಿಸುತ್ತಿರಲಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಬುದ್ಧ ತಟಸ್ಥನಾಗಿರುತ್ತಿದ್ದನು. ತಾನು ಬಾಯಿ ತೆಗೆಯುತ್ತಿರಲಿಲ್ಲ. ಆದರೆ ಮಹಾವೀರ ಮಾತ್ರ ಅಹಿಂಸೆ ಮತ್ತು ಸಸ್ಯಾಹಾರಕ್ಕೆ ಒತ್ತು ನೀಡುತ್ತಿದ್ದನು. “ಅಹಿಂಸೋ ಪರಮೋ ಧರ್ಮ” ಹಿಂಸೆಗೆ ಮಹಾವೀರನು ಸಂಪೂರ್ಣವಾಗಿ ನೇರ ಮತ್ತು ನಿಷ್ಠುರವಾದಿಯಾಗಿದ್ದನು. ಈ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಮಹಾವೀರ ನನ್ನು ನಾವು ನೆನಪಿಸಿಕೊಳ್ಳೋಣ, ಮತ್ತು ನಾವು ಈ ಸೃಷ್ಠಿಯಲ್ಲಿರುವ ಎಲ್ಲಾ ಮಾಸ್ಟರ್ಗಳನ್ನೂ ನೆನಪಿಸಿಕೊಳ್ಳೋಣ. ಬುದ್ಧ ಪೂರ್ಣಿಮೆಯು ಬುದ್ಧನಿಗೆ ಮಾತ್ರ ಅಲ್ಲ. ಗೌತಮ ಬುದ್ಧನನ್ನು ನೆನಪಿಸಿಕೊಂಡರೆ, ಬುದ್ಧನೊಬ್ಬನೇ ಇರುತ್ತಾನೆ. ಈ ಸಂದರ್ಭದಲ್ಲಿ ನಾವು ಈಗಿರುವ, ಹಿಂದೆ ಇದ್ದ, ಮುಂದೆ ಆಗಲಿರುವ ಬುದ್ಧರನ್ನು ನೆನಪಿಸಿಕೊಳ್ಳೋಣ. ಎಲ್ಲರನ್ನೂ! ಅವರು ಹಿಂದೆ ಇದ್ದವರು ಆಗಿರಬಹುದು. ಈಗ ಇರುವವರು, ಮುಂದೆ ಬರುವವರು ಕೂಡಾ… ಅವರಿನ್ನೂ ಬುದ್ಧರಾಗಿಲ್ಲ.
ಮೈಡಿಯರ್ ಫ್ರೆಂಡ್ಸ್, ಎಲ್ಲರನ್ನೂ ಬುದ್ಧರಂತೆ ನೋಡುವುದೇ ಬುದ್ಧತ್ವ. ನಾವೆಲ್ಲರನ್ನೂ ಎಲ್ಲಾ ಕಾಲದಲ್ಲೂ ಬುದ್ಧರ ಹಾಗೆಯೇ ನೋಡಬೇಕು. ಬುದ್ಧ ಎಂದರೆ ಸಮಯದ ಶೂನ್ಯತೆ. ಬದಲಾವಣೆ ಎಂಬುದು ಶಾಶ್ವತ ಎಂದು ತಿಳಿದುಕೊಳ್ಳುವುದೇ ಬುದ್ಧತ್ವ. ಎಲ್ಲವೂ ಬದಲಾಗಲೇಬೇಕು ಅದು ಒಳಗಿನ ಬದಲಾವಣೆ ಆಗಿರಬಹುದು ಅಥವಾ ಹೊರಗಿನ ಬದಲಾವಣೆ ಆಗಿರಬಹುದು. ನಾವು ಬದಲಾಗುತ್ತಾ ಇರಬೇಕು. ನಮ್ಮೊಳಗೆ ನಾವು ಸ್ಥಿರವಾಗಿಲ್ಲ. ನಮ್ಮ ಕೆಲಸವೇನೆಂದರೆ ಸತ್ಯದ ಕಡೆಗೆ ಸಾಗುವುದು. ಸತ್ಯ ಎನ್ನುವುದು ನಮ್ಮ ಸ್ವಂತದ್ದು ಅಥವಾ ಇತರರಿಗಾಗಿ ಅಲ್ಲ. ಇದೇ ದೇವರು ನಾವು ದೇವರ ಜೊತೆ ಸ್ನೇಹಮಾಡಬೇಕು. ಅಂದರೆ, ಸತ್ಯದ ಜೊತೆ ಸ್ನೇಹ. ಸತ್ಯವು ಸುಂದರವಾಗಿದೆ. “ಸತ್ಯಮೇವ ಜಯತೇ” ಸತ್ಯ ಯಾವತ್ತೂ ಸತ್ಯವೇ. ಸುಳ್ಳು ಸುಳ್ಳೇ ಆಗಿರುತ್ತದೆ. ಎಲ್ಲಾ ಬದಲಾವಣೆಗಳು ಸ್ಥಿರವಾಗಿರುತ್ತವೆ. ಆದರೆ ಶಾಶ್ವತವಾದದ್ದನ್ನು ನೀವು ಅರ್ಥಮಾಡಿಕೊಳ್ಳಬೇಕು. ಯಾವ ಬದಲಾವಣಿಗೂ ಚಿಂತಿಸಬಾರದು.
ಯಾವ ಬದಲಾವಣೆಗಾದರೂ ನೀವು ’ಚಿಂತಿಸಿದಿರಿ’ ಎಂದರೆ ನೀವು ಬುದ್ಧತ್ವ ಹೊಂದಿಲ್ಲ ಎಂದರ್ಥ. ನೀವು ಬದಲಾವಣೆಯನ್ನು ಶಾಶ್ವತ ಎಂದು ಅರ್ಥಮಾಡಿಕೊಂಡಿದ್ದರೇ ಅಲ್ಲಿ ನಿಮಗೆ ನಗುವು ಮೂಡುತ್ತದೆ. ಯಾವಾಗ ನೀವು ನಗುವಿರೋ ಆಗ ನೀವು ಒಬ್ಬ ಬುದ್ಧ, ಅತ್ತರೆ ನೀವು ಬುದ್ಧನಲ್ಲ.
ಒಬ್ಬ ಬುದ್ಧ ಸೃಷ್ಟಿಕರ್ತ, ಜಡತ್ವದಿಂದ ಇರುವುದಿಲ್ಲ, ಯಾವಾಗಲೂ ಸಕ್ರಮವಾಗಿರುವವನು. ನಾವೆಲ್ಲಾ ಬುದ್ಧರು. ಭೂಮಿಯ ಮೇಲೆ ಇರುವ ಪ್ರತಿಯೊಬ್ಬರೂ ಸಸ್ಯಾಹಾರಿಗಳು, ಬುದ್ಧರು ಆಗುವುದನ್ನು ನೋಡುವುದೇ ಜೀವನದ ಉದ್ದೇಶ. ನಾವು ಕೆಲಸಮಾಡುತ್ತಿರುವುದೇ ಅದಕ್ಕಾಗಿ. ನಮಗೆ ಹಣ ಇದ್ದರೇನು, ಸಂಸಾರ ಇದ್ದರೇನು, ಇಲ್ಲದಿದ್ದರೇನು? ಒಳ್ಳೆಯಬಟ್ಟೆ, ಒಳ್ಳೆಯ ನಿದ್ರೆ ಇದ್ದರೇನು, ಇಲ್ಲದಿದ್ದರೇನು? ನಾವೆಲ್ಲಾ ಸತ್ಯಕ್ಕಾಗಿ ಕೆಲಸಮಾಡಬೇಕು. ನಾವು ಸತ್ಯದ ಯೋಧರು. 2500 ವರ್ಷಗಳ ಹಿಂದೆ ಬುದ್ಧ ಇದ್ದಾಗ, ನಾನು ಇನ್ನು 2500 ವರ್ಷಗಳ ನಂತರ ನಾನು ಮರಳಿ ಬರುತ್ತೇನೆ ಎಂದು ಹೇಳಿದ್ದರು. ಈಗ ನಾವೆಲ್ಲಾ ಅದೇ ಬುದ್ಧರು. ನಾವೆಲ್ಲಾ ಮರಳಿ ಬಂದಿರುವ ಮೈತ್ರೇಯ ಬುದ್ಧರು.
