“ಕತ್ತಲೆಯ ಬದುಕು – ಬೆಳಕಿನ ಬದುಕು”
ನಮ್ಮ ವಾಸ್ತವಕ್ಕೆ ನಾವೇ ಸೃಷ್ಟಿಕರ್ತರು ಎಂದು ತಿಳಿಯದವರು ಎನ್ಲೈಟೆನ್ಮೆಂಟ್ ಇಲ್ಲದವರೂ, ಕತ್ತಲೆಯ ಮನುಷ್ಯರು. ತಮ್ಮ ವಾಸ್ತವಕ್ಕೆ ತಾವೇ ಸೃಷ್ಟಿಕರ್ತರು ಎಂದು ತಿಳಿದುಕೊಂಡಿರುವವರೇ ಎನ್ಲೈಟೆನ್ಡ್ ಮಾಸ್ಟರ್ಗಳು.
ನಾವು ಹುಟ್ಟುವುದಕ್ಕಿಂತಾ ಮುಂಚೆ ನಮ್ಮ ಜನ್ಮವನ್ನು ನಾವೇ ಆಯ್ಕೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ಜೀವನದ ಸವಾಲುಗಳನ್ನು ನಮ್ಮ ಸಮಸ್ಯೆಗಳನ್ನು, ನಮ್ಮ ಜೀವನ ಸಮಸ್ಯೆಗಳನ್ನು ನಾವೇ ಆರಿಸಿಕೊಂಡು ಬಂದಿದ್ದೇವೆ. ನಮ್ಮ ಜೀವನದ ವಾಸ್ತವಗಳಿಗೆ ಬೇರೇ ಯಾರೂ ಕಾರಣರಲ್ಲ. ನಮ್ಮ ಜೀವನದ ವಾಸ್ತವಗಳಿಗೆ ನಾವೇ ಕಾರಣ. ನಮ್ಮ ಸ್ವಂತ ಇಚ್ಛೆಯಿಂದ ನಾವು ಈ ಜನ್ಮ ಪಡೆದಿದ್ದೇವೆ. ಆದ್ದರಿಂದ, ಹುಟ್ಟಿದ ನಂತರ ಸಹ ಹಾಗೆಯೇ ಇರುತ್ತದೆ.
ನಾವು ಯಾವ ಯಾವ ರೀತಿಯಿಂದ ಯಾರ ಯಾರ ಜೊತೆ ವ್ಯವಹರಿಸುತ್ತಿರುತ್ತೇವೊ ಆಯಾ ರೀತಿಯಿಂದ ಅವರ ಹತ್ತಿರದಿಂದ ಪ್ರತಿಫಲಗಳನ್ನು ಪಡೆಯುತ್ತಿರುತ್ತೇವೆ. ಆದ್ದರಿಂದ, ನಮ್ಮ ವಾಸ್ತವಕ್ಕೆ, ಕ್ಷಣ ಕ್ಷಣ, ನಾವೇ ಕರ್ತರು, ನಾವೇ ಸೃಷ್ಟಿಕರ್ತರು. ಆದ್ದರಿಂದ, ವಾಸ್ತವ ಹೀಗಿದೆ; ಹಾಗಿದೆ, ಅವನು ನನ್ನ ಹಾಳು ಮಾಡಿದ, ನನ್ನ ವಾಸ್ತವಕ್ಕೆ ಅವನೇ ಕಾರಣ ಎಂದು ಇತರರ ಮೇಲೆ ಅಪವಾದ ಹೊರಿಸುವುದೆಂಬುವುದು ಎನ್ಲೈಟೆನ್ಮೆಂಟ್ ಇಲ್ಲದವರ ಸ್ಥಿತಿ. ತಮ್ಮ ಸ್ಥಿತಿಗತಿಗಳಿಗೆ ತಾವೇ ಕಾರಣವೆಂದು ತಿಳಿದುಕೊಂಡು, ಆಗಿಂದಾಗ ಅಪವಾದವನ್ನಾಗಲಿ, ಸ್ತುತಿಯನ್ನಾಗಲಿ ತಮ್ಮ ಮೇಲೆ ತಾವೇ ಹೊರುವವರೇ ಎನ್ಲೈಟೆನ್ಡ್ ಮಾಸ್ಟರ್ಗಳು.
