ಓಂ ಆನಂದಃ .. ಆನಂದಃ .. ಆನಂದಃ ..
ವ್ರತ ಎನ್ನುವುದು ಒಂದು ತೀವ್ರವಾದ ದೀಕ್ಷೆ
“ಮೌನವ್ರತ” .. “ಉಪವಾಸ ವ್ರತ” ..
ಈ ರೀತಿ ವ್ರತಗಳೆಷ್ಟೊ ..
ಪಿರಮಿಡ್ ಮಾಸ್ಟರ್ಗಳು ಎಲ್ಲರೂ ಕೂಡಾ ಅಕ್ಷರಶಃ ಎರಡು ದಶಕಗಳ ಸುದೀರ್ಘ ಕಾಲ
“ಆನಾಪಾನಸತಿ-ಧ್ಯಾನಪ್ರಚಾರ ವ್ರತದೀಕ್ಷೆ”ಯಲ್ಲಿ,
“ಸಸ್ಯಾಹಾರ-ಪ್ರಚಾರ ವ್ರತದೀಕ್ಷೆ”ಯಲ್ಲಿ,
“ಪಿರಮಿಡ್ಶಕ್ತಿ-ಪ್ರಚಾರ ವ್ರತದೀಕ್ಷೆ”ಯಲ್ಲಿ,
1992ರ ಆರಂಭದಿಂದ – 2012 ರ ಅಂತ್ಯದವರೆಗೂ
ಅನನ್ಯವಾದ ಅಸಾಮಾನ್ಯ ರೀತಿಯಲ್ಲಿ ರಾತ್ರಿ-ಹಗಲು ಅನ್ನದೇ, ಊರು-ಕೇರಿ ಅನ್ನದೇ
ಶ್ರಮಿಸಿದ್ದಾರೆ .. ಪರಿಶ್ರಮಿಸಿದ್ದಾರೆ
ಇನ್ನು ಮುಂದೆ ಸಹ ನಮ್ಮ ಮಾಸ್ಟರ್ಗಳು ಅದೇ ವಿಧವಾಗಿ ಪರಿಶ್ರಮಿಸುತ್ತಲೇ ಇರುತ್ತಾರೆ
ಮತ್ತು ನಮ್ಮ ಧ್ಯಾನ ಪ್ರಚಾರ ಕಾರ್ಯಕ್ರಮಗಳು, ಧ್ಯಾನ ಅಭ್ಯಾಸ ಜೀವನಗಳು ..
ಕೊನೆಯ ಶ್ವಾಸವು ಇರುವವರೆಗೂ ಅದೇ ರೀತಿಯಲ್ಲಿ ವಿರಾಜಿಸುತ್ತಲೇ ಇರುತ್ತವೆ
ಇಪ್ಪತ್ತು ವರ್ಷಗಳ ವ್ರತದೀಕ್ಷಾ ಮಹಿಮೆಯಿಂದಾಗಿ… ಪ್ರಪಂಚದ ಎಲ್ಲೆಡೆಗೂ .. ನಮ್ಮ ಸಂದೇಶಗಳು ತಲುಪಿವೆ ..
ಇನ್ನು ಯಾರೂ ‘ಸರಿಯಾದ ಧ್ಯಾನವಿಧಾನ’ವನ್ನು ಕುರಿತು ನಮಗೆ ಹೇಳುವವರಿಲ್ಲ ..
ಅದಕ್ಕಾಗಿ “ನಾವು ಧ್ಯಾನ ಮಾಡಲಾಗಲಿಲ್ಲ” ಎಂದು ಹೇಳಲಾಗುವುದಿಲ್ಲ!
ಇನ್ನು ಯಾರೂ “ಸಸ್ಯಾಹಾರದ ವಿಶಿಷ್ಟತೆಯನ್ನು ಕುರಿತು ನಮಗೆ ಹೇಳುವವರಿಲ್ಲ ..
ಅದಕ್ಕಾಗಿ ನಾವು ಸಸ್ಯಾಹಾರಿಗಳಾಗದೇ ಹೋದೆವು” ಎಂದು ಹೇಳಲಾಗುವುದಿಲ್ಲ!
ಇನ್ನು ಯಾರೂ “ಆತ್ಮಸ್ವಾತಂತ್ರ್ಯವನ್ನು ಕುರಿತು, ಆತ್ಮಶಕ್ತಿಯನ್ನು ಕುರಿತು ನಮಗೆ ಹೇಳುವವರಿಲ್ಲ ..
ಅದಕ್ಕಾಗಿ ನಾವು ಆತ್ಮಸ್ವಾತಂತ್ರ್ಯದಿಂದ, ಆತ್ಮಶಕ್ತಿಯಿಂದ ಕೂಡಿ ಇರಲಾಗುತ್ತಿಲ್ಲ” ಎಂದು ಹೇಳಲಾಗುವುದಿಲ್ಲ!
ಇನ್ನು ಯಾರೂ “ಆತ್ಮಲೋಕಗಳನ್ನು ಕುರಿತು ನಮಗೆ ಹೇಳುವವರಿಲ್ಲ ..