ಮೈಡಿಯರ್ ಫ್ರೆಂಡ್ಸ್, ಈ ‘ಗ್ರೇಟ್ ಪಿರಮಿಡ್ ವ್ಯಾಲಿ ಇಂಟರ್ ನ್ಯಾಷನಲ್ ಮೈತ್ರೇಯ ಬುದ್ಧ ಧ್ಯಾನ ವಿದ್ಯಾಲಯ’ಕ್ಕೆ ಇಡೀ ವಿಶ್ವವೇ ಬಂದು ಇಲ್ಲಿನ ಪ್ರಕಂಪನಗಳನ್ನು ಪಡೆದುಕೊಳ್ಳುತ್ತಿದೆ. ಪ್ರತಿ ವರ್ಷ ನಾವು ಬುದ್ಧ ಪೂರ್ಣಿಮೆಯನ್ನು ಆಚರಿಸಲು ಇಲ್ಲಿ ಸೇರುತ್ತೇವೆ. ಈ ವರ್ಷ ನಮಗೆ ತುಂಬಾ ವಿಶೇಷವಾದ ಸಂಭ್ರಮವೇನೆಂದರೆ P.S.S.M.ಗೆ 25 ವರ್ಷಗಳಾಗಿದೆ.
ನಾನು ಈ 25 ವರ್ಷಗಳ ಹಿಂದೆ ನೋಡಿದಾಗ, ನಾನು ಯಾರನ್ನು ಭೇಟಿಮಾಡುತ್ತಿದ್ದೇನೋ ನನ್ನ ಬಳಿ ಬಂದವರಲ್ಲಿ ನಾನು ಬುದ್ಧನನ್ನು ನೋಡುತ್ತಿದ್ದೆ. ನನಗೆ ಗೊತ್ತು ಅವರು ಯಾರು ಎಂದು. ನಾನು ಒಂದು ಕೋಣೆಯಲ್ಲಿ ಇದ್ದಾಗ ಯಾರಾದರೂ ಬಂದು “ಸಾರ್ ನಾನು ನಿಮ್ಮನ್ನು ಕಾಣಬೇಕೆಂದು ಬಂದೆ” ಎಂದರೆ, ಆಗ ನಾನು “ನನಗೆ ಗೊತ್ತು ಬನ್ನಿ ಬುದ್ಧ” ಎಂದರೆ, ಅವರಿಗೆ ಆಶ್ಚರ್ಯ ಬುದ್ಧ ಎಲ್ಲಿದ್ದಾನೆ? ಎಂದು. ಆಕರ್ಷಣಾ ಸಿದ್ಧಾಂತದ ಪ್ರಕಾರ. “ಒಬ್ಬ ಬುದ್ಧ ಇನ್ನೊಬ್ಬ ಬುದ್ಧನನ್ನು ಆಕರ್ಷಿಸುತ್ತಾನೆ. ಒಬ್ಬ ಸಂಗೀತಗಾರ ಇನ್ನೊಬ್ಬ ’ಸಂಗೀತಗಾರನನ್ನು’ ಆಕರ್ಷಿಸುತ್ತಾನೆ. Bird of the same feather flocks together ಎಂಬ ಇಂಗ್ಲಿಷ್ ನಾಣ್ನುಡಿಯ ಹಾಗೆ, ಒಂದೇ ಮನಸ್ಸಿನವರು ಒಟ್ಟಿಗೇ ಸೇರುತ್ತೇವೆ. ಹಾಗೆಯೇ ನಾವೆಲ್ಲಾ ಇಲ್ಲಿ ಒಟ್ಟುಗೂಡಿದ್ದೇವೆ. ಯಾರು ನನ್ನ ಬಳಿ ಬರುತ್ತಿದ್ದರೋ ಆಗ, ನಾನು ಅವರನ್ನು ಕುರಿತು “ಇನ್ನೊಬ್ಬ ಬುದ್ಧನು ಬಂದ” ಎನ್ನುತ್ತಿದ್ದೆನು.
