“ಉತ್ತಮ ಗುರುಗಳು”
ಬಗೆಬಗೆಯ ಗುರುಗಳ
ಕುರಿತು ವೇಮನ ಹೀಗೆ ಹೇಳಿದ್ದಾನೆ:
“ಕಲ್ಲ ಗುರುಡು ಗಟ್ಟು ಕರ್ಮಚಯಂಬುಲು –
ಮಧ್ಯ ಗುರುಡು ಗಟ್ಟು ಮಂತ್ರಚಯಮು;
ಉತ್ತಮುಂಡು ಗಟ್ಟು ಯೋಗ ಸಾಮ್ರಾಜ್ಯಂಬು –
ವಿಶ್ವದಾಭಿರಾಮ ವಿನುರ ವೇಮ!” (ತೆಲುಗು ವೇಮನ ಪದ್ಯ)
ಅಂದರೆ,
ಮೂರ್ಖ ಗುರುಗಳು ಪ್ರಜೆಗಳಿಗೆ “ಕರ್ಮ” ಗಳನ್ನು ಮಾಡುವುದನ್ನೇ ಪ್ರೋತ್ಸಾಹಿಸುತ್ತಾರೆ;
ಕರ್ಮಗಳು ಅಂದರೆ “ಬಾಹ್ಯಪೂಜೆಗಳು” ಎಂದರ್ಥ.
ಮಧ್ಯಮ ಗುರುಗಳು “ಮಂತ್ರ, ಉಪಾಸನೆ” ಗಳಿಗೆ ಶಿಷ್ಯರಿಗೆ
ಹುರಿದುಂಬಿಸುತ್ತಾರೆ; ಅದೇ ಪರಮಯೋಗ ಎನ್ನುತ್ತಾ ಪ್ರವಚನೆ ನೀಡುತ್ತಿರುತ್ತಾರೆ.
ಆದರೆ,
ಉತ್ತಮ ಗುರುಗಳು “ಧ್ಯಾನಯೋಗ“ವನ್ನು ಮಾತ್ರವೇ
ಎಲ್ಲರಿಗೂ, ಎಲ್ಲಾ ವೇಳೆಯಲ್ಲೂ ಬೋಧಿಸುತ್ತಾ ಇರುತ್ತಾರೆ.
ಬಾಹ್ಯಪೂಜೆಗಳು ಮಾಡುವುದು ಮೂರ್ಖತನ;
ಮಂತ್ರಜಪ ’ ಮೂರ್ಖತನ ’ ಅಲ್ಲ ಆದರೆ, ’ ಪರಮ ಯೋಗ ’ ಸಹ ಅಲ್ಲ.
ಅದರಲ್ಲಿ ಸಿಗುವುದು ಮನಸ್ಸಿಗೆ ತಾತ್ಕಾಲಿಕ ಉಪಶಮನ ಮಾತ್ರವೇ.
ಧ್ಯಾನಯೋಗವೇ ನಿಜವಾದ ಯೋಗ.
ಧ್ಯಾನಯೋಗ ಬೋಧಕರೇ ನಿಜವಾದ ಗುರುಗಳು.
Recent Comments