ಅದಕ್ಕಾಗಿ ನಾವು ಆತ್ಮಲೋಕದ ಸಮಾಚಾರಗಳನ್ನು ಪಡೆಯಲಾಗುತ್ತಿಲ್ಲ” ಎಂದು ಅನ್ನಲಾಗುವುದಿಲ್ಲ!
1992 ರಿಂದ 2012 ರವರೆಗೂ ಇಪ್ಪತ್ತು ವರ್ಷಗಳ ಕಾಲ
ಕೂಲಂಕಶವಾಗಿ .. ಏಕಧಾಟಿಯಾಗಿ .. ಎಲ್ಲಾ ಹೇಳಲಾಗಿದೆ
ಇನ್ನು ಅವರವರ ಇಷ್ಟ ಅವರವರದು!
ಪಿರಮಿಡ್ ಇಂಜಿನಿಯರ್ಗಳ ವಿಶೇಷ ಪರಿಶ್ರಮದಿಂದ ..
ಆಂಧ್ರರಾಜ್ಯದಲ್ಲಿರುವ ಗ್ರಾಮಗಳಲ್ಲಿ ಸಾವಿರಾರು ಪಿರಮಿಡ್ಗಳು ನಿರ್ಮಿಸಲ್ಪಟ್ಟಿವೆ
ಅಸಂಖ್ಯ ಪಿರಮಿಡ್ ಧ್ಯಾನಕೇಂದ್ರಗಳು ಉದ್ಭವಿಸಿವೆ
ಮತ್ತು ಭಾರತದೇಶದಲ್ಲಿರುವ
ಇತರ ರಾಜ್ಯಗಳಲ್ಲೂ ನೂರಾರು ಪಿರಮಿಡ್ ಧ್ಯಾನ ಕೇಂದ್ರಗಳು ಬಂದಿವೆ ..
ಬೆಂಗಳೂರು ಮಹಾನಗರ ಸಮೀಪದಲ್ಲಿರುವ “ಮೈತ್ರೇಯ ಬುದ್ಧ ಧ್ಯಾನವಿದ್ಯಾ ವಿಶ್ವಾಲಯ”
ವಿಶ್ವಕ್ಕೇ ಒಂದು ಅದ್ಭುತ ವರ!
ವಿಯತ್ನಾಂ ದೇಶದಲ್ಲಿ ಒಂದು ಪಿರಮಿಡ್ ಧ್ಯಾನಕೇಂದ್ರ ..
ಅಮೆರಿಕಾ ದೇಶದಲ್ಲಿ ಮತ್ತೊಂದು ಪಿರಮಿಡ್ ಧ್ಯಾನಕೇಂದ್ರ ಬಂದಿವೆ ..
ಸಮಗ್ರ ಭಾರತದೇಶದಲ್ಲಿ
ಪಿರಮಿಡ್ ಧ್ಯಾನಯೋಗಿಗಳು ದೇದೀಪ್ಯಮಾನವಾಗಿ (ಉಜ್ವಲವಾಗಿ) ಪ್ರಕಾಶಿಸುತ್ತಿದ್ದಾರೆ (ಬೆಳಗುತ್ತಿದ್ದಾರೆ).
ಲಕ್ಷಾಂತರ ಜನ ಮಾಂಸಾಹಾರಿಗಳು .. ಸಸ್ಯಾಹಾರಿಗಳಾಗಿ ಬದಲಾಗಿದ್ದಾರೆ
ಪ್ರತಿಯೊಂದು ಕಡೆ ಬ್ರಹ್ಮರ್ಷಿಗಳು, ಬ್ರಹ್ಮಜ್ಞಾನಿಗಳು, ಬುದ್ಧರು ತಯಾರಾಗಿದ್ದಾರೆ
ಧ್ಯಾನ-ಜ್ಞಾನದಿಂದ ಪಿರಮಿಡ್ ಮಾಸ್ಟರ್ಗಳೆಲ್ಲರೂ ಬ್ರಹ್ಮಾನಂದದಲ್ಲಿ ತೇಲಾಡುತ್ತಿದ್ದಾರೆ.
ಸಕಲ ಪ್ರಾಣಿಕೋಟಿಗೆ ಸತ್ಫಲಗಳನ್ನು ನೀಡಲಾಗಿದೆ
ಇನ್ನು ಎಲ್ಲಾ ಸಂಭ್ರಮಗಳೆ ..
ಇನ್ನು ಪ್ರತಿದಿನವೂ ಹಬ್ಬವೆ ..
ನೂತನ ಆನಂದಯುಗ ಆವಿರ್ಭವಿಸಿದೆ
ಹೊಸ ಧ್ಯಾನಾರೋಗ್ಯಯುಗ ಆಗಮಿಸಿದೆ
ನೂತನ ಧ್ಯಾನ ಸೌಭಾಗ್ಯಯುಗ ಉದ್ಘಾಟಿಸಲ್ಪಟ್ಟಿದೆ
ಪಿರಮಿಡ್ ಮಾಸ್ಟರ್ಗಳ ಕೃಷಿಮಯ ಜೀವನಗಳು ಧನ್ಯವಾಗಿವೆ
ಓಂ ಆನಂದಃ .. ಆನಂದಃ .. ಆನಂದಃ ..
Recent Comments