ತಮಗೆ ಆಗಿರುವ ಹಾನಿಗೆ ಇತರರನ್ನು ನಿಂದಿಸುವವರು, ತಮಗೆ ಆಗಿರುವ ಲಾಭಗಳಿಗೆ ಮತ್ತೊಬ್ಬರನ್ನು ಸ್ತುತಿಸುವವರು ಎನ್ಲೈಟೆನ್ಡ್ ಅಲ್ಲವೇ ಅಲ್ಲ. ಅವರ ಕರ್ಮಗಳನ್ನು ಅವರೇ ಅನುಭವಿಸುತ್ತಿರುತ್ತಾರೆ! ಆದ್ದರಿಂದ, ನಾವು ಅನುಭವಿಸುತ್ತಿರುವ ಫಲಿತಗಳು ನಮ್ಮ ಕರ್ಮಫಲಿತಗಳು ಎಂಬುವ ಒಂದೇ ಒಂದು ಅವಗಾಹನೆ ಪಡೆದುಕೊಂಡಿದ್ದು ಆ ರೀತಿಯಲ್ಲಿ ಸದಾ ಇರುವವರೇ ಎನ್ಲೈಟೆನ್ಡ್ ಮಾಸ್ಟರ್ಗಳು. ಅಷ್ಟೇ ವಿನಹ ಪ್ರತಿ ಒಂದಕ್ಕೂ ಕೂಡಾ ಇತರರ ಮೇಲೆ ಅಪವಾದ ಹಾಕುತ್ತಾ ಇರುವವರು, ಸ್ವಲ್ಪವೂ ಕೂಡಾ ಎನ್ಲೈಟೆನ್ಮೆಂಟ್ ಇಲ್ಲದವರು.
ಪ್ರಪಂಚದಲ್ಲಿ ತಿರುಗುತ್ತಿದ್ದರೂ ಕೂಡಾ ಪ್ರಪಂಚಕ್ಕೆ ಅಂಟಿಕೊಳ್ಳದೇ ಇರುವವರೇ ಎನ್ಲೈಟೆನ್ಡ್ ಮಾಸ್ಟರ್ಗಳು. ಪ್ರಪಂಚದಲ್ಲಿ ತಿರುಗುತ್ತಿದ್ದೇವೆಂದು ಹೇಳಿ ಪ್ರತಿ ಪ್ರಾಣಿಯ ಜೊತೆಯೂ ಅಂಟಿಕೊಂಡಿರುವುದು ಎನ್ಲೈಟೆನ್ಮೆಂಟ್ ಅಲ್ಲ.
ತಾವರೆ ಎಲೆಯ ಮೇಲೆ ನೀರಿನ ಹನಿಯ ಹಾಗೆ ಯಾರ ಜೊತೆ ಇದ್ದರೂ ಸಹ, ‘ಇದ್ದೇವೆ’ ಆದರೆ, ‘ಅಂಟಿಕೊಂಡು’ ಇಲ್ಲ ಎಂಬುವ ಪರಿಸ್ಥಿತಿ ಹೊಂದಿರುವವರೇ ಎನ್ಲೈಟೆನ್ಡ್ ಮಾಸ್ಟರ್ಗಳು. ಬಂಧನಗಳಲ್ಲಿ ಸಿಕ್ಕಿ ಹಾಕಿಕೊಂಡು ಕಣ್ಣಿಗೆ ಕಾಣುವ ಪ್ರತಿ ಒಂದರ ಜೊತೆ, ಇರುವ ಪ್ರತಿಯೊಂದರಲ್ಲೂ ಬಿಡಸಲಾರದ ಗಂಟು ಹಾಕಿಕೊಂಡಿರುವುದು ಎಂಬುವುದು ಬೆಳಕಿಗೆ, ದಿವ್ಯಜ್ಞಾನಕ್ಕೆ, ದಿವ್ಯಪ್ರಕಾಶಕ್ಕೆ, ಎನ್ಲೈಟೆನ್ಮೆಂಟ್ಗೂ ಪೂರ್ತಿ ವಿರುದ್ಧ.
ಯಾವುದರಲ್ಲಿ ಬೇಕಾದರೂ ಇರಬಹುದು, ಆದರೆ, ಯಾವುದರ ಜೊತೆಯಲ್ಲೂ ಗಂಟುಹಾಕಿಕೊಂಡು ಇರಬಾರದು; ಗಂಟುಹಾಕಿಕೊಂಡರೆ, ಆ ಗಂಟನ್ನು ತೆಗೆಯುವುದು ತುಂಬಾಕಷ್ಟ. ಸರಿಯಾಗಿ ಆ ಗಂಟಿನಿಂದ ಬಿಡಿಸಿಕೊಳ್ಳಲಾಗದೇ ಹೋದರೆ, ಆ ಗಂಟು ಗಟ್ಟಿ ಆಗಿಬಿಡುತ್ತದೆ. ಅಷ್ಟೇ ವಿನಹ ಆ ಗಂಟು ಬಿಡಿಸಲಾಗುವುದಿಲ್ಲ.
ಪ್ರತಿ ಒಂದರ ಜೊತೆ ಒಂದು ಅನುಬಂಧ ಹೊಂದಿದ್ದೇವೇ ವಿನಹ ಗಂಟುಹಾಕಿಕೊಂಡು ಇರಬಾರದು. ಯಾವುದರಲ್ಲೂ ಗಂಟು ಹಾಕಿಕೊಳ್ಳದೇ ಇರುವುದೇ ‘ಬೆಳಕಿನ ಬದುಕು’ ಎಂದರ್ಥ.
Recent Comments