“ಆತ್ಮದ ನಿಜವಾದ ಕಥೆ”
ಆತ್ಮ ಎನ್ನುವುದು … ಭೌತಿಕವಲ್ಲ.
ಆತ್ಮ ಎನ್ನುವುದು … ಮೂಲಚೈತನ್ಯ … ಶಕಲವಲ್ಲದ (ಚೂರು) ಶಕಲ(ಅಂಶ)
ಆತ್ಮ ಎನ್ನುವುದು … ಭೌತಿಕ ರೂಪುರೇಖೆಗಳು ಇಲ್ಲದ್ದು
ಆತ್ಮ ಎನ್ನುವುದು … ಕೇವಲ … ಅನುಭವಗಳ ರೂಪುರೇಖೆಗಳನ್ನು ಉಳ್ಳದ್ದು
ಆತ್ಮ ಎನ್ನುವುದು … ಭೌತಿಕ ಭಾರಗಳಿಲ್ಲದ್ದು
ಆತ್ಮ ಎನ್ನುವುದು … ಕೇವಲ … ಅನುಭವಗಳ ಭಾರವನ್ನು ಹೊಂದಿರುವುದು
ಆತ್ಮ ಪರಿತಪಿಸುವುದು ಎಂದಿಗೂ ನೂತನ ಅನುಭವಗಳಿಗಾಗಿಯೇ
ಆತ್ಮ ಪರಿತಪಿಸುವುದು ಎಂದಿಗೂ ಭಿನ್ನ ವಿಭಿನ್ನ ಅನುಭವಗಳಿಗಾಗಿಯೇ
ಆತ್ಮಕ್ಕೆ ಎಲ್ಲಾ ಪರಿಸ್ಥಿತಿಗಳೂ ಆಸೆ ಹುಟ್ಟಿಸುವಂಥವೇ
’ಆತ್ಮ’ ಎನ್ನುವುದು ಎಲ್ಲಾ ಪರಿಸ್ಥಿತಿಗಳನ್ನೂ ಅರಿತುಕೊಳ್ಳಬೇಕು (ಅರ್ಥಮಾಡಿಕೊಳ್ಳಬೇಕು)
ಎಂದು ಸದಾ ಹಾತೊರೆಯುತ್ತಿರುತ್ತದೆ
ಆತ್ಮಕ್ಕೆ ಸೋಲು ಎನ್ನುವುದೇ ಇಲ್ಲ … ಕೇವಲ ಆತ್ಮಹತ್ಯೆಮಾಡಿಕೊಂಡಾಗ ವಿನಹ
(ಆತ್ಮಹತ್ಯೆ ಮಹಾಪಾಪ ಎಂದು ಹೇಳಲಾಗಿದೆ ಅಲ್ಲವೆ?)
ಆತ್ಮಕ್ಕೆ ಇರುವುದೆಲ್ಲಾ ಗೆಲುವೆ … ಆತ್ಮಕ್ಕೆ ಇರುವುದೆಲ್ಲಾ ನಿತ್ಯನೂತನವೇ
ಒಂದು ಆತ್ಮ … ಒಂದು ಮಾನವಶರೀರಧಾರಣೆ ಮಾಡಿದಾಗ-
ಒಂದಲ್ಲ ಒಂದು ಜೀವನಸ್ಥಿತಿಯನ್ನು ಎದುರಿಸುತ್ತದೆ
ಅನಂತರ … ಇನ್ನೂ ಬಗೆಬಗೆಯ ಜೀವನದ ಪರಿಸ್ಥಿತಿಗಳನ್ನು ಅನುಭವಿಸಲು ಹಾತೊರೆಯುತ್ತಿರುತ್ತದೆ
ಮಾನವ ಜೀವನದ ಎಲ್ಲಾ ಪರಿಸ್ಥಿತಿಗಳನ್ನು ಅರಿತುಕೊಳ್ಳಲು
ಆತ್ಮಕ್ಕೆ ಕನಿಷ್ಠ ನಾಲ್ಕು ನೂರು ಜನ್ಮಗಳ ಅವಶ್ಯಕತೆ ಇರುತ್ತದೆ
ಮತ್ತೆ ನಾಲ್ಕು ನೂರು ಜನ್ಮಗಳಲ್ಲಿ ನೈಪುಣ್ಯ ಹೊಂದಿರುವ ಆತ್ಮ
ಒಂದು ಅನುಭವಗಳ ಹುತ್ತವಾಗಿ ತಯಾರಾಗುತ್ತದೆ.
ಅನೇಕ ಬಾರಿ ಜನ್ಮಿಸಿ … ಅಂದರೆ, ಅನೇಕ ಬಾರಿ ಶರೀರಧಾರಣೆ ಮಾಡಿ
ಅನೇಕ ಬಾರಿ ಮರಣಿಸಿ … ಅಂದರೆ, ಅನೇಕ ಬಾರಿ ಶರೀರದಿಂದ ಹೊರಬಂದು
ಅನೇಕ ಬಗೆಯ ಅವಮಾನ,-ದುಃಖ,-ತಿರಸ್ಕಾರ ಇತ್ಯಾದಿಗಳನ್ನು ಅನುಭವಿಸಿ
ಅನೇಕ ಬಾರಿ ಮಾನ,-ಸುಖ,-ಪುರಸ್ಕಾರಾದಿಗಳನ್ನು ಅನುಭವಿಸಿ
ಒಂದು ಸಂಪೂರ್ಣ ಜ್ಞಾನದ ಹುತ್ತವಾಗಿ ತಯಾರಾಗುತ್ತದೆ
ಪ್ರತಿಯೊಂದೂ ಜನ್ಮ ಕೂಡಾ ಆತ್ಮಕ್ಕೆ ಅನೇಕಾನೇಕ ಅನುಭವಗಳನ್ನು ನೀಡುತ್ತದೆ
ಪ್ರತಿಯೊಂದೂ ಅನುಭವ ಕೂಡಾ ಆತ್ಮಕ್ಕೆ ಒಂದು ವಿಶಿಷ್ಟಜ್ಞಾನ ಸಾರವನ್ನು ಪ್ರಸಾದಿಸುತ್ತದೆ
ಇದು ಆತ್ಮದ ಕಥೆ
ಆತ್ಮ ಎನ್ನುವುದು … ಪ್ರಪ್ರಥಮವಾಗಿ … ಒಂದು ಅನುಭವಗಳ ಹುತ್ತ
ಆತ್ಮ ಎನ್ನುವುದು … ಪರ್ಯಾವಸಾನವಾಗಿ … ಪರಂಪರೆಯಾಗಿ … ಒಂದು ಜ್ಞಾನದ ಹುತ್ತ
ಇದು ಆತ್ಮದ ನಿಜವಾದ ಕಥೆ
Recent Comments