” ಒಬ್ಬ ಬುದ್ಧ “

ಒಬ್ಬ “ಬುದ್ಧ” ಅಂದರೆ .. ಒಬ್ಬ ಸಾಧಾರಣ ಮನುಷ್ಯ
ಒಬ್ಬ “ಬುದ್ಧ” ಅಂದರೆ .. ಎಲ್ಲರೂ ಸಾಧಾರಣ ಸಾಮಾನ್ಯ ಮನುಷ್ಯರೇ ಎಂದು ತಿಳಿದುಕೊಂಡಿರುವವನು
ಒಬ್ಬ “ಬುದ್ಧ” ಅಂದರೆ .. ತನ್ನಲ್ಲಿ ಯಾವ ಪ್ರತ್ಯೇಕತೆಯೂ ಇಲ್ಲ ಎಂದು ತಿಳಿದುಕೊಂಡಿರುವವನು
ಒಬ್ಬ “ಬುದ್ಧ” ಅಂದರೆ .. ಇತರರೆಲ್ಲರಲ್ಲೂ ಸಹ ಯಾವ ಪ್ರತ್ಯೇಕತೆಯೂ ಇಲ್ಲ ಎಂದು ಅರಿತಿರುವವನು
ಒಬ್ಬ “ಬುದ್ಧ” ಅಂದರೆ .. ತಾನು ಒಂದು ಶೂನ್ಯ ಎಂದು ಅರಿತಿರುವವನು
ಒಬ್ಬ “ಬುದ್ಧ” ಅಂದರೆ .. ಇತರರು ಎಲ್ಲರೂ ಸಹ ಶೂನ್ಯವೆಂದು ತಿಳಿದುಕೊಂಡಿರುವವನು
ಒಬ್ಬ “ಬುದ್ಧ” ಅಂದರೆ .. ತಾನು ಒಂದು ಮಹಾಶೂನ್ಯ ಎಂದು ಅರಿತಿರುವವನು
ಒಬ್ಬ “ಬುದ್ಧ” ಅಂದರೆ .. ಇತರರನ್ನು ಕೂಡಾ ಒಂದು ಮಹಾಶೂನ್ಯ ಎಂದು ತಿಳಿದುಕೊಂಡಿರುವವನು
ಒಬ್ಬ “ಬುದ್ಧ” ಅಂದರೆ .. ತನ್ನ ಶರೀರದ ಜೊತೆ ತಾನು ಒಂದಾಗಿರುವವನು
ಒಬ್ಬ “ಬುದ್ಧ” ಅಂದರೆ .. ತನ್ನ ದಿನನಿತ್ಯ ಸಾಧಾರಣ ದಿನಚರಿ ಕಾರ್ಯಕ್ರಮಗಳಲ್ಲಿ ಒಂದಾಗಿರುವವನು.
“ದಿನನಿತ್ಯದ ಸಾಧಾರಣ ದಿನಚರಿಗಳು” ಅಂದರೆ “ತಿನ್ನುವುದು “… “ಕುಳಿತುಕೊಳ್ಳುವುದು” … “ನೋಡುವುದು” … “ಮಾತನಾಡುವುದು” …
“ಕೇಳಿಸಿಕೊಳ್ಳುವುದು” … “ಕೆಲಸಮಾಡುವುದು” … “ಓದುವುದು” … ಇನ್ನೂ … ಇನ್ನೂ …
“ನಡೆಯುವಾಗ ನಡೆಯುತ್ತಿರಿ… ತಿನ್ನುವಾಗ ತಿನ್ನುತ್ತಿರಿ…”
ಎಂದನಲ್ಲವೇ ಜಗತ್ ವಿಖ್ಯಾತಿ ಆದ ಒಂದು ಕಾಲದ ಬುದ್ಧನು
ಒಬ್ಬ “ಬುದ್ಧ” ಅಂದರೆ ಸಮಾಜದ ಪರವಾಗಿ ತನ್ನ ಕರ್ತವ್ಯಕರ್ಮಗಳಲ್ಲಿ ಮುಳುಗಿರುವವನು
ಒಬ್ಬ “ಬುದ್ಧ” ಅಂದರೆ .. ಸಕಲ ಪ್ರಾಣಿಕೋಟಿಯ ಜೊತೆ ಒಂದಾಗಿರುವವನು
“ಬುದ್ಧ” ಎನ್ನುವ ಪದಕ್ಕೆ ಮತ್ತೊಂದು ಹೆಸರೇ “ತಾದಾತ್ಮ್ಯತೆ”
ತನ್ನ ಶೂನ್ಯದ ಜೊತೆ ತಾನು ತಾದಾತ್ಮ್ಯತೆ ಹೊಂದಿರುವುದು, ತನ್ನ ಬಾಹ್ಯದ ಜೊತೆ ತಾನು ತಾದಾತ್ಮ್ಯತೆಯಿಂದ ಇರುವುದು.
ನಿಜಕ್ಕೂ “ಸಂಘರ್ಷ” ಎನ್ನುವ ಪದಕ್ಕೆ ಜಾಗವಿಲ್ಲದಿರುವುದೇ … “ಬುದ್ಧತ್ವ”
“ಭಯ” … “ದುಃಖ” … “ಸಂಶಯ” … “ಆವೇಶ” ಎನ್ನುವ ಪದಗಳಿಗೆ ಜಾಗವಿಲ್ಲದಿರುವುದೇ “ಬುದ್ಧತ್ವ”
ಅನುಕ್ಷಣ ಬದಲಾವಣೆ ಆಗುತ್ತಿರುವ … ರೂಪಾಂತರ ಹೊಂದುತ್ತಿರುವ … ಬಾಹ್ಯಾಂತರಗಳನ್ನು ಕಿರುಮಂದಹಾಸದಿಂದ
ಗಮನಿಸುವ ಶಾಶ್ವತ ಮೃದುಗಂಭೀರ ತತ್ವವೇ “ಬುದ್ಧತ್ವ”
ಎಲ್ಲಾ ಬುದ್ಧರಿಗೂ ವಂದನೆಗಳು
ಈಗಾಗಲೇ ಬುದ್ಧರಾಗಿರುವವರಿಗೆಲ್ಲರಿಗೂ ವಂದನೆಗಳು
ಇನ್ನು ಮುಂದೆ ಬುದ್ಧರು ಆಗಲಿರುವವರಿಗೆಲ್ಲರಿಗೂ ವಂದನೆಗಳು