ಒಬ್ಬರು ಇಬ್ಬರಾದರು, ಮೂರು, ನಾಲ್ಕು, ಹತ್ತು ಹೀಗೆ ನಲವತ್ತು ಆಯಿತು. ಮೊದಲು ನಾನು ಯಾರು ಬಂದರೂ ಎಷ್ಟು ಜನರಾದರೆಂದು? ಎಣಿಸುತ್ತಿದ್ದೆ. 1994ರಲ್ಲಿ ಎಣಿಸುವುದನ್ನು ನಿಲ್ಲಿಸಿದೆ, ಎಷ್ಟು ಜನರಿಗೆ ದಿವ್ಯಜ್ಞಾನಪ್ರಕಾಶವಾಯಿತು (ಎನ್ಲೈಟನ್ಮೆಂಟ್) ಎಂದು ಎಣಿಸುತ್ತಿದ್ದೆ. ನನಗೆ ಗೊತ್ತಾಯಿತು ಇದೆಲ್ಲಾ ಅಗತ್ಯವಿಲ್ಲದ್ದು ಎಂದು. ಎಣಿಸುವಾಗ ನಾನು ತುಂಬಾ ಖುಷಿಯಿಂದ ಇರುತ್ತಿದ್ದೆ. ಒಬೊಬ್ಬರ ಸಂಖ್ಯೆಯೂ ದ್ವಿಗುಣವಾದಷ್ಟು ಈ ಖುಷಿಯನ್ನು ಹೀಗೆ ಆಚರಿಸಲಿ ಎಂದುಕೊಳ್ಳುತ್ತಿದ್ದೆ. ಒಬ್ಬನು ಬುದ್ಧನಾಗುವುದೇ ಅಲ್ಲ ಇನ್ನೊಬ್ಬ ಬುದ್ಧನಿಗೆ ಹೇಗೆ ಗೌರವಕೊಡಬೇಕು ಎಂಬುದನ್ನು ತಿಳಿದಿರುವವನೇ ಬುದ್ಧ. ಆದರೆ ಅವರಾಗಿ ಅವರು ನಿರ್ಧರಿಸಿದರೆ ಮಾತ್ರ ಅವರು ಬುದ್ಧರಾಗುತ್ತಾರೆ. ನೀವು ಬುದ್ಧರಾಗಲು ಸಹಾಯ ಮಾಡಿದವರಿಗೆ ನಿಮ್ಮ ಪ್ರಣಾಮಗಳನ್ನು ಸಲ್ಲಿಸಬೇಕು.
ನಿಮಗೆ ಧ್ಯಾನದ ಮೌಲ್ಯ ತಿಳಿದಾಗ ಮಾತ್ರ ನೀವು ಧ್ಯಾನಿಗಳಾಗಲು ಸಾಧ್ಯ. ಸಂಗೀತದ ಮೌಲ್ಯ ತಿಳಿದರೆ ನೀವು ಸಂಗೀತಗಾರರಾಗಲು ಸಾಧ್ಯ. ನಾನು ಸಂಗೀತ ಕಲಿಯಲು ಹೋದಾಗ, ನನಗೆ ಅದರ ಪರಿಚಯವಾಯಿತು. ಮಹಾನ್ ಸಂಗೀತಗಾರರಿಂದ ನಾನು ಕಲಿತೆ. ಆದರೆ ನನ್ನ ಸಂಗೀತ ಸಂಪೂರ್ಣವಾಗಲಿಲ್ಲ. ಏಕೆಂದರೆ ನಾನು ಇನ್ನೂ ಏನೊ ಕಲಿಯುವುದಿತ್ತು. ಇನ್ನೂ ಯಾವುದನ್ನೋ ಎದುರು ನೋಡುತ್ತಿದ್ದೆ. ನಾನು ಗುರುಗಳಿಂದ ಗುರುಗಳನ್ನು ಹುಡುಕುತ್ತಿದ್ದೆ. ಪ್ರತಿಯೊಂದು ಬುಕ್ನ್ನು ಓದುತ್ತಿದ್ದೆ. ಪ್ರತಿಯೊಂದು ಸ್ಥಳಕ್ಕೂ ಭೇಟಿನೀಡುತ್ತಿದ್ದೆ. ಆದರೆ ಯಾವಾಗ ಆನಾಪಾನಸತಿ ಧ್ಯಾನವನ್ನು ತಿಳಿದುಕೊಂಡೆನೋ ಆಗ ನನ್ನ ದಾರಿ ಯಾವುದೆಂದು ಗೊತ್ತಾಯಿತು. ನಾನು ಧ್ಯಾನ ಜೀವನಕ್ಕೆ ಬಂದ ಮೇಲೆ ನಾನು ಸಂಪೂರ್ಣನಾದೆ. ಅಲ್ಲಿಯವರೆಗೆ ನಾನು ಆ ಸಂಪೂರ್ಣತೆಗಾಗಿ ಕಾಯುತ್ತಿದ್ದೆನು. ನಮಗೆ ತಿಳಿದಿರುತ್ತದೆ, ನಮ್ಮಲ್ಲಿ ಏನೋ ಕೊರತೆಯಿದೆ ಎಂದು. ಏನೋ ಬೇಕು, ಅದು ಎಲ್ಲಿ ಸಿಗುತ್ತೆ? ಎಂದು ಹುಡುಕುತ್ತಿರುತ್ತೇವೆ. ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ? ಎಂದು ಹುಡುಕುತ್ತಿರುತ್ತೇವೆ. ಎಲ್ಲರೂ ಬುದ್ಧರೇ. ಆದರೆ ಎಲ್ಲರೂ ಬಂದು ಇಲ್ಲಿ ಮಾತನಾಡಲು ಆಗುವುದಿಲ್ಲ. ಹಾಗೆಂದು ಯಾವ ಬುದ್ಧರೂ ಕಳವಳಪಡುವ ಅಗತ್ಯವಿಲ್ಲ. ಬುದ್ಧ ಕ್ರಿಯಾಶೀಲವ್ಯಕ್ತಿ. ಅವನು ತೆರೆಯ ಹಿಂದೆ ಕೆಲಸ ಮಾಡುತ್ತಾನೆ. ತೆರೆಯ ಹಿಂದೆ ಶ್ರಮಿಸುತ್ತಿರುವ P.S.S.M ಬುದ್ಧರೆಲ್ಲರಿಗೂ ಚಪ್ಪಾಳೆಯ ಮೂಲಕ ಅಭಿನಂದನೆ ತಿಳಿಸೋಣ. ಇದು ನಿಜವಾಗಲೂ ಶ್ರೇಷ್ಠ ಸಂಭ್ರಮಾಚರಣೆ.
ನಮಗೆ “ವಿಶ್ವ ಪಿರಮಿಡ್ ದಿನ” ಬೇಕು. ಈ ಪ್ರಕಟನೆಯನ್ನು ನಾವು ವಿಶ್ವಸಂಸ್ಥೆಯಿಂದ ಪಡೆಯಬೇಕು. ನೀವು ಇದಕ್ಕಾಗಿ ಇಲ್ಲಿಂದ ಹೋದ ಮೇಲೆ ಸಂಕಲ್ಪವನ್ನು ಇಡಿ. ವರ್ಷದಲ್ಲಿ ಒಂದು ದಿನ ಪಿರಮಿಡ್ ದಿನ ಎಂದು ಅದಕ್ಕೆ ವಿಶ್ವ ಸಂಸ್ಥೆಯು ಮಾನ್ಯತೆಯನ್ನು ನೀಡಿ ಯಾವಾಗ ಅದನ್ನು ಆಮೋದಿಸುತ್ತಾರೋ ಆಗ ಮತ್ತೆ ನಾವೆಲ್ಲಾ ದೊಡ್ಡ ಸಂಭ್ರಮವನ್ನು ಆಚರಿಸೋಣ.
ನಾವು ಇಲ್ಲಿ ಎಷ್ಟೋ ಗುರಿಗಳನ್ನು ಇಟ್ಟುಕೊಂಡು ಅದನ್ನು ತಲುಪಿದ್ದೇವೆ. ನಾವು ಅದಕ್ಕಾಗಿ ಎಷ್ಟೋ ಶ್ರಮ ಪಡಬೇಕು. ಆ ಗಮ್ಯ ತಲುಪಲು ಬೇಕಾದ ಕೆಲಸ ಮಾಡಬೇಕು. ಆ ಗಮ್ಯಗಳನ್ನು ನಾವು ಸೃಷ್ಟಿಮಾಡದಿದ್ದರೆ, ಅವುಗಳನ್ನು ನಾವು ತಲುಪಲು ಸಾಧ್ಯವಿಲ್ಲ. ಕೆಲಸ ಮಾಡುವುದು ಇರುವುದಿಲ್ಲ. ಈಹಿಂದೆ ನಾವು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕೆಂದರೆ, ಗುರಿಯನ್ನು ಇಟ್ಟುಕೊಳ್ಳಬೇಕು, ಇಲ್ಲದಿದ್ದರೆ, ಕೆಲಸವು ಶೀಘ್ರವಾಗಿ ಪ್ರಗತಿ ಆಗುವುದಿಲ್ಲ. ನಮ್ಮ ಮುಂದಿನ ಗುರಿ 2016ಕ್ಕೆ ‘ಪಿರಮಿಡ್ ಜಗತ್’ ಸ್ಥಾಪನೆ. 2020ಕ್ಕೆ ‘ಶಾಕಾಹಾರ ಜಗತ್’ ಸ್ಥಾಪನೆ ಎಂದು ಹೇಳಿದ್ದೇನೆ. ಈ ಗುರಿಯನ್ನು ತಲುಪಲು ಬೇಕಾದ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು. ಆಗ ಇಡೀ ವಿಶ್ವವು ‘ಬುದ್ಧ ಜಗತ್’ ಆಗುತ್ತದೆ.
ನಮಗೆ ಇಲ್ಲಿ ಈ ಭೂಮಿಯ ಮೇಲೆ ಎಂದಿಗೆ ಯಾವ ಕೆಲಸವೂ ಇರುವುದಿಲ್ಲವೋ ಆಗ ನಾವು ಬೇರೆ ಜಾಗಕ್ಕೆ ಹೋಗುತ್ತೇವೆ. ಮತ್ತೆ ಕೆಲಸ ಶುರುವಾಗುತ್ತದೆ. ಕೆಲಸಕ್ಕೆ ಯಾವತ್ತೂ ಅಂತ್ಯವಿಲ್ಲ.
“ನ ಜಾಯತೇ ಮ್ರಿಯತೇ ವಾ ಕದಾಚಿತ್
ನಾಯಂ ಭೂತ್ವಾಭ ವಿತಾ ವಾ ನ ಭೂಯಃ|
ಅಜೋ ನಿತ್ಯಃ ಶಾಶ್ವತ್ಯೋಯಂ ಪುರುಣೋ
ನ ಹನ್ಯತೇ ಹನ್ಯಮಾನೇ ಶರೀರೇ”||
ನಾವು ಯಾವಾಗಲೂ ಜಾಗ್ರತೆಯಿಂದ ಇರುತ್ತೇವೆ. ಹಾಗೆಯೇ, ಸಂಭ್ರಮಾಚರಣೆ ಯಾವಾಗಲೂ ಇರಬೇಕು. ಹಾಗೆಯೇ ಕೆಲಸವೂ ಇರಬೇಕು. ಜವಾಬ್ದಾರಿಯೂ ಇರಬೇಕು. “ಮುಕ್ತಿ ಸಿಗುತ್ತದೆ, ಸಮಾಧಿಗೆ ಹೋಗುತ್ತೇವೆ, ಆ ಹನಿ ಸಮುದ್ರ ಸೇರುತ್ತದೆ, ನಾವು ಆರಾಮವಾಗಿ ಜೀವಿಸುತ್ತೇವೆ” ಎನ್ನುವಂತೆ ಇಲ್ಲ. ಬುದ್ಧತ್ವದಲ್ಲಿ ಇವೆಲ್ಲಾ ಸಾಧ್ಯವಿಲ್ಲ. ಕೆಲಸ, ಕೆಲಸ, ಕೆಲಸ, ಯಾವಾಗಲೂ ಕೆಲಸ ಇದ್ದೇ ಇರುತ್ತದೆ. ಏನು ಮಾಡುವುದು? ನೀವು ಕೆಲಸ ಮಾಡಲಿಲ್ಲವೆಂದರೆ, ರಾತ್ರಿ ನಿದ್ರೆ ಬರುವುದಿಲ್ಲ. ನಿಮಗೆ ಯಾವಾಗ ಕೆಲಸ ಇರುವುದಿಲ್ಲವೋ ನಿಮ್ಮ ಶರೀರ ಆರೋಗ್ಯದಿಂದ ಇರುವುದಿಲ್ಲ.
“ಕೈ ತುಂಬಾ ಕೆಲಸ, ಕಣ್ಣು ತುಂಬಾ ನಿದ್ರೆ, ಮೈತುಂಬಾ ಆರೋಗ್ಯ, ಮನದ ತುಂಬಾ ಉಲ್ಲಾಸ, ಆತ್ಮದ ತುಂಬಾ ಮೋಕ್ಷ” ಅದೇ ವಿಷಯ.
“ತಿಂದರೆ ವಡೆಯನ್ನೇ ತಿನ್ನಬೇಕು, ಕೇಳಿದರೇ ಮಹಾಭಾರತವನ್ನೇ ಕೇಳಬೇಕು”. ಕಟ್ಟಿದರೇ ಪಿರಮಿಡ್ಗಳನ್ನೇ ಕಟ್ಟಬೇಕು, ಬೋಧಿಸಿದರೆ ಪಿರಮಿಡ್ ಮಾಸ್ಟರ್ಗಳೇ ಬೋಧಿಸಬೇಕು.
“ಎಷ್ಟೋ ವಿಷಯಗಳು ನಿಮಗೆ ಗೊತ್ತಿಲ್ಲವೆಂದು ನಿಮಗೆ ಗೊತ್ತಾಗಬೇಕು”. ನೀವು ಬುದ್ಧ ಎಂಬುದು ನಿಮಗೆ ಗೊತ್ತಾಗಬೇಕು ಬೇರೆ ಭಾಷೆಗಳನ್ನು ನೀವು ಹೀಗೆ ಅರ್ಥ ಮಾಡಿಕೊಳ್ಳುತ್ತೀರಾ? ಇದು ಸಾಧ್ಯವಿಲ್ಲ! ಎಲ್ಲರೂ ಕನ್ನಡದಲ್ಲಿ ಭಾಷಣ ಮಾಡುತ್ತಾರೆ. ನನಗೇನೂ ಅರ್ಥ ಆಗುವುದಿಲ್ಲ. ನಾನೇನು ಮಾಡಲಿ ಆದರೆ ನಾನು ಶಾಂತಿ ಕಳೆದುಕೊಳ್ಳುವುದಿಲ್ಲ. ಬೇರೆಯವರು ಖುಷಿಯಾಗಿದ್ದರೆ ನಾವೂ ಖುಷಿಯಾಗಿರುತ್ತೇವೆ.
ಈ ಬುದ್ಧ ಪೂರ್ಣಿಮೆಯ ಶುಭ ಮಹೋತ್ಸವದಲ್ಲಿ ನಾನು ಸಂತ ಕಬೀರನನ್ನು ನೆನಪಿಸಿಕೊಳ್ಳಲು ಇಚ್ಛಿಸುತ್ತೇನೆ. ಅವರು ಒಬ್ಬ ಬುದ್ಧ.
ದುಃಖದಲ್ಲಿ ಎಲ್ಲರೂ ಪರಾಮರ್ಶಿಸುತ್ತಾರೆ. ಸುಖವಾಗಿರುವಾಗ ಯಾರೂ ಪರಾಮರ್ಶಿಸುವುದಿಲ್ಲ; ಸುಖದಲ್ಲೂ ಪರಾಮರ್ಶಿಸಿದಾಗ ದುಃಖವೇಕೆ ಆಗುತ್ತದೆ.
ಯಾವ ವಿಷಯಕ್ಕೆ ಪರಾಮರ್ಶೆ, ಯಾವ ಮಾತಿಗೆ ಪರಾಮರ್ಶೆ? ಏಕೆಂದರೆ, ನಾವೆಲ್ಲಾ ಬುದ್ಧರು, ನಾವು ಆತ್ಮಸ್ವರೂಪಿಗಳು. ನಾವು ಶರೀರವಲ್ಲ ಇದೊಂದೇ ಜೀವನ ನಮ್ಮದಲ್ಲ. ಒಬ್ಬರೆ, ತಾಯಿ, ತಂದೆ, ಹೆಂಡತಿ, ಮಕ್ಕಳು ಇಲ್ಲ. ಎಷ್ಟೋ ಜನ್ಮದಿಂದ ಎಷ್ಟೋ ಹೆಂಡತಿಯರು, ಗರ್ಲ್ಫ್ರೆಂಡ್ಸ್ ಇರುತ್ತಾರೆ. ಅವುಗಳಲ್ಲಿ ಇದೂ ಒಂದು ಮಿಂಚು. ಏತಕ್ಕಾಗಿ ಪರಾಮರ್ಶೆ ಮಾಡಬೇಕು? ಯಾವುದನ್ನೂ ಮುಂದೂಡಬೇಡ. ನಾಳೆ ಮಾಡುವುದನ್ನು ಇವತ್ತೇ ಮಾಡುವ ಪ್ರಯತ್ನಮಾಡು. ಈ ಬುದ್ಧ ಪೂರ್ಣಿಮೆಯಲ್ಲಿ ಕಬೀರನನ್ನು ಸ್ಮರಿಸೋಣ.
ಬುದ್ಧ ಯಾವಾಗಲೂ ಕ್ರಿಯಾಶೀಲ ವ್ಯಕ್ತಿ. ಏನಾದರೂ ಮಾಡಿ, ಎಷ್ಟೆಲ್ಲಾ ಮಾಡಬೇಕಿದೆ, ನಾವು ಹೀಗೆ ಕುಳಿತಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ನಾವೂ ಮಾಡುವುದಿಲ್ಲ, ಮಾಡುವವರನ್ನು ಮಾಡಲು ಬಿಡುವುದಿಲ್ಲ. ನಾವೂ ನಿದ್ರಿಸುವುದಿಲ್ಲ, ನಿದ್ದೆ ಮಾಡುವವರನ್ನು ಬಿಡುವುದಿಲ್ಲ.
ಓ ನನ್ನ ಸಹೋದರರೇ… ಕಬೀರರ ಕಥೆ ಎಷ್ಟೊಂದು ಚೆನ್ನಾಗಿದೆಯಲ್ಲವೇ? ಸಹೋದರರನ್ನು ಹೊಡೆದೋಡಿಸಬೇಡಿ ನಾವೆಲ್ಲಾ ಸಹೋದರೆ. ಇಲ್ಲಿ ಸಹೋದರತ್ವ ವಿದೆ.
ಬುದ್ಧಪೂರ್ಣಿಮೆ ಗೌತಮ ಬುದ್ಧನಿಗೆ ಮಾತ್ರ ಸೀಮಿತವಾಗಿಲ್ಲ. ಅದು ಪ್ರತಿ ಬುದ್ಧನಿಗಾಗಿಯೇ ಇದೆ. ನಾವು ಮಹಾವೀರ, ಕಬೀರ, ಮತ್ತು ಎಲ್ಲಾ ಬುದ್ಧರನ್ನು ಸ್ಮರಿಸೋಣ.
Recent